SEARCH HERE

Friday 9 April 2021

ಸಾಯಣ ಭಾಷ್ಯ sayana bhashya

Who is Sayana? For more information  here  is the link:  https://en.wikipedia.org/wiki/Sayana
Sayana died in the year 1387.
ಸಾಯಣ ಭಾಷ್ಯವೂ ಮತ್ತು ತತ್ತ್ವವಾದಿಗಳೂ. ಭಾಗ-೦೧
ಎಂದಿನಂತೆ ಬೇಡದ ವಿಷಯಗಳಿಂದ ದೂರ ಇರಬೇಕೆಂಬ ನಿಲುವಿನಲ್ಲಿ  ನನ್ನನ್ನು ನಾನೇ ಕಟ್ಟಿಹಾಕಿಕೊಳ್ಳುವದರಲ್ಲಿ ಅಸಮರ್ಥನಾಗಿದ್ದೇನೆ ಎಂಬ ಸಂಶಯಕ್ಕೆ ಸಿಲುಕಿದ್ದರೂ ಸಾಮಾನ್ಯ ಜನರ ಹಾಗೂ ಮುಗ್ಧರ ಸಂಶಯ ಪರಿಹಾರ ಹಾಗೂ ಸಾಯಣಾಚಾರ್ಯರ ಮಹತ್ತರವಾದ ವೇದಭಾಷ್ಯಗಳಲ್ಲಿ ಕೆಲವು ಪಂಡಿತರಿಗಿರುವ ಸಂಶಯವನ್ನು ಪರಿಹರಿಸೋಣಾ ಎಂಬ ದೃಷ್ಟಿಯಿಂದಲೇ ಕಿರುಹೊತ್ತಿಗೆಯನ್ನು ಪ್ರಾರಂಭಿಸಿದ್ದೇನೆ.ವಿಷಯವು ಏಕಮುಖಿಯಾದ್ದರಿಂದ ಸಂಕ್ಷಿಪ್ತವಾಗೇ ಕೇವಲ ಎರಡು ಸಂಚಿಕೆಗಳಲ್ಲೇ ಬರಹವನ್ನು ಮುಗಿಸುವ ಪ್ರಯತ್ನ ಮಾಡುತ್ತೇನೆ.
ಕೆಲವು ಪಂಡಿತರು ಸಾಯಣರ ಭಾಷ್ಯದಲ್ಲಿ ಐದು ದೋಷಗಳಿವೆ ಎಂಬುದಾಗಿ ಹೇಳಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಇದು ದೋಷವೇನೂ ಅಲ್ಲ ಎಂಬುವದನ್ನು ನಿರೂಪಿಸುವುದಕ್ಕೆ ಕೆಲವು ಮುಖ್ಯವಾದ ವಿಷಯಗಳನ್ನು ಬೆಳಕಿಗೆ ತರುವದು ಅತ್ಯವಶ್ಯಕ.ಇದಕ್ಕೆ ಪೂರಕವಾಗಿ ಸಾಯಣರು ನಿರುಕ್ತವನ್ನು ನೊಡೀಯೇ ಇಲ್ಲ ಎನ್ನುವ ಅವರ ಪರೋಕ್ಷ ಅಭಿಪ್ರಾಯವನ್ನು ಮೊದಲಿಗೆ ದೂರ ಮಾಡೋಣ.ನಂತರ ದೂಷಣೇ ಮಾಡುವವರೇ ಸಾಯಣಭಾಷ್ಯವನ್ನು ಕಣ್ಣೆತ್ತಿಯೂ ನೋಡಿಲ್ಲ ಎಂಬ ಪೂರ್ವಾಗ್ರಹಪೀಡಿತ ಅಭಿಪ್ರಾಯವು ಅವರ ಹೆಗಲಿಗೆ ತಾನಾಗೆ ಬೀಳುತ್ತದೆ.
ಸಾಯಣರು ತಮ್ಮ ಭಾಷ್ಯದ ಉಪೋದ್ಘಾತದಲ್ಲೇ ಯಾಸ್ಕರ ನಿರುಕ್ತವನ್ನು ಉಪಯೋಗಿಸಿಕೊಂಡಿರುವದು ಕಾಣಬಹುದು.
" ನೈಷ ಸ್ಥಾಣೋರಪರಾಧೋ ಯದೇನಮಂಧೋ ನ ಪಶ್ಯತಿ." 
ಇದರ ಅರ್ಥ ಏನೆಂದರೇ ಕುರುಡನಿಗೆ ಮೋಟುಮರವು ಕಾಣದಿದ್ದರೇ ಅದು ಮೋಟುಮರದ ದೋಷವಲ್ಲ.ಇದು ದೂಷಣೆ ಮಾಡುವವರಿಗಾಗಿಯೇ ದೊರಕಿದ ನಿರುಕ್ತದ ಸಾಲುಗಳು.
ಸಾಯಣಾಚಾರ್ಯರು ಶ್ರೀವಿಷ್ಣುವಿನ ಅರಾಧಕರು ಹಾಗೂ ಹರಿಹರಾಭೇದ ಪ್ರತಿಪಾದಿಗಳೂ ಆಗಿದ್ದರೂ ಎಂಬುವದು ಭಾಷ್ಯಗಳಿಂದ ತಿಳಿದುಕೊಳ್ಳ ಬಹುದು.
ತತ್ಕಟಾಕ್ಷೇಣ ತದ್ರೂಪಂ ದಧದ್ಬುಕ್ಕಮಹೀಪತಿಃ | ಆದಿಶನ್ಮಾಧವಾಚಾರ್ಯ್ಯಂ ವೇದಾರ್ಥಸ್ಯ ಪ್ರಕಾಶನೇ||
" ನಾವಿಷ್ಣುಃ ಪೃಥಿವೀ ಪತಿಃ " ವಿಷ್ಣುವಿನ ಅಂಶವಿಲ್ಲದವನು ರಾಜನಾಗಲಾರ ಎಂಬ ಸ್ಮೃತಿವಾಕ್ಯವನ್ನು ಬಹಳ ಸಲಿಲವಾಗಿ "ತತ್ಕಟಾಕ್ಷಂ ತದ್ರೂಪಮ್" ಎಂಬ ಮಾತಿನಲ್ಲಿ ತಿಳಿಯ ಹೇಳಿರುವ ಸಾಯಣರ ಮೇಧಸ್ಸಿನ ಬಗ್ಗೆ ಸಂಶಯ ಪಡುವ ಬದಲು ತಮ್ಮ ಯೋಗ್ಯತೆಯನ್ನಾದರೂ ಪರಾಂಬರಿಸಿದ್ದರೇ ಪಂಡಿತರು ಇಂಥ  ಹಾಸ್ಯಾಸ್ಪದ ಅಭಿಪ್ರಾಯವನ್ನು ಹೊರ ಹಾಕುತ್ತಿರಲಿಲ್ಲ.ಇನ್ನು ನಿರುಕ್ತದ ಮಾತನ್ನು ತೆಗೆಕೊಂಡರೇ " ರುದ್ರ ಶಬ್ದ ಬ್ರಹ್ಮ
ವಾಚ್ಯವಲ್ಲ" ಎಂಬ ಶ್ರುತಿವಿರುದ್ಧ ಹಾಗೂ ಅಪಭ್ರಂಶ ಅಭಿಪ್ರಾಯ ಉಳ್ಳವರಿಂದ  ನಿರುಕ್ತದ ವಿವರಣೆ ಮತ್ತು ಶತರುದ್ರೀಯ ಭಾಷ್ಯ !!! ?? ಓ..ವೇದಗಳೇ ನೀವು ನಿಮ್ಮನ್ನು ಕಾಪಾಡಿಕೊಳ್ಳಿ.

ಸಾಯಣರು ಕರ್ಮಪೂರ್ವಕ ಅಥವಾ ವಿಧ್ಯರ್ಥವಾದ ಪರವಾಗಿಯೇ ಏಕೆ ಭಾಷ್ಯವನ್ನು ಬರೆದಿದ್ದಾರೆ ಎಂಬುದನ್ನು ತಾವೇ ಕಂಠೋಕ್ತವಾಗಿ ಹೇಳಿರುವದನ್ನು ನಿರ್ಲಕ್ಷಿಸಿ ಈ ಕುಪಂಡಿತನು ತನ್ನ ಪೂರ್ವಾಗ್ರಹ ಪೀಡಿತ ಮನಸ್ಸನ್ನು ಮತ್ತೆ ಹರಿಯಬಿಟ್ಟಿರುವದು ಅಸಹನೀಯ ಮತ್ತು ಖಂಡನಾರ್ಹ. ಕಾಲಸನ್ನಿವೇಶಗಳನ್ನು ಗಾಳಿಗೆ ತೂರಿಬಿಟ್ಟು ತನ್ನ ಪಾಂಡಿತ್ಯದ ಅಮಲಿನಲ್ಲಿ ದೂಷಣೆ ಮಾಡಿರುವದು ಅಕ್ಷಮ್ಯ ಅಪರಾಧ.
ಉಪೋದ್ಘಾತ :
ಯೇ ಪೂರ್ವೋತ್ತರಮೀಮಾಂಸೇ ತೇ ವ್ಯಾಖ್ಯಾಯಾತಿಸಂಗ್ರಹಾತ್ (ವ್ಯಾಖ್ಯಾಯ ಅತಿಸಂಗ್ರಹಾತ್)  | ಕೃಪಾಲುರ್ಮಾಧವಾಚಾರ್ಯೋ ವಿಧ್ಯರ್ಥಂ ವಕ್ತುಮುದ್ಯತಃ |
(ಕೆಲವು ಪಾಠಾಂತರದಲ್ಲಿ ’ವೇದಾರ್ಥಂ ವಕ್ತುಮುದ್ಯತಃ "  ಎಂದು ಇದೆ. ಆದರೇ ಸಾಯಣ ಭಾಷ್ಯದ ಉಪೋದ್ಘಾತದಲ್ಲಿ ಪೂರ್ವಪಕ್ಷ ಮತು ಅದಕ್ಕೆ ಪರಿಹಾರ ಪ್ರತಿಪಾದಿಸುವಾಗ ವಿಧಿ-ಅರ್ಥವಾದವೇ ಮುಖ್ಯ ಭಾಷ್ಯ ವಿಷಯ ಎಂಬುವದು ಸುಸ್ಪಷ್ಟವಾಗಿ "ವಿಧ್ಯರ್ಥಂ" ಎಂಬುವದೇ ಸರಿಯಾದದ್ದು ಎಂಬುದಾಗಿ ದೃಢವಾಗುತ್ತದೆ.)   
ಭಾವಾರ್ಥ:- 
ಕೃಪಾಲುಗಳಾದ ಮಾಧವಾಚಾರ್ಯ ಎಂಬ ಹೆಸರಿನಿಂದ ಪ್ರಖ್ಯಾತರಾದ ವಿದ್ಯಾರಣ್ಯರು ವಿದ್ವಜ್ಜನರ ಸೌಕರ್ಯಕ್ಕಾಗಿ ಈ ಹಿಂದೆಯೇ ಭಗವಾನ್ ಬೋಧಾಯನರು ತಮ್ಮ ತ್ರಿಕಾಂಡೀ ಮೀಮಾಂಸದಲ್ಲಿ  (ಪೂರ್ವೋತ್ತರಮೀಮಾಂಸವನ್ನು ಒಂದುಗೂಡಿಸಿ ಕರ್ಮಕಾಂಡ,ಔಪಾಸನಾ ಕಾಂಡ ಮತ್ತು ಜ್ಞಾನಕಾಂಡ ಎಂಬುದಾಗಿ ವಿಂಗಡಿಸಿದ)  ಸಂಗ್ರಹವಾಗಿ ಮೂರೂ ನೆಲೆಯಲ್ಲೂ ವೇದಗಳಿಗೆ ಅರ್ಥವನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ.ಆದರೇ ಹಿಂದೆಂದೂ ಮಾಡದೇ ಇರುವ ಹಾಗೂ ಕರ್ಮಕಾಂಡದಲ್ಲಿ ಮುಖ್ಯವಾದ ವಿಧ್ಯರ್ಥ (ಮೀಮಾಂಸಕ ಮತೇ ಇಷ್ಟಸಾಧನತ್ವಂ ಕೃತಿಸಾಧನತ್ವಂಚ  ಪೃಥಕ್ ವಿಧ್ಯರ್ಥಃ || ವಾಚಸ್ಪತ್ಯಮ್ ||) ಅರ್ಥಾತ್ ಅಂದಿನ ಕಾಲದಲ್ಲಿ ಮೂಲಪೂರ್ವಮೀಮಾಂಸ ಕರ್ಮಠರಿಗೂ (ಪ್ರಭಾಕರ ಮತ ಅಥವಾ ಗುರಮತ)  ಔಪಾಸನಾ ಪರರಾದ ಅರ್ಥವಾದಿಗಳಿಗೂ (ಧ್ಯಾನನಿಯೋಗವಾದಿಗಳು)  ಬಿಡಿಸಲಾಗ ಕಗ್ಗಂಟು ಏನೆಂದರೇ ವೇದಗಳು ಕರ್ಮ ಪರವೋ ಔಪಾಸನಾ ಪರವೋ ಎಂಬ ದ್ವಂದ್ವ. ಪ್ರಭಾಕರ ಮತದವರು ವಿಧಿವಿಧಾನಗಳನ್ನು ಹೇಳದ ಮಂತ್ರವು ನಿರರ್ಥಕ ಎಂಬ ವಾದ. ಇನ್ನು ಧ್ಯಾನನಿಯೋಗಿಗಳು ಕರ್ಮಪರವಾದ ಮಂತ್ರಗಳೇ ಇಲ್ಲ ಎಂಬ ವಾದ.
ಇನ್ನು ಸಾಯಣರಾದರೋ ಭಾಟ್ಟಮತ ಪ್ರದಿಪಾದಕರು.ಅರ್ಥಾತ್  ವಿಧಿ ಮತ್ತು ಅರ್ಥವಾದ (ಕರ್ಮ-ಜ್ಞಾನ ಸಮುಚ್ಚಯವಾದಿಗಳು) ಎರಡೂ ಮುಖ್ಯವೇ ಎಂಬ ಮತ ಇವರದ್ದು, ಆದ್ದರಿಂದಲೇ ಭಾಷ್ಯದ ಪೀಠಿಕೆಯಲ್ಲೇ ತಮ್ಮ ಉದ್ದೇಶವನ್ನು " ವಿಧ್ಯರ್ಥಂ ವಕ್ತುಮುದ್ಯತಃ " ಎಂಬ ವಿದ್ಯಾರಣ್ಯರ ಇಂಗಿತವನ್ನು ಘೋಷಣೆಯ ಮೂಲಕ ದೃಢಪಡಿಸಿದ್ದಾರೆ.ಅರ್ಥಾತ್ ಇದು ಮೇಲ್ನೋಟಕ್ಕೆ ಅಧ್ಯಾತ್ಮ ಪರವಾದ ಭಾಷ್ಯವಲ್ಲ , ಆದರೇ ಅಪೂರ್ವ ಎಂಬ ಕರ್ಮಫಲದ ದೃಷಿಯುಳ್ಳದ್ದಾಗಿದೆ. ಇದರಲ್ಲಿ ಭಾವಾರ್ಥ,ಗೂಢಾರ್ಥ ಮತ್ತು ಪ್ರಚಲಿತಾರ್ಥಗಳ ಬಳಕೆ ಗೌಣ. ಏಕೆಂದರೇ ಈ ಭಾಷ್ಯವು ವಿಧಿ ಮತ್ತು ಅರ್ಥವಾದ ಸಮನ್ವಯವನ್ನು ಕುರಿತದ್ದಾಗಿದೆ. ಆದ್ದರಿಂದಲೇ ಈ ಭಾಷ್ಯದಲ್ಲಿ ಶ್ರೌತ ಮತ್ತು ಸ್ಮಾರ್ತಕರ್ಮ, ಯಜ್ಞಗಳ ಮತ್ತು ಔಪಾಸನಾ ಸಂಬಂಧ ವಿಷಯದಲ್ಲಿ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನೂ ಸಾಯಣರು ವಿಸ್ತಾರವಾಗಿ ತಿಳಿಸಿದ್ದಾರೆ ಮತ್ತು ಈ ಗ್ರಂಥದಲ್ಲಿ ಪೂರ್ವಮೀಮಾಂಸದ ಕುರಿತಾಗಿ ಹೇಳದೇ ಇರುವ ವಿಷಯವೇ ಇಲ್ಲ .  ಯಜ್ಞಗಳ ವಿಧಿವಿಧಾನಗಳ ಬಗ್ಗೆ ಇಂದಿಗಿರುವ ಏಕೈಕ ಪ್ರಮಾಣಗ್ರಂಥ ಸಾಯಣ ವಿರಚಿತ ವಿಧ್ಯರ್ಥ ಭಾಷ್ಯವೊಂದೇ.ಇದಕ್ಕೆ ಸಲ್ಲ ಬೇಕಾದ ಗೌರವವನ್ನು ಎಲ್ಲರೂ ಕಡ್ಡಾಯವಾಗಿ ಕೊಡಲೇ ಬೇಕು.  ಕೇವಲ ಓರೇನೋಟದಿಂದಲೋ ಕಾಕದೃಷ್ಟಿಯಿಂದಲೋ ಇಂಥ ಭಾಷ್ಯಗಳ ಅರಿವು ಉಂಟಾಗುವ ಸಾಧ್ಯವಿದ್ದಿದ್ದರೇ ಎಲ್ಲರೂ ಭಾಷ್ಯಕಾರರೇ ಆಗಿರುತ್ತಿದ್ದರೇ ಹೊರತು ಗೊಡ್ಡು ವೇದಾಂತಿಯಾಗುತ್ತಿರಲಿಲ್ಲ.   
ಈ ಭಾಷ್ಯದ ವಿಷಯವಾದ  ವಿಧ್ಯರ್ಥದ ನಿರೂಪಣೆಯನ್ನು ದೃಢೀಪಡಿಸುವದಕ್ಕಾಗಿ ಸಾಯಣರು ತಮ್ಮ ಉಪೋದ್ಘಾತದಲ್ಲಿ ಕೊಟ್ಟಿರುವ ಉದಾಹರಣೆಗಳಲ್ಲಿ ಕೆಲವನ್ನು  ಗಮನಿಸೋಣ. ಸಾಯಣರ ಭಾಷ್ಯದ ಉದ್ದಗಲವೂ ಇದೇ ಶೈಲಿಯಲ್ಲೇ ನಿರೂಪಿತವಾಗಿದೆ.
ಜೈ.ಸೂ.೧.೨.೩೪ ಅವಿದ್ಯಮಾನವಚನಾತ್ ||
ಆಕ್ಷೇಪಃ (ಪೂರ್ವಪಕ್ಷ)  :- ಚತ್ವಾರಿ  ಶೃಂಗಾ...ಸಪ್ತ ಹಸ್ತಾಸೋ ಅಸ್ಯ || ಋ.೪.೫೮.೩|| ಇತಿ ಮಂತ್ರ ಆಮ್ನಾಯತೇ | ನ ಖಲು ಚತುಃಶೃಂಗತ್ವಾದ್ಯುಪೇತಂ ಕಿಂಚಿದ್ಯಜ್ಞಸಾದನಂ ವಿದ್ಯತೇ ಯನ್ಮಂತ್ರಪಾಠೇನಾನುಸ್ಮರ್ಯೇತ | ನನ್ವೀದೃಶೀ ಕಾಚಿದ್ದೇವತಾಸ್ಯಾದಿತ್ಯಾಶಂಕ್ಯಾನ್ಯಂ ದೋಷಂ ಸೂತ್ರಯತಿ ||
ಸೂತ್ರಭಾಷ್ಯ :- ಇಲ್ಲದೇ ಇರುವ ವಸ್ತುಗಳನ್ನು ಹೇಳುವದರಿಂದ ಮಂತ್ರಗಳು ನಿರರ್ಥಕವಾದವುಗಳು.ಚತ್ವಾರಿ ಎಂಬ ಮೇಲಿನ ಮಂತ್ರದಲ್ಲಿ ನಾಲ್ಕು ಕೊಂಬುಗಳು, ಮೂರುಕಾಲು , ಎರಡುತಲೆ ,ಏಳುಕೈಗಳುಳ್ಳ ಪ್ರಾಣಿಯೊಂದು ವರ್ಣಿತವಾಗಿದೆ.ಯಜ್ಞಕ್ಕೆ ಇಂಥ ವಿಲಕ್ಷಣವುಳ್ಳ ಪ್ರಾಣಿಯು ಯಜ್ಞ ಸಾಧನವಾಗಲಾರದು.ಲೋಕದಲ್ಲಿ ಎಲ್ಲೂ ಇಂಥ ಪ್ರಾಣಿಗಳು ಕಂಡುಬಂದಿಲ್ಲ .ಆದ್ದರಿಂದ ಇಂಥ ಮಂತ್ರಗಳಿಂದ ಏನು ಪ್ರಯೋಜನ?
ಸಾಯಣಭಾಷ್ಯ :- || ಋ.೪.೫೮.೩|| 
ಮೇಲಿನ ಋಕ್ಕಿಗೆ ಭಾಷ್ಯಬರೆಯುವಾಗ ಸಾಯಣರು ಯಾಸ್ಕರ ನಿರುಕ್ತವನ್ನು ಸಂಪೂರ್ಣವಾಗಿ ಆಧಾರವಾಗಿಟ್ಟುಕೊಂಡು ಈ ಋಕ್ಕಿಗೆ ಭಾಷ್ಯದಲ್ಲಿ ಮೇಲಿನ ದೂಷಣೆಗೆ ಪರಿಹಾರ ಹೇಳಿದ್ದಾರೆ.
ಮೇಲಿನ ಸೂಕ್ತಕ್ಕೆ ಭಾಷ್ಯಾನುಸಾರ ಭಾವಾರ್ಥ. 
ಈ ಸೂಕ್ತಕ್ಕೆ  ಅಗ್ನಿಯೇ ದೇವತೆಯು.ಆದ್ದರಿಂದ ಈ ಸೂಕ್ತದಲ್ಲಿ ಅಗ್ನಿಯೇ ಪ್ರತಿಪಾದಿಸಲ್ಪಟ್ಟಿದೆ ಎಂಬುವದು ಶತಸ್ಸಿದ್ಧ.ಈ ಮಂತ್ರವು ಅಗ್ನಿದೇವತೆಯ ರೂಪವನ್ನು ವರ್ಣಿಸುತ್ತದೆ.ಭೂಲೋದಲ್ಲಿ ಇಂಥ ಪ್ರಾಣಿಯು ಇಲ್ಲ ಎಂಬುವ ಆಧಾರಮೇಲೆ ದೇವಲೋಕದಲ್ಲಿ ಇಲ್ಲವೆನ್ನಲು ಆಗುವದಿಲ್ಲ ಅಥವಾ ಅಗ್ನಿಯ ರೂಪವನ್ನು ತಿಳಿಯಲಾಗುವದಿಲ್ಲ.ಆದ್ದರಿಂದ ಈ ಮಂತ್ರದ ಅರ್ಥಕ್ಕೆ ಯಾವ ವಿರೋಧವೂ ತಟ್ಟುವದಿಲ್ಲ.ಆದ್ದರಿಂದ ಇಲ್ಲದ ವಸ್ತುಗಳ ನಿರ್ದೇಶವಿದೆ ಎಂಬ ಅಭಿಪ್ರಾಯವೇ ನಿರಾಧಾರವಾದದ್ದು.

ಜೈ.ಸೂ.೧.೨.೩೬ ಅರ್ಥವಿಪ್ರತಿಷೇಧಾತ್ || 
ಅದಿತಿರ್ದ್ಯೌಃ...(ಋ.೧.೮೯.೧೦) , ಇತಿ ಮಂತ್ರ ಆಮ್ನಾಯತೇ | ಯದೇವ ದ್ಯೌಸ್ತದೇವಾಂತರಿಕ್ಷಮಿತ್ಯಯಮರ್ಥೋ ವಿಪ್ರತಿಷಿದ್ಧಃ | ಏವಂ ಏಕ ರುದ್ರಃ ( ತೈ.ಸಂ.೧.೮.೬.೧) ಸಹಸ್ರಾಣಿ ಸಹಸ್ರಶೋ ಯೇ ರುದ್ರಾ (ತೈ.ಸಂ.೪.೫.೧೧.೫) 
ಸೂತ್ರಭಾಷ್ಯ :-
ಅದಿತಿಯೇ ಅಂತರಿಕ್ಷ , ಸ್ವರ್ಗ ಮುಂತಾದ ವಿರುದ್ಧಾರ್ಥಗಳು ಒಂದೇ ವ್ಯಕ್ತಿಗೆ ಹೇಗೆ ಅನ್ವಯಿಸುತ್ತದೆ? 
ರುದ್ರನೇ ಒಬ್ಬನೇ ಬೇರೆಯಾರೂ ಇಲ್ಲ ಎಂದು ಹೇಳುವ ಮಂತ್ರವು ತಾನೇ ಸಾವಿರ ಸಾವಿರ ರುದ್ರಾದಿಗಳು ಈ ಭೂಮಿಯಲ್ಲಿದ್ದಾರೆ ಎಂಬ ಮಂತ್ರಗಳು ವಿರುದ್ಧಾರ್ಥವಾಗಿವೆ.ಆದ್ದರಿಂದ ಈ ಮಂತ್ರಗಳು ವಿಚಾರಯೋಗ್ಯವಲ್ಲ.
ಋ.ಸಂ ಭಾಷ್ಯ:-
ಲೋಕದಲ್ಲಿ ಒಬ್ಬ ಉಪಕಾರಿಯಾದ ಮನುಷ್ಯನನ್ನು ಕುರಿತು ಹೇಳುವಾಗ ನೀನೇ ತಂದೆ, ನೀನೇ ತಾಯಿ, ನೀನೇ ಬಂಧು ಎಂದು ಮುಂತಾಗಿ ಹೇಳುವದು ರೂಢಿಯಷ್ಟೇ .ಅದು ಹೇಗೆಂದರೇ ಆ ಎಲ್ಲಾ ಗುಣಗಳು ನಿನ್ನಲ್ಲಿವೆ ಎಂದರ್ಥ.ಆ ಗುಣಗಳಿಂದ ನಿನಗೆ ಪ್ರಯೋಜನ ಉಂಟು ಎಂಬುವದು ಮಂತ್ರಾರ್ಥ.ಹಾಗೆಯೇ ಸ್ವರ್ಗಮತ್ತು ಅಂತರಿಕ್ಷದ ಗುಣಗಳನ್ನು ದೇವತೆಯಲ್ಲಿ ಆರೋಪಿಸುವದು ದೋಷವಲ್ಲ.
ತೈ.ಸಂ ಭಾಷ್ಯ:-
ರುದ್ರನು ತನಗೆರಡಿಲ್ಲದವನೂ, ಒಬ್ಬನೇ ಆದರೂ ಬಹುಸ್ಯಾಂ "ಪ್ರಜಾಯೇಯೇತ" ಎಂಬ ಶ್ರುತಿವಾಕ್ಯದಂತೆ ತನ್ನ ಯೋಗಸಾಮರ್ಥ್ಯದಿಂದಲೇ ಅನೇಕರೂಪಗಳನ್ನು ಧಾರಣೆ ಮಾಡುತ್ತಾನೆ.ತನ್ನ ಶಕ್ತಿಸಾಮರ್ಥ್ಯಗಳಿಂದಲೇ ಅನೇಕ ರೂಪಗಳಿಂದ ಗೋಚರನಾಗುತ್ತಾನೆ.ಆದ್ದರಿಂದ ಮಂತ್ರಾರ್ಥಕ್ಕೆ ವಿರೋಧವಿಲ್ಲ.
ಹೀಗೆ ಸಾಯಣರ ಭಾಷ್ಯವು ಅವರ ಪ್ರತಿಜ್ಞೆಗೆ ಅನುಗುಣವಾಗಿ ಸಂಪೂರ್ಣವಾಗಿ ವಿಧ್ಯರ್ಥ ಸಾಧನೆಗಾಗಿಯೇ ಬರೆದಿರುವದು. ಆದ್ದರಿಂದ ಇದರಲ್ಲಿ ಅರೋಪಮಾಡುವವರು ತಮ್ಮ ಅಜ್ಞಾನವನ್ನು ಜಗಜ್ಜಾಹಿರ ಮಾಡಿದಂತೆಯೇ ಸರಿ.

ಹರಿ ಓಂ ತತ್ ಸತ್.
ಸತ್ಯಪ್ರಕಾಶ ಸೀತಾರಾಮ.

ಸಾಯಣ ಭಾಷ್ಯವೂ ಮತ್ತು ತತ್ತ್ವವಾದಿಗಳೂ. 
ಭಾಗ-೦೨: ಪಂಚ ದೋಷನಿವಾರಣೆ.
*****

ಸಾಯಣ ಭಾಷ್ಯವೂ ಮತ್ತು ತತ್ತ್ವವಾದಿಗಳೂ. 
ಭಾಗ-೦೨: ಪಂಚ ದೋಷನಿವಾರಣೆ.
ವೇದಾನಾಂ ಅಧ್ಯಾತ್ಮಪರತಾ ನಾಸ್ತೀತಿ ಕೋ ನಾಮ ಬ್ರೂತೇ ಮಧ್ವಭಾಷ್ಯೇಷು ಜಾಗ್ರತ್ಸು.. 
ವೇದಗಳಿಗೆ ಆಧ್ಯಾತ್ಮಪರಭಾಷೆಗಳು ಇಲ್ಲವೆಂಬ ಸಂಶಯ ಇದ್ದಲ್ಲಿ  ಮಧ್ವಾಚಾರ್ಯರ ಭಾಷ್ಯಗಳು ಇವೆ ಎಂಬ ಭಾವಾರ್ಥವಿರುವ ಮೇಲಿನ  ಸಂಸ್ಕೃತವಾಕ್ಯದ ಅರ್ಥಕ್ಕೂ ಸಾಯಣ ಭಾಷೆಗೂ ಏನು ಸಂಬಂಧ ? ಸಂಬಂಧ ಇದೇ .ಸುಮಾರು ಎಂಟುನೂರು ವರ್ಷಗಳಿಂದಲೂ ಬಿಡಿಸಲಾಗದ ನಂಟು . 
ಸಾಯಣರೇನೂ ನಾನು ವೇದಗಳಿಗೆ ಅದ್ವೈತಪರವಾದ ಭಾಷ್ಯಗಳನ್ನು ಬರೆಯುತ್ತೇನೆ ಎಂಬುದಾಗಿ ಪ್ರತಿಜ್ಞೆಮಾಡಿಲ್ಲದಿದ್ದರೂ ಈ ಅರ್ವಾಚೀನ ತತ್ತ್ವವಾದಿಗಳು ಈ ರೀತಿಯಾದ ಅಸಂಬದ್ಧ ಆರೋಪಗಳನ್ನು ಹೇಗಾದರು ಮಾಡಿ ಅದ್ವೈತಿಗಳ ಕೊರಳಿಗೆ ಹಾಕಬೇಕೆಂಬ ವ್ಯರ್ಥ ಪ್ರಯತ್ನವನ್ನು ಶ್ರೀಮದಾಚಾರ್ಯರ ಹೆಸರಿನಲ್ಲಿ ಬೆಳೆಸುತ್ತಿರುವದು ಯಾವ ಪುರುಷಾರ್ಥಕ್ಕೋ ?
ಸಾಯಣರ ಭಾಷ್ಯ ಅಧ್ಯಾತ್ಮಪರವಲ್ಲ ಎಂಬ ಅರ್ವಾಚೀನ ತತ್ತ್ವವಾದಿಗಳ ಅಸಂಬದ್ಧ ಆರೋಪವನ್ನು ಹಿಂದಿನ ಸಂಚಿಕೆಯಲ್ಲಿ ಅಸಂಗತ ಎಂಬುದಾಗಿ ತಿರಸ್ಕರಿಸಿದ್ದಾಯಿತು.ಇನ್ನು ಈ ಸಂಚಿಕೆಯಲ್ಲಿ ಅವರೇ ಹೇಳಿರುವ ಐದು ದೋಷಗಳಲಿ ಮೂರಕ್ಕೆ ಸಮಾಧಾನ ಹೇಳುತ್ತಾ , ಷಡಂಗಗಳಲ್ಲಿ ಒಂದಾದ ಪ್ರಾತಿಶಾಖವನ್ನು ಉದ್ಧರಿಸಿಲ್ಲ , ಪ್ರಾತಿಶಾಖ ಪರವಾದ ಅರ್ಥವನ್ನು ಕೊಟ್ಟಿಲ್ಲ ಎಂಬ ಅವರ ಹಾಸ್ಯಾಸ್ಪದ ಅಭಿಪ್ರಾಯವನ್ನೂ ಐದು ದೋಷಗಳೂ ಇವರ ಅಜ್ಞಾನದಿಂದಲೇ ಉಂಟಾಗಿರುವದು ಎಂಬುದನ್ನು ಸಾಧಾರ ನಿರೂಪಿಸುತ್ತೇವೆ. 

ಪ್ರಾತಿಶಾಖ್ಯಮ್ :ಬೃಹದ್ವ್ಯಾಕರಣ  ಬೃಹಸ್ಪತಿಶೀಕ್ಷಾ :-೦೧.೦೨ ಪದ ಚರ್ಚಾ

ಶಾಖಾಂ ಶಾಖಾಂ ಪ್ರತಿ ಪ್ರತಿಶಾಖಂ | ಪ್ರತಿಶಾಖಂ ಭವಂ ಪ್ರಾತಿಶಾಖ್ಯಂ ಇತಿ ವ್ಯುತ್ಪತ್ಯನುಸಾರಂ ಪ್ರಾತಿಶಾಖ್ಯಂ ನಾಮ ಗ್ರಂಥಃ ಪ್ರತಿಶಾಖಮಧಿಕೃತ್ಯ ಕೃತಂ ಶಾಸ್ತ್ರಂ ವಿದ್ಯತೇ || ಪ್ರತಿಶಾಖ್ಯಂ ಚರಣಮಿತ್ಯರ್ಥಃ | ವೈದಿಕಮಂತ್ರಾಣಾಂ ಸುರಕ್ಷಾರ್ಥ ವೈದಿಕಕಾಲೇ ಚರಣವಿಶೇಷಸ್ಯಾಚಾರ್ಯಾಣಾಂ ಪರಿಷದಾಯೋಜಿತಂ ಭವತಿ ಸ್ಮ | ತತ್ರ ತಚ್ಚರಣವಿಶೇಷಸ್ಯ ಸಂಹಿತಾಪಾಠಮಧಿಕೃತ್ಯ ಧ್ವನಿವಿಷಯಕಂ ,ಸಂಧಿವಿಷಯಕಂ , ಉದಾತ್ತಾದಿಸ್ವರವಿಷಯಕಂ ಪದಾದಿವಿಷಯಕಂಚ ಶಾಸ್ತ್ರಾರ್ಥಂ ಭವತಿ ಸ್ಮ || ತಸ್ಮಿನ್ನೇವ ಪರಿಷದೀ ವಿಚಾರ್ಯಮಾಣತ್ವಾದ್ ಪ್ರಾತಿಶಾಖ್ಯಂ ಪಾರ್ಷದಮಿತ್ಯಭಿಧೀಯತೇ || 

ಪ್ರಾತಿಶಾಖ್ಯವು ವೇದದ  ಷಡಂಗಗಳಲ್ಲಿ ಮೊದಲನೆಯ ಅಂಗವಾದ ಶೀಖ್ಷಾ ಎಂಬುದರ ಪ್ರಮುಖ ಭಾಗವಾಗಿದೆ.ಈ ಸಂದರ್ಭದಲ್ಲಿ ಶಾಖಾ ಎಂದರೇ ವೇದಶಾಖೆಗಳು.ಅರ್ಥಾತ್ ಋಕ್ ಶಾಖಾ , ವಾಜಸನೇಯೀ ಅಥವಾ ಶುಕ್ಲಯಜುರ್ವೇದೀಯ ಶಾಖಾ , ತೈತಿರೀಯ ಯಜುಶ್ಶಾಖಾ ,ಸಾಮಶಾಖಾ ಮತ್ತು ಅಥರ್ವಣ ಶಾಖಾ.ವೇದಮಂತ್ರಗಳ ಸಂರಕ್ಷಣಾರ್ಥವಾಗಿ ಕ್ರಾಂತದರ್ಷಿಗಳಾದ ಋಷಿಗಳು ಆಯಾ ಶಾಖೆಗಳಲ್ಲಿ  ಆಯಾ ಮಂತ್ರಗಳ ಪಾದಗಳು ಅಥವಾ ಚರಣಗಳು ,  ಒಟ್ಟು ವಾಕ್ಯಗಳು , ಸಂಧಿಗಳು ಮುಖ್ಯವಾಗಿ ದುಃಖಂಡ(ಋಗ್ವೇದ ಮತ್ತು ವಾಜಸನೇಯೀ) ಮತ್ತು ಅವಗ್ರಹಗಳು (ಯಜುರ್ವೇದ ,ಅಥರ್ವವೇದ ಮತ್ತು ಸಾಮವೇದ) ಅವುಗಳ ಜೋಡಣೆ ಮತ್ತು ವಿಭಜನೆ , ಸ್ವರಗಳಾದ ಹ್ರಸ್ವ,ದೀರ್ಘ , ಪ್ಲುತ ,ಪ್ರಚಯ ಮತ್ತು ಕಂಪಗಳು ಮತ್ತು ಪದಗಳ ವಿಷಯಗಳನ್ನು ಕುರಿತಾದ ಪರಸ್ಪರ ವಿಚಾರವಿಮರ್ಷೆಗಳಿಂದ ಪದಗಳ  ಸ್ವರೂಪವನ್ನು ನಿರ್ಣಯಿಸಿ  ಜಿಜ್ಞಾಸುಗಳಿಗೆ ಈ ಪ್ರಾತಿಶಾಖ್ಯ ಅಥವಾ ಶೀಕ್ಷಾ ಎಂಬ ಅಂಗಗಳ ಮೂಲಕ ತಿಳಿಸಿಕೊಟ್ಟಿದ್ದಾರೆ.

ವೇದಗಳ ಷಡಂಗಗಳಲ್ಲಿ ಒಂದಾದ  ಪ್ರಾತಿಶಾಖಾ ಅಥವಾ ಶೀಕ್ಷಾ ಗ್ರಂಥಗಳು   ವೇದದ ಪದಗಳಿಗೆ ನಿರ್ವಚನವನ್ನು ಹೇಳುವದೇ ಇಲ್ಲ .ವೇದದ ಷಡಂಗಗಳಲ್ಲಿ ಮೊದಲನೆಯದಾದ  ಪ್ರಾತಿಶಾಖೆಗಳು ವೇದವಾಕ್ಯಗಳ ಪದ ಸ್ವರೂಪ ,ಸ್ವರ ಉತ್ಪತ್ತಿ , ಅವಗ್ರಹ ,ದುಃಖಂಡ ,ದ್ವಿತ್ವ, ಪ್ಲುತ್ವ ,ಪ್ರಚಯ,ಏಕಮಾತ್ರ ,ತ್ರಿಮಾತ್ರಾ ಕಂಪಗಳು , ಪ್ರಕೃತಿ , ಧಾತ್ವರ್ಥಪ್ರಚೇಯಗಳ ಜೋಡಣೆ ,ಸ್ವರಾಧಾರಿತ ಸ್ಥಾನಗಳಲ್ಲಿ ಅನುಕ್ರಮ ,ವಿಲೋಮಪದಗಳಿಗೆ ಸ್ವರಸ್ಥಾನ , ಏಕವಚನ,  ಬಹುವಚನ , ಸಂಬೋಧನಾತ್ಮಕ ,ನಿರ್ದೇಶಾತ್ಮಕ ,ನಕಾರಾತ್ಮಕ ಮತ್ತು ತಟಸ್ಥ ಲಕ್ಷಣಗಳುಳ್ಳ ಕ್ರಿಯಾಪದದ ನಿರೂಪಣೇ , ಅಧ್ಯಯನಾಧ್ಯಾಪನ ನಿಯಮ ಹೀಗೆ ಮುಂತಾದ ವಿಷಯಗಳಲ್ಲಿ ಇದಮಿತ್ಥಂ ಎಂಬುದಾಗಿ ಶಾಸ್ತ್ರೀಯವಾಗಿ ತಿಳಿಸಿಕೊಡುತ್ತವೆ. ಇದನ್ನು ಸಾಯಣರು ನೂರುಪ್ರತಿಶತ ನಿಖರತೆಯಿಂದ ನಿರೂಪಿಸಿದ್ದಾರೆ ಎನ್ನುವದಕ್ಕೆ ಅವರು ನಮಗೆ ಕೊಟ್ಟಿರುವ ಸ್ವರ ಸಹಿತ ವೇದಮಂತ್ರಗಳ ಪದಸ್ವರೂಪಗಳೇ ಸಾಕ್ಷಿ.ಎಲ್ಲರೂ ಇಂದಿಗೂ ಇವರು ಕೊಟ್ಟ ಪದಸ್ವರೂಪಗಳ ಆಧಾರದ ಮೇಲೇ ಪದಾರ್ಥಗಳನ್ನು ಹೇಳುತ್ತಿದ್ದಾರೆ. ಈ ಪದಾರ್ಥಗಳನ್ನು ಸಂಸ್ಕೃತ ಭಾಷಾಧಾರಿತ ಅರ್ಥಗಳನ್ನು ಕಲ್ಪಿಸಿ ಇವುಗಳ ಅರ್ಥಗಳನ್ನು ಹಾಳುಗೆಡಹಿದ ಕೀರ್ತಿಯೂ ಈ ಅರ್ವಾಚೀನ ವಿದ್ವಾಂಸರುಗಳಿಗೇ ಸಲ್ಲುತ್ತದೆ.ಇಂಥದ್ದರಲ್ಲಿ ಸಾಯಣರ ಮೇಲೆ ಅಪವಾದ.ಕೈಲಾಗದವರು ಮೈಪರಚಿಕೊಳ್ಳದೇ ಇನ್ನೇನು ಮಾಡಿಯಾರು.  
ಇಷ್ಟಕ್ಕೂ ಸಾಯಣರು ಪದವಿಭಾಗ ಮಾಡಿರುವದು , ವಿಭಾಗದನಂತರ ಶಾಖಾನುಸಾರ ಸ್ವರಗಳ ಸಂಯೋಜನೆ , ದುಃಖಂಡದಲ್ಲಿ ಪದಚ್ಛೇದ ಮುಂತಾದವುಗಳಲ್ಲಿ ಯಾವುದೇ ದೋಷವಿಲ್ಲದಿರುವದೇ ಸಾಯಣರಿಗೆ ಪ್ರಾತಿಶಾಖದ ಮೇಲಿನ ಸ್ವಾಮಿತ್ವಕ್ಕೆ ನಿದರ್ಶನ.ಇನ್ನು ಶ್ರೀಮದಾಚಾರ್ಯರ ಋಗ್ಭಾಷ್ಯದಲ್ಲಿ ತಾವು ಬರೆದಿರುವ ನಲವತ್ತ ನಾಲ್ಕು ಸೂಕ್ತಗಳ ಭಾಷ್ಯವನ್ನು ಸವಿಸ್ತಾರ ಪಾಣಿನೀಯ ಶೀಕ್ಷಾ ಮತ್ತು ನಿರುಕ್ತಗಳನ್ನು ಸಾಧಾರ ರೂಪಿಸಿ ಅಧ್ಯಾತ್ಮಪರವಾದ ಅರ್ಥವನ್ನು ಬರೆದು ತಮ್ಮ ಪರಂಪರೆಯಲ್ಲಿಯಾರಾದರೂ ಮುಂದುವರೆಸಬಹುದೇನೋ ಎಂಬ ಆಶಯಕ್ಕೆ ಎಳ್ಳುನೀರು ಬಿಟ್ಟು ಕೇವಲ ಖಂಡನ ಕಲಹಪ್ರಿಯರಾಗಿ ಕುಗ್ರಂಥಗಳನ್ನು ರಚಿಸಿ ಶ್ರೀಮದಾಚಾರ್ಯರಿಗೆ ದೊಡ್ಡ ಅಪಚಾರವನ್ನೇ ಮಾಡಿದ್ದಾರೆ. ಇನ್ನು ಇಂಥ ಕೈಲಾಗದವರು ಸಾಯಣರು ಅಧ್ಯಾತ್ಮಪರವಾಗಿ ಏನನ್ನೂ ಬರೆದಿಲ್ಲ ಎಂಬ ಸುಳ್ಳು ಆಪಾದನೆಯನ್ನು ಹಾಕಿರುವದು ಸರ್ವಥಾ ಸೌಜನ್ಯವಲ್ಲ. ಸಾಯಣರ ಕಾಲಕ್ಕೆ ಋಗಾರ್ಥದೀಪಿಕಾ (ಶ್ರೀಮದಾಚಾರ್ಯರು ಇದನ್ನೇ ತಮ್ಮ ಋಗ್ಭಾಷ್ಯಕ್ಕೆ  ಯಥೇಚ್ಛವಾಗಿ ಬಳಸಿಕೊಂಡಿದ್ದಾರೆ.) , ಭಟ್ಟಭಾಸ್ಕರನ ವೇದಾರ್ಥ ಮೀಮಾಂಸ , ವಿಷ್ಣುಸೂರಿಗಳ ತ್ರೈಭಾಷ್ಯ ಕೌಮುದೀ ಮುಂತಾದವುಗಳು ಆಧ್ಯಾತ್ಮಪರವಾಗಿಯೇ ಇದ್ದವು.ಆದರೇ ಕರ್ಮಪರವಾದ ಯಾವುದೇ ಭಾಷ್ಯಗಳು ಇಲ್ಲದಿರುವ ಕಾರಣ ವಿದ್ಯಾರಣ್ಯರ ಆಜ್ಞೆಯ ಮೇರೆಗೆ ಚತುರ್ವೇದಗಳಿಗೆ ಕರ್ಮಮೀಮಾಂಸಾಪರವಾದ ಭಾಷ್ಯವನ್ನು ಬರೆದಿದ್ದಾರೆ.ಅಷ್ಟೇ ಅಲ್ಲ ಚತುರ್ವೇದಗಳಿಗೇ ಯಜ್ಞವಿಧಿಗಳು, ಶ್ರೌತಸ್ಮಾರ್ತಸೂತ್ರಗಳು , ಷಡಂಗಭಾಷ್ಯಗಳು , ಪ್ರಾತಿಶಾಖಾ ವ್ಯಾಕರಣ ಮುಂತಾದ ಸೂತ್ರಗಳಿಗೆ ಅನುಗುಣವಾಗಿ ನಾಲ್ಕೂ ವೇದಗಳಿಗೆ ಪದಪಾಠ  ,ನಾಲ್ಕೂ ವೇದಗಳ ಮಂತ್ರಬ್ರಾಹ್ಮಣ , ಉಪನಿಷತ್ತುಗಳು ಮುಂತಾದವುಗಳಿಗೇ ಅಧ್ಯಾತ್ಮಪರ ಭಾಷ್ಯಗಳು ಇವೆಲ್ಲವೂ ಈ ಮಂದಮತಿಗಳ ಕಣ್ಣಿಗೇ ಏಕೆ ಕಾಣಿಸಿಕೊಳ್ಳಲಿಲವೋ ?   
ಸಾಯಣರು ಯಾವಕಾರಣಕ್ಕಾಗಿ ಕರ್ಮಪರಭಾಷ್ಯಕ್ಕೆ ವಿದ್ಯಾರಣ್ಯರಿಂದ ನಿಯೋಜಿಸಲ್ಪಟ್ಟರು ಎಂಬುವದನ್ನು ಹಿಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದೇವೆ. ಆದರೂ ಈ ಭಾಷ್ಯವು ಮೇಲ್ನೋಟಕ್ಕೆ ಏಕೆ ಅಧ್ಯಾತ್ಮಪರವಲ್ಲ ಎಂಬುವದನ್ನು ಸೂಕ್ಷ್ಮವಾಗಿ ಮತ್ತೆ ತಿಳಿಸಿಕೊಟ್ಟು ಈ ಗ್ರಂಥವನ್ನು ಮುಂದಿನ ಸಂಚಿಕೆಯಲ್ಲಿ ಮುಗಿಸುತ್ತೇನೆ.
ಪೂರ್ವಪಕ್ಷ " 
ಆಮ್ನಾಯಸ್ಯ ಕ್ರಿಯಾರ್ಥತ್ವಾದಾನರ್ಥಕ್ಯಮತದರ್ಥಾನಾಂ ತಸ್ಮಾದನಿತ್ಯಮುಚ್ಯತೇ || ಜೈ.ಮೀ.ಸೂ .|| ೧.೨.೧|| ಆಮ್ನಾಯಸ್ಯ ಸರ್ವಸ್ಯ ಕ್ರಿಯಾಪ್ರತಿಪಾದನಾಯ ಪ್ರವೃತ್ತತ್ವಾದಕ್ರಿಯಾಪ್ರತಿಪಾದಕಾನಾಮರ್ಥವಾದಾನಾಂ ನಾಸ್ತಿಕಶ್ಚಿದ್ವಿವಕ್ಷಿತಃ ಸ್ವಾರ್ಥ: ||
ವೇದವಾಕ್ಯಗಳೆಲ್ಲವೂ ಯಾವುದಾದರೊಂದು ಕ್ರಿಯೆ ಅಥವಾ ಕರ್ಮಗಳನ್ನು ವಿಧಿಸುತ್ತವೆಯಾದರಿಂದ ಕರ್ಮಗಳಿಗೆ ಸಂಬಂಧ ಪಡದ ಅರ್ಥವಾದವಾಕ್ಯಗಳಿಗೇ ಉದ್ದಿಷ್ಟವಾದ ಅರ್ಥವಿಲ್ಲದಿರುವದರಿಂದ ಅವು ಅನಿತ್ಯ ವಾಕ್ಯಗಳು.  ಆದ್ದರಿಂದ ಮುಂದಿನ ಸೂತ್ರದಲ್ಲಿ ಹೇಳಿದ ದೋಷಗಳು ಅರ್ಥವಾದಗಳಿಗೆ ಅಂಟುತ್ತವೆ.
ಶಾಸ್ತ್ರವಿರೋಧಾಚ್ಚ :-ಜೈ.ಮೀ.ಸೂ .೧.೨.೨
ಶಾಸ್ತ್ರವಿರೋಧಃ  ದೃಷ್ಟವಿವಿರೋಧಃ ಶಾಸ್ತ್ರದೃಷ್ಟವಿರೋಧಃ ಇತಿ ತ್ರಿವಿಧೋ ವಿರೋಧೋಽರ್ಥವಾದೇಷೂಪಲಭ್ಯತೇ |ಸ್ವರ್ಗಕಾಮೋಯಜೇತೇತ್ಯಾದಿಶಾಸ್ತ್ರೇ ಹ್ಯಾಮುಷ್ಮಿಕಫಲಂದೃಷ್ಯತೇ | ತಸ್ಮಾದ್ವಿರೋಧಾದರ್ಥವಾದಾನಾಮಪ್ರಾಮಾಣ್ಯಮ್||
ಶಾಸ್ತ್ರಕ್ಕೂ ಅನುಭವಕ್ಕೂ ವಿರುದ್ಧವಾಗಿರುವದರಿಂದ ಅರ್ಥಭಾಗವು ಪ್ರಮಾಣವಲ್ಲ.
ಅನಿತ್ಯಸಂಯೋಗಾತ್ || ಜೈ.ಸೂ.೧.೨.೬||
ಕಿಂಬಹುನಾ, ಸರ್ವಥಾಪಿನಾಸ್ತ್ಯೇವಾರ್ಥವಾದಾನಾಂ ಪ್ರಾಮಾಣ್ಯಮ್||
ನಿತ್ಯವಲ್ಲದ ವಸ್ತುಗಳನ್ನು ಹೇಳುವದರಿಂದ ಅರ್ಥವಾದವು ಪ್ರಾಮಾಣ್ಯವಲ್ಲ. ಹೀಗೆ ಮಂತ್ರಬ್ರಾಹ್ಮಣಗಳ ಮೇಲೆ ಪ್ರಾಭಾಕರಮೀಮಾಂಸದವರೂ ಧ್ಯಾನನಿಯೋಗಿಗಳು ಭೇದಾಭೇದೀಗಳು ವಿಪರೀತವಾದ ಆಕ್ಷೇಪಗಳನ್ನು ಹಾಕಿ ಬಹಳಗೊಂದಲಕ್ಕೀಡುಮಾಡಿದ್ದರು. ಆ ಸಮಯದಲ್ಲಿ ಸಾಯಣರ ವೇದಮಂತ್ರಗಳು ವಿಧ್ಯುಕ್ತ ಕರ್ಮಪರವೂ ಆಧ್ಯಾತ್ಮಪರವೂ ಮತ್ತು ಕರ್ಮಗಳನ್ನು ವಿಧಿಸದ ಅರ್ಥವಾದಗಳು ವೇದದ ಅವಿಭಾಜ್ಯ ಅಂಗವೆಂಬುದಾಗಿ ಅವುಗಳೂ ಪ್ರಾಮಾಣ್ಯವೇ ಎಂಬುದಾಗಿ ಮಂಡಿಸುವಕಾರ್ಯವು ಅವರ ಆದ್ಯಕರ್ತವ್ಯವೇ ಆಗಿತ್ತು .
ಸಿದ್ಧಾಂತಪಕ್ಷ : 
ವಿಧಿನಾತ್ವೇಕವಾಕ್ಯತ್ವಾತ್ ಸ್ತುತ್ಯರ್ಥೇನ ವಿಧೀನಾಂ ಸ್ಯುಃ || ಜೈ,ಸೂ. ೦೧.೦೨.೦೭||
ಕ್ರಿಯಾಕಾರತ್ವಗಳಲ್ಲಿ ವಿಧಿ ಮತ್ತು ಅರ್ಥವಾದ ಎರಡೂ ಸೇರಿಯೇ ಅನ್ವಯವಾಗುತ್ತದೆ.ಎರಡು ಒಂದೇ ವಾಕ್ಯದ ಭಾಗಗಳು. ಪ್ರಸಕ್ತವಾದ ವಿಧಿಗಳಲ್ಲಿ ಹೇಳಿರುವ ಅಂಶಗಳನ್ನು ಅರ್ಥವಾದ ವಾಖ್ಯಗಳು ಸ್ತುತಿಸುತ್ತವೆ. ಸಾಯಣರು ತಮ್ಮ ನಿಲುವಿಗೆ ಈ ಕೆಳಗಿನ ಋಗ್ವೇದದ ಮಂತ್ರಕ್ಕೆ ಭಾಷ್ಯರೂಪದಲ್ಲಿ ವಿಧ್ಯರ್ಥಮತ್ತು ಅಧ್ಯಾತ್ಮ ಪೂರ್ವಕವಾಗಿ ಉದಾಹರಿಸಿರುತ್ತಾರೆ. ಸಾಯಣರು ದೈವಾಂಶ ಸಂಭೂತರಾಗಿದ್ದರಿಂದಲೇ ಒಂದೇ ಋಕ್ಕಿಗೆ ನಾಲ್ಕು ಭಾವಗಳು ಅರ್ಥಾತ್ ಕರ್ಮಪರ , ವಿಧಿಪರ  , ಅರ್ಥವಾದಪರ ಮತ್ತು ಅಧ್ಯಾತ್ಮ ಪರವಾದ ಭಾಷ್ಯವನ್ನು ಬರೆಯುವದಕ್ಕೇ ಸಾಧ್ಯವಾಗಿದ್ದು ಎಂದರೇ ಅತಿಶಯೋಕ್ತಿಯಲ್ಲ.
ಇದಂ ವಿಷ್ಣುರ್ವಿ ಚಕ್ರಮೇ ತ್ರೇಧಾ ನಿ ದಧೇ ಪದಮ್ | ಸಮೂಳ್ಹಮಸ್ಯ ಪಾಂಸುರೇ ||೧,೦೨೨.೧೭|| ಈ ಭಾಷಯದಲ್ಲಿ  ಸಾಯಣರು ಪ್ರಾತಿಶಾಖಾ ಪರವಾಗಿ ಪಾಣಿನೀಯಶೀಕ್ಷಾ (೦೫.೦೩.೪೬:, ೦೬.೦೧.೧೫:,) ಮತ್ತು ಕಾಷಿಕಾ ವೃತ್ತಿ(೦೫.೦೧:, ೧೦೨.೦೭:) , ಕರ್ಮಮತ್ತು ವಿಧ್ಯರ್ಥ ಪರವಾಗಿ ಆಶ್ವಲಾಯನ ಸೂತ್ರವನ್ನೂ ( ೦೧.೦೬ :, ೦೧.೩೦:, ೦೪.೦೫:, ೦೪.೦೮:) ,  ಮತ್ತು ಅಧಾತ್ಮಪರ ಅರ್ಥಾತ್ ಯಾಥಾರ್ಥಪರವಾಘಿ ನಿರುಕ್ತವನ್ನೂ (೧೨.೧೯) ಬಹಳ ವಿಸ್ತಾರವಾಗಿ ವಿವರಿಸಿದ್ದಾರೆ. ಇದು ಇಂಥ ಪರದೂಷಣಾಸಕ್ತರಾದವರ ಕಣ್ಣಿಗೆ ಬೀಳದಿರುವದು ಅವರ ಅಧ್ಯಯನದ ಕೊರತೆಯನ್ನು ಎತ್ತಿ ತೋರಿಸುತ್ತದೆ.ಆದ್ದರಿಂದ ಈ ತತ್ತ್ವವಾದಿಗಳು ಹಾಕಿದ ಮೂರು ದೋಷಗಳು , ಅಧ್ಯಾತ್ಮಪರವಾದ ಅರ್ಥ , ಪ್ರಾತಿಶಾಖಾಗಳ ಉಲ್ಲೇಖ ಮತ್ತು ವಿಷ್ಣುಸರ್ವೋತ್ತಮಪರವಾದ ನಿರ್ವಚನ ಎಂಬುದು ಕೇವಲ ಒಂದೇ ರುಕ್ಕಿನಲ್ಲಿ ನಿರಸ್ತವಾಯಿತು. 

ಸಾಯಣ ಭಾಷ್ಯವೂ ಮತ್ತು ತತ್ತ್ವವಾದಿಗಳೂ.  ಭಾಗ-೦೩: ಪಂಚ ದೋಷನಿವಾರಣೆ.


ಪಶೂನ್ ಸ್ತಾನ್ ಚಕ್ರೇ(ಪುರುಷ ಸೂಕ್ತ) , ಗಂಧದ್ವಾರಾ , ಪರೋಕ್ಷಪ್ರಿಯಾಃ ,ಉತಬ್ರುವಂತು  ನೋ ನಿದಃ  ಮತ್ತಿತರ ಮಂತ್ರಗಳ ವಿಧ್ಯರ್ಥಮತ್ತು ಅಧ್ಯಾತ್ಮ ಪೂರ್ವಕ ವಿವರಣೆ ||

***
ಸಾಯಣಭಾಷ್ಯ—

ಬೌಧಾಯನಕಲ್ಪಸೂತ್ರೇ— “ಮೂರ್ಧಾನಂ ದಿವೋ ಅರತಿಂ ಪೃಥಿವ್ಯಾ ಇತಿ ಸ್ಥಾಲ್ಯಾ ಧ್ರುವಂ ಪೂರ್ಣಂ ಗೃಹ್ಣಾತಿ ಏಷ ತೇ ಯೋನಿರಗ್ನಯೇ ತ್ವಾ ವೈಶ್ವಾನರಾಯ ಇತಿ ಹಿರಣ್ಯೇ ಸಾದಯೇತ್” ಇತಿ |


ಸೂತ್ರರ್ಷಿಗಳಾದ ಬೋಧಾಯನರು ತಮ್ಮ ಕಲ್ಪಸೂತ್ರದಲ್ಲಿ— “ಮೂರ್ಧಾನಂ ದಿವೋ ಅರತಿಂ ಪೃಥಿವ್ಯಾಃ— ಎಂದು ಪಾತ್ರೆಯಿಂದ ಧ್ರುವವೆಂಬ ಕಿರು-ಯಜ್ಞಪಾತ್ರೆಯಲ್ಲಿ ತುಂಬ ಘೃತವನ್ನು ಸ್ವೀಕರಿಸಿ, ‘ಇದು ನಿನ್ನದೇ. ಅಗ್ನಿಯಾದ, ವೈಶ್ವಾನರನಾದ ನಿನಗಿದೋ’ ಎಂಬುದಾಗಿ ಅಗ್ನಿಯ ಸಪ್ತಜಿಹ್ವೆಗಳಲ್ಲೊಂದಾದ ಹಿರಣ್ಯದಲ್ಲಿ ನಿಕ್ಷೇಪಿಸಬೇಕು / ಸಮರ್ಪಿಸಬೇಕು / ಇಡಬೇಕು” ಎಂಬುದಾಗಿ (ಹೇಳಿರುವರು).
******

ಓಂ ಮರ್ಮಾಣಿ ತೇ ವರ್ಮಭಿಶ್ಛಾದಯಾಮಿ ಸೋಮಸ್ತ್ವಾ ರಾಜಾऽಮೃತೇನಾಭಿऽವಸ್ತಾಮ್ | ಉರೋರ್ವರೀಯೋ ವರಿವಸ್ತೇ ಅಸ್ತು ಜಯನ್ತಂ ತ್ವಾಮನು ಮದನ್ತು ದೇವಾಃ ||
(ತೈ.ಸಂ.೪.೬.೪.೧೪)

*ಪದ-ವಿಭಾಗಃ—

ಓಂ ಮರ್ಮಾಣಿ ತೇ ವರ್ಮಭಿಃ ಛಾದಯಾಮಿ ಸೋಮಃ ತ್ವಾ ರಾಜಾ ಅಮೃತೇನ ಅಭಿ-ವಸ್ತಾಮ್ | ಉರೋಃ ವರೀಯಃ ವರಿವಃ ತೇ ಅಸ್ತು ಜಯನ್ತಂ  ತ್ವಾಮ್ ಅನು-ಮದನ್ತು ದೇವಾಃ ||

ಸಾಯಣಭಾಷ್ಯಮ್ ―

ಮರ್ಮಾಣಿ ತೇ― ಇತಿ | (“ಮರ್ಮಾಣಿ ತೇ…” ಎಂಬ ಮಂತ್ರವು.) ಹೇ ಯಜಮಾನ! ತೇ ತವ ಮರ್ಮಾಣಿ ವರ್ಮಭಿಃ ಕವಚೈಃ ಛಾದಯಾಮಿ | (ಅಯ್ಯಾ ಯಜ್ಞಕರ್ತೃವೆ! ನಿನ್ನ ದೇಹದ ಮರ್ಮಸ್ಥಾನಗಳನ್ನು ರಕ್ಷಾಕವಚಗಳಿಂದ ಆಚ್ಛಾದಿಸುತ್ತೇನೆ / ಮುಚ್ಚುತ್ತೇನೆ.) ಸೋಮಃ, ರಾಜಾ ತ್ವಾಮ್ ಅಮೃತೇನ ಮರಣನಿವಾರಕೇಣ ಕೇನಾಪಿ ಕವಚವಿಶೇಷೇಣ ಅಭಿವಸ್ತಾಮ್ ಅಭಿತಃ, ಆಚ್ಛಾದಯತು | (ಸೋಮನು / ಉಮಾಸಮೇತ ಹರನು / ಚಂದ್ರನು / ಸೋಮರಸಾಭಿಮಾನಿ ದೇವತೆಯು, ಪ್ರಕಾಶಿಸುತ್ತಿರುವ (ರಾಜಾ— ರಾಜ್ ದೀಪ್ತೌ), ಮರಣನಿವಾರಕವಾದ ಅದಾವುದೋ ಅಮೃತಮಯ ವಿಶೇಷಕವಚದಿಂದ, ನಿನ್ನನ್ನು ಎಲ್ಲೆಡೆಯಿಂದ ಆಚ್ಛಾದಿಸಲಿ / ಆವರಿಸಲಿ.) ತೇ ತವ ವರಿವಃ ಧನಮ್ ಉರೋಃ ವರೀಯಃ ಅಸ್ತು, ಅನ್ಯದೀಯಾತ್ ಅಧಿಕಾತ್ ಅಪಿ ಅತ್ಯನ್ತಮ್ ಅಧಿಕಮ್ ಅಸ್ತು | (ನಿನ್ನ ಧನಸಂಪತ್ತು / ಪೂಜನೀಯತೆ / ಗೌರವ / ಭಗವತ್ಪೂಜಾದಿಸೇವೆಯು ಅನ್ಯರಿಗಿಂತ ಅಧಿಕಾಧಿಕವಾಗಿ ವರ್ಧಿಸಲಿ.) ಜಯನ್ತಂ ವಿಜಯಂ ಪ್ರಾಪ್ನುವನ್ತಂ ತ್ವಾಂ ದೇವಾಃ, ಅನುಮದನ್ತು ಅನುಕೂಲಾಃ ಭೂತ್ವಾ ಹೃಷ್ಯನ್ತು || (ಹೀಗೆ, ಬದುಕಿನಲ್ಲಿ ಗೆಲುವನ್ನು ಹೊಂದುತ್ತಿರುವ ನಿನ್ನನ್ನು ದೇವತೆಗಳು ಅನುಕೂಲರಾಗಿ ವರ್ತಿಸಿ ಹರ್ಷವನ್ನುಂಟುಮಾಡಲಿ.)

(ಮರ್ಮ— ಮೃ ಮನಿನ್ / ಮೃಙ್ ಪ್ರಾಣತ್ಯಾಗೇ ಧಾತು. ಜೀವನಸ್ಥಾನ, ಸಂಧಿಸ್ಥಾನ, ತಾತ್ಪರ್ಯ ಎಂಬರ್ಥಗಳಿವೆ. “ಸನ್ನಿಪಾತಃ ಸಿರಾ-ಸ್ನಾಯು-ಸನ್ಧಿ-ಮಾಂಸಾಸ್ಥಿಸಮ್ಭವಃ | ಮರ್ಮಾಣಿ ತೇಷು ತಿಷ್ಠನ್ತಿ ಪ್ರಾಣಾಃ ಖಲು ವಿಶೇಷತಃ ||”— ಭಾವಪ್ರಕಾಶಸಂಹಿತಾ. ವಾತ-ಪಿತ್ತ-ಕಫಗಳೆಂಬ ತ್ರಿದೋಷಗಳ ವಿಕಾರೋತ್ಪಾದಕ ಮೇಲನವೇ ಸನ್ನಿಪಾತವು. ಸಿರಾ ಎಂದರೆ ನಾಡಿ. ಸ್ನಾಯು— ಮಾಂಸಪೇಶಿ / ಮಾಂಸವು ಮೂಳೆಗೆ ಸೇರುವ ಭಾಗ. ಸಂಧಿ— ಮೂಳೆಗಳ ಸೇರುವಿಕೆ / ಗಂಟು. ಮಾಂಸ, ಅಸ್ಥಿ— ಎಲುಬು / ಮೂಳೆ. ಇವುಗಳಲ್ಲಿ ಪ್ರಾಣವು ವಿಶೇಷವಾಗಿ ನೆಲೆಸಿರುವುದರಿಂದ ಮರ್ಮಸ್ಥಾನಗಳೆಂದು ಕರೆಯಲ್ಪಟ್ಟಿವೆ.)

(ಲಘುನ್ಯಾಸಭಾಷ್ಯಭಾಗ)
*****

****


No comments:

Post a Comment