ಹಲ್ಲಿಯ ಮೊಟ್ಟೆಗಳನ್ನು ಹೆಚ್ಚಿನವರು ನೋಡಿರಬಹುದಲ್ವೇ. ಹಲ್ಲಿಯು ಮೊಟ್ಟೆ ಇಟ್ಟ ದಿನ ಆ ಮೊಟ್ಟೆಯನ್ನು ಒಡೆದರೆ ಸ್ವಲ್ಪ ನೀರಿನಂತಹ ದ್ರಾವಕ ಮಾತ್ರ ಇರುವುದು ನಮಗೆ ಕಾಣಬಹುದು... ಭರ್ತಿ ಹನ್ನೊಂದು ದಿನದಲ್ಲಿ ಆ ದ್ರಾವಕವು ಹಲ್ಲಿಯಾಗಿ ಬದಲಾಗುತ್ತದೆ...!
ಎಷ್ಟೊಂದು ಬಯೋಕೆಮಿಕಲ್ ಬದಲಾವಣೆ ಆ ಮೊಟ್ಟೆಯೊಳಗೆ ನಡೆಯುವುದು...!!
ಒಂದು ಕೋಳಿ ಮೊಟ್ಟೆ ಇಟ್ಟ ನಂತರ ಇಪ್ಪತ್ತೊಂದನೆಯ ದಿನ ಕೊಕ್ಕು, ರೆಕ್ಕೆ, ಪುಕ್ಕ, ಮಾಂಸ, ಉಗುರುಗಳು ಎಲ್ಲವೂ ಇರುವ ಕೋಳಿ ಮರಿಯು ಹೊರಗೆ ಬರುತ್ತದೆ...
ಒಂದು ಒಡೆದು ಮರಿ ಹೊರಬರಲು ತಯಾರಾದ ಕೋಳಿ ಮೊಟ್ಟೆ ಮತ್ತು ಒಂದು ಬಾತುಕೋಳಿಯ ಮೊಟ್ಟೆಯನ್ನು ಒಂದು ಕೆರೆಯ ದಡದಲ್ಲಿ ನೀರಿನ ಹತ್ತಿರ ಇಡಿ. ನಂತರ ದೂರದಿಂದ ಗಮನಿಸುತ್ತಾ ಇರಿ. ಎರಡೂ ಮೊಟ್ಟೆಗಳಿಂದ ಮರಿಗಳು ಹೊರಗೆ ಬರುವುದನ್ನು ಕಾಣುವಿರಿ... ಕೋಳಿ ಮರಿಯು ನೀರನ್ನು ನೋಡಿದ ತಕ್ಷಣ ಭಯದಿಂದ ಹಿಂದೆ ಸರಿಯುತ್ತದೆ... ಆದರೆ ಬಾತುಕೋಳಿಯ ಮರಿಯು ನೀರಿನಲ್ಲಿ ಇಳಿದು ಈಜಾಡುತ್ತಾ ಆಟವಾಡುತ್ತದೆ.
ಎರಡೂ ಮರಿಗಳು ಮೊಟ್ಟೆಯ ಒಳಗಿಂದಲೇ ಬಂದಿರೋದು ತಾನೇ?
ಬಾತುಕೋಳಿಯ ಮರಿಗೆ ಈಜಾಡಲು ಕಲಿಸಿದ್ದು ಯಾರು? ಕೋಳಿ ಮರಿಗೆ ಭಯ ಹುಟ್ಟಿಸಿದವರು ಯಾರು?
ಆ ಮರಿಗಳ ಮೆದುಳಿನಲ್ಲಿ ಬರೆದಿಟ್ಟಿದೆ... ಆ ಜ್ಞಾನವನ್ನೇ ದೈವಿಕ ರಹಸ್ಯ ಅಂತ ಹೇಳಲ್ಪಡುವುದು...
ಅದರ ಒಂದು ಭಾಗವು ಆತ್ಮಚೈತನ್ಯವಾಗಿ ನಮ್ಮೆಲ್ಲರಲ್ಲಿಯೂ ಇದೆ...!! ಅದರಿಂದಲೇ ನಮ್ಮ ಹೃದಯ ಪ್ರವರ್ತಿಸುವುದು....
ಕೆನಡಾದಲ್ಲಿ ಆರ್ಕಟಿಕ್ ಸಮುದ್ರದ ಹತ್ತಿರ ಒಂದು ಸ್ಥಳವಿದೆ. ಅಲ್ಲಿ ಸಾಲ್ಮಣ್ ಎಂಬ ಜಾತಿಯ ಮೀನುಗಳು ಬಂದು ಮೊಟ್ಟೆಯಿಡುತ್ತವೆ....
ಆ ಮೊಟ್ಟೆಗಳು ಒಡೆದು ಹೊರಬಂದ ಮರಿ ಸಾಲ್ಮಣ್ ಮೀನುಗಳು ಕ್ರೀಕ್ ಆರ್ಕಟಿಕ್ ಸಮುದ್ರದಿಂದ ಕೆಳಗಡೆ ಬಂದು ಫೆಸಿಫಿಕ್ ಸಮುದ್ರದಿಂದ ಹಾದು , ಸೌತ್ ಅಮೇರಿಕಾದ ಕೆಳಭಾಗದಿಂದ ಸೌತ್ ಆಫ್ರಿಕಾವನ್ನು ದಾಟಿ , ಅಟ್ಲಾಂಟಿಕ್ ಸಮುದ್ರದ ವರೆಗೆ ಬಂದು ಪುನಃ ಸೌತ್ ಆಫ್ರಿಕಾ ,ಸೌತ್ ಅಮೇರಿಕಾವನ್ನು ದಾಟಿ , ಫೆಸಿಫಿಕ್ ಸಮುದ್ರದಿಂದ ಹಾದು ಪುನಃ ಆರ್ಕಟಿಕ್ ಸಮುದ್ರದಲ್ಲಿ ಬಂದು ಸೇರುತ್ತವೆ.... !!
ಈ ದೀರ್ಘಕಾಲ ಪ್ರಯಾಣಕ್ಕೆ ತಗಲುವ ಸಮಯ ಮೂರು ವರ್ಷಗಳು.....!!
ಅಷ್ಟರಲ್ಲಿ ಆ ಚಿಕ್ಕ ಸಾಲ್ಮಣ್ ಮೀನಿನ ಮರಿಗಳು ದೊಡ್ಡ ಮೀನುಗಳಾಗಿ ಬೆಳೆದಿರುತ್ತದೆ ಮತ್ತು ಅಲ್ಲಿ ಅದು ಮೊಟ್ಟೆ ಇಡುತ್ತವೆ...
ಹೀಗೆ ಮೊಟ್ಟೆಗಳನ್ನಿಟ್ಟ ಮೀನುಗಳು ತಲೆಯನ್ನು ನೆಲಕ್ಕೆ ಹೊಡೆದು ಸತ್ತು ಹೋಗುತ್ತವೆ....!!
ಸುಮಾರು 32 ಲಕ್ಷ ಟಣ್ ಸಾಲ್ಮಣ್ ಮೀನುಗಳು ಒಂದು ಸೀಸನ್ ನಲ್ಲಿ ಸಾಯುತ್ತವೆ....!!
ಆ ಸಮಯದಲ್ಲಿ ಈ ಸಾಲ್ಮಣ್ ಮೀನುಗಳನ್ನು ತಿನ್ನಲು ಅಲ್ಲಿ ಕರಡಿಗಳು ಬಂದು ಸೇರುತ್ತವೆ....
ಈ ಸಾಲ್ಮಣ್ ಮೀನುಗಳಿಗೆ ಇಷ್ಟು ದೂರ ಹೋಗಿ ಪುನಃ ಅಲ್ಲಿಗೇ ಮರಳಿ ಬಂದು ಮೊಟ್ಟೆಗಳನ್ನಿಟ್ಟು ತಲೆ ಹೊಡೆದು ಸಾಯಲು ಹೇಳಿದವರು ಯಾರು?
ನಂಬಿದ್ರೆ ನಂಬಿ ಸ್ನೇಹಿತರೆ... ಸಕಲ ಜೀವಜಾಲಗಳ ಚಲನವಲನಗಳನ್ನು ನಿಯಂತ್ರಿಸುವ ಶಕ್ತಿಯೊಂದು ಇದೆ....
ಕಣ್ಣಗಳಿಗೆ ನೋಡುವ ಶಕ್ತಿ...
ಕಿವಿಗಳಿಗೆ ಕೇಳುವ ಶಕ್ತಿ....
ನಾಲಿಗೆಗೆ ರುಚಿ ನೋಡುವ ಮತ್ತು ಮಾತನಾಡುವ ಶಕ್ತಿ.... ಹೀಗೇ.... ಹೀಗೇ ಎಲ್ಲದಕ್ಕೂ ಒಂದು ಶಕ್ತಿ....
ಆ ಚೈತನ್ಯವೇ ದೈವಿಕ ಶಕ್ತಿ.....
ಆ ದೇವರ ಸನ್ನಿಧಿಯಲ್ಲಿ
ವರ್ಗವಿಲ್ಲ....
ವರ್ಣವಿಲ್ಲ....
ಶ್ರೀಮಂತ ಬಡವ ಎಂಬ ವ್ಯತ್ಯಾಸ ವಿಲ್ಲ....
ಎಲ್ಲರೂ ಸಮಾನರು....!!
ದೇವರು ನಮಗೆ ನಿರ್ಧರಿಸಿದ ಕಾಲದವರೆಗೂ ಸಾಮರಸ್ಯದಿಂದ ಮತ್ತು ಪ್ರೀತಿ ವಿಶ್ವಾಸದಿಂದ ಬದುಕಿ ಬಾಳಿರಿ....
ದೇವರನ್ನು ಅರಿಯಲು ಪ್ರಯತ್ನಿಸಿ.....
ದೇವರನ್ನು ಕಾಣಲು ಪ್ರಯತ್ನಿಸಿ....
*****
No comments:
Post a Comment