SEARCH HERE

Sunday, 22 April 2018

ಗುಲ್ಬರ್ಗಾ ಚಾತುರ್ಮಾಸ್ಯದ ಘಟನೆ Gulbarga Chaturmasa Incident why dvaita vs advaita

 year 2018

ಒಂದು ವಿಚಾರ ಗುಲ್ಬರ್ಗಾ ಚಾತುರ್ಮಾಸ್ಯದ ಘಟನೆ - ಹೋದ ವರ್ಷ ಮಹಬೂಬ್ ನಗರದಲ್ಲಿ ಒಂದು ಘಟನೆ ನಡೆಯಿತು. ಈ ಎರಡೂ ಘಟನೆಗಳು ಬ್ರಾಹ್ಮಣರ ಒಳಜಗಳಗಳೇ  ಹೊರತು ಅನ್ಯಮತಸ್ಥರಿಂದಾದದ್ದಲ್ಲ. ಮತ್ತೂ ಒಂದು ಸಾಮಾನ್ಯ ವಿಷಯವೇನಂದರೆ ಈ ಎರಡೂ ಘಟನೆಗಳು ಪಂಡಿತರಿಂದ ನಡೆದಿವೆಯೆಂದು ತಿಳಿದುಬರುತ್ತವೆ. ಶ್ರೀಗಳು ಮಹಾನುಭಾವರು, ನಡೆದಾಡುವ ದೇವರಂತೆ. ಈ ಘಟನೆಗಳಿಂದ ಯಾರಾದರೂ ನೊಂದಿದ್ದರೆ,ಯಾರಿಂದ ನೋಯಿಸಲಾಯಿತು ?, ನ್ಯಾಯ-ಅನ್ಯಾಯಗಳ ಬಗ್ಗೆ ಆಲೋಚಿಸಿ ನೊಂದವರಿಗೆ ಕ್ಷಮೆ, ನೋಯಿಸಿದವರಿಗೆ ಮುಂದೆ ಹೀಗಾಗಬಾರದೆಂಬ ಎಚ್ಚರಿಕೆ ಕೊಡುವುದು ಎಲ್ಲರ ಅಪೇಕ್ಷೆ ಆಗಿತ್ತು. ಮಹಬೂಬನಗರ ಘಟನೆಯಲ್ಲಿ ಹೀಗಾಗಲಿಲ್ಲ. ಕಲಬುರ್ಗಿಯದು ಯಾರದು ತಪ್ಪು? ಯಾರಿಗೆ ನೋವಾಯಿತು? ಎಂಬುದು ಇನ್ನೂ ನಿರ್ಣಯವಾಗಿಲ್ಲ.


ಮಹಬೂಬನಗರದ ಸಭೆಯಲ್ಲಿ, ಬಿಜಾಪುರದ “ಶಂಕರರು ಸುಳ್ಳು ಜಗತ್ತಿನ ಸುಳ್ಳು ಜಗದ್ಗುರು” ಎಂದು ವ್ಯಂಗವಾಡಿದಾಗ ಸಭೆಯಲ್ಲಿ ನೆರೆದಿದ್ದ ಸಾವಿರಾರು ಜನ ೨ ನಿಮಿಷ ಕಿವಿ ಗುಂಯ್ ಗುಟ್ಟುವಂತೆ ’ಹರಿ ಸರ್ವೋತ್ತಮ, ವಾಯು ಜೀವೋತ್ತಮ ’ ಎಂದು ಹೆಗೆರೆಗರಿ ಬಿದ್ದರು. ಇದೆಲ್ಲಾ ಶ್ರೀಗಳು ವೆದಿಕೆಯಲ್ಲಿದ್ದಾಗ ನಡೆದ ಘಟನೆ. ನಾನು ತತ್ಕ್ಷಣ ಪಂಡಿತರಿಗೆ ನಮಸ್ಕರಿಸಿ “ಮಿಥ್ಯಾ ಮತ್ತು ಅಸತ್ತು, ಇವುಗಳಲ್ಲಿ ವ್ಯತ್ಯಾಸವಿಲ್ಲವೇ? ವಿನಾಕಾರಣ ಶಂಕರರನ್ನು ಏಕೆ ನಿಂದಿಸುತ್ತೀರಿ “ ಎಂದು ಕೇಳಿದೆ. ಆದರೆ ಇಂದಿನತನಕ ಯಾವ ಮಧ್ವ ಪಂಡಿತರೂ, ಸಾಮಾನ್ಯ ಜನರೂ ’ಆ ಪಂಡಿತರು ನಿಂದಿಸಿದ್ದು ತಪ್ಪು’ ಎಂದು ಹೇಳದಿದ್ದುದು ನನ್ನ ಮನಸ್ಸನ್ನು ಕೊರೆಯುತ್ತಿದೆ. ಇದಕ್ಕೆ ವಿಪರೀತವಾಗಿ ಬಿಜಾಪುರದ ಮತ್ತೊಬ್ಬರು ನನ್ನನ್ನು ವೈಯಕ್ತಿಕವಾಗಿ ವಾಚಾಮಗೋಚರವಾಗಿ ನಿಂದಿಸಿದರು. (ಇವುಗಳ ಆಡಿಯೊ ಮತ್ತು ಲೇಖನ ನನ್ನ ಬಳಿ ಇದೆ ).

ಕಲಬುರ್ಗಿಯ ನನ್ನ ಕೆಲ ಮಿತ್ರರು ನನಗೆ ಫೋನ್ ಮಾಡಿ ಕಲಬುರ್ಗಿಯಲ್ಲಿ ಮೊನ್ನೆ ನಡೆದ ಘಟನೆಬಗ್ಗೆ ಮಾತನಾಡುತ್ತ , “ ನಮಗೆ ಹೊರಗೆ ಬ್ರಾಹ್ಮಣರೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ನಿನ್ನೆಯಿಂದ ಏನೋ ಒಂದು ತರಹದ ಮಾನಸಿಕ ವೇದನೆಯಾಗುತ್ತಿದೆ’ ಎಂದು ಹೇಳಿದರು. ಇದೇರೀತಿಯ ಅಭಿಪ್ರಾಯವನ್ನು ನನ್ನ ಆಪ್ತ ಯೋಗೇಶ ಜೋಶಿಯವರು ವ್ಹಾಟ್ಸಪ್ ಗುಂಪೊಂದರಲ್ಲಿ ಹೇಳಿದಾಗ ಅವರ ಮೇಲೆ ವೈಯಕ್ತಿಕ ನಿಂದನೆಗಳು ನಡೆದವು. ’ನಾವು ಮಾಡಿದ್ದೇ ಸರಿ ಎಂಬ ಅಹಂಕಾರದ ಮನಸ್ಥಿತಿಯಿಂದ ನಾವು ಹೊರಬಂದು ಸಮಸ್ಯೆಯ ಮೂಲವನ್ನು ಅರಿತಾಗ ಮಾತ್ರ ಅದರ ಪರಿಷ್ಕಾರ ಸಾಧ್ಯ.

ಈ ಎರಡೂ ಘಟನೆಗಳು ನಮಗೆ ಕಲಿಸುವ ಪಾಠಗಳು ಏನೆಂದರೆ ಧರ್ಮದ ಮೂಲಭೂತ ಅಂಶಗಳನ್ನು ಮರೆತಾಗ ಇಂತಹ ಘಟನೆಗಳು ನಡೆಯುತ್ತವೆ. ಧರ್ಮದ ಮೂಲಭೂತ ಅಂಶಗಳು,

·         “ಅಜ್ಯೇಷ್ಠಾಸೋ ಅಕನಿಷ್ಠಾಸ ...........” ಯಾರೂ ದೊಡ್ಡವರಿಲ್ಲ ಯಾರೂ ಚಿಕ್ಕವರಿಲ್ಲ. ಎಲ್ಲರೂ ಸರಿಸಮಾನರು.

·         “ಸಂಗಚ್ಛಧ್ವಂ ಸಂವದಧ್ವಂ ......” ಎಲ್ಲರೂ ಒಟ್ಟಿಗೆ ಬಾಳೋಣ.

·         “ ಅದ್ವೇಷ್ಟಾ ಸರ್ವಭೂತಾನಾಂ ......” ಪ್ರತಿಯೊಂದು ಪ್ರಾಣಿಯಲ್ಲಿಯೂ ದಯೆ ಇರಲಿ  ಇತ್ಯಾದಿ.

ಕೊನೆಯದಾಗಿ ನನ್ನ ಆಸೆ ಉಡುಪಿ, ಮಂತ್ರಾಲಯ, ಶೃಂಗೇರಿ ಇತ್ಯಾದಿ ಗಳಲ್ಲಿ ಬಸ್ ಇಳಿಯುತ್ತಲೇ ಶಂಕರ – ರಾಮಾನುಜ _ ಮಧ್ವ ರುಗಳ ದೊಡ್ಡ ಭಾವಚಿತ್ರ ಒಟ್ಟೋಟ್ಟಿಗೆ ಕಾಣುವಂತಹ ವಾತಾವರಣ ನಿರ್ಮಾಣವಾಗಬೇಕು. ಇಡೀ ಸಮಾಜಕ್ಕೆ ನಾವು ಆದರ್ಶರಾಗಬೇಕು.

ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಏನಾದರೂ ತಪ್ಪಾಗಿದ್ದಲ್ಲಿ ಕ್ಷಮಿಸಿ . ಇದು ನನ್ನ ವೈಯಕ್ತಿಕ ವಿಚಾರ.


ಶ್ರೀ ಅಮರ ದೀಕ್ಷಿತ್,

ಗೌರವಾಧ್ಯಕ್ಷರು, ಶೃಂಗೇರಿ ಶಂಕರ ಮಠ, ಕ್ರಿಷ್ಣಾ ಶಾಖೆ, ಹಾಗೂ

ಬಿಜೆಪಿ ನ್ಯಾಷ್ನಲ್ ಕೌನ್ಸಿಲ್ ಸದಸ್ಯರು,

ಕ್ರಿಷ್ಣಾ , ತೆಲಂಗಾಣಾ,

ಮೋ. ೯೪೪೮೭೫೭೫೮೭
******


No comments:

Post a Comment