SEARCH HERE

Tuesday, 1 January 2019

ಭೌತವಿಜ್ಞಾನ physics science


ಭೌತವಿಜ್ಞಾನ ಹಾಗೂ ವಾಸ್ತವಿಕತೆಯ ಸ್ವರೂಪ - ೪
ಬೆಳಕಿನ ವೇಗ ಮೂರು ಲಕ್ಷ - ಯಾರಿಗೆ?
ಮಾಕ್ಸ್ವೆಲ್ ಎಲೆಕ್ಟ್ರೋ-ಮಾಗ್ನೆಟಿಕ್ ತರಂಗಗಳಿಗೆ ಸೂತ್ರವೊಂದನ್ನು ಬರೆದುಕೊಟ್ಟ ಹಾಗೂ ಬೆಳಕು, ಶಾಖ, ನೇರಳಾತೀತ, ಗ್ಯಾಮಾ ಕಿರಣಗಳೆಲ್ಲ ಈ ರೀತಿಯ ವಿದ್ಯುತ್ಕಾಂತೀಯ ತರಂಗಗಳೇ ಎಂದು ಹೇಳಿದ. ಇವುಗಳೆಲ್ಲವೂ ನಿರ್ವಾತದಲ್ಲಿ ಸೆಕೆಂಡಿಗೆ ಹತ್ತಿರ ಮೂರು ಲಕ್ಷ ಕಿಲೋಮೀಟರುಗಳನ್ನು ಕ್ರಮಿಸುತ್ತದೆ ಹಾಗೂ ಈ ಬೆಲೆಯು ಸ್ಥಿರವಾಗಿದೆ ಎಂಬುದನ್ನೂ ತಿಳಿಸಿದ. ಇದನ್ನು ಸದ್ಯಕ್ಕೆ c (ಸಿ) ಎನ್ನೋಣ. ಆದರೆ ಈ ಸಂಶೋಧನೆಯು ಇನ್ನೊಂದು ದೊಡ್ಡ ಪ್ರಶ್ನೆಯನ್ನು ಮುಂದಿಟ್ಟಿತು. ಯಾರ ಪ್ರಕಾರ ಬೆಳಕಿನ ವೇಗ ಮೂರು ಲಕ್ಷವಾಗಬೇಕು?
ಈ ಪ್ರಶ್ನೆ ಅರ್ಥವಾಗಬೇಕಾದರೆ ವೇಗದ ಲಕ್ಷಣಗಳ ಕುರಿತು ಸ್ವಲ್ಪ ಕಣ್ಣಾಡಿಸಬೇಕಾಗುತ್ತದೆ. ಇಲ್ಲೊಂದು ಉದಾಹರಣೆ ತೆಗೆದುಕೊಳ್ಳುತ್ತೇನೆ. ಸ್ಟೇಶನ್ನಿನಲ್ಲಿ ರೈಲೊಂದು ನಿಂತಿದೆ ಎಂದು ಭಾವಿಸಿ. ರೈಲಿನ ಬೋಗಿಯ ಮೇಲೆ ಊರಿನ ಹೆಸರುಗಳಿರುವ ಬೋರ್ಡು ಇರುತ್ತದೆ. ಆ ಬೋರ್ಡಿನ ಮೇಲೆ ಬರೆದಿರುವ ಊರಿನ ಹೆಸರನ್ನು ನೀವು ಸರಳವಾಗಿ ಓದುತ್ತೀರಿ.
ಈಗ ರೈಲು ಚಲಿಸಲು ಆರಂಭಿಸಿತು ಎಂದು ಊಹಿಸಿ. ಈಗಲೂ ನೀವು ಬೋರ್ಡನ್ನು ಸರಳವಾಗಿ ಓದಬಹುದು. ವೇಗ ಹೆಚ್ಚಿದಂತೆ, ಓದಲು ಕಷ್ಟವಾಗುತ್ತದೆ. ಬಹುಶಃ ಅದರ ವೇಗ ಗಂಟೆಗೆ ೮೦ ಕಿಮಿಗಿಂತಲೂ ಹೆಚ್ಚಿದರೆ ಓದಲು ಸಾಧ್ಯವಾಗದು ಎಂದಿಟ್ಟುಕೊಳ್ಳೋಣ. ಅಂದರೆ ರೈಲಿನ ವೇಗ ಹೆಚ್ಚಿದಂತೆ ಅದರ ಬೋರ್ಡಿನ ಮೇಲಿರುವ ಊರಿನ ಹೆಸರುಗಳನ್ನು ಓದಲು ಕಷ್ಟ ಎಂದು ಹೇಳಬಹುದು. ಆದರೆ ಈ ಅನಿಸಿಕೆಯ ಕುರಿತು ಇಲ್ಲಿ ಕೆಲವು ಪ್ರಶ್ನೆಗಳು ಹುಟ್ಟುತ್ತವೆ.
ಈಗ ಬೆಂಗಳೂರಿನಿಂದ ತುಮಕೂರಿನ ಕಡೆಗೆ ರೈಲೊಂದು ೬೦ ಕಿ.ಮೀ ವೇಗದಲ್ಲಿ ಹೊರಟಿದೆ, ಹಾಗೆಯೇ ತುಮಕೂರಿನಿಂದ ಬೆಂಗಳೂರಿನ ಕಡೆದೆ ಇನ್ನೊಂದು ರೈಲು ೬೦ ಕಿ.ಮೀ ವೇಗದಲ್ಲಿ ಹೊರಟಿದೆ ಎಂದು ಊಹಿಸಿ. ಇವೆರಡೂ ರೈಲುಗಳು ದೊಡ್ಡಬೆಲೆ ಸ್ಟೇಶನ್ನಿನಲ್ಲಿ ಪರಸ್ಪರ ಹಾದು ಹೋಗುತ್ತವೆ ಎಂದು ಊಹಿಸಿ. ನೀವು ಈ ಎರಡು ರೈಲುಗಳ ಮಧ್ಯದಲ್ಲಿರುವ ಪ್ಲಾಟಫಾರಂ ಮೇಲೆ ನಿಂತಿರುತ್ತೀರಿ ಎಂದು ಭಾವಿಸಿ.
ಈಗ ಎರಡೂ ರೈಲುಗಳು ೬೦ ಕಿಮೀ ವೇಗದಿಂದ ಚಲಿಸುತ್ತಿರುವದರಿಂದ ಎರಡೂ ರೈಲುಗಳ ಬೋರ್ಡುಗಳನ್ನು ನೀವು ಓದಬಹುದು. ಆದರೆ ಬೆಂಗಳೂರಿನಿಂದ ಹೊರಟ ರೈಲಿನಲ್ಲಿರುವ ನಿಮ್ಮ ಮಿತ್ರ ಎದುರು ಹಾದು ಹೋದ ರೈಲಿನ ಬೋರ್ಡನ್ನು ಓದಬಲ್ಲನೇ? ಖಂಡಿತ ಸಾಧ್ಯವಿಲ್ಲ. ಏಕೆ ಎಂಬುದನ್ನು ಮುಂದೆ ನೋಡೋಣ.
ಬೆಂಗಳೂರಿನಿಂದ ಎರಡು ರೈಲುಗಳು ತುಮಕೂರಿನತ್ತ ೧೦೦ ಕಿ.ಮೀ. ವೇಗದಲ್ಲಿ ಧಾವಿಸುತ್ತಿವೆ ಎಂದು ಊಹಿಸಿ. ಈಗ ಎರಡು ರೈಲುಗಳ ಮಧ್ಯೆ ನಿಂತ ನಿಮಗೆ ಎರಡೂ ರೈಲಿಗಳಿಗಿರುವ ಬೋರ್ಡಗಳನ್ನು ಓದಲಾರಿರಿ. ಆದರೆ ಒಂದು ರೈಲಿನಲ್ಲಿರುವ ನಿಮ್ಮ ಮಿತ್ರ ತನ್ನ ರೈಲಿನೊಡನೆಯೇ ಸಾಗುತ್ತಿರುವ ಇನ್ನೊಂದು ರೈಲಿನ ಬೋರ್ಡಿನ ಮೇಲಿರುವ ಊರುಗಳನ್ನು ಸುಲಭವಾಗಿ ಓದಬಲ್ಲ.
ಈಗ ಕೆಲವು ಪ್ರಶ್ನೆಗಳು ಹುಟ್ಟುತ್ತವೆ. ರೈಲುಗಳು ಕೇವಲ ೬೦ ಕಿಮೀ ವೇಗದಲ್ಲಿದ್ದರೂ ಎದುರು ಹಾದು ಹೋದ ರೈಲಿನ ಬೋರ್ಡನ್ನು ಇನ್ನೊಂದು ರೈಲಿನಲ್ಲಿರುವ ನಿಮ್ಮ ಮಿತ್ರನಿಗೆ ಓದಲು ಏಕೆ ಆಗಲಿಲ್ಲ? ಹಾಗೆಯೇ, ಇನ್ನೊಂದು ರೈಲು ೧೦೦ ಕಿಮೀ ವೇಗದಲ್ಲಿ ತನ್ನ ರೈಲೊಡನೆ ಬರುತ್ತಿದ್ದರೂ, ಆದರ ಬೋರ್ಡನ್ನು ಸುಲಭವಾಗಿ ಓದಲು ಹೇಗೆ ಸಾಧ್ಯವಾಯಿತು? ಹಾಗಿದ್ದರೆ, ರೈಲಿನ ವೇಗ ಹೆಚ್ಚಿದಂತೆ ಅದರ ಬೋರ್ಡನ್ನು ಓದುವದು ಕಠಿಣ ಎಂಬ ನಮ್ಮ ಅನುಭವ ಸರಿಯೇ, ತಪ್ಪೇ?
ನ್ಯೂಟನ್ನಿನ ಚಲನೆಯ ನಿಯಮಗಳ ಮೂಲಕ ಈ ವಿದ್ಯಮಾನವನ್ನು ವಿವರಿಸುವದಾದರೆ, ನಿಮ್ಮ ಅನುಭವವು ಸರಿಯಾಗಿಯೇ ಇದೆ. ವೇಗವು ಹೆಚ್ಚಿದಂತೆ ಓದಲು ಕಷ್ಟ ಎಂಬ ಅನುಭವವೇ ಸರಿ. ಆದರೆ ವೇಗ ಎನ್ನುವದು ಯಾವಾಗಲೂ ರಿಲೆಟಿವ್ (ಸಾಪೇಕ್ಷ). ಮೇಲಿನ ಉದಾಹರಣೆಯಲ್ಲಿಯೇ, ರೈಲು ೬೦ ಕಿಮೀ ವೇಗದಲ್ಲಿ ಹೋಗುತ್ತಿದೆ ಎಂದರೆ ಅದರರ್ಥ, ಭೂಮಿಯ ಮೇಲೆ ನಿಂತುಕೊಂಡಿರುವವನ ಪ್ರಕಾರ ರೈಲು ೬೦ ಕಿ.ಮಿ. ವೇಗದಲ್ಲಿ ಹೋಗುತ್ತಿದೆ ಎಂದು ಅರ್ಥ. ನೀವೇ ಸ್ವತಃ ಚಲಿಸುತ್ತಿರುವಾಗ, ಇನ್ನೊಂದು ಚಲಿಸುವ ವಸ್ತುವಿನ ವೇಗವು ನಿಮ್ಮ ಪ್ರಕಾರ ಬೇರೆಯೇ ಆಗಿರುತ್ತದೆ.
ಮೇಲಿನ ಉದಾಹರಣೆಯಲ್ಲಿ, ಬೆಂಗಳೂರಿನಿಂದ ತುಮಕೂರಿಗೆ ೬೦ ಕಿಮೀ ವೇಗದಲ್ಲಿ ಹೋಗುತ್ತಿರುವ ರೈಲಿನಲ್ಲಿರುವ ನಿಮ್ಮ ಮಿತ್ರನ ಪ್ರಕಾರ, ತುಮಕೂರಿನಿಂದ ೬೦ ಕಿಮೀ ವೇಗದಲ್ಲಿ ಬರುತ್ತಿರುವ ರೈಲಿನ ವೇಗ ೬೦+೬೦=೧೨೦ ಆಗಿರುತ್ತದೆ. ಹೀಗಾಗಿ ಆತನಿಗೆ ಬೋರ್ಡು ಓದಲು ಬರುವದಿಲ್ಲ. ಆದರೆ ೧೨೦ ಕಿಮೀ ವೇಗದಲ್ಲಿ ಹೋಗುತ್ತಿರುವ ರೈಲಿನಲ್ಲಿರುವ ನಿಮ್ಮ ಮಿತ್ರ, ಅದೇ ದಿಕ್ಕಿನಲ್ಲಿ ಅದೇ ವೇಗಲ್ಲಿ ಹೋಗುತ್ತಿರುವ ಇನ್ನೊಂದು ರೈಲಿನ ಬೋರ್ಡನ್ನು ಸಲೀಸಾಗಿ ಓದಬಲ್ಲ. ಏಕೆಂದರೆ ಅವನ ಪ್ರಕಾರ ಆ ರೈಲಿನ ವೇಗ ೧೦೦-೧೦೦=೦ ಆಗಿರುತ್ತದೆ.
ಭೂಮಿಯ ಮೇಲೆ ನಿಂತು ಆಕಾಶಕಾಯಗಳ ವೇಗವನ್ನು ಅಳೆದಾಗ ಬರುವ ಬೆಲೆಯು, ಮಂಗಳನ ಮೇಲೆ ನಿಂತು ಅದೇ ಆಕಾಶಕಾಯಗಳ ವೇಗವನ್ನು ಅಳೆದಾಗ ಅವು ತೋರಿಸುವ ಬೆಲೆಗಿಂತ ಭಿನ್ನವಾಗಿರುತ್ತವೆ. ಆದ್ದರಿಂದ ಒಂದು ವಸ್ತುವಿನ ವೇಗವನ್ನು ಅಳೆದಾಗ ಅದು ಯಾವತ್ತೂ ಎಬ್ಸೊಲ್ಯೂಟ್ ಆಗಿರುವದಿಲ್ಲ. ಒಂದು ವಸ್ತುವಿನ ವೇಗ ಇಂತಿಷ್ಟು ಎಂದರೆ, ಯಾರ ಪ್ರಕಾರ ಅನ್ನುವದನ್ನೂ ಸೇರಿಸಬೇಕಾಗುತ್ತದೆ.
ಈಗ ಮತ್ತೆ ಮ್ಯಾಕ್ಸವೆಲ್ ಸೂತ್ರಗಳಿಗೆ ಮರಳೋಣ. ಮ್ಯಾಕ್ಸವೆಲ್ ವಿದ್ಯುತ್ಕಾಂತೀಯ ಅಲೆಗಳ ವೇಗವು c ಎಂಬುದಾಗಿ ಸೂಚಿಸಿದ. ಅದರ ಬೆಲೆಯನ್ನು ಹತ್ತಿರ ಮೂರು ಲಕ್ಷ ಕಿ.ಮೀ ಪ್ರತಿ ಸೆಕೆಂಡಿಗೆ ಎನ್ನುವದನ್ನೂ ನಿರೂಪಿಸಿದ. ಆಗ ಇಲ್ಲೊಂದು ಮಹತ್ತರ ಪ್ರಶ್ನೆ ಎದ್ದಿತು. ಬೆಳಕಿನ ವೇಗ ಮೂರು ಲಕ್ಷವೇನೋ ಸರಿ. ಆದರೆ ಯಾರ ಪ್ರಕಾರ? ಬ್ರಹ್ಮಾಂಡದ ಯಾವ ಮೂಲೆಯಲ್ಲಿ ನಿಂತು ಅಳೆದರೆ ಬೆಳಕಿನ ವೇಗ ಮೂರು ಲಕ್ಷವಾಗುತ್ತದೆ? ಆ ಗಾಡ್ ನ ಪ್ರಕಾರ ಮೂರು ಲಕ್ಷವೇ? ಏನು ಕಥೆ? ಎಂಬೆಲ್ಲ ಪ್ರಶ್ನೆಗಳು ಹುಟ್ಟಿದವು. ಇದರ ಉತ್ತರಕ್ಕಾಗಿ ವಿಜ್ಞಾನಿಗಳು ಏನೆಲ್ಲ ಮಾಡಿದರು ಎನ್ನುವದು ಇನ್ನೂ ಸ್ವಾರಸ್ಯಕರವಾದ ಕಥೆ.
ವಿನಾಯಕ ಹಂಪಿಹೊಳಿ
*****



ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು. ಗಾಯತ್ರಿ ಜಪವನ್ನು ಸಾಮಾನ್ಯವಾಗಿ ಒಂದು ಸಾವಿರದಂತೆ ದಿನಕ್ಕೆ ಮೂರು ಬಾರಿ ಮಾಡುತ್ತೇವೆ. ಏಕೆಂದರೆ ಗಾಯತ್ರಿಯಲ್ಲಿ 24 ಅಕ್ಷರಗಳಿವೆ. ಒಮ್ಮೆಗೆ ಒಂದು ಸಾವಿರ ಜಪ ಅಂದರೆ 24 ಸಾವಿರ ಅಕ್ಷರ, ದಿನಕ್ಕೆ ಮೂರು ಬಾರಿ ಅಂದರೆ 72 ಸಾವಿರ ಅಕ್ಷರ. ಇದು ನಮ್ಮ ದೇಹದಲ್ಲಿರುವ ಒಟ್ಟು ನಾಡಿಗಳ ಸಂಖ್ಯೆಗೆ ಸಮ. ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ 
ಮಾಡುವುದು ಮುಖ್ಯ.
**********



*******
Activity for students - Light a bulb in this way
******
Rover rocket landing on Moon



Sound on Planet Mars








No comments:

Post a Comment