MP Tejasvi Surya singing song on Vivekananda 2023
Info from speaking tree.in
Born: January 12, 1863
Died: July 4, 1902
Achievements: Played a major role in spiritual enlightenment of Indian masses; Spread Vedanta philosophy in the West; established Ramakrishna Mission for the service of the poor.
Swami Vivekananda was one of the most influential spiritual leaders of Vedanta philosophy. He was the chief disciple of Ramakrishna Paramahansa and was the founder of Ramakrishna Mathand Ramakrishna Mission. Swami Vivekananda was the living embodiment of sacrifice and dedicated his life to the country and yearned for the progress of the poor, the helpless and the downtrodden.
He showed a beacon of light to a nation that had lost faith in its ability under British rule and inspired self-confidence among Indians that they are second to none. His ringing words and masterful oratory galvanized the slumbering nation.
Swami Vivekananda real name was Narendranath Dutta. He was born on January12, 1863 in Calcutta. His father's name was Vishwanath Dutta and his mother's name Bhuvaneswari Devi. Narendranath acquired the name of Swami Vivekananda when he became a monk.
As a child Narendra was very lively and naughty. He was good in studies as well as in games. He studied instrumental and vocal music and also practiced meditation from a very early age. Even when Narendra was young he questioned the validity of superstitious customs and discrimination based on caste and religion. As a child Narendra had great respect for sanyasis (ascetics). He would give away anything to anybody if asked for. Whenever a beggar asked for alms, he would give him anything he had. Thus from childhood Narendra had the spirit of sacrifice and renunciation.
In 1879, Narendra passed matriculation and entered Presidency College, Calcutta. After one year, he joined the Scottish Church College, Calcutta and studied philosophy. He studied western logic, western philosophy and history of European nations. As he advanced in his studies, his thinking faculty developed. Doubts regarding existence of God started to arise in Narendra's mind. This made him associate with the Brahmo Samaj, an important religious movement of the time, led by Keshab Chandra Sen. But the Samaj's congregational prayers and devotional songs could not satisfy Narendra's zeal to realise God.
During this time Narendra came to know of Sri Ramakrishna Pramahans of Dakshineswar. Sri Ramakrishna was a priest in the temple of Goddess Kali. He was not a scholar. But he was a great devotee. It was being said of him that he had realized God. Once, Narendra went to Dakshineswar to with his friends see him. He asked Ramakrishna, whether he had seen God. The instantaneous answer from Ramakrishna was, "Yes, I have seen God, just as I see you here, only in a more clear sense." Narendra was astounded and puzzled. He could feel the man's words were honest and uttered from depths of experience. He started visiting Ramakrishna frequently.
It was in Narendra's nature to test something thoroughly before he could accept it. He would not accept Ramakrishna as his guru without a test. Ramakrishna used to say that, in order to realize God, one should give up the desire for money and women. One day Narendra hid a rupee under his pillow. Sri Ramakrishna, who had gone out, came into the room and stretched himself on the cot. At once he jumped up as if bitten by a scorpion. When he shook the mattress, the rupee coin fell down. Later he came to know that it was the doing of Narendra. Narendra accepted Sri Ramakrishna as his guru and took training under him for five years in the Advaita Vedanta, the philosophy of non-dualism. Sri Ramakrishna passed away in 1886 and nominated Narendra as his successor. After his death Narendra and a core group of Ramakrishna's disciples took vows to become monks and renounce everything, and started living in a supposedly haunted house in Baranagore.
In 1890, Narendra set out on a long journey. He covered the length and breadth of the country. He visited Varanasi, Ayodhya, Agra, Vrindavan, Alwar etc. Narendra acquired the name of Swami Vivekananda during the journey. It is said that he was given the name Vivekananda by Maharaja of Khetri for his discrimination of things, good and bad. During his journey, Vivekananda stayed at king's palaces, as well as at the huts of the poor. He came in close contact with the cultures of different regions of India and various classes of people in India. Vivekananda observed the imbalance in society and tyranny in the name of caste. He realised the need for a national rejuvenation if India was to survive at all.
Swami Vivekananda reached Kanyakumari, the southernmost tip of the Indian subcontinent on December24, 1892. He swam across the sea and started meditating on a lone rock. He meditated for three days and said later that he meditated about the past, present and future of India. The rock is presently popular as Vivekananda memorial and is a major tourist destination.
In 1893, Swami Vivekananda went to America to attend the Conference of World Religions in Chicago. He earned wild applause for beginning his address with the famous words, "Sisters and brothers of America." Swamiji mesmerized everyone in America with his masterful oratory. Wherever he went, he dwelt at length on the greatness of Indian Culture. He spoke with spontaneous ease on every topic, be it History, Sociology, Philosophy or Literature. He deplored the malicious propaganda that had been unleashed by the Christian missionaries in India. Swami Vivekananda also went to England. Many people became his disciples. Most famous among them was Margaret Nivedita'. She came to India and settled here.
Swami Vivekananda returned to India in 1897 after four years of touring in the West. He started disseminating the message of spiritual development among Indians. He realized that social service was possible only through the concerted efforts on an organized mission. To achieve this objective, Swami Vivekananda started Sri Ramakrishna Mission in 1897 and formulated its ideology and goal. During the next two years he bought a site at Belur on the banks of the Ganga, constructed the buildings and established the Ramakrishna Mutt. He once again toured the West from January 1899 to December 1900.
Swami Vivekananda died on July4, 1902 at Belur Mutt near Calcutta.
************
A Monk of the Ramakrishna Mission was being interviewed by a journalist from NY. The journalist started
interviewing the Monk as planned earlier.
Journalist - "Sir, in your last lecture, you told us about "Contact" and "Connection." It's really confusing. Can you explain?"
The Monk smiled and apparently deviating from the question asked the journalist:
"Are you from New York?"
Journalist: "Yeah..."
Monk: "Who are there at home?"
The Journalist felt that the Monk was trying to avoid answering his question since this was a very personal and unwarranted question. Yet the journalist said: "Mother had expired. Father is there. Three brothers and one sister. All married..."
The Monk, with a smile on his face, asked again: "Do you talk to your father?"
The journalist looked visibly annoyed...
The Monk: "When did you talk to him last?"
The journalist, supressing his annoyance said: "May be a month ago."
The Monk: "Do you brothers and sisters meet often? When did you meet last as a family gathering?"
At this point, sweat appeared on the forehead of the journalist.
It seemed that the Monk was interviewing the Journalist.
With a sigh, the Journalist said: "We met last at Christmas two years ago."
The Monk: "How many days did you all stay together?"
The Journalist (wiping the sweat on his brow) said: "Three days..."
Monk: "How much time did you spend with your Father, sitting right beside him?"
The journalist looking perplexed and embarassed and started scribbling something on a paper...
The Monk: "Did you have breakfast, lunch or dinner together? Did you ask how he was? Did you ask how his days are passing after your mother's death?"
Drops of tears started to flow from the eyes of the journalist.
The Monk held the hand of the journalist and said: "Don't be embrassed, upset or sad. I am sorry if I have hurt you unknowingly... But this is basically the answer to your question about "Contact and Connection ." You have 'Contact' with your father but you don't have 'Connection' with him. You are not connected to him. Connection is between heart and heart...
Sitting together, sharing meals and caring for each other, touching, shaking hands, having eye contact, spending some time together... All your brothers and sisters have 'Contact' but no 'Connection' with each other..."
The journalist wiped his eyes and said : "Thanks for teaching me a fine and unforgettable lesson."
This is the reality today.
Whether at home or in the society everybody has lots of contacts but there is no connection. Everybody is busy in his or her own world. ...
Let us not maintain just "Contacts" but let us remain "Connected." Caring, Sharing and Spending time with all our dear ones.
The Monk was none other than Swami Vivekananda.
***********
ಸ್ವಾಮಿ ವಿವೇಕಾನಂದ ಜನ್ಮ ದಿನ "ರಾಷ್ಟ್ರೀಯ ಯುವ ದಿನ" ಜನವರಿ ೧೨
ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಜನನ
ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು ೧೮೬೩, ಜನವರಿ ೧೨ರಂದು ಕಲ್ಕತ್ತೆಯಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ರಾಮಕೃಷ್ಣರ ಜೊತೆಗೆ
ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ "ದ ಎಕ್ಸಕರ್ಶನ್" ಎಂಬ ಕವಿತೆಯಲ್ಲಿನ "ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು.
೧೮೮೧ನೇ ಇಸವಿ ನವೆಂಬರದಲ್ಲಿ ಎಫ್.ಎ(ಲಲಿತಕಲೆ)ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕೃಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ.
೧೮೮೨ ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ ಭೇಟಿ ನೀಡಲು ಪ್ರೇರೇಪಿಸಿತು.
ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು. ೧೮೮೪ ಇಸವಿಯಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು.
ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು.
ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಳ್ಳಲಷ್ಟೇ ಶಕ್ತರಾದರು. ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. ೧೮೮೫ ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು.
ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದರು. ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೇ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು ೧೮೮೬, ಆಗಸ್ಟ ೧೬ ರಂದು ನಿಧನ ಹೊಂದಿದರು.
ರಾಮಕೃಷ್ಣ ಮಠದ ಸ್ಥಾಪನೆ
ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿದರು. *ಆ ಮನೆಯ ಬಾಡಿಗೆಯನ್ನು ಭಿಕ್ಷಾಟನೆ ಮೂಲಕ ತುಂಬುತಿದ್ದರು.
ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ "ಪ್ರತಿದಿನ ಬೆಳಿಗ್ಗೆ ೩ ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು.
ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು" ೧೮೮೧ ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೊಳಗೊಂಡ ಸಂಗೀತ ಕಲ್ಪತರು "ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ..
ವಿವೇಕಾನಂದರ ಭಾರತ ಪರ್ಯಟನೆ
೧೮೮೮ ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವತ್ ಗೀತೆ ಹಾಗು " ದಿ ಇಮಿಟೆಶ್ನ್ ಒಫ಼್ ಕ್ರಿಸ್ತ್" ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.
ಉತ್ತರ ಭಾರತ
೧೮೮೮ ರಲ್ಲಿ ಗೌತಮ ಬುದ್ಧ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗ ರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯರು " ಇಂತಹ ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ" ಎಂದು ಪ್ರಶಂಸಿಸಿದರು. ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು
ಅದ್ವೈತ ಸಿದ್ಧಾಂತದ ಉಪಯುಕ್ತತೆ
ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು.
ಇದೇ ಅವರ ಮಂತ್ರವಾಯಿತು ಮತ್ತು ಅವರ "ದರಿದ್ರ ನಾರಾಯಣ ಸೇವೆ' ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು.
ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ.
ವಿವೇಕಾನಂದರ ವಿಶ್ವಪರ್ಯಟನೆ
ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು.
ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಅವರು ಅಮೇರಿಕಾ ಪ್ರವಾಸ ಕೈಗೊಂಡರು. ೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವವನ್ನು ಭೋಧಿಸಿದರು.
ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು.
ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ. ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು.
ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ.
ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ
ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.
ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. 'ಪೂರ್ವ ದೇಶದ ವಿಚಿತ್ರ ಧರ್ಮ' ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ 'ನ್ಯೂಯಾರ್ಕ್' ಮತ್ತು 'ಲಂಡನ್' ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು.
ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ.
ಸ್ವಾಮಿ ವಿವೇಕಾನಂದ'ರು ದಿವಂಗತರಾದಾಗ ಕೇವಲ ೩೯ ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-"ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆಶೀರ್ವಾದಗಳು".
ಸ್ವದೇಶ ಮಂತ್ರ
ಆರ್ಯಮಾತೆಯ ಅಮೃತಪುತ್ರರಿರಾ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ *ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ!
ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು - ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ "ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ". ಸಹೋದರರೆ, ಹೀಗೆ ಸಾರಿ "ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ." ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, "ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು.
ಅಭಿನಂದನ ಜರಾಳೆ ಶಿಕ್ಷಕರು
********
ಸ್ವಾಮಿ ವಿವೇಕಾನಂದರ ದಿವ್ಯ ವಾಣಿ
ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ ‘ಸ್ವಾಮಿ ವಿವೇಕಾನಂದ’ರು ಜನವರಿ 12, 1863ರಲ್ಲಿ, ಇದೇ ನಾವು ಹುಟ್ಟಿರುವ ಈ ಪುಣ್ಯಭೂಮಿ - ಭರತಭೂಮಿಯಲ್ಲಿ ಜನಿಸಿದರು. ನಮ್ಮ ಭರತ ಭೂಮಿಯಲ್ಲಿ ಅಂತದ್ದೇನಿದೆ ಎಂಬುದನ್ನು ಸ್ವಾಮಿ ವಿವೇಕಾನಂದರ ಮಾತುಗಳಲ್ಲೇ ಅರಿಯುವುದು ಶ್ರೇಷ್ಠವಾದುದು. ಅವರು ನುಡಿಯುತ್ತಾರೆ “ಜಗತ್ತಿನಲ್ಲಿ ಯಾವುದಾದರೂ ಒಂದು ದೇಶವು ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ, ಜೀವಿಗಳು ತಮ್ಮ ಬಾಳಿನ ಕೊನೆಯ ಕರ್ಮವನ್ನು ಸವೆಸಲು ಬರಬೇಕಾದ ಸ್ಥಳವೊಂದಿದ್ದರೆ, ಭಗವಂತನೆಡೆಗೆ ಸಂಚರಿಸುತ್ತಿರುವ ಪ್ರತಿಯೊಬ್ಬ ಜೀವಿಯೂ ತನ್ನ ಕೊನೆಯ ಯಾತ್ರೆಯನ್ನು ಪೂರೈಸುವುದಕ್ಕೆ ಒಂದು ಕರ್ಮಭೂಮಿಗೆ ಬರಬೇಕಾಗಿದ್ದರೆ, ಯಾವುದಾದರೂ ದೇಶದಲ್ಲಿ ಮಾನವ ಕೋಟಿಯ ಮಾಧುರ್ಯ, ಔದಾರ್ಯ, ಪಾವಿತ್ರ್ಯ, ಶಾಂತಿ – ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಧ್ಯಾನದಲ್ಲಿ ಮತ್ತು ಅಂತರ್ಮುಖ ಜೀವನದಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿದ್ದರೆ ಅದು ಭರತಖಂಡವೇ ಆಗಿದೆ.” ಇಂಥಹ ಅದಮ್ಯ ನಂಬಿಕೆಯನ್ನು ತಮ್ಮಲ್ಲಿ ತುಂಬಿಕೊಂಡಿದ್ದ ಸ್ವಾಮೀಜಿಯವರು ತಮ್ಮ ಬದುಕಿನ ಮೂಲಕ ಅದನ್ನು ವಿಶ್ವಕ್ಕೆಲ್ಲಾ ಸಾಬೀತು ಮಾಡಿಕೊಟ್ಟರು.
ಸ್ವಾಮಿ ವಿವೇಕಾನಂದರ ಬಗ್ಗೆ ಈ ದೇಶದ ಮಹಿಮಾನ್ವಿತರ ಮಾತುಗಳು ಹೀಗಿವೆ.
“ನೀವು ಭಾರತವನ್ನು ಅರಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ. ಅವರಲ್ಲಿ ಎಲ್ಲವೂ ರಚನಾತ್ಮಕವಾದುದು. ನೇತ್ಯಾತ್ಮಕವಾದುದು ಯಾವುದೂ ಇಲ್ಲ” – ರವೀಂದ್ರನಾಥ ಠಾಕೂರ್
“ನಾನು ಸ್ವಾಮೀಜಿಯವರ ಕೃತಿಗಳನ್ನು ಅಮೂಲಾಗ್ರವಾಗಿ ಓದಿದ್ದೇನೆ. ಅವುಗಳ ಅಧ್ಯಯನದ ನಂತರ ಭಾರತದ ಬಗೆಗಿದ್ದ ನನ್ನ ಪ್ರೀತಿ ಸಾವಿರ ಪಾಲು ಹೆಚ್ಚಿತು” – ಮಹಾತ್ಮ ಗಾಂಧಿ
“ಸ್ವಾಮೀಜಿಯವರ ನುಡಿಗಳಿಂದ ನಮ್ಮ ದೇಶದ ಜನ ಹಿಂದೆಂದೂ ಕಾಣದ ಆತ್ಮ ಗೌರವವನ್ನೂ, ಆತ್ಮವಿಶ್ವಾಸವನ್ನೂ ಹಾಗೂ ಆತ್ಮಬಲವನ್ನೂ ಪಡೆದಿದ್ದಾರೆ” – ಸುಭಾಷ್ ಚಂದ್ರಬೋಸ್
“ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತ ಪ್ರತಿಭಾಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು; ಅದು ಒಮ್ಮೆ ಲೀಲೆಯಿಂದ ಸಮುದ್ರ ತಳಕ್ಕೆ ಧುಮುಕುವುದು; ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು; ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ, ಒಂದು ಲಘುತೆ, ಒಂದು ಆವೇಶ, ಒಂದು ವಿಳಾಸ – ಇವು ಆ ಬುದ್ಧಿಯ ಗುಣಗಳು. ಅವರು ಸಂಸ್ಕೃತದಲ್ಲಿ ವ್ಯಾಕರಣ ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲಿಷಿನಲ್ಲಿ ಕಾವ್ಯ ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ ತತ್ವಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯ ವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ಧೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ, ಸಕಲ ಜನಮನೋಗ್ರಾಹಿಯಾದ ಹಾಸ್ಯ ವಿನೋದ ರಸಿಕತೆ, ಹೃದಯ ವಿದ್ರಾವಕವಾದ ಗಾನಮಾಧುರ್ಯ ಇವೆಲ್ಲವೂ ಅವರಲ್ಲಿ ಸಮ್ಮಿಳಿತವಾಗಿದ್ದವು. ಈ ನಾನಾ ಗುಣಶಕ್ತಿಗಳಿಗೆ ಕಿರೀಟಪ್ರಾಯವಾಗಿದ್ದುದು ಶ್ರೀರಾಮಕೃಷ್ಣ ಪರಮಹಂಸ ಗುರುಗಳ ಅನುಗ್ರಹ.” - ಡಿ.ವಿ.ಜಿ.
“ಸ್ವಾಮೀಜಿಯವರ ತಪಃಪೂರ್ಣವಾದ ಶಕ್ತಿವಾಣಿ ಒಂದು ಅಮೃತದ ಮಡು! ಇದರಲ್ಲಿ ಮಿಂದರೆ ಪುನೀತರಾಗುತ್ತೇವೆ. ಇದು ಜ್ಯೋತಿಯ ಖನಿ. ಹೊಕ್ಕರೆ ಪ್ರಬುದ್ಧರಾಗುತ್ತೇವೆ” – ಕುವೆಂಪು.
ಸ್ವಾಮಿ ವಿವೇಕಾನಂದರ ಬಗ್ಗೆ ನಾವು ಹೇಳುವುದಕ್ಕಿಂತ ಅವರನ್ನು ಕೇಳುವುದೇ ಸರಿಯಾದದ್ದು. ಬನ್ನಿ ರಾಷ್ಟ್ರಕವಿ ಕುವೆಂಪು ಅವರು ಹೇಳುವ ಹಾಗೆ, ಅವರು ನಮಗೆ ನೀಡಿರುವ ಜ್ಞಾನ ಜ್ಯೋತಿಯ ಖನಿಯಲ್ಲಿ ಒಂದಷ್ಟು ಹೊಕ್ಕು ಪ್ರಬುದ್ಧತೆಯನ್ನು ಬೇಡೋಣ. ಈ ಭಕ್ತಿಭಾವಗಳೊಂದಿಗೆ ಸ್ವಾಮಿ ವಿವೇಕಾನಂದರ ಹಲವು ಮನೋಜ್ಞ ಮಾತುಗಳನ್ನು ತಮ್ಮೊಡನೆ ನೆನಪಿಸಿಕೊಳ್ಳ ಬಯಸುತ್ತೇನೆ.
• ಯಾವುದಕ್ಕೂ ಅಂಜದಿರು; ಅದ್ಭುತ ಕಾರ್ಯವನ್ನು ಮಾಡಲು ಶಕ್ತನಾಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿ ಕ್ಷಣಮಾತ್ರದಲ್ಲಿ ಸ್ವರ್ಗವನ್ನೇ ಕೊಡಬಲ್ಲದು. ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ತಲುಪುವವರೆಗೂ ನಿಲ್ಲದಿರು.
• ನಿಮ್ಮೊಬ್ಬರ ಮೇಲೇ ಸಮಸ್ತ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿ. ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ಕೆಲಸಮಾಡಿಕೊಂಡು ಹೋಗಿ.
• ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು – ಇದೇ ಧರ್ಮದ ಸರ್ವಸ್ವ.
• ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ.
• ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.
• ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು.
• ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ.
• ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’, ಎಂದು ಪ್ರಯತ್ನಶೀಲನು ಹೇಳುತ್ತಾನೆ. ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನವನು. ಇಂತಹ ಶಕ್ತಿಯನ್ನೂ ಛಾತಿಯನ್ನೂ ಪಡೆಯಿರಿ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.
• ಪ್ರತಿಯಾಗಿ ಏನನ್ನೂ ಬಯಸಬೇಡಿ. ನೀವು ಹೆಚ್ಚು ಕೊಟ್ಟಷ್ಟೂ ನಿಮಗೇ ಹೆಚ್ಚು ಬರುತ್ತದೆ.
• ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.
• ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ ಸ್ಫೂರ್ತಿಯ ಮೂಲ.
• ವತ್ಸ, ಪ್ರೀತಿಗೆ ಸೋಲೆಂಬುದಿಲ್ಲ; ಇಂದೋ ನಾಳೆಯೋ ಅಥವಾ ಯುಗಾಂತರವೋ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನಮ್ಮ ಮಾನವಬಂಧುಗಳನ್ನು ನೀವು ಪ್ರೀತಿಸುತ್ತೀರೇನು?
• ಜೀವನಾವಧಿ ಅಲ್ಲ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ ಮೃತರು.
• ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.
• ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ.
• ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯ ಬಯಕೆಯನ್ನು ಕೂಡ. ಇತರರಿಗೆ ಸಹಾಯಮಾಡಿ.
• ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು. ಪ್ರಾಣಿಗಳು ಸಂಪೂರ್ಣವಾಗಿ ಉದ್ವೇಗದ ಅಧೀನದಲ್ಲಿರುವುವು.
• ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು.
• ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.
• ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.
• ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
• ಹೇಡಿಗಳು ಮಾತ್ರ, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ , ಸಹಾನುಭೂತಿಯುಳ್ಳವರಾಗಿ.
• ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.
• ಮೊದಲು ಚಾರಿತ್ರ್ಯವನ್ನು ಬೆಳೆಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು.
• ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.
• ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ ಉದ್ಭವಿಸುತ್ತದೆ.
• ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ.
• ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ:
1.ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ
2.ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ
3.ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುವವರಿಗೆ ಸಹಾಯ ಮಾಡುವಿಕೆ.
• ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಯ.
• ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು. ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.
• ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.
• ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?
• ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು.
• ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವುದೇ ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ಪಾರಾಗಬಹುದು.
• ನಿಮ್ಮೊಳಗಿರುವುದನ್ನು ಪ್ರಯತ್ನಪೂರ್ವಕವಾಗಿ ಹೊರಹೊಮ್ಮಿಸಿ. ಆದರೆ ಅನುಕರಿಸಬೇಡಿ. ಇತರರಿಂದ ಒಳ್ಳೆಯದನ್ನೆಲ್ಲವನ್ನೂ ಸ್ವೀಕರಿಸಿ.
• ಇತರರಿಗೆ ಸ್ವಾತ್ಯಂತ್ರ್ಯವನ್ನು ಕೊಡಲು ಇಚ್ಚಿಸದವನು ಸ್ವಾತ್ಯಂತ್ರ್ಯಕ್ಕೆ ಯೋಗ್ಯನಲ್ಲವೇ ಅಲ್ಲ.
• ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದೂ ಬಂಧನ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ. ಆಗ ಎಲ್ಲ ಆಸೆಗಳೂ ಬಿದ್ದುಹೊಗುತ್ತವೆ.
• ಮಹಾಮೂರ್ಖನು ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯವನ್ನು ಸಾಧಿಸಬಲ್ಲ. ಆದರೆ ಯಾರು ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿವರ್ತಿಸಬಲ್ಲನೋ ಅವನೇ ಬುದ್ಧಿವಂತನು.
• ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ನಿಮಗೆ ಬರುತ್ತದೆ.
• ಒಂದು ಸಾಮಾನ್ಯ ಕೆಲಸವನ್ನೂ ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.
• ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಯು ಪರಿಶುದ್ಧನಾಗಿರದಿದ್ದರೆ ಅವನು ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಪೂಜಿಸುವುದು ಯಾವ ಪ್ರಯೋಜನಕ್ಕೂ ಬಾರದು.
• ನೀವು ಆಧ್ಯಾತ್ಮೀಕರಾಗದೆ ಭಾರತದ ಪುನರುದ್ಧಾರ ಅಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಳ್ಳಿ; ನೀವು ಆಧ್ಯಾತ್ಮೀಕತೆಯನ್ನು ಬಿಟ್ಟು ಭೋಗಪ್ರಧಾನ ಪಾಶ್ಚಾತ್ಯ ನಾಗರೀಕತೆಯನ್ನು ಬೆಂಬತ್ತಿದರೆ, ಅದರ ಪರಿಣಾಮವಾಗಿ ಇನ್ನು ಮೂರೇ ತಲೆಮಾರುಗಳಲ್ಲಿ ನಿಮ್ಮ ಜನಾಂಗ ನಾಶವಾಗುತ್ತದೆ.
• ಅವಿದ್ಯಾವಂತರಿಗೆ ಬೆಳಕು ತನ್ನಿ, ವಿದ್ಯಾವಂತರಿಗೆ ಹೆಚ್ಚು ಬೆಳಕು ತನ್ನಿ. ಏಕೆಂದರೆ ವಿದ್ಯಾಮಧ ಇಂದು ಹೆಚ್ಚು ಭಯಂಕರವಾಗಿದೆ.
• ಇರುವ ಏಕಮಾತ್ರ ದೇವತೆಯೂ, ನಾನು ನಂಬುವ ಏಕಮಾತ್ರ ದೇವತೆಯೂ ಆದ ಜೀವ ಸಮಷ್ಟಿಯ ಆರಾಧನೆಗಾಗಿ ನನಗೆ ಎಷ್ಟು ಜನ್ಮಗಳಾದರೂ ಪ್ರಾಪ್ತವಾಗಲಿ, ಎಂತಹ ದುಃಖಗಳಾದರೂ ಒದಗಲಿ, ಎಲ್ಲಕ್ಕಿಂತ ಹೆಚ್ಚಾಗಿ, ದುಷ್ಟ ನಾರಾಯಣ, ಆರ್ತ ನಾರಾಯಣ, ಸಮಸ್ತ ಜನಾಂಗದ ದರಿದ್ರ ನಾರಾಯಣ, ಈ ನಾರಾಯಣನೇ ನನ್ನ ವಿಶೇಷ ಆರಾಧ್ಯದೇವತೆ.
• ನನ್ನ ಧೀರಪುತ್ರರೇ, ನೀವೆಲ್ಲರೂ ಮಹತ್ಕಾರ್ಯವನ್ನು ಸಾಧಿಸುವುದಕ್ಕೆ ಹುಟ್ಟಿರುವಿರೆಂದು ನಂಬಿ. ನಾಯಿಮರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ. ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ.
"ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಭೋಧತ" - ಎಚ್ಚರಗೊಳ್ಳಿ, ಜಾಗೃತರಾಗಿ, ಎಲ್ಲಕ್ಕಿಂತ ಮಹತ್ವವಾದುದಕ್ಕೆ ನಿಮ್ಮನ್ನು ಅನುವುಗೊಳಿಸಿಕೊಳ್ಳಿ.
ಸ್ವಾಮಿ ವಿವೇಕಾನಂದರ ದಿವ್ಯಚರಣಗಳಿಗೆ ಸಾಷ್ಟಾಂಗ ನಮನಗಳು.
#ವಿವೇಕಾನಂದರನ್ನು ಓದಿ ಭಾರತವನ್ನು ತಿಳಿ :
ವಿವೇಕಾನಂದರ ಜಯಂತೋತ್ಸವ ಸಂಭ್ರಮದಲ್ಲಿದ್ದೇವೆ. “ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ” ಎನ್ನುತ್ತಾರೆ ಸ್ವಾಮಿವಿವೇಕಾನಂದರು. ನಾವು ಭಾರತವನ್ನು ಅರಿಯಬೇಕೆಂದರೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಬೇಕು. ಸ್ವಾಮೀಜಿ ಯುವಜನಾಂಗಕ್ಕೆ ಅಂದಿಗೂ ಇಂದಿಗೂ ಸ್ಫೂರ್ತಿ ಚೇತನರಾಗಿದ್ದಾರೆ. ನಾವು ಇಂದು ಧರ್ಮ ಸಂಸ್ಕೃತಿಯಲ್ಲಿಯೂ ರಾಜಕೀಯವು ನುಸುಳಿ ಜಾತೀಯತೆ ಭೂತ ಕಾಡುತ್ತಿರುವ ವಿಲಕ್ಷಣ ಕಾಲಘಟ್ಟವನ್ನುಎದುರಿಸುತ್ತಿದ್ದೇವೆ.
ಸ್ವಾಮಿವಿವೇಕಾನಂದರು, ಇಡಿ ಜೀವಮಾನವೆಲ್ಲ ಹಿಮಾಲಯದಿಂದ ಕನ್ಯಾಕುಮಾರಿಯ ವರೆಗೆ ಆನಂತರ, ಪಾಶ್ಚಾತ್ಯ ದೇಶಗಳಲ್ಲಿಯೂ ಪರ್ಯಟನ ಮಾಡಿದವರು. ಅಮೆರಿಕ ಸರ್ವಧರ್ಮ ಸಮ್ಮೇಳನದಲ್ಲಿ ವಿಶ್ವವೇ ಬೇರಗೊಡೆವಂತೆ ತಾವು ಭಾರತೀಯರಾಗಿ ಸರ್ವಧರ್ಮ ಸಹಿಷ್ಟುತೆಗೆ ಹೆಸರಾದ ಹಿಂದೂ ಧರ್ಮದಿಂದ ಬಂದವನು ಎಂದು ಹೆಮ್ಮೆಯಿಂದ ನುಡಿದವರು; ಧೀಮಂತ ವ್ಯಕ್ತಿತ್ವ ವಿವೇಕಾನಂದರದು. ನಮ್ಮ ಹಿಡಿಯಷ್ಟು ಬ್ರಾಹ್ಮಣರ ಕಮಂಡಿತನ, ಮಡಿವಂತಿಕೆ, ಅಸ್ಪೃಶ್ಯತೆ ಹಾಗೂ ಅವರ ಕೆಳವರ್ಗದ ಜನರ ಶೋಷಣೆಯನ್ನು ಇಲ್ಲಿ ತೀವ್ರವಾಗಿ ಖಂಡಿಸಿದರು. ನಮ್ಮ ಜನರ ಅಜ್ಞಾನ ಅನಕ್ಷರತೆ ಬಡತನದ ಬಗ್ಗೆ ವಥೆಯಿಂದ ಹೇಳುತ್ತಿದ್ದರು. ಅವರೆಂದೂ ಹೊರದೇಶದಲ್ಲಿ ಇವುಗಳ ಬಗ್ಗೆ ಪ್ರಸ್ತಾಪಿಸಲಿಲ್ಲ. ಭೌದ್ಧಧರ್ಮವನ್ನು ಹಿಂದೂಧರ್ಮದೊಂದಿಗೆ ಹೋಲಿಸಿ ಅವರಷ್ಟು ವಿಶ್ಲೇಷಣೆ ಮಾಡಿದವರು ಬೇರಾರೂ ಇರಲಿಕ್ಕಿಲ್ಲ. ನಾನು ಹಿಂದೂ ಜನಾಂಗದವನೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದರು.ಹಿಂದೂಧರ್ಮ ಸಂಸ್ಕೃತಿಯ ವೈವಿಧ್ಯತೆ ವೈಶಿಷ್ಟ್ಯವ ನ್ನು ವಿಶ್ವದಾದ್ಯಂತ ಹೆಮ್ಮೆಯಿಂದ ಸಾರಿದರು.
ವೇಗಗತಿಯಲ್ಲಿ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಇಂದಿನ ದಿನಗಳಲ್ಲಿ ಧರ್ಮ ಸಂಸ್ಕೃತಿ ಪರಂಪರೆಯ ವಿಷಯಗಳಲ್ಲಿ ರಾಜಕೀಯವೂ ನುಸುಳಿರುವುದು ದೈವನಿಂದನೆ ಧರ್ಮನಿಂದನೆ ಮಾಡುವುದೂ ಶೋಚನೀಯ ಸಂಗತಿಯೇ. ನಾವು ಧರ್ಮೀಯರನ್ನುತ್ತೇವೆ. ದೇವರು ಧರ್ಮ ಎಲ್ಲ ಜನಾಂಗದಲ್ಲೂ ಒಂದೇ ಆದು ಅವ್ಯಕ್ತವ್ಯಕ್ತವೂ ಆದ ಸತ್ ಶಕ್ತಿಯೊಂದೇ. ಅನುಸರಣೆಯಲ್ಲಿ ಅವರವರ ಸಂಪ್ರದಾಯ ಆಚಾರ ವಿಚಾರಗಳಷ್ಟೇ ಬೇರೆ.
ವಿಗ್ರಹಾರಾಧನೆಯನ್ನಾಗಲಿ ಅಷ್ಟೇಕೆ ಗುರುಗಳ ಆಯ್ಕೆಯಲ್ಲಾಗಲಿ ವಿವೇಕಾನಂದರು ಸತ್ಯನಿಷ್ಠೂರ ವ್ಯಕ್ತಿಯಾಗಿದ್ದರು. ಅವರ ಗುರು ರಾಮಕೃಷ್ಣರನ್ನೂ ಪರಿಕ್ಷಸದೇ ಬಿಡಲಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಸ್ವಯಂ ಆತ್ಮಶಕ್ತಿಯಿಂದ ಏನೆಲ್ಲವನ್ನು ಎದುರಿಸಿ ಮುನ್ನೆಡೆಯಬಹುದೆಂಬುದಕ್ಕೆ ಮಾದರಿಯಾಗಿದ್ದರು ಅವರ ಎಲ್ಲ ಉಪನ್ಯಾಸಗಳ ಮೂಲ ಆತ್ಮಸಾಕ್ಷಾತ್ಕಾರವೇ ಎಂದು ಹೇಳುತ್ತಿದ್ದರು. ಆತ್ಮ ಇಲ್ಲ ಎನ್ನುವ ವರೂ ಚಿಂತಿಸುವಂತೆ ಮಾಡಿದ ಮಹಾನ್ ಸಂತರು ಅವರು ಯುವ ಪೀಳಿಗೆಗೆ ಅಂದಿಗೂ ಇಂದಿಗೂ ಸ್ಫೂರ್ತಿ ಚೇತನವಾಗಿದ್ದಾರೆ. ನಿಜಕ್ಕೂ ವಿದ್ಯಾವಂತರು ಬುದ್ಧಿವಂತರು ಆದ ಇಂದಿ ಯುವಪೀಳಿಗೆ ನಕಾರತ್ಮಕ ಧೋರಣೆ ಬಿಟ್ಟು ಅವರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ತಮ್ಮ ೨೪ ನೇ ವಯಸ್ಸಿನಲ್ಲಿ ರಾಮಕೃಷ್ಣರ ಇಚ್ಛೆಯಂತೆಯೇ ಅವರ ಮರಣಾನಂತರ ಸಂನ್ಯಾಸ ಸ್ವೀಕಾರ ಮಾಡಿದ ಸ್ವಾಮಿ ವಿವೇಕಾನಂದರು ಆನಂತರದ ಹದಿನೈದು ವರ್ಷಗಳಲ್ಲಿ ಬರಿಗೈ ಬೈರಾಗಿಯಾಗಿ ಪರಿವ್ರಾಜಕರಾಗಿ ಮೊದಲು ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ನಮ್ಮ ದೇಶ ಪರ್ಯಟನ ಮಾಡಿ ಆನಂತರ ಅಮೇರಿಕ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳಿಗೆ ವಾರ ತಿಂಗಳುಗಟ್ಟಲೆ ಪಯಣಿಸಿ ನಮ್ಮ ಧರ್ಮ ಸಂಸ್ಕೃತಿ ಯನ್ನು ಬಗ್ಗೆ ಹೊರ ದೇಶಗಳಲ್ಲಿ ಉಪನ್ಯಾಸಮಾಡಿ ಭಾರತದ ಕೀರ್ತಿಪತಾಕೆ ಯನ್ನು ಆಧ್ಯಾತ್ಮಿಕ ಪ್ರಪಂಚದಲ್ಲಿ ಉತ್ಕೃಷ್ಟಮಟ್ಟಕ್ಕೇರಿಸಿದ ಅವರು ಎಂದೆಂದಿಗೂ ಚಿರಸ್ಚರಣೀಯರು.
ಒಬ್ಬ ಮನಷ್ಯ ಹೇಗೆ ಸಾಧಕನಾಗಿ ದೈವತ್ವಕ್ಕೇರ ಬಹುದೆಂದಬುದನ್ನು ತೋರಿದ ಅವರ ಬಗ್ಗೆ ಕುತರ್ಕಗಳನ್ನು ಮಾಡುವ ಕುಹಕಿಗಳು ಅಂದಿಗೂ ಇಂದಿಗೂ ಕಾಣಸಿಗುವರು. ಅದರಿಂದ, ಸ್ವಾಮಿ ವಿವೇಕಾನಂದರನ್ನು ಬ್ರಾಹ್ಮಣನಲ್ಲ, ಮೀನು ಮಾಂಸಾಹಾರಿ, ಭಂಗಿ ಸೇದುವವ, ಕಾಯಿಲೆಯ ಮನುಷ್ಯ ಎಂದು ಹೀಗಳೆಯುವುದರಿಂದ ಸ್ವಾಮೀಜಿ ಅವರ ಘನ ವ್ಯಕ್ತಿತ್ವಕ್ಕೇನೂ ಕುಂದುಬರಲಾರದು. ಎಂದಿಗೂ ಅಸೂಯೆ ಪರರು ನಿಂದಕರು, ಮತಾಂಧರು, ಪೂರ್ವಾಗ್ರಹ ಪೀಡಿತರು ಸಮಾಜಿಕ ಪಿಡುಗಿನಂತೆ ಇದ್ದೇ ಇರುತ್ತಾರೆ. ಅವರನ್ನು ಲೇಕ್ಕಿಸದೇ ಎಲ್ಲವನ್ನೂ ಸಾಕ್ಷಿಚೇತನ ಸ್ವರೂಪರಾಗಿ ಚಿಂತಿಸುವ ಸತ್ವಶಾಲಿಗಳ ಗುಂಪು ಎಲ್ಲಕಾಲಕ್ಕೂ ಇದ್ದೇ ಇರುತ್ತದೆ.
ಸ್ವಾಮಿ ವಿವೇಕಾನಂದರೇ ಹೇಳಿದಂತೆ, “ಸತ್ಯ ಸಾಕ್ಷಾತ್ಕಾರವೇ ಎಲ್ಲಕ್ಕಿಂತ ಮುಖ್ಯವಾದದ್ದು. ನೀನು ಗಂಗಾನದಿಯಲ್ಲೇ ಸಾವಿರ ಬಾರಿ ಸ್ನಾನಮಾಡಿದರೇನು, ದೀರ್ಘಕಾಲ ಸಸ್ಯಾಹಾರ ಸೇವಿಸಿದರೇನು ಅದು ನಿನ್ನ ಆತ್ಮವಿಕಾಸಕ್ಕೆ ಒಯ್ಯವುದೇ? ಆದರೆ, ಯಾರು ಇಂತಹ ಬಾಹ್ಯಾಚರಣೆಗಳನ್ನಾಚರಿಸದೇ ಆತ್ಮಸಾಕ್ಷಾತ್ಕಾರ ಮಾಡಿಕೊಂಡಿದ್ದರೆ ಇಂತಹ ಬಾಹ್ಯಾಚರಣೆಗಳನ್ನಾಚರಿಸದಿರುವ ಹಾದಿಯೂ ಶ್ರೇಷ್ಠ…. ಅನೇಕರು, ಸಂಪೂರ್ಣವಾಗಿ ಬಾಹ್ಯ ರೂಪ, ಸಂಪ್ರದಾಯಗಳಲ್ಲೇ ಮಗ್ನರಾಗುವರು. ತಮ್ಮ ಮನಸ್ಸನ್ನು ಆತ್ಮನ ಕಡೆ ತಿರುಗಿಸಲು ಅಸಮರ್ಥರಾಗುವರು”
ಅತಿಯಾಗಿ ತಿಂದರೆ ಅನ್ನವೂ ವಿಷವೇ. ಕಾಯಿಲೆ ಶರೀರಕ್ಕೆ ಅಷ್ಟೇ. ಮನಸ್ಸು ಬುದ್ಧಿ ಆಚೆಯ ಪ್ರಜ್ಞಾಚೇತನವು ರೋಗಗ್ರಸ್ಥವಾಗಬಾರದೆಂಬುದಕ್ಕೇ ಕ್ಯಾನ್ಸರ್ ಪೀಡಿತರಾದ ರಾಮಕೃಷ್ಣರೂ ಮಾದರಿಯಾಗುತ್ತಾರೆ. ಭೋಗಿಯಾದವನು ಯೋಗಿಯಾಗಲಾರ. ಪ್ರತ್ಯಾಹಾರ, ಅಪರಿಗ್ರಹ ಯೋಗಿಯ ಮೂಲಮಂತ್ರವಲ್ಲವೇ…? ಅವರು ಶ್ರೀಮಂತ ಮನೆತನದಿಂದ ಬಂದವರಾದರೂ, ಸಂನ್ಯಾಸಿಯಾಗಿ ಭಿಕ್ಷುವಾಗಿ, ದೇಹಕ್ಕೆ ಸರಿಯಾದ ಪೋಷಕಾಂಶದ ಆಹಾರವಿಲ್ಲದೇ ಬಳಲಿದವರು. ಅವರ ಮನೋದಾರ್ಢತೆಯ ಮುಂದೆ ದೇಹಾಲಸ್ಯ ಹಿಂದೆ ಸರಿಯುತ್ತಿತ್ತು. ಅಮೇರಿಕಾ ಪ್ರವಾಸಾನಂತರದ ದಿನಗಳಲ್ಲಿ ಪ್ರಸಿದ್ಧರಾದಾಗಲಷ್ಟೇ ಆವರು ಒಳ್ಳೆಯ ಆಹಾರವನ್ನು ಸೇವಿಸುವ ಅವಕಾಶ ಸಿಕ್ಕಿತು. ಅವರ ಮಾತುಗಳಲ್ಲೇ ಹೇಳುವುದಾರೆ, ಯಾವ ಮಹತ್ವದ ಕೆಲಸವನ್ನ ಆಗಲಿ, ದೇಹವನ್ನು ದಂಡಿಸದೇ ತ್ಯಾಗವನ್ನು ಮಾಡದೇ ಸಾಧಿಸಲಾಗುವುದಿಲ್ಲ.
ವಿವೇಕಾನಂದರಿಗೆ ತಮ್ಮ ಅಂತಿಮ ದಿನಗಳು ಬಂದಿತೆಂಬುದು ಅವರ ಸೂಕ್ಷ್ಮಚೇತನಕ್ಕೆ ಅರಿವಾಗಿತ್ತು. ಅಂತಿಮ ದಿನಗಳಲ್ಲಷ್ಟೇ ಅವರಿಗೆ ದೇಹಾಲಸ್ಯ ಕಾಣಿಸಿಕೊಂಡಿತು. ಅವರದು ಇಚ್ಛಾ ಮರಣವೇ ಸರಿ. ಮಾಂಸ ತಿನ್ನುವ ಬ್ರಾಹ್ಮಣರಾದರೇನು ಇತರೆ ಜನಾಂಗದವರಾದರೇನು, ಅವರವರ ಆಂತರಿಕ ಪ್ರಜ್ಞೆಯ ಆಳದಲ್ಲಿ ಅವರವರನ್ನು ಅರಿಯುವುದಾಗಬೇಕು. ಅದೇ ಆತ್ಮಸಾಕ್ಷಾತ್ಕಾರದ ಮೊದಲ ಹೆಜ್ಜೆ. ಆಧ್ಯಾತ್ಮ ಎಂಬದು ಕೇವಲ ವಯಸ್ಸಾದವರಿಗಷ್ಟೇ ಅಲ್ಲ ಅದು ಎಲ್ಲರನ್ನು ಆಂತರಿಕವಾಗಿ ಒರೆಹಚ್ಚಿ ನೋಡಿಕೊಳ್ಳುವಂತೆ ಮಾಡುವ ಅಧಿಕ್ಯತ ವಿದ್ಯೆ. ಸ್ವಾಮೀಜಿ ಆತ್ಮವಿಲ್ಲ ಎನ್ನುವ ನಾಸ್ತಿಕರನ್ನೂ ಅವರಿಗೆ ಪರಮಾಪ್ತವಾದ ಆಂತರಿಕ ಚೈತನ್ಯದಲ್ಲಿ ಚಿಂತನಗೆ ಹಚ್ಚುವಂತೆ ಮಾಡದರು. ಸ್ವಾಮಿವಿವೇಕಾನಂದರು “ಗುರಿಗಿಂತಲೂ ದಾರಿ ಮುಖ್ಯ” ಎಂದರು. ನಾವು ಆರಿಸಿಕೊಂಡ ದಾರಿ ಸರಿಯಿದ್ದರೆ, ಆ ದಾರಿಯಲ್ಲಿ ಎಚ್ಚರಿಕೆಯಿಂದ ನಡೆದರೆ ತಲುಪಬೇಕಾದ ಗುರಿಯನ್ನು ತಲುಪುತ್ತೇವೆ. ನಮಗೆ ಖಂಡಿತ ಯಶಸ್ಸು ಲಭಿಸುತ್ತದೆ. ನಿಮ್ಮ ಗುರಿ ಯಶಸ್ಸಿನತ್ತ ನೋಡುತ್ತಲಿದ್ದರೆ ದಾರಿಯೂ ಸರಿಯಾಗಿ ಕಾಣದೇ ಮುಗ್ಗರಿಸಿ ಬೀಳಿತ್ತೀರಿ.
*******
ಭಾರತದ ಹಲವು ‘ರಾಜ’ರನ್ನು ‘ರಾಜರ್ಷಿ’ಗಳಾಗಿ ಪರಿವರ್ತಿಸಿದ ಸ್ವಾಮಿ ವಿವೇಕಾನಂದರು ಗುಲಾಮಿ ಮನೋಸ್ಥಿತಿಯನ್ನು ಹೋಗಲಾಡಿಸಿ ಧರ್ವನುಷ್ಠಾನ ಮತ್ತು ಜನಕಲ್ಯಾಣ ಆಗುವಂತೆ ನೋಡಿಕೊಂಡರು. ಸ್ವಾಮೀಜಿ ಮಾರ್ಗದರ್ಶನ ಪಡೆದ ಹಲವು ರಾಜರು ಅಸಾಧಾರಣವಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ಪ್ರಜೆಗಳ ಹಿತಕ್ಕಾಗಿ ದುಡಿದು ಕೀರ್ತಿವಂತರಾದರು.
**********
ಸ್ವಾಮಿ ವೀರೇಶಾನಂದ ಸರಸ್ವತಿ

ಭಾರತದ ಮಹಾನ್ ನೇತಾರರೆನಿಸಿದ್ದ ಚಕ್ರವರ್ತಿ ರಾಜಗೋಪಾಲಾಚಾರಿ ಸ್ವಾಮಿ ವಿವೇಕಾನಂದರನ್ನು ಕುರಿತು ಹೀಗೆ ಹೇಳುತ್ತಾರೆ, ‘‘ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ರಕ್ಷಿಸಿದರು, ಭಾರತವನ್ನು ರಕ್ಷಿಸಿದರು. ಅವರಿಲ್ಲದಿದ್ದರೆ, ನಾವು ನಮ್ಮ ಧರ್ಮವನ್ನು ಕಳೆದುಕೊಳ್ಳುತ್ತಿದ್ದೆವು ಹಾಗೂ ನಾವು ಸ್ವಾತಂತ್ರ್ಯವನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಸರ್ವಕ್ಕೂ ನಾವು ಸ್ವಾಮಿ ವಿವೇಕಾನಂದರಿಗೆ ಚಿರಋಣಿಗಳು…’. ಮತ್ತೋರ್ವ ಮಹಾಮೇಧಾವಿ ಬಾಲಗಂಗಾಧರ ತಿಲಕರು, ‘ಸ್ವಾಮಿ ವಿವೇಕಾನಂದರು ನಿಜಾರ್ಥಧಲ್ಲಿ ಭಾರತ ರಾಷ್ಟ್ರಿಯತೆಯ ಪಿತಾಮಹ. ಪ್ರತಿ ಭಾರತೀಯನೂ ಈ ಆಧುನಿಕ ಭಾರತದ ಪಿತಾಮಹನ ಬಗ್ಗೆ ಹೆಮ್ಮೆ ಪಡಬೇಕು’ ಎಂದು ವಿನೀತರಾಗಿ ನುಡಿದಿದ್ದಾರೆ. ಈ ಮಹಾನ್ ಚೇತನಗಳ ಅಭಿಮತವು ಸ್ವಾಮಿ ವಿವೇಕಾನಂದರ ವಿರಾಟ್ ವ್ಯಕ್ತಿತ್ವದ ಕುರಿತು ಅಲೋಚಿಸಿದಷ್ಟೂ ವಿಸ್ತೃವಾಗಿ ಗರಿಗೆದರುತ್ತದೆಯಲ್ಲದೆ ಅದರ ವ್ಯಾಪ್ತತೆಯ ಅಗಾಧತೆ ಹಾಗೂ ವಿಸ್ತೀರ್ಣವನ್ನು ಮನಗಾಣಿಸುತ್ತದೆ.
ಭಾರತೀಯ ಪರಂಪರೆ ಸಂನ್ಯಾಸಿಯನ್ನು, ‘ಸರ್ವಜನ ಬಂಧು’ ಎಂದು ಗೌರವಿಸಿದೆ. ಆದ್ದರಿಂದಲೇ ನಾಲ್ಕು ಆಶ್ರಮಗಳಲ್ಲಿ ಆತನನ್ನು ‘ಶ್ರೇಷ್ಠಾಶ್ರಮಿ’ ಎಂದೇ ತೀರ್ವನಿಸಿದೆ. ‘ವೀರ ಸಂನ್ಯಾಸಿ’ ವಿವೇಕಾನಂದರು ತಮ್ಮ ಜೀವನದಲ್ಲಿ ‘ಸರ್ವಜನಬಂಧು’ವಾಗಿ ವಿಕಸನಗೊಂಡು ಇಂದು ಜಗತ್ತು ಅವರನ್ನು ‘ವಿಶ್ವಮಾನವ’ ಎಂದೇ ಕೃತಜ್ಞತೆಯಿಂದ ಸ್ಮರಿಸುತ್ತಿದೆ. ವಿವೇಕಾನಂದರು ‘ಮಾನವತಾವಾದಿ’ ಆಗಿದ್ದರಿಂದ ಬುದ್ಧಿಜೀವಿಗಳನ್ನು ಹಾಗೂ ಶ್ರೇಷ್ಠ ಸಂತರಾಗಿದ್ದರಿಂದ ಆಧ್ಯಾತ್ಮಿಕ ಪ್ರವೃತ್ತಿಯುಳ್ಳವರನ್ನು ತಮ್ಮ ಅಯಸ್ಕಾಂತೀಯ ವ್ಯಕ್ತಿತ್ವದಿಂದ ಸೆಳೆದರು.
ಅವರ ವೈಚಾರಿಕ ಚಿಂತನೆಗಳಲ್ಲಿ ಪ್ರಾಚೀನ ಭಾರತವು ಪ್ರತಿಪಾದಿಸಿದ್ದ ಸಾರ್ವಕಾಲಿಕ ಮೌಲ್ಯಗಳಿಗೆ ಒಂದಿನಿತೂ ಧಕ್ಕೆಯಾಗುವುದಕ್ಕೆ ಆಸ್ಪದವೀಯದ ಆದರೆ ಆಧುನಿಕವಾದ ಯಾವುದೇ ವಿಚಾರವನ್ನು ಪೂರ್ವರ್್ರಹವಿಲ್ಲದೆ ಅಧ್ಯಯನ ಮಾಡುವ ಸತ್ಯ ನಿಷ್ಠುರತೆ ಇತ್ತು. ರಾಜಮಹಾರಾಜರ ಆಳ್ವಿಕೆ ಭಾರತದಲ್ಲಿದ್ದ ಆ ದಿನಗಳಲ್ಲಿ ಅವರು ಭಾರತೀಯ ರಾಜರನ್ನು ಕೇವಲ ಲೌಕಿಕ ಸಂಪತ್ತಿನ ನಿರ್ವಾಹಕರಾಗಷ್ಟೇ ಪರಿಗಣಿಸಲಿಲ್ಲ! ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಭಾರತೀಯ ತತ್ತ್ವದ ಅನುಷ್ಠಾನಕ್ಕೆ ಅವರು ಒತ್ತು ನೀಡಿದರು. ಉದಯೋನ್ಮುಖ ಭಾರತ, ಸ್ವತಂತ್ರ ಭಾರತದ ಉದ್ಧಾರಕ್ಕೆ ಅತ್ಯವಶ್ಯಕವಾದ, ಆಧುನಿಕ ನಾಗರಿಕತೆಗಳು ಒಪ್ಪಿ ಅಪ್ಪಿಕೊಂಡ ಪ್ರಜಾಪ್ರಭುತ್ವ ಆಧಾರಿತ ಆಡಳಿತಾತ್ಮಕ ವ್ಯವಸ್ಥೆಗೂ ಅತ್ಯವಶ್ಯಕ ಎಂದೆನಿಸಿದ ಜೀವನವಿಧಾನ ಕುರಿತಾದ ಮಾರ್ಗದರ್ಶನ ನೀಡಲೂ ಅವರು ಮರೆಯಲಿಲ್ಲ!
ಸ್ವಾಮಿ ವಿವೇಕಾನಂದರು ಪರಿವ್ರಜನದ ದಿನಗಳಲ್ಲಿ, ದೇಶದ ಉದ್ದಗಲಕ್ಕೂ ಅಲೆಮಾರಿ ಸಂನ್ಯಾಸಿಯಾಗಿ ಸಂಚರಿಸುತ್ತಿದ್ದ ಕಾಲದಲ್ಲಿ ರಾಜಮಹಾರಾಜರ, ದಿವಾನರ ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸುಖ್ಯಾತರಾಗಿದ್ದ ವ್ಯಕ್ತಿರತ್ನಗಳ ಮೇಲೆ ಬೀರಿದ ಪ್ರಭಾವ ಅಗಾಧವಾದದ್ದು. ತಮ್ಮ ಸಂಪರ್ಕಕ್ಕೆ ಬಂದ ಚಕ್ರವರ್ತಿಗಳಿಗೆ ಅವರಿತ್ತ ತಿಳಿವಳಿಕೆಯನ್ನು ಗಮನಿಸುವುದು ಸೂಕ್ತ.
ರಾಜಾ ಮಂಗಲ್ ಸಿಂಗ್: ಇಂಗ್ಲಿಷರ ರೀತಿನೀತಿಗಳಿಂದ ತುಂಬ ಪ್ರಭಾವಿತನಾಗಿದ್ದ ಈತನು ಭಾರತೀಯತೆಯನ್ನು ಬಹುತೇಕ ನಿರ್ಲಕ್ಷಿಸಿಯೇ ಬಿಟ್ಟಿದ್ದ. ಪಾಶ್ಚಾತ್ಯ ಸ್ನೇಹಿತರೊಂದಿಗೇ ಕಾಲಕಳೆಯುತ್ತ, ಬೇಟೆ, ಅಮೋದ ಪ್ರಮೋದಗಳಲ್ಲೇ ಕಾಲಹರಣ ಮಾಡುತ್ತ ಪ್ರಜೆಗಳ ಕಡೆಗಿನ ತನ್ನ ಕರ್ತವ್ಯವನ್ನು ನಿರ್ಲಕ್ಷಿಸಿದ್ದ. ಅಲ್ಲದೆ ಭಾರತೀಯರು ನಂಬಿ ನೆರವೇರಿಸಿಕೊಂಡು ಬಂದಿದ್ದ ‘ಮೂರ್ತಿಪೂಜೆ’ಯನ್ನು ‘ಮೂಢನಂಬಿಕೆ’ ಎಂದು ಜರಿದವ. ಆತನ ಈ ನ್ಯೂನತೆಗೆ ಸಮರ್ಥ ಚಿಕಿತ್ಸಕರಾದರು. ಅನಂತತತ್ತ್ವದ ಸಾಂತ ಪ್ರತಿಪಾದನೆಯೇ ಮೂರ್ತಿಪೂಜೆಯ ಉದ್ದೇಶವೆಂದು ಮನವರಿಕೆ ಮಾಡಿಕೊಟ್ಟರು.
ಮುಂದೆ ಅವರು ಅಮೆರಿಕ ದೇಶದ ವೇದಿಕೆಯಲ್ಲಿ ಹೀಗೆ ಹೇಳುತ್ತಾರೆ: ‘‘ದೇವರು ವಿಶ್ವದ ಯಾವುದೋ ಮೂಲೆಯಲ್ಲಿ ಕುಳಿತುಕೊಂಡು, ಮನುಷ್ಯರಿಗೆ ಅವರವರ ಕೃತ್ಯಗಳಿಗೆ ಅನುಸಾರವಾಗಿ ಶಿಕ್ಷೆಯನ್ನೋ, ಬಹುಮಾನವನ್ನೋ ಕೊಡುತ್ತಿರುವ ರಾಜನಲ್ಲ. ಮನುಷ್ಯನು ಸತ್ಯವನ್ನರಿತು ಎದ್ದು ನಿಂತು ‘ನಾನೇ ದೇವರು’ ಎಂದು ಘೊಷಿಸುವ ಕಾಲ ಬರುತ್ತದೆ. ನಮ್ಮ ನಿಜಸ್ವರೂಪವೇ, ನಮ್ಮ ಅಮರತ್ವವೇ ದೇವರಾಗಿರುವಾಗ, ದೇವರು ಎಲ್ಲೋ ದೂರದಲ್ಲಿದ್ದಾನೆ ಎಂದು ಬೋಧಿಸುವುದೇಕೆ? ಅಂತೆಯೇ ಧರ್ಮವು ಮಾನವನ ದೌರ್ಬಲ್ಯದಿಂದ ಉದಿಸಿದುದಲ್ಲ ಅಥವಾ ಯಾವುದೋ ಘೊರ ಉಪದ್ರವಕ್ಕೆ ಹೆದರಿ ಅವನು ಮಾಡಿಕೊಂಡದ್ದಲ್ಲ. ಧರ್ಮವು ಪ್ರೇಮದ ವಿಕಸನ, ಬೆಳವಣಿಗೆ’ ಎಂದಿದ್ದಾರೆ.
ಸ್ವಾಮಿ ವಿವೇಕಾನಂದರದು,”Ignorance is not innocence but sin! Ignorance is dangerous, but cultural ignorance is more dangerous!’ಎಂಬ ಎಚ್ಚರಿಕೆಯನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಚಕ್ರವರ್ತಿಯಾದವನಿಗೆ ತಿಳಿವಳಿಕೆ ಅದೆಷ್ಟು ಅಗತ್ಯ ಎಂಬುದನ್ನು ತಿಳಿಹೇಳುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ಚಕ್ರವರ್ತಿಗೆ, ‘ನೀನು ಶತ್ರುಗಳನ್ನು ಗೆದ್ದಾಗ ಶಕ್ತಿಶಾಲಿ ಎಂದೆನಿಸುವೆ, ಆದರೆ ನಿನ್ನನ್ನೇ ನೀನು ಗೆದ್ದಾಗ ಸರ್ವಶಕ್ತನೆನಿಸುವೆ’ ಎಂಬ ರಾಜರ್ಷಿಯ ಮಹಾನ್ ಆದರ್ಶವನ್ನು ನೆನಪಿಸುತ್ತಿದ್ದಾರೆ. ಭಾಗವತದಲ್ಲಿ, ‘ಯಾವ ರಾಜನು ಧರ್ಮದ ವಿಷಯವನ್ನು ಪ್ರಜೆಗಳಿಗೆ ಉಪದೇಶಿಸದೆ ಪ್ರಜೆಗಳಿಂದ ಕೇವಲ ತೆರಿಗೆಯನ್ನಷ್ಟೇ ವಸೂಲಿ ಮಾಡುತ್ತಾನೆಯೋ ಅವನು ಪ್ರಜೆಗಳ ಕೊಳಕನ್ನೇ ತಿನ್ನುತ್ತಾನೆ ಹಾಗೂ ಅದು ಅವನಿಗೆ ಎಂದಿಗೂ ಶ್ರೇಯಸ್ಕರವಲ್ಲ’ ಎಂಬ ಮಾತಿದೆ.
ರಾಜಾ ಅಜಿತ್ ಸಿಂಗ್: ಉತ್ತಮ ರಾಜನೆನಿಸಿದ್ದ ಅಜಿತ್ ಸಿಂಗ್ ಸ್ವಾಮಿ ವಿವೇಕಾನಂದರಿಂದ, ‘ಜೀವನವೆಂಬುದೊಂದು ಅವಿರತ ಹೋರಾಟ, ಎದುರಿಸಿ ಹೋರಾಡುವುದೇ ಜೀವನ ಸೌಂದರ್ಯ, ಸೋಲೊಪ್ಪಿಕೊಳ್ಳುವುದು ಮರಣಕ್ಕೆ ಸಮಾನ’ ಎಂಬ ತಿಳಿವಳಿಕೆ ಗಳಿಸಿದ. ಸ್ವಾಮೀಜಿಯವರ ವಿಶೇಷ ಪ್ರಭಾವಕ್ಕೆ ಒಳಗಾದ ಚಕ್ರವರ್ತಿ ಮುಂದಿನ ದಿನಗಳಲ್ಲಿ ತನ್ನ ಆಡಳಿತದಲ್ಲಿ ಭೂಸುಧಾರಣೆ ನಿಯಮಗಳನ್ನು, ಅನಾಥರಿಗಾಗಿ ಆಶ್ರಯ ಯೋಜನೆಗಳನ್ನು, ಪ್ರಕೃತಿ ವಿಕೋಪದ ಸಮಯದಲ್ಲಿ ಪರಿಹಾರ ಕಾರ್ಯಗಳನ್ನು ಶ್ರೇಷ್ಠ ಮಟ್ಟದಲ್ಲಿ ನಿರ್ವಹಿಸಿ ವಿಶ್ವವಿಖ್ಯಾತರೆನಿಸಿದ್ದ ಆಟೋವನ್ ಬಿಸ್ವಾರ್ಕ್ ಹಾಗೂ ಮ್ಯಾಕ್ಸ್ಮುಲ್ಲರರಿಂದ ಶ್ಲಾಘಿಸಲ್ಪಟ್ಟ. ಅವನ ಅತ್ಯುತ್ತಮ ಆಡಳಿತಕ್ಕೆ ವಿಕ್ಟೋರಿಯಾ ರಾಣಿ ವಜ್ರಖಚಿತ ಖಡ್ಗವನ್ನಿತ್ತು ಪುರಸ್ಕರಿಸಿದಳು. ಸ್ವಾಮಿ ವಿವೇಕಾನಂದರ ಭಾರತದ ಪುನರುತ್ಥಾನ ಕಾರ್ಯದಲ್ಲಿ ಅಜಿತ್ ಸಿಂಗ್ ಉತ್ತಮ ಸಹಕಾರ ನೀಡಿದ್ದಾನೆ. ಇದನ್ನು ಕೃತಜ್ಞತೆಯಿಂದ ಸ್ಮರಿಸುತ್ತ ಸ್ವಾಮೀಜಿ ಹೇಳುತ್ತಾರೆ, ‘ನಾನು ಅಜಿತ್ ಸಿಂಗ್ನನ್ನು ಸಂಧಿಸದೆ ಹೋಗಿದ್ದರೆ, ಭಾರತದ ಏಳಿಗೆಗಾಗಿ ನಾನು ಯಾವ ಕಿಂಚಿತ್ ಕಾರ್ಯವನ್ನು ಮಾಡಿದೆನೋ ಅದು ಸಾಧ್ಯವಾಗುತ್ತಿರಲಿಲ್ಲ’. ಮತ್ತೊಂದು ಗಮನೀಯ ಅಂಶವೆಂದರೆ ಸ್ವಾಮೀಜಿ ರಾಜಾ ಅಜಿತ್ ಸಿಂಗನಿಗೆ ಸಂಸ್ಕೃತ, ಇಂಗ್ಲಿಷ್, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಖಗೋಳಶಾಸ್ತ್ರದ ಬಗ್ಗೆ ತಿಳಿವಳಿಕೆ ನೀಡಿದರಲ್ಲದೆ ಅರಮನೆಯಲ್ಲಿ ದೂರದರ್ಶಕ ಹಾಗೂ ಸೂಕ್ಷ್ಮದರ್ಶಕ ಉಪಕರಣಗಳನ್ನೊಳಗೊಂಡ ಪ್ರಯೋಗಶಾಲೆಯನ್ನು ನಿರ್ವಿುಸಿದರು!
ರಾಜಾ ಚಾಮರಾಜೇಂದ್ರ ಒಡೆಯರ್: ಸ್ವಾಮೀಜಿ ಮೈಸೂರಿಗೆ ಭೇಟಿ ನೀಡಿದ್ದಾಗ ಅವರ ಒಡನಾಟದಲ್ಲಿ ‘ಸತ್ಯ ಎಲ್ಲಕ್ಕಿಂತಲೂ ಮಿಗಿಲಾದುದು, ಆದರೆ, ಸತ್ಯವಂತರಾಗಿ ಬಾಳುವುದು ಅದಕ್ಕಿಂತಲೂ ಮಿಗಿಲು’ ಎಂಬ ಜೀವನಪಾಠವನ್ನು ಮಹಾರಾಜರು ಕಲಿತರು. ಅಲ್ಲದೆ ಸ್ವಾಮೀಜಿಯವರ ಸತ್ಯನಿಷ್ಠೆಯನ್ನು ಕಂಡು ಬೆರಗಾದರು. ಒಮ್ಮೆ ರಾಜರು, ‘ಸ್ವಾಮೀಜಿ, ನಾನು ನಿಮಗಾಗಿ ಏನು ಮಾಡಲಿ?’ ಎಂದು ವಿನಯದಿಂದ ಕೇಳಿಕೊಂಡಾಗ ಅವರು ಹೇಳುತ್ತಾರೆ, ‘‘ಮಹಾರಾಜಾ, ನಮ್ಮ ಭರತಭೂಮಿ ಅನಾದಿಯಿಂದ ಪಡೆದುಕೊಂಡು ಬಂದ ಆಸ್ತಿ ಯಾವುದೆಂದರೆ ಉನ್ನತ ತಾತ್ವಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳು. ಈಗ ಅದಕ್ಕೆ ಬೇಕಾಗಿರುವುದು ಆಧುನಿಕ ವಿಜ್ಞಾನದ ಜೋಡಣೆ. ಭಾರತದಲ್ಲಿ ಅಡಿಯಿಂದ ಮುಡಿಯವರೆಗೆ ರಚನಾತ್ಮಕ ಸುಧಾರಣೆಗಳನ್ನು ತರಬೇಕಾಗಿದೆ. ತನ್ನ ಮಡಿಲಲ್ಲಿಟ್ಟುಕೊಂಡಿರುವ ಅಮೂಲ್ಯ ಆಧ್ಯಾತ್ಮಿಕ ಸಂಪತ್ತನ್ನು ಪಾಶ್ಚಾತ್ಯ ಜಗತ್ತಿಗೆ ಕೊಡುವ ಹೊಣೆ ಭಾರತಕ್ಕೆ ಸೇರಿದ್ದು . ನಾನು ವೇದಾಂತ ಪ್ರಚಾರಕ್ಕೆ ಅಮೆರಿಕೆಗೆ ಹೋಗಬೇಕೆಂದುಕೊಂಡಿದ್ದೇನೆ. ಪಾಶ್ಚಾತ್ಯ ರಾಷ್ಟ್ರಗಳು ಭಾರತೀಯರಿಗೆ ಆಧುನಿಕ ಕೃಷಿ ವಿಜ್ಞಾನ, ಕೈಗಾರಿಕೆ ಹಾಗೂ ಇತರ ತಾಂತ್ರಿಕ ವಿಷಯಗಳಲ್ಲಿ ಶಿಕ್ಷಣ ನೀಡಿ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ್ಲ ನೀನು ನನಗೆ ನೆರವಾಗಬೇಕೆಂದು ಆಶಿಸುತ್ತೇನೆ’.
1894ರಲ್ಲಿ ಷಿಕಾಗೋದಿಂದ ಮಹಾರಾಜರಿಗೆ ಪತ್ರ ಬರೆಯುತ್ತ, ‘‘ಭಾರತದ ಇಂದಿನ ದುರ್ಗತಿಗೆ ದಾರಿದ್ರ್ಯವೇ ಕಾರಣ. ಜನಸಾಮಾನ್ಯರಿಗೆ ಶಿಕ್ಷಣ ನೀಡಿ, ನಷ್ಟವಾದ ಅವರ ವ್ಯಕ್ತಿತ್ವವನ್ನು ಅವರಿಗೆ ಮರಳಿ ದೊರಕಿಸಿಕೊಡುವುದು ನಮ್ಮ ಪ್ರಥಮ ಕರ್ತವ್ಯ. ನನ್ನ ನೆಚ್ಚಿನ ಮಹಾರಾಜ, ಜೀವನವು ಕ್ಷಣಿಕವಾದುದು, ಜಗತ್ತಿನ ಭೋಗಗಳು ತಾತ್ಕಾಲಿಕವಾದವುಗಳು. ಆದರೆ ಯಾರು ಇತರರಿಗಾಗಿ ಬದುಕುತ್ತಾರೆಯೋ ಅವರದ್ದೇ ಜೀವನ; ಉಳಿದವರು ಬದುಕಿದ್ದರೂ ಸತ್ತಂತೆಯೇ. ಉದಾತ್ತ ಮನಸ್ಕರಾದ, ಭಾರತಾಂಬೆಯ ಶ್ರೇಷ್ಠ ಪುತ್ರರಾದ ನಿಮ್ಮಂಥವರು ಆಕೆಯು ಮೇಲೆದ್ದು ನಿಲ್ಲಲು ಬಹಳಷ್ಟು ನೆರವಾಗಬಲ್ಲಿರಿ; ತನ್ಮೂಲಕ ಶಾಶ್ವತ ಕೀರ್ತಿವಂತರಾಗಬಲ್ಲಿರಿ. ಅಜ್ಞಾನದಲ್ಲಿ ಮುಳುಗಿರುವ ಕೋಟ್ಯವಧಿ ದೀನ-ಆರ್ತ ಭಾರತೀಯರಿಗಾಗಿ ನಿನ್ನ ಆ ಉದಾತ್ತ ಹೃದಯವು ತೀವ್ರವಾಗಿ ಮಿಡಿಯಲಿ ಎಂದು ಪ್ರಾರ್ಥಿಸುವೆ’ ಎಂದಿದ್ದಾರೆ. ಮೈಸೂರು ರಾಜಮನೆತನದ ಮೇಲೆ ಅವರ ಆಶೀರ್ವಾದ ಅಗಾಧವಾಗಿತ್ತು, ಭರವಸೆ ತೀವ್ರವಾಗಿತ್ತು.
ಹೀಗೆ ಸ್ವಾಮಿ ವಿವೇಕಾನಂದರು ಬರೋಡಾದ ದೊರೆ ಗಾಯಕವಾಡ್, ಹೈದರಾಬಾದಿನ ನಿಜಾಮರು, ರಾಮನಾಡಿನ ಅರಸ ಭಾಸ್ಕರ ಸೇತುಪತಿ, ಕೇರಳದ ರಾಜಕುಮಾರರಾದ ಭಟ್ಟನ್ ತಂಬುರನ್ ಹಾಗೂ ಕೊಚ್ಚುನ್ನಿ ತಂಬುರನ್ ಮುಂತಾದ ಹಲವಾರು ರಾಜರುಗಳ ಮೇಲೆ ಬೀರಿದ ಪ್ರಭಾವ ಅತ್ಯಪಾರ. ‘ತಾವು ರಾಜಮಹಾರಾಜರೊಂದಿಗೆ ಒಡನಾಡುವುದರ ಗುಟ್ಟೇನು?’ ಎಂಬ ಪ್ರಶ್ನೆಗೆ ಸ್ವತಃ ಸ್ವಾಮೀಜಿ ಉತ್ತರಿಸಿದ್ದು ಹೀಗೆ-‘‘ರಾಜರ ಮೇಲೆ ಪ್ರಭಾವ ಬೀರಿ, ಅವರ ಗಮನವನ್ನು ಧಾರ್ವಿುಕ ಜೀವನದತ್ತ ತಿರುಗಿಸಿ, ಅವರು ತಮ್ಮ ಸ್ವಧರ್ಮದಲ್ಲಿ ನಿಷ್ಠರಾಗಿರುವಂತೆ ಅರ್ಥಾತ್ ತಮ್ಮ ಪ್ರಜೆಗಳ ಒಳಿತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವಂತೆ ಪ್ರೇರೇಪಿಸುವುದೇ ನನ್ನ ಉದ್ದೇಶ. ಪ್ರಜೆಗಳ ತತ್ಕಾಲದ ಒಳಿತಷ್ಟೇ ಅಲ್ಲದೆ ಅವರ ಭವಿಷ್ಯತ್ತಿನ ಕ್ಷೇಮಾಭ್ಯುದಯವೂ ಈ ರಾಜರನ್ನೇ ಅವಲಂಬಿಸಿದೆ. ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು, ಶಿಕ್ಷಣ ಕ್ರಮವನ್ನು ಅಭಿವೃದ್ಧಿಪಡಿಸಲು ಹಾಗೂ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಅವರಿಂದ ಮಾತ್ರ ಸಾಧ್ಯ. ಯಾರ ಕೈಯಲ್ಲಿ ಅಧಿಕಾರ-ಹಣ ಇದೆಯೋ ಅವರ ಹೃದಯವನ್ನು ಗೆಲ್ಲಲು ಸಾಧ್ಯವಾದರೆ ನನ್ನ ಉದ್ದೇಶ ಶೀಘ್ರವಾಗಿ ಕೈಗೂಡುತ್ತದೆ. ಹೀಗೆ, ಒಬ್ಬ ಮಹಾರಾಜನ ಮೇಲೆ ಪ್ರಭಾವ ಬೀರುವುದರ ಮೂಲಕ ನಾನು ಪರೋಕ್ಷವಾಗಿ ಸಾವಿರಾರು ಜನರಿಗೆ ನೆರವಾಗಬಹುದು’.
ಯತಿರಾಜ ಎಂದೆನಿಸಿದ ಸ್ವಾಮಿ ವಿವೇಕಾನಂದರು ತಮ್ಮ ಸಂಪರ್ಕಕ್ಕೆ ಬಂದ ‘ರಾಜ’ರನ್ನು ‘ರಾಜರ್ಷಿ’ಗಳಾಗಿ ವಿಕಾಸ ಹೊಂದಲು ಕೈಗೊಂಡ ಕಾರ್ಯವು ಅತ್ಯದ್ಭುತ. ಇದಕ್ಕೆ ಕಾರಣವಿಷ್ಟೇ, ಅಂದಿನ ಆಂಗ್ಲ ವಿದ್ಯಾಭ್ಯಾಸವು ಭಾರತೀಯ ಮನಸ್ಸುಗಳನ್ನು ಗುಲಾಮಗಿರಿಗೆ ನೂಕಿತ್ತು, ರೋಗಗ್ರಸ್ತವಾಗಿಸಿತ್ತು. ಆದ್ದರಿಂದ ಭವರೋಗ ವೈದ್ಯರಾದ ವಿವೇಕಾನಂದರು ಸಮಸ್ಯೆಗೆ ಅಂದು ಕಂಡುಕೊಂಡ ಪರಿಹಾರೋಪಾಯವೆಂದರೆ,
‘ಬಡವರಿಗೆ ಬೆಳಕು ನೀಡಿ, ಶ್ರೀಮಂತರಿಗೆ ಹೆಚ್ಚು ಬೆಳಕು ನೀಡಿ!
ಅವಿದ್ಯಾವಂತರಿಗೆ ಬೆಳಕು ನೀಡಿ ವಿದ್ಯಾವಂತರಿಗೆ ಹೆಚ್ಚು ಬೆಳಕು ನೀಡಿ!’
ನಿಜ, ಬಲವಾದ ನೂರು ಕೈಗಳಿರುವ ಸಮಾಜಕ್ಕೆ ಚುರುಕಾದ ಒಂದು ಮಿದುಳು ಬೇಕೇ ಬೇಕಲ್ಲವೇ?
(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)
*****
ರಾಮಕೃಷ್ಣ ಮಿಶನ್‌ನ ಸನ್ಯಾಸಿ ಒಬ್ಬರನ್ನು ನ್ಯೂಯಾರ್ಕ್‌ನ ಪತ್ರಕರ್ತನೊಬ್ಬ ಸಂದರ್ಶಿಸುತ್ತಿದ್ದ.
ಮೊದಲೇ ನಿರ್ಧರಿಸಿದಂತೆ ಪತ್ರಕರ್ತ ಆ ಸನ್ಯಾಸಿಗೆ ಪ್ರಶ್ನೆ ಕೇಳಿದ.
ಪತ್ರಕರ್ತ: ಸರ್, ನಿಮ್ಮ ಹಿಂದಿನ ಲೆಕ್ಚರ್‌ನಲ್ಲಿ contacts and connections ಯೋಗಾಯೋಗ (ಸಂಪರ್ಕ) ಮತ್ತು ಸಂಯೋಗದ (ಸೇರಿಸಿಕೆ) ಬಗ್ಗೆ ಹೇಳಿದ್ದಿರಿ. ನಿಜಕ್ಕೂ ಅದು ಬಹಳ ಗಲಿಬಿಲಿಯದು ಅಂತ ನನಗೆ ಅನ್ನಿಸಿತು. ಸ್ವಲ್ಪ ವಿವರವಾಗಿ ಹೇಳುವಿರಾ?

ಸನ್ಯಾಸಿ ನಕ್ಕು ವಿಷಯವನ್ನು ಬದಲಾಯಿಸಿದರೋ ಎಂಬಂತೆ ಆ ಪತ್ರಕರ್ತನಿಗೆ ಒಂದು ಪ್ರಶ್ನೆ ಹಾಕಿದರು.
"ನೀವು ನ್ಯೂಯಾರ್ಕ್ ನಗರದವರಲ್ಲವೇ?"
ಪ: ಹ್ಞಾಂ.. ಹೌದು
ಸ: ಮನೆಯಲ್ಲಿ ಯಾರ್ಯಾರಿದ್ದಾರೆ?
ಈ ಸನ್ಯಾಸಿ ನನ್ನ ಪ್ರಶ್ನೆಗೆ ಉತ್ತರ ಕೊಡುವುದನ್ನು ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ಅದಕ್ಕೇ ತೀರಾ ವೈಯಕ್ತಿಕ ಮತ್ತು ಬೇಡದ ಪ್ರಶ್ನೆ ಕೇಳುತ್ತಿದ್ದಾರೆ ಎಂದುಕೊಂಡರೂ ಉತ್ತರ ನೀಡಿದ "ನನ್ನ ಅಮ್ಮ ತೀರಿಕೊಂಡಿದ್ದಾರೆ. ಅಪ್ಪ ಇದ್ದಾರೆ. ಮೂವರು ಸಹೋದರರು ಮತ್ತು ಒಬ್ಬಳು ಸಹೋದರಿ.. ಎಲ್ಲರೂ ವಿವಾಹಿತರು.."
ಸನ್ಯಾಸಿ ಮುಖದ ಮೇಲೆ ನಗುವಿನೊಂದಿಗೆ ಮತ್ತೆ ಕೇಳಿದರು. "ನಿಮ್ಮ ತಂದೆಯೊಂದಿಗೆ ಮಾತನಾಡುತ್ತೀರಾ?"
ಪತ್ರಕರ್ತನ ಮುಖದ ಮೇಲಿನ ಕೋಪ ಹೊರಕ್ಕೇ ಕಾಣಿಸಿತ್ತು...
ಸ:ಯಾವಾಗ ನೀವು ಕೊನೆಯ ಸಲ ನಿಮ್ಮ ತಂದೆಯವರ ಜೊತೆಗೆ ಮಾತಾಡಿದ್ದು?
ಪ:(ತನ್ನ ಕಿರಿಕಿರಿಯನ್ನು ಮುಚ್ಚಿಟ್ಟುಕೊಳ್ಳುತ್ತಾ) ಬಹುಶಃ ಒಂದು ತಿಂಗಳ ಹಿಂದೆ
ಸ:ನೀವು ಒಡಹುಟ್ಟಿದವರು ಭೇಟಿ ಆಗ್ತಾ ಇರುವಿರಾ? ಹಿಂದೆ ಯಾವಾಗ ಕುಟುಂಬದ ಎಲ್ಲರೂ ಸೇರಿದ್ದಿರಿ?
ಈಗ ಪತ್ರಕರ್ತನ ಹಣೆಯ ಮೇಲೆ ಬೆವರಿನ ಸಾಲು ಕಾಣಿಸಿಕೊಂಡಿತು. ಈಗ ಸಂದರ್ಶಕ ಯಾರು... ಸನ್ಯಾಸಿಯೋ ಪತ್ರಕರ್ತನೋ?
ಸನ್ಯಾಸಿಯೇ ಪತ್ರಕರ್ತನ ಸಂದರ್ಶನ ಮಾಡುತ್ತಿರುವಂತೆ ತೋರಿತು.
ನಿಡುಸುಯ್ಯುತ್ತಾ ಪತ್ರಕರ್ತ ಹೇಳಿದ. "ಎರಡು ವರ್ಷಗಳ ಹಿಂದೆ ಕ್ರಿಸ್‌ಮಸ್ ಹಬ್ಬಕ್ಕೆ ಸೇರಿದ್ದೆವು"
ಸ:ಎಷ್ಟು ದಿನ ನೀವೆಲ್ಲಾ ಒಟ್ಟಿಗೆ ಇದ್ದಿರಿ?
ಪ:(ಹಣೆಯ ಮೇಲಿನ ಬೆವರೊರೆಸಿಕೊಳ್ಳುತ್ತಾ) ಮೂರು ದಿನಗಳು.
ಸ: ನಿಮ್ಮ ತಂದೆಯವರ ಪಕ್ಕದಲ್ಲಿ ಕುಳಿತು ಎಷ್ಟು ಸಮಯ ಕಳೆದಿರಿ?
ಪತ್ರಕರ್ತ ತಬ್ಬಾಬ್ಬಾಗಿ ಮುಜುಗರಕ್ಕೊಳಗಾಗಿ ಕಾಗದವೊಂದರ ಮೇಲೆ ಏನೋ ಬರೆಯಲಾರಂಭಿಸಿದ.
ಸ: ಉಪಾಹಾರ ಮತ್ತು ಊಟ ಒಟ್ಟಿಗೇ ಮಾಡಿದಿರಾ? ಅವರನ್ನು ಹೇಗಿದ್ದೀರಿ ಎಂದು ಕೇಳಿದಿರಾ? ನಿಮ್ಮ ತಾಯಿಯವರ ಮರಣಾನಂತರ ನಿಮ್ಮ ತಂದೆಯವರ ದಿನಗಳು ಹೇಗೆ ಕಳೆಯುತ್ತಿವೆ ಎಂದು ಕೇಳಿದಿರಾ?
ಪತ್ರಕರ್ತನ ಕಣ್ಣುಗಳಿಂದ ಅಶ್ರು ದಳದಳ ಹರಿಯಲಾರಂಭಿಸಿತು.
ಸನ್ಯಾಸಿ ಈಗ ಪತ್ರಕರ್ತನ ಕೈ ಹಿಡಿದು ಹೇಳಿದರು. "ಮುಜುಗರ ಪಟ್ಟುಕೊಳ್ಳಬೇಡಿ. ದುಃಖಿಸಬೇಡಿ.. ಬೇಸರಿಸಬೇಡಿ. ನನಗೇ ತಿಳಿಯದೇ ನಿಮಗೆ ನೋವುಂಟು ಮಾಡಿದ್ದರೆ ನನ್ನನ್ನು ಕ್ಷಮಿಸಿ. ಆದರೆ ಯೋಗಾಯೋಗ ಮತ್ತು ಸಂಯೋಗದ ಬಗೆಗಿನ ನಿಮ್ಮ ಪ್ರಶ್ನೆಗೆ ಮೂಲತಃ ಇದೇ ಉತ್ತರ. ನಿಮ್ಮ ತಂದೆಯವರೊಂದಿಗೆ ನಿಮಗೆ ಯೋಗಾಯೋಗ (ಸಂಪರ್ಕ) ಇದೆ. ಆದರೆ ಅವರೊಂದಿಗೆ ನಿಮಗೆ ಸಂಯೋಗ (ಸೇರಿಸಿಕೆ) ಇಲ್ಲ. ನೀವು ಅವರೊಂದಿಗೆ ಸೇರಿಕೊಂಡಿಲ್ಲ. ಸೇರಿಸಿಕೆಯು ಎರಡು ಹೃದಯಗಳ ನಡುವೆ ಇರಬೇಕು. ಒಟ್ಟಿಗೇ ಕುಳಿತು ಒಟ್ಟಿಗೇ ಊಟ ಮಾಡಿ, ಒಬ್ಬರಿಗೊಬ್ಬರು ಲಕ್ಷಿಸುತ್ತಾ, ಸ್ಪರ್ಶಿಸುತ್ತಾ, ಹಸ್ತ ಲಾಘವ ನೀಡುತ್ತಾ, ಕಣ್ಣುಗಳನ್ನು ಮಿಳಿತ ಮಾಡುತ್ತಾ, ಒಟ್ಟಿಗೇ ಸ್ವಲ್ಪ ಸಮಯ ಕಳೆಯುವುದು. ನೀವು ಒಡಹುಟ್ಟಿದವರ ನಡುವೆ 'ಸಂಪರ್ಕ' ಇದೆ, ಆದರೆ ಪರಸ್ಪರ 'ಸೇರಿಸಿಕೆ' ಇಲ್ಲ."
ಪತ್ರಕರ್ತ ಕಣ್ಣೊರೆಸಿಕೊಂಡು" ಧನ್ಯವಾದಗಳು ಸರ್ ಇಂತಹ ಸುಂದರ ಅವಿಸ್ಮರಣೀಯ ಪಾಠ ಕಲಿಸಿದ್ದಕ್ಕೆ" ಎಂದ.
ಇದು ಇಂದಿನ ನೈಜತೆ!
ಮನೆಯಲ್ಲಿರಲಿ ಅಥವಾ ಸಮಾಜದಲ್ಲಿರಲಿ... ಎಲ್ಲರಿಗೂ ಸಂಪರ್ಕಗಳಿವೆಯಾಗಲೀ ಸೇರಿಸಿಕೆಗಳೇ ಇಲ್ಲ. ಸಂವಹನವಿಲ್ಲ. ಎಲ್ಲರೂ ಅವರವರ ಪ್ರಪಂಚದಲ್ಲಿ ಮಗ್ನರಾಗಿದ್ದಾರೆ.
'ಸಂಪರ್ಕ' ಮಾತ್ರ ಸಾಲದು... ಸೇರಿಸಿಕೆ ಕೂಡ ಮಾಡಿಕೊಳ್ಳೋಣ. ನಮ್ಮ ಪ್ರೀತಿಪಾತ್ರರ ಬಗ್ಗೆ ಲಕ್ಷ್ಯವಿಡೋಣ. ಒಟ್ಟಿಗೇ ಸಮಯ ಕಳೆದು ಪ್ರೀತಿಯನ್ನು ಹಂಚಿಕೊಳ್ಳೋಙ.
🌹🌹🌹🌹🌹🌹🌹🌹🌹ಅಂದ ಹಾಗೆ ಆ ಸನ್ಯಾಸಿ ಬೇರಾರೂ ಅಲ್ಲ.. ಪ್ರಪಂಚದ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದ.

ಸ್ವಾಮಿ ವಿವೇಕಾನಂದರ ಪ್ರಕಾರ ಯುವಕರು ಎಂದರೆ ಹೀಗಿರಬೇಕು !
೧. ಮುಖದಲ್ಲಿ ತೇಜಸ್ಸು ಇರಬೇಕು
೨. ದೇಹದಲ್ಲಿ ಶಕ್ತಿ ಇರಬೇಕು
೩. ಮನಸ್ಸಿನಲ್ಲಿ ಉತ್ಸಾಹ ಇರಬೇಕು
೪. ಬುದ್ಧಿಯಲ್ಲಿ ವಿವೇಕ ಇರಬೇಕು
೫. ಹೃದಯದಲ್ಲಿ ಕರುಣೆ ಇರಬೇಕು
೬. ಮಾತೃಭೂಮಿಯ ಮೇಲೆ ಪ್ರೇಮ ಇರಬೇಕು
೭. ಇಂದ್ರಿಯಗಳ ಮೇಲೆ ಸಂಯಮ ಇರಬೇಕು
೮. ಮನಸ್ಸು ಸ್ಥಿರವಾಗಿರಬೇಕು
೯. ದೃಢವಾದ ಆತ್ಮವಿಶ್ವಾಸ ಇರಬೇಕು
೧೦. ಪ್ರಬಲವಾದ ಇಚ್ಛಾಶಕ್ತಿ ಇರಬೇಕು
೧೧. ಸಿಂಹದಂತೆ ನಿರ್ಭಯವಾಗಿರಬೇಕು
೧೨. ಅವನ ಧ್ಯೇಯ ಉಚ್ಚವಾಗಿರಬೇಕು
೧೩. ಈಶ್ವರನಂತೆ ಅನಂತವಾಗಿರಬೇಕು
೧೪. ವ್ಯಸನದಿಂದ ಮುಕ್ತನಾಗಿರಬೇಕು
೧೫. ಜೀವನದಲ್ಲಿ ಶಿಸ್ತು ಇರಬೇಕು
೧೬. ಗುರುಗಳಿಗೆ ಆದರವಾಗಿರಬೇಕು
೧೭. ದೀನ ದುರ್ಬಲರಿಗೆ ಮಿತ್ರನಾಗಿರಬೇಕು
೧೮. ಸೇವೆಯಲ್ಲಿ ತತ್ಪರರಾಗಿರಬೇಕು
೧೯. ದೇವರ ಮೇಲೆ ಭಕ್ತಿ ಇರಬೇಕು
೨೦. ಜೀವನದಲ್ಲಿ ನೀತಿ ಇರಬೇಕು
೨೧. ಚಾರಿತ್ರ ಶುದ್ಧವಾಗಿರಬೇಕು
೨೨. ಅವನೇ ಆದರ್ಶ ಯುವಕನಾಗಿರಬೇಕು.
ನಿಮ್ಮ ಜೀವನದ ಶಿಲ್ಪಿಗಳು ನೀವೇ! - ಸ್ವಾಮಿ ವಿವೇಕಾನಂದ.
ರಾಷ್ಟ್ರೀಯ ಯುವ ದಿನದ ಶುಭಾಶಯಗಳು 12 jan 2021
***
Rock day 25th December
ಡಿಸೆಂಬರ್ 25 ಹಿಂದುಗಳು ಮರೆಯುವಂತಿಲ್ಲ
ಹೋರಾಟಕ್ಕೆ ಫಲ ತಡವಾಗಿ ಬರಬಹುದು, ಅಡ್ಡಿಗಳೂ ಬರಬಹುದು - ಆದರೆ ಗುರುಕೃಪೆ ಇದ್ದೇ ಇರುತ್ತದೆ
1962 ಜನವರಿಯಲ್ಲಿ ಮದ್ರಾಸಿನ ರಾಮಕೃಷ್ಣ ಮಿಷನ್ ಕನ್ಯಾಕುಮಾರಿಯ ಬಂಡೆಯ ಮೇಲೆ ಸ್ವಾಮಿ ವಿವೇಕಾನಂದರು ತಪೋಗೈದ ಸ್ಥಳದ ನೆನಪಿಗಾಗಿ ಒಂದು ಸ್ಮಾರಕವನ್ನು ಕಟ್ಟಲು ಮತ್ತು ಸೇತುವೆಯನ್ನು ನಿರ್ಮಾಣ ಮಾಡಲು ಸಂಕಲ್ಪ ಮಾಡುತ್ತದೆ. ಆದರೆ ಅಲ್ಲಿನ ಸ್ಥಳೀಯ ಕ್ರಿಶ್ಚಿಯನ್ ರಿಗೆ ಇದನ್ನು ಸಹಿಸಲಾಗಲಿಲ್ಲ. ಹಾಗಾಗಿ ಅದು ವಿವೇಕಾನಂದರ ಶಿಲೆಯಲ್ಲ ಅದು ಸೇಂಟ್ ಕ್ಸೇವಿಯರ್ ಬಂಡೆ ಎಂದು ಪುಕಾರು ಮಾಡಿದರು, ಅಷ್ಟೆಅಲ್ಲದೆ ಆ ಬಂಡೆಯ ಮೇಲೆ ಒಂದು ಶಿಲುಬೆಯನ್ನು ಪ್ರತಿಷ್ಠಾಪನೆ ಮಾಡಿಬಿಟ್ಟರು. ಇದರಿಂದ ಹಿಂದೂ ಮತ್ತು ಕ್ರಿಶ್ಚಿಯನ್ ರ ನಡುವೆ ಹೋರಾಟ ಆರಂಭವಾಯಿತು. ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯಾಂಗ ತನಿಖೆ ಮಾಡಿ ....ಇದು ಸೇಂಟ್ ಕ್ಸೇವಿಯರ್ ಬಂಡೆ ಅಲ್ಲ, ಇದು ಸ್ವಾಮಿ ವಿವೇಕಾನಂದರ ಬಂಡೆ, ಶಿಲುಬೆ ಇಟ್ಟಿರುವುದು ಅಕ್ರಮವಾಗಿದೆ ಎಂಬ ತೀರ್ಪು ಹೊರಡಿಸಿತು. ಹಿಂದುಗಳು ಮಧ್ಯರಾತ್ರಿ ವೇಳೆಗೆ ಬಂಡೆಗೆ ಹೋಗಿ ಶಿಲುಬೆಯನ್ನು ತೆಗೆದು ವಿಸರ್ಜನೆ ಮಾಡುತ್ತಾರೆ. ಇದು ಕ್ರಿಶ್ಚಿಯನ್ ಮತ್ತು ಹಿಂದುಗಳ ನಡುವಿನ ಹೋರಾಟ ಮತ್ತಷ್ಟು ತೀವ್ರ ಮಾಡುತ್ತದೆ. ಆ ಬಂಡೆಯ ಸುತ್ತಲು ಪೊಲೀಸರನ್ನು ಕಾವಲಿಗೆ ಹಾಕಿ ನಿಷೇಧಿತ ಜಾಗವೆಂದು ಘೋಷಿಸುತ್ತಾರೆ. ಅದು ವಿವೇಕಾನಂದರ ಬಂಡೆಯಾದರೂ ಅಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಬಾರದು ಪ್ರಕೃತಿ ಸೌಂದರ್ಯ ಹಾಳಾಗುತ್ತದೆ ಎಂದು ಆಗಿನ ಕೇಂದ್ರ ಸಾಂಸ್ಕೃತಿಕ ಸಚಿವ ಹುಮಾಯೂನ್ ಕಬೀರ್ ಕುಂಟು ನೆಪ ಒಡ್ಡುತ್ತಾರೆ. ನಂತರ ರಾಮಕೃಷ್ಣ ಮಿಷನ್ ಸಮಿತಿಯು ಆಗಿನ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಭಕ್ತವತ್ಸಲಂ ಎಂಬುವವರನ್ನು ಭೇಟಿಯಾಗಿ ಸಹಾಯ ಕೇಳುತ್ತಾರೆ. ಆ ಪುಣ್ಯಾತ್ಮ ...ಹುಮಾಯೂನ್ ಕಬೀರ್ ನ ಮಾತಿಗೆ ಕಿವಿಗೊಟ್ಟು ಅಲ್ಲಿ ಸ್ಮಾರಕ ಕಟ್ಟಲು ಅನುಮತಿ ಕೊಡದೆ, ಕೇವಲ ಫಲಕವನ್ನು ಹಾಕಲು ಅನುಮತಿ ಕೊಡುತ್ತಾನೆ. ಅದರಂತೆ 1963 ಜನವರಿ 17 ರಂದು ಒಂದು ಫಲಕವನ್ನು ಸ್ಥಾಪಿಸಲಾಗುತ್ತದೆ (ಒಂದು ವರ್ಷದ ಹೋರಾಟ)
ಆಗಿನ ಪ್ರಧಾನಿಗಳು ಜವಾಹರ್ ಲಾಲ್ ನೆಹರು ಆಗಿದ್ದ ಕಾರಣ ಹಿಂದುಗಳ ಹೋರಾಟ ಅಷ್ಟು ಸುಲಭವಾಗಿ ಯಶಸ್ಸು ಕಾಣಲಿಲ್ಲ. ಆದರೂ ಹೋರಾಟದ ವಿಚಾರದಲ್ಲಿ ಹಿಂದುಗಳು ಗುರಿ ಮುಟ್ಟುವ ತನಕ ಬಿಡಲ್ಲ ಎಂಬುವುದಕ್ಕೆ ಸಾಕ್ಷಿ ಎಂಬಂತೆ....ರಾಮಕೃಷ್ಣ ಮಠ ಮತ್ತು ಮಿಷನ್ ಗಳ ಬೆಂಬಲದ ಮೇರೆಗೆ ಕಟ್ಟರ್ ಹಿಂದುವಾದಿ ಆರ್.ಎಸ್.ಎಸ್ ನ ಕಾರ್ಯಕರ್ತರಾಗಿದ್ದ "ಏಕನಾಥ್ ರಾನಡೆ" ಯವರು ಸ್ಮಾರಕ ನಿರ್ಮಾಣದ ಮಂಡಳಿಯ ಸಂಘಟನಾ ಕಾರ್ಯದರ್ಶಿಗಳಾಗುತ್ತಾರೆ.
ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಹಾಯ ಮತ್ತು ಸಲಹೆಯನ್ನು ಪಡೆದು...ಸ್ಮಾರಕ ನಿರ್ಮಾಣಕ್ಕಾಗಿ ಸಂಸತ್ತಿನಲ್ಲಿ 323 ಸದಸ್ಯರ ಸಹಿಗಳನ್ನು ಸಂಗ್ರಹಿಸಿ ಸರ್ವಾಂಗೀಣ ಬೆಂಬಲವನ್ನು ಪಡೆಯುತ್ತಾರೆ. ಅನಿವಾರ್ಯವಾಗಿ ಮುಖ್ಯಮಂತ್ರಿ ಭಕ್ತತ್ಸಲಂರವರು...ಬಂಡೆಯ ಮೇಲೆ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲು ಅನುಮತಿ ಕೊಡಲೇ ಬೇಕಾಯಿತು. ಆದರೆ ಆ ಪುಣ್ಯಾತ್ಮ ಕೇವಲ 15 X 15 ಅಡಿ ದೇವಾಲಯ ನಿರ್ಮಾಣ ಮಾಡಿಕೊಳ್ಳಬಹುದು ಎಂದು ಅನುಮತಿ ಕೊಡುತ್ತಾನೆ.
ಅಷ್ಟಕ್ಕೆ ಸುಮ್ಮನಾಗದ ಏಕನಾಥ್ ರಾನಡೆಯವರು ಶಂಕರಾಚಾರ್ಯರ ಪರಂಪರೆಯ ಕಂಚಿ ಕಾಮಕೋಟಿ ಪೀಠದ ಯತಿಗಳಾಗಿದ್ದ ಚಂದ್ರಶೇಖರೇಂದ್ರ ಸರಸ್ವತೀ ಸ್ವಾಮಿಗಳ ಶಿಫಾರ್ಸುನ್ನು ಸಂಗ್ರಹಿಸಿ....130 ಅಡಿ ಮತ್ತು 1+1 ⁄ 2 ಇಂಚು × 56 ಅಡಿ ಮಂದಿರವನ್ನು ನಿರ್ಮಿಸಲು ಅನುಮತಿ ಕೋರುತ್ತಾರೆ. ಚಂದ್ರಶೇಖರೇಂದ್ರ ಸರಸ್ವತೀ ಸ್ವಾಮಿಗಳ ಅಪ್ಪಣೆಯನ್ನು ಮೀರಲಾಗದೆ ಮುಖ್ಯಮಂತ್ರಿ ಭಕ್ತತ್ಸಲಂ ರವರು ಅನುಮತಿ ನೀಡುತ್ತಾರೆ.
ಸೇತುವೆ ಇರದ, ಸಮುದ್ರದ ಮಧ್ಯೆ ಇರುವ ಆ ಬಂಡೆಯ ಮೇಲೆ ಮಂದಿರ ನಿರ್ಮಾಣ ಮಾಡುವುದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ. ಹಣದ ಕೊರತೆ ವಿಪರೀತವಾಗಿತ್ತು. ಕಡೆಯಲ್ಲಿ ರಾನಡೆಯವರು ಜನರಿಂದ "ಒಂದು ರೂಪಾಯಿ ದೇಣಿಗೆ ಸಂಗ್ರಹ" ಎಂಬ ಅಭಿಯಾನವನ್ನು ರಾಷ್ಟ್ರಾದ್ಯಂತ ಆರಂಭ ಮಾಡಿದರು. ಒಂದು ರೂಪಾಯಿಂದ ಆರಂಭವಾಗಿ ಸರಿಸುಮಾರು ಒಂದು ಕೋಟಿ ಮೂವತ್ತೈದು ಲಕ್ಷ ಹಣದ ಸಂಗ್ರಹದೊಂದಿಗೆ....1970 ರಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಯಶಸ್ವಿಯಾಯಿತು.
ಸತತ 8 ವರ್ಷಗಳ ಹೋರಾಟ...ಅನೇಕ ಅಡ್ಡಿ ಆತಂಕಗಳು ಎದುರಾದರೂ ಹಠ ಬಿಡದೆ ಗುರಿ ಸಾಧಿಸಲಾಯಿತು. ಕಣ್ಣಿಗೆ ಕಾಣುವಂತೆ ಏಕನಾಥ್ ರಾನಡೆ, ಲಾಲ್ ಬಹದ್ದೂರ್ ಶಾಸ್ತ್ರಿಗಳು, ಕಂಚಿ ಪರಮಾಚಾರ್ಯರು ಮುಖ್ಯಪಾತ್ರದಲ್ಲಿದ್ದರೂ....ಈ ಹೋರಾಟದ ಜಯದ ಹಿಂದೆ ಓರ್ವ ಸಂತರ ತಪಸ್ಸು ಪ್ರಮುಖ ಕಾರಣವಾಗಿದೆ.
ಹಣ ಸಂಪಾದನೆ ಹೇಗೆ, ಯಾವ ಕೆಲಸ ಮಾಡಬೇಕು, ಯಾವ ವಾಹನ ಖರೀದಿಸಬೇಕು, ಶ್ರೀಮಂತರಾಗುವುದು ಹೇಗೆ, ಮದುವೆ ಯಾವಾಗ, ಇತ್ಯಾದಿ ಭೋಗ ಜೀವನದ ಕನಸ್ಸು ಕಾಣುವ "ಯೌವನದ ವಯಸ್ಸಿನಲ್ಲಿ"....ಇವಕ್ಕೆ ವಿರುದ್ಧವಾಗಿ, ದೀನರ ಉದ್ಧಾರತೆಯ ಕನಸನ್ನು ಹೊತ್ತ ಪರಮವಿರಾಗಿ ವೀರ ಸನ್ಯಾಸಿ, ಯೋಧ ಸನ್ಯಾಸಿ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರದ ನಡುವಿನಲ್ಲಿರುವ ಬಂಡೆಯ ಮೇಲೆ ಕುಳಿತು ಗಂಭೀರವಾದ ತಪಸ್ಸನ್ನು ಆಚರಿಸಿದ ದಿನ ಡಿಸೆಂಬರ್ 25, 1892.
ಲಕ್ಷ್ಮೀಯನ್ನು ಪೂಜೆ ಮಾಡುತ್ತೇವೆ ಆದರೆ ಭಾರತದಲ್ಲಿ ಅನೇಕರು ಬಡವರಗಿದ್ದಾರೆ, ಸರಸ್ವತಿಯನ್ನು ಪೂಜೆ ಮಾಡುತ್ತೇವೆ ಅನೇಕರಿಗೆ ವಿದ್ಯೆ ಇಲ್ಲ, ದುರ್ಗೆಯನ್ನು ಪೂಜೆ ಮಾಡುತ್ತೇವೆ ಅನೇಕರಿಗೆ ಶಕ್ತಿಯೇ ಇಲ್ಲ, ಏನಿದು ವಿಚಿತ್ರ ವಿಪರ್ಯಾಸವೆಂದು, ಭಾರತಾಂಬೆಯನ್ನು ಕುರಿತು ಮೂರುದಿನಗಳ ಕಾಲ ತಪಸ್ಸನ್ನು ಆಚರಿಸುತ್ತಾರೆ. ತಪಸ್ಸಿನ ಫಲವಾಗಿ ಶಂಕರಾಚಾರ್ಯರು ಹೇಳಿದ "ತತ್ತ್ವಮಸಿ" ವಾಕ್ಯವನ್ನು ಸರಿಯಾಗಿ ಉಪದೇಶಿಸಿದರೆ ನರನು ನಾರಾಯಣನಾಗಿ ಪ್ರಕಟವಾಗುತ್ತಾನೆ. ಬಡವನಿರಬಹುದು, ದರಿದ್ರನಿರಬಹುದು ಆತನಿಗೆ ಸರಿಯಾದ ಸೌಲಭ್ಯ, ಸಹಕಾರ, ಮಾರ್ಗದರ್ಶನ ನೀಡಿದಲ್ಲಿ, ಆತನನ್ನು ಉದ್ಧಾರ ಮಾಡಬಹುದು. ದೀನರಿಗೆ ಸಹಾಯ ಮಾಡಿ - ಎಂಬ ಸಂದೇಶವನ್ನು ಸಾರುತ್ತಾರೆ.
ಸ್ವಾಮಿ ವಿವೇಕಾನಂದರು ತಪಸ್ಸನ್ನು ಆಚರಿಸಿದ ಬಂಡೆ ಸಾಧಾರಣ ಕಲ್ಲಲ್ಲ. ಸಾಕ್ಷಾತ್ ಪಾರ್ವತಿ ದೇವಿಯು ಶಿವನನ್ನು ಕುರಿತು ತಪಸ್ಸನ್ನು ಆಚಾರಿಸಿದ ಸ್ಥಳ. ಶಾಕ್ತರಿಗೆ ಆ ಬಂಡೆಯು ಒಂದು ಶಕ್ತಿ ಪೀಠ.
ಅದೇ ಶಿಲಾ ಖಂಡದ ಮೇಲೆ ಪರಾಶರ ಋಷಿಗಳು ಕೂಡ ತಪಗೈದದ್ದು.
ಶಂಕರ ಭಗವತ್ಪಾದರು ತಮ್ಮ ಶಿಷ್ಯರೊಡನೆ ಪರ್ಯಟನೆಯಲ್ಲಿರುವಾಗ ಕನ್ಯಾಕುಮಾರಿ ಕ್ಷೇತ್ರಕ್ಕೆ ಬಂದಿದ್ದರು ಎಂಬ ಉಲ್ಲೇಖವೂ ಇದೆ( ವಿವೇಕಾನಂದರಿಗೂ ಪೂರ್ವದಲ್ಲಿ). ಅದೇ ಬಂಡೆಯ ಮೇಲೆ ಶಂಕರಾಚಾರ್ಯರ ಪರಂಪರೆಯ ಸಂನ್ಯಾಸಿಗಳಾದ "ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯರಾದ - ವಿದ್ಯಾರಣ್ಯ ಸ್ವಾಮಿಗಳು" ಮೂರು ದಿನ ತಪಸ್ಸನ್ನು ಆಚರಿಸಿದ್ದರು (14 ನೆ ಶತಮಾನದಲ್ಲಿ)*"ಪಾರ್ವತಿ ದೇವಿಯ - ಪರಾಶರ ಋಷಿಗಳ - ಶಂಕರಾಚಾರ್ಯರ - ವಿದ್ಯಾರಣ್ಯರ - ವಿವೇಕಾನಂದರ - ಭಗವಾನ್ ಶ್ರೀಧರ ಸ್ವಾಮಿಗಳ ಸ್ಪರ್ಶದಿಂದ - ಕನ್ಯಾಕುಮಾರಿಯ ಶಿಲಾ ಖಂಡವು ಗುರು ಪೀಠವಾಯಿತು"
ಆ ಸಂತರೆ ವರದಹಳ್ಳಿಯ "ಭಗವಾನ್ ಶ್ರೀಧರ ಸ್ವಾಮಿಗಳು".......
ಮುಂದೆ ಒಂದು ಕಾಲದಲ್ಲಿ ಈ ಪವಿತ್ರ ಬಂಡೆಯ ಮೇಲೆ ಮಂದಿರ ನಿರ್ಮಾಣವಾಗಲಿದೆ ಅದಕ್ಕೆ ಅನೇಕ ಅಡ್ಡಿಗಳೂ ಬರುವುದುಂಟು ಎಂಬುವುದನ್ನು ಮುಂಚೆಯೇ ಅರಿತಿದ್ದ ಶ್ರೀಧರ ಸ್ವಾಮಿಗಳು....1958 ನವಂಬರ್ ನಲ್ಲಿ ಕನ್ಯಾಕುಮಾರಿಯ ಆ ಬಂಡೆಯ ಮೇಲೆ ಮೂರು ದಿನಗಳ ಕಾಲ ಸಂಪೂರ್ಣ ಉಪವಾಸವಿದ್ದು ತಪಸ್ಸನ್ನು ಆಚರಿಸುತ್ತಾರೆ.
ಶಿಷ್ಯರನ್ನೆಲ್ಲ ಸಮುದ್ರದ ದಡದ ಬಳಿಯೇ ಇರಲು ಹೇಳಿ...ತಾವೊಬ್ಬರೇ ತೆಪ್ಪದಂತ್ತಿರುವ ಹಲಗೆಯ ಮೇಲೆ ಕುಳಿತು ಬಂಡೆಯನ್ನು ತಲುಪುತ್ತಾರೆ. ಬಂಡೆಯ ಮೇಲೆ ಚಪ್ಪರವಿದ್ದರೂ ಅದರ ಆಶ್ರಯ ಪಡೆಯದೆ... ಬಸಿಲು ಚಳಿ ಮಳೆಯನ್ನು ಲೆಕ್ಕಿಸದೆ ಒಂದುತೊಟ್ಟು ನೀರನ್ನು ಸಹ ಸ್ವೀಕರಿಸದೆ ಮೂರು ದಿನಗಳ ಕಾಲ ಮೌನವಾಗಿ ತಪಸ್ಸನ್ನು ಆಚರಿಸುತ್ತಾರೆ. ಕಡೆಯ ದಿನ ಭಕ್ತಾದಿಗಳಿಗೆ ವಿವೇಕಾನಂದರ ಬಂಡೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಸುತ್ತಾರೆ. ಆ ಬಂಡೆಗೆ ಪರಾಶರ ಬಂಡೆ ಎಂಬ ಹೆಸರು ಕೂಡ ಉಂಟೆಂದು ತಿಳಿಸುತ್ತಾರೆ.
ಇಷ್ಟೆಲ್ಲಾ ಮಹಾನುಭಾವರ ತಪ್ಪಸಿಗೆ ಆಸನವಾದ ಆ ಶಿಲಾ ಖಂಡ ...ಗುರು ಪೀಠವಲ್ಲದೆ ಮತ್ತಿನ್ನೇನು !
ಡಿ 25 ಸ್ವಾಮಿ ವಿವೇಕಾನಂದರು ತಪಸ್ಸು ಆಚರಿಸಿದ ದಿನವಾದ್ದರಿಂದ....ಡಿಸೆಂಬರ್ 25 Rock Day ಎಂದೇ ಆಚರಿಸಲಾಗುವುದು.
- ಶ್ರೀನಾಥ್ ಋಗ್ವೇದಿ
#Tattva_Shankara
***
The meaning behind this emblem, in the language of Vivekananda himself: “The wavy waters in the picture are symbolic of Karma, the lotus of Bhakti, and the rising-sun of Jnana. The encircling serpent is indicative of Yoga and awakened Kunadalini Shakti, while the swan in the picture stands for Paramatman.
No comments:
Post a Comment