SEARCH HERE

Thursday, 8 April 2021

ಭಾಗವತ bhagavata



🕉 ಭಾಗವತ 🕉

🕉   ಭಾಗವತ ಹದಿನೆಂಟು ಪುರಾಣಗಳ ಪೈಕಿ ಒಂದು. ಇದು ಪುರಾಣಗಳಿಗಿಂತಲೂ ದೊಡ್ಡ ಗ್ರಂಥ ಮಾತ್ರವಲ್ಲ, ಅತಿ ಮುಖ್ಯವಾದ ಗ್ರಂಥವೂ ಹೌದು. ಈ ಮಹಾಗ್ರಂಥಕ್ಕೆ ಹಲವರು ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಆದಿಶಂಕರಾಚಾರ್ಯ ಪರಂಪರೆಯ ಚಿತ್ಸುಖಾಚಾರ್ಯ, ಹನ್ನೊಂದನೆಯ ಶತಮಾನದ ಶ್ರೀಧರಸ್ವಾಮಿ, ವೈಷ್ಣವ ಪಂಥದ ವಲ್ಲಭಾಚಾರ್ಯ, ಶ್ರೀವೈಷ್ಣವ ಪಂಥದ ವೀರರಾಘವಾಚಾರ್ಯ, ಚೈತನ್ಯ ಪಂಥದ ಜೀವಗೋಸ್ವಾಮಿ, ಮಾಧ್ವ ಸಂಪ್ರದಾಯದ ವಿಜಯಧ್ವಜತೀರ್ಥ, ಉತ್ತರಾಧಿಮಠದ ಸತ್ಯಧರ್ಮತೀರ್ಥ ಮೊದಲಾದವರು ಮುಖ್ಯರು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ವೈಷ್ಣವ, ಚೈತನ್ಯ ಮೊದಲಾದ ಕೆಲವು ಪಂಥಗಳ ಹಲವು ಯತಿಗಳು, ಪಂಡಿತರು, ವಿದ್ವಾಂಸರು ಭಾಗವತವನ್ನು ಅತಿ ಶ್ರೇಷ್ಠ ಪುರಾಣ ಗ್ರಂಥ ಎಂದು ಹೇಳಿ ವ್ಯಾಖ್ಯಾನಿಸಿದ್ದಾರೆ.

🕉  ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಎಂಬ ನಾಲ್ಕು ವೇದಗಳು ಭಾರತೀಯ ತತ್ತ್ವಜ್ಞಾನದ ಮೂಲ ಗ್ರಂಥಗಳು. ಅದನ್ನು ಅರ್ಥವಿಸಲು ಸಾಮಾನ್ಯರಿಗೆ ಕಷ್ಟ. ಹಾಗಾಗಿ ವೇದಾಂತರ್ಗತ ರಹಸ್ಯಗಳನ್ನು ಸಾಮಾನ್ಯ ಜನವರ್ಗಕ್ಕೆ ತಿಳಿಸಲು ಸಾಧ್ಯವಾಗಿಸುವ ಸಲುವಾಗಿ ವೇದೋಕ್ತ ತತ್ತ್ವಗಳನ್ನು ಅನುಸರಿಸಿ, ಅರ್ಥವಿಸಿ, ಸರಳವಾಗಿಸಿ ರಚಿತವಾದ ಗ್ರಂಥಗಳೇ ಪುರಾಣಗಳು. ಪುರಾಣಗಳ ಸಂಖ್ಯೆ ಹದಿನೆಂಟು. ಬ್ರಹ್ಮ, ಪದ್ಮ, ವಿಷ್ಟು, ಶಿವ, ಲಿಂಗ, ಗರುಡ, ನಾರದ, ಭಾಗವತ, ಅಗ್ನಿ, ಸ್ಕಂದ, ಭವಿಷ್ಯ, ಬ್ರಹ್ಮವೈವರ್ತ, ಮಾರ್ಕಂಡೇಯ, ವಾಮನ, ವರಾಹ, ಮತ್ಸ್ಯ, ಕೂರ್ಮ, ಬ್ರಹ್ಮಾಂಡ. ವೇದರಹಸ್ಯ ಸ್ಫುಟತೆಗಾಗಿ ರಚಿತವಾದ ಇವು ಪಂಚಮವೇದವೆಂದು ಪ್ರಸಿದ್ಧವಾಗಿವೆ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ದ್ವಾಪರಯುಗದ ಕೊನೆಯ ಭಾಗದಲ್ಲಿದ್ದ ಮಹರ್ಷಿ ವೇದವ್ಯಾಸರು ವೇದಗಳನ್ನು ನಾಲ್ಕಾಗಿ ವಿಂಗಡಿಸಿದರು ಮತ್ತು ವೇದಾರ್ಥಗಳು ಸುಲಭವಾಗಿ ತಿಳಿಯುವ ಸಲುವಾಗಿ ಪುರಾಣಗಳನ್ನು ರಚಿಸಿದರು ಎಂಬುದು ಹೇಳಿಕೆ.

🕉 ಇತಿಹಾಸ ಗ್ರಂಥಗಳಲ್ಲಿ ಮಹಾಭಾರತ ಶ್ರೇಷ್ಠವಾದುದು; ಹಾಗೆಯೇ ಪುರಾಣಗ್ರಂಥಗಳಲ್ಲಿ ಭಾಗವತಕ್ಕೆ ಮಿಗಿಲಾದುದಿಲ್ಲ. ಇತಿಹಾಸ ಮತ್ತು ಪುರಾಣಗಳಿಗೆ ವ್ಯತ್ಯಾಸವಿದೆ. ಇವೆರಡೂ ಕಥಾರೂಪದಲ್ಲೇ ಇದ್ದರೂ ಇತಿಹಾಸ ಹಿಂದೆ ನಡೆದ ಘಟನೆಗಳನ್ನು ದಾಖಲಿಸುವ ದೃಷ್ಟಿಯಿಂದ ರಚಿತವಾಗಿದೆ. ಪುರಾಣಗಳಲ್ಲಿ ಹಿಂದೆ ನಡೆದ ಘಟನೆಗಳಿದ್ದರೂ ಅಲ್ಲಿ ದಾಖಲೆಗಳಿಗಿಂತ ಆ ಕತೆಗಳ ಅಥವಾ ಘಟನೆಗಳ ಹಿಂದಿರುವ ತತ್ತ್ವ, ನೀತಿದರ್ಶನ, ಭಗವಂತನ ಸಂದೇಶ ಇವುಗಳಿಗೆ ಪ್ರಾಧಾನ್ಯ. ತತ್ತ್ವದರ್ಶನ, ನೀತಿ ಸಂಹಿತೆಗಳನ್ನು ಹೊರತಾಗಿಸಿದರೆ ಪುರಾಣಕಥೆಗಳೆಲ್ಲ ಹಲವಾರು ಅದ್ಛುತಗಳಿಂದ ಕೂಡಿದ ಕಾಲ್ಪನಿಕ ಕಥೆಗಳಂತೆಯೇ ಇವೆ.
ಭಾಗವತದಲ್ಲಿ ಪರಮಾತ್ಮನ ವಿವಿಧ ಅವತಾರಗಳ, ದೇಶವನ್ನಾಳಿದ ಸಾರ್ವಭೌಮರ, ರಾಜ ಮಹಾರಾಜರ, ದೇವತೆ ರಾಕ್ಷಸ, ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ, ಮಾನವ, ವಾನರ, ಪಶುಪಕ್ಷಿಗಳ ಕಥಾನಕಗಳಿದ್ದರೂ ಅಲ್ಲಿ ಭಗವಂತನ ಕಥೆ-ಮುಖ್ಯವಾಗಿ ಶ್ರೀ ಕೃಷ್ಣನಕಥೆ. ಆತನ ಅಲೌಕಿಕ ಮಹಿಮೆಗಳಿಗೇ ಹೆಚ್ಚಿನ ಪ್ರಾಶಸ್ತ್ಯ. ಭಾಗವತದಲ್ಲಿ ಹನ್ನೆರಡು ಸ್ಕಂಧಗಳು, 342 ಅಧ್ಯಾಯಗಳು ಇವೆ. ಅಧ್ಯಾಯಗಳ ಸಂಖ್ಯೆ ಬೇರೆ ಬೇರೆ ಮೂಲಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಇಡೀ ಭಾಗವತದಲ್ಲಿ ಹದಿನೆಂಟು ಸಾವಿರ ಗ್ರಂಥಗಳಿವೆ. ಒಂದು ಗ್ರಂಥ ಎಂದರೆ ಮೂವತ್ತೆರಡು ಅಕ್ಷರಗಳು. ಹಾಗಾಗಿ ಭಾಗವತದಲ್ಲಿ ಐದು ಲಕ್ಷ ಎಪ್ಪತ್ತಾರು ಸಾವಿರ ಅಕ್ಷರಗಳಿವೆ.

🕉 ಮೊದಲನೆಯ ಸ್ಕಂಧದಲ್ಲಿ ವೇದವ್ಯಾಸರಿಗೆ ನಾರದರು ಭಾಗವತವನ್ನು ರಚಿಸುವಂತೆ ಹೇಳಿದ ಸಂದರ್ಭ. ಮಹಾಭಾರತದ ಯುದ್ಧಾನಂತರ ಧರ್ಮರಾಯನ ರಾಜ್ಯಭಾರ, ಪಾಂಡವ ನಿರ್ಗಮನ, ಪರೀಕ್ಷಿತ ಮಹಾರಾಜನ ಕಥೆ, ಆತನಿಗೊದಗಿದ ಮುನಿಶಾಪ, ಶುಕಮುನಿಯ ಆಗಮನ, ಪರೀಕ್ಷಿತನಿಗೆ ಶುಕಮುನಿಯಿಂದ ಭಾಗವತ ಉಪದೇಶ ಇವುಗಳ ವಿವರಣೆ ಇದೆ.

🕉 ಎರಡನೆಯ ಸ್ಕಂಧದಲ್ಲಿ ಪ್ರಪಂಚಸೃಷ್ಟಿಯ ಕ್ರಮ, ಭಗವಂತನ ಅವತಾರಗಳ ಸಂಕ್ಷಿಪ್ತ ವರ್ಣನೆ, ಅವತಾರ ಸಂದರ್ಭದಲ್ಲಿ ನಡೆಯುವ ಕಾರ್ಯಗಳು, ಅವತಾರ ಪ್ರಯೋಜನಗಳು, ಪರಮಾತ್ಮ ಸ್ವರೂಪ ವಿವರಣೆ ಮೊದಲಾದವು ಇದೆ.

🕉 ಮೂರನೆಯ ಸ್ಕಂಧದಲ್ಲಿ ಪರಮಾತ್ಮನಿಂದ ತತ್ತ್ವಗಳ ಸೃಷ್ಟಿ, ಚತುರ್ಮುಖೋತ್ಪತ್ತಿ, ಕಾಲಸ್ವರೂಪ, ಪ್ರಪಂಚ ಸೃಷ್ಟಿ, ಹಿರಣ್ಯಾಕ್ಷ ಹಿರಣ್ಯಕಶಿಪು ರಾಕ್ಷಸರ ವೃತ್ತಾಂತ, ಕಪಿಲಾವತಾರ, ಪುಣ್ಯಕರ್ಮಗಳನ್ನು ಆಚರಿಸಿದವರಿಗೆ ದೊರೆಯುವ ಸದ್ಗತಿ ಮೊದಲಾದವುಗಳ ಸವಿವರ ವರ್ಣನೆ ಇದೆ.

🕉 ನಾಲ್ಕನೆಯ ಸ್ಕಂಧದಲ್ಲಿ ದಕ್ಷನ ಕಥೆ, ಧ್ರುವನ ಕಥೆ, ಪೃಥು ಚಕ್ರವರ್ತಿಯ ಕಥೆಗಳಿವೆ. ಅಲ್ಲದೆ ಪುರಂಜನೋಪಾಖ್ಯಾನ ಎಂಬ ಸ್ವಾರಸ್ಯವಾದ ಕಥೆಯೊಂದಿದೆ. ಶರೀರವನ್ನೇ ಪುರವೆಂದೂ ಅದರೊಳಗಿರುವಾತನನ್ನು ಪುರಣಜನನೆಂದೂ ಹೇಳಿ, ಶರೀರ ಮತ್ತು ಅದರ ಸಮಸ್ತ ಅವಯವಗಳ, ಬುದ್ಧಿ ಮನಸ್ಸುಗಳ ಕ್ರಿಯೆಗಳನ್ನು ಪಟ್ಟಣ, ಅದರ ಜನ, ವ್ಯವಹಾರಗಳಿಗೆ ಹೋಲಿಸಿದ ಕಥೆ ಇದು.

🕉  ಐದನೆಯ ಸ್ಕಂಧದಲ್ಲಿ ವೃಷಭಾವತಾರ ಚರಿತ್ರೆ, ಭರತಚರಿತ್ರೆ, ಜಡಭರತ ವೃತ್ತಾಂತ, ಧ್ರುವ ಮಂಡಲ, ಸೂರ್ಯ ಮಂಡಲ, ಗ್ರಹಗಳಗತಿ, ಭೂಮಿಯ ಕೆಳಗಿನ ಲೋಕಗಳ ಸ್ಥಿತಿ, ಆದಿಶೇಷ ಸ್ವರೂಪ ಮೊದಲಾದವುಗಳ ವಿವರಣೆ ಇದೆ.

🕉 ಆರನೆಯ ಸ್ಕಂಧದಲ್ಲಿ ಅಜಾಮಿಳನ ಕಥೆ, ವಿಶ್ವರೂಪನ ಕಥೆ, ಇಂದ್ರ ವಜ್ರಾಯುಧವನ್ನು ಪಡೆದ ಕಥೆ, ವೃತ್ರಾಸುರ ವಧೆ, ಚೆತ್ರಕೇತುವಿನ ಕಥೆ ಮೊದಲಾದವುಗಳಿವೆ.

🕉 ಏಳನೆಯ ಸ್ಕಂಧದಲ್ಲಿ ನೃಸಿಂಹಾವತಾರದ ಕಥೆ, ಪ್ರಹ್ಲಾದನ ಕಥೆ, ತ್ರಿಪುರ ಸಂಹಾರದ ಕಥೆಗಳಲ್ಲದೆ ಭಕ್ತಿಯೋಗಕ್ಕೆ ಅಂಗಭೂತಗಳಾದ ವರ್ಣಾಶ್ರಮ ಧರ್ಮ ಗೃಹಸ್ಥಧರ್ಮದ ಮಹತ್ತ್ವ, ಮೋಕ್ಷಧರ್ಮ ಮೊದಲಾದವುಗಳ ವಿವರಣೆಯೂ ಇದೆ. 

🕉 ಎಂಟನೆಯ ಸ್ಕಂಧದಲ್ಲಿ ನಾಲ್ಕು ಮನ್ವಂತರ ವೃತ್ತಾಂತ, ಗಜೇಂದ್ರ ಮೋಕ್ಷ ಕಥೆ, ಸಮುದ್ರಮಥನಕಥೆ, ಮೋಹಿನಿಯಿಂದ ದೇವತೆಗಳಿಗೆ ಅಮೃತ ವಿತರಣೆ, ದೇವದಾನವ ಯುದ್ಧ, ಬಲಿಯ ಕಥೆ, ವಾಮಾನವಾತಾರ ಮತ್ತು ಮತ್ಸ್ಯಾವತಾರದ ಕಥೆಗಳಿವೆ.

🕉 ಒಂಬತ್ತನೆಯ ಸ್ಕಂಧದಲ್ಲಿ ಚ್ಯವನೋಪಾಖ್ಯಾನ, ಅಂಬರೀಷೋಪಾಖ್ಯಾನ, ಗಂಗಾವತರಣ ಕಥೆ, ರಾಮಾವತಾರ ಕಥೆ, ಲವಕುಶರ ಕಥೆ, ಪರಶುರಾಮನ ಕಥೆ, ಯಯಾತಿಯ ಕಥೆಗಳೂ ಪಾಂಚಾಲ, ಕುರುವಂಶ ಮತ್ತು ಯದುವಂಶಗಳ ವೃತ್ತಾಂತಗಳೂ ಇವೆ.

🕉 ಹತ್ತನೆಯ ಸ್ಕಂಧ ಪೂರ್ತಿಯಾಗಿ ಶ್ರೀಕೃಷ್ಣ ಕಥೆಗೇ ಮೀಸಲಾಗಿದೆ. ಉಳಿದೆಲ್ಲ ಸ್ಕಂಧಗಳಿಗಿಂತಲೂ ದೀರ್ಘವಾಗಿರುವ ಈ ಸ್ಕಂದದಲ್ಲಿ ಶ್ರೀಕೃಷ್ಣ ಜನನದಿಂದ ತೊಡಗಿ, ಕುರುಕ್ಷೇತ್ರ ಯುದ್ಧಾವಸಾನದವರೆಗಿನ ವೃತ್ತಾಂತಗಳನ್ನು ವಿಸ್ತಾರವಾಗಿ ವರ್ಣಿಸಲಾಗಿದೆ.

🕉 ಹನ್ನೊಂದನೆಯ ಸ್ಕಂಧದಲ್ಲಿ ಮನುಷ್ಯನಿಗೆ ಸಂಬಂಧಿಸಿದಂತೆ ಉತ್ತಮ ಶ್ರೇಯಸ್ಸಿನ ಸಾಧನಗಳು, ಭಗವದ್ಭಕ್ತರ ಲಕ್ಷಣಗಳನ್ನು ನಿರೂಪಿಸಿಲಾಗಿದೆ, ಅಲ್ಲದೆ ಆತ್ಮ ಪರಮಾತ್ಮನ ಸ್ವರೂಪ, ಕರ್ಮಯೋಗ, ಭಕ್ತಿಯೋಗ, ಧ್ಯಾನಯೋಗ, ಜ್ಞಾನಯೋಗಗಳು, ಸಾಂಖ್ಯತತ್ತ್ವ, ಭಗವದಾರಾಧನಾಕ್ರಮ, ಐಲಗೀತೆ, ಸೃಷ್ಟಿಲಯ ಕ್ರಮಗಳ ವಿವರಣೆ ಇದ್ದು ಶ್ರೀಕೃಷ್ಣನ ದೇಹತ್ಯಾಗದೊಂದಿಗೆ ಕೊನೆಗೊಳ್ಳುತ್ತದೆ.

🕉 ಹನ್ನೆರಡನೆಯ ಹಾಗೂ ಕೊನೆಯ ಸ್ಕಂಧದಲ್ಲಿ ಚಂದ್ರವಂಶದ ಭವಿಷ್ಯದ ರಾಜರು, ಕಲಿಯುಗ ಲಕ್ಷಣಗಳು, ಕಲ್ಕ್ಯವತಾರ, ಪರೀಕ್ಷಿತ ಮಹಾರಾಜನನ್ನು ಸರ್ಪರಾಜ ತಕ್ಷಕ ಕಡಿಯುವುದು, ಮಾರ್ಕಂಡೇಯ ಚರಿತ್ರ ಇವುಗಳಲ್ಲದೆ ಚತುರ್ವೇದ ವಿಭಾಗ ಕ್ರಮಗಳೂ ಭಾಗವತ ಪುರಾಣ ಮಾಹಾತ್ಮ್ಯವೂ ವರ್ಣಿತವಾಗಿದೆ.

🕉 ವೇದವ್ಯಾಸ ಮಹರ್ಷಿ ತಾವು ರಚಿಸಿದ ಭಾಗವತಪುರಾಣವನ್ನು ತಮ್ಮ ಪುತ್ರ ಶುಕಮುನಿಗೆ ಮೊದಲು ಉಪದೇಶಿಸುತ್ತಾರೆ. ಶುಕಮುನಿ ಭಾಗವತವನ್ನು ಪರೀಕ್ಷಿತ ಮಹಾರಾಜನಿಗೆ ಉಪದೇಶಿಸಿದ ಸಂದರ್ಭ ಹೀಗಿದೆ: ಮಹಾಭಾರತ ಯುದ್ಧ ಮುಗಿದ ರಾತ್ರಿ ದ್ರೋಣಪುತ್ರನಾದ ಅಶ್ವತ್ಥಾಮ ಪಾಂಡವರ ಶಿಬಿರಕ್ಕೆ ಕಿಚ್ಚಿಡುತ್ತಾನೆ. ಸುಖನಿದ್ರೆಯಲ್ಲಿದ್ದ ಪಾಂಡವಪುತ್ರರೂ ಅಸಂಖ್ಯ ಸೈನಿಕರೂ ಆಹುತಿಯಾಗುತ್ತಾರೆ. ತನ್ನ ಆಪ್ತನಾಗಿದ್ದ ಕೌರವನ ಸಾವಿಗೆ ಕಾರಣರಾದ ಪಾಂಡವರ ಮೇಲಿನ ಮಹಾದ್ವೇಷವೇ ಅಶ್ವತ್ಥಾಮನ ಈ ಅಮಾನುಷ ವರ್ತನೆಗೆ ಕಾರಣ. ವಿಷಯ ಅರಿತ ಪಾಂಡವರು ಅಶ್ವತ್ಥಾಮನ ಬೆನ್ನಟ್ಟುತ್ತಾರೆ. ಅಶ್ವತ್ಥಾಮ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮುಂದಾಲೋಚನೆ ಮಾಡದೆ ಪಾಂಡವಕುಲನಾಶವನ್ನು ಆರೋಪಿಸಿ ಬಹ್ಮಾಸ್ತ್ರ ಎಸೆಯುತ್ತಾನೆ. ಕೃಷ್ಣನ ಸಹಾಯದಿಂದ ಪಾಂಡವರಿಗೊದಗಿದ ಈ ವಿಪತ್ತು ದೂರವಾಗುತ್ತದೆ. ಆದರೆ ಬ್ರಹ್ಮಾಸ್ತ್ರದ ಪರಿಣಾಮ ಅಭಿಮನ್ಯುವಿನ ಪತ್ನಿ ಉತ್ತರೆಯ ಗರ್ಭದ ಮೇಲಾಗುತ್ತದೆ. ಈ ಕಂಟಕವೂ ಕೃಷ್ಣನ ಕೃಪೆಯಿಂದ ದೂರವಾಗುತ್ತದೆ. ಉತ್ತರೆಯ ಗರ್ಭದಲ್ಲಿ ಹುಟ್ಟಿದ ಈ ಶಿಶುವೇ ಮುಂದೆ ಪಾಂಡವರ ಅನಂತರ ರಾಜ್ಯವಾಳಿದ ಪರೀಕ್ಷಿತ.

🕉 ಒಂದು ದಿನ ಬೇಟೆಗೆಂದು ಕಾಡಿಗೆ ತೆರಳಿದ್ದ ಪರೀಕ್ಷಿತ ಮಹಾರಾಜ ನೀರಡಿಕೆಯಿಂದ ಬಳಲಿ ನೀರನ್ನರಸುತ್ತ ಶಮೀಕ ಮುನಿಯ ಆಶ್ರಮ ಸೇರುತ್ತಾನೆ. ಧ್ಯಾನದಲ್ಲಿದ್ದ ಮುನಿಗೆ ಮಹಾರಾಜನ ಆಗಮನದ ಅರಿವಾಗುವುದಿಲ್ಲ. ಮುನಿಯ ಮೌನವನ್ನು ಉಪೇಕ್ಷೆ ಎಂದು ತಿಳಿದ ಪರೀಕ್ಷಿತ ಕೋಪಗೊಳ್ಳುತ್ತಾನೆ. ಅಲ್ಲೇ ಸಮೀಪದಲ್ಲಿ ಸತ್ತುಬಿದ್ದಿದ್ದ ಹಾವೊಂದನ್ನು ತನ್ನ ಬಿಲ್ಲಿನ ತುದಿಯಿಂದ ಮೇಲೆತ್ತಿ ಮುನಿಯ ಕೊರಳಿಗೆ ಹಾರದಂತೆ ತೊಡಿಸಿ ಅಲ್ಲಿಂದ ತೆರಳುತ್ತಾನೆ. ಶಮೀಕ ಪುತ್ರ ಶೃಂಗಿಗೆ ಈ ಘಟನೆ ತಿಳಿಯುತ್ತದೆ. ಆತ ಕೆಂಡವಾಗಿ ಇನ್ನೊಂದು ವಾರದ ಅವಧಿಯಲ್ಲಿ ಪರೀಕ್ಷಿತ ಮಹಾರಾಜ ಸರ್ಪದಂಶನದಿಂದ ಸಾಯಲಿ ಎಂದು ಶಪಿಸುತ್ತಾನೆ. ಶಾಪದ ವಾರ್ತೆ ತಿಳಿದ ಪರೀಕ್ಷಿತ ತನ್ನ ಜೀವನದಲ್ಲಿ ಉಳಿದ ಒಂದು ವಾರದ ಅವಧಿಯನ್ನು ಸಾರ್ಥಕವಾಗಿ ಕಳೆಯಲು ನಿಶ್ಚಯಿಸುತ್ತಾನೆ. ಗಂಗಾತೀರದಲ್ಲಿ ಪ್ರಾಯೋಪವೇಶಕ್ಕೆ ಸಿದ್ಧನಾಗುತ್ತಾನೆ. ಆಗ ಅಲ್ಲಿಗೆ ವೇದವ್ಯಾಸಪುತ್ರನಾದ ಶುಕಮುನಿಯ ಆಗಮನವಾಗುತ್ತದೆ. ಸಾವಿನ ಬಾಯಲ್ಲಿ ನಿಂತಿರುವ ಪರೀಕ್ಷಿತನಿಗೆ ಶುಕಮುನಿ ಜೀವನ ಸಾರ್ಥಕ್ಯದ ಸಲುವಾಗಿ ಭಾಗವತವನ್ನು ಉಪದೇಶಿಸುತ್ತಾರೆ.

 🕉  ಶುಕಮುನಿ ಪರೀಕ್ಷಿತನಿಗೆ ಭಾಗವತವನ್ನು ಉಪದೇಶಿಸುತ್ತಿದ್ದಾಗ ಆ ಸಭೆಯಲ್ಲಿದ್ದು ಅದನ್ನು ಕೇಳಿದ ಸೂತಪುರಾಣಿಕರು ಮುಂದೆ ಅದನ್ನು ಶೌನಕಮುನಿ ನೈಮಿಶಾರಣ್ಯದಲ್ಲಿ ನಡೆಸಿದ ಯಾಗ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಮುನಿಗಳಿಗೆ ಹೇಳುತ್ತಾರೆ.

🕉  ಬದುಕು ಎಂದರೇನು? ನಮಗೂ ಬದುಕಿಗೂ ಸಂಬಂಧವೇನು? ನಾವು ಏಕೆ ಮತ್ತು ಹೇಗೆ ಹುಟ್ಟಿದ್ದೇವೆ? ಏಕೆ ಮತ್ತು ಹೇಗೆ ಸಾಯುತ್ತೇವೆ? ಹುಟ್ಟುಸಾವುಗಳ ಮಧ್ಯದ ಬದುಕಿಗೆ ಯಾರು ನಿಮಿತ್ತ? ಈ ಮಧ್ಯಾಂತರದ ಅವಧಿಯಲ್ಲಿ ಮನುಷ್ಯ ಸ್ವತಂತ್ರನೆ? ಬದುಕು ರೂಪುಗೊಳ್ಳುವುದು ಏತರಿಂದ? ಭಗವಂತ ಯಾರು? ನಮಗೂ ಆತನಿಗೂ ಏನು ಸಂಬಂಧ? ಭಗವದಾರಾಧನೆ ಏಕೆ ಬೇಕು? ಆರಾಧನೆಯ ಕ್ರಮಗಳೇನು? ಫಲವೇನು? ಮೊದಲಾದ ಹಲವು ಪಾರಮಾರ್ಥಿಕ ಜಟಿಲ ವಿಷಯಗಳ ವಿವರಣೆಗೆಲ್ಲ ಸೋದಾಹರಣವಾಗಿ ಭಾಗವತದಲ್ಲಿ ಮೂಡಿ ಬಂದಿವೆ. ಕಥಾಸಂದರ್ಭಗಳಲ್ಲೆಲ್ಲ ತತ್ತ್ವದರ್ಶನ, ನೀತಿಚಿಂತನಗಳು ಹಾಸು ಹೊಕ್ಕಾಗಿ ಜನಜೀವನಕ್ಕೆ ಸುಸಂಬದ್ಧವಾಗಿ ಪ್ರಕಟಗೊಂಡಿವೆ.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
ಕೃಪೆ :'ಕನ್ನಡ ಸಂಪದ'.
***

ಶ್ರೀಮದ್ಭಾಗವತ ದಶಮ ಸ್ಕಂಧಗಳಿಂದ ದ್ವಾದಶ ಮಾತುಗಳನ್ನು ಅನುಷ್ಠಾನ ಮಾಡಬೇಕು 🙏


೧) ಪ್ರಥಮ ಸ್ಕಂಧ
ಪರೀಕ್ಷಿತರಾಜಾ ಮನೆಬಿಟ್ಟು ಗಂಗಾತೀರಕ್ಕೆ ಬಂದ....
ಇದರಿಂದ ತಿಳಯಬೇಕಾದ್ದು
ಅಭಿಮಾನ ಬಿಡಬೇಕು
ಎಂಬ ಮೋಕ್ಷ ಧರ್ಮ ಕಲಿಯತಕ್ಕದ್ದು

೨) ದ್ವಿತೀಯ ಸ್ಕಂಧ
ಯೋಗ್ಯರ‌ ಮೂಲಕ ಭಗವತ್ಕಥಾ ಶ್ರವಣ ಮಾಡಬೇಕು
ಪರೀಕ್ಷಿತ ರಾಜಾ ಶುಕಾಚಾರ್ಯರಿಂದಲೇ ಶ್ರವಣ ಮಾಡಿದ .
ತಾನೇ ನೋಡಿದರೆ (ಓದಿದರೆ) ಬರುತ್ತಿತ್ತಲ್ಲ ಅಂದರೆ ಸಂಪ್ರದಾಯವಿಲ್ಲ

ತೃತೀಯ ಸ್ಕಂಧ
ತತ್ವ ನಿಶ್ಚಯ ಮಾಡಿಕೊ ಅಂತ ಹೇಳಿದರು

ಚತುರ್ಥ ಸ್ಕಂಧ
ತತ್ವ ನಿಶ್ಚಯ ಮಾಡಿಕೊಳ್ಳದಿದ್ದರೆ ಬಾಧಕಾ ಉಂಟು ಅಂತ ಹೇಳಿದರು

ಪಂಚಮ ಸ್ಕಂಧ
ತತ್ವನಿಶ್ಚಯ ಮಾಡಿಕೊಂಡರೆ ಸಾರ್ಥಕವಾಗೋದು ಅಂತ ಹೇಳಿದರು

೬) ಷಷ್ಠ ಸ್ಕಂಧ
ಉದಾಸೀನ ಮಾಡಿದರೆ ಮಹಾ ಅನರ್ಥ ಎಂದು ಹೇಳಿದರು

೭) ಸಪ್ತಮ ಸ್ಕಂಧ 
ಬಹುದಾರಢ್ಯ ಮಾಡಬೇಕೆಂದು ಹೇಳಿದರು

೮) ಅಷ್ಟಮ ಸ್ಕಂಧ
ಪ್ರಯತ್ನ ಬಿಡಬಾರದೆಂದು ಹೇಳಿದರು

೯) ನವಮ ಸ್ಕಂಧ
ವಿರಕ್ತಿ ಮಾಡಬೇಕೆಂದು ಹೇಳಿದರು

೧೦) ದಶಮ ಸ್ಕಂಧ
ಭಕ್ತಿನೇ ಮಾಡಬೇಕೆಂದು ಕರಾರುವಾಕ್ಕಾಗಿ ಹೇಳಿದರು
ಉದಾಹರಣೆಗೆ... ಗೋಪಿಕಾಸ್ತ್ರೀಯರಂತೆ

೧೧) ಏಕಾದಶ ಸ್ಕಂಧ
ಉಪಾಸನೆಯನ್ನೇ  ಮಾಡಬೇಕೆಂದು ಹೇಳಿದರು
ಉದಾಹರಣೆಗೆ...
ಉದ್ಧವನಿಗೆ ಉಪದೇಶಿಸಿದಂತೆ

೧೨) ದ್ವಾದಶ ಸ್ಕಂಧ
ಉಪಾಸನೆಯಿಂದ ಅಪರೋಕ್ಷಜ್ಞಾನ ಪ್ರಾಪ್ತಿಯಾಗುವುದು ಎಂದು ಹೇಳಿದರು
 
ಮಧ್ಯಾರಾಧನಾ ಮಹಾಪರ್ವಕಾಲದ ಮಹಾನುಭಾವರ ಹಿತೋಕ್ತಿಯಂತೆ ದ್ವಾದಶ ಮಾತುಗಳನ್ನು ಯಥಾ ಯೋಗ್ಯತಾನುಸಾರವಾಗಿ
ಪ್ರಯತ್ನಪೂರ್ವಕ ಅನುಷ್ಠಾನಕ್ಕೆ ತಂದುಕೊಳ್ಳುವಂತೆ 
ಶ್ರೀ ದಾಸಾರ್ಯರ ಅಂತರ್ಗತ
ಶ್ರೀ ಹರಿವಾಯುಸಮಸ್ತಗುರುಗಳು ಅನುಗ್ರಹಿಸಲಿ ಕರುಣಿಸಲಿ
***

ನವ (ಒಂಭತ್ತು) ವಿಧ ಭಕ್ತಿಗಳು

🔸ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ
ಆರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮ ನಿವೇದನಂ
(ಭಾಗವತ-7.5.23)

🔹1. ಶ್ರವಣಂ : ದೇವರ ಮಹಿಮೆಗಳನ್ನು ಧ್ಯಾನ ಮತ್ತು ಭಕ್ತಿಯಿಂದ ಕೇಳಿ ಮನನ ಮಾಡಿಕೊಳ್ಳುವುದು.

🔹2. ಕೀರ್ತನಂ : ದೇವರ ಕೀರ್ತನೆ, ಭಜನೆ, ಗುಣಗಾನ, ಮಹಿಮೆಗಳನ್ನು ಕೊಂಡಾಡುವುದು.

🔹3. ಸ್ಮರಣಂ : ಕಲಿಯುಗದ ಮುಖ್ಯಧರ್ಮವಾದ ಶ್ರೀಹರಿಯ ನಾಮಸ್ಮರಣೆಯನ್ನು ನಿರಂತರ ಮಾಡುವುದು.

🔹4. ಪಾದ ಸೇವನಂ : ಶ್ರೀ ಹರಿಯ ಚರಣ ಸೇವೆ ಮಾಡುವುದು ಅಥವಾ ಮಾಡುವ ಎಲ್ಲ ಒಳ್ಳೆಯ ಕಾರ್ಯಗಳು ಶ್ರೀಹರಿಯ ಚರಣ ಸೇವೆ ಎಂದು ತಿಳಿಯುವುದು.

🔹5. ಅರ್ಚನಂ : ಶಾಸ್ತ್ರ ವಿಹಿತ ಫಲ-ಪುಷ್ಪಗಳಿಂದ ದೇವರ ಅರ್ಚನೆ, ಪೂಜೆಯನ್ನು ಮಾಡುವುದು.

🔹6. ವಂದನಂ : ದೇವರಿಗೆ ಪ್ರಣಾಮ, ದಂಡ ಪ್ರಣಾಮಗಳ ಸಮರ್ಪಣೆ ಮಾಡುವುದು.

🔹7. ದಾಸ್ಯಂ : ಮಾಡುವ ಎಲ್ಲ ಕಾರ್ಯಗಳು ತಾನು ದೇವರ ದಾಸನೆಂದು ತಿಳಿದು ಮಾಡುವುದು.

🔹8. ಸಖ್ಯಂ : ದೇವರ ಮೇಲೆ ವಿಶೇಷವಾದ ಪ್ರೀತಿ ಹಾಗೂ ಸಖನೆನ್ನುವ ಭಾವನೆ ಇರಿಸಿಕೊಳ್ಳುವುದು.

🔹9. ಆತ್ಮ ನಿವೇದನಂ : ಮಾಡುವ ಎಲ್ಲ ಕಾರ್ಯಗಳನ್ನು ದೇವರಿಗೆ ಸಮರ್ಪಣೆ ಮಾಡುವುದು.

🙏ಶ್ರೀ ಕೃಷ್ಣಾರ್ಪಣಾಮಸ್ತು🙏


ಭಾಗವತದ_ಮಹಿಮೆ- ಪೂರ್ವ ದಲ್ಲಿ ತುಂಗಾತೀರದಲ್ಲಿ ಒಂದು ಪಟ್ಟಣ.ಅಲ್ಲಿ ವೇದ ಶಾಸ್ತ್ರ ಪಂಡಿತನಾದ  ಆತ್ಮದೇವ ಎನ್ನುವ ಬ್ರಾಹ್ಮಣ ಇದ್ದನು.ಬಹಳಷ್ಟು ಸಂಪತ್ತು ಇದ್ದರು ಸಂತಾನ ಇದ್ದಿಲ್ಲ ಅವನಿಗೆ.

ಒಂದು ದಿನ ಅವರಿಗೆ ಅಡವಿಗೆ ಹೋದಾಗ ಅಲ್ಲಿ ಒಬ್ಬ ಯತಿಗಳ ಭೇಟಿ ಆಗುತ್ತದೆ. ಅವರ ಕಾಲಿಗೆ ಬಿದ್ದು ತನ್ನ ಚಿಂತೆಯನ್ನು ಹೇಳಿ ಗೋಳಾಡುತ್ತಾನೆ.ಅವರಿಗೆ ಅವನ ಹಣೆ ಬರಹ ನೋಡಿ ಹೇಳುತ್ತಾರೆ.
ನಿನಗೆ ಸಂತಾನ ಭಾಗ್ಯ ಏಳು ಜನ್ಮಕಳೆದರು ಸಹ ಇಲ್ಲ ಅಂತ..
ಅವನ ದುಃಖ ನೋಡಲಾಗದೇ ಅವರು ಒಂದು ಹಣ್ಣು ಮಂತ್ರಿಸಿಕೊಟ್ಟು ನಿನ್ನ ಪತ್ನಿಗೆ ಇದನ್ನು ಕೊಡು,ಇದನ್ನು ಸೇವಿಸಲು ನಿಮಗೆ ಒಳ್ಳೆಯ ಪುತ್ರ ಜನನವಾಗುವದು ಅಂತ ಹೇಳುತ್ತಾರೆ.
ಆ ಬ್ರಾಹ್ಮಣ ಅದನ್ನು ತಂದು ತನ್ನ ಪತ್ನಿ ಗೆ ಕೊಟ್ಟು ತಾನು ಬೇರೆ  ಕಾರ್ಯ ನಿಮಿತ್ತ ಬೇರೆ ಊರಿಗೆ ಹೋಗುವ.
ಅವಾಗ ಅವಳು ಅದರ ಮೇಲೆ ನಂಬಿಕೆ ಇಲ್ಲದೇ ಆ ಹಣ್ಣನ್ನು ತನ್ನ ಮನೆಯಲ್ಲಿ ಇದ್ದ ಹಸುವಿಗೆ ಹಾಕುತ್ತಾಳೆ.
ಮತ್ತು ತನ್ನ ತಂಗಿ ಗರ್ಭಿಣಿ ಆಗಿದ್ದು ಕಂಡು ಅವಳ ಮಗುವನ್ನು ತನಗೆ ಕೊಡಲು ಒಪ್ಪಂದ ಮಾಡಿಕೊಂಡು ದೂರದ ಊರಿಗೆ ಹೋಗಿದ್ದ ಗಂಡನಿಗೆ ಗರ್ಭಿಣಿ ಎಂದು ಸುಳ್ಳು ಹೇಳುತ್ತಾಳೆ.
ಕಾಲಕ್ರಮೇಣ ತನ್ನ ತಂಗಿಗೆ ಜನನವಾದ ಗಂಡು ಮಗುವನ್ನು ತನ್ನ ಮಗುವೆಂದು ಹೇಳಿ ಎಲ್ಲಾ ರಿಗು ನಂಬಿಕೆ ಬರುವ ಹಾಗೆ ಮಾಡುತ್ತಾಳೆ.ಮತ್ತು ಆ ಮಗುವಿಗೆ ದುಂದುಕಾರಿ ಅಂತ ಹೆಸರನ್ನು ಇಡುತ್ತಾರೆ.
ಇತ್ತ ಕೊಟ್ಟಿಗೆಯಲ್ಲಿ ಇದ್ದ ಹಸು ಆ ಹಣ್ಣು ತಿಂದು ಒಂದು ಗಂಡು ಮಗುವಿಗೆ ಜನ್ಮ ನೀಡುತ್ತದೆ. ಅದರ ಕಿವಿ ಆಕಳ ಹಾಗೇ ಇದ್ದ ಕಾರಣ ಅವನಿಗೆ ಗೋಕರ್ಣ ಅಂತ ನಾಮಕರಣ ಮಾಡುತ್ತಾರೆ.
ಕಾಲ ಕ್ರಮೇಣ ಇಬ್ಬರು ಬೆಳೆದು,ದೊಡ್ಡವರಾಗಿ ದುಂದುಕಾರಿ ದುಷ್ಟ ಪ್ರವೃತ್ತಿ ಉಳ್ಳವನಾಗಿ ಲೋಕ ಕಂಟಕನಾಗುತ್ತಾನೆ.
ಗೋಕರ್ಣ ಒಳ್ಳೆಯ ಪಂಡಿತ ನಾಗುತ್ತಾನೆ.
ತನ್ನ ಮಗನ ದುಷ್ಟ ಕಾರ್ಯಗಳನ್ನು ನೋಡಿ  ಮನಸ್ಸು ಬೇಸರವಾಗಿ
ಆ ಬ್ರಾಹ್ಮಣ ವಾನಪ್ರಸ್ಥಶ್ರಾಮ ಹೋಗಿ ಭಾಗವತ ದಶಮ ಸ್ಕಂದ ಪಾರಾಯಣ ಮಾಡುತ್ತಾ ದೇಹತ್ಯಾಗ ಮಾಡಿ ಸದ್ಗತಿ ಪಡೆಯುತ್ತಾನೆ.ಇವನ ದುಷ್ಟ ಕೃತ್ಯಗಳನ್ನು ಕಂಡು ಅವನ ತಾಯಿಯು  ಸಹ ಪ್ರಾಣತ್ಯಾಗ ಮಾಡುವಳು.
ನಂತರ ಅವನು  ೫ ಜನ ವೇಶ್ಯೆ ಯರ ಸಹವಾಸ ಮಾಡಿ ಅವರಿಗೆ ನಿತ್ಯ ಪೋಷಣೆ ಮಾಡಲು ಕಳ್ಳತನ ಮಾಡುತ್ತಾ ಇದ್ದನು.
ಇದನ್ನು ಕಂಡ ಅವರು ನಮ್ಮ ಮೇಲೆ ಅಪವಾದ ಬರುತ್ತದೆ ಅಂತ ವಿಚಾರಿಸಿ ಅವನನ್ನು ಕೊಂದು ಅವನ ಬಳಿ ಇದ್ದ ಸಂಪತ್ತು ತೆಗೆದುಕೊಂಡು ಅವನನ್ನು ಒಂದು ಕಡೆ ಹೂತು ಹಾಕುತ್ತಾರೆ.
ಆ ನಂತರ ಅವನಿಗೆ ಪ್ರೇತ ಜನ್ಮ ಬರುತ್ತದೆ.
ಅದರಿಂದ ಬಹಳ ಭಾದಿತನಾಗಿ ತನ್ನ ಮನೆಗೆ ಬಂದು ತನ್ನ ಸಹೋದರ ನಾದ ಗೋಕರ್ಣನ ಮುಂದೆ ಕಾಣಿಸಿಕೊಂಡು ಹಿಂದೆ ಮಾಡಿದ ಪಾಪ ಕೃತ್ಯಗಳಿಂದ ಈ ಜನ್ಮ ಬಂದಿದೆ.ಬಹಳ ಕಷ್ಟ ವಾಗಿದೆ. ನನಗೆ ಇದರಿಂದ ಮುಕ್ತಿ ಕೊಡಿಸು ಎಂದು ಕೇಳಿಕೊಂಡ.
ಅದಕ್ಕೆ ಗೋಕರ್ಣ
ನಿನ್ನ ಶ್ರಾದ್ಧ ಕರ್ಮಗಳು ಎಲ್ಲಾ ಮಾಡಿದ್ದೇನೆ.ಗಯಾ ಶ್ರಾದ್ಧ ಸಹ ಆಗಿದೆ ಆದರು ನಿಮಗೆ ಈ ಜನುಮ ಹೋಗಿಲ್ಲ ಅಂದರೆ ವಿಚಾರ ಮಾಡಿ ಹೇಳುವೆ ಅಂತ ಹೇಳಿ ಬಲ್ಲವರನ್ನು ಕೇಳಲು
ಎಲ್ಲರು ಸೂರ್ಯದೇವನನ್ನು ಕೇಳು ಅಂತ ಹೇಳುತ್ತಾರೆ ,ಆಗ ಸೂರ್ಯದೇವನ ಕುರಿತು ಗೋಕರ್ಣ ಪ್ರಾರ್ಥನೆ ಮಾಡಿ ನನ್ನ ಅಣ್ಣ ನ ಪ್ರೇತ ಜನ್ಮ ನಿವಾರಣೆ ಬಗ್ಗೆ ಹೇಳಬೇಕು ಅಂತ ಕೇಳಿದಾಗ *ಭಾಗವತ ಸಪ್ತಾಹ ಮಾಡಲು ಸೂರ್ಯದೇವನ  ಆಜ್ಞೆ ಆಗುತ್ತದೆ
ಅದರಂತೆ ತನ್ನ ಮನೆಯ ಹತ್ತಿರ ತುಂಗಭದ್ರಾ ತೀರದಲ್ಲಿ ಸಪ್ತಾಹ ಮಾಡುತ್ತಾನೆ. ಎಲ್ಲಾ ಜನರು, ಭಾಗವತ ಕೇಳುವುದಕ್ಕೆ ಬರುತ್ತಾರೆ.
ದುಂದುಕಾರಿ ಪ್ರೇತ ಜನ್ಮ ಇದ್ದ ಕಾರಣ ಕೂಡಲು ಆಗದೇ ಗಾಳಿಯ ರೂಪದಲ್ಲಿ ಬಂದು ಅಲ್ಲಿ ಇದ್ದ ಬಿದಿರುನ ಕೋಲಿನಲ್ಲಿ ಕುಳಿತು ನಿತ್ಯ ಭಾಗವತ ಕೇಳುತ್ತಾ ಇತ್ತು.
ಆ ಬಿದಿರಿಗೆ ಏಳು ಗಂಟುಗಳು ಇದ್ದವು.
ಒಂದೊಂದು ದಿನ ಭಾಗವತ ಕೇಳಿದಾಗ ಅದರಲ್ಲಿ ಇದ್ದ ಪ್ರತಿ ಗಂಟು ಆ ದಿನ ದೊಡ್ಡ ಶಬ್ದ ಮಾಡಿ ಒಡೆಯುತ್ತಾ ಇತ್ತು.
ಏಳನೆಯ ದಿನ ಸಪ್ತಾಹ ಮುಗಿದಾಗ ಏಳನೆಯ ಗಂಟು ಒಡೆದು  ತನ್ನ ಪ್ರೇತ ಜನ್ಮವನ್ನು ಕಳೆದುಕೊಂಡು ಸುಂದರವಾದ ದಿವ್ಯ ರೂಪದಿಂದ, ತುಳಸಿ ಮಾಲೆಯನ್ನು ಧರಿಸಿ, ಪೀತಾಂಬರದಾರಿಯಾಗಿ ಆಭರಣಗಳನ್ನು ಧರಿಸಿದ ದುಂದುಕಾರಿ ಹೊರಬಂದುಎಲ್ಲಾ ರಿಗು ನಮಸ್ಕರಿಸಿ 🙏
ಭಾಗವತ ಶ್ರವಣದಿಂದ ನನ್ನ ಎಲ್ಲಾ ಪಾಪಗಳು, ಪ್ರೇತ ಜನ್ಮ ಹೋಯಿತು ಅಂತ ಹೇಳಿ ಇದರ ಮಹಿಮೆಯನ್ನು ವರ್ಣಿಸುತ್ತಾನೆ
ಮತ್ತು ವಿಷ್ಣು ಲೋಕವನ್ನು ಸೇರುತ್ತಾನೆ.
ಈ ರೀತಿ ಭಾಗವತ ಶ್ರವಣದಿಂದ ಅಜ್ಞಾನ ದ ಗಂಟು ಒಡೆದು ಹೃದಯದ ಸಂಶಯ ಪರಿಹಾರವಾಗಿ ಸಕಲ ಪಾಪಕರ್ಮಗಳು ಛೇದನ ವಾಗಿ ಹೋಗುತ್ತದೆ
ಇದೇ ಭಾಗವತದ ಮಹಿಮೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ|
ದೋಷಗಳು ಇದ್ದರೆ ತಿದ್ದುಪಡಿ ಮಾಡಿ.
🙏ಅ.ವಿಜಯ ವಿಠ್ಠಲ🙏
******



🌷ಶ್ರೀಮದ್ಭಾಗವತ ಚಿಂತನ 🌷🌹

ಶ್ರೀಶುಕಾಚಾರ್ಯರು ಭಗವತ್ಕಥಾಶ್ರವಣದ ಮಹಾಫಲವನ್ನು ನಿರೂಪಿಸುತ್ತಾರೆ

ಪಿಬಂತಿ ಯೇ ಭಗವತ ಆತ್ಮನಃ ಸತಾಂ
ಕಥಾಮೃತಂ ಶ್ರವಣಪುಟೇಷು ಸಂಭೃತಮ್|
ಪುನಂತಿ ತೇ ವಿಷಯವಿದೂಷಿತಾಶಯಂ
ವ್ರಜಂತಿ ತಚ್ಚರಣ ಸರೋರುಹಾಂತಿಕಮ್ ||

ಸತ್ಪುರುಷರ ದೆಶೆಯಿಂದ ಹರಿಕಥಾಮೃತವನ್ನು ಕೇಳೀ ಯಾರು ತಮ್ಮ ಕಿವಿಗಳೆಂಬ ಬಟ್ಟಲಿನಲ್ಲಿ ತುಂಬಿ ಕುಡಿಯುತ್ತಾರೋ ಅವರು ವಿಷಯ ಭೋಗಗಳಿಂದ ಕಲುಷಿತ -ವಾದ ಅಂತಃಕರಣವನ್ನು. ಪರಿಶುದ್ಧಗೋಳಿಸಿಕೊಂಡು ಭಗವತ್ಪಾದಕಮಲವನ್ನು. ಹೊಂದುತ್ತಾರೆ .

||ಭಾಗವತ ಪುರಾಣ 2-2-40 ||




ಶ್ರೀಮದ್ಭಾಗವತ ಚಿಂತನ🌺🌷

ಭಾಗವತ ತೃತೀಯ ಸ್ಕಂಧದಲ್ಲಿ  ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿ ದೇವಿಗೆ ಉಪದೇಶಿಸಿದ ಭಗವದ್ಧ್ಯಾನ -1

ಸಂಚಿಂತಯೇತ ಭಗವತಶ್ಚರಾಣಾರವಿಂದಂ
ವಜ್ರಂಕುಶದ್ವಜಸರೋರುಹಲಾoಛನಾಡ್ಯಮ್ |
ಉತ್ತುoಗರಕ್ತವಿಲಸನ್ನಖಚಕ್ರವಾಲ -
ಜ್ಯೋತ್ಸ್ನಾಭಿರಾಹಾತಮಹದ್ ಹೃದಯಾಂಧಕಾರಂ

ಪಾದದ ತಲದಲ್ಲಿ ವಜ್ರ ,ಅಂಕುಶ, ದ್ವಜ ಹಾಗೂ ಕಮಲ ಇವುಗಳ ರೇಖಾರೂಪದ ಚಿಹ್ನೆಗಳು ,ಉನ್ನತಗಳಾದ ಕೆoಪುಬಣ್ಣದ ,ರಾರಜಿಸುವ ಉಗುರುಗಳ ಸಮೂಹದಿoದ ಹೊರಹೊಮ್ಮುತ್ತಿರುವ ಬೆಳದಿoಗಳ ಬೆಳಕಿನಂತಿರುವ ಬೆಳಕಿನಿಂದ ಧ್ಯಾನಮಾಡುವ ಮಹನೀಯರ ಹೃದಯದೊಳಗಿನ ಕತ್ತಲನ್ನು ಹೊಡೆದೊಡಿಸುತ್ತಿರುವ ಭಗವಂತನ ಪಾದಾರವಿಂದವನ್ನು ಭಕ್ತಿಜ್ಞಾನ ಪೂರ್ವಕ ಚಿಂತಿಸುತ್ತಿರಬೇಕು .
      ಭಾಗವತಪುರಾಣ 3-29-2



🌷🌺ಶ್ರೀಮದ್ಭಾಗವತ ಚಿಂತನ🌺🌷

ಭಾಗವತ ತೃತೀಯ ಸ್ಕಂಧದಲ್ಲಿ  ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿ ದೇವಿಗೆ ಉಪದೇಶಿಸಿದ ಭಗವದ್ಧ್ಯಾನ -2

ಯಚ್ಛೌಚನಿಃಸೃತಸರಿತ್ ಪ್ರವರೋದಕೇನ |
ತೀರ್ಥೇನ ಮೂರ್ಧ್ಯ್ನಧಿಧೃತೇನ ಶಿವಃ ಶಿವೋಽಭೂತ್ ||
ಧ್ಯಾತುರ್ಮನಃಶಮಲಶೈಲನಿಸೃಷ್ಟವಜ್ರಂ |
ಧ್ಯಾಯೇಚ್ಛಿರಂ ಭಗವತಶ್ಚರಣಾರವಿಂದಮ್ || ೨ ||

ಭಗವಂತನ ಪಾದವನ್ನು  ತೊಳೆದ ಜಲವೇ ಗಂಗೆ ಎಂಬ ಶ್ರೇಷ್ಠ ನದಿಯಾಗಿ ಹರೆದಿದ್ದು ಅದರ ಜಲವನ್ನು ತೀರ್ಥ  ಎಂಬ ಭಾವನೆ ಯಿಂದ ತನ್ನ ತಲೆಯಲ್ಲಿ  ಧರಿಸುವುದ ರಿಂದಾಗಿ ರುದ್ರದೇವನು  ಮಂಗಳ ವ್ಯಕ್ತಿತ್ವವನ್ನ ಪಡೆದು ಶಿವ ಎನಿಸಿರುವನು .ಧ್ಯಾನಿಸುವವನ  ಮನಸ್ಸಿನಲ್ಲಿಯ 
ಪಾಪದ ಕೊಳೆಯ ಪರ್ವತದ ಮೇಲೆ ಪ್ರಯೋಗಿಸಿದ
ವಜ್ರಯುಧದಂತೆ  ಪಾಪದ ಕೊಳೆಯನ್ನು  ಪರಿಹರಿಸುವಲ್ಲಿ ಸಮರ್ಥವಾದ ಅವನ ಪಾದರವಿoದವನ್ನು  ಬಹಳಕಾಲ ,ಮತ್ತೆ ಮತ್ತೆ ಚಿಂತಿಸುತ್ತಿರಬೇಕು .

 ವಾಮನನು ತ್ರಿವಿಕ್ರಮನಾಗಿ ಕಾಣಿಸಿಕೊoಡು ತನ್ನ  ಎರಡನೇ ಪಾದದಿಂದ ಸ್ವರ್ಗಾದಿಲೋಕಗಳನ್ನೆಲ್ಲ ಆಕ್ರಮಿಸುವವನು .ಚತುರ್ಮುಖನು ತನ್ನ ಸತ್ಯಲೋಕದವರೆಗೂ ವ್ಯಾಪಿಸಿದ ತ್ರಿವಿಕ್ರಮನ ಪಾದವನ್ನು ತನ್ನ ಕಮoಡಲುವಿನ ನೀರಿನಿoದ ತೊಲೆಯುವನು ಆಜಲವೇ ಸ್ವರ್ಗಂಗೆಯಾಗಿ ಹರಿಯುವುದು ಎಂದು ಭಾಗವತವೇ (8-20-4-5)ಮುಂದೆ ತಿಳಿಸುವುದು.ಆದುದರಿoದ ರುದ್ರದೇವನು ಗಂಗೆಯನ್ನು ತಲೆಯಲ್ಲಿ ಹೊತ್ತಿರುವನೆoದರೆ ತ್ರಿವಿಕ್ರಮರೂಪಿ ಪರಮಾತ್ಮನ ಪಾದ  ಪ್ರಕ್ಷಳನದ ಜಲವನ್ನು  ತಲೆಯಲ್ಲಿ ಹೊತ್ತಿರುವನೆoದೇ ಅರ್ಥ
    *ಭಾಗವತಪುರಾಣ 3-29



 🌷🌺ಶ್ರೀಮದ್ಭಾಗವತ ಚಿಂತನ🌺🌷

ಭಾಗವತ ತೃತೀಯ ಸ್ಕಂಧದಲ್ಲಿ  ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿ ದೇವಿಗೆ ಉಪದೇಶಿಸಿದ ಭಗವದ್ಧ್ಯಾನ -3 

ಊರೂಸುಪರ್ಣಭುಜಯೋ
ರಧಿಶೋಭಮಾನೌ
ಓಜೋನಿಧೀ ಸ್ವತಸಿಕಾಕೂಸುಮಾವಭಾಸೌ
ವ್ಯಾಲಂಬಿಪೀತವರವಾಸಸಿ ವರ್ತಮಾನ -
ಕಾಂಚಿಕಲಾಪರoಭಿನಿತಂಬಮಂಬ

ಗರುಡನ ಹೆಗಲುಗಳಲ್ಲಿ  ಅಧಿಕವಾಗಿ ಮೆರೆಯುತ್ತಿರುವ
ಬಲಕ್ಕೆ  ಆಸರೆಗಳಾಗಿರುವ ಉತ್ತಮ ಆಗಸೆ ಪುಷ್ಪದoತೆ ಬೆಳ್ಳಗಾಗಿರುವ ಭಗವಂತನ ತೊಡೆಗಳನ್ನು ಧ್ಯಾನಿಸಬೇಕು ಅಮ್ಮ! ಜೋತಾಡುವ ಉತ್ತಮವಾದ ಪೀತಾoಬರದಲ್ಲಿ ಡಾಬುಗಳ ಸಮೂಹದಿoದ ಧ್ಯಾನಿಸಬೇಕು
ಭಾಗವತಪುರಾಣ 3-29-23



 🌷🌺ಶ್ರೀಮದ್ಭಾಗವತ ಚಿಂತನ🌺🌷

ಭಾಗವತ ತೃತೀಯ ಸ್ಕಂಧದಲ್ಲಿ  ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿ ದೇವಿಗೆ ಉಪದೇಶಿಸಿದ ಭಗವದ್ಧ್ಯಾನ -4 

ನಾಭಿಹೃದಂಭುವನಕೋಶಗುಹೋದರಸ್ಥಂ
ಯತ್ತ್ರಾತ್ಮಯೋನಿಧಿಷಣಾಖಿಲಲೋಕಪದ್ಮಂ
ವ್ಯೂಢo ಹರಿನ್ಮಣಿಮುಷಃ ಸ್ತನಯೋರಮುಷ್ಯ
ಧ್ಯಾಯೇದ್ವಯಂ ವಿತತಹಾರ ಮಯೂಖಗೌರಮ್

ಭುವನಗಳಿಗೆ ಆಧಾರವಾದ ,ಆದರೂ ಭುವನಗಳನ್ನೆಲ್ಲ ತನ್ನಲ್ಲಿ ಅಡಗಿಸಿಕೊoಡು ತೆಳುವಾಗಿರುವ ಅವನ ಉದರದಲ್ಲಿ ಇರುವ ,ಚತುರ್ಮುಖನ ಮನೆಯಾದ ಅಖಿಲಲೋಕಗಳ ರೂಪದಲ್ಲಿರುವ ಕಮಲವನ್ನು ಹೊತ್ತಿರುವ ,ಭಗವಂತನ ವಿಶಾಲವಾದ ಸರೋವರದಂತಿರುವ ಹೊಕ್ಕುಳನ್ನು ಧ್ಯಾನಿಸಬೇಕು 
ಇಂದ್ರನೀಲಮಣಿಯ ಪ್ರಭೆಯನ್ನು ಕದ್ದಿರುವ ,ಅಂದರೆ 
ನೀಲಕಾಂತಿಯನ್ನು ಹೊದಿರುವ,ಆದರೆ ವಿಸ್ತಾರಗಳಾದ ಹಾರಗಳ ಕಿರಣಗಳಿಂದಾಗಿ ಬೆಳ್ಳಗಾಗಿ ಕಾಣಿಸುವ ಪುಷ್ಟವಾದ ಭಗವಂತನ ಸ್ತನಗಳ ಜೋಡಿಯನ್ನು ಧ್ಯಾನಿಸಬೇಕು 

ವೀವರಣೆಃ - ಗುಹಾ ಎಂಬುದಕ್ಕೆ ಸoಸ್ಕೃತದಲ್ಲಿ ಗುಹೆ ಎಂದು ಅರ್ಥ .ಆದರೆ ಇಲ್ಲಿ ಉದರಕ್ಕೆ ಗುಹಾ ಎಂದು ನೀಡಿರುವ ವಿಶೇಷಣದ ಅರ್ಥ ಅಡಗಿಕೊoಡಿರುವಂತಹುದು ಎಂದು ಗೂಹಯತೀತಿ ಎಂದು ನೀಡಿರುವ ಶ್ರೀವಿಜಯದ್ವಜತೀರ್ಥರು ತಮ್ಮ ಭಾಗವತ ವ್ಯಾಖ್ಯಾನದಲ್ಲಿ ತಿಳಿಸಿದ್ದಾರೆ 
ಜಗದ್ಗುರು ಶ್ರೀಮಧ್ವಾಚಾರ್ಯರು ದ್ವಾದಶಸ್ತೋತ್ರದಲ್ಲಿ ಭಗವಂತನ ಉದರವನ್ನು ವರ್ಣಿಸುತ್ತ ತನುತ್ವೇsಪ್ಯಖಿಲoಬರo
ಎಲ್ಲವನ್ನೂ ಹೊತ್ತುಕೊoಡಿದ್ದರೂ ತೆಳ್ಳಗಾಗಿರುವಂತಹುದು ಎಂದು ತಿಳಿಸಿರುವರು 
ಆ ಆಶಯವನ್ನೇ ಇಲ್ಲಿಯ ಗುಹಾ ವಿಶೇಷಣ
ಸೂಚಿಸುತ್ತದೆ .
         ಭಾಗವತ ಪುರಾಣ 3-39-24



 🌷🌺ಶ್ರೀಮದ್ಭಾಗವತ ಚಿಂತನ🌺🌷

ಭಾಗವತ ತೃತೀಯ ಸ್ಕಂಧದಲ್ಲಿ  ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿ ದೇವಿಗೆ ಉಪದೇಶಿಸಿದ ಭಗವದ್ಧ್ಯಾನ -5 

ವಕ್ಷೋಧಿವಾಸಮೃಷಭಸ್ಯ ಮಹಾವಿಭೂತೇಃ
ಪುಂಸಾಂಮನೋನಯನನಿವೃತಿಮಾದಧಾನಮ್
ಕಂಠ ಚ ಕೌಸ್ತುಭಮಣೇರಧಿಭೂಷಣಾರ್ಥಂ
ಕುರ್ಯಾನ್ಮನಸ್ಯಖಿಲಲೋಕನಮಸ್ಕೃತಸ್ಯ

ಭಗವಂತನ ಎದೆ ಮಹಾಲಕ್ಷ್ಮೀಯ ಆವಾಸಸ್ಥಾನ. ಅದನ್ನು ಸ್ಮೃರಿಸುವ ಪುರುಷರ ಮನಸ್ಸಿಗೂ ,ಕಣ್ಣಿಗೂ ಆನಂದವನ್ನು ಉಂಟುಮಾಡುವಂತಹದ್ದು ಅಂತಹ ಎದೆಯನ್ನು ಧ್ಯಾನಿಸಬೇಕು
ಎಲ್ಲರಿಂದಲೂ ನಮಸ್ಕರಿಸಲ್ಪಡುವ ಭಗವಂತನ ಕಂಠವು,ಅದರಲ್ಲಿ ಧರಿಸಲ್ಪಟ್ಟ ಕೌಸ್ತುಭಮಣಿಗೇ ಅಧಿಕವಾದ ಶೋಭೆಯನ್ನು ತಂದುಕೊಡುವಂತಹದ್ದು .
ಅಂತ ಕಂಠವನ್ನು ಮನಸ್ಸಿನಲ್ಲಿನ ಚಿಂತಿಸಬೇಕು .

ವಿವರಣೆ :- ಜಗದ್ಗುರು ಶ್ರೀಮಧ್ವಾಚಾರ್ಯರು  ತಮ್ಮ ದ್ವಾದಶಸ್ತೋತ್ರದಲ್ಲಿ ಭಗವಂತನ ಕಂಠವನ್ನು ವರ್ಣಿಸುತ್ತ ಸಂತತಂ ಚಿಂತಯೇತ್ ಕಂಠಂಭಾಸ್ವತ್ ಕೌಸ್ತುಭಭಾಸಕಮ್ ಎಂಬುದಾಗಿ ಹೊಳೆಯುವ ಕೌಸ್ತುಭಮಣಿಗೆ ಮತ್ತಷ್ಟು ಮೆರಗನ್ನು ನೀಡುವಂತಹ ಕಂಠವೆಂದು ನೀಡಿರುವ ವಿಶೇಷಣ ಭಾಗವತದ ಕೌಸ್ತುಭಮಣೆರಧಿಭೂಷಣಾರ್ಥಂ ಎಂಬ ಮಾತಿಗೆ ಅನುಗುಣವಾಗಿ ಇರುವುದು .
       ಭಾಗವತ ಪುರಾಣ 3-39-25



 🌷🌺ಶ್ರೀಮದ್ಭಾಗವತ ಚಿಂತನ🌺🌷

ಭಾಗವತ ತೃತೀಯ ಸ್ಕಂಧದಲ್ಲಿ  ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿ ದೇವಿಗೆ ಉಪದೇಶಿಸಿದ ಭಗವದ್ಧ್ಯಾನ -6

ಬಾಹೂoಶ್ಚ  ಮಂದರಗಿರೇಃ ಪರಿವರ್ತನೇನ
ನಿರ್ಣಿಕ್ತಬಾಹುವಲಯಾನಧಿಲೋಕಪಾಲನ್
ಸಂಚಿಂತಯೇತ್ ದಶಶತಾರಮಸಹ್ಯತೇಜಃ
ಶಂಖ ಚ ತತ್ಕರಸರೋರುಹರಾಜಹಂಸಮ್

ಸಮುದ್ರಮಥನದ ಸಂದರ್ಭದಲ್ಲಿ ಮಂದರಪರ್ವತವನ್ನು ಕಡೆದವನು ಅಜಿತನಾಮಕ ಭಗವಂತನೇ ಹಾಗೆ ಕಡೆಯುವಾಗ ಮಂದರಪರ್ವತದ ತಿಕ್ಕಾಟಕ್ಕೆ ಒಳಗಾಗಿ ಅವನ ತೋಳುಬಳೆಗಳು ಅಧಿಕವಾಗಿ ಉಜ್ವಲಿಸುತ್ತಿವೆ ಇಂದ್ರಾದಿಲೋಕಪಾಲಕರಿಗೂ ಆಶ್ರಯವಾದವು ಆ ಬಾಹುಗಳು ಹೀಗೆoದು ಅವುಗಳನ್ನು ಧ್ಯಾನಿಸಬೇಕು .
ಭಗವಂತನ ಕರಗಳು ಕಮಲದಂತೆ ಇರುವುವುಗಳಾದರೆ ಅವುಗಳಲ್ಲಿ ವಿರಾಜಿಸುತ್ತಿರುವ ಶಂಖ ಕಮಲಗಳಲ್ಲಿ ಮೆರೆಯುವ ರಾಜಹಂಸದಂತೆ ಇರುವುದು.ಸಾವಿರದಳಗಳನ್ನೂಳಗೊಂಡ ಆ ಶಂಖದ ತೇಜಸ್ಸು ಶತ್ರುಗಳ ಪಾಲಿಗೆ ಸಹಿಸಲಸಾಧ್ಯವಾದುದು .ಈ ರೀತಿಯಾಗಿ ಧ್ಯಾನಿಸಬೇಕು 

ವಿವರಣೆ :- ಸಾಮಾನ್ಯವಾಗಿ ದೇವಾಸುರರು ಸೇರಿ ಕ್ಷೀರಸಾಗರವನ್ನು ಮಂದರಪರ್ವತದ ಮೂಲಕ ಕಡೆದರೆಂದು ಪ್ರಸಿದ್ಧಿ ಇರುವುದುದಾದರು ಭಾಗವತ(8-7-16)....ನಿರ್ಮಮಂಥಾಜಿತ:ಸ್ವಯಮ್ ಎಂಬುದಾಗಿ ಅಜಿತನಾಮಕ ಭಗವಂತನೇ ಕಡೆದನೆಂದು ನಿರೂಪಿಸಿದೆ
ಭಾಗವತವೇ (3-27-61)ಹಸ್ತೌ ಚ ನಿರಭಿಧ್ಯೇತಾಂಬಲಂ ತಾಭ್ಯಾ ತತಃ ಸ್ವರಾಟ್ ಎಂಬುದಾಗಿ ವಿರಾಡ್ರೂಪಿ ಪರಮಾತ್ಮನ ಬಾಹುಗಳಿಂದ ದೇವೇಂದ್ರನ ಪ್ರಾದೂರ್ಭಾವವನ್ನು ತಿಳಿಸಿದೆ ಅಲ್ಲದೆ  
ಬಾಹೂ ರಾಜನ್ಯಃಕೃತ:..... ಎಂಬ ಪುರುಷಸೂಕ್ತ ಸಾರುವಂತೆ ಲೋಕಪಾಲಕರಾದ ಕ್ಷತ್ರಿಯರು ವಿರಾಡ್ರೂಪಿ ಪರಮಾತ್ಮನ ಬಾಹುವಿನಿಂದ ಹುಟ್ಟಿದವರು ಈ ಅಭಿಪ್ರಾಯದಲ್ಲಿಯೇ ಭಗವಂತನ ಬಾಹುಗಳು ಲೋಕಪಾಲಕರಿಗೆ ಆಶ್ರಯವಾದವುಗಳೆoದು ಸ್ತುತಿಸಲಾಗಿದೆ .
  ಭಾಗವತ ಪುರಾಣ 3-29-26



 🌷🌺ಶ್ರೀಮದ್ಭಾಗವತ ಚಿಂತನ🌺🌷

ಭಾಗವತ ತೃತೀಯ ಸ್ಕಂಧದಲ್ಲಿ  ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿ ದೇವಿಗೆ ಉಪದೇಶಿಸಿದ ಭಗವದ್ಧ್ಯಾನ -7

ಕೌಮೋದಕೀಂಭಗವತೋ  ದಯಿತಾಂ ಸ್ಮೃರೇತ
ದಗ್ದಾಮಾರಾತಿಭಟಶೋಣಿತಕ ರ್ದಮೇನ
ಮಾಲಾಂ ಮಧುವ್ರತವರೋಪಘುಷ್ಟಾಂ
ಚೈತ್ಯಸ್ಯ ತತ್ವಮಮಲಂ ಮಣಿಮಸ್ಯ ಕಂಠೇ

ಕೌಮೋದಕಿ ಗದೆ ಭಗವಂತನಿಗೆ ಅತ್ಯಂತ ಪ್ರಿಯವಾದದ್ದು ಯುದ್ದ ನೆಡೆಸುವ ಶತ್ರುಗಳ ವಿರುದ್ಧ 
ಪ್ರಯೋಗಿಸಲ್ಪಡುವ ಆ ಗದೆ ಅಂತಹ ಶತ್ರುಗಳನ್ನು 
ಚಚ್ಚಿ ಹಾಕುವುದರಿಂದ ಶತ್ರುಗಳ ಕೆಸರಿನಂತೆ ಕಲುಷಿತವಾದ ರಕ್ತದಿಂದ ಲೇಪಿಸಲ್ಪಟ್ಟಿದೆ ಹೀಗೆಂದು ಚಿಂತಿಸಬೇಕು 
ಭಗವಂತನ ಕಂಠದಲ್ಲಿ ಮಾಲೆ ವಿರಜಿಸುತ್ತಿದೆ ಅತ್ಯಂತ ಸುಗಂಧದಿಂದ ಕೂಡಿದ ಆ ಮಾಲೆಯ ಸುಗಂಧಕ್ಕಾಗಿ 
ಭ್ರಮರಗಳು ಮುತ್ತಿಕೊoಡು ಝೇಂಕಾರ ಮಾಡುತ್ತಿದೆ 
ಹಾಗೆಯೇ ಕಂಠದಲ್ಲಿ ಕೌಸ್ತುಭಮಣಿ ಇದೆ ನಿರ್ಮಲವಾದ ಆ ಮಣಿ ಚಿತ್ತಾಭಿಮಾನಿಯಾಗಿದ್ದು ಚೈತ್ಯ ಎನಿಸುವ ಚತುರ್ಮುಖನ ಅಭಿಮಾನ ಕೊಳಪಟ್ಟು ಅವನ ಸ್ವರೂಪ ಎನಿಸಿದೆ .ಈ ರೀತಿ ಯಾಗಿ ಧ್ಯಾನಿಸಬೇಕು
ವಿವರಣೆ -ಗದಾ ತು ವಾಯುರ್ಬಲಸಂವಿದಾತ್ಮ
(ಮ .ಭಾರ .ತಾ .ನಿ 3-7) ಎಂದು ತಿಳಿಸಿರುವಂತೆ ಭಗವಂತನ ಗದೆಗೆ ಅಭಿಮಾನಿ ವಾಯುದೇವ. ವಾಯುದೇವ ಭಗವಂತನಿಗೆ ಅತ್ಯಂತ ಪ್ರಿಯನಾಗಿರುವುದರಿoದಲೇ ಅವನಿಂದ ಅಭಿಮಾನ್ಯವಾದ ಗದೆ ಭಗವಂತನಿಗೆ ಅತ್ಯಂತ ಪ್ರಿಯವಾದದ್ದೆಂದುದಯಿತಾo ಶಬ್ದ ದಿಂದ ಉಲ್ಲೇಖಿಸಲಾಗಿದೆ .

         ಭಾಗವತ ಪುರಾಣ 3-29-27



 🌷🌺ಶ್ರೀಮದ್ಭಾಗವತ ಚಿಂತನ🌺🌷

ಭಾಗವತ ತೃತೀಯ ಸ್ಕಂಧದಲ್ಲಿ  ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿ ದೇವಿಗೆ ಉಪದೇಶಿಸಿದ ಭಗವದ್ಧ್ಯಾನ -8

ಬೃತ್ಯಾನುಕಂಪಿತಧಿಯೇಹ ಗೃಹೀತಮೂರ್ತೇಃ
ಸಂಚಿತಯೇದ್ ಭಗವತೋ ವದನಾರವಿಂದಮ್
ಯದ್ ವಿಸ್ಫುರಮಕರಕುಂಡಲವಲ್ಗಿತೇನ
ವಿದ್ಯೂತಿತಾಮಲಕಕಪೋಲಮುದಾರಹಾಸಮ್

ಭಕ್ತರಮೆಲಿನ ಅನುಕಂಪೆಗೊಳಗಾದ ಬುದ್ಧಿಯಿಂದ 
ಬೇರೆ ಬೇರೆ ರೂಪಗಳನ್ನು ತಾಳು ತ್ತಿರುವ ಭಗವಂತನ ಕಮಲ ದಂತಿರುವ ಮುಖವು ಹೊಳೆಯುವ ಮೊಸಳೆಯಾಕಾರದ ಕುoಡಲಗಳ ಕುಣಿತದಿಂದಾಗಿ ಬೆಳಗುತ್ತಿರುವ ನಿರ್ಮಲವಾದ ಕೆನ್ನೆಗಳನ್ನೂಳಗೊಂಡಿದೆ 
ಉತ್ಕೃಷ್ಟವಾದ ಮಂದಹಾಸದಿಂದಲೂ ಕೂಡಿದೆ-
ಎಂದು ಚಿಂತಿಸಬೇಕು 
ಪೂರ್ಣಾನನ್ಯಸುಖೊದ್ಭಾಸಿಮಂಧಸ್ಮಿತಮಧೀಶಿತುಃ
ಗೋವಿಂದಸ್ಯ ಸದಾ ಚಿಂತ್ಯಂ ನಿತ್ಯಾನಂದಪದಪ್ರದಂ
ಎಂಬುದಾಗಿ ಶ್ರೀಮಧ್ವರು ಭಗವಂತನ ಮಂದಹಾಸವು 
ಪರಿಪೂರ್ಣವಾದ, ಅಸಧೃಶಸುಖದ ಪರಿಣಾಮವಾಗಿ ಅರಳಿಬಂದಿರುವಂತಹದ್ದೂ, ಭಕ್ತರಿಗೆನಿತ್ಯಾನಂದರೂಪವಾದ ಮೋಕ್ಷವನ್ನು ನೀಡುವಂತಹದ್ದೂ ಆಗಿದೆ ಎಂದು ಸ್ತುತಿಸಿರುವರು ಭಾಗವತದ ಉದಾರಹಾಸಮ್ ಎಂಬಉದಾರ ಪದದಿಂದ ಭಗವಂತನ ಹಾಸದಲ್ಲಿ ಈ ಭಗೆಯ ಉತ್ಕೃಷ್ಟತ್ವವನ್ನು ಚಿಂತಿಸಬಹುದಾಗಿದೆ.
ಭಾಗವತ ಪುರಾಣ 3-29-28



 🌷🌺ಶ್ರೀಮದ್ಭಾಗವತ ಚಿಂತನ🌺🌷

ಭಾಗವತ ತೃತೀಯ ಸ್ಕಂಧದಲ್ಲಿ  ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿ ದೇವಿಗೆ ಉಪದೇಶಿಸಿದ ಭಗವದ್ಧ್ಯಾನ -9

ಯಚ್ಛ್ರೀನಿಕೇತಮಲಿಭಿಃ ಪರಿಸೇವ್ಯಮಾನಂ
ಭೂತ್ವಾ ಸ್ವ ಯಾ ಕುಟಿಲಕುಂತಲ ವೃಂದಜುಷ್ಟಮ್
ಮೀನದ್ವಯಶ್ರಿಯಮಧಿಕ್ಷಿಪದಬ್ಜನೇತ್ರಂ
ಧಾಯೇನ್ಮನೋಮಯ ಮತಂದ್ರಿತ ಉಲ್ಲಸದ್
ಭ್ರು

ಭಗವಂತನನ್ನು ಆಶ್ರಯಿಸಿರುವುದರಿಂದ ಶ್ರೀ ಎನಿಸುವ ಲಕ್ಷ್ಮೀದೇವಿಗೆ ಆಸರೆಯಾದದ್ದು ಅವನ ಕಣ್ಣು . ಪರಿಮಳಕ್ಕಾಗಿ ಭೃಂಗಗಳಿoದ ಸೇವಿಸಲ್ಪಡುವಂತಹದ್ದು ಮುಖ್ಯವಾಗಿ ಶ್ರೀ ಎನಿಸುವ ಅವನ ಸೌಂದರ್ಯದಿoದ ಸೇವಿಸಲ್ಪಡುವಂತಹದ್ದು. ಗುಂಗುರು ಕೂದಲೂಗಳ ಸಮೂಹದಿಂದ ಆವರಿಸಲ್ಪಟ್ಟಿದ್ದು ,ದೀರ್ಘತ್ವ ಮುಂತಾದ ಧರ್ಮಗಳ ವಿಷಯದಲ್ಲಿ ಎರಡು ಮೀನುಗಳ ಕಾಂತಿಯನ್ನು ಕಡೆಗಣಿಸುವಂತಹದ್ದು .ಶೋಭಿಸುವ ಹುಬ್ಬುಗಳನ್ನೂಳಗೊಂಡದ್ದು .ಜ್ಞಾನ ಪ್ರಚುರವಾದದ್ದು .
ಭಗವಂತನ ಕಮಲದ ಏಸಳಿನಂತಿರುವ ಈ ಬಗೆಯ
ಕಣ್ಣನ್ನು ಆಲಸ್ಯಕ್ಕೂಳಗಾಗದೆ ಧ್ಯಾನಿಸಬೇಕು
   ಭಾಗವತ ಪುರಾಣ 3-29-29


ಶ್ರೀಮದ್ಭಾಗವತ ಚಿಂತನ

ಭಾಗವತ ತೃತೀಯಸ್ಕಂದದಲ್ಲಿಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿಗೆ ಉಪದೇಶಿಸಿದ ಭಗವಧ್ಯಾನ - 10

ತಸ್ಯಾವಲೋಕಮಧಿಕಂ ಕೃಪಯಾತಿಘೋರ-
ತಾಪತ್ರಯೋಪಶಮನಾಯ ನಿಸೃಷ್ಟಮಕ್ಷ್ಣೋಃ
ಸ್ನಿಗ್ಧಸ್ಥಿತಾನುಗುಣಿತಂ ವಿಪುಲ ಪ್ರಸಾದಂ
ಧ್ಯಾಯೆಚ್ಚಿರಂ ವಿತತಭಾವನಾಯಾ ಗುಹಾಯಾಮಾ

ಅತಿಭಯಂಕರವಾದ ತಾಪತ್ರಯದ ಪರಿಹಾರಕ್ಕಾಗಿ ಕೃಪೆಯಿಂದ ಕಣ್ಣುಗಳಿಂದ ಸೃಷ್ಟಿಸಲ್ಪಡುವ ಸ್ನೇಹ ಪೂರ್ವಕ ಮಂದಾಹಾಸದಿಂದಾಗಿ ಮತ್ತಷ್ಟು ಪ್ರಾಭಾವಕಾರಿಯಾದ,ತುಂಬ ಪ್ರಸನ್ನತೆಯನ್ನು ಸುರಿಸುವ ಅವನ ಅಧಿಕವಾದ ನೋಟವನ್ನು ಅಧಿಕಭಕ್ತಿಯಿಂದ ಹೃದಯದಲ್ಲಿ ಧ್ಯಾನಿಸಬೇಕು.
   ಭಾಗವತ ಪುರಾಣ 3-29-30



ಶ್ರೀಮದ್ಭಾಗವತ ಚಿಂತನ

ಭಾಗವತ ತೃತೀಯಸ್ಕಂದದಲ್ಲಿ ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿಗೆ ಉಪದೇಶಿಸಿದ ಭಗವಧ್ಯಾನ - 11

ಹಾಸಂ ಹರೇರನವತಾಖಿಲ ಲೋಕತಿವ್ರ-
ಶೋಕಾಶ್ರುಸಾಗರವಿಶೋಷಣ ಮತ್ಯುದಾರಮ್
ಸಂಮೋಹನಾಯ ರಚಿತಂ ನಿಜಮಾಯಯsಸ್ಯ
ಭ್ರೂಮಂಡಲಂ ಮನುಸುತೇ ಮಕರದ್ವಜಸ್ಯ

ಭಕ್ತಿಯಿಂದ ಶರಣಗತರಾದ ಎಲ್ಲ ಭಕ್ತರ ತೀವ್ರವಾದ ಶೋಕಸಾಗರವನ್ನು ಒಣಗಿಸಬಲ್ಲ,ಅತಿ ಉತ್ಕೃಷ್ಟವಾದ,
ಹಾಸವನ್ನು ಹಾಗೂ ಕಾಮನಿಗೂ ಮೋಹವನ್ನುಂಟು ಮಾಡುವುದಕ್ಕಾಗಿ ಸ್ವೇಚ್ಛೆಯಿಂದ ರೂಪಿಸಿದ ,ಅವನ ಹುಬ್ಬುಗಳ ಮಂಡಲವನ್ನು ಧ್ಯಾನಿಸಬೇಕು 
      ಭಾಗವತ ಪುರಾಣ 3-29-31



🌷🌹ಶ್ರೀಮದ್ಭಾಗವತ ಚಿಂತನ 🌹🌷
ಭಾಗವತ ತೃತಿಯಸ್ಕಂಧದಲ್ಲಿ ಕಪಿಲನಾಮಕ ಪರಮಾತ್ಮನು ತನ್ನ ತಾಯಿ ದೇವಹೂತಿಗೆ ಉಪದೇಶಿಸಿದ ಭಗವಧ್ಯಾನ -12

ಧ್ಯಾನಾಯನಂ ರಹಸಿ ತದ್ ಬಹುಲಾಧರೋಷ್ಠ -
ಭಾಸಾSರುಣಾಯಿತತನುದ್ವಿಜಕುಂದಪಂಕ್ತಿ |
ಧ್ಯಾಯೇತ್ ಸ್ವಹೃತ್ ಕುಹರಕೇSವಸಿತಸ್ಯ ವಿಷ್ಣೋಃ 
ಭಕ್ತ್ಯಾssರ್ದಯಾರ್ಪೀತಮನಾ ನ ಪೃಥಗ್ ದಿದೃಕ್ಷೇತ್ || 12 ||

ಏಕಾಂತದಲ್ಲಿಟ್ಟುಕೊಂಡು ನಿಬಿಡವಾದ ಕೆಳತುಟಿಯ ಕಾಂತಿಯಿಂದ ಕೆಂಪಗಾದ ಹಾಗೂ ತೆಳುವಾದ ಹಲ್ಲುಗಳ ಸಮೂಹವುಳ್ಳ ಧ್ಯಾನಕ್ಕೆ ಆಸ್ಪದವಾದ ತನ್ನ ಹೃದಯ ಗುಹೆಯಲ್ಲಿ ನಿಶ್ಚಿತವಾಗಿ  ಇರುವ ಶ್ರೀವಿಷ್ಣುವಿನ ರೂಪವನ್ನು ಕರಗಿದ ಭಕ್ತಿಯಿಂದ ಅವನಲ್ಲೇ ನೆಲೆಗೊಳಿಸಿದ ಮನಸ್ಸಿನಿಂದ ಧ್ಯಾನಿಸಬೇಕು .ಬೇರೆ ಯಾವುದೇ ವ್ಯಕ್ತಿಯ ಬಗ್ಗೆ ಗಮನಹರಿಸದೆ ಅವನನ್ನೇ ನೋಡುತ್ತಿರಲು ಬಯಸಬೇಕು .

ವಿವರಣೆ -
ಹೃದಯದೊಳಗೆ ಮಾನಸಿಕ ಸಂಸ್ಕರಮಯ ಭಗವಂತನ ಪ್ರತಿಕದೊಳಗೆ ಅವನ ಜ್ಞಾನಾನಂದಾತ್ಮಕ ರೂಪವನ್ನು ಸವಿಸುತ್ತಿರವಾಗ ತುಂಬಾ ಏಕಾಗ್ರತೆಯನ್ನು ಅಳವಡಿಸಬೇಕೆಂದು  ನ ಪೃಥಗ್ ದಿಧೃಕ್ಷೇತ್ ಧ್ಯಾನಕಾಲದಲ್ಲಿ ಭಗವದ್ರೂಪವನ್ನು ಬಿಟ್ಟು ಬೇರೆ ಯಾವುದನ್ನೇ ಭಗವಂತನಿಗೆ ಸಂಭಂಧಿಸದಿದ್ದನ್ನಾಗಿ ನೋಡಲು ಬಯಸಬಾರದು ಎಂಬ. ಮಾತಿನಲ್ಲಿ ಸಂದೇಶಿಸಲಾಗಿದೆ ಭಾಗವತದ ನಾಪಶ್ಯಮುಭಯಂ ಮುನೇ (1-6-21) ಎಂಬ ಮಾತಿನಲ್ಲಿ ಭಗವಂತನನ್ನು ಬಿಟ್ಟು ಎರಡನೇ ವಸ್ತುವನ್ನು ನೋಡಲಿಲ್ಲ ಎಂದು ಹೇಗೆ ಹೇಳಲಾಗಿದೆಯೋ ಹಾಗೆ.
ಧ್ಯಾನಾಯನಂ ..... ಧ್ಯಾಯೇತ್....  -ಎಂಬ ಮಾತಿನಿಂದ ಸಮಗ್ರಾವಯವ ವಿಶಿಷ್ಟ ಶರೀರವನ್ನು ಧ್ಯಾನಿಸಬೇಕೆಂದು ತಿಳಿಸಲಾಗಿದೆ.

ಹೀಗೆ ಕಪಿಲನಾಮಕ ಪರಮಾತ್ಮನು ತನ್ನ ತಾಯಿಗೆ ನೀಡಿದ ಸಂದೇಶವನ್ನು ನಾವೂ ಅಳವಡಿಸಿಕೊಳ್ಳೋಣ ನಮ್ಮ ಹೃದಯ ಗುಹೆಯಲ್ಲೇ ನೆಲೆಸಿರುವ ಭಗವಂತನ ರೂಪದ ವೈಭವವನ್ನು ಸವಿಯುತ್ತಿರೋಣ ಆ ಮೂಲಕ ಅವನ ಉಪಕಾರ ಸ್ಮರಣೆಯನ್ನು ನಡೆಸಲು ಮರೆಯದಿರೋಣ ಇದರಿಂದಾಗಿ ನಮ್ಮ ಬದುಕು ಭಗವನ್ಮಯವಾಗಿ‌ ಮೆರೆಯುವಂತೆ ಮಾಡೋಣ .

            ||ಶ್ರೀಕೃಷ್ಣಾರ್ಪಣಾಮಸ್ತು ||

( ಈ ಲೇಖನವನ್ನು  pdf  ಮಾಡಲಾಗಿದೆ  )


"  ಮುಂದುವರೆದ ಭಾಗ " ........

" ಶ್ರೀ ಶ್ರೀನಿವಾಸಾ ಕೃಪಾಳೋ ".......

ಭವಿಷ್ಯೋತ್ತರ ಪುರಾಣ ದಾಖಲಿಸುವ ಮತ್ತೊಂದು ಪ್ರಕರಣ ಶ್ರೀ ಶ್ರೀನಿವಾಸನ ಕಾರುಣ್ಯ; ಭಕ್ತ ವಾತ್ಸಲ್ಯಕ್ಕೆ ಸ್ಪಷ್ಟ ನಿದರ್ಶನ.

ತೊಂಡಮಾನ ಎಂಬುವ ರಾಜ ಶ್ರೀ ಶ್ರೀನಿವಾಸನ ಭಕ್ತನಲ್ಲಿ ಒಬ್ಬ. ಆತ ಶ್ರೀ ಶ್ರೀನಿವಾಸನಿಗೆ ಪ್ರತಿನಿತ್ಯ ಬಂಗಾರದ ಸಾವಿರ ತುಲಸಿಗಳಿಂದ ಅರ್ಚನೆ ಮಾಡುತ್ತಿದ್ದ. ಆ ಸಮಯದಲ್ಲಿ ಅವನಿಗೆ ಅಹಂಕಾರ ಪ್ರಕಟವಾಯಿತು. ಶ್ರೀ ಶ್ರೀನಿವಾಸನಿಗೆ ನನ್ನಂಥಾ ಭಕ್ತ ದೊರೆಯಲಾರನು. ನಾನು ಅವನ ಭಕ್ತರಲ್ಲೇ ಶ್ರೇಷ್ಠ ಹೀಗೆಂದು ತಾನೇ ಬಣ್ಣಿಸಿಕೊಂಡನು. ಎಷ್ಟೋ ತಿಂಗಳಾದರೂ ದೇವರು ಒಲಿಯಲಿಲ್ಲ. ಖಿನ್ನನಾಗಿ ಪ್ರಾರ್ಥಿಸಿದ...

ಹೇ ಭಗವಂತಾ! ನಾನು ಏನು ಅಪರಾಧ ಮಾಡಿದ್ದೇನೆ? ನನ್ನನ್ನು ಮನ್ನಿಸು; ಕೃಪೆ ಮಾಡು; ದರ್ಶನ ಭಾಗ್ಯ ಕೊಡು ಎಂದು ಅಂಗಲಾಚಿದ. ಸುಪ್ರಸನ್ನನಾದ ಶ್ರೀ ಶ್ರೀನಿವಾಸ ಕಾಣಿಸಿಕೊಂಡನು.

ಅರೆ ಅದೇನಾಶ್ಚರ್ಯ! ದೇವರ ಪಾದ ಕಮಲಗಳಲ್ಲಿ ಯಾರೋ ಅರ್ಪಿಸಿದ ಮೃಣ್ಮಯ ತುಲಸಿಗಳು ಬಿದ್ದಿದ್ದವು. ತಾನು ಅರ್ಪಿಸಿದ ಬಂಗಾರದ ತುಳಸೀದಳಗಳು ಒಂದೂ ಕಾಣಿಸಲಿಲ್ಲ. ನೊಂದುಕೊಂಡು ದೇವರಲ್ಲಿ ಪ್ರಾರ್ಥಿಸಿದ....

 ಹೇ ದೇವೋತ್ತಮ! ನನ್ನ ಕಾಣಿಕೆಯನ್ನು ನಿರ್ಲಕ್ಷಿಸಿ ಯಾರೋ ಮಣ್ಣಿನಿಂದ ಮಾಡಿದ ತುಳಸಿಯನ್ನು ಸ್ವೀಕರಿಸಿದ್ದೀಯಾ? ಅಂದರೆ ಆ ಭಕ್ತ ನಿಜಕ್ಕೂ ಶ್ರೇಷ್ಠನಿರಬೇಕು. ಹೇಳು ತಂದೆ! ಆ ಮಹಾತ್ಮನನ್ನು ತೋರು. ನನ್ನ ಅಹಂಕಾರ ಅಳಿಯಿತು ಎಂದನು.

ದೇವರು ಅವನನ್ನು ತೋರಿಸಿ ಪರಿಚಯಿಸಿದ. ತಿರುಪತಿಯ ಸಮೀಪ " ಭೀಮ " ನೆಂಬ ಬಡ ಕುಂಬಾರನಿವನು. ಬಿತ್ತಿಕಾಬಿಲ ರೂಪದಲ್ಲಿದ್ದ ದಾರು ರೂಪದ ನನ್ನ ಆಕೃತಿಯನ್ನು ಪ್ರತಿನಿತ್ಯ ಪೂಜಿಸುತ್ತಿದ್ದಾನೆ. ದೈನಂದಿನ ಲೌಕಿಕ ಕೆಲಸ ಮುಗಿದ ನಂತರ ಶುಚಿಯಾಗಿ, ಶಾಂತವಾಗಿ ಭಕ್ತಿಯಿಂದ ಮೃಣ್ಮಯವಾದ ತುಳಸೀದಳದಿಂದ ಪೂಜಿಸುತ್ತಿರುವನು. ಅಲ್ಲಿ ಬಂಗಾರವಿಲ್ಲ! ಭಕ್ತಿಯಿದೆ! ನನಗದು ಸಾಕು. ಆ ಒಳ್ಳೆಯ ಮನಸ್ಸು ನನಗೆ ಹಿಡಿಸಿದೆ.

ಈಕೆ ತುಮಾಲಿನಿ ಎಂದು ಅಲ್ಲಿ ನಿಂತಿದ್ದ ಸ್ತ್ರೀಮಣಿಯನ್ನು ತೋರಿಸಿ ಹೇಳಿದ. ಇವರು ಭೀಮನ ಮಡದಿ. ಪತಿಯಂತೆ ಈಕೆಯೂ ಭಕ್ತಿಭರಿತಳು. ನೋಡಿ ಆನಂದಪಟ್ಟ ತುಮಾಲಿನಿಯು...

ದೇವಾ! ನಾನು ಮಂತ್ರ ತಿಳಿಯಲಿಲ್ಲ. ಕರ್ಮ ಮಾಡಲಿಲ್ಲ. ನಮ್ಮಂಥಹಾ ನೀಚ ಜಾತಿಯವರಿಗೆ ವೇದ ಎಲ್ಲಿಯದು? ತಪಸ್ಸೆಲ್ಲಿಯದು? ನನ್ನ ಭಕ್ತಿಗೆ ಮೆಚ್ಚಿ ಅನುಗ್ರಹ ಮಾಡಿರುವೆ. ನನ್ನ ಬಳಿ ಏನೂ ಇಲ್ಲ. ನಾನು ಮಾಡಿರುವ ಅಡುಗೆಯನ್ನು ಯಥೇಷ್ಟವಾಗಿ ಭೋಜನ ಮಾಡು!

ಈ ರೀತಿ ಭಕ್ತಿಯುಕ್ತವಾಗಿ ಆಕೆಯು ಹೇಳಿದ ಮಾತನ್ನು ಕೇಳಿ ಸುಪ್ರಸನ್ನನಾದ ಶ್ರೀ ಹರಿಯು ಆ ಕುಲಾಲ ದಂಪತಿಗಳಿಂದ ಅರ್ಪಿಸಲಿಟ್ಟ ಅನ್ನವನ್ನು ಭೋಜನವನ್ನು ಮಾಡಿ ಅವರಿಗೆ ಪರಮ ಪದವನ್ನು ಅನುಗ್ರಹಿಸಿದನು. ಪುಷ್ಪವೃಷ್ಟಿಯಾಯಿತು ದೇವಾ ದುಂದುಭಿಗಳು ಮೊಳಗಿದವು. ಸ್ವರ್ಗದಿಂದ ಪುಷ್ಪಕ ವಿಮಾನ ಬಂದಿತು. ಪರಮಾತ್ಮನ ಅಪ್ಪಣೆಯಂತೆ ಭೀಮ ಮತ್ತು ತುಮಾಲಿನಿಯರು ವೈಕುಂಠಕ್ಕೆ ಹೊರಟರು.

ತೊಂಡಮಾನ ಸ್ತ೦ಭಿತನಾದ. ನಿಜ ಭಕುತಿ ಯಾವುದೆಂದು ತಿಳಿದುಕೊಂಡ. ಇಂಥಹಾ ರೋಚಕ ಸಂಗತಿಗಳು, ಶ್ರೀ ಶ್ರೀನಿವಾಸನ ಕಾರುಣ್ಯ ಗುಣಗಳು ಅಷ್ಟಾದಶ ಪುರಾಣಗಳ ತುಂಬೆಲ್ಲಾ ಹರಡಿಕೊಂಡಿವೆ.

ರಾಗ : ಯಮುನಾಕಲ್ಯಾಣಿ       ತಾಳ : ಅಟ್ಟ

ಪನ್ನಗಾದ್ರಿ ಪತಿ ನಮಗೆ ನೀನೆ ಗತಿ ।
ಎಂಬುವ ಮತಿಯರಿತು ಈ ಸ್ಥಿತಿ ।। ಪಲ್ಲವಿ ।।

ವೈಕುಂಠ ವಾಸ ವರ ಮಂದಹಾಸ ।
ಭಕ್ತರುಲ್ಲಾಸ ಲಕ್ಷ್ಮೀವಿಲಾಸ ।। ಚರಣ ।।

ಮಾನವ ವೇಷ ಮಂಜುಳ ಭಾಷ ।
ವಿನುತ ವಿಶೇಷ ಕೌಸ್ತುಭ ಭೂಷ ।। ಚರಣ ।।

ಶಂಕಿಸುತಿರಲು ಸಾಕು ಬಾಲ ।
ಸಂಖ್ಯೆಯು ಬಲ್ಲ ಪುರಂದರವಿಠಲ ।। ಚರಣ ।।

ಲೇಖಕರು : ಕೀರ್ತಿಶೇಷ ಶ್ರೀ ರಾಜಾ ಎಸ್ ರಾಜಗೋಪಾಲಾಚಾರ್ಯರು

ಸಂಗ್ರಹ : ಆಚಾರ್ಯ ನಾಗರಾಜು ಹಾವೇರಿ., ಗುರು ವಿಜಯ ಪ್ರತಿಷ್ಠಾನ
ಮುಂದುವರೆಯುವುದು....
******

ಶ್ರೀಮದ್ಭಾಗವತ ಚಿಂತನ 🌷🌹
🌺ಸಂಚಿಕೆ -1🌺
ಶ್ರೀಶುಕಾಚಾರ್ಯರು ಭಗವತ್ಕಥಾಶ್ರವಣದ ಮಹಾಫಲವನ್ನು ನಿರೂಪಿಸುತ್ತಾರೆ
ಪಿಬಂತಿ ಯೇ ಭಗವತ ಆತ್ಮನಃ ಸತಾಂ
ಕಥಾಮೃತಂ ಶ್ರವಣಪುಟೇಷು ಸಂಭೃತಮ್|
ಪುನಂತಿ ತೇ ವಿಷಯವಿದೂಷಿತಾಶಯಂ
ವ್ರಜಂತಿ ತಚ್ಚರಣ ಸರೋರುಹಾಂತಿಕಮ್ ||
ಸತ್ಪುರುಷರ ದೆಶೆಯಿಂದ ಹರಿಕಥಾಮೃತವನ್ನು ಕೇಳೀ ಯಾರು ತಮ್ಮ ಕಿವಿಗಳೆಂಬ ಬಟ್ಟಲಿನಲ್ಲಿ ತುಂಬಿ ಕುಡಿಯುತ್ತಾರೋ ಅವರು ವಿಷಯ ಭೋಗಗಳಿಂದ ಕಲುಷಿತ -ವಾದ ಅಂತಃಕರಣವನ್ನು. ಪರಿಶುದ್ಧಗೋಳಿಸಿಕೊಂಡು ಭಗವತ್ಪಾದಕಮಲವನ್ನು. ಹೊಂದುತ್ತಾರೆ .
||ಭಾಗವತ ಪುರಾಣ 2-2-40 ||
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -2🌺
🌷ಶ್ರೀಕೃಷ್ಣಪಾದಸ್ಮರಣದ ಫಲ 🌷
ಸಕೃನ್ಮನಃ ಕೃಷ್ಣಪದಾರವಿಂದಯೋ-
ನಿರ್ವೇಶಿತಂ ತದ್ಗುಣರಾಗಿ ಯೈರಿಹ |
ನ ತೇ ಯಮಂ ಪಾಶಭೃತಶ್ಚ ತದ್ಭಟಾನ್
ಸ್ವಪ್ನೇSಪಿ ಪಶ್ಯಂತಿ ಹಿ ಚೀರ್ಣನಿಷ್ಕೃತಾಃ ||
ಶ್ರೀಕೃಷ್ಣನ ಕಲ್ಯಾಣಗುಣಗಳಲ್ಲಿ ಲುಬ್ಧರಾಗಿ ಯಾರು ಒಮ್ಮೆಯಾದರೂ ಆತನ ಪಾದರವಿಂದಗಳಲ್ಲಿ ಮನಸ್ಸಿಟ್ಟು ಧ್ಯಾನಿಸುವರೋ ಅವರು ಪ್ರಾಯಶ್ಚಿತ್ತವನ್ನು ಆಚರಿಸಿದವರಂತೆ ಸರ್ವಪಾಪ ವಿಮುಕ್ತರಾಗಿ ಯಮನನ್ನೂ ಪಾಶಧಾರಿಗಳಾದ ಯಮಭಟರನ್ನೂ ಸ್ವಪ್ನದಲ್ಲಿ ಸಹ ಕಾಣುವುದಿಲ್ಲ .
|| ಭಾಗವತ ಪುರಾಣ 6-1-11 ||
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -4🌺
ಸರ್ವಸ್ವವೂ ವಾಸುದೇವನಿಗಾಗಿ
ವಾಸುದೇವಪರಾ ವೇದ ವಾಸುದೇವಪರಾ ಮಖಾಃ
ವಾಸುದೇವಪರಾ ಯೋಗ ವಾಸುದೇವ ಪರಾಃ ಕ್ರಿಯಾಃ ||
ವಾಸುದೇವಪರಂ ಜ್ಞಾನಂ ವಾಸುದೇವಪರಂ ತಪಃ
ವಾಸುದೇವಪರೋ ಧರ್ಮೋ ವಾಸುದೇವಪರಾ ಗತಿಃ ||
ವೇದಗಳೆಲ್ಲವೂ ಮುಖ್ಯವಾಗಿ ವಾಸುದೇವನ ಗುಣಗಳನ್ನೆ ಪ್ರಶಂಸಿಸುತ್ತಿದೆ ಯಾಗಗಳನ್ನು ಮಾಡಬೇಕೆನ್ನುವ ವಿಧಿಗಳು ವಾಸುದೇವನ ಒಲುಮೆಗಾಗಿಯೇ ಪ್ರಾಣಯಾಮಾದಿಯೋಗಗಳು ವಾಸುದೇವನ ಪ್ರೀತಿಗಾಗಿ ಸಂಧ್ಯೋಪಾಸನಾದಿನಿತ್ಯಕ್ರಿಯೆಗಳು ಅವನ ಆರಾಧನೆಗಾಗಿ ತಾರತಮ್ಯ ಸಹಿತವಾದ ಪಂಚಭೇದವೇ ಮೊದಲಾದ ಪ್ರಮೇಯ ಜ್ಞಾನಗಳು ಹರಿಸರ್ವೋತ್ತಮತ್ವದ ಸಿದ್ಧಿಗಾಗಿ ಉಪವಾಸಾದಿವ್ರತಗಳ ತಪ್ಪಸ್ಸು ಹರಿಸಮರ್ಪಣೆಗಾಗಿ ಲೋಕಸೇವೆ ಮೊದಲಾದ ಧರ್ಮಾಚರಣೆಯ ಹರಿಯ ಅನುಗ್ರಹಕ್ಕಾಗಿ ವಾಸುದೆವನೇ ಎಲ್ಲರಿಗೂ ಆಶ್ರಯದಾತನಾಗಿದ್ದಾನೆ .
ಭಾಗವತಪುರಾಣ 1-2-29 ,30
🌷🌺ಶ್ರೀಮದ್ಭಾಗವತ ಚಿಂತನ - 🌺🌷
🌷ಸಂಚಿಕೆ -3🌷
ವೃಕ್ಷಜನ್ಮದಿಂದ ಮುಕ್ತರಾದ ನಳಕೂಬರ ಮಣಿಗ್ರೀವರು ಶ್ರೀಕೃಷ್ಣಪರಮಾತ್ಮನಲ್ಲಿ ಹೀಗೆ ಪ್ರಾರ್ಥಿಸುತ್ತಾರೆ .
ವಾಣೀ ಗುಣಾನುಕಥನೇ ಶ್ರವಣೌ ಕಥಾಯಾಂ
ಹಸ್ತೌ ಚ ಕರ್ಮಸು ಮನಸ್ತವ ಪಾದಯೋರ್ನೌ |
ಸ್ಮೃತ್ಯಾಂ ಶಿರಸ್ತವ ಸುರವರಪ್ರಣಾಮೇ
ದೃಷ್ಟಿಃ ಸತಾಂ ದರ್ಶನೇSಸ್ತು ಭವತ್ತನೂನಾಮ್ ||
ಹೇ ದೇವೋತ್ತಮ ! ನಮ್ಮ ವಾಣಿಯು ನಿನ್ನ ಮಹಿಮೆಗಳನ್ನು ವರ್ಣಿಸುವಂತೆ ಕಿವಿಗಳು ನಿನ್ನ ಚರಿತೆಗಳನ್ನು ಕೇಳುವಂತೆ ,ಕೈಗಳು ನಿನ್ನ ಮಂದಿರವನ್ನು ಶುದ್ದಗೋಳಿಸಿ , ಅಲಂಕಾರಿಸುವುದೇ ಮೊದಲಾದ ಕರ್ಮಗಳನ್ನು ಮಾಡುವಂತೆ ಮನಸ್ಸು ಪಾದಕಮಲಗಳನ್ನು ಧ್ಯಾನಿಸುವಂತೆ ,ಶಿರಸ್ಸು ನಿನ್ನನ್ನು ಸದಾ ನಮಸ್ಕರಿಸುವಂತೆ ಮತ್ತು ದೃಷ್ಟಿಯು ನಿನ್ನ ಮಂಗಲರೂಪಗಳನ್ನು ನೋಡುವಂತೆ ಅನುಗ್ರಹಿಸು .
ಭಾಗವತಪುರಾಣ 10-11-39
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -5 🌺
ನ ಯದ್ವಚಶ್ಚಿತ್ರ ಪದಂ ಹರೇರ್ಯಶೋ
ಜಗತ್ಪವಿತ್ರಂ ಯದಿಕರ್ಹಿಚಿದ್ವದೇತ್ |
ತದ್ಧ್ವಾಂಕ್ಷ್ವತೀರ್ಥಂ ನತು ಹಂಸಸೇವಿತಂ
ಯತ್ರಾಚ್ಯುತಸ್ತತ್ರ ಹಿ ಸಾಧವೋಮಲಾಃ ||
ಜಗತ್ಪವಿತ್ರನಾದ ಶ್ರೀಹರಿಯ ದಿವ್ಯಮಹಿಮೆಗಳನ್ನು ಆದ್ಯಂತಮಧ್ಯಗಳಲ್ಲಾದರು ವರ್ಣಿಸದ ಗ್ರಂಥವು ಸುಂದರಶೈಲಿಯಲ್ಲಿ ರಚಿಸಲ್ಪಟ್ಟಿದ್ದರೂ ಸಜ್ಜನಸೆವ್ಯವಲ್ಲ .
ಶುದ್ಧಮನಸ್ಕರಾದ ಸಾಧುಗಳು ಅಚ್ಯುತನ ದಿವ್ಯಕೀರ್ತಿಗಳನ್ನು ವರ್ಣಿಸುವ ಗ್ರಂಥಗಳನ್ನೇ ಆಧಾರಿಸುತ್ತಾರೆ .ಇತರ ಗ್ರಂಥಗಳನ್ನು ಅಜ್ಞಾನಿಗಳು ಮಾತ್ರ ಹಿಡಿಯುವರು ಕೊಚ್ಚೇ ನೀರು ಕಾಗೆಗಳಿಂದ ಸೇವ್ಯ ಹಂಸಗಳಿಂದಲ್ಲ .
ಭಾಗವತ ಪುರಾಣ 12-12-50
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -6🌺
ಶ್ರೀಶುಕಾಚಾರ್ಯರು ಶ್ರೀಮದ್ಭಾಗವತದ ಮಹಿಮೆಯನ್ನು ವರ್ಣಿಸುತ್ತಾರೆ
ಯತ್ರೋತ್ತಮಶ್ಲೋಕಗುಣಾನುವಾದಃ
ಸಂಗೀಯತೇSಭೀಕ್ಷ್ಣ ಮಮಂಗಲಗಮಘ್ನಃ |
ತಮೇವ ನಿತ್ಯಂ ಶೃಣುಯಾಮಭೀಕ್ಷ್ಣಂ
ಕೃಷ್ಣೇSಮಲಾಂ ಭಕ್ತಿಮಭಿಪ್ಸಮಾನಃ ||
ಶ್ರೀಕೃಷ್ಣನಲ್ಲಿ ನಿರ್ಮಲಭಕ್ತಿಯನ್ನು ಪಡೆಯಬೇಕಾದರೆ ಎಲ್ಲಾ ಆಶುಭಗಳನ್ನು ದೂರಮಾಡುವ ಶ್ರೀಹರಿಯಗುಣಾನುವಾದದಿಂದ ತುಂಬಿರುವ ಭಾಗವತವನ್ನು ಪ್ರತಿದಿನವೂ ಶ್ರವಣಮಾಡಬೇಕು .
ಭಾಗವತ ಪುರಾಣ 5 -12-13
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -7🌺
ಭಗವನ್ನಾಮೋಚಾರದಲ್ಲಿಯೂ ತತ್ಪರ ಕರ್ಮಾಚರಣೆಯಲ್ಲಿಯೂ ಲಜ್ಜೆ ಯನ್ನು ಬಿಡಬೇಕೆಂದು ಕವಿಯು ವೀದೇಹರಾಜನಿಗೆ ಹೇಳುತ್ತಾನೆ.
ಶ್ರುಣ್ವನ್ಸುಭದ್ರಾಣಿ ರಥಾಂಗಪಾಣೇ-
ರ್ಜನ್ಮಾನಿ ಕರ್ಮಾಣಿ ಚ ಯಾನಿ ಲೋಕೆ |
ಗೀತಾನಿ ನಾಮಾನಿ ತದರ್ಥಕಾನಿ ಗಾಯನ್ವಿಲಜ್ಜೋ ವಿಚರೇದಸಂಗಃ ||
ಚಕ್ರಪಾಣಿಯ(ಶ್ರೀಕೃಷ್ಣನ)ಶುಭನಾಮಗಳನ್ನೂ ಶ್ರೀಹರಿಯ ಅವತಾರಗಳ ದಿವ್ಯಮಹಿಮೆಗಳನ್ನೂ ಕೇಳುವವನಾಗಿ ಮಿತ್ರ-ಶತ್ರು ,ಶ್ರೇಷ್ಠ -ನೀಚರೆಂಬ ಕಾರಣಗಳನ್ನಾಗಲೀ ಭಜನೆ ನಡೆಯತಕ್ಕ ಸ್ಥಾನದಿ ಸನ್ನಿವೇಶಗಳನ್ನಾಗಲೀ ಲಕ್ಷಿಸದೆ ತಾನೂ ಸೇರಿ ಭಗವಂತನ ದಿವ್ಯನಾಮ -ರೂಪ-ಕರ್ಮಗಳನ್ನು ಕೊಂಡಾಡಿ ಲಜ್ಜೆ(ನಾಚಿಕೆ )ಯನ್ನು ತೊರೆದು ನಿತ್ಯ ಭಗವತ್ಸಂಗವನ್ನು ದೊರಕಿಸಿಕೊಳ್ಳಬೇಕು
ಭಾಗವತ ಪುರಾಣ 11-2-39
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -8🌺
ಶ್ರೀಕೃಷ್ಣಪರಮಾತ್ಮನು ಉದ್ಧವನಿಗೆ ಉಪದೇಶಿಸಿದ ಭಗವದ್ಭಕ್ತರ ಲಕ್ಷಣಗಳು
ವಾಗ್ಗದ್ಗದಾ ದ್ರವತೇ ಯಸ್ಯ ಚಿತ್ತಂ
ರುದತ್ಯ ಭೀಕ್ಷ್ಣಂ ಹಸತಿ ಕ್ವಚಿಚ್ಚ |
ವಿಲಜ್ಜ ಉದ್ಗಾಯತಿ ನೃತ್ಯತೇ ಚ
ಮದ್ಭಕ್ತಿಯಕ್ತೋ ಭುವನಂ ಪುನಾತಿ ||
ನನ್ನ ಭಕ್ತನ ವಾಣಿಯು ಗದ್ಗದಿತವಾಗುವುದು ಮನಸ್ಸು ಕರಗಿ ಹರಿಯುವುದು .ಆತನು ಕೆಲವೊಮ್ಮೆ ಅಳುವನು ಮತ್ತೊಮ್ಮೆ ನಗುವನು ನಿರ್ಲಜ್ಜನಾಗಿ ಗಾನಮಾಡುವನು ಕುಣಿಯುವನು . ಈ ವಿಧ ಭಕ್ತನು ತನ್ನ ಭಾಷಣಾದಿ ಸರ್ವಚೇಷ್ಟೆಗಳಿಂದ ಲೋಕವನ್ನು ಪವಿತ್ರಗೊಳಿಸುತ್ತಾನೆ .
ಭಾಗವತ ಪುರಾಣ ಯ ||11 -14 -24 ||
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -9🌺
ಪರಿಕ್ಷಿತರಾಜನಿಗೆ ವಿಸ್ತಾರವಾಗಿ ಭಾಗವತವನ್ನು ನಿರೂಪಿಸಲು ಶುಕಾಚಾರ್ಯರು ಆಚರಿಸಿದ ಮಂಗಳಪದ್ಯ
ನಮಃ ಪರಸ್ಮೈ ಪುರುಷಾಯ ಭೂಯಸೇ
ಸದುದ್ಭವಸ್ಥಾನನಿರೋಧಲೀಲಯಾ |
ಗೃಹಿತಶಕ್ತಿತ್ರಿತಯಾಯದೇಹಿನಾ-
ಮಂತರ್ಧ್ರುವಾಯನುಪಲಭ್ಯವರ್ತ್ಮನೇ ||
ಶ್ರೀಹರಿಯು ಈ ಕಣ್ಣಿಗೆ ಕಾಣುವ ಸತ್ಯವಾದ ಜಗತ್ತಿನ ಸೃಷ್ಟಿ ರಕ್ಷಣೆ ಸಂಹಾರಗಳನ್ನು ಕ್ರೀಡೆಯಂತೆ ತನ್ನ ಸ್ವಾಭಾವಿಕವಾದ ಇಚ್ಛಾಶಕ್ತಿ.ಜ್ಞಾನಶಕ್ತಿ ಕ್ರೀಯಾಶಕ್ತಿಗಳಿಂದ ನಡೆಸುತ್ತಿದ್ದಾನೆ. ಸಮಸ್ತ ಜೀವರ ಅಂತರ್ಯಾಮಿಯಾಗಿದ್ದು ಪ್ರತಿಕ್ಷಣದ ವ್ಯಾಪಾರಗಳಿಗೆ ಕಾರಣಿಭೂತನಾಗಿದ್ದರೂ ಕಾಣದಂತಿದ್ದಾನೆ.ಹೀಗೆ ಗುಣಪೂರ್ಣನಾಗಿ ಸರ್ವೋತ್ತಮನಾಗಿರುವ ನನ್ನ ಹೃದಯಸ್ಥನಾದ ಶ್ರೀಹರಿಗೆ ನಮಸ್ಕಾರ.
ಶ್ರೀಮದ್ಭಾಗವತ ಪುರಾಣ 2-4-12
|| ಶ್ರೀಕೃಷ್ಣಾರ್ಪಣಾಮಸ್ತು ||
ಶ್ರೀಐತರೇಯ....
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -10🌺
ಸೂತರು ಶೌನಕಾದಿಗಳಿಗೆ ಭಾಗವತವನ್ನು ವಿಸ್ತಾರವಾಗಿ ಉಪದೇಶಿಸಿ ಉಪಸಂಹಾರದಲ್ಲಿ ಸಾರವನ್ನು ಸಂಗ್ರಹಿಸಿ ಉಪದೇಶಿಸುತ್ತಾರೆ
ಅವಿಸ್ಮೃತಿಃ ಕೃಷ್ಣಪದಾರವಿಂದಯೋಃ
ಕ್ಷೀಣೋತ್ಯ ಭದ್ರಾಣಿ ಶಮಂ ತನೋತಿ ಚ |
ಸತ್ವಸ್ವ ಶುದ್ಧಿಂ ಪರಮಾಂ ಚ ಭಕ್ತಿಂ
ಜ್ಞಾನಂ ಚ ವಿಜ್ಞಾನ ವಿರಾಗಯುಕ್ತಮ್ ||
ಶ್ರೀಕೃಷ್ಣನ ಪದಾರವಿಂದಗಳ ನಿರಂತರ ಸ್ಮರಣೆಯು ಮನಃಶುದ್ಧಿಯನ್ನುಂಟುಮಾಡಿ ಎಲ್ಲ ಪಾಪಗಳನ್ನು ಕಳೆದು ಸುಖವನ್ನುಂಟುಮಾಡುತ್ತದೆ . ಈ ಅವಿರತ ಸ್ಮರಣೆಯು ಭಕ್ತಿವೈರಾಗ್ಯ ದ್ವಾರ ಅಪರೋಕ್ಷಜ್ಞಾನಕ್ಕೂ ,ನಂತರ ಜ್ಞಾನ-ವೈರಾಗ್ಯಗಳಿಂದ ಕೂಡಿದ ಸಾಕ್ಷಾತ್ ಮುಕ್ತಿಸಾಧನವಾದ ಶ್ರೇಷ್ಠಭಕ್ತಿಗೂ ಕಾರಣವಾಗಿ ಶಾಶ್ವತ ಸುಖವನ್ನೆ (ಮುಕ್ತಿ)ದೂರಕಿಸುತ್ತದೆ.
ಶ್ರೀಮದ್ಭಾಗವತ ಪುರಾಣ 12-12-54
|| ಶ್ರೀಕೃಷ್ಣಾರ್ಪಣಾಮಸ್ತು ||
ಶ್ರೀಐತರೇಯ....
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -11🌺

ದೇವಸೇನಾನಿಯಾಗಿ ಸಹಾಯಮಾಡಿದ ಮುಚುಕುಂದನಿಗೆ ದೇವತೆಗಳು ಅನುಗ್ರಹಿಸಲು ಹೊರಟಾಗ ಆಡಿದ ಮಾತು
ಕಾಲೋ ಬಲೀಯಾನ್ ಬಲಿನಾಂ ಭಗವಾನಿಶ್ವರೋSವ್ಯಯಃ |
ಪ್ರಜಾಃ ಕಾಲಯತೇ ಕ್ರೀಡನ್ ಪಶುಪಾಲೋ ಯಥಾ ಪಶೂನ್ ||
ಬಲಿಷ್ಠರಿಗಿಂತಲೂ ಅತ್ಯಂತ ಬಲಿಷ್ಠನಾದವನು ಕಾಲನಿಯಾಮಕನಾದ ಶ್ರೀಹರಿ. ಅವನೇ ಸರ್ವೇಶ್ವರ .ಇವನೇ ಅಳಿವಿರದವ .ದನಗಳನ್ನು ಮೇಯಿಸುವವನು ಅನಾಯಾಸವಾಗಿ ಅವುಗಳನ್ನು ನಿಯಂತ್ರಿಸುತ್ತಾನೇಯೋ ಇದರಂತೆಯೇ ಶ್ರೀಹರಿಯು ಕ್ರೀಡೆಯಿಂದಲೇ ಸಮಗ್ರ ಜಗತ್ತನ್ನು ನಿಯಂತ್ರಿಸುತ್ತಾನೆ .
ಶ್ರೀಮದ್ಭಾಗವತ ಪುರಾಣ 10-54--19
|| ಶ್ರೀಕೃಷ್ಣಾರ್ಪಣಾಮಸ್ತು |
ಶ್ರೀಐತರೇಯ....
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ-12 🌺
ಶ್ರೀಹರಿಯು ಪುರುಷರೂಪದಿಂದ ಅಂತಸ್ಥಿತನಾಗಿದ್ದು ಮಾಡುವ ವ್ಯಾಪಾರವನ್ನು ಧ್ರುವನ ಸ್ತುತಿಯಿಂದ ಸೂಚಿಸುತ್ತಾರೆ
ಯೋಂತಃ ಪ್ರವಿಶ್ಯ ಮಮ ವಾಚಮಿಮಾಂ ಪ್ರಸುಪ್ತಾಂ
ಸಂಜೀವಯತ್ಯಖಿಲಶಕ್ತಿಧರಃ ಸ್ವಧಾಮ್ನಾ |
ಅನ್ಯಾಂಶ್ಚ ಹಸ್ತಚರಣಶ್ರವಣತ್ವಗಾದೀನ್ ಪ್ರಾಣಾನ್ನಮೋ ಭಗವತೇ ಪುರುಷಾಯ ತುಭ್ಯಂ ||
ಭಗವಂತನೇ ನಿನ್ನನ್ನು ಸ್ತುತಿಸುವಲ್ಲಿ ಅಸಮರ್ಥನಾಗಿರುವ ನನ್ನ ಇಂದ್ರಿಯಗಳನ್ನು ಉಜ್ಜೀವನ ಗೊಳಿಸಿರುವಿ. ಯಾವ ನಿನ್ನ ಫ್ರೇರಕಶಕ್ತಿಯಿಂದಲೇ ಸುಪ್ತವಾದ ವಾಗಿಂದ್ರಿಯವು ನಿನ್ನನ್ನು ಸ್ತುತಿಸುವುದರಲ್ಲಿ ಶಕ್ತಿಯನ್ನು ಪಡೆಯುತ್ತದೆ.ಇತರ ಇಂದ್ರಿಯಗಳಲ್ಲಿಯೂ ಆಯಾ ಚೇಷ್ಟೆಗಳನ್ನು ಮಾಡಿಸುತ್ತಿರುವಿ ಇಂತೆಯೇ ಕೈಕಾಲು, ಕಿವಿ, ತ್ವಗೀಂದ್ರಿಯ ,ಮೊದಲಾದ ಬೇರೆ ಇಂದ್ರಿಯಗಳು ಚಟುವಟಿಕೆಯಿಂದ ಇರುವಂತೆ ನಿಯಾಮಕನಾಗಿರುವಿ .ಅಂತಹ ವಾಸುದೇವನೇ .ನಿನಗಿದೂ ನಮನ.
ಭಾಗವತ ಪುರಾಣ 4-11-6
|| ಶ್ರೀಕೃಷ್ಣಾರ್ಪಣಾಮಸ್ತು ||
ಶ್ರೀಐತರೇಯ.....
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ--13🌺
ಕಪಿಲನಾಮಕ ಪರಮಾತ್ಮನು ಭಕ್ತಿಯೋಗವನ್ನು ಪ್ರಶಂಸಿಸುವುದು
ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ
ಭವಂತಿ ಹೃತ್ಕರ್ಣರಸಾಯನಾಃ ಕಥಾಃ |
ತಜ್ಜೋಷಣಾದಾಶ್ವಪವರ್ಗವರ್ತ್ಮನಿ
ಶ್ರದ್ಧಾವತೀ ಭಕ್ತಿರನುಕ್ರಮಿಷ್ಯತಿ ||
ಸತ್ಸಹವಾಸದಿಂದ ಕಿವಿ-ಮನಗಳಿಗೆ ರಸಾಯನದಂತೆ ಸುಖಪ್ರದನಾದ ನನ್ನ ಮಹಿಮಾಸಂಪದ್ಯುಕ್ತವಾದ ಚರಿತ್ರೆಗಳ ನಿತ್ಯಶ್ರವಣವಾಗುತ್ತದೆ .ನಂತರ ಭಗವದಪರೋಕ್ಷಕ್ಕೆ ಮಹಾತ್ಮರ ಸೇವೆಯ ಪ್ರಭಾವದಿಂದ ಸಾಕ್ಷಾತ್ಸಾಧಕವಾದ ಭಕ್ತಿಯು ಕ್ರಮವಾಗಿ ಅಭಿವೃದ್ಧಿ ಹೊಂದುವುದು .
ಶ್ರೀಮದ್ಭಾಗವತ 3-6-25
|| ಶ್ರೀಕೃಷ್ಣಾರ್ಪಣಾಮಸ್ತು ||
ಶ್ರೀಐತರೇಯ...
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ--14🌺
ಅನ್ಯತ್ರ ಪ್ರಯೋಗ ಕಂಡಿದ್ದರೂ ಮುಖ್ಯವಾಗಿ ಭಗವಚ್ಛಬ್ದವು ಪರಮಾತ್ಮಪರವೇಕೆಂಬುದನ್ನು ಸೂತರು ವಿವರಿಸುತ್ತಾರೆ
ಅಥಾಪಿ ಯತ್ಪಾದನಖಾವಸೃಷ್ಟಂ
ಜಗದ್ವಿರಿಂಚೋಪಹೃತಾರ್ಹಣಾಂಭಃ |
ಸೇಶಂ ಪುನತ್ಯನ್ಯತಮೋ ಮುಕಾಂದಾತ್
ಕೋ ನಾಮ ಲೋಕೆ ಭಗವತ್ಪದಾರ್ಥಃ ||
ಬ್ರಹ್ಮದೇವರು ಶ್ರೀಹರಿಪಾದವನ್ನು ತೋಳೆದು ಪೂಜಿಸಿದರು .ಪರಮಾತ್ಮನ ಪಾದನಖದಿಂದ ಹೊರಟ ಪಾದೋದಕವನ್ನು ರುದ್ರದೇವರು ಶಿರಸ್ಸಿನಲ್ಲಿ ಧರಿಸಿಪವಿತ್ರರಾದರು .ಅದೇ ಪಾದೋದಕವು ಗಂಗೆ ಎಂಬ ಪ್ರಸಿದ್ಧ ನಾಮದಿಂದ ಜಗತ್ತನ್ನು ಪಾವನಮಾಡುತ್ತಿರುವುದು. ಹೀಗಿರಲು ಮುಕ್ತಿದಾಯಕನಾದ ಮುಕುಂದನಿಗಿಂತಲೂ ಭಗವಚ್ಛಬ್ದಕ್ಕೆ ಆರ್ಹರಾದವರು ಮತ್ತಾರು ?
ಶ್ರೀಮದ್ಭಾಗವತ ಪುರಾಣ 1-18-21
|| ಶ್ರೀಕೃಷ್ಣಾರ್ಪಣಾಮಸ್ತು ||
ಶ್ರೀಐತರೇಯ....
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -15🌺
ಕವಿಯು ವಿದೇಹರಾಜನಿಗೆ. ಆತ್ಮಸಮರ್ಪಣೆಯ ಪ್ರಕಾರವನ್ನು ವಿವರಿಸುತ್ತಾನೆ .
ಕಾಯೇನ ವಾಚ ಮನಸೆಂದ್ರಿಯೈರ್ವಾ
ಬುಧ್ಯಾತ್ಮನಾ ವಾನುಸೃತಃ ಸ್ವಭಾವಮ್ |
ಕರೋತಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯೇತ್ತತ್ ||
ಸ್ವಯೋಗ್ಯತೆಯನ್ನನುಸರಿಸಿ ಅಥವಾ ಸ್ವಭಾವ ಶಬ್ಧವಾಚ್ಯನಾದ ಭಗವಂತನ ಫ್ರೇರಣಾನುಸಾರ ತನ್ನ ದೇಹ-ಮನಸ್ಸು-ಇಂದ್ರಿಯಗಳು ಬುದ್ಧಿ ಮತ್ತು ಸ್ವರೂಪಗಳಿಂದ ಮಾಡುವ ಸಕಲ ಕರ್ಮಗಳನ್ನು ಸರ್ವೋತ್ತಮನಾದ ಶ್ರೀನಾರಾಯಣನಲ್ಲಿ ಸಮರ್ಪಿಸಬೇಕು .
ಶ್ರೀಮದ್ಭಾಗವತ ಪುರಾಣ ||11-2-36||
||ಶ್ರೀಕೃಷ್ಣಾರ್ಪಣಾಮಸ್ತು ||
ಶ್ರೀಐತರೇಯ....
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -16🌺
ದೇವಾಸುರ ಯುದ್ಧ ವಾಗುತ್ತಿರಲು ತನ್ನಲಿಗೆ ಬಂದ ದೇವತೆಗಳಿಗೆ ಬ್ರಹ್ಮದೇವರು. ಹೇಳವುದು
ಅಯಂ ತು ತಸ್ಯ ಸ್ಥಿತಿಪಾಲನಕ್ಷಣಃ
ಸತ್ಯಂ ಜುಷಾಣಸ್ಯ ಭವಾಯ ದೇಹಿನಾಮ್ |
ತಸ್ಮಾದ್ರ್ವ ಜಾಮಃ ಶರಣಂ ಜಗದ್ಗುರುಃ
ಸ್ಥಾನಂ ಸನೋ ಧಾಸ್ಯತಿ ಶಂ ಸುರಪ್ರಿಯಃ ||
ಅಜ್ಞಾನದಿಂದ ಅವೃತರಾದ ಜೀವರ ಉದ್ಧಾರಾರ್ಥವಾಗಿ ಭಗವಂತನು ಸೃಷ್ಟ್ಯಾದಿಗಳನ್ನು ಮಾಡುತ್ತಾನೆ ದೇವತಾಪ್ರಿಯನೂ ಶಾಶ್ವತನೂ ಜಗದ್ಗುರುವೂ ಜಗದ್ರಕ್ಷಕನೂ ಆದ ಶ್ರೀವಿಷ್ಣುವನ್ನು ಅನನ್ಯವಾಗಿ ಶರಣುಹೊಂದೋಣ ನಿಶ್ಚಯವಾಗಿ ನಮಗೆ ಮಂಗಳವನ್ನು ಕರುಣಿಸುವನು.
ಶ್ರೀಮದ್ಭಾಗವತ ಪುರಾಣ ||8-2-23 ||
|| ಶ್ರೀಕೃಷ್ಣಾರ್ಪಣಾಮಸ್ತು ||
ಶ್ರೀಐತರೇಯ.....
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -17🌺
ನಾಗಪತ್ನಿಯರು ಕಾಲಿಯ ಮರ್ಧನ ಕೃಷ್ಣಪರಮಾತ್ಮನನ್ನು ಸ್ತುತಿಸುವುದು.
ನ ನಾಕಪೃಷ್ಠಂ ನ ಚ ಪಾರಮೇಷ್ಟ್ಯಂ
ನ ಸಾರ್ವಭೌಮಂ ನ ರಸಾಧಿಪತ್ಯಂ |
ನ ಯೋಗಹಸಿದ್ಧೀರಪುನರ್ಭವಂ ವಾ
ವಾಂಛಂತಿ ತ್ವತ್ಪಾದರಜಃ ಪ್ರಪನ್ನಾಃ ||
ನಿನ್ನ ಪಾದಧೂಳಿಯನ್ನೇ ಅನನ್ಯವಾಗಿ ಶರಣುಹೊಂದಿದವರು ಇಂದ್ರನ ಸ್ವರ್ಗಾಧಿಪತ್ಯವನ್ನು ರಸಾತಲಾಧಿಪತ್ಯವನ್ನು.ಆಣಿಮಾದಿ ಯೋಗಸಿದ್ಧಿಗಳನ್ನೂ ಹೆಚ್ಚೇನು ಮೋಕ್ಷವನ್ನೂ ಸಹ ನಿನ್ನಲ್ಲಿ ಬೇಡುವುದಿಲ್ಲ .
ಶ್ರೀಮದ್ಭಾಗವತ ಪುರಾಣ || 10-4-37 ||
||ಶ್ರೀಕೃಷ್ಣಾರ್ಪಣಾಮಸ್ತು ||
ಶ್ರೀಐತರೇಯ....
🌹🌷ಶ್ರೀಮದ್ಭಾಗವತ ಚಿಂತನ🌷🌹
🌺ಸಂಚಿಕೆ -18🌺
ಹಿರಣ್ಯಕಶಿಪುವಿನ ಬಳಿ ಭಗವಂತನ ಮಹಿಮೆಯನ್ನು ಪ್ರಹ್ಲಾದರಾಜರು ನಿರೂಪಿಸುವುದು.
ನ ಕೇವಲಂ ಮೇ ಭವತಶ್ಚ ರಾಜನ್
ಸ ವೈ ಬಲಿನಾಂ ಚಾಪರೇಶಷಾಮ್ |
ಪರಾವರೇSಮೀ ಸ್ಥಿರಜಂಗಮಾ ಯೇ
ಬ್ರಹ್ಮದಯೋ ಯೇನ ವಶಂ ಪ್ರಣೀತಾಃ ||
ರಾಜನೇ ,ನನಗೆ ಮಾತ್ರವಲ್ಲದೇ ನಿನಗೂ ನಿನ್ನಂತೆ ಶ್ರೇಷ್ಠ ರಾದವರಿಗೂ ,ಕನಿಷ್ಠರಾದವರಿಗೂ ಬಲಪ್ರದನಾದವನು ಶ್ರೀಹರಿಯೇ ಆಗಿದ್ದಾನೆ . ಬ್ರಹ್ಮಾದಿ ಸಮಸ್ತ ಬ್ರಹ್ಮಾದಿ ಸ್ಥಾವರ ಜಂಗಮಗಳನ್ನು ಆತ ತನ್ನ ಅಧೀನದಲ್ಲಿಟ್ಟುಕೊಂಡಿದ್ದಾನೆ .
ಶ್ರೀ
|| ಮದ್ಭಾಗವತ ಪುರಾಣ 7 -8-8 ||
|| ಶ್ರೀಕೃಷ್ಣಾರ್ಪಾಣಮಸ್ತು||
ಶ್ರೀಐತರೇಯ...
🌹🌷ಶ್ರೀಮದ್ಭಾಗವತ ಚಿಂತನ🌷🌹*
🌺ಸಂಚಿಕೆ -19🌺
ಧ್ಯೇಯಂ ಸದಾ ಪರಿಭವಘ್ನ ಮಭೀಷ್ಟದೋಹಂ
ತೀರ್ಥಾಸ್ಪದಂ ಶಿವವಿರಿಂಚಿನುತಂ ಶರಣ್ಯಮ್ |
ಬೃತ್ಯಾರ್ತಿಹಂ ಪ್ರಣತಭಕ್ತಭವಾಬ್ಧಿಪೋತಂ
ವಂದಾಮಹೇ ಪುರುಷ ತೇ ಚರಣಾರವಿಂದಂ ||
ಶ್ರೀಹರಿಯ ನಾಮಸಂಕಿರ್ತನೆಯನ್ನು ಹರಿಭಕ್ತರು ಕಲಿಯುಗದಲ್ಲಿ ಹೀಗೆ ಆಚರಿಸುತ್ತಾರೆ .ಹೇ ಪರಮಪುರುಷ !ನಿನ್ನ ಪಾದಕಮಲವನ್ನು ವಂದಿಸುತ್ತೇವೆ ,
ಸ್ತುತಿಸುತ್ತೇವೆ ಈ ಪಾದವು ನಿರಂತರ ಧ್ಯಾನಗೋಚರವಾಗಿ ನಮ್ಮ ಸಕಲ ಅನಿಷ್ಟಗಳನ್ನು ಪರಿಹರಿಸುತ್ತದೆ .
ಸಕಲ ಅಭಿಷ್ಟಗಳನ್ನೂ ಸುರಿಸುತ್ತದೆ . ಗಂಗಾದಿ ತೀರ್ಥಗಳಿಗೆ ಆಶ್ರಯವಾದುದು ನಿನ್ನ ಪಾದಕಮಲ ಬ್ರಹ್ಮರುದ್ರರಿಗೂ ರಕ್ಷಕವಾದುದು ಭಕ್ತರ ದುಃಖಗಳನ್ನು ಪರಿಹರಿಸುವಂತಹುದ್ದು ನಮಿಸಿದ ಭಕ್ತರ ಸಂಸಾರ ಸಮುದ್ರವನ್ನು ದಾಟಿಸುವ ದೋಣಿಯಂತಿದೆ ನಿನ್ನ ಪಾದ ಇಂತಹ ಪಾದವನ್ನು ವಂದಿಸುತ್ತೇವೆ .
|| ಶ್ರೀಮದ್ಭಾಗವತ ಪುರಾಣ 11-5-3 ||
||ಶ್ರೀಕೃಷ್ಣಾರ್ಪಣಾಮಸ್ತು ||
ಶ್ರೀಐತರೇಯ.....
ಶ್ರೀಮದ್ಭಾಗವತ ಚಿಂತನ🌷🌹*
🌺ಸಂಚಿಕೆ -20🌺
ಕೊನೆಯ ಸಂಚಿಕೆ
ಮಹಾಭಾಗವತ ಪ್ರವಚನವನ್ನು.ಉಪಸಂಹರಿಸುತ್ತಾ ಸೂತರು ಶ್ರೀಹರಿನಮನ ಮಂಗಳವನ್ನಾಚಿರಿಸುತ್ತಾರೆ .
ಉಪಚಿತನವಶಕ್ತಿಭಿಃ ಸ್ವ ಆತ್ಮ-
ನ್ಯುಪಚಿತಸ್ಥಿರಜಂಗಮಪಾಲನಾಯ |
ಭಗವತ ಉಪಲಬ್ದಿಮಾತ್ರ ಧಾಮ್ನೇ
ಸುರ ಋಷಭಾಯ ನಮಃ ಸನಾತನಾಯ ||
ಜಗದುತ್ಪತ್ತಿ -ಸ್ಥಿತಿ -ಲಯಗಳಿಗೆ ಕಾರಣ ಭೂತ ಸ್ವಶಕ್ತಿಯುತನೂ ದೇವಲೋಕಾಧಿಪತಿಗಳಾದ ಬ್ರಹ್ಮ-ರುದ್ರ--ಇಂದ್ರಾದಿಗಳಿಂದ ಸಹ ಸಾಕಲ್ಯೇನ ಸ್ತುತಿಸಲಾಗದ ಅನಂತ ಮಹಿಮೋಪೇತನೂ ಉತ್ಪತ್ತಿ ನಾಶರಹಿತನೂ ಸ್ವತಂತ್ರನೂ ಆದ ಶ್ರೀಹರಿಯನ್ನು ನಮಸ್ಕರಿಸುತ್ತೇನೆ .
ಶ್ರೀಮದ್ಭಾಗವತ ಪುರಾಣ ||12_12 _68 ||
ಮುಗಿಯಿತು
|| ಶ್ರೀಕೃಷ್ಣಾರ್ಪಣಾಮಸ್ತು ||
ಶ್ರೀಐತರೇಯ......


ಶ್ರೀವಿಷ್ಣುತೀರ್ಥರ ಭಾಗವತ ಸಾರೋದ್ಧಾರ
ಚಿಂತನ...✍.....
ಶ್ರೀಸುಗುಣವಿಠಲ
🙏🌹🙏
🌹🙏🌹🙏🌹🙏
          209
 🌷೨೫ಅನ್ಯಥಾಮತ್ಯಕರಣ ಪ್ರಕರಣಂ*🌷

ಈ ಹಿಂದಿನ ಪ್ರಕರಣದಲ್ಲಿ ಭಗವದ್ಬಕ್ತರ ಲೋಕವಿಲಕ್ಷಣ ಪ್ರವೃತ್ತಿಯನ್ನು ತೋರಿಸಿ ,ಆ ವಿಷಯದಲ್ಲಿ ವಿಪರೀತ ಬುದ್ಧಿಯನ್ನು ತಾಳುವವರು ಅಂದರೆ ಅವರನ್ನು ಅವಮಾನ ಅಪಹಾಸ್ಯಾದಿ ಗುಣದೂಷಣೆಗಳನ್ನು ಮಾಡುವರು..ಶ್ರೀಹರಿಯನ್ನೇ ದ್ವೇಷಿಸಿ ದೋಷಗಳೆಣಿಸಿದಂಥಹ ಅನರ್ಥಗಳಿಗೆ ಗುರಿಯಾಗುತ್ತಾರೆ ..ಎಂಬುದರ ನಿದರ್ಶನವನ್ನು ಸಾರುತ್ತಾರೆ .
ಪಾರ್ವತಿದೇವಿಯು ಶಿವದ್ವೇಷಿಯಾದ ಧಕ್ಷನಿಗೆ ಹೇಳುವುದರ ಪ್ರಕಾರ...
ಸ್ವತಂತ್ರನಾದ ಬಿಂಬರೂಪೀ ಶ್ರೀಹರಿಗೆ ಸಕಲ ಕರ್ಮಗಳನ್ನು ಅರ್ಪಿಸಿ ಆನಂದ ಪಡುವ ಶಿವನು ವೇದಧರ್ಮಪಾಲಕನಲ್ಲವೆಂದು ತಿಳಿಯಬಾರದು .ವೇದಾರ್ಥಗಳನ್ನು ದೇವಮಾನವರು ಯಥಾಯೋಗ್ಯವಾಗಿ ಗ್ರಹಿಸುವರು .ಆಪಾತತಃ ತೋರುವ ಅರ್ಥಘಳನ್ನು ಮಾತ್ರ ಗಮನಿಸಿ ಶಿವನು ಅಧರ್ಮ ಪ್ರವೃತ್ತಿಯವರೆಂದು ತಿಳಿಯಬಾರದು .ಅದು ಅನರ್ಥಕ್ಕೆ ಕಾರಣವಾಗುತ್ತದೆ .ದೇವತೆಗಳು ವೇದಾರ್ಥನಿರ್ಣಯಗಳನ್ನು ತಿಳಿದು ತದನುಸಾರ ಆಚರಣೆಯುಳ್ಳವರು .ಅವರ ಕೃತಿಕಾರ್ಯಗಳು ಲೋಕವಿಲಕ್ಷಣವಾಗಿ ತೋರಿದರೂ ಆಕ್ಷೇಪಿಸದೇ ಎಚ್ಚರದಿಂದ ಇರಬೇಕು .ಸ್ವಯೋಗ್ಯ ಧರ್ಮಾಚರಣೆಯುಳ್ಳವರಾಗಬೇಕು . ಎಂಬ ಸಂದೇಶವನ್ನು ಭಾಗವತವು ನೀಡುತ್ತಿದ್ದು ..ಅದರನುಷ್ಠಾನಪರರಾಗಿರಬೇಕಾದುದು ..ಅಗತ್ಯ ..ಎಂಬ ಯಥಾಮತಿ ಅರ್ಥಾನುಸಂಧಾನ ಚಿಂತನೆಯೊಂದಿಗೆ ....
ಶ್ರೀಸುಗುಣವಿಠಲಾರ್ಪಣಮಸ್ತು
******

 
ಭಗವಂತನ ದೇಹದಲ್ಲಿ  ಹದಿನಾಲ್ಕು ಲೋಕಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ..
ಅವನ ಪಾದದಿಂದ ಆರಂಭ ಮಾಡಿ ಶಿರಸ್ಸುವರೆಗೆ ಹದಿನಾಲ್ಕು ಲೋಕಗಳನ್ನು ಪರಮಾತ್ಮನು ಹೊಂದಿದ್ದಾನೆ..
ಭಗವಂತನ ವಿರಾಟ್ ರೂಪದ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು, ಅವನ ದೇಹದಿಂದ ಹುಟ್ಟಿದ ದೇವತೆಗಳ ಬಗ್ಗೆ, ಅವನ ದೇಹದ ವರ್ಣನೆ ,ಅಲ್ಲಿ ಯಾವ ದಿಕ್ಕಿನಲ್ಲಿ ಯಾವ ಯಾವ ದೇವತೆಗಳು ಅವನ ಉಪಾಸನೆ ಹೇಗೆ ಮಾಡುವರು ಅನ್ನುವದರ ಬಗ್ಗೆ ವಿಸ್ತಾರವಾದ ವಿವರಣೆ ಮುಂದೆ  ತಿಳಿಸುವ ಪ್ರಯತ್ನ ಮಾಡುವೆ.
ನಾವು ಮನೆಯಲ್ಲಿ  ಭಗವಂತನ‌ ಮೂರ್ತಿಯನ್ನು ಪೂಜಿಸುವಾಗ ಅಥವಾ ದೇವಸ್ಥಾನ ಕ್ಕೆ ಹೋದಾಗ ಅಲ್ಲಿ ಅಭಿಷೇಕ ಮಾಡುವ ಮುಂಚೆ ಭಗವಂತನ ಈ ವಿರಾಟ್ ರೂಪದ ಚಿಂತನೆ ಅವಶ್ಯ ಮಾಡಲೇಬೇಕು.

ಮುಂದೆ ವೈರಾಗ್ಯದ ಬಗ್ಗೆ ಶುಕಮುನಿಗಳು ಹೇಳುತ್ತಾರೆ.
ರಾಜನೇ !ಕೇಳು.ವೈರಾಗ್ಯ ಸ್ಥಿರವಾಗಿರಲಿ.ಶಾಪ ನಿಮಿತ್ತವಾಗಿ ಇಲ್ಲಿ ಬಂದಿದ್ದೀಯಾ.ಎಲ್ಲವನ್ನೂ ಮರೆತುಬಿಡು.ಏತಕ್ಕೋಸ್ಕರ ಲೌಕಿಕದ ವಸ್ತುಗಳ,ಪದಾರ್ಥಗಳ ಮೇಲೆ ಆಸೆಪಡಬೇಕು??
ಭಗವಂತ ನಮಗೆ ಸ್ನೇಹಿತ ನಾಗಿಲ್ಲವೇ.ಗೆಳೆಯನಂದದಿ ಅರ್ಧ ಘಳಿಗೆ ಕ್ಷಣ ಬಿಡದಲೇ ಸಲಹುವ ಸ್ವಾಮಿಯನ್ನು ಮರೆಯಬೇಡ.ಸದಾ ನಮಗೆ ಅವನೇ ರಕ್ಷಣಾ ಮಾಡುವವ ಅನ್ನುವ ಜ್ಞಾನ ಇರಲಿ.ಅಜ್ಞಾನ ಬಾರದಿರಲಿ.ಮನುಷ್ಯನು ಬದುಕುವಾಗ ಹೇಗೆ ಬದುಕಬೇಕೆಂದು ಹೇಳುತ್ತಾರೆ. 
ಹಾಸಿಗೆಗಾಗಿ ಶ್ರಮ ಪಡಬೇಕಾಗಿಲ್ಲ. ನೆಲವೇ ಹಾಸಿಗೆ.ಮೆತ್ತನೆಯ ತಲೆದಿಂಬು ಬದಲಿಗೆ ನಮ್ಮ ತೋಳು ತಲೆದಿಂಬು.ನೀರನ್ನು ಕುಡಿಯಲು ಬಂಗಾರದ,ಬೆಳ್ಳಿಯ ಪಾತ್ರೆ ಬೇಕಿಲ್ಲ.ನಮ್ಮ ಬೊಗಸೆಯೆ ಪಾತ್ರೆ.ಆಹಾರಕ್ಕಾಗಿ ಅನ್ಯರ ಮನೆ ದ್ವಾರಕ್ಕೆ ಹೋಗಿ ಅವರನ್ನು ಆಶ್ರಯವನ್ನು ಹೊಂದದೆ ತನ್ನ ಪಾಲಿಗೆ ಬಂದ ಆಹಾರವನ್ನು ಸ್ವೀಕರಿಸಿ ಸಂತೋಷ ದಿಂದ ಉಣ್ಣಬೇಕು.
ಇಟ್ಟಾಂಗೆ ಇರುವೆನು ಹರಿಯೇ..ನದಿ ನೀರನ್ನು ಕುಡಿದುಕೊಂಡು,ಹಣ್ಣು ಹಂಪಲುಗಳನ್ನು ತಿಂದುಕೊಂಡು,ಗುಹೆಗಳಲ್ಲಿ ಮಲಗಿಕೊಂಡಾದರು ಸರಿ ಜೀವನವನ್ನು ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ಕಡಿಮೆ ವಸ್ತುಗಳಿಂದ ನಡೆಸಬೇಕು. ಮತ್ತು 
ಸದಾ ಪರಮಾತ್ಮನ ಧ್ಯಾನವನ್ನು ಮಾಡಬೇಕು.
ಭಗವಂತ ನಮ್ಮ ರಕ್ಷಣೆ ಮಾಡಬೇಕಾದಾಗ ಕ್ರೂರಪ್ರಾಣಿಗಳಿಂದ,ದುಷ್ಟಜನರಿಂದ ನಮಗೆ ಏತರ ಭಯ??
ಹೆಚ್ಚಿನ ವಸ್ತುಗಳ ಬಗ್ಗೆ ಮೋಹ ಬೇಡ ಎಂದು ಹೇಳುತ್ತಾರೆ.
🙏🙏
 ಮೊದಲಕಲ್ಲು ಶೇಷದಾಸರು ತಮ್ಮ (ಮಖಸುಳಾದಿ) ಜ್ಞಾನ ಯಜ್ಞ ಸುಳಾದಿ ಯಲ್ಲಿ ಪರಮಾತ್ಮನ ರೂಪಚಿಂತನೆ 
 ಹೇಳಿದ್ದಾರೆ.
ಇದರ ಬಗ್ಗೆ ಸ್ವಲ್ಪ ತಿಳಿಯೋಣ. 

ಪರಮಾತ್ಮನ ಶಿರಸ್ಸಿನ ಮೇಲೆ  ಕಿರೀಟ ಇರುವಲ್ಲಿ ೧೨ ದಳದ ಕಮಲವಿದೆ.. 
ಇದೆ ವೈಕುಂಠಲೋಕ. ಶ್ರೀವಾಸುದೇವ ನಾಮಕ ಭಗವಂತ ಮುಕ್ತಾಮುಕ್ತರಿಗೆ ನಿಯಾಮಕನಾಗಿದ್ದಾನೆ. 

ಪರಮಾತ್ಮನ ಶಿರಸ್ಸಿನಲ್ಲಿ ಸಾವಿರದಳದ ಕಮಲವಿದೆ. 
ಇದೆ ಸತ್ಯಲೋಕ. ಶ್ರೀಪುರುಷನಾಮಕ ಭಗವಂತ ಇಲ್ಲಿ ನಿಯಾಮಕ. ಈ ಪರಮಾತ್ಮನನ್ನು ಬ್ರಹ್ಮಾದಿ ಋಜುಗಳು ಪೂಜೆ ಮಾಡುತ್ತಾರೆ. ಪ್ರತಿಯೊಂದು ದಳಕ್ಕೂ ಭಗವಂತನ ಒಂದೊಂದು ವಿಶ್ವಾದಿ ರೂಪಗಳಿವೆ.

ಹುಬ್ಬಿನ ಮದ್ಯದಲ್ಲಿ 2 ದಳದ ಕಮಲ ಇದೆ. 
ಇದೇ ತಪೋಲೋಕ.. 
ಇಲ್ಲಿ ಬ್ರಹ್ಮ ಮತ್ತು ವಾಯುಗಳು ಗರುಡ ದೇವರು ನಿಯಾಮಕರು. ಶ್ರೀ ಕೃಷ್ಣ ರೂಪಿ ಪರಮಾತ್ಮನು ಇಲ್ಲಿ ಸಜ್ಜನರಿಂದ ಪೂಜೆಗೊಳ್ಳುತ್ತಾನೆ.

ಪರಮಾತ್ಮನ ಕಿರುನಾಲಿಗೆಯಲ್ಲಿ 16 ದಳದ ಕಮಲ ಇದೆ.
ಇದೇ ಜನಾಲೋಕ. 
ಇಲ್ಲಿ ವಿಶೇಷವಾಗಿ ಶ್ರೀ ಲಕ್ಷ್ಮಿ ನಾರಾಯಣರನ್ನು ಪೂಜೆ ಮಾಡುತ್ತಾರೆ.

ಪರಮಾತ್ಮನ ಉರುಸ್ಸು ನಲ್ಲಿ(ವಕ್ಷಸ್ಥಳ ,ಎದೆ)12 ದಳದ ಕಮಲ ಇದೆ. ಇದೇಮಹರ್ಲೋಕ. ಇಲ್ಲಿ ರುದ್ರದೇವರು ವಿಶೇಷವಾಗಿ ಶ್ರೀನರಸಿಂಹದೇವರನ್ನು ವಿಶೇಷವಾಗಿ ಪೂಜಿಸುತ್ತಾರೆ.

ಪರಮಾತ್ಮನ ಹೃದಯದಲ್ಲಿ ಇರುವುದೇ ಸ್ವರ್ಗ ಲೋಕ. 
ಇಲ್ಲಿ 8 ದಳದ ಕಮಲಗಳು ಇವೆ. ಇಲ್ಲಿ ಮೂಲೇಶ ನಾಮಕ ನಾರಾಯಣ, ಆತನ ಪಾದಮೂಲದಲ್ಲಿ ಮುಖ್ಯಪ್ರಾಣ ದೇವರು ನಿರಂತರ ಪೂಜೆ ಮಾಡುತ್ತಿರುತ್ತಾರೆ.

 ಪೂರ್ವದಿಕ್ಕಿನಲ್ಲಿ ಪುಷ್ಕರಾಧ್ಯರು, ದಕ್ಷಿಣದಿಕ್ಕಿನಲ್ಲಿ ಋಷಿಗಳು, ಪಶ್ಚಿಮದಿಕ್ಕಿನಲ್ಲಿ ಪಿತೃಗಳು ಮತ್ತು ಉತ್ತರದ ದಿಕ್ಕಿನಲ್ಲಿ ಗಂಧರ್ವರು, ಊರ್ಧ್ವದಿಕ್ಕಿನಲ್ಲಿ ರುದ್ರಾದಿಗಳು ಬಂದು ಪರಮಾತ್ಮನನ್ನು ಸೇವಿಸುತ್ತಾರೆ. 
ಇಲ್ಲೇ ಚಂದ್ರಮಂಡಲ. ಸೂರ್ಯಮಂಡಲ, ಇಲ್ಲಿ ಶ್ರೀಭೂದುರ್ಗಾ ಸಮೇತನಾದ ಶ್ರೀ ಪ್ರಾಜ್ನ್ಯನಾಮಕ ಪರಮಾತ್ಮ ಆಗ್ರೆಶ ಎಂಬ ನಾಮದಿಂದ ಇದ್ದಾನೆ ಎಂದು ಚಿಂತಿಸಬೇಕು. 
ನಾವು ಬಿಂಬ ಮೂರ್ತಿ ಚಿಂತನೆ ಮಾಡುವಾಗ ಇದನ್ನೇ ಮಾಡಬೇಕು.

ಪರಮಾತ್ಮನ ನಾಭಿಯಲ್ಲಿ 6 ದಳದ ಕಮಲ ಇದೆ. ಭುವರ್ಲೋಕ ನಿಯಾಮಕ ಗಣಪತಿ ಅಂತರ್ಗತ ಶ್ರೀವಿಶ್ವಂಭರ.ವರಾಹರೂಪ ದಿಂದ ಈ ಭೂಮಂಡಲವನ್ನೇ ತಂದ ಪರಮಾತ್ಮ. 
ಇಲ್ಲಿ ವಿಶ್ವಂಭರ, ಶ್ರೀ ಕೃಷ್ಣನ ಷಣ್ಮಹಿಶಿಯರು ಇದ್ದಾರೆ. ಶ್ರೀಪ್ರದ್ಯುಮ್ನ ರೂಪ ಇಲ್ಲಿ ನಿಂತಿದೆ. 

ಪರಮಾತ್ಮನ ನಾಭಿಯಕೆಳಗೆ 4 ದಳದ ಕಮಲ.ಇಲ್ಲಿ ಭೂಲೋಕ. ಇಲ್ಲಿ ವೇದಾಭಿಮಾನಿಗಳು ಬೃಹಸ್ಪತಿ, ಬುಧ, ಚಂದ್ರ, ಶನೀಶ್ವರ, ಸಪ್ತಮರುತ್ತುಗಳು ಇಲ್ಲಿ ಇದ್ದಾರೆ. ಇವರಿಗೆಲ್ಲ ಶ್ರೀಅನಿರುದ್ಧರೂಪದಿಂದ ಪರಮಾತ್ಮ ದರ್ಶನ ಕೊಡುತ್ತಾನೆ. 

ಪರಮಾತ್ಮನ ತೊಡೆಗಳಿಂದ ಹಿಡಿದು ಪಾದದವರೆಗಿನ ಲೋಕಗಳಲ್ಲಿ ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸತಾಳ, ಪಾತಾಳ,ಲೋಕಗಳು 
ಇಲ್ಲಿ 
ಪರಮಾತ್ಮನ ವಿಶೇಷವಾದ ಅನಿರುದ್ಧ, ಪ್ರದ್ಯುಮ್ನ, ಸಂಕರ್ಷಣ, ವಾಸುದೇವ, ನಾರಾಯಣ, ಹಾಗು ವಾಮನ ರೂಪಗಳು. 

ಹೀಗೆ ಪರಮಾತ್ಮನ 14 ಲೋಕಗಳಿಗೆ ಆಧಾರವಾದ ವಿರಾಟ್ ರೂಪ   ಚಿಂತನೆ ನಮಗೆ ಅನಂತ ಪುಣ್ಯಗಳನ್ನು ಕೊಡುತ್ತದೆ. 

"ಪ್ರಾತಃ ಕಾಲದಲ್ಲಿ ಅವಶ್ಯಕ ಇದನ್ನು ಮಾಡಲೇಬೇಕು".

ಇಡೀ ಬ್ರಹ್ಮಾಂಡವನ್ನು ಶೇಷದೇವರು ಧರಿಸುವರು. ಅವರನ್ನು ಕೂರ್ಮರೂಪದ ವಾಯುದೇವರು ಹೊತ್ತಿರುವರು. 
ಅವರನ್ನು ಲಕ್ಷ್ಮೀದೇವಿ. , ಲಕ್ಷ್ಮಿಯನ್ನು ಕೂರ್ಮರೂಪದಿಂದ ವಿಷ್ಣುಪರಮಾತ್ಮ ಹೊತ್ತಿದ್ದಾನೆ.

ಪ್ರತಿಯೊಬ್ಬ ಜೀವಿಯನ್ನು ಪರಮಾತ್ಮ ಹೀಗೆ  ಜಗತ್ತನ್ನು ಹೊತ್ತಿದ್ದಾನೆ ಎಂದು ಚಿಂತನೆ ಮಾಡಬೇಕು. ಮತ್ತು ಪ್ರತಿಯೊಬ್ಬ ಮನುಷ್ಯರು ಈ ವಿರಾಟ್ರೂಪವನ್ನು ಚಿಂತಿಸಬೇಕು.

ಶ್ರೀ ಮದ್ ಭಾಗವತವನ್ನು ಕೇಳುವದೇ ಬಾಳಿನ ಫಲ.ಹೇಳುವದು ಇನ್ನೂ ಮಿಗಿಲು.ಹೇಳಿಸುವದು ಸಹ.ಒಂದೆರಡು ಬಾರಿ ಅವುಗಳ ಪಠಣೆಗೆ,ಶ್ರವಣಗಳಿಗೆ ವಿಶೇಷ ಮಹತ್ವ ವನ್ನು ಪುರಾಣಗಳು ಸಾರಿವೆ.
 ಭಕ್ತಿ,ಶ್ರದ್ದೆ,ನಂಬಿಕೆಯಿಂದ, 
ಶ್ರೀ ಮದ್ ಭಾಗವತದ ಸ್ಕಂಧಗಳ ಅಧ್ಯಾಯದ ಶ್ಲೋಕಗಳು ಮತ್ತು ಆ ಶ್ಲೋಕಾರ್ಧ,ಶ್ಲೋಕಪಾದಗಳ ಶ್ರವಣ ಪಠಣಗಳಿಗು ಸಾವಿರಾರು ಗೋದಾನಗಳ ಫಲ ನಿರೂಪಿತವಾಗಿದೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು   ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
*****

🙏ಅ.ವಿಜಯ ವಿಠ್ಠಲ🙏

ಹರಿದಿನದ ನಮಸ್ಕಾರ ಗಳು ತಮಗೆ🙏
✍ ಪರಿಕ್ಷೀತ ಮಹಾರಾಜ ಗಂಗಾ ನದಿ ತಟದಲ್ಲಿ ಕುಳಿತಾಗ ಸಮಸ್ತ ಋಷಿಗಳು,ಅತ್ರಿ,ವಸಿಷ್ಠ ವಾಮದೇವ,ವೇದವ್ಯಾಸರು, ನಾರದರು ಮೊದಲಾದ ದೇವರ್ಷಿಗಳು,ಬ್ರಹ್ಮರ್ಷಿಗಳ,ರಾಜರ್ಷಿಗಳು,ಅವರ ಜೊತೆಯಲ್ಲಿ ಅವರ ಪರಿವಾರ,ಶಿಷ್ಯರು ಮತ್ತು ಅವರ ಪರಿವಾರ.. ಹೀಗೆ ಸಮಸ್ತರು ಬಂದಿದ್ದಾರೆ.
ಬಂದಂತಹ ಸಕಲರಿಗು ಪರಿಕ್ಷೀತ ಮಹಾರಾಜ ಸತ್ಕಾರ ಮಾಡುತ್ತಾನೆ.
ನಂತರ ಅವರಲ್ಲಿ ಕರ ಜೋಡಿಸಿ ಬಿನ್ನಹ ಮಾಡಿಕೊಳ್ಳುತ್ತಾನೆ.
"ಮಹಾನುಭಾವರಾದಂತಹ ಸಕಲ ಋಷಿಗಳ ಸಮೂಹಕ್ಕೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ ಗಳು."
ನಿಜವಾಗಿಯೂ ನಾನು ಪುಣ್ಯ ವಂತ.ಇಷ್ಟು ಜನ  ಬಂದು ಇಲ್ಲಿ ನೆರೆದಿದ್ದೀರಿ.ನಾನು ಧನ್ಯ.ಮತ್ತು ಇದೆಲ್ಲಾ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಇರಬೇಕು.
ನನಗೆ ಬಂದ ಋಷಿಪುತ್ರನ ಶಾಪ ಲೌಕಿಕದ ಕಡೆ ವಿಮುಖನನ್ನಾಗಿ ಮಾಡಿ ವೈರಾಗ್ಯದ ಕಡೆ ಮುಖವನ್ನು ಮಾಡಿದೆ.ಅದರ ನಿಮಿತ್ತ ವಾಗಿ ಶ್ರೀ ಹರಿಯಲ್ಲಿ ನನ್ನ ಮನಸ್ಸು ಹೋಗಿದೆ.
ಈಗ ನೀವುಗಳು ಯಾರು ನನ್ನ ಬಿಟ್ಟು ಹೋಗಬೇಡಿ.ವಿಪ್ರರ ಶಾಪದಂತೆ ಏಳುದಿನಗಳಲ್ಲಿ ನನಗೆ ಮರಣವಿದೆ.ಆದರೆ ನನದೊಂದು ವಿನಂತಿ.ಇಷ್ಟು ದಿನ ರಾಜ್ಯದ ಆಳ್ವಿಕೆಯ ಕಡೆ ಗಮನಕೊಟ್ಟು ಭಗವಂತನಿಗೆ ಪ್ರೀತಿಪಾತ್ರವಾದ ಯಾವುದೇ ಸಾಧನೆ ಮಾಡಿಲ್ಲ.
ನೀವು ಈ ಏಳುದಿನಗಳ ಕಾಲ ಸದಾ ಹರಿನಾಮ ಸ್ಮರಣೆ, ಅವನ‌ಕೀರ್ತನೆ ಮಾಡಿ.ಅದನ್ನು ಕೇಳುತ್ತಾ ನಾನು ಪ್ರಾಣಬಿಡುವೆನು..
ಮುಂದೆ ಯಾವುದೇ ಜನ್ಮ ಬರಲಿ.ಆ ಜನ್ಮದಲ್ಲಿ ಭಗವಂತನ ಭಕ್ತರಿಗೆ ನನ್ನ ಇಂದ ಯಾವುದೇ ತರಹದ ದುಷ್ಟ ಕಾರ್ಯಗಳನ್ನು ಮಾಡದೇ ಇರುವ ಹಾಗೇ ಬುದ್ದಿ ಬರಲಿ.ಸದಾ ಭಗವಂತನ ನಾಮ ಸ್ಮರಣೆ, ಶ್ರವಣ ಮಾಡುವ ಬುದ್ದಿ ಬರಲಿ.ನಿಮಗೆಲ್ಲರಿಗು ನನ್ನ ನಮಸ್ಕಾರ. ಆಶೀರ್ವಾದ ಮಾಡಿ ಎಂದು ಕೇಳಿಕೊಂಡು
ತನ್ನ ರಾಜ ವಸ್ತ್ರಗಳನ್ನು ಪರಿತ್ಯಾಗ ಮಾಡಿ ಕೃಷ್ಣಾಜಿನ ವಸ್ತ್ರಗಳನ್ನು ಧರಿಸಿ ಧರ್ಬೆಯ ಆಸನದ ಮೇಲೆ ಕುಳಿತಾಗ
ಅದನ್ನು ನೋಡಿದ ಆಗಸದಲ್ಲಿ ನೆರೆದಿದ್ದ ಸಮಸ್ತ ದೇವತೆಗಳು ಪುಷ್ಪ ವೃಷ್ಟಿಯನ್ನು ಮಾಡುತ್ತಾರೆ.
ನೆರೆದಿದ್ದ ಸಮಸ್ತ ಋಷಿಗಳು ರಾಜನಿಗೆ "ಹೇ ರಾಜನ್! ನಿನ್ನ ಈ ವೈರಾಗ್ಯ ಹರಿಯ ಇಚ್ಛೆ ಇಂದ ಬಂದಿದೆ.ಎಲ್ಲವು ಅವನಿಗೆ ಪ್ರೀತಿಯಾಗಿದೆ.ನೀನು ಈ ದೇಹವನ್ನು ಬಿಟ್ಟು ಹೋಗುವವರೆಗು ನಾವಿಲ್ಲಿ ಇದ್ದು ನಿನ್ನ ಆಶಯದಂತೆ ಭಗವಂತನ ನಾಮ ಸ್ಮರಣೆ ಮಾಡುವೆವು" ಎಂದು ಹೇಳುತ್ತಾರೆ.
ಆ ಸಮಯದಲ್ಲಿ ಭಗವಂತನ ಆಜ್ಞೆಯಂತೆ ರುದ್ರಾಂಶರಾದ ಶ್ರೀ ಶುಕ ಮಹರ್ಷಿಗಳು ಅಲ್ಲಿ ಬರುತ್ತಾರೆ. 
ನೋಡಲು ಹದಿನಾರು ವರ್ಷದ ಬಾಲಕನಂತೆ ಕಾಣುತ್ತಾ ಇದ್ದಾರೆ.ತಲೆ ಕೂದಲುಕೆದರಿಹೋಗಿದೆ.ನೋಡುವ ಜನರಿಗೆ ಹುಚ್ಚ ರಂತೆ ಕಾಣಿಸುತ್ತಾ ಇದ್ದಾರೆ.
ಬಂದಂತಹ ಶುಕಮುನಿಗಳ ಪಾದಕ್ಕೆ ತನ್ನ ಶಿರಸ್ಸನ್ನು ಅವರ ಪಾದಕ್ಕೆ ಇಟ್ಟು ಅವರಿಗೆ ನಮಸ್ಕಾರ ಮಾಡುತ್ತಾನೆ.
"ಶುಕ ಮಹರ್ಷಿಗಳೇ!ಇಷ್ಟು ದಿನ ರಾಜ್ಯ ಆಳುವಾಗ ನಿಮ್ಮ ದರುಶನವಾಗಲಿಲ್ಲ.ಇಂದು ಎಲ್ಲವನ್ನೂ ಪರಿತ್ಯಾಗ ಮಾಡಿ ಬಂದು ಕುಳಿತಾಗ ನಿಮ್ಮಂತಹ ಜ್ಞಾನಿಗಳ ಸಂಗಮ ದರುಶನ ವಾಗಿದೆ.ದಯವಿಟ್ಟು ಏಳುದಿನಗಳ ಕಾಲ ತಾವು ಇಲ್ಲಿಯೇ ಇದ್ದು ಭಗವಂತನ ನಾಮಸ್ಮರಣೆ,ಕೀರ್ತನೆಗಳನ್ನು ಅವನ ಕತೆಯನ್ನು ಹೇಳಬೇಕು ಎಂದು ಪ್ರಾರ್ಥನೆ ಮಾಡುತ್ತಾನೆ.ನಿಶ್ಚಿತವಾಗಿಯು ಸಾಯುವ ಮನುಷ್ಯ ಸಾಯುವುದಕ್ಕೆ ಮುಂಚೆಯೇ, ಏನನ್ನೂ ಕೇಳಬೇಕು, ಜಪಿಸಲೇ ಬೇಕು, ಇದನ್ನು ತಿಳಿಸಿ ಅಂತ ಪರಿಕ್ಷೀತರಾಜ ಶುಕ ಮುನಿಗಳ ಬಳಿ ಕೇಳಿದಾಗ 
ಅವರು ಕೊಟ್ಟ ಉತ್ತರ.
"ಶ್ರೀ ಮದ್ ಭಾಗವತ ಶ್ರವಣ.ಇದು ಪ್ರತಿಯೊಬ್ಬ ಜೀವನಿಗೆ ಸಹ ಅವಶ್ಯಕ ಬೇಕು.ಯಾಕೆಂದರೆ ಎಲ್ಲರು ಸಾಯುವವರೇ.ಆದ್ದರಿಂದ ಶ್ರೀ ಮದ್ ಭಾಗವತ ಪ್ರತಿಯೊಬ್ಬ ರಿಗು ಕಡ್ಡಾಯ.
ಎಂದು ಹೇಳುತ್ತಾರೆ.
ಹಾಗಾದರೆ ಈ ಕಲಿಯುಗದಲ್ಲಿ ಮುಕ್ತಿಗೆ ಹೋಗತಕ್ಕಂತಹ ಅಪೇಕ್ಷಿತ ಉಳ್ಳ ಜೀವಿಯು ಮಾಡಬೇಕಾದ ಕರ್ತವ್ಯ ಏನು?? ಮತ್ತು ಯಾವ ಸಾಧನೆ ಮಾಡಬೇಕು??
ಎಂದು ಕೇಳುತ್ತಾನೆ.
ಅದಕ್ಕೆ ಶುಕ ಮುನಿಗಳು ರಾಜನೇ! ಭಗವಂತನ ನಾಮ ಸ್ಮರಣೆ ಮಾಡಲೇಬೇಕು.
ಮೊದಲು ಅವನ ಬಗ್ಗೆ ನಮಗೆ ತಿಳಿಯದೇ ಇದ್ದರು ಅಥವಾ ತಿಳಿದರು ಸಹ ಹರಿಕಥಾ ಶ್ರವಣ ಮಾಡಬೇಕು.ಸದಾ ಹರಿನಾಮ ಸ್ಮರಣೆ, ಕೀರ್ತನೆ ಮಾಡಬೇಕು. ಅವನ ಗುಣಗಳನ್ನು ಕೊಂಡಾಡಬೇಕು.
ಇಂತಹ ಭಗವಂತನ ಮಹಿಮೆಯನ್ನು ಕೇಳುತ್ತಾ ಸದಾ ಮನನ ಮಾಡುತ್ತ ಇರಬೇಕು.ನಮ್ಮ ಅಂತ್ಯಕಾಲದಲ್ಲಿ ಅವನ ನಾಮ ಸ್ಮರಣೆ ಮಾಡುತ್ತಾ ಪ್ರಾಣವನ್ನು ಬಿಡಬೇಕು ಎಂದು ಹೇಳುತ್ತಾರೆ.
ಮತ್ತೆ ರಾಜ ಕೇಳುತ್ತಾನೆ.
ಇವಾಗ ನನಗೆ ಇರುವ ಸಮಯ ಬಹಳ ಕಡಿಮೆ. ಇಷ್ಟು ದಿನ ರಾಜ್ಯಭಾರ,ಸತಿ ಸುತ ಮಿತ್ರ ಭಾಂದವ,ಇವರನ್ನು ಹೊಂದಿ ವ್ಯರ್ಥವಾಗಿ ಕಾಲ ಕಳೆದುಹೋಗಿದೆ.ಮುಂದಿನ ದಾರಿ ಏನು?ಎಂದಾಗ
ಅದಕ್ಕೆ ಶುಕಮುನಿಗಳು
"ರಾಜ! ನಿನಗೆ ಶಾಪ ಬಂದಿದ್ದು ಏಳು ದಿನಗಳ ನಂತರ ಹೊರತಾಗಿ ಈ ಕ್ಷಣವಲ್ಲ ತಾನೇ??.ಇನ್ನೂ ಸಮಯವಿದೆ.
ಖಟ್ವಾಂಗ ಎಂಬ ರಾಜ ದೇವತೆಗಳ ಪರವಾಗಿ ದಾನವರ ಜೊತೆಯಲ್ಲಿ ಹೋರಾಟ ಮಾಡಿ ಅವರಿಗೆ ಜಯವನ್ನು ತಂದಾಗ ಅವರು ವರವನ್ನು  ಕೊಡುವೆವು  ಕೇಳು ಎಂದಾಗ ಅದಕ್ಕೆ ರಾಜನು ತನ್ನ ಆಯಸ್ಸು ಎಷ್ಟು ಇದೇ ಎಂದು ಕೇಳಿದಾಗ ಅದಕ್ಕೆ ಅವರು ಒಂದು ಮಹೂರ್ತ ಇದೆ ಅಂತ ಹೇಳುತ್ತಾರೆ. ಒಂದು ಮಹೂರ್ತ ಎಂದರೆ 48ನಿಮಿಷಗಳ ಕಾಲ.
ಆಗ ಖಟ್ವಾಂಗ ರಾಜ ಮರುಮಾತನಾಡದೇ ರಾಜ್ಯ ತ್ಯಾಗ ಮಾಡಿ ಹಿಮಾಲಯ ಪರ್ವತಕ್ಕೆ ಹೋಗಿ ಉಳಿದ ಕಾಲದಲ್ಲಿ ಭಗವಂತನ ನಾಮ ಸ್ಮರಣೆ ಮಾಡುತ್ತಾ ದೇಹವನ್ನು ತ್ಯಾಗ ಮಾಡಿದ್ದಾನೆ.
ಅದರಂತೆ ನಿನಗೆ ಸಮಯ ಬಹಳ ಇದೆ.ಅದಕ್ಕೆ ಸಂತೋಷಪಡು. ಚಿಂತಿಸುವ ಅಗತ್ಯವಿಲ್ಲ. ಪರಮ ಮಂಗಳಕರವಾದ ಭಾಗವತ ವನ್ನು ಕೇಳು.ಇದು ಅಂತ್ಯಕಾಲದಲ್ಲಿ ನಿನಗೆ ಹರಿಯನಾಮ ಸ್ಮರಣೆ ಬರುವದು ಎಂದು ಹೇಳುತ್ತಾರೆ.
 ಈ ಭಾಗವತಕ್ಕೆ ಪ್ರತಿಪಾದ್ಯನಾಗಿರ ತಕ್ಕಂತಹವನು ವಾಸುದೇವ ರೂಪಿ ಪರಮಾತ್ಮ...
ಅವನು ಸರ್ವಜ್ಞ ನಾಗಿದ್ದಾನೆ.ಬ್ರಹ್ಮ ದೇವರಿಗೆ ವೇದವನ್ನು ಉಪದೇಶ ಮಾಡಿದ್ದಾನೆ.
ನಮಗೆ ಬರುವ ತಾಪಗಳನ್ನು ಪರಿಹಾರ ಮಾಡತಕ್ಕವನು ಒಬ್ಬನೇ ಅವನೇ ಭಗವಂತ.
ಅವನು ಮಂಗಳಪ್ರದ...
ಅಂತಹ ಭಾಗವತ ವನ್ನು ನಿತ್ಯ ಶ್ರವಣ ಪಠಣ ಮಾಡೋಣ..
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ||ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
*******

ಶ್ರೀಕೃಷ್ಣನ ಪ್ರತಿಮಾರೂಪವೇ ಭಾಗವತ

1-2 ಸ್ಕಂಧಗಳು ಶ್ರೀಕೃಷ್ಣನ ಪಾದಗಳು 
3-4 ಸ್ಕಂಧಗಳು ಶ್ರೀಕೃಷ್ಣನ ತೊಡೆಗಳು 
5 ನೆಯಸ್ಕಂಧವು ಶ್ರೀಕೃಷ್ಣನ ನಾಭಿಪ್ರದೇಶ 
6 ನೇಯಸ್ಕಂಧವು ಶ್ರೀಕೃಷ್ಣನ ಹೃದಯ 
7-8 ಸ್ಕಂಧಗಳು ಶ್ರೀಕೃಷ್ಣನ ಬಾಹುಗಳು
 9 ನೇಯಸ್ಕಂಧವುಶ್ರೀಕೃಷ್ಣನ ಕಂಠದೇಶ 
10 ನೇಯಸ್ಕಂಧವು ಶ್ರೀಕೃಷ್ಣನ ಮುಖ 
11 ನೆಯ ಸ್ಕಂಧವು ಶ್ರೀಕೃಷ್ಣನ ಲಲಾಟ(ಹಣೆ) 
12 ನೆಯ ಸ್ಕಂಧವು ಶ್ರೀಕೃಷ್ಣನ ಶಿಖಾ
 ಹೀಗೆ ಭಾಗವತದ  12 ಸ್ಕಂಧಗಳು ಶ್ರೀಕೃಷ್ಣಪರಮಾತ್ಮನ ಪ್ರತಿಮಾರೂಪದಲ್ಲಿವೆ.
       


ಶ್ರೀಐತರೇಯ...
************

ರಮಾತ್ಮನು ತಾನೇ ಸ್ವತಃ ರಚಿಸಿದ ಮಹಾನ್ ಗ್ರಂಥ.
ಇದು ದೇವಲೋಕದ ಅಮೃತಕ್ಕಿಂತಲು ಮಿಗಿಲು.
ಇದಕ್ಕೆ ಸಮನಾದದು ಯಾವುದು ಇಲ್ಲ.
ಸಿಹಿಯುಳ್ಳ ಪಾನೀಯ,ಕುಡಿದಾಗ ಮನಸ್ಸು ಆನಂದ ಗೊಳ್ಳಬಹುದು.
ಆದರೆ 
ಅತಿಯಾಗಿ ಕುಡಿದಾಗ ಅದರಿಂದ ಏನಾದರು ಒಂದು side effect ಆಗಿ ಚೂರು ಆರೋಗ್ಯ ವ್ಯತ್ಯಾಸವನ್ನು ಕಾಣಬಹುದು.
ಆದರೆ 
ಈ ಶ್ರೀ ಮದ್ಭಾಗವತ ಅಮೃತ ಎಂಬ ಸಿಹಿಯಾದ ಪಾನೀಯ ಎಷ್ಟು ಬಾರಿಯಾದರು ದಿನಕ್ಕೆ ಪಾನ ಮಾಡಿರಿ.ಇದರಿಂದ ಯಾವುದೇ side effect ಇಲ್ಲ.
ಇದರಿಂದ ಲಾಭವೇ ಹೊರತು ನಷ್ಟ ಇಲ್ಲ.

ಈ ಗ್ರಂಥ ಪಾರಾಯಣ ಫಲ.
೧. 
ಕಾಲ ದೇಶ ಗಳಿಂದ ಮಾಡಿದ ಪಾಪಗಳನ್ನು ಸಹ ಇದು ಭಕ್ತಿಯಿಂದ ಶ್ರವಣ,ಪಠಣ  ಮನನ ಮಾಡಿದರೆ ಕಳೆದು ಹಾಕುತ್ತದೆ.
ಇದಕ್ಕೆ ಪರಿಕ್ಷೀತ ಮಹಾರಾಜ ಸಾಕ್ಷಿ.

೨.ಯಾರ ಮನೆಯಲ್ಲಿ ಹಿರಿಯರು ಹಿಂದೆ ಯಾರಾದರು ಸತ್ತು ಹೋದಾಗ,ಅವರಿಗೆ ಸರಿಯಾದ ರೀತಿಯಲ್ಲಿ ಕರ್ಮ ಸಂಸ್ಕಾರ ನಡೆಯದೇ ಹೋದಾಗ,ಅವರು ಪ್ರೇತವಾಗಿ ಉಳಿದರೆ,ಅದರ ನಿವಾರಣೆ ಗೋಸ್ಕರ ವಾಗಿ ಸಹ ಶ್ರೀ ಮದ್ ಭಾಗವತ ಪಾರಾಯಣ,ಶ್ರವಣವನ್ನು ಮಾಡಲು ಹೇಳುತ್ತಾರೆ.
ಇದಕ್ಕೆ  
ಇದರಲ್ಲಿ ಬರುವ ಗೋಕರ್ಣ ಹಾಗು ಅವನ ಸಹೋದರನ ನ ಕತೆಯೇ ಸಾಕ್ಷಿ.

೩.ಮೋಕ್ಷ ಸಾಧನೆಗಾಗಿ ಈ ಭಾಗವತ ಶ್ರವಣ.
ಇದಕ್ಕೆ ಪರಿಕ್ಷೀತ ಮಹಾರಾಜ ಪ್ರತ್ಯಕ್ಷವಾಗಿ ಉದಾಹರಣೆ.

ಶ್ರೀ ಮದ್ ಭಾಗವತ ದಲ್ಲಿ ೧೮,೦೦೦ ಗ್ರಂಥ ಶ್ಲೋಕ ಗಳಿವೆ..
ಶ್ರೀ ಮದ್ ಭಾಗವತವು ಹನ್ನೆರಡು ಸ್ಕಂಧಗಳಿಂದ ಕೂಡಿದೆ.
ಪರೀಕ್ಷಿತ ಮಹಾರಾಜ ಹಾಗು ಶುಕ ಮುನಿಗಳನಡುವಿನ ಸಂವಾದ ರೂಪವಾಗಿದೆ.
ಪ್ರತಿ ಒಂದು ಸಾವಿರ ಗ್ರಂಥಗಳಿಗು ಒಂದೊಂದು ಭಗವದ್ ರೂಪ ಇದೆ.
ಈ ರೀತಿಯಲ್ಲಿ ೧೮,೦೦೦ ಗ್ರಂಥ ಶ್ಲೋಕಗಳಿಗೆ ೧೮ ಭಗವದ್ ರೂಪ ಗಳಿವೆ.
ಹನ್ನೆರಡು ಸ್ಕಂಧಗಳಿಗೆ ಹನ್ನೆರಡು ಭಗವಂತನ ರೂಪಗಳು ಇವೆ.

ಕೇಶವ, ನಾರಾಯಣ,ಮಾಧವ,
ಗೋವಿಂದ,ವಿಷ್ಣು, ಮಧುಸೂಧನ,ತ್ರಿವಿಕ್ರಮ, ವಾಮನ,ಶ್ರೀಧರ, ಹೃಷಿಕೇಶ, ಪದ್ಮನಾಭ, ಮತ್ತು ದಾಮೋದರ,ಇವೇ ಭಗವಂತನ ಆ ಹನ್ನೆರಡು ರೂಪಗಳು..

ಈ ಭಾಗವತ ಶ್ರವಣ,ಪಾರಾಯಣದ ಫಲ ಗಂಗಾ ನದಿ ಸ್ನಾನಕ್ಕಿಂತಲು ಮಿಗಿಲು.
ಗಂಗಾನದಿಯ ಸ್ನಾನ ಮಿಂದವರ ಪಾಪವನ್ನು ತೊಳೆದರೆ,
ಶ್ರೀ ಮದ್ ಭಾಗವತ ಸಂಸಾರದ ಜಿಡ್ಡು ನಾಶಪಡಿಸಿ ನಮಗೆಲ್ಲ ಪಾಪವನ್ನು ಲೇಪನ ವಿಲ್ಲದಂತೆ ಮಾಡುವದು..
ಗಂಗಾನದಿಯನ್ನು  ನಮ್ಮ ಅವಶ್ಯಕತೆ ಬೇಕಾದಷ್ಟು ಶೇಖರಣೆ ಮಾಡಲು ಒಂದು ಪಾತ್ರೆ ಬೇಕು.
ಆದರೆ 
ಈ ಭಾಗವತಕ್ಕೆ ಸಂಗ್ರಹ ಮಾಡಲು ನಮ್ಮ ತಲೆ ಎನ್ನುವ ಪಾತ್ರೆ ಮಾತ್ರ ಸಾಕು.

ಗಂಗಾ ನದಿಯಲ್ಲಿ  ಇಡೀ ದೇಹವನ್ನು ಮುಳುಗಿದಾಗ ಮಾತ್ರ ಸ್ನಾನ ಮಾಡಿದ ಫಲ ಬರುತ್ತದೆ.
ಆದರೆ 
ನಿತ್ಯದಲ್ಲಿ ಈ ಭಾಗವತ ಇಡೀ ಗ್ರಂಥದ,ಎಲ್ಲಾ ಶ್ಲೋಕಗಳನ್ನು ಪಾರಾಯಣ ಮಾಡಲು ಆಗದಿದ್ದರೆ,ಕೊನೆಗೆ ಒಂದು ಶ್ಲೋಕವಾದರು ಹೇಳುವದು.ಅದು ಸಹ ಆಗದಿದ್ದರೆ
ಕೊನೆಯಲ್ಲಿ 
ಶ್ಲೋಕದ ಕಾಲುಭಾಗ ವಾದರು ಸರಿ,ಕಿವಿಗೊಟ್ಟು ಭಕ್ತಿ ಇಂದ ಕೇಳಿದರೆ,ಸಾವಿರ ಗೋದಾನದ ಫಲ ಬರುತ್ತದೆ.
ಶ್ರೀಹರಿಯ ಪ್ರೀತಿ ಎಂಬ ಉಡುಗೊರೆ ನಮಗೆ ಸಿಗುತ್ತದೆ..

ಬರಿಯ ಕಾಲುಭಾಗದಷ್ಟು ಶ್ರವಣ ಮಾಡಿದರೆ ನಮಗೆ ಕಾವಲು ಕಾಯುವ, ನಮ್ಮನ್ನು ರಕ್ಷಣೆ ಮಾಡುವ,ನಮ್ಮ ಕುಲವನ್ನು ಉದ್ದಾರ ಮಾಡುವ ಈ ಭಾಗವತಕ್ಕೆ ಎಣೆಯುಂಟೆ??..

ಗಂಗಾ ಸ್ನಾನ ಸಂಕಲ್ಪ ಪೂರ್ವಕವಾಗಿ ಮಾಡಿದರೆ ಮಾತ್ರ ಫಲ.
ಅದಕ್ಕೆ ಮೋಕ್ಷ ನೀಡಲು ಸಾಧ್ಯವಿಲ್ಲ..

ಆದರೆ ಶ್ರೀ ಮದ್ ಭಾಗವತ ಹಾಗಲ್ಲ ..ನಮಗೆ ಮೋಕ್ಷವನ್ನು ಸಹ ಕೊಡುತ್ತದೆ..
ಶ್ರೀ ಮದ್ ಭಾಗವತ ವನ್ನು ರಚಿಸಿದವರು ಶ್ರೀ ವೇದವ್ಯಾಸರು.
ರಚನೆಯನ್ನು ಮಾಡಿದ ಸ್ಥಳ ಶಮ್ಯಾಪ್ರಾಸ...
(ಸರಸ್ವತಿ  ಮತ್ತು ಅಲಕನಂದಾ(ಗಂಗಾದೇವಿ ಇನ್ನೊಂದು ಹೆಸರು) ನದೀ ಸಂಗಮದ ಸ್ಥಳ.)
ಇದನ್ನು ಶ್ರೀವೇದವ್ಯಾಸ ರಿಂದ ಕೇಳಿದವರು ಗಂಗಾಧರ ನಾದ ಶ್ರೀಶುಕ ಮುನಿಗಳು...
ಅವರು ಉಪದೇಶ ಮಾಡಿದ್ದು ಪರೀಕ್ಷಿತ ರಾಜನಿಗೆ ಗಂಗಾನದಿಯ ತಟದಲ್ಲಿ.
ಹಾಗಾಗಿ ಪರಮ ಪವಿತ್ರ ವಾದುದು ಈ  ಶ್ರೀ ಮದ್ಭಾಗವತ ಪುರಾಣ..
"ಇದನ್ನು ಯಾರು ಹೇಳುವರೊ", ಮತ್ತು 
"ಯಾರು ಕೇಳುವರೊ",
ಮತ್ತು 
"ಯಾರು ಹೇಳಿಸುವರೊ", "ಈ ಮೂವರನ್ನು ಪಾವನಗೊಳಿಸಿ ಉದ್ದಾರ ಮಾಡುತ್ತದೆ."
ಇಂತಹ ಪರಮ ಮಂಗಳಕರವಾದ ಶ್ರೀ ಮದ್ಭಾಗವತ ವನ್ನು ವಿಶೇಷವಾಗಿ ಪಾರಾಯಣ , ಮತ್ತು ಶ್ರವಣವನ್ನು ಮಾಡೋಣ.
ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಪ್ರಯತ್ನ ಪಡೋಣ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|

|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
**********

ಬರಹ:- ಗಣೇಶ್ ಗೋಸಾವಿ-->
ಅಮರ ಸಿಂದೂದ್ಭವ, ಗಂಗೆಯನ್ನು ಮುಟ್ಟಿದರೇನೆ ಪಾವಿತ್ರ್ಯ ಅಂಥಾ ಗಂಗೆಯಲ್ಲಿ ಹುಟ್ಟಿದವನು ಗಂಗೆಯಪುತ್ರನಾದ "#ಭೀಷ್ಮಾಚಾರ್ಯರು"..
ಮೃತ್ಯುವನ್ನು ತಾನಾಗಿಯೇ ಬಾ ಎಂದು ಕರೆದರೇ ಬರುತ್ತಿತ್ತು ಮೃತ್ಯು.....

ಇಂಥಾ ಶಕ್ತಿಸಂಪನ್ನನಾದವರು ಯಾಕೆ ಕೊನೆಗಾಲದಲ್ಲಿ ಅಂದರೇ ಸಾಯುವ ಸಂಧರ್ಭದಲ್ಲಿ 
" ಬಾಣಗಳ ಮೇಲೆ ಮಲ್ಕೊಂಡು, ಎಷ್ಟೋ ತಿಂಗಳು ಗಾಯಗಳ ನೋವನ್ನು ಅನುಭವಿಸುತ್ತ ಮಲಗಿಬಿಟ್ಟರಲ್ಲ...." ಎಂದು ನಮಗೆಲ್ಲ ಅನ್ನಿಸಬಹುದು.

ಅವರು ನಿಜವಾಗಿಯೂ ಒಳ್ಳೆಯವರಾಗಿದ್ರೇ ಈ ದುರಾವಸ್ಥೆಯಲ್ಲಿ ಯಾಕೆ ಪ್ರಾಣ ಬಿಡಬೇಕಾಗಿತ್ತು....?

(ಇದಕ್ಕೆ ಕೆಲವರು ಉತ್ತರಾಯಣ ಬರಲಿ ಎಂದು ಕಾಯುತ್ತಿದ್ದರು ಎಂದು ಹೇಳುವುದುಂಟು ಇರಬಹುದು, ಆದರೆ ಇನೊಂದು  ಕಥೆ ಏನು ಎನ್ನುವುದೇ ಮುಂದಿನ ಕಥೆ ಓದಿ...)

      ಬ್ರಹ್ಮನ ಆಸ್ಥಾನ, ಎಲ್ಲ ಋಷಿಗಳು ಕುಳಿತುಕೊಂಡಿದ್ದಾರೆ 
( ಋಷಿಗಳು ಎಂದರೇ ಬ್ರಹ್ಮ ಲೋಕದಲ್ಲಿ ಕುಳಿತುಕೊಳ್ಳುವಂತಹ ಮಹಾ ತಪಸ್ವಿಗಳಾದ ದೊಡ್ಡ ದೊಡ್ಡ ಋಷಿಗಳು)

     ಆ ಆಸ್ಥಾನಕ್ಕೆ ಗಂಗೆ ಬಂದಳು, ಗಂಗೆ ಬಂದಾಗ ಸ್ವಲ್ಪ ಗಾಳಿ ಬಿಸಿತು, ಗಾಳಿ ಜೋರಾಗಿ ಬೀಸಿದಾಗ, ಆಕೆಯ ಸೀರೆ ಸ್ವಲ್ಪ ಅಸ್ತವ್ಯಸ್ತವಾಯಿತು.  ಅಲ್ಲಿ "#ಮಹಾಭಿಷಿಕ್" ಎನ್ನುವಂತಹ ಒಬ್ಬ ರಾಜ (ಋಷಿ) ಅಚಾತುರ್ಯದಿಂದ ನೋಡಿದ, 

ಆಗ
ಬ್ರಹ್ಮದೇವರು:- "ನನ್ನ ಸಭೆಗೆ ಬರಬೇಕಾದರೇ ಕೆಲವು ಯೋಗ್ಯತೆಗಳು ಇರಬೇಕು, ಸಂಸ್ಕೃತಿಯ ಆಕಾರವನ್ನು ಹೊಂದಿ ಬರಬೇಕು, ಸಭ್ಯತೆಯನ್ನು ಕಲಿತಿರಬೇಕು, ಯಾವುದೇ ಕಾರಣದಿಂದಲೂ ಆ ಸಮಯದಲ್ಲಿ ನೋಡಬಾರದು, ನೋಡಿದ್ದಿಯಾ ಆದ್ದರಿಂದ ನಿನಗೆ ಚಾಪಲ್ಯವಿದೆ ಅಂತ ಅರ್ಥ.  ಹಾಗಾಗಿ ನೀನು ಭೂಲೋಕದಲ್ಲಿ ಮನುಷ್ಯನಾಗಿ ಹುಟ್ಟಿ ಕಷ್ಟವನ್ನ ಅನುಭವಿಸು..."

ಹಾಗೆ
ಗಂಗೆಯನ್ನೂ ನೋಡಿ...

ಬ್ರಹ್ಮ:- "ನೀನೂ ನನ್ನ ಸಭೆಯಲ್ಲಿ ಇರುವುದಕ್ಕೆ ಯೋಗ್ಯತೆಯವಳಲ್ಲ.  ಆದ್ದರಿಂದ ನೀನೂ ಭೂಲೋಕದಲ್ಲಿ ಹುಟ್ಟು ಎಂದು ಶಾಪ ಕೊಟ್ಟರು..."

     ಹೀಗಾಗಿ ಗಂಗೆ ಕೆಳಗೆ ಇಳಿದು ಬರುತ್ತಿರುವಾಗ ಪಕ್ಕದಲ್ಲಿ ಎಂಟು ಜನ ವಸುಗಳೂ ಇಳಿದು ಬರುತ್ತಿದ್ದರು. 

  ಅವರನ್ನೆಲ್ಲ ನೋಡಿದ
ಗಂಗೆಯು:- "ಯಾಕೆ ಅಷ್ಟವಸುಗಳು (ದೇವತೆಗಳು) ಕೆಳಗೆ ಬೀಳ್ತಿದ್ದೀರ...?" ಎಂದು ಅವರನ್ನೆಲ್ಲ ಕೇಳಿದಳು.

  ಆಗ ಅವರು ತಮ್ಮ ಕಥೆಯನ್ನು ಹೇಳಿದರು....

     "ನಾವೆಲ್ಲರೂ ( ಅಷ್ಟವಸುಗಳು) ನಮ್ಮ ಹೆಂಡತಿಯ ಜೊತೆ ವನವಿಹಾರಕ್ಕೆ ಹೋಗಿದ್ದೆವು.  "#ವಸಿಷ್ಠಮಹರ್ಷಿ"ಗಳ ಆಶ್ರಮಕ್ಕೆ ಹೋದೆವು.  ಅಲ್ಲಿ #ನಂದಿನಿ ಎನ್ನುವ ಹಸು ಓಡಾಡುತ್ತಿದ್ದುದನ್ನು ಕಂಡು,
"ನನಗೆ ಭೂಲೋಕದಲ್ಲಿ ಒಬ್ಬ ಸ್ನೇಹಿತೆ ಇದ್ದಾಳೆ. ಉಷಿನರ ಮಗಳು ಅವಳು, ನಾನು ಅಮರಳಾಗಿದ್ದೇನೆ, ವಸಿಷ್ಠರ ಆಶ್ರಮದಲ್ಲಿ ಇರುವ "#ನಂದಿನಿ" ಎಂಬ ಹಸುವಿನ ಹಾಲನ್ನು ನನ್ನ ಸ್ನೇಹಿತೆ ಕುಡಿದರೇ ಅಮರಳಾಗುವುದಿಲ್ಲ, ಆದರೇ ಸುಮಾರು "ಹತ್ತುಸಾವಿರ ವರ್ಷಗಳು" ಬದುಕಬಲ್ಲಳು.  ಹಾಗಾಗಿ ಹಸುವನ್ನೋ ಅಥವಾ ಅದರ ಹಾಲನ್ನಾದರೂ ತೆಗೆದುಕೊಂಡು ಬನ್ನಿ" ಅಂತ.
ಹೀಗೆ
ನಮ್ಮಲ್ಲಿ " ದ್ಯೂ" ಎನ್ನುವ ವಸುವಿನ  ಹೆಂಡತಿ ಕೇಳಿಕೊಂಡಳು...
(ಹೆಂಡತಿಯ ಮಾತಿಗೆ ಒಲಿಯದ ಗಂಡ ಯಾರಿದ್ದಾರೆ...?)

     ದ್ಯೂ ಅವನ ಸಹೋದರರ ಜೊತೆಗೆ ವಸಿಷ್ಠರ ಆಶ್ರಮಕ್ಕೆ ಹೋಗಿ, ಸ್ವಲ್ಪವೂ ಸಭ್ಯತೆ ಇಲ್ಲದೇನೆ ಮತ್ತು ವಸಿಷ್ಠರನ್ನ ಒಂದು ಮಾತು ಕೇಳದೇನೆ, ನಂದಿನಿಯ ಕೊರಳಿಗೆ ಹಗ್ಗವನ್ನ ಕಟ್ಟಿ ಎಳೆದೊಯ್ದರು...

ವಸಿಷ್ಠರು ಆಶ್ರಮಕ್ಕೆ ಬಂದಾಗ ಹಸು ಕಾಣಿಸಲಿಲ್ಲ ಕಣ್ಣುಮುಚ್ಚಿ ತಪಃಶಕ್ತಿಯಿಂದ ನೋಡಿದರು, ಎಲ್ಲ ಗೊತ್ತಾಯ್ತು ಆಗ,
ವಸಿಷ್ಠರು:- "ನೀವು ನನ್ನ ಹಸುವನ್ನ ಕದ್ದಿದ್ದೀರಾಗಿ ಯಥಾ ಪ್ರಕಾರ ಮನುಷ್ಯರಾಗಿ ಹುಟ್ಟಿ" ಎಂದು ಶಾಪ ಕೊಟ್ಟರು...

( ಮನುಷ್ಯರಾಗಿ ಹುಟ್ಟಬೇಕು ಎಂದರೇ ಕಷ್ಟಪಡಬೇಕು ಎಂದು ಅರ್ಥ)

ಅಷ್ಟ ವಸುಗಳು ಋಷಿಗಳ ಕಾಲಿಗೆ ಬಿದ್ದು " ನಮ್ಮದು ತಪ್ಪಾಯಿತು ದಯಮಾಡು ಕ್ಷಮಿಸಿ ಶಾಪವನ್ನ ಹಿಂದಕ್ಕೆ ಪಡೆದುಕೊಳ್ಳಿ" ಎಂದು ಬೇಡಿಕೊಂಡರು....
 
ವಸಿಷ್ಠರು:-"ಹಾಗಾದರೇ ಒಂದು  ಶಾ    ಪವನ್ನ ಕೊಡುತ್ತಿದ್ದೇನೆ.  ನೀವು ಯಾರು ಎಷ್ಟು ಬೇಗ ಸಾಯುತ್ತೀರೋ ಅಷ್ಟು ಬೇಗ ವಾಪಾಸು ಬಂದುಬಿಡ್ತೀರ, ನೀವು ಯಾಕೆ ಹುಟ್ಟುತ್ತಿದ್ದೀರ ಅಂದ್ರೇ ಸಾಯಲಿಕ್ಕೆ ಹುಟ್ಟತ್ತಿದ್ದೀರಿ, ಆದರೇ ಒಬ್ಬನು ಮಾತ್ರ ಹಾಗೆ ಬರುವುದಕ್ಕೆ ಆಗುವುದಿಲ್ಲ, ಯಾರೆಂದರೇ ಅವನು "ದ್ಯೂ".   ಯಾಕೆಂದರೇ ತನ್ನ ಹೆಂಡತಿಯ ಮಾತನ್ನು ಕೇಳಿ ಕದ್ದನಲ್ಲ ಮತ್ತು ಎಳೆದುಕೊಂಡು ಹೋಗುವಾಗ 
"ತುಂಬಾ ಮುಳ್ಳಿರುವ ಒಂದು ದೊಣ್ಣೆಯಿಂದ ಹೊಡೆದ"
 ಆದ್ದರಿಂದ ಅವನು ಮುಳ್ಳಿನ ಅಭಾಸವನ್ನು ಅನುಭವಿಸುವ ವರೆಗೂ ವಾಪಾಸು ಬರುವಹಾಗಿಲ್ಲ..

ಈ ಕಥೆಯನ್ನ ಅಷ್ಟವಸುಗಳೆಲ್ಲರು ಗಂಗೆಗೆ ಹೇಳಿ, ಪ್ರಾರ್ಥನೆ ಮಾಡಿದರು...

"ಅಮ್ಮಾ, ಹೇಗಿದ್ದರೂ ನೀನು ಭೂಮಿಗೆ ಇಳಿತಾ ಇದ್ದಿಯ.  ಹಾಗಾಗಿ ದಯವಿಟ್ಟು ನಿನ್ನ ಹೊಟ್ಟೆಯಲ್ಲಿ ನಾವು ಹುಟ್ಟುವುದಕ್ಕೆ ಒಪ್ಪಿಕೊ ಮತ್ತು ನಾವು ಹುಟ್ಟಿದಾಗಲೇ ನಮ್ಮನ್ನ ಸಾಯಿಸು ನಾವು ವಾಪಾಸು ಹೋಗುತ್ತೇವೆ.  ಆದರೇ ಒಬ್ಬನನ್ನ ಮಾತ್ರ ಹಾಗೆ ಸಾಯಿಸಬಾರದು ಅದು ಯಾರೆಂದರೇ ದ್ಯೂ" ಎಂದು ಬೇಡಿಕೊಂಡರು.

ಗಂಗೆ ಒಪ್ಪಿಕೊಂಡಳು, ಭೂಮಿಗೆ ಬಂದಳು.  
 ಶಂತನು ಗಂಗೆಯನ್ನು ನೋಡಿದ, ಮದುವೆಯಾಗಲು ಕೇಳಿದ.  

ಗಂಗೆ:- "ನೀನು ನನ್ನ ಮದುವೆಯಾಗಬೇಕೆಂದರೇ ನಾನು ಮಾಡತಕ್ಕಂತಹ ಯಾವುದೇ ಕೆಲಸಕ್ಕೆ ನೀನು ಇಲ್ಲ ಎನ್ನಬಾರದು, ನೀನು ಇಲ್ಲ ಎಂದರೇ ನಾನುಬಿಟ್ಟು ಹೋಗುತ್ತೇನೆ" ಎಂದಳು.

ಪ್ರೇಮದ ಶಿಖರದಲ್ಲಿದ್ದ ಶಂತನು "ಹೂ, ಹೌದು" ಎಂದು ಮದುವೆಯಾದ.  

ನಂತರ...
ಮೊದಲನೆಯ ಮಗು ಹುಟ್ಟಿತು ಗಂಗೆ ನದಿಯಲ್ಲಿ ಹಾಕಿದಳು,
ಎರಡನೆಯದು ಹುಟ್ಟಿತು ಮತ್ತೆ ನೀರಿನಲ್ಲಿ ಹಾಕಿದಳು,
ಮೂರನೆಯದು, ನಾಲ್ಕನೆಯದು, ಐದು, ಆರು, ಏಳನೆಯದು ಮಗು ಹುಟ್ಟಿತು ಒಬ್ಬೊಬ್ಬರನ್ನೇ ನೀರಲ್ಲಿ ಹಾಕಿದಳು. 
ಶಂತನು ಇದನ್ನೆಲ್ಲ ನೋಡ್ತಾ ಇದ್ದವನು ಮನಸ್ಸಿಗೆ ಸಮಾಧಾನವಾಗದೇ ಎಂಟನೆಯದು ಹುಟ್ಟಿದಾಗ ಗಂಗೆ ನದಿಯಲ್ಲಿ ಹಾಕುವ ಸಮಯದಲ್ಲಿ,
 ಗಂಗೆಯ ಕೈ ಹಿಡಿದು, "ಒಬ್ಬನನ್ಬಾದರೂ ನನಗೆ ಬಿಟ್ಟುಕೊಡು" ಎಂದು ಕೇಳಿದ. 

 ಗಂಗೆ:- "ಸರಿ ತೆಗೆದುಕೋ" ಎಂದು ಕೊಟ್ಟಳು.

  ಗಂಗೆ ಕಾಣದೆ ಹೋದಳು.  ಕೊನೆಗೆ ಹುಟ್ಟಿರುವ ಮಗನೆ "#ದೇವವ್ರತ" ಅವನೆ ಮುಂದೆ #ಭೀಷ್ಮನಾದ....

    ಆ ಭೀಷ್ಮ ಭೀಷ್ಮಾಚಾರ್ಯರಾಗಿ ಹತ್ತು ದಿನಗಳವರೆಗೆ ಯುದ್ಧ ಮಾಡಿದ ಮೇಲೆ ಶರಶಯ್ಯೆಯಲ್ಲಿ ಮಲಗಿದ್ದಾರೆ ಎಂದರೇ, ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಕ್ಕೆ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ...

( ಈ ಜನ್ಮದಲ್ಲಿ ಏನು ಮಾಡುತ್ತಿದ್ದೀರ ಎನ್ನುವುದಕ್ಕೆ ಮುಂದಿನ ಜನ್ಮ ಹೇಗೆ ಎನ್ನುವುದು ನಿರ್ಣಯವಾಗುತ್ತದೆ ಅಥವಾ ಬದುಕು ಹೇಗೆ ಎಂದು ನಿರ್ಣಯವಾಗುತ್ತದೆ.  ಆದ್ದರಿಂದ ಭೀಷ್ಮಾಚಾರ್ಯರು ಬಹಳ ದೊಡ್ಡ ವ್ಯಕ್ತಿ ಆಗಿದ್ದರೂ, ಆವರು ಹಿಂದಿನ ಜನ್ಮದಲ್ಲಿ ಮಾಡಿದ  ಪಾಪ ಕಾರ್ಯಕ್ಕೆ ಈಗಿನ ಜನ್ಮದಲ್ಲಿ ಶರಶಯ್ಯೆಯಲ್ಲಿ ಮಲಗಬೇಕಾಯಿತು....)

                       -:ಶ್ರೀಕೃಷ್ಣಾರ್ಪಣಮಸ್ತು:-

ಬರಹ:- ಗಣೇಶ್ ಗೋಸಾವಿ
*****

ಜೀವನು ತನ್ನ ಜೋತೆಗಿರುವ ಭಗವಂತನನ್ನು ಏಕೆ ತಿಳಿದಿಲ್ಲ

ದ್ವಾಸುಪರ್ಣ ಸಯುಜಾ ಸಖಾಯ ಎಂಬ ಶ್ರುತಿಯು ಜೀವಾತ್ಮ ಹಾಗೂ ಪರಮಾತ್ಮರೆಂಬ ಎರಡು ಪಕ್ಷಿಗಳು ಒಂದೇ ಶರೀರದಲ್ಲಿ ಪರಸ್ಪರ ಸಖ್ಯರೂಪದಿಂದ ಇರುತ್ತವೆಂದು ತಿಳಿಸುತ್ತದೆ .ಆದರೆ ಜೀವಾತ್ಮನೆಂಬ ಪಕ್ಷಿಯು ಭಗವಂತನ ಜೋತೆಯಲ್ಲಿ ಇದ್ದರೂ ಆ ಭಗವಂತನನ್ನು ತಿಳಿಯುವುದೇ ಇಲ್ಲ.. ಇದಕ್ಕೆ ಕಾರಣವನ್ನು ಶ್ರೀಮದ್ ಭಾಗವತದಲ್ಲಿ ತಿಳಿಸಿಕೊಟ್ಟಿದ್ದಾರೆ .

 ನ ಯಸ್ಯ ಸಖ್ಯಂ ಪುರುಷೋ ವೇತ್ತಿ ಸಖ್ಯುಃ
ಸಖಾ ವಸನ್ ಸಂವಸತಃ ಪುರೇsಸ್ಮಿನ್ |
ಗುಣೋಯಥಾ ಗುಣಿನೋವ್ರಕ್ಥದೃಷ್ಟಿ
ಸ್ತಸ್ಮೈ ಮಹೇಶಾಯ ನಮಸ್ಕೋರಮಿ ||

ಸ್ನೇಹಿತನಾದ ಜೀವನು ತನ್ನ ಕರ್ಮಾನುಗುಣವಾಗಿ ಶ್ರೀಹರಿಯಿಂದ ಕೊಡಲ್ಪಟ್ಟ ಈದೇಹದಲ್ಲಿ ಇರುತ್ತ ದುಃಖಾದ್ಯನುಭವರಹಿತವಾಗಿ ಜೋತೆಜೋತೆಗೆ ವಾಸಿಸುವ ಸ್ನೇಹಿತನಾದ ಶ್ರೀಹರಿಯ ಶರೀರೆಂದ್ರಿಯ ಪ್ರವರ್ತಕರೂಪವಾದ ಸ್ನೇಹವನ್ನು ತಿಳಿಯುವುದೆ ಇಲ್ಲ ಕಾರಣವೇನು ? ಎಂದರೆ ಉದಾಹರಣ ಪೂರ್ವಕವಾಗಿ ತಿಳಿಸಿಕೊಡುತ್ತಾರೆ .ಸ್ಥೂಲಜ್ಞಾನಿಯಾದ ಸೇವಕನು ರಾಜನ ಸ್ನೇಹವನ್ನು (ಇವನು ತನ್ನ ಸ್ನೇಹಿತನೆಂಬ ರಾಜನ ಗಂಭಿರವಾದ ಅಭಿಪ್ರಾಯವನ್ನು )ತಿಳಿಯದಿರುವಂತೆ
ಶ್ರೀಹರಿಯು ಮುಕ್ತಿಯೋಗ್ಯಜೀವನನ್ನು ತನ್ನ ಸ್ನೇಹಿತನೆಂದು ತಿಳಿದಿರುವ ಅಭಿಪ್ರಾಯವನ್ನು ಜೋತೆಗಿರುವ ಸ್ಥೂಲ ಜ್ಞಾನಿಯಾದ ಸಾತ್ವಿಕ ಜೀವನು ತಿಳಿಯುವುದಿಲ್ಲ .
         ಭಾಗವತ ಪುರಾಣ 6-4-24

 ಯಥಾ ರಾಜ್ಞಾಃ ಪ್ರಿಯತ್ವಂ ಭೃತ್ಯೋ ವೇದ ನ ಚಾತ್ಮನಃ |
ತಥಾ ಜೀವೋ ನ ಯತ್ಸಖ್ಯಂ ವೇತ್ತಿ ತಸ್ಮೈ ನಮೋsಸ್ತುತೇ ||

ಈವಿಷಯವನ್ನೇ ಭಾಗವತ ತೃತೀಯಸ್ಕಂಧದಲ್ಲಿ ಹೀಗೆ ತಿಳಿಸಿದ್ದಾರೆ .

 ಯೇ ಸಂವಸಂತೋ  ನ ವಿದುರ್ಹರಿಂ ಮೀನಾ ಇವೋಡುಪಮ್ |

ಶ್ರೀಹರಿಯ ಜೋತೆಯಲ್ಲಿ ವಾಸಿಸುತ್ತಿದ್ದರೂ ,ನೀರಲ್ಲಿ ಇರುವ ಮೀನುಗಳು ಅಲ್ಲಿ ಪ್ರತಿಬಿಂಬಿತವಾದ ಚಂದ್ರನನ್ನು ತಿಳಿಯದಿರುವಂತೆ ಜೀವನು ಶ್ರೀಹರಿಯನ್ನು ತಿಳಿಯುವುದೇ ಇಲ್ಲ .
             ಭಾಗವತ ಪುರಾಣ 3-2-1

ಆತ್ಮನಿಸ್ಥಂ ಹರಿಂ ಜಾನನ್ ಮುಚ್ಯತೇ ನಾತ್ರ ಸಂಶಯಃ
ಉಕ್ತಿಯಂತೆ ಜೀವನು ತನ್ನ ಜೋತೆಯಲ್ಲಿ ಅನಿಮಿತ್ತೋಪಕಾರಿ ಎನಿಸಿರುವ ಶ್ರೀಹರಿಯನ್ನು ತಿಳಿದದ್ದೇ ಆದರೆ ಅವನು ಶ್ರೀಹರಿಯ ಅನುಗ್ರಹದಿಂದ ಮುಕ್ತನಾಗುವುದರಲ್ಲಿ ಸಂದೇಹವಿಲ್ಲ .

ಕಾರಣ ಪ್ರತಿಯೊಬ್ಬ ಜೀವನು ತನ್ನ ಜೋತೆಗಿರುವ ಭಗವಂತನನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಅವನಲ್ಲಿ ಭಕ್ತಿಮಾಡಿ ಅವನ ಅನುಗ್ರಹ ಸಂಪಾದಿಸಬೇಕು .ಅದುವೇ ಜೀವನ ಸಾರ್ಥಕ್ಯವೆಂದು ತಿಳಿಯಬೇಕು .
      
          || ಶ್ರೀ ಕೃಷ್ಣಾರ್ಪಣಮಸ್ತು ||

ಶ್ರೀಐತರೆಯ....
****

ಶ್ರೀಮದ್ಭಾಗವತ ಚಿಂತನ🌺🌷

ಭಗವಂತನ ಪಾದಕಮಲಗಳನ್ನೇಕೇ ಆಶ್ರಯಿಸಬೇಕು

ಶ್ರೀಮದಾನಂದತೀರ್ಥಭಗವತ್ಪಾದರು  ತಮ್ಮ ಬ್ರಹ್ಮಸೂತ್ರಭಾಷ್ಯದಲ್ಲಿ ಮೂರು ವಿಧ ಅಧಿಕಾರಿಗಳನ್ನು ತಿಳಿಸುತ್ತಾ-

ಆಬ್ರಹ್ಮಸ್ತಂಭ ಪರ್ಯಂತಂ ಅಸಾರಂ ಚಾಪ್ಯನಿತ್ಯಕಮ್ |
ವಿಜ್ಞಾಯ ಜಾತ ವೈರಾಗ್ಯೋ ವಿಷ್ಣುಪಾದೈಕ ಸಂಶ್ರಯಃ |
ಸ ಉತ್ತಮೋಧಿಕಾರೀ ಸ್ಯಾತ್ ಸಂನ್ಯಸ್ತಾಖಿಲಕರ್ಮವಾನ್ ||

ಚತುರ್ಮುಖ ಬ್ರಹ್ಮದೇವರನ್ನಾರಂಭಿಸಿ ತೃಣವಸ್ತು ಪರ್ಯಂತ ಎಲ್ಲವೂ ಅಸಾರ ಅನಿತ್ಯವೆಂದು ತಿಳಿದು ವೈರಾಗ್ಯವನ್ನು ಹೊಂದಿ ಭಗವಂತನ ಪಾದಗಳನ್ನು ಆಶ್ರಯಿಸಿ ಎಲ್ಲ ಕಾಮ್ಯಕರ್ಮಗಳನ್ನು ಫಲಾಪೇಕ್ಷೆಯನ್ನು ಬಿಟ್ಟವನು ಉತ್ತಮಾಧಿಕಾರಿಯೆಂದು ಹೇಳಿದ್ದಾರೆ .

ಭಗವಂತನ  ಪಾದಕಮಲಗಳನ್ನು ಏಕೆ ಆಶ್ರಯಿಸಬೇಕು ಎಂದು ಶ್ರೀಮದ್ ಭಾಗವತ ಪುರಾಣದಲ್ಲಿ ಚತುರ್ಮುಖ ಬ್ರಹ್ಮದೇವರು ತಿಳಿಸಿದ್ದಾರೆ ಅವುಗಳನ್ನು ಒಂದೋಂದಾಗಿ ತಿಳಿಯುವ ಅಲ್ಪ ಪ್ರಯತ್ನ ಮಾಡೋಣ .
             
  ಭಗವಂತನ ಪಾದಕಮಲಗಳನ್ನು ಆಶ್ರಯಿಸುವುದು ಅವಶ್ಯವೇ ?ಎಂಬ ಪ್ರಶ್ನೆ ಬಂದಾಗ ಬ್ರಹ್ಮದೇವರು ತಿಳಿಸಿಕೊಟ್ಟ ಉತ್ತರ ಹೀಗಿದೆ-

ಸ್ವಯಂ ಸಮುತ್ತಿರ್ಯ ಸದುಸ್ತರಂ ದ್ಯುಮನ್
ಭವಾರ್ಣವಂ ಭೀಮಮದಭ್ರಸೌ ಹೃದಾಃ |
ಭವತ್ಪಾಂಭೋರುಹನಾವಮತ್ರ ತೇ |
ನಿಧಾಯ ಯಾತಾಃ ಸದನುಗ್ರಹೋ ಭವಾನ್ ||

ಜ್ಞಾನಮೂರ್ತಿಯಾದ ಭಗವಂತನೇ ಯಾರು ತಮ್ಮ ಯೋಗ್ಯತಾನುಸಾರ ಪೂರ್ಣಭಕ್ತಿಯುಳ್ಳವರೋ ಅವರು ಬಹುಕಷ್ಟದಿಂದ ದಾಟಲು ಸಾಧ್ಯವಾದ ಭಯಾನಕವಾದ ಸಂಸಾರ ಸಮುದ್ರವನ್ನು ನಿನ್ನ ಪಾದಕಮಲಗಳೆಂಬ ನೌಕೆಯನ್ನು ಆಶ್ರಯಿಸಿ ಸುಲುಭವಾಗಿ ತಾವು ದಾಟುವುದಲ್ಲದೇ ತಮ್ಮ ಉಪದೇಶದ್ವಾರ ಶಿಷ್ಯರನ್ನು ಕೂಡ ದಾಟಿಸಿ ಲಿಂಗಭಂಗ ರೂಪವಾದ ಮೋಕ್ಷ ವನ್ನು ಹೊಂದುತ್ತಾರೆ .
     -ಭಾಗವತ ಪುರಾಣ (10-3-32)

ತ್ವಯ್ಯಂಬುಜಕ್ಷಾಖಿಲಸತ್ವಧಾಮ್ನಿ
ಸಮಾಧಿನಾssವೇಶಿತ  ಚೇತಸೋ ಯೇ |
ತ್ವತ್ಪಾದಪೋತೇನ ಮಹತ್ಕೃತೇನ
ಕುರ್ವಂತಿ ಗೋವತ್ಸಪದಂ ಭವಾಬ್ಧಿಂ ||

 ಕಮಲದಂತೆ ಕಣ್ಣುಳ್ಳ ಸಕಲ ಗುಣಪೂರ್ಣನಾದ. ಭಗವಂತನೇ ನಿನ್ನಲ್ಲಿ ಉಪಾಸನೆಯಿಂದ ಇಡಲ್ಪಟ್ಟ ಮನಸ್ಸುಳ್ಳವರು ಸಂಸಾರಸಮುದ್ರವನ್ನು ನಿನ್ನ ಪಾದಕಮಲಗಳೆಂಬ ನೌಕೆಯಿಂದ ಅಕಳುಕರುವಿನ ಹೆಜ್ಜೆಯಿಂದ ನಿರ್ಮಿತವಾದ ತಗ್ಗಿನಲ್ಲಿ ನಿಂತ ನೀರನ್ನು ಅನಾಯಾಸವಾಗಿ ದಾಟುವಂತೆ ದಾಟಿಬಿಡುತ್ತಾರೆ .
  
ಶೃಣ್ವನ್ ಗೃಣನ್ ಸಂಸ್ಮರಯಂಶ್ಚ ಚಿಂತಯನ್
ನಾಮಾನಿ ರೂಪಾಣಿ ಚ. ಮಂಗಲಾನಿ ತೇ |
ಕ್ರಿಯಾಸು ಯಸ್ತ್ವಚ್ಚರಣಾರವಿಂದಯೋ
ರಾವಿಷ್ಟಚಿತ್ತೋ ನ ಭವಾಯ ಕಲ್ಪತೇ ||

 ನಿನ್ನ ಮಂಗಳಕರವಾದ ನಾಮಗಳನ್ನು ಕೇಳುತ್ತ ಹೇಳುತ್ತ ,ರೂಪವನ್ನು ಸ್ಮರಿಸುತ್ತ ಧ್ಯಾನಿಸುತ್ತ (ಇತರರಿಗೂ ತಂದು ಕೊಡುತ್ತ)ಯಾರು ನಿನ್ನ ನಿನ್ನ ಪಾದಕಮಲಲ್ಲಿ ಆಸಕ್ತರಾಗಿರುವರೋ ,ಎಲ್ಲ ಕ್ರಿಯೆಗಳಲ್ಲಿ ನೀನೆ ಕರ್ತೃವೆಂದು ತಿಳಿಯುವರೋ ಅವರು ಸಂಸಾರವನ್ನೇ ಹೊಂದುವುದಿಲ್ಲ ಮುಕ್ತರೇ ಆಗುತ್ತಾರೆ .

ಬ್ರಹ್ಮದೇವರು ಹೇಳಿದ ಮಾತುಗಳನ್ನು. ಮನದಲ್ಲಿಟ್ಟು ಭಗವಂತನ ಪಾದಕಮಲಗಳನ್ನು ಆಶ್ರಯಿಸಿ ಮುಕ್ತರಾಗಲು ಪ್ರತಿಯೊಬ್ಬರು ಪ್ರಯತ್ನಿಸಬೇಕು .
              
       ||ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
***

ದಿತಿರುವಾಚ - 

ವಧಂ ಭಗವತಾ ಸಾಕ್ಷಾತ್ ಸುನಾಭೋದಾರಬಾಹುನಾ |ಆಶಾಸೇ ಪುತ್ರಯೋರ್ಮಹ್ಯಂ ಮಾಕ್ರುದ್ಧಾದ್ ಬ್ರಾಹ್ಮಣಾತ್ ಪ್ರಭೋ||೪೧|| 
    ಹೇ ಸ್ವಾಮಿಯೇ ! ನನ್ನ ಮಕ್ಕಳಿಗೆ ಸುದರ್ಶನ ಚಕ್ರದಿಂದ ಕೂಡಿದ ಉತ್ಕೃಷ್ಟವಾದ ಬಾಹುವುಳ್ಳ ಶ್ರೀಹರಿಯಿಂದ ಸಂಹಾರವನ್ನು ಇಚ್ಛಿಸುವೆನು , ಆದರೆ ಕ್ರೋಧಗೊಂಡ ಬ್ರಾಹ್ಮಣರ ಶಾಪದಿಂದ ಮಾತ್ರ ಆಗುವದು ಬೇಡಾ ಸ್ವಾಮಿ !! 
ನ ಬ್ರಹ್ಮದಂಡದಗ್ಧಸ್ಯ ನ ಭೂತಭಯದಸ್ಯ ಚ |ನಾರಕಾಶ್ಚಾನುಗೃಹ್ಣಂತಿ ಯಾಂ ಯಾಂ ಯೋನಿಮಸೌ ಗತಃ||೪೨|| 
    ಬ್ರಾಹ್ಮಣರ ಶಾಪದಿಂದ ಸುಟ್ಟ ವ್ಯಕ್ತಿಗೆ ಪ್ರಾಣಿಗಳಿಗೆ , ಭಯಜನಕನಾದವನಿಗೆ , ನರಕದಲ್ಲಿ ಬಿದ್ದವರೂ ಸಹ ದಯೆ ಮಾಡಲಾರರು . ಇವನು ಯಾವ ಯಾವ ಯೋನಿಯಲ್ಲಿ ಜನಿಸುವನೋ  , ಆ ಯೋನಿಯಲ್ಲಿರುವವರೂ ಸಹ ದಯೆ ಮಾಡಲಾರರು . 
ಕಶ್ಯಪ ಉವಾಚ - 
 ಕೃತಶೋಕಾನುತಾಪೇನ ಸದ್ಯಃ ಪ್ರತ್ಯವಮರ್ಶನಾತ್ |ಭಗವತ್ಯುರುಮಾನಾಚ್ಚ ಭವೇ ಮಯ್ಯಪಿ ಚಾದರಾತ್ ||೪೩|| 
      ಮಾಡಿದ ಪಾಪದಿಂದುಂಟಾದ , ದುಃಖದಿಂದಾದ , ಪಶ್ಚಾತ್ತಾಪದಿಂದಲೂ ತತ್ ಕ್ಷಣದಲ್ಲಿಯೇ ಯುಕ್ತಾಯುಕ್ತ  ವಿಚಾರ ಬಂದುದರಿಂದಲೂ , ಪರಮಾತ್ಮನಲ್ಲಿ ಅತ್ಯಂತ ಗೌರವವಿರುವದರಿಂದಲೂ ರುದ್ರದೇವರಲ್ಲಿ , ನನ್ನಲ್ಲಿಯೂ ವಿಶ್ವಾಸವಿರುವದರಿಂದಲೂ , 
ಪುತ್ರಸ್ಯೈವ ಚ ಪುತ್ರಾಣಾಂ ಭವಿತೈಕಃ ಸತಾಂ ಮತಃ|ಗಾಯಂತಿ ಯದ್ ಯಶಃ ಶುದ್ಧಂ ಭಗವದ್ಯಶಸಾ ಸಮಮ್ ||೪೪|| 
   ಹಿರಣ್ಯಕಶ್ಯಪುವಿನ ಮಕ್ಕಳಲ್ಲಿ ಒಬ್ಬನು ಸಜ್ಜನರಿಗೆ ಸಮಸಮ್ಮತನು ಆಗುವನು . ಅವನ ಕೀರ್ತಿಯನ್ನು ಸಜ್ಜನರು ಶ್ರೀಹರಿಯ ಕೀರ್ತಿಯ ಜೊತೆಗೇ ಗಾನ ಮಾಡುವರು . 
ಯೋಗೈರ್ಹೇಮೇವ ದುರ್ವರ್ಣಂ ಭಾವಯಿಷ್ಯಂತಿ ಸಾಧವಃ |ನಿರ್ವೈರಾದಿಭಿರಾತ್ಮಾನಂ ಯಚ್ಛೀಲಮನುವರ್ತಿತುಂ ||೪೫|| 
     ಸಜ್ಜನರು ನಿನ್ನ ಮೊಮ್ಮಗನ ಶಮದಮಾದಿ ಸ್ವಭಾವವನ್ನು ಅನುಸರಿಸಲು ನಿರ್ವೈರ ಮುಂತಾದ ಉಪಾಯಗಳಿಂದ ಅಂತಃಕರಣವನ್ನು , ಹೀನಬಣ್ಣದ ಹೇಮವನ್ನು ಪುಟಕ್ಕೆ ಹಾಕುವದೇ ಮೊದಲಾದ ಉಪಾಯಗಳಿಂದ ಶುದ್ಧಗೊಳಿಸುವಂತೆ ಶುದ್ಧಗೊಳಿಸಕೊಳ್ಳುವರು .            
    🙏🏼🙇ಹರೇ ಶ್ರೀನಿವಾಸ🙇🙏🏼
***

ಶ್ರೀಮದ್ಭಾಗವತ ಚಿಂತನ🌷🌹

ನ ಯದ್ವಚಶ್ಚಿತ್ರ ಪದಂ ಹರೇರ್ಯಶೋ
ಜಗತ್ಪವಿತ್ರಂ ಯದಿಕರ್ಹಿಚಿದ್ವದೇತ್ |
ತದ್ಧ್ವಾಂಕ್ಷ್ವತೀರ್ಥಂ ನತು ಹಂಸಸೇವಿತಂ
ಯತ್ರಾಚ್ಯುತಸ್ತತ್ರ ಹಿ ಸಾಧವೋಮಲಾಃ  ||

ಜಗತ್ಪವಿತ್ರನಾದ  ಶ್ರೀಹರಿಯ ದಿವ್ಯಮಹಿಮೆಗಳನ್ನು ಆದ್ಯಂತಮಧ್ಯಗಳಲ್ಲಾದರು ವರ್ಣಿಸದ  ಗ್ರಂಥವು  ಸುಂದರಶೈಲಿಯಲ್ಲಿ  ರಚಿಸಲ್ಪಟ್ಟಿದ್ದರೂ  ಸಜ್ಜನಸೆವ್ಯವಲ್ಲ .
ಶುದ್ಧಮನಸ್ಕರಾದ  ಸಾಧುಗಳು ಅಚ್ಯುತನ  ದಿವ್ಯಕೀರ್ತಿಗಳನ್ನು  ವರ್ಣಿಸುವ  ಗ್ರಂಥಗಳನ್ನೇ ಆಧಾರಿಸುತ್ತಾರೆ .ಇತರ ಗ್ರಂಥಗಳನ್ನು  ಅಜ್ಞಾನಿಗಳು  ಮಾತ್ರ ಹಿಡಿಯುವರು  ಕೊಚ್ಚೇ ನೀರು ಕಾಗೆಗಳಿಂದ ಸೇವ್ಯ ಹಂಸಗಳಿಂದಲ್ಲ .
              ಭಾಗವತ  ಪುರಾಣ 12-12-50

    || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀಐತರೇಯ....
****
ಮಹಿದಾಸ ರೂಪ - 
ಬ್ರಹ್ಮದೇವರ ಪುತ್ರನಾದಂಥ ವಿಶಾಲ ಮತ್ತು ಇತರಾದೇವಿ ದಂಪತಿಗಳಲ್ಲಿ ಪುತ್ರತ್ವೇನ ಪ್ರಾದುರ್ಭವಿಸಿದಂಥ ರೂಪವಾದ್ದರಿಂದ ಐತರೇಯ
ಎಂದು ಪ್ರಸಿದ್ಧವಾದ ಭಗವದ್ರೂಪ...
ಬ್ರಹ್ಮ ರುದ್ರಾದಿದೇವತೆಗಳೆಲ್ಲರೂ ದಾಸರಾಗಿ ಐತರೇಯ ಯನ್ನು ಸೇವಿಸಿದ್ದರಿಂದ ಉಪಾಸಿಸಿದ್ದರಿಂದ ಮಹಿದಾಸ ಎಂದು ಹೆಸರು ಬಂದಿದ್ದು..
ಋಗ್ವೇದದ ಐತರೇಯ ಉಪನಿಷತ್ತಿನ ಋಷಿ ಮತ್ತು ದೇವತೆ ಎರಡೂ ಈ ಮಹಿದಾಸ ರೂಪವೇ ಆಗಿದ್ದು ವಿಶೇಷವಾಗಿದೆ

ಇನ್ನು ತಾಪಸಮನು ರೂಪವು ಸ್ವಾಯಂಭುವಮನುವಿನ ಪುತ್ರನಾದ ಪ್ರಿಯವ್ರತ ಮಹಾರಾಜನಿಗೆ ಪುತ್ರತ್ವೇನ 
ಪ್ರಾದುರ್ಭವಿಸಿದ ಪ್ರಸಿದ್ಧವಾದ ರೂಪವು..
ತಾಮಸ ಅನ್ನೋದು ತಾಪಸಿನ ನಾಮಾಂತರ ಅಷ್ಟೇ...
ಇದು ಗಜೇಂದ್ರನಿಗೆ ಮೋಕ್ಷವಿತ್ತ ಸಾಕ್ಷಾತ್ ರೂಪವಾಗಿದೆ
ಹರಿಣಿ ಮೇಧಸ ಎಂಬ ದಂಪತಿಗಳಿಗೆ ಪುತ್ರತ್ವೇನ ಪ್ರಾದುರ್ಭವಿಸಿದ ರೂಪವೇ ಪ್ರಸಿದ್ಧವಾದ ಹರಿ ರೂಪವಾಗಿದೆ
ತಾಪಸಮನು ರೂಪವೇ ಹರಿ ರೂಪದಿಂದ ಮೋಕ್ಷವನ್ನಿತ್ತದ್ದು
ಶ್ರೀ ಮದ್ಭಾಗವತ ಪುರಾಣದಲ್ಲಿ
ಅಷ್ಟಮ ಸ್ಕಂಧದಲ್ಲಿ  ಸವಿಸ್ತಾರವಾದ ವಿವರಣೆ 
ಇದೆ...
ಸಾಮಾನ್ಯವಾಗಿ ಎಲ್ಲ ಪ್ರವಚನಕಾರರು ಇದನ್ನು ತಪ್ಪದೇ ಹೇಳ್ತಿರ್ತಾರೆ 
ದಿನನಿತ್ಯವೂ ಇದರ ಪಾರಾಯಣ ಅದರಲ್ಲೂ ವಿಶೇಷವಾಗಿ ಪ್ರಾತ:ಕಾಲದಲ್ಲಿ
ಸ್ಮರಣೆ ಇನ್ನೂ ವಿಶೇಷವಾದ ಪುಣ್ಯ ಪ್ರಾಪ್ತಿ..
ಗಜೇಂದ್ರ ಮೋಕ್ಷ
ದ್ರೌಪದಿದೇವಿ ವಸ್ತ್ರಾಪಹರಣ
ಮತ್ತು
 ಅಜಾಮಿಳನ ಸ್ತೋತ್ರ
ಇವು ಮೂರೂ ಅತ್ಯಂತ ಫಲಪ್ರದವುಗಳಾಗಿವೆ
ಅನಿಷ್ಟ ನಿವೃತ್ತಿ ಇಷ್ಟ ಪ್ರಾಪ್ತಿ

🙏🙇‍♀️ ಶ್ರೀನಿವಾಸ ದಯಾನಿಧೇ
in this 'bhagavata' all articles received in WhatsApp
***



No comments:

Post a Comment