SEARCH HERE

Friday 9 April 2021

namichandra sagar and nemichandra sagar genius kids ನಮಿಚಂದ್ರಸಾಗರ್ ಮತ್ತು ನೆಮಿಚಂದ್ರಸಾಗರ್


29 nov 2018
10 ಭಾಷೆಗಳಲ್ಲಿ ಸುಲಲಿತವಾಗಿ ಪ್ರವಚನ ಮಾಡುವ ಅವಳಿ ಬಾಲ ಮುನಿಗಳು🙏
 ಅಸಾಧಾರಣ ಪ್ರತಿಭೆಗಳ ಸಂಗಮವಾದ ಅವಳಿ ಬಾಲಮುನಿಗಳ ಸಾಧನೆ ಅನಾವರಣಕ್ಕೆ ಬೆಂಗಳೂರಿನ ಅರಮನೆ ಮೈದಾನ ಡಿಸೆಂಬರ್ 2ರಂದು ಸಾಕ್ಷಿಯಾಗಲಿದೆ. ರಾಜಾಜಿನಗರದ ಶ್ರೀನಾಕೋಡಾ ಪಾಶ್ರ್ವನಾಥ ಜೈನ್ ಶ್ವೇತಂಬರ್ ಮಂದಿರ ಟ್ರಸ್ಟ್ ಹಾಗೂ ಮೆಡಿಟೇಷನ್ ರಿಸರ್ಚ್ ಫೌಂಡೇಷನ್ ವತಿಯಿಂದ ಬೃಹತ್ ಬಾಲಶತಾವಧಾನ ಕಾರ್ಯಕ್ರಮದಲ್ಲಿ ಈ ಅವಳಿ ಪ್ರತಿಭಾನ್ವಿತ ಬಾಲಮುನಿಗಳಾದ ನಮಿಚಂದ್ರಸಾಗರ್ ಮತ್ತು ನೆಮಿಚಂದ್ರಸಾಗರ್ ತಮ್ಮ ಜ್ಞಾಪನಾಶಕ್ತಿಯನ್ನು ಜನರೆದುರು ಪ್ರಸ್ತುತಪಡಿಸಲಿದ್ದಾರೆ. ಆಟ-ಪಾಠಗಳಲ್ಲಿ ತೊಡಗಿಸಿಕೊಂಡು ಕಾಲ ಕಳೆಯುವ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದಿರುವುದೇ ಒಂದು ಸೋಜಿಗದ ವಿಷಯ ವಾಗಿದೆ.

ಹಲವಾರು ವರ್ಷಗಳ ಕಾಲ ಕಾಡು ಮೇಡು ಅಲೆದು ಜಪ ತಪಗಳಲ್ಲಿ ತೊಡಗಿಸಿಕೊಂಡು ದೇವರ ಅನುಗ್ರಹ ಪಡೆಯುವುದರ ಮೂಲಕ ಅಗಾಧವಾದ ಶಕ್ತಿ ಪಡೆದುಕೊಂಡು ಇತಿಹಾಸದ ಪುಟಗಳಲ್ಲಿ ಸೇರಿರುವ ಋಷಿ ಮುನಿಗಳ ಸಾಧನೆ ಒಂದಾದರೆ ಇವರೆಲ್ಲರಿಗಿಂತ ವ್ಯತಿರಿಕ್ತವಾಗಿ ಕೇವಲ 10 ವರ್ಷದ ಅವಳಿ ಬಾಲಕರು 10 ಭಾಷೆಗಳಲ್ಲಿ ಮಾತನಾಡುವ ಪ್ರವೀಣತೆಯನ್ನೂ ಸಹ ಹೊಂದಿದ್ದಾರೆ.

ಇಷ್ಟೂ ಸಾಲದೆಂಬಂತೆ ಇವರ ಅಮೋಘವಾದ ನೆನಪಿನ ಶಕ್ತಿ ಬಗ್ಗೆ ಕೇಳಿದರೆ ಬಾಯಿಯ ಮೇಲೆ ಕೈಯಿಟ್ಟು ಕೂರಬೇಕಾಗುತ್ತದೆ. 10 ಭಾಷೆಗಳಲ್ಲಿ ಸಾವಿರಾರು ಸಭಿಕರ ನಡುವೆ ಏಕಕಾಲದಲ್ಲಿ 100 ಪ್ರಶ್ನೆಗಳಿಗೆ ಅವರದೇ ಭಾಷೆಯಲ್ಲಿ ಉತ್ತರಿಸುವಂತಹ ಚಾಣಾಕ್ಯರಿವರು.
ಭಗವದ್ಗೀತೆಯಲ್ಲಿ ಎಷ್ಟು ಪಾಠಗಳಿವೆ ಎಂಬುದಕ್ಕೆ ಉತ್ತರಿಸಲು ತತ್ತರಿಸುವ ಎಷ್ಟೋ ಮಂದಿಗಳ ನಡುವೆ ಜೈನ ಧರ್ಮದ 5000 ಶ್ಲೋಕಗಳಲ್ಲದೆ ಭಗವದ್ಗೀತೆ, ಖುರಾನ್, ಬೈಬಲ್, ಗುರುಗ್ರಂಥ ಸಾಹೀಬ್ ಧರ್ಮ ಗ್ರಂಥಗಳ ಕುರಿತು ಯಾವುದೇ ಭಾಗದ ಪ್ರಶ್ನೆಗಳನ್ನು ಯಾವುದೇ ಭಾಷೆಯಲ್ಲಿ ಕೇಳಿದರೂ ಅದಕ್ಕೆ ಕೇಳಿದಂತಹ ಭಾಷೆಯಲ್ಲೇ ಉತ್ತರಿಸುವಷ್ಟು ಪ್ರತಿಭಾನ್ವಿತರು ಅವರ ನೆನಪಿನ ಶಕ್ತಿಯನ್ನು ನಿಜವಾಗಿಯೂ ಮೆಚ್ಚಲೇಬೇಕಾಗಿದೆ. ಕೇವಲ 1ನೇ ತರಗತಿಯವರೆಗೆ ವ್ಯಾಸಂಗ ಮಾಡಿ ನಂತರ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ ಜೈನ ಧರ್ಮದ ಬಾಲಮುನಿಗಳಾಗಿರುವ ಈ ಅವಳಿ ಗುರುಗಳು ಸಂಸ್ಕøತ, ಪ್ರಾಕೃತ, ಹಿಂದಿ, ಗುಜರಾತಿ, ಮರಾಠಿ, ಮಾರ್ವಾಡಿ, ಇಂಗ್ಲೀಷ್, ಪಂಜಾಬಿ, ಕನ್ನಡ, ಉರ್ದು ಭಾಷೆಗಳಲ್ಲಿ ಮಾತನಾಡುವ, ಅರ್ಥಮಾಡಿಕೊಳ್ಳುವಂತಹ ಮಹಾನ್ ಜ್ಞಾನವನ್ನು ಗಳಿಸಿದ್ದಾರೆ.

ಗುಜರಾತಿನ ಸೂರತ್ ನಗರದ ತಂದೆ ಪಿಯಷ್‍ಭಾಯ್ ಮತ್ತು ತಾಯಿ ಸೋನಲ್‍ಬೆನ್ ರವರ ಅವಳಿ ಮಕ್ಕಳಾಗಿರುವ ಇವರು, 2 ವರ್ಷ ಗುರುಕುಲದಲ್ಲಿ ಸನ್ಯಾಸ ಜೀವನದ ತರಬೇತಿ ಪಡೆದು 9ನೇ ವಯಸ್ಸಿನಲ್ಲಿ ಸೂರತ್ ನಗರದಲ್ಲಿ ಸನ್ಯಾಸ ಸ್ವೀಕರಿಸಿದರು. ತದನಂತರ ತಪ, ತ್ಯಾಗ, ಪರಮಾರ್ಥ ಹಾಗೂ ಧ್ಯಾನ ಸಾಧನೆಯ ಮೂಲಕ ಆಧ್ಯಾತ್ಮಿಕ ದಿಕ್ಕಿನಲ್ಲಿ ಉನ್ನತಿ ಸಾಧಿಸುತ್ತಿದ್ದಾರೆ. ಈಗಾಗಲೇ ಇವರು ಬಹುತೇಕ 5,000 ಕಿ.ಮೀ. ದೂರ ಪಾದಯಾತ್ರೆ ಮಾಡಿದ್ದಾರೆ. ಸನ್ಯಾಸ ಸ್ವೀಕರಿಸಿದ ನಂತರ ಅವಳಿ ಬಾಲಮುನಿಗಳು ಕೇವಲ 2:30 ಗಂಟೆಗಳ ಕಾಲ 350 ಪದ್ಯಗಳು ಕಂಠಪಾಠ ಮಾಡಿ ಒಂದು ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ.

ಈ ಅವಳಿ ಬಾಲಮುನಿಗಳಿಗೆ ಜೈನ ಧರ್ಮದ 5 ಆಗಮ ಗ್ರಂಥಗಳ 5,000 ಶ್ಲೋಕಗಳ ಜೊತೆ ಭಗವದ್ಗೀತೆಯ ಅಧ್ಯಾಯಗಳು, ಗುರುಗ್ರಂಥ ಸಾಹಿಬ್‍ರ ಪೌರಿಸ್(ಪಾವಡಿಯಾ), ಬೈಬಲಿನ ಅಧ್ಯಾಯಗಳು ಹಾಗೂ ಖುರಾನ್ ಆಯಾತ್ ಭಾಗಶಃ ಕಂಠಪಾಠವಾಗಿದೆ. ಎಲ್ಲಾ ಮುಖ್ಯ ಧರ್ಮದ ಮುಖ್ಯ ಧರ್ಮ ಗ್ರಂಥವನ್ನು ಭಾಗಶಃ ಕಂಠಪಾಠ ಮಾಡಿದ್ದಾರೆ. ವಿಶ್ವದ ಯಾವುದೇ ದೇಶದ ಹೆಸರನ್ನು ಕೇಳಿ, ದೇಶದ ಹೆಸರಿನೊಂದಿಗೆ ಅದರ ರಾಜಧಾನಿ ಮತ್ತು ಮಾತೃಭಾಷೆಯನ್ನು ಹೇಳಬಲ್ಲವರಾಗಿದ್ದು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಪಿರಾಮಿಡ್ ಕ್ಯೂಬನ್ನು ಸರಿಪಡಿಸ ಬಲ್ಲವರಾಗಿದ್ದಾರೆ. ಭಾರತದ ರಾಷ್ಟ್ರಪತಿಗಳು, ವಿವಿಧ ರಾಜ್ಯಗಳ ಮುಖ್ಯ ಮಂತ್ರಿಗಳು, ರಾಜ್ಯಪಾಲರು, ಕೇಂದ್ರೀಯ ಸಚಿವರಿಂದ ಪ್ರಶಂಸೆ ಪಡೆದಿರುವ ಇವರನ್ನು ಗುಜರಾತ್ ಕ್ಯಾಬಿನೆಟ್‍ನ ಶಿಕ್ಷಣ ಸಚಿವ ಭೂಪೇಂದ್ರಸಿಂಗ್ ಚುಡಾಸಮಾ ರವರು ಸುವರ್ಣಶಾಯಿಯಲ್ಲಿ ಬರೆದ ಗೌರವಾನ್ವಿತ ಪತ್ರದಿಂದ ಅವರನ್ನು ಗೌರವಿಸಿದ್ದಾರೆ.

No comments:

Post a Comment