Śiśumāra Jayanthi !
Magh Shukla Dwadashi is Known as The Day when the lesser known Incaration of Supreme Lord Shree Sisumara Appeared. This Avatara is Very Rarely Spoken about and The first Person who Brought in light about this avatara was Srimad Madhwacharya, who through his bhagavath Purports Explained in Great Detail about this Avatar of The Supreme Lord. Sisumara Bhagwan is also Been one of the main murtis which are worshipped in daily puja by all the madhwas. In various Writings Madhwacharya explains about this Unique form of the Supreme Lord,This form is also explained in Summary in Srimad Bhagavatham and Vishnu Purana. This Avatar of the Supreme Lord is Very important as He Supports all the Grahas & Nakshatras.
Śiśumāra (शिशुमार) as he is Called is A constellation so called because it is in the form of a Śiśumāra ( a Scropio or a Crocodile like Animal ). It is said to be the starry form of Viṣṇu. At the tail-end of it is Dhruva, which automatically rotates and also makes planets like the Sun and the moon to rotate. Stars follow the self-rotating Dhruva and rotate like a wheel. The Sun and the moon along with stars and planets are bound by the cord of atmosphere to Dhruva.
The basis and support of this constellation of Śiśumāra is Mahāviṣṇu, who is the support of all light and effulgence. Dhruva, son of Uttānapāda came to be installed at the tail-end of Śiśumāra as he had worshipped Viṣṇu. Śiśumāra is dependent upon Viṣṇu, the Lord of all, and Dhruva is dependent upon Śiśumāra. Sūrya is dependent on Dhruva. as this is explained in Viṣṇu Purāṇa, Part 2, Chapter 9. The form is also the system of heavenly bodies supposed to be the yogic form of shree Hari. At the end of the tail is Dhruva and on the tail are other gods like Indra, Agni, Kaśyapa; on its back lies the Ajavīthi and on the stomach the Ganges. Similarly all constellations and planets are seen on the different limbs of its body.
Madhwacharya explains the form in his unqie Tārāmaya; the eternal deity; Uttānapāda is the upper jaw, Yajña is the lower lip, Dharma is the head, heart is Nārāyaṇa, Sādhya and Aśvins front feet, Varuṇa and Aryama is the hind feet, the samvatsara, child; Mitra is Apāna; tail is Agni, Mahendra, Marīci and Kaśyapa and Dhruva; all the planets are centred in Dhruva.
नमामि शिंशोर्मरणाय कारणं पुच्छे ध्रुवं वृश्चिकयोगरूपम् । ज्योतिर्गणैराश्रितदेवमुख्यं भूयो नमाम्येनमखण्डितप्रभुम् ।।
***
ಶಿಂಶುಮಾರ ರೂಪ ಚಿಂತನಾ by narahari sumadhwa
ಮಾಘ ಶುಕ್ಲ ತ್ರಯೋದಶಿ ಶಿಂಶುಮಾರ ಜಯಂತಿ
ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದ ತೊಲಗಿಸುವ |
ಒಲ್ಲೆ ನಾನಿವರ ನಿತ್ಯಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು | ೨೪ |
("ಲಕ್ಷ್ಮೀ ಶೋಭಾನೆ ಪದ 24")
ಶಿಂಶುಮಾರ :. ಶ + ಇಂ + ಶ + ಮಾರ
ಅರ್ಥಾತ್ - ಸುಖ ಜ್ಞಾನ ಪೂರ್ಣರೂಪ. ಯಾರು ಪರಮಾತ್ಮನ ಜ್ಞಾನಾನಂದಮಯ ಎಂದು ತಿಳಿದು ಅರ್ಚಿಸುವರೋ ಅವರ ಪಾಪಗಳನ್ನು ನಾಶಮಾಡಿ ಉದ್ಧರಿಸುವನು.
ಅಶೇಷಜಗದಾದಾರ ಶಿಂಶುಮಾರೋ ಹರಿ: ಪರ: |
ಸರ್ವೇ ಬ್ರಹ್ಮಾವಿದೋ ನತ್ವ ತಂ ಯಾಂತಿ ಪರಮಂ ಪದಂ|
ಪ್ರತಿನಿತ್ಯ ಕಲಶಪೂಜೆಯಲ್ಲಿ ಶಿಂಶುಮಾರನ ಸ್ಮರಿಸಿ ಪೂಜಿಸಬೇಕು.
ನಮೋ ಜ್ಯೋತಿರ್ಲೋಕಾಯ
ಕಾಲಾಯನಾಯಾನಿಮಿಷಾಂ |
ಪತಯೇ ಮಹಾ ಪುರುಷಾಯಾಭಿಧೀಮಹಿ |
ಕಾಲಾಯನಾ - ಎಂದರೆ ಕಾಲನಿಯಾಮಕತ್ವವನ್ನು ಗಮನದಲ್ಲಿಟ್ಟುಕೊಂಡು ಎಲ್ಲರ ಆಯುಷ್ಯಕ್ಕೂ ಶಿಂಶುಮಾರನು ನಿಯಾಮಕನೆನಿಸಿದ್ದಾನೆ.
ಭಾಗವತ ಪಂಚಮ ಸ್ಕಂಧದಲ್ಲಿ ಶಿಂಶುಮಾರನ ಕಾಲನಿಯಾಮಕ ರೂಪದ ಪ್ರಸ್ಥಾಪವಿದೆ. ಶಿಂಶುಮಾರ ಅಂದರೆ ಚೇಳಿನ ಆಕಾರದ ಪರಮಾತ್ಮ ರೂಪ. ಮೈಯನ್ನು ಸುರುಳಿಯಾಗಿ ಸುತ್ತಿ ತಲೆಕೆಳಗಾಗಿ ನಿಂತು ಚೇಳಿನ ಆಕಾರದಲ್ಲಿ ಆಕಾಶದಲ್ಲಿ ಕಾಣುವ ಜ್ಯೋತಿರ್ಮಂಡಲವೇ ಶಿಂಶುಮಾರ ಚಕ್ರ. ಇದರ ಬಾಲದ ತುದಿಯಲ್ಲಿ ಧ್ರುವಮಂಡಲವಿದೆ.
ಶಿಂಶುಮಾರ ತನ್ನ ಬಾಲದ ತುದಿಯಲ್ಲಿ ಇಡೀ ವಿಶ್ವವನ್ನು ಧರಿಸಿದ್ದಾನೆ.
ಶಿಂಶುಮಾರ ಚಕ್ರದ ಉಳಿದ ಅಂಗಗಳಲ್ಲಿ ನವಗ್ರಹಗಳೂ, ಎಲ್ಲಾ 28 ದೊಡ್ಡ ನಕ್ಷತ್ರಗಳೂ ಆಶ್ರಯಿಸಿವೆ. ಉಳಿದ ನಕ್ಷತ್ರಗಳು ರೋಮದಲ್ಲಿ ಆಶ್ರಯಿಸಿವೆ. ಈ ಎಲ್ಲಾ ನಕ್ಷತ್ರಗಳ ಗ್ರಹಗಳ ಗತಿಯನ್ನು ಶಿಂಶುಮಾರ ಚಕ್ರ ನಿಯಂತ್ರಿಸುತ್ತದೆ.
ಶಿಂಶುಮಾರನ ಮಗಳು ಭ್ರಮಿ ಮತ್ತು ವಾಯುದೇವರ ಮಗಳು ಇಳಾಳನ್ನು ಧ್ರುವರಾಜ ಮದುವೆಯಾದ.
ಬ್ರಹ್ಮಾದಿ ಸಕಲ ದೇವತೆಗಳ ಆಯಸ್ಸು ಅಧೀರ್ಘ ಎಂದರೆ ಶಾಶ್ವತವಲ್ಲ. ಆದ್ದರಿಂದ ಅವರ್ಯಾರೂ ತನಗೆ ಬೇಡವೆನ್ನುತ್ತಾಳೆ ಲಕ್ಷ್ಮೀ. ಶ್ರೀಹರಿ ಮತ್ತು ಮಹಾಲಕ್ಷ್ಮಿ ಇಬ್ಬರೂ ಅನಾದಿನಿತ್ಯರು, ನಿತ್ಯ ಮುಕ್ತರು, ಅವರಿಗೆ ಕಾಲಬಂಧವಿಲ್ಲ.
ಶಿಂಶುಮಾರ - ಅರ್ಧ ದೇಹ ಪುರುಷಾಕಾರ, ಅರ್ಧ ದೇಹ ಚೇಳಿನಾಕೃತಿ. ಚೇಳಿನ ಆಕಾರದ ಬಾಲ ಮೇಲಿದೆ. ಭಗವಂತ ಮುಖ ಕೆಳಗೆ ಮಾಡಿದ್ದಾನೆ . ಶಿಂಶುಮಾರ ಎಂದರೆ ಸಾಕ್ಷಾತ್ ಕಾಲಪುರುಷನಾದ ಶ್ರೀಮನ್ನಾರಾಯಣನೇ ಆಗಿದ್ದಾನೆ. ನಭೋಮಂಡಲದಲ್ಲಿ ಆಶ್ವಿನ್ಯಾದಿ ಮಹಾ ಮಂಡಲ ಕಾಣುವುದು, ಹೀಗಾಗಿ ಶಿಂಶುಮಾರ ಎಂದರೆ ‘ಚೇಳು’ ಎಂಬ ರೂಪದಿಂದಲೇ ಜ್ಯೋತಿರ್ಮಂಡಲ ಅಧಿಪನಾಗಿದ್ದಾನೆ. ನವಗ್ರಹಗಳು ಮತ್ತು ನಕ್ಷತ್ರ ಮಂಡಲವು ಇವನ ಅಧೀನ. ಇದು ಸಾಕ್ಷಾತ್ ಶ್ರೀ ವಿಷ್ಣುವಿನ ರೂಪ. ಚೇಳಿನ ರೂಪದ ಅವತಾರೆ. ಬಾಲದ ತುದಿಯಲ್ಲಿ ಧ್ರುವತಾರೆಗೆ ಆಶ್ರಯ ಕೊಟ್ಟಿರುವನು.
ಶಿಂಶುಮಾರ ನಭೋಮಂಡಲದಲ್ಲಿ ಅತ್ಯಂತ ಎತ್ತರದ, ಮತ್ತು ಎಲ್ಲಾ ಗ್ರಹಗಳಿಗೂ ಉನ್ನತ ಸ್ಥಾನದಲ್ಲಿದ್ದಾನೆ.
ಪ್ರತಿನಿತ್ಯ ಸಪ್ತರ್ಷಿಗಳು ಶಿಂಶುಮಾರನ ಪ್ರದಕ್ಷಿಣೆ ಮಾಡುತ್ತಾರೆ.
ಇಂದು ರಂಗಾನಟ್ಟೂಳಿಗೆ ಎಂಬ ದೇವರನಾಮದಲ್ಲಿ ಶ್ರೀ ವ್ಯಾಸವಿಠಲರು ಶಿಂಶುಮಾರನ ಹೀಗೆ ಸ್ಮರಿಸಿದ್ದಾರೆ....
ಮ್ಯಾಣದ ಚೇಳು ತೋರುವೆ |
ಜಾಣ ರಂಗ ಅಂಜಾನಮ್ಮಮೇಣು ಮೂವತ್ತಾರು ಲಕ್ಷ | ತಾಂ ಶಿಂಶುಮಾರಾನಮ್ಮ |8|
--- ವ್ಯಾಸವಿಠ್ಠಲರು
ಎಂದೂ ಪತಿವಿಯೋಗವಿಲ್ಲದೆ ನಿತ್ಯಮುಕ್ತಳಾಗಿ ನಿತ್ಯಮುತ್ತೈದೆಯಾಗಿ ಇರುವುದರಿಂದ "ಒಲ್ಲೆ ನಾನವರ" ಎಂದು ಎಲ್ಲಾ ದೇವತೆಗಳೂ ಕಾಲಪ್ರೇರಿತರಾಗಿ ಮರಣವಿರುವುದರಿಂದ ಅವರಾರೂ ಬೇಡವೆಂದಳು.
ಬಲ್ಲವರೆನ್ನ ಭಜಿಸುವರು - ಬಲ್ಲವರು ಅಂದರೆ ಜ್ಞಾನಿಗಳು ಅರ್ಥಾತ್ ಋಷಿಮುನಿಗಳು
ಸಂಗ್ರಹ : ನರಹರಿ ಸುಮಧ್ವ
***
ಶಿಂಶುಮಾರ ಎನ್ನುವುದು ಭಗವಂತನ ಸಾಕ್ಷಾತ್ *ಅವತಾರ
ಇಡೀ ನಕ್ಷತ್ರ ಮಂಡಲವನ್ನು ಈ ರೂಪದಿಂದ ಭಗವಂತನು ಧಾರಣೆ ಮಾಡಿದ್ದಾನೆ.
ಬಾಲದ ತುದಿಯಲ್ಲಿ ಧೃವ ಮಂಡಲವನ್ನೂ, ಬಲಭಾಗದಲ್ಲಿ ಉತ್ತರಾಯಣ ನಕ್ಷತ್ರಗಳನ್ನೂ, ಎಡಭಾಗದಲ್ಲಿ ದಕ್ಷಿಣಾಯನ ನಕ್ಷತ್ರಗಳನ್ನು ಧಾರಣೆ *ಮಾಡಿರುವ ಚೇಳಿನರೂಪ
ಮುಂದೆ ಇರುವ ಕೊಂಡಿಗಳು *ಮೇರು ಪರ್ವತದ ಮೇಲಿರುವ ಬ್ರಹ್ಮದೇವರ ಸಭೆಯ ಹತ್ತಿರ ಇರುತ್ತದೆ.
ಸಪ್ತ ಋಷಿಗಳ ಮಂಡಲ, ತ್ರಿಶಂಕು ಸ್ವರ್ಗವೂ ಕೂಡ ಭಗವಂತನ ಈ ರೂಪವನ್ನು *ಆಶ್ರಯ ಮಾಡಿಕೊಂಡಿವೆ.
ಈ ರೀತಿಯಲ್ಲಿ ಬೆಳಿಗ್ಗೆ ಮತ್ತು *ಸಂಜೆ ಯಾರು ಚಿಂತನೆ ಮಾಡುತ್ತಾರೋ ಅವರು ಅಂದಂದಿನ ಪಾಪವನ್ನು *ಅಂದೇ ಕಳೆದುಕೊಂಡು ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.
ಶ್ರೀ ಕೃಷ್ಣಾರ್ಪಣಮಸ್ತು.🙏🏻🙏🏻🙏🏻🙏🏻
ಯಸ್ಯ ಪುಚ್ಛಾಗ್ರೇsರ್ವಾಕ್ ಶಿರಸಃ ಕುಂಡಲೀಭೂತದೇಹಸ್ಯ ಧ್ರುವ ಉಪಕಲ್ಪಿತಸ್ತಸ್ಯ ಲಾಂಗಲೇ ಪ್ರಜಾಪತಿರಗ್ನರಿಂದ್ರೋ ಧರ್ಮ ಇತಿ||
ಪುಚ್ಛಮೂಲೇ ಧಾತಾ ವಿಧಾತಾ ಚ ಕಟ್ಯಾಂ ಸಪ್ತರ್ಷಯಸ್ತಸ್ಯ ದಕ್ಷಿಣಾವರ್ತಕುಂಡಲೀ ಭೂತಶರೀರಸ್ಯ ಯಾನ್ಯುದಗಯನಾನಿ ದಕ್ಷಿಣಪಾರ್ಶ್ವೇ ತು ನಕ್ಷತ್ರತ್ರಾಣಿ ಉಪಕಲ್ಪಯಂತಿ ||
ದಕ್ಷಿಣಾಯನಾನಿ ತು ಸವ್ಯೇ ಯಥಾ ಶಿಂಶುಮಾರಸ್ಯ ಕುಂಡಲೀಭೋಗಸನ್ನಿವೇಶಸ್ಯ ಪಾರ್ಶ್ವಯೋರುಭಯೋರಪ್ಯವಯವಾಃ ಸಮಸಂಖ್ಯಾ ಭವಂತಿ||
ಪೃಷ್ಠೇ ತ್ವಜವೀಥೀ ಆಕಾಶಗಂಗಾ ಚೋತ್ತರತಃ ಪುನರ್ವಸುಪುಷ್ಯೌ ದಕ್ಷಿಣವಾಮಯೋಃ ಶ್ರೋಣ್ಯೋರಾರ್ದ್ರಾsಶ್ಲೇಷಾ ಚ ದಕ್ಷಿಣವಾಮ ಪಾದಯೋರಭಿಜಿದುತ್ತರಾಷಾಢೇ ಚ ದಕ್ಷಿಣವಾಮಯೋಃ ನಾಸಿಕಯೋರ್ಯಥಾಸಂಖ್ಯಂ ಚ ಶ್ರವಣಪೂರ್ವಾಷಾಢೇ ಚ ದಕ್ಷಿಣವಾಮಯೋರ್ಲೋಚನಯೋರ್ಧನಿಷ್ಠಾಮೂಲಂ ಚ ದಕ್ಷಿಣವಾಮಯೋಃ ಕರ್ಣಯೋರ್ಮಘಾದೀನ್ಯಷ್ಟನಕ್ಷತ್ರಾಣಿ ದಕ್ಷಿಣಾಯನಾನಿ ವಾಮಪಾರ್ಶ್ವಪಂಕ್ತಿಷುಯುಂಜೀತ||
ತಥೈವ ಮೃಗಶೀರ್ಷಾದೀನ್ಯುದಗಯನಾನಿ ದಕ್ಷಿಣಪಾರ್ಶ್ವೇಷು ಪ್ರಾತಿಲೋಮ್ಯೇನ ಪ್ರತಿಯುಂಜೀತ||
ಶತಭಿಷಜ್ಯೇಷ್ಠೇ ದ್ವೇ ಸ್ಕಂದಯೋರ್ದಕ್ಷಿಣವಾಮಯೋರ್ನ್ಯಸೇತ್ ||
ಉತ್ತರಹನಾವಗಸ್ತ್ಯಃ ಅಧರಹನೌ ಯಮೋ ಮುಖೇ ಚಾಂಗಾರಕಃ ಶನೈಶ್ಚರ ಉಪಸ್ಥೇ ಬೃಹಸ್ಪತಿಃ ಕಕುದಿ ವಕ್ಷಸ್ಯಾದಿತ್ಯೋ ಹೃದಯೇ ನಾರಾಯಣೋ ಮನಸಿ ಚಂದ್ರೋ ನಾಭ್ಯಾಮುಶನಾಃ ಸ್ತನಯೋರಶ್ವಿನೌ ಬುಧಃ ಪ್ರಾಣಾಪಾನಯೋ ರಾಹುರ್ಗಲೇ ಕೇತವಃ ಸರ್ವಾಂಗೇಷು ರೋಮಸು ಸರ್ವೇ ತಾರಾಗಣಾಃ||
ಏತದುಹೈವ ಭಗವತೋ ವಿಷ್ಣೋಃ ಸರ್ವದೇವತಾಮಯಂ ರೂಪಂ ಅಹರಹಃ ಸಂಧ್ಯಾಯಾಂ ಪ್ರಯತೋ ವಾಗ್ಯತೋ ನಿರೀಕ್ಷ್ಯಮಾಣ ಉಪತಿಷ್ಠೇತ ನಮೋ ನಮೋ ಜ್ಯೋತಿರ್ಲೋಕಾಯ ಕಾಲಾಯನಾಯಾನಿಮಿಷಾಂ ಪತಯೇ ಮಹಾಪುರುಷಾಯ ಧೀಮಹೀತಿ||
ಗ್ರಹರ್ಕ್ಷತಾರಾಮಯಮಾಧಿದೈವಿಕಂ ರೂಪಂ ಹರೇರ್ಮಂತ್ರಕೃತಸ್ತ್ರಿಕಾಲಂ| ನಮಸ್ಕೃತಃ ಸಂಸ್ತುವತೋ ನಶ್ಯತೇ ವೈ ಸ್ವಯಂ ತ್ರಿಕಾಲಂ ಕೃತಮಾಶು ಪಾಪಂ||
ಇದು ಶ್ರೀಮದ್ಭಾಗವತದ ಪಂಚಮಸ್ಕಂದದಲ್ಲಿ ಬರುವ ಶ್ರೀಶಿಂಶುಮಾರರೂಪಿ ಪರಮಾತ್ಮನ ಸ್ತೋತ್ರ ಇದನ್ನ ಇವತ್ತು ಮಾತ್ರ ಅಲ್ಲಾ ಪ್ರತಿನಿತ್ಯ ತ್ರಿಕಾಲದಲ್ಲೂ ಯಾರು ತಪ್ಪದೇ ಭಕ್ತಿಯಿಂದ ಹೇಳುತ್ತಾರೋ ಅವರ ಜಾತಕದಲ್ಲಿರುವ , ಸಾಡೇಸಾಥಿ , ಪಂಚಮ ಶನಿ , ಅಷ್ಟಮ ಶನಿ , ಅರ್ಧಕಾಳಸರ್ಪಯೋಗ , ಸಂಪೂರ್ಣಕಾಳಸರ್ಪಯೋಗ ,ಕುಜ-ರಾಹು ಸಂಧಿ , ಗುರುಚಾಂಡಾಲ ಯೋಗ , ಹೀಗೆ ಎಲ್ಲ ತರಹದ ದೋಷಗಳು ನಿವಾರಣೆಯಾಗಿ ತ್ರಿವಿಧತಾಪತ್ರಯಗಳೂ ನಿವಾರಣೆಯಾಗಿ ಭವಿಷ್ಯತ್ತಿನಲ್ಲಿ ಅವರು ಮನಸ್ಸಲ್ಲಿ ಅನ್ಕೊಂಡ ಸಕಲ ಕಾರ್ಯಗಳೂ ಶ್ರೀಶಿಂಶುಮಾರರೂಪಿ ಪರಮಾತ್ಮನ ಪರಮಾನುಗ್ರಹದಿಂದ ಶೀಘ್ರದಲ್ಲಿ ಕೈಗೂಡುತ್ತವೆ . ಅಲ್ಲದೇ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಅವೆಲ್ಲವೂ ಶೀಘ್ರದಲ್ಲಿ ಪರಿಹಾರವಾಗಿ ಉತ್ತಮ ಆಯುರಾರೋಗ್ಯವಂತರಾಗಿ ಬಾಳುತ್ತಾರೆ .
ಇದೆಲ್ಲವನ್ನೂ ಅನ್ನಲು ಅನಾನುಕೂಲವಾದಾಗ-
ನಮೋ ಜ್ಯೋತಿರ್ಲೋಕಾಯ ಕಾಲಾಯನಾಯಾನಿಮಿಷಾಂ ಪತಯೇ ಮಹಾ ಪುರುಷಾಯ ಧೀಮಹಿ|| ಈ ಶ್ಲೋಕವನ್ನಾದರೂ ಹೇಳಬೇಕು . 🙏🏻🙇♂️ ಹರೇ ಶ್ರೀನಿವಾಸಾ 🙇♂️🙏🏻
ಸಕಲ ಸದ್ಭಕ್ತರಿಗೂ ಶ್ರೀಶಿಂಶುಮಾರರೂಪಿ ಭಗವಂತನು ಉತ್ತಮ ಆಯುರಾರೋಗ್ಯ ದಯಪಾಲಿಸಿ ಸತತವಾಗಿ ಧರ್ಮಕಾರ್ಯಗಳಲ್ಲಿ ನಮ್ಮನ್ನು ಪ್ರೇರೇಪಿಸುತ್ತಿರಲಿ ಎಂದು ಅಸ್ಮದ್ಗುರ್ವಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಅಸ್ಮತ್ಕುಲದೇವತಾ ಶ್ರೀಕಲ್ಹಳ್ಳಿಲಕ್ಷ್ಮೀವೇಂಕಟೇಶಾಭಿನ್ನ ಶ್ರೀಲಕ್ಷ್ಮೀಶಿಂಶುಮಾರ ರೂಪಿ ಭಗವಂತನಲ್ಲಿ ಭಕ್ತಿಪೂರ್ವಕ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾ ಪ್ರಾರ್ಥಿಸಿಕೊಳ್ಳುವೆ.
(received in whatsapp)
***
ಶಿಂಶುಮಾರ ಸ್ತೋತ್ರ
ನಾಭೇರಧಸ್ಥಾನ್ಮಕರಾಕೃತಿಂ ವಿಭುಂ ತದೂರ್ಧ್ವಭಾಗೇ ವಿಲಸನ್ನೃಕಾಯಮ್ ಸ್ವಪುಚ್ಛದೇಹಾಶ್ರಿತಚಂದ್ರಸೂರ್ಯ ನಕ್ಷತ್ರತಾರಾಧ್ರುವಮಂಡಲಾಕೃತಿಮ್
ಪುತ್ರಾದಿಸರ್ವೇಷ್ಟದಮಿಂದಿರೇಶಂ ನತೋಸ್ಮಿ ಮೇಶಂ ಹೃದಯಿ ಶಿಂಶುಮಾರಮ್
ಧ್ಯಾಯೇದಜೇಶಂ ಲೋಕೇಶಂ ಧ್ರುವಮಂಡಲಮಾಶ್ರಿತಮ್
ಅಂಶುಮಾರಂ ಶಿಂಶುಮಾರಂ ಮಂಡಲಂ ಕುಂಡಲಾಕೃತಿಮ್
ಈ ಸ್ತೋತ್ರ ಪಠಣೆ / ಪಾರಾಯಣದಿಂದ ಸಕಲಗ್ರಹ ದೋಷ ನಿವೃತ್ತಿ ಆಗುತ್ತೆ
***
ಶಿoಶುಮಾರ ಪ್ರತಿಮೆ ಎಂದರೆ ಯಾವುದು?
2. ಸಾಲಿಗ್ರಾಮ ಅಭಿಷೇಕ ಅದ ನಂತರ ಬಟ್ಟೆಯಲ್ಲಿ ಒರೆಸಬಾರದೇ??
ಸಾಲಿಗ್ರಾಮಕೆ ಹಾಲು &ನೀರಿನಲ್ಲಿ ಶಂಖದಿಂದ ಅಭಿಷೇಕ ಮಾಡಿ &ತುಪ್ಪ, ಜೇನು ತುಪ್ಪ, ಸಕ್ಕರೆ ಇವುಗಳ್ಳನ್ನು ಪಂಚಾಪಾತ್ರೆ /ಬೇರೆ ಪಾತ್ರೆಯ ಸಹಾಯದಿಂದ ಮಾಡಬಹುದೇ?
3. ಚಕ್ರಅಂಕಿತದಲ್ಲಿ ಯಾರ ಸನ್ನಿದಾನವಿದೆ?
ಅನ್ಯತಾ ಭಾವಿಸದೆ ದಯವಿಟ್ಟು ತಿಳಿಸಿ ಕೊಡಿ?🙏🏼🙏🏼🙏🏼
ಸಾಕ್ಷತ್ ನಾರಯಣನ ರೂಪ ಶಿಂಶುಮಾರ . ಪ್ರತಿಮೆಯ ನಾಭಿಯ ಪ್ರದೇಶದ ವರೆವಿಗೂ ಚೇಳುಗಳು ಸುತ್ತಿಕೊಂಡಿ ರುತ್ತದೆ ನಮೋ ನಮೋ ಜ್ಯೋತಿರ್ಲೋಕಾಯ ಕಾಲಾಯನಾಯ ಅನಿಮಿಷಾಂ ಪತಯೇ ಮಹಾಪುರುಷಾಯ ಧೀಮಹಿ ಎಂದು ಶಿಂಶುಮಾರನ ಚಿಂತನೆಯ ಈ ಮಂತ್ರವನ್ನು ಶ್ರೀ ವೇದವ್ಯಾಸ ದೇವರು ಶ್ರೀ ಭಾಗವತದಲ್ಲಿ ಹೇಳಿದ್ದಾರೆ . ಕಲಶ ಪೂಜೆಯ ಸಂದರ್ಭದಲ್ಲಿ ಶಿಂಶುಮಾರ ದೇವರನ್ನ ಆವಾಹನೆ ಮಾಡಬೇಕು ಶಿಂಶುಮಾರಾದಿಕಾನ್ ಪೂರ್ಣೆ ಆಹ್ವಯೇತ್ ಕಲಶೇಸುಧೀ:ಅಜಾದಿಮೂರ್ತಿಭಿ:ಪ್ರಾಜ್ಞೋ ಹ್ಯಭಿಷೇಕಂ ಸಮಾಚರೇತ್ ಎಂದು ಪೂಜಾಕಲ್ಪದಲ್ಲಿ ಹೇಳಿದ್ದಾರೆ . ಸಾಲಿಗ್ರಾಮ ಅಭಿಷೇಕವಾದ ಮೇಲೆ ಒರೆಸಿಡುವುದು ಕೇವಲ ವಸ್ರದಿಂದ ಒತ್ತಿ ಇಡುವುದು ಕೆಲವು ಶಿಷ್ಟಾಚಾರ ಸಂಪ್ರದಾಯಗಳಲ್ಲಿ ಬಂದಿದೆ. ಪ್ರತಿಮೆಗಳನ್ನು ಮಾತ್ರ ಒರೆಸಬೇಕು ಸಾಲಿಗ್ರಾಮ ಒರೆಸ ಬಾರದು . ಪ್ರತಿಮಾಮಾರ್ಜನಂ ಕುರ್ಯಾತ್ ಸಾಲಿಗ್ರಾಮ ನೈವ ತತ್ ಸಾಲಿಗ್ರಾಮಾಭಿಷೇಕಂ ತು ಕೃತ್ವಾ ವಸ್ರೇಣ ಮಾರ್ಜನಮ್ ಯ:ಕರೋತಿ ನರೋ ಮೂಢೋ ಘೋರಾಂಧನರಕಂ ವ್ರಜೇತ್ ಎಂದು(ಪಂಚಸಂಸ್ಕಾರ ಸಂಗ್ರಹದಲ್ಲಿ ಹೇಳಿದ್ದಾರೆ) ಉಡುಪಿಯ ಕೆಲವರು ಸಾಲಿಗ್ರಾಮ ಒರೆಸುವುದಿಲ್ಲಾ. ಶಂಖೇನ ಸ್ನಪನಂ ವಿಷ್ಣೋ: ಬ್ರಹ್ಮಹತ್ಯಾ ಶತಂದಹೇತ್ ಎಂದು ಪದ್ಮಪುರಾಣದಲ್ಲಿ ಶಂಖದಿಂದ ಮಾಡುವ ಅಭಿಷೇಕದ ಮಾಹಾತ್ಮೆ 100 ಬ್ರಹ್ಮಹತ್ಯೆಯ ಪಾಪಪರಿಹಾರ ವಾಗುತ್ತದೆ ಎಂದು ಹೇಳಿದ್ದಾರೆ ಕ್ಷೀರಾದಿ ಗಂಗಾತೀರ್ಥಂ ವಾ ತ್ರೈಲೋಕ್ಯಂ ತೀರ್ಥವಾರ್ಯಪಿ ಶಂಖೇ ಕೃತ್ವಾ ಸ್ನಾಪನಂಸ್ಯಾದನ್ಯಥಾ ನಿಷ್ಪಲಂ ಭವೇತ್ ಎನ್ನುವುದು ಸಂಗ್ರಹ ದಲ್ಲಿ ಹೇಳಿದ್ದಾರೆ ಸಕಲದೋಷದೂರನಾದ ಸರ್ವನಿಯಾಮಕನಾದ ಭಗವಂತನಿಗೆ ಸಕಲವಿಧ ವಿಧ ಪೂಜೆ ಅಭಿಷೇಕ ಮಾಡಿಸುವವಳು ಶ್ರೀ ಮಹಾಲಕ್ಷ್ಮಿದೇವಿಯರು ಶಂಖದಲ್ಲಿ ಶ್ರೀ ಮಹಾಲಕ್ಷ್ಮಿ ಯ ಸನ್ನಿಧಾನ ವಿಶೇಷವಾಗಿರುವು ದರಿಂದ ಶ್ರೀಮಹಾಲಕ್ಷಿಯೇ ಭಗವಂತನಿಗೆ ಅಭಿಷೇಕ ಮಾಡಿಸುತ್ತಿದ್ದಾಳೆ ಎಂಬ ಅನುಸಂಧಾನದಿಂದ ತುಪ್ಪ ಜೇನುತುಪ್ಪ ಮೊದಲಾದ ಬೇರೆ ಪಾತ್ರೆಗಳನ್ನು ಶಂಖಕ್ಕೆ ಮುಟ್ಟಿಸಿ ಅಭಿಷೇಕ ಮಾಡಬಹುದು. ಸಾಲಿಗ್ರಾಮದಲ್ಲಿ ಸ್ವಯಂವ್ಯಕ್ತ ಭಗವಂತನ ವಿಶೇಷ ಸನ್ನಿಧಾನ ವಿರುವಂತೆ ಚಕ್ರಾಂಕಿತ ದಲ್ಲಿಯೂ ಸಾಕ್ಷಾತ್ ಭಗವಂತನ ಸನ್ನಿಧಾನವೇ ಇರುತ್ತದೆ ಶ್ರೀ ಕರಿಗಿರೀಶಾಯನಮ:
ತತ:ಸ್ನಾಪ್ಯ ಹರಿಂಯಸ್ತು ವಸ್ರೇಣ ಪರಿಮಾರ್ಜಯೇತ್ ತಸ್ಯ ಜನ್ಮಾರ್ಜಿತಸ್ಯಾಪಿ ಲಭತೇ ಪಾಪಮಾರ್ಜನಂ ಎನ್ನುವ ಪ್ರಮಾಣಾನುಸಾರ ಅಭಿಷೇಕಮಾಡಿದ ಶ್ರೀ ಹರಿಯ ಪ್ರತಿಮೆ (ಕೆಲವರು ನಿತ್ಯಸನ್ನಿಧಾನವಿರುವ ಸ್ವಯಂವ್ಯಕ್ತ ಶ್ರೀಹರಿಯ ಸಾಲಿಗ್ರಾಮ) ವನ್ನುವಸ್ರದಿಂದ ಒರೆಸುವವ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳೆಲ್ಲವನ್ನು ಕಳೆದುಕೊಳ್ಳುವನು ಎನ್ನುತ್ತಾರೆ .ಕೃಷ್ಣಾಮೃತಮಹಾರ್ಣವ 104 ನೇ ಶ್ಲೋಕ ಸಾಲಗ್ರಾಮೋದ್ಬವೋ ದೇವೊ ದೇವೊ ದ್ವಾರಾವತೀ ಭವ ಉಭಯೋ ಸ್ನಾನತೋಯೇನ ಬ್ರಹ್ಮಹತ್ಯಾಂ ವ್ಯಪೋಹತಿ ಎಂದು ಜೀವೋತ್ತಮರಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಹೇಳುತ್ತಾರೆ ಸಾಲಿಗ್ರಾಮದಲ್ಲಿ ಸನ್ನಿಹಿತನಾದ ವಿಷ್ಣು ಹಾಗೂ ದ್ವಾರಕೆಯಲ್ಲಿ ದೊರೆಯುವ ಚಕ್ರಾಂಕಿತಗಳಲ್ಲಿ ಸನ್ನಿಹಿತನಾದ ವಿಷ್ಣು ಇವರಿಬ್ಬರ ಅಭಿಷೇಕದ ಜಲದಿಂದ ಬ್ರಹ್ಮಹತ್ಯೆ ಪರಿಹಾರವಾಗುವುದು ( ಚಕ್ರಾಂಕಿತಗಳೊಂದಿಗೆ ಸಾಲಿಗ್ರಾಮದ ಪೂಜೆಯು ವಿಹಿತ ಎಂದರ್ಥ ಇಲ್ಲಿ ದ್ವಾರಾವತೀ ಭವ: ಎಂದರೆ ದ್ವಾರಕೆಯಲ್ಲಿ ದೊರೆಯುವ ಚಕ್ರಾಂಕಿತಗಳಲ್ಲಿ ಸನ್ನಿಹಿತನಾದ ವಿಷ್ಣು ಎಂದರ್ಥ ಶ್ರೀ ಕರಿಗಿರೀಶಾಯನಮ:
(whatsApp)
No comments:
Post a Comment