SEARCH HERE

Friday 9 April 2021

santa shishunala sharif 1889 ಸಂತಶಿಶುನಾಳಶರೀಫ




# #ಸಂತಶಿಶುನಾಳಶರೀಫ #
( ೧೮೧೯ - ೧೮೮೯ )
ಸ್ಥಳ : ಹಾವೇರಿಜಿಲ್ಲೆ ಶಿಗ್ಗಾಂವಿತಾಲ್ಲೂಕು
ಶಿಶುವಿನಾಳ ಗ್ರಾಮ
ತಂದೆ : ಇಮಾಮ ಹಜರತ ಸಾಹೇಬ
ತಾಯಿ : ಹಜ್ಹೂಮಾ
ಪೂರ್ಣಹೆಸರು : ಮಹಮ್ಮದ ಶರೀಫ
ಹೆಂಡತಿ : ಫಾತಿಮಾ 
ಮಗಳು : ಲತೀಮಾ
ವೃತ್ತಿ : ಕೆಲಕಾಲ ಪ್ರಾಥಮಿಕ ಶಾಲಾಶಿಕ್ಷಕ 
ಹೆಂಡತಿ - ಮಗಳ ನಿಧನದ ನಂತರ 
ಸಂತನಾದರು .
ಗುರು : ಕಳಸದ ಗುರುಗೋವಿಂದಭಟ್ಟ
ಕೃತಿ : ತತ್ವಪದ ದಂಡಕ ಕಾಲಜ್ಞಾನ
# * #ಶಿವಯೋಗಿಶರೀಫರಿಗೆ #ಅಮೋಘಂಚೈತ್ರಕಾರಂಜಿಯ #ಕಾವ್ಯನಮನ* #
( ಕುಸುಮಷಟ್ಪದಿ )
ಅನುಭವವೆ ಬೆಳಕಾಗಿ 
ಅನುಭಾವ ಬೆಳಗಾಗಿ 
ತನುಮನವನರ್ಪಿಸಿದೆ ಸಂತಕವಿಯೆ |
ಜನಮನದೊಳೈಕ್ಯತೆಯ 
ಘನಸಾರವನು ತುಂಬಿ
ಇನನನಂತತೆಯ ನೀನಾಂತೆ ಭವಿಯೆ || ೧ ||
ಸಂಸಾರದುಷೆವೆಳಗಿ
ನಿಂ ಸಂಪದವನಾಂತು 
ನೀ ಸಂತನಾದೆ ವೈರಾಗ್ಯಧರಿಸಿ |
ದಾಸಭಾವವನಳಿಸಿ 
ಕಾಸಾರದಲೆಯಂತೆ 
ಆ ಸೋಹಮೆಂಬ ದಾಸೋಹಮಂ ವರಿಸಿ || ೨ ||
# * #ಸಂತಶಿಶುನಾಳಶರೀಫ 
#ಅನುಭಾವಿಶಿವಯೋಗಿ* #
# #ಹಾರಬಂಧಪದ್ಯಸಾಹಿತ್ಯ #
ತತ್ವಪದ್ಯಪದಪರ್ವದಿಂಚರಕೆ
ದಾಸ್ಯಮುಕ್ತಮುದಮುತ್ತಿನಂಬರಕೆ
ಭಾವಭವ್ಯಭವಭಕ್ತಿವೈಭವಕೆ
ರಂಗುರಮ್ಯರಸರಕ್ತಿಯುತ್ಸವಕೆ
ಭಂಗವಿತ್ತ ವಿಧ ವಿಶ್ವಮಾನ್ಯವದು
ನೀನು ಸರ್ವಸಮಸನ್ತ ವಂದಿಪೆನು
# * #ಪದಕಗದ್ಯಸಾಹಿತ್ಯ* #
*ಶಿವಶುಭನಮನಾವಳಿ 
ವಿಮಳವಿರಕ್ತಿಸಂಗೀತ*
ಶಿ
ವ ಶು ಭ 
ನ ಮ ನಾ ವ ಳಿ 
ವಿ ಮ ಳ ವಿ ರ 
ಕ್ತಿ ಸಂ ಗೀ 
# * #ಅಕ್ಷಾಕ್ಷರಪದಪುಂಜ* #
ಶಿಶುನಾಳಸಂತ
*******

No comments:

Post a Comment