SEARCH HERE

Friday 1 October 2021

ತದಿಗೆ ಗೌರಿ tadige gowri chaitra shukla chaitra bahula vaishakha shukla triteeya

 Tadige Gowri Vrata


#ತದಿಗೆ ಗೌರಿ

 ಪೂಜೆಯೂ  ಚೈತ್ರ ಶುದ್ಧ  #ತೃತೀಯ, ಚೈತ್ರ ಶುದ್ಧ   #ಬಹುಳ ಹಾಗು ವೈಶಾಖ  ಶುದ್ಧ  #ತೃತೀಯ  ದಂದು ಆಚರಣೆ ಮಾಡುವರು . 

ಹಿಂದೂ ಪಂಚಾಂಗ ದ ಪ್ರಕಾರ ತದಿಗೆ (3ನೇ ದಿನ ತಿಥಿ ಎಂದರ್ಥ)
ಈ ಹಬ್ಬವನ್ನು ತಾಯಿ ಗೌರಿ ಅಥವಾ ದೇವಿ ಪಾರ್ವತಿ ಮುಖ್ಯವಾಗಿ ಸ್ತ್ರೀ ದೈವಿಕ ಶಕ್ತಿಗೆ  ಸಮರ್ಪಿಸಲಾಗಿದೆ.ಈ ವ್ರತವನ್ನು ''#ಸೌಭಾಗ್ಯ #ಗೌರಿ ವ್ರತ "ಎಂದೂ ಕರೆಯಲಾಗುತ್ತದೆ. ಜನರು ತಮ್ಮ ಸಂಪ್ರದಾಯ ಮತ್ತು ಪ್ರದೇಶಗಳ ಪ್ರಕಾರ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಾರೆ.
ಉಗಾದಿ ಚೈತ್ರ ಮಾಸದ ಮೊದಲ ದಿನದಂದು #ಪಾಡ್ಯ (ಮೊದಲ ದಿನ - ಯುಗಾದಿ) ಎರಡನೆಯದಿನ (ವರ್ಷ- ತೊಡಕು) ಮೂರನೆಯ ದಿನ -ತೃತೀಯಾ ಅದುವೇ '" ತದಿಗೆ''. ಅಂದಿನ ದಿನ ತದಿಗೆ ಗೌರಿ ಯನ್ನು ಸ್ಥಾಪಿಸಿ .ಅಕ್ಷಯ ತೃತೀಯ ವರೆಗೂ ಇರಿಸಲಾಗುವುದು .

ಈ ದಿನದಂದು ಮದುವೆಯಾದ ಸುವಾಸಿನಿಯರು ಪ್ರಾತಃ ಕಾಲದಲ್ಲಿ ಎದ್ದು  ತಮ್ಮ ನಿತ್ಯ ಕಾರ್ಯಗಳನ್ನು ನಿರ್ವಹಿಸಿ ನಂತರ ಅರಿಶಿನದಿಂದ ಗೌರಿಯನ್ನು ತಯಾರಿಸಿ ಅದನ್ನು ಎರಡು ವೀಳ್ಯದೆಲೆಯನ್ನು ಬೆಲ್ಲದಚ್ಚು ಮೇಲೆ ಸ್ಥಾಪಿಸಿ ಜೊತೆಗೆ ಎರಡುಬಟ್ಳಡಿಕೆ ,ಬಳೆಬಿಚ್ಚೋಲೆ ,ಕನ್ನಡಿ ,ಒಂದು ಪುಟ್ಟ ಕಳಸ  ಅದಕ್ಕೆ ೫ ವೀಳ್ಯದೆಲೆ ,ನೀರು,ಅರಿಶಿನ ,ಕುಂಕುಮ, ಹೂವು,ಮಂತ್ರಾಕ್ಷತೆ, ಹಾಗು ಕಳಸಕ್ಕೆ ಸುಣ್ಣ. ಒಂದು ತಟ್ಟೆಯಲ್ಲಿ ಸ್ವಲ್ಪ ಅಕ್ಕಿ ಹಾಕಿ ಅದರ ಮೇಲೆ ಕಳಸವನ್ನು ಸ್ಥಾಪನೆ ಮಾಡಬೇಕು . ಇವಿಷ್ಟು  ಬೇಕಾದ ಪದಾರ್ಥಗಳು (ಕೆಲವರ ಮನೆಯಲ್ಲಿ ಎರಡು ಅರಿಶಿನಿದ ಗೌರಿಯನ್ನು ಮಾಡುವ ಪದ್ಧತಿ  ಇರುತ್ತೆ ಹಾಗಾಗಿ ತಮ್ಮ ತಮ್ಮ ಸಂಪ್ರದಾಯದಂತೆ ಹಾಗು ಗುರು ಹಿರಿಯರಲ್ಲಿ ಕೇಳಿ ಆಚರಣೆ ಮಾಡಬೇಕು. )
                            

ತದಿಗೆ ಗೌರಿಯನ್ನು ಸ್ಥಾಪಿಸಿ ,ಆವಾಹನೆ ಮಾಡಿ  ಪೂಜಿಸಬೇಕು . ನೈವೇದ್ಯಕ್ಕಾಗಿಭಕ್ಷ್ಯಗಳು,ಪಾಯಸ ,ಹಣ್ಣುಗಳು,ಪಾನಕ ,ಕೋಸಂಬರಿ  ತಮ್ಮ ತಮ್ಮ ಕೈಲಾದಂತೆ ಯಾವುದಾದರೂ ಮಾಡಿ ನೈವೇದ್ಯ ಮಾಡಿ ,ಹಾಗು ೫ ಜನ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸೇವಿಸಲು ಪಾನಕ ಕೋಸಂಬರಿ ಕೊಡಬೇಕು . ನಂತರ ಅನುಕೂಲ ಇರುವವರು ಮುತ್ತೈದೆಯರಿಗೆ ಭೋಜನಕ್ಕೆ ಆಹ್ವಾನಿಸಿ ಅವರ ಶಕ್ತ್ಯಾನುಸಾರ ಬಾಗಿನ ಕೊಡಬಹುದು.
**********


ತದಿಗೆ ಗೌರಿ ಪೂಜೆಯೂ  ಚೈತ್ರ ಶುದ್ಧ  ತೃತೀಯ, ಚೈತ್ರ ಶುದ್ಧ   ಬಹುಳ ಹಾಗು ವೈಶಾಖ  ಶುದ್ಧ  ತೃತೀಯ  ದಂದು ಆಚರಣೆ ಮಾಡುವರು .  ತಾರೀಖುಗಳು  ಆ ಆ  ಪ್ರಾಂತ್ಯದ ಪಂಚಾಂಗವನ್ನು ಆಧರಿಸಿ ಆಚರಣೆ ಮಾಡಬೇಕು. ಈ ದಿನದಂದು ಮದುವೆಯಾದ ಸುವಾಸಿನಿಯರು ಪ್ರಾತಃ ಕಾಲದಲ್ಲಿ ಎದ್ದು  ತಮ್ಮ ನಿತ್ಯ ಕಾರ್ಯಗಳನ್ನು ನಿರ್ವಹಿಸಿ ನಂತರ ಅರಿಶಿನದಿಂದ ಗೌರಿಯನ್ನು ತಯಾರಿಸಿ ಅದನ್ನು ಎರಡು ವೀಳ್ಯದೆಲೆಯನ್ನು ಬೆಲ್ಲದಚ್ಚು  ಮೇಲೆ ಸ್ಥಾಪಿಸಿ ಜೊತೆಗೆ ಎರಡು ಬಟ್ಳಡಿಕೆ ,ಬಳೆಬಿಚ್ಚೋಲೆ ,ಕನ್ನಡಿ ,ಒಂದು ಪುಟ್ಟ ಕಳಸ  ಅದಕ್ಕೆ ೫ ವೀಳ್ಯದೆಲೆ ,ನೀರು,ಅರಿಶಿನ ,ಕುಂಕುಮ, ಹೂವು,ಮಂತ್ರಾಕ್ಷತೆ, ಹಾಗು ಕಳಸಕ್ಕೆ ಸುಣ್ಣ. ಒಂದು ತಟ್ಟೆಯಲ್ಲಿ ಸ್ವಲ್ಪ ಅಕ್ಕಿ ಹಾಕಿ ಅದರ ಮೇಲೆ ಕಳಸವನ್ನು ಸ್ಥಾಪನೆ ಮಾಡಬೇಕು . ಇವಿಷ್ಟು  ಬೇಕಾದ ಪದಾರ್ಥಗಳು (ಕೆಲವರ ಮನೆಯಲ್ಲಿ ಎರಡು ಅರಿಶಿನಿದ ಗೌರಿಯನ್ನು ಮಾಡುವ ಪದ್ಧತಿ  ಇರುತ್ತೆ ಹಾಗಾಗಿ ತಮ್ಮ ತಮ್ಮ ಸಂಪ್ರದಾಯದಂತೆ ಹಾಗು ಗುರು ಹಿರಿಯರಲ್ಲಿ ಕೇಳಿ ಆಚರಣೆ ಮಾಡಬೇಕು. )

ತದಿಗೆ ಗೌರಿಯನ್ನು ಸ್ಥಾಪಿಸಿ ,ಆವಾಹನೆ ಮಾಡಿ  ಪೂಜಿಸಬೇಕು . ನೈವೇದ್ಯಕ್ಕಾಗಿ ಭಕ್ಷ್ಯಗಳು, ಪಾಯಸ ,ಹಣ್ಣುಗಳು,ಪಾನಕ ,ಕೋಸಂಬರಿ  ತಮ್ಮ ತಮ್ಮ ಕೈಲಾದಂತೆ ಯಾವುದಾದರೂ ಮಾಡಿ ನೈವೇದ್ಯ ಮಾಡಿ ,ಹಾಗು ೫ ಜನ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸೇವಿಸಲು ಪಾನಕ ಕೋಸಂಬರಿ ಕೊಡಬೇಕು . ನಂತರ ಅನುಕೂಲ ಇರುವವರು ಮುತ್ತೈದೆಯರಿಗೆ ಭೋಜನಕ್ಕೆ ಆಹ್ವಾನಿಸಿ ಅವರ ಶಕ್ತ್ಯಾನುಸಾರ ಬಾಗಿನ ಕೊಡಬಹುದು .
****

ಗೌರಿ ತೃತೀಯ 


ಚೈತ್ರಮಾಸದ ಶುದ್ಧ ತೃತೀಯ, ಸೌಮಾಂಗಲ್ಯಭಿವೃದ್ಧಿಗಾಗಿ ಮಹಾರುದ್ರದೇವರ ಪತ್ನಿಯಾದ ಶ್ರೀ ಪಾರ್ವತಿ ಅಥವಾ ಗೌರಿದೇವಿಯನ್ನು ಆರಾಧಿಸುವ ಸುಧಿನ. ಪರಮೇಶ್ವರನ ಸಹಿತವಾಗಿ ಗೌರಿಯನ್ನು ಪೂಜಿಸಬೇಕು.  ಈ ವ್ರತಮಾಡುವುದರಿಂದ ವಿವಾಹಭಾಗ್ಯ ಮತ್ತು ಸೌಮಾಂಗಾಲ್ಯಾಭಿವೃದ್ದಿ ವಿಶೇಷವಾಗಿ ಆಗುತ್ತದೆ ಎಂಬ ನಂಬಿಕೆ ಇದೆ.
****
ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು.

Haldi Packet

Kumkum Packet
Gejje vastra
Hoovu Bathi
Adike – Betel Nuts
Jaggery
Sugar
Rice
All dals
Salt
Silk or any other texture Saree
Blouse Piece
Bangles
Small Mirror, Comb
Kobbari Battilu
Rava
Tamarind

೧. ಅರಿಸಿನ: ಗೌರಿದೇವೀ.
೨. ಕುಂಕುಮ:ಮಹಾಲಕ್ಷ್ಮೀ
೩. ಸಿಂಧೂರ: ಸರಸ್ವತೀ
೪. ಕನ್ನಡಿ: ರೂಪಲಕ್ಷ್ಮೀ.
೫. ಬಾಚಣಿಗೆ:ಶೃಂಗಾರಲಕ್ಷ್ಮೀ.
೬. ಕಾಡಿಗೆ:ಲಜ್ಜಾಲಕ್ಷ್ಮೀ.
೭. ಅಕ್ಕಿ:ಶ್ರೀ ಲಕ್ಷ್ಮೀ.
೮. ತೊಗರಿಬೇಳೆ :ವರಲಕ್ಷ್ಮೀ
೯. ಉದ್ದಿನಬೇಳೆ:ಸಿದ್ದಲಕ್ಷ್ಮೀ
೧೦ ತೆಂಗಿನಕಾಯಿ:ಸಂತಾನಲಕ್ಷ್ಮೀ
೧೧. ವೀಳ್ಯದ ಎಲೆ:ಧನಲಕ್ಷ್ಮೀ
೧೨. ಅಡಿಕೆ:ಇಷ್ಟಲಕ್ಷ್ಮೀ
೧೩. ಫಲ(ಹಣ್ಣು): ಜ್ಞಾನಲಕ್ಷ್ಮೀ
೧೪. ಬೆಲ್ಲ:ರಸಲಕ್ಷ್ಮೀ
೧೫. ವಸ್ತ್ರ:ವಸ್ತ್ರಲಕ್ಷ್ಮೀ
೧೬. ಹೆಸರುಬೇಳೆ: ವಿದ್ಯಾಲಕ್ಷ್ಮೀ
*******

ದಾನಗಳು ಮತ್ತು ಫಲಗಳು

೧. ಅರಿಸಿನ ದಾನ :
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

೨. ಕುಂಕುಮ ದಾನ :
ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..

೩. ಸಿಂಧೂರ ದಾನ:
ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

೪. ಕನ್ನಡೀ(ರೂಪಲಕ್ಷ್ಮೀ) :
ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

೫. ಬಾಚಣಿಗೆ :
ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

೬. ಕಾಡಿಗೆ :
ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

೭. ಅಕ್ಕಿ :
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌
ಆರೋಗ್ಯಭಾಗ್ಯವಾಗುತ್ತದೆ..
ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..

೮. ತೊಗರಿಬೇಳೆ :
ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.
ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
ರಕ್ತದೊತ್ತಡ (B.P) normal ಆಗಿ ಆರೋಗ್ಯವಂತರಾಗುತ್ತಾರೆ..
ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..

೯. ಉದ್ದಿನ ಬೇಳೆ :
ಪಿತೃಶಾಪ ನಿವಾರಣೆಯಾಗುತ್ತದೆ..
ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
ಅಪಮೃತ್ಯುಗಳು ನಿವಾರಣೆಯಾಗುತ್ತದೆ..
ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..

೧೦. ತೆಂಗಿನಕಾಯಿ :
ಇಷ್ಟಾರ್ಥಸಿದ್ಧಿಯಾಗುತ್ತದೆ.. ,
ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..

೧೧. ವೀಳ್ಯದೆಲೆ :
ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

೧೨. ಅಡಿಕೆ :
ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".!
ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..
ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾ" ದೋಷ ಬರುವುದು.
ಆದ್ದರಿಂದ ಬರೀ ಅಡಿಕೆ ತಿನ್ನಬಾರದು..

೧೩. ಫಲದಾನ :
ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..
ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ.‌.
ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..

೧೪. ಬೆಲ್ಲ (ರಸಲಕ್ಷ್ಮೀ) :
ಬೆಲ್ಲದ ಅಭಿಮಾನ ದೇವತೆ "ರಸಲಕ್ಷ್ಮೀ"..
ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..
ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..
ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..
ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..

೧೫. "ವಸ್ತ್ರಲಕ್ಷ್ಮೀ" :
ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ" ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..
ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು..
ಹೀಗೆ ಮಾಡುವದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ..
ಕುಲದೇವತೆ ತೃಪ್ತಿಯಾಗುತ್ತದೆ..
ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..
ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..

೧೬. "ಹೆಸರುಬೇಳೆ" : ವಿದ್ಯಾಲಕ್ಷ್ಮೀ -
ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ.
ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ..
ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..
ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..

ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ..
ದೇವಿಗೆ "ಹೆಸರುಬೇಳೆ" ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..
ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ.‌
Gastric, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ..

***

No comments:

Post a Comment