SEARCH HERE

Monday, 12 April 2021

ಶಿವಪೂಜೆಯಲ್ಲಿ ನಿಷೇಧಿತ ಪರಿಹಾರ not to use while doing shiva pooja parihara


ಶಿವನಿಗೆ ತುಳಸಿ ಯಾಕೆ ಹಾಕಬಾರದು ಎಂದು ಕೇಳಿದವರಿಗೆ ಅನುಮಾನ ಇರುವವರಿಗೆ ಗೊತ್ತಿಲ್ಲದವರಿಗೆ ಇದನ್ನು ಓದಿ ಉತ್ತರ ಸಿಗುತ್ತದೆ .ಸರ್ವಜನ ಸುಖಿನೋಭವಂತು. 
✨💧ಶಿವಲಿಂಗವನ್ನು ಪೂಜಿಸುವ ಸಮಯದಲ್ಲಿ ಬಳಸಬಾರದ 3 ವಸ್ತುಗಳು ಯಾವುದು ಗೊತ್ತೆ..?

✨ ಶಿವಲಿಂಗವನ್ನು ಪೂಜಿಸುವಾಗ ಬಳಸಬಹುದಾದ ಮತ್ತು ಬಳಸಬಾರದ ವಸ್ತುಗಳ ಕುರಿತು ತಿಳಿದುಕೊಳ್ಳೊಣ

1.  ಸೋಮವಾರ ಉಪಾವಾಸ ಮಾಡಿ ಶಿವನನ್ನು ಆರಾಧಿಸಬೇಕು. ನಂತರ ಪಾರ್ವತಿ ದೇವಿಗೆ ಕುಂಕುಮ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ವಿವಾಹಿತ ಸ್ತ್ರೀಯರಿಗೆ ಒಳ್ಳೆಯದಾಗುತ್ತೆಂದು ನಂಬಿಕೆ ಇದೆ.

2. ಪುರಾಣಗಳು ಹೇಳುವಂತೆ ತುಲಸಿ ಪತಿಯಾದ ಶಂಕಾಸುರ ಎಂಬ ರಾಕ್ಷಸನನ್ನು ಶಿವ ಸಂಹರಿಸಿದ. ಅಂದಿನಿಂದ ತುಲಸಿ ಎಲೆಗಳಿಂದ ಶಿವನನ್ನು ಪೂಜಿಸುವುದು ನಿಲ್ಲಿಸಲಾಯಿತು. ಇಂದಿಗೂ ಮುಂದುವರೆದಿದೆ. ತುಳಸಿ ಎಲೆಗಳಿಂದ ಶಿವನಿಗೆ ಪೂಜೆ ಮಾಡಿದವರಿಗೆ ಕಷ್ಟಗಳು ಎದುರಾಗುತ್ತವೆ. ಆದ್ದರಿಂದ ಶಿವನಿಗೆ ತುಲಸಿ ಎಲೆಗಳಿಂದ ಪೂಜೆ ಮಾಡಬಾರದು.

3. ಸಾವಿರಾರು ವರ್ಷಗಳ ಹಿಂದೆ ಬೃಹತ್ ಶಿವಲಿಂಗ ಸೃಷ್ಠಿಯಾಯಿತು. ಅದಕ್ಕೆ ಆರಂಭ-ಅಂತ್ಯ ಇರಲಿಲ್ಲ. ಅದನ್ನು ಕಂಡು ಹಿಡಿಯಲು ಬ್ರಹ್ಮ, ವಿಷ್ಣು ದ್ವಯರು ಶಿವನ ಆಜ್ಞೆ ಪಡೆದು ಹೋದರು. ಲಿಂಗದ ಆರಂಭ ತಿಳಿಯಲು ವಿಷ್ಣು, ಅಂತ್ಯ ಕಂಡು ಹಿಡಿಯಲು ಬ್ರಹ್ಮ ತಲಾ ಒಂದು ದಿಕ್ಕಿಗೆ ಹೋದರು. ಲಿಂಗದ ಆರಂಭ ಕಂಡು ಹಿಡಿಯಲು ಸಾಧ್ಯವಾಗದಿದ್ದರಿಂದ ವಿಷ್ಣು ವಾಪಸ್ ಆಗುತ್ತಾನೆ. ಆದರೆ ಬ್ರಹ್ಮ ದೇವ ತಾನು ಅಂತ್ಯ ನೋಡಿದ್ದೇನೆ ಎಂದು ಶಿವನ ಮುಂದೆ ಸುಳ್ಳು ಹೇಳುತ್ತಾನೆ. ಆದ್ದರಿಂದ ಬ್ರಹ್ಮ ಹೂವು ಶಿವನ ಪೂಜೆಯಲ್ಲಿ ಸ್ಥಾನ ಕಳೆದುಕೊಂಡಿತು. ಶಿವ ಪೂಜೆಯಲ್ಲಿ ಬ್ರಹ್ಮಹೂವು ಮಾತ್ರ ಬಳಸಬಾರದು.

4. ಅರಿಶಿಣವನ್ನು ನಾವು ಪೂಜೆಗಳಲ್ಲಿ ಬಳಸುತ್ತೇವೆ. ಆದರೆ ಶಿವನ ಪೂಜೆಯಲ್ಲಿ ಮಾತ್ರ ಅರಿಶಿಣ ಬಳಸಬಾರದಂತೆ. ಏಕೆಂದರೆ ಶಿವಲಿಂಗ ಎರಡು ಭಾಗಗಳಲ್ಲಿಇರುತ್ತದೆ. ಒಂದು ಲಿಂಗ ಮತ್ತೊಂದು ಜಲಧಾರೆ. ಲಿಂಗ ಶಿವನನ್ನು ಸೂಚಿಸಿದರೆ, ಜಲಧಾರೆ ಪಾರ್ವತಿಯನ್ನು ಸೂಚಿಸುತ್ತದೆ. ಆದ್ದರಿಂದ ಅರಿಶಿಣದಿಂದ ಲಿಂಗವನ್ನು ಪೂಜಿಸಬಾರದು. ಅದರ ಬದಲು ಜಲಧಾರೆಯನ್ನು ಪೂಜಿಸಬೇಕು.

🌺 ವಿಭೂತಿಯ ಮಹತ್ವ:🌺

#ವಿಭೂತಿಗೂ ಶಿವನಿಗೂ ಅನನ್ಯ ಸಂಬಂಧ ಪರಮೇಶ್ವರನಿಗೆ 'ಭಸ್ಮೋದ್ಧೂಳಿತ', 'ಭಸ್ಮಾನುಲೇಪಿತ' ಮೊದಲಾದ ವಿಶೇಷಣಗಳು. ವಿಭೂತಿಯ ಧಾರಣೆ ಮಾಡುವುದರಿಂದ ಮೇಧಾಶಕ್ತಿ ವರ್ಧಿಸುತ್ತದೆ. ಮಿದುಳಿನ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಅದರ ಪರಿಣಾಮವಾಗಿ ಮಾನಸಿಕ ಪ್ರಸನ್ನತೆ ಲಭಿಸುತ್ತದೆ.

ಗರುಡಚಯನ, ಸೋಮಯಾಗ ಮತ್ತು ಅತಿರುದ್ರಾದಿ ಮಹಾಯಾಗಗಳಲ್ಲಿ ಗಣಪತಿ ಹವನ, ಗ್ರಹ ಶಾಂತಿ ಮುಂತಾದ ಹೋಮದಲ್ಲಿ ಹವಿಸ್ಸಿನ ದಹನದಿಂದ ಒದಗಿದ ಭಸ್ಮವು ಉತ್ಕೃಷ್ಟ ವಿಭೂತಿಯೆನಿಸುವುದು.

🌺ಶಿವ ಪರಿವಾರ -:🌺

#ನಂದಿಯಿಲ್ಲದ ಶಿವಾಲಯವಿಲ್ಲ. ಇವನು ಶಿವಗಣಗಳ ನಾಯಕ. ವೃಷಭವು ಕಾಮದ-ವೀರತ್ವದ ದ್ಯೋತಕ. ಶಿವನು ಇದನ್ನೇ ವಾಹನವನ್ನಾಗಿ ಮಾಡಿಕೊಂಡಿದ್ದಾನೆಂದರೆ ಕಾಮವನ್ನು ಜಯಿಸಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದಾನೆಂದು ಅರ್ಥ.

ನಂದಿಯ ನಂತರ ಬರುವ ಪ್ರಮುಖ ಭಂಗಿ. ಈತನು ಶಿವನಲ್ಲಿ ಏಕನಿಷ್ಠೆಯ ಭಕ್ತ. ಪಾರ್ವತಿಯು ಶಿವನಲ್ಲಿ ಐಕ್ಯವಾಗಿ, ಶಿವ ಅರ್ಧನಾರೀಶ್ವರ ರೂಪ ಪಡೆದಾಗಲೂ ಭಂಗಿ (ದುಂಬಿ) ಭಂಗದ ರೂಪ ಧರಿಸಿ ಶಿವನಿಗೆ ಪ್ರದಕ್ಷಿಣೆ ಬರುತ್ತ ಅರ್ಧನಾರೀಶ್ವರನನ್ನೇ ಮಧ್ಯದಲ್ಲಿ ಕೊರೆದನಂತೆ. ಆದ್ದರಿಂದಲೇ ಇವನಿಗೆ 'ಭೃಂಗ' ಎಂದು ಹೆಸರು ಬಂತೆಂದು ಪ್ರತೀತಿ.

ಶಿವನೊಂದಿಗೆ ನಿಕಟ ಸಂಬಂಧ ಹೊಂದಿದ ಇನ್ನೊಬ್ಬ ದೇವತೆಯೆಂದರೆ ವೀರಭದ್ರ. ದಕ್ಷ, ಸಂಹಾರಕ್ಕಾಗಿ ನಿಯುಕ್ತನಾದ ಶಿವನ ಶಕ್ತಿಯ ಸ್ವರೂಪ. ವೀರಭದ್ರನ ಅನಂತರ ಬರುವ ದೇವತೆ ಚಂಡೇಶ್ವರ. ಇವನು ಮನುಷ್ಯವರ್ಗದ ಮಹಾಭಕ್ತ. ಶಿವನ ಇತರ ಅನುಚರರೆಂದರೆ ಅವನ ಗಣಗಳು. ಇವು ಹೆಚ್ಚಾಗಿ ಪ್ರಮಥ ಅಥವಾ ಭೂತಗಣಗಳೆಂದು ಪ್ರಸಿದ್ಧ.

🌺ರುದ್ರಾಕ್ಷಿಯ ಮಹತ್ವ🌺

#ರುದ್ರಾಕ್ಷಿಯಲ್ಲಿ ಶಿವನ ಸಾನ್ನಿಧ್ಯ ಇದೆ ಎಂಬುದು ರೂಢಿಗತ ನಂಬಿಕೆ. ಸಾಲಿಗ್ರಾಮ, ಶಿವಲಿಂಗ, ಬಿಲ್ವಪತ್ರೆ, ತುಳಸಿ, ವಿಭೂತಿಗಳಂತೆ ಅದು ವಿಶಿಷ್ಟ. ರುದ್ರಾಕ್ಷವು ಶಿವಾರಾಧಕರಿಗೆ ಅತ್ಯಂತ ಪವಿತ್ರ.

ಶಿವ ರಹಸ್ಯದಲ್ಲಿ ತಿಳಿಸಿರುವಂತೆ ಶಿವನ ನೇತ್ರಗಳಿಂದ ಹುಟ್ಟಿ ರುದ್ರನ ಅಕ್ಷಿಗಳೆಂದು ಹೇಳಲ್ಪಟ್ಟು 'ರುದ್ರಾಕ್ಷಿ' ಎಂದಾಯಿತು.
ರುದ್ರಾಕ್ಷಿ ಮಣಿಗೆ ಒಂದರಿಂದ ಹದಿನಾಲ್ಕು ಮುಖಗಳಿರುತ್ತವೆ. 

ಇವುಗಳ ಮಾಲೆಯನ್ನು ಧರಿಸುವುದರಂದ ರೋಗಗಳ ನಿವಾರಣೆಯಾಗಿ ಮಂತ್ರಸಿದ್ಧಿಯಾಗತ್ತದೆಯೆಂದು ನಂಬಿಕೆ.
ಒಂದು ಮುಖವುಳ್ಳ ರುದ್ರಾಕ್ಷಿ ಪರಬ್ರಹ್ಮ ಸ್ವರೂಪವಾಗಿದ್ದು, ಅದನ್ನು ಧರಿಸಿದವರು ಜಿತೇಂದ್ರಿಯರಾಗುತ್ತಾರೆ. 

ಎರಡು ಮುಖವುಳ್ಳ ರುದ್ರಾಕ್ಷಿಯು ಅರ್ಧನಾರೀಶ್ವರ ರೂಪಿ. ಅದರ ಧಾರಣೆಯಿಂದ ಶಿವನಿಗೆ ಪರಮಪ್ರಿಯರಾಗುವರೆಂದು ನಂಬಿಕೆ.

 ಮೂರು ಮುಖಗಳ ರುದ್ರಾಕ್ಷಿಯು ಅಗ್ನಿತ್ರಯ ಸ್ವರೂಪ. ನಾಲ್ಕು ಮುಖದ ರುದ್ರಾಕ್ಷಿ ಪರಬ್ರಹ್ಮದ ಪ್ರತೀಕ. ಐದು ಮುಖದ್ದು ಸಾಕ್ಷಾತ್ ಪರಶಿವ ಸ್ವರೂಪ ಎಂಬ ಭಾವನೆ. ಅದಕ್ಕೆ ಕಾಲಾಗ್ನಿ ಎಂಬ ಹೆಸರು. 

ಆರು ಮುಖದ ರುದ್ರಾಕ್ಷಿಯು ಷಣ್ಮುಖ ಮತ್ತು ಗಣಪತಿ ದೇವತಾ ಸ್ವರೂಪಿ. ಏಳು ಮುಖಗಳ ರುದ್ರಾಕ್ಷಿ ಸಪ್ತನಿಧಿ, ಸಪ್ತಾಶ್ವ, ಸಪ್ತ ಮಾತೃಕೆಯ ಸಾನ್ನಿಧ್ಯ ಹೊಂದಿದೆ.

 ಎಂಟು ಮೊಗದ ರುದ್ರಾಕ್ಷಿಯು ಅಷ್ಟಮೂರ್ತಿ ಮತ್ತು ಅಷ್ಟವಸು ಸ್ವರೂಪಿ. ಒಂಭತ್ತು ಮುಖದ ರುದ್ರಾಕ್ಷಿ ಶಕ್ತಿಯ ಪ್ರತೀಕ. 

ಹತ್ತು ಮೊಗದ ರುದ್ರಾಕ್ಷಿಯು ಯಮದೇವಾತ್ಮಕವಾದುದು. ಹನ್ನೊಂದು ಮುಖಗಳ ರುದ್ರಾಕ್ಷಿ ಏಕಾದಶರುದ್ರ.

 ಹನ್ನೆರಡು ಮುಖಗಳ ರುದ್ರಾಕ್ಷಿಯು ದ್ವಾದಶಾದಿತ್ಯ ಸ್ವರೂಪಿ. ಹದಿಮೂರು ವದನ ರುದ್ರಾಕ್ಷಿಯು ಕಾಮನ ಪ್ರತೀಕ. ಹದಿನಾಲ್ಕು ವದನ ರುದ್ರಾಕ್ಷಿಯು ಕಾಮನ ಪ್ರತೀಕ. 

ಹದಿನಾಲ್ಕು ಕಣ್ಣುಗಳ ರುದ್ರಾಕ್ಷಿಯು ರುದ್ರನೇತ್ರ ಸ್ವರೂಪಿ. ಇದನ್ನು ಧರಿಸುವುದರಿಂದ ಸಮಸ್ತ ವ್ಯಾಧಿ ನಿವಾರಣೆ.

ಶಿವನು ಯೋಗಾಚಾರ್ಯ, ಸಂಗೀತ, ನೃತ್ಯ, ಕಲೆಯ ಮಹಾಗುರು, ದಕ್ಷಿಣಾಮೂರ್ತಿ, ಪರಿಪೂರ್ಣ, ಲೋಕ ಗುರುವಿನ ಆದರ್ಶರೂಪವೇ ದಕ್ಷಿಣಾಮೂರ್ತಿ.

🌺ಬಿಲ್ವ ವೃಕ್ಷ -:🌺

ಎಲ್ಲಿ ಶಿವಾಲಯವೋ ಅಲ್ಲಿ ಬಿಲ್ವವೃಕ್ಷ, ಎಲ್ಲಿ ಶಿವಪೂಜೆ ನಡೆಯುತ್ತದೋ ಅಲ್ಲಿ ಬಿಲ್ವಪತ್ರೆ. ಶಿವಾರ್ಚನೆಗೆ ಬಿಲ್ವಪತ್ರೆ ಎಲ್ಲಕ್ಕಿಂತ ಪವಿತ್ರವಾದದ್ದು. 

'ತ್ರಿಜನ್ಮಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ' ಎಂಬ ಮಂತ್ರವೊಂದೇ ಸಾಕು ಬಿಲ್ವದ ಮಹತ್ವವನ್ನು ಹೇಳಲು.
ಬಿಲ್ವವು ಅಶ್ವತ್ಥ, ಔದುಂಬರಾದಿಗಳಂತೆ ದೇವವೃಕ್ಷ. 

ಅದು ಭೌತಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಪ್ರಖ್ಯಾತ. ಇದರ ಮಹಿಮೆಯನ್ನು ಶ್ರೀಸೂಕ್ತ, ಸೌಭಾಗ್ಯ ಸಂಜೀವಿನಿ, ಸನತ್ಕುಮಾರ ಸಂಹಿತೆ, ಸಾರಸ್ವತ ಸಿದ್ಧಿ, ವಾಮನ ಪುರಾಣ, ಶಿವಪುರಾಣ ಮುಂತಾದ ಗ್ರಂಥಗಳಲ್ಲಿ ವಿವರಿಸಲಾಗಿದೆ.

ಬಿಲ್ವಪತ್ರೆ ಒಣಗಿದ್ದರೂ ಒಂದು ಸಲ ಅರ್ಚಿಸಿದರೂ ನೀರಿನಿಂದ ತೊಳೆದು ಪುನಃ ಅರ್ಚಿಸಬಹುದೆಂದು ಶಾಸ್ತ್ರಮತ.

 ಸ್ಕಂದ ಪುರಾಣದಲ್ಲಿ ರೋಚಕವಾದ ಕಥೆಯೊಂದುಂಟು.

 ಲಕ್ಷ್ಮೀನಾರಾಯಣರು ಶಿವನನ್ನು ಕುರಿತು ತಪಸ್ಸು ಮಾಡಿದರಂತೆ. ಆಗ ಲಕ್ಷ್ಮಿಯ ಬಲಗೈಯಿಂದ ಬಿಲ್ವದ ಮರಹುಟ್ಟಿತಂತೆ. ಅದಕ್ಕೆಂದೇ ಶ್ರೀವೃಕ್ಷ ಎಂದು ಹೆಸರು ಪಡೆಯಿತು. 

ತ್ರಿಗುಣಗಳನ್ನು ಸಂಕೇತಿಸುವ ಅದರ ಎಲೆಯ ಮೂರು ಎಸಳುಗಳನ್ನು ತ್ರಿಮೂರ್ತಿಗಳ ಮೂರು ವೇದಗಳ ಪ್ರತೀಕ.

ಬಿಲ್ವವೃಕ್ಷದ ಕೆಳಗೆ ಕುಳಿತು ಲಕ್ಷ್ಮಿ ಮಂತ್ರವನ್ನು ಪುನರುಚ್ಚರಣೆ ಮಾಡಿದರೆ ಸಿದ್ಧಿಯಾಗುವುದೆಂದು ನಂಬಿಕೆ. 

ತುಳಸಿ, ನೆಲ್ಲಿ, ಬಿಲ್ವ ಇವು ಮೂರು ಪಾರ್ವತಿ, ಸರಸ್ವತಿ, ಲಕ್ಷ್ಮಿ ಸ್ವರೂಪದಿಂದ ದೇವತೆಗಳ ಅಂಶವೆಂದು ಪುರಾಣಗಳು ಸಾರುತ್ತವೆ. 

ಬಿಲ್ವ, ಚರು, ಆಜ್ಯಗಳಿಂದ ಹೋಮ ಮಾಡುವುದರಿಂದ ದಾರಿದ್ರ್ಯವು ನಿರ್ನಾಮವಾಗಿ ಲಕ್ಷ್ಮಿಯು ಗೃಹದಲ್ಲಿ ಸ್ಥಿರವಾಗಿರುವಳೆಂದು ಧರ್ಮಗ್ರಂಥಗಳಲ್ಲಿ ನಿರೂಪಣೆ ಇದೆ.

ಶಿವಪುರಾಣಗಳಲ್ಲಿ ಶಿವರಾತ್ರಿಯ ಮಹಿಮೆಯನ್ನು ತಿಳಿಸುತ್ತಾ ಓರ್ವ ಬೇಡನೂ, ಚಂಡಾಲನೂ ಎಸೆದ ಬಿಲ್ವಪತ್ರೆಯು ಶಿವಲಿಂಗದ ಮೇಲೆ ಬಿದ್ದುದರಿಂದ ಅವರು ನರಕ ಬಾಧೆಯಿಂದ ಪಾರಾಗಿ ಕೈಲಾಸವನ್ನು ಸೇರಿದರೆಂದು ಬಣ್ಣನೆ ಇದೆ 🌺🌺🌺

🌺🌺ತ್ರಯಂಬಕಂ ಯಜಾಮಹೆ ಸುಗಂದಿಂ ಪುಷ್ಟಿ ವರ್ಧನಂ ||
ಊರ್ವಾರುಕಮೇವ ಬಂಧನಾನ್ ಮೃತ್ಯೋರ್ಮುಕ್ಷೀಯ ಮ್ಯಾಮೃತಾಥ್ ||🌺🌺

ಓಂ ನಮಃ ಶಿವಾಯ ಹರ ಹರ ಮಹಾದೇವಾ

ಧನ್ಯವಾದಗಳು 😊


ಲಿಂಗದಲ್ಲಿ ಶಿವ-ಶಕ್ತಿ ಒಟ್ಟಿಗೆ ಇರುವುದರಿಂದ ಪ್ರಚಂಡ ಶಕ್ತಿಯು ನಿರ್ಮಾಣವಾಗುತ್ತದೆ.  

ಲಿಂಗದ ಕಣಗಳ ಮೇಲೆ ಹಾಗೂ ದರ್ಶನಕ್ಕೆ ಬರುವ ಭಕ್ತರ ಮೇಲೆ ಅದರ ಪ್ರತಿಕೂಲ ಪರಿಣಾಮವಾಗ ಬಾರದೆಂದು ಲಿಂಗದ ಮೇಲೆ ಸತತವಾಗಿ ನೀರಿನ ಧಾರೆಯು ಬೀಳುವ ಹಾಗೆ ಮಾಡುತ್ತಾರೆ. ತ್ರಿನೇತ್ರನಾದ ಶಿವನ ಲಿಂಗಕ್ಕೆ ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತಾರೆ. ಬಿಲ್ವಪತ್ರೆಯನ್ನು ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖವಾಗಿ, ತೊಟ್ಟು ನಮ್ಮ ಕಡೆಗೆ ಬರುವಂತೆ ಇಡುತ್ತಾರೆ. ಹೀಗೆ ಮಾಡುವುದರಿಂದ ಮೂರೂ ಎಲೆಗಳಿಂದ ಒಟ್ಟಿಗೆ ಬರುವ ಶಕ್ತಿಯು ನಮ್ಮ ಕಡೆಗೆ ಬರುತ್ತದೆ.
***

 

 


No comments:

Post a Comment