SEARCH HERE

Friday 1 October 2021

ಪವಿತ್ರಾರೋಪಣ ವಿಧಿ pavitraropana vidhi shravana shukla dwadashi

 ಪವಿತ್ರಾರೋಪಣ ವಿಧಿ  :


ಏಕೆ ಮಾಡಬೇಕು? - ಪರಮಾತ್ಮನ ಪೂಜೆ ಎಲ್ಲರೂ ನಿತ್ಯ ಮಾಡಲೇಬೇಕು.  ಆದರೆ ಕೆಲವು ಅನಿವಾರ್ಯ ನಿಮಿತ್ತ ಕೆಲವೊಮ್ಮೆ ಪೂಜೆ ತಪ್ಪಬಹುದು.  ಅದರ ನಿಮಿತ್ತ ಮಾಡಬೇಕು.  ಮತ್ತು ಪವಿತ್ರಾರೋಪಣ ಮಾಡುವುದರಿಂದ ಒಂದು ವರ್ಷದ ಪೂಜಾ ಫಲ ಪ್ರಾಪ್ತವಾಗುತ್ತದೆ.   


ಎಂದು ಮಾಡಬೇಕು? - ಶ್ರಾವಣ ಶುಕ್ಲ ಪಕ್ಷದ ದ್ವಾದಶಿಯಂದು.


ಯಾರು ಮಾಡಬೇಕು ? -- ಎಲ್ಲಾ ಪುರುಷರೂ ಅಥವಾ ಕನಿಷ್ಟ ಮನೆಯ ಹಿರಿಯರು


ಯಾರಿಗೆ ಪವಿತ್ರಾರೋಪಣ ಮಾಡಬೇಕು - ವಿಷ್ಣುವಿಗೆ


ಶ್ರಾವಣ ಶುಕ್ಲ ಏಕಾದಶಿಯಂದು ರೇಷ್ಮೆ ದಾರದಿಂದ 108 ಎಳೆ  36 ಗ್ರಂಥಿಗಳುಳ್ಳ ಪವಿತ್ರವನ್ನು ರಚಿಸಿ ಅದನ್ನು ಶ್ರಾವಣ ಶುಕ್ಲ ದ್ವಾದಶಿಯಂದು ದೇವರಿಗೆ ಸಮರ್ಪಿಸಿ ನಾವು ಧರಿಸಬೇಕು.  


ಏಕಾದಶೀ ದಿವಸ ಅಧಿವಾಸ ಮಾಡಬೇಕು. ಈ ಕೆಳಗಿನ ರೀತಿ.

👇🏿

ಸಂಕಲ್ಪ - ಆಚಮನ, ಪ್ರಾಣಾಯಾಮ, ದೇಶಕಾಲವನ್ನು ಸ್ಮರಿಸಿ,  ಶ್ರೀ ವಿಷ್ಣು ಪ್ರೇರಣಯಾ, ಶ್ರೀ ವಿಷ್ಣು ಪ್ರೀತ್ಯರ್ಥಂ ಅಧಿವಾಸನವಿಧಿ ಪೂರ್ವಕ ಪವಿತ್ರಾರೋಪಣಂ ಕರಿಷ್ಯೇ.  


 ಪವಿತ್ರವನ್ನ ಪಂಚಗವ್ಯದಿಂದ ಪ್ರೋಕ್ಷಿಸಿ, 

"ಓಂ ನಮೋ ನಾರಾಯಣಾಯ" ಎಂಬ ಮಂತ್ರದಿಂದ 108 ಬಾರಿ ಪಠಿಸಿ, ಹರಿದ್ರಾ ಕುಂಕುಮದಿಂದ ಅರ್ಚಿಸಿ,  ಮಂಡಲವನ್ನು ಮಾಡಿರುವ ಸ್ಥಳದಲ್ಲಿ, ಬಿದಿರಿನ ಬುಟ್ಟಿಯಲ್ಲಿ ಇರಿಸಿ, ವಾಸುದೇವಾದಿ ಪಂಚ, ಕ್ರುದ್ಧೋಲ್ಕಾದಿ ಪಂಚ, ವಿಶ್ವಾದಿ ಅಷ್ಟ, ಕೇಶವಾದಿ ಚತುರ್ವಿಂಶತಿ, ವೇದವ್ಯಾಸಾದಿ ಅಷ್ಟಮೂರ್ತಿಗಳು,  ರಮಾ ರೂಪಗಳನ್ನೂ ಆ ದಾರದಲ್ಲಿ ಪ್ರಾಣಪ್ರತಿಷ್ಟೆ ಮಾಡಬೇಕು.


ಪ್ರಾಣಪ್ರತಿಷ್ಠೆ :


ಓಂ ಅಸುನೀತೇ ಪುನರಸ್ಮಾಸು ಚಕ್ಷು: ಪುನ: ಪ್ರಾಣಮಿಹನೋಧೇಹಿ ಭೋಗಂ |

ಜ್ಯೋಕ್ ಪಶ್ಯೇಮ ಸೂರ್ಯಮುಚ್ಚರಂತ ಮನುಮತೇ ಮೃಳಯಾ ನ: ಸ್ವಸ್ತಿ |

ಇತಿ ಪ್ರಾಣಪ್ರತಿಷ್ಠಾಪನಂ ಕೃತ್ವಾ ಓಮ್ ನಮೋ ನಾರಾಯಣಾಯ ಓಂ |



"ಶ್ರೀ ಪವಿತ್ರಾದ್ಯಾವಾಹಿತ ದೇವತಾಭ್ಯೋ ನಮ:" ಎಂದು ಹೇಳಿ ಗಂಧಾದಿಗಳಿಂದ ಪೂಜಿಸಬೇಕು.  ನಂತರ "ವಿಷ್ಣು ತೇಜೋದ್ಭವಂ ರಮ್ಯಂ ಸರ್ವಪಾತಕನಾಶನಂ | ಸರ್ವಕಾಮಪ್ರದಂ ದೇವ ತವಾಂಗೇ ಧಾರಯಾಮ್ಯಹಂ | ಎಂದು ಹೇಳಿ ದೇವರ ಪಾದಕಮಲದಲ್ಲಿ ಸಮರ್ಪಿಸಬೇಕು.


ಪಂಚೋಪಚಾರದಿಂದ ಪೂಜಿಸಬೇಕು. - ಗಂಧ, ತುಳಸಿಪುಷ್ಪಾರ್ಚನೆ, ಧೂಪ, ದೀಪ ಮತ್ತು ನೈವೇದ್ಯ.


ಆಮಂತ್ರಿತೋಸಿ ದೇವೇಶ ಪುರಾಣಪುರುಷೋತ್ತಮ !

ಪ್ರಾತಸ್ತ್ವಾಂ ಪೂಜಯಿಷ್ಯಾಮಿ

ಸಾನ್ನಿಧ್ಯಂ ಕುರು ಕೇಶವ !

ನಿವೇದಯಾಮ್ಯಹಂ ತುಭ್ಯಂ

ಪ್ರಾತರೇತ್ಪವಿತ್ರಕಂ!

ಸರ್ವದಾ ಸರ್ವಥೋ ವಿಷ್ಣೋ 

ನಮಸ್ತೇsಸ್ತು ಪ್ರಸೀದ ಮೇ ||


ದ್ವಾದಶಿ ದಿನ :


ಅಥ ಪವಿತ್ರಾರೋಪಣ ವಿಧಿ:

ಶ್ರೀ ಗುರುಭ್ಯೋ ನಮ:

ಆಚಮನ, ಪ್ರಾಣಾಯಾಮ, ಶ್ರೀ ವಿಷ್ಣು ಪ್ರೇರಣಯಾ ಶ್ರೀ ವಿಷ್ಣು ಪ್ರೀತ್ಯರ್ಥಂ 

ಸಂವತ್ಸರ ಪೂಜಾಸಾದ್ಗುಣ್ಯ ಸಿದ್ದ್ಯರ್ಥಂ ಪೂರ್ವೋಕ್ತ ದೇವತಾ ಸನ್ನಿಹಿತ ಪವಿತ್ರ ಸಮರ್ಪಣಾದ್ವಾರಾ ಪವಿತ್ರಾರೋಪಣಂ ಕರಿಷ್ಯೇ |


ದೇವತಾ ಆವಾಹನಾ :

ನಾರಾಯಣಂ ಆವಾಹಯಾಮಿ 

ವಾಸುದೇವಂ ಆವಾಹಯಾಮಿ

ವಿಷ್ಣುಂ ಆವಾಹಯಾಮಿ 

ಕೇಶವಂ, ......... ಕೃಷ್ಣಂ ಆವಾಹಯಾಮಿ


ವಿಶ್ವಂ ಆವಾಹಯಾಮಿ

ತೈಜಸಂ ಆವಾಹಯಾಮಿ

ಪ್ರಾಜ್ಞಂ ಆವಾಹಯಾಮಿ

ತುರ್ಯಂ ಆವಾಹಯಾಮಿ

ಆತ್ಮಾನಂ ಆವಾಹಯಾಮಿ

ಅಂತರಾತ್ಮಾನಂ ಆವಾಹಯಾಮಿ

ಪರಮಾತ್ಮನಂ ಆವಾಹಯಾಮಿ

ಜ್ಞಾನಾತ್ಮನಂ ಆವಾಹಯಾಮಿ

ವಾಸುದೇವಂ ಆವಾಹಯಾಮಿ

ಸಂಕರ್ಷಣಂ ಆವಾಹಯಾಮಿ

ಪ್ರದ್ಯುಮ್ನಂ ಆವಾಹಯಾಮಿ

ಅನಿರುದ್ಧಂ ಆವಾಹಯಾಮಿ


ಮತ್ಸ್ಯಂ,...... ಕಲ್ಕಿಂ ಆವಾಹಯಾಮಿ


ಅನಂತಂ ಆವಾಹಯಾಮಿ

ವಿಶ್ವರೂಪಂ ಆವಾಹಯಾಮಿ

ಅಗ್ನಿಗಂ ಆವಾಹಯಾಮಿ

ವಾಯುಗಂ ಆವಾಹಯಾಮಿ

ಸೂರ್ಯಗಂ ಆವಾಹಯಾಮಿ


ಪೂಜಾ ನಂತರ ಪವಿತ್ರವನ್ನು ಶ್ರೀಹರಿಗೆ, ಲಕ್ಷ್ಮೀ ದೇವಿಗೆ, ವಾಯುದೇವರಿಗೆ, ಗುರುಗಳಿಗೆ ತಾರತಮ್ಯಾನುಸಾರ ಸಮರ್ಪಿಸಿ, ದಕ್ಷಿಣೆ ಸಹಿತ ಬ್ರಾಹ್ಮಣರಿಗೂ ಪವಿತ್ರ ನೀಡಿ, ತಾನೂ ಧರಿಸಬೇಕು


ಪವಿತ್ರ ಧಾರಣೆ ಮಂತ್ರ : 

ಪವಿತ್ರಂ ವೈಷ್ಣವಂ ತೇಜ: ಸರ್ವವಿಘ್ನನಿವಾರಣಂ 

ಪೂಜಾಶಾಡ್ಗುಣ್ಯ ಸಿದ್ಧ್ಯರ್ಥಂ 

ಮಮಾಂಗೇ ಧಾರಯಾಮ್ಯಹಂ !

Source : Sri Bemmatti Venkateshacharya's book on Shravana maasa. collection by narahari sumadhva

***


No comments:

Post a Comment