SEARCH HERE

Wednesday, 10 March 2021

varaha jayanti ವರಾಹ ಜಯಂತಿ bhadrapada shukla triteeya




Varaha Jayanti: Importance and celebration
One of his more celebrated avatars, the Varaha (boar) form is believed to be Lord Vishnu’s third incarnation on earth. Varaha Jayanti is the festival celebrating the birth of Vishnu, one of the most powerful Gods among the trinity comprising of Brahma and Mahesh (Lord Shiva) to walk on earth. Legend says that Lord Vishnu was reborn as a boar to save the world from the scourge of two powerful demons who had threatened to dislodge the harmony of all three worlds.

Devotees worship Lord Vishnu on this day, which falls in the Shukla Paksha of Magh month on the second day or Dwitiya Tithi. Vishnu, who is known to be the protector of all the realms in Hindu mythology, is worshipped across the country by devotees who keep faith in his different avatars.

It is believed In Hindu mythology that worshipping Lord Varaha bestows the subject with immense riches and good health. Lord Vishnu who was reborn as half-human and half-boar went on to vanquish two of the mightiest demons who had tormented all three worlds. The prayers offered on this day are believed to ward off evil and bless you with a life full of happiness.

The rituals of Varaha Jayanti
The festival of Varaha Jayanti is observed mainly in South India. Prayers are offered early morning after the devotee has taken his bath. The devotees can go to a temple deifying Lord Vishnu or at a place of worship of their choice at their home. The following rituals go into celebrating the day:

The idol of Lord Varaha (Vishnu) is placed inside a metal pot (Kalash).
The kalash is filled with water and Mango leaves are soaked in it. A coconut is placed on the top and then donated to a Brahmin.
The devotees read out from the Shrimad Bhagwad Gita.
Those who observe a Varaha Jayanti fast are required to donate clothes and money to the needy people on the eve of Varaha Jayanti. It is believed that offering things to the underprivileged and poor helps in seeking blessings of Lord Vishnu.
The legend behind Varaha Jayanti
According to the Puranas, Diti, one of thirteen wives of Kashyapa (a sage), gave birth to two highly powerful demons named Hiranyakashipu and Hiranyaksha. Holika, who turned out to be an evil demoness, and whose burning is observed across India as Holi – the festival of colours – was also born of her womb. Both male children grew up to be powerful but treaded the path of adharma instead of dharma. Hiranyakashipu and his brother Hiranyaksha invoked Lord Brahma whom they managed to please with their unshakable faith and uninterrupted prayers. When Lord Brahma blessed them with his appearance and told them to make a wish, they requested the creator of the worlds to make them invincible in any realm.

After Lord Brahma granted them their wish, the two sons of Diti went on a rampage in all the three worlds. According to legend, the two brothers went on to conquer the three worlds. But their hunger for more destruction couldn’t be satiated. That’s when they headed towards the kingdom of Lord Varuna, then known as Vibhaari Nagari. Lord Varuna told the two asuras (demons) to stay away from the kingdom reminding them that Lord Vishnu is their guardian angel and protects the universe, and that they could never defeat him.

Enraged by his insult, Hiranyaksha went in the search of Lord Vishnu to defeat him and claim invincibility as bestowed to him by Lord Brahma. By the time he discovered Lord Vishnu, the protector of realms was reborn as Lord Varaha. This is the moment when it is believed that Hiranyaksha saw Lord Varaha balancing the earth on his tusks. Lord Varaha goes on to kill Hiranyaksha in a battle that ensues ending the reign of terror he had unleashed along with his brother. It is from this day, people started believing in Lord Vishnu’s third incarnation as a wild boar. They have since been worshipping Lord Varaha and observing fast on Varaha Jayanti to keep evil at bay and live a dharmic life in service of others.
****

Varaha was originally described as a form of Brahma, but later on as the avatar of Vishnu. The earliest Varaha images are found in Mathura, dating to the 1st and 2nd century CE. The cult of Varaha seems to have been popular in the Gupta era (4th-6th century) in Central India, considering the large number of Varaha sculptures and inscriptions found there. A red sandstone sculpture of Varaha in boar form with an inscription is traced to the reign of Toramana (late 5th to early 6th century CE). Early sculptures of Varaha generally depict him in his boar form. Anthropomorphic depictions of Varaha with human body and boar’s head become popular in the later period. Other early sculptures exist in the cave temples in Badami in Karnataka (6th century) and Varaha Cave Temple in Mahabalipuram (7th century); both in South India and Ellora Caves (7th century) in Western India. In the Udayagiri Caves (Cave 5) in Madhya Pradesh, an image of Varaha rescuing the earth sculpted in sandstone (dated to 401-450 CE) is seen and a zoomoriphic image from 8th century from Bago-Pathari is now with the Archeological Museum at Gwalior. By 7th century, images of Varaha were found in all regions of India. By the 10th century, temples dedicated to Varaha were established in Khajuraho (existent, but worship has ceased), Udaipur, Jhansi (now in ruins) etc.

In the first millennium, the boar was worshipped as a symbol of virility. The Chalukya dynasty (543–753) was the first dynasty to adopt Varaha in their crest and minted coins with Varaha on it. The Gurjara-Pratihara king Mihira Bhoja (836–885 CE) assumed the title of Adi-varaha and also minted coins depicting the Varaha image. Varaha was also adopted as a part of royal insignia by the Chola (4th century BCE–1279 CE) and Vijayanagara Empires (1336–1646 CE) of South India. In Karnataka, a zoomorphic image of Varaha is found in a carving on a pillar in Aihole, which is interpreted as the Vijayanagara emblem, as it is seen along with signs of a cross marked Sun, a disc and a conch.

However, the boar and its relative the pig started being seen as polluting since the 12th century, due to Muslim influence on India. Muslims consider the pig and its meat unclean. This led to a decline in Varaha worship to a certain extent.

In the Vishnu Purana, Varaha represents yajna (sacrifice), as the eternal upholder of the earth. His feet represent the Vedas (scriptures). His tusks represent sacrificial stakes. His teeth are offerings. His mouth is the altar with tongue of sacrificial fire. The hair on his head denotes the sacrificial grass. The eyes represent the day and the night. His coarse hair represents sexual prowess. The head represents the seat of the Brahmin (priest). The mane represents the hymns of the Vedas. His nostrils are for oblation. His joints represent the various ceremonies. The ears are said to indicate rites (voluntary and obligatory). Thus, Varaha is the embodiment of the Supreme Being who brings order amidst chaos in the world by his sacrifice.
Varaha symbolizes the resurrection of the earth from a pralaya (dissolution of the universe) and the establishment of a new kalpa (aeon). Symbolism also attributes that evolution from water could relate to the geological phenomenon of the tectonic age. It could also represent the rescue of earth from “false cults.
Now for the Purana :-

One day Lord Vishnu was resting in his palace, when Lord Brahma’s four sons came to meet him. They were stopped at the entrance by two guards, Jaya and Vijaya. They did not allow them to enter as their master was resting, Brahma’s sons were very angry and cursed Jaya and Vijaya to be born as humans on earth and to leave their godly status.

A little while later Lord Vishnu arrived at the spot and apologized for Jaya and Vijaya’s behaviour as they were merely doing their duty. So as a compensation Brahma’s sons said that curse would be lifted when Jaya and Vijaya in human forms would meet their death at Lord Vishnu’s hands. Thus Jaya and Vijaya were born as humans on Earth as Hiranya­kashyap and Hiranyaksh. When they were born both the earth and the heaven shook violently. Indra went to Lord Vishnu and said, “At their birth itself, there is so much chaos. What will happen when they’ll grow up?” “Don’t worry, Indra,” said Lord Vishnu. “I’ll kill them when the time comes and no harm will come to anybody.” Many years went by and Hiranyaksha became a young man. He was a great devotee of Lord Brahma. He gave a lot of time in penance when Lord Brahma appeared and gave him a boon. According to the boon, no God, human, Daitya or Asura would be able to kill him. So Hiranyaksha started displaying his strength as he was assured of his immortality. He turned his waist side to side and began churning the sea. Due to this, waves lashed the sea. Varun Dev got very scared on seeing such a scene. He started searching for a place to hide. But Hiranyaksh confronted him and challenged him. At this, Varun Dev accepted his defeat and declared that he could not defeat Hiranyaksha as he was the strongest of all. And then Hiranyaksha was filled with pride. He went on churning the sea waters and k walked through the sea. Then he met Narad Muni. Hiranyaksh asked him,” “Is there anyone as strong as or stronger than me?” Narad Muni said, “Yes, Lord Vishnu is the strongest.” Hiranyaksha searched for Lord Vishnu everywhere but could not find him. Then he gathered the whole Earth into a round ball and went underwater to Pataal Lok to search for Lord Vishnu. All the Gods were worried. They got together and rushed to Lord Vishnu for help. They said, “Lord please save us. Hiranyaksh has taken Earth and disappeared.”

“Don’t worry. I know he has taken Earth to Pataal Lok. I’ll soon get Earth back at its position.” Then Lord Vishnu took the form of a Varaha, a wild boar with two tusks. He went to Pataal Lok and challenged Hiranyaksha so they had a fierce fight. Hiranyaksha used many weapons to strike Varaha but they had no effect on him. Lastly, Hiranyaksha wound his strong, muscled arms round the wild boar’s neck to strangle him. At that very moment, Lord Vishnu left his Varaha form and appeared in his true self. And then Vishnu directed his chakra at Hiranyaksha . The chakra separated his head from his body. Hiranyaksha died then and there. Then Lord Vishnu again took the Varaha form. He picked the Earth, which was like a ball, balanced on his two tusks and left Pataal Lok through the sea. He placed Earth at its original position and again appeared in his true form. Lord Vishnu was praised by all the Gods on hearing the news of Hiranyaksha’s death..
****

Varaaha Jayanthi  :  ವರಾಹ ಜಯಂತಿ - by narahari sumadhwa

ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯ.


ಶ್ರೀಹರಿಯ ಮೂರನೇ ಅವತಾರವೇ “ವರಾಹಾವತಾರ”

ಆಚಾರ್ಯ ಮಧ್ವರು ವರಾಹಾವತಾರವು ಎರಡು ಬಾರಿ ಆಗಿದೆ ಎಂದಿದ್ದಾರೆ. ಒಮ್ಮೆ ಆದಿ ಹಿರಣ್ಯಾಕ್ಷ ಭೂಮಿಯನ್ನು ಹೊತ್ತು ನೀರಿನಲ್ಲಿ ಮುಳುಗಿಸಿದ್ದಾಗ ಬ್ರಹ್ಮದೇವರ ಮೂಗಿನಿಂದ ಅವತರಿಸಿ,  ಅವನನ್ನು ಸಂಹರಿಸಿದನು.  ಮತ್ತೊಮ್ಮೆ ಕಶ್ಯಪರ ಮಗ ಹಿರಣ್ಯಾಕ್ಷ ಭೂದೇವಿಯ ಹೊತ್ತು ನೀರಿನಲ್ಲಿ ಮುಳುಗಿಸಿದಾಗ ವರಾಹಾವತಾರವಾಗಿದ್ದು ಹಿರಣ್ಯಾಕ್ಷನ ಕೊಂದನು.

Sri Vaadiraaja yati virachita Dashaavatara stuti

Varaaha Stotra :

ನೀಲಾಂಬುದಾಭ ಶುಭಶೀಲಾದ್ರಿ ದೇಹಧರ ಖೇಲಾಹೃತೋದಧಿಧುನೀ
ಶೈಲಾದಿಯುಕ್ತನಿಖಿಲೇಲಾಕಠಾಧ್ಯಸುರ ತೂಲಾಟವೀದಹನ ತೇ |
ಕೋಲಾಕೃತೇ ಜಲಧಿಕಾಲಾಚಲಾವಯವ ನೀಲಾಬ್ಜದಂಷ್ಟ್ರಧರಣೀ
ಲೀಲಾಸ್ಪದೋರುತಲಮೂಲಾಶಿಯೋಗಿವರ ಜಾಲಾಭಿ ವಂದಿತ ನಮ: ||

नीलांबुदाभ शुभशीलाद्रिदेहधर खेलाहृतोदधिधुनी
शैलादियुक्तनिखिलेलाकठाध्यसुर तूलाटवीदहन ते ।
कोलाकृते जलधिकालाचलावयव नीलाब्जदंष्ट्रधरणी
लीलास्पदोरुतलमूलाशियोगिवर जालाभि वंदित नम: ॥

In Vishnu sahasranaama stotram, the name “mahavaraaha:” has been attributed to Srihari; as he destroyed the great daithyaas or he is called as Mahavaraaha as he came out of the nose of Brahma and took the boar (pig) avataara.

Who is Varaha ?  –  This is the avataara of Srihari to kill daithya Hiranyaksha and bringing back the earth. This is the third amongst the dashavataara.   Acharya Madhwa has clarified that Varahavatara has happened twice.    The varaha roopa has the head of boar (pig type) and the body of a human.

Necessity of the birth of Varaha –    Chaturmukha Brahma, who took the birth from the Padma, the novel of paramatma, created “Swayambu manu” and others.    Hiranyaksha, who was born from Brahma Devaru had taken the entire bhoomi and dragged it to waters.   All the gods, appeared before Brahma devaru.   At that time, Narayana appeared in the form of a tiny Varaha rupa from the nose of Brahma.    The little Varaha which came out of the nose of Brahma, grew, grew and grew like that of a mountain to every body’s surprise.

We are doing the sankalpa by saying Shwetha varaaha kalpe –  That means we are in the first day (only day) called Swetha Varaha Kalpa in the 51st year of Lord Brahma. In Swetha Varaha Kalpa (first day of Lord Brahma) after passing through 6 Manvantharas out of 14 we are currently in the 7th Manvanthara called Vaivaswatha Manvanthara.

Chintana of Varaha Roopi Paramathma as per Tantrasara sangraha of Acharya Madhwa :

ಶ್ಯಾಮ: ಸುದರ್ಶನ ದರಾಭಯ ಸದ್ವರೇತೋ |
ಭೂಮ್ಯಾ ಯುತೋಽಖಿಲ ನಿಜೋಕ್ತ ಪರಿಗ್ರಹೈಶ್ಚ |
ಧ್ಯೇಯೋ ನಿಜೈಶ್ಚ ತನುಭಿ: ಸಕಲೈರುಪೇತ: |
ಕೋಲೋ ಹರಿ: ಸಕಲ ವಾಂಛಿತ ಸಿದ್ಧಯೇಽಜ: ||

श्याम: सुदर्शन दराभय सद्वरेतो ।
भूम्या युतोऽखिल निजोक्त परिग्रहैश्च ।
ध्येयो निजैश्च तनुभि: सकलैरुपेत: ।

कोलो हरि: सकल वांछित सिद्धयेऽज: ॥

Varaha roopi paramathma’s body colour is blue.   He has Chakra,- Shanka,- abhaya and vara mudre in his four arms.    He is accompanied by Bhoodevi and his entire parivara of Brahma Rudraadi devate.    We have to do the smarana of Srihari for our SakalaabhiShta siddhi.

Varaha devaru in Tirupathi –   In Srinivasa Kalyana, we can see the story of Varaha Devaru.   Srinivasa came to Tirupathi and sought some place with Varaha Devaru for his stay.  Varaha, the other roopa of Srihari agreed and gave him some space and in return Srinivasa offered him the first darshana to Varaha before Srinivasa at Tirumala.  The first naivedya shall be offered to Varaha Devaru then to Srinvasa.

Why he is called Yajna Varaha –    As the items required for Yajna, came out of the body of Varaha roopi paramaathma, and he is the yajna bhoktru also, he is called as Yajna Varaha.

Varaha devaru has other names like Kroda, Sookara, DharaNidhara, Bhoodhara, Mahidhara, etc.    In Vishnu Sahasranama, Srihari is called as “Maha varaha” which Acharya Madhwa has defined in Bruhadaaranyakanishad Bhashya – as

mahanIyatvaat maha: | shrEShTatvaat vara: | ahInatvaat daha:    |

महनीयत्वात् मह: । श्रेष्टत्वात् वर: । अहीनत्वात् दह:    ।

i.e., He is Sarvottama, Dosha doora and Gunapoorna  \

महावरा: अतिनीचा: कल्यादयस्तानाहंतीति महावराह: |

ಮಹಾವರಾ: ಅತಿನೀಚಾ: ಕಲ್ಯಾದಯಸ್ತಾನಾಹಂತೀತಿ ಮಹಾವರಾಹ: |

As he pushes the kaliyaadi daithyaas, he is called as Mahavaraaha |

 
Acharya Madhwa prays in Dwadasha Stotra as

सूकर रूपक दानव शत्रो ।
भूमि विधारक यज्ञवरांग ।

ಸೂಕರ ರೂಪಕ ದಾನವ ಶತ್ರೋ |
ಭೂಮಿ ವಿಧಾರಕ ಯಜ್ಞವರಾಂಗ |
Lord Vishnu in his incarnation as Lord Varaha,has lifted the earth which was hidden by the powerful daitya Hiranyaksha in the ocean, and killed the daithya Hiranyaksha.
As per Narada Purana – Varaha Rupi paramathma brought back the Earth from sea and removed all the miseries of the world.  Bhudevi prayed Varaha Devaru not to leave for Vaikunta and wished to worship him always.  Pleased with the worship of Bhudevi Varaha devaru stayed at that place, where Bhumi (earth) was brought up – that place is none other than Srimushnam.  Since Varahadevaru stays with Bhudevi, he is called as Bhuvaraha Murthy. 

There are several tirthas in Srimushnam; viz., Nitya Pushkarini, Lakshminarayana saral, Bhumi Tirtha, Chakra Tirtha, Brahma Tirtha,Agni Tirtha, Danda Tirtha, Mrutyunjaya Tirtha, etc. where there is sannidhana of Agni, Brahma, Vayu,

In Srimushnam – Any daana done would fetch more punya.

Sri Vadirajaru has done the stotra of Sri Varaha Devaru in Srimushnam – Shwetha Varaha as follows –

ಶ್ರೀಮುಷ್ಣಂ ಕ್ಷೇತ್ರ – ಶ್ರೀಭೂವರಾಹ –  श्रीमुष्णं क्षेत्र – श्रीभूवराह – as per Vadirajaru in Tirtha prabandha –
ವರಾಹ ವರದಂಷ್ಟ್ರಯಾ ಕುಟಿಲಯಾ ಕಠೋರಂ ರಿಪುಂ

ವಿದಾರ್ಯ ಸುರಧುರ್ಯ ಗಾಂ ನಿಜಪದಾರವಿಂದಾನುಗಾಂ |
ಉಪೇತ್ಯ ಸುಖಚಿತ್ತನು: ಸರಸಲೀಲಯಾಽಽಲಿಂಗ್ಯ
ತಾಂ ಸಿತಾಂಗ ಜಗತಾಂ ಗತೇ ವಿಹರಸೀಹ ಪುಣ್ಯಸ್ಥಲೇ || ೪೧ ||

वराह वरदंष्ट्रया कुटिलया कठोरं रिपुं विदार्य सुरधुर्य गां निजपदारविंदानुगां ।
उपेत्य सुखचित्तनु: सरसलीलयाऽऽलिंग्य तां सितांग जगतां गते विहरसीह पुण्यस्थले ॥ ४१ ॥

 

Sri Varaha devaru, the Shwetha Varaha is the final destiny of the entire world.  – You are the supreme of all devataas – You tore off the cruel and daitya Hiranyaksha with your teeth – You are Sukachit tanu, i.e., your body consists of ever happiness and jnaana –  you are sporting in Srimushnam kshetra by embracing Bhudevi romantically.

Srimushnam is one of the swayamvyakta kshetra where we can find Bhuvaraha Devaru.  This is also called as Varaha Kshetra.   The vigraha in Bhoovaraha ksheta is not sculptured by any human but is a formation of the stone saligarama (black smooth round stone) and is also called ‘Yagna Varaha’.  It is said that lord vishnu resides in this particular place in three forms. One in the form ‘Ashwatha tree’, second as ‘Nithya Pushkarani’ and as ‘Bhoovaraha Swamy’. 

It is said to be the ‘Avatara sthala’ of Sri Varaha swamy. After Sri Vishnu killed daithya Hiranyaksha who was under the sea taking the earth, Sri Varaha is said to have rested at this place with the water sweating from his body forming the pushkarni here. Hence a bath at this pushkarni is very much sacred.

It is said that in this kshetra, the Varahadevaru is worshipped first by Brahmadevaru and Saraswathi devi.

Sri  Acharya Madhwa was camping in Srimushnam a place twenty-six Km from Chidambaram in Tamil Nadu, observing the Chathurmasya vritha.  To remove the thirst of a pregnant lady he produced water with his Danda.  The Danda Teertha in Srimushnam is a notable holy spot for Maadhwas. This Danda theertha is about 2 km from the temple and about 1 km walkable distance from the main road.   In this way, there is presence of  Sri Hari (as Varaha) and Sri Vayu (Danda tirtha).



Srimushnam Varaha utsava murthy and Uttaradimutt –   It is traditional privilege that whenever a seer of Uttaradimutt visits Srimushnam, the Utsava murthy with Sridevi and Bhudevi would come to the mutt and puja is performed the UM Swamiji to those deities along with  Ramadevaru.    It is in practice since Sri Satya poorna Tirtharu’s period.   Sri Satyatma Tirtha Mahan has recently built building at Danda Tirtha and renovated for the benefit of the devotees here.
- NARAHARI SUMADHWA
****


ವರಾಹವತಾರ
ಒಂದು ಚಿಂತನೆ.
by ✍️..ಶ್ರೀಸುಗುಣವಿಠಲ

ವ್ಯಾಸ ಮತ್ತು ದಾಸ ಸಾಹಿತ್ಯಗಳಲ್ಲಿ ಶ್ರೀಹರಿಯ ದಶಾವತಾರಗಳು ಸರಸ ಸುಂದರವಾಗಿ ಅಧ್ಭುತರಮ್ಯವಾಗಿ ವರ್ಣಿತವಾಗಿವೆ.ಈ ಎಲ್ಲಾ ಭಗವಂತನ ಅವತಾರಗಳು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ..ಸಜ್ಜನ ಸಧ್ಭಕ್ತರು ಸುಗಮವಾಗಿ ಧರ್ಮಮಾರ್ಗದಲ್ಲಿ ಸಾಗಿ ತಮ್ಮ ಸಾಧನಾ ಶರೀರವನ್ನು ಸಾರ್ಥ್ಯಕ್ಯಮಾಡಿಕೊಂಡು ಸಾಧನೆ ಮಾಡಿಕೊಳ್ಳಲು ಅವಕಾಶವಾಗುವಂತೆ ಭಗವಂತನ ಕಾರುಣ್ಯದ ಅನುಗ್ರಹೋನ್ಮುಖ ಅವತಾರಗಳಿವು.
ಜಗತ್ತಿನ ಪ್ರಜಾಸೃಷ್ಠಿಯು ಮೊದಲಾಗಿ ಜನಸಂಖ್ಯೆಯೂ ಹೆಚ್ಚಾಗುತ್ತಾ ಭೂಮಿಯ ಮೇಲೆ ದುಷ್ಟರ ಸಂಖ್ಯೆಯೂ ಹೆಚ್ಚಾಗಿ ಇವರ ಭಾರದಿಂದಾಗಿ ಭೂಮಿಯು ಪ್ರಳಯ ಜಲದಲ್ಲಿ ಮುಳಗಿದಾಗ ಜನವಸತಿಗೆ ಜಾಗವಿಲ್ಲದ ಇಂಥ ಪ್ರಸಂಗದಲ್ಲಿ ಸೃಷ್ಠಿಕರ್ತನ  ಪ್ರಾರ್ಥನೆಯ ಮೇರೆಗೆ ಈ ಸಮಸ್ಯೆಗೆ ಪರಿಹಾರಾರ್ಥವಾಗಿ ಭಗವಂತನು ಆತನ ಮೂಗಿನ ಹೊಳ್ಳೆಯಿಂದ ಪ್ರಾಧುರ್ಭವಿಸಿದ ಈ ವರಾಹರೂಪಿ ಭಗವಂತನು ಪ್ರಳಯ ಜಲದಲ್ಲಿ ಮುಳುಗಿದ ಭೂಮಿಯನ್ನು ತನ್ನ ಕೋರೆಯಹಲ್ಲಿನ ಮೇಲಿಟ್ಟುಕೊಂಡು ಮೇಲಕ್ಕೆ ತಂದಂಥಹ ಅಧ್ಭುತ ಸುಂದರ ರೂಪವೇ “ಆದಿವರಾಹರೂಪ”.ಈ ಸಂದರ್ಭದಲ್ಲಿ ಯುದ್ಧಕ್ಕೆ ಬಂದ ಹಿರಣ್ಯಾಕ್ಷನೆಂಬ ದೈತ್ಯನನ್ನು ತನ್ನ ಕೋರೆದಾಡೆಗಳಿಂದಲೇ ಸಂಹಾರಮಾಡಿ ಪ್ರಳಯೋದಕದಿಂದ ಭೂಮಿಯನ್ನು ಮೇಲೆತ್ತಿ ಅಲುಗಾಡದಂತೆ ಸ್ಥಿರವಾಗಿ ಸ್ಥಾಪಿಸಿದ ನೀಲಮೇಘ ಕಾಂತಿಯುಳ್ಳ,ಸುಂದರ ರೂಪದ ವರಾಹಮೂರ್ತಿಯು ಪ್ರಾಧುರ್ಭಾವವು ಭಾದ್ರಪದ ಶುಕ್ಲತೃತೀಯ ಅಪರಾಹ್ನದಲ್ಲಿ ಆಯಿತು‌. ಈ ಸಂದರ್ಭದಲ್ಲಿ ಶ್ರೀಲಕ್ಷ್ಮೀದೇವಿಯು “ಧಾತ್ರಿ”(ಧರಣಿ) ನಾಮಕಳಾಗಿ  ಈ ಪರಮಾತ್ಮನೊಂದಿಗೆ ಇರುವಳು.ಈ ಅವತಾರವು ಎರಡು ಬಾರಿ ಯಾಗಿದ್ದು..ಸ್ವಾಯಂಭುಮನ್ವಂತರದಲ್ಲಿ.,ಘನೋದಕದಲ್ಲಿ ಮುಳುಗಿದ್ದ ಭೂಮಿಯನ್ನು ಎತ್ತುವಾಗ “ಆದಿಹಿರಣ್ಯಾಕ್ಷ”ನನ್ನು ಕೋರೆದಾಡೆಯಿಂದ ಸಂಹಾರ ಮಾಡಿದ್ದು.ಎರಡನೆದಾಗಿ ಚಾಕ್ಷುಷ “ಮನ್ವಂತರದಲ್ಲಿ  ..ಪ್ರಳಯೋದಕದಲ್ಲಿ ಮುಳುಗಿದ್ದ ಭೂಮಿಯನ್ನು ತರುವಾಗ ದಿತಿಪುತ್ರನಾದ "ಹಿರಣ್ಯಾಕ್ಷ ದೈತ್ಯನು" ಅಡ್ಡಪಡಿಸಿದ ಕಾರಣ ಕರ್ಣಮೂಲದಲ್ಲಿ ಕೈಯಿಂದ ಹೊಡೆದು ಕೊಂದ ರೂಪ ..ಇನ್ನೊಂದು.ಹಾಗಾಗಿ ಒಂದನೇದು..”ಆದಿವರಾಹ” ಅಥವಾ “ಶ್ವೇತವರಾಹ”  ಎರಡನೇದಕ್ಕೆ..”ನೀಲವರಾಹ”ಆಥವಾ “ಕೃಷ್ಣವರಾಹ” ಎಂದು ಕರೆಯಲಾಗಿರುತ್ತದೆ. 

~ವ್ಯಾಸ&ದಾಸಸಾಹಿತ್ಯದಲ್ಲಿ ..ವರಾಹವತಾರ: ದ ಬಗ್ಗೆ ನೋಡೋಣ.
೧.ಶ್ರೀಮದ್ ಭಾಗವತದಲ್ಲಿ...ವಿಸ್ತಾರವಾಗಿ ಇದರ ವರ್ಣನೆಯಿದೆ.
*ಯತ್ರೋದ್ಯತಃ ಕ್ಷಿತಿತಲೋದ್ದರಣಾಯ ಬಿಭ್ರತ್..,..(೨-೭-೧).ರಲ್ಲಿ ..,
~ಶ್ರೀಮನ್ಮಹಾಭಾರತ ತಾತ್ಪರ್ಯನಿರ್ಣಯದಲ್ಲಿ..
*ತತಃಸ ಮಗ್ನಾಮಲಯೋ ಲಯೋದಧೌ...(೩-೩೭), 
~ರುಕ್ಷ್ಮಿಣೀಶ ಮಹಾಕಾವ್ಯದಲ್ಲಿ..
ಸ್ವವಶಗೋ ರಿಪುಭೀಷಣಚೇಷ್ಟಿತೋ..((೧೭-೧೭) ,
~ಶ್ರೀವಾದಿರಾಜರ ದಶಾವತಾರಸ್ತುತಿ..
ನೀಲಾಂಬುದಾಭ ಶುಭಶೀಲಾದ್ರಿದೇಹಧರ ಖೇಲಾ(ಧೃ)ಹೃತೋದಧಿಧುನೀ....(||೭||),
ಎಂಬಲ್ಲಿ ಶ್ರೀವರಾಹರೂಪಿ ಭಗವಂತನನ್ನು ಅಧ್ಭುತವಾಗಿ ವರ್ಣಿಸಿದ್ದಾರೆ.ಈ ಅವತಾರರೂಪಿ ಭಗವಂತನ ಅವಯವಗಳಿಂದಲೇ.ಯಜ್ಞಕ್ಕೆ ಬೇಕಾದ ವಸ್ತುಗಳು ಸೃಷ್ಠಿಯಾದವು ಎನ್ನುತ್ತದೆ ಭಾಗವತ.
~ದಾಸ ಸಾಹಿತ್ಯದಲ್ಲಿ ಈ ಅವತಾರದ ಬಗ್ಗೆ ನೋಡುವುದಾದರೇ....ಸಾಕಷ್ಟು ಹರಿದಾಸರುಗಳು ತಮ್ಮ ಕೃತಿಗಳಲ್ಲಿ ಅಧ್ಭುತವಾಗಿ ಮನದುಂಬಿ ವರ್ಣಿಸಿ ಆನಂದಪಟ್ಟಿದ್ದಾರೆ .ಅದರಲ್ಲಿ ಕೆಲವನ್ನು ಉದಾಹರಿಸುವುದಾದರೇ..
ಶ್ರೀಪುರಂದರದಾಸರ ..ಒಂದು ಕೃತಿ..”ಇವನ ಪಿಡಿದುಕೊಂಡು ಹೋಗೆಲೋ ಜೋಗಿ..ಇವ ನಮ್ಮ ಮಾತ ಕೇಳದೇ ಪುಂಡನಾದ....ಬೇಡವೆಂದರೇ ..ದಾಡೆಯ‌ಮೇಲೆ ಧರಣಿಯ ನೆಗಹಿದ.. ಎಂದಿದ್ದಾರೆ.
~ಕನಕದಾಸರು...
ಸುಂದರೀ ರಂಗನ ತಂದು ತೋರಾ...ಎಂಬಕೃತಿಯಲ್ಲಿ..ಧರೆಯ ಭಾರವನು ಹೊರುವ ವರಾಹನಾಗಿ....ಎಂದು~ ..ದಶಾವತಾರವನ್ನೇ ರಂಜನೀಯವಾಗಿ ..ಚಿತ್ರಿಸಿದ್ದಾರೆ..
~ಪ್ರಸನ್ನವೇಂಕಟದಾಸರು...”ಯಾಕೆ ಕಿರಿ ಕಿರಿ ಮಾಡುತಿ..ಭಕ್ತವತ್ಸಲ ಭಯನಿವಾರಣ...ಎಂಬ ಕೃತಿಯಲ್ಲಿ “ಧಾರುಣಿಯ ಬಗೆದು ನಿನ್ನ ದಾಡಿ ನೊಂದಾವೇನೋ...” ಎಂದಿದ್ದಾರೆ.
~ಅನುಸಂಧಾನ &ಚಿಂತನ: 

ಕ್ಷಣಕನಂತ ಅಪರಾಧ ಮಾಡುತ್ತಿರುವ ಸಂಸಾರದ ಸುಳಿಯಲ್ಲೇ ಸುತ್ತುತ್ತಿರುವ ನಮ್ಮಗಳ ಉದ್ಧಾರಕ್ಕಾಗಿ ..ಭಗವಂತನ ಇಂಥ ಅವತಾರಗಳ ಚಿಂತನೆ ಅನುಸಂಧಾನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ್ದು ಅನಿವಾರ್ಯ ಅವಶ್ಯವೂ ಹೌದು.
ಅಜ್ಞಾನಾಂ ಜ್ಞಾನದೋ ವಿಷ್ಣುಃ ಜ್ಞಾನಿನಾಂ ಮೋಕ್ಷದಶ್ಚ ಸಃ|
ಆನಂದಶ್ಚ ಮುಕ್ತಾನಾಂ ಸ ಏವೈಕೋ ಜನಾರ್ದನಃ|(ಅನುವ್ಯಾಖ್ಯಾನ)
ದ ಮಾತಿನಂತೆ..ಅಜ್ಞಾನಿಗಳಿಗೆ ಜ್ಞಾನ ಕೊಡುವವನು ಜ್ಞಾನಿಗಳಿಗೂ ಮೋಕ್ಷ ಕೊಡುವವನೂ ವಿಷ್ಣುವೇ..ಆಗಿದ್ದಾನೆ ಅಷ್ಟೇ ಅಲ್ಲದೇ ಮುಕ್ತರಿಗೂ ಆನಂದ ಕೊಡುವವನೂ ಜನಾರ್ದನನಾದ ಏಕಮೇವ ಶ್ರೀವಿಷ್ಣುವೇ ಆಗಿದ್ದಾನೆ. ಇಂಥ 
 ಭಗವಂತನ ಸ್ವಾತಂತ್ರ್ಯ ಸರ್ವೋತ್ತಮತ್ವವನ್ನು ಅರಿಯದೇ ನಮ್ಮಲ್ಲಿ ಅಹಂಕಾರ ಕೆ ಎಡೆಯಾದರೇ. ಸನಕಾದಿಗಳು ಜಯವಿಜಯರಿಗೆ ಇತ್ತ  ಶಾಪದಂ.ತೇ.. ಹಿರಣ್ಯಾಕ್ಷ -ಹಿರಣ್ಯಕಷಿಪು ಧೈತ್ಯರಂತೇ ಭಗವಂತನಿಂದ ಶಿಕ್ಷಿಸಲ್ಪಡುತ್ತೇವೆ. ಏನೇ ಕಷ್ಟ ಬಂದರೂ ಬ್ರಹ್ಮದೇವರು ಭಗವಂತನಲ್ಲಿ  ಪ್ರಾರ್ಥಿಸಿದಂತೇ  ನಾವುಗಳು ಶರಣಾಗತರಾದಲ್ಲಿ ಅಸಾಧ್ಯ ವಾದದ್ದೂ ಸಾಧ್ಯವಾಗಿಸುತ್ತಾನೆ ಭಗವಂತ.!ಈದಿಸೆಯಲ್ಲಿ ನಮ್ಮ ತ್ವಕ್ ಚರ್ಮದಲ್ಲಿ ಅಹಂಕಾರಿಕ ಪ್ರಾಣಾಂತರ್ಗತ ವರಾಹರೂಪಿ ಭಗವಂತನು ಸನ್ನಿಧಾನನಾಗಿದ್ದಾನೆ..ಇಂಥ ಭಗವಂತನನ್ನು ಅಯಾಸ್ಥಾನದಲ್ಲಿ ಚಿಂತಿಸಿ ಅನುಸಂಧಾನಿಸಿ ಸ್ಮರಿಸಿದಲ್ಲಿ ಭಗವಂತ ನಮ್ಮನ್ನು ಪ್ರಳಯೋದಕದಲ್ಲಿ ಮುಳುಗಿದ ಭೂಮಿದೇವಿಯನ್ನು ಎತ್ತಿದಂತೆ ಈ ಭವಸಾಗರದಿಂದಲೇ ನಮ್ಮನ್ನು ಎತ್ತಿ ಉದ್ಧಾರಮಾಡುತ್ತಾನೆ ವರಾಹರೂಪಿ ಭಗವಂತ..!ಎಂಬ ಯಥಾಮತಿ ಚಿಂತನೆಯೊಂದಿಗೆ ಶ್ರೀಸುಗುಣವಿಠಲಾರ್ಪಣಮಸ್ತು.
end
****

ಶ್ರೀವರಾಹ ದೇವರ ಜಯಂತಿ.
  
   ಭೂದೇವಿ ಯನ್ನು ಅಪಹರಿಸಿದ್ದ ದುಷ್ಟ ಹಿರಣ್ಯಾಕ್ಷ ನನ್ನು ಸಂಹರಿಸಲು ಶ್ರೀಹರಿ ವರಾಹ (ಕಾಡುಹಂದಿ) ರೂಪದಲ್ಲಿ ಪ್ರಕಟಗೊಂಡ ದಿನ.
   ಈ ದಿನ, ಮಹಾ ಮಹಿಮೋಪೇತನಾದ ಶ್ರೀಹರಿಯ ರೂಪವನ್ನು ಸ್ಮರಿಸೋಣ, ಅರ್ಚಿಸೋಣ, ಭಜಿಸೋಣ, ನಮಿಸೋಣ…..🙏🙏🙏

ನೀಲಾಂಬುದಾಭ ಶುಭಶೀಲಾದ್ರಿ ದೇಹಧರ ಖೇಲಾಹೃತೋದಧಿಧುನೀ ಶೈಲಾದಿಯುಕ್ತನಿಖಿಲೇಲಾಕಠಾಧ್ಯಸುರ ತೂಲಾಟವೀದಹನ ತೇ |
ಕೋಲಾಕೃತೇ ಜಲಧಿಕಾಲಾಚಲಾವಯವ ನೀಲಾಬ್ಜದಂಷ್ಟ್ರಧರಣೀ  ಲೀಲಾಸ್ಪದೋರುತಲಮೂಲಾಶಿಯೋಗಿವರ ಜಾಲಾಭಿ ವಂದಿತ ನಮ: ||
 
    ಪುರಾಣಗಳ ಪ್ರಕಾರ ಹಿಂದೆ ಶ್ರೀಬ್ರಹ್ಮದೇವರ ಮಾನಸ ಪುತ್ರರಾದ ಸನಕ, ಸನಂದನ, ಸನಾತನ ಮತ್ತು ಸನತ್ಕುಮಾರ ರು ಶ್ರೀಹರಿಯ ದರ್ಶನಕ್ಕೆಂದು ವೈಕುಂಠಕ್ಕೆ ತೆರಳಿದರು. ಇವರು ಸಣ್ಣ ಬಾಲಕರಂತೆ ಇರುವುದನ್ನು ಗಮನಿಸಿದ ದ್ವಾರಪಾಲಕರಾದ ಜಯ ಮತ್ತು ವಿಜಯ ರು ಇವರನ್ನು ಒಳಗಡೆ ಬಿಡಲಿಲ್ಲ. ನಾವು ಋಷಿಗಳು ಭಗವಂತನ ದರ್ಶನ ಮಾಡಬೇಕು ಎಂದರೂ, ಅವರ ಮಾತು ಆಲಿಸದೇ ಅವರನ್ನು ಒಳಗೆ ಬಿಡದೆ ನಿರ್ಭಂದಿಸುತ್ತಾರೆ. ಪರಿಪರಿಯಾಗಿ ಹೇಳಿದರೂ ಕೇಳದೆ ವಿಡಂಬನೆ ಮಾಡಿದ ಜಯ, ವಿಜಯರಿಗೆ ನೀವು ಅಸುರರಾಗಿ ಎಂದು ಋಷಿಗಳು ಶಪಿಸುತ್ತಾರೆ.
    ಈ ಶಾಪದ ಪರಿಣಾಮವಾಗಿ, ಜಯ-ವಿಜಯರು ಕಶ್ಯಪ ಋಷಿ ಹಾಗೂ ದಿತಿಯ ಮಕ್ಕಳಾಗಿ ಹುಟ್ಟುತ್ತಾರೆ. ಇವರೇ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು. ಕಶ್ಯಪರು ಋಷಿಗಳಾಗಿದ್ದರೂ, ದಿತಿಯ ಗರ್ಭದಲ್ಲಿ ಜನಿಸಿದ್ದರಿಂದ ಈ ಇಬ್ಬರು ಮಕ್ಕಳಲ್ಲಿ ಅಸುರೀ ಸ್ವಭಾವ ಮೂಡಿ ಇವರು ದೈತ್ಯರಾಗುತ್ತಾರೆ. ಕಾಲ ಕಳೆದಂತೆ ಹಿರಿಯನಾದ ಹಿರಣ್ಯಾಕ್ಷ, ಶಾಶ್ವತವಾಗಿ ಭೂಮಿಯ ಮೇಲೆ ಜೀವಂತವಿರಬೇಕೆಂಬ ಆಸೆಯಿಂದ ತಪಸ್ಸು ಮಾಡುತ್ತಾನೆ. ಪ್ರತ್ಯಕ್ಷನಾದ ಬ್ರಹ್ಮದೇವರಲ್ಲಿ ಯಾವುದೇ ಪ್ರಾಣಿ ಅಥವಾ ಮನುಷ್ಯನಿಂದ ನನಗೆ ಸಾವಾಗಬಾರದು ಎಂದು ವರ ಬೇಡುತ್ತಾನೆ.
    ಆದರೆ ವಿಧಿಯ ಬರಹ, ಬ್ರಹ್ಮ ದೇವನ ಮುಂದೆ ಪ್ರಾಣಿಗಳ ಹೆಸರು ಹೇಳುವಾಗ ಕಾಡು ಹಂದಿಯ ಹೆಸರು ಮರೆಯುತ್ತಾನೆ. ಬ್ರಹ್ಮದೇವರು “ತಥಾಸ್ತು” ಎನ್ನುತ್ತಾರೆ.

  ವರದ ಬಲದಿಂದ ಭೂಮಿಯ ಜನರನ್ನು ಸಾಕಷ್ಟು ಕಾಡುವ ಹಿರಣ್ಯಾಕ್ಷ, ಕೊನೆಗೆ ಭೂದೇವಿಯನ್ನೇ ಅಪಹರಿಸುತ್ತಾನೆ. ಈ ವೇಳೆ ಭೂದೇವಿ ತನ್ನನ್ನು ರಕ್ಷಿಸುವಂತೆ ಶ್ರೀಮಹಾವಿಷ್ಣುವಿನಲ್ಲಿ ಮೊರೆ ಇಡುತ್ತಾಳೆ. ದೇವಿಯ ಅಂತಃಕರಣಕ್ಕೆ ಮನಸೋತ ಶ್ರೀಹರಿ, ವರಾಹ(ಕಾಡುಹಂದಿ) ರೂಪ ತಾಳುತ್ತಾನೆ.   ವಜ್ರಾಯುಧದಂತೆ ಕಠಿಣವಾದ ದೀರ್ಘ ಕೋರೆದಾಡೆಗಳು, ಬಾಣಗಳಂತೆ ಬಿರುಸಾದ ರೋಮಗಳು, ಕೆಂಡದುಂಡೆಗಳಂತೆ ಪ್ರಜ್ವಲಿಸುವ ಕಣ್ಣುಗಳು. ಗಾಢವಾದ ಮೋಡದಂತೆ ಮೈಬಣ‍್ಣದಿಂದ ಶ್ರೀವರಾಹರೂಪಿ ಪರಮಾತ್ಮನು ಕಂಗೊಳಿಸಿದ. ಈ ವಿಚಿತ್ರ ರೂಪವನ್ನು ಕಂಡು ಗಾಭರಿಗೊಂಡು ಯುದ್ಧಕ್ಕೆ ಸಿದ‍್ಧನಾದ ಹಿರಣ್ಯಾಕ್ಷನನ್ನು ಪರಮಾತ್ಮನ್ನು ಸಂಹರಿಸಿದ.

  ಇಂತಹ ದುರುಳನಾದ ರಕ್ಕಸನನ್ನು ಸಂಹರಿಸಲು ಶ್ರೀಹರಿ ಅವತರಿಸಿದ ದಿನವೇ ಶ್ರೀವರಾಹ ಜಯಂತಿ..

 ಶ್ರೀಹರಿಯನ್ನು ಮನಸಾ ಸ್ಮರಿಸಿ ನಮಿಸೋಣ…. ಶ್ರೀಭೂ ವರಾಹರೂಪಿ ಭಗವಂತನ ಮನೋವಲ್ಲಭೆಯಾದ ಶ್ರೀಭೂದೇವಿ, ಎಲ್ಲರನ್ನೂ ಸಲಹಲಿ, ಲೋಕ ಸಂರಕ್ಷಣೆ ಮಾಡಲಿ ಎಂದು ಪ್ರಾರ್ಥಿಸೋಣ…..🙏🙏🙏

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
***

ಶ್ರೀ ವರಾಹ ಜಯಂತಿ 

ಶ್ರೀಮದ್ಭಾಗವತದಲ್ಲಿ ನಮಗೆ ಸಿಗುವ ಎರಡು ವರಹಾವತಾರಗಳು. ಶ್ರೀ ಶ್ವೇತವರಾಹ ಮತ್ತು ಯಜ್ಞವರಾಹ ದೇವರು. 

ನಮ್ಮಲ್ಲಿಯೂ ಆದಿಹಿರಣ್ಯಾಕ್ಷ ಮತ್ತು ಹಿರಣ್ಯಾಕ್ಷ ರೆಂಬ ಇಬ್ಬರು ದೈತ್ಯರು ಸದಾ ಇರುತ್ತಾರೆ. ಅವರನ್ನು ಸಂಹಾರಮಾಡಿ ನಮ್ಮ ಹೃದಯದಲ್ಲಿರುವ ಭಕ್ತಿ 
ಎಂಬ ಭೂಮಿಯನ್ನು ಮೇಲಕ್ಕೆ ಎತ್ತುವಂತೆ ಪ್ರಾರ್ಥನೆ ಮಾಡಬೇಕು. ಆದಿವ್ಯಾಧಿಗಳು ದೂರವಾಗಿ ದಿವ್ಯ ಜ್ಞಾನವನ್ನು ನೀಡುವಂತೆ ಶ್ವೇತವರಾಹ ದೇವರನ್ನು ಹಾಗೇ ನಾವು ಈ ಭೂಮಿಯಲ್ಲಿ ವಾಸಿಸಲು ಯಾವ ದುಷ್ಟರ ತೊಂದರೆ ಇಲ್ಲದಂತೆ ಪರಮಾತ್ಮನ ಕರುಣೆಯಿಂದ ನಮಗಾಗಿ ಒಂದು ಚೂರೂ ಜಾಗವನ್ನು ಕೊಡಬೇಕೆದೆಂದು ಯಜ್ಞವರಾಹ ದೇವರನ್ನು ಪ್ರಾರ್ಥನೆ ಮಾಡಬೇಕು. ಹಾಗೆ ಪರಮಾತ್ಮ ಕೊಟ್ಟಂತಹ ಆ ಜಾಗದಲ್ಲಿ ಯಜ್ಞ ವರಾಹ ದೇವರಿಂದ ದೊರಕಿದ ವಸ್ತುಗಳು ಅರ್ಥಾತ್ ಯಜ್ಞ ಯಾಜಾನಗಳು, ದೇವತಾ ಪಿತೃಕಾರ್ಯಗಳು ನಿರಂತರ ಸ್ವಗೃಹದಲ್ಲಿ ನಡೆಯಲಿ ಎಂದು ಆ ವರಾಹದೇವರನ್ನು ಪ್ರಾರ್ಥನೆ ಮಾಡಬೇಕು. 

  ಭಾದ್ರಪದ ಶುದ್ಧ ತೃತೀಯ  ಪವಿತ್ರವಾದ  ವರಹ ಜಯಂತಿಯ ಶುಭಸಂದರ್ಭದಲ್ಲಿ ಪದ್ಮಪರಾಣದಲ್ಲಿ ಉಲ್ಲೇಖಿತವಾದ ವರಹದೇವರ ಪತ್ನಿಯಾದ ಧರಣಿದೇವಿ ಅರ್ಥಾತ್ ನಮ್ಮೆಲ್ಲರನ್ನೂ ಸಲಹುತ್ತಿರುವ ಭೂದೇವಿ ರಚಿಸಿದ ವರಾಹಸ್ತೋತ್ರವನ್ನು ಪ್ರತಿನಿತ್ಯ ಪಾರಾಯಣ ಮಾಡೋಣ. ಹಾಗೆ ಮನಸ್ಸಿಗೆ ಮತ್ತು ವಾಕ್ ಗಳಿಗೆ ಅಭಿಮಾನಿನಿ ಯಾದ ರುದ್ರದೇವರ ಪತ್ನಿಯಾದ ಗೌರಿ ದೇವಿಯ ಪೂಜಿಸುವ ಪರ್ವಕಾಲ. 

ಎಲ್ಲರಿಗೂ ವರಾಹ ಜಯಂತಿ ಮತ್ತು ಗೌರಿ ಹಬ್ಬದ ಶುಭಾಶಯಗಳು..

ಮೇಲೆ ಕೊಟ್ಟಿರುವ ಚಿತ್ರ ತಿರುಮಲದ ಆದಿ ವರಾಹ ದೇವರ ಮೂಲ ರೂಪ. 🙏

 ಶ್ರೀ ಆದಿವರಾಹ ಸ್ತೋತ್ರಂ (ಭೂದೇವೀ ಕೃತಂ) 


ಧರಣ್ಯುವಾಚ |

ನಮಸ್ತೇ ದೇವದೇವೇಶ ವರಾಹವದನಾಽಚ್ಯುತ |
ಕ್ಷೀರಸಾಗರಸಂಕಾಶ ವಜ್ರಶೃಂಗ ಮಹಾಭುಜ || ೧ ||

ಉದ್ಧೃತಾಸ್ಮಿ ತ್ವಯಾ ದೇವ ಕಲ್ಪಾದೌ ಸಾಗರರಾಂಭಸಃ |
ಸಹಸ್ರಬಾಹುನಾ ವಿಷ್ಣೋ ಧಾರಯಾಮಿ ಜಗಂತ್ಯಹಮ್ || ೨ ||

ಅನೇಕದಿವ್ಯಾಭರಣಯಜ್ಞಸೂತ್ರವಿರಾಜಿತ |
ಅರುಣಾರುಣಾಂಬರಧರ ದಿವ್ಯರತ್ನವಿಭೂಷಿತ || ೩ ||

ಉದ್ಯದ್ಭಾನುಪ್ರತೀಕಾಶಪಾದಪದ್ಮ ನಮೋ ನಮಃ |
ಬಾಲಚಂದ್ರಾಭದಂಷ್ಟ್ರಾಗ್ರ ಮಹಾಬಲಪರಾಕ್ರಮ || ೪ ||

ದಿವ್ಯಚಂದನಲಿಪ್ತಾಂಗ ತಪ್ತಕಾಂಚನಕುಂಡಲ |
ಇಂದ್ರನೀಲಮಣಿದ್ಯೋತಿಹೇಮಾಂಗದವಿಭೂಷಿತ || ೫ ||

ವಜ್ರದಂಷ್ಟ್ರಾಗ್ರನಿರ್ಭಿನ್ನ ಹಿರಣ್ಯಾಕ್ಷಮಹಾಬಲ |
ಪುಂಡರೀಕಾಭಿತಾಮ್ರಾಕ್ಷ ಸಾಮಸ್ವನಮನೋಹರ || ೬ ||

ಶ್ರುತಿಸೀಮಂತಭೂಷಾತ್ಮನ್ ಸರ್ವಾತ್ಮನ್ ಚಾರುವಿಕ್ರಮ |
ಚತುರಾನನಶಂಭುಭ್ಯಾಂ ವಂದಿತಾಽಽಯತಲೋಚನ || ೭ ||


ಸರ್ವವಿದ್ಯಾಮಯಾಕಾರ ಶಬ್ದಾತೀತ ನಮೋ ನಮಃ |
ಆನಂದವಿಗ್ರಹಾಽನಂತ ಕಾಲಕಾಲ ನಮೋ ನಮಃ || ೮ |

 ಪ್ರೀತೋಸ್ತು ಕೃಷ್ಣ ಪ್ರಭೋ: 
 ಫಣೀಂದ್ರ ಕೆ
***

ಲೋಕ ರಕ್ಷಣೆಗಾಗಿ ಮಹಾವಿಷ್ಣು ಕಾಲಕ್ಕೆ ತಕ್ಕಂತೆ ದಶಾವತಾರಗಳನ್ನು ತಳೆದಿದ್ದಾನೆ. ಆ ಪೈಕಿ ಶ್ರೀಮನ್ನಾರಾಯಣ ತಳೆದ ಮೂರನೇ ಅವತಾರವಾದ್ರೂ ಯಾವುದು ಅನ್ನೋದ್ರ ಬಗ್ಗೆ ಇಲ್ಲಿದೆ ಮಾಹಿತಿ.

ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ಮೂರನೇ ಅವತಾರವೇ ವರಾಹ ಅವತಾರ. ಚೈತ್ರ ಬಹುಳ ತ್ರಯೋದಶಿಯ ಮಧ್ಯಾಹ್ನದ ಸಮಯದಲ್ಲಿ ವಿಷ್ಣು ವರಾಹ ಅವತಾರ ತಳೆದ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ
ವರಾಹ ಅವತಾರದಲ್ಲಿ ಮಹಾವಿಷ್ಣುವು ಹಂದಿಯ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ, ಮಹಾವಿಷ್ಣು ಹಂದಿಯ ರೂಪದಲ್ಲಿ ಅವತರಿಸಿದ್ದಾದ್ರೂ ಏಕೆ ಅನ್ನೋದಾದ್ರೆ..

ಪುರಾಣಗಳ ಪ್ರಕಾರ ಮಹಾವಿಷ್ಣುವಿನ ವಾಸಸ್ಥಾನವಾದ ವೈಕುಂಠದ ದ್ವಾರಪಾಲಕರಾದ ಜಯ ವಿಜಯರೊಂದಿಗೆ ವರಾಹ ಅವತಾರದ ಕತೆ ಆರಂಭವಾಗುತ್ತೆ. ಒಮ್ಮೆ ಮಹಾವಿಷ್ಣುವನ್ನು ಭೇಟಿ ಮಾಡಲು ನಾಲ್ವರು ಋಷಿ ಕುಮಾರರು ವೈಕುಂಠಕ್ಕೆ ಬರುತ್ತಾರೆ.

ದ್ವಾರ ಪಾಲಕರಾದ ಜಯ ವಿಜಯರಿಗೆ ಶಾಪ:
ವೈಕುಂಠದ ಏಳನೇ ದ್ವಾರದಲ್ಲಿ ಋಷಿ ಕುಮಾರರನ್ನ ದ್ವಾರಪಾಲಕರಾದ ಜಯ ವಿಜಯರು ತಡೆಯುತ್ತಾರೆ. ಅವರ ಮಧ್ಯೆ ವಾಗ್ವಾದವೂ ನಡೆಯುತ್ತದೆ. ನಾಲ್ವರು ಋಷಿ ಕುಮಾರರ ಬಗ್ಗೆ ತಿಳಿಯದೆ, ಅವರು ಬ್ರಹ್ಮನ ಮಾನಸ ಪುತ್ರರು ಎಂಬುದನ್ನೂ ತಿಳಿಯದೆ ದ್ವಾರ ಪಾಲಕರಾದ ಜಯ ವಿಜಯರು ಅವರೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ.

ಎಷ್ಟೇ ಕೇಳಿದರು ಮಹಾ ವಿಷ್ಣುವಿನ ದರುಶನಕ್ಕೆ ಬಿಡುವುದಿಲ್ಲ, ಕೋಪಗೊಂಡ ಋಷಿ ಕುಮಾರರು ನಿಮ್ಮಲ್ಲಿನ ದೈವತ್ವವು ಮಾಯವಾಗಲಿ, ನೀವು ಸಾಮಾನ್ಯರಂತೆ ಭೂಮಿಯ ಮೇಲೆ ಜನಿಸಿರೆಂದು ಶಾಪವನ್ನ ನೀಡುತ್ತಾರೆ.

ಕೊನೆಗೆ ದ್ವಾರ ಪಾಲಕರಾದ ಜಯ ವಿಜಯರಿಗೆ ತಮ್ಮ ತಪ್ಪಿನ ಅರಿವಾಗುತ್ತೆ. ಅಹಂಕಾರದಿಂದ ಋಷಿ ಕುಮಾರರ ಶಾಪಕ್ಕೆ ಗುರಿಯಾದ ಜಯ ವಿಜಯರಿಗೆ ಲಕ್ಷ್ಮೀ ನಾರಾಯಣರು ಒಂದು ಸಲಹೆ ನೀಡುತ್ತಾರೆ. ಹಾಗೆ ನೀಡುವ ಸಲಹೆಯೇ ಭೂ ಲೋಕದಲ್ಲಿ ನನ್ನ ಭಕ್ತರಾಗಿ ಏಳು ಜನ್ಮಗಳನ್ನೆತ್ತಿ ಮತ್ತೆ ವೈಕುಂಠಕ್ಕೆ ಬರುತ್ತಿರೋ ಅಥವಾ ಶತ್ರುಗಳಾಗಿ ಮೂರು ಜನ್ಮಗಳನ್ನೆತ್ತಿ ಮತ್ತೆ ವೈಕುಂಠಕ್ಕೆ ಬರುತ್ತಿರೋ ಎಂಬ ಸಲಹೆ.

ನಾವು ಹೆಚ್ಚು ಕಾಲ ನಿಮ್ಮಿಂದ ದೂರವಿರಲು ಸಾಧ್ಯವಿಲ್ಲ, ಶತ್ರುಗಳಾಗಿ ಮೂರು ಜನ್ಮವನ್ನ ಎತ್ತಿ ನಾವು ಶೀಘ್ರವಾಗಿ ನಿಮ್ಮಲ್ಲಿಗೆ ಸೇರುತ್ತೆೇವೆಂದು ಜಯ ವಿಜಯರು ಹೇಳಿದ ನಿಮಿತ್ತ, ಜಯ ವಿಜಯರು ಹಿರಣ್ಯಾಕ್ಷ, ಹಿರಣ್ಯಕಶಿಪುವಾಗಿ ಭೂ ಲೋಕದಲ್ಲಿದ್ದ ಋಷಿ ಕಶ್ಯಪ ಮತ್ತು ದಿತಿ ದಂಪತಿಗಳ ಮಕ್ಕಳಾಗಿ ಜನಿಸುತ್ತಾರೆ.

ಈ ರಾಕ್ಷಸ ಸಹೋದರರು ದುಷ್ಟತನದಿಂದ ಬ್ರಹ್ಮಾಂಡದಲ್ಲಿ ಅನಾಹುತವನ್ನು ಸೃಷ್ಟಿಸ್ತಾರೆ. ಅದ್ರಲ್ಲೂ ಹಿರಿಯ ಸಹೋದರ ಹಿರಣ್ಯಾಕ್ಷ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ಬ್ರಹ್ಮನಿಂದ ತನಗೆ ಯಾವುದೇ ಪ್ರಾಣಿ ಅಥವಾ ಮನುಷ್ಯನಿಂದ ಸಾವು ಬಾರದಂತೆ ವರ ಪಡೆಯುತ್ತಾನೆ.

ಬ್ರಹ್ಮನಿಂದ ವರ ಪಡೆದು ಅಹಂಕಾರದಿಂದ ಮೆರೆಯುತ್ತಿದ್ದ ಹಿರಣ್ಯಾಕ್ಷ ಭೂಮಿಯ ಮೇಲಿದ್ದ ಜನರನ್ನೂ, ದೇವತೆಗಳನ್ನೂ ಹಿಂಸಿಸ್ತಾನೆ. ಕಾರಣ, ಹಿರಣ್ಯಾಕ್ಷನಿಗೆ ಇಡೀ ಭೂಮಿಯನ್ನು ತನ್ನ ವಶದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ ಇತ್ತು.

ಭೂಮಿಯನ್ನು ಕದ್ದು ಮಹಾಸಾಗರಕ್ಕೆ ಎಸೆದ ಹಿರಣ್ಯಾಕ್ಷ:
ಸಾಗರದೊಳಗಿದ್ದ ಭೂಮಿಯನ್ನು ತನ್ನ ಕೋರೆ ಹಲ್ಲುಗಳ ಮಧ್ಯೆ ಹಿಡಿದಿಟ್ಟುಕೊಂಡ. ಕೋರೆಗಳ ಮಧ್ಯೆ ಇರಿಸಿಕೊಂಡೇ ಪೃಥ್ವಿಯನ್ನು ಮೇಲಕ್ಕೆ ತಂದ. ನಂತರ ಹಿರಣ್ಯಾಕ್ಷನನ್ನು ಸಂಹರಿಸಿದ.

ಅಗ್ನಿ ಪುರಾಣ, ಭಾಗವತ ಪುರಾಣ, ದೇವಿ ಭಾಗವತ ಪುರಾಣ, ಪದ್ಮ ಪುರಾಣ, ವರಾಹ ಪುರಾಣ, ವಾಯು ಪುರಾಣ ಮತ್ತು ವಿಷ್ಣು ಪುರಾಣ ಸೇರಿದಂತೆ ವಿವಿಧ ಪುರಾಣಗಳು ವರಾಹದ ಈ ಕಥೆಯನ್ನು ನಿರೂಪಿಸುತ್ತವೆ.

ಮಹಾವಿಷ್ಣುವಿನ ವರಾಹ ಅವತಾರಕ್ಕೆ ಸಾಕ್ಷಿಯಾಗಿ ಆಂಧ್ರಪ್ರದೇಶದ ತಿರುಮಲದಲ್ಲಿ ಶ್ರೀ ವರಾಹಸ್ವಾಮಿ ದೇವಸ್ಥಾನವಿದೆ. ತಿಮ್ಮಪ್ಪನ ದೇವಸ್ಥಾನದ ಉತ್ತರಕ್ಕಿರುವ ಈ ದೇವಾಲಯವನ್ನು ಆದಿ-ವರಾಹ ಕ್ಷೇತ್ರ ಎಂದು ಕರೆಯಲಾಗುತ್ತೆ.

ತಿರುಪತಿಯಲ್ಲಿ ತಿಮ್ಮಪ್ಪ ನೆಲೆ ನಿಲ್ಲೋಕೆ ಸ್ಥಳ ನೀಡಿದವನು ಇದೇ ವರಾಹ ಸ್ವಾಮಿ. ಹೀಗಾಗೇ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೂ ಮುನ್ನ ಕ್ಷೇತ್ರಪಾಲಕನಾದ ವರಾಹ ಸ್ವಾಮಿಯ ದರ್ಶನ ಮಾಡಬೇಕೆಂಬ ನಿಯಮವಿದೆ. ವರಾಹಸ್ವಾಮಿಯ ದರ್ಶನ ಮಾಡದೆ ತಿರುಪತಿ ಯಾತ್ರೆ ಪೂರ್ಣವಾಗಲ್ಲ ಅನ್ನೋ ನಂಬಿಕೆ ಇದೆ.

ವರಾಹ ಜಯಂತಿ ಮಹತ್ವ:

ವರಾಹ ಸ್ವಾಮಿಯನ್ನು ಪೂಜಿಸುವುದರಿಂದ, ಸಂತೋಷ, ಆರೋಗ್ಯ ಮತ್ತು ಸಂಪತ್ತನ್ನು ನೀಡುತ್ತಾನೆ ಎಂದು ಭಕ್ತರು ನಂಬುತ್ತಾರೆ. ಕಥೆಯ ಪ್ರಕಾರ ಅರ್ಧ ಹಂದಿ ಮತ್ತು ಅರ್ಧ ಮಾನವ ರೂಪದಲ್ಲಿ ವರಾಹನು ಹಿರಣ್ಯಾಕ್ಷನನ್ನು ಸೋಲಿಸಿ, ಕೆಟ್ಟದ್ದಕ್ಕೆ ಕೊನೆ ಹಾಡಿದನು. ಆದ್ದರಿಂದ, ಈ ಹಬ್ಬವು ಯಾವಾಗಲೂ ಕೆಟ್ಟ ವಿಚಾರಗಳ ವಿರುದ್ದ ಒಳ್ಳೆಯದಕ್ಕೆ ಜಯವನ್ನು ನೀಡುತ್ತದೆ ಎಂಬದನ್ನು ಸೂಚಿಸುವುದು.

ವರಾಹ ಜಯಂತಿ ಆಚರಣೆಗಳು, ಪೂಜಾ ವಿಧಾನ:
ವರಾಹ ಜಯಂತಿಯು ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿದ್ದು, ಈ ಶುಭ ದಿನದಂದು, ಭಕ್ತರು ಬೇಗನೆ ಎದ್ದು, ಸ್ನಾನ ಮಾಡಿ, ನಂತರ ದೇವರನ್ನು ಪೂಜಿಸುತ್ತಾರೆ. ವರಾಹ ಸ್ವಾಮಿಯ ಮೂರ್ತಿಗೆ ತುಪ್ಪ, ಬೆಣ್ಣೆ, ಹಾಲು, ಜೇನುತುಪ್ಪ ಮತ್ತು ತೆಂಗಿನ ನೀರನ್ನು ಹೊಂದಿರುವ ಪವಿತ್ರ ಅಭಿಷೇಕ ಮಾಡಲಾಗುವುದು. ತದನಂತರ ಮಾವಿನ ಎಲೆ, ನೀರು, ತೆಂಗಿನಕಾಯಿಯ ಕಲಶದ ಮೇಲೆ ವರಾಹ ದೇವರ ವಿಗ್ರಹವನ್ನು ಇಟ್ಟು, ಪೂಜಿಸುತ್ತಾರೆ. ಪೂಜೆ ಪೂರ್ಣಗೊಂಡ ನಂತರ, ದೇವರ ಆಶೀರ್ವಾದಕ್ಕಾಗಿ ಭಗವದ್ಗೀತೆ ಮತ್ತು ಮಂತ್ರಗಳನ್ನು ಪಠಿಸುತ್ತಾರೆ.

ವರಾಹ ಜಯಂತಿಯ ಪ್ರಯೋಜನಗಳು:
ಭಕ್ತರು ವರಾಹ ಜಯಂತಿಯಂದು ಉಪವಾಸ ಮಾಡುತ್ತಾರೆ, ಇದರಿಂದ ದೇವರು ಅವರಿಗೆ ಆರೋಗ್ಯ, ಸಂಪತ್ತು ಮತ್ತು ಸಂತೋಷವನ್ನು ನೀಡುತ್ತಾನೆ ಎಂದು ನಂಬುತ್ತಾರೆ. ಹೆಚ್ಚಿನ ಕೃಪೆಗಾಗಿ ಈ ದಿನ ಹಣ ಅಥವಾ ಬಟ್ಟೆಗಳನ್ನು ಬಡಜನರಿಗೆ ನೀಡಬೇಕು.
ಈ ದಿನಗಳಲ್ಲಿ ಶ್ರೀಮದ್ ಭಗವದ್ಗೀತಾ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಗುತ್ತದೆ.
***

ಹಿರಣ್ಯಾಕ್ಷನೆಂಬ ರಾಕ್ಷಸ ರಾಜ ಇದ್ದ. ಅವನು ಶಕ್ತಿವಂತನಾಗಿ  ಬೆಳೆದುಬಿಟ್ಟಿದ್ದ. ಅವನು ಅಹಂಕಾರದಿಂದ ಮೆರೆಯುತ್ತಿದ್ದ. ಅವನಿಗೆ ಇಡೀ ಭೂಮಿಯನ್ನೇ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ. ಅವನ ಬಳಿ ಬ್ರಹ್ಮನಿಂದ ಪಡೆದಿದ್ದ ವರಗಳೂ ಇದ್ದವು. ಒಮ್ಮೆ ಅವನು “ಈ ವರಗಳಿಂದ ದೇವತೆಗಳ ಶಕ್ತಿ ಕುಂದಿಸುವೆ” ಎಂದು ಗರ್ಜಿಸಿದ. ಅದಕ್ಕೆ ಅವನು ಮಾಡಿದ್ದೇನು?

ಭೂಮಿಯನ್ನು ಸಮುದ್ರಕ್ಕೆ ಎಸೆದ. ಆಗ ಪೃಥ್ವಿಯು ಮುಳುಗುತ್ತಾ ಸಮುದ್ರದ ತಳದಲ್ಲಿ ಕುಗ್ಗತೊಡಗಿತು. `ಅಯ್ಯಯ್ಯೋ!’ ಎಂದು ದೇವತೆಗಳು ಚೀರಿದರು. `ನಮ್ಮ ಗತಿ ಏನು’ ಎಂದು ಭೂಮಿಯ ಮೇಲಿನ ಎಲ್ಲ ಜೀವಿಗಳೂ ಭಯಭೀತರಾದರು. `ಕಾಪಾಡು, ಕಾಪಾಡು,’ ಎಂದು ದೇವತೆಗಳು ವಿಷ್ಣುವಿನ ಮೊರೆ ಹೊಕ್ಕರು. ಆಗ ಭಗವಂತನು ವರಾಹ ಅವತಾರ ತಾಳಿದ.

ಅಸುರ ಹಿರಣ್ಯಾಕ್ಷನು ಭೂಮಿಯನ್ನು ಸಮುದ್ರಕ್ಕೆ ಎಸೆದಿದ್ದ. ಆದ್ದರಿಂದ‌ ಮೊದಲು ಅದರ ರಕ್ಷ‌ಣೆ ಮಾಡಬೇಕಾಗಿತ್ತು. ಹೀಗಾಗಿ ವರಾಹ ರೂಪದಲ್ಲಿದ್ದ ವಿಷ್ಣುವು ಗರ್ಜಿಸುತ್ತ ಜಲಪ್ರವೇಶಿಸಿದ. “ಓ!, ಸಾಗರ ತಳದಲ್ಲಿ ಭೂ ಮಂಡಲ ಇದೆ” ಎಂದು ಕಂಡುಕೊಂಡ.  ತತ್‌ಕ್ಷಣ ಭೂಮಿಯನ್ನು ತನ್ನ ಕೋರೆ ಹಲ್ಲುಗಳ ಮಧ್ಯೆ ಹಿಡಿದಿಟ್ಟುಕೊಂಡ. ಆ ರೀತಿ ಕೋರೆಗಳ ಮಧ್ಯೆ ಇರಿಸಿಕೊಂಡೇ ಪೃಥ್ವಿಯನ್ನು ಮೇಲಕ್ಕೆ ತಂದ.

ಆಗ ರಾಕ್ಷಸ ಹಿರಣ್ಯಾಕ್ಷನು “ಎಲೆ ಮೃಗವೇ, ನೀನೇನು ಭೂಮಿಯನ್ನು ಎತ್ತುವುದು?” ಎಂದು ಹಾಸ್ಯದ ದ್ವನಿಯಲ್ಲಿ ವರಾಹನನ್ನು ಕೆಣಕಲು ಪ್ರಯತ್ನಿಸಿದ. “ಪ್ರಾಣಿಯಾದ ನೀನು ನನ್ನನ್ನು ಅದು ಹೇಗೆ ಎದುರಿಸುವೆ?” ಎಂದು ಇನ್ನಷ್ಟು ಕೆಣಕಿದ.

ಹಿರಣ್ಯಾಕ್ಷ‌ನ ಮಾತಿಗೆ ವರಾಹ ಉತ್ತರಿಸಿದ, “ನೀನು ಹೇಳುವಂತೆ ನಾವು ಕಾಡು ಮೃಗಗಳೇ. ನಿನ್ನಂತಹ ಬೇಟೆ ನಾಯಿಗಳಿಗಾಗಿ ಹುಡುಕುತ್ತಿದ್ದೇವೆ.” ತನ್ನನ್ನು ಕೊಲ್ಲಲು ಬಂದ ಅಸುರನಿಗೆ ವರಾಹ ಸವಾಲು ಒಡ್ಡಿದ. ಆಗ ಆ ರಾಕ್ಷಸನು ಕೆರಳಿದ ಸರ್ಪದಂತೆ ಬುಸುಗುಟ್ಟಿದ. ವರಾಹನ ಮೇಲೆ ಎರಗಿ ತನ್ನ ಗದಾಪ್ರಹಾರ ಮಾಡಿದ. ವರಾಹನಿಗೆ ಪೆಟ್ಟೂ ಕೊಟ್ಟ. ಇಬ್ಬರೂ ಕೋಪದಿಂದ ಹೋರಾಡಿದರು. ರಾಕ್ಷಸನ ಪೆಟ್ಟಿನಿಂದ  ವರಾಹನು ಕಿಂಚಿತ್ತೂ ನೋವು ಅನುಭವಿಸಲಿಲ್ಲ. ಹಿರಣ್ಯಾಕ್ಷ ಮಾತ್ರ ವರಾಹ ರೂಪದ ಭಗವಂತನು ಕೊಟ್ಟ  ಪೆಟ್ಟಿನಿಂದ ಕೆಳಗುರುಳಿದ. `ಸದ್ಯ, ರಾಕ್ಷಸನ ಸಂಹಾರವಾಯಿತಲ್ಲಾ’ ಎಂದು ಎಲ್ಲರಿಗೂ ಸಮಾಧಾನ.
****

ಶ್ರೀ ಮದ್ ಭಾಗವತದಲ್ಲಿ ಇಬ್ಬರು ಹಿರಣ್ಯಾಕ್ಷರು

ಆದಿ  ಹಿರಣ್ಯಾಕ್ಷನ ಸಂಹಾರ
ಶ್ರೀ ಬ್ರಹ್ಮ ದೇವರು ಸ್ವಾಯಂಭುವ ಮನುವಿಗೆ ಸೃಷ್ಟಿ ಕಾರ್ಯವನ್ನು ಮಾಡಲು ಆಜ್ಞೆಯನ್ನು ಮಾಡುತ್ತಾರೆ. ಆದರೆ ಅವಾಗ ಸ್ವಾಯಂಭುವ ಮನುವು "ಭೂಮಿಯು ನೀರಿನಲ್ಲಿ ಮುಳುಗಿ ಹೋಗಿದೆ ಹೇಗೆ ಸೃಷ್ಟಿ ಕಾರ್ಯವನ್ನು ಮಾಡಲು ಸಾಧ್ಯ?? ಎಂದು ಕೇಳಿದಾಗ
ಅವಾಗ ಶ್ರೀ ಬ್ರಹ್ಮ ದೇವರು 
ಆ ನಾರಾಯಣ ದೇವನೇ ಈ ಭೂಮಿಯನ್ನು ಮೇಲಕ್ಕೆ ತರಲು ಸಮರ್ಥ ಎಂದು ಯೋಚಿಸಿ ಭಗವಂತನ ಕುರಿತಾಗಿ ಧ್ಯಾನ ಮಾಡುತ್ತಾರೆ. ಅವಾಗ ಅವರ ಮೂಗಿನ ಹೊಳ್ಳೆಯಿಂದ ಅಂಗುಷ್ಟ ಗಾತ್ರದ ವರಾಹ ಹೊರಗಡೆ ಬಂದು ನಿಂದು ತತ್‍ಕ್ಷಣ ಆನೆಯಷ್ಟು ಗಾತ್ರದಷ್ಟು ದೊಡ್ಡದಾಗಿದೆ... 
ಅವಾಗ ಪುತ್ರ ಸಹಿತರಾಗಿ ಶ್ರೀ ಬ್ರಹ್ಮ ದೇವರು ಇದನ್ನು ಕಂಡು ತನ್ನ ಪಿತನಾದ ಆ ಶ್ರೀ ಹರಿಯನ್ನು ಕಂಡು ಸ್ತೋತ್ರ ಮಾಡುತ್ತಾರೆ... 
ಭಗವಂತ ತಾನು ಪ್ರಸನ್ನ ನಾದೆನೆಂದು ತಿಳಿಸಲು ಜೋರಾಗಿ ಒಮ್ಮೆ ಗರ್ಜನೆ ಮಾಡಿ ಸಮುದ್ರವನ್ನು ಹೊಕ್ಕು ,ಬಾಲವನ್ನು ಮೇಲಕ್ಕೆ ಎತ್ತಿ ನೀರೊಳಗೆ ಹೋಗಿ ರಸಾತಳದಲ್ಲಿ ಸೆರೆ ಸಿಕ್ಕಿದ್ದ ಭೂಮಿಯನ್ನು ತನ್ನ ದಾಡೆಯ ಕೋರೆಯಿಂದ ಮೇಲಕ್ಕೆ ಎತ್ತಿ ತರುತ್ತಾ ಇರುವ ಸಮಯದಲ್ಲಿ ಆಗ ಶ್ರೀಬ್ರಹ್ಮ ದೇವನಿಂದ ಜನಿಸಿದ್ದ ಆದಿ ಹಿರಣ್ಯಾಕ್ಷ ಎಂಬುವ ದೈತ್ಯ ಗದಾಪಾಣಿಯಾಗಿ ಶ್ರೀ ವರಾಹ ದೇವರ ಮೇಲೆ ಯುದ್ದಕ್ಕೆ ಹೋದನು.ಶ್ರೀ ವರಾಹ ದೇವನು ತನ್ನ ದಾಡೆ ಯಿಂದ ಅವನನ್ನು ಸಂಹಾರ ಮಾಡಿದನು.

ಈ ಶ್ರೀ ಮದ್ ಭಾಗವತದಲ್ಲಿ ಇಬ್ಬರು ಹಿರಣ್ಯಾಕ್ಷ ರು ಬರುತ್ತಾರೆ.
ಮೊದಲನೆಯವನು ಆದಿ ಹಿರಣ್ಯಾಕ್ಷ. ಇವನು ಬ್ರಹ್ಮ ದೇವನ ಪುತ್ರ. ಆದರೆ ಇವನು ಭೂಮಿಯನ್ನು ಅಪಹಾರ ಮಾಡಲಿಲ್ಲ. ಅಲ್ಲಿ ಭೂಮಿ ತಾನಾಗಿಯೇ ಮುಳುಗಿತ್ತು.
ಅವಾಗ ಭಗವಂತ ಶ್ವೇತ ವರಾಹ ರೂಪ ದಿಂದ ತನ್ನ ಕೋರೆದಾಡೆಇಂದ ಅವನ ಸಂಹಾರ ಮಾಡುತ್ತಾನೆ.

ಎರಡನೇ ಹಿರಣ್ಯಾಕ್ಷ ಮೊದಲನೆಯ ಹಿರಣ್ಯಾಕ್ಷ ನ ಆವೇಶದಿಂದ ಕಶ್ಯಪ ದಿತಿಯ ಗರ್ಭದಲ್ಲಿ ಹುಟ್ಟಿದವನು. ಅವನು ಭೂಮಿಯನ್ನು ಕದ್ದು ನೀರೊಳಗೆ ಅಡಗಿದ್ದಾಗ ಭಗವಂತ ನೀಲ ವರಾಹರೂಪಿ ದೇವನಾಗಿ ಅವನ ಕಿವಿಯ ಬುಡದಲ್ಲಿ ಹಸ್ತದಿಂದ ಹೊಡೆದು ಕೊಂದನು.
ನಂತರ ದೇವತೆಗಳು  ಶ್ರೀಯಜ್ಞ ವರಾಹ ದೇವರ ರೂಪಿ ಪರಮಾತ್ಮನ ಸ್ತೋತ್ರ ಮಾಡುತ್ತಾರೆ.
***

ವರಾಹ ಜಯಂತಿ. ಭಾದ್ರಪದ ಶುದ್ಧ ತೃತೀಯಾ.
ಲೇ. ಮಧುಸೂದನ ಕಲಿಭಟ್. ಧಾರವಾಡ.

ಭಾಗವತ ಪುರಾಣ ಪ್ರಕಾರ ಮತ್ತು ಇನ್ನೂ ಕೆಲವು ಪುರಾಣ ಪ್ರಕಾರ, ವೈಕುಂಠದ ದ್ವಾರಪಾಲಕರಾದ ಜಯ, ವಿಜಯರು ಅಸುರಾವೇಶದಿಂದ  ಒಂದು ಸಲ ಸನಕಾದಿ ಋಷಿಗಳನ್ನು ಶ್ರೀ ಹರಿಯ ದರ್ಶನಕ್ಕೆ ಬಿಡದೇ ಅವರ ಶಾಪಕ್ಕೆ ಗುರಿಯಾಗಿ ಭೂಲೋಕದಲ್ಲಿ ಅಸುರರಾಗಿ ಅವತರಿಸಿ ಶ್ರೀಹರಿಯಿಂದ ಹತರಾಗುವ ವರವನ್ನು ಪಡೆಯುವರು. ಅವರೇ ಹಿರಣ್ಯಾಕ್ಷ, ಹಿರಣ್ಯಕಶಿಪು, ತ್ರೇತೆಯಲ್ಲಿ ರಾವಣ ಕುಂಭಕರ್ಣ, ದ್ವಾಪರದಲ್ಲಿ ಶಿಶುಪಾಲ ದಂತವಕ್ರ ರಾವಿ ಶ್ರೀ ಹರಿಯಿಂದ  ಹತರಾಗುವರು.

ಹಿರಣ್ಯಾಕ್ಷ ಸಂಹಾರ ಆಗಿದ್ದೇ ಶ್ರೀಹರಿಯ ವರಾಹ ರೂಪದಿಂದ. ಅದನ್ನೇ ಈಗ ಯಥಾಮತಿ ಬರೆಯಲು ಪ್ರಯತ್ನಿಸುತ್ತೇನೆ.
ಹಿರಣ್ಯಾಕ್ಷನು ಭೂದೇವಿಯನ್ನು ಅಪಹರಿಸಿ ಸಮುದ್ರಮಧ್ಯದಲ್ಲಿ ಕುಳಿತುಕೊಳ್ಳುತ್ತಾನೆ. ಇದನ್ನು ಅರಿತ ಬ್ರಹ್ಮನು ಭೂಮಿಯೇ ಸಮುದ್ರದಲ್ಲಿ ಮುಳುಗಿದಮೇಲೆ ಹೇಗೆ ಎಂದು ಚಿಂತಿಸುತ್ತ ಧ್ಯಾನ ಮಗ್ನ ನಾದಾಗ ಸೀನು ಬಂದು ಅವನ ನಾಸಿಕದಿಂದ ಒಂದು ಹೆಬ್ಬರಳು ಗಾತ್ರದ ಶ್ವೇತವರಾಹ  ಹೊರಗೆ ಬರುತ್ತದೆ. ಆ ಕಾರಣದಿಂದ ಈಗಿರುವ ಕಲ್ಪಕ್ಕೆ ಶ್ವೇತ ವರಾಹ ಕಲ್ಪ ಎಂಬ ಹೆಸರು ಬಂದಿತು. ವಾಮನವತಾರದಲ್ಲಿ ವಾಮನ ಬೆಳೆದಂತೆ ಶ್ವೇತ ವರಾಹವು ಬೆಳೆದು ಪರ್ವತಾಕಾರ ಬೆಳೆಯುವದು. ಅದೇ ವೇಳೆಗೆ  ಬ್ರಹ್ಮನು ವಿಷ್ಣುವಿನ ವರಾಹ ರೂಪಕ್ಕೆ ನಮಸ್ಕರಿಸಿ ಜಗತ್ತಿನ ನಿಜ ಸಂಗತಿ ಹೇಳಿ, ಭೂದೇವಿಯನ್ನು ರಕ್ಷಿಸಲು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ.

ಆಗ ವರಾಹ ದೇವರು ಸುತ್ತಲೂ ದೃಷ್ಟಿ ಹಾಯಿಸಿ ಸಮುದ್ರ ಮಧ್ಯದಲ್ಲಿ ಭೂಮಿಯು ರಾಕ್ಷಸನ ಕೈಯಲ್ಲಿ ಗೊಳಾಡುವದನ್ನು ಕಂಡು, ತಕ್ಷಣ ಸಮುದ್ರದಲ್ಲಿ ಹೋಗುವನು. ಹಿರಣ್ಯಾಕ್ಷನ ಸಂಗಡ ನಾನಾ ಬಗೆಯಲ್ಲಿ ಯುದ್ಧ ಮಾಡುವನು. ಮಾತಿನಿಂದಲೂ ನಿಂದಿಸುವನು. ತನ್ನ ಕೋರೆಗಳ ಮಧ್ಯದಲ್ಲಿ ಭೂದೇವಿಯನ್ನು ಇಟ್ಟುಕೊಂಡು ಅವಳಿಗೆ ಹೆದರಕೂಡದು ಎಂದು ಸಂತೈಸಿ ರಾಕ್ಷಸನ ಸಂಗಡ ಯುದ್ಧ ಮಾಡುತ್ತಾನೆ. ಅದೇ ಸಮಯದಲ್ಲಿ ಬ್ರಹ್ಮ ದೇವರು ದೇವತೆ ಸಹಿತ ಬಂದು ಪ್ರಾರ್ಥನೆ ಮಾಡಿಕೊಳ್ಳುವನು. ಆಗ ವರಾಹದೇವರು ರಾಕ್ಷಸನನ್ನು ಸಂಹಾರ ಮಾಡುವನು. ಭೂದೇವಿಯನ್ನು ಕೋರೆಯಲ್ಲಿ ತಂದು ಅದರ ಕಕ್ಷೆಯಲ್ಲಿ ಇಡುವನು.

ವರಾಹ ದೇವರು ರಾಕ್ಷಸನನ್ನು ಸಂಹಾರ ಮಾಡಿದಮೇಲೆ ಒಂದುಸಲ ತನ್ನ ಮೈ ದೇಹವನ್ನು ಝಾಡಿಸಿಕೊಂಡನು. ಆಗ ಅವನ ರೋಮದಿಂದ ದರ್ಭ ಹುಟ್ಟಿತು. ಅವನು ಸಕಲ ಯಜ್ಞಗಳಿಗೆ ಮೂಲ ದೇವರು ಆದನು. ಅದಕ್ಕೆ ಅವನಿಗೆ ಯಜ್ನ ವರಾಹ ಎಂದು ಹೆಸರು ಬಂದಿತು. ಅವನ ದೇಹದಿಂದ ಬಿದ್ದ ಬೆವರ ಹನಿಗಳೇ ಎಳ್ಳು ಆಯಿತು.ಕಣ್ಣಿನಿಂದ ಆಜ್ಯವು ಹುಟ್ಟಿತು. ಉದಾರದಿಂದ ಇಡಾ ಪಾತ್ರೆ ಹುಟ್ಟಿತು. ಕರ್ಣದಲ್ಲಿ ಚಮಸಾಪಾತ್ರೆ, ರಸನದಲ್ಲಿ ಸೋಮರಸಗಳು, ಹಲ್ಲಿನಿಂದ ಕೋರೆಯಿಂದ ತುಂಗಾ, ಮತ್ತು ಭದ್ರಾ ಎಂಬ ನದಿಗಳು ಹುಟ್ಟಿದವು. ಹೀಗೆ ವರಾಹದೇವರನ್ನು ಬ್ರಹ್ಮ ಮತ್ತು ದೇವತೆಗಳು ವರ್ಣಿಸಿ ಪ್ರಾರ್ಥನೆ ಮಾಡಿದರು.
ಈ ಕಥೆಯನ್ನು ಹೇಳಿದವರಿಗೆ ಕೇಳಿದವರಿಗೆ ವರಾಹ ದೇವರು ಪ್ರಸನ್ನನಾಗಿ ಅವರ ಹೃದಯದಲ್ಲಿ ನೆಲೆಸುವನು. ಎಂದು ಈ ಚಿಕ್ಕ ವ್ಯಾಸ ಸೇವೆ ಮಾಡಲು ಪ್ರೋತ್ಸಾಹಿಸಿದ ಸಕಲ ಹಿರಿಯರಿಗೆ ವಂದಿಸುವೆ.
***

 .." ಈದಿನ - ದಿನಾಂಕ : 09.09.2021 ಗುರುವಾರ - ಶ್ರೀ ಪ್ಲವ ನಾಮ ಸಂವತ್ಸರ ದಕ್ಷಿಣಾಯನ ವರ್ಷ ಋತು ಭಾದ್ರಪದ ಶುದ್ಧ ತೃತೀಯಾ -  ಶ್ರೀ ವರಾಹ ಜಯಂತೀ "

" ಶ್ರೀ ಯಜ್ಞ ವರಾಹಾವತಾರ "

ವಾರಾಹಸ್ತು ಶ್ರುತಿಮುಖಃ 

ಪ್ರಾದುರ್ಭಾವೋ ಮಹಾತ್ಮನಃ ।

ಯತ್ರ ವಿಷ್ಣು: ಸುರಶ್ರೇಷ್ಠ: 

ವಾರಾಹಂ ರೂಪಮಾಸ್ಥಿತಃ ।।

ಮಹೀ೦ ಸಾಗರ ಪರ್ಯಂತಾಂ 

ಸಶೈಲವನ ಕಾನನಾಮ್ ।

ವೇದಪಾದಃ ಯೂಪದ೦ಷ್ಟ್ರ: 

ಕ್ರತುದಂತಃ ಚಿತೀಮುಖಃ ।

ಅಗ್ನಿಜಿಹ್ವಾ ದರ್ಭರೋಮಾ 

ಬ್ರಹ್ಮಶೀರ್ಷೋ ಮಹಾತಪಾ: ।।

ಶ್ರೀ ಮಹಾವಿಷ್ಣುವಿನ ಶ್ರೀ ವರಾಹಾವತಾರವು ಶ್ರುತಿಯಲ್ಲಿ ವರ್ಣಿತವಾಗಿದೆ.

ಹಂದಿಯ ವೇಷ ಧರಿಸಿ ಪರ್ವತ - ವನ - ಕಾನನ ಪೂರ್ಣವಾದ ಸಮುದ್ರ ಪರ್ಯಂತ ಭೂಮಿಯನ್ನು ಕೋರೆದಾಡಿಯಲ್ಲಿ ಧರಿಸಿ ಯಥಾ ಸ್ಥಾನದಲ್ಲಿಟ್ಟನು.

ನಾಲ್ಕು ವೇದಗಳೇ ಶ್ರೀ ವರಾಹದೇವರ ನಾಲ್ಕು ಕಾಲುಗಳು. 

ಕೋರೆಹಲ್ಲು ಯಜ್ಞ ಸ್ತಂಭವು. 

ಶ್ರೀ ವರಾಹದೇವರ ದಂತಗಳೇ ಯಜ್ಞವು. 

ಮುಖವೇ ಶ್ಯೇನಾಕಾರದ ಚಿತೆಯು. 

ನಾಲಿಗೆಯೇ ಅಗ್ನಿಯು.

ರೋಮಗಳೇ ದರ್ಭೆಗಳು. 

ವೇದಗಳು ತಲೆಯಲ್ಲಿದ್ದವು. 

ಹಗಲು ರಾತ್ರಿಗಳು ನೇತ್ರಗಳು. 

ವೇದಗಳೇ ಶ್ರೀ ವರಾಹದೇವರ ಅಂಗಾಂಗಗಳು.

ಆಜ್ಯವೇ ಶ್ರೀ ವರಾಹದೇವರ ಮೂಗು. 

ಮುಖವೇ ಸ್ರುವವು. 

ಸಾಮವೇದವೇ ಶ್ರೀ ವರಾಹದೇವರ ಸ್ವರ. 

ನಖಗಳೇ ಪ್ರಾಯಶ್ಚಿತ್ತಗಳು. 

ಮೊಳಕಾಲುಗಳೇ ಪಶಗಳು. 

ಕರುಳು ಉದ್ಗಾತೃವು. 

ಅಂಗವೇ ಹೋಮವು. 

ಹಣ್ಣು ಬೀಜ ಔಷಧಿಗಳು ಅಂಡಕೋಶಗಳು. 

ಆಯಾಯ ಭಾಗಗಳಿಂದ ಅವುಗಳು ಜನಿಸಿದವು. 

ಮಂತ್ರಗಳು ನಿತಂಬಗಳು. 

ಭುಜಗಳೇ ವೇದಿಯು. 

ಶರೀರವೇ ಪ್ರಾಗ್ವಂಶವಾಗಿದ್ದಿತು.

ಹೀಗೆ ಯಜ್ಞಾತ್ಮನಾದ ಶ್ರೀ ವರಾಹಮೂರ್ತಿಯು ಸಶೈಲ ವನ ಕಾನನ ಸಮಸ್ತ ಭೂಭಾಗವನ್ನು ಉದ್ಧರಿಸಿದನು.

" ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು "

ನೀಲಾಂಬುದಾಭ ಶುಭಶೀಲಾದ್ರಿದೇಹಧರ

ಖೇಲಾಹೃತೋದಧಿಧುನೀ ಶೈಲಾದಿಯುಕ್ತ

ನಿಖಿಲೇಲಾಕಟಾದ್ಯಸುರ ತೂಲಾಟವೀ ದಹನ ತೇ ।  

ಕೋಲಾಕೃತೇ ಜಲಧಿಕಾಲಾಚಯಾವಯವ

ನೀಲಾಬ್ಜದಂಷ್ಟ್ರ ಧರಿಣೀ ಲೀಲಾಸ್ಪದೋರುತಲ

ಮೂಲಾಶಿ ಯೋಗಿವರ ಜಾಲಾಭಿವಂದಿತ ನಮಃ  ।।

ಮಳೆಮುಗಿಲಂತೆ ಎಣ್ಣೆಗಪ್ಪಿನ ಬಣ್ಣದವನೂ - ಭಾರೀ ಗಾತ್ರದ ದೇಹ ಉಲ್ಲವನ್ನೂ ಆದ ಶ್ರೀ ಆದಿ ವರಾಹ ರೂಪಿ ಶ್ರೀಮನ್ನಾರಾಯಣನಿಗೆ ನನ್ನ ನಮನವು.

ಹಿಂದೆ ಹಿರಣ್ಯಾಕ್ಷನೆಂಬ ಮಹಾ ದೈತ್ಯನೂ - ಸಾಗರ ನದೀ ನದ ಬೆಟ್ಟಗಳಿಂದ ತುಂಬಿದ ಈ ಭೂಮಿಯನ್ನೇ ಚಾಪೆಯಂತೆ ಮಡಚಿಕೊಂಡು ಪಾತಾಳಕ್ಕಿಳಿದ.

ಇವನೇ  ಮೊದಲ ಅಸುರ ನಿರಬೇಕು.

ಶ್ರೀ ಹರಿ ಹಂದಿಯ ರೂಪ ಧರಿಸಿ ಅವನ ಬೆನ್ನಟ್ಟಿ ಹೋಗಿ ಆ ಅಸುರನನ್ನು ಸಂಹರಿಸಿ ತನ್ನ ಮಡದಿ " ಭೂದೇವಿ " ಯನ್ನು ರಕ್ಷಿಸಿದ.

ಆಗ ಸಮುದ್ರದ ಅಗಾಧ ಜಲದಲ್ಲಿ ಶ್ರೀ ವರಾಹದೇವರು ಆಟವಾಡುತ್ತಿದ್ದಾಗ ಈ ಭೂಮಿ ಅವನ ದಾಡೆಯಲ್ಲಿ ಅರಳಿದ ನೀಲ ಕಮಲದಂತೆ ಶೋಭಿಸುತ್ತಿತ್ತು.

ಬಳಿಕ ಆಕೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ಶ್ರೀ ಭೂವರಾಹಸ್ವಾಮಿ ಎನಿಸಿದ.

ಕಂದಮೂಲಗಳಿಂದಲೇ ಬದುಕಿತ್ತಿದ್ದ ಸಂಯಮಿಗಳಾದ ಮುನಿಗಳು ಶ್ರೀ ವರಾಹದೇವರನ್ನು ಸ್ತುತಿಸುತ್ತಿದ್ದರು.

ಇಂಥಹಾ ಶ್ರೀ ವರಾಹ ರೂಪಿ ಶ್ರೀ ಹರಿ ಪರಮಾತ್ಮನಿಗೆ ನಮಸ್ಕಾರಗಳು.  

" ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು - ಶ್ರೀ ವರಾಹದೇವರು " 

ಆದಿ ಸೂಕರ ಧರೋದ್ಧರಣಂ ತೇ 

ಸಿಂಧು ಬಂಧು ಜಠರಾತ್ ಶ್ರುತಿಗೀತಮ್ ।

ಮಾದೃಶಾಂ ಭವ ಪಯೋಧಿಗತಾನಾಂ 

ರಕ್ಷಣೇ ಪರಿಚಯಂ ತದವೈಮಃ ।।

ಶ್ರೀ ಆದಿ ವರಾಹಾವತಾರಿಯಾದ ಶ್ರೀ ಮೂಲರಾಮಚಂದ್ರಾ! 

ನೀನು ಸಮುದ್ರ ಮಧ್ಯದಿಂದ ಭೂಮಿಯನ್ನು ಉದ್ಧರಿಸಿದ್ದು ವೇದ ಪ್ರತಿಪಾದ್ಯವಾಗಿದೆ. 

ಆ ಪರಿಯನ್ನು ಅವಲೋಕಿಸಿದರೆ ಭವಸಾಗರ ಮಗ್ನರಾದ ನಮ್ಮಂಥವರನ್ನು ಉದ್ಧರಿಸಲು ಕೈಕೊಂಡ ಪೂರ್ವ ಪ್ರಯೋಗವೆಂದು ಭಾವಿಸುತ್ತೇನೆ. 

ಪೂರ್ಣಚಂದ್ರಗತಲಕ್ಷಣ ರೇಖಾಲಕ್ಷಿತ 

ಯದಿ ತದೈಕ ಕಲಾಯಾಮ್ ।

ಸಂಶ್ರಿತೇಂದುಮಣಿದಂಷ್ಟ್ರಧರಂ ಸ್ಯಾತ್   

ಸೋಪಮ ಭವತಿ ಸೂಕರ ರೂಪ ।।

ಶ್ರೀ ವರಾಹಮೂರ್ತೇ! 

ಚಂದ್ರನ ಒಂದು ಕಲೆಯಿಂದ ಅವನಲ್ಲಿರುವ ಕಳಂಕ ರೇಖೆಯು ಶೋಭಿಸುವಂತೆ, ಚಂದ್ರನ ಕಲೆಯಂತಿರುವ ದಂಷ್ಟ್ರಯುಕ್ತನಾದ ನಿನ್ನ ಕೃಷ್ಣ ವರ್ಣದ ಶರೀರವು ಶೋಭಿಸುವುದು!! 

" ಶ್ರೀ ರಾಯರ ವಿದ್ಯಾ ಶಿಷ್ಯರೂ ಆದ ಶ್ರೀ ವೀಣಾ  ಲಕ್ಷ್ಮೀ ನಾರಾಯಣಾಚಾರ್ಯರ ಮಾತಲ್ಲಿ.... "

ಆವಿರ್ಭೂತೋಬ್ಜಜೇಶಪ್ರಮುಖಸುರಗಣೈಃ 

ಪ್ರಾರ್ಥಿತಃ ಶ್ರೀವರಾಹೋ 

ಮಗ್ನಂ ಭೂಮಿಂ ಲಯಾಬ್ಧಿಂ ಗಿರಿ ವನ 

ಸಹಿತಾಂ ದ್ವಿಃ ಸಮುದ್ಧಾರ್ಯ ಚೋರ್ಧ್ವಮ್ ।

ನ್ಯಸ್ಯಾಬ್ಚಾಕ್ಷಃ ಸುದಾರ್ಢ್ಯ೦ ಸುರಗಣ 

ಮಹಿತೋ ತಾಪಮೇಷಾಂ ಪ್ರಕುರ್ವನ್ 

ಹತ್ವಾ ಪ್ರಹ್ಲಾದ ತಾತಾವರಜಮಪಿ 

ಮಹಾನ್ ಪ್ರೀಯತಾಂ ಮೇ ಸ ಚೇಶಃ ।।    

" ಶ್ರೀ ನಾರದಾಂಶ ಶ್ರೀ ಪುರಂದರದಾಸರ ವಾಣಿಯಲ್ಲಿ.... "

ಅಡವಿ ಹಂದಿಯಾಗಿದ್ದವಾನ ।

ಗೊಡವೆ ಯಾತಕೆ ನಮಗೆ ।

ಬಡಿವಾರವು ಯೇನು 

ಹೇಳಲೆ ರಂಗಧಾಮಾ ।।

ಕ್ರೋಢ ರೂಪವಾಗಿ ಭೂಮಿ ।

ದಾಡಿಯಿಂದ ಯೆತ್ತಿ ಹೊಡೆದು ।

ಮೂಢ ಹೇಮಾಕ್ಷನ 

ಕೊಂದೆ ಯಲೆ ಸತ್ಯಭಾಮೆ ।।

" ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯರಾಯರ ಶಬ್ದಗಳಲ್ಲಿ.... "

ರಾಗ : ಮುಖಾರಿ  ತಾಳ : ತ್ರಿವಿಡಿ 

ಕಮಲ ಸಂಭವ ನಾಸಿಕಾ । 

ಸಂಭವ ಕಾಯೋ ।

ನಮಿಸುವೆ ನಿನಗೆ ನಾನು ।। ಪಲ್ಲವಿ ।।

ಅಂದು ಧರಿಣಿ ಜಲ ।

ವಂದಾಗಿ ಕರಗಿರೇ ।

ನಂದನ ಚಿಂತಿಸೆ ।

ಬಂದ ವರಾಹಮೂರ್ತಿ ।। ಚರಣ ।।

ಮಧುಪಾನಾವನ । ಸಾ ।

ದುದು ಅವನ ಚರ್ಮ ।

ಹೊದಿಸಿ ಹೆಪ್ಪುಗೊಟ್ಟು ।

ಮೇದಿನೆಂದಿನಿಸಿದೆ ।। ಚರಣ ।।

ಕನಕಲೋಚನ ಭೂಮಿಯನು 

ಕದ್ದು ವೈಯ್ಯಲು ।

ಅನಿಮಿಷರೊಲಿಸೆ ಅವನ 

ಕೊಂದುದ್ಧರಿಸಿದೆ  ।। ಚರಣ ।।

ಕರುಣಾಕಟಾಕ್ಷದಿ 

ಹೊರವಲ್ಲಿ ನಾನೆಲ್ಲಿ ।

ಸರಿಗಾಣೆ ನಿನಗೆ ಅಂತರ 

ಬಹಿರದೊಳು ।। ಚರಣ ।।

ರಜೋಭಿಮಾನಿಯ 

ವಡಿಯಾ ಸುಜನಪಾಲಾ ।

ಭುಜಗ ಗಿರಿಯ ವಾಸಾ 

ವಿಜಯವಿಠ್ಠಲಾಧೀಶಾ ।। ಚರಣ ।।

- ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

****





No comments:

Post a Comment