SEARCH HERE

Thursday 8 April 2021

ಜ್ಯೋತಿರ್ಲಿಂಗ jyotirlinga

ಧರ್ಮ ದೀವಿಗೆ - ಶಿವರಾತ್ರಿ ವಿಶೇಷ  - ಮಹಾ ಶಿವರಾತ್ರಿ. ಮುಕ್ತಿ ಮಂಟಪಕ್ಕೆ ಶಿವಸ್ತುತಿಯೇ ಸೋಪಾನ..ಶಿವನಷ್ಟು ಸುಲಭವಾಗಿ ಒಲಿವ ದೇವ ಮತ್ತೊಬ್ಬನಿಲ್ಲ. ಲಯಕರ್ತನಾದ ಶಿವ ಭಕ್ತರಿಗೊಲಿಗೆ, ಬೇಡಿದ ವರವ ಕೊಡುವ ಕಲ್ಪವೃಕ್ಷ. ರಾವಣಾಸುರನಿಗೆ ತನ್ನ ಆತ್ಮಲಿಂಗವನ್ನೇ ದಯಪಾಲಿಸಿದ ಕರುಣಾಮಯಿ. ಗಂಗೆಗೆ ಮುಡಿಯಲ್ಲಿ ಜಾಗಕೊಟ್ಟು, ಪಾರ್ವತಿಗೆ ಅರ್ಧ ಶರೀರವನ್ನೇ ಕೊಟ್ಟು ಅರ್ಧನಾರೀಶ್ವರನಾದ ಶಿವ ಕರುಣಾಸಾಗರ.

ಮಹಾ ಶಿವರಾತ್ರಿ ದಿನ ಉಪವಾಸವಿದ್ದು, ಜಾಗರಣೆ ಮಾಡಿ, ಶಿವನ ತಲೆಯ ಮೇಲೊಂದು ಬಿಲ್ವಪತ್ರೆಯ ನಿರಿಸಿದರೂ ಸಾಕು ಶಿವ ಒಲಿಯುತ್ತಾನೆ. ಬೇಡರ ಕಣ್ಣಪ್ಪನಿಗೆ, ಮಾರ್ಕಂಡೇಯನಿಗೆ ಒಲಿದ ಶಿವ ದ್ವಾದಶ ಜ್ಯೋತಿರ್ಲಿಂಗಗಳ ಶ್ಲೋಕ ಪಠಣದಿಂದ ಒಲಿಯುತ್ತಾನಂತೆ. ಈ ಶ್ಲೋಕ ಪಠಣ ಮಾತ್ರದಿಂದ ಸಪ್ತಜನ್ಮ ಕೃತ ಪಾಪಗಳು ಪರಿಹಾರವಾಗುತ್ತವೆ ಎನ್ನುತ್ತದೆ ಶಿವಪುರಾಣ.

ಬನ್ನಿ ಜ್ಯೋತಿರ್ಲಿಂಗ ಸ್ತೋತ್ರ ಭಜಿಸೋಣ...

ಸೌರಾಷ್ಟ್ರೇ ಸೋಮನಾಥಂ ಚ, ಶ್ರೀಶೈಲೇ ಮಲ್ಲಿಕಾರ್ಜುನಂ
ಉಜ್ಜಯಿನ್ಯಾಂ ಮಹಾಕಾಲಃ, ಓಂಕಾರ ಮಮಲೇಶ್ವರಮ್
ಪರಣ್ಯಾಂ ವೈದ್ಯನಾಥಂಚ, ಢಾಕಿನ್ಯಾಂ ಭೀಮಶಂಕರಂ
ಸೇತು ಬಂಧೇ ತು ರಾಮೇಶಂ, ನಾಗೇಶಂ ಧಾರುಕಾವನೆ
ವಾರಣ್ಯಾಸ್ಯಾಂತು ವಿಶ್ವೇಶಂ ತ್ರಯಂಭಕಂ ಗೌತಮೀ -ತಟೇ
ಹಿಮಾಲಯೇತು ಕೇದಾರಂ, ಧ್ರುಸೃಣೇಶೇಂ ಶಿವಾಲಯೇ
ಏತಾನಿ ಜ್ಯೋತಿರ್ಲಿಂಗಾನಿ, ಸಾಯಂ ಪ್ರಾತಃ ಪಠೇನ್ ನರಃ
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.

ಸೌರಾಷ್ಟ್ರ (ಗುಜರಾತ್)ದಲ್ಲಿ ಸೋಮನಾಥನಾಗಿ, ಶ್ರೀಶೈಲ (ಆಂಧ್ರಪ್ರದೇಶ)ದಲ್ಲಿ ಮಲ್ಲಿಕಾರ್ಜುನನಾಗಿ, ಉಜ್ಜಯಿನಿ (ಮಧ್ಯಪ್ರದೇಶ)ಯಲ್ಲಿ ಮಹಾಕಾಲೇಶ್ವರನಾಗಿ, ಮಧ್ಯಪ್ರದೇಶದ ಓಂಕಾರದಲ್ಲಿ ಅಮಲೇಶ್ವರನಾಗಿ, ಬಿಹಾರದಲ್ಲಿ ವೈದ್ಯನಾಥನಾಗಿ, ರಾಜಮಹೇಂದ್ರಿಯಲ್ಲಿ ಭೀಮಶಂಕರನಾಗಿ, ರಾಮೇಶ್ವರ (ತಮಿಳುನಾಡು)ದಲ್ಲಿ ರಾಮೇಶ್ವರನಾಗಿ, ಗುಜರಾತ್‌ನಲ್ಲಿ ನಾಗೇಶ್ವರನಾಗಿ, ವಾರಾಣಸಿ ಅಥವಾ ಕಾಶಿಯಲ್ಲಿ ವಿಶ್ವೇಶ್ವರನಾಗಿ, ಕೇದಾರ (ಹಿಮಾಲಯ)ದಲ್ಲಿ ಕೇದಾರನಾಥನಾಗಿ, ಗೋತಮಿ ನದಿ ತಟದಲ್ಲಿ ತ್ರಯಂಭಕೇಶ್ವರನಾಗಿ, ಮಹಾರಾಷ್ಟ್ರದಲ್ಲಿ ಧ್ರುಷ್ಣೇಶ್ವರನಾಗಿ ದ್ವಾದಶ ಜ್ಯೋತಿರ್ಲಿಂಗ ರೂಪದಿಂದ ಆಸೇತು ಹಿಮಾಚಲ ಪರ್ಯಂತ ನೆಲೆಸಿ ಈ ಭರತ ಖಂಡವನ್ನು ರಕ್ಷಿಸುತ್ತಿರುವ ಪರಮೇಶ್ವರ ಸಕಲರಿಗೂ ಸನ್ಮಂಗಳವನ್ನುಂಟುಮಾಡಲಿ.

  ಓಂ ನಮಃ ಶಿವಾಯ.
*****

ಓಂ ನಮಃ ಶಿವಾಯ

ಶಿವನ ರೂಪ ಮತ್ತು ಸಂಕೇತಗಳು.

ಬಾಲಚಂದಿರ- ಸಮಯದ ಸಂಕೇತ. 
ಜಟೆ - ಬಾಹ್ಯಾಕಾಶ ಅಥವ ಸಮಸ್ತ ಜಗತ್ತಿನ ಸಂಕೇತ.
ಗಂಗೆ- ಜ್ಞಾನ ಹಾಗು ಪವಿತ್ರತೆಯ ಸಂಕೇತ.
ಮೂರು ಕಣ್ಣುಗಳು- ಸೂರ್ಯ, ಚಂದ್ರ ಹಾಗು ಅಗ್ನಿಯ ಸಂಕೇತ.
ಕೊರಳಲ್ಲಿನ ಹಾವು- ಭಯ ಹಾಗು ಕುಂಡಲಿನಿ ಶಕ್ತಿಯ ಸಂಕೇತ.
ರುದ್ರಾಕ್ಷಿ ಮಾಲೆ- ವೈರಾಗ್ಯದ ಸಂಕೇತ.
ರುಂಡಮಾಲೆ- ಹುಟ್ಟು ಸಾವುಗಳ ಪುನರಾವರ್ತನೆಯ ಸಂಕೇತ.
ಭಸ್ಮಲೇಪನ- ನಶ್ವರತೆಯ ಸಂಕೇತ.
ತ್ರಿಶೂಲ- ತ್ರಿಗುಣ ಅಂದರೆ ರಜೋಗುಣ, ತಮೋಗುಣ ಹಾಗು ಸಾತ್ವಿಕಗುಣದ ಸಂಕೇತ ಅಂತೆಯೇ ಸೃಷ್ಟಿ, ಸ್ಥಿತಿ ಹಾಗು ಲಯದ ಸಂಕೇತವೂ ಆಗಿದೆ.
ಢಮರುಗ- ಶಬ್ದ ಅಥವ ವಾಕ್ಕಿನ ಸಂಕೇತ.
ಗಜಚರ್ಮ - ಗಜಮದ ಅಥವ ಅಹಂಕಾರ ಮರ್ಧನದ ಸಂಕೇತ.
ಹುಲಿಚರ್ಮ- ಆಸೆ ಮತ್ತು ಅತೃಪ್ತಿಯ ದಮನದ ಸಂಕೇತ.
ಧ್ಯಾನಸ್ಥ ಸ್ಥಿತಿ- ಸ್ವಸ್ವರೂಪಾನಂದದ ಸಂಕೇತ.


ಇವಿಷ್ಟೇ ಅಲ್ಲದೆ ಇನ್ನೂ ಅನೇಕ ಸಂಕೇತಗಳಿವೆ.
*****

No comments:

Post a Comment