SEARCH HERE

Monday 1 November 2021

ಕಿತ್ತಳೆ ಹಣ್ಣು orange kittale hannu

 Orange


ರಸಭರಿತ ಕಿತ್ತಳೆ ಹಣ್ಣನ್ನು ಸೇವನೆ ಮಾಡಿದ ನಂತರ ಸಿಪ್ಪೆಯನ್ನು ಕಸಕ್ಕೆ ಎಸೆಯಬೇಡಿ. ಸಿಪ್ಪೆ ಕೂಡ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ಶಕ್ತಿ ಹೊಂದಿದೆ.

 ಸಾಕಷ್ಟು ನೀರು ತುಂಬಿರುವ ರಸಭರಿತ ಕಿತ್ತಳೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಹಣ್ಣನ್ನು ತಿಂದ ನಂತರ ಸಿಪ್ಪೆಯನ್ನು ಕಸಕ್ಕೆ ಎಸೆಯುವುದು ಕೂಡ ಸಾಮಾನ್ಯ. ಆದರೆ ಹಣ್ಣು ಮತ್ತು ಅವುಗಳ ಸಿಪ್ಪೆಗಳು ಚರ್ಮಕ್ಕೆ ಜಾದು ಮಾಡುತ್ತವೆ ಎಂಬುದು ಮಾತ್ರ ಬಹುತೇಕರಿಗೆ ತಿಳಿದಿಲ್ಲ.

ಕಿತ್ತಳೆ ಹಣ್ಣಿನ ಸಿಪ್ಪೆಯ ವಿಷಯಕ್ಕೆ ಬಂದರೆ, ಈ ಸಿಪ್ಪೆಯಲ್ಲಿ ಹೇರಳವಾಗಿ ವಿಟಮಿನ್‌ ಸಿ ಇದೆ. ಈ ಕಾರಣದಿಂದ ಪ್ರಕಾಶಮಾನವಾದ, ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.

ಹಾಗಾದರೆ ಕಿತ್ತಳೆಯ ಸಿಪ್ಪೆಯನ್ನು ತ್ವಚೆಗೆ ಬಳಸುವುದರಿಂದ ದೊರೆಯುವ ಸೌಂದರ್ಯ ಲಾಭಗಳ ಬಗ್ಗೆ ಮಾಹಿತಿ ಇಲ್ಲಿದೆ ಓದಿ.

​ಕಿತ್ತಳೆ ಸಿಪ್ಪೆಯಲ್ಲಿ ಅಂತದೇನಿದೆ?

1.ಮುಖ್ಯವಾಗಿ ಕಿತ್ತಳೆಯ ಸಿಪ್ಪೆಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದನ್ನು ನಿಯಮಿತವಾಗಿ ಫೇಸ್ ಪ್ಯಾಕ್‌ಗಳಲ್ಲಿ ಬಳಸುವುದರಿಂದ ಸ್ಪಷ್ಟವಾದ ಮತ್ತು ಯೌವನದಿಂದ ಕೂಡಿದ ಚರ್ಮ ಕಾಂತಿಯನ್ನು ನೀವು ಪಡೆಯಬಹುದು.

ಅಷ್ಟೇ ಅಲ್ಲ, ಮೊಡವೆ ಮತ್ತು ಎಣ್ಣೆಯುಕ್ತ ಚರ್ಮಕ್ಕೆ ಚಿಕಿತ್ಸೆ ನೀಡಲು ಕಿತ್ತಳೆಯ ಸಿಪ್ಪೆಗಳು ಸಹಕಾರಿಯಾಗಿದೆ. ಅಲ್ಲದೆ, ಚರ್ಮದ ಮೇಲಿರುವ ಕಲೆಗಳು, ಪಿಗ್ಮೆಂಟೇಶನ್‌ಗೆ ಚಿಕಿತ್ಸೆ ನೀಡುತ್ತದೆ.

2.ನೈಸರ್ಗಿಕ ಬ್ಲೀಚ್‌ ಆಗಿದೆ

ಕಿತ್ತಳೆ ಹಣ್ಣು ಹೇರಳವಾಗಿ ವಿಟಮಿನ್‌ ಸಿ ಹೊಂದಿದೆ. ಹೆಚ್ಚಿನ ವಿಟಮಿನ್‌ ಸಿ ಹಣ್ಣುಗಳು ನೈಸರ್ಗಿಕವಾಗಿ ಬ್ಲೀಚಿಂಗ್‌ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇದು ಚರ್ಮದ ಮೇಲಿರುವ ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್ ಅನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ.

ಕಿತ್ತಳೆ ಸಿಪ್ಪೆಯ ಪುಡಿಯು ಬಹಳಷ್ಟು ಉತ್ತಮ ಮೂಲವನ್ನು ಹೊಂದಿದ್ದು, ಚರ್ಮದ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸಲು ಉತ್ತೇಜಿಸುತ್ತದೆ. ಒಟ್ಟಾರೆ ನಿಮ್ಮ ಚರ್ಮವನ್ನು ಕಿತ್ತಳೆಯ ಸಿಪ್ಪೆಯ ಪುಡಿಯು ಬಿಳುಪಾಗಿಸುತ್ತದೆ.

3.​ಯೌವನವನ್ನು ನೀಡುತ್ತದೆ

ಕಿತ್ತಳೆ ಸಿಪ್ಪೆಯ ಪುಡಿಯು ನೈಸರ್ಗಿಕ ಖನಿಜಗಳನ್ನು ಹೊಂದಿದ್ದು ನಿಮ್ಮ ಚರ್ಮಕ್ಕೆ ತಾರುಣ್ಯವನ್ನು ನೀಡುತ್ತದೆ. ಕಿತ್ತಳೆ ಸಿಪ್ಪೆಯ ಪುಡಿಯು ಹೊಸ ಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸುವಂತೆ ಮಾಡುತ್ತದೆ. ವಾರಕ್ಕೆ 2 ರಿಂದ 3 ಬಾರಿ ಕಿತ್ತಳೆ ಸಿಪ್ಪೆಯ ಪುಡಿಯ ಫೇಸ್ ಪ್ಯಾಕ್‌ ಅನ್ವಯಿಸುವುದರಿಂದ ಯೌವನಯುತವಾದ ಚರ್ಮ ಕಾಂತಿಯನ್ನು ಹೊಂದಬಹುದು.

4.​ಮೊಡವೆ ಮತ್ತು ಕಲೆಯನ್ನು ಹೋಗಲಾಡಿಸುತ್ತದೆ

ಕಿತ್ತಳೆ ಸಿಪ್ಪೆಯ ಪುಡಿಯು ವಿಟಮಿನ್‌ ಸಿಯಲ್ಲಿ ಹೇರಳವಾಗಿದ್ದು, ಇದು ಚರ್ಮದ ಕಾಲಜನ್‌ ಮತ್ತು ಎಲಾಸ್ಟಿನ್‌ ಅನ್ನು ರೂಪಿಸಲು ಉತ್ತೇಜಿಸುತ್ತದೆ. ಕಿತ್ತಳೆ ಸಿಪ್ಪೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ, ಇದು ನಿಮಗೆ ದೋಷರಹಿತ ಚರ್ಮವನ್ನು ನೀಡುತ್ತದೆ. ಅಲ್ಲದೆ, ಮೊಡವೆಗಳನ್ನು ರೂಪಿಸುವ ಬ್ಯಾಕ್ಟೀರಿಯಾಗಳ ಮೇಲೆ ಹೋರಾಡುತ್ತದೆ.

ಮೊಡವೆಗಳಿಂದ ಉಂಟಾದ ಕಲೆಗಳಿಗೆ ಗುಡ್ ಬೈ ಹೇಳುತ್ತದೆ. ಹಾಗಾಗಿ ಕಿತ್ತಳೆ ಹಣ್ಣು ತಿಂದ ನಂತರ ಸಿಪ್ಪೆ ಎಸೆಯದೆ ಸಂಗ್ರಹಿಸಿ.

5.ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ ಹೇಗೆ ತಯಾರಿಸಬೇಕು?

ಕಿತ್ತಳೆ ಹಣ್ಣು ತಿಂದ ಬಳಿಕ ಸಿಪ್ಪೆಯನ್ನು ಸಂಗ್ರಹಿಸಿ. ಪ್ರತಿದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಸುಮಾರು 1 ವಾರಗಳ ಕಾಲ ಒಣಗಿಸಿ. ಅದು ಸಂಪೂರ್ಣವಾಗಿ ಒಣಗಿದ ಸ್ಥಿತಿಗೆ ಬಂದಾಗ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಒಂದು ಬಾಕ್ಸ್‌ನಲ್ಲಿ ಶೇಖರಿಸಿಡಿ.

6.ಕಿತ್ತಳೆೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್‌

ಒಂದು ಬಟ್ಟಲಿನಲ್ಲಿ 1 ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ, ಅದಕ್ಕೆ ಕಾಲ್‌ ಚಮಚ ಹರಿಶಿಣ, 2 ರಿಂದ 3 ಚಮಚ ಮೊಸರು ಬೆರಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಹೀಗೆ ಚೆನ್ನಾಗಿ ಕಲಸಿದ ಮಿಶ್ರಣವನ್ನು ನಿಮ್ಮ ಕುತ್ತಿಗೆ, ತ್ವಚೆಗೆ ಹಚ್ಚಿಕೊಳ್ಳಿ.

ಸುಮಾರು 20 ನಿಮಿಷಗಳು ತ್ವಚೆಯು ಹೀರಿಕೊಳ್ಳಲು ಅವಕಾಶ ಮಾಡಿಕೊಡಿ.

15 ರಿಂದ 20 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಈ ಫೇಸ್ ಪ್ಯಾಕ್‌ ಅನ್ನು ವಾರಕ್ಕೆ 2 ರಿಂದ 3 ಬಾರಿ ಪುನರಾವರ್ತಿಸಿ. ಇದರಿಂದ ನಿಮ್ಮ ಚರ್ಮಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಬದಲಾಗಿ ಯೌವನ ಮತ್ತು ಆರೋಗ್ಯಕರವಾದ ಚರ್ಮ ಸೌಂದರ್ಯವನ್ನು ಪಡೆಯುತ್ತೀರಿ.

****


No comments:

Post a Comment