SEARCH HERE

Friday 1 October 2021

ಹುರುಳಿಕಾಳು ಕಿಡ್ನಿ ಕಲ್ಲು ಕಫ ಕೆಮ್ಮು ಸಮಸ್ಯೆಗೆ kidney stone remover

 ಕಿಡ್ನಿ ಕಲ್ಲು, ಕಫ, ಕೆಮ್ಮು ಮುಂತಾದ ಸಮಸ್ಯೆಗಳಿಗೆ ಹುರುಳಿಕಾಳಿನಲ್ಲಿ ಅಡಗಿದೆ ಪರಿಹಾರ ಯಾವ ರೀತಿ ಬಳಸಬೇಕು ಗೊತ್ತಾ..!

ನಮ್ಮ ಮನೆಯಲ್ಲೇ ಇರುವ ಹುರುಳಿಕಾಳಿನಲ್ಲಿ ಹಲವಾರು ರೋಗಗಳಿಗೆ ಪರಿಹಾರವಿದೆ ಆದರೆ ಇದು ನಮಗೆ ಗೊತ್ತಿರುವುದಿಲ್ಲ ಆದರೆ ಮುಂದೆ ಓದಿ ನೀವು ತಪ್ಪದೆ ಹುರುಳಿಕಾಳನ್ನು ಬಳಕೆ ಮಾಡುತ್ತೀರಾ.

ನಿಮಗೆ ಕಿಡ್ನಿಯಲ್ಲಿ ಕಲ್ಲು ಇರುವ ಸಮಸ್ಯೆ ಇದ್ದರೆ ನೀವು ತಪ್ಪದೆ ಪ್ರತಿ ನಿತ್ಯ ನೆನೆಸಿ ಬೇಯಿಸಿದ ಹುರುಳಿಕಾಳನ್ನು ಸೇವಿಸಿದರೆ ಕಲ್ಲುಗಳು ಬೇಗ ನಿವಾರಣೆಯಾಗುತ್ತವೆ ಮತ್ತು ನೆನೆಸಿದ ಹುರುಳಿಕಾಳನ್ನು ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಗೆ ಸೇವಿಸಿದರೆ ದೇಹದ ಕೊಬ್ಬಿನಂಶ ಕಡಿಮೆಯಾಗುತ್ತದೆ.

ಬಿಕ್ಕಳಿಕೆ ಹೆಚ್ಚಿದ್ದರೆ ಹುರುಳಿಕಾಳನ್ನು ಸುಡುವಾಗ ಬರುವ ಹೊಗೆಯನ್ನು ಬಾಯಿಂದ ತೆಗೆದು ಕೊಂಡರೆ ಬಿಕ್ಕಳಿಕೆ ಬೇಗ ನಿಲ್ಲುತ್ತದೆ.

ಕಫ ಹೆಚ್ಚಾಗಿ ಮೂಗು ಕಟ್ಟುವ ಸಮಯೇ ಮತ್ತು ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್‌ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ.

ಹುರುಳಿಕಾಳನ್ನು ರಾತ್ರಿ ನೀರಲಿ ನೆನೆಸಿ ಬೆಳಗ್ಗೆ ಚೆನ್ನಾಗಿ ಬೇಯಿಸಿ ಅದಕ್ಕೆ ಸೈಂಧವ ಉಪ್ಪು, ಕರಿಮೆಣಸಿನ ಪುಡಿ, ಜೀರಿಗೆ ಸೇರಿಸಿ ತಿಂಡಿ ಸಮಯಕ್ಕೆ ಸೇವಿಸಿದರೆ ದೇಹದ ತೂಕ ಮತ್ತು ಬೊಜ್ಜು ಕರಗುತ್ತದೆ.ಹುರುಳಿಕಾಳನ್ನು ನೆನೆಸಿ ಪೇಸ್ಟ್‌ ಮಾಡಿ ನೋವು ಮತ್ತು ಊತ ಇರುವ ಸಂಧಿಗಳಿಗೆ ಲೇಪ ಮಾಡಿದರೆ ನೋವು ಮತ್ತು ಊತ ಬೇಗ ಕಡಿಮೆಯಾಗುತ್ತವೆ. ರಾತ್ರಿ ನೀರಿನಲ್ಲಿ ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ.

***

ಆಧುನಿಕ ಜೀವನ ಶೈಲಿ ಹಾಗೂ ಪ್ರತಿನಿತ್ಯ ಸೇವಿಸುವ ಆಹಾರದಿಂದಾಗಿ ಯುವ ಜನಾಂಗದವರಲ್ಲೂ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಕಿಡ್ನಿ ಸ್ಟೋನ್ ಎಂದರೆ ಯಾವಾಗ ಮೂತ್ರದಲ್ಲಿ ಅಧಿಕವಾಗಿ ಲವಣಾಂಶಗಳು ಶೇಖರಣೆ ಆಗುತ್ತದೆಯೋ ಅದು ಸ್ಫಟಿಕ ರೂಪಕ್ಕೆ ಮಾರ್ಪಟ್ಟು ಘನ ವಸ್ತುವಾಗಿ ರೂಪಗೊಳ್ಳುವುದಾಗಿದೆ.

ಮೂತ್ರದಲ್ಲಿನ ಅಂಶಗಳಿಂದ ರೂಪುಗೊಳ್ಳುವ ಈ ಕಲ್ಲು ಒಂದು ಮರಳಿನ ಕಣದಿಂದ ಹರಳುಗಳ ಗಾತ್ರದವರೆಗೂ ಬೆಳೆಯುತ್ತವೆ. ಈ ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ನಿರ್ಬಂಧಿಸಿದರೆ ಆಗ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ವೈದ್ಯರ ಸಲಹೆ ಜೊತೆಗೆ ಕೆಲವು ಮನೆ ಮದ್ದನ್ನು ಅನುಸರಿಸಿ.

1.ತುಳಸಿ: ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕಗಳ ಗುಣಗಳು ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಹೊರಹಾಕಲು ನೆರವಾಗುತ್ತದೆ. ಅಷ್ಟೇ ಅಲ್ಲದೇ ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು, ಈ ಆಮ್ಲದಿಂದಾಗಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ.

2.ಕಲ್ಲಂಗಡಿ ಬೀಜ: ನಿಮ್ಮ ಕಿಡ್ನಿ ಸ್ಟೋನ್ ಅನ್ನು ಹೊರಹಾಕಲು ಕಲ್ಲಂಗಡಿ ಮತ್ತು ಅದರ ಬೀಜ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ಲೀಟರ್‍ನಷ್ಟು ನೀರನ್ನು ಕುದಿಸಿಕೊಳ್ಳಿ ಹಾಗೂ ಬೀಜವನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ಈ ನೀರಿಗೆ ಮಿಶ್ರ ಮಾಡಿ. ಅರ್ಧ ಗಂಟೆಗಳ ಕಾಲ ಈ ನೀರನ್ನು ಕುದಿಸಿ ನಂತರ ತಣಿಸಿ ಕುಡಿಯುವರಿಂದ ಕಿಡ್ನಿ ಸ್ಟೋನ್ ನಿವಾರಣೆಯಾಗಿ ನೋವಿನಿಂದಲೂ ಮುಕ್ತಿ ಪಡೆಯುತ್ತಿರಿ.

3.ಬಾಳೆ ದಿಂಡು ಜ್ಯೂಸ್: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ನಿತ್ಯವೂ ಬಾಳೆ ದಿಂಡು ಜ್ಯೂಸ್ ಅನ್ನು ಕುಡಿಯಿರಿ. ಹಾಗೂ ಇದರ ಜೊತೆಗೆ ದೇಹಕ್ಕೆ ನಿಯಮಿತಕ್ಕಿಂತಲೂ ಅಧಿಕವಾಗಿ ನೀರನ್ನು ಕುಡಿಯಿರಿ. ಇದರಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 

4.ಆ್ಯಪಲ್ ಸಿಡರ್ ವಿನೆಗರ್: ಒಂದು ಅಥವಾ ಎರಡು ಟೇಬಲ್ ಸ್ಪೂನ್‍ಗಳಷ್ಟು ಆ್ಯಪಲ್ ಸಿಡರ್ ವಿನೆಗರ್‍ಗೆ ಒಂದಿಷ್ಟು ನೀರನ್ನು ಬೆರೆಸಿ ಅದನ್ನು ಪ್ರತಿನಿತ್ಯ ಕುಡಿಯಿರಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಆಗಿರುವ ಕಲ್ಲನ್ನು ಕರಗಿಸಲು ಸಹಾಯವಾಗುತ್ತದೆ.

***

ಕಿಡ್ನಿ ಕಲ್ಲು, ಕಫ, ಕೆಮ್ಮು ಮುಂತಾದ ಸಮಸ್ಯೆಗಳಿಗೆ ಹುರುಳಿಕಾಳಿನಲ್ಲಿ ಅಡಗಿದೆ ಪರಿಹಾರ ಯಾವ ರೀತಿ ಬಳಸಬೇಕು ಗೊತ್ತಾ..!

ನಮ್ಮ ಮನೆಯಲ್ಲೇ ಇರುವ ಹುರುಳಿಕಾಳಿನಲ್ಲಿ ಹಲವಾರು ರೋಗಗಳಿಗೆ ಪರಿಹಾರವಿದೆ ಆದರೆ ಇದು ನಮಗೆ ಗೊತ್ತಿರುವುದಿಲ್ಲ ಆದರೆ ಮುಂದೆ ಓದಿ ನೀವು ತಪ್ಪದೆ ಹುರುಳಿಕಾಳನ್ನು ಬಳಕೆ ಮಾಡುತ್ತೀರಾ.

ನಿಮಗೆ ಕಿಡ್ನಿಯಲ್ಲಿ ಕಲ್ಲು ಇರುವ ಸಮಸ್ಯೆ ಇದ್ದರೆ ನೀವು ತಪ್ಪದೆ ಪ್ರತಿ ನಿತ್ಯ ನೆನೆಸಿ ಬೇಯಿಸಿದ ಹುರುಳಿಕಾಳನ್ನು ಸೇವಿಸಿದರೆ ಕಲ್ಲುಗಳು ಬೇಗ ನಿವಾರಣೆಯಾಗುತ್ತವೆ ಮತ್ತು ನೆನೆಸಿದ ಹುರುಳಿಕಾಳನ್ನು ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಗೆ ಸೇವಿಸಿದರೆ ದೇಹದ ಕೊಬ್ಬಿನಂಶ ಕಡಿಮೆಯಾಗುತ್ತದೆ.

ಬಿಕ್ಕಳಿಕೆ ಹೆಚ್ಚಿದ್ದರೆ ಹುರುಳಿಕಾಳನ್ನು ಸುಡುವಾಗ ಬರುವ ಹೊಗೆಯನ್ನು ಬಾಯಿಂದ ತೆಗೆದು ಕೊಂಡರೆ ಬಿಕ್ಕಳಿಕೆ ಬೇಗ ನಿಲ್ಲುತ್ತದೆ.

ಕಫ ಹೆಚ್ಚಾಗಿ ಮೂಗು ಕಟ್ಟುವ ಸಮಯೇ ಮತ್ತು ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್‌ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ.

ಹುರುಳಿಕಾಳನ್ನು ರಾತ್ರಿ ನೀರಲಿ ನೆನೆಸಿ ಬೆಳಗ್ಗೆ ಚೆನ್ನಾಗಿ ಬೇಯಿಸಿ ಅದಕ್ಕೆ ಸೈಂಧವ ಉಪ್ಪು, ಕರಿಮೆಣಸಿನ ಪುಡಿ, ಜೀರಿಗೆ ಸೇರಿಸಿ ತಿಂಡಿ ಸಮಯಕ್ಕೆ ಸೇವಿಸಿದರೆ ದೇಹದ ತೂಕ ಮತ್ತು ಬೊಜ್ಜು ಕರಗುತ್ತದೆ.ಹುರುಳಿಕಾಳನ್ನು ನೆನೆಸಿ ಪೇಸ್ಟ್‌ ಮಾಡಿ ನೋವು ಮತ್ತು ಊತ ಇರುವ ಸಂಧಿಗಳಿಗೆ ಲೇಪ ಮಾಡಿದರೆ ನೋವು ಮತ್ತು ಊತ ಬೇಗ ಕಡಿಮೆಯಾಗುತ್ತವೆ. ರಾತ್ರಿ ನೀರಿನಲ್ಲಿ ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ.

***

ಮೂತ್ರಪಿಂಡವು ನಮ್ಮ ದೇಹದ ಅವಿಭಾಜ್ಯ ಅಂಗವಾಗಿದೆ, ಇದು ದೇಹದಲ್ಲಿ ಇರುವ ಕೊಳೆಯನ್ನು ಸ್ವಚ್ಛಗೊಳಿಸಲು ನಮಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ರಕ್ತದಲ್ಲಿರುವ ಕೊಳೆಯನ್ನೂ ಸಹ ಸ್ವಚ್ಛಗೊಳಿಸಲು ಇದು ಸಹಕರಿಸುತ್ತದೆ. ಹೀಗಿರುವಾಗ, ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಹಲವಾರು ಸಮಸ್ಯೆಗಳ ಅಪಾಯ ಎದುರಾಗುತ್ತದೆ. ಆದ್ದರಿಂದ ಕಿಡ್ನಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಕಿಡ್ನಿ ಆರೋಗ್ಯವಾಗಿರಲು ನೀವು ಬಯಸುತ್ತಿದ್ದರೆ, ನಿಂಬೆಯನ್ನು ಸೇವಿಸಿ. ನಿಂಬೆಹಣ್ಣಿನ ಸೇವನೆಯಿಂದ ಕಿಡ್ನಿಯಲ್ಲಿರುವ ಕೊಳೆ ಶುದ್ಧವಾಗುತ್ತದೆ. ಮೂತ್ರಪಿಂಡವನ್ನು ಆರೋಗ್ಯವಾಗಿಡಲು ನಿಂಬೆಯನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
1.ಪುದೀನಾ-ನಿಂಬೆ ಪಾನಕ
ಪುದೀನ ಮತ್ತು ನಿಂಬೆಯಿಂದ ತಯಾರಿಸಿದ ಪಾನೀಯಗಳನ್ನು ಸೇವಿಸುವುದರಿಂದ ನೀವು ಕಿಡ್ನಿಯನ್ನು ಆರೋಗ್ಯವಾಗಿಡಬಹುದು. ಈ ಪಾನೀಯವನ್ನು ತಯಾರಿಸಲು, ಒಂದು ಲೋಟ ನೀರು ತೆಗೆದುಕೊಳ್ಳಿ. ನಿಂಬೆ ರಸ, ಸ್ವಲ್ಪ ಪುದೀನ ಎಲೆಗಳು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪಾನೀಯವನ್ನು ಸೇವಿಸುವುದರಿಂದ ನಿಮ್ಮ ಮೂತ್ರಪಿಂಡವು ಆರೋಗ್ಯಕರವಾಗಿರುತ್ತದೆ.
2.ಮಸಾಲಾ ಲೆಮನ್ ಸೋಡಾ
ನೀವು ಸ್ವಲ್ಪ ಮಸಾಲೆ ತಿನ್ನಲು ಇಷ್ಟಪಡುತ್ತಿದ್ದರೆ, ಮಸಾಲಾ ನಿಂಬೆ ಸೋಡಾ ಪಾನೀಯವನ್ನು ಸೇವಿಸಿ. ಇದರಿಂದ ನಿಮ್ಮ ಕಿಡ್ನಿ ಆರೋಗ್ಯಕರವಾಗಿರುತ್ತದೆ. ಈ ಪಾನೀಯವನ್ನು ತಯಾರಿಸಲು, ಒಂದು ಗ್ಲಾಸ್ ತೆಗೆದುಕೊಳ್ಳಿ ಮತ್ತು ಅದರಲ್ಲಿ ನಿಂಬೆ ರಸ, ಜೀರಿಗೆ-ಕೊತ್ತಂಬರಿ ಪುಡಿ, ಚಾಟ್ ಮಸಾಲ ಮತ್ತು ಸೋಡಾ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಸಿದ್ಧಪಡಿಸಿದ ಪಾನೀಯವನ್ನು ಕುಡಿಯಿರಿ. ಇದರಿಂದ ಕಿಡ್ನಿಯನ್ನು ಆರೋಗ್ಯವಾಗಿರುತ್ತದೆ.
3.ತೆಂಗಿನಕಾಯಿ ಪಾನಕ
ತೆಂಗಿನಕಾಯಿ ಪಾನಕ ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಪಾನೀಯವನ್ನು ತಯಾರಿಸಲು, ಒಂದು ಲೋಟದಲ್ಲಿ ತೆಂಗಿನ ನೀರನ್ನು ತೆಗೆದುಕೊಳ್ಳಿ. ಈ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.
***

No comments:

Post a Comment