ಧ್ಯಾನದ 28 ಅತ್ಯುನ್ನತ ಗುಣಗಳು
1 ವ್ಯಕ್ತಿತ್ವದ ಸಂರಕ್ಷಣೆ ಮಾಡುತ್ತದೆ,
2 ದೀರ್ಘಾಯು ನೀಡುತ್ತದೆ,
3 ಶಕ್ತಿ ನೀಡುತ್ತದೆ,
4 ಬಲ ವೃದ್ಧಿಸುತ್ತದೆ
5 ಪರಿಶುದ್ಧಿ ನೀಡುತ್ತದೆ.
6 ಕುಖ್ಯಾತಿ ನೀಗುತ್ತದೆ
7 ಸುಖ್ಯಾತಿ ತರುತ್ತದೆ.
8 ಅತೃಪ್ತಿ ತೊಡೆದು ತೃಪ್ತಿ ನೀಡುತ್ತದೆ,
9 ಭಯ ಕಿತ್ತೆಸೆಯುತ್ತದೆ
10 ಶ್ರದ್ಧೆ ನೀಡುತ್ತದೆ,
11 ಜಡತ್ವ ಕಿತ್ತೊಗೆಯುತ್ತದೆ
12 ಉತ್ಸಾಹ ನೀಡುತ್ತದೆ.
13 ರಾಗದಿಂದ ಬಿಡುಗಡೆ ಮಾಡಿಸುತ್ತದೆ
14 ದ್ವೇಷದಿಂದ ಬಿಡುಗಡೆ ಮಾಡಿಸುತ್ತದೆ
15 ಮೋಹದಿಂದ ಬಿಡುಗಡೆ ಮಾಡಿಸುತ್ತದೆ
16 ಅಹಂಕಾರದ ಅಂತ್ಯ ಮಾಡುತ್ತದೆ.
17 ಎಲ್ಲಾ ಸಂದೇಹಗಳನ್ನು ಮುರಿದು ಹಾಕುತ್ತದೆ.
18 ಹೃದಯಕ್ಕೆ ಶಾಂತಿ ನೀಡುತ್ತದೆ,
19. ಚಿತ್ತವನ್ನು ಮೃದು ಮಾಡುತ್ತದೆ,
20 ಆನಂದ ಪ್ರಾಪ್ತಿಗೈಯುತ್ತದೆ,
21 ಗಂಭೀರತೆಯನ್ನು ನೀಡುತ್ತದೆ
22 ಅತ್ಯುನ್ನತ ಲಾಭವನ್ನು ನೀಡುತ್ತದೆ.
23 ಗೌರವಯುತನನ್ನಾಗಿರಿಸುತ್ತದೆ,
24 ಆಹ್ಲಾದತೆಯನ್ನು ತುಂಬಿಸುತ್ತದೆ,
25 ಸುಖಾವೃತನನ್ನಾಗಿಸುತ್ತದೆ.
26 ಅನಿತ್ಯತೆಯ ಸಾಕ್ಷಾತ್ಕಾರ ತರುತ್ತದೆ,
27 ಪುನರ್ಜನ್ಮವನ್ನು ತಡೆಯುತ್ತದೆ.
28 ತ್ಯಾಗದ ಎಲ್ಲಾ ಲಾಭಗಳನ್ನು ನೀಡುತ್ತದೆ.
ಇವೇ ಧ್ಯಾನದ 28 ಮಹತ್ತರ ಗುಣಗಳಾಗಿವೆ. ಆದ್ದರಿಂದಲೇ ಯೋಗಿಯವರು ತಥಾಗತ ಅವುಗಳ ಉತ್ಕೃಷ್ಟತೆ ಅರಿತು ಅದರಲ್ಲೇ ತಲ್ಲೀನರಾಗುತ್ತಾರೆ. ಏಕೆಂದರೆ ಧ್ಯಾನವು ತಥಾಗತರಿಗೆ ಪರಮಸುಖ ನೀಡುವುದರಿಂದ ನಿಬ್ಬಾಣದ ಪರಮಸುಖ ಸಿಗುವುದರಿಂದಾಗಿ, ಅವರು ಸಮಾಧಿಯಲ್ಲೇ ತಲ್ಲೀನರಾಗುತ್ತಾರೆ. ಅದರಲ್ಲೇ ಕೇಂದ್ರೀಕೃತರಾಗುತ್ತಾರೆ.”
ಓಂ ನಮೋ ಭಗವತೇ ವಾಸುದೇವಾಯ
***
No comments:
Post a Comment