ಯಾವುದೇ ಸಂಸ್ಕಾರ ಅಥವ ವೈದಿಕ ಕರ್ಮವನ್ನು ಮಾಡುವ ಕರ್ತನು ಪರಿಶುದ್ಧವಾಗಿದ್ದುಕೊಂಡು (ಪ್ರಾಥರಾಹ್ನಿಕ ವಿಧಿಯನ್ನು ಮಾಡಿಕೊಂಡು) ಶುದ್ಧಮನಸ್ಸಿನಿಂದ ಮಾಡಬೇಕು. (ಶೌಚ).
"ಶೌಚಂ ತು ದ್ವಿವಿದಂ ಪ್ರೋಕ್ತಂ ಬಾಹ್ಯಾಮಾಂತರಮೇವ ಚ |
ಮೃಜ್ಜಲಾಭ್ಯಾಂ ಸ್ಮೃತಂ ಬಾಹ್ಯಂ ಭಾವಶುದ್ಧಿರಥಾಂತರಮ್ ||"
ಶೌಚವಿಧಿಯು ಬಾಹ್ಯ (ಹೊರಗಿನ) ಮತ್ತು ಅಂತರ್ (ಮನಸ್ಸು, ಚಿತ್ತ, ಹೃದಯ) ವೆಂದು ಎರಡು ವಿಧವಾಗಿದೆ.
ಇವುಗಳಲ್ಲಿ ಮಣ್ಣು ಮತ್ತು ನೀರುಗಳಿಂದ ಮಾಡುವ ಶುದ್ಧಿಗೆ ಬಾಹ್ಯ ಶೌಚವೆಂತಲೂ, ಕಾಮಕ್ರೋದಾದಿಗಳನ್ನು ಬಿಟ್ಟು ಶಮದಮಾದಿ ಸಂಪತ್ತುಗಳಿಂದ ಮಾಡಿದ ಚಿತ್ತ ಶುದ್ಧಿಗೆ ಅಂತರ್ ಶೌಚವೆಂತಲೂ ಹೆಸರು.
ಈ ಬಾಹ್ಯ ಶೌಚ ಮತ್ತು ಅಂತರ್ ಶೌಚ ಕಾರ್ಯವೇ (ಎರಡೂ ಸೇರಿ) ಪ್ರಾತರಾಹ್ನಿಕ ವಿಧಿ ಯಾಗಿರುತ್ತದೆ.
ಪ್ರಾತರಾಹ್ನಿಕ ವಿಧಿ = ಪ್ರಾತಃ ಕಾಲದಲ್ಲಿ ಮಾಡತಕ್ಕ ಸ್ನಾನ, ಸಂಧ್ಯಾವಂದನಾದಿಗಳು.
ಪ್ರಾತರ್ + ಆಹ್ನಿಕ + ವಿಧಿ = ಪ್ರಾತರಾಹ್ನಿಕ ವಿಧಿ.
ಪ್ರಾತರ್ = ಪ್ರಾತಃಕಾಲ, ಮುಂಜಾನೆ.
ಆಹ್ನಿಕ = ನಿತ್ಯಕರ್ಮ, ಪ್ರತಿದಿನದ ಕರ್ತವ್ಯ.
ವಿಧಿ = ನಿಯಮ, ಕಟ್ಟಲೆ.
ಬ್ರಾಹ್ಮ ಮುಹೂರ್ತದಲ್ಲಿ ಎದ್ದು ಮಾಡುವ ಸ್ನಾನ, ಸಂಧ್ಯಾವಂದನೆ, ದೇವತಾಧ್ಯಾನ/ಪೂಜೆ ಮುಂತಾದುವುಗಳು ಪ್ರಾತರಾಹ್ನಿಕ ವಿಧಿಗಳು.
ಈ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ಜನಸಂಚಾರವಿಲ್ಲದೆ ನಿಃಶಬ್ದವಾಗಿರುವ ಕಾರಣದಿಂದಲೂ, ಇಂದ್ರಿಯಗಳೆಲ್ಲ ಸ್ವಸ್ಥವಾಗಿರುವುದರಿಂದಲೂ ಏಕಾಗ್ರಚಿತ್ತದಿಂದ ದೇವತಾ ಧ್ಯಾನಕ್ಕೆ ಯೋಗ್ಯವಾದ ಸಮಯವಾಗಿರುತ್ತದೆ.
ಸ್ನಾನ ಮಾಡುವುದು, ಶುಚಿಯಾದ ಬಟ್ಟೆಯನ್ನು ಧರಿಸುವುದು, ತಿಲಕವನ್ನು ಇಟ್ಟುಕೊಳ್ಳುವುದು, ಆಚಮನ ಮಾಡುವುದು ಮತ್ತು ಪವಿತ್ರ ಧಾರಣೆ ಮಾಡುವುದು, ಮುಂತಾದುವುಗಳನ್ನು ಮಾಡುವುದರಿಂದ ಬಾಹ್ಯ ಶುದ್ಧಿಯಾಗುತ್ತದೆ.
(ಸ್ನಾನಕ್ಕೂ ನೀರು, ಆಚಮನಕ್ಕೂ ನೀರು ಉಪಯೊಗಿಸುವುದು. ಸ್ನಾನದಿಂದ ದೇಹದ ಹೊರಭಾಗ ಶುದ್ಧವಾದರೆ; ಆಚಮನದಿಂದ ದೇಹದ ಒಳಗೆ, ಮನಸ್ಸು-ಚಿತ್ತ-ಹೃದಯದ ಹೊರಗೆ ಶುದ್ಧವಾಗುತ್ತದೆ. ಆದುದರಿಂದ ಇವೆಲ್ಲವೂ ಬಾಹ್ಯಶುದ್ಧಿಯಾಗಿರುತ್ತದೆ.)
ಗರ್ವ, ಅಸೂಯೆ ಮುಂತಾದ ಯಾವ ದುರ್ಭಾವನೆಗೂ ಎಡೆಗೊಡದೆ, ಚಿತ್ತಶಾಂತಿಯುಳ್ಳವನಾಗಿ ಶ್ರದ್ಧೆಯಿಂದ ದೇವತಾ ಧ್ಯಾನ ಮಾಡುವುದರಿಂದ ಅಂತರ್ ಶುದ್ಧಿಯಾಗುತ್ತದೆ.
ಆಚಮನವನ್ನು ಎಷ್ಟು ಸಲ ಮಾಡಬೇಕು ಎಂದರೆ ಶಾಸ್ತ್ರ ಹೇಳುತ್ತದೆ:-
ದ್ವಿರಾಚಮೇತ್ತುಸರ್ವತ್ರ ವಿಣ್ಮೂತ್ರೋತ್ಸರ್ಜನೇ ತ್ರಿಶಃ |
ಭೋಜನಾಂತೇ ಚತುರ್ವಾರಂ ಸಂಗಮಾಂತೇ ತು ಪಂಚಶಃ ||
ಅಂದರೆ ಸಾಮಾನ್ಯವಾಗಿ ಆಚಮನವನ್ನು ಎರಡು ಬಾರಿ ಮಾಡಬೇಕು. ಮಲಮೂತ್ರೋತ್ಸರ್ಗದ ಬಳಿಕ ಮೂರು ಬಾರಿಯೂ, ಬೋಜನದ ಬಳಿಕ ನಾಲ್ಕು ಬಾರಿಯೂ, ಸಂಗಮದ ಬಳಿಕ ಐದು ಬಾರಿಯೂ ಆಚಮನವು ವಿಹಿತವಾಗಿದೆ.
ಜಾತಾ ಶೌಚ, ಮೃತ ಶೌಚಾದಿಗಳ ನಿವೃತ್ತಿಯಾಗಬೇಕಿದ್ದರೆ ಆಚಮನವೊಂದರಿಂದಲೆ ಶುದ್ಧವಾಗುವುದಿಲ್ಲ. ಪಂಚಗವ್ಯ ಪ್ರಾಶನ ಮಾಡಬೇಕು.
*****
|| ಪಂಚಗವ್ಯಮೇಲನ ಪ್ರಾಶನ ವಿಧಿಃ ||
ಗೋಮೂತ್ರ, ಗೋಮಯ, ಗೋಕ್ಷೀರ, ಗೋದಧಿ, ಗೋಘ್ರತ – ಇವು ಪಂಚಗವ್ಯಗಳು.
ಇವುಗಳನ್ನು ಸಂಗ್ರಹಿಸಿ, ಆಚಮನ ಪ್ರಾಣಾಯಾಮಗಳನ್ನು ಮಾಡಿ, ದೇಶ, ಕಾಲಗಳನ್ನು ಉಚ್ಛರಿಸಿ, “ಮಮ ಶ್ರುತಿಸ್ಮೃತಿಪುರಾಣೋಕ್ತಫಲಪ್ರಾಪ್ತ್ಯಾರ್ಥಂ ಪಂಚಗವ್ಯ ಮೇಲನಂ ಕರಿಷ್ಯೇ||” ಎಂದು ಸಂಕಲ್ಪ ಮಾಡಬೇಕು.
ಆಮೇಲೆ ಈ ಕೆಳಗಿನ ಐದು ಮಂತ್ರಗಳಿಂದ ಪಂಚಗವ್ಯ ವಸ್ತುಗಳನ್ನು ಒಂದೊಂದಾಗಿ ಪಾತ್ರೆಯಲ್ಲಿ ಹಾಕಬೇಕು, ನಂತರ ಆರನೆಯ ಮಂತ್ರದಿಂದ ಕುಶೋದಕವನ್ನು ಹಾಕಬೇಕು.
ಓಂ|| ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋನಃ ಪ್ರಚೋದಯಾತ್ ||
(ಈ ಮಂತ್ರದಿಂದ ಗೋಮೂತ್ರವನ್ನು ಹಾಕಬೇಕು.)
ಓಂ|| ಗಂಧದ್ವಾರಾಂ ದುರಾಧರ್ಷಾಂ ನಿತ್ಯಪುಷ್ಟಾಂಕರೀಷಿಣೀಂ | ಈಶ್ವರೀಂ ಸರ್ವ ಭೂತಾನಾಂತಾಮಿಹೋಪಹ್ವಯೇ ಶ್ರೀಯಂ ||
(ಈ ಮಂತ್ರದಿಂದ ಗೋಮಯವನ್ನು ಹಾಕಬೇಕು.)
ಓಂ|| ಆಪ್ಯಾಯಸ್ವ ಸಮೇತುತೇ ವಿಶ್ವತಃ ಸೋಮವೃಷ್ಟ್ಯಂ | ಭವಾವಾಜಸ್ಯ ಸಂಗಥೇ ||
(ಈ ಮಂತ್ರದಿಂದ ಗೋಕ್ಷೀರವನ್ನು ಹಾಕಬೇಕು.)
ಓಂ|| ದಧಿಕ್ರಾಂವ್ಣೋ ಅಕಾರಿಷಂ ಜಿಷ್ಣೋ ರಶ್ವಸ್ಯ ವಾಜಿನಃ | ಸುರಭಿನೋ ಮುಖಾಕರತ್ಪ್ರಣ ಆಯುಂಷಿತಾರಿಷತ್ ||
(ಈ ಮಂತ್ರದಿಂದ ಗೋದಧಿಯನ್ನು ಹಾಕಬೇಕು.)
ಓಂ|| ಶುಕ್ರಮಸಿಜ್ಯೋತಿರಸಿ ತೇಜೋಸಿ ||
(ಈ ಮಂತ್ರದಿಂದ ಗೋಘ್ರತವನ್ನು ಹಾಕಬೇಕು.)
ಓಂ|| ದೇವಸ್ಯತ್ವಾ ಸವಿತುಃ ಪ್ರಸವೇಶ್ವಿನೋರ್ಬಾಹುಭ್ಯಾಂ ಪೂಷ್ಣೋ ಹಸ್ತಾಭ್ಯಾಂ ||
(ಈ ಮಂತ್ರದಿಂದ ದರ್ಬೆಗಳ ಮೂಲಕ ನೀರು ಸುರಿದು ಕುಶೋದಕವನ್ನು ಹಾಕಬೇಕು.)
ನಂತರ:
ಓಂ|| ಆಪೋ ಹಿ ಷ್ಠಾ . . . . . . .||
(ಈ ಮಂತ್ರವನ್ನು ಉಚ್ಛರಿಸುತ್ತ ಆ ದರ್ಬೆಗಳ ಸೂಡಿಯಿಂದ ಮಥಿಸಿ ಎಲ್ಲವನ್ನೂ ಒಂದುಗೂಡಿಸಬೇಕು.)
ನಂತರ ಪುನ: ಆಚಮನ ಪ್ರಾಣಾಯಾಮಗಳನ್ನು ಮಾಡಿ “ಶರೀರವಾಗ್ಮನಃ ಶುದ್ಧ್ಯರ್ಥಂ ಪಂಚಗವ್ಯಪ್ರಾಶನಂ ಕರಿಷ್ಯೇ ||” ಎಂದು ಸಂಕಲ್ಪಿಸಬೇಕು.
ಓಂ|| ಯತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ | ಪ್ರಾಶನಂ ಪಂಚಗವ್ಯಸ್ಯ ದಹತ್ವಗ್ನಿರಿವೇಧನಂ ||
(ಈ ಮಂತ್ರದಿಂದ ಪ್ರಾಶನ ಮಾಡಿ ಆಚಮನ ಮಾಡುವುದು. ಈ ರೀತಿ ಮೂರಾವರ್ತಿ ಪಂಚಗವ್ಯ ಪ್ರಾಶನವು).
ಇಲ್ಲಿಗೆ ಬಾಹ್ಯಶುದ್ಧಿಯಾಗುತ್ತದೆ.
ನಂತರ ಅಂತರ್ ಶುದ್ಧಿಯನ್ನು ಮಾಡಲಿಕ್ಕೆ ಸಂಧ್ಯಾವಂದನೆ/ದೇವತಾಧ್ಯಾನವನ್ನು ಮಾಡಬೇಕು.
ಈ ರೀತಿ ಬಾಹ್ಯ ಶುದ್ಧಿ ಮತ್ತು ಅಂತರ್ ಶುದ್ಧಿಯಾಗಿದ್ದುಕೊಂಡು ಸಂಸ್ಕಾರ ಅಥವಾ ವೈದಿಕಕರ್ಮವನ್ನು ಮಾಡಬೇಕು.
ಸಂಸ್ಕಾರಗಳು ಸಂಚಿಕೆ – ೨೪ ಪ್ರಾತರಾಹ್ನಿಕ ವಿಧಿಃ ಮತ್ತು ಪಂಚಗವ್ಯ-ಸಂಗ್ರಹ:- ಪಂ. ವಿಜಯೇಂದ್ರ ರಾಮನಾಥ ಭಟ್,
******
ಆಚಮನಮಾಡಿ ಸ್ನಾನ ಸಂಕಲ್ಪ ವನ್ನು ಮಾಡುವುದು
ಆಚಮನಮಾಡಿ
ಶುಭೇ ಶೋಭನೇ ಮಹೂರ್ತೇ-ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ-ಶ್ವೇತವರಾಹಕಲ್ಪೇ-ವೈವಸ್ವತ ಮನ್ವಂತರೇ- ಅಷ್ಟವಿಂಶತಿ ಚತುರ್ಯುಗೇ-ಕಲಿಯುಗೇ-ಪ್ರಥಮಪಾದೇ (ಪ್ರಥಮಚರಣೇ) -ವ್ಯಾವಹಾರಿಕೆ-ಶಾಲಿವಾಹನಶಕೆ -ಬೌದ್ಧಾವತಾರೆ-ಶ್ರೀರಾಮಕ್ಷೆತ್ರೇ-ಅಸ್ಮಿನ್ ವರ್ತಮಾನೇ---- ನಾಮ ಸಂವತ್ಸರೇ -ಉತ್ತರಾ/ದಕ್ಷಿಣಾಯಣೆ -ಋತೌ -ಮಾಸೇ-ಪಕ್ಷೆ-ತಿಥೌ-ವಾಸರೇ-ನಕ್ಷತ್ರೇ-ಯೋಗೆ-ಕರಣೆ-
ಏವಂ ಗುಣವಿಶಿಷ್ಟಾಯಾಂ-ಶುಭತಿಥೌ-ಸಾರ್ಧತ್ರಿಕೋಟಿ ಸಮಸ್ತ ತೀರ್ಥಾಭಿಮಾನಿ ದೇವತಾ ಸನ್ನಿಧೌ, ಸಾಲಿಗ್ರಾಮ,ಚಕ್ರಾಂಕಿತ-ವಿಷ್ಣು-ವೈಷ್ಣವ-ಗೊ-ತುಳಸಿ -ವೃಂದಾವನ ಸನ್ನಿಧೌ- ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಮಧುಸೂದನಪ್ರೀತ್ಯರ್ಥಂ...... ನಂತರ ವಿಧಿ ಹೇಳುವುದು (ಅಂದರೆ ಪ್ರಾತಃ ಸಂಧ್ಯಾಮ್ ಕರಿಷ್ಯೆ / ವೈಶಾಖ ಸ್ನಾನಮ್ ಕರಿಷ್ಯೆ etc)
*****
No comments:
Post a Comment