_*(ಪ್ರಮುಖ ಆಯುರ್ವೇದಸಂಹಿತೆಗಳು)*_
*चरकः सुश्रुतश्चैव वाग्भटश्च तथाऽपरः ।*
*मुख्याश्च संहिता वाच्यास्तिस्र एव युगे युगे ॥ ४ ॥*
(हारीतसंहिता)
*ಚರಕಃ ಸುಶ್ರುತಶ್ಚೈವ ವಾಗ್ಭಟಶ್ಚ ತಥಾऽಪರಃ |*
*ಮುಖ್ಯಾಶ್ಚ ಸಂಹಿತಾ ವಾಚ್ಯಾಸ್ತಿಸ್ರ ಏವ ಯುಗೇ ಯುಗೇ || ೪ ||*
(ಹಾರೀತಸಂಹಿತಾ)
चरकः (चरकसंहिता), सुश्रुतः (सुश्रुतसंहिता), तथा च अपरः वाग्भटः (वाग्भटसंहिता / अष्टाङ्गहृदयम् अष्टाङ्गसङ्ग्रहः च) च एव तिस्रः (संहितात्रयमेव) युगे युगे (कृतादिप्रतियुगम् / चतुर्ष्वपि युगेषु) च एव मुख्याः संहिताः (प्रधानाः आयुर्वेदवैद्यकीयसंहिताः इति) वाच्याः (प्रोक्ताः वक्तव्याः, वा) ॥
ಚರಕಸಂಹಿತೆ, ಸುಶ್ರುತಸಂಹಿತೆ ಹಾಗೂ ವಾಗ್ಭಟಸಂಹಿತೆಗಳು (ಅಷ್ಟಾಂಗಹೃದಯಮ್ ಹಾಗೂ ಅಷ್ಟಾಂಗಸಂಗ್ರಹಃ)— ಈ ಮೂರು ಮಾತ್ರ ಕೃತಾದಿ ನಾಲ್ಕುಯುಗಗಳಲ್ಲೂ ಪ್ರಮುಖವಾದ ಆಯುರ್ವೇದವೈದ್ಯಕೀಯ ಸಂಹಿತೆಗಳೆಂದು ಪರಿಗಣಿಸಲ್ಪಡಬೇಕು / ಹೇಳಲ್ಪಡಬೇಕು.
चरकप्रतिसंस्कृतस्य अग्निवेशतन्त्रस्य चरकसंहितायाः वा महत्त्वम्
*_ಚರಕಪ್ರತಿಸಂಸ್ಕೃತವಾದ ಅಗ್ನಿವೇಶತನ್ತ್ರದ ಅಥವಾ ಚರಕಸಂಹಿತೆಯ ಮಹತ್ತ್ವವು_*
*अग्निवेशकृते तन्त्रे चरकप्रतिसंस्कृते ।*
*यदिहास्ति तदन्यत्र यन्नेहास्ति न तत् क्वचित् ॥ ५ ॥*
(दृढबल)
*ಅಗ್ನಿವೇಶಕೃತೇ ತನ್ತ್ರೇ ಚರಕಪ್ರತಿಸಂಸ್ಕೃತೇ |*
*ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್ || ೫ ||*
(ದೃಢಬಲ)
चरकप्रतिसंस्कृते (चरकाचार्येण परिष्कृते) अग्निवेशकृते (अग्निवेशाचार्येण विरचिते) तन्त्रे (चरकसंहिता इति प्रसिद्धे आयुर्वेदशास्त्रे), इह (अत्र, अस्मिन् ग्रन्थे) यत् अस्ति (ये विषयाः सन्ति) तत् अन्यत्र (ते विषयाः अन्येष्वपि ग्रन्थेषु, अन्यासु आयुर्वेदसंहितासु वा अपि वर्तन्ते) । (किन्तु) इह (चरकसंहितायां) यत् (ये विचाराः) न अस्ति (न वर्तन्ते), तत् (ते विचाराः) क्वचित् (अन्यत्र कुत्रापि) न (न सन्ति) ॥ (इयं चरकसंहिता कायचिकित्साविषये आयुर्वेदशास्त्रेषु विश्वकोशत्वेन विराजते इत्यर्थः ॥)
आदौ महाभारते व्यासेनोक्तम् — “धर्मे चार्थे च कामे च मोक्षे च भरतर्षभ । यदिहास्ति तदन्यत्र यन्नेहास्ति न तत्क्वचित् ॥” इति । तदनन्तरं वाल्मीकिना योगवासिष्ठे प्रोक्तम्— “यदिहास्ति तदन्यत्र यन्नेहास्ति न तत्क्वचित् । इमं समस्तविज्ञानशास्त्रकोषं विदुर्बुधाः ॥” इति । यथा अस्मिन् श्लोके चरकसंहितायाः कायचिकित्साविषयविस्तारस्य महत्त्वं वर्णितं तथैव पश्चात् कालान्तरे, आयुर्वेदरहस्यदीपिकायां सुश्रुतसंहितायाः शल्याङ्गस्य महत्त्वम् अपि इत्थं वर्णितम्— “कायबालग्रहोर्ध्वे च जरादंष्ट्राविषे तथा । तदिहास्ति यदन्यत्र शल्यं चास्य तु न क्वचित् ॥” इति ॥
ಚರಕಾಚಾರ್ಯರಿಂದ ಪರಿಷ್ಕೃತವಾಗಿ ಚರಕಸಂಹಿತೆಯೆಂದು ಪ್ರಸಿದ್ಧವಾಗಿರುವ ಅಗ್ನಿವೇಶಮುನಿದೃಷ್ಟವಾದ ಅಗ್ನಿವೇಶತಂತ್ರದಲ್ಲಿ ಏನೇನಿದೆಯೋ ಅದೆಲ್ಲವೂ ಬೇರೆಡೆಯೂ ಕಂಡುಬರುತ್ತದೆ. ಆದರೆ, ಇದರಲ್ಲಿ ಏನಿಲ್ಲವೋ, ಅಂಥದ್ದು ಬೇರೆಡೆ ಎಲ್ಲಿಯೂ ಇಲ್ಲ. (ಹೀಗೆ, ಚರಕಸಂಹಿತೆಯು ಕಾಯಚಿಕಿತ್ಸಾ / General Medicine ವಿಚಾರದಲ್ಲಿ ಸಮಸ್ತ ಆಯುರ್ವೇದಶಾಸ್ತ್ರಗಳಲ್ಲೇ ವಿಶ್ವಕೋಶದಂತೆ ವಿರಾಜಿಸುತ್ತಿದೆ ಎಂದರ್ಥ.)
_ಮೊತ್ತಮೊದಲಿಗೆ *ಮಹಾಭಾರತದಲ್ಲಿ ವ್ಯಾಸರಿಂದ ಹೇಳಲ್ಪಟ್ಟಿತು— “ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ | ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ ||”* (“ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧಪುರುಷಾರ್ಥಸಾಧನೆಗೆ ಪೂರಕವಾಗಿರುವ ಯಾವ ವಿಚಾರಗಳು ಇದರಲ್ಲಿ / ಮಹಾಭಾರತದಲ್ಲಿ ಇವೆಯೋ ಅವು ಬೇರೆಡೆಯೂ ಕಂಡುಬರಬಹುದಾದರೂ, ಇದರಲ್ಲಿಲ್ಲದಿರುವುದು ಮಾತ್ರ ಬೇರೆಲ್ಲೂ ಸಿಗದು”) ಎಂಬುದಾಗಿ. ಇದರ ಬಳಿಕ *ವಾಲ್ಮೀಕಿಗಳಿಂದ ಯೋಗವಾಸಿಷ್ಠದಲ್ಲಿ ಪ್ರೋಕ್ತವಾದುದು— “ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ | ಇಮಂ ಸಮಸ್ತವಿಜ್ಞಾನಶಾಸ್ತ್ರಕೋಷಂ ವಿದುರ್ಬುಧಾಃ ||”* (“ಇಲ್ಲಿ / ಯೋಗವಾಸಿಷ್ಠದಲ್ಲಿ ಇರುವುದು ಬೇರೆಡೆ ಇರಬಹುದು; ಆದರೆ, ಇಲ್ಲಿಲ್ಲದಿರುವುದು ಬೇರಿಲ್ಲ. ಇದನ್ನು ಸಮಸ್ತ ವಿಜ್ಞಾನ ಹಾಗೂ ಶಾಸ್ತ್ರಗಳ ಕೋಶವೆಂದು ವಿಬುಧರು / ಜ್ಞಾನಿಗಳು ತಿಳಿಯುವರು”) ಎಂದು. ಹೇಗೆ ಈ ಶ್ಲೋಕದಲ್ಲಿ ಚರಕಸಂಹಿತೆಯ ಕಾಯಚಿಕಿತ್ಸಾವಿಷಯವಿಸ್ತಾರದ ಮಹತ್ತ್ವವು ವರ್ಣಿತವಾಗಿದೆಯೋ, ಅಂತೆಯೇ ಇದರ ತರುವಾಯದ ಕಾಲಘಟ್ಟದಲ್ಲಿ, *ಆಯುರ್ವೇದರಹಸ್ಯದೀಪಿಕೆಯಲ್ಲಿ ಸುಶ್ರುತಸಂಹಿತೆಯ ಶಲ್ಯಾಂಗ / ಶಸ್ತ್ರಚಿಕಿತ್ಸೆಯ ವಿಚಾರದ ಮಹತ್ತ್ವವೂ* ಈ ರೀತಿಯಾಗಿ ವರ್ಣಿಸಲ್ಪಟ್ಟಿತು— *“ಕಾಯಬಾಲಗ್ರಹೋರ್ಧ್ವೇ ಚ ಜರಾದಂಷ್ಟಾವಿಷೇ ತಥಾ | ತದಿಹಾಸ್ತಿ ಯದನ್ಯತ್ರ ಶಲ್ಯಂ ಚಾಸ್ಯ ತು ನ ಕ್ವಚಿತ್ ||”* (“ಕಾಯಚಿಕಿತ್ಸೆ / ದೊಡ್ಡವರ ರೋಗಚಿಕಿತ್ಸೆ / General Medicine, ಬಾಲಗ್ರಹ / ಕೌಮಾರಭೃತ್ಯ / ಮಕ್ಕಳರೋಗಚಿಕಿತ್ಸೆ / Paediatrics ಮತ್ತು, ಊರ್ಧ್ವರೋಗ / ಶಿರೋರೋಗ / ಕಿವಿ,ಮೂಗು,ಗಂಟಲು ಹಾಗೂ ಶಿರ,ಕುತ್ತಿಗೆಯ ರೋಗ ಚಿಕಿತ್ಸೆ / ENT & Head and Neck diseases, ಹಾಗೆಯೇ ಜರಾರೋಗ / ವೃದ್ಧಾಪ್ಯ ಆರೈಕೆ / Geriatrics ಮತ್ತು ಹಾವು ಮುಂತಾದ ವಿಷಜಂತುಕಡಿತ ಹಾಗೂ ವಿಷಪ್ರಾಶನಾದಿಚಿಕಿತ್ಸೆ— ಇವೆಲ್ಲವುಗಳು ಬೇರೆಡೆಯಲ್ಲಿರುವಂತೆಯೇ ಸುಶ್ರುತಸಂಹಿತೆಯಲ್ಲೂ ಇವೆ. ಆದರೆ, ಇದರಲ್ಲಿರುವ ಶಲ್ಯತಂತ್ರವಾದರೋ ಬೇರೆಡೆ ಕಂಡುಬರುವುದಿಲ್ಲ”) ಎಂಬುದಾಗಿ.
***
ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಹೇಳುವಂತೆ ನಮ್ಮ ದೇಹದ ಆರೋಗ್ಯ ಸ್ಥಿರವಾಗಿ ಇರಬೇಕಾದರೆ ಮೊದಲು ನಮ್ಮ ಉಸಿರಾಟ ಸ್ಥಿರವಾಗಬೇಕು... ಏಳನೇ ವಯಸ್ಸಿಗೆ ಉಪನಯನವಾದ ವಟುವಿಗೆ ಮೊದಲು ಕೊಡುವ ಟ್ರೈನಿಂಗ್ ಪ್ರಾಣಾಯಾಮ... ಸಂಧ್ಯಾವಂದನೆ ಅಥವಾ ಯಾವುದೇ ಧಾರ್ಮಿಕ ಕ್ರಿಯೆಯಲ್ಲದಾರೂ ಕೂಡ ಮೊದಲು ಆಚಮನ, ಪ್ರಾಣಾಯಾಮ ಆಮೇಲೆ ತಾನು ಏನು ಕರ್ಮ ಮಾಡ್ತೇನ ಅನ್ನುವ ಸಂಕಲ್ಪ....
ನಮ್ಮ ಶಾಸ್ತ್ರ ಹೇಳುತ್ತೆ, ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಾಂಗದ ಕ್ರಿಯೆ ನಡೆಯುವುದು ಆಯಾ ದೇವತಾ ಶಕ್ತಿ ಆಯಾ ದೇಹದ ಭಾಗದಲ್ಲಿ ಕೂತು ಮಾಡುವ ಕ್ರಿಯೆ ಅದು ಅಂತ...
ಉದಾಹರಣೆಗೆ, ನಮ್ಮ ಕಣ್ಣು ಸುಂದರ ಜಗತ್ತಿನ ಅನುಭವವನ್ನು ಕಾಣ್ಕೆಯ ಮೂಲಕ ನಮಗೆ ಕೊಡುತ್ತೆ. ಕಣ್ಣು ಅಥವಾ ಯಾವುದೇ ಇಂದ್ರಿಯ ಗಳಾಗಲಿ ಅದು ಜಡ ವಸ್ತು... ಕಣ್ಣಿನ ಅಭಿಮಾನಿದೇವತೆಯಾಗಿ "ಸೂರ್ಯ" ಕಣ್ಣಿನಲ್ಲಿ ಕೂತದ್ದರಿಂದ ನಮಗೆ ಕಣ್ಣು ಕಾಣೋದು... ಹೊರಗೆ ಆಕಾಶದಲ್ಲಿ ಜಗಮಗಿಸುವ ಸೂರ್ಯಮಂಡಲ ಉಂಟಲ್ಲ ಅದು ಜಡ ಅದು ನಮ್ಮ ಕಣ್ಣಿಗೂ ಕಾಣುತ್ತೆ, ಅದರ ಅಭಿಮಾನಿದೇವತೆ ಸೂರ್ಯ... ಆ ದೇವತೆ ನಮ್ಮ ಕಣ್ಣಿಗೆ ಕಾಣಿಸೋಲ್ಲ... ಯಾವ ಸೂರ್ಯ ಸೂರ್ಯಂಡಲದ ಅಭಿಮಾನಿ ದೇವತೆಯೋ (ಅದರಿಂದಲೇ ಆಕಾಶದ ಸೂರ್ಯನನ್ನು ಮುಗಿಲಕಣ್ಣು ಅಂತಾರೆ) ಅದೇ ಸೂರ್ಯ ನಮ್ಮ ಕಣ್ಣಿನ ದೇವತೆ ಕೂಡ... ಅದರಿಂದಲೇ, ಸೂರ್ಯ ಆಗಸದಲ್ಲಿ ಉದಯಿಸಿದಾಗ ನಮ್ಮ ಕಣ್ಣು ತೆರೆಯುತ್ತೆ... ಸೂರ್ಯ ಕಂದಿದಾಗ ನಮ್ಮ ಕಣ್ಣೂ ಮುಚ್ಚುತ್ತೆ...
ಹಾಗೆ ನಮ್ಮ ಪ್ರತಿಯೊಂದು ಇಂದ್ರಿಯಗಳಿಗೂ ಒಬೊಬ್ಬ ಅಭಿಮಾನಿದೇವತೆ ಇದ್ದಾನೆ... ಕಿವಿಗೆ ಚಂದ್ರ, ಅವನು ರಾತ್ರಿಯಲ್ಲಿ ಪ್ರಕಾಶ ಹರಿಸುವವನು... ಅದರಿಂದಲೇ ರಾತ್ರಿಯಲ್ಲಿ ನಮ್ಮ ಕಿವಿ ತುಂಬಾ ಚುರುಕು ಒಂದು ಸಣ್ಣ ಶಬ್ದ ಕೂಡ (Pin Drop) ಕಿವಿಗೆ ಬಂದು ಬಡಿಯುತ್ತೆ...
ನಮಗಮ ಮೂಗಿಗೆ ಅಶ್ವಿದೇವತೆಗಳು ಅಭಿಮಾನಿ ದೇವತೆಗಳು ... ಅಶ್ವಿಗಳು Twins ನಮ್ಮ ಮೂಗು ಒಂದೇ ಆದರೂ ಎರಡು ಹೊರಳೆಗಳು...
ಹೀಗೆ ಪ್ರತಿಯೊಂದು ಇಂದ್ರಿಗಳಿಗೂ ಒಬ್ಬೊಬ್ಬ ಅಭಿಮಾನಿ ದೇವತೆ.. ನಮ್ಮ ಕೈಗೆ ಇಂದ್ರ, ಬಾಯಿಗೆ ವರುಣ, ಮಾತಿಗೆ ಪಾರ್ವತಿ, ಚರ್ಮಕ್ಕೆ (ಸ್ಪರ್ಶದ ಸುಖ ಕೊಡುವ) ಕುಬೇರ, ಕಾಲುಗಳಿಗೆ ಜಯಂತ, ನಮ್ಮ ಒಳಗಿನ ಇಂದ್ರಿಯಗಳಾದ ಮನಸ್ಸು-ಬುದ್ಧಿ-ಅಹಂಕಾರಕ್ಕೆ ಶಿವ, ನಮ್ಮ ಉಸಿರಾಟಕ್ಕೆ ಮುಖ್ಯಪ್ರಾಣನೆನಿಸಿದ ವಾಯು... ಈ ದೇಹದಲ್ಲಿ ನಿರಂತರ ಕ್ರಿಯೆ ನಡೆಯುತ್ತಿದೆ... It is not merely biological Chemical Reaction... ದೇಹ ಜಡವಾದರೂ ಈ ದೇಹದಲ್ಲಿ ಅನೇಕ ಕ್ರಿಯೆಗಳು ನಡೆಯುತ್ತಿವೆ ಅದಕ್ಕೆ ಅತೀಂದ್ರಿಯ ಶಕ್ತಿ ಗಳೆನಿಸಿದ ದೇವತಾಶಕ್ತಿಗಳು ಕಾರಣ...
ಈ ದೇಹದಲ್ಲಿ ಮುಖ್ಯವಾಗಿ 24 ತತ್ವಾಭಿಮಾನಿ ದೇವತೆಗಳಿದ್ದು ಈ ದೇಹವನ್ನು ನಿಯಂತ್ರಿಸುತ್ತಿದ್ದಾರೆ...
ಇದು ಒಂದು ಕಥೆ... ಒಮ್ಮೆ ದೇವತೆಗಳಲ್ಲಿ ಚರ್ಚೆ ನಡೆಯಿತು ಯಾರು ಈ ದೇಹದಲ್ಲಿ ಯಾರ ಸ್ಥಾನಮಾನ ಮುಖ್ಯ ಅಂತ... ಒಬ್ಬೊಬ್ಬ ದೇವತೆ ಈ ದೇಹದಿಂದ ಹೊರಗೆ ಹೋದಾಗ ಏನಾಯಿತು...
ಸೂರ್ಯ ಹೊರಗೆ ಹೋದ ವ್ಯಕ್ತಿ ಕುರುಡನಾಗಿ ಬದುಕಿದ... ಚಂದ್ರ ಹೊರಗೆ ಹೋದ ವ್ಯಕ್ತಿ ಕಿವುಡನಾಗಿ ಬದುಕಿದ... ಇಂದ್ರ ಹೊರಗೆ ಹೋದ ಕೈಯಿಲ್ಲದೆ ವ್ಯಕ್ತಿ ಬದುಕಿದ, ಜಯಂತ ಹೊರಗೆ ಹೋದ ಕಾಲಿಲ್ಲದೆ ಬದುಕಿದ ಪಾರ್ವತಿ ಹೊರಗೆ ಹೋದಳು ವ್ಯಕ್ತಿ ಮೂಕನಾಗಿ ಬದುಕಿದ ಮನೋಭಿಮಾನಿ ಶಿವನೂ ಹೊರಗೆ ಹೋದ ಮನಷ್ಯ ಕೋಮಾಸ್ಥಿಯಲ್ಲಿ ಬದುಕಿದ... ಹೀಗೆ ಯಾವುದೇ ದೇವತೆ ಹೊರಗೆ ಹೋದರು ದೇಹಬಿದ್ದುಹೋಗಲಿಲ್ಲ... ಯಾವಾಗ ಪ್ರಾಣದೇವರು ಉಸಿರಾಟ ನಿಲ್ಲಿಸಿದರೋ ದೇಹದೊಪ್ಪೆಂದು ಬಿತ್ತು... ನಮ್ಮ ಒಳಗಿರುವ ಭಗವಂತ ಈ ದೇಹ ಪ್ರವೇಶಮಾಡುವುದಾಗಲಿ ದೇಹ ಬಿಡುವುದಾಗಲಿ ಪ್ರಾಣನೊಟ್ಟಿಗೆ...
ದೇಹವನ್ನು ನಿಯಂತ್ರಿಸುವ ಎಲ್ಲ ದೇವತೆಗಳನ್ನು ಮತ್ತೆ ದೇಹಕ್ಕೆ ಕರೆಯಲಾಯಿತು... ದೇಹದ ಎಲ್ಲ ಅಂಗಗಳೂ ಸರಿಯಾಗಿವೆ ದೇಹ ಆರೋಗ್ಯವಾಗಿದೆ ವ್ಯಕ್ತಿ ಬಲಿಷ್ಠ ನಾಗಿದ್ದಾನೆ... ಈಗ ಸುಮ್ಮನೆ ವಾಯುದೇವ ದೇಹದಿಂದ ಹೊರನಡೆದ ಶರೀರ ದೊಪ್ಪೆಂದು ಬಿತ್ತು... ಇದು ಪ್ರಾಣಶಕ್ತಿ... ಅದೇ ಉಸಿರು... ಈ ದೇಹದಲ್ಲಿ ಉಸಿರಿರುವ ತನಕವಷ್ಟೇ ಈ ದೇಹದಲ್ಲಿ ಚಟುವಟಿಕೆ...
ರಾತ್ರಿ ನಾವು ಮಲಗಿದಾಗ ಕೂಡ ನಮ್ಮೊಟ್ಟಿಗೆ ಎಲ್ಲ ಇಂದ್ರಿಯಾಭಿಮಾನಿ ದೇವತೆಗಳೂ Rest ತಗೋತಾರೆ... ಆದರೆ ಪ್ರಾಣದೇವರಿಗೆ Rest ಇಲ್ಲ... ವಾಯು ನಮ್ಮ ದೇಹದಲ್ಲಿ 24x7 all 365 days till end of Life ಒಂದು ಕ್ಷಣ ಬಿಡದೇ ನಮ್ಮನ್ನು ಉಸಿರಾಡಿಸುತ್ತಿರಬೇಕು... ಪ್ರಾಣಶಕ್ತಿಯಿಂದಾಗಿ ಈ ದೇಹದಲ್ಲಿ ಮೇಲಕ್ಕೂ ಕೆಳಕ್ಕೂ ರಕ್ತಸಂಚಾರ, ನಾವು ಉಂಡ ಆಹಾರ ಜೀರ್ಣವಾಗುವುದು.. ಅದಕೆಂದೇ ನಾವು ನಿತ್ಯ ಉಟಮಾಡುವಾಗ ಮೊದಲು ಪಂಚರೂಪದಿಂದ ಈ ದೇಹದ ಚಟುವಟಿಕೆಗಳನ್ನು ನಡೆಸುವ ಪ್ರಾಣನಿಗೆ ಆಹುತಿ ಕೊಟ್ಟು ಪ್ರಾಣನ ಉಪಕಾರ ಸ್ಮರಣೆಯನ್ನು ಸ್ಮರಿಸುವುದು... ಪ್ರಾಣಾಯ ಸ್ಚಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ..
ಅದರಿಂದ ಬದುಕು ಎಂದರೆ ಉಸಿರು... ಉಸಿರಾಟ ಸರಿಯಾಗಿದ್ದರೆ ದೇಹದಾರೋಗ್ಯ...._
*******
ವೇದಗಳಲ್ಲಿ ರೋಗ ನಿದಾನ, ಚಿಕಿತ್ಸೆಗಳ ವಿಶೇಷ ವಿಚಾರ
ಶಾಸ್ತ್ರೀಯ ಆಯುರ್ವೇದ ಗ್ರಂಥಗಳಲ್ಲಿ ಕಂಡು ಬರುವ ರೋಗ ನಿದಾನ, ಚಿಕಿತ್ಸಾ ವಿಧಾನಗಳಲ್ಲಿ ಮೂಲ ವೈದಿಕ ಮಂತ್ರಗಳಲ್ಲಿರುವ ಅನೇಕ ವಿಚಾರಗಳು ಕಂಡು ಬರುವುದೇ ಇಲ್ಲ. ಏಕೆ ಈ ರೀತಿಯ ಮಹತ್ವದ ವಿಚಾರಗಳು ಶಾಸ್ತ್ರಗಳಲ್ಲಿ ಕಂಡು ಬರುವುದಿಲ್ಲ ಎನ್ನುವ ಆಶ್ಚರ್ಯ ಮತ್ತು ಆತಂಕ ಅನೇಕ ಚಿಂತಕರನ್ನು ಕಾಡಿಸುತ್ತದೆ. ವೈದಿಕ ಯುಗ ಮತ್ತು ನಂತರದ ಸಮಯದಲ್ಲಿ ಅನೇಕ ಕಾರಣಗಳಿಂದ ವೈದ್ಯರು ಆಶ್ಚರ್ಯವಾಗಿ “ಅಸ್ಪೃಶ್ಯರು” ಎಂಬುದಾಗಿ ಪರಿಗಣಿಸಿದ್ದುದು ಕಂಡು ಬರುತ್ತದೆ. “ವೈಧ್ಯಾಃ ಅಪೂತ್” ಎಂಬ ವಿಚಾರ ಪ್ರಾಚೀನ ಗ್ರಂಥಗಳಲ್ಲಿ ಇದೆ. ಆದುದರಿಂದ ಬಹುಶಃ ವೈದ್ಯ ಸಮುದಾಯವು ವೇದಾಧ್ಯಯನದಿಂದ ವಂಚಿತರಾಗಿ ಉಳಿದಿರಬಹುದು ಅಥವಾ ಅಧ್ಯಯನವನ್ನು ನಿಷೇಧಿಸಿದ್ದರಲೂ ಬಹುದು. ಮುಂದೆ ಆಯುರ್ವೇದ ಎಂದು ಕರೆಯಲ್ಪಡುವ ಶಾಸ್ತ್ರಕ್ಕೆ ಆಧಾರ ಗ್ರಂಥಗಳು ಕೇವಲ ಸಂಗ್ರಹ ಮತ್ತು ಭಾಷ್ಯರೂಪದಲ್ಲಿರುವ ಗ್ರಂಥಗಳಾಗಿವೆ.
ಇದೇ ರೀತಿಯಿಂದ ವೈದಿಕ ಪರಂಪರೆಯಲ್ಲಿಯೂ ಮೂಲ ವೇದ ಪ್ರಣೀತವಾದ ದೇವ, ದೇವತೆಗಳು ಪೂಜಾವಿಧಾನಗಳು, ಸಾಮಗ್ರಿಗಳು ಬದಲಾವಣೆ ಹೊಂದಿ/ ಕಡೆಗಣಿಸಲ್ಪಟ್ಟು ಇಂದು ಭಯೋತ್ಪಾದಕ ದೇವತೆಗಳು ಅದರ ವೈಭವೀಕರಣ, ಪೂಜೆಗಳು ವಿಚಿತ್ರ ವಿಚಿತ್ರ ರೀತಿಯಿಂದ ಕಂಡು ಬರುತ್ತದೆ. ಇದಕ್ಕೆಲ್ಲ ಕಾರಣಗಳು ಏನೇ ಇರಲಿ ವೈದಿಕ ಮಂತ್ರಗಳ ಅತ್ಯಂತ ಅವಶ್ಯಕವಾದ (? ರಹಸ್ಯ ಅರ್ಥಗಳು) ಅಧ್ಯಯನ, ಅಧ್ಯಾಪನ, ಸಂಶೋಧನೆ, ಪ್ರಚಾರ ಇವುಗಳು ಸಮರ್ಥವಾಗಿ ಮಾಡಬೇಕಾದ ಕೆಲಸವಾಗಿರುತ್ತದೆ.
ಶಾರೀರ ರಚನಾ ಮತ್ತು ಕ್ರಿಯಾ ರಹಸ್ಯಗಳು
ಆಯುರ್ವೇದದ ಶಸ್ತ್ರವಿಧ್ಯಾ ವಿಭಾಗದ ಪ್ರಧಾನ ಗ್ರಂಥ ಸುಶ್ರುತ ಸಂಹಿತಾ ಇದರಲ್ಲಿ ಧನ್ವಂತರಿ ಸಂಪ್ರದಾಯ ಎಂಬ ಅತ್ಯಂತ ಪ್ರಾಚೀನ ಶಸ್ತ್ರ ಚಿಕಿತ್ಸಾ ಸಂಪ್ರದಾಯದ ಪ್ರಾತಿನಿಧ್ಯ ಗ್ರಂಥವಾದರೂ ಅಂಗಾಂಗರಚನೆ ಹಾಗೂ ಕ್ರಿಯಾ ವಿಚಾರಗಳು ಬಹಳ ಸಂದಿಗ್ಧವಾಗಿದ್ದು ವೇದಗಳಲ್ಲಿ ವಿವರಿತವಾಗಿರುವ ಮಹತ್ವಾರ್ಥಗಳ ಪ್ರಸ್ತಾಪವೇ ಇರುವುದಿಲ್ಲ. ನಾಡೀ-ಧಮನಿ-ಸಿರಾ-ನರ ಇಂತಹ ಅತ್ಯಂತ ಮಹತ್ವಪೂರ್ಣ ರಚನೆಗಳ ಪ್ರಸ್ತಾಪ ಬಹಳ ಸಂಕ್ಷಿಪ್ತವಾಗಿದ್ದು ಬಹಳ ಸಂದಗ್ಧಿತೆಯಿಂದ ಕೂಡಿದೆ. ಇನ್ನು ಕಾಯ ಚಿಕಿತ್ಸಾ ಸಂಪ್ರದಾಯದ ಗ್ರಂಥಗಳು ರಚನಾ ಮತ್ತು ಕ್ರಿಯಾ ಶರೀರಕ್ಕೆ ಹೆಚ್ಚು ಮಹತ್ವವನ್ನೇ ಕೊಟ್ಟಿರುವುದಿಲ್ಲ.
ಆಯುರ್ವೇದದ ಶಾಸ್ತ್ರಗ್ರಂಥಗಳು ಸಂಪೂರ್ಣವಾಗಿ ವೇದಗಳನ್ನೇ ಆಶ್ರಯಿಸಿ ಬೆಳೆದವುಗಳೆಂದು ತಮ್ಮನ್ನು ಉಪಾಂಗ ಅಥವಾ ಉಪವೇದ ಎಂದು ಪರಿಗಣಿಸಲ್ಪಟ್ಟಿರುವುದಾಗಿ ಪ್ರಸ್ತಾಪಿಸುತ್ತವೆ. ಇಂದು ಕಂಡುಬರುವ ಆಯುರ್ವೇದ ಪದವೀಧರ ವೈದ್ಯರಲ್ಲಾಗಲೀ ಅಥವಾ ಹಿಂದಿನ ಶಾಸ್ತ್ರಾಧ್ಯಯನ ಪಾಂಡಿತ್ಯ ಪರಿಪೂರ್ಣರೆನಿಸಿದ ವೈದ್ಯರಲ್ಲಾಗಲೀ ಮೂಲ ವೇದಗಳಲ್ಲಿ ಪ್ರತಿಪಾದಿತವಾಗಿರುವ ವೈದ್ಯಜ್ಞಾನ ವಿಚಾರಗಳು ಸಂಪೂರ್ಣವಾಗಿ ಇಲ್ಲದಿರುವುದು ಸಾಮಾನ್ಯವಾಗಿದೆ.
********
***
ವೈದಿಕ (ಶಾಸ್ತ್ರೋಕ್ತ ) ಭಾರತೀಯ ಅತ್ಯಮೂಲ್ಯ ಆರೋಗ್ಯ ಸಲಹೆಗಳು ಮತ್ತು ಸಂಸ್ಕೃತದಲ್ಲಿನ ಉಲ್ಲೇಖಗಳು...
1 ಅಜೀರಣೀ ಭೋಜನಂ ವಿಷಮ್
ಈ ಹಿಂದೆ ತೆಗೆದುಕೊಂಡ ಊಟವು ಜೀರ್ಣವಾಗದಿದ್ದರೆ.. ಮತ್ತೆ ಊಟ ಮಾಡುವುದು ವಿಷವನ್ನು ತೆಗೆದುಕೊಳ್ಳುವುದಕ್ಕೆ ಸಮಾನವಾಗಿರುತ್ತದೆ. ಹಸಿವು ಹಿಂದಿನ ಆಹಾರ ಜೀರ್ಣವಾಗುವ ಒಂದು ಸಂಕೇತ.
2 ಅರ್ಧೋಗಹರಿ ನಿದ್ರಾ
ಸರಿಯಾದ ನಿದ್ರೆ ಅರ್ಧದಷ್ಟು ರೋಗಗಳನ್ನು ಗುಣಪಡಿಸುತ್ತದೆ.
3. ಮುದ್ಗಧಾಲಿ ಗಾಧವ್ಯಾಲಿ
ಎಲ್ಲಾ ದ್ವಿದಳ ಧಾನ್ಯಗಳಲ್ಲಿ, ಹೆಸರು ಬೇಳೆ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತರ ದ್ವಿದಳ ಧಾನ್ಯಗಳು ಒಂದು ಅಥವಾ ಇನ್ನೊಂದು ಅಡ್ಡ ಪರಿಣಾಮಗಳನ್ನು ಹೊಂದಿವೆ.
4. ಬಗ್ನಾಸ್ತಿ ಸಂಧಾನಕರೋ ರಸೋನಹ
ಬೆಳ್ಳುಳ್ಳಿ ಮುರಿದ ಮೂಳೆಗಳನ್ನು ಸಹ ಸೇರಿಸುತ್ತದೆ...
5 ಅತಿ ಸರ್ವತ್ರ ವರ್ಜಯೇತ್
ಅತಿಯಾಗಿ ಸೇವಿಸುವ ಯಾವುದಾದರೂ, ಅದು ರುಚಿಯಾಗಿದ್ದರೂ, ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಲಿ...
6. ನಾಸ್ತಿಮೂಲಂ ಅನೌಷಧಂ
ಯಾವುದೇ ಔಷಧೀಯ ಪ್ರಯೋಜನವಿಲ್ಲದ ಯಾವುದೇ ತರಕಾರಿ ಇಲ್ಲ...
7 ನಾ ವೈದ್ಯಃ ಪ್ರಭುರಾಯುಷ
ಯಾವ ವೈದ್ಯರೂ ನಮ್ಮ ದೀರ್ಘಾಯುಷ್ಯದ ಅಧಿಪತಿ ಅಲ್ಲ. ವೈದ್ಯರಿಗೂ ಮಿತಿಗಳಿವೆ...
8. ಚಿಂತಾ ವ್ಯಾಧಿ ಪ್ರಕಾಶಯ
ಚಿಂತೆ ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ...
9. ವ್ಯಾಯಮಾಶ್ಚ ಸನೈಹಿ ಸನೈಹಿ
ಯಾವುದೇ ವ್ಯಾಯಾಮವನ್ನು ನಿಧಾನವಾಗಿ ಮಾಡಿ. ವೇಗದ ವ್ಯಾಯಾಮ ಒಳ್ಳೆಯದಲ್ಲ...
10. ಅಜಾವತ್ ಚರ್ವಣಂ ಕುರ್ಯಾತ್
ನಿಮ್ಮ ಆಹಾರವನ್ನು ಮೇಕೆಯಂತೆ ಅಗಿಯಿರಿ, ಆತುರದಿಂದ ಆಹಾರವನ್ನು ನುಂಗಬೇಡಿ.
ಲಾಲಾರಸ ಜೀರ್ಣಕ್ರಿಯೆಯಲ್ಲಿ ಮೊದಲು ಸಹಾಯ ಮಾಡುತ್ತದೆ.
11. ಸ್ನಾನ ನಾಮ ಮನಃಪ್ರಸಾದನಕಾರಂ ದುಃಸ್ವಪ್ನ ವಿಧವಾಸನಮ್
ಸ್ನಾನವು ಖಿನ್ನತೆಯನ್ನು ತೆಗೆದುಹಾಕುತ್ತದೆ. ಇದು ಕೆಟ್ಟ ಕನಸುಗಳನ್ನು ದೂರ ಮಾಡುತ್ತದೆ...
12. ನ ಸ್ನಾನಮ್ ಆಚರೇತ್ ಭುಕ್ತ್ವಾ
ಆಹಾರದ ನಂತರ ಎಂದಿಗೂ ಸ್ನಾನ ಮಾಡಬೇಡಿ...
13. ನಾಸ್ತಿ ಮೇಘಸಮಂ ತೋಯಮ್
ಮಳೆನೀರಿಗೆ ಶುದ್ಧತೆಯಲ್ಲಿ ಯಾವುದೂ ಸಮವಿಲ್ಲ...
14 ಅಜೀರ್ಣೆ ಭೇಷಜಂ ವಾರಿ
ಅಜೀರ್ಣವನ್ನು ಸರಳ ನೀರು ಕುಡಿಯುವ ಮೂಲಕ ಪರಿಹರಿಸಬಹುದು...
15. ಸರ್ವತ್ರ ನೂತನಂ ಷಷ್ಠಂ ಸೇವಕನ್ನೇ ಪುರಥನಮ್
ಎಲ್ಲವೂ ತಾಜಾ ಇರುವಂತೆ ಯಾವಾಗಲೂ ಬಯಸುತ್ತವೆ.
ಹಳೆ ಅನ್ನ ಮತ್ತು ಹಳೆಯ ಸೇವಕರನ್ನು ಹೊಸದಾಗಿಸಬೇಕು. (ಸೇವಕನ ವಿಷಯದಲ್ಲಿ ಇಲ್ಲಿ ನಿಜವಾಗಿಯೂ ಅರ್ಥವೇನೆಂದರೆ: ಅವನ ಕರ್ತವ್ಯಗಳನ್ನು ಬದಲಾಯಿಸಿ ಮತ್ತು ಕೊನೆಗೊಳಿಸಬೇಡಿ.)
16. ನಿತ್ಯಂ ಸರ್ವಾ ರಸಾಭ್ಯಾಸಃ
ಎಲ್ಲಾ ರುಚಿಯನ್ನು ಹೊಂದಿರುವ ಸಂಪೂರ್ಣ ಆಹಾರವನ್ನು ತೆಗೆದುಕೊಳ್ಳಿ: ಉಪ್ಪು, ಸಿಹಿ, ಕಹಿ, ಹುಳಿ, ಖಾರ ಮತ್ತು ಒಗರು)...
17. ಜಾತಾರಂ ಪೂರಯೇಧಾರ್ಧಂ ಅಣ್ಣಾಹಿ
ನಿಮ್ಮ ಹೊಟ್ಟೆಯ ಅರ್ಧಭಾಗವನ್ನು ಘನ ಆಹಾರದಿಂದ ತುಂಬಿಸಿ, ಕಾಲು ಭಾಗದಷ್ಟು ನೀರನ್ನು ತುಂಬಿಸಿ ಮತ್ತು ಉಳಿದನ್ನು ಖಾಲಿ ಬಿಡಿ...
18 ಭುಕ್ತ್ವೋಪ ವಿಶಾಥಸ್ಥಾಂದ್ರಾ
ಆಹಾರ ತೆಗೆದುಕೊಂಡ ನಂತರ ಎಂದಿಗೂ ಸುಮ್ಮನೆ ಕುಳಿತುಕೊಳ್ಳಬೇಡಿ. ಅರ್ಧ ಗಂಟೆಯ ನಂತರ ಕನಿಷ್ಠ ಹದಿನೈದು ನಿಮಿಷ ನಡೆಯಿರಿ.
19. ಕ್ಷುತ್ ಸಾಧೂತಂ ಜನಯತಿ
ಹಸಿವು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಹಸಿವಾದಾಗ ಮಾತ್ರ ತಿನ್ನಿರಿ...
20. ಚಿಂತಾ ಜರಾಣಾಂ ಮನುಷ್ಯನಮ್
ಚಿಂತೆ ವೃದ್ಧಾಪ್ಯವನ್ನು ಬೇಗ ತರುತ್ತದೆ...
21. ಸತಂ ವಿಹಾಯ ಭೋಕ್ತವ್ಯಮ್
ಆಹಾರಕ್ಕೆ ಸಮಯ ಬಂದಾಗ, ನೂರು ಉದ್ಯೋಗಗಳಿದ್ದರೂಸಹ ಬದಿಗಿಡಿ...
22. ಸರ್ವ ಧರ್ಮೇಷು ಮಧ್ಯಮಾಮ್
ಯಾವಾಗಲೂ ಮಧ್ಯ ಮಾರ್ಗವನ್ನು ಆರಿಸಿ. ಯಾವುದರಲ್ಲೂ ಅತಿರೇಕಕ್ಕೆ ಹೋಗುವುದನ್ನು ತಪ್ಪಿಸಿ....
ವೈದ್ಯೋ ನಾರಾಯಣೋ ಹರಿಃ
ಸಂಗ್ರಹ
***
ನಮ್ಮ ಶಾಸ್ತ್ರ ಹೇಳುತ್ತೆ, ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಾಂಗದ ಕ್ರಿಯೆ ನಡೆಯುವುದು ಆಯಾ ದೇವತಾ ಶಕ್ತಿ ಆಯಾ ದೇಹದ ಭಾಗದಲ್ಲಿ ಕೂತು ಮಾಡುವ ಕ್ರಿಯೆ ಅದು ಅಂತ...
ಉದಾಹರಣೆಗೆ, ನಮ್ಮ ಕಣ್ಣು ಸುಂದರ ಜಗತ್ತಿನ ಅನುಭವವನ್ನು ಕಾಣ್ಕೆಯ ಮೂಲಕ ನಮಗೆ ಕೊಡುತ್ತೆ. ಕಣ್ಣು ಅಥವಾ ಯಾವುದೇ ಇಂದ್ರಿಯ ಗಳಾಗಲಿ ಅದು ಜಡ ವಸ್ತು... ಕಣ್ಣಿನ ಅಭಿಮಾನಿದೇವತೆಯಾಗಿ "ಸೂರ್ಯ" ಕಣ್ಣಿನಲ್ಲಿ ಕೂತದ್ದರಿಂದ ನಮಗೆ ಕಣ್ಣು ಕಾಣೋದು... ಹೊರಗೆ ಆಕಾಶದಲ್ಲಿ ಜಗಮಗಿಸುವ ಸೂರ್ಯಮಂಡಲ ಉಂಟಲ್ಲ ಅದು ಜಡ ಅದು ನಮ್ಮ ಕಣ್ಣಿಗೂ ಕಾಣುತ್ತೆ, ಅದರ ಅಭಿಮಾನಿದೇವತೆ ಸೂರ್ಯ... ಆ ದೇವತೆ ನಮ್ಮ ಕಣ್ಣಿಗೆ ಕಾಣಿಸೋಲ್ಲ... ಯಾವ ಸೂರ್ಯ ಸೂರ್ಯಂಡಲದ ಅಭಿಮಾನಿ ದೇವತೆಯೋ (ಅದರಿಂದಲೇ ಆಕಾಶದ ಸೂರ್ಯನನ್ನು ಮುಗಿಲಕಣ್ಣು ಅಂತಾರೆ) ಅದೇ ಸೂರ್ಯ ನಮ್ಮ ಕಣ್ಣಿನ ದೇವತೆ ಕೂಡ... ಅದರಿಂದಲೇ, ಸೂರ್ಯ ಆಗಸದಲ್ಲಿ ಉದಯಿಸಿದಾಗ ನಮ್ಮ ಕಣ್ಣು ತೆರೆಯುತ್ತೆ... ಸೂರ್ಯ ಕಂದಿದಾಗ ನಮ್ಮ ಕಣ್ಣೂ ಮುಚ್ಚುತ್ತೆ...
ಹಾಗೆ ನಮ್ಮ ಪ್ರತಿಯೊಂದು ಇಂದ್ರಿಯಗಳಿಗೂ ಒಬೊಬ್ಬ ಅಭಿಮಾನಿದೇವತೆ ಇದ್ದಾನೆ... ಕಿವಿಗೆ ಚಂದ್ರ, ಅವನು ರಾತ್ರಿಯಲ್ಲಿ ಪ್ರಕಾಶ ಹರಿಸುವವನು... ಅದರಿಂದಲೇ ರಾತ್ರಿಯಲ್ಲಿ ನಮ್ಮ ಕಿವಿ ತುಂಬಾ ಚುರುಕು ಒಂದು ಸಣ್ಣ ಶಬ್ದ ಕೂಡ (Pin Drop) ಕಿವಿಗೆ ಬಂದು ಬಡಿಯುತ್ತೆ...
ನಮಗಮ ಮೂಗಿಗೆ ಅಶ್ವಿದೇವತೆಗಳು ಅಭಿಮಾನಿ ದೇವತೆಗಳು ... ಅಶ್ವಿಗಳು Twins ನಮ್ಮ ಮೂಗು ಒಂದೇ ಆದರೂ ಎರಡು ಹೊರಳೆಗಳು...
ಹೀಗೆ ಪ್ರತಿಯೊಂದು ಇಂದ್ರಿಗಳಿಗೂ ಒಬ್ಬೊಬ್ಬ ಅಭಿಮಾನಿ ದೇವತೆ.. ನಮ್ಮ ಕೈಗೆ ಇಂದ್ರ, ಬಾಯಿಗೆ ವರುಣ, ಮಾತಿಗೆ ಪಾರ್ವತಿ, ಚರ್ಮಕ್ಕೆ (ಸ್ಪರ್ಶದ ಸುಖ ಕೊಡುವ) ಕುಬೇರ, ಕಾಲುಗಳಿಗೆ ಜಯಂತ, ನಮ್ಮ ಒಳಗಿನ ಇಂದ್ರಿಯಗಳಾದ ಮನಸ್ಸು-ಬುದ್ಧಿ-ಅಹಂಕಾರಕ್ಕೆ ಶಿವ, ನಮ್ಮ ಉಸಿರಾಟಕ್ಕೆ ಮುಖ್ಯಪ್ರಾಣನೆನಿಸಿದ ವಾಯು... ಈ ದೇಹದಲ್ಲಿ ನಿರಂತರ ಕ್ರಿಯೆ ನಡೆಯುತ್ತಿದೆ... It is not merely biological Chemical Reaction... ದೇಹ ಜಡವಾದರೂ ಈ ದೇಹದಲ್ಲಿ ಅನೇಕ ಕ್ರಿಯೆಗಳು ನಡೆಯುತ್ತಿವೆ ಅದಕ್ಕೆ ಅತೀಂದ್ರಿಯ ಶಕ್ತಿ ಗಳೆನಿಸಿದ ದೇವತಾಶಕ್ತಿಗಳು ಕಾರಣ...
ಈ ದೇಹದಲ್ಲಿ ಮುಖ್ಯವಾಗಿ 24 ತತ್ವಾಭಿಮಾನಿ ದೇವತೆಗಳಿದ್ದು ಈ ದೇಹವನ್ನು ನಿಯಂತ್ರಿಸುತ್ತಿದ್ದಾರೆ...
ಇದು ಒಂದು ಕಥೆ... ಒಮ್ಮೆ ದೇವತೆಗಳಲ್ಲಿ ಚರ್ಚೆ ನಡೆಯಿತು ಯಾರು ಈ ದೇಹದಲ್ಲಿ ಯಾರ ಸ್ಥಾನಮಾನ ಮುಖ್ಯ ಅಂತ... ಒಬ್ಬೊಬ್ಬ ದೇವತೆ ಈ ದೇಹದಿಂದ ಹೊರಗೆ ಹೋದಾಗ ಏನಾಯಿತು...
ಸೂರ್ಯ ಹೊರಗೆ ಹೋದ ವ್ಯಕ್ತಿ ಕುರುಡನಾಗಿ ಬದುಕಿದ... ಚಂದ್ರ ಹೊರಗೆ ಹೋದ ವ್ಯಕ್ತಿ ಕಿವುಡನಾಗಿ ಬದುಕಿದ... ಇಂದ್ರ ಹೊರಗೆ ಹೋದ ಕೈಯಿಲ್ಲದೆ ವ್ಯಕ್ತಿ ಬದುಕಿದ, ಜಯಂತ ಹೊರಗೆ ಹೋದ ಕಾಲಿಲ್ಲದೆ ಬದುಕಿದ ಪಾರ್ವತಿ ಹೊರಗೆ ಹೋದಳು ವ್ಯಕ್ತಿ ಮೂಕನಾಗಿ ಬದುಕಿದ ಮನೋಭಿಮಾನಿ ಶಿವನೂ ಹೊರಗೆ ಹೋದ ಮನಷ್ಯ ಕೋಮಾಸ್ಥಿಯಲ್ಲಿ ಬದುಕಿದ... ಹೀಗೆ ಯಾವುದೇ ದೇವತೆ ಹೊರಗೆ ಹೋದರು ದೇಹಬಿದ್ದುಹೋಗಲಿಲ್ಲ... ಯಾವಾಗ ಪ್ರಾಣದೇವರು ಉಸಿರಾಟ ನಿಲ್ಲಿಸಿದರೋ ದೇಹದೊಪ್ಪೆಂದು ಬಿತ್ತು... ನಮ್ಮ ಒಳಗಿರುವ ಭಗವಂತ ಈ ದೇಹ ಪ್ರವೇಶಮಾಡುವುದಾಗಲಿ ದೇಹ ಬಿಡುವುದಾಗಲಿ ಪ್ರಾಣನೊಟ್ಟಿಗೆ...
ದೇಹವನ್ನು ನಿಯಂತ್ರಿಸುವ ಎಲ್ಲ ದೇವತೆಗಳನ್ನು ಮತ್ತೆ ದೇಹಕ್ಕೆ ಕರೆಯಲಾಯಿತು... ದೇಹದ ಎಲ್ಲ ಅಂಗಗಳೂ ಸರಿಯಾಗಿವೆ ದೇಹ ಆರೋಗ್ಯವಾಗಿದೆ ವ್ಯಕ್ತಿ ಬಲಿಷ್ಠ ನಾಗಿದ್ದಾನೆ... ಈಗ ಸುಮ್ಮನೆ ವಾಯುದೇವ ದೇಹದಿಂದ ಹೊರನಡೆದ ಶರೀರ ದೊಪ್ಪೆಂದು ಬಿತ್ತು... ಇದು ಪ್ರಾಣಶಕ್ತಿ... ಅದೇ ಉಸಿರು... ಈ ದೇಹದಲ್ಲಿ ಉಸಿರಿರುವ ತನಕವಷ್ಟೇ ಈ ದೇಹದಲ್ಲಿ ಚಟುವಟಿಕೆ...
ರಾತ್ರಿ ನಾವು ಮಲಗಿದಾಗ ಕೂಡ ನಮ್ಮೊಟ್ಟಿಗೆ ಎಲ್ಲ ಇಂದ್ರಿಯಾಭಿಮಾನಿ ದೇವತೆಗಳೂ Rest ತಗೋತಾರೆ... ಆದರೆ ಪ್ರಾಣದೇವರಿಗೆ Rest ಇಲ್ಲ... ವಾಯು ನಮ್ಮ ದೇಹದಲ್ಲಿ 24x7 all 365 days till end of Life ಒಂದು ಕ್ಷಣ ಬಿಡದೇ ನಮ್ಮನ್ನು ಉಸಿರಾಡಿಸುತ್ತಿರಬೇಕು... ಪ್ರಾಣಶಕ್ತಿಯಿಂದಾಗಿ ಈ ದೇಹದಲ್ಲಿ ಮೇಲಕ್ಕೂ ಕೆಳಕ್ಕೂ ರಕ್ತಸಂಚಾರ, ನಾವು ಉಂಡ ಆಹಾರ ಜೀರ್ಣವಾಗುವುದು.. ಅದಕೆಂದೇ ನಾವು ನಿತ್ಯ ಉಟಮಾಡುವಾಗ ಮೊದಲು ಪಂಚರೂಪದಿಂದ ಈ ದೇಹದ ಚಟುವಟಿಕೆಗಳನ್ನು ನಡೆಸುವ ಪ್ರಾಣನಿಗೆ ಆಹುತಿ ಕೊಟ್ಟು ಪ್ರಾಣನ ಉಪಕಾರ ಸ್ಮರಣೆಯನ್ನು ಸ್ಮರಿಸುವುದು... ಪ್ರಾಣಾಯ ಸ್ಚಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ..
ಅದರಿಂದ ಬದುಕು ಎಂದರೆ ಉಸಿರು... ಉಸಿರಾಟ ಸರಿಯಾಗಿದ್ದರೆ ದೇಹದಾರೋಗ್ಯ...._
*******
ವೇದಗಳಲ್ಲಿ ರೋಗ ನಿದಾನ, ಚಿಕಿತ್ಸೆಗಳ ವಿಶೇಷ ವಿಚಾರ
ಶಾಸ್ತ್ರೀಯ ಆಯುರ್ವೇದ ಗ್ರಂಥಗಳಲ್ಲಿ ಕಂಡು ಬರುವ ರೋಗ ನಿದಾನ, ಚಿಕಿತ್ಸಾ ವಿಧಾನಗಳಲ್ಲಿ ಮೂಲ ವೈದಿಕ ಮಂತ್ರಗಳಲ್ಲಿರುವ ಅನೇಕ ವಿಚಾರಗಳು ಕಂಡು ಬರುವುದೇ ಇಲ್ಲ. ಏಕೆ ಈ ರೀತಿಯ ಮಹತ್ವದ ವಿಚಾರಗಳು ಶಾಸ್ತ್ರಗಳಲ್ಲಿ ಕಂಡು ಬರುವುದಿಲ್ಲ ಎನ್ನುವ ಆಶ್ಚರ್ಯ ಮತ್ತು ಆತಂಕ ಅನೇಕ ಚಿಂತಕರನ್ನು ಕಾಡಿಸುತ್ತದೆ. ವೈದಿಕ ಯುಗ ಮತ್ತು ನಂತರದ ಸಮಯದಲ್ಲಿ ಅನೇಕ ಕಾರಣಗಳಿಂದ ವೈದ್ಯರು ಆಶ್ಚರ್ಯವಾಗಿ “ಅಸ್ಪೃಶ್ಯರು” ಎಂಬುದಾಗಿ ಪರಿಗಣಿಸಿದ್ದುದು ಕಂಡು ಬರುತ್ತದೆ. “ವೈಧ್ಯಾಃ ಅಪೂತ್” ಎಂಬ ವಿಚಾರ ಪ್ರಾಚೀನ ಗ್ರಂಥಗಳಲ್ಲಿ ಇದೆ. ಆದುದರಿಂದ ಬಹುಶಃ ವೈದ್ಯ ಸಮುದಾಯವು ವೇದಾಧ್ಯಯನದಿಂದ ವಂಚಿತರಾಗಿ ಉಳಿದಿರಬಹುದು ಅಥವಾ ಅಧ್ಯಯನವನ್ನು ನಿಷೇಧಿಸಿದ್ದರಲೂ ಬಹುದು. ಮುಂದೆ ಆಯುರ್ವೇದ ಎಂದು ಕರೆಯಲ್ಪಡುವ ಶಾಸ್ತ್ರಕ್ಕೆ ಆಧಾರ ಗ್ರಂಥಗಳು ಕೇವಲ ಸಂಗ್ರಹ ಮತ್ತು ಭಾಷ್ಯರೂಪದಲ್ಲಿರುವ ಗ್ರಂಥಗಳಾಗಿವೆ.
ಇದೇ ರೀತಿಯಿಂದ ವೈದಿಕ ಪರಂಪರೆಯಲ್ಲಿಯೂ ಮೂಲ ವೇದ ಪ್ರಣೀತವಾದ ದೇವ, ದೇವತೆಗಳು ಪೂಜಾವಿಧಾನಗಳು, ಸಾಮಗ್ರಿಗಳು ಬದಲಾವಣೆ ಹೊಂದಿ/ ಕಡೆಗಣಿಸಲ್ಪಟ್ಟು ಇಂದು ಭಯೋತ್ಪಾದಕ ದೇವತೆಗಳು ಅದರ ವೈಭವೀಕರಣ, ಪೂಜೆಗಳು ವಿಚಿತ್ರ ವಿಚಿತ್ರ ರೀತಿಯಿಂದ ಕಂಡು ಬರುತ್ತದೆ. ಇದಕ್ಕೆಲ್ಲ ಕಾರಣಗಳು ಏನೇ ಇರಲಿ ವೈದಿಕ ಮಂತ್ರಗಳ ಅತ್ಯಂತ ಅವಶ್ಯಕವಾದ (? ರಹಸ್ಯ ಅರ್ಥಗಳು) ಅಧ್ಯಯನ, ಅಧ್ಯಾಪನ, ಸಂಶೋಧನೆ, ಪ್ರಚಾರ ಇವುಗಳು ಸಮರ್ಥವಾಗಿ ಮಾಡಬೇಕಾದ ಕೆಲಸವಾಗಿರುತ್ತದೆ.
ಶಾರೀರ ರಚನಾ ಮತ್ತು ಕ್ರಿಯಾ ರಹಸ್ಯಗಳು
ಆಯುರ್ವೇದದ ಶಸ್ತ್ರವಿಧ್ಯಾ ವಿಭಾಗದ ಪ್ರಧಾನ ಗ್ರಂಥ ಸುಶ್ರುತ ಸಂಹಿತಾ ಇದರಲ್ಲಿ ಧನ್ವಂತರಿ ಸಂಪ್ರದಾಯ ಎಂಬ ಅತ್ಯಂತ ಪ್ರಾಚೀನ ಶಸ್ತ್ರ ಚಿಕಿತ್ಸಾ ಸಂಪ್ರದಾಯದ ಪ್ರಾತಿನಿಧ್ಯ ಗ್ರಂಥವಾದರೂ ಅಂಗಾಂಗರಚನೆ ಹಾಗೂ ಕ್ರಿಯಾ ವಿಚಾರಗಳು ಬಹಳ ಸಂದಿಗ್ಧವಾಗಿದ್ದು ವೇದಗಳಲ್ಲಿ ವಿವರಿತವಾಗಿರುವ ಮಹತ್ವಾರ್ಥಗಳ ಪ್ರಸ್ತಾಪವೇ ಇರುವುದಿಲ್ಲ. ನಾಡೀ-ಧಮನಿ-ಸಿರಾ-ನರ ಇಂತಹ ಅತ್ಯಂತ ಮಹತ್ವಪೂರ್ಣ ರಚನೆಗಳ ಪ್ರಸ್ತಾಪ ಬಹಳ ಸಂಕ್ಷಿಪ್ತವಾಗಿದ್ದು ಬಹಳ ಸಂದಗ್ಧಿತೆಯಿಂದ ಕೂಡಿದೆ. ಇನ್ನು ಕಾಯ ಚಿಕಿತ್ಸಾ ಸಂಪ್ರದಾಯದ ಗ್ರಂಥಗಳು ರಚನಾ ಮತ್ತು ಕ್ರಿಯಾ ಶರೀರಕ್ಕೆ ಹೆಚ್ಚು ಮಹತ್ವವನ್ನೇ ಕೊಟ್ಟಿರುವುದಿಲ್ಲ.
ಆಯುರ್ವೇದದ ಶಾಸ್ತ್ರಗ್ರಂಥಗಳು ಸಂಪೂರ್ಣವಾಗಿ ವೇದಗಳನ್ನೇ ಆಶ್ರಯಿಸಿ ಬೆಳೆದವುಗಳೆಂದು ತಮ್ಮನ್ನು ಉಪಾಂಗ ಅಥವಾ ಉಪವೇದ ಎಂದು ಪರಿಗಣಿಸಲ್ಪಟ್ಟಿರುವುದಾಗಿ ಪ್ರಸ್ತಾಪಿಸುತ್ತವೆ. ಇಂದು ಕಂಡುಬರುವ ಆಯುರ್ವೇದ ಪದವೀಧರ ವೈದ್ಯರಲ್ಲಾಗಲೀ ಅಥವಾ ಹಿಂದಿನ ಶಾಸ್ತ್ರಾಧ್ಯಯನ ಪಾಂಡಿತ್ಯ ಪರಿಪೂರ್ಣರೆನಿಸಿದ ವೈದ್ಯರಲ್ಲಾಗಲೀ ಮೂಲ ವೇದಗಳಲ್ಲಿ ಪ್ರತಿಪಾದಿತವಾಗಿರುವ ವೈದ್ಯಜ್ಞಾನ ವಿಚಾರಗಳು ಸಂಪೂರ್ಣವಾಗಿ ಇಲ್ಲದಿರುವುದು ಸಾಮಾನ್ಯವಾಗಿದೆ.
********
What deters people from using ayurveda ?
1) english education has grooved into brains , using pastes and oils on wounds gives septik
English allopathic tincture is antiseptik
2) ayurvedic medicines contain heavy metals and lead which are poisonous or damages kidney ..
3) painkillers fever etc one rushes to doctor rather than vaidya ..
4) no advanced surgery available
5) tests reports xrays are not available , so feeling of being diagnosed does not come ..
6) availability of medicines doubtful
7) do not know where to procure
8') energency care , life saving drugs knowledge absent
9) no instantaneous effect seen .
10) modern research is absent .. New types of viruses diseases occur , is there a cure ?
In the light of above querries , how can ayurveda be taught or learnt with zeal
The modus operandi we must follow is that of Madhwacharya
Madhwacharya when he took avatara , he first cut down existing philosophies with vaada ..
So finally people asked so what is your philosophy , have u written any bhaashya on bramha sutra ?
Madhwaraya took permission from Vedavyasaru and then wrote the bhaashya ...
So we must first cut down the claims of efficacy of cure in other systems
Then people will explore is there any cure in ayurveda
Then faith gets established if cure is shown
For that pure herbs must be made available
Medicines must be formulated inhouse
Then students must be taught right pharmacology
Medicines must be easily made available
Then AYURVEDA can be propagated among satviks
It works only for satviks ! Who have bhakti in Vishnu .
Its upaveda
*********
ಅಮೃತವೋ ಅಥವಾ ವಿಷವೋ? 🤔
1) ಆಯುರ್ವೇದದಲ್ಲಿ ಜೇನುತುಪ್ಪವನ್ನು ಅಮೃತಕ್ಕೆ ಸಮಾನ ಅಂತ ಹೋಲಿಸಲಾಗಿದೆ. ವೈದ್ಯಕೀಯ ವಿಜ್ಞಾನ ಸಹ ಇದನ್ನು ರೋಗ ನಿರೋಧಕ ಶಕ್ತಿಯಾಗಿ ಹಲವು ಕಡೆ ಬಳಸಿದೆ. ಆದರೆ ಆಶ್ಚರ್ಯದ ವಿಚಾರ ಏನು ಅಂದರೆ ಇದರ ಒಂದೇ ಒಂದು ಹನಿಯನ್ನು ನಾಯಿ ತಿಂದರೆ ಮರಣ ಹೊಂದುತ್ತದೆ ಅಂತ ಹೇಳ್ತಾರೆ.
ಅಂದರೆ ಜೇನುತುಪ್ಪ ನಾಯಿಗೆ ವಿಷದ ಸಮಾನ.
2) ಎರಡನೆಯದ್ದು ದೇಶೀ ಆಕಳಿನ ಶುದ್ಧ ತುಪ್ಪ. ಜೇನುತುಪ್ಪದ ನಂತರ ಈ ತುಪ್ಪಕ್ಕೆ ಆಯುರ್ವೇದದಲ್ಲಿ ಅದರದ್ದೇ ಆದ ಮಾನ್ಯತೆ ಇದೆ. ಅಷ್ಟೇ ಅಲ್ಲ ವೈದ್ಯಕೀಯ ವಿಜ್ಞಾನ ಸಹ ಇದರಲ್ಲಿನ ಔಷಧೀಯ ಗುಣಗಳನ್ನು ಒಪ್ಪುತ್ತದೆ. ಆದರೆ ಆಶ್ಚರ್ಯದ ವಿಚಾರ ಅಂದರೆ ಒಂದು ನೊಣ ಅಪ್ಪಿ ತಪ್ಪಿ ಇದರ ಮೇಲೆ ಕುಳಿತು ತಿಂದರೆ ತಕ್ಷಣ ಮರಣ ಖಚಿತ. ಅಂದರೆ ನೊಣಕ್ಕೆ ತುಪ್ಪವೆ ವಿಷ.
3) ಜೋನಿಬೆಲ್ಲ, ಇದಕ್ಕೂ ಸಹ ಆಯುರ್ವೇದದಲ್ಲಿ ಅಷ್ಟೇ ಮಹತ್ವ ಇದೆ. ಇದರಿಂದ ತಯಾರಿಸಿದ ಸಿಹಿ ತಿಂಡಿಗಳು ಯಾವತ್ತೂ ಅಪಾಯಕಾರಿ ಅಲ್ಲ. ಆದರೆ ಜೋನಿಬೆಲ್ಲವನ್ನು ನೀವು ಕತ್ತೆಗೆ ಕೊಟ್ಟರೆ ಸ್ವಲ್ಪ ಸಮಯದ ನಂತರ ಕತ್ತೆ ಒದ್ದಾಡಿ ಸಾಯತ್ತ ದೇ ..
ಅಂದರೆ ಕತ್ತೆಗೆ ಇದು ವಿಷ.
4)ನಿಂಬೆ ಹಣ್ಣು.. ಇದಕ್ಕೂ ಆಯುರ್ವೇದದಲ್ಲಿ ಅಷ್ಟೇ ಮಹತ್ವವಿದೆ. ಹಾಗೂ ವಿಜ್ಞಾನ ಸಹ ಒಪ್ಪಿದೆ. ಆದರೆ ನಿಮಗೆ ಆಶ್ಚರ್ಯ ಆಗಬಹುದು..
ದಿನವಿಡೀ ನಿಂಬೆ ಗಿಡದ ಹತ್ತಿರ ಇರುವ ಕಾಗೆ ಅಕಸ್ಮಾತ್ ರಾತ್ರಿ ವೇಳೆ ಅದೇ ನಿಂಬೆ ಹಣ್ಣನ್ನು ತಿಂದರೆ ಸತ್ತುಹೋಗುತ್ತದೆ. ನಮಗೆ ಔಷಧಿ ಕಾಗೆಗೆ ವಿಷ...
********
No comments:
Post a Comment