ಗೋವತ್ಸ ದ್ವಾದಶಿ
ಆಶ್ವಯುಜ ಶುದ್ಧ ದ್ವಾದಶಿಯಂದು
ಗೋವತ್ಸ ಎಂದರೆ ಗೋ + ವತ್ಸ – –ಹಸು ಮತ್ತು ಕರು. ಆಶ್ವಯುಜ ಶುದ್ಧ ದ್ವಾದಶಿಯಂದು ಕರು ಸಹಿತ ಹಸುವನ್ನು ಪೂಜಿಸಿ, ಅದಕ್ಕೆ ಬೇಕಾದ ಮೇವನ್ನು ಸಲ್ಲಿಸಬೇಕು. (ನಿತ್ಯವೂ ಗೋಸೇವೆ ವಿಹಿತ. ಆದರೆ ಇಂದು ಎಲ್ಲರೂ ಮಾಡಬೇಕು).
ನಮ್ಮ ಬಳಿ ಹಸುವಿಲ್ಲದಿದ್ದರೂ, ಹತ್ತಿರದಲ್ಲಿ ಹಸುವನ್ನು ಸಾಕಿರುವವರಿಗೆ ಹಸುವಿನ ಆಹಾರವಾದ ಹುಲ್ಲು, ಹಿಂಡಿ , ಸೊಪ್ಪು ಮುಂತಾದುವನ್ನು ನೀಡಿ. ಹಸುವಿನ ದೇಹದ ಪ್ರತಿಯೊಂದು ಭಾಗದಲ್ಲೂ ದೇವಾನುದೇವತೆಗಳು ಸನ್ನಿಹಿತರಾಗಿರುತ್ತಾರೆ.
ಪಂಚಗವ್ಯ ನಮ್ಮ ಪಾಪಗಳನ್ನು ದಹಿಸಿ ಶುದ್ದ ಮಾಡುತ್ತದೆ . ಈ ಪಂಚಗವ್ಯ ಮಾಡಲು ಬೇಕಾಗುವ ಪದಾರ್ಥಗಳು – ಹಸುವಿನ ಹಾಲು, ಮೊಸರು, ತುಪ್ಪ, ಮೂತ್ರ ಮತ್ತು ಸಗಣಿ. ಇವುಗಳಿಂದ ತಯಾರಿಸಿದ ಉತ್ಪನ್ನಗಳ ಒಂದು ಶ್ರೇಷ್ಠ ಹೆಸರೇ ಪಂಚಗವ್ಯ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಗೋವಿಗೆ , ಗೋಮಾತೆಗೆ ತುಂಬಾ ಮಹತ್ವವಿದೆ. ಇದು ಅತ್ಯುತ್ಕೃಷ್ಟ ಗೋವಾದ ನಂದಿನಿ ಮತ್ತು ಅದರ ಕರುವಿಗೆ ಸಂಬಂಧಿಸಿದ ಹಬ್ಬ.
ಗೋವತ್ಸ ದ್ವಾದಶಿ ಉದ್ದೇಶ : 33 ಕೋಟಿ ದೇವತೆಗಳ ಸಾನ್ನಿಧ್ಯ ಹೊಂದಿರುವ ಗೋವು ನಮಗೆ ಹಾಲು, ಮೊಸರು, ಬೆಣ್ಣೆ, ತುಪ್ಪ, ಗಂಜಲ, ಸೆಗಣಿ ಮುಂತಾದವನ್ನು ನೀಡುತ್ತದೆ. ಅದರ ಪ್ರತಿಯೊಂದು ಉತ್ಪನ್ನವೂ ನಮ್ಮ ಉಪಯೋಗಕ್ಕೆ ಬರುತ್ತದೆ. ಇಷ್ಟೊಂದು ಉಪಕಾರಿಯಾದ ಗೋವಿಗೆ ನಾವು ಏನೂ ಉಪಕಾರ ಮಾಡಲಾಗೊಲ್ಲ. ಅದನ್ನು ಸಾಕಿದರೆ ಅತಿ ಹೆಚ್ಚು ಪುಣ್ಯ. ಕನಿಷ್ಠ ಈ ದಿವಸ ಗೋವನ್ನು ಯಥಾಶಕ್ತಿ ಪೂಜಿಸಿ, ಅಥವಾ ಸಾಕುವವರಿಗೆ ಗೋವಿಗೆ ಬೇಕಾದ ಮೇವು ಮುಂತಾದವನ್ನು ಕೊಟ್ಟು ಅದರ ಉಪಕಾರ ಸ್ಮರಣೆ ಮಾಡಬೇಕು.
ನಾವು ನಿತ್ಯ ಪೂಜೆ ಸಮಯದಲ್ಲಿ ಕೂಡ ಗೋಗ್ರಾಸ ಕೊಡಬೇಕು. ಅದರಿಂದ ಒಂದು ನೂರು ಬ್ರಾಹ್ಮಣರ ಭೋಜನ ಮಾಡಿಸಿದ ಫಲ ಬರುತ್ತದೆ.
ಇಂದು ಕರು ಸಹಿತವಾದ ಗೋವಿನ ಚಿತ್ರವನ್ನು ಬರೆದು ಗವಾಂತರ್ಯಾಮಿ ಗೋಪಾಲಕೃಷ್ಣನನ್ನು ಆವಾಹಿಸಿ ಅಲಂಕರಿಸಿ, ಪೂಜಿಸಬೇಕು. ನಂತರ ಕರುಸಹಿತವಾದ ಹಸುವಿನ ಪಾದಗಳಿಗೆ (ಸಾಧ್ಯವಾದರೆ ಪ್ರತ್ಯಕ್ಷ) ಅರ್ಘ್ಯವನ್ನು ಹಾಲಿನಿಂದ ಕೊಡಬೇಕು.
ಕ್ಷೀರೋದಾರ್ಣವ ಸಂಭೂತೇ ಸುರಾಸುರ ನಮಸ್ಕೃತೇ |
ಸರ್ವದೇವಮಯೇ ಮಾತ: ಗೃಹಾಣಾರ್ಘ್ಯಂ ನಮೋಸ್ತುತೇ |
ಗೋವತ್ಸ ದ್ವಾದಶಿಯಂದು ಎಣ್ಣೆಯಿಂದ ಕರಿದ ವಸ್ತುಗಳು, ಹಸುವಿನ ಹಾಲು, ಮೊಸರು, ಮಜ್ಜಿಗೆ, ತುಪ್ಪವನ್ನು ವರ್ಜ್ಯ ಮಾಡಬೇಕು..
ಗೋವಿನ ಉತ್ಪನ್ನಗಳು ಬಹು ಉಪಕಾರಿ. ಹಸು, ವೇದಗಳ ಪ್ರಕಾರ, ಮಾನವ ಬಳಕೆಗಾಗಿ ನಾಲ್ಕು ಉತ್ಪನ್ನಗಳನ್ನು ಒದಗಿಸುತ್ತದೆ: (i) ಗೋದುಗ್ಧ (ಹಸುವಿನ ಹಾಲು): (ii) ಗೋಘೃತ (ತುಪ್ಪ): (iii) ಗೋಮೂತ್ರ (ಮೂತ್ರ): iv) ಗೋಮಯ (ಸಗಣಿ).
ಗೋಹತ್ಯಾ ಮಹಾ ಪಾಪಕಾರಿ. ಆದರೆ ಉಗ್ರ ಪ್ರಾಣಿಗಳನ್ನು ಸಂರಕ್ಷಿಸಬೇಕೆನ್ನುವ ಈಗಿನ ರಾಜಕಾರಣಿಗಳು ಪೋಷಿಸಬೇಕಾದ ಹಸುವನ್ನು ಕೊಂದರೂ ಸುಮ್ಮನಿರುವುದು ನಮ್ಮ ದೌರ್ಭಾಗ್ಯ.
ವಸಿಷ್ಠರ ನಂದಿನಿ
ಒಮ್ಮೆ ಚಕ್ರವರ್ತಿ ಗಾಧಿ ರಾಜನ ಮಗ ವಿಶ್ವಾಮಿತ್ರನು ಬೇಟೆಯಾಡಲು ಹೋಗಿದ್ದಾಗ ಬಾಯಾರಿಕೆಯಿಂದ ಬಳಲಿ ಸಮೀಪದ ವಸಿಷ್ಠ ಋಷಿಗಳ ಆಶ್ರಮಕ್ಕೆ ಬಂದನು. ಬಂದ ಅತಿಥಿಗಳಿಗೆ ಗೌರವ ನೀಡಿ ಸತ್ಕರಿಸಿದ ವಸಿಷ್ಠರು ತಮ್ಮ ವಿಶಿಷ್ಟ ಗೋವು ನಂದಿನಿಗೆ ಹೇಳಿ ಬಂದ ಅತಿಥಿಗಳಿಗೆ ಬೇಕಾದ ಹಣ್ಣುಗಳು, ಹಾಲು, ರಸಗಳು, ಅಮೂಲ್ಯವಾದ ರತ್ನಗಳು ಮತ್ತು ಅತ್ಯುತ್ತಮವಾದ ನಿಲುವಂಗಿಗಳನ್ನು ಕೇಳಿದರು. ಕೂಡಲೇ ನಂದಿನಿ ಅವೆಲ್ಲವನ್ನೂ ನೀಡಿತು. ಸಂತುಷ್ಟನಾದ ವಿಶ್ವಾಮಿತ್ರನು ವಸಿಷ್ಠರಲ್ಲಿ ಆ ನಂದಿನಿಯನ್ನು ತನಗೆ ನೀಡಬೇಕೆಂದು ಕೇಳಿದಾಗ ವಸಿಷ್ಠರು ಕೊಡಲಾಗುವುದಿಲ್ಲ ಎಂದರು.
ಆಗ ವಿಶ್ವಾಮಿತ್ರನು “ತಾನು ರಾಜಕುಮಾರ, ಈ ರಾಜ್ಯದಲ್ಲಿರುವ ಎಲ್ಲವೂ ತನಗೆ ಸೇರಬೇಕು ಎಂದು ಹೇಳಿ ನಂದಿನಿಯನ್ನು ಬಲವಂತವಾಗಿ ಕರೆದೊಯ್ಯಲು ಮುಂದಾದಾಗ ನಂದಿನಿಯು ವಸಿಷ್ಠರ ಬಳಿ ಓಡಿ ಬಂದಿತು. ಆಗ ವಸಿಷ್ಠರು ನಂದಿನಿಗೆ ನೀನು ಬಯಸಿದರೆ ಹೋಗು ಎಂದು ಹೇಳಿದರು. ನಂದಿನಿ ವಿಶ್ವಾಮಿತ್ಲನೊಂದಿಗೆ ಹೋಗಲು ಒಪ್ಪಲಿಲ್ಲ.
ಆಗ ವಿಶ್ವಾಮಿತ್ರನು ತನ್ನ ಸೈನಿಕರಿಗೆ ಹೇಳಿ ಬಲವಂತವಾಗಿ ನಂದಿನಿಯನ್ನು ಕರೆದೊಯ್ಯಲು ಮುಂದಾದಾಗ, ನಂದಿನಿಯು ತನ್ನ ದೇಹದಿಂದ ಸಾವಿರಾರು ಸೈನಿಕರನ್ನು ಸೃಷ್ಟಿಸಿ ಅವರನ್ನೆಲ್ಲ ಓಡಿಸಿತು.
ಆ ನಂದಿನಿಯ ಪ್ರಭಾವದಿಂದ ವಿಶ್ವಾಮಿತ್ರನು ಬ್ರಾಹ್ಮಣರ ಪ್ರಭಾವ ಹೆಚ್ಚು ಪರಿಣಾಮಕಾರಿ ಎಂದು ಅರಿತು ರಾಜ್ಯವನ್ನು ಬಿಟ್ಟು ತನ್ನ ಕ್ಷತ್ರಿಯ ಧರ್ಮವನ್ನು ತ್ಯಜಿಸಿ ಬ್ರಾಹ್ಮಣತ್ವ ಸಂಪಾದಿಸಿ ಅನವರತ ಸಾವಿರಾರು ವರ್ಷಗಳ ಕಾಲ ತಪಗೈದು ಬ್ರಹ್ಮರ್ಷಿಯಾಗಿ ಸಫಲನಾದನು.
NARAHARI SUMADHWA
***
ಗೋವತ್ಸ ದ್ವಾದಶಿ – ಆಶ್ವಯುಜ ಕೃಷ್ಣ ದ್ವಾದಶಿ
ಗೋವತ್ಸದ್ವಾದಶಿ
ನಮ್ಮ ಹಿಂದೂ ಸಂಪ್ರದಾಯದಲ್ಲಿ ಗೋವಿಗೆ – ಗೋಮಾತೆಗೆ ತುಂಬಾ ಮಹತ್ವವಿದೆ. ಇದು ಅತ್ಯುತ್ಕೃಷ್ಟ ಗೋವಾದ ನಂದಿನಿ ಮತ್ತು ಅದರ ಕರುವಿಗೆ ಸಂಬಂಧಿಸಿದ ಹಬ್ಬ.
ಗೋವತ್ಸ ದ್ವಾದಶಿ ಉದ್ದೇಶ : 33 ಕೋಟಿ ದೇವತೆಗಳ ಸಾನ್ನಿಧ್ಯ ಹೊಂದಿರುವ ಗೋವು ನಮಗೆ ಹಾಲು, ಮೊಸರು, ಬೆಣ್ಣೆ, ತುಪ್ಪ, ಗಂಜಲ, ಸೆಗಣಿ ಮುಂತಾದವನ್ನು ನೀಡುತ್ತದೆ. ಅದರ ಪ್ರತಿಯೊಂದು ಉತ್ಪನ್ನವೂ ನಮ್ಮ ಉಪಯೋಗಕ್ಕೆ ಬರುತ್ತದೆ. ಇಷ್ಟೊಂದು ಉಪಕಾರಿಯಾದ ಗೋವಿಗೆ ನಾವು ಏನೂ ಉಪಕಾರ ಮಾಡಲಾಗೊಲ್ಲ. ಅದನ್ನು ಸಾಕಿದರೆ ಅತಿ ಹೆಚ್ಚು ಪುಣ್ಯ. ಕನಿಷ್ಠ ಈ ದಿವಸ ಗೋವನ್ನು ಯಥಾಶಕ್ತಿ ಪೂಜಿಸಿ, ಅಥವಾ ಸಾಕುವವರಿಗೆ ಗೋವಿಗೆ ಬೇಕಾದ ಮೇವು ಮುಂತಾದವನ್ನು ಕೊಟ್ಟು ಅದರ ಉಪಕಾರ ಸ್ಮರಣೆ ಮಾಡಬೇಕು.
ನಾವು ನಿತ್ಯ ಪೂಜೆ ಸಮಯದಲ್ಲಿ ಕೂಡ ಗೋಗ್ರಾಸ ಕೊಡಬೇಕು. ಅದರಿಂದ ಒಂದು ನೂರು ಬ್ರಾಹ್ಮಣರ ಭೋಜನ ಮಾಡಿಸಿದ ಫಲ ಬರುತ್ತದೆ.
ಇಂದು ಕರು ಸಹಿತವಾದ ಗೋವಿನ ಚಿತ್ರವನ್ನು ಬರೆದು ಗವಾಂತರ್ಯಾಮಿ ಗೋಪಾಲಕೃಷ್ಣನನ್ನು ಆವಾಹಿಸಿ ಅಲಂಕರಿಸಿ, ಪೂಜಿಸಬೇಕು. ನಂತರ ಕರುಸಹಿತವಾದ ಹಸುವಿನ ಪಾದಗಳಿಗೆ (ಸಾಧ್ಯವಾದರೆ ಪ್ರತ್ಯಕ್ಷ) ಅರ್ಘ್ಯವನ್ನು ಹಾಲಿನಿಂದ ಕೊಡಬೇಕು.
ಕ್ಷೀರೋದಾರ್ಣವ ಸಂಭೂತೇ ಸುರಾಸುರ ನಮಸ್ಕೃತೇ |
ಸರ್ವದೇವಮಯೇ ಮಾತ: ಗೃಹಾಣಾರ್ಘ್ಯಂ ನಮೋಸ್ತುತೇ |
ಗೋವತ್ಸ ದ್ವಾದಶಿಯಂದು ಎಣ್ಣೆಯಿಂದ ಕರಿದ ವಸ್ತುಗಳು, ಹಸುವಿನ ಹಾಲು, ಮೊಸರು, ಮಜ್ಜಿಗೆ, ತುಪ್ಪವನ್ನು ವರ್ಜ್ಯ ಮಾಡಬೇಕು..
by ನರಹರಿ ಸುಮಧ್ವ
***
🌷ಆಶ್ವೀನಮಾಸದ ಮಹತ್ತ್ವ 🌷
ಗೋವತ್ಸ ದ್ವಾದಶೀ ಮಹತ್ತ್ವ
ಆಶ್ವಿನಮಾಸದ ಕೃಷ್ಣಪಕ್ಷದ ದ್ವಾದಶಿಯನ್ನು ಗೋವತ್ಸ ದ್ವಾದಶಿ ಎಂದು ಕರೆಯುತ್ತಾರೆ ಇಂದು ಕರು ಸಹಿತವಾದ ಹಸುವಿನ ಚಿತ್ರ ಬರೆದು ಗವಾಂತರ್ಯಾಮಿ ಗೋಪಾಲಕೃಷ್ಣನನ್ನು ಆವಾಹಿಸಿ ಗಂಧ -ಪುಷ್ಪಾದಿಗಳಿಂದ ಪೂಜಿಸಬೇಕು.ನಂತರ ಕರುಸಹಿತವಾದ ಹಸುವಿಗೆ ದೇವರಿಗೆ ಹಾಕಿದ ಪುಷ್ಪ ಮಾಲೆಗಳಿಂದ ಆಲಂಕರಿಸಿ .ಗಂಧವನ್ನು ,ಅರಿಷಿಣ, ಕುಂಕುಮವನ್ನು,ಹಚ್ಚಿ ಹಸುವಿನಕಾಲುಗಳಿಗೆ ಅರ್ಘ್ಯವನ್ನು ಹಾಲಿನಿಂದ ಕೊಡಬೇಕು.
ಕ್ಷೀರೋದಾರ್ಣವ ಸಂಭೂತೇ ಸುರಾ ಸುರ ನಮಸ್ಕೃತೇ |
ಸರ್ವದೇವಮಯೇ ಮಾತಃ ಗೃಹಣಾರ್ಘ್ಯo ನಮೋಸ್ತುತೇ ||
ಈ ಮಂತ್ರವನ್ನು ಹೇಳಿ ಗೋಗ್ರಾಸವನ್ನುಕೊಡಬೇಕು
ಸುರುಭಿ ತ್ವಂ ಜಗನ್ಮಾತಃ ದೇವಿ ವಿಷ್ಣುಪದೇ ಸ್ಥಿತಾ |
ಸರ್ವದೇವಮಯೇ ಗ್ರಾಸo ಮಯಾ ದತ್ತಮಿದಂ ಗ್ರಸ ||
ತದ್ದಿನೇ ತೈಲಪಕ್ವಂ ಚ ಸ್ಥಾಲಿಪಕ್ವಂ ಯುದಿಷ್ಠಿರ |
ಗೋಕ್ಷೀರ ಗೋಘೃತಂ ಚೈವ ದಧಿ ತಕ್ರಂ ಚ ವರ್ಜಯೇತ್ ||
ಗೋವತ್ಸ ದ್ವಾದಶಿಯಂದು ಎಣ್ಣೆಯಿಂದ ಕರಿದ ವಸ್ತುಗಳು .ಹಸುವಿನ ಹಾಲು
ಮೊಸರು,ತುಪ್ಪ,ಮಜ್ಜಿಗೆಯನ್ನು ಸೇವಿಸಬಾರದು
|| ಶ್ರೀಕೃಷ್ಣಾರ್ಪಣಮಸ್ತು ||
✍️ ಫಣೀಂದ್ರಕೌಲಗಿ
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***
ಗೋವತ್ಸ ದ್ವಾದಶಿ
ಎಲ್ಲರೂ ಕರು ಸಹಿತವಾದ ಗೋವಿನ (ಕನಿಷ್ಠ ಪಕ್ಷ ಚಿತ್ರ ಬಿಡಿಸಿ) ಗವಾಂತರ್ಯಾಮಿ ಗೋಪಾಲಕೃಷ್ಣನನ್ನು ಆವಾಹಿಸಿ ಹಸುಗಳು ಮತ್ತು ಕರುಗಳಿಗೆ ಸ್ನಾನ ಮಾಡಿಸಿ, ಬಟ್ಟೆ ಮತ್ತು ಹೂವಿನ ಮಾಲೆಗಳನ್ನು ತೊಡಿಸಿ, ಅವುಗಳ ಹಣೆಯ ಮೇಲೆ ಸಿಂಧೂರ/ಅರಿಶಿನ ಪುಡಿಯನ್ನು ಲೇಪಿಸಿ ಅಲಂಕರಿಸಿ, ಪೂಜಿಸಬೇಕು. ನಂತರ ಕರುಸಹಿತವಾದ ಹಸುವಿನ ಪಾದಗಳಿಗೆ (ಸಾಧ್ಯವಾದರೆ ಪ್ರತ್ಯಕ್ಷ) ಅರ್ಘ್ಯವನ್ನು ಹಾಲಿನಿಂದ ಕೊಡಬೇಕು.
ಕ್ಷೀರೋದಾರ್ಣವ ಸಂಭೂತೇ ಸುರಾಸುರ ನಮಸ್ಕೃತೇ |
ಸರ್ವದೇವಮಯೇ ಮಾತ: ಗೃಹಾಣಾರ್ಘ್ಯಂ ನಮೋಸ್ತುತೇ |
ಗೋವತ್ಸ ದ್ವಾದಶಿಯಂದು ಎಣ್ಣೆಯಿಂದ ಕರಿದ ವಸ್ತುಗಳು, ಹಸುವಿನ ಹಾಲು, ಮೊಸರು, ಮಜ್ಜಿಗೆ, ತುಪ್ಪವನ್ನು ವರ್ಜ್ಯ ಮಾಡಬೇಕು..
ಗೋವತ್ಸ ದ್ವಾದಶಿಯನ್ನು ಮೊದಲು ರಾಜ ಉತ್ತಾನಪಾದ ( ಸ್ವಯಂಭುವ ಮನುವಿನ ಮಗ ) ಮತ್ತು ಅವನ ಪತ್ನಿ ಸುನೀತಿ ಉಪವಾಸದಿಂದ ಆಚರಿಸಿದರು . ಅವರ ಪ್ರಾರ್ಥನೆ ಮತ್ತು ಉಪವಾಸದಿಂದಾಗಿ ಅವರಿಗೆ ಧ್ರುವ ಜನಿಸುತ್ತಾನೆ.
ಉದ್ದೇಶ
ಈ ಜನ್ಮ ಮತ್ತು ಮುಂದಿನ ಅನೇಕ ಜನ್ಮಗಳಲ್ಲಿನ ಮನೋಕಾಮನೆಗಳು ಪೂರ್ಣವಾಗಬೇಕು ಮತ್ತು ಪೂಜೆಯನ್ನು ಮಾಡುತ್ತಿರುವ ಆಕಳ ಶರೀರದ ಮೇಲೆ ಎಷ್ಟು ರೋಮಗಳು (ಕೂದಲುಗಳು) ಇವೆಯೋ ಅಷ್ಟು ವರ್ಷಗಳ ಕಾಲ ಸ್ವರ್ಗದಲ್ಲಿ ಸ್ಥಾನ ಸಿಗಬೇಕೆಂದು ಈ ಹಬ್ಬವನ್ನು ಆಚರಿಸುತ್ತಾರೆ.
ಈ. ಹಬ್ಬವನ್ನು ಆಚರಿಸುವ ಪದ್ಧತಿ :
ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂಕಾಲ ಕರುಸಮೇತವಿರುವ ಆಕಳ ಪೂಜೆಯನ್ನು ಮಾಡುತ್ತಾರೆ.
ಗೋವತ್ಸದ್ವಾದಶಿಯ ಮಹತ್ವ
ಆಕಳಿನ ಪೂಜೆಯನ್ನು ಮಾಡಿ ಅವಳಲ್ಲಿರುವ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದು: ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬಾ ಮಹತ್ವವಿದೆ. ಅವಳನ್ನು ಮಾತೆಯೆಂದು ಸಂಬೋಧಿಸಲಾಗುತ್ತದೆ. ಅವಳು ಸಾತ್ತ್ವಿಕಳಾಗಿರುವುದರಿಂದ ಅವಳ ಪೂಜೆಯನ್ನು ಮಾಡಿ ಎಲ್ಲರೂ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದಿರುತ್ತದೆ. ತನ್ನ ಸಹವಾಸದಿಂದ ಇತರರನ್ನು ಪಾವನ ಗೊಳಿಸುವ, ತನ್ನ ಹಾಲಿನಿಂದ ಸಮಾಜ ವನ್ನು ಬಲಿಷ್ಠಗೊಳಿಸುವ, ಕೃಷಿಗಾಗಿ ತನ್ನ ಸೆಗಣಿಯಿಂದ ಗೊಬ್ಬರವನ್ನು ನೀಡುವ, ಕೃಷಿಗೆ ಉಪಯುಕ್ತವಾದ ಎತ್ತುಗಳಿಗೆ ಜನ್ಮ ನೀಡುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆಯಿರುವ ಗೋಮಾತೆಯನ್ನು ಈ ದಿನದಂದು ಪೂಜೆ ಮಾಡಬೇಕು. ಎಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಸಂವರ್ಧನೆಯಾಗುತ್ತದೆಯೋ ಹಾಗೂ ಪೂಜ್ಯ ಭಾವದಿಂದ ಅವಳನ್ನು ಪೂಜಿಸಲಾಗುತ್ತದೆಯೋ, ಅಲ್ಲಿನ ವ್ಯಕ್ತಿಗಳು, ಆ ಸಮಾಜ ಮತ್ತು ಆ ರಾಷ್ಟ್ರದ ಸಮೃದ್ಧಿಯು ನಿಶ್ಚಿತವಾಗಿ ಆಗುತ್ತದೆ. ಇಂತಹ ಗೋಮಾತೆಯನ್ನು ಅವಳ ಕರುಗಳ ಸಹಿತ ಪೂಜಿಸಿ ದೀಪೋತ್ಸವವನ್ನು (ದೀಪಾವಳಿಯನ್ನು) ಆಚರಿಸಬೇಕು.
ಶ್ರೀ ಕೃಷ್ಣಾರ್ಪಣಮಸ್ತು
***
No comments:
Post a Comment