SEARCH HERE

Thursday, 8 April 2021

ಕಠೋಪನಿಷದ್ kathopanishad

ಕಠೋಪನಿಷತ್:

ಸಹ ನಾವವತು । ಸಹ ನೌ ಭುನಕ್ತು । ಸಹ ವೀರ್ಯಂ ಕರವಾವಹೈ ।
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ  ॥*॥
ಓಂ ಶಾಂತಿಃ ಶಾಂತಿಃ ಶಾಂತಿಃ ॥

ಸಾರಾಂಶ:

ಇದು ಯಜುರ್ವೇದದ ಶಾಂತಿ ಮಂತ್ರ. ಯಜುರ್ವೇದದಲ್ಲಿ, ತೈತ್ತಿರೀಯ ಶಾಖೆಯಲ್ಲಿ ಮತ್ತು ಕಾಠಕಶಾಖೆ ಮೂರರಲ್ಲೂ ಒಂದೇ ಶಾಂತಿ ಮಂತ್ರವಿದೆ ಮತ್ತು ಅದು ಕಠೋಪನಿಷತ್ತಿನ ಕೊನೆಗೆ ಬಂದಿದೆ. [ಯಜುರ್ವೇದದಲ್ಲಿ ತೈತ್ತಿರೀಯಶಾಖೆಯವರಿಗೆ “ಶಂ ನೋ ಮಿತ್ರಃ ಶಂ ವರುಣಃ...” ಎನ್ನುವ ಎರಡನೇ  ಶಾಂತಿ ಮಂತ್ರವೂ ಇದೆ, ಆದರೆ ಕಠ ಶಾಖೆಯ ಯಜುರ್ವೇದಿಗಳಿಗೆ ಇದೊಂದೇ ಶಾಂತಿ ಮಂತ್ರ]. ಇದು ಪಾಠ ಪ್ರಾರಂಭದಲ್ಲಿ ಶಿಷ್ಯರು ಮಾಡುವ ಪ್ರಾರ್ಥನೆ. ಇದಕ್ಕೆ ಗುರುಗಳೂ ಧ್ವನಿಗೂಡಿಸಬಹುದು.

ಸಹ ನಾವವತು: ‘ಅವತು’ ಎನ್ನುವಲ್ಲಿ ‘ಅವ’ ಎಂದರೆ ಪ್ರವೇಶ. “ಓ ಭಗವಂತ, ನೀನು ನನ್ನ ಗುರುವಿನೊಳಗೆ ಕೂತು, ಅವರಿಗೆ ವಿದ್ಯೆಯನ್ನು ಹೇಳುವ ಶಕ್ತಿ ತುಂಬು. ನನ್ನೊಳಗೆ ಕೂತು ಗುರುಗಳು ಹೇಳುವ ಮಾತು ನನಗೆ ಅರ್ಥವಾಗುವಂತೆ ಮಾಡು”.

ಸಹ ನೌ ಭುನಕ್ತು: ‘ಭುನಕ್ತು’ ಎಂದರೆ ಪಾಲಿಸುವುದು ಅಥವಾ ತಿನ್ನುವುದು. “ಓ ಭಗವಂತ,  ನಮ್ಮ ಅಧ್ಯಯನ ಕಾಲದಲ್ಲಿ ಯಾವುದೇ ವಿಘ್ನ ಬಾರದಂತೆ ನಮ್ಮನ್ನು ಕೊನೇಯತನಕ ಪಾಲಿಸು. ನಿನ್ನ ರಕ್ಷೆ ಸದಾ ನಮ್ಮೊಂದಿಗಿರಲಿ. ನಮ್ಮಿಬ್ಬರಿಗೂ ಉಣ್ಣುವುದಕ್ಕೂ ತಿನ್ನುವುದಕ್ಕೂ ಬೇಕಾಗಿರುವ ಸಮೃದ್ಧಿಯನ್ನು ಕರುಣಿಸು”.
*****

Adhyaya 1 Valli 2
ಏತಚ್ಛ್ರುತ್ವಾ ಸಂಪರಿಗೃಹ್ಯ ಮರ್ತ್ಯಃ   ಪ್ರವೃಹ್ಯ ಧರ್ಮ್ಯಮಣುಮೇತಮಾಪ್ಯ ।
ಸ ಮೋದತೇ ಮೋದನೀಯಂ ಹಿ ಲಬ್ಧ್ವಾ  ವಿವೃತಂ ಸದ್ಮ ನಚಿಕೇತಸಂ ಮನ್ಯೇ ॥೧೩॥

ಸಾರಾಂಶ:

ಈ ಶ್ಲೋಕದಲ್ಲಿ ‘ಸಂಪರಿಗೃಹ’ ಎನ್ನುವ ಪದ ಬಳಕೆಯಾಗಿದೆ. ಪರಿಗ್ರಹ ಎಂದರೆ ‘ಆತ್ಮಸಾತ್’ ಮಾಡಿಕೊಳ್ಳುವುದು. ಎಲ್ಲವನ್ನೂ ಕೇಳಿ ತಿಳಿದುಕೊಂಡು, ನಿಜವಾದ ದಾರಿ ಯಾವುದೆಂದು ಗುರುತಿಸಿಕೊಂಡು, ಆ ದಾರಿಯಲ್ಲಿ ಹೋಗುವುದು. ಯಾವುದು ಸಮೀಚೀನವಾದದ್ದು ಅದನ್ನು ಗ್ರಹಣ ಮಾಡುವುದು ಸಂಪರಿಗ್ರಹ.  ಇದೇ ರೀತಿ ಇಲ್ಲಿ ‘ಪ್ರವೃಹ್ಯ’ ಎನ್ನುವ ಇನ್ನೊಂದು ಪದ ಬಳಕೆಯಾಗಿದೆ. ಪ್ರವೃಹ್ಯ ಎಂದರೆ ಬೇರ್ಪಡಿಸಿ ತಿಳಿಯುವುದು. ನಮಗೆ ಗೊತ್ತಿರುವ ಪ್ರಪಂಚಕ್ಕಿಂತ ಬೇರೆಯಾದ ಸತ್ಯವನ್ನು ಅರಸುವ ಪ್ರಯತ್ನ; ಜೀವಕ್ಕಿಂತ ಬೇರೆಯಾದ, ಜೀವನನ್ನು  ನಿಯಂತ್ರಿಸುವ ಒಂದು ಶಕ್ತಿ ಇದೆ ಎಂದು ಗುರುತಿಸುವುದು ಪ್ರವೃಹ್ಯ.
ಅಧ್ಯಾತ್ಮದ ಸಂಗತಿಯನ್ನು ಕೇಳಿ ತಿಳಿದು, ನಿಜವಾದ ದಾರಿಯನ್ನು ಗುರುತಿಸಿ,  ನಮ್ಮ ಮನಸ್ಸು ಗ್ರಹಿಸಬಲ್ಲಂತಹ ಎಲ್ಲಾ ಭೌತಿಕ ಪ್ರಪಂಚವನ್ನು ಬೇರ್ಪಡಿಸಿ, ಅಪ್ರಾಕೃತವಾದ, ಅಭೌತಿಕವಾದ, ನನ್ನ ಜೀವ ಸ್ವರೂಪಕ್ಕಿಂತಲೂ ವಿಲಕ್ಷಣವಾದ ಒಂದು ಶಕ್ತಿಯನ್ನು, ಇಡೀ ಪ್ರಪಂಚವನ್ನು ಧಾರಣೆ ಮಾಡಿರುವ ಭಗವಂತನನ್ನು, ಜ್ಞಾನಿಗಳ ಒಡನಾಟ ಮತ್ತು ಸೇವೆಯಿಂದ ತಿಳಿದಾಗ-ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಇದು ನಿಜವಾದ ಆನಂದದ ಅನುಭವ. “ನಚಿಕೇತನಿಗೆ ಇಂತಹ ಆನಂದದ ಮನೆಯ ಬಾಗಿಲು ತೆರೆದಿದೆ” ಎನ್ನುತ್ತಾನೆ ಯಮ.

ಕೃಪೆ:  ಪದ್ಮಶ್ರೀ   ಶ್ರೀ ಬನ್ನಂಜೆ ಗೋವಿಂದಾಚಾರ್ಯರು.

ಕಠೋಪನಿಷತ್:

ಆಶಾಪ್ರತೀಕ್ಷೇ ಸಂಗತಂ ಸೂನೃತಾಂ   ಚೇಷ್ಟಾಪೂರ್ತೇ ಪುತ್ರಪಶೂಂಶ್ಚ ಸರ್ವಾನ್ ।
ಏತದ್ವೃಂಕ್ತೇ ಪುರುಷಸ್ಯಾಲ್ಪಮೇಧಸೋ   ಯಸ್ಯಾನಶ್ನನ್ ವಸತಿ ಬ್ರಾಹ್ಮಣೋ ಗೃಹೇ    ॥೮॥

ಸಾರಾಂಶ:

ಹಸಿದು ಬಂದ ಅತಿಥಿಯನ್ನು ಸತ್ಕರಿಸದೆ ತಿರಸ್ಕರಿಸುವುದರ ಪರಿಣಾಮ ಏನು ಎನ್ನುವುದನ್ನು ಈ ಶ್ಲೋಕದಲ್ಲಿ ಯಮನ ಪತ್ನಿ ವಿವರಿಸುತ್ತಾಳೆ. “ಒಂದು ವೇಳೆ ಅತಿಥಿಯನ್ನು ಬೈದು ಕಳುಹಿಸಿದರೆ ನಿಮ್ಮ ಆಶಾ ಪ್ರತೀಕ್ಷಗಳು ಮಣ್ಣುಪಾಲಾಗುತ್ತವೆ, ಗೆಳೆಯರು ನಿಮ್ಮಿಂದ ದೂರವಾಗುತ್ತಾರೆ, ಯಾರೂ ನಿನ್ನನ್ನು ನೋಡಿ ಒಳ್ಳೆಯ ಮಾತನಾಡುವುದಿಲ್ಲ. ನಿಮ್ಮ ಇಷ್ಟಾ-ಪೂರ್ತಾ-ಸರ್ವಸ್ವವೂ ನಾಶವಾಗುತ್ತದೆ” ಎನ್ನುತ್ತಾಳೆ ಆಕೆ. ಇಲ್ಲಿ ‘ಇಷ್ಟಾ’ ಎಂದರೆ ನಮ್ಮ ಬೆಳವಣಿಗೆಗಾಗಿ ನಾವು ಮಾಡುವ ಕ್ರಿಯೆ ಮತ್ತು ‘ಪೂರ್ತಾ’ ಎಂದರೆ ಸಮಾಜದ ಋಣವನ್ನು ತೀರಿಸುವುದಕ್ಕೊಸ್ಕರ ಮಾಡುವ ಕ್ರಿಯೆ. ಒಟ್ಟು ಆರು ಇಷ್ಟಗಳು ಹಾಗೂ ಆರು ಪೂರ್ತಗಳನ್ನು ಶಾಸ್ತ್ರಕಾರರು ಪಟ್ಟಿ ಮಾಡಿದ್ದಾರೆ.  “ಅಗ್ನಿಹೋತ್ರಂ ತಪಃ ಸತ್ಯಂ ವೇದಾನಾಂಚಾನುಪಾಲನಂ ಆತಿಥ್ಯಂ ವೈಶ್ವಾದೇವಂ ಚ ಇಷ್ಟಂ ಇತಿ ಅಭಿಧೀಯತೆ” – 
(೧) ನಿತ್ಯ ಅಗ್ನಿ ಮುಖದಲ್ಲಿ ಆರಾಧನೆ(ಅಗ್ನಿಹೋತ್ರ), 
(೨) ಉಪವಾಸ, ಬ್ರಹ್ಮಚರ್ಯ, ಇತ್ಯಾದಿ ನೈಷ್ಠಿಕ ಜೀವನ ಬದುಕುವುದು(ತಪಃ), 
(೩) ಪ್ರಾಮಾಣಿಕವಾದ ಬದುಕು(ಸತ್ಯ), 
(೪) ನಿರಂತರ ವೇದಾಧ್ಯಯನ ಹಾಗೂ ವೇದೋಕ್ತ ಕರ್ಮಾನುಷ್ಠಾನ, 
(೫) ಹಸಿದವರಿಗೆ ಅನ್ನ ನೀಡಿ ಸತ್ಕರಿಸುವುದು(ಆತಿಥ್ಯ), 
(೬) ದೇವತೆಗಳ ಆತಿಥ್ಯ –ಇವು ಆರು ಇಷ್ಟಗಳು.  ಹಾಗೆ 
(೧) ಸಮಾಜದ ಉಪಯೋಗಕ್ಕಾಗಿ  ಬಾವಿ ತೊಡಿಸುವುದು, 
(೨) ಇಳಿಬಾವಿಯನ್ನು ಕಟ್ಟುವುದು, 
(೩) ಸ್ನಾನದ ಕೆರೆಯನ್ನು ಕಟ್ಟುವುದು, 
(೪) ಊರಿನ ಕ್ಷೇಮಕ್ಕೋಸ್ಕರ ದೇವಸ್ಥಾನ ಕಟ್ಟುವುದು, 
(೫) ಸಾರ್ವಜನಿಕ ಅನ್ನದಾನ ಮತ್ತು 
(೬) ಗಿಡ ಮರಗಳನ್ನು ಬೆಳೆಸುವುದು- ಇವು ಆರು ಪೂರ್ತಗಳು. 

ಇಲ್ಲಿ ಯಮನ ಪತ್ನಿ ಹೇಳುತ್ತಾಳೆ: “ಒಂದು ವೇಳೆ ಅತಿಥಿಯನ್ನು ತಿರಸ್ಕರಿಸಿದರೆ ಅದರಿಂದ ಇಷ್ಟಾ ಮತ್ತು ಪೂರ್ತಾದ ಎಲ್ಲಾ ಪುಣ್ಯ ಫಲಗಳೂ ನಷ್ಟವಾಗುತ್ತದೆ” ಎಂದು.
by sudhakara
*******

ಭಗವಂತನ ಉಪಾಸನೆ  Posted on December 13, 2018

ಉಪಾಸನೆಯ ಒಂದು ವಿಶೇಷ ಮುಖವನ್ನು ವಿವರಿಸಿದ್ದಾನೆ ಯಮ.

ಭಗವಂತನನ್ನು ಮಾತಿನ ಮೂಲಕ ತಿಳಿಯಲು ಸಾಧ್ಯವಿಲ್ಲ. ಗುರುಗಳ ಉಪದೇಶ ಕೂಡಾ ನೇರವಾಗಿ ಭಗವಂತನನ್ನು ತೋರಿಸಲಾರದು. ಪ್ರವಚನ ಕೇಳಿದಾಗ ಅದರಿಂದ ಭಗವಂತನನ್ನು ಹೇಗೆ ಉಪಾಸನೆ ಮಾಡಬೇಕು ಎನ್ನುವ ಮಾರ್ಗದರ್ಶನವಷ್ಟೇ ಸಿಗುತ್ತದೆ ಹೊರತು, ಅದರಿಂದ ದೇವರು ಕಾಣಿಸಿಕೊಳ್ಳುವುದಿಲ್ಲ. ಸಾಂತವಾದ ಮಾತು ಮತ್ತು ಮನಸ್ಸುಗಳಿಗೆ ಅನಂತವಾದ ಭಗವಂತನನ್ನು ಗ್ರಹಿಸಲು ಸಾಧ್ಯವಿಲ್ಲ. ಹೀಗಿರುವಾಗ ನಮ್ಮ ಕಣ್ಣಿನಿಂದ ಅವನನ್ನು ಕಾಣುವುದು ಸಾಧ್ಯವೇ? ಎಂದು ಪ್ರಶ್ನಿಸುತ್ತಾನೆ ಯಮ. ಇಂತಹ ಭಗವಂತನನ್ನು ಯಾರು ಕಾಣಬಲ್ಲರು ಎಂದರೆ ಯಮ ಹೇಳುತ್ತಾನೆ: “ಅಸ್ತೀತಿ ಬ್ರುವತಃ” ಎಂದು. ಅಂದರೆ: ‘ಭಗವಂತ ಇದ್ದಾನೆ’ ಎಂದು ಹೇಳುವವರು ಕಾಣಬಲ್ಲರು ಎಂದರ್ಥ. ಯಾರು ದೇವರು ಇಲ್ಲಾ ಎನ್ನುತ್ತಾನೋ, ಅವನ ಪಾಲಿಗೆ ದೇವರು ಖಂಡಿತಾ ಗೋಚರನಾಗುವುದಿಲ್ಲ. ದೇವರು ಇದ್ದಾನೆ ಎನ್ನುವ ಭಾವ ಒಳಗಿನಿಂದ ದೃಢವಾಗುವ ತನಕ ಏನೇ ಸಾಧನೆ ಮಾಡಿದರೂ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ಹಾಗಾಗಿ ಮೊದಲು ದೇವರು ಇದ್ದಾನೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಬೇಕು. ಗಟ್ಟಿಯಾದ ನಂತರ ಅವನನ್ನು ತಿಳಿಯಲು ಪ್ರಯತ್ನ ಮಾಡಬೇಕು.
ಭಗವಂತ ‘ಅಸ್ತಿಃ=ಅ+ಸತ್+ಇ’ ಇಲ್ಲಿ ‘ಅ’ ಎನ್ನುವುದು ‘ಅಧಿಕ’ ಎನ್ನುವುದರ ಸಂಕ್ಷಿಪ್ತರೂಪ(Abbreviations). ಅಧಿಕ ಎಂದರೆ ದೊಡ್ಡವನು,ಮೇಲಿನವನು, ಎತ್ತರದಲ್ಲಿರುವವನು, ಇತ್ಯಾದಿ. ಆದ್ದರಿಂದ ಇಲ್ಲಿ ಅಸ್ತಿಃ ಎಂದರೆ: ಈ ಜಗತ್ತಿನಲ್ಲಿ ನಮಗೆ ತಿಳಿದಿರುವ/ತಿಳಿಯದಿರುವ ಯಾವ ಯಾವ ವಸ್ತುಗಳಿವೆ, ಆ ಎಲ್ಲಾ ವಸ್ತುಗಳಿಗಿಂತ ಭಗವಂತ ಅಧಿಕ ಎಂದರ್ಥ. ಯಾರು ಭಗವಂತನನ್ನು ‘ಅಸ್ತಿಃ’ ಎಂದು ತಿಳಿದಿದ್ದಾರೋ, ಅವರು ಭಗವಂತನನ್ನು ಕಾಣಬಲ್ಲರು.
ಆಧಾರ: ಕಠೋಪನಿಷತ್
—–
ದೇವರನ್ನು ಉಪಾಸನೆ ಮಾಡುವಾಗ ಅವನ ಪರಿವಾರ ಸಮೇತ ಉಪಾಸನೆ ಮಾಡಬೇಕು ಎಂದು ಹಿಂದೆ ಹೇಳಿದ್ದನ್ನು ಇನ್ನೂ ಸ್ಪಷ್ಟವಾಗಿ, ತಾರತಮ್ಯ ಪೂರ್ವಕ ಇಲ್ಲಿ ವಿವರಿಸಲಾಗಿದೆ. ಭಗವಂತನ ಪರಿವಾರ ಎಂದರೆ ಅಲ್ಲಿ ಎಲ್ಲರೂ ಸಮಾನ ಸ್ಕಂದರಲ್ಲ. ಈ ವಿಚಾರವನ್ನು ಯಮ ಹಿಂದೆಯೇ ವಿವರಿಸಿದ್ದಾನೆ. ಅದಕ್ಕೆ ಒತ್ತು ಕೊಟ್ಟು ಪುನಃ ಇಲ್ಲಿ ವಿವರಿಸುತ್ತಾನೆ ಯಮ. ದೇವತೆಗಳು ನಮ್ಮ ಮತ್ತು ಭಗವಂತನ ನಡುವಿನ ಮೆಟ್ಟಿಲುಗಳಿದ್ದಂತೆ. ಅವರನ್ನು ತರತಮ ಭಾವದಿಂದ ಅನುಸಂಧಾನ ಮಾಡಿ ಕೊನೇ ಮೆಟ್ಟಿಲಿನಲ್ಲಿ ಭಗವಂತನನ್ನು ಕಾಣಬೇಕು.
ದೇವತಾ ತಾರತಮ್ಯ ಎನ್ನುವುದು ಅಧ್ಯಾತ್ಮದಲ್ಲಿ ಅತ್ಯಂತ ಮುಖ್ಯ ವಿಷಯ.
ನಮ್ಮ ದೇಹಕ್ಕಿಂತ ನಮ್ಮ ಇಂದ್ರಿಯಗಳು ಶ್ರೇಷ್ಠ,
ಇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠ,
ಮನಸ್ಸಿಗಿಂತ ಸತ್ವ(ಬುದ್ಧಿ) ಶ್ರೇಷ್ಠ,
ಸತ್ವಕ್ಕಿಂತ ಆತ್ಮ ಶ್ರೇಷ್ಠ,
ಆತ್ಮನಿಗಿಂತ ಶ್ರೇಷ್ಠ ಅವ್ಯಕ್ತ,
ಅವ್ಯಕ್ತಕ್ಕಿಂತ ಪರಮ ಪುರುಷ ಭಗವಂತ ಶ್ರೇಷ್ಠ.
ಇಲ್ಲಿ ಕೊನೆಯಲ್ಲಿ ಅವ್ಯಕ್ತತತ್ವ(ಶ್ರೀಲಕ್ಷ್ಮಿ) ಮತ್ತು ಪರಮಪುರುಷ ಭಗವಂತನನ್ನು ಹೇಳಿರುವುದರಿಂದ, ಈ ಶ್ಲೋಕದಲ್ಲಿ ಹೇಳಲಾದ ಇಂದ್ರಿಯ, ಮನಸ್ಸು, ಬುದ್ಧಿ, ಇತ್ಯಾದಿ ಮೂಲತಃ ಅದರ ಅಭಿಮಾನಿ ದೇವತೆಗಳನ್ನು ಹೇಳುತ್ತವೆ ಎನ್ನುವುದು ತಿಳಿಯುತ್ತದೆ. ಹಿಂದೆ ಹೇಳಿದಂತೆ, ಇಂದ್ರಾದಿ ಸಮಸ್ತ ದೇವತೆಗಳಿಗಿಂತ ಮನೋಭಿಮಾನಿಗಳಾದ ಗರುಡ-ಶೇಷ-ರುದ್ರರು ಶ್ರೇಷ್ಠ; ಮನೋಭಿಮಾನಿ ದೇವತೆಗಳಿಗಿಂತ ಬುದ್ಧಿಯ ದೇವತೆಯರಾದ ಸರಸ್ವತಿ-ಭಾರತಿಯರು ಶ್ರೇಷ್ಠ; ಬುದ್ಧಿಯ ದೇವತೆಗಳಿಗಿಂತ ಶ್ರೇಷ್ಠ ಮಹತತ್ವ ಮತ್ತು ಜೀವಕಲಾಭಿಮಾನಿಗಳಾದ ಬ್ರಹ್ಮ-ವಾಯು. ಎಲ್ಲರಿಗಿಂತ ಶ್ರೇಷ್ಠ ಅವ್ಯಕ್ತತತ್ವ ಶ್ರೀಲಕ್ಷ್ಮಿ ಮತ್ತು ಪರಮಪುರುಷ ಭಗವಂತ.
ಭಗವಂತ ಎಲ್ಲವನ್ನೂ ವ್ಯಾಪಿಸಿ ನಿಂತಿದ್ದಾನೆ. ಅವನನ್ನು ವ್ಯಾಪಿಸುವ ಇನ್ನೊಂದು ಶಕ್ತಿ ಇಲ್ಲ. ಎಲ್ಲವೂ ಅವನ ಅಧೀನ. ಇಂತಹ ಭಗವಂತನನ್ನು ತರ್ಕ/ಯುಕ್ತಿಯಿಂದ ಅಳೆಯಲು ಸಾಧ್ಯವಿಲ್ಲ. ಹಾಗಾಗಿ ತಾರತಮ್ಯಪೂರ್ವಕವಾಗಿ ದೇವತೆಗಳನ್ನು ತಿಳಿದು, ತಾರತಮ್ಯ ಅಂತಗತನಾಗಿರುವ ಭಗವಂತನನ್ನು ತಿಳಿಯುವ ಪ್ರಯತ್ನ ಮಾಡಬೇಕು. ಭಗವಂತನ ಜ್ಞಾನವಿಲ್ಲದ ನಾವು ಕೇವಲ ಹುಟ್ಟಿ-ಸಾಯುವ ಜಂತುಗಳಿದ್ದಂತೆ. ಎಲ್ಲಾ ತಾರತಮ್ಯವನ್ನು ಮತ್ತು ಅದರ ತುತ್ತತುದಿಯಲ್ಲಿರುವ ಸರ್ವೋತ್ತಮ ತತ್ವ ಭಗವಂತನನ್ನು ತಿಳಿದಾಗ ನಾವು ಸಾವಿಲ್ಲದ ಮೋಕ್ಷ ಮಾರ್ಗವನ್ನು ಕಾಣಬಹುದು.
ನ ಸಂದೃಶೇ ತಿಷ್ಠತಿ ರೂಪಮಸ್ಯ ನ ಚಕ್ಷುಷಾ ಪಶ್ಯತಿ ಕಶ್ಚನೈನಮ್ ।
ಹೃದಾ ಮನೀಷಾ ಮನಸಾಽಭಿಕ್ಲೃ್ಪ್ತೋ ಯ ಏತದ್ವಿದುರಮೃತಾಸ್ತೇ ಭವಂತಿ ॥೯॥
ಭಗವಂತ ನಮ್ಮ ಬಾಹ್ಯ ಇಂದ್ರಿಯಗಳಿಗೆ ಗೋಚರನಾಗುವುದಿಲ್ಲ. ಆತನನ್ನು ಕಾಣಬೇಕೆಂದರೆ ನಾವು ನಮ್ಮ ಒಳಗಣ್ಣಿನಿಂದ ಕಾಣಬೇಕು. ಇಲ್ಲಿ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: ಅವತಾರ ರೂಪಿ ಭಗವಂತನನ್ನು ಆ ಕಾಲದಲ್ಲಿ ಎಲ್ಲರೂ ಕಂಡಿದ್ದರು. ಆದರೆ ಶಾಸ್ತ್ರ ಆತ ಹೊರಗಣ್ಣಿಗೆ ಅಗೋಚರ ಎನ್ನುತ್ತದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂದು. ನಿಜ, ಅವತಾರ ರೂಪಿ ಭಗವಂತನನ್ನು ಎಲ್ಲರೂ ಕಾಣುತ್ತಿದ್ದರು. ಕೇವಲ ಸಾತ್ವಿಕರಷ್ಟೇ ಅಲ್ಲ, ರಾಕ್ಷಸರೂ ಕೂಡ! ಆದರೆ ಅದು ಭಗವಂತನ ಸಾಕ್ಷಾತ್ಕಾರವಲ್ಲ. ಭಗವಂತನ ಸಾಕ್ಷಾತ್ಕಾರ ಕೇವಲ ಜ್ಞಾನದೃಷ್ಟಿಯಲ್ಲಿ ಮಾತ್ರ ಸಾಧ್ಯ. ಜ್ಞಾನದೃಷ್ಟಿ ಇಲ್ಲದೇ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ.
ಭಗವಂತನನ್ನು ನಾವು ನಮ್ಮ ಶುದ್ಧವಾದ ಮನಸ್ಸಿನಿಂದ ನಮ್ಮೊಳಗೇ ಕಾಣಬೇಕು. ಈ ರೀತಿ ಆತನನ್ನು ಕಾಣಬೇಕಾದರೆ ನಮಗೆ ಶುದ್ಧ, ಸಾತ್ವಿಕವಾದ, ನಿರಂತರ ಭಗವಂತನನ್ನು ಪ್ರೀತಿಸುವ, ಭಕ್ತಿಯಿಂದ ತುಂಬಿರುವ ಮನಸ್ಸಿರಬೇಕು. ಇಂತಹ ಶುದ್ಧ ಮನಸ್ಸಿನಿಂದ ಭಗವಂತನ ಬಗೆಗೆ ನಿರಂತರ ಅಂತರಂಗ ಮಥನ ನಡೆಯಬೇಕು. ಆಗ ಭಗವಂತನ ನಿಶ್ಚಿತವಾದ ಅನುಭೂತಿ ಬರುತ್ತದೆ.
ಯದಾ ಪಂಚಾವತಿಷ್ಠಂತೇ ಜ್ಞಾನಾನಿ ಮನಸಾ ಸಹ ।
ಬುದ್ಧಿಶ್ಚ ನ ವಿಚೇಷ್ಟತೇ ತಾಮಾಹುಃ ಪರಮಾಂ ಗತಿಮ್ ॥೧೦॥
ನಮ್ಮ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದಕ್ಕೆ ಯೋಗಸಿದ್ಧಿ ಎನ್ನುತ್ತಾರೆ. ಇದಕ್ಕಾಗಿ ನಾವು ನಮ್ಮ ಬಾಹ್ಯೆಂದ್ರಿಯಗಳನ್ನು ಸ್ಥಬ್ಧ ಮಾಡಬೇಕು. ಐದು ಇಂದ್ರಿಯಗಳನ್ನು ಸ್ಥಗನಗೊಳಿಸಿದ ಮೇಲೆ, ಮನಸ್ಸನ್ನು ಸ್ಥಬ್ಧಗೊಳಿಸಬೇಕು. ಇದನ್ನು ಉನ್ಮನೀಭಾವ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ಕೇವಲ ನಮ್ಮ ಆತ್ಮಸ್ವರೂಪ ಕೆಲಸ ಮಾಡುತ್ತದೆ. ಕೇವಲ ಆತ್ಮಸ್ವರೂಪದಿಂದ ಸ್ವರೂಪಭೂತನಾದ ಆ ಭಗವಂತನನ್ನು ಕಾಣಲು ಸಾಧ್ಯ. ಇದು ಒಬ್ಬ ಮನುಷ್ಯ ಧ್ಯಾನದಲ್ಲಿ ಸಾಧಿಸಬಹುದಾದ ಅತ್ಯಂತ ಉನ್ನತ ಸ್ಥಿತಿ.
.**

ಭಗವಂತನ ಉಪಾಸನೆ🕉

ಕಠೋಪನಿಷತ್ತು 
ಜಾನಾಮ್ಯಹಂ ಶೇವಧಿರಿತ್ಯನಿತ್ಯಂ  ನ ಹ್ಯಧ್ರುವೈಃ ಪ್ರಾಪ್ಯತೇ ಹಿ ಧ್ರುವಂ ತತ್ ।
ತತೋ ಮಯಾ ನಾಚಿಕೇತಶ್ಚಿತೋಽಗ್ನಿಃ   ಅನಿತ್ಯೈರ್ದ್ರವ್ಯೈಃ ಪ್ರಾಪ್ತವಾನಸ್ಮಿ ನಿತ್ಯಮ್ ॥೧೦॥

“ಹಣದ ರಾಶಿ ದೊಡ್ಡ ಸಂಪತ್ತಲ್ಲ. ಅದು ನಮ್ಮನ್ನು ಸಾರ್ವಕಾಲಿಕವಾಗಿ ರಕ್ಷಣೆ ಮಾಡುವುದಿಲ್ಲ. ಇನ್ನೊಬ್ಬರಿಗೆ ಕೊಟ್ಟು ಕರಗದ ನಿತ್ಯವಾದ, ನಿರಂತರವಾದ ಶಾಶ್ವತವಾದ ಸಂಪತ್ತೆಂದರೆ ಭಗವಂತನ ಜ್ಞಾನ. ಅದು ಮಾತ್ರ ತಾರಕ ಅನ್ನುವುದು ನನಗೆ ತಿಳಿದಿದೆ” ಎನ್ನುತ್ತಾನೆ ಯಮ. ನಿತ್ಯನಾದ ಭಗವಂತನನ್ನು ಮರೆತವರು, ಭಗವಂತನಲ್ಲಿ ನಂಬಿಕೆ ಇಲ್ಲದೇ ಇದ್ದವರಿಗೆ ಎಷ್ಟು ಶಾಸ್ತ್ರ ಓದಿದರೂ ಭಗವಂತನ ಅರಿವು ಬರುವುದಿಲ್ಲ. ದೇವರನ್ನು ತಿಳಿದುಕೊಳ್ಳಬೇಕು ಅನ್ನುವ ಕಳಕಳಿ ಇಲ್ಲದ ನಾಸ್ತಿಕರು ಯಾವ ಧರ್ಮಗ್ರಂಥ ಓದಿದರೂ ಭಗವಂತ ಅವರಿಗೆ ತಿಳಿಯುವುದಿಲ್ಲ. ದೇವರೇ ಇಲ್ಲಾ ಎಂದು ಸಿದ್ಧಾಂತ ಮಾಡಿಕೊಂಡು ಯಾವ ಅಧ್ಯಾಯನ ಮಾಡಿದರೂ ಅದನ್ನು ಗ್ರಹಿಸಲು ಸಾಧ್ಯವಿಲ್ಲ. ನಿತ್ಯವಾದ ಸತ್ಯ ಭಗವಂತ. ಅವನನ್ನು ತಿಳಿದುಕೊಳ್ಳಬೇಕು ಎನ್ನುವ ಎಚ್ಚರ ಇಲ್ಲದಿದ್ದರೆ  ಆ ನಿತ್ಯಸತ್ಯದ ಅರಿವು ಮೂಡುವುದಿಲ್ಲ. ಆದ್ದರಿಂದ ಭಗವಂತನಲ್ಲಿ ಶ್ರದ್ಧೆ ಇದ್ದವನಿಗೆ ಮಾತ್ರ ಭಗವಂತ ಅರ್ಥವಾಗುವುದು ಸಾಧ್ಯ. ಹಾಗಾಗಿ ನಮಗೆ ಮೊದಲು ನಂಬಿಕೆ ಬೇಕು, ಅದರಿಂದ  ತಿಳಿದುಕೊಳ್ಳಬೇಕು ಎನ್ನುವ  ಅಭಿಲಾಷೆ, ತಿಳಿದಾಗ ನಮ್ಮ ನಂಬಿಕೆ ಗಟ್ಟಿಯಾಗುತ್ತದೆ. ಇದರಿಂದ ಇನ್ನಷ್ಟು ತಿಳಿಯಲು ಸಾಧ್ಯವಾಗುತ್ತದೆ. “ನಾನೂ ಕೂಡ   ನಿನಗೆ ಉಪದೇಶ ಮಾಡಿದ ಅಗ್ನಿ ವಿದ್ಯೆಯಿಂದ ಭಗವಂತನನ್ನು ಆರಾಧಿಸಿದೆ. ‘ಅ’-ಕಾರ ವಾಚ್ಯನಾದ ಭಗವಂತನನ್ನು ಸದಾ ನನ್ನ ಮನಸ್ಸಿನಲ್ಲಿ ತುಂಬಿಕೊಂಡು, ನನ್ನ ಇಂದ್ರಿಯಗಳನ್ನು ಭಗವಂತನ ಸೇವೆಗೆ ಮೀಸಲಿಟ್ಟೆ. ಇದರಿಂದಾಗಿ ನನ್ನ ಇಂದ್ರಿಯಗಳು ಭಗವಂತನ ಕಡೆಗೆ ಸಾಗಿದವು. ಹೀಗೆ ಅನಿತ್ಯವಾದ ರಥದಲ್ಲಿ ಕುಳಿತು ನಾನು ನಿತ್ಯದತ್ತ ಸಾಗಿ, ಭಗವಂತನ ಅರಿವನ್ನು ಪಡೆದೆ” ಎನ್ನುತ್ತಾನೆ ಯಮ.

ಕಾಮಸ್ಯಾಪ್ತಿಂ ಜಗತಃ ಪ್ರತಿಷ್ಠಾಂ   ಕ್ರತೋರಾನಂತ್ಯಮಭಯಸ್ಯ ಪಾರಮ್ ।
ಸ್ತೋಮಂ ಮಹದುರುಗಾಯಂ ಪ್ರತಿಷ್ಠಾಂ ದೃಷ್ಟ್ವಾ   ಧೃತ್ಯಾ ಧೀರೋ ನಚಿಕೇತೋಽತ್ಯಸ್ರಾಕ್ಷೀಃ ॥೧೧॥

“ಸತ್ಯವನ್ನು ಪಡೆಯಲು ಬೇಕಾಗಿರುವುದು  ‘ಜ್ಞಾನವಲ್ಲದೆ ಇನ್ನೇನೂ ಬೇಡ’ ಎನ್ನುವ ತನ್ಮಯತೆ. ಅದು ನಿನ್ನಲ್ಲಿದೆ. ನಿನಗೆ ಏನು ಬೇಕೋ ಅದನ್ನು ಕೊಡುತ್ತೇನೆ ಎಂದಾಗ, ನಿನ್ನ ಕಾಲ ಬುಡದಲ್ಲಿ  ಎಲ್ಲಾ  ಭೋಗಗಳು ಸಿಗುವಂತಿದ್ದರೂ ಸಹ, ಜಗತ್ತನ್ನು ಧಾರಣೆ ಮಾಡಿದ ಆ ಮೂಲಶಕ್ತಿ ಭಗವಂತನನ್ನು ತಿಳಿದುಕೊಳ್ಳುವುದಕ್ಕೋಸ್ಕರ, ಎಲ್ಲಾ ಬಯಕೆಗಳನ್ನು ತೊರೆದೆ ನೀನು” ಎನ್ನುತ್ತಾನೆ ಯಮ.
ಜೀವನವೆಂದರೆ ಭಯದ ಸರಮಾಲೆ. ಪ್ರತಿಯೊಬ್ಬ ಮಾನುಷ್ಯನೂ ಭಯದಿಂದ ಮುಕ್ತಿ ಪಡೆಯಲು ಬಯಸುತ್ತಾನೆ. ಆದರೆ ಆತ ಜೀವನಪರ್ಯಂತ ಭಯದಲ್ಲೇ ಬದುಕುತ್ತಿರುತ್ತಾನೆ. ಭಗವದ್ ವಿಷಯಕವಾದ ಜ್ಞಾನ ಮಾತ್ರ ನಮಗೆ ಭಯದಿಂದ ಮುಕ್ತಿ ಕೊಡಬಲ್ಲದು. ನಾವು ಎಷ್ಟೇ ವೇದಾಧ್ಯಯನ ಮಾಡಿದರೂ ಭಗವಂತನನ್ನು ಪೂರ್ಣವಾಗಿ ತಿಳಿಯುವುದು ಸಾಧ್ಯವಿಲ್ಲ. ಅಂತಹ ಜಗತ್ತಿಗೆಲ್ಲಾ ಆಸರೆಯಾಗಿರುವ ಭಗವಂತ ನನಗೆ ಆಸರೆಯಾಗಿ ನನ್ನೊಳಗಿದ್ದಾನೆ ಎಂದು ತಿಳಿದಾಗ ಭಯ ದೂರವಾಗಿ ಧೈರ್ಯ ಬರುತ್ತದೆ. ನಾವು ಮಾಡುವ ಪ್ರತಿಯೊಂದು ಕರ್ಮವನ್ನು ಭಗವಂತನ ಅರಿವಿನಿಂದ ಮಾಡಿದಾಗ ಆ ಕರ್ಮ ಅನಂತ ಫಲವನ್ನು ಕೊಡುತ್ತದೆ. “ಈ ಸತ್ಯವನ್ನು ಅರಿತುದರಿಂದ  ನಿನಗೆ ಇಂತಹ ಧೈರ್ಯ ಬಂತು” ಎನ್ನುತ್ತಾನೆ ಯಮ.    

ತಂ ದುರ್ದರ್ಶಂ ಗೂಢಮನುಪ್ರವಿಷ್ಟಂ   ಗುಹಾಹಿತಂ ಗಹ್ವರೇಷ್ಠಂ ಪುರಾಣಮ್ ।
ಅಧ್ಯಾತ್ಮಯೋಗಾಧಿಗಮೇನ ದೇವಂ  ಮತ್ವಾ ಧೀರೋ ಹರ್ಷಶೋಕೌ ಜಹಾತಿ ॥೧೨॥

ಭಗವಂತ ಜ್ಞಾನಾನಂದಗಳ ಮೊತ್ತ. ಅವನನ್ನು ನಮ್ಮ ಹೊರಗಣ್ಣಿನಿಂದ ಕಾಣಲು ಅಸಾಧ್ಯ. ಆತ ಸಮಸ್ತ ಜೀವಗಳ ಹೃದಯಗುಹೆಯಲ್ಲಿ ಗೂಢವಾಗಿ ನೆಲೆಸಿದ್ದಾನೆ. ಇಂತಹ ಭಗವಂತ ಅತ್ಯಂತ ಪುರಾತನ(ಪುರಾಣ). ಅಂದರೆ ಎಲ್ಲಕ್ಕಿಂತ ಪ್ರಾಚೀನ. ಎಲ್ಲವೂ ಇಲ್ಲದಿದ್ದಾಗ ಅವನಿದ್ದ ಹಾಗೂ ಈ ಸೃಷ್ಟಿಯಾದ ಮೇಲೆ ಬ್ರಹ್ಮಾಂಡ-ಪಿಂಡಾಂಡದೊಳಗೆ ಅಂತರ್ಯಾಮಿಯಾಗಿ ಆತ ತುಂಬಿದ. ಇಂತಹ ಅಂತರ್ಯಾಮಿ ಭಗವಂತನನ್ನು ತಿಳಿಯಲು ಇರುವ  ಒಂದೇ ಒಂದು ಉಪಾಯವೆಂದರೆ ಅಧ್ಯಾತ್ಮದ ಅರಿವು. ಒಮ್ಮೆ ಭಗವಂತನ ಅರಿವು ಬಂತೆಂದರೆ ಆಗ ನಾವು ಲೌಕಿಕ ಹರ್ಷ-ಶೋಕವನ್ನು ಮೀರಿ ನಿಲ್ಲಬಹುದು. ಇಂತಹ ಸ್ಥಿತಿಯಲ್ಲಿ ಸ್ವರೂಪಾನಂದದ ಸುಖ ಸಿಗುತ್ತದೆ. “ಅಂತಹ ಸ್ಥಿತಿಯನ್ನು ನೀನು ಪಡೆದಿದ್ದೀಯ” ಎಂದು ನಚಿಕೇತನನ್ನು ಯಮ ಪ್ರಶಂಸಿಸುತ್ತಾನೆ.

*******
[9:15 AM, 6/6/2019] +91 92424 03656: 
[9:16 AM, 6/6/2019] +91 92424 03656: ಕಠೋಪನಿಷತ್:

ತಿಸ್ರೋ ರಾತ್ರೀರ್ಯದವಾತ್ಸೀರ್ಗೃಹೇ ಮೇSನಶ್ನನ್ ಬ್ರಹ್ಮನ್ನತಿಥಿರ್ನಮಸ್ಯಃ ।
ನಮಸ್ತೇSಸ್ತು ಬ್ರಹ್ಮನ್ ಸ್ವಸ್ತಿ ಮೇSಸ್ತು  ತಸ್ಮಾತ್ಪ್ರತಿ ತ್ರೀನ್ವರಾನ್ವೃಣೀಷ್ವ ॥೯॥

ಸಾರಾಂಶ:

ತನಗಾಗಿ ಅನ್ನ-ನೀರನ್ನು ಬಿಟ್ಟು ಕಾಯುತ್ತಿದ್ದ ನಚಿಕೇತನನ್ನು ಕುರಿತು ಯಮ ಹೇಳುತ್ತಾನೆ: “ತಂದೆಯ ಅಣತಿಯಂತೆ ನನ್ನನ್ನು ಕಾಣಲು ಬಂದ ನೀನು ನನಗೆ ಅತಿಥಿ. ಹೀಗಿರುವಾಗ ಅತಿಥಿಯನ್ನು ಮೂರು ದಿನ  ಕಾಯಿಸಿದ ಪಾಪ ನನಗೆ ಬಂತು” ಎಂದು. “ನನ್ನ ಗೃಹದಲ್ಲಿ ನನ್ನ ಅತಿಥಿಯಾಗಿ ಉಪವಾಸ ಕುಳಿತ ನಮಸ್ಕಾರ ಯೋಗ್ಯ  ಜ್ಞಾನಿ ನೀನು, ನಮ್ಮಿಂದ ಅದೆಷ್ಟು ದೊಡ್ಡ ಅಪರಾಧವಾಗಿ ಹೋಗಿದೆ, ನಿನ್ನ ಕಾಲಿಗೆ ಬಿದ್ದು  ಕ್ಷಮೆ ಕೇಳಬೇಕು ನಾವು, ನಿನಗೆ ನನ್ನ ನಮಸ್ಕಾರ” ಎನ್ನುತ್ತಾನೆ ಯಮ. ಎಷ್ಟು ದೊಡ್ಡ ಮಾತು! ಪುಣ್ಯ ಪಾಪಗಳ ನಿರ್ಣಯ ಮಾಡಿ ಪಾಪಿಗಳಿಗೆ ದುಃಖವನ್ನೂ ಪುಣ್ಯಜೀವಿಗಳಿಗೆ ಸುಖವನ್ನೂ ಕೊಡುವ, ಲೋಕದ ಸುಖ-ದುಃಖಗಳ ನಿಯಾಮಕ ದೇವತೆ ಯಮ ಇಲ್ಲಿ  “ನನ್ನ ಅಪರಾಧವನ್ನು ಕ್ಷಮಿಸು, ನಿನಗೆ ನಮಸ್ಕಾರ” ಎನ್ನುತ್ತಿದ್ದಾನೆ. ಇದು ಹಿರಿಯರ ದೊಡ್ಡ ಗುಣ. ಶ್ರದ್ಧಾವಾನ್ ಲಭತೇ ಜ್ಞಾನಂ(೪-೩೯) ಎಂದು ಕೃಷ್ಣ ಗೀತೆಯಲ್ಲಿ ಹೇಳಿರುವಂತೆ-ಜ್ಞಾನಿಗಳಿಗೆ ಅಪಮಾನ ಮಾಡಿದರೆ ಅದು ಭಗವಂತನನ್ನು ಅಪಮಾನ ಮಾಡಿದಂತೆ. ಜ್ಞಾನಿಗಳು ಭಗವಂತನಿಗೆ ಪರಮ ಪ್ರೀಯರು. ಈ ಕಾರಣದಿಂದ ಜ್ಞಾನಿಯನ್ನು ಕಾಯಿಸಿದ್ದಕ್ಕೆ ಇಲ್ಲಿ ಯಮ ಕ್ಷಮೆ ಕೇಳುತ್ತಿದ್ದಾನೆ.   “ನನಗೆ ಅನಿಷ್ಟವಾಗದಂತೆ ಹರಸು; ಅಷ್ಟೇ ಅಲ್ಲ,  ನಿನ್ನನ್ನು ಮೂರು ದಿನ ಕಾಯಿಸಿದ್ದಕ್ಕೆ ನೀನು ಬಯಸಿದ ಮೂರು ವರವನ್ನು ಕೊಡುತ್ತೇನೆ –ಏನು ಬೇಕಾದರೂ ಕೇಳು” ಎನ್ನುತ್ತಾನೆ ಯಮ.  
ಶಾಂತಸಂಕಲ್ಪಃ ಸುಮನಾ ಯಥಾ ಸ್ಯಾದ್ ವೀತಮನ್ಯುರ್ಗೌತಮೋ ಮಾSಭಿ ಮೃತ್ಯೋ ।
ತ್ವತ್ಪ್ರಸೃಷ್ಟಂ ಮಾSಭಿವದೇತ್ಪ್ರತೀತ  ಏತತ್ ತ್ರಯಾಣಾಂ ಪ್ರಥಮಂ ವರಂ ವೃಣೇ ॥೧೦॥

ಸಾರಾಂಶ:

ನಚಿಕೇತ ಯಮನಲ್ಲಿ ಕೇಳುವ ಮೊದಲ ವರವನ್ನು ಈ ಶ್ಲೋಕದಲ್ಲಿ ವರ್ಣಿಸಲಾಗಿದೆ. “ನಾನು ಪುನಃ ನನ್ನ ತಂದೆಗೆ ಮಗನಾಗಿ ಅದೇ ದೇಹದಲ್ಲಿ ಹುಟ್ಟಬೇಕು; ನನ್ನ ತಂದೆ ಸತ್ತು ಬದುಕಿದ ನನ್ನನ್ನು ಗುರುತಿಸಬೇಕು; ನನ್ನನ್ನು ನೋಡಿ ಸಂತೋಷಪಡಬೇಕು; ಒಳ್ಳೆಯ ಮಾತನ್ನಾಡಿ ಸ್ವಾಗತಿಸಬೇಕು; ನನ್ನ ತಂದೆಗೆ ‘ಕೆಟ್ಟದ್ದನ್ನು ಮಾಡುವ’ ಬಯಕೆ ಎಂದೂ ಬರಬಾರದು; ಆತನ ಮನಸ್ಸು ಸದಾ ಒಳ್ಳೆಯ ಕೆಲಸ ಮಾಡಲು ಚಡಪಡಿಸಬೇಕು ಮತ್ತು ಆತ ಎಂದೂ ಕೋಪ ಮಾಡಬಾರದು” ಎಂದು ನಚಿಕೇತ ಯಮನನ್ನು ಕೇಳುತ್ತಾನೆ. ಇದು ನಚಿಕೇತ ಕೇಳುವ ಮೊದಲ ವರ.

ಯಥಾ ಪುರಸ್ತಾದ್ ಭವಿತಾ ಪ್ರತೀತಃ  ಔದ್ದಾಲಕಿರಾರುಣಿರ್ಮತ್ಪ್ರಸೃಷ್।
ಸುಖಂ ರಾತ್ರೀಃ ಶಯಿತಾ ವೀತಮನ್ಯುಃ  ತ್ವಾಂ  ದದೃಶಿವಾನ್ ಮೃತ್ಯುಮುಖಾತ್ ಪ್ರಮುಕ್ತಂ ॥ ೧೧॥

ಸಾರಾಂಶ:

ನಚಿಕೇತ ಕೇಳಿದ ವರವನ್ನು ಯಮ ಪುರಸ್ಕರಿಸುತ್ತಾನೆ ಮತ್ತು ಹೇಳುತ್ತಾನೆ: “ನೀನು ಹಿಂದಿರುಗಿ ಹೋದಾಗ  ನಿನ್ನ ತಂದೆ ನಿನ್ನನ್ನು ಅಷ್ಟೇ ಸ್ಪಷ್ಟವಾಗಿ ಗುರುತಿಸುತ್ತಾನೆ. ನಿನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಾನೆ. ಮರಳಿ ಹೋದ ನಿನ್ನನ್ನು ಕಂಡ ಮೇಲೆ ಆತನ ಕೋಪ ನಾಶವಾಗಿ ಆತ ಶಾಂತನಾಗುತ್ತಾನೆ ಮತ್ತು ಆತ ರಾತ್ರಿ ಸುಖ ನಿದ್ದೆಯನ್ನು ಪಡೆಯುತ್ತಾನೆ” ಎಂದು.

ಇಲ್ಲಿ ಉದ್ದಾಲಕನನ್ನು ಔದ್ದಾಲಕಿ ಆರುಣಿ ಎಂದು ಕರೆದಿದ್ದಾರೆ. ಔದ್ದಾಲಕಿ ಎಂದರೆ ಉದ್ದಾಲಕನ ಮೊಮ್ಮಗ. ಹಿಂದೆ ಅಜ್ಜನ ಹೆಸರನ್ನು ಮೊಮ್ಮೊಗನಿಗೆ ಇಡುವುದು ಸಂಪ್ರದಾಯವಾಗಿತ್ತು. ಇಲ್ಲಿ ಉದ್ದಾಲಕನ ತಾತನ ಹೆಸರೂ ಉದ್ದಾಲಕ ಎನ್ನುವುದನ್ನು ನಾವು ಗಮನಿಸಬೇಕು. ಅರುಣೆಯ ಮಗ ಹಾಗೂ ಉದ್ದಾಲಕನ ಮೊಮ್ಮಗನಾದ ನಚಿಕೇತನ ತಂದೆ- ಔದ್ದಾಲಕಿ ಆರುಣಿ.
********

No comments:

Post a Comment