ಪಂಚಾಮೃತ 🍁
ಪಂಚಾಮೃತಕ್ಕೆ ಮುಖ್ಯವಾಗಿ ಉಪಯೋಗೋಸುವ ದ್ರವ್ಯಗಳು.
ಹಾಲು
ಮೊಸರು
ತುಪ್ಪ
ಜೇನುತುಪ್ಪ
ಸಕ್ಕರಿ
ಯಾವುದೇ ಪದಾರ್ಥಗಳನ್ನ ತಂದ ಮ್ಯಾಲೆ ಶಂಖ ದಿಂದಾ ಶುದ್ದಿಮಾಡಿ ಪದಾರ್ಥಗಲಲ್ಲಿರುವ ದೇವರ ರೂಪಾ ಹಾಗೇ ಪ್ರತಿಮೆ ಗಳಲ್ಲಿ ಇರುವ ದೇವರ ರೂಪ ಒಂದೇ ಅಂತ ಐಖ್ಯ ಚಿಂತನೆ ಮಾಡಬೇಕು.
ಅದನ್ನ ಇಡೋ ಕ್ರಮ ನೋಡೋಣ.
ಮೊದಲಿಗೆ ನೆಲವನ್ನು ಶುದ್ದಿ ಮಾಡಿ ಗೊಮಯ ದಿಂದಾ ಶುದ್ದಿ ಮಾಡಿ ರಂಗೋಲಿ ಹಾಕಿ ಒಂದು ಮಂಡಲ ವನ್ನ ಹಾಕಬೇಕು. ಅದರ ಮ್ಯಾಲೇ ಬಾಳೆಎಲೆ ಅಥವಾ ತಾಮ್ರಾ ಅಥವಾ ಹಿತ್ತಾಲಿ ಅಥವಾ ಬೆಳ್ಳಿ ತಟ್ಟೆ ಇಟ್ಟು ತಂಡುಲ ಹಾಕಿ
ಮಂಡಲ ಮಧ್ಯ ದಲ್ಲಿ ಹಾಲು,
ಪೂರ್ವ ದಲ್ಲಿ ಮೊಸರು,
ದಕ್ಷಿಣ ದಲ್ಲಿ ತುಪ್ಪ,
ಪಕ್ಷಿಮ ದಿಕ್ಕಿನಲ್ಲಿ ಜೇನುತುಪ್ಪ,
ಉತ್ತರ ದಲ್ಲಿ ಸಕ್ಕರಿ,
ಹೀಗೆ ಪಾತ್ರೆ ಗಳಲ್ಲಿ ಆಯಾ ದ್ರವ್ಯ ಗಳನ್ನ ಹೇಳಿದ ದಿಕ್ಕಿನಲ್ಲಿ ಇಡಬೇಕು.
ಹಾಲು ನಲ್ಲಿ ಗೋವಿಂದ
ಮೊಸರು ನಲ್ಲಿ ವಾಮನ
ತುಪ್ಪ ದಲ್ಲಿ ವಿಷ್ಣು
ಜೇನುತುಪ್ಪ ದಲ್ಲಿ ಮಧುಸೂಧನ
ಸಕ್ಕರಿ ನಲ್ಲಿ ಅಚ್ಯುತ
ಹೀಗೆ ಈ ರೂಪಗಳಲ್ಲಿ ಇದ್ದ ದೇವರ ರೂಪವನ್ನ ಹಾಗೇ ಪ್ರತಿಮೇ ಗಳಲ್ಲಿ ಇದ್ದ ದೇವರ ರೂಪ ಒಂದೇ ಅಂದು ಚಿಂತನೆ ಮಾಡಬೇಕು.
ಒಂದುವ್ಯಾಳೆ ಹಣ್ಣುಗಳು, ಡ್ರೈಫ್ರೂಟ್ಸ್, ಕಬ್ಬಿನ ರಸ ಮೊದಲಾದ ಅಂದ್ರೇ ಮ್ಯಾಲೇ ಹೇಳಿದ 5 ಬಿಟ್ಟು ಉಳಿದರಲ್ಲಿ ನಾರಾಯಣ ರೂಪ ಚಿಂತನೆ ಮಾಡಬೇಕು ಉಳಿದದ್ದು ಉಳಿದ ದಿಕ್ಕಿನಲ್ಲಿ ಇಡಬೇಕು.
***
*
No comments:
Post a Comment