SEARCH HERE

Tuesday 1 January 2019

ಧನ್ವಂತರೀ ಜಯಂತೀ dhanvantri jayanthi

.



Lord Dhanvantari is an outstanding personality in the history of Ayurveda. He was the physician of the Gods (in both the Vedas and Puranas) and an excellent surgeon. In Hinduism, worshipers pray to Dhanvantari seeking his blessings for sound healing. In his incarnation as king of Kashi, Divodasa, he was approached by a group of sages (including Susruta, the great Indian surgeon) with the request to teach them the science of Ayurveda. Dhanvantari stated that Brahma composed the Ayurveda even before he created mankind, forming one of the upangas of the Atharvaveda in 100,000 verses arranged in 1,000 chapters, which was not easy for the restricted intelligence of men to learn within their short life spans. So Dhanvantari complied with the sages’ request, recast Brahma’s Ayurveda into 8 divisions (shalya, shalakya, kayachikitsa, bhutavidya, kaumarabhrtya, agadatantra, rasayanatantra, vajikaranatantra) and began teaching within the framework of pratyaksa (perception), agama (authoritative scripture), anumana (inference) and upamana (analogy).
In other versions of the origins of Ayurveda, it has been said that Dhanvantari was deputed by Lord Indra to take the science of Ayurveda to the mortals. Also to be noted, Dhanvantari is seen as an avatar of Vishnu in Hinduism. The most frequently told story about Dhanvantari is that when the ocean was churned by the gods and demons in search of the elixir of life, Dhanvantari came out of it holding a bowl of nectar in his hands.
“Physicians of the School of Atreya referred the surgical cases to surgeons belonging to the School of Dhanvantari, but there is not evidence of referring the medical cases by the above surgeons to the physicians of the School of Atreya”  C.S. Introduction

MEANING OF THE NAME DHANVANTARI

“The word dhanus is only indicative (upalakshna). It denotes the science of surgery. The one who has seen the end (anta) of it is Dhanvantari.
The word dhanvan means desert. (Compare RigVeda [V.36.1] dhanvachara meaning, he who moves in a desert). There is a mantra in the Veda: dhanvan iva prapaasi (O Lord! You are like the place where water is distributed to travellers in a desert.) Thus Dhanvantari, the incarnation of Lord Vishnu, with a pot of nectar in his hand is like prapaa (oasis) in the desert of worldly existence.”

Story of Dhanvantari

Bhagavata Purana states that Dhanvantari emerged from the Ocean of Milk and appeared with the pot of amrita (nectar) during the story of the Samudra (or) Sagara Mathana whilst the ocean was being churned by the Devas and Asuras, using the Mandara mountain and the serpent Vasuki. The pot of Amrita was snatched by the Asuras, and after this event another avatar, Mohini, appears and takes the nectar back from the Asuras.
It is also believed that Dhanvantari promulgated the practise of Ayurveda. According to the Charaka Samhita, the knowledge of Ayurveda is eternal and is revealed in each of the cycles of creation of the universe. When needed, Lord Vishnu himself incarnates as Lord Dhanvantari and reestablishes the tradition of Ayurveda in the world to help relieve some of humanity’s suffering.
Lord Dhanvantari is known as the father of Ayurveda, since he was the first divine incarnation to impart its wisdom amongst humans. He first appeared during the great churning of the cosmic ocean of milk to deliver amrit (ambrosia, or Divine nectar) to the demigods. The churning of the ocean of milk is a famous episode in the Puranas that represents the spiritual endeavor of a person to achieve Self-realization through concentration of mind, withdrawal of the senses, control of all desires, austerities and asceticism. It is celebrated in India every twelve years in the holy festival known as Kumbha Mela. The following story is from the Srimad Bhagavatam.
Indra, the great leader of the demigods, was riding on his elephant when he came across the sage Durvasa Muni. Seeing the great demigod, Durvasa offered him a special garland that had been blessed by Sri, another manifestation of Laxmi, the Goddess of Abundance. Indra accepted the garland nonchalantly and put it on the trunk of his elephant, who tossed it on the floor. Durvasa Muni was very upset by this display of disrespect, and in anger cursed Indra and all the demigods to be bereft of all strength, energy and fortune right then and there.
Taking advantage of this situation, the Asuras (demons) attacked the demigods, killing many of them and slowly gaining control of the universe. Indra and the other demigods rushed to Brahma for help. Brahma suggested to bring their predicament to Lord Vishnu, who in turn advised them to seek alliance with the Asuras to churn the ocean of milk together for the nectar of immortality. The demigods agreed only because Lord Vishnu told them that he would make sure they alone would obtain the nectar and recover their strength and power to defeat the demons.
Using the mountain Mandara as the rod and Vasuki the serpent as the cord, both demigods and demons proceeded to churn the ocean of milk. All kinds of herbs were cast into it. The churning was so arduous that Lord Vishnu had to appear in many forms to help them with this process and prevent it from going nowhere. He even appeared as Lord Vishnu himself sitting on top of the mountain to infuse Indra and his companions with energy.
The churning of the ocean of milk first produced a deadly poison (halahala) that only Lord Shiva could swallow without being affected by it. And so he did, except that his consort Parvati pressed his neck as he was swallowing, so that the poison would not reach his stomach, and the halahala stayed in Lord Shiva’s throat, changing the color of his neck to blue due to its potency. This is why Lord Shiva is also called Neelakantha, or the blue-necked one.
As the churning continued, Lord Dhanvantari appeared. He was young and strongly built, his chest was very broad and his complexion bluish black. He had strong arms, reddish eyes, and moved like a lion. He was clad in bright yellow, his curly hair was anointed with oil and he wore shining earrings made of pearl. As he emerged, he was holding a conch, leeches, healing herbs, a chakra (one of the divine weapons of Lord Vishnu’s), and the long sought pot of ambrosia. The asuras, greedy after all things, realized right away that the container was full of nectar and snatched it from him.
Again filled with greed and pride, the demons started quarreling about which of them would drink the nectar first, grabbing the pot from one another and behaving like thieves. Seeing how busy they were fighting with each other, Lord Vishnu didn't miss the opportunity to trick them. He appeared as Mohini, a beautiful woman who fascinated the demons, recovered the nectar from them, and distributed it only amongst the demigods. As soon as the demigods drank it, they were invigorated with energy and defeated the demons. After worshipping Lord Vishnu and Shri Laxmi, they resumed their position in the heavens.
At the time of the churning, Lord Vishnu foretold that Lord Dhanvantari would appear again in the world to teach the science of Ayurveda. And so he did, after Lord Indra, seeing humanity so afflicted by pain and disease, pleaded with Lord Dhanvantari to descend into the material world and teach Ayurveda to the human race.
It is written in the scriptures that, “One who remembers the name of Dhanvantari can be released from all disease.” Lord Dhanvantari is worshipped all over India as the God of Medicine.
Lord Indra, after seeing humanity so afflicted by pain and disease, pleaded with Lord Dhanvantari to descend into the material world and teach Ayurveda to the human race. Dhanvantari, one of the many avatars (divine incarnations) of Lord Vishnu’s, is known as Adi-Dhanvantari.
King Dirghatamas of Kashi (Benares) was performing severe austerities and offering them to Lord Dhanvantari in the hopes that he would be pleased with them and grant him a son. And happy with the devotion of the King was born in the in the royal household of Kashi. He taught Ayurveda orally to the sages and rishis (seers) who became his disciples. His teachings are recorded in the Agni Purana, as well as through the teachings of his disciples Susruta, Pauskalavata, Aurabha, Vaitarana, and others.

DHANVANTARI JAYANTI – BIRTHDAY CELEBRATIONS

On the day of Dhanteras, birthday celebrations of Dhanvantari, the God of health, take place in an enthusiastic and delightful atmosphere. Dhanvatari Jayanti is celebrated throughout India by the practitioners of Ayurveda, the Indian traditional medicine.
In South India, mainly in Tamilnadu and Kerala some temples are dedicated to Lord Dhanvantari. In these temples, Dhanvantari Jayanthi is celebrated with utmost devotion. In Ayurveda Maha Sammelan office, Dhanwantari Bhavan in Delhi, the Ayurvedic practitioners worship the big statue of Lord Dhanvantari.

SOURCES

******






ಧನ್ವಂತರಿ ಜಯಂತಿ 

ನಮಾಮಿ ಧನ್ವಂತರಿಯಾದಿದೇವಂ
ಸುರಾಸುರೈರ್ವಂದಿತ ಪಾದಪದ್ಮಂ/
ಲೋಕೇಜೆರಾಋಗ್ವಯ ಮೃತ್ಯುನಾಶಂ
ದಾತಾರಮೀಶಂ ವಿವಿಧೌಷಧೀನಾಂ// 

ಧನ್ವಂ ಎಂದರೆ ರೋಗಗಳು ಅಂತರೀ ಎಂದರೆ ನಾಶ ಮಾಡುವವನು. ಸರ್ವ ರೋಗಗಳನ್ನು ಪರಿಹರಿಸುವ ಶ್ರೀ ಧನ್ವಂತರೀ ರೂಪೀ ಪರಮಾತ್ಮನು ಕ್ಷೀರಸಾಗರದಲ್ಲಿ ಹುಟ್ಟಿ ಬಂದದ್ದು ಈ ದಿನ ಅರ್ಥಾತ್ ಭಾದ್ರಪದ ಶುಕ್ಲ ದ್ವಿತೀಯಾ,  ನಂತರ ಕಾರ್ತೀಕ ಕೃಷ್ಣ ದ್ವಾದಶಿಯಂದು ದೀರ್ಘತಮ ಎಂಬುವನ ಮನೆಯಲ್ಲಿ ಮಗನಾಗಿ ಅವತರಿಸಿ ಬಂದು ಆಯುರ್ವೇದ ಶಾಸ್ತ್ರವನ್ನು ಉಪದೇಶಿಸಿರುವನು....

ಧನ್ವಂತರೀ ಜಯಂತಿಯ ಈ ಶುಭದಿನದಲ್ಲಿ ಪರಮಾತ್ಮನ ಕಾರುಣ್ಯದಿಂದ ಆರೋಗ್ಯ ಭಾಗ್ಯ ಸಿಗಲಿ, ಸಾಧನೆಗೆ ತಕ್ಕ ಶಕ್ತಿ ಸಂಪತ್ತು ನೀಡಲಿ, ಪ್ರಪಂಚಕ್ಕೆ ಹಿಂಸೆ ನೀಡುತ್ತಿರುವ ಮಹಮ್ಮಾರಿಯ ವಿನಾಶವಾಗಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡೋಣ...

“ओं धं धन्वंतरिये नम:”   “ಓಂ ಧಂ ಧನ್ವಂತರಿಯೇ ನಮ:”  

“ಧನ್ವಂ” + “ಅಂತರಿ” = ಧನ್ವಂತರಿ 
“dhanvaM” + “aMtari” = dhanvaMtari; 
“धन्वं” + “अंतरि” = धन्वंतरि
DhanvaM – means diseases;  antari – means – destroy.  That is Dhanvantary is the one who destroys all the diseases.
ಧನ್ವಂ– ಕಾಯಿಲೆಗಳು, ರೋಗ ರುಜಿನ, ಕಷ್ಟ ಕಾರ್ಪಣ್ಯಗಳು   ಅಂತರಿ – ಧ್ವಂಸ 

ಧನ್ವಂತರಿ ಅಂದರೆ ಯಾರು ?  ಧನ್ವಂತರಿ ರೂಪವು ಸಾಕ್ಷಾತ್ ಪರಮಾತ್ಮನ ಅವತಾರವಾಗಿದ್ದು, ಆ ರೂಪವು ಎರಡು ಸಲ ಕಂಡುಬಂದಿದೆ.  ಒಮ್ಮೆ ಸಮುದ್ರಮಥನ ಕಾಲದಲ್ಲಿ ಭಾದ್ರಪದ ಶುಕ್ಲ ದ್ವಿತೀಯ ದಿನದಂದು ಅಮೃತ ಕಲಶವನ್ನು ಹಿಡಿದುಕೊಂಡು ವ್ಯಕ್ತವಾದ ರೂಪ .  ಆ ರೂಪವನ್ನು ಅಬ್ಜ ಎಂದು ಕರೆಯುತ್ತಾರೆ.   ಆಗ ಅಸುರರು ಅವನಿಂದ ಅಮೃತವನ್ನು ಕಸಿದಾಗ, ಮೋಹಿನಿ ರೂಪದಿಂದ ಶ್ರೀಹರಿ ಮತ್ತೆ ಪ್ರಕಟಗೊಂಡು ದೇವತೆಗಳಿಗೆ ಅಮೃತವನ್ನು ಹಂಚಿದ.      ಮತ್ತೊಮ್ಮೆ ಕಾರ್ತೀಕ ಬಹುಳ ದ್ವಾದಶಿ ಯಂದು  ಸುಧಾಂಶು ವಂಶದಿ ಮಗನಾಗಿ ಅವತರಿಸಿ ಆಯುರ್ವೇದ ಸಂಹಿತವನ್ನು ಉಪದೇಶಿಸಿದನು.  ತಾನು ಮಾನವನಾಗಿ ಅವತರಿಸಿದ್ದರಿಂದ ಭಾರದ್ವಾಜ ಋಷಿಗಳಿಂದ ಆಯುರ್ವೇದವನ್ನು ಕಲಿತು, ಆಯುರ್ವೇದವನ್ನು ಪ್ರಚುರಪಡಿಸಿದ ರೂಪ.  ಆಯುರ್ವೇದ ದಿಂದ ಕಾಯಚಿಕಿತ್ಸೆ, ಬಾಲಚಿಕಿತ್ಸೆ, ಗ್ರಹಚಿಕಿತ್ಸೆ, ಊರ್ದ್ವಾಂಗ ಚಿಕಿತ್ಸೆ, ದಂಷ್ಟ್ರಚಿಕಿತ್ಸೆ, ಜರಾಚಿಕಿತ್ಸೆ, ವಾಜೀಕರಣಚಿಕಿತ್ಸೆ ಇತ್ಯಾದಿ ೮ ವಿಭಾಗಗಳನ್ನು ಮಾಡಿ ಆಯುರ್ವೇದ ಪ್ರವರ್ತಕನೆಂದು ಖ್ಯಾತಿ ಪಡೆದನು.


ಧನ್ವಂತರಿ ಧ್ಯಾನದ ಅಧಿಷ್ಟಾನ ಯಾವುದು ಮತ್ತು ಕ್ರಮವೇನು ?


 “ಆತ್ಮಸಂಸ್ತಂ” ಎಂಬ ಮಾತಿನಿಂದ ಆಚಾರ್ಯರು ಧ್ಯಾನದ ಅಧಿಷ್ಟಾನವನ್ನು ತಿಳಿಸಿದ್ದಾರೆ.  ನಮ್ಮ ಹೃದಯದಲ್ಲಿ ಅಗ್ನಿಮಂಡಲ ಚಂದ್ರಮಂಡಲ ಸೂರ್ಯ ಮಂಡಲಗಳಿವೆ. ಹೃದಯದಲ್ಲಿರುವ ಸೂರ್ಯಮಂಡಲದಲ್ಲಿ ಸೂರ್ಯನಾರಾಯಣ ನನ್ನು ಚಿಂತಿಸಿ, ಗಾಯತ್ರಿ ಮಂತ್ರವನ್ನು ಜಪಿಸುವಂತೆ ಹೃದಯದಲ್ಲಿರುವ ಚಂದ್ರಮಂಡಲದಲ್ಲಿ ಧನ್ವಂತರಿಯನ್ನು ಚಿಂತಿಸಿ ಜಪ ಮಾಡಬೇಕು.  ಹೃದಯದ ಚಂದ್ರಮಂಡಲದಲ್ಲಿರುವ ಧನ್ವಂತರಿಯು ೭೨೦೦೦ ನಾಡಿಗಳಲ್ಲಿ ತನ್ನ ಬೆಳಕನ್ನು ಸೂಸುತ್ತಾ ನಮ್ಮ ಸಮಸ್ತ ದೇಹವನ್ನು ಅಮೃತಮಯವನ್ನಾಗಿ ಮಾಡುವನು.  ಅಲ್ಲದೆ ಶಿರಸ್ಸಿನಲ್ಲಿ ಹುಬ್ಬುಗಳನಡುವೆ,  ಕಿರುನಾಲಿಗೆಯಲ್ಲಿ, ಹೊಕ್ಕಳಿನಲ್ಲಿ ಮತ್ತು ಕೆಳಭಾಗದಲ್ಲಿರುವ ಷಟ್ ಚಕ್ರಗಳಲ್ಲಿಯೂ ಇದೇ ಧನ್ವಂತರಿಯು ಅಮೃತಧಾರೆಯನ್ನು ಸುರಿಸುತ್ತಿರುವನು.


ಧನ್ವಂತರಿಯ ರೂಪ ಹೇಗಿದೆ ?

ಧನ್ವಂತರಿಯು ಅಮೃತಕಲಶವನ್ನು ಎಡಗೈಯಲ್ಲಿಯೂ, ಬಲಗೈಯಲ್ಲಿ ಜ್ಞಾನಮುದ್ರೆಯನ್ನೂ ಧರಿಸಿದ್ದಾನೆ.

ಧನ್ವಂತರಿ ಮಹಾಮಂತ್ರ  (ತಂತ್ರಸಾರಸಂಗ್ರಹ)


ಸ್ವಯಮುದ್ದೇಶವಾನ್ ಪೂರ್ವವರ್ಣಪೂರ್ವೋ ನಮೋ ಯುತ: |

ಧಾನ್ವಂತರೋ ಮಹಾ ಮಂತ್ರ: ಸಂಸೃತಿವ್ಯಾಧಿನಾಶನ: || ೧ ||
|| ಧಂ ಧನ್ವಂತರಯೇ ನಮ: ||
ಆಚಾರ್ಯ ಮಧ್ವರು ತಮ್ಮ ತಂತ್ರಸಾರಸಂಗ್ರಹದಲ್ಲಿ 72 ಮಂತ್ರಗಳನ್ನು ಹೇಳಿದ್ದು, ಅದರಲ್ಲಿ ಧನ್ವಂತರಿ ಮಹಾಮಂತ್ರವನ್ನೂ, ಸೇರಿಸಿದ್ದಾರೆ.  ಹತ್ತು ಶ್ಲೋಕಗಳಲ್ಲಿ ಧನ್ವಂತರಿ ಮಂತ್ರದ ಸ್ವರೂಪ, ಧ್ಯೇಯರೂಪ, ಧ್ಯಾನಶ್ಲೋಕ,  ಜಪ, ಹೋಮಗಳ ಫಲವನ್ನೂ ತಿಳಿಸಿರುವರು.   ನಮಗೆ ಯಾವ್ಯಾವುದರ ಅಪೇಕ್ಷೆ ಇದೆಯೋ ಅವೆಲ್ಲ ಧನ್ವಂತರಿ ಮಂತ್ರದ ಜಪ ಹೋಮಗಳಿಂದ ಈಡೇರುವುದೆಂದು ಹೇಳಿದ್ದಾರೆ –
ಚಂದ್ರೌಘಕಾಂತಿಮಮೃತೋರುಕರೈರ್ಜಗಂತಿ   
ಸಂಜೀವಯಂತಮಮಿತಾತ್ಮಸುಖಂ ಪರೇಶಂ |
ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ 
ಶೀತಾಂಶುಮಂಡಲಗತಂ ಸ್ಮರತಾಽತ್ಮಸಂಸ್ಥಂ || ೨ ||
ಅನಂತಚಂದ್ರರ ಕಾಂತಿಯಿಂದ ಪ್ರಕಾಶಿಸುತ್ತಿರುವ, ತನ್ನ ಅಮೃತಸ್ರವವೆಂಬ ಕಿರಣಗಳಿಂದ ಜಗತ್ತಿಗೆ ಜೀವಕಳೆಯನ್ನು ತುಂಬುತ್ತಿರುವ,   ರಮಾಬ್ರಮ್ಹಾದಿಗಳಿಗೂ ಒಡೆಯನಾದ ಪರಮಾತ್ಮನು ತನ್ನ ಬಲಗೈಯಲ್ಲಿ  ಜ್ಞಾನಮುದ್ರೆಯನ್ನೂ, ಎಡಕೈಯಲ್ಲಿ ಅಮೃತಪೂರ್ಣ ಕೊಡವನ್ನು ಹಿಡಿದಿರುವ, ಚಂದ್ರಮಂಡಲದಲ್ಲಿರುವ ಧನ್ವಂತರಿಯನ್ನು ತನ್ನೊಳಗೆ ನೆಲೆಸಿರುವನೆಂದು ಸ್ಮರಿಸಿರಿ.

ಮೂರ್ಧ್ನಿ ಸ್ಥಿತಾದಮುತ ಏವ ಸುಧಾಂ ಸ್ರವಂತೀಂ           

ಭ್ರೂಮಧ್ಯಗಾಚ್ಚ ತತ ಏವ ಚ ತಾಲುಸಂಸ್ಥಾತ್ |
ಹಾರ್ದಾಚ್ಚ ನಾಭಿಸದನಾದಧರಾಸ್ಥಿತಾಚ್ಚ   
ಧ್ಯಾತ್ವಾಽಭಿಪೂರಿತತನುರ್ದುರಿತಂ ನಿಹನ್ಯಾತ್ | ೩ |
ತನ್ನ ಶಿರಸ್ಸಿನಲ್ಲಿ, ಹುಬ್ಬುಗಳ ನಡುವೆ, ಕಿರುನಾಲಿಗೆಯಲ್ಲಿ, ಹೃದಯದಲ್ಲಿ, ಹೊಕ್ಕುಳಿನಲ್ಲಿ ಮತ್ತು ಕೆಳಭಾಗದಲ್ಲಿ ಹೀಗೆ ಷಟ್ ಚಕ್ರಗಳಲ್ಲೂಸನ್ನಿಹಿತನಾದ ಧನ್ವಂತರಿಯಿಂದ ಸುರಿಯುತ್ತಿರುವ ಅಮೃತಧಾರೆಯನ್ನು ನೆನೆದು, ಆ ಅಮೃತಧಾರೆಯಲ್ಲಿ ತನ್ನ ಶರೀರವೆಲ್ಲ ತೊಯ್ದು ಪವಿತ್ರವಾದಂತೆ ಅನುಸಂಧಾನಿಸಿ ಜಪಿಸುವವನು ಎಲ್ಲ ದುರಿತಗಳನ್ನೂ ತಡೆಯಬಲ್ಲ.

ಅಜ್ಞಾನ ದು:ಖ ಭಯ ರೋಗ ಮಹಾವಿಷಾಣಿ     

ಯೋಗೋಽಯಮಾಶು ವಿನಿಹಂತಿ ಸುಖಂ ಚ ದದ್ಯಾತ್ |
ಉನ್ಮಾದವಿಭ್ರಮಹರ: ಪರತಶ್ಚ ಸಾಂದ್ರ 
ಸ್ವಾನಂದ ಮೇವೆ ಪದಮಾಪಯತಿ ಸ್ಮ ನಿತ್ಯಂ | ೪ |
ಧನ್ವಂತರಿ ಮಂತ್ರವನ್ನು ಪ್ರತಿನಿತ್ಯ ಯಥಾಶಕ್ತಿ ಶ್ರದ್ಧೆಯಿಂದ ಜಪ ಮಾಡಿದರೆ,  ಅಜ್ಞಾನ, ದು:ಖ, ಭಯ, ಹಲವು ಬಗೆಯ ರೋಗಗಳು, ಮಾರಕವಾದ ವಿಷಗಳು ಇವನ್ನೆಲ್ಲ ಪರಿಹರಿಸಿ, ಸುಖವೀಯುವುದು.   


ಧ್ಯಾತ್ವೈವ ಹಸ್ತತಲಗಂ ಸ್ವಮೃತಂ ಸ್ರವಂತಂ 

ದೇವಂ ಸ ಯಸ್ಯ ಶಿರಸಿ ಸ್ವಕರಂ ನಿಧಾಯ |
ಆವರ್ತಯೇನ್ಮನುಮಿಮಂ ಸ ಚ ವೀತರೋಗ: 
ಪಾಪಾದಪೈತಿ ಮನಸಾ ಯದಿ ಭಕ್ತಿ ನಮ್ರ: | ೫ |
ಒಬ್ಬ ಮಂತ್ರೋಪಾಸಕನು ಶ್ರದ್ಧಾ-ಭಕ್ತಿಯಿಂದ ಅಮೃತವನ್ನು ಸುರಿಸುತ್ತಿರುವ ಧನ್ವಂತರಿಯನ್ನು ಮನದಲ್ಲಿ ನೆನೆದು ರೋಗಿಯ ತಲೆಯ ಮೇಲಿ ಕೈಯನ್ನಿಟ್ಟು ಧನ್ವಂತರಿ ಮಹಾ ಮಂತ್ರವನ್ನು ಉಚ್ಚರಿಸಿದರೆ, ರೋಗವು ಪರಿಹಾರವಾಗುವುದು.   ಅಮೃತವನ್ನು ತಂದ ಧನ್ವಂತರಿಯನ್ನು ಸ್ತುತಿಸಿ ರೋಗಿಯ ತಲೆಯ ಮೇಲೆ ತನ್ನ ಕೈಯನ್ನಿಟ್ಟರೆ ರೋಗ ಪರಿಹಾರವಾಗುವುದಲ್ಲದೆ ಅದಕ್ಕೆ ಮೂಲವಾದ ಪಾಪವೂ ದೂರವಾಗುವುದು. 

ಶತಂ ಸಹಸ್ರಮಯುತಂ ಲಕ್ಷಂ ವಾಽಽರೋಗಸಂಕ್ಷಯಾತ್ |

ಇಮಮೇವ ಜಪೇನ್ಮಂತ್ರಂ ಸಾಧೂನಾಂ ದು:ಖಶಾಂತಯೇ | ೬ |
ಈ ಮಂತ್ರವನ್ನು ೧೦೦, ೧೦೦೦, ೧೦೦೦೦, ಲಕ್ಷ ಆವೃತ್ತಿ ರೋಗಿಗಳ ರೋಗ ನಿವೃತ್ತಿಗಾಗಿ ಜಪಿಸಬೇಕು.  ಸಜ್ಜನರ ದು:ಖ ಪರಿಹಾರಕ್ಕಾಗಿ ಈ ಮಂತ್ರವನ್ನೇ ಜಪಿಸಬೇಕು.



ಜ್ವರ ದಾಹಾದಿ ಶಾಂತ್ಯರ್ಥಂ ತರ್ಪಯೇನ್ಮುನುನಾಽಮುನಾ |

ಧ್ಯಾತ್ವಾ ಹರಿಂ ಜಲೇ ಸಪ್ತರಾತ್ರಾಜ್ಜೂರ್ತಿರ್ವಿನಶ್ಯತಿ || ೭ |
ಒಂದು ವಾರ ಕಾಲ ಪ್ರತಿನಿತ್ಯ ದಿನಕ್ಕೆ ಯಥಾಶಕ್ತಿ ಸಾವಿರಬಾರಿ “ಓಂ ಧನ್ವಂತರಿಯೇ ನಮ:” ಎಂದು ಜಪ ಮಾಡಿ ತರ್ಪಣ ಕೊಡಿರಿ ರೋಗಗಳು ಮಾಯವಾಗುತ್ತದೆ.

ಧನ್ವಂತರೋ ಮಹಾಮಂತ್ರ: ಸಂಸೃತಿವ್ಯಾಧಿನಾಶನ: | ಎಂದಿರುವ ಆಚಾರ್ಯರ ವಾಣಿಯಂತೆ ಧನ್ವಂತರಿ ಮಂತ್ರವು ಕ್ಷಣಿಕ ರೋಗಗಳನ್ನಷ್ಟೇ ಅಲ್ಲದೆ ಸಂಸಾರ ರೋಗವನ್ನೇ ಪರಿಹಾರ ಮಾಡುವ ಸಾಮರ್ಥ್ಯವುಳ್ಳದೆಂದಿದ್ದಾರೆ.  


ಆಯುತಾಮೃತಸಮಿದ್ಧೋಮಾತ್ ಗೋಘೃತಕ್ಷೀರಸಂಯುತಾತ್ |

ಸರ್ವರೋಗಾ ವಿನಸ್ಯಂತಿ ವಿಮುಖೋ ನ ಹರೇರ್ಯದಿ || ೮ ||
ರೋಗಿಯು ಭಗವಂತನಿಗೆ ನಿಶ್ಚಲ ಭಕ್ತನಾಗಿದ್ದರೆ ಧನ್ವಂತರಿ ಮಂತ್ರದಿಂದಲೇ ಗೋವಿನ ತುಪ್ಪ, ಕ್ಷೀರ, ಅಮೃತಬಳ್ಳಿ ಸಮಿತ್ತಿನಿಂದ ಹೋಮಿಸಿದರೆ, ಎಲ್ಲಾ ರೋಗಗಳೂ ನಾಶವಾಗುವುದು .



ಭೂತಾಭಿರಸಾಂತ್ಯರ್ಥಮಪಾಮಾರ್ಗಾಹುತಿಕ್ರಿಯಾ |

ದ್ವಿಗುಣಾಽಮೃತಯಾ ಪಶ್ಚಾತ್ಯೇವಲೇನ ಘ್ರುತೇನ ವಾ | ೯ |
ಭೂತ, ಪ್ರೇತ, ಪಿಶಾಚಾದಿಗಳ ಪೀಡೆ, ಅಪಮೃತ್ಯಾದಿಗಳ ಪರಿಹಾರಕ್ಕಾಗಿ,  ಉತ್ತರಣೆಯ ಸಮಿಧೆಗಳಿಂದ ಹೋಮವನ್ನು ಮಾಡಿ, ಅದಕ್ಕಿಂತ ಇಮ್ಮಾಡಿ  ಅಮೃತ ಬಳ್ಳಿಯ ಸಮಿಧೆಗಳಿಂದ ಅಥವಾ ಆಜ್ಯದಿಂದ ಹೋಮಿಸಬೇಕು. 



ಆಯುರ್ವಿವೃದ್ಧಯೇ ನಿತ್ಯಂ ಜನ್ಮ ನಕ್ಷತ್ರ ಏವ ವಾ |

ಚತುಶ್ಚತುರ್ಭಿರ್ದೂವಾಭಿ: ಕ್ಷೀರಾಜ್ಯಾಕ್ತಾಭಿರಿಷ್ಯತೇ | ೧೦ |
ಆಯುಷ್ಯಾಭಿವೃದ್ಧಿಗಾಗಿ ಪ್ರತಿನಿತ್ಯವೂ, ಅಥವಾ ಜನ್ಮ ನಕ್ಷತ್ರ ದಿನದಲ್ಲಾಗಲೀ, ಆಕಳ ಹಾಲು ತುಪ್ಪ ಮಿಶ್ರವಾದ, ಕದಿರಿನ ಕುಡಿಗಳಿಂದ ಹೋಮಮಾಡಬೇಕು

ಸರ್ವಕ್ರಿಯಾ ಹರೌ ಭಕ್ತೇ ಹರಿಭಕ್ತೈಸ್ಸ್ವನುಷ್ಠಿತಾ: |

ಗುರುಭಕ್ತೈ ಸದಾಚಾರೈ: ಫಲಂತ್ಯದ್ಧಾ ನ ಚಾನ್ಯಥಾ | ೧೧ |
ಹೋಮ ಮಾಡತಕ್ಕವನಿಗೆ ಹರಿಭಕ್ತ್ಯಾದಿ ಗುಣಗಳಿಲ್ಲದಿದ್ದರೆ ಸರ್ವಥಾ ಫಲಿಸದು.  ಸದಾಚಾರ ಸಂಪನ್ನರಾದ ಹರಿ ಗುರು ಭಕ್ತರಿಂದಲೇ ಜಪ ಹೋಮ ಮೊದಲಾದ ಸರ್ವಕ್ರಿಯೆಗಳೂ ಹರಿಸ್ಮರಣ ಪೂರ್ವಕ ಮಾಡಿರೆ ಫಲ ನಿಶ್ಚಯ.

++++++++++++++++++++++++++++++


धन्वंतरि वेद मंत्र – ಧನ್ವಂತರಿ ವೇದ ಮಂತ್ರ –

अयं मे हस्तो भगवान् अयं मे भगवत्तर: ।
अयं मे विश्वभेषजोऽयं शिवाभिमर्शन: । ऋग्वेद ।
ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರ: |
ಅಯಂ ಮೇ ವಿಶ್ವಭೇಷಜೋಽಯಂ ಶಿವಾಭಿಮರ್ಶನ: | ಋಗ್ವೇದ |
+++++++++++++++++++++++++++++++++++++++

Vaadiraaja Tirtha kruta Dashavatara stotra  :


ಧನ್ವಂತರೇಽಗರುಚಿ ಧನ್ವಂತರೇಽರಿತರು ಧನ್ವಂಸ್ತರಿ ಭವಸುಧಾ-

ಭಾನ್ವಂತರಾವಸಥ ಮನ್ವಂತರಾಧಿಕೃತ ತನ್ವಂತರೌಷಧನಿಧೇ |
ಧನ್ವಂತರಂಗ ಶುಗು ಧನ್ವಂತಮಾಜಿಷು ವಿತನ್ವನ್ಮಮಾಬ್ಧಿತನಯಾ-
ಸೂನ್ವಂತಕಾತ್ಮ ಹೃದ ತನ್ವಂತರಾವಯವ ತನ್ವಂತರಾತ್ರಿ ಜಲಧೌ ||
धन्वंतरेऽगरुचि धन्वंतरेऽरितरु धन्वंस्तरि भवसुधा-
भान्वंतरावसथ मन्वंतराधिकृत तन्वंतरौषधनिधे ।
धन्वंतरंग शुगु धन्वंतमाजिषु वितन्वन्ममाब्धितनया
सून्वंतकात्म हृद तन्वंतरावयव तन्वंतरात्रि जलधौ ॥

Sri Gopaladasaru did the ayurdaana to Jagannatha Dasaru with the shakthi of Dhanvantary Mantra only.

ಗೋಪಾಲದಾಸರ ಕೃತಿ :
ಆವ ರೋಗವೋ ಎನಗೆ ದೇವ ಧನ್ವಂತ್ರಿ      | ಪ |
ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ | ಅ.ಪ |
ಹರಿ ಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ
ಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆ
ಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ  | ೧ |
ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು
ಗುರುಹಿರಿಯರಂಘ್ರಿಗೆ ಶಿರ ಬಾಗದು
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ | ೨ |
ಅನಾಥ ಬಂಧು ಗೋಪಾಲವಿಠಲರೇಯ
ಎನ್ನ ಬಾಗದ ವೈದ್ಯ ನೀನೆಯಾದೆ
ಅನಾದಿ ಕಾಲದ ಭವರೋಗ ಕಳೆಯಯ್ಯಾ
ನಾನೆಂದಿಗು ಮರೆಯೇ ನೀ ಮಾಡಿದುಪಕಾರ | ೩ |
===================


ಧನ್ವಂತ್ರಿ ಅವತಾರಗಳು


ಆದಿಯಲಿ ಅಬ್ಜನಾಗಿ ನೀನವತರಿಸಿದೆ

ಅಭಿಮಂಥನ ಕಾಲದಿ ಹಸ್ತದಲಿ
ಸುಧೆಯ ಬಿಂದಿಗೆ ಧರಿಸಿ; ಅಸುರರು ಮೇಲೆ
ಬಿದ್ದದನು ಕಿತ್ತುಕೊಂಡರು; ಬಿಟ್ಟೆ ನೀನು

ಕೆಟ್ಟ ತಾಮಸ ಜನರಿಗೆ ತೊಟ್ಟು ಕೊಡ

ಅಮೃತಯೋಗ ಸಿಗದೆಂಬುದರುಹಿ ನೀನು
ಕೆಟ್ಟವರಿವರೆಂಬುದ ಜಗಕೆಲ್ಲ ತೋರಿ
ದಿಟ್ಟತನ ಬಿಟ್ಟೇ; ಬಲು ಜಗಜೆಟ್ಟಿ ನೀನು;

ಎರಡನೆಯ ದ್ವಾಪರದಿ ಅವತಾರ ಮಾಳ್ದೆ

ಧರೆಯೊಳು ಸುಧಾಂಶು ವಂಶದಿ ಧನ್ವರಾಜ
ವರ ಕುಮಾರನೆನಿಸಿದೆ ಧನ್ವಂತ್ರಿ ನೀನು
ನರರಿಗಿತ್ತೆ ಆಯುರ್ವೇದ ವರ ಚಿಕಿತ್ಸೆ

ಆದಿಯನು ವ್ಯಾಧಿಯನು ಭವವೇದೆಯನು

ಛೇದಿಸುವ ಮೂಲ ಭೇಷಜನಾದಿಪುರುಷ
ವೇದವೇದ್ಯನೆ ಧನ್ವಂತ್ರಿ ಆದಿ ವೈದ್ಯ
ಬೇದಿಸೆಮ್ಮನು ಕಾಡುವ ವ್ಯಾಧಿಗಳನು

ಹುಟ್ಟು ಸಾವ್ಗಳ ಸರಪಳಿ ಕಟ್ಟಿ ಸೆಳೆಯೆ

ಕೆಟ್ಟ ಮರುಭೂಮಿಯಲಿ ಮತಿಗೆಟ್ಟು
ಕ್ಷುತೃಡಾರ್ತಿಗಳಿಗೆ ಸಿಕ್ಕಿ ಕ್ಷೋಭೆಗೊಂಡು
ಗುರು ಮರೆತು ಸಂಚರಿಪ ದೀನ ನರನು ನಾನು

ಕರುಣಿಗಳರಸ ಧನ್ವಂತ್ರಿ ನೆರಳು ತೋರೊ

ಧರೆಯನಳೆದ ನಿನ್ನಡಿಗಳ ನೆರಳು ತೋರೊ
ಸ್ವರ್ಧುನಿಯ ಪೆತ್ತ ಚರಣದ ನೆರಳು ತೋರೊ
ಗಿರಿಯ ಭಾರವ ಪೊತ್ತಡಿ ನೆರಳು ತೋರೊ
ಉರಗಶಿರವಲಾಡಿದ ಆದಿ ನೆರಳು ತೋರೊ
ಸಿರಿತೊಡೆಯ ಮೇಲ್ಮೆರೆವಡಿಯ ನೆರಳು ತೋರೊ
ಜ್ಞಾನಸಾಗರ ಮಾಧವಾ ನಿನ್ನ ಕರುಣೆ
ಸುರಿಸುವ ಚರಣ ಕಮಲದ ನೆರಳು ತೋರೊ

– ಶ್ರೀ ವಿದ್ಯಾಸಾಗರ ಮಾಧವತೀರ್ಥರು

ಶ್ರೀಮಾಧವತೀರ್ಥ ಮಠ, ತಂಬಿಹಳ್ಳಿ

=========================


Sri Vijaya daasa kruta Dhanvantari Suladi :


Sri DhanvaMtari SuLaadi


ರಾಗ – ಭೈರವಿ        ತಾಳ – ಧ್ರುವ


ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು

ಕಾಯಾ ನಿರ್ಮಲಿನಾ ಕಾರಣವಾಹದೋ
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದ
ನಾಯಿ ಮೊದಲಾದ ಕುತ್ಸಿತ ದೇಹ ನಿ-
ಕಾಯವಾ ತೆತ್ತು ದುಷ್ಕರ್ಮದಿಂದ
ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕಕರ್ತ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನ್ನು ಪಾಲಿಪಾ-
ಧ್ಯೇಯಾ ದೇವಾದಿಗಳಿಗೆ ಧರ್ಮಜ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ-
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ ವಿಜಯ ವಿಟ್ಠಲರೇಯಾ
ಪ್ರಿಯನು ಕಾಣೋ ನಮಗೆ ಅನಾದಿ ರೋಗ ಕಳೆವಾ || 1 ||

ತಾಳ – ಮಟ್ಟ


ಧನ್ವಂತ್ರಿ ಶ್ರೀಧನ್ವಂತ್ರಿ ಎಂದು

ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೋ ಘನ್ನತಿಯಲಿ ನೆನೆದ
ಮನ್ನೂಜ ಭುವನದೊಳು ಧನ್ಯನು ಧನ್ಯನೆನ್ನಿ
ಚೆನ್ನಮೂರುತಿ ಸುಪ್ರಸನ್ನ ವಿಜಯ ವಿಠ್ಠ-
ಲನ್ನಸತ್ಯವೆಂದು ಬಣ್ಣಿಸು ಬಹು ವಿಧದಿ || 2 ||

ತಾಳ – ತ್ರಿವಿಡಿ


ಶಶಿಕುಲೋದ್ಭವ ದೀರ್ಘತಮ ನಂದನ ದೇವಾ

ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆ ಪೂದೆ ತಾಪ ಓ-
ಡಿಸುವೌಷಧಿ ತುಲಸಿ ಜನಕ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ
ಬಿಸಜ ಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೊ
ದಶದಿಶದೊಳು ಮೆರೆವ ವಿಜಯವಿಠ್ಠಲ ಭಿಷ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ || 3 ||

ತಾಳ – ಆಟ


ಶರಣು ಶರಣು ಧನ್ವಂತರಿ ತಮೋಗುಣ ನಾಶಾ

ಶರಣು ಆರ್ತಜನ ಪರಿಪಾಲಕ ದೇವಾ
ತರುವೆ ಭವ ತಾಪ ತರುಣ ದಿತಿಸುತ
ಹರಣ ಮೋಹಕ ಲೀಲಾ ಪರಮ
ಪೂರ್ಣ ಬ್ರಹ್ಮಬ್ರಹ್ಮ ಉದ್ಧಾರಕ
ಉರುಪರಾಕ್ರಮ ಉರಗಶಾಯಿ
ವರಕಿರೀಟ ಮಹಾಮಣಿ ಕುಂಡಲಕರ್ಣ
ಮಿರುಗುವ ಹಸ್ತ ಕಂಕಣ ಹಾರಪದಕ ತಾಂ-
ಬರ ಕಾಂಚಿ ಪೀತಾಂಬರ ಚರಣಭೂಷಾ
ಸಿರಿವತ್ಸಲಾಂಛನ ವಿಜಯ ವಿಟ್ಠಲರೇಯಾ
ತರುಣಗಾತರ ಜ್ಞಾನ ಮುದ್ರಾಂಕಿತ ಹಸ್ತಾ || 4 ||
ತಾಳ – ಆದಿ

ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ

ಬೀಳುವಾಗಲಿ ನಿಂತು ಕುಳಿತಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ-
ಮ್ಮೇಳವಾಗಲಿ ಮೇಲು ಪುತ್ರಾದಿ ಒಡೆಯೊಡನೆ
ಖೇಳವಾಗಿ ಮನುಜ ಮರ್ಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು ಒಮ್ಮೆ
ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ
ವ್ಯಾಳಿ ವ್ಯಾಳಿಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯ ವಿಠ್ಠಲರೇಯಾ
ವಾಲಗ ಕೊಡುವನು ಮುಕ್ತರ ಸಂಗದಲ್ಲಿ || 5 ||

ಜತೆ

ಧಂ ಧನ್ವಂತರಿ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಠ್ಠಲವೊಲಿವಾ || 6 ||

+++++++++++++++++++++++++++++++++++++++++++




ಗೋಪಾಲದಾಸರ ಕೃತಿ – ಎನ್ನ ಭಿನ್ನಪ ಕೇಳು ಧನ್ವಂತ್ರಿ


(Enna binnapa kelu dhanvantri)

ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ |
ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ ||ಪ||
ಆರೋಗ್ಯ ಆಯುಶ್ಯ ಐಶ್ವರ್ಯವೆಂಬೋ ಈ ಮೂರುವಿಧ ವಸ್ತುಗಳು
ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು
ಘೋರ ವ್ಯಭಿಚಾರ ಪರನಿಂದೆ ಪರ ವಿತ್ತಾಪಹಾರ ಮಾಡಿದ ದೋಷದಿ
ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೇ ||೧||
ವಸುಮತಿಯ ಮೇಲಿನ್ನು ಅಸುರ ಜನರ ಬಹಳ ವಶವಲ್ಲ ಕಲಿಯ ಬಾಧೆ
ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಲು ನಾವಿಪ್ಪೆವು
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೇ ಪೊರೆಯೋ ಸ್ವಾಮಿ ||೨||
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ
ಹೇ ದೇವ ನಿನ್ನ ಕರಕಲಶ ಸುಧೆಗರೆದು ಸಾಧುಗಳ ಸಂತೈಸುವಿ
ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನಿವೀ
ಆದರಿಸಿ ಇವಗೆ ತವಪಾದ ಧ್ಯಾನವನಿತ್ತು ಸಾಧುಗಲೊಳಗಿತ್ತು ಮೋದಕೊಡು ಸರ್ವದಾ ||೩||
ಆನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ
ನಿನ್ನವರನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ
ಅನ್ನ ಆರೋಗ್ಯಕ್ಕೆ ಅಲ್ಪ ಜೀವಿಗಳಿಗೆ ಇನ್ನು ಆಲ್ಪರಿಯಬೇಕೆ
ನಿನ್ನ ಸಂಕಲ್ಪ ಭಕ್ತರ ಪೋಷಕನೆಂಬ ಘನ್ನ ಬಿರುದಿನ್ನು ಉಲುಹೊ ಸಲಹೊ ||೪||
ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದು
ನಿನ್ನ ನಾ ಪ್ರಾರ್ಥಿಸಿದ ಅನ್ಯರಿಗೆ ಅಲ್ಪರಿಯೆ ಎನ್ನ ಪಾಲಿಸುವ ದೊರೆಯೆ
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೆಕು ಕರುಣಿ

ಅನಂತ ಗುಣಪೂರ್ಣ ಗೋಪಾಲವಿಠಲ ಇನ್ನಿದನೆ ಪಾಲಿಸುವುದೋ ಪ್ರಭುವೇ ||೫||
******



ಶ್ರೀ ಧನ್ವಂತರೀ ಸ್ತುತಿ "
(ದಿನಾಂಕ : 04.12.18 ಭಗವಾನ್ ಶ್ರೀ ಧನ್ವಂತರೀ ಜಯಂತೀ)

ಶ್ರೀಮದ್ಭಾಗವತ

ಧನ್ವಂತರೀ ದೀರ್ಘತಮಸ ಆಯುರ್ವೇದ ಪ್ರವರ್ತಕಃ।
ಯಜ್ಞಭುಗ್ವಾಸುದೇವಾಂಶ: ಸ್ಮೃತಿಮಾತ್ರಾತ್ರಿ ನಾಶನಃ।।

ದೀರ್ಘ ತಮಸ್ ಎಂಬುವನಿಂದ " ಧನ್ವ " ನೆಂಬಾತ ಹುಟ್ಟಿದ. ಈ ಧನ್ವನ ಮಗನಾಗಿ ಆಯುರ್ವೇದ ಪ್ರವರ್ತಕನೂ; ಸರ್ವ ಯಜ್ಞ ಭೋಕ್ತನೂ; ವಾಸುದೇವಾಂಶನಾದವನೂ; ತನ್ನ ಸ್ಮಾರಣೆ ಮಾತ್ರದಿಂದಲೇ ರೋಗಾದಿ ಸಕಲ ದುಃಖ ನಾಶಕನಾದ "ಧನ್ವಂತರೀ " ದೇವನು ಅವತರಿಸಿದನು!

ಈ ವಿಷಯವು " ಹರಿವಂಶ " ದಲ್ಲಿ...

ಧನ್ವಸ್ತು ದೀರ್ಘತಮಸಃ ವಿದ್ವಾನ್ ಧನ್ವಂತರೀಸ್ತತಃ ।।

ಶ್ರೀ ದುರ್ವಾಸರ ಶಾಪದಿಂದ ಇಂದ್ರಾದಿ ದೇವತೆಗಳು ದೈತ್ಯರಿಂದ ಪರಾಜಿತರಾಗಿ ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಮೊರೆಹೊಕ್ಕರು.

ಶ್ರೀ ಚತುರ್ಮುಖ ಬ್ರಹ್ಮದೇವರು ದೇವತೆಗಳೊಂದಿಗೆ ಶ್ರೀ ಹರಿಯನ್ನು ಮೊರೆಹೊಕ್ಕು ಪ್ರಾರ್ಥಿಸಿದಾಗ..

" ಅಹಿ - ಮೂಷಕ " ನ್ಯಾಯವನ್ನು ಅನುಸರಿಸಿ ದೈತ್ಯರೊಂದಿಗೆ ಸಂಧಿ ಮಾಡಿಕೊಂಡು ಸಮುದ್ರ ಮಥನ ಮಾಡಲು ಶ್ರೀ ಹರಿ ಆದೇಶಿಸಿದನು.

ಶ್ರೀ ಹರಿಯ ಆದೇಶಾನುಸಾರ ಅಮೃತಕ್ಕಾಗಿ ಮಂದರ ಪರ್ವತವನ್ನು ಕಡಗೋಲನ್ನಾಗಿಯೂ; ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಮುದ್ರವನ್ನು ದೇವ - ದೈತ್ಯರು ಒಟ್ಟಾಗಿ ಶ್ರೀ ಹರಿಯೊಂದಿಗೆ ಮಥಿಸಿದಾಗ..

ಕಾಲಕೂಟ ವಿಷ
ಕಾಮಧೇನು
ಉಚೈಶ್ರವಸ್
ಐರಾವತ
ಪಾರಿಜಾತ
ಅಪ್ಸರೆಯರು
ಶ್ರೀ ಮಹಾಲಕ್ಷ್ಮೀದೇವಿಯರು

ಕ್ರಮವಾಗಿ ಪ್ರಾದುರ್ಭೂತರಾದರು. ಅಜಿತನಾಮಕ ಶ್ರೀ ಹರಿ ಲಕ್ಷ್ಮೀದೇವಿಯರನ್ನು ಪತ್ನಿಯನ್ನಾಗಿ ಸ್ವೀಕರಿಸಿದ. ಆ ನಂತರ ಕ್ಷೀರ ಸುಮುದ್ರದಿಂದ ಮದ್ಯದ ಅಭಿಮಾನಿ ವಾರುಣೀದೇವಿಯು ಬಂದಾಗ ಶ್ರೀ ಹರಿಯ ಅನುಮತಿಯಂತೆ ಅವಳನ್ನೂ ಅಸುರರು ಸ್ವೀಕರಿಸಿದ ನಂತರ, ಶ್ರೀ ಹರಿ ಧನ್ವಂತರೀ ರೂಪದಿಂದ ಅಮೃತ ಪೂರ್ಣವಾದ ಕಲಶವನ್ನು ಧರಿಸಿ ಪ್ರಾದುರ್ಭವಿಸಿದನು.

ಶ್ರೀಮದ್ಭಾಗವತ " ದಲ್ಲಿ...

ಅಮೃತಾ ಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಸ ವೈ ಭಗವತಃ ಸಾಕ್ಷಾತ್ ವಿಷ್ಣೋರಂಶಾಂಶ ಸಂಭವಃ ।।
ಧನ್ವಂತರಿತಿ ಖ್ಯಾತ ಆಯುರ್ವೇದ ದೃಗಿಜ್ಯಭಾಕ್ ।।

ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು....

ಧನ್ವಂತರೇಂಗರುಚಿ ಧನ್ವಂತರೇರಿತರುಧನ್ವಂತರೀಭವ ಸುಧಾ
ಭಾನ್ವಂತರಾವಸಥ ಮನ್ಮ೦ತರಾಧಿಕೃತತನ್ವಂತಕೌಷಧನಿಧೇ ।
ಧನ್ವಂತರಂಗಶುಗುದನ್ವಂತಮಾಜಿಷು ವಿತನ್ವನ್ ಮಮಾಬ್ಧಿ ತನಯಾ
ಸೂನ್ವಂತಕಾತ್ಮಹೃದತನ್ವ೦ತರಾವಯವತನ್ವಂತರಾರ್ತಿ ಜಲಧೌ ।।

ಅಂಗರುಚಿ ಧನ್ವಂತರೇ: = ಶರೀರ ಕಾಂತಿಯಿಂದ ಸೂರ್ಯನಂತಿರುವ
ಅರಿತರು ಧನ್ವನ್ = ಶತ್ರುಗಳೆಂಬ ವೃಕ್ಷಗಳಿಗೆ ಮರುಭೂಮಿಯಂತಿರುವ
ಸುಧಾ ಭಾನ್ವಂತರಾವಸುಥ = ಅಮೃತ ಕಿರಣನಾದ ಚಂದ್ರನಲ್ಲಿ ವಾಸಿಸುವ
ಮನ್ವಂತರಾಕೃತತನ್ವಂತರ = ಈ ವೈವಸ್ವತ ಮನ್ವಂತರದಲ್ಲಿ ಅಲ್ಲದೆ ಸ್ವಯಂಭುವಾದಿ ಮನ್ವಂತರಗಳಲ್ಲಿ ಸ್ವೀಕರಿಸಲ್ಪಟ್ಟ ಯಜ್ಞ - ಕಪಿಲ - ದತ್ತಾತ್ರೇಯಾದಿ ಅವತಾರಗಳುಳ್ಳ
ಔಷಧನಿಧೇ = ಔಷಧಗಳಿಗೆ ಆಶ್ರಯನೇ
ಆಜಿಸು = ಯುದ್ಧಗಳಲ್ಲಿ
ಧನ್ವಂತರಂಗಶುಗುದನ್ವಂತ೦ = ದಾನವರನ್ನು ಸಂಹರಿಸುವ ಮೂಲಕ ಅವರ ತಾಯಿಯಾದ ದನುವಿಗೆ ದುಃಖವೆಂಬ ಸಮುದ್ರವನ್ನು
ವಿತನ್ವನ್ = ಉಂಟು ಮಾಡುತ್ತಿರುವ
ಅಬ್ಧಿ ತನಯಾ = ಸಮುದ್ರರಾಜನ ಮಗಳಾದ ಶ್ರೀ ಮಹಾಲಕ್ಷ್ಮೀದೇವಿ
ಸೂನು = ಮಗನಾದ ಮನ್ಮಥನನ್ನು
ಅಂತಕ = ನಾಶಗೊಳಿಸಿದ ಶ್ರೀ ಮಹಾರುದ್ರದೇವರ
ಆತ್ಮ = ಮನಸ್ಸನ್ನು
ಹೃತ್ = ಅಪಹರಿಸಿದ
ಅತನು = ಪುಷ್ಟವಾದ
ಅಂತರಾವಯವ = ಸ್ತನ, ಜಘನ ಮುಂತಾದ ಅವಯವಗಳುಳ್ಳ
ತನ್ವಂತರ = " ಶ್ರೀ ನಾರಾಯಣೀ " ಸ್ತ್ರೀ ರೂಪವುಳ್ಳ
ಹೇ ಧನ್ವಂತರೇ = ಹೇ ಧನ್ವಂತರೀ ರೂಪಿಯಾದ ಶ್ರೀ ಹರೇ
ಆರ್ತಿ ಜಲಧೌ = ಸಂಸಾರಾಖ್ಯ ದುಃಖ ಸಮುದ್ರದಲ್ಲಿ ಬಿದ್ದಿರುವ ನನಗೆ
ತರೀ ಭವ = ಅದನ್ನು ದಾಟಲು ದೋಣಿಯಾಗು!!
" ಧನ್ವಂತರೀ "
" ಧನ್ವ " ಯೆಂದರೆ " ಮರುಭೂಮಿ ".
ಈ ಸಂಸಾರವೇ ಮರುಭೂಮಿಯಂತಿರುವುದು. ಅದನ್ನು ಪರಿಹರಿಸುವನೇ " ಧನ್ವಂತರ ".
ಧನ್ವ = ಪಾಪಗಳೂ, ತನ್ನಿಮಿತ್ತಿಕ ರೋಗಗಳೂ. ಇವುಗಳನ್ನು..
ಅಂತರಿ = ನಾಶ ಮಾಡುವನು!!

ಶ್ರೀ ವೇದವ್ಯಾಸ ಪ್ರಣೀತ ಶ್ರೀಮಧ್ಭಾಗವತ ದ್ವಿತೀಯ ಸ್ಕಂಧದಲ್ಲಿನ ಸಪ್ತಮೋಧ್ಯಾಯದ  ಶ್ಲೋಕ - 21 ...

ಧನ್ವಂತರಿಶ್ಚ ಭಗವಾನ್ ಸ್ವಯಮಾಸ ದೇವೋ
ನಾಮ್ನಾ ನೃಣಾ೦ ಪುರುರುಜಾ೦ ರುಜ ಆಶುಯಂತಿ ।
ಯಜ್ಞೇ ಚ ಭಾಗಮಮೃತಾಯುರವಾಪ ಚಾದ್ಧಾ
ಆಯುಶ್ಚ ವೇದ ಮನುಶಾಸ್ತ್ಯಾವತೀರ್ಯ ಲೋಕೇ ।।

ಶ್ರೀಮದಾಚಾರ್ಯರು " ತಂತ್ರಸಾರ ಸಂಗ್ರಹ " ದಲ್ಲಿ

ಅಜ್ಞಾನ ದುಃಖ ಭಯ ರೋಗ ಮಹಾ ವಿಷಾನಿ ।
ಯೋಗೋsಯಮಾಶು ವಿನಿಹಂತಿ ಸುಖಂ ಚ ದದ್ಯಾತ್ ।।
ಉನ್ಮಾದ ವಿಭ್ರಮ ಹರಃ ಪರಿತಶ್ಚ ಸಾಂದ್ರಮಾನಂದಮೇವ
ಪದಮಾಪಯತಿ ಸ್ಮ ನಿತ್ಯಮ್ ।।

" ಧನ್ವಂತರೀ " ಮಂತ್ರವನ್ನು ಜಪಿಸುವವರಿಗೆ

ಅಜ್ಞಾನ - ದುಃಖ - ಹೆದರಿಕೆ - ರೋಗಗಳೂ - ಮಾರಕವಾದ ವಿಷಗಳು ಇವುಗಳನ್ನೆಲ್ಲಾ ಪರಿಹರಿಸಿ ಸುಖವನ್ನುಂಟು ಮಾಡುವುದು.

ಹುಚ್ಚು - ಮಾನಸಿಕ ಗೊಂದಲಗಳನ್ನೂ ಪರಿಹರಿಸಿ ಪರದಲ್ಲಿ ನಾಶವೇ ಇಲ್ಲದ ಸುಖದ ತೌರೂರಾದ ವೈಕುಂಠಾದಿ ಲೋಕಗಳನ್ನು ಕರುಣಿಸುವುದು!!

" ಧಂ ಧನ್ವಂತರಯೇ ನಮಃ " ಎಂದು ಜಪಿಸಲು ಸಿಗುವ ಫಲ...

ಆಯುವೃದ್ಧಿಯಾಗೋದು = ರೋಗಾದಿ ಉಪದ್ರವಗಳನ್ನು ಪರಿಹರಿಸಿ ಭಕ್ತನಿಗೆ ಪೂರ್ಣವಾದ ಆಯುಸ್ಸು ದೊರಕುವುದು.

ಶ್ರೇಯಸ್ಸು ಬರುವುದು = ಈ ಮಂತ್ರವು ಸಂಸಾರದಲ್ಲಿ ಭಕ್ತ ಜನರನ್ನು ಪೀಡಿಸುವ ರೋಗಗಳಿಂದ ವಿಮುಕ್ತಿಗೊಳಿಸುವುದಲ್ಲದೆ ಕೊನೆಗೆ ಈ ಸಂಸಾರದಿಂದಲೇ ಬಿಡುಗಡೆಗೊಳಿಸಬಲ್ಲದು.

ಕಾಯ ನಿರ್ಮಲಿನ = ಪಾವನವಾದ ಪಾಪವಿಲ್ಲದ ದೇಹ

ಮಾಯಾ ಹಿಂದಾಗುವುದು = ಮಾಟ, ಕೃತ್ರಿಮ, ದೆವ್ವ ಮೊದಲಾದ ಐಂದ್ರಜಾಲಿಕ ವಿದ್ಯೆಯಿಂದ ಬರುವ ಆಪತ್ತುಗಳು ಪರಿಹಾರವಾಗುವವು.

" ಶ್ರೀ ಧನ್ವಂತರೀ ಪ್ರಾದುರ್ಭಾವ "

ಅಮೃತಕ್ಕಾಗಿ ವೈವಸ್ವತ ಮನ್ವಂತರದಲ್ಲಿ " ಅನಂತ " ನಾಮಕನಾಗಿ ಗರುಡ ಮಂದರವನ್ನು ಹೊತ್ತ ರೈವತ ಮನ್ವಂತರದಲ್ಲಿ " ಸುಪರ್ಣ " ನಾಮಕನಾಗಿ ಅವನೇ ಹೊತ್ತ! ಈ ವಿಷಯವು " ಬ್ರಹ್ಮ ಪುರಾಣ " ದಲ್ಲಿ ಉಲ್ಲೇಖಿತವಾಗಿದೆ!!

ಚಂದ್ರ ವಂಶದಲ್ಲಿ ಕಾಶೀರಾಜನ ಮಗನಾಗಿ ಇನ್ನೊಮ್ಮೆ " ಧನ್ವಂತರೀ " ಅವತಾರ ೬ನೇ ಚಾಕ್ಷುಷ ಮನ್ವಂತರದಲ್ಲಿ ಹಾಗೂ ೭ನೇ ವೈವಸ್ವತ ಮನ್ವಂತರದಲ್ಲಿ ಹೀಗೆ ಎರಡಾವರ್ತಿ ಶ್ರೀ ಹರಿಯು " ಧನ್ವಂತರೀ " ರೂಪದಿಂದ ಅವತರಿಸಿದ್ದಾನೆ!!

ಷಷ್ಟೇ ಚ ಸಪ್ತಮೇ ಚಾಯಂ ದ್ವಿರಾವಿರ್ಭಾವಮಾಗತಃ ।
ಷಷ್ಠ೦ತರೇsಬ್ಧಿಮಥನಾದ್ಧೃತಾಮೃತ ಕಮಂಡಲು: ।।

ಉದ್ಗತೋ ದ್ವಿಭುಜ: ಶ್ಯಾಮ ಆಯುರ್ವೇದ ಪ್ರವರ್ತಕಃ ।
ಸಪ್ತಮೇ ಚ ತಥಾ ರೂಪ: ಕಾಶೀರಾಜ ಸುತೋsಭವತ್ ।।

" ಶ್ರೀ ಧನ್ವಂತರೀ " ರೂಪ ವರ್ಣನೆ "

ಶ್ರೀಮಧ್ಭಾಗವತ " ದಲ್ಲಿ

ಅಥೋದಧೇರ್ಮಥ್ಯಮಾನಾತ್ ಕಾಶ್ಯಪೈರಮೃತಾರ್ಥಿಭಿ: ।
ಉದತಿಷ್ಠನ್ ಮಹಾರಾಜ ಪುರುಷಃ ಪರಮಾದ್ಭುತ: ।।
ದೀರ್ಘಪೀವರ ದೋರ್ದಂಡ: ಕಂಬುಗ್ರೀವೋsರುರೇಕ್ಷಣಃ ।
ಶ್ಯಾಮಲಸ್ತರುಣಃ ಸ್ರಗ್ವೀ ಸರ್ವಾಭರಣ ಭೂಷಿತಃ ।।
ಪೀತವಾಸಾ ಮಹೋರಸ್ಕ: ಸುಮೃಷ್ಟಮಣಿ ಕುಂಡಲ: ।
ನೀಲಕುಂಚಿತ ಕೇಶಾಂತಃ ಸುಭಗ: ಸಿಂಹ ವಿಕ್ರಮಃ ।।
ಅಮೃತಾಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಅಮೃತಾ ಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಸ ವೈ ಭಗವತಃ ಸಾಕ್ಷಾತ್ ವಿಷ್ಣೋರಂಶಾಂಶ ಸಂಭವಃ ।।
ಧನ್ವಂತರಿತಿ ಖ್ಯಾತ ಆಯುರ್ವೇದ ದೃಗಿಜ್ಯಭಾಕ್ ।
ತಮಾಲೊಕ್ಯಾಸುರಾ: ಸರ್ವೇ ಕಲಶಂ ಚಾಮೃತಾಭೃತಮ್ ।।
ಲಿಪ್ಯಂತ: ಸರ್ವವಸ್ತೂನಿ ಕಲಶಂ ತರಸಾsಹರನ್ ।
ನೀಯಮಾನೇsಸುರೈಸ್ತಸ್ಮಿನ್ ಕಲಶೇsಮೃತಭಾಜನೇ ।।

ಹೇ ಪರೀಕ್ಷಿತ ಮಹಾರಾಜನೇ ಕೇಳು...

ಅಮೃತಾರ್ಥಿಗಳಾದ ದೇವ ದಾನವರು ಶ್ರೀ ಮಹಾಲಕ್ಷ್ಮೀ ಪ್ರಾದುರ್ಭಾವಾನಂತರ ಪುನಃ ಕ್ಷೀರ ಸಮುದ್ರ ಮಥನ ಮಾಡಲು ಆ ಸಮುದ್ರ ಮಧ್ಯದಿಂದ ಓರ್ವ ಮಹಾ ಪುರುಷನು ಅದ್ಭುತಾಕಾರನಾಗಿ ಆವಿರ್ಭವಿಸಿದನು.

ಆತನು ದೀರ್ಘವೂ, ದುಂಡಾದ ಪುಷ್ಟವಾದ ತೋಳುಗಳುಳ್ಳವನಾಗಿದ್ದೂ, ಆ ತೋಳುಗಳು ಆಜಾನುಲಂಬಿಯಾಗಿದ್ದವು.

ಶಂಖದಂತೆ ಕಂಠ, ಕಡೆ ಕಣ್ಣುಗಳು ಕೆಂಪಾಗಿ, ಮೈಬಣ್ಣ ನೀರುಂಡ ಮೇಘದಂತಿತ್ತು.

ಅವಯವಗಳಲ್ಲಿ ಆಭರಣಗಳು ಮೆರೆಯುತ್ತಿರಲು, ಕೊರಳಲ್ಲಿ ಹೂವಿನ ಮಾಲೆ ಜೋತಾಡುತ್ತಿತ್ತು.

ವಿಶಾಲವಾದ ಎದೆಯುಳ್ಳ ಆತ ಪೀತಾಂಬರ ಧರಿಸಿ, ಕಿವಿಯಲ್ಲಿಟ್ಟ ಕರ್ಣಾಭರಣವು ಪ್ರಕಾಶಮಾನವಾಗಿತ್ತು.

ಕಪ್ಪನೆಯ ಗುಂಗುರು ತಲೆಗೂದಲುಗಳು ಹಾರಾಡುತ್ತಿದ್ದವು. ಸುಂದರನಾದ ಆತ ಸಿಂಹ ಪರಾಕ್ರಮಶಾಲಿಯಾದ ಗಂಭೀರವಾದ ನಡುಗೆಯುಳ್ಳವನಾಗಿದ್ದ!!

ಕಡಗಗಳಿಂದ ಶೋಭಿತವಾದ ತನ್ನ ಕೈಯಲ್ಲಿ ಅಮೃತ ಕಲಶವನ್ನು ಹಿಡಿದಿದ್ದನು.

ಈ ಪುರುಷನೇ ಸಾಕ್ಷಾತ್ ಶ್ರೀ ಹರಿಯ ಸ್ವರೂಪಾಂಶನಾದ " ಶ್ರೀ ಧನ್ವಂತರೀ " ಯು.

ಈ ಶ್ರೀ ಧನ್ವಂತರೀಯೇ " ಆಯುರ್ವೇದ " ವೆಂಬ ವೈದ್ಯ ಶಾಸ್ತ್ರದ ಮುಖ್ಯದ್ರಷ್ಟ್ರಾರನು!!

ಶ್ರೀ ಗೋಪಾಲದಾಸರು

ಅವರೋಗವೊ ಯೆನಗೆ ದೇವ ಧನ್ವಂತ್ರೀ ।। ಪಲ್ಲವಿ ।।

ಸಾವಧಾನದಿ ಕೈಪಿಡಿದು ನೀ ನೋಡಯ್ಯಾ ।। ಆ. ಪ ।।

ಹರಿ ಮೂರ್ತಿಗಳು ಕಾಣಿಸವು ಯೆನ್ನ ಕಂಗಳಿಗೆ ।
ಹರಿ ಕೀರ್ತನೆಯು ಕೇಳಿಸದೆನ್ನ ಕಿವಿಗೆ ।
ಹರಿ ಮಂತ್ರ ಸ್ತೋತ್ರ ಬಾರದು ಯೆನ್ನ ನಾಲಿಗೆಗೆ ।
ಹರಿ ಪ್ರಸಾದವು ಯೆನಗೆ ಸವಿಯಾಗದೈಯ್ಯಾ ।। ಚರಣ ।।

ಹರಿ ಪಾದ ಸೇವೆಗೆನ್ನ ಹಸ್ತಗಳು ಚಲಿಸವು ।
ಹರಿ ಗುರುಗಳಂಘ್ರಿಗೆ ಶಿರಬಾಗದೂ ।
ಹರಿಯ ನಿರ್ಮಾಲ್ಲ್ಯವಾಘ್ರಾಣಿಸದು ನಾಸಿಕವು ।
ಹರಿ ಯಾತ್ರೆಗಳಿಗೆನ್ನ ಕಾಲೇಳದಯ್ಯಾ ।। ಚರಣ ।।

ಅನಾಥ ಬಂಧು ಗೋಪಾಲವಿಠ್ಠಲರೇಯ ।
ಯನ್ನ ಭಾಗದ ವೈದ್ಯ ನೀನೇಯಾದೀ ।
ಅನಾದಿ ಕಾಲದ ಭವರೋಗ ಕಳೆಯಯ್ಯಾ ।
ನಾನೆಂದಿಗೂ ಮರೆಯೆ ನೀ ಮಾಡಿದುಪಕಾರ ।। ಚರಣ ।।

ಶ್ರೀ ವಿಜಯರಾಯರು

ಧಂ ಧನ್ವಂತರೀ ಯೆಂದು ಪ್ರಣವ ಪೂರ್ವಕದಿಂದ ।
ವಂದಿಸಿ ನೆನೆಯಲು ವಿಜಯವಿಠ್ಠಲ ವೊಲಿವ ।।

***

ಧನ್ವಂತರಿ ಜಯಂತಿ ವಿಶೇಷ ಸಂಚಿಕೆ


 ರೋಗಪರಿಹಾರಕ್ಕಾಗಿ ಸಂಬಂಧಪಡುವ ಎಲ್ಲ

ಭಗವದ್ರೂಪಗಳಲ್ಲಿ  ಸಲ್ಲಿಸಲಾಗುವ  ಪ್ರಾರ್ಥನೆ

ರೋಗಪರಿಹಾರಕ್ಕಾಗಿ ಭಗವಂತನಲ್ಲಿ ಸಲ್ಲಿsಸಲು ಅನೇಕ ಪ್ರಾರ್ಥನೆಗಳು ಮಂತ್ರಗಳು 

ವಿನಿಯೋಗಿಸಲ್ಪಡ ಲಾಗುತ್ತಿದದ್ದು  ಅವುಗಳಲ್ಲಿ ರೋಗ ಪರಿಹಾರಕ್ಕೆ  ಸಂಬಂಧಿಸುವ ಎಲ್ಲ ಭಗವದ್ರೂಪಗಳನ್ನು ಉಲ್ಲೇಖಿಸುವ ಪ್ರಯುಕ್ತ ವೈಶಿಷ್ಟ್ಯಪೂರ್ಣವಾದಪ್ರಾರ್ಥನೆ -

ಅಚ್ಯುತಾನಂತಗೋವಿಂದಸ್ಮೃತಿಮಾತ್ರಾರ್ತಿನಾಶನ 

ರೋಗಾನ್ಮೇ  ನಾಶಯಾಶೇಷಾನ್  ಆಶು ಧನ್ವಂತರೇ ಹರೇ 

ಅಚ್ಯುತ ,ಅನಂತ ,ಗೋವಿಂದ ,ಸ್ಮೃತಿಮಾತ್ರಾರ್ತಿನಾಶ,

ಹರೇ ಧನ್ವಂತರೇ -
ಎಂಬ  ಆರುಸಂಭೊಧನೆಗಳನ್ನೂಳಗೊಂಡ  ಈ ಶ್ಲೋಕದಲ್ಲಿ ಎಲ್ಲ ರೋಗಗಳನ್ನು  ಆದಷ್ಟು ಬೇಗ ಪರಿಹರಿಸು -ಅಶೇಷಾನ್ ರೋಗಾನ್ ಆಶು  ನಾಶಯ - ಎಂದು ಪ್ರಾರ್ಥಿಸಲಾಗಿದೆ .
              
ವೇದವ್ಯಾಸದೇವರು ಘೋಷಿಸಿದ ಔಷಧ

ಅಚ್ಯುತಾನoತ  ಗೋವಿಂದನಮೋಚ್ಚಾರಣಭೀಷಿತಾಃ

(ಭೇಷಜಾತ್) ನಶ್ಯಂತಿ ಸಕಲಾಃ ರೋಗಾಃ ಸತ್ಯಂ ಸತ್ಯಂ ವದಾಮ್ಯಹಮ್

ಭಗವಂತನು ತನ್ನ ಅಚ್ಯುತ ಅನಂತ ಹಾಗೂ ಗೋವಿಂದ ಎಂಬ ರೂಪಗಳಿಂದ ವಾತ ಪಿತ್ತ ಕಫಗಳೆಂಬ ತ್ರಿಧಾತುಗಳನ್ನು ನಿಯoತ್ರಿಸುತ್ತಿರುವನು ಆದ್ದರಿಂದ ಈ ಧಾತುಗಳನ್ನು  ನಿಯಂತ್ರಿಸುತ್ತಿರುವನು ಆದ್ದರಿಂದ ಈ ತ್ರಿಧಾತುಗಳ ವೈಶಮ್ಯದಿಂದ ಉಂಟಾಗುವ ಎಲ್ಲ ರೋಗಗಳೂ ಆ ಮೂರು ಭಗವದ್ರೂಪಗಳ ನಾಮಗಳ ಭಕ್ತಿಪೂರ್ವಕ ಉಚ್ಚಾರಣೆ ಎಂಬ ಔಷಧದಿoದ ಪರಿಹಾರ ಹೊಂದುವುವು 

ಶ್ರೀವೇದವ್ಯಾಸದೇವರು ಇದು ಸತ್ಯ  ಇದು ಸತ್ಯ -ಎಂದು ಶಪಥಪೂರ್ವಕವಾಗಿ ಉದ್ಘೋಷಿಸಿರುವರು 
               ಕೃಷ್ಣಾಮೃತಮಹಾರ್ಣವ

 ರಕ್ತಸಂಭಂಧಿ ರೋಗಗಳ ಪರಿಹಾರಕ್ಕೆ ಲೋಹಿತಾಕ್ಷನ ಉಪಾಸನೆ


ಲೋಹಿತಾಖ್ಯೋ  ರಕ್ತವರ್ಣೋ ಲೋಹಿತಸ್ಥೂ  ಜನಾರ್ಧನಃ ||

ಎಂದು ಐತರೇಯಭಾಷ್ಯದಲ್ಲಿ  ತಿಳಿಸಿರುವಂತೆ ಭಗವಂತನು ರಕ್ತದಲ್ಲಿ ರಕ್ತದ ಬಣ್ಣವುಳ್ಳನಾಗಿ ಲೋಹಿತನಾಮಕನಾಗಿ ಇರುವವನು 
ಇಂತಹ ಭಗವದ್ರೂಪವನ್ನು  ರಕ್ತದಲ್ಲಿ ವ್ಯಾಪಿಸಿರುವವನು ಎಂಬ ಅರ್ಥದ ಅನುಸಂಧಾನದೊಂದಿಗೆ ಲೋಹಿತಾಕ್ಷ ಎಂಬ ನಾಮಾರೂಢನಾಗಿ ಉಪಾಸನೆ ನಡೆಸಿದಲ್ಲಿ ರಕ್ತ ಕ್ಕೆ ಸಂಭಂದಿಸುವ ರಕ್ತದ ಒತ್ತಡ ಮುಂತಾದ ರೋಗಗಳಿಂದ ಪಾರಾಗಬಹುದು .

ಧನ್ವಂತರಿ ಮಂತ್ರ ಜಪದಲ್ಲಿ ಬರುವ  ಧಂ ಬೀಜಾಕ್ಷರದ ಅರ್ಥ ಚಿಂತನೆ



ಮಂತ್ರಗಳ ಪ್ರಾರಂಭದಲ್ಲಿ ಪ್ರಾಯೋಗಿಸಲ್ಪಡುವ ಬೀಜಾಕ್ಷರಗಳು ಬೀಜ ಎಂಬ ತಮ್ಮ ಹೆಸರಿಗೆ ಅನುಗುಣವಾಗಿ (ವ್ಯಂಜಯತೀತಿ ಬೀಜಮ್ )ಮುಂದಿನ ಸಮಗ್ರ ಮಂತ್ರದ ವ್ಯಂಜಕಗಳು  ಇರುವುವು ಧನ್ವಂತರಿ ಮಂತ್ರದ ಪ್ರಾರಂಭದಲ್ಲಿ ಪಠಿಸಲಾಗುವ ಧಂ ಎಂಬ ಬೀಜಾಕ್ಷರ ಧನ್ವಂತರಿ ಎಂಬ ಮುಂದಿನ ನಾಮದ ಅರ್ಥವನ್ನು ಸೂಚಿಸುವುದು ಬಿಂದುರಪ್ಯವಧಾರಣೆ -ಎಂಬ ವೈದಿಕಸೂತ್ರದ ಪ್ರಕಾರ ಧಂ-ಎಂಬಲ್ಲಿ ಇರುವ ಅನುಸ್ವಾರ ರೂಪದ ಬಿಂದು ಧಕಾರ ದಿಂದ ಸೂಚಿತವಾದ ಪಾಪಪರಿಹಾರತ್ವರೂಪವಾದ ಅರ್ಥಕ್ಕೆ ಅವಧಾರಣೆಯನ್ನು ನಿರ್ಧಾರವನ್ನು ಹಚ್ಚಿ ಪಾಪಪರಿಹಾರವನ್ನು ಮಾಡಿಯೇ ಮಾಡುವನು ಎಂಬ ಅರ್ಥಹೊರಡಬಲ್ಲದು



"ಈದಿನ 04.12.18 ಶ್ರೀ ಧನ್ವಂತ್ರೀ ಜಯಂತೀ"

"ಭೃಗು ಮಹರ್ಷಿಗಳ ಅಂಶ ಸಂಭೂತರಾದ ವಿಜಯರಾಯರ ಕಣ್ಣಲ್ಲಿ ಶ್ರೀ ಧನ್ವಂತ್ರೀ"

ತಾಳ : ಧ್ರುವ
ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು । ಕಾಯ ನಿರ್ಮಲಿನ ಕಾರಣವಾಹುದು । ಮಾಯ ಹಿಂದಾಗುವುದು ನಾನಾ ರೋಗದ ಬೀಜ । ಬೇಯಿಸಿ ಕಳೆವದು ವೇಗದಿಂದಾ । ನಾಯಿ ಮೊದಲಾದ ಕುತ್ಸಿತ ದೇಹವ ನಿ । ಕಾಯವ ತೆತ್ತು ದುಷ್ಕರ್ಮದಿಂದ । ಕ್ರೀಯಾಮಾಣ ಸಂಚಿತ ಭರಿತವಾಗಿದ್ದ ದುಃಖ । ಹೇಯ ಸಾಗರದೊಳು ಬಿದ್ದು ಬಳಲೀ । ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ । ಬಾಯಲಿ ವೈದ್ಯಮೂರ್ತಿ ಶ್ರೀ ಧನ್ವಂತ್ರಿ । ರಾಯ ರಾಜೌಷಧಿ ನಿಯಾಮಕ ಕರ್ತ । ಶ್ರೀಯರಸನೆಂದು ತುತಿಸಲಾಗಿ । ತಾಯಿವೊದಗಿ ಬಂದು ಬಾಲನ್ನ ಸಾಕಿದಂತೆ । ನೋಯಗೊಡದೆ ನಮ್ಮನ್ನು ಪಾಲಿಪ । ಧ್ಯೇಯ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ । ಶ್ರೇಯಸ್ಸು ಕೊಡುವನು ಭಜಕರಿಗೆ । ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ । ಸ । ನ್ಯಾಯವಂತನಾಗಿ ಚೇಷ್ಟೆ ಮಾಳ್ಪ । ವಾಯುವಂದಿತ ನಿತ್ಯ ವಿಜಯವಿಠ್ಠಲರೇಯ । ಪ್ರೀಯನು ಕಾಣೋ ನಮಗೆ ಅನಾದಿ ರೋಗ ಕಳೆವ ।।
" ವಿವರಣೆ "
" ಆಯುವೃದ್ಧಿಯಾಗೋದು "
ರೋಗಾದಿ ಉಪದ್ರವಗಳಿಂದ ಅಪಮೃತ್ಯು ಪ್ರಾಪ್ತವಾಗಿದ್ದರೆ ಅದು ಪರಿಹಾರವಾಗಿ ಆ ಭಕ್ತನಿಗೆ ಪೂರ್ಣವಾದ ಆಯುಸ್ಸು ದೊರಕುವುದು.
ಆಯು ವೃದ್ಧಿಗಾಗಿ ಹಸುವಿನ ಹಾಲು ತುಪ್ಪಗಳಿಂದ ನೆನೆದ ಗರಿಕೆಯ ನಾಕು ನಾಕು ಕುಡಿಗಳಿಂದ " ಧನ್ವಂತರಿ ಮಂತ್ರ " ದಿಂದ ದಿನವೂ ಅಥವಾ ಜನ್ಮ ನಕ್ಷತ್ರ ದಿನದಂದು ಹೋಮಿಸಬೇಕೆಂಬ ವಿಧಿಯೂ ಇದೆ.
" ಶ್ರೇಯಸ್ಸು ಬರುವುದು "
ಶ್ರೇಯಸ್ಸು = ಮೋಕ್ಷ
ಈ ಮಂತ್ರವು ಸಂಸಾರದಲ್ಲಿ ಭಕ್ತ ಜನರನ್ನು ಪೀಡಿಸುವ ರೋಗಗಳಿಂದ ಮುಕ್ತಿಗೊಳಿಸುವುದಲ್ಲದೆ ಕೊನೆಗೆ " ಸಂಸಾರದಿಂದಲೇ ಬಿಡುಗಡೆ( ಗೊಳಿಸುವದು. ( ಮೋಕ್ಷವನ್ನು ಕೊಡುವುದು ).
" ಕಾಯ ನಿರ್ಮಲಿನ ಕಾರಣವಾಹುದು "
ಕಾಯ ನಿರ್ಮಲಿನ = ಪಾವನವಾದ ಪಾಪ ರಹಿತ ದೇಹ
" ಮಾಯ ಹಿಂದಾಗುವುದು "
ಮಾಟ, ಮಂತ್ರ, ದೆವ್ವ ಮೊದಲಾದ ಐಂದ್ರಜಾಲಿಕ ವಿದ್ಯೆಯಿಂದ ಬಂದ ಆಪತ್ತುಗಳು ಇಲ್ಲದಂತಾಗುವವು.
" ನಾನಾ ರೋಗದ ಬೀಜ । ಬೇಯಿಸಿ ಕಳೆವದು ವೇಗದಿಂದಾ "
ಶ್ರೀ ಧನ್ವಂತರಿ ತನ್ನ ನಾಮೋಚ್ಛಾರಣ ಮಾತ್ರದಿಂದಲೇ ರೋಗಗಳಿಗೆ ಬೀಜ ಸ್ಥಾನಾಪನ್ನಗಳಾದ ಎಲ್ಲಾ ಪಾಪಗಳನ್ನು ಫಲಪ್ರದವಾಗದಂತೆ ಅತಿ ಶೀಘ್ರವಾಗಿಯೇ ಅವುಗಳನ್ನು ನಿರ್ವೀರ್ಯವನ್ನಾಗಿ ಮಾಡುತ್ತಾನೆ.
ನಾಯಿ ಮೊದಲಾದ ಕುತ್ಸಿತ ದೇಹವ ನಿ ।
ಕಾಯವ ತೆತ್ತು ದುಷ್ಕರ್ಮದಿಂದ ।
ಕ್ರೀಯಾಮಾಣ ಸಂಚಿತ ಭರಿತವಾಗಿದ್ದ ದುಃಖ ।
ಹೇಯ ಸಾಗರದೊಳು ಬಿದ್ದು ಬಳಲೀ ।
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ ।
ಬಾಯಲಿ ವೈದ್ಯಮೂರ್ತಿ ಶ್ರೀ ಧನ್ವಂತ್ರಿ ।
ರಾಯ ರಾಜೌಷಧಿ ನಿಯಾಮಕ ಕರ್ತ ।
ಶ್ರೀಯರಸನೆಂದು ತುತಿಸಲಾಗಿ ।
ತಾಯಿವೊದಗಿ ಬಂದು ಬಾಲನ್ನ ಸಾಕಿದಂತೆ ।
ನೋಯಗೊಡದೆ ನಮ್ಮನ್ನು ಪಾಲಿಪ "
ಕುತ್ಸಿತ = ನಿಂದನೆಗೆ ಅರ್ಹವಾದ
ದುಷ್ಕರ್ಮ = ಪಾಪಗಳು
ಕ್ರೀಯಾಮಾಣ = ಮಾಡಲ್ಪಟ್ಟ
ಸಂಚಿತ ಭರಿತವಾಗಿದ್ದ = ಜನ್ಮಾಂತರಕ್ಕೆ ಕಾರಣವಾದ ಹಿಂದಿನ ಜನ್ಮಗಳಲ್ಲಿ ಮಾಡಿದ ಕರ್ಮಗಳ ಶೇಖರಣೆ
ರಾಜೌಷಧಿ ನಿಯಾಮಕ = ಅನೇಕ ಲತೆಗಳು ಔಷಧ ರೂಪದಿಂದ ಇರುವವುಗಳಿಗೆ ನಿಯಾಮಕನಾದ
ಕರ್ತ = ಜಗತ್ಕರ್ತ
ಹೀನ ಕರ್ಮಗಳಿಂದ ನಾಯಿಯೇ ಮೊದಲಾದ ನಿಂದಾರ್ಹ ದೇಹಗಳ ಸಮೂಹವನ್ನು ಧರಿಸಿ ದೂಷಕರ್ಮಾನುಷ್ಠಾನ ಮಾಡಿದ್ದರಿಂದ ಕೂಡಿ ಹಾಕಲ್ಪಟ್ಟ ಪಾಪಗಳ ಫಲವಾಗಿ ತುಚ್ಚವಾದ ಪಾರುಗಾಣಲಾಗದ ಸಂಸಾರವೆಂಬ ದುಃಖ ಸಾಗರದಲ್ಲಿ ಬಿದ್ದು ತಾಪತ್ರಯಗಳಿಂದ ಬೆಂದು ನೊಂದು ಬಳಲಿ ಬೆಂಡಾಗಿ ಸುಖದಿಂದ ಇರುವುದಕ್ಕೆ ನಿಗದಿತವಾದ ಒಂದು ಸ್ಥಾನ ಕಾಣದೆ ದುಃಖದಿಂದ ಮುಕ್ತನಾಗಲು ದಾರಿ ಕಾಣದೆ ಇರುವ ಸಮಯದಲ್ಲೇ ಶ್ರೀ ಹರಿ ತಾನಾಗಿ ಕರುಣೆ ತೋರಿ ಅನುಗ್ರಹಿಸಿದ ಸಮಯದಲ್ಲಿ ಸಾಧಕನಾದವನು ಒಮ್ಮೆ ತನ್ನ ಬಾಯಲ್ಲಿ ...
ವೈದ್ಯಮೂರ್ತಿ!
ಶ್ರೀ ಧನ್ವಂತರಿರಾಯ!
ರಾಜೌಷಧಿ ನಿಯಾಮಕ ।
ಕರ್ತ ।
ಶ್ರೀಯರಸ!
ಎಂದು ಸ್ತುತಿಸಿದ ತಕ್ಷಣ....
ತನ್ನ ಮಗು ದುಃಖ ತಪ್ತನಾಗಿ ಆರ್ತನಾದ ಮಾಡಿದ ಕ್ಷಣದಲ್ಲೇ ತಾಯಿಯಾದವಳು ಆ ಮಗುವಿನ ಬಳಿಗೆ ಧಾವಿಸಿ ಬಂದು ಆ ಮಗುವಿನ ದುಃಖವನ್ನು ದೂರ ಮಾಡಿ ಸಂತೈಸುವಂತೆ....
ಇಡೀ ಭಕ್ತ ಸಮೋಕಾಕ್ಕೆ ತಾಯಿಯಂತೆ ನಿರ್ವ್ಯಾಜ ಕೃಪೆ ತೋರಿವ - ಸರ್ವತ್ರ ವ್ಯಾಪ್ತನಾದ - ಸರ್ವ ಶಕ್ತನಾದ - ಸರ್ವೋತ್ತಮನಾದ - ಭಕ್ತವತ್ಸಲನಾದ ಶ್ರೀ ಧನ್ವಂತರಿ ರೂಪಿ ಶ್ರೀಮನ್ನಾರಾಯಣ ಭಕ್ತರಿದ್ದಲ್ಲಿಗೆ ಬಂದು ಅವರ ದುಃಖಗಳನ್ನೆಲ್ಲಾ ಪರಿಹರಿಸಿ ಪಾಲಿಸುವನು!!!
ಧ್ಯೇಯ ದೇವಾದಿಗಳಿಗೆ = ದೇವ, ಋಷಿ, ಪಿತೃ, ಪ, ನರರೆಂಬ ೫ ವಿಧ ಮುಕ್ತಿ ಯೋಗ್ಯ ಜೀವರಿಗೂ ಸದಾ ಕಾಲದಲ್ಲಿ ಶ್ರೀ ಹರಿಯೇ ಧ್ಯೇಯನಾಗಿದ್ದಾನೆ.
ಧರ್ಮಜ್ಞ = ಎಲ್ಲ ಧರ್ಮಗಳನ್ನೂ, ಧರ್ಮ ರಹಸ್ಯಗಳನ್ನೂ ಪರಿಪೂರ್ಣವಾಗಿ ತಿಳಿದವನು!
ಗುಣಸಾಂದ್ರ = ಜ್ಞಾನಾನಂದಾದಿ ಸಕಲ ಗುಣಗಳನ್ನೂ ಸದಾ ಧರಿಸಿರುವವನು.
ಶ್ರೇಯಸ್ಸು ಕೊಡುವನು ಭಜಕರಿಗೆ = ಧರ್ಮಾರ್ಥಕಾಮ ಮೋಕ್ಷ ರೂಪ ಚತುರ್ವಿಧ ಪುರುಷಾರ್ಥಗಳನ್ನು ತನ್ನ ಭಜಕರಿಗೆ ಕೊಡುವವನು.
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ । ಸ ।
ನ್ಯಾಯವಂತನಾಗಿ ಚೇಷ್ಟೆ ಮಾಳ್ಪ "
ಚೇತನ ಶಕ್ತಿಯಿಂದಲೇ ಪ್ರಕೃತಿಯ ಬಂಧ ಶಕ್ತಿಯನ್ನು ತಿರಸ್ಕರಿಸಿ ನಿನ್ನಲ್ಲಿ ನೀನೇ ಇರುವ ಅಸಹಾಯಕನಾದ ನಿನ್ನಲ್ಲೇ ಇರುವವವನು!
ಮಾಯಾ ನಾಮಕ ಶ್ರೀ ಮಹಾಲಕ್ಷ್ಮೀದೇವಿಗಿಂತಾ ಉತ್ಕೃಷ್ಟ ಸಾಮರ್ಥ್ಯವುಳ್ಳ ಶ್ರೀ ಹರಿಯ ಚೇತನವು - ಸ್ವರೂಪವು ಸರ್ವ ಶಕ್ತವಾದುದು!
" ವಾಯುವಂದಿತ ನಿತ್ಯ "
ಭಾವಿ ಬ್ರಹ್ಮರೂ, ಅತಿಲೋಹಿತ ವಿಮಲ ವಿಜ್ಞಾನಿಗಳೂ, ಅಸುರಾವೇಶ ರಹಿತರಾದವರೂ, ಜೀವೋತ್ತಮರೂ, ವಿಶ್ವ ಗುರುಗಳೂ, ಪ್ರಧಾನಾಂಗರೂ, ಆಖಣಾಷ್ಮ ಸಮರೂ ಆದ ಶ್ರೀ ವಾಯುದೇವರಿಂದ ನಿತ್ಯದಲ್ಲೂ ವಂದಿತನಾದವ ಶ್ವಾಸ ಮಂತ್ರದಿಂದ ಸ್ತುತಿಸಲ್ಪಟ್ಟವ!
" ವಿಜಯವಿಠ್ಠಲರೇಯ । ಪ್ರೀಯನು ಕಾಣೋ ನಮಗೆ "
ಭಗವದ್ಗೀತೆಯಲ್ಲಿ...
ಪ್ರಿಯೋಹಿ ಜ್ಞಾನಿನ್ಯೋತ್ಯರ್ಥಮಹಂ ಸ ಚ ಮಮ ಪ್ರಿಯಃ ।।
ಜ್ಞಾನಿಗೆ ಹೆಚ್ಚಾಗಿ ಪ್ರಿಯನು ನಾನು ( ಶ್ರೀ ಕೃಷ್ಣ ) ಮತ್ತು ಆ ಜ್ಞಾನಿಯು ನನಗೆ ಪ್ರಿಯನು ಎಂದು ಶ್ರೀ ಕೃಷ್ಣ ಪರಮಾತ್ಮನೇ ಹೇಳಿದ್ದಾನೆ!
ಶರೀರದೊಳಗೆ ಸಂಚಾರ ಮಾಡುವ ಪ್ರಾಣ ವಾಯು, ಅಂತಃಕರಣ ಪರಿಣಾಮಗಳಾದ ಬುದ್ಧಿ, ಮನಸ್ಸು, ೫ ಜ್ಞಾನೇಂದ್ರಿಯಗಳು, ೫ ಕರ್ಮೇಂದ್ರಿಯಗಳು, ಜೀವ, ಶರೀರ, ಮಕ್ಕಳು, ಹಣವೇ ಮೊದಲಾದವುಗಲು ಯಾವ ಶ್ರೀ ಹರಿಯ ಸಂಬಂಧದಿಂದ ಪ್ರೀತಿಗೆ ವಿಷಯಗಳಾಗಿ ಆದವೋ ಆ ಭಗವಂತನಿಗಿಂತ ಬೇರೊಬ್ಬ ಪ್ರಿಯರಾರಿದ್ದಾರೆ???
ತನ್ನ ಗುಣೊತ್ಕರ್ಷ ಜ್ಞಾನದಿಂದಲೇ ಅತ್ಯಂತ ಭಕ್ತಿಯಿಂದ ಸ್ತೋತ್ರ ಮಾಡಿದ ತನ್ನ ಭಕ್ತರಲ್ಲಿ ಶ್ರೀ ವಿಜಯವಿಠ್ಠಲೋsಭಿನ್ನ ಶ್ರೀ ಹರಿಯು ಪ್ರೀತನಾಗುವಂತೆ ಈ ಜ್ಞಾನವಿಲ್ಲದೆ ಮಾಡಿದ ಸ್ತುತಿಯಿಂದ ಶ್ರೀ ಹರಿಯು ಪ್ರೀತನಾಗುವುದಿಲ್ಲ!!
" ಅನಾದಿ ರೋಗ ಕಳೆವ "
ಶ್ರೀ ಧನ್ವಂತರಿಯು ತನ್ನ ಭಕ್ತರಿಗೆ ಸ್ಥೂಲದೇಹಕ್ಕೆ ಬರುವ ತಾತ್ಕಾಲಿಕ ರೋಗಗಳನ್ನಷ್ಟೇ ಅಲ್ಲದೆ ಅನಾದಿಯಾದ ಭವ ರೋಗವನ್ನೂ ಶಾಶ್ವತವಾಗಿ ದೂರ ಮಾಡುವನು.
ಅನಾದಿ ಕಾಲದಿಂದ ಜೀವನಿಗೆ ಧಾನ್ಯದ ಮೇಲಿನ ಹೊಟ್ಟಿನಂತೆ ಲಿಂಗ ದೇಹವು ಅವಕಾಶವನ್ನು ಹೊಂದಿರುವುದಾಗಿ ಸುತ್ತಲೂ ಭಗವದಿಚ್ಛೆಯಿಂದ ಆವರಣ ರೂಪದಲ್ಲಿದ್ದು ಬಂಧಕವಾಗಿದೆ.
ಈ ಲಿಂಗ ದೇಹವೇ ಸಂಸಾರಕ್ಕೆ ಕಾರಣ.
ಜನನ - ಮರಣ ರೂಪ ಸಂಸಾರವೆಂಬ " ಅನಾದಿ ರೋಗ " ವೆಂದರೆ ಇದೇ!
ಈ ಲಿಂಗ ದೇಹವು ವೈಕುಂಠದಲ್ಲಿನ ವಿರಜಾ ನದಿಯಲ್ಲಿ ಸ್ನಾನ ಮಾಡುವ ವರೆಗೂ " ಸ್ವರೂಪ ದೇಹ " ಕ್ಕೆ ಆವರಕವಾಗಿರುವುದು. ಇದೇ ಜೀವನಿಗಿರುವ ಸತ್ಯವಾದ " ಅನಾದಿ ಬಂಧ ರೋಗ "
ಜೀವನವು ತುಷದಂತೆ ಲಿಂಗಕೆ ।
ಸಾವಕಾಶದಿ ಪೊಂದಿ ಸುತ್ತಲು ।
ಪ್ರಾವರಣ ರೂಪದಲಿ ಇಪ್ಪದು ಭಗವದಿಚ್ಛೆಯಲಿ ।।
ಕೇವಲ ಜಡ ಪ್ರಕೃತಿ ಇದಕಧಿ ।
ದೇವತೆಯು ಮಹಾಲಕ್ಷ್ಮಿ ಯೆನಿಪಳು ।
ಆ ವಿರಿಜೆಯ ಸ್ನಾನ ಪರಿಯಂತರದಿ ಹತ್ತಿಹದು ।। ಹ ಸಾ ೯ - ೧೩ ।।
ಬಂಧ ಸತ್ಯವಾದರೂ, ಅನಾದಿಯಾದರೂ ಶ್ರೀ ಹರಿಯು ಪ್ರಸನ್ನನಾಗಿ ನಿವೃತ್ತಿಗೊಳಿಸುತ
್ತಾನೆಂಬ ವಿಷಯವನ್ನು ಶ್ರೀಮದಾಚಾರ್ಯರು " ಅನುವ್ಯಾಖ್ಯಾನ " ದಲ್ಲಿ ಹೀಗೆ ವಿವರಿಸಿದ್ದಾರೆ....
ಯಥಾ ದೃಷ್ಟ್ಯಾ ಪ್ರಸನ್ನ: ಸನ್ ರಾಜಾ ಬಂಧಾಪನೋದಕೃತ್ ।
ಏವಂ ದೃಷ್ಟ: ಸ ಭಗವಾನ್ ಕುರ್ಯಾದ್ ಬಂಧ ವಿಭೇದನಮ್ ।।
ಬಂಧಿಯು ರಾಜನ ಮೇಲೆ ಅತಿಶಯ ಪ್ರೇಮವನ್ನು ತೋರಿದಾಗ ಪ್ರಸನ್ನನಾಗುವ ರಾಜನು ಅವನನ್ನು ಬಂಧನದಿಂದ ಬಿಡುಗಡೆ ಗೊಳಿಸುವವನು.
ಇದೇ ರೀತಿ ಶ್ರೀ ಹರಿಯನ್ನು " ಸಂಸಾರವೆಂಬ ಬಂಧನದಿಂದ ಬಂಧಿಗಳಾದ ನಾವು ಪ್ರೇಮ ದೃಷ್ಟಿಯಿಂದ ನೋಡಿದಾಗ " ಶ್ರೀ ಹರಿಯು ನಮ್ಮನ್ನು ಬಂಧನದಿಂದ ಬಿಡುಗಡೆ ಗೊಳಿಸುವನು!!
" ಶ್ರೀ ಧನ್ವಂತ್ರೀ ರೂಪಿ ಶ್ರೀ ಹರಿ ಪರಮಾತ್ಮನು ಸಜ್ಜನರಿಗೆ ಆಯುರಾರೋಗ್ಯ ದಯಪಾಲಿಸಲೆಂದು ಪ್ರಾರ್ಥಿಸುತ್ತಾ....
ಸಕಲರಿಗೂ
ಶ್ರೀ ಧನ್ವಂತ್ರೀ ಜಯಂತೀ ಶುಭಾಶಯಗಳು


ಧನ್ವಂತರಿ ಜಯಂತಿ ವಿಶೇಷ ಸಂಚಿಕೆ

 ರೋಗಪರಿಹಾರಕ್ಕಾಗಿ ಸಂಬಂಧಪಡುವ ಎಲ್ಲ

ಭಗವದ್ರೂಪಗಳಲ್ಲಿ  ಸಲ್ಲಿಸಲಾಗುವ  ಪ್ರಾರ್ಥನೆ

ರೋಗಪರಿಹಾರಕ್ಕಾಗಿ ಭಗವಂತನಲ್ಲಿ ಸಲ್ಲಿsಸಲು ಅನೇಕ ಪ್ರಾರ್ಥನೆಗಳು ಮಂತ್ರಗಳು 

ವಿನಿಯೋಗಿಸಲ್ಪಡ ಲಾಗುತ್ತಿದದ್ದು  ಅವುಗಳಲ್ಲಿ ರೋಗ ಪರಿಹಾರಕ್ಕೆ  ಸಂಬಂಧಿಸುವ ಎಲ್ಲ ಭಗವದ್ರೂಪಗಳನ್ನು ಉಲ್ಲೇಖಿಸುವ ಪ್ರಯುಕ್ತ ವೈಶಿಷ್ಟ್ಯಪೂರ್ಣವಾದಪ್ರಾರ್ಥನೆ -

ಅಚ್ಯುತಾನಂತಗೋವಿಂದಸ್ಮೃತಿಮಾತ್ರಾರ್ತಿನಾಶನ 

ರೋಗಾನ್ಮೇ  ನಾಶಯಾಶೇಷಾನ್  ಆಶು ಧನ್ವಂತರೇ ಹರೇ 

ಅಚ್ಯುತ ,ಅನಂತ ,ಗೋವಿಂದ ,ಸ್ಮೃತಿಮಾತ್ರಾರ್ತಿನಾಶ,

ಹರೇ ಧನ್ವಂತರೇ -
ಎಂಬ  ಆರುಸಂಭೊಧನೆಗಳನ್ನೂಳಗೊಂಡ  ಈ ಶ್ಲೋಕದಲ್ಲಿ ಎಲ್ಲ ರೋಗಗಳನ್ನು  ಆದಷ್ಟು ಬೇಗ ಪರಿಹರಿಸು -ಅಶೇಷಾನ್ ರೋಗಾನ್ ಆಶು  ನಾಶಯ - ಎಂದು ಪ್ರಾರ್ಥಿಸಲಾಗಿದೆ .
              
ವೇದವ್ಯಾಸದೇವರು ಘೋಷಿಸಿದ ಔಷಧ

ಅಚ್ಯುತಾನoತ  ಗೋವಿಂದನಮೋಚ್ಚಾರಣಭೀಷಿತಾಃ

(ಭೇಷಜಾತ್) ನಶ್ಯಂತಿ ಸಕಲಾಃ ರೋಗಾಃ ಸತ್ಯಂ ಸತ್ಯಂ ವದಾಮ್ಯಹಮ್

ಭಗವಂತನು ತನ್ನ ಅಚ್ಯುತ ಅನಂತ ಹಾಗೂ ಗೋವಿಂದ ಎಂಬ ರೂಪಗಳಿಂದ ವಾತ ಪಿತ್ತ ಕಫಗಳೆಂಬ ತ್ರಿಧಾತುಗಳನ್ನು ನಿಯoತ್ರಿಸುತ್ತಿರುವನು ಆದ್ದರಿಂದ ಈ ಧಾತುಗಳನ್ನು  ನಿಯಂತ್ರಿಸುತ್ತಿರುವನು ಆದ್ದರಿಂದ ಈ ತ್ರಿಧಾತುಗಳ ವೈಶಮ್ಯದಿಂದ ಉಂಟಾಗುವ ಎಲ್ಲ ರೋಗಗಳೂ ಆ ಮೂರು ಭಗವದ್ರೂಪಗಳ ನಾಮಗಳ ಭಕ್ತಿಪೂರ್ವಕ ಉಚ್ಚಾರಣೆ ಎಂಬ ಔಷಧದಿoದ ಪರಿಹಾರ ಹೊಂದುವುವು 

ಶ್ರೀವೇದವ್ಯಾಸದೇವರು ಇದು ಸತ್ಯ  ಇದು ಸತ್ಯ -ಎಂದು ಶಪಥಪೂರ್ವಕವಾಗಿ ಉದ್ಘೋಷಿಸಿರುವರು 
               ಕೃಷ್ಣಾಮೃತಮಹಾರ್ಣವ

 ರಕ್ತಸಂಭಂಧಿ ರೋಗಗಳ ಪರಿಹಾರಕ್ಕೆ ಲೋಹಿತಾಕ್ಷನ ಉಪಾಸನೆ


ಲೋಹಿತಾಖ್ಯೋ  ರಕ್ತವರ್ಣೋ ಲೋಹಿತಸ್ಥೂ  ಜನಾರ್ಧನಃ ||

ಎಂದು ಐತರೇಯಭಾಷ್ಯದಲ್ಲಿ  ತಿಳಿಸಿರುವಂತೆ ಭಗವಂತನು ರಕ್ತದಲ್ಲಿ ರಕ್ತದ ಬಣ್ಣವುಳ್ಳನಾಗಿ ಲೋಹಿತನಾಮಕನಾಗಿ ಇರುವವನು 
ಇಂತಹ ಭಗವದ್ರೂಪವನ್ನು  ರಕ್ತದಲ್ಲಿ ವ್ಯಾಪಿಸಿರುವವನು ಎಂಬ ಅರ್ಥದ ಅನುಸಂಧಾನದೊಂದಿಗೆ ಲೋಹಿತಾಕ್ಷ ಎಂಬ ನಾಮಾರೂಢನಾಗಿ ಉಪಾಸನೆ ನಡೆಸಿದಲ್ಲಿ ರಕ್ತ ಕ್ಕೆ ಸಂಭಂದಿಸುವ ರಕ್ತದ ಒತ್ತಡ ಮುಂತಾದ ರೋಗಗಳಿಂದ ಪಾರಾಗಬಹುದು .

ಧನ್ವಂತರಿ ಮಂತ್ರ ಜಪದಲ್ಲಿ ಬರುವ  ಧಂ ಬೀಜಾಕ್ಷರದ ಅರ್ಥ ಚಿಂತನೆ


ಮಂತ್ರಗಳ ಪ್ರಾರಂಭದಲ್ಲಿ ಪ್ರಾಯೋಗಿಸಲ್ಪಡುವ ಬೀಜಾಕ್ಷರಗಳು ಬೀಜ ಎಂಬ ತಮ್ಮ ಹೆಸರಿಗೆ ಅನುಗುಣವಾಗಿ (ವ್ಯಂಜಯತೀತಿ ಬೀಜಮ್ )ಮುಂದಿನ ಸಮಗ್ರ ಮಂತ್ರದ ವ್ಯಂಜಕಗಳು  ಇರುವುವು ಧನ್ವಂತರಿ ಮಂತ್ರದ ಪ್ರಾರಂಭದಲ್ಲಿ ಪಠಿಸಲಾಗುವ ಧಂ ಎಂಬ ಬೀಜಾಕ್ಷರ ಧನ್ವಂತರಿ ಎಂಬ ಮುಂದಿನ ನಾಮದ ಅರ್ಥವನ್ನು ಸೂಚಿಸುವುದು ಬಿಂದುರಪ್ಯವಧಾರಣೆ -ಎಂಬ ವೈದಿಕಸೂತ್ರದ ಪ್ರಕಾರ ಧಂ-ಎಂಬಲ್ಲಿ ಇರುವ ಅನುಸ್ವಾರ ರೂಪದ ಬಿಂದು ಧಕಾರ ದಿಂದ ಸೂಚಿತವಾದ ಪಾಪಪರಿಹಾರತ್ವರೂಪವಾದ ಅರ್ಥಕ್ಕೆ ಅವಧಾರಣೆಯನ್ನು ನಿರ್ಧಾರವನ್ನು ಹಚ್ಚಿ ಪಾಪಪರಿಹಾರವನ್ನು ಮಾಡಿಯೇ ಮಾಡುವನು ಎಂಬ ಅರ್ಥಹೊರಡಬಲ್ಲದು.

*********

"  ಭೃಗು ಮಹರ್ಷಿಗಳ ಅಂಶ ಸಂಭೂತರಾದ  ವಿಜಯರಾಯ ಕೃತ ಶ್ರೀ ಧನ್ವಂತ್ರೀ ಸುಳಾದಿ   "

ಶ್ರೀಮದ್ಭಾಗವತ...

ಧನ್ವಂತರೀ ದೀರ್ಘತಮಸ ಆಯುರ್ವೇದ ಪ್ರವರ್ತಕಃ ।
ಯಜ್ಞಭುಗ್ವಾಸುದೇವಾಂಶ: ಸ್ಮೃತಿಮಾತ್ರಾತ್ರಿ ನಾಶನಃ ।।

ದೀರ್ಘ ತಮಸ್ ಎಂಬುವನಿಂದ " ಧನ್ವ " ನೆಂಬಾತ ಹುಟ್ಟಿದ. ಈ ಧನ್ವನ ಮಗನಾಗಿ ಆಯುರ್ವೇದ ಪ್ರವರ್ತಕನೂ; ಸರ್ವ ಯಜ್ಞ ಭೋಕ್ತನೂ; ವಾಸುದೇವಾಂಶನಾದವನೂ; ತನ್ನ ಸ್ಮಾರಣೆ ಮಾತ್ರದಿಂದಲೇ ರೋಗಾದಿ ಸಕಲ ದುಃಖ ನಾಶಕನಾದ "ಧನ್ವಂತರೀ " ದೇವನು ಅವತರಿಸಿದನು!

ಈ ವಿಷಯವು " ಹರಿವಂಶ " ದಲ್ಲಿ...

ಧನ್ವಸ್ತು ದೀರ್ಘತಮಸಃ ವಿದ್ವಾನ್ ಧನ್ವಂತರೀಸ್ತತಃ ।।

ಶ್ರೀ ದುರ್ವಾಸರ ಶಾಪದಿಂದ ಇಂದ್ರಾದಿ ದೇವತೆಗಳು ದೈತ್ಯರಿಂದ ಪರಾಜಿತರಾಗಿ ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಮೊರೆಹೊಕ್ಕರು.

ಶ್ರೀ ಚತುರ್ಮುಖ ಬ್ರಹ್ಮದೇವರು ದೇವತೆಗಳೊಂದಿಗೆ ಶ್ರೀ ಹರಿಯನ್ನು ಮೊರೆಹೊಕ್ಕು ಪ್ರಾರ್ಥಿಸಿದಾಗ..

" ಅಹಿ - ಮೂಷಕ " ನ್ಯಾಯವನ್ನು ಅನುಸರಿಸಿ ದೈತ್ಯರೊಂದಿಗೆ ಸಂಧಿ ಮಾಡಿಕೊಂಡು ಸಮುದ್ರ ಮಥನ ಮಾಡಲು ಶ್ರೀ ಹರಿ ಆದೇಶಿಸಿದನು.

ಶ್ರೀ ಹರಿಯ ಆದೇಶಾನುಸಾರ ಅಮೃತಕ್ಕಾಗಿ ಮಂದರ ಪರ್ವತವನ್ನು ಕಡಗೋಲನ್ನಾಗಿಯೂ; ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಮುದ್ರವನ್ನು ದೇವ - ದೈತ್ಯರು ಒಟ್ಟಾಗಿ ಶ್ರೀ ಹರಿಯೊಂದಿಗೆ ಮಥಿಸಿದಾಗ..

ಕಾಲಕೂಟ ವಿಷ
ಕಾಮಧೇನು
ಉಚೈಶ್ರವಸ್
ಐರಾವತ
ಪಾರಿಜಾತ
ಅಪ್ಸರೆಯರು
ಶ್ರೀ ಮಹಾಲಕ್ಷ್ಮೀದೇವಿಯರು

ಕ್ರಮವಾಗಿ ಪ್ರಾದುರ್ಭೂತರಾದರು. ಅಜಿತನಾಮಕ ಶ್ರೀ ಹರಿ ಲಕ್ಷ್ಮೀದೇವಿಯರನ್ನು ಪತ್ನಿಯನ್ನಾಗಿ ಸ್ವೀಕರಿಸಿದ. ಆ ನಂತರ ಕ್ಷೀರ ಸುಮುದ್ರದಿಂದ ಮದ್ಯದ ಅಭಿಮಾನಿ ವಾರುಣೀದೇವಿಯು ಬಂದಾಗ ಶ್ರೀ ಹರಿಯ ಅನುಮತಿಯಂತೆ ಅವಳನ್ನೂ ಅಸುರರು ಸ್ವೀಕರಿಸಿದ ನಂತರ, ಶ್ರೀ ಹರಿ ಧನ್ವಂತರೀ ರೂಪದಿಂದ ಅಮೃತ ಪೂರ್ಣವಾದ ಕಲಶವನ್ನು ಧರಿಸಿ ಪ್ರಾದುರ್ಭವಿಸಿದನು.

ಶ್ರೀಮದ್ಭಾಗವತ " ದಲ್ಲಿ...

ಅಮೃತಾ ಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಸ ವೈ ಭಗವತಃ ಸಾಕ್ಷಾತ್ ವಿಷ್ಣೋರಂಶಾಂಶ ಸಂಭವಃ ।।
ಧನ್ವಂತರಿತಿ ಖ್ಯಾತ ಆಯುರ್ವೇದ ದೃಗಿಜ್ಯಭಾಕ್ ।।

ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು....

ಧನ್ವಂತರೇಂಗರುಚಿ ಧನ್ವಂತರೇರಿತರುಧನ್ವಂತರೀಭವ ಸುಧಾ
ಭಾನ್ವಂತರಾವಸಥ ಮನ್ಮ೦ತರಾಧಿಕೃತತನ್ವಂತಕೌಷಧನಿಧೇ ।
ಧನ್ವಂತರಂಗಶುಗುದನ್ವಂತಮಾಜಿಷು ವಿತನ್ವನ್ ಮಮಾಬ್ಧಿ ತನಯಾ
ಸೂನ್ವಂತಕಾತ್ಮಹೃದತನ್ವ೦ತರಾವಯವತನ್ವಂತರಾರ್ತಿ ಜಲಧೌ ।।

ಅಂಗರುಚಿ ಧನ್ವಂತರೇ: = ಶರೀರ ಕಾಂತಿಯಿಂದ ಸೂರ್ಯನಂತಿರುವ

ಅರಿತರು ಧನ್ವನ್ = ಶತ್ರುಗಳೆಂಬ ವೃಕ್ಷಗಳಿಗೆ ಮರುಭೂಮಿಯಂತಿರುವ

ಸುಧಾ ಭಾನ್ವಂತರಾವಸುಥ = ಅಮೃತ ಕಿರಣನಾದ ಚಂದ್ರನಲ್ಲಿ ವಾಸಿಸುವ

ಮನ್ವಂತರಾಕೃತತನ್ವಂತರ = ಈ ವೈವಸ್ವತ ಮನ್ವಂತರದಲ್ಲಿ ಅಲ್ಲದೆ ಸ್ವಯಂಭುವಾದಿ ಮನ್ವಂತರಗಳಲ್ಲಿ ಸ್ವೀಕರಿಸಲ್ಪಟ್ಟ ಯಜ್ಞ - ಕಪಿಲ - ದತ್ತಾತ್ರೇಯಾದಿ ಅವತಾರಗಳುಳ್ಳ

ಔಷಧನಿಧೇ = ಔಷಧಗಳಿಗೆ ಆಶ್ರಯನೇ

ಆಜಿಸು = ಯುದ್ಧಗಳಲ್ಲಿ

ಧನ್ವಂತರಂಗಶುಗುದನ್ವಂತ೦ = ದಾನವರನ್ನು ಸಂಹರಿಸುವ ಮೂಲಕ ಅವರ ತಾಯಿಯಾದ ದನುವಿಗೆ ದುಃಖವೆಂಬ ಸಮುದ್ರವನ್ನು

ವಿತನ್ವನ್ = ಉಂಟು ಮಾಡುತ್ತಿರುವ

ಅಬ್ಧಿ ತನಯಾ = ಸಮುದ್ರರಾಜನ ಮಗಳಾದ ಶ್ರೀ ಮಹಾಲಕ್ಷ್ಮೀದೇವಿ

ಸೂನು = ಮಗನಾದ ಮನ್ಮಥನನ್ನು

ಅಂತಕ = ನಾಶಗೊಳಿಸಿದ ಶ್ರೀ ಮಹಾರುದ್ರದೇವರ

ಆತ್ಮ = ಮನಸ್ಸನ್ನು

ಹೃತ್ = ಅಪಹರಿಸಿದ

ಅತನು = ಪುಷ್ಟವಾದ

ಅಂತರಾವಯವ = ಸ್ತನ, ಜಘನ ಮುಂತಾದ ಅವಯವಗಳುಳ್ಳ

ತನ್ವಂತರ = " ಶ್ರೀ ನಾರಾಯಣೀ " ಸ್ತ್ರೀ ರೂಪವುಳ್ಳ

ಹೇ ಧನ್ವಂತರೇ = ಹೇ ಧನ್ವಂತರೀ ರೂಪಿಯಾದ ಶ್ರೀ ಹರೇ

ಆರ್ತಿ ಜಲಧೌ = ಸಂಸಾರಾಖ್ಯ ದುಃಖ ಸಮುದ್ರದಲ್ಲಿ ಬಿದ್ದಿರುವ ನನಗೆ

ತರೀ ಭವ = ಅದನ್ನು ದಾಟಲು ದೋಣಿಯಾಗು!!

" ಧನ್ವಂತರೀ "

" ಧನ್ವ " ಯೆಂದರೆ " ಮರುಭೂಮಿ ".

ಈ ಸಂಸಾರವೇ ಮರುಭೂಮಿಯಂತಿರುವುದು. ಅದನ್ನು ಪರಿಹರಿಸುವನೇ " ಧನ್ವಂತರ ".

ಧನ್ವ = ಪಾಪಗಳೂ, ತನ್ನಿಮಿತ್ತಿಕ ರೋಗಗಳೂ. ಇವುಗಳನ್ನು..

ಅಂತರಿ = ನಾಶ ಮಾಡುವನು!!

ಶ್ರೀ ವೇದವ್ಯಾಸ ಪ್ರಣೀತ ಶ್ರೀಮಧ್ಭಾಗವತ ದ್ವಿತೀಯ ಸ್ಕಂಧದಲ್ಲಿನ ಸಪ್ತಮೋಧ್ಯಾಯದ ೨೧ ಶ್ಲೋಕ...

ಧನ್ವಂತರಿಶ್ಚ ಭಗವಾನ್ ಸ್ವಯಮಾಸ ದೇವೋ
ನಾಮ್ನಾ ನೃಣಾ೦ ಪುರುರುಜಾ೦ ರುಜ ಆಶುಯಂತಿ ।
ಯಜ್ಞೇ ಚ ಭಾಗಮಮೃತಾಯುರವಾಪ ಚಾದ್ಧಾ
ಆಯುಶ್ಚ ವೇದ ಮನುಶಾಸ್ತ್ಯಾವತೀರ್ಯ ಲೋಕೇ ।।

ಶ್ರೀಮದಾಚಾರ್ಯರು " ತಂತ್ರಸಾರ ಸಂಗ್ರಹ " ದಲ್ಲಿ...

ಅಜ್ಞಾನ ದುಃಖ ಭಯ ರೋಗ ಮಹಾ ವಿಷಾನಿ ।
ಯೋಗೋsಯಮಾಶು ವಿನಿಹಂತಿ ಸುಖಂ ಚ ದದ್ಯಾತ್ ।।
ಉನ್ಮಾದ ವಿಭ್ರಮ ಹರಃ ಪರಿತಶ್ಚ ಸಾಂದ್ರಮಾನಂದಮೇವ
ಪದಮಾಪಯತಿ ಸ್ಮ ನಿತ್ಯಮ್ ।।

" ಧನ್ವಂತರೀ " ಮಂತ್ರವನ್ನು ಜಪಿಸುವವರಿಗೆ..

ಅಜ್ಞಾನ - ದುಃಖ - ಹೆದರಿಕೆ - ರೋಗಗಳೂ - ಮಾರಕವಾದ ವಿಷಗಳು ಇವುಗಳನ್ನೆಲ್ಲಾ ಪರಿಹರಿಸಿ ಸುಖವನ್ನುಂಟು ಮಾಡುವುದು.

ಹುಚ್ಚು - ಮಾನಸಿಕ ಗೊಂದಲಗಳನ್ನೂ ಪರಿಹರಿಸಿ ಪರದಲ್ಲಿ ನಾಶವೇ ಇಲ್ಲದ ಸುಖದ ತೌರೂರಾದ ವೈಕುಂಠಾದಿ ಲೋಕಗಳನ್ನು ಕರುಣಿಸುವುದು!!

" ಧಂ ಧನ್ವಂತರಯೇ ನಮಃ " ಎಂದು ಜಪಿಸಲು ಸಿಗುವ ಫಲ...

ಆಯುವೃದ್ಧಿಯಾಗೋದು = ರೋಗಾದಿ ಉಪದ್ರವಗಳನ್ನು ಪರಿಹರಿಸಿ ಭಕ್ತನಿಗೆ ಪೂರ್ಣವಾದ ಆಯುಸ್ಸು ದೊರಕುವುದು.

ಶ್ರೇಯಸ್ಸು ಬರುವುದು = ಈ ಮಂತ್ರವು ಸಂಸಾರದಲ್ಲಿ ಭಕ್ತ ಜನರನ್ನು ಪೀಡಿಸುವ ರೋಗಗಳಿಂದ ವಿಮುಕ್ತಿಗೊಳಿಸುವುದಲ್ಲದೆ ಕೊನೆಗೆ ಈ ಸಂಸಾರದಿಂದಲೇ ಬಿಡುಗಡೆಗೊಳಿಸಬಲ್ಲದು.

ಕಾಯ ನಿರ್ಮಲಿನ = ಪಾವನವಾದ ಪಾಪವಿಲ್ಲದ ದೇಹ

ಮಾಯಾ ಹಿಂದಾಗುವುದು = ಮಾಟ, ಕೃತ್ರಿಮ, ದೆವ್ವ ಮೊದಲಾದ ಐಂದ್ರಜಾಲಿಕ ವಿದ್ಯೆಯಿಂದ ಬರುವ ಆಪತ್ತುಗಳು ಪರಿಹಾರವಾಗುವವು.

" ಶ್ರೀ ಧನ್ವಂತರೀ ಪ್ರಾದುರ್ಭಾವ "

ಅಮೃತಕ್ಕಾಗಿ ವೈವಸ್ವತ ಮನ್ವಂತರದಲ್ಲಿ " ಅನಂತ " ನಾಮಕನಾಗಿ ಗರುಡ ಮಂದರವನ್ನು ಹೊತ್ತ ರೈವತ ಮನ್ವಂತರದಲ್ಲಿ " ಸುಪರ್ಣ " ನಾಮಕನಾಗಿ ಅವನೇ ಹೊತ್ತ! ಈ ವಿಷಯವು " ಬ್ರಹ್ಮ ಪುರಾಣ " ದಲ್ಲಿ ಉಲ್ಲೇಖಿತವಾಗಿದೆ!!

ಚಂದ್ರ ವಂಶದಲ್ಲಿ ಕಾಶೀರಾಜನ ಮಗನಾಗಿ ಇನ್ನೊಮ್ಮೆ " ಧನ್ವಂತರೀ " ಅವತಾರ ೬ನೇ ಚಾಕ್ಷುಷ ಮನ್ವಂತರದಲ್ಲಿ ಹಾಗೂ ೭ನೇ ವೈವಸ್ವತ ಮನ್ವಂತರದಲ್ಲಿ ಹೀಗೆ ಎರಡಾವರ್ತಿ ಶ್ರೀ ಹರಿಯು " ಧನ್ವಂತರೀ " ರೂಪದಿಂದ ಅವತರಿಸಿದ್ದಾನೆ!!

ಷಷ್ಟೇ ಚ ಸಪ್ತಮೇ ಚಾಯಂ ದ್ವಿರಾವಿರ್ಭಾವಮಾಗತಃ ।
ಷಷ್ಠ೦ತರೇsಬ್ಧಿಮಥನಾದ್ಧೃತಾಮೃತ ಕಮಂಡಲು: ।।

ಉದ್ಗತೋ ದ್ವಿಭುಜ: ಶ್ಯಾಮ ಆಯುರ್ವೇದ ಪ್ರವರ್ತಕಃ ।
ಸಪ್ತಮೇ ಚ ತಥಾ ರೂಪ: ಕಾಶೀರಾಜ ಸುತೋsಭವತ್ ।।

" ಶ್ರೀ ಧನ್ವಂತರೀ " ರೂಪ ವರ್ಣನೆ "

ಶ್ರೀಮಧ್ಭಾಗವತ " ದಲ್ಲಿ....

ಅಥೋದಧೇರ್ಮಥ್ಯಮಾನಾತ್ ಕಾಶ್ಯಪೈರಮೃತಾರ್ಥಿಭಿ: ।
ಉದತಿಷ್ಠನ್ ಮಹಾರಾಜ ಪುರುಷಃ ಪರಮಾದ್ಭುತ: ।।
ದೀರ್ಘಪೀವರ ದೋರ್ದಂಡ: ಕಂಬುಗ್ರೀವೋsರುರೇಕ್ಷಣಃ ।
ಶ್ಯಾಮಲಸ್ತರುಣಃ ಸ್ರಗ್ವೀ ಸರ್ವಾಭರಣ ಭೂಷಿತಃ ।।
ಪೀತವಾಸಾ ಮಹೋರಸ್ಕ: ಸುಮೃಷ್ಟಮಣಿ ಕುಂಡಲ: ।
ನೀಲಕುಂಚಿತ ಕೇಶಾಂತಃ ಸುಭಗ: ಸಿಂಹ ವಿಕ್ರಮಃ ।।
ಅಮೃತಾಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಅಮೃತಾ ಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಸ ವೈ ಭಗವತಃ ಸಾಕ್ಷಾತ್ ವಿಷ್ಣೋರಂಶಾಂಶ ಸಂಭವಃ ।।
ಧನ್ವಂತರಿತಿ ಖ್ಯಾತ ಆಯುರ್ವೇದ ದೃಗಿಜ್ಯಭಾಕ್ ।
ತಮಾಲೊಕ್ಯಾಸುರಾ: ಸರ್ವೇ ಕಲಶಂ ಚಾಮೃತಾಭೃತಮ್ ।।
ಲಿಪ್ಯಂತ: ಸರ್ವವಸ್ತೂನಿ ಕಲಶಂ ತರಸಾsಹರನ್ ।
ನೀಯಮಾನೇsಸುರೈಸ್ತಸ್ಮಿನ್ ಕಲಶೇsಮೃತಭಾಜನೇ ।।

ಹೇ ಪರೀಕ್ಷಿತ ಮಹಾರಾಜನೇ ಕೇಳು...

ಅಮೃತಾರ್ಥಿಗಳಾದ ದೇವ ದಾನವರು ಶ್ರೀ ಮಹಾಲಕ್ಷ್ಮೀ ಪ್ರಾದುರ್ಭಾವಾನಂತರ ಪುನಃ ಕ್ಷೀರ ಸಮುದ್ರ ಮಥನ ಮಾಡಲು ಆ ಸಮುದ್ರ ಮಧ್ಯದಿಂದ ಓರ್ವ ಮಹಾ ಪುರುಷನು ಅದ್ಭುತಾಕಾರನಾಗಿ ಆವಿರ್ಭವಿಸಿದನು.

ಆತನು ದೀರ್ಘವೂ, ದುಂಡಾದ ಪುಷ್ಟವಾದ ತೋಳುಗಳುಳ್ಳವನಾಗಿದ್ದೂ, ಆ ತೋಳುಗಳು ಆಜಾನುಲಂಬಿಯಾಗಿದ್ದವು.

ಶಂಖದಂತೆ ಕಂಠ, ಕಡೆ ಕಣ್ಣುಗಳು ಕೆಂಪಾಗಿ, ಮೈಬಣ್ಣ ನೀರುಂಡ ಮೇಘದಂತಿತ್ತು.

ಅವಯವಗಳಲ್ಲಿ ಆಭರಣಗಳು ಮೆರೆಯುತ್ತಿರಲು, ಕೊರಳಲ್ಲಿ ಹೂವಿನ ಮಾಲೆ ಜೋತಾಡುತ್ತಿತ್ತು.

ವಿಶಾಲವಾದ ಎದೆಯುಳ್ಳ ಆತ ಪೀತಾಂಬರ ಧರಿಸಿ, ಕಿವಿಯಲ್ಲಿಟ್ಟ ಕರ್ಣಾಭರಣವು ಪ್ರಕಾಶಮಾನವಾಗಿತ್ತು.

ಕಪ್ಪನೆಯ ಗುಂಗುರು ತಲೆಗೂದಲುಗಳು ಹಾರಾಡುತ್ತಿದ್ದವು. ಸುಂದರನಾದ ಆತ ಸಿಂಹ ಪರಾಕ್ರಮಶಾಲಿಯಾದ ಗಂಭೀರವಾದ ನಡುಗೆಯುಳ್ಳವನಾಗಿದ್ದ!!

ಕಡಗಗಳಿಂದ ಶೋಭಿತವಾದ ತನ್ನ ಕೈಯಲ್ಲಿ ಅಮೃತ ಕಲಶವನ್ನು ಹಿಡಿದಿದ್ದನು.

ಈ ಪುರುಷನೇ ಸಾಕ್ಷಾತ್ ಶ್ರೀ ಹರಿಯ ಸ್ವರೂಪಾಂಶನಾದ " ಶ್ರೀ ಧನ್ವಂತರೀ " ಯು.



ಈ ಶ್ರೀ ಧನ್ವಂತರೀಯೇ " ಆಯುರ್ವೇದ " ವೆಂಬ ವೈದ್ಯ ಶಾಸ್ತ್ರದ ಮುಖ್ಯದ್ರಷ್ಟ್ರಾರನು!!
****************


ಶ್ರೀಧನ್ವಂತರಿ ಚಿಂತನ   
                       || ಭಾಗ-1 ||

ಭಗವಂತನ ನಾಮತ್ರಯ ಮಹಾತ್ಮೆ

ಅಚ್ಯುತ ,ಅನಂತ  , ಗೋವಿಂದ ಎಂಬ ಭಗವಂತನ ನಾಮತ್ರಯಗಳನ್ನು  ಜಪಿಸುವುದರಿಂದ ಮನುಷ್ಯನಿಗೆ ವಿಷದಿಂದ ಮರಣ ಅಗ್ನಿಯಿಂದ ಮರಣ ರೋಗಾದಿಗಳಿಂದ ಮರಣ ಎಂದು ಉಂಟಾಗುವುದಿಲ್ಲ ಅದು ಹೇಗೆ ? ತಿಳಿದುಕೊಳ್ಳುವ ಅಲ್ಪ ಪ್ರಯತ್ನ. ಮಾಡೋಣ .

ಅಚ್ಯುತಃ ಕಲ್ಪವೃಕ್ಷಶ್ಚ ಅನಂತಃ ಕಾಮದೇನವಃ |
ಚಿಂತಮಣಿಸ್ತು ಗೋವಿಂದ ನಾಮತ್ರಯಮುದಾಹೃತಮ್ ||

ಭಗವಂತನ ಅಚ್ಯುತ ನಾಮವು ಕಲ್ಪವೃಕ್ಷವಿದ್ದಂತೆ ಅನಂತನಾಮವು ಕಾಮದೇನುವಿದ್ದಂತೆ ಮತ್ತು ಗೋವಿಂದ ನಾಮವು ಚಿಂತಮಣಿಯಂತೆ ಇದೆ .
ಇಂಥ ಮಹತ್ವಪೂರ್ಣವೆನಿಸಿದ ಭಗವಂತನ ನಾಮತ್ರಯಗಳನ್ನು ಜಪಿಸಿ ಎಲ್ಲ ಭಯಗಳಿಂದ ಪಾರಗಬೇಕು .
                  ಪುರಾಣ ವಚನ
************

 ರೋಗಪರಿಹಾರಕ್ಕಾಗಿ ಸಂಬಂಧಪಡುವ ಎಲ್ಲ
ಭಗವದ್ರೂಪಗಳಲ್ಲಿ  ಸಲ್ಲಿಸಲಾಗುವ  ಪ್ರಾರ್ಥನೆ

ರೋಗಪರಿಹಾರಕ್ಕಾಗಿ ಭಗವಂತನಲ್ಲಿ ಸಲ್ಲಿಸಲು ಅನೇಕ ಪ್ರಾರ್ಥನೆಗಳು ಮಂತ್ರಗಳು 
ವಿನಿಯೋಗಿಸಲ್ಪಡ ಲಾಗುತ್ತಿದದ್ದು  ಅವುಗಳಲ್ಲಿ ರೋಗ ಪರಿಹಾರಕ್ಕೆ  ಸಂಬಂಧಿಸುವ ಎಲ್ಲ ಭಗವದ್ರೂಪಗಳನ್ನು ಉಲ್ಲೇಖಿಸುವ ಪ್ರಯುಕ್ತ ವೈಶಿಷ್ಟ್ಯಪೂರ್ಣವಾದಪ್ರಾರ್ಥನೆ -

ಅಚ್ಯುತಾನಂತಗೋವಿಂದಸ್ಮೃತಿಮಾತ್ರಾರ್ತಿನಾಶನ  |
ರೋಗಾನ್ಮೇ ನಾಶಯಾsಶೇಷಾನ್
ಆಶು ಧನ್ವಂತರೇ ಹರೇ || 

ಅಚ್ಯುತ ,ಅನಂತ ,ಗೋವಿಂದ ,ಸ್ಮೃತಿಮಾತ್ರಾರ್ತಿನಾಶ,
ಹರೇ ಧನ್ವಂತರೇ -
ಎಂಬ  ಆರುಸಂಭೊಧನೆಗಳನ್ನೂಳಗೊಂಡ  ಈ ಶ್ಲೋಕದಲ್ಲಿ ಎಲ್ಲ ರೋಗಗಳನ್ನು  ಆದಷ್ಟು ಬೇಗ ಪರಿಹರಿಸು -ಅಶೇಷಾನ್ ರೋಗಾನ್ ಆಶು  ನಾಶಯ - ಎಂದು  ಪ್ರಾರ್ಥಿಸಲಾಗಿದೆ .

ಇದರ ಜೋತೆಗೆ ಶ್ರೀಮದ್ ಭಾಗವತದ ಶ್ಲೋಕವನ್ನು ಸೇರಿಸಿ ಪಠಿಸುವ ಸಂಪ್ರದಾಯವಿದೆ .

ಧನ್ವಂತರಿರ್ಧೀರ್ಘತಮಸ ಆಯುರ್ವೇದಪ್ರವರ್ತಕಃ |
ಯಜ್ಞಭುಗ್ವಾಸುದೇವಾಂಶಃ ಸ್ಮೃತಿ ಮಾತ್ರಾರ್ತಿನಾಶನಃ ||

ದೀರ್ಘತಮನ ಪುತ್ರನಾಗಿ ಧನ್ವಂತರಿ ರೂಪಿ ಪರಮಾತ್ಮ ಅವತರಿಸಿದ ಈತ ಆಯುರ್ವೇದ ಪ್ರವರ್ತಕ ಯಜ್ಞಭೋಕ್ತ .ಶ್ರೀಹರಿಯ ಅಂಶ ಸ್ಮರಣಮಾತ್ರದಿಂದ ಎಲ್ಲ ದುಃಖಗಳನ್ನು ಪರಿಹರಿಸುವವನು .

(ಈ ಧನ್ವಂತರಿ ಸಮುದ್ರಮಥನಕಾಲದಲ್ಲಿ ಆವಿರ್ಭವಿಸಿದ ಧನ್ವಂತರಿಯದೆ ಇನ್ನೊಂದು ರೂಪ ಇಬ್ಬರೂ ಆಯುರ್ವೇದ ಪ್ರವರ್ತಕರು ಎಂದು ತಿಳಿಯಬೇಕು )
********** 

ವೇದವ್ಯಾಸದೇವರು ಘೋಷಿಸಿದ ಔಷಧ

ಅಚ್ಯುತಾನಂತಗೋವಿಂದ
ನಾಮೋಚ್ಚಾರಣಭೀಷಿತಾಃ(ಭೇಷಜಾತ್) |
ನಶ್ಯಂತಿ ಸಕಲಾಃ ರೋಗಾಃ ಸತ್ಯಂ ಸತ್ಯಂ ವದಾಮ್ಯಹಮ್ ||

ಭಗವಂತನು ತನ್ನ ಅಚ್ಯುತ ಅನಂತ ಹಾಗೂ ಗೋವಿಂದ ಎಂಬ ರೂಪಗಳಿಂದ ವಾತ ಪಿತ್ತ ಕಫಗಳೆಂಬ ತ್ರಿಧಾತುಗಳನ್ನು ನಿಯಂತ್ರಿಸುತ್ತಿರುವನು ಆದ್ದರಿಂದ ಈ ಧಾತುಗಳನ್ನು  ನಿಯಂತ್ರಿಸುತ್ತಿರುವನು ಆದ್ದರಿಂದ ಈ ತ್ರಿಧಾತುಗಳ ವೈಶಮ್ಯದಿಂದ ಉಂಟಾಗುವ ಎಲ್ಲ ರೋಗಗಳೂ ಆ ಮೂರು ಭಗವದ್ರೂಪಗಳ ನಾಮಗಳ ಭಕ್ತಿಪೂರ್ವಕ ಉಚ್ಚಾರಣೆ ಎಂಬ ಔಷಧದಿoದ ಪರಿಹಾರ ಹೊಂದುವುವು 
ಶ್ರೀವೇದವ್ಯಾಸದೇವರು ಇದು ಸತ್ಯ  ಇದು ಸತ್ಯ -ಎಂದು ಶಪಥಪೂರ್ವಕವಾಗಿ ಉದ್ಘೋಷಿಸಿರುವರು 
     
          -ಕೃಷ್ಣಾಮೃತಮಹಾರ್ಣ
*************
   
🌷ನಾಮತ್ರಯಜಪದ ಅನುಸಂಧಾನ🌷

ಭಗವಂತನರೂಪಚಿಂತನಯಿಂದೊಡಗೂಡಿದ ನಾಮಸ್ಮರಣೆಯು ಶರಿರಕ್ಕೆ ಉಂಟಾದ ರೋಗ ಹಾಗೂ ಇತರ ಸರ್ವದುಃಖಗಳನ್ನು ಹೋಗಲಾಡಿಸುತ್ತದೆ. ಆದ್ದರಿಂದ ಇದು ಕರ್ತವ್ಯರೂಪವಾಗಿದೆ ಎಂಬುದನ್ನು.ತಿಳಿಸಲು ವೇದವ್ಯಾಸದೇವರಿಂದ ಹೇಳಲ್ಪಟ್ಟ ಅಚ್ಯುತ ,ಅನಂತ ,ಗೋವಿಂದನೆಂಬ  ನಾಮೋಚ್ಚಾರಣ ಔಷಧಿಯಿಂದ ಸಕಲರೋಗಗಳು ನಾಶವಾಗುತ್ತವೆ .ಇದು ಪುನಃ ಪುನಃ ಸತ್ವವೆಂದು ನಾನು ಹೇಳುತ್ತೇನೆ ಎಂಬ ವೇದವ್ಯಾಸದೇವರ ವಾಕ್ಯವನ್ನು ಶ್ರೀಮದಾಚಾರ್ಯರು ನಮಗೆ ಹೇಳುತಿದ್ದಾರೆ .

ಅಚ್ಯುತಃ ಚತುರ್ವಿಧನಾಶರಹಿತಃ |ಅನಂತಃ ದೇಶಕಾಲದ್ಯಪರಿಚ್ಚಿನ್ನಃ |ಗೋವಿಂದಃ ವೇದಪ್ರತಿಪಾದ್ಯಃ ||

ಅಚ್ಯುತನೆಂದರೆ ಚತುರ್ವಿಧನಾಶನಿಲ್ಲದವನು (ಚತುರ್ವಿಧ ನಾಶವೆಂದರೆ ಅನಿತ್ಯತ್ವ ,
ದೇಹಹಾನಿ ,ದುಃಖಪ್ರಾಪ್ತಿ  ಅಪೂರ್ಣತೆಗಳು , ಅನಿತ್ಯತ್ವಂ ದೇಹಹಾನಿಃ. ದುಃಖಪ್ರಾಪ್ತಿರಪೂರ್ಣತಾ|ನಾಶಶ್ಚತುರ್ವೀಧಃ ಪ್ರೋಕ್ತಃ ತದಭಾವೋ ಹರೇಃ ಸದಾ || ಇತಿ ವಾಮನೇ ಗೀತಾತಾತ್ಪರ್ಯ 2-17 

ಅನಂತನೆಂದರೆ 
ದೇಶ ಹಾಗೂ ಕಾಲದ ಪರಿಮಿತಿಗೆ ಒಳಪಡದವನು .

ಗೋವಿಂದನೆಂದರೆ
ವೇದಗಳಿಂದ ಪ್ರತಿಪಾದ್ಯನಾದವನು .

 ಅಚ್ಯುತ ,ಅನಂತ ,ಗೋವಿಂದನೆಂಬ ತ್ರಿರೂಪಾತ್ಮಕನಾದ ಹರಿಯ ನಾಮೋಚ್ಚಾರಣೆಯೆಂಬ ಔಷಧಿ ಯಾರ ಬಳಿ ಇದೆಯೋ ಅವರ ಎಲ್ಲ ರೋಗಗಳು ನಾಶವಾಗುತ್ತವೆ . ಭೇಷಜಾಶಬ್ದದ ಬದಲು ಬಿಷಿತಾಃ ಎಂಬ ಪಾಠಾಂತರದಲ್ಲಿ ರೋಗಗಳೆಲ್ಲವೂ ಭಯವನ್ನು ಹೊಂದುತ್ತವೆ ಅಂದರೆ ನಾಶಹೊಂದುತ್ತದೆ ಎಂದು ಅರ್ಥ .ವೇದವ್ಯಾಸದೇವರು ಹೇಳಿದ ಈ ಮಾತು ಔಪಚಾರಿಕವಲ್ಲವೆಂದು ಸತ್ಯಶಬ್ದದಿಂದ ತಿಳಿಯುತ್ತದೆ .ಅಥವಾ ಭಗವಂತನ ನಾಮೋಚ್ಚರಣೆ ಯಿಂದ ಸಕಲರೋಗನಾಶವಾಗುವುದು ಸತ್ಯ ,ಸತ್ಯ ,ಸತ್ಯವೇ .
ಭಗವಂತನನಾಮೋಚ್ಚಾರಣೆ ಯಿಂದ ಸಕಲರೋಗನಾಶವಾಗುವುದೆಂದು ಸತ್ಯವನ್ನೇ ನಾನು ಹೇಳುತ್ತೇನೆ ಇದರಲ್ಲಿ ಸಂಶಯಬೇಡ .ಸತ್ಯಶಬ್ದವು ಎರಡುಬಾರಿ ಮೇಲಿನ ಶ್ಲೋಕದಲ್ಲಿ ಯಾಕೆ ಹೇಳಲ್ಪಟ್ಟಿದೆಯೆಂದರೆ ದ್ವಿರುಕ್ತಿರಾದರಾತ್ ದ್ವಿರುಕ್ತಿಯಿಂದ ಆದರವು ಹೇಳಲ್ಪಟ್ಟಿದೆ .ಆದ್ದರಿಂದ ಅಚ್ಯುತ ,ಅನಂತ ,ಗೋವಿಂದ ನಾಮೋಚ್ಚಾರಣೆಯು ಕರ್ತವ್ಯವಾಗಿದೆ ಎಂದು ಸ್ಮೃತಿಮುಕ್ತಾವಳಿ ಕೃಷ್ಣಾಚಾರ್ಯರು ಕೃಷ್ಣಾಮೃತಮಹಾರ್ಣವದ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ .

            || ಶ್ರೀಕೃಷ್ಣಾರ್ಪಣಮಸ್ತು ||

ರೋಗನಿವಾರಕ  ಶಿಘ್ರಫಲದಾಯಕ ಶ್ರೀವೇದವ್ಯಾಸದೇವರು ಮತ್ತು ಶ್ರೀಮಧ್ವಾಚಾರ್ಯರು  ಅನುಗ್ರಹಿಸಿದ    ನಾಮತ್ರಯಮಂತ್ರಗಳ ಮಹಿಮೆಯ ಬಗ್ಗೆ ಈಲೇಖನದಲ್ಲಿ ಸಂಗ್ರಹಿಸಿದ್ದೇನೆ .

1) ಶ್ರೀಅಚ್ಯುತಾನಂತ ಸ್ಮೃತಿಮಾತ್ರಾರ್ತಿನಾಶನ ಎಂಬಮಂತ್ರವನ್ನು ಮತ್ತು
ಅಚ್ಯುತಾನಂತಗೋವಿಂದ ನಾಮೋಚ್ಚರಣ ಬೇಷಜಾತ್
( ಪೂರ್ತೀಮಂತ್ರವನ್ನು ಲೇಖನದಲ್ಲಿ ಕೊಡಲಾಗಿದೆ.)

2) ಶ್ರೀಅಚ್ಯುತಾಯನಮ ಶ್ರೀಅನಂತಾಯನಮಃ ಶ್ರೀಗೋವಿಂದಾಯನಮಃ

3) ಶ್ರೀಅಚ್ಯುತಾನಂತಗೋವಿಂದಾಯನಮಃ

ಈ ಮಂತ್ರಗಳಲ್ಲಿ ನಿಮಗೆ ಯಾವುದು ಸುಲಭವೋ ಅದನ್ನು ಯಥಾಶಕ್ತಿ ರೋಗನಿವಾರಣೆಗಾಗಿ  ಯಾರಿಗೂ ರೋಗಭಾಧಿಸದಿರಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸಿ  ಜಪಮಾಡಬೇಕಾಗಿ  ವಿನಂತಿ .
    || ಸರ್ವೇಜನಾಃ ಸುಖಿನೋಭವಂತು ||
***********


ಶ್ರೀಧನ್ವಂತರಿ ಚಿಂತನ 
                  || ಭಾಗ-2 ||

|| ಶ್ರೀಧನ್ವಂತರಿ ಅವತಾರ ವರ್ಣನೆ ||

 ಚಾಕ್ಷುಷ ಮನ್ವಂತರದಲ್ಲಿ ದುರ್ವಾಸ ಋಷಿಗಳ ಶಾಪದಿಂದ ಇಂದ್ರದೇವರು ಸಂಪತ್ತಿನಿಂದ ರಹಿತರಾಗಿ ಚತುರ್ಮುಖಬ್ರಹ್ಮದೇವರ ಹತ್ತಿರ ಬಂದು ತಮ್ಮ ಸ್ಥಿತಿಯನ್ನು ವಿವರಿಸಲು ಬ್ರಹ್ಮದೇವರು ಭಗವಂತನಲ್ಲಿ ಶರಣುಹೋಗಲು ತಿಳಿಸಿದರು ಆ ಪ್ರಕಾರ ಎಲ್ಲದೇವತೆಗಳು ಭಗವಂತನ ವ್ಯಕ್ತಸ್ಥಾನವಾದ ಶ್ವೇತದ್ವೀಪಕ್ಕೆ ಹೋಗಿ ಸ್ತೋತ್ರಮಾಡಿದರು ದೇವತೆಗಳ ಸ್ತೋತ್ರದಿಂದ ಪ್ರಸನ್ನನಾದ ಭಗವಂತನು ಅವರಿಗೆ ಅಭಯನೀಡಿದನು ಧೈತ್ಯರ ಜೋತೆ ಸಂಧಿ ಮಾಡಿಕೊಂಡು ಸಮುದ್ರಮಥನ ಮಾಡಲು ತಿಳಿಸಿದನು ಮಂಧರ ಪರ್ವತವನ್ನು ಕಡೆಗೋಲನ್ನಾಗಿ ವಾಸುಕಿಯನ್ನು ಹಗ್ಗವನ್ನಾಗಿ ಮಾಡಿ ಸಮುದ್ರವನ್ನು ಕಡೆಯುತ್ತಿರಲು ಮೊದಲು ಹಾಲಾಹಲ ವಿಷ ಬಂದಿತು .ಅದನ್ನು ಶ್ರೀವಾಯುದೇವರು ಕುಡಿದು ,ಕಿಂಚಿತ್ತಾದ ವಿಷವನ್ನು ತಿಕ್ಕಿ ನಿರ್ವಿರ್ಯಮಾಡಿ ರುದ್ರದೇವರಿಗೆ ಕೊಟ್ಟರು ಅವರು ಆ ಅಲ್ಪವಿಷವನ್ನು ಜಿರ್ಣಿಸಿಕೋಳ್ಳಲಾಗದೇ ನೀಲಕಂಠರಾದರು ಮತ್ತೆ ಮಥನ ಕಾರ್ಯ ಮುಂದುವರಿಸಲು ಕಾಮಧೇನು ಬಂದಿತು ಅದನ್ನು ಯಜ್ಞ ಮಾಡುವ ಋಷಿಗಳು ಸ್ವೀಕರಿಸಿದರು ನಂತರ ಉಚೈಶ್ರವಸ್ ಕುದುರೆ ಬರಲು ಅದನ್ನು ಬಲಿರಾಜರು ಸ್ವೀಕರಿಸಿದರು ಐರಾವತ ಆನೆಯು ಬಂದಿತು .ಅದನ್ನು ಇಂದ್ರದೇವರು ತೆಗೆದುಕೊಂಡರು ಪಾರಿಜಾತವೆಂಬ ಕಲ್ಪವೃಕ್ಷ ಬರಲು ಅದು ದೇವಲೋಕವನ್ನು ಅಲಂಕರಿಸಿತು .ಅಪ್ಸರಾಸ್ತ್ರೀಯರು ಹುಟ್ಟಿ ಬಂದರು   ಅನಂತರ ಮಥನಕಾರ್ಯ ಮುಂದುವರೆಸಲು ಆಗ

ತತಶ್ಚಾವಿರಭೂತ್ ಸಾಕ್ಷಾಚ್ಛ್ರೀ ರಮಾ ಭಗವತ್ಪ್ರಿಯ |
ರಂಜಯಂತಿ ದಿಶಃ ಕಾಂತ್ಯಾ ವಿದ್ಯುತ್ಸೌಧಾಮನಿ ಯಥಾ ||
      ಶ್ರೀಮದ್ ಭಾಗವತ ಪುರಾಣ 8-8-7

 ಸಾಕ್ಷಾತ್ ಶ್ರೀಮಹಾಲಕ್ಷ್ಮೀದೇವಿ ಆವಿರ್ಭವಿಸಿದಳು ಅವಳು ತನ್ನ ಕಾಂತಿಯಿಂದ ದಿಕ್ಕುಗಳನ್ನು ಬೆಳಗಿಸಿದಳು .
ಅಥೆಂದಿರಾ ಯದ್ಯಪಿ ನಿತ್ಯದೇಹಾ ಬಭೂವ ತತ್ರಪರಯಾ ಸ್ವತನ್ವ |
ಮಹಾಲಕ್ಷ್ಮೀದೇವಿ ನಿತ್ಯಸ್ವರೂಪಳಾಗಿದ್ದರೂ ಇನ್ನೊಂದು ರೂಪದಿಂದ ಕ್ಷೀರಸಾಗರದಲ್ಲಿ ಪ್ರಾದುರ್ಭವಿಸಿದಳು ಎಂದು ಮಹಾಭಾರತ ತಾತ್ಪರ್ಯನಿರ್ಣಯದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ತಿಳಿಸಿದ್ದಾರೆ .

ಒಂದೊಂದು ಗುಣಗಳು ಇದ್ದಾವು ಇವರಲ್ಲಿ ಸಂದಣಿಸಿವೆ ಬಹುದೋಷ |
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು ಇಂದಿರೆ ಪತಿಯ ನೆನೆದಳು |
 -ಲಕ್ಷ್ಮೀ ಶೊಭಾನೆ

ಲಕ್ಷ್ಮೀ ದೇವಿಯು ಎಲ್ಲ ದೇವತೆಗಳಲ್ಲಿ ಒಂದೊಂದು ದೋಷವನ್ನು ಹೇಳಿ ಕೋನೆಗೆ ನಿರ್ದೋಷನಾದ ಸಕಲಗುಣಪರಿಪೂರ್ಣನಾದ ಮೋಕ್ಷದಾತನಾದ  ಶ್ರೀಹರಿಯನ್ನೇ ಲಕ್ಷ್ಮೀ ದೇವಿ ವರಿಸಿದಳು .

ಶ್ರೀಹರಿಯು ಭಾಗ್ಯದೇವತೆಯಾದ ತನ್ನ ಆನಾದಿಪತ್ನಿಯಾದ ಶ್ರೀದೇವಿಗೆ ತನ್ನ ಎದೆಯನ್ನು ಉತ್ತಮ ಅವಾಸ ಸ್ಥಾನವನ್ನಾಗಿ ಮಾಡಿಕೊಟ್ಟನು .
ಮತ್ತೆ ಮಥನಕಾರ್ಯ ಮುಂದುವರಿಯುತ್ತಿರಲು  ಆಗ ಧನ್ವಂತರಿ ರೂಪಿಪರಮಾತ್ಮನು ಅಮೃತಕಲಶವನ್ನು ಕೈಯಲ್ಲಿ ಧರಿಸಿ  ಪ್ರಾದುರ್ಭೂತನಾದನು .

ಧನ್ವಂತರಿಶ್ಚ ಭಗವಾನ್ ಸ್ವಯಮಾಸುದೇವೋ ನಾಮ್ನಾನೃಣಾಂ ಪುರುರುಜಾಂ ರುಜ ಆಶು ಹಂತಿ |
ಯಜ್ಞೇ ಚ ಭಾಗಮಮೃತಾಯುರವಾಪ ಚಾದ್ಧಾ
ಆಯುಶ್ಚ ವೇದಮನುಶಾಸ್ತ್ರವತಿರ್ಯ ಲೋಕೆ ||

ಧನ್ವಂತರಿ ರೂಪದಿಂದ ಅವತರಿಸಿ ಬಹುರೋಗಗಳಿಂದ ಬಳುಲುವ ಸಜ್ಜನರಿಗೆ ತನ್ನ ನಾಮ ಮಾತ್ರದಿಂದಲೆ ನೋವನ್ನು ಬೇಗ ಕಳೆಯುತಾನೆ ಮೋಕ್ಷವನ್ನೂ ನೀಡುತ್ತಾನೆ ‌ ಆಯುರ್ವೇದವನ್ನು ಲೋಕದಲ್ಲಿ ಪ್ರಚುರಗೊಳಿಸುತ್ತಾನೆ .ಯಜ್ಞದಲ್ಲಿ ಆಹುತಿಯನ್ನು ಸ್ವೀಕರಿಸುತ್ತಾನೆ ಎಂದು ಶ್ರೀಮದ್ ಭಾಗವತ  ತಿಳಿಸಿದೆ .

ತತೋ ಭವಾನ್ ದಕ್ಷಿಣ ಬಾಹುನಾ
ಸುಧಾಕಮಂಡಲುಂ ಕಲಶಂ ಚಾಪರೇಣ |
ಪೃಗೃಹ್ಯ ತಸ್ಮಾನ್ನಿರಾಗತ್ ಸಮುದ್ರಾದ್ ಧನ್ವಂತರಿರ್ನಾಮ ಹರಿನ್ಮಣಿದ್ಯುತಿಃ ||

ಇಂದ್ರನೀಲಮಣಿಯಂಥ ಕಾಂತಿಉಳ್ಳ ಧನ್ವಂತರಿರೂಪಿ ಪರಮಾತ್ಮನು ಬಲಗೈಯಿಂದ ಅಮೃತಬಡಿಸುವ ಕಮಂಡಲುವನ್ನು ಎಡಗೈಯಿಂದ ಅಮೃತತುಂಬಿದ ಕಲಶವನ್ನು ಹಿಡಿದು ಸಮುದ್ರದಿಂದ ಸಮುದ್ರದಿಂದ ಉದ್ಭವಿಸಿದನು ಎಂದು ಮಹಾಭಾರತ ತಾತ್ಪರ್ಯನಿರ್ಣಯ(10-21)ದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ತಿಳಿಸಿದ್ದಾರೆ .

ವಿಜನಿತಾಪದವದ್ಯವನಾಯ ಯೋ |
ಹ್ಯಗದಪಾಣಿರಭೂಚ್ಛಮದಾಯಕಃ ||
ಉದಧಿರತ್ನಮಮುಂ ಸಹಜಶ್ರಿಯಂ |
ಹೃದಿ ಭಜೇದಿಭಜೇಡ್ಯಗತಿಂ ಕೃತೀ ||

ವಿಶೇಷವಾಗಿ ಹುಟ್ಟುವ ಆಪತ್ತಿನ ರೂಪದ ದೋಷಗಳ ಕಾಡನ್ನು ಔಷಧಪಾಣಿಯಾಗಿ ಉಪಶಮನಗೊಳಿಸುವ, ಕ್ಷೀರಸಮುದ್ರಕ್ಕೆ ರತ್ನಪ್ರಾಯನಾದ, ಲಕ್ಷ್ಮಿಯೊಂದಿಗೆ ಪ್ರಾದುರ್ಭವಿಸಿದ, ಮರಿಯಾನೆಯಂತೆ ನಡೆದಾಡುವ ಈ ಧನ್ವಂತರಿಯನ್ನು ಕುಶಲನಾದವನು ಹೃದಯದಲ್ಲಿ ಭಜಿಸಬೇಕು .
      - ರುಗ್ಮೀಣೀಶವಿಜಯ17-7

ಸುಬೃಹತ್ಪಯೋಧರಮಿಥಃಪ್ರಸಂಹತಿಪ್ರಕಟೀಭವತ್ಪರಮಯೌವನಾಕೃತಿಃ |
ಅಸುರಾಹಿತಾಂ ವರವಿಲಾಸಿನೀತನುಃ ಪ್ರದದಾವಮುಷ್ಯ ಸುರರಾಶಯೇ ಸುಧಾಮ್ ||
            - ಮಧ್ವವಿಜಯ

ಧನ್ವಂತರಿ ರೂಪವು ರೋಗಪರಿಹಾರಕವಾದ ಔಷಧವನ್ನು ಕೈಯಲ್ಲಿ ಹಿಡಿದಿರುವ ರೂಪ. ಸಮುದ್ರದಲ್ಲಿ ಪ್ರಾದುರ್ಭವಿಸುವ ಮೂಲಕ ಅದಕ್ಕೆ ಶೋಭೆ ನೀಡಿದ ರೂಪ. ಮಹಾಲಕ್ಷ್ಮಿಯೊಂದಿಗೆ ಪ್ರಾದುರ್ಭವಿಸಿದ ರೂಪ ಎಂಬ ಅನೇಕ ವಿಶೇಷಾಂಶಗಳು ಇದರಲ್ಲಿ ನಿರೂಪಿತವಾಗಿವೆ.

ಧಂ ಧನ್ವಂತರಿ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು ವಿಜಯ ವಿಠ್ಠಲ ಒಲಿವ  ||
***************


ರಚನೆ : ಶ್ರೀ ಜಗನ್ನಾಥ ದಾಸರು 



ಎಲ್ಲ ರೋಗದ ಉಪಶಾಂತಿಗಾಗಿ ಶ್ರೀ ಹರಿಕಥಾಮೃತ ಸಾರದಲ್ಲಿ ಶ್ರೀ ದಾಸಾಯ೯ರು ನೀಡಿದ ಈ ಕೆಳಗಿನ ಪದಗಳು ನಿಯಮಿತವಾಗಿ ಪಾರಾಯಣ ಮಾಡಿದಲ್ಲಿ ಬಂದ, ಬರುವ ಆಪತ್ತಿನಿಂದ ಪಾರಾಗಬಹುದು.

1 ನೇ ಸಂಧಿಯ (4)ನೇಯ ನುಡಿ
7 ನೇ ಸಂಧಿಯ (15)ಮತ್ತು(16) ನೇ ನುಡಿ
32 ನೇ ಸಂಧಿಯ (41) ನೇಯ ನುಡಿಗಳನ್ನು ಶ್ರೀ ಧನ್ವಂತ್ರಿ ನಾಮಕ ಬಾಲಗೊಪಾವಿಠ್ಠಲನಲ್ಲಿ  ವಿಶ್ವಾಸವಿಟ್ಟು ಪಠಿಸಿರಿ  
ಶ್ರೀಮಧ್ವೇಶಾಪ೯ಣಮಸ್ತು

1ನೇ ಸಂಧಿ ಮಂಗಳಾಚರಣಸಂಧಿ 4ನೇ ಪದ
 ಆರುಮೂರೆರಡೊಂದು ಸಾವಿರ 
ಮೂರೆರಡು ಶತಶ್ವಾಸ ಜಪಗಳ
ಮೂರುವಿಧಜೀವರೊಳಗಬ್ಜಕಲ್ಪ ಪರಿಯಂತ l
ತಾ ರಚಿಸಿ ಸಾತ್ವರಿಗೆ ಸುಖ, ಸಂಸಾರ ಮಿಶ್ರರಿಗಧಮಜನರಿಗಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ ll

7ನೇ ಸಂಧಿ ಪಂಚತನ್ಮಾತ್ರ ಸಂಧಿ
15ನೇ ಪದ
ಮತ್ತೆ ಚಿದ್ದೇಹದ ಒಳಗೆ ಎಂಭತ್ತು ಸಾವಿರದೇಳುನೂರಿಪ್ಪತ್ತ ಐದು ನೃಸಿಂಹರೂಪದೊಳಿದ್ದು ಜೀವರಿಗೆ l
ನಿತ್ಯದಲಿ ಹಗಲಿರುಳು ಬಪ್ಪವ ಮೃತ್ಯುವಿಗೆ ಮೃತ್ಯುನೆನಿಸುವ ಭೃತ್ಯವತ್ಸಲ ಭಯನಾಶನ ಭಾಗ್ಯ ಸಂಪನ್ನ ll

16 ನೇ ಪದ
ಜ್ವರನೊಳಿಪ್ಪತ್ತೇಳು ಹರನೊಳಗಿರುವನಿಪ್ಪತ್ತೆಂಟು ರೂಪದಿ
ಎರಡುಸಾವಿರದೆಂಟುನೂರಿಪ್ಪತ್ತರೇಳೆನಿಪ l
ಜ್ವರಹರಾಹ್ವಯ ನಾರಸಿಂಹನ ಸ್ಮರಣೆಮಾತ್ರದಿ ದುರಿತರಾಶಿಗಳಿರದೆ ಪೋಪವು ತರಣಿಬಿಂಬವ ಕಂಡ ಹಿಮದಂತೆ ll

32 ನೇ ಸಂಧಿ
41ನೇ ಪದ
ಪಾಮರರನು ಪವಿತ್ರಗೈಸುವ ಶ್ರೀ ಮುಕುಂದನ ವಿಮಲ ಮಂಗಳ ನಾಮಗಳಿಗಭಿಮಾನಿಯಾದ ಉಷಾಖ್ಯಾದೇವಿಯರು l
ಭೂಮಿಯೊಳಗುಳ್ಳಖಿಳ ಸಜ್ಜನರಾಮಯಾದಿಗಳಳಿದು ಸಲಹಲಿ ಆ ಮರುತ್ತನ ಮನೆಯ ವೈದ್ಯರ ರಮಣಿ ಪ್ರತಿದಿನದಿ ll
ರಚನೆ : ಶ್ರೀ ಜಗನ್ನಾಥ ದಾಸರು 

****

ವೈದ್ಯ ಶಿರೋಮಣಿ-
#ಧನ್ವಂತರಿ #ಜಯಂತಿ ನಿಮಿತ್ತ
🌺🌺🌺🌺🌺🌺🌺
ಅಂಥಿಂಥ ವೈದ್ಯ ಇವನಲ್ಲ. ಇವನಂಥ ವೈದ್ಯ ಇನ್ನಿಲ್ಲ. 
ಏಕಮೇವ. ಅದ್ವಿತೀಯ. 
ಇವನು ಪರಿಹರಿಸದ ರೋಗವಿಲ್ಲ. 
ಅಷ್ಟೇ ಅಲ್ಲ. 
ಇವನ ದೃಷ್ಟಿ ಬಿದ್ದಲ್ಲಿ ರೋಗ ನಿಲ್ಲುವದಿಲ್ಲ. ರೋಗಿ ನಿರೋಗಿ.
ಅಂತಹದೇನು ವಿಶೇಷ - ಶ್ರೀಹರಿ - ದೇವಧನ್ವಂತರಿಯಲ್ಲಿ? -
ಉಳಿದೆಲ್ಲ ವೈದ್ಯರ ಉಪಚಾರ ರೋಗಕ್ಕೆ. ಈತನದಾದರೋ ಮೂಲಕ್ಕೆ.   ರೋಗಮೂಲ ನಿರ್ಮೂಲಕ.
ಏನದು ರೋಗ ಮೂಲ?
ಸಂಸಾರ - ಭವರೋಗವೇ ಎಲ್ಲ ರೋಗಕ್ಕೂ ಮೂಲ. 
ಭವರೋಗ ನಾಶವೇ ಈತನ  super speciality.  
ಇಲ್ಲಿ ಇಂಥ ಮತ್ತೊಬ್ಬರಿಲ್ಲ, 
ಮತ್ತೆ ಮುಂದೆ ಬರುವದೂ ಇಲ್ಲ  ವೇದದ ಮಾತು.
ಎಲ್ಲರ ಭವದ ಬವಣೆ ಬಲ್ಲವನಿವ.  ಈತನಂತೆ, ಈತನಷ್ಟು , ಎಲ್ಲರನ್ನು, ಎಲ್ಲವನ್ನು ಬಲ್ಲವರು ಇನ್ನಿಲ್ಲ.  
ಅದಕ್ಕೆ ಈತ ಜಗದ ವಲ್ಲಭ.  ಶಿರೋಮಣಿ.  ಅನಾದಿಯಿಂದ ಅನಂತ ಜೀವರ ಅರಿವು ಇವನಿಗೆ.  
ಅನಾದಿ ಋಣಾನುಬಂಧ ಇವನದು.
ಅದಕ್ಕಾಗಿ ದನ್ವಂತರಿ ದೃಷ್ಟಿಸಿದರೆ ಸಾಕು. ಮತ್ತೇನು ಬೇಕು?. ಧನ್ಯ ಆ ಜೀವಿ!  
ಆತನ ಹಿಂದು, ಇಂದು, ಮುಂದು ಎಲ್ಲವೂ ಈತನ ಅಂಗೈಯಲ್ಲಿ.  
ತಿಳಿಯಲೂ ಬಲ್ಲ.  ತಿದ್ದಲೂ ಬಲ್ಲ.  ನಿಯಾಮಕನಲ್ಲವೇ!.
ಭವದ ಕರ್ಮ, ಪ್ರಾರಬ್ಧಗಳೇ ಸುಖ ದುಃಖಕ್ಕೆ, ರೋಗ ರುಜಿನಕ್ಕೆ , ಆದಿ ವ್ಕಾಧಿಗೆ    ಕಾರಣ.
ಭವ ರೋಗ ವೈದ್ಯ ಧನ್ವಂತರಿ. 
ಅವರ ಭವಭಯ ನಿವಾರಿಸಿ, 
ಭವ ಪರಿಹರಿಸಿ, ಶಾಶ್ವತ ಸುಖಾನಂದ ಕೊಡುವ ಏಕಮೇವ ವೈದ್ಯಶಿರೋಮಣಿ.
ರೋಗ ಪರಿಹಾರ ಬಗೆ ಹೇಗೆ? -
  .   ಪ್ರಶ್ನೆ ಕೇಳಲು ಬೇಕು. ಹುಡಕಾಡ ಬೇಕು. ತಡಕಾಡ ಬೇಕು. ನೂರೆಂಟು ಪರೀಕ್ಷೆ, ನೂರೆಂಟು ಔಷಧಿ. ಇಷ್ಟಾದರೂ ಗುಣವಾಯಿತೋ ಗುಣವಾಗಲಿಲ್ಲವೋ! ಅನ್ಯ ವೈದ್ಯರದೂ, ರೋಗಿಯದೂ ಹಣೆಬರಹ.  
ಅನ್ಯರಂತಲ್ಲ ಇವನ ಬಗೆ.  
ಈತ ದಿಟ್ಟಿಸಿ ನೋಡಿದರೆ ಸಾಕು. 
ರೋಗಿ ನಿರೋಗಿ. ಎಳ್ಳಷ್ಟೂ ರೋಗವಿಲ್ಲ.
ಇತರರಂತೆ ಇನ್ನಿತರ ಕಹಿ ಸಿಹಿ ಔಷಧಿ ಬೇಡ. ಆಸ್ಪತ್ರೆ ಸೇರ ಬೇಕಿಲ್ಲ  ಆಪರೇಶನ್ ಬೇಡವೇ ಬೇಡ. 
ಹಾಸಿಗೆಯಲ್ಲಿ ಕೊಳೆಯ ಬೇಕಿಲ್ಲ.  ಇಷ್ಟವಾದದ್ದು ಇರಲಿ.
ಇಷ್ಟ ಇಲ್ಲದ್ದು ಬೇಡ. 
ಕಷ್ಟ ಪಡುವದು ಬೇಡ. 
ನಷ್ಟ ಒಂದಿಷ್ಡಿಲ್ಲ. 
ನೋವಿಲ್ಲ. ನಲಿವೇ ಎಲ್ಲ. 
ದುಃಖ ಕಳೆಯುವದು. ಸುಖಉಳಿಯುವದು.
ಆತ ಕೊಡುವ ಔಷಧಿ ಏನು? -
ಸಿಹಿ ಸಿಹಿ ಜೇನು. ಅವನ ನಾಮಾಮೃತ. ದಿವ್ಯ ಚರಿತ. ಸ್ವಾದ ಭರಿತ.
ದಿವ್ಯ ಔಷಧ. 
ನಾಲಿಗೆಗೆ ಭೂಷಣ ನಾರಾಯಣನ ನಾಮ.
Dose ಎಷ್ಟು? ಹೇಗೆ? -
ಚಿಂತೆ ಯಾಕೆ?   
ಭಕ್ತಿ ತುಂಬಿ ತುಳುಕುತ್ತಿದ್ದರೆ ಒಮ್ಮೆ ನಾಮ ಸ್ಮರಣೆ ಸಾಕು.  
ಭಕ್ತಿಯ ಪಕ್ವತೆ ಇನ್ನೂ ಇಲ್ಲ.  ಸರಿ. 
ನಿತ್ಯ ನಾಮಸ್ಮರಣೆ ರೂಢಿಸಿಕೊಳ್ಳಿ.  ಅನುಗ್ರಹ ಪಡೆದುಕೊಳ್ಳಿ. ಇವನಿಗೆ ಇನ್ನೊಮ್ಮೆ ರೋಗ ಬರದಂತೆ ಮಾಡುತ್ತಾನೆ.
ಅದು ಹೇಗೆ? -
ಧರ್ಮವೈದ್ಯನಿವ. ಕರ್ಮವ ಬಲ್ಲ .
ರೋಗ ಮರ್ಮವ ಬಲ್ಲ. 
ಭವರೋಗ ನಿರ್ಮೂಲನ. 
ರೋಗದ ತಾಯಿ ಬೇರೇ ನಾಶ. 
ಮತ್ತೊಮ್ಮೆ ಚಿಗುರಲಸಾಧ್ಯ. 
ತನ್ನ ಪುರ  ವೈಕುಂಠದಲ್ಲಿಡುವ.
ಸುಖದಿ ಲೋಲಾಡಿಸುವ.  
ಅವನ ಪುರಕೆ ಪೋದ ಜನರು ಒಮ್ಮೆಗಾದರೂ ತಿರುಗಿ ಬಾರರೋ!
ಏನು fees? -
ಹೊನ್ನು ಬೇಡ. ಮಣ್ಣು ಬೇಡ. ಕಾಸು ಬೇಡ. ಸಾಲ ಸೋಲದ ತ್ರಾಸು ಬೇಡ.
ದುಬಾರಿಯಲ್ಲ. ಇಷ್ಟು ಸೋವಿ ಇನ್ನಿಲ್ಲ.
ಅಂತಃಕರಣ ಬೇಕು. 
ಅದರ ತುಂಬ ಭಕ್ತಿ ಬೇಕು. 
ಅದರ ಒಂದು ಕೂಗು ಸಾಕು. 
ಮುಖ್ಯ ಪ್ರಾಣನ ನೆನೆಯ ಬೇಕು. 
ಅವನ ತಂದೆ ಧನ್ವಂತರಿ, 
ನಾಳೆ ಅಲ್ಲ  ತಡವಿಲ್ಲ, ಬಂದು ಕಾವ 
ಒಂದು ಕ್ಷಣದಿ.
ಅನ್ಯ ವೈದ್ಯರೇಕೆ? -
ಮತ್ತೇಕೆ ಬೇಕು ಬೇರೆ ವೈದ್ಯ? 
ಸುಲುಭ ದೇವರ ದೇವನಿರಲು..
ಬೇಡ ಬೇರೊಬ್ಬ. 
ದೇವಧನ್ವಂತರಿ ಇರಲು. 
ಸರ್ವ ಶಕ್ತನಿರಲು.
ಬೇರೆ ಮಾರ್ಗವೂ ಬೇಡ. ರಾಜಬೀದಿ ಇರಲು ಮುಳ್ಳುಕಂಟಿ ಯಾತಕೆ?
ಸರಳ ದಾರಿ ಇರಲು ಸುತ್ತು ಹಾಕುವದೇಕೆ? ಸುತ್ತಿ ದಣಿಯುವದೇಕೆ? ನಿರಾಶೆ ಏಕೆ? ಸತ್ವಭರಿತ ಪುರುಂದರ ವಿಠ್ಠಲನಿರಲು. ನೆನೆದವರ ಮನದಲ್ಲಿರುವವನು. ಪ್ರೀತಿಲಿ ಸಲಹುವವನು.
ಅಭಯ ಹಸ್ತ.  
ಅಮೃತ ಹಸ್ತ. 
ಸಮುದ್ರ ಮಂಥಿಸಿದ ಹಸ್ತ. 
ದೇವರ ದೇವ ಧನ್ವಂತರಿ ಹಸ್ತ. 
ಅಮೃತಕಳಶ ಎತ್ತಿ ತಂದ ಹಸ್ತ. 
ಸುಜನರಿಗೆ ಹಂಚಿದ ಹಸ್ತ. 
ಕುಜನರಾ ತರಿದ ಹಸ್ತ. 
ಎತ್ತಿ ತೋರಿದ ಹಸ್ತ. 
ರೋಗ ಕಿತ್ತು ಹಾಕುವಾ ಹಸ್ತ.
ಇಂಥ ಹಸ್ತದ ದರ್ಶನವೇ ಸಾಕು. 
ಅನ್ಯ ವೈದ್ಯರೇಕೆ? ಅನ್ಯ ಔಷಧಿ ಏಕೆ ಎನ್ನುತ್ತಾರೆ ಜ್ಞಾನಿವರೇಣ್ಯ ದಾಸರು.
ದಾಸರ ಅಂತರ್ಗತ ಮುಖ್ಯ ಪ್ರಾಣಾಂತರ್ಗತ ದೇವಧನ್ವಂತರಿಗೆ ನಮೋನಮಃ
- ಡಾ.ವಿಜಯೇಂದ್ರ. ದೇಸಾಯಿ.
*****

ಸರ್ವಜನ ಸುಖಿನೋಭವಂತು ಶುಭ ವಂದನೆಗಳು.

ಜಗತ್ತಿನ ಮೊದಲ ವೈದ್ಯ ವಿಷ್ಣುವಿನ ಅವತಾರ ಧನ್ವಂತರಿ ದೇವರ ಮಂತ್ರ ಸರ್ವರೋಗಕ್ಕೂ ಪರಿಹಾರ.. ಇಲ್ಲಿದೆ ನೋಡಿ..

ಧನ್ವಂತರಿ

ಹಿಂದೂ ಸಂಪ್ರದಾಯದಲ್ಲಿ ವಿಷ್ಣುವಿನ ಅವತಾರ. ವೇದ ಹಾಗು ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಆಯುರ್ವೇದದ ದೇವತೆ ಕೂಡ ಧನ್ವಂತರಿ. ಹಿಂದೂ ಸಂಪ್ರದಾಯದಲ್ಲಿ ಆಯುರಾರೋಗ್ಯ ಬಯಸುವವರು ಧನ್ವಂತರಿಯ ಕುರಿತು ಪ್ರಾರ್ಥನೆ ಮಾಡುವುದು ಸಾಮಾನ್ಯ.

ಪುರಾಣ

ಧನ್ವಂತರಿ ಭಾರತದ ಮೊದಲ ವೈದ್ಯನೆಂಬ ಪ್ರತೀತಿ ಹಾಗು ನಂಬಿಕೆ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿಕೆಗಳ ಪಾರಿಸರಿಕ ಬಳಕೆಯಿಂದ ಔಷಧ ತಯಾರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ.

ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ

ಎಂಬ ಶ್ಲೋಕದಂತೆ ಕ್ಷೀರ ಸಮುದ್ರ ಮಥನ ಕಾಲದಲ್ಲಿ ದಿವ್ಯ ಗಂಧಾನುಲೇಪಿತನಾಗಿ ಅಮೃತ ಕಲಶ ಕೈಯಲ್ಲಿ ಹಿಡಿದು ಮಹಾವಿಷ್ಣು ಧನ್ವಂತರಿಯ ಅವತಾರ ತಾಳಿದನು ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ.

ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ನಂಬಲಾಗಿದೆ..
ಧನು+ಏವ+ಅಂತಃ+ಅರಿ=ಧನ್ವಂತರಿ(ಸರ್ಜನ್),

ಧನುಷಾ+ತರತೇ+ತಾರಯತೇ+ಪಾಪಾತ್=ಧನ್ವಂತರಿ(ಪಾಪ ವಿಮುಕ್ತಿ)

ಎಂಬುದು ಧನ್ವಂತರಿ ಪದದ ನಿಷ್ಪತವಿವಿಧೌಷಧೀನಾಂ

ನಮಾಮಿ ಧನ್ವಂತರಿಯಾದಿದೇವಂ ಸುರಾಸುರೈರ್ವಂದಿತ ಪಾದಪದ್ಮಂ ಲೋಕೇಜರಾಋಗ್ವಯ ಮೃತ್ಯುನಾಶಂ ದಾತಾರಮೀಶಂ ವಿಬಣ್ಣಿಸಲಾಗಿದೆ
ಎಂಬ ಶ್ಲೋಕದೊಂದಿಗೆ ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿ ಕಾರ್ಯ ಆರಂಭಿಸಿದರೆ ದಿನವಿಡೀ ಚೈತನ್ಯಪೂರ್ಣತೆ ಉಳಿಯುತ್ತದೆ ಎನ್ನಲಾಗಿದೆ.ಧನ್ವಂತರಿ ಸುಪ್ರಭಾತ, ಧನ್ವಂತರಿ ಪ್ರಪತ್ತಿ, ಧನ್ವಂತರಿ ಸ್ಮೃತಿಗಳಲ್ಲಿ ಧನ್ವಂತರಿ ದೇವರ ವಿಶೇಷತೆಯನ್ನು ಬಣ್ಣಿಸಲಾಗಿದೆ

ಈ ಕೆಳಗಿರುವ ಸ್ತೋತ್ರವನ್ನು ನಿತ್ಯ ಪಠಿಸಿ.. ಆರೋಗ್ಯದಿಂದಿರಿ..

ನಮೋ ಭಗವತೇ ಮಹಾಸುದರ್ಶನಾಯ
ವಾಸುದೇವಾಯ ಧನ್ವಂತರಯೇ 
ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯ
ಸರ್ವರೋಗ ನಿವಾರಣಾಯ
ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ
ಶ್ರೀ ಮಹಾವಿಷ್ಣು ಸ್ವರೂಪ 
ಶ್ರೀ ಧನ್ವಂತರೀ ಸ್ವರೂಪ 
ಶ್ರೀ ಶ್ರೀ ಶ್ರೀ 
ಔಷಧಚಕ್ರ ನಾರಾಯಣಾಯ ಸ್ವಾಹಾ ||.
***

🕉️ ಓಂ ಶ್ರೀ ಗುರುಭ್ಯೋ ನಮಃ 🕉️                                                                                      ‌                                                                                                                   ‌ಶ್ರೀ ಧನ್ವಂತರೀ ಅಷ್ಟೋತ್ತರ ಶತನಾಮಾವಳಿ

ಓಂ ನಮೋ ಭಗವತೇ ವಾಸುದೇವಾಯ ನಮಃ
ಓಂ ಧನ್ವಂತರಯೇ ಅಮೃತ ಕಲಶ ಹಸ್ತಾಯ ನಮಃ
ಓಂ ಸರ್ವಾಮಾಯ ನಾಶನಾಯ ನಮಃ
ಓಂ ತ್ರಿಲೋಕ್ಯನಾಧಾಯ ನಮಃ
ಓಂ ಶ್ರೀ ಮಹಾ ವಿಷ್ಣವೇ ನಮಃ
ಓಂ ಧನ್ವಂತರಯೇ ನಮಃ
ಓಂ ಆದಿದೇವಾಯ ನಮಃ
ಓಂ ಸುರಾಸುರವಂದಿತಾಯ ನಮಃ
ಓಂ ವಯಸ್ತೂಪಕಾಯ ನಮಃ
ಓಂ ಸರ್ವಾಮಯಧ್ವಂಶ ನಾಯ ನಮಃ
ಓಂ ಭಯಾಪಹಾಯೈ ನಮಃ
ಓಂ ಮೃತ್ಯುಂಜಯಾಯ ನಮಃ
ಓಂ ವಿವಿಧೌಧಧಾತ್ರೇ ನಮಃ
ಓಂ ಸರ್ವೇಶ್ವರಾಯ ನಮಃ
ಓಂ ಶಂಖಚಕ್ರ ಧರಾಯ ನಮಃ
ಓಂ ಅಮೃತ ಕಲಶ ಹಸ್ತಾಯ ನಮಃ
ಓಂ ಶಲ್ಯ ತಂತ್ರ ವಿಶಾರದಾಯ ನಮಃ
ಓಂ ದಿವ್ಯೌಷಧಧರಾಯ ನಮಃ
ಓಂ ಕರುಣಾಮೃತಸಾಗಾರಾಯ ನಮಃ
ಓಂ ಸುಖ ಕಾರಾಯ ನಮಃ
ಓಂ ಶಸ್ತ್ರಕ್ರಿಯಾ ಕುಶಲಾಯ ನಮಃ
ಓಂ ದೀರಾಯ ನಮಃ
ಓಂ ತ್ರೀಹಾಯ ನಮಃ
ಓಂ ಶುಭ ದಾಯ ನಮಃ
ಓಂ ಮಹಾ ದಯಾಳವೇ ನಮಃ
ಓಂ ಸಾಂಗಾಗತವೇದವೇದ್ಯಾಯ ನಮಃ
ಓಂ ಭಿಷಕ್ತಮಾಯ ನಮಃ
ಓಂ ಪ್ರಾಣದಾಯ ನಮಃ
ಓಂ ಆರ್ತತ್ರಾಣಪರಾಯಣಾಯ ನಮಃ
ಓಂ ಆಯುರ್ವೇದಪ್ರಚಾರಾಯ ನಮಃ
ಓಂ ಅಷ್ಟಾಂಗಯೋಗನಿಪುಣಾಯ ನಮಃ
ಓಂ ಜಗದುದ್ಧಾರಕಾಯ ನಮಃ
ಓಂ ಹನೂತ್ತಮಾಯ ನಮಃ
ಓಂ ಸರ್ವಜ್ಞಾಯೈ ನಮಃ
ಓಂ ವಿಷ್ಣವೇ ನಮಃ
ಓಂ ಸಮಾನಾಧಿ ವರ್ಜಿತಾಯ ನಮಃ
ಓಂ ಸರ್ವಪ್ರಾಣೀಸುಕೃತೇ ನಮಃ
ಓಂ ಸರ್ವ ಮಂಗಳಕಾರಾಯ ನಮಃ
ಓಂ ಸರ್ವಾರ್ಧದಾತ್ರೇಯ ನಮಃ
ಓಂ ಮಹಾಮೇಧಾವಿನೇ ನಮಃ
ಓಂ ಅಮೃತತಾಯ ನಮಃ
ಓಂ ಸತ್ಯಾಸಂಧಾಯ ನಮಃ
ಓಂ ಆಶ್ರಿತ ಜನವತ್ಸಲಾಯ ನಮಃ
ಓಂ ಅಮೃತ ವಪುಷೇ ನಮಃ
ಓಂ ಪುರಾಣ ನಿಲಯಾಯ ನಮಃ
ಓಂ ಪುಂಡರೀಕಾಕ್ಷಾಯ ನಮಃ
ಓಂ ಪ್ರಾಣ ಜೀವನಾಯ ನಮಃ
ಓಂ ಜನ್ಮಮೃತ್ಯುಜರಾಧಿಕಾಯ ನಮಃ
ಓಂ ಸಾಧ್ಗತಿಪ್ರದಾಯಿ ನಮಃ
ಓಂ ಮಹಾತ್ಸಾಹಾಯೈ ನಮಃ
ಓಂ ಸಮಸ್ತ ಭಕ್ತ ಸುಖ ಧಾತ್ರೇಯ ನಮಃ
ಓಂ ಸಹಿಷ್ಣವೇ ನಮಃ
ಓಂ ಶುದ್ಧಾಯ ನಮಃ
ಓಂ ಸಮಾತ್ಮನೇ ನಮಃ
ಓಂ ವೈದ್ಯ ರತ್ನಾಯ ನಮಃ
ಓಂ ಅಮೃತ್ಯವೇ ನಮಃ
ಓಂ ಮಹಾಗುರವೇ ನಮಃ
ಓಂ ಅಮೃತಾಂಶೋದ್ಭವಾಯೈ ನಮಃ
ಓಂ ಕ್ಷೇಮಕೃತೇ ನಮಃ
ಓಂ ವಂಶವರ್ದರಾಯ ನಮಃ
ಓಂ ವೀತ ಭಯಾಯ ನಮಃ
ಓಂ ಪ್ರಾಣಪ್ರದೇ ನಮಃ
ಓಂ ಕ್ಷೀರಾಬ್ಧಿಜನ್ಮನೇ ನಮಃ
ಓಂ ಚಂದ್ರಸಹೋದರಾಯ ನಮಃ
ಓಂ ಸರ್ವಲೋಕ ವಂದಿತಾಯ ನಮಃ
ಓಂ ಪರಬ್ರಹ್ಮನೇ ನಮಃ
ಓಂ ಯಜ್ಞಬೋಗೀಧರೇನಯ ನಮಃ
ಓಂ ಪುಣ್ಯ ಶ್ಲೋಕಾಯ ನಮಃ
ಓಂ ಪೂಜ್ಯ ಪಾದಾಯ ನಮಃ
ಓಂ ಸನಾತನ ತಮಾಯ ನಮಃ
ಓಂ ಸ್ವಸ್ಥಿತಾಯೇ ನಮಃ
ಓಂ ದೀರ್ಘಾಯುಷ್ಕಾರಾಕಾಯ ನಮಃ
ಓಂ ಪುರಾಣ ಪುರುಷೋತ್ತಮಾಯ ನಮಃ
ಓಂ ಅಮರಪ್ರಭವೇ ನಮಃ
ಓಂ ಅಮೃತಾಯ ನಮಃ
ಓಂ ಔಷದಾಯ ನಮಃ
ಓಂ ಸರ್ವಾನುಕೂಲಾಯ ನಮಃ
ಓಂ ಶೋಕನಾಶನಾಯ ನಮಃ
ಓಂ ಲೋಕಬಂಧವೇ ನಮಃ
ಓಂ ನಾನಾರೋಗಾರ್ತಿಪಂಜನಾಯ ನಮಃ
ಓಂ ಪ್ರಜಾನಾಂಜೀವ ಹೇತವೇ ನಮಃ
ಓಂ ಪ್ರಜಾರಕ್ಷಣ ದೀಕ್ಷಿತಾಯ ನಮಃ
ಓಂ ಶುಕ್ಲ ವಾಸನೇ ನಮಃ
ಓಂ ಪುರುಷಾರ್ಧ ಪ್ರದಾಯ ನಮಃ
ಓಂ ಪ್ರಶಾಂತಾತ್ಮನೇ ನಮಃ
ಓಂ ಭಕ್ತ ಸರ್ವಾರ್ಧ ಪ್ರದಾತ್ರೇನಯ ನಮಃ
ಓಂ ಮಹೈಶ್ವರ್ಯಾಯ ನಮಃ
ಓಂ ರೋಗಾಶಲ್ಯಹೃದಯೇ ನಮಃ
ಓಂ ಚತುರ್ಭುಜಾಯ ನಮಃ
ಓಂ ನವರತ್ನಭುಜಾಯ ನಮಃ
ಓಂ ನಿಸ್ಸೀಮಮಹಿಮ್ನೇ ನಮಃ
ಓಂ ಗೋವಿಂದಾನಾಂಪತಯೇ ನಮಃ
ಓಂ ತಿಲೋದಾಸಾಯ ನಮಃ
ಓಂ ಪ್ರಾಣಾಚಾರ್ಯಾಯ ನಮಃ
ಓಂ ಬೀಷ್ಮಣಯೇ ನಮಃ
ಓಂ ತ್ರೈಲೋಕ್ಯನಾಧಾಯ ನಮಃ
ಓಂ ಭಕ್ತಿಗಮ್ಯಾಯ ನಮಃ
ಓಂ ತೇಜೋನಿಧಯೇ ನಮಃ
ಓಂ ಕಾಲಕಾಲಾಯ ನಮಃ
ಓಂ ಪರಮಾರ್ಧ ಗುರವೇ ನಮಃ
ಓಂ ಜಗದಾನಂದಕಾರಕಾಯ ನಮಃ
ಓಂ ಆದಿ ವೈದ್ಯಾಯ ನಮಃ
ಓಂ ಶ್ರೀರಂಗನಿಲಯಾಯ ನಮಃ
ಓಂ ಸರ್ವಜನ ಸೇವಿತಾಯ ನಮಃ
ಓಂ ಲಕ್ಷ್ಮೀ ಪತಯೇ ನಮಃ
ಓಂ ಸರ್ವಲೋಕ ರಕ್ಷಕಾಯ ನಮಃ
ಓಂ ಕಾವೇರಿಸ್ನಾತ ಸಂತುಷ್ಟಯ ನಮಃ
ಓಂ ಸರ್ವಾಭೀಷ್ಟಪ್ರದಾಯವಿಭೂಷಿತಾಯೇ ನಮಃ

|| ಇತಿ ಶ್ರೀ ಧನ್ವಂತರೀ ಅಷ್ಟೋತ್ತರ ಶತನಾಮಾವಳಿ ಸಮಾಪ್ತಂ ||
****

No comments:

Post a Comment