SEARCH HERE

Tuesday, 30 November 2021

ಮುಸುರೆ ಅಂದರೇನು

 ಮುಸುರೆ  ಅಂದರೇನು ?  ಅನ್ನದ ಪಾತ್ರೆ  ಸಾರು ಹುಳಿಯ  ಪಾತ್ರೆ ಮುಟ್ಟಿದರೆ ಕೂಡ  ಯಾಕೆ ಕೈ ತೊಳದು ಕೊಳ್ಳುತ್ತೀರಾ ?  


ಅಡಿಗೆ ಮಾಡುವಾಗ  ಗ್ಯಾಸ್ ಸ್ಟವ್  ಮುಟ್ಟಿದರೇ ಯಾಕೆ ಕೈ ತೊಳಿಯಬೇಕು ? ಕೈಗೆ  ಅನ್ನಸಾರು ಏನು ಅಂಟಿರುವುದಿಲ್ಲ . ಆದರೂ ಮುಸುರೆ ಕೈ ತೊಳೆಯ ಬೇಕು ಆಮೇಲೆ  ಬೇರೆ ಸಾಂಬಾರ್ ಡಬ್ಬ ಉಪ್ಪಿನ ಡಬ್ಬ ಯಾವುದೇ ಮುಟ್ಟ ಬೇಕಾದರೂ ಯಾಕೆ ಕೈ ತೊಳೆಯ ಬೇಕು ? ಕಾರಣ ತಿಳಿಸಿ ಅಂತ ಕೇಳುತ್ತಾರೆ .

ದಯವಿಟ್ಟು  ಉತ್ತರಿಸುತ್ತೀರಾ ?? ಆಚಾರ್ಯರೇ ??

ತಪ್ಪಾಗಿ ಪ್ರಶ್ನೆ ಮಾಡಿದ್ದರೇ  ದಯವಿಟ್ಟು  ಕ್ಷಮಿಸಿ .


ಹರೇ ಶ್ರೀನಿವಾಸ 

ಯಾವುದೇ ಧಾನ್ಯ ತರಕಾರಿ ಬೇಯಿಸಿದಾಗ ಆ ಪಾತ್ರೆ ಮುಸುರೆ ಅಂತ.. 

1)ಮುಟ್ಟಿದ ಕೈ 

2)ಸೌಟು 

3)ಪಾತ್ರೆ ಇಟ್ಟ ಜಾಗ ಎಲ್ಲ ಮುಸುರೆ..


 ಮೂರನ್ನೂ ತೊಳೆದು ಬೇರೆ ಈ ತರಹದ ಮುಸುರೆಯ ಸಂಪರ್ಕ ಮಾಡಿಸದಿದ್ದಾಗ ಆ ಮುಸುರೆ ಈಗ ಇಲ್ಲ..


ಅಂದರೆ ಕೈ ಮುಸುರೆ ಮುಟ್ಟಿದಾಗ ತೊಳೆದುಕೊಳ್ಳಬೇಕು.. ಇಲ್ಲಾಂದ್ರ ಅದೇ ಕೈ ಯಿಂದ ಅಡುಗೆಮನೆಯ ಎಲ್ಲ ವಸ್ತುಗಳನ್ನು ಹಾಗೂ ತಾನುಟ್ಟ ವಸ್ತ್ರವನ್ನೂ ಮುಟ್ಟಿದಾಗ ಮುಸುರೆಯ ಸಂಪರ್ಕ.. ಹೀಗಾಗಿ ಆಗಾಗ ಮುಸುರೆಯಾ.. ಕೈ ತೊಳೆಯಬೇಕು.. ಪಾತ್ರೆ ತೊಳೆದ ಮೇಲೆ ಪಾತ್ರೆ ಕೈ ಎರಡೂ ತೊಳೆಯಬೇಕು.. ಜಾಗ ತೊಳೆಯಬೇಕು.. 


ಮುಸುರೆ ಕೈಯಿಂದ ಉಪ್ಪು ಇತರ ಡಬ್ಬಿ ಮುಟ್ಟಬಾರದು. 

ಮುಸುರೆ ಆಗುವುದು 


ಶೀಘ್ರ ಕೈ ತೊಳೆಯುವುದೇ ಪರಿಹಾರ..


🙏🏽🙏🏽🙇🏻‍♂️

ಪ್ರಶ್ನೆಯಲ್ಲಿ ಏನೂ ತಪ್ಪಿಲ್ಲ. ಉತ್ತಮ ಸಂಸ್ಕಾರದ ಅಭಿವೃದ್ಧಿಗಾಗಿ, ಮುಸುರೆಯ concept, ಅದರ ಎಚ್ಚರ ಇರ್ಲೇಬೇಕು.

@ಶ್ರೀ ಪಾಂಘ್ರಿ ಆಚಾರ್ಯರು ಹೇಳಿದ ಹಾಗೆ,

ಯಾವುದೇ ಧಾನ್ಯ (ಅಕ್ಕಿ,ಬೇಳೆ,etc etc), ಅಥವಾ ತರಕಾರಿಯನ್ನು ಬೇಯಿಸಿದಾಗ ಆ ಪದಾರ್ಥ ಮುಸುರೆ.


ಗೋದಿ ಹಿಟ್ಟು, ಜೋಳದ ಹಿಟ್ಟು etc ಹಿಟ್ಟಿನ ಜೊತೆಗೆ ನೀರಿನ ಸಂಪರ್ಕವಾದರೆ ಆ ಪದಾರ್ಥವೂ (ಭಕ್ರಿ /ರೊಟ್ಟಿ, ಚಪಾತಿ etc )

ಕೂಡಾ ಮುಸುರೆ ಅಂತನೇ ಪರಿಗಣನೆ.


ಮುಸುರೆ ಅನ್ನೋದರಲ್ಲಿಯೂ ಸ್ವಲ್ಪ ತಾರತಮ್ಯ ಇದೆ.

ಕೆಲವರು ಉಪ್ಪಿಟ್ಟು (ರವಾದಲ್ಲಿ ಮಾಡಿದ್ದು )  ಇದು ಅನ್ನ, ಸಾರು etc ಇವುಗಳ ತರಹ ಅಷ್ಟು ಮುಸುರೆ ಅಲ್ಲ ಅಂತ ಹೇಳ್ತಾರೆ.

But strictly speaking ಇದು ಕೂಡಾ ಮುಸುರೆನೇ.



ದಕ್ಷಿಣ ಕರ್ನಾಟಕದ ಬಗ್ಗೆ ಅಷ್ಟು ಗೊತ್ತಿಲ್ಲ. ನಮ್ಮಲ್ಲಿ ಉತ್ತರಕರ್ನಾಟಕದ ಕಡೆ, ಕೇವಲ ಹಾಲಿನಲ್ಲಿ ಹಿಟ್ಟು ಕಲಿಸಿ ಚಪಾತಿ ಮಾಡ್ತೀವಿ. ಹಾಲಾಗಿನ ದಶಮಿ ಅಂತ ಹೇಳ್ತೀವಿ. ಇದು ಅನ್ನ, etc ಇವುಗಳಷ್ಟು ಮುಸುರೆ ಅಲ್ಲ ಅಂತ ಅಭಿಪ್ರಾಯ.

ಇರ್ಲಿ. ಒಟ್ಟಿನಲ್ಲಿ ಯಾವುದೇ ಧಾನ್ಯ -ಹಿಟ್ಟು, (ಬೋಂಡಾ, ಮಿರ್ಚಿ etc etc ಇಂಥ ಹಿಟ್ಟಿನಿಂದ ಕರೆದ ಪದಾರ್ಥ )

ಬೇಯಿಸಿದ ಧಾನ್ಯಗಳಿಂದ ಆದ ಪದಾರ್ಥ ಇದು ಮುಸುರೆ.


ಮುಸುರೆ ಅಲ್ಲದ ಪದಾರ್ಥ ಮುಸುರೆಯ ಜೊತೆಗೆ ಸಂಪರ್ಕವಾದರೆ, ಅದು ಮುಸುರೆನೇ.


ಮುಸುರೆ ಆಗೋದಕ್ಕೆ ಅಂದ್ರೆ ಮುಸುರೆ ಅಂತ ಅನ್ನಿಸಿಕೊಳ್ಳಲಿಕ್ಕೆ basically ನೀರಿನ ಸಂಪರ್ಕ, ಕಾರಣ.


ನೀರಿನ ಸಂಪರ್ಕದಿಂದ ಮುಸುರೆ, ಆ ಮುಸುರೆ ಹೋಗೋದು ಕೂಡಾ ನೀರಿನಿಂದಲೇ.

ನೀರಿನಲ್ಲಿನ ಇಂಥ ಅದ್ಭುತ ಗುಣ / ವೈಶಿಷ್ಟ್ಯವನ್ನು ಭಗವಂತ ಇಟ್ಟಿದ್ದಾನೇ.


ಮಡಿ ಆಗೋದು ಕೂಡಾ ನೀರಿನಿಂದ, ಮೈಲಿಗೆ ಆಗೋದು ಕೂಡಾ ನೀರಿನಿಂದಲೇ ಒಂದು ರೀತಿಯಲ್ಲಿ.


ಇನ್ನು, ಕೆಲವು ಇತರೇ ಜನರು,

ಅನ್ನದ ಪಾತ್ರೆ etc ಇಂಥವನೆಲ್ಲ ಖಾಲಿ ಮಾಡಿ ಒಂದು ಬಟ್ಟೆಯಿಂದ ಒರಿಸಿ ಬಿಡ್ತಾರೆ.

ಅನ್ನ ಇದ್ದರೆ ತಾನೇ ಮುಸುರೆ, ಅನ್ನದ ಕಾಳೇ ಇಲ್ಲ ಅಂದ ಮ್ಯಾಲೆ ಯಾಕೆ ಮುಸುರೆ, ಮುಸುರೆ ಇಲ್ಲ ಅಂತ ಅವರ logic /reasoning.


ಆದರೆ ನಮ್ಮಲ್ಲಿ ಹಿಂಗ ಇಲ್ಲ. ಹಂಗ ಮಾಡೋದು ತಪ್ಪು. ಅನ್ನದ /ಸಾರಿನ ಅಂಶ ಆ ಪಾತ್ರೆಯಲ್ಲಿ ಇಲ್ಲದಿದ್ದರೂ ಕೂಡಾ, ಎಲ್ಲೀ ತನಕ ಆ ಪಾತ್ರೆಗಳನ್ನು, ಆ ಪಾತ್ರೆಗೆ ಸಂಪರ್ಕ ಹೊಂದಿದ ಪಾತ್ರೆಗಳನ್ನು ನೀರಿನಿಂದ ತೊಳೆಯೋದಿಲ್ಲವೋ, ಎಲ್ಲಿಯ ತನಕ ಆ ಜಿಡ್ಡು ಹೋಗೋದಿಲ್ಲವೋ ಅಲ್ಲಿಯ ತನಕ ಅದು ಮುಸುರೆನೇ.


ನಮ್ಮಲ್ಲಿ, ಮುಸುರೆ ಪಾತ್ರೆ ಎಲ್ಲಾ ತೊಳೆದಮೇಲೆ, ಮತ್ತೆ ಅದನ್ನು ತೊಳೆತೀವಿ.

ಗಲಬರಸೋದು ಅಂತ ಹೇಳ್ತೀವಿ ನಮ್ಮ ಕಡೆ.

Even, ಕೆಲಸದವಳು ಅಂತ ಇದ್ದರೆ, ಅಂದ್ರೆ ಪಾತ್ರೆ ತೊಳೆಯುವವಳು ತೊಳೆದು ಪಾತ್ರೆ ತೊಳೆದು ಇಟ್ಟ ಮೇಲೆಯೂ, ಮತ್ತೆ ಆ ಪಾತ್ರೆಗಳನ್ನು ಗಲಬರಿಸಿ, ಒರಿಸಿ ಇಡೋದು ಕ್ರಮ.

🙏🏽🙏🏽


ಎಂಜಲು _ ಮುಸುರೆ , ಮಡಿ _ ಮೈಲಿಗೆ ಈ ವಿಷಯದ ಬಗ್ಗೆ ಪ್ರಶ್ನಿಸುವದಕ್ಕಿಂತಲೂ, ಅಂತಹ ಸಜ್ಜನರನ್ನು ವೀಕ್ಷಿಸಬೇಕು. ವಿಧೇಯವಾಗಿ ಕ್ಷೇತ್ರದಲ್ಲಿ ಹೋದಾಗ ಆಚಾರ್ಯರನ್ನು ಗಮನಿಸಬೇಕು. ನಾವುಗಳು ಮಕ್ಕಳನ್ನು ಸೋದೆಗೆ ಕರೆದುಕೊಂಡು ಹೋಗಿ ಕಾಯಿಸೇವೆ, ಅಡಿಗೆ ಬಡಿಸಲು, ನೀರು ಬಡಿಸಲು ಹಚ್ಚಿದರೆ....ಪಂಚೆ ಹ್ಯಾಗೆ ಉಟ್ಕೋಬೇಕು, ಅಡಿಗೆ ಹೇಗೆ ಬಡಿಸಬೇಕು, ಯಾವ ರೀತಿ ಸೇವೆ ಮಾಡಬೇಕು ಆಗ ಮಡಿಮೈಲಿಗೆ, ಎಂಜಲು ಮುಸಿರೆ ಎಲ್ಲವೂ ಗೊತ್ತಾಗುತ್ತದೆ. 

  ಮುಂಚೆ ಕಾಯಿಸೇವೆ ಮಾಡುವವರಿಗೆ ಅಲ್ಲಿ ಕಟ್ಟಿ ಮೇಲೆ ಚಾಪೆ ಮೇಲೆ  ಮಲ್ಕೋಬೇಕು. ಉಟ್ಟ ಪಂಚೆ, ಹೊದೆದುಕೊಳ್ಳಲು ಶಲ್ಯವೇ ...ಈಗ ರಾಜಧಾಮ ಅಂತ ಮಾಡಿ ರೂಮುಗಳು ಮಾಡಿದ್ದಾರೆ. 😔

    ಒಟ್ಟಿನಲ್ಲಿ ಮನೆಯಲ್ಲಿ ಹಿರಿಯರು ಮಾಡ್ತಿದ್ದರೆ ಮಕ್ಕಳು ಕಲಿಯುವದುಂಟು. ಇಲ್ಲದಿದ್ದಲ್ಲಿ ಇಂತಹ ಕ್ಷೇತ್ರದಲ್ಲಿ ಕಲಿಯಬಹುದು.

    ಇದು theoretical ಅಲ್ಲ practical. ಅಂದರೆ ಬೇಗ ಅರಿವಾಗುವುದು. 😀👍


Exactly. Acharyare. Ellavoo. Neerinimd.   Neere. Andare. Laxmi  PAVITRA. Huttuvudu.  Avalindale.   Mutyaidege. Netted. Taleyalli. Gange. Yirtade. Avalu. Pavitralu.      Swachhatege. Neeru  bekebeku.   Keval. Senitaiser. Upayogilla.   Hygiene  adaroo. Beku🙏🙏


 Sariyagi heliddira acharyare egina hudugaru prashne madode

(whatsapp)

***



No comments:

Post a Comment