ಮೂಲವ್ಯಾಧಿ
ಮೂಲವ್ಯಾಧಿ ಗೆ ಮುಖ್ಯ ಕಾರಣವೆಂದರೆ ಮಲಬದ್ದತೆ,ಮೇಲೆ ವಿಸರ್ಜನೆ ಸರಿಯಾಗಿ ಸರಾಗವಾಗಿ ಆಗುತ್ತಿದ್ದರೆ ಈ ಸಮಸ್ಯೆ ಉಂಟಾಗುವುದಿಲ್ಲ.ಮಲ ಗಟ್ಟಿಯಾಗಿ ಹೋಗಲು ತೊಂದರೆ ಉಂಟಾದಾಗ ಗುದದ್ವಾರದಲ್ಲಿ ಮೊಳೆಯಂತಹ ದುರ್ಮಾಂಸ ಬೆಳೆದು ಅತೀವ ತೊಂದರೆ ಉಂಟುಮಾಡುತ್ತದೆ.
ಇದಕ್ಕೆ ಆಯುರ್ವೇದದ ದ ತಜ್ಞರು ಕೆಲವು ಸಲಹೆಯನ್ನು ನೀಡಿದ್ದಾರೆ.
1) 3-4 ಚಮಚದಷ್ಟು ಇಸಬ್ಗೊಲ್ ಬೀಜಗಳನ್ನು ಕುಟ್ಟಿ ರಾತ್ರಿ ಊಟದ ಮುಂಚೆ ನೀರಿನಲ್ಲಿ ಕಲೆಸಿ ಕುಡಿಯುವುದು.
2)15ಗ್ರಾಂ ಎಳ್ಳು,8ಗ್ರಾಂ ಕಲ್ಲು ಸಕ್ಕರೆಯೊಂದಿಗೆ ಅರೆದು ಸೇವಿಸಿ ,ನಂತರ ಆಡಿನ ಹಾಲನ್ನು ಕುಡಿಯುವುದರಿಂದ ಮೂಲವ್ಯಾಧಿ ಇರುವವರಿಗೆ ರಕ್ತಬೀಳುವುದು ಕೂಡಲೆ ಕಡಿಮೆಯಾಗುತ್ತದೆ.
3)ಮೇಕೆ ಹಾಲನ್ನು ನಿತ್ಯ ವೂ ಬಳಸಿದರೆ ಮಲಬದ್ದತೆ, ಮೂಲವ್ಯಾಧಿ ಕಡಿಮೆಯಾಗುತ್ತದೆ.
4) ಎಲೆ ಕೋಸಿನ ಎಳೆಯ ಎಲೆಗಳನ್ನು ನಿತ್ಯವೂ ಕ್ರಮವಾಗಿ ಸೇವಿಸುತ್ತಿದ್ದರೆ ಮಲಬದ್ದತೆ,ಅಥವಾ ಮೂಲವ್ಯಾಧಿ ಗುಣವಾಗುವುದು.
5) ಮೊಸರಿಗೆ ಅನ್ನ,ಮತ್ತು ಬೆಲ್ಲ ಸೇರಿಸಿ ಉಂಟುಮಾಡಿದ್ದಾರೆ ಮೂಲವ್ಯಾಧಿ ಕಮ್ಮಿಯಾಗುತ್ತದೆ.
6) ಕರಿಬೇವಿನ ಎಳೆ ಎಲೆಗಳನ್ನು ಜೇನುತುಪ್ಪ ದೊಂದಿಗೆ ತಿನ್ನುವುದರಿಂದ ಮೂಲವ್ಯಾಧಿ ಗುಣವಾಗುವುದು.
7) ದಿನವೂ ರಾತ್ರಿ ಮಲಗುವ ಮುಂಚೆ ಏಲಕ್ಕಿಯನ್ನು ಬಾಳೆಹಣ್ಣು ನೊಂದಿಗೆ ಸೇವಿಸಿದರೆ ಮೂಲವ್ಯಾಧಿ ಗುಣವಾಗುವುದು.
8) ಬೇರುಸಹಿತ ಗರಿಕೆ ಹುಲ್ಲನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.ಅದನ್ನು ಹಿಂದಿನ ರಾತ್ರಿ ತಣ್ಣೀರಿನಲ್ಲಿ ನೆನೆಹಾಕಿ.ಬೆಳಗ್ಗೆ ಅದನ್ನು ಕಿವಿಚಿ ಶೋಧಿಸಿ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗುವುದು.
9) ಬಸಳೆ ಸೊಪ್ಪನ್ನು ಪೂರ್ತಿಯಾಗಿ ದಿನವು ಸೇವಿಸಿದರೆ ಮೂಲವ್ಯಾಧಿ ಗುಣವಾಗುವುದು.
10) ನಾಚಿಕೆಮುಳ್ಳಿನ ಗಿಡದ ಎಲೆ,ಬಳ್ಳಿ,ಮತ್ತು ಬೇರು ಇವನೆಲ್ಲ ನೀರಿನಲ್ಲಿ ಹಾಕಿ ಬೇಯಿಸಿ ಕಷಾಯ ಮಾಡಿ ಒಂದು ವಾರ ಕುಡಿದರೆ ಕಮ್ಮಿಯಾಗುತ್ತದೆ..
11) ಬಾಳೆದಿಂಡಿನ ರಸಕ್ಕೆ ಎಳನೀರು ಸೇರಿಸಿ ಕುಡಿಯುತ್ತಿದ್ದರೆ ಮೂಲವ್ಯಾಧಿ ಗುಣವಾಗುವುದು
12) ಈರುಳ್ಳಿ ರಸಕ್ಕೆ ಸಕ್ಕರೆ ಯನ್ನುಸೇರಿಸಿ ಬೆಳಗಿನ ಹೊತ್ತು ಸೇವಿಸಿದರೆ ಮೂಲವ್ಯಾಧಿ ಗುಣವಾಗುವುದು.
13) ಮೊಸರಿನಲ್ಲಿ ನೆಲ್ಲಿಚೆಟ್ಟಿನ ಚೂರ್ಣ ನನ್ನು ಹಾಕಿ ಕಲಸಿ ಸೇವಿಸಿದರೆ ರಕ್ತ ಮೂಲವ್ಯಾಧಿ ಗುಣವಾಗುವುದು
14) ಲೋಳೆಸರದ ತಿರುಳನ್ನು ಅರೆದು ಅದಕ್ಕೆ ಶುದ್ಧ ಅರಿಶಿನ ಪುಡಿ ತಿನ್ನು ಸೇರಿಸಿ , ಮೂಲವ್ಯಾಧಿ ಇರುವ ಜಾಗಕ್ಕೆ ಹಚ್ಚಿದರೆ ಉರಿ,ಶಾಂತವಾಗಿ ಆರಾಮ ಅನಿಸುತ್ತದೆ.
ಇದಿಷ್ಟು ಆಯುರ್ವೇದ ಪಂಡಿತರು ಗಳ ಮಾಹಿತಿಯನ್ನು ಸಂಗ್ರಹಿಸಿರುವುದ
****
ಸುವರ್ಣಗಡ್ಡೆಯನ್ನು ಹೀಗೆ ಬಳಸಿ ಮೂಲವ್ಯಾಧಿ ಬೇಗನೆ ಮಾಯವಾಗುವುದು
ಸುವರ್ಣಗಡ್ಡೆ ಮೂಲವ್ಯಾಧಿಗೆ ಬೆಸ್ಟ್ ಆಹಾರವಾಗಿದೆ. ಹೀಗಾಗಿ ನಿಯಮಿತವಾಗಿ ಸುವರ್ಣಗಡ್ಡೆಯನ್ನು ಸೇವನೆ ಮಾಡುವುದರಿಂದ ಮೂಲವ್ಯಾಧಿಯನ್ನು ನಿಯಂತ್ರಣ ಮಾಡಬಹುದಾಗಿದೆ.
ದಿನನಿತ್ಯ ಜೀವನಶೈಲಿಯಲ್ಲಿ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಬೆಂಬಿಡದೆ ಕಾಡುತ್ತವೆ. ಅಂತಹವುಗಳಲ್ಲಿ ಮೂಲವ್ಯಾಧಿ ಕೂಡ ಒಂದು. ಮೂಲವ್ಯಾಧಿ ಒಮ್ಮೆ ಬಂದರೆ ಅದನ್ನು ನಿಯಂತ್ರಿಸಬಹುದು ಹೊರತು ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲ.
ಕೊನೆಯ ಆಯ್ಕೆ ಎಂದರೆ ಅದು ಶಸ್ತ್ರಚಿಕಿತ್ಸೆಯೇ ಆಗಿರುತ್ತದೆ. ಹೀಗಾಗಿ ಆಹಾರದ ಮೂಲಕ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.
ಮೂಲವ್ಯಾಧಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸುವರ್ಣಗಡ್ಡೆ ಅತ್ಯಂತ ಉತ್ತಮ ಆಹಾರ ಎನ್ನುತ್ತಾರೆ ವೈದ್ಯರು. ಹಾಗಾದರೆ ಹೇಗೆ ಬಳಕೆ ಮಾಡಬೇಕು, ಯಾವಾಗ ಬಳಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಮೂಲವ್ಯಾಧಿಯ ಲಕ್ಷಣಗಳೆಂದರೆ
ಮಲವಿಸರ್ಜನೆಯ ತೊಂದರೆ
ನೋವು
ಮಲವನ್ನು ಹಾದುಹೋಗಲು ಅಸಮರ್ಥತೆ
ಆಯಾಸ
ಕರುಳಿನ ಚಲನೆಯ ಸಮಯದಲ್ಲಿ ನೋವು ಅಥವಾ ರಕ್ತಸ್ರಾವ ಕಂಡುಬರುತ್ತದೆ.
ಸುವರ್ಣಗಡ್ಡೆ
ಸುವರ್ಣಗಡ್ಡೆ ಆಲೂಗೆಡ್ಡೆಯಂತೆ ಮಣ್ಣಿನಡಿಯಲ್ಲಿ ಬೆಳೆಯುತ್ತದೆ. ಒಮ್ಮೆ ತೆಗದರೂ ಅದರ ಬೇರುಗಳು ಮತ್ತೆ ಗಡ್ಡೆಯಾಗಿ ಬೆಳೆಯುತ್ತದೆ. ಈ ಗಡ್ಡೆಯ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದಕ್ಕೆ ಕಾರಣವೆಂದರೆ ಎಲ್ಲಾ ಪೋಷಕಾಂಶಗಳು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ.
ಸುವರ್ಣಗಡ್ಡೆಯಲ್ಲಿ ನಾರಿನಾಂಶ ಹಾಗೂ ಲೋಳೆಯ ಅಂಶ ಉತ್ತಮವಾಗಿರುತ್ತದೆ. ಹೀಗಾಗಿ ಕರುಳಿನ ಆರೋಗ್ಯವನ್ನು ಕಾಪಾಡಲು, ಜೀರ್ಣಕ್ರಿಯೆ ಉತ್ತಮವಾಗಲು ಹಾಗೂ ಮಲವಿಸರ್ಜನೆ ಸರಿಯಾಗಿ ಆಗಲು ಕೂಡ ಸಹಾಯ ಮಾಡುತ್ತದೆ.
ಮೂಲವ್ಯಾಧಿಗೆ ಬೆಸ್ಟ್
ಮೂಲವ್ಯಾಧಿ ಸಮಸ್ಯೆ ಇದ್ದವರು ಅಗತ್ಯವಾಗಿ ಸುವರ್ಣಗಡ್ಡೆಯನ್ನು ತಿನ್ನಬೇಕು. ಇದರಿಂದ 2 ವಾರದೊಳಗೆ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ. ಗರಿಷ್ಠ ಪ್ರಯೋಜನಗಳನ್ನು ಪಡೆಯಲು, ಸುವರ್ಣ ಗಡ್ಡೆಯನ್ನು ತಿಂದ ನಂತರ ಮಜ್ಜಿಗೆ ತೆಗೆದುಕೊಳ್ಳಿ. ಉತ್ತಮ ಫಲಿತಾಂಶಗಳನ್ನು ನೋಡಲು ಕನಿಷ್ಠ 2 ವಾರಗಳವರೆಗೆ ಇದನ್ನು ಮಾಡಿ.
ಸುವರ್ಣಗಡ್ಡೆಯ ಬಳಕೆ
ಸುವರ್ಣಗಡ್ಡೆಯನ್ನು ಹೀಗೆ ಬಳಸಿ
ಮೊದಲು ಕೈಗೆ ಸಾಸಿವೆ ಎಣ್ಣೆಯನ್ನು ಹಚ್ಚಿ. ಅದರ ನಂತರ ನಿಮ್ಮ ಕೈಗಳನ್ನು ಉಪ್ಪು ನೀರಿನಲ್ಲಿ ತೊಳೆಯಿರಿ. ನಂತರ ತರಕಾರಿ ಸಿಪ್ಪೆ ತೆಗೆಯಿರಿ. ಅದನ್ನು ಕತ್ತರಿಸಿ ಸ್ವಲ್ಪ ಸಮಯ ಕುದಿಸಿ ನಂತರ ನೀವು ಇತರ ತರಕಾರಿಗಳನ್ನು ತಯಾರಿಸುವ ವಿಧಾನವನ್ನು ಬಳಸಿ ಆದರೆ ಹೆಚ್ಚು ಮಸಾಲೆಗಳನ್ನು ಸೇರಿಸಬೇಡಿ. ಇದನ್ನು ಮಾಡುವಾಗ, ಸ್ವಲ್ಪ ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಮೆಣಸು, ಕಲ್ಲು ಉಪ್ಪು ಸೇರಿಸಿ ಚೆನ್ನಾಗಿ ರೋಸ್ಟ್ ಮಾಡಿ ತಿನ್ನಬಹುದು. ಅಥವಾ ಪಲ್ಯ. ಸಾಂಬಾರ್ ರೀತಿಯಲ್ಲಿಯೂ ನೀವು ಇದನ್ನು ಬಳಕೆ ಮಾಡಬಹುದು.
ಇತರ ಮನೆಮದ್ದುಗಳೆಂದರೆ...
ನಿಮಗೆ ಬಾಯಾರಿಕೆಯಾದಾಗ ಸಾಕಷ್ಟು ನೀರು ಕುಡಿಯಿರಿ. 10 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ಕುಳಿತುಕೊಳ್ಳಿ. ಸರಿಯಾದ ಸಮಯಕ್ಕೆ ಊಟವನ್ನು ಮಾಡಿ.
ಮಲಗುವ ಮುನ್ನ ಒಂದು ಕಪ್ ಉಗುರುಬೆಚ್ಚಗಿನ ಹಾಲಿಗೆ 1 ಟೀಚಮಚ ದೇಸಿ ಹಸುವಿನ ತುಪ್ಪವನ್ನು ತೆಗೆದುಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಮೂಲವ್ಯಾಧಿ ಸಮಸ್ಯೆಯನ್ನು ನಿಯಂತ್ರಿಸಬಹುದು.
ಪವಿತ್ರಾ ಭಟ್.
ವಿಜಯಕರ್ನಾಟಕ.
***
No comments:
Post a Comment