SEARCH HERE

Wednesday, 10 March 2021

ಶೂಲೆಗಳ ಪರಿಹಾರಕ್ಕಾಗಿ ಹರಿಕಥಾಮೃತಸಾರ chant respective shloka parihara

ನಮ್ಮ ದೈನಂದಿನ ಜೀವನದಲ್ಲಿ ಬಾಧಿಸುವ ಕೆಲವು ಶೂಲೆಗಳ ಪರಿಹಾರಕ್ಕಾಗಿ ಹರಿಕಥಾಮೃತಸಾರೋಕ್ತ ಪಾರಾಯಣ....

ದಿನ ನಿತ್ಯ 21 ಸಲ, 108 ಸಲ ಹೀಗೆ ಪಾರಾಯಣ ಮಾಡುವುದರಿಂದ ಬಾಧೆ ಕಳೆದು ಆರೋಗ್ಯ ಭಾಗ್ಯ ನೀಡುವ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹಾಭಿನ್ನ ಶ್ರೀ ಧನ್ವಂತರೀ ರೂಪೀ ಪರಮಾತ್ಮ..


ಪಾರಾಯಣಕ್ಕೆ ಅನುಕೂಲವಾಗಲು ಪದ್ಯಗಳು 👇🏽👇🏽👇🏽👇🏽


ಹರಿಕಥಾಮೃತಸಾರ ಗುರುಗಳ!

ಕರುಣದಿಂದಾಪನಿತು ಪೇಳುವೆ!

ಪರಮ ಭಗವದ್ಭಕ್ತರಿದನಾದರದಿ

 ಕೇಳುವುದು!!


 ಸಕಲ ಬಾಧೆ ಪರಿಹಾರ


ಸುರುಚಿ ಶಾರ್ವರೀಕರನೆನಿಸಿ ಸಂ!

ಕರುಷಣ ಪ್ರದ್ಯುಮ್ನ ಶಶಿ ಭಾ

ಸ್ಕರರೊಳಗೆ ಅರವತ್ತಧಿಕ ಮುನ್ನೂರು ರೂಪದಲಿ!!

ಕರೆಸಿಕೊಂಬನು ಅಹಸ್ಸಂವ!

ತ್ಸರನೆನಿಪನು ವಿಶಿಷ್ಟನಾಮದ!

ಲರಿತವರಿಗಾರೋಗ್ಯಭಾಗ್ಯವನೀವಾನಂದಮಯ /

ಪಂಚತನ್ಮಾತ್ರ ಸಂಧಿ/ 10

 

ಕಂಠಬಾಧೆ ಪರಿಹಾರ


ದ್ವಿದಳ ಪದ್ಮವು  ಶೋಭಿಪುದು ಕಂ-!

ಠದಲಿ  ಮುಖ್ಯಪ್ರಾಣ ತನ್ನಯ!

ಸುದತಿಯಿಂದೊಡಗೂಡಿ ಹಂಸೋಪಾಸನೆಯ ಮಾಳ್ಪ!!

ಉದಕ ಅನ್ನಾದಿಗಳಿಗವಕಾಶದನು ತಾನಾಗಿದ್ದು ದಾನಾ-!

ಭಿದನು ಶಬ್ದವ ನುಡಿದು ನುಡಿಸುವ ಸರ್ವ ಜೀವರೊಳು!!

ಮಾತೃಕಾ ಸಂಧಿ/ 7


ಕಣ್ಣಿನ ಬಾಧೆ ಪರಿಹಾರ


ಸ್ತಂಭರೂಪದಲಿಪ್ಪ ದಕ್ಷಿಣ!

ಅಂಬಕದಿ ಪ್ರದ್ಯುಮ್ನ ಗುಣ ರೂ-!

ಪಾಂಭ್ರಣಿಯು ತಾನಾಗಿ ಇಪ್ಪಳು ವತ್ಸರೂಪದಲಿ!!

ಪೊಂಬಸಿರ ಪದಯೋಗ್ಯ ಪವನ ತ್ರಿ!

ಯಂಬಕಾದಿ ಸಮಸ್ತ ದಿವಿಜ ಕ-!

ದಂಬ ಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ!!

ಮಾತೃಕಾ ಸಂಧಿ/ 9


    ಕಿವಿ ಬಾಧೆ ಪರಿಹಾರ


ನೆಲೆಸಿಹರು ದಿಗ್ದೇವತೆಗಳಿ-!

ಕ್ಕೆಲದಿ ಕರ್ಣಂಗಳಲಿ ತೀರ್ಥಂ-!

ಗಳಿಗೆ ಮಾನಿಗಳಾದ ಸುರನದಿ ಮುಖ್ಯ ನಿರ್ಜರರು!!

ಬಲದ ಕಿವಿಯಲಿ ಇರುತಿಹರು ಬಾಂ-!

ಬೊಳೆಯ ಜನಕ ತ್ರಿವಿಕ್ರಮನು ನಿ-!

ರ್ಮಲಿನರನು ಮಾಡುವನು ಈ ಪರಿ ಚಿಂತಿಸುವ ಜನರ!!

ಮಾತೃಕಾ ಸಂಧಿ / 12


    ನರ ವ್ಯಾಧಿ ಪರಿಹಾರ


ಸತ್ಯಸಂಕಲ್ಪನು ಸದಾ ಎ-!

ಪ್ಪತ್ತೆರಡು ಸಾಹಸ್ರದೊಳು ಮೂ-!

ವತ್ತುನಾಲಕು ಲಕ್ಷದೈವತ್ತಾರು ಸಾಹಸ್ರ!

ಚಿತ್ಪ್ರಕೃತಿ ಒಡಗೂಡಿ ಪರಮ ಸು-!

ನಿತ್ಯ ಮಂಗಳಮೂರ್ತಿ ಭಕ್ತರ!

ತೆತ್ತಿಗನು ತಾನಾಗಿ ಸರ್ವತ್ರದಲಿ ಸಂತೈಪ!!

ನಾಡೀಪ್ರಕರಣ ಸಂಧಿ/ 6


  ಉಸಿರಾಟ ಬಾಧೆಗೆ ಪರಿಹಾರ


ನಾಸಿಕದಿ ನಾಸತ್ಯದಸ್ರರು! ಶ್ವಾಸಮಾನಿ ಪ್ರಾಣಭಾರತಿ!

ಹಂಸ ಧನ್ವಂತ್ರಿಗಳು ಅಲ್ಲಲ್ಲಿಪ್ಪರವರೊಳಗೆ!!

ಭೇಷ ಭಾಸ್ಕರ ರಕ್ಷಿಯುಗಳಕ-!

ಧೀಶರೆನಿಪರು ಅವರೊಳಗೆ ಲ-!

ಕ್ಷ್ಮೀಶ ದಧಿವಾಮನರು ನಿಯಾಮಿಸುತಲಿರುತಿಹರು!!

ಮಾತೃಕಾ ಸಂಧಿ/ 8


      ಸಂಧಿ ವಾತ ಪರಿಹಾರ


ಕಪಿಲ ಚಾರ್ವಾಂಗಾದಿ ರೂಪದಿ!

ವಪುಗಳೊಳು ಹಸ್ತಗಳ ಸಂಧಿಯೊ-!

ಳಪರಿಮಿತ ಕರ್ಮಗಳ ಮಾಡುತಲಿಪ್ಪ ದಿನದಿನದಿ!!

ಕೃಪಣವತ್ಸಲ ಪಾರ್ಶ್ವದೊಳು ಪರ!

ಸುಫಲಿಯೆನಿಸುವ ಗುದ ಉಪಸ್ಥದಿ!

ವಿಪುಲ ಬಲಿ ಭಗ ಮನವೆನಿಸಿ ತುಂದಿಯೊಳಗಿರುತಿಹನು!!


   ಉದರ ಬಾಧೆ ಪರಿಹಾರ


ಪಚನ ಭಕ್ಷಣ ಗಮನ ಭೋಜನ!

ವಚನ ಮೈಥುನ ಶಯನ ವೀಕ್ಷಣ!

ಅಚಲನಾಚಲನ ಪ್ರಯತ್ನವು ಸಾಧ್ಯವೇ ಜಗಕೆ!

ಶುಚಿಸದನ ದಯದಿಂದೆ ಜೀವರ!

ನಿಚಯದೊಳು ತಾನಿಂತು ಮಾಡುವ!

ಉಚಿತಾನುಚಿತ ಕರ್ಮಗಳನೆಂದರಿದು ಕೊಂಡಾಡು!!

ಸರ್ವಸ್ವಾತಂತ್ರ್ಯ ಸಂಧಿ/ 1



    🙏🙏 ಪ್ರಾರ್ಥನೆ 🙏🙏


ರಾಮ ರಾಕ್ಷಸ ಕುಲಭಯಂಕರ!

ಸಾಮಜೇಂದ್ರಪ್ರಿಯ ಮನೋವಾ-!

ಚಾಮ ಗೋಚರ ಚಿತ್ಸುಖಪ್ರದ ಚಾರುತರಚರಿತ!!

ಭೂಮ ಭೂ ಸ್ವರ್ಗಾಪವರ್ಗದ!

ಕಾಮಧೇನು ಸುಕಲ್ಪತರು ಚಿಂ-!

ತಾಮಣಿಯು ಎಂದೆನಿಪ ನಿಜಭಕ್ತರಿಗೆ ಸರ್ಚತ್ರ!!

ಅನುಕ್ರಮಣಿಕಾ ತಾರತಮ್ಯ ಸಂಧಿ/ 3


ವಿಜಯಸಾರಥಿ ಎಂದು ಗರುಡ!

ಧ್ವಜನ ಮೂರ್ತಿಯ ಭಕ್ತಿಪೂರ್ವಕ!

ಭಜಿಸುತಿಪ್ಪ ಮಹಾತ್ಮರಿಗೆ ಸರ್ವತ್ರದಲಿ ಒಲಿದು!

ವಿಜಯದನು ತಾನಾಗಿ ಸಲಹುವ!

ಭುಜಗ ಭೂಷಣ ಪೂಜ್ಯ ಚರಣಾಂ-!

ಬುಜ ವಿಭೂತಿದ ಭುವನ ಮೋಹನರೂಪ ನಿರ್ಲೇಪ!!


ಶ್ರೀ ಮಧ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು 🙏🏽 

No comments:

Post a Comment