ದೀಪಾವಳೀ ಹಬ್ಬ ಲಕ್ಷ್ಮೀಯ ಪೂಜೆ ಆಚರಿಸುವ ಪದ್ಧತಿ.
Lakshmi pooja on Deepavali day
Kuber : Wealth (one who gives away wealth)
Gajendra : Carries the wealth
Lakshmi : Divine Energy (Shakti) which provides energy to all the above activities.
- 1. At the break of dawn, one should have an auspicious bath, and then worship the Deities.
- 2. In the afternoon, a rite for the departed souls (parvanshraddha) and an offering of meals to Brahmaṇs (Brahmaṇbhojan) is done.
- 3. In the evening, in a decorated area, Goddess Lakshmi, Deity Vishnu, other Deities and Deity Kuber are worshipped. A legend says that on this day Deity Vishnu along with Goddess Lakshmi liberated all the Deities from Bali’s prison and thereafter they all slept in the ocean. To represent that, everyone should enjoy themselves at home and light lamps everywhere.
- 1. A new broom is bought for this act and it is considered as ‘Lakshmi’.
- 2. It is ritualistically worshipped at midnight and then, the entire house is swept using the new broom.
- 3. The rubbish is collected in the dustpan and it is taken out of house. It is recommended to take it out through the backdoor; however, if there is only one door, then one can take it out from that door.
- 4. Throw away the rubbish as far as possible. One can throw it in the rubbish bins kept on the roads / footpath. If this is difficult, one can throw it in the rubbish bin outside house or apartment.
a. On any other days, sweeping and throwing out the rubbish at night is not recommended.
b. If one lives in a fully carpeted house, they can buy new broom and sweep over the carpet and follow as given in point 3 and 4 above.
Spiritual effect of the act of driving out Alakshmi
- 1. Rubbish represents alakshmi. At midnight, the subtle components Raja and Tama are maximum.
- 2. The rubbish being Raja-Rama predominant, the Raja-Tama components in the atmosphere are drawn towards it.
- 3. When the rubbish is collected in dustpan and thrown out of the house, the Raja-Tama components too are thrown out of the house. Due to this, the subtle components Sattva are attracted in the house, and the house becomes sāttvik.
- 4. Earlier in the evening, due to performing the Lakshmipujan, the Chaitanya (Divine Consciousness) spreads in the house.
- 5. In Purāna, it is said that at midnight, Goddess Lakshmi searches for an ideal house. No doubt the cleanliness and beauty draws Her attention; however, She chooses to live in a house in which faithful, dutiful, merciful, righteous men live, who have control over passions and are devotees of God, and women who are virtuous and chaste.
ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ. ಇವು ಈ ದಿನದ ವಿಧಿಗಳಾಗಿವೆ.
ಲಕ್ಷ್ಮೀಯ ಪೂಜೆಯನ್ನು ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವು ಕಡೆಗಳಲ್ಲಿ ಕಲಶದ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಇಡುತ್ತಾರೆ.
ಕಲಶದ ಮೇಲೆ ಲಕ್ಷ್ಮೀಯ ಸಮೀಪದಲ್ಲಿಯೇ ಕುಬೇರನ ಪ್ರತಿಮೆಯನ್ನು ಇಡುತ್ತಾರೆ. ಅನಂತರ ಲಕ್ಷ್ಮೀ ಮತ್ತು ಇತರ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ತಯಾರಿಸಿದ ಹಸುವಿನ ಹಾಲಿನ ಖೋವ ನೈವೇದ್ಯವನ್ನು ಅರ್ಪಿಸುತ್ತಾರೆ.
ಕೊತ್ತಂಬರಿ, ಬೆಲ್ಲ, ಭತ್ತದ ಅರಳು, ಬತ್ತಾಸು ಇತ್ಯಾದಿ ಪದಾರ್ಥಗಳನ್ನು ಲಕ್ಷ್ಮೀಗೆ ಅರ್ಪಿಸಿ ನಂತರ ಅವುಗಳನ್ನು ಆಪ್ತೇಷ್ಟರಿಗೆ ಹಂಚುತ್ತಾರೆ. ನಂತರ ಕೈಯಲ್ಲಿನ ದೀವಟಿಗೆಯಿಂದ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ.
(ಕೈಯಲ್ಲಿನ ದೀವಟಿಗೆಯನ್ನು ದಕ್ಷಿಣ ದಿಕ್ಕಿಗೆ ತೋರಿಸಿ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ.)
ಬ್ರಾಹ್ಮಣರಿಗೆ ಮತ್ತು ಇತರ ಹಸಿದ ವರಿಗೆ ಊಟವನ್ನು ಕೊಡುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ.
ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷಿ ಯು ಎಲ್ಲೆಡೆಗೆ ಸಂಚರಿಸಿ ತನ್ನ ನಿವಾಸಕ್ಕಾಗಿ ಯೋಗ್ಯ ಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ.
ಎಲ್ಲಿ ಸ್ವಚ್ಛತೆ, ಶೋಭೆ ಇರುತ್ತದೆಯೋ ಅಲ್ಲಿ ಅವಳು ಆಕರ್ಷಿತಳಾಗುತ್ತಾಳೆ. ಅಲ್ಲದೆ ಯಾವ ಮನೆಯಲ್ಲಿ ಚಾರಿತ್ರ್ಯವುಳ್ಳ, ಕರ್ತವ್ಯದಕ್ಷ, ಸಂಯಮವುಳ್ಳ, ಧರ್ಮನಿಷ್ಠ ದೇವಭಕ್ತರು ಮತ್ತು ಕ್ಷಮಾಶೀಲ ಪುರುಷರು ಹಾಗೂ ಗುಣವತಿ ಮತ್ತು ಪತಿವ್ರತಾ ಸ್ತ್ರೀಯರು ಇರುತ್ತಾರೆಯೋ ಅಲ್ಲಿ ವಾಸಿಸಲು ಲಕ್ಷ್ಮೀಯು ಇಷ್ಟಪಡುತ್ತಾಳೆ.’
ಈ ಪೂಜೆಯಲ್ಲಿ ಕೊತ್ತಂಬರಿ ಮತ್ತು ಭತ್ತದ ಅರಳನ್ನು ಅರ್ಪಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಕೊತ್ತಂಬರಿಯು (ಧನಿಯಾ) ಧನವಾಚಕ ಶಬ್ದವಾಗಿದೆ ಮತ್ತು ಅರಳು ಸಮೃದ್ಧಿಯ ಪ್ರತೀಕವಾಗಿವೆ. ಸ್ವಲ್ಪ ಭತ್ತಗಳನ್ನು ಹುರಿದರೂ ಕೈತುಂಬಾ ಅರಳುಗಳಾಗುತ್ತವೆ. ಲಕ್ಷ್ಮೀಯ ಸಮೃದ್ಧಿಯಿರಬೇಕೆಂದು ಸಮೃದ್ಧಿಯ ಪ್ರತೀಕವಾಗಿರುವ ಅರಳನ್ನು ಅರ್ಪಿಸುತ್ತಾರೆ.
ಅಲಕ್ಷ್ಮೀಯ ನಿರ್ಮೂಲನ
ಮಹತ್ವ : ಗುಣಗಳನ್ನು ನಿರ್ಮಾಣ ಮಾಡಿದರೂ ದೋಷಗಳು ನಾಶವಾಗ ಬೇಕು; ಆಗಲೇ ಗುಣಗಳಿಗೆ ಮಹತ್ವವು ಬರುತ್ತದೆ. ಇಲ್ಲಿ ಲಕ್ಷ್ಮೀಪ್ರಾಪ್ತಿಯ ಉಪಾಯವಾಯಿತು, ಹಾಗೆಯೇ ಅಲಕ್ಷಿ ಯ ನಾಶವೂ ಆಗಬೇಕು. ಇದಕ್ಕಾಗಿ ಈ ದಿನದಂದು ಹೊಸ ಪೊರಕೆಯನ್ನು ಖರೀದಿಸುತ್ತಾರೆ. ಅದಕ್ಕೆ ‘ಲಕ್ಷ್ಮೀ’ ಎನ್ನುತ್ತಾರೆ.
ಕೃತಿ : ‘ನಡುರಾತ್ರಿಯಲ್ಲಿ ಹೊಸ ಪೊರಕೆಯಿಂದ ಕಸಗುಡಿಸಿ ಅದನ್ನು ಮೊರದಲ್ಲಿ ತುಂಬಿ ಹೊರಗೆ ಹಾಕಬೇಕು’ ಎಂದು ಹೇಳಲಾಗಿದೆ. ಇದಕ್ಕೆ ‘ಅಲಕ್ಷ್ಮೀ (ಕಸ, ದಾರಿದ್ರ್ಯ) ನಿರ್ಮೂಲನ’ ಎನ್ನುತ್ತಾರೆ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಕಸವನ್ನು ಗುಡಿಸುವುದಿಲ್ಲ ಅಥವಾ ಹೊರಗೆ ಹಾಕುವುದಿಲ್ಲ. ಕೇವಲ ಈ ರಾತ್ರಿ ಮಾತ್ರ ಹಾಗೆ ಮಾಡುವುದಿರುತ್ತದೆ. ಕಸ ಗುಡಿಸುವಾಗ ಮೊರ ಮತ್ತು ದಿಮಡಿಯನ್ನು (ಚರ್ಮದ ವಾದ್ಯವನ್ನು) ಬಾರಿಸಿ ಅಲಕ್ಷಿ ಯನ್ನು ಓಡಿಸುತ್ತಾರೆ.
ಅಮವಾಸ್ಯೆ ಮಹಾಲಕ್ಷೀ ಲಕ್ಷೀ ಪೂಜಾ, ಅಶ್ವಿನ ಅಮವಾಸ್ಯೆ, ಅಥವಾ ದಿಪಾವಳಿ ಅಮವಾಸ್ಯೆ ದಿನ ಮಾಡುವ ಕುಬೇರ ಲಕ್ಷೀ ಪೂಜಾ ವಿಧಾನ
ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತದ ನಂತರ.
ದಾಮೋದರಾಯನಭಸಿ ತುಲಾಯಾಂ ದೊಲಯಾಸಹ ಪ್ರದೀಪಂತೇ ಪ್ರಯಚ್ಛಾಮಿ ನಮೋ ಅನಂತಾಯ ವೇದಸೇ * ಈ ಮಂತ್ರವನ್ನು ಹೇಳಿ ಒಂದು ತಿಂಗಳು ಪರ್ಯಂತ ಎಂಟು ಆಕಾಶ ದೀಪವನ್ನು ಹಚ್ಚಿದರೆ ಮಹಾ ಸಂಪತ್ತು ಲಭಿಸುವದು...
ಸಾಮಾನ್ಯವಾಗಿ ನಾವು ಅಮವಾಸ್ಯೆ ದಿನ ಅಭ್ಯಂಗ ಸ್ನಾನ ಮಾಡುವದಿಲ್ಲ ಆದರೆ ಈ ಅಮವಾಸ್ಯೆ ದಿನ ಅಭ್ಯಂಗ ಸ್ನಾನ ಮಾಡಬೇಕು , ಮಾಡಿದರೆ ಯಾವ ದೋಷವಿಲ್ಲ..
ಇತಿಹಾಸ : ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅದಕ್ಕಾಗಿ ಲಕ್ಷೀ ಕುಬೇರ ಪ್ರಿತ್ಯರ್ಥ್ಯ ವಾಗಿ.. ಈ ದಿನ ಮಹಾಲಕ್ಷೀ ಪೂಜೆಯನ್ನು ಮಾಡುತ್ತಾರೋ ಐಶ್ವರ್ಯ ಅಬಿವ್ರದ್ಧಿಯನ್ನು ಹೊಂದುತ್ತಾರೆ.......
ದಿಪಾವಳಿ ಅಮವಾಸ್ಯೆ ಪೂಜೆ ಪ್ರದೋಷಕಾಲದಲ್ಲಿ ದಿಪಾರಾಧನೆ ಜೊತೆಗೆ ಮಾಡಿದಲ್ಲಿ ಸಂಪತ್ತು ಬರುತ್ತದೆ. ಪ್ರದೋಷಕಾಲದಲ್ಲಿ ಮಾಡುವದು ಬಹಳ ಶ್ರೇಷ್ಠ ಅಂದರೆ ಸೂರ್ಯಾಸ್ತದ ನಂತರ ..
ಅದಕ್ಕಾಗಿ ಆ ದಿನ ಅಂದರೆ ಸಂಜೆ ಲಕ್ಷೀ ಪೂಜೆ ಮಾಡುವವರು ಮದ್ಯಾಹ್ನ ಊಟ ಮಾಡಬಾರದು , ಆ ದಿನ ಬಾಲ ವೃದ್ಧರನ್ನು ಬಿಟ್ಟು ಉಳಿದವರು ಮದ್ಯಾಹ್ನ ಊಟ ಮಾಡಬಾರದು ಅಂತ ಶಾಸ್ತ್ರ ಹೇಳುತ್ತದೆ ...
ಊಟಮಾಡಿ ಲಕ್ಷೀ ಪೂಜೆ ಮಾಡಬಾರದು ಲಕ್ಷೀ ಪೂಜೆ ಮಾಡಿ ನಂತರ ರಾತ್ರಿ ಬೋಜನ ಮಾಡುವುದು ಒಳ್ಳೆಯದು... ಈ ಲಕ್ಷೀ ಪೂಜೆ ಅತ್ಯಂತ ಫಲದಾಯಕವಾಗಿರುತ್ತವೆ , ಫಲವೂ ಕೂಡಾ ಬೇಗನೆ ಸಿಗುತ್ತದೆ . ಇದನ್ನು ಯಾರ ಬೇಕಾದರೂ ಮಾಡಬಹುದು ಪದ್ಧತಿ ಅಂತ ಎನೂ ಇಲ್ಲ.
ಆ ದಿನ ಲಕ್ಷೀ ಪೂಜಾ ವಿಧಾನ..
ಅಕ್ಷತೆಯನ್ನು ಕೈಯಲ್ಲಿ. ಹಿಡಿದು ...
ನಂತರ ಧ್ಯಾನ ..
ಕೈಮುಗಿದು...
ವರಾಂಕುಶಾ ಪಾಶಮಭೀತಿಮುದ್ರಾಂ
ಕರೈರ್ವಹಂತೀಂ ಕಮಲಾಸನಾಸ್ಥಾಮ್
ಬಾಲಾರ್ಕಕೋಟಪ್ರತಿಮಾಂ ತ್ತೀನೇತ್ರಾಂ
ಭಜೇ ಹಮಾದ್ಯಾಮ್ ಜಗಧೀಶ್ವರೀಂ ತಾಮ್
ನಂತರ
ಶ್ರೀ ಮಹಾಲಕ್ಷೈ ನಮಃ
ಮಂತ್ರದಿಂದ
ಷೋಡಷೋಪಚಾರ
ಪೂಜೆ ಮಾಡಿ
ಐದುತರಹದ ಹಣ್ಣುಗಳನ್ನು ಉಡಿತುಂಬಿ ನಂತರ ಪ್ರಾರ್ಥಿ.ಬೇಕು...
ನಮಸ್ತೇ ಸರ್ವದೇವಾನಾಂ ವರದಾಸಿ ಹರೀ ಪ್ರಿಯಾl
ಯಾಗತಿಸ್ತ್ವತ್ ಪ್ರಪನ್ನಾನಾಂ ಸಾ ಮೇ ಭೊಯಾತ್ತ್ವರ್ದಚನಾತ ll
ಯಾ ದೇವೀ ಸರ್ವ ಭೂತೇಷು ಲಕ್ಷೀ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ll
ಆ ಮೇಲೆ ದೀಪ ಸ್ವರೂಪಳಾದ ಲಕ್ಷೀಯನ್ನು ಪ್ರಾರ್ಥಿಸಬೇಕು...
ವಿಶ್ವರೂಪಸ್ಯ ಭಾರ್ಯಾಸಿ ಪದ್ಮೇ ಪದ್ಮಾಲಯೇ ಶುಭೇ
ಮಹಾಲಕ್ಷೀ ನಮಸ್ತುಭ್ಯಂ ಸುಖರಾತ್ರಿ ಕುರುಷ್ವಮೇ ll
ವರ್ಷಾಕಾಲೇ ಮಹಾಘೋರೇ ಯನ್ತಯಾ ದುಷ್ಕ್ರತಂಕ್ರತಮ್
ಸುಖರಾತ್ರಿಂ ಪ್ರಭಾತ್ಯೇದ್ಯ ತನ್ಮೇ ಲಕ್ಷೀ ರ್ವ್ಯಪೋಹತುll
ಯಾರಾತ್ರಿಃ ಸರ್ವಭೂತಾನಾಂ ಯಾ ಚ ದೇವೇಷ್ವವಸ್ಥಿತಾ ll
ಸಂವತ್ಸರ ಪ್ರೀಯಾ ಯಾ ಚ ಸಾ ಮಮಾಸ್ತು ಸುಮಂಗಲಾ ll
ಮಾತಾ ತ್ವಂ ಸರ್ವ ಭೂತಾನಾಂ ದೇವಾನಾಂ ಸೃಷ್ಟಿ ಸಂಭವಾ l
ಆಖ್ಯಾತಾ ಭೂತಲೇ ದೇವಿ ಸುಖರಾತ್ರಿ ನಮೋಸ್ತುತೇ ll
ಈ ರೀತಿ ಪ್ರಾರ್ಥನೆ ಮಾಡಿ ಆರತಿ ನೈವೇದ್ಯ ಫಲ ತಾಂಬೂಲ ಸಮರ್ಪಣೆ ಮಾಡಿ ಅಕ್ಷತೆಹಾಕಿ ಬಂಧುಬಾಂಧವರೊಡಗೂಡಿ ಊಟಮಾಡಬೇಕು.
************
another version
ಶ್ರೀ ಲಕ್ಷ್ಮಿ ಮಾತೆಯ ಶುಕ್ರವಾರದ ಪೂಜೆಯ ವಿಧಾನ ತಿಳಿಸಿದೆ. ಇದನ್ನು ಶ್ರಾವಣ ಮಾಸದಲ್ಲಿಯೂ ಕೂಡ ಮಾಡಬಹುದು. ಶ್ರೀ ಲಕ್ಷ್ಮೀ ಪೂಜೆಯನ್ನು ಮಾಡಿ ಆಕೆಯ ಕೃಪೆಗೆ ಪಾತ್ರರಾಗಿ.
ಶ್ರೀ ಮಹಾಲಕ್ಷ್ಮೀ ನಿತ್ಯಪೂಜೆಯ ವಿಧಾನ
| ಶ್ರೀ ಗುರುಭ್ಯೋನಮಃ | ಹರಿಃ ಓಂ |
ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಮ್ಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರ ಶುಚಿಃ ||
( ತಲೆಯ ಮೇಲೆ ನೀರನ್ನು ಪ್ರೋಕ್ಷಿಸಿಕೊಳ್ಳಬೇಕು )
ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||
( ಘಂಟಾನಾದ ಮಾಡಿ )
ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಾಕ್ಷಸಾಮ್ |
ಕುರು ಘಂಟಾರವಂ ತತ್ರ ದೇವತಾಹ್ವಾನ ಲಾಂಛನಮ್ ||
( ಆಚಮನ ಮಾಡಿ )
ಆಚಮ್ಯ
ಕೇಶವಾಯ ಸ್ವಾಹಾ - - - - - - - - - - - - -
- - - - - - - - - - - - - - ಶ್ರೀಕೃಷ್ಣಾಯ ನಮಃ
[ ಶ್ರೀ ಗುರುಭ್ಯೋ ನಮಃ || ಹರಿಃ ಓಂ ||
ಶ್ರೀ ವೈಭವಲಕ್ಷ್ಮೀ ನಮಃ || ಲಕ್ಷ್ಮೀನಾರಾಯಣಾಭ್ಯಾಂ ನಮಃ ||
ಆಚಮ್ಯ ( ಎರಡಾವರ್ತಿ ನೀರನ್ನು ಸೇವಿಸಬೇಕು )
ಕೇಶವಾಯ ಸ್ವಾಹಾ | ನಾರಾಯಣಾಯ ಸ್ವಾಹಾ | ಮಾಧವಾಯ ಸ್ವಾಹಾ ||
ನಾಮಸ್ಮರಣೆ
ಗೋವಿಂದಾಯ ನಮಃ | ವಿಷ್ಣುವೇ ನಮಃ |
ಮಧೂಸೂಧನಾಯ ನಮಃ | ತ್ರಿವಿಕ್ರಮಾಯ ನಮಃ |
ವಾಮನಾಯ ನಮಃ | ಶ್ರೀಧರಾಯ ನಮಃ |
ಹೃಶೀಕೇಶಾಯ ನಮಃ | ಪದ್ಮನಾಭಾಯ ನಮಃ |
ದಾಮೋದರಾಯ ನಮಃ | ಸಂಕರ್ಷಣಾಯ ನಮಃ |
ವಾಸುದೇವಾಯ ನಮಃ | ಪ್ರದ್ಯುಮ್ನಾಯ ನಮಃ |
ಅನಿರುದ್ದಾಯ ನಮಃ | ಪುರುಷೋತ್ತಮಾಯ ನಮಃ |
ಅಧೋಕ್ಷಜಾಯ ನಮಃ | ನಾರಸಿಂಹಾಯ ನಮಃ |
ಅಚ್ಯುತಾಯ ನಮಃ | ಜನಾರ್ಧನಾಯ ನಮಃ |
ಉಪೇಂದ್ರಾಯ ನಮಃ | ಹರಯೇ ನಮಃ |
ಶ್ರೀ ಕೃಷ್ಣಾಯ ನಮಃ || (ಕೈ ಜೋಡಿಸಿ ನಮಸ್ಕರಿಸುವುದು)
ಶ್ರೀ ಗುರುಭ್ಯೋ ನಮಃ | ಶ್ರೀ ಮನ್ಮಹಾಗಣಪತಯೇ ನಮಃ |
ಕುಲದೇವತಾಯೈ ನಮಃ | ಇಷ್ಟದೇವತಾಭ್ಯೋ ನಮಃ |
ಅವಿಘ್ನಮಸ್ತು | ಶಾಂತಿರಸ್ತು | ]
ಪ್ರಾಣಾಯಾಮ
ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ | ಓಮಾಪೋ ಜ್ಯೋತಿರಸೋಮೃತಂ ಬ್ರಹ್ಮ ಭುರ್ಭುವಸ್ವರೋಮ್ ||
ಸಂಕಲ್ಪ
ಶುಭೇ ಶೋಭನೇ ಮುಹೂರ್ಥೆ _ _ _ ಸಂವತ್ಸರಸ್ಯ _ _ _ ಅಯನೆ _ _ _ ಋತೌ _ _ _ ಮಾಸಸ್ಯ _ _ _ ಪಕ್ಷೇ _ _ _ ತಿಥೌ _ _ _ ವಾಸರೇ, ಅಸ್ಮಾಕಂ ( ಖಾಲಿ ಜಾಗದಲ್ಲಿ ಪೂಜಾ ದಿನದ ಸಂವತ್ಸರ, ಅಯನ, ಋತು, ಮಾಸ, ಪಕ್ಷ, ತಿಥಿ, ವಾರಗಳನ್ನು ಹೇಳಿ )
ಸಹಕುಟುಂಬಾನಾಂಕ್ಷೇಮ ಸ್ಥೈರ್ಯ ವಿಜಯಾಯುರಾರೋಗ್ಯ ಸಿದ್ಯರ್ಥಂ ಸಮಸ್ತ ಸನ್ಮಂಗಳಾವಾಪ್ತ್ಯರ್ಥಂ ಸೌಭಾಗ್ಯ ಸಿದ್ದ್ಯರ್ಥಂ ಮನೋಕಾಮನಾ ಸಿದ್ದ್ಯರ್ಥಂ ಶ್ರೀ ಮಹಾಲಕ್ಷ್ಮೀ ದೇವತಾಮುದ್ದಿಶ್ಯ ಶ್ರೀ ಮಹಾಲಕ್ಷ್ಮೀ ಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||
( ಮಂತ್ರಾಕ್ಷತೆಗೆ ನೀರು ಹಾಕಿ ತಟ್ಟೆಗೆ ಹಾಕಿ )
ಧ್ಯಾನಂ
ವಂದೇ ಲಕ್ಷ್ಮೀಂ ಪರಶಿವಮಯೀಂ
ಶುದ್ದ ಜಾಂಬೂನದಾಭಾಂ
ತೇಜೋರೂಪಂ ಕನಕವಸನಾಂ
ಸರ್ವ ಭೂಷೋಜ್ವಲಾಂಗೀಮ್ |
ಬೀಜಾಪೂರಂ ಕನಕಕಲಶಂ
ಹೇಮಪದ್ಮಂ ದಧಾನಾಂ
ಆದ್ಯಾಂ ಶಕ್ತಿಂ ಸಕಲಜನನೀಂ
ವಿಷ್ಣು ವಾಮಾಂಶ ಸಂಸ್ಥಾಮ್ ||
ಧ್ಯಾಯಾಮಿ
( ಲಕ್ಷ್ಮೀ ಪ್ರತಿಮೆ\ಫೋಟೋಗೆ ಅಕ್ಷತೆ, ಹೂ ಏರಿಸಿ )
ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರ ಪೂಜಿತೇ |
ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ ||
|| ಆವಾಹಯಾಮಿ ||
( ಅಕ್ಷತೆ, ಹೂ ಏರಿಸಿ )
ಶ್ರೀ ಮಹಾಲಕ್ಷ್ಮ್ಯೈ ನಮಃ ಆಚಮನಂ ಸಮರ್ಪಯಾಮಿ |
( ಉದ್ದರಣೆ ನೀರು ಹಾಕಿ )
ಅರ್ಘ್ಯಂ ಸಮರ್ಪಯಾಮಿ ( ತಟ್ಟೆಗೆ ನೀರು ಹಾಕಿ )
ಸ್ನಾನಂ ಸಮರ್ಪಯಾಮಿ (ನೀರನ್ನು ಪ್ರೋಕ್ಷಿಸಿ )
ಪಾದ್ಯಂ ಸಮರ್ಪಯಾಮಿ (ಉದ್ದರಣೆ ನೀರು ಹಾಕಿ)
ಪುನರಾಚಮನಂ ಸಮರ್ಪಯಾಮಿ |
ವಸ್ತ್ರಂ ಸಮರ್ಪಯಾಮಿ (ಗೆಜ್ಜೆ ವಸ್ತ್ರ ಏರಿಸಿ )
ಆಭರಣಾನಿ ಸಮರ್ಪಯಾಮಿ || ಹರಿದ್ರಾ ಕುಂಕುಮ
ಪರಿಮಳ ದ್ರವ್ಯಾನಿ ಸಮರ್ಪಯಾಮಿ (ಅರಶಿನ, ಕುಂಕುಮ ಏರಿಸಿ )
ಧೂಪಮಾಘ್ರಾಸಯಾಮಿ (ಧೂಪವನ್ನು ಬೆಳಗಿ )
ದೀಪಮ್ ದರ್ಶಯಾಮಿ ( ದೀಪಾರತಿ, ಏಕಾರತಿ ಬೆಳಗಿ )
ನೈವೇದ್ಯಂ ಸಮರ್ಪಯಾಮಿ
ಓಂ ಭುರ್ಭುವಸ್ವಃ _ _ _ ಪ್ರಚೋದಯಾತ್ |
ಪ್ರಾಣಾಪಾನ ವ್ಯಾನೋದಾನ ಸಮಾನಾಭ್ಯಾಂ ಸ್ವಾಹಾ ||
(ನೈವೇದ್ಯಕ್ಕೆ ತೀರ್ಥ ಪ್ರೋಕ್ಷಿಸಿ )
ಶ್ರೀ ಮಹಾಲಕ್ಷ್ಮ್ಯೈ ನಮಃ ಉತ್ತರಾಪೋಶನಂ ಸಮರ್ಪಯಾಮಿ ||
(ಉದ್ದರಣೆ ನೀರು ಹಾಕಿ)
ಮಹಾನೀರಾಜನಂ ಸಮರ್ಪಯಾಮಿ
ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾದ್ಯೋತಿತಂಮಯಾ
ನೀರಾಜಯಾಮಿ ದೇವೇಶಿ ಪ್ರಸೀದ ಹರಿವಲ್ಲಭೆ
( ಮಹಾಮಂಗಳಾರತಿ ಮಾಡಿ )
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ (ನಮಸ್ಕಾರ ಮಾಡಿ )
ಛತ್ರ ಚಾಮರ ನೃತ್ಯ ಗೀತ ವಾದ್ಯಾಂದೋಲಿಕಾದಿ
ಸಮಸ್ತ ರಾಜೋಪಚಾರ ಪೂಜಾಹ ಸಮರ್ಪಯಾಮಿ ||
ಸಮರ್ಪಣೆ
ಯಸ್ಯ ಸ್ಮೈತ್ಯಾ ಚ ನಾಮೊಕ್ತ್ಯಾ ತಪಃ ಪೂಜಾ ಕ್ರಿಯಾದಿಷು |
ನ್ಯೂನಂ ಸಂಪೂರ್ಣತಾಂ ಯೋನಿ ಸದ್ಯೋವಂದೇ ತಮಚ್ಯುತಂ ||
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಹರಿಪ್ರಿಯೇ |
ಯತ್ಕ್ರತಂ ತು ಮಾಯಾ ದೇವಿ ಪರಿಪೂರ್ಣಂ ತದಸ್ತು ತೇ ||
ಅನೇನ ಶ್ರೀಮನ್ಮಹಾಲಕ್ಷ್ಮೀ ದೇವತಾ ಪೂಜನೇನ |
ಶ್ರೀ ಮಹಾಲಕ್ಷ್ಮೀ ದೇವತಾ ಪ್ರೀತಾ ವರದಾಭವತು ||
( ಹೂವಿನ ಪ್ರಸಾದವನ್ನು ತಲೆಯಲ್ಲಿ ಧರಿಸಿ )
ಕಾಯೇನವಾಚ ಮನಸೆನ್ದ್ರಿಯೈರ್ವಾ |
ಭುದ್ಯಾತ್ಮನಾ ವಾ ಪ್ರಕೃತೆಃ ಸ್ವಭಾವಾತ್ ||
ಕರೋಮಿಯದ್ಯದ್ ಸಕಲಂ ಪರಸ್ಮೈ |
ನಾರಾಯಣಾಯೇತಿ ಸಮರ್ಪಯಾಮಿ ||
ಶ್ರೀ ಕೃಷ್ಣಾರ್ಪಣಮಸ್ತು
ಪ್ರತಿ ಶುಕ್ರವಾರ ಪಠಿಸಬೇಕಾದ ಶ್ಲೋಕ
ಯಾ ರಕ್ತಾಂಬುಜವಾಸಿನೀ ವಿಲಸಿನೀ ಚಂಡಾOಶು ತೇಜಸ್ವಿನೀ
ಆರಕ್ತಾ ದುಧಿರಾಂಬರಾ ಹರಿಸಖೀ ಯಾ ಶ್ರೀ ಮನೋಹ್ಲಾದಿನೀ |
ಯಾ ರತ್ನಾಕರ ಮಂಥನಾತ್ ಪ್ರಘಟಿತಾ ವಿಷ್ಣೋಸ್ಚ ಯಾ ಗೇಹಿನೀ |
ಸಾ ಮಾಂ ಪಾತು ಮನೋರಮಾ ಭಗವತೀ ಲಕ್ಷ್ಮೀಸ್ಚ ಪದ್ಮಾಲಯಾ ||
( ಭಾವಾರ್ಥ: ಯಾವ ವೈಭವ ಲಕ್ಷ್ಮಿಯು ಕೆಂದಾವರೆಯಲ್ಲಿ ಹಸನ್ಮುಖಳಾಗಿ ಕುಳಿತು ಕೋಟಿಸೂರ್ಯರ ಪ್ರಕಾಶವುಳ್ಳಳೋ, ಕೆಂಪು ವಸ್ತ್ರವನ್ನಿಟ್ಟು ಶ್ರೀಹರಿಯ ಹೃದಯವಲ್ಲಭೆಯೋ, ಯಾವಾಕೆಯು ಸಮುದ್ರ ಮಥನದಲ್ಲಿ ಅವತರಿಸಿ, ಭಗವಾನ್ ಮಹಾವಿಷ್ಣುವಿನ ಪತ್ನಿಯಾದಳೋ, ಅಂತಹ ಭಗವತೀ ಲಕ್ಷ್ಮಿಯು ನನ್ನನು ರಕ್ಷಿಸಲಿ. )
*************
another one more version
ಆಶ್ವಯುಜ ಕೃಷ್ಣ ಅಮಾವಾಸ್ಯೆ
ಮಹಾಲಕ್ಷ್ಮೀ ಕುಬೇರ ಪೂಜೆ
ಶಯನೀ ಏಕಾದಶಿಯಂದು ಶ್ರೀಮನ್ನಾರಾಯಣನೊಂದಿಗೆ ಮಲಗಿದ್ದ ಮಹಾಲಕ್ಷ್ಮಿಯು ನರಕಚತುರ್ದಶಿಯಂದು ಏಳುತ್ತಾಳೆ. ಶ್ರಿಹರಿ ಉತ್ಥಾನ ದ್ವಾದಶಿ ದಿನ ಏಳುತ್ತಾನೆ.
(ಪರಮಾತ್ಮ ಮತ್ತು ಲಕ್ಷ್ಮೀ ದೇವರು ಏಳುವುದು ಮತ್ತು ಮಲಗುವುದು ಎಂದರೆ ಯೋಗನಿದ್ರೆ ಅಷ್ಟೇ. ಅವರೂ ನಮ್ಮಂತೆ ಮಲಗುತ್ತಾರೆಂದು ಚಿಂತಿಸದಿರಿ)
ಆದ್ದರಿಂದ ಲಕ್ಷ್ಮೀ ದೇವಿಯನ್ನು ಆಶ್ವಯುಜ ಕೃಷ್ಣ ಅಮಾವಾಸ್ಯೆ ದಿನ ಪೂಜಿಸಬೇಕು.
ಲಕ್ಷ್ಮೀ ಸಮುತ್ಥಾನ ಪೂಜೆ
ಆಚಮನ, ಪ್ರಾಣಾಯಮ್ಯ, ಶುಭತಿಥೌ ಮಮ ಶ್ರೀ ಭಗವತೀ ಲಕ್ಷ್ಮೀ ದೇವತಾಂತರ್ಗತ ಶ್ರೀಹರಿಪ್ರೀತ್ಯರ್ಥಂ, ಅಸ್ಮಾಕಂ ಸಕುಟುಂಬಾನಾಂ ಕ್ಷೇಮ ಸ್ಥೈರ್ಯ ಆಯುರಾರೋಗ್ಯ ಐಶ್ವರ್ಯಾದ್ಯಭಿವೃದ್ಧ್ಯರ್ಥಂ ಸಮಸ್ತ ಸನ್ಮಂಗಳಾವಾಪ್ತ್ಯರ್ಥಂ ಪ್ರತಿವರ್ಷ ವಿಹಿತಂ ಯಥಾಶಕ್ತಿ, ಯಥಾಮಿಲಿತೋಪಹಾರದ್ರವ್ಯೈ: ಶ್ರೀ ಕುಬೇರ ಸಹಿತ ಶ್ರೀ ಲಕ್ಷ್ಮೀ ಪೂಜಾಖ್ಯಂ ಕರ್ಮ ಕರಿಷ್ಯೇ.
ಲಕ್ಷ್ಮೀ ಸನ್ನಿಧಾನಯುಕ್ತವಾದ ಶಂಖ ಮತ್ತು/ಅಥವಾ ಪ್ರತಿಮೆಯನ್ನು ಪೂಜಿಸಬೇಕು. ಬರೀ ಲಕ್ಷ್ಮೀ ಪೂಜೆ ಮಾಡಬಾರದು. ಲಕ್ಷ್ಮೀ ಸಮೇತ ಶ್ರೀ ಹರಿ ಇರುವನೆಂದು ಅನುಸಂಧಾನ ಮಾಡಿ ಪೂಜಿಸಿ. ಆದ್ದರಿಂದ ಸಾಲಿಗ್ರಾಮ ಅಥವಾ ದೇವರ ವಿಗ್ರಹ ಜೊತೆಗೆ ಇಟ್ಟು ಪೂಜೆ ಮಾಡಬೇಕು.
ಬಂಗಾರದ ಅಥವಾ ಬೆಳ್ಳಿಯ ನಾಣ್ಯಗಳು ಮತ್ತು ಹೊಸ ಆಭರಣಗಳು ಕೂಡ ಇಡಬಹುದು.
ಆದೌ ನಿರ್ವಿಘ್ನತಾಸಿದ್ಧ್ಯರ್ಥಂ ಗಣಪತಿಪೂಜಾಂ ಕರಿಷ್ಯೇ.
ಮೊದಲು ಗಣೇಶನನ್ನು ಪೂಜಿಸಿ,
ಕಲಶ ಪೂಜೆ
ಕಲಶಸ್ಯ ಮುಖೇ ವಿಷ್ಣು:
ಕಂಠೇ ರುದ್ರ ಸಮಾಶ್ರಿತ: !
ಮೂಲೇ ತತ್ರ ಸ್ಥಿತೋ ಬ್ರಹ್ಮಾ
ಮಧ್ಯೇ ಮಾತ್ರಗಣಾ: ಸ್ಮೃತಾ: !!
ಗಂಗೇ ಚ ಯಮುನೇ ಚೈವ ಗೋದಾವರಿ ಸನ್ನಿಧಿಗೆ ಕುರು !
ಕಲಶದೇವತಾಭ್ಯೋ ನಮ:
ಗಂಧ ಪುಷ್ಪಾಣಿ ಸಮರ್ಪಯಾಮಿ !!
ಕಲಶಕ್ಕೆ ಗಂಧ, ಪುಷ್ಪ, ತುಳಸಿ ಹಚ್ಚಬೇಕು.
ದೀಪವನ್ನು ಬೆಳಗಿಸಬೇಕು
ಲಕ್ಷ್ಮೀ ನಾರಾಯಣರ ಆವಾಹನೆ.
(ಇಲ್ಲಿ ಸಾಲಿಗ್ರಾಮಕ್ಕೆ ಆವಾಹನೆಯಿಲ್ಲ. ದೇವರ ವಿಗ್ರಹಕ್ಕೆ ಮಾತ್ರ).
ಓಂ ನಾರಾಯಣಾಯ ವಿದ್ಮಹೇ
ವಾಸುದೇವಾಯ ಧೀಮಹಿ !
ತನ್ನೋ ವಿಷ್ಣು: ಪ್ರಚೋದಯಾತ್!!
ಯಾ ಸಾ ಪದ್ಮಾಸನಸ್ಥಾ ವಿಪುಲಕಟಿತಟೀ ಪದ್ಮಪತ್ರಾಯತಾಕ್ಷಿ!
ಗಂಭೀರಾsವರ್ತನಾಭೀ ಸ್ತನಭರನಮಿತಾ ಶುಭ್ರವಸ್ತ್ರೋತ್ತರೀಯಾ !
ಲಕ್ಷ್ಮೀರ್ದಿವ್ಯೈ: ಗಜೇಂದ್ರ್ರೈ: ಮಣಿಗಣಖಚಿತೈ: ಸ್ನಾಪಿತಾ ಹೇಮಕುಂಭೈ:
ನಿತ್ಯಂ ಸಾ ಪದ್ಮಹಸ್ತಾ ಮಮ ವಸತು ಗೃಹೇ ಸರ್ವಮಾಂಗಲ್ಯಯುಕ್ತಾ!!
ಆಸನಂ 👇🏾
ತಪ್ತ ಕಾಂಚನವರ್ಣಾಭಂ ಮುಕ್ತಾಮಣಿ ವಿಭೂಷಿತಂ!
ಅಮಲಂ ಕಮಲಂ ದಿವ್ಯಮಾಸನ ಪ್ರತಿಗೃಹ್ಯತಾಂ!!
ಶ್ರೀ ಮಹಾಲಕ್ಷ್ಮೀ ನಾರಾಯಣಾಭ್ಯಾಂ ಆಸನಂ ಸಮರ್ಪಯಾಮಿ.!
(ಮಂತ್ರಾಕ್ಷತೆ)
ಪಾದ್ಯಂ ಸಮರ್ಪಯಾಮಿ ! (ನೀರು)
ಅರ್ಘ್ಯಂ ಸಮರ್ಪಯಾಮಿ! (ನೀರು)
ಆಚಮನಂ ಸಮರ್ಪಯಾಮಿ! (ನೀರು)
ಪಂಚಾಮೃತ ಸ್ನಾನಂ ಸಮರ್ಪಯಾಮಿ!
ಶುದ್ಧೋದಕ ಸ್ನಾನಂ ಸಮರ್ಪಯಾಮಿ!
(ನೀರು)
ವಸ್ತ್ರಯುಗ್ಮಂ ಸಮರ್ಪಯಾಮಿ !
(ಗೆಜ್ಜೆ ವಸ್ತ್ರ)
ಗಂಧಂ ಸಮರ್ಪಯಾಮಿ !
ಪುಷ್ಪಂ ಸಮರ್ಪಯಾಮಿ !
ಧೂಪಂ ಸಮರ್ಪಯಾಮಿ !
ದೀಪಂ ಸಮರ್ಪಯಾಮಿ !
ನೈವೇದ್ಯಕ್ಕೆ ಮಂಡಲ ಮಾಡಿ ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಅಥವಾ ಹಣ್ಢು, ಕಾಯಿ, ಹಾಲು, ಮೊಸರು, ನೀರು ಇಡಬಹುದು.
ನೈವೇದ್ಯಂ ಸಮರ್ಪಯಾಮಿ !
ವಸ್ತ್ರ ಸಮರ್ಪಯಾಮಿ - ನೂತನ ವಸ್ತ್ರ ಅಥವಾ ಮಂತ್ರಾಕ್ಷತೆ ಸಮರ್ಪಣಂ
ಭೂಷಣಾನಿ ಸಮರ್ಪಯಾಮಿ
ಹರಿದ್ರಾ ಕುಂಕುಮಂ ಸಮರ್ಪಯಾಮಿ !
ಸಿಂಧೂರಂ ಸಮರ್ಪಯಾಮಿ !
ನಾನಾ ವಿಧ ಸುಗಂಧಿತ ಪುಷ್ಪಾಣಿ ಸಮರ್ಪಯಾಮಿ !
ದೀಪಂ ದರ್ಶಯಾಮಿ!
ತಾಂಬೂಲಂ ಸಮರ್ಪಯಾಮಿ !
ಫಲಾನಿ ಸಮರ್ಪಯಾಮಿ !
ಮಂಗಲನೀರಾಜನಂ ಸಮರ್ಪಯಾಮಿ !
ಮಂತ್ರಪುಷ್ಪಾಂಜಲಿಂ ಸಮರ್ಪಯಾಮಿ !
ಓಂ ಮಹಾಲಕ್ಮೈಚ ವಿದ್ಮಹೇ
ವಿಷ್ಣುಪತ್ನೈಚ ಧೀಮಹಿ !
ತನ್ನೋ ಲಕ್ಷ್ಮೀ ಪ್ರಚೋದಯಾತ್!
ಶ್ರೀ ಮಹಾಲಕ್ಷ್ಮೈ ನಮಃ: !
ಛತ್ರ, ಛಾಮರ, ಗೀತಂ, ನೃತ್ಯಂ, ವಾದ್ಯಂ, ಸಮರ್ಪಯಾಮಿ !
ಕುಬೇರ ಪ್ರಾರ್ಥನೆ -
ಓಂ ಧನದಾಯ ನಮಸ್ತುಭ್ಯಂ
ನಿಧಿಪದ್ಮಾಧಿಪಾಯ ಚ !
ಭವಂತು ತ್ವತ್ಪ್ರಸಾದಾನ್ಮೇ
ಧನಧಾನ್ಯಾದಿಸಂಪದ: !!
(ಕುಬೇರನು ಧನಾಧಿಪನಾದ್ದರಿಂದ ಅವನನ್ನೂ ಪೂಜಿಸಬೇಕು)
ದೀಪ ಪೂಜೆ -
ದೀಪಾವಳಿ ಹಬ್ಬದ ದಿನ ದೀಪದೇವತೆಯನ್ನೂ ಪೂಜಿಸಿ ದೀಪ ಹಚ್ಚಬೇಕು.
ಭೋ ದೀಪ ಬ್ರಹ್ಮರೂಪಸ್ತ್ವಂ ಅಂಧಕಾರನಿವಾರಕ !
ಇಮಾಂ ಮಾಯಾ ಕೃತಾ ಗೃಹ್ಣನ್
ತೇಜ: ಮಯಿ ಪ್ರವರ್ತಯ !!
ದೀಪಾವಲೀಂ ಮಾಯಾ ದತ್ತಾಂ
ಗೃಹಾಣ ಪರಮೇಶ್ವರ !
ಆರಾರ್ತಿಕ್ಯ ಪ್ರದಾನೇನ ಜ್ಞಾನ ದೃಷ್ಟಿಪ್ಕದೋ ಭವ !
ಅಗ್ನಿಜ್ಯೋತಿ ರವಿ: ಜ್ಯೋತಿಶ್ಚಂದ್ರಜ್ಯೋತಿಸ್ತಥೈವ ಚ !
ಉತ್ತಮ: ಸರ್ವತೇಜಸ್ಸು
ದೀಪೋSಯಂ ಪ್ರತಿಗೃಹ್ಯತಾಂ !
ದೀಪಂ ಸಮರ್ಪಯಾಮಿ !
ದೀಪದಾನವನ್ನು ಕೊಡುವವರು ಸಂಕಲ್ಪ ಮಾಡಿ ಕೊಡಿ.
ಯಸ್ಯ ಸ್ಮೃತಾಚ....... ತದಸ್ತು ಮೇ !
ಅನೇನ ಆಶ್ವಯುಜ ಅಮಾವಾಸ್ಯೆ ನಿಮಿತ್ತ ಕೃತಾ ಶ್ರೀ ಲಕ್ಷ್ಮೀ ನಾರಾಯಣ ಕುಬೇರ ಪೂಜನೇನ ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನಾರಾಯಣ ಪ್ರೀಯತಾಂ !
ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪ ದೋಷ ಪರಿಹಾರಾರ್ಥಂ ನಾಮತ್ರಯ ಮಂತ್ರಜಪಂ ಕರಿಷ್ಯೇ!
ಅಚ್ಯುತಾಯ ನಮಃ:
ಅನಂತಾಯ ನಮಃ:
ಗೋವಿಂದಾಯ ನಮ:!
ಅಚ್ಯುತಾನಂತಗೋವಿಂದೇಭ್ಯೋ ನಮಃ: !
ಶ್ರೀಕೃಷ್ಣಾರ್ಪಣಮಸ್ತು
***
No comments:
Post a Comment