SEARCH HERE

Tuesday 1 January 2019

gita jayanti day bhagavad gita ಗೀತಾ ಜಯಂತೀ ಭಗವದ್ಗೀತ margashira shukla ekadashi





Solve your problems

 GITA MAHATMYA - भगवद्गीता माहात्म्यं 
(Sri Varaha PuranaAntargata)

धरोवाच ।

भगवन्परेमेशान भक्तिरव्यभिचारिणी ।
प्रारब्धं भुज्यमानस्य कथं भवति हे प्रभो ॥ १॥

श्री विष्णुरुवाच ।

प्रारब्धं भुज्यमानो हि गीताभ्यासरतः सदा ।
स मुक्तः स सुखी लोके कर्मणा नोपलिप्यते ॥ २॥

महापापादिपापानि गीताध्यानं करोति चेत् ।
क्वचित्स्पर्शं न कुर्वन्ति नलिनीदलमम्बुवत् ॥ ३॥

गीतायाः पुस्तकं यत्र यत्र पाठः प्रवर्तते ।
तत्र सर्वाणि तीर्थाणि प्रयागादीनि तत्र वै ॥ ४॥

सर्वे देवाश्च ऋषयो योगिनः पन्नगाश्च ये ।
गोपाला गोपिका वापि नारदोद्धवपार्षदैः ॥

सहायो जायते शीघ्रं यत्र गीता प्रवर्तते ५॥

यत्र गीताविचारश्च पठनं पाठनं श‍ृतम् ।
तत्राहं निश्चितं पृथ्वि निवसामि सदैव हि ॥ ६॥

गीताश्रयेऽहं तिष्ठामि गीता मे चोत्तमं गृहम् ।
गीताज्ञानमुपाश्रित्य त्रींलोकान्पालयाम्यहम् ॥ ७॥

गीता मे परमा विद्या ब्रह्मरूपा न संशयः ।
अर्धमात्राक्षरा नित्या स्वानिर्वाच्यपदात्मिका ॥ ८॥

चिदानन्देन कृष्णेन प्रोक्ता स्वमुखतोऽर्जुनम् ।
वेदत्रयी परानन्दा तत्त्वार्थज्ञानसंयुता ॥ ९॥

योऽष्टादशजपो नित्यं नरो निश्चलमानसः ।
ज्ञानसिद्धिं स लभते ततो याति परं पदम् ॥ १०॥

पाठेऽसमर्थः सम्पूर्णे ततोऽर्धं पाठमाचरेत् ।
तदा गोदानजं पुण्यं लभते नात्र संशयः ॥ ११॥

त्रिभागं पठमानस्तु गङ्गास्नानफलं लभेत् ।
षडंशं जपमानस्तु सोमयागफलं लभेत् ॥ १२॥

एकाध्यायं तु यो नित्यं पठते भक्तिसंयुतः ।
रुद्रलोकमवाप्नोति गणो भूत्वा वसेच्चिरम् ॥ १३॥

अध्यायं श्लोकपादं वा नित्यं यः पठते नरः ।
स याति नरतां यावन्मन्वन्तरं वसुन्धरे ॥ १४॥

गीतायाः श्लोकदशकं सप्त पञ्च चतुष्टयम् ।
द्वौ त्रीनेकं तदर्धं वा श्लोकानां यः पठेन्नरः ॥ १५॥

चन्द्रलोकमवाप्नोति वर्षाणामयुतं ध्रुवम् ।
गीतापाठसमायुक्तो मृतो मानुषतां व्रजेत् ॥ १६॥

गीताभ्यासं पुनः कृत्वा लभते मुक्तिमुत्तमाम् ।
गीतेत्युच्चारसंयुक्तो म्रियमाणो गतिं लभेत् ॥ १७॥

गीतार्थश्रवणासक्तो महापापयुतोऽपि वा ।
वैकुण्ठं समवाप्नोति विष्णुना सह मोदते ॥ १८॥

गीतार्थं ध्यायते नित्यं कृत्वा कर्माणि भूरिशः ।
जीवन्मुक्तः स विज्ञेयो देहान्ते परमं पदम् ॥ १९॥

गीतामाश्रित्य बहवो भूभुजो जनकादयः ।
निर्धूतकल्मषा लोके गीतायाताः परं पदम् ॥ २०॥

गीतायाः पठनं कृत्वा माहात्म्यं नैव यः पठेत् ।
वृथा पाठो भवेत्तस्य श्रम एव ह्युदाहृतः ॥ २१॥

एतन्माहात्म्यसंयुक्तं गीताभ्यासं करोति यः ।
स तत्फलमवाप्नोति दुर्लभां गतिमाप्नुयात् ॥ २२॥

सूत उवाच ।

माहात्म्यमेतद्गीताया मया प्रोक्त सतातनम् ।
गीतान्ते च पठेद्यस्तु यदुक्तं तत्फलं लभेत् ॥ २३॥

॥ इति श्रीवाराहपुराणे श्रीगीतामाहात्म्यं सम्पूर्णम् ॥

👉 GITA MAHATMYA (Sri Varaha PuranaAntargata)

Dharovaacha:

Bhagavan parameshaana bhaktiravyabhichaarinee;
Praarabdham bhujyamaanasya katham bhavati he prabho.

Goddess Earth queries –

(1) O Bhagavan, the Supreme Lord! How can unflinching devotion arise in him who is immersed in his Prarabdha Karmas (worldly life), O Lord ? 

Sri Vishnuruvaacha:

Praarabdham bhujyamaano hi geetaabhyaasaratah sadaa;
Sa muktah sa sukhee loke karmanaa nopalipyate.

Lord Vishnu replies:

(2) Though engaged in performance of worldly duties as a consequence of his past actions, one who regularly involves himself in the study of Gita, enjoys happiness, gets released from the bangs of birth and death; is not bound by Karma and is not touched by the effects of his actions.

Mahaapaapaadipaapaani geetaadhyaanam karoti chet;
Kwachit sparsham na kurvanti nalineedalam ambuvat.

(3) Just as water does not stain the lotus leaf, even great sins do not taint one who regularly devotes his attentions to the study of Bhagavat Gita.

Geetaayaah pustakam yatra yatra paathah pravartate;
Tatra sarvaani teerthaani prayaagaadeeni tatra vai.

(4) All the sacred centres of pilgrimage, like Prayag and other places, dwell in that place where the Gita is kept, and where the Gita is read.

Sarve devaashcha rishayo yoginahpannagaashcha ye;
Gopaalaa gopikaa vaapi naaradoddhava paarshadaih.

(5) All the gods, sages, Yogins, divine serpents, Gopalas, Gopikas (friends and devotees of Lord Krishna), Narada, Uddhava and others (dwell here).

Sahaayo jaayate sheeghram yatra geetaa pravartate;
Yatra geetaavichaarashcha pathanam paathanam shrutam;
Tatraaham nishchitam prithvi nivasaami sadaiva hi.

(6) Help comes quickly where the Gita is recited and, O Dharani... I ever dwell where it is read, heard, taught and contemplated upon!

Geetaashraye’ham tishthaami geetaa me chottamam griham;
Geetaajnaanam upaashritya treen Uokaan paalayaamyaham.

(7) I take refuge in the Gita, and the Gita is My best abode. I protect the three worlds with the knowledge of the Gita.

Geetaa me paramaa vidyaa brahmaroopaa na samshayah;
Ardhamaatraaksharaa nityaa swaanirvaachyapadaatmikaa.

The Gita is My highest science, which is doubtless of the form of Brahman, the Eternal, the Ardhamatra (of the Pranava Om), the ineffable splendour of the Self.

Chidaanandena krishnena proktaa swamukhato’rjuna;
Vedatrayee paraanandaa tatwaarthajnaanasamyutaa.

(9) It was spoken by the blessed Lord Krishna, the all-knowing, through His own mouth, to Arjuna. It contains the essence of the Vedas—the knowledge of the Reality. It is full of supreme bliss.

NOTE: The Gita contains the cream of the Vedas and Upanishads. Hence it is a universal scripture suited for people of all temperaments and for all ages.

Yoashtaadasha japen nityam naro nishchalamaanasah;
Jnaanasiddhim sa labhate tato yaati param padam.

(10) He who recites the eighteen chapters of the Bhagavad Gita daily, with a pure and unshaken mind, attains perfection in knowledge, and reaches the highest state or supreme goal.

Paathe’asamarthah sampoornam tato’rdham paathamaacharet;
Tadaa godaanajam punyam labhate naatra samshayah.

(11) If a complete reading is not possible, even if only half is read, he attains the benefit of giving a cow as a gift. There is no doubt about this.

Tribhaagam pathamaanastu gangaasnaanaphalam labhet;
Shadamsham japamaanastu somayaagaphalam labhet.

(12) He who recites one-third part of it achieves the merit of a bath in the sacred river Ganges; and who recites one-sixth of it attains the merit of performing a SomaYaaga.

Ekaadhyaayam tu yo nityam pathate bhaktisamyutah;
Rudralokam avaapnoti gano bhootwaa vasecchiram.

(13) That person who reads one discourse with supreme faith and devotion attains to the world of Rudra and, having become a Gana (an attendant of Lord Shiva), lives there for many years.

Adhyaayam shlokapaadam vaa nityam yah pathate narah;
Sa yaati narataam yaavanmanwantaram vasundhare.

(14) If one reads a discourse or even a part of a verse daily he, O Earth, retains a human body till the end of a Manvantara; 

Geetaayaah shloka dashakam sapta pancha chatushtayam;
Dwautreenekam tadardhamvaa shlokaanaam yah pathennarah.

Chandralokam avaapnoti varshaanaam ayutam dhruvam;
Geetaapaathasamaayukto mrito maanushataam vrajet.

(15-16) He who repeats ten, seven, five, four, three, two verses or even one or half of it, attains the region of the moon and lives there for 10,000 years. Accustomed to the daily study of the Gita, a dying man comes back to life again as a human being.

Geetaabhyaasam punah kritwaa labhate muktim uttamaam;
Geetetyucchaarasamyukto mriyamaano gatim labhet.

(17) By repeated study of the Gita, he attains liberation. Uttering the word Gita at the time of death, a person attains liberation.

Geetaarthashravanaasakto mahaapaapayuto’pi vaa;
Vaikuntham samavaapnoti vishnunaa saha modate.

(18) Though full of sins, one who is ever intent on hearing the meaning of the Gita, goes to the kingdom of God and rejoices with Lord Vishnu.

Geetaartham dhyaayate nityam kritwaa karmaani bhoorishah;
Jeevanmuktah sa vijneyo dehaante paramam padam.

(19) He who meditates on the meaning of the Gita, having performed many virtuous actions, attains the supreme goal after death. Such an individual should be considered a true Jivanmukta.

Geetaam aashritya bahavo bhoobhujo janakaadayah;
Nirdhootakalmashaa loke geetaa yaataah param padam.

(20) In this world, taking refuge in the Gita, many kings like Janaka and others reached the highest state or goal, purified of all sins.

Geetaayaah pathanam kritwaa maahaatmyam naiva yah pathet;
Vrithaa paatho bhavet tasya shrama eva hyudaahritah.

(21) He who fails to read this “Glory of the Gita” after having read the Gita, loses the benefit thereby, and the effort alone remains.

NOTE: This is to test and confirm the faith of the reader in the Bhagavad Gita, which is not a mere philosophical book but the word of God and should therefore be studied with great faith and devotion. The Gita Mahatmya generates this devotion in one’s heart.

Etanmaahaatmyasamyuktam geetaabhyaasam karoti yah;
Sa tatphalamavaapnoti durlabhaam gatim aapnuyaat.

(22) One who studies the Gita, together with this “Glory of the Gita”, attains the fruits mentioned above, and reaches the state which is otherwise very difficult to be attained.

Suta Uvaacha:

Maahaatmyam etad geetaayaah mayaa proktam sanaatanam;
Geetaante cha pathedyastu yaduktam tatphalam labhet.

Suta said:

(23) This greatness or “Glory of the Gita”, which is eternal, as narrated by me, should be read at the end of the study of the Gita, and the fruits mentioned therein will be obtained.

Thus ends the "Glory of the Gita" contained in the Varaha Purana. Om Shanti, Shanti, Shanti ! 

Sri KrushnaArpanamasthu

Hari Sarvottama - Vaayu Jeevottama
Sri GuruRaajo Vijayate

Sangraha by Bhargavasarma
***


ಯದಾ ಯದಾ ಹಿ ಧರ್ಮಸ್ಯ
 ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ
 ತದಾತ್ಮಾನಂ ಸೃಜಾಮ್ಯಹಂ||

ಪರಿತ್ರಾಣಾಯ ಸಾಧೂನಾಂ
 ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ
 ಸಂಭವಾಮಿ ಯುಗೇ ಯುಗೇ||🚩

🚩ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತರಿಸುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ.

🚩- ಭಗವಾನ್ ಶ್ರೀಕೃಷ್ಣ, ಭಗವದ್ಗೀತೆ
***


ಗೀತಾ ಜಯಂತೀ GEETA JAYANTHI 
vasudeva sutaṁ devaṁ kaṁsa cāṇūramardanam | 
devakī paramānandaṁ kṛṣṇaṁ vande jagadgurum ||


ವಸುದೇವಸುತಂ ದೇವಂ ಕಂಸಚಾಣೂರಮರ್ದನಂ 
ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ

वसुदॆव सुतं दॆवं कंस चाणूर मर्दनम् ।


दॆवकी परमानन्दं कृष्णं वन्दॆ जगद्गुरुम् ॥

Can there be a better teacher than Sri Krushna ParamaAtma? and better teaching than Bhagawadgita?
Bhagawadgita and Vishnu Sahasranama Stothram are two great gems of Hindu spirituality carved out from the great epic Mahabharata.
Margasira sukla Ekadasi is revered as Geeta Jayanthi, the day Lord Sri Krishna counselled Arjuna with his famous preaching known as Bhagawadgita.
But, it was not first time the Supreme God preaching the philosophy and Arjuna was not the first person to be imparted with the divine knowledge.
In the 4th Canto - JnaAna Yoga (sloka #1) Lord Sri Krishna says that,
" I taught this imperishable Yoga (Bhagawadgita) 


to Vivaswan (Sun God-Surya); 

He (Surya) in turn taught it to Manu (Vaivaswatha) who in turn taught it to Ikshvaaku (in wose dynasty Lord Sri rama was born)".

SaAnkhya Yoga that we come across in 2nd chapter of Bhagawadgita was also preached by the Supreme God Vishnu in his incarnation as Kapila Bhagavantha (Kapilacharya) to his mother Devahuti that we come across in the 3rd Canto of SriMadBhagavatha Purana;
Further Lord Sri Krishna also preached SaAnkhya Yoga to his friend Uddhava that came to be known as Uddhava Geeta (11th canto of Sri Mad Bhagavatha Purana).
yogo jnaanam tathaa saankhyam vidyaah silpaadi karma cha


vedaah saastraani vijnaanam etat sarvam janaardanaat;

Yoga, Jnaana, Saankhya, science, arts, works, Vedas, scriptures, spiritual illumination -- all these have originated from JanaArdhana the Supreme God.
Geetabhashya (commentary on Bhagavad Gita) was the first work by Sri Madhwacharya wherein He had established the supremacy of Bhagavad Gita over all other scriptures.
Sri Madhvacharya has written two commentaries on Bhagavadgita viz.,

> Geeta Bhasya and 
> GeetaTatparya Nirnaya;


Mantralaya GuruSaarvabhouma Sri Raaghavendra Swamy has written commentaries on Bhagawadgita viz.,

> gItA-bhAshhya-prameyadiipikA; 
> gItA-taatparya-nyaayadiipikA; 

> gItaarthasangraha (gItA-VivR^itti)


Bhagawadgita contains 701 verses out of which only one by Dhritarashtra and the rest reported by Sanjaya.
While the opening word of Bhagawadgita is "Dharma" closing word is "Mama" signifying that Geeta is My Dharma (Mama Dharma);

yatra yogesvarah krushno yatra paartho dhanur-dharah 
tatra srir vijayo bhutir dhruva nitir matir mama;

(sloka # 78–canto-18–Moksha Sanyasa Yoga)

Wherever is Sri Krishna the lord of Yoga; 
wherever is PaArtha the archer; there, are, 

prosperity; victory; happiness and 

firm (steady/sound/stable) policy (moral/Dhruvaneeti)


ananyaashchintayanto maam ye janaahaa paryupaasate |


teshaam nityaabhiyuktaanaam yogakshemam vahaamyaham ||

(Bhagawadgita 9th Canto sloka # 22)


Bhagawadgita is a hand book of instructions on the art of living. It is called Jeevana Dharma Yoga Saasthra. Geeta Saastra is intended to remove the cause of Samsara such as grief and delusion.
It is the right understanding of the immortal culture of Vedas and Upanishads. It contains the essence of Hindu Philosophy and culture. It is not merely a text book of Hinduism rather it is sacred text of humanity.
It is a practical handbook of instructions to the man on how to live nobly and grow out of his instinctive weaknesses. It says that running away from life is not the way to reach the highest goal of evolution.
The creed of Geeta is that spirituality can be lived in life, and true spiritual understanding is an asset to a man engaged in the battle of life.
It gives an easy thumb rule as to what types of values and mental attitudes one should develop in order to realize the ever effulgent Divinity in them; the pure awareness.
Epic Mahabharatha written by Lord and Sage Sri Vedavyaasa is not just a sacred script alone; rather it is a culmination of Brahmasutras, Upanishads, Puranas, Bhagawagita, Vishnu Sahasranama etc. That’s why it is called Panchama Veda.
Bhagawadgita which is a part of Mahabharatha is called the essence of Upanishads.
******


Gita Jayanthi

During the Mahabharata, Sri Krishna gave the greatest preaching to the mankind in 700 shlokas, on Margashira shuddha Ekadashi.
These 700 shlokas were compiled & was named as Bhagavad Gita by Jagadguru Sri Shankaracharya.
Shankaracharya wrote the first & Authentic commentary (Bhashya) on Bhagavad Gita.

Bhagavad-Gita is fondly described as Advaitaamrita varshini.


Acharya Shankara glorified the essence of Bhagavad-Gita in His Bhajagovindam stotra. 

In the 20th verse Acharya stresses the importance of understanding the Vedanta tattva of Gita.

Bhagavad gītā kiñcidadhītā gaṅgā jalalava kaṇikāpītā |

sakṛdapi yena murāri samarcā kriyate tasya yamena na carcā || 20 ||

Even a little study and understanding of Bhagavad Gita, or sipping of even a drop of the waters from the holy Ganga or even

a little worship of Murari (Narayana) there is no fear of Yama, the Lord of Death.

Vishnu Sahasranama & Bhagavad Gita are the most precious gems that derived from Mahabharata. 

Acharya stresses the importance of these two Gems in his 27th verse of Bhajagovindam stotra.

Geyaṁ gītā nāma sahasraṁ dhyeyaṁ śrīpati rūpamajasram |

neyaṁ sajjana saṅge cittaṁ deyaṁ dīnajanāya ca vittam || 27 ||

Regularly sing the glory of God as given in Srimad Bhagavad Gita and Sri Vishnu sahasranama, always meditate 

upon the form of Sri Mahavishnu, make every effort to take the mind towards 
the company of the good, noble and holy, and share the wealth with the poor and needy.
Sharade Paahimam Shankara Rakshamam
****

One sentence per chapter gist of Bhagavat Gita



 🕉


              BHAGWAD GITA 
                in one sentence
                   per chapter...


Chapter 1

Wrong thinking is the only problem in life

Chapter 2

Right knowledge is the ultimate solution to all our problems

Chapter 3

Selflessness is the only way to progress & prosperity

Chapter 4

Every act can be an act of prayer

Chapter 5

Renounce the ego of individuality & rejoice in the bliss of infinity

Chapter 6

Connect to the Higher consciousness daily

Chapter 7

Live what you learn

Chapter 8

Never give up on yourself

Chapter 9

 Value your blessings

Chapter 10

See divinity all around

Chapter 11

Have enough surrender to see the Truth as it is

Chapter 12

Absorb your mind in the Higher

Chapter 13

Detach from Maya & attach to Divine

Chapter 14

Live a lifestyle that matches your vision

Chapter 15

Give priority to Divinity

Chapter 16

Being good is a reward in itself

Chapter 17

Choosing the right over the pleasant is a sign of power

Chapter 18

Let Go, Lets move to union with God
***
Gita Jayanti 2022 

The world is a prison, and everyone longs for freedom from it; but, unfortunately, he is unable to find the road to freedom. And the book, and perhaps the only book that shows the way to freedom to all people of the world is the Srimad Bhagawad Gita.

The Bhagawad Gita is unique in many ways; it comes directly from Lord Sri Krishna, the Lord of the Universe; it is not a long list of sermons of do's and don’ts although it is called the Sermon of the Lord; it explains the consequences of one’s approach towards life and actions; it does not address a selected, evolved souls, or a class, or people of a particular faith or location, social status or condition,  but the mankind as a whole. In the words of Swami Chinmayananda, the study of the Gita makes a Hindu a better Hindu, a Muslim a better Muslim, and a Christian a better Christian; in other words, it makes a man a better man; it acknowledges the dignity of labor and treats no work as menial; it does not advocate renouncement of the world but asks one to give his best that not only benefits him but also society; it is the Song Divine; listening to the recitation of the Gita gives one immense joy.

The quintessence of the Gita is surrender to the Lord, performance of one’s duty with no expectations, and submitting all actions to the Lord, and that, the Gita assures, will release one from material bondage.

Today is Gita Jayanti; on this auspicious day, let us surrender to Lord Krishna, perform our duty without any expectations, and submit all our actions to Him. Let us also undertake the recitation of at least one chapter of the Bhagawad Gita, every day; even that will lift us to a higher level.
***

#ಗೀತಾ #ಜಯಂತಿ:-

ಮಾರ್ಗಶಿರ ಶುಕ್ಲ ಪಕ್ಷದ ಏಕಾದಶಿ. 

ಭಗವಾನ್ ಶ್ರೀಕೃಷ್ಣನು ಜಗತ್ತಿಗೇ ಭಗವದ್ಗೀತೆಯ ಮೂಲಕ ಸಾಧನೆಯ ಮಾರ್ಗವನ್ನು ಮತ್ತು ತನ್ನ ವಿರಾಟ ಶಕ್ತಿಯನ್ನು ಜಗತ್ತಿಗೆಲ್ಲ ತಿಳಿಸಿದ ದಿನ.
ಶ್ರೀಕೃಷ್ಣ ಪರಮಾತ್ಮನು  ಪಾರ್ಥನಿಗೆ, ಪಾರ್ಥಸಾರಥಿಯಾಗಿ ಯುದ್ಧರಂಗದಲ್ಲಿ ಉಪದೇಶಿಸಿದ ಈ ಗೀತೆ ವೇದಗಳ ಸಾರವೆಂದೇ ಪ್ರಸಿದ್ಧವಾಗಿದೆ. ಈ ಶ್ರೀಮದ್ ಭಗವದ್ಗೀತೆ ಮಹತ್ವ  ಅನಂತ. 

ಗೀತಾಮಹಾತ್ಮೆಯು ವರ್ಣಿಸುವಂತೆ:-
||ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತೃವಿಸ್ತರೈಃ
ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃಸೃತಾ||
 
ಅಂದರೆ ಪರಮಪುರುಷ ಪದ್ಮನಾಭನ ಸ್ವಯಂ ಮುಖ ಕಮಲದಿಂದ ಉಪದೇಶಿಸಿದ ಈ ಪವಿತ್ರ ಗೀತಾ ಶಾಸ್ತ್ರಕ್ಕಿಂತ(ಅಧ್ಯಯನ ಮಾಡದೆ) ಬೇರೆ ಶಾಸ್ತ್ರಗಳ ಹೆಚ್ಚಿನ ತಿಳಿವಳಿಕೆಯಿಂದ ಯಾವುದೇ ಹೆಚ್ಚಿನ ಪ್ರಯೋಜನವಿಲ್ಲ. ತಾತ್ಪರ್ಯ ಈ ಭಗವಂತನ ವಾಣಿಯಾದ ಗೀತೆಯೇ ಪರಮ ಉತ್ಕೃಷ್ಟವಾದ ಶಾಸ್ತ್ರ.ಇದನ್ನು ಅಭ್ಯಾಸ ಮಾಡದಿದ್ದರೆ ಇತರ ಶಾಸ್ತೃಗ್ರಂಥಾಧ್ಯಯನದಿಂದ ಫಲವೇನು??

ಹಾಗಾಗಬೇಕು,.ಹೀಗಾಗಬೇಕು,
ನಾನು  ಹೀಗಿರಬೇಕು, ಕಾರು,ಮನೆ,ಮಡದಿ,ಮಕ್ಕಳು, ಎನ್ನುವುದಾಗಿ ಬದುಕಿನಲ್ಲಿ  ಹಲವಾರು ಕನಸುಗಳನ್ನು ಕಟ್ಟಿಕೊಳ್ಳುತ್ತಾನೆ ಮನುಷ್ಯ..
ಕಟ್ಟಿದ ಕನಸುಗಳು ಗುರಿ ಮುಟ್ಟುವುದಕ್ಕಿಂತ   ಕೊನೆಗಾಣುವುದೇ ಹೆಚ್ಚು ಎನ್ನುವುದು ಎಲ್ಲರ ಅನುಭವ.
ಇದಕ್ಕೆ ದಾಸರು ನೀಡಿದ ಉತ್ತರವಿಷ್ಟು 
"ಹರಿಚಿತ್ತ  ಸತ್ಯ..ನರ ಚಿತ್ತಕ್ಕೆ ಬಂದದ್ದು ಲವಲೇಶವೂ ನಡೆಯದು"ಎನ್ನುವುದಾಗಿ.
ಸತ್ಯಸಂಕಲ್ಪನೆನಿಸಿದ ಆ ಶ್ರೀಹರಿ ನಮ್ಮ ಬದುಕು ಹೇಗಿರಬೇಕೆಂದು ತೀರ್ಮಾನಿಸುತ್ತಾನೋ  ಹಾಗೆಯೇ ಸಾಗುವುದು ಬದುಕಿನ ಬಂಡಿ...
ದಾಸರು ಹಾಡಿನುದ್ದಕ್ಕೆ ಬದುಕಿನ ಬವಣೆಯನ್ನು ಬಣ್ಣಿಸಿ ಅಷ್ಟಕ್ಕೆ ನಿಲ್ಲಿಸುವುದಿಲ್ಲ...
"ಪುರಂದರ ವಿಠಲನ್ನ ನೆನೆವೊದು ನರಚಿತ್ತ..ದುರಿತವ ಪರಿಹರಿಸೋದು ಹರಿಚಿತ್ತ"ಎನ್ನುತ್ತಾರೆ..

ಭಗವದ್ಗೀತೆಯ ಮೊದಲ ಅಧ್ಯಾಯ ಶ್ರವಣ ಫಲ

ಶ್ರೀ ವಿಷ್ಣು ಹೇಳಿದನು : ನಾನೇ ಭಗವದ್ಗೀತೆಯ ಸ್ವರೂಪದಲ್ಲಿ ಪ್ರಕಟವಾಗಿದ್ದೇನೆ. ಮೊದಲ ಐದು ಅಧ್ಯಾಯಗಳು ನನ್ನ ಐದು ಶಿರಗಳು, ಮುಂದಿನ ಹತ್ತು ಅಧ್ಯಾಯಗಳು ನನ್ನ ಹತ್ತು ಬಾಹುಗಳು ಮತ್ತು ಹದಿನಾರನೆಯ ಅಧ್ಯಾಯವು ನನ್ನ ಉದರವಾಗಿದೆ. ಕೊನೆಯ ಎರಡು ಅಧ್ಯಾಯಗಳು ನನ್ನ ಪಾದಕಮಲಗಳು. ಈ ರೀತಿಯಲ್ಲಿ ನೀನು ಭಗವದ್ಗೀತೆಯನ್ನು ನನ್ನ ಸ್ವಾಂಶ ವಿಸ್ತರಣೆಯೆಂದು ಅರಿಯಬೇಕು. ಈ ಭಗವದ್ಗೀತೆಯು ಎಲ್ಲ ಪಾಪಗಳನ್ನು ನಾಶಮಾಡುತ್ತದೆ. ಮತ್ತು ಪ್ರತಿದಿನವೂ ಒಂದು ಅಧ್ಯಾಯ ಅಥವಾ ಒಂದು ಶ್ಲೋಕ ಅಥವಾ ಅರ್ಧ ಶ್ಲೋಕ, ಇಲ್ಲವೇ ಕನಿಷ್ಟಪಕ್ಷ ಕಾಲು ಭಾಗದಷ್ಟು ಶ್ಲೋಕವನ್ನು ಪಠಿಸುವವನು ಸುಶರ್ಮನು ಸಾಧಿಸಿದ ಸ್ಥಾನವನ್ನೇ ಗಳಿಸುತ್ತಾನೆ. 

ಲಕ್ಷ್ಮಿ ಕೇಳಿದಳು : ಸುಶರ್ಮ ಯಾರು ? ಅವನು ಏನನ್ನು ಸಾಧಿಸಿದನು ?

ಶ್ರೀ ವಿಷ್ಣು ಹೇಳಿದನು : ಪ್ರಿಯ ಲಕ್ಷ್ಮೀ, ಸುಶರ್ಮ, ಒಬ್ಬ ತುಂಬ ದುಷ್ಟ ಮತ್ತು ಅತ್ಯಂತ ಪಾಪಿಯಾಗಿದ್ದನು. ಅವನು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದರೂ ಅವನ ಕುಟುಂಬಕ್ಕೆ ವೇದ ಜ್ಞಾನದ ಅರಿವಿರಲಿಲ್ಲ. ಅವನು ಇತರರನ್ನು ನೋಯಿಸುವುದರಲ್ಲಿ ಖುಷಿ ಪಡುತ್ತಿದ್ದನು. ಅವನು ನನ್ನ ನಾಮಗಳನ್ನು ಪಠಿಸುವುದಾಗಲಿ, ದಾನ ಮಾಡುವುದಾಗಲಿ, ಅಥವಾ ಅತಿಥಿ ಸತ್ಕಾರ ಮಾಡುವುದಾಗಲಿ ಏನನ್ನೂ ಮಾಡುತ್ತಿರಲಿಲ್ಲ. ಅವನು ಯಾವ ಪುಣ್ಯ ಕಾರ್ಯಗಳನ್ನೂ ಮಾಡಲಿಲ್ಲ. ತನ್ನ ಜೀವನಕ್ಕಾಗಿ ಎಲೆಗಳನ್ನು ಸೊಪ್ಪನ್ನು ಸಂಗ್ರಹಿಸಿ ಅದನ್ನು ಮಾರುಕಟ್ಟೆಯಲ್ಲಿ ಮೋಸ ಮಾಡಿ ಮಾರುತ್ತಿದ್ದ. ಈ ರೀತಿ ಅವನು ಅವನ ಜೀವನ ಕಳೆಯುತ್ತಿದ್ದನು.

ಒಂದು ದಿನ ಮೂರ್ಖ ಸುಶರ್ಮ ಒಬ್ಬ ಋಷಿಯ ತೋಟದಲ್ಲಿ ಸೊಪ್ಪನ್ನು ಎಲೆಗಳನ್ನು ಸಂಗ್ರಹಿಸುತ್ತಿರುವಾಗ ಒಂದು ಹಾವು ಅವನನ್ನು ಕಚ್ಚಿತು. ಕೂಡಲೇ ಅವನು ಸತ್ತ. ಸತ್ತ ನಂತರ ಅವನು ಹಲವಾರು ನರಕಗಳಲ್ಲಿ ದೀರ್ಘಕಾಲ ಶಿಕ್ಷೆಯನ್ನು ಅನುಭವಿಸಿದನು. ಅನಂತರ ಅವನು ಒಂದು ಎತ್ತಿನ ಸ್ವರೂಪವನ್ನು ಪಡೆದ. ಒಬ್ಬ ಅಂಗವಿಕಲನು ಆ ಎತ್ತನ್ನು ಖರೀದಿಸಿ ತನ್ನ ಕೆಲಸಕ್ಕೆ ಇಟ್ಟುಕೊಂಡನು. ಸುಮಾರು ಏಳರಿಂದ ಎಂಟು ವರ್ಷಗಳವರೆಗೆ ಆ ಎತ್ತು ಅತ್ಯಂತ ಭಾರವಾದ ಹೊರೆಗಳನ್ನು ಹೊರುತ್ತಿತ್ತು. ಒಮ್ಮೆ ಆ ವ್ಯಕ್ತಿಯು ಎತ್ತಿನ ಬೆನ್ನ ಮೇಲೆ ತುಂಬ ಭಾರವಾದ ಹೊರೆಯನ್ನು ಹಾಕಿ, ಬೇಗ ನಡೆಯೆಂದು ಎತ್ತಿಗೆ ಒತ್ತಾಯಿಸುತ್ತಿದ್ದ. ಹಠಾತ್ತನೆ ಎತ್ತು ನೆಲಕ್ಕೆ ಬಿದ್ದು ಪ್ರಜ್ಞೆಯನ್ನು ಕಳೆದುಕೊಂಡಿತು. ಅಲ್ಲಿಗೆ ಹಲವಾರು ಜನರು ಬಂದು ಸೇರಿದರು. ಎತ್ತಿನ ದುಃಸ್ಥಿತಿಯನ್ನು ನೋಡಿ ಮರುಗಿದ ಒಬ್ಬ ಪುಣ್ಯಾತ್ಮನು ಅವನ ಕೆಲವು ಸತ್ಕಾರ್‍ಯಗಳ ಫಲವು ಎತ್ತಿಗೆ ಹೋಗಲೆಂದು ಆಶಿಸಿದನು. ಇದನ್ನು ನೋಡಿ ಅಲ್ಲಿದ್ದ ಕೆಲವರು ಕೂಡ ತಮ್ಮ ಸತ್ಕಾರ್ಯಗಳ ಫಲವನ್ನು ಎತ್ತಿಗೆ ದಯಪಾಲಿಸಿದರು. ಆ ಗುಂಪಿನಲ್ಲಿ ಒಬ್ಬ ವೇಶ್ಯೆಯೂ ಇದ್ದಳು. ತಾನು ಏನಾದರೂ ಸತ್ಕಾರ್ಯ ಮಾಡಿದ್ದರೆ ಈ ಎತ್ತಿಗೆ ಅದು ಸೇರಲೆಂದು ಹೇಳಿದಳು. ಇದಾದನಂತರ ಎತ್ತು ಸತ್ತು ಹೋಯಿತು. ಅದನ್ನು ಮೃತ್ಯು ದೇವರಾದ ಯಮರಾಜನ ಬಳಿಗೆ ಕರೆದೊಯ್ಯಲಾಯಿತು. ಅಲ್ಲಿ ಯಮರಾಜ ತಿಳಿಸಿದನು, “ವೇಶ್ಯೆಯು ನಿನಗೆ ನೀಡಿರುವ ಸತ್ಕಾರ್‍ಯಗಳ ಕೃಪೆಯಿಂದಾಗಿ ನಿನ್ನ ಹಿಂದಿನ ಎಲ್ಲ ಪಾಪ ಕೃತ್ಯಗಳಿಂದ ನೀನು ಮುಕ್ತನಾಗಿರುವೆ." ಅನಂತರ ಅವನು ಒಂದು ಉದಾತ್ತ ಬ್ರಾಹ್ಮಣ ಕುಟುಂಬದಲ್ಲಿ ಜನ್ಮ ತಾಳಿದನು. ಆ ಜನ್ಮದಲ್ಲಿ ಅವನಿಗೆ ತನ್ನ ಹಿಂದಿನ ಜನ್ಮಗಳ ನೆನಪಿತ್ತು. ಹಲವಾರು ವರ್ಷಗಳ ಅನಂತರ ಅವನು ತನ್ನನ್ನು ನರಕವಾಸದಿಂದ ಮುಕ್ತಳಾಗಿ ಮಾಡಿದ ಆ ವೇಶ್ಯೆಯನ್ನು ಹುಡುಕಲು ನಿರ್ಧರಿಸಿದನು.

ವೇಶ್ಯೆಯನ್ನು ಹುಡುಕಿದ ಅನಂತರ, ತನ್ನನ್ನು ಪರಿಚಯಿಸಿಕೊಂಡು ಅವನು ಕೇಳಿದನು. 

“ನಾನು ನರಕವಾಸದಿಂದ ಮುಕ್ತನಾಗುವಷ್ಟು, ಎಂತಹ ಸತ್ಕಾರ್ಯವನ್ನು ನೀನು ಮಾಡಿರುವೆ." ವೇಶ್ಯೆ ಉತ್ತರಿಸಿದಳು, “ಮಾನ್ಯರೇ, ಆ ಪಂಜರದಲ್ಲಿ ಒಂದು ಗಿಣಿಯಿದೆ. ಅದು ಪ್ರತಿದಿನ ಏನನ್ನೋ ಪಠಿಸುತ್ತದೆ. ಅದನ್ನು ಕೇಳಿ ನನ್ನ ಹೃದಯ ತುಂಬ ಪರಿಶುದ್ಧವಾಗಿದೆ. ಅದರ ಫಲವನ್ನೇ ನಾನು ನಿಮಗೆ ನೀಡಿರುವುದು." ಅನಂತರ ಅವರಿಬ್ಬರೂ ಆ ಗಿಣಿಯನ್ನು ಆ ಕುರಿತು ಕೇಳಿದರು.

ತನ್ನ ಹಿಂದಿನ ಜನ್ಮವನ್ನು ನೆನಪಿಸಿಕೊಳ್ಳುತ್ತಾ ಗಿಣಿಯು ತನ್ನ ಕಥೆಯನ್ನು ಹೇಳಲಾರಂಭಿಸಿತು. “ಹಿಂದೆ, ನಾನು ಒಬ್ಬ ವಿಪ್ರನಾಗಿದ್ದೆ. ಆದರೆ ನನ್ನ ಗರ್ವದಿಂದ ನಾನು ಇತರ ಪಂಡಿತರನ್ನು ಹೀಯಾಳಿಸುತ್ತಿದ್ದೆ ಹಾಗೂ ನಾನು ತುಂಬ ಅಸೂಯೆಪಡುವವನಾಗಿದ್ದೆ. ನಾನು ಸತ್ತನಂತರ ಹಲವಾರು ನರಕಗಳಲ್ಲಿ ದೀರ್ಘಕಾಲ ಕಷ್ಟಗಳನ್ನು ಅನುಭವಿಸಿದ ಮೇಲೆ ನನಗೆ ಈ ಗಿಣಿಯ ದೇಹವನ್ನು ಕೊಡಲಾಯಿತು. ನನ್ನ ಹಿಂದಿನ ಪಾಪಕರ್ಮಗಳಿಂದಾಗಿ ನಾನು ಮಗುವಾಗಿದ್ದಾಗಲೇ ನನ್ನ ತಂದೆ ಮತ್ತು ತಾಯಿಯನ್ನು ಕಳೆದುಕೊಂಡೆ. ಒಂದುದಿನ, ಬಿಸಿಯಾದ ಮರಳಿನಲ್ಲಿ ಯಾವುದೇ ರಕ್ಷಣೆಯಿಲ್ಲದೆ ಬಿದ್ದಿದ್ದ ನನ್ನನ್ನು ನೋಡಿ ಕೆಲವು ಋಷಿಗಳು ತಮ್ಮ ಆಶ್ರಮಕ್ಕೆ ಕರೆದೊಯ್ದು ಒಂದು ಪಂಜರದಲ್ಲಿ ನನ್ನನ್ನು ಇಟ್ಟರು. ಆ ಸ್ಥಳದಲ್ಲಿ ಋಷಿಗಳ ಮಕ್ಕಳು ಶ್ರೀಮದ್ ಭಗವದ್ಗೀತೆಯ ಮೊದಲ ಅಧ್ಯಾಯದ ಪಠಣವನ್ನು ಕಲಿಯುತ್ತಿದ್ದರು. ಶ್ಲೋಕಗಳನ್ನು ಪುನರುಚ್ಚರಿಸುವುದನ್ನು ಕೇಳಿದ ನಾನು ಅವರೊಂದಿಗೆ ಪುನರುಚ್ಚರಿಸಲಾರಂಭಿಸಿದೆ. ಇದಾದನಂತರ ಒಬ್ಬ ಕಳ್ಳನು ನನ್ನನ್ನು ಕದ್ದು ಈ ಹೆಂಗಸಿಗೆ ಮಾರಿದನು."

ಶ್ರೀ ವಿಷ್ಣು ಮುಂದುವರಿಸಿದನು : ಭಗವದ್ಗೀತೆಯ ಮೊದಲ ಅಧ್ಯಾಯವನ್ನು ಪಠಿಸಿದ ಗಿಣಿಯು ಸಂಪೂರ್ಣವಾಗಿ ಪರಿಶುದ್ಧವಾಯಿತು. ಇದನ್ನು ಕೇಳಿದ ವೇಶ್ಯೆ ಸಂಪೂರ್ಣವಾಗಿ ಪರಿಶುದ್ಧಳಾದಳು. ಅನಂತರ ಪಠಣೆಯನ್ನು ಕೇಳಿದ ಪ್ರತಿಫಲವನ್ನು ಸ್ವೀಕರಿಸಿದ ಸುಶರ್ಮ ಕೂಡ ಸಂಪೂರ್ಣವಾಗಿ ಪರಿಶುದ್ಧನಾದನು.

ಭಗವದ್ಗೀತೆಯ ಮೊದಲ ಅಧ್ಯಾಯದ ಮಹಿಮೆಗಳ ಬಗ್ಗೆ ಸ್ವಲ್ಪ ಕಾಲ ಚರ್ಚಿಸಿದನಂತರ ಸುಶರ್ಮ ತನ್ನ ಮನೆಗೆ ಹೋದನು. ಮೂವರು ಪ್ರತ್ಯೇಕವಾಗಿ ಶ್ರೀಮದ್ ಭಗವದ್ಗೀತೆಯ ಮೊದಲ ಅಧ್ಯಾಯವನ್ನು ಪಠಿಸುವುದರಲ್ಲಿ ನಿರತರಾದರು. 

ಭಗವದ್ಗೀತೆಯ ಮೊದಲ ಅಧ್ಯಾಯವನ್ನು ಯಾರೇ ಓದಲಿ, ಪಠಿಸಲಿ, ಅಥವಾ ಕೇಳಲಿ, ಅವರು ಅತಿ ಸುಲಭವಾಗಿ ಇಹಲೋಕದ ಸಂಕಷ್ಟಗಳ ಸಾಗರವನ್ನು ದಾಟುತ್ತಾರೆ ಮತ್ತು ಶ್ರೀಕೃಷ್ಣನ ಕಮಲ ಪಾದಗಳ ಸೇವೆಯ ಕೃಪೆಗೆ ಪಾತ್ರರಾಗುತ್ತಾರೆ.
ಸತ್ಯಸಂಕಲ್ಪನಾದ   ಭಗವದ್ಗೀತೆ ಯ ಅಂತರ್ಗತ   ಶ್ರೀಕೃಷ್ಣ ಪರಮಾತ್ಮ ನಮ್ಮೆಲ್ಲರ ಸತ್ಕಾಮನೆಗಳನ್ನು ಸತ್ಯಗೊಳಿಸಲಿ..
ನಿರಂತರ  ಈ ಪುಣ್ಯ ಪ್ರದವಾದ  ಶ್ರೀಮದ್ ಭಗವದ್ಗೀತೆ ಯನ್ನು ಅರ್ಥಸಹಿತ ಪಾರಾಯಣ ಮಾಡಿ   ಶ್ರೀಕೃಷ್ಣ ಪರಮಾತ್ಮನ ಕೃಪೆಗೆ ಪಾತ್ರರಾಗೋಣ. 
       ಶುಭವಾಗಲಿ .    
(from whatsApp)
***

" ಭಗವದ್ಗೀತೆ - ಒಂದು ಚಿಂತನ -  ಶ್ರೀ ರಾಯರ ಕಣ್ಣಲ್ಲಿ ಶ್ರೀ ಕೃಷ್ಣ ಗೀತಾಮೃತಮ್ "

ಶ್ರೀ ಕೃಷ್ಣ ಪರಮಾತ್ಮನು, ಇಂದ್ರ ದೇವರ ಅಂಶ ಸಂಭೂತನೂ, ತನಗೆ ಪ್ರಿಯತಮನೂ ಆದ ಅರ್ಜುನನಿಗೆ...

ಶ್ರೀ ನಾರಾಯಣನ ದ್ವೇಷಿ, ತದನುಬಂಧಿಗಳನ್ನು ನಿಗ್ರಹಿಸುವುದಕ್ಕಾಗಿ ಮಾಡುವ ಯುದ್ಧವು ಸರ್ವ ಸಾಧಾರಣವಾದ ಧರ್ಮವೇ ಆಗಿದೆ ಮತ್ತು ಕ್ಷತ್ರೀಯರಿಗೆ ವಿಶೇಷವಾದ ಪರಮ ಧರ್ಮವಾಗಿದೆ.

ಹೀಗಿರಲು ಬಂಧು ಸ್ನೇಹದಿಂದ ಅದನ್ನು ಅಧರ್ಮವೆಂದು ಶಂಕಿಸಿ, ಯುದ್ಧ ವಿಮುಖನಾದಂತಾದ ಅರ್ಜುನನ್ನು ನಿಮಿತ್ತ ಮಾಡಿಕೊಂಡು ಶ್ರೀ ಹರಿ ಭಗವದ್ಭಕ್ತರ ಶುಶ್ರೂಷೆ, ಅನಸೂಯೆ, ಭಕ್ತಿ, ಸ್ವರ್ಣಾಶ್ರಮ ವಿಹಿತ ಸತ್ಕರ್ಮಾನುಷ್ಠಾನ, ಭಗವಂತನಲ್ಲಿ ಸರ್ವ ಸುಕರ್ಮ ಫಲ ಸಮರ್ಪಣೆ, ಶಾಸ್ತ್ರ ವಿಚಾರ ನಿಷ್ಠೆ, ಮೊದಲಾದ ಸದ್ಧರ್ಮವನ್ನು ನಿರೂಪಿಸಿ ಸರ್ವ ಸುಜನರನ್ನೂ ಉದ್ಧರಿಸಲು " ಭಗವದ್ಗೀತೆ " ಯನ್ನು ಉಪದೇಶಿಸಿದನು.

ಶ್ರೀ ರಾಯರು " ಗೀತಾವಿವೃತಿ " ಪ್ರಾರಂಭದಲ್ಲಿ...

ಲಕ್ಷ್ಮೀ ನಾರಾಯಣಂ ನತ್ವಾ ಪೂರ್ಣಬೋಧಾನ್ ಗುರೂನಪಿ ।
ಕುರ್ಮ: ಶ್ರೀಕೃಷ್ಣ ಗೀತಾಯ ಭಾಷ್ಯಾದುಕ್ತಾರ್ಥ ಸಂಗ್ರಹಮ್ ।।

ಭಾರತಂ ಸರ್ವ ಶಾಸ್ತ್ರೇಷು ಭಾರತೇ ಗೀತಿಕಾ ವರಾ ।
ವಿಷ್ಣೋಸಹಸ್ರನಾಮಾಪಿ ಜ್ಞೇಯಂ ಪಾಠ್ಯ೦ ಚ ತದ್ದ್ವಯಮ್ ।।

ಸರ್ವ ಶಾಸ್ತ್ರಗಲ್ಲಿಯೂ ಶ್ರೇಷ್ಠವಾದುದು ಮಹಾಭಾರತ. ಆ ಮಹಾಭಾರತದಲ್ಲಿಯೂ ಭಗವದ್ಗೀತೆ ಹಾಗೂ ವಿಷ್ಣು ಸಹಸ್ರ ನಾಮ ಶ್ರೇಷ್ಠವಾದವುಗಳು. ಆದ್ದರಿಂದ ಅವೆರಡನ್ನೂ ತಿಳಿದುಕೊಳ್ಳಬೇಕು ಮತ್ತು ಪಠಿಸಬೇಕು.

ಶಾಸ್ತ್ರಗಳಲ್ಲಿ " ಶ್ರೀ ಮಹಾಭಾರತ " ವು ಬಲು ರಮ್ಯವಾಗಿದೆ. ಭಾರತವೆಂದರೆ " ಪಂಚಮ ವೇದ " ವೆನಿಸಿ ಸರ್ವ ವೇದ ಪುರಾಣಾದಿ ಸಾರವೆಂದು ಪ್ರಖ್ಯಾತವಾಗಿದೆ.

ಶ್ರೀಮನ್ಮಹಾಭಾರತದಲ್ಲಿ " ಗೀತೆ ಮತ್ತು ಶ್ರೀ ವಿಷ್ಣು ಸಹಸ್ರನಾಮ " ಎಂಬ ಎರಡು ಘಟ್ಟಗಳಿವೆ. ಸಾಕ್ಷಾತ್ ಶ್ರೀ ಪದ್ಮನಾಭನ ಮುಖ ಪದ್ಮದಿಂದ ಹೊರ ಹೊಮ್ಮಿ ಬಂದ " ಗೀತೆ " ಗೆ ಮಿಗಲಾದ ಗ್ರಂಥವಿಲ್ಲ!

ತಾಪತ್ರಯ ದುಃಖಿತನಾಗಿ, ಸಂಸಾರಾಂಧಕಾರದಲ್ಲಿ ತೊಳಲುತ್ತಾ, ಸಾಧು ಸಜ್ಜನರು ಕಷ್ಟ ಪಡುತ್ತಿರುವುದನ್ನು ಕಂಡು ಕರುಣಾವರಣಾಲಯರಾದ ಶ್ರೀ ವೇದವ್ಯಾಸದೇವರು ಸಜ್ಜನರಿಗೆ ಸದ್ ಜ್ಞಾನವನ್ನಿತ್ತು, ತತ್ತದ್ಯೋಗ ಸ್ವರೂಪ ಸುಖವನ್ನು ಹೊಂದಿಸಲು ಸಾಧಕವಾದ ಶ್ರೀ ಭಗವದ್ಗೀತೆಯನ್ನು ಶ್ರೀ ಕೃಷ್ಣ ಪರಮಾತ್ಮನು ಪಾರ್ಥನಿಗೆ ಹೇಳಿದ್ದನ್ನು ಶ್ರೀಮನ್ಮಹಾಭಾರತದಲ್ಲಿ ಶ್ಲೋಕ ರೂಪದಲ್ಲಿ ಗ್ರಥನ ಮಾಡಿರುವರು.

ಶ್ರೀ ವೇದವ್ಯಾಸರೇ ಶ್ರೀ ಕೃಷ್ಣ ಪರಮಾತ್ಮನಲ್ಲವೇ?

ಅಂತೆಯೇ ಅವರಿಂದ ರಚಿತವಾಗಿರು ಭಗವದ್ಗೀತೆಯು ಪರಮಾಪ್ತವಾಕ್ಯವಾಗಿ ಪರಮ ಪ್ರಮಾಣವಾಗಿದೆ. ಅಂಥಹಾ ಶ್ರೀ ಭಗವದ್ಗೀತೆಯು...

ಸರ್ವೋಪನಿಷತ್ಸಾರವೂ. ಬ್ರಹ್ಮಸೂತ್ರ ಪದನಿಶ್ಚಿತವೂ; ಯಥಾರ್ಥಜ್ಞಾನೋಪದೇಶಕವೂ ಆಗಿದೆ.

ಸರ್ವೋಪನಿಷದೋ ಗಾವಃ ದೋಗ್ಧಾ ಗೋಪಾಲನಂದನಃ ।
ಪಾರ್ಥೋ ವತ್ಸ: ಸುಧೀರ್ಭೋಕ್ತಾ ದುಗ್ಧ೦ ಗೀತಾಮೃತಂ ಮಹತ್ ।।

ಉಪನಿಷತ್ತುಗಳೆಂಬ ಹಸುಗಳಿಂದ ಅರ್ಜುನನೆಂಬ ಕರುವಿನ ಮೂಲಕ ಗೋಪಾಲಕೃಷ್ಣನಾದ ಶ್ರೀ ಕೃಷ್ಣ ಪರಮಾತ್ಮನೇ ಕರೆದುಕೊಟ್ಟ ಪವಿತ್ರ ಕ್ಷೀರ - ಗೀತಾಮೃತ.

ಮಾನವನ ಬದುಕು ಹಸನಾಗಲು ಈ ಗೀತಾಮೃತ ಅತ್ಯವಶ್ಯ!

ಅದಕ್ಕೆ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು...

ಗೀತಾ ಭಾಷ್ಯ
ತಾತ್ಪರ್ಯ ನಿರ್ಣಯ

ಎಂಬ ಗ್ರಂಥಗಳನ್ನು ರಚಿಸಿದ್ದಾರೆ. ಅದನ್ನು ವಿವರಿಸಲು...

ಶ್ರೀ ಪದ್ಮನಾಭತೀರ್ಥರು..
1. ಗೀತಾಭಾಷ್ಯಟೀಕಾ ( ಭಾವಪ್ರದೀಪಿಕಾ )
2. ಗೀತಾ ತಾತ್ಪರ್ಯ ನಿರ್ಣಯ ಟೀಕಾ ( ಪ್ರಕಾಶಿಕಾ )

ಶ್ರೀ ನರಹರಿತೀರ್ಥರು - ಗೀತಾಭಾಷ್ಯ ವ್ಯಾಖ್ಯಾನ

ಶ್ರೀ ಜಯತೀರ್ಥರು -
1. ಗೀತಾಟೀಕಾ ( ನ್ಯಾಯದೀಪಿಕಾ )
2.ಪ್ರಮೇಯದೀಪಿಕಾ ( ಗೀತಾಭಾಷ್ಯಟೀಕಾ )

ಶ್ರೀ ವಿಜಯೀ೦ದ್ರತೀರ್ಥರು...
1. ಗೀತಾರ್ಥರಾರ್ಥ:
2. ಗೀತಾಭಾಷ್ಯ ಪ್ರಮೇಯದೀಪಿಕಾ ವ್ಯಾಖ್ಯಾ
3. ಗೀತಾತಾತ್ಪರ್ಯನ್ಯಾಯದೀಪಿಕಾವ್ಯಾಖ್ಯಾನಮ್

ಶ್ರೀ ರಘೋತ್ತಮತೀರ್ಥರು - ಗೀತಾಭಾಷ್ಯಟಿಪ್ಪಣಿ ಭಾವಬೋಧ

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು...

1. ಗೀತಾ ಟೀಕಾ ಟಿಪ್ಪಣಿ ಭಾವದೀಪ
2. ಗೀತಾ ಭಾಷ್ಯ ಟೀಕಾ ಭಾವದೀಪ
3. ಟೀಕಾ ಭಾಷ್ಯಾದಿ ದಿವ್ಯಾರ್ಥ ಸಂಗ್ರಹಕವೂ ಆದ " ಗೀತಾವಿವೃತ್ತಿ " ಎಂಬ ಗ್ರಂಥ ರಾಜವನ್ನೂ ಬರೆದಿರುವರು.

" 18 ಅಧ್ಯಾಯಗಳ ಸಾರ ಸಂಗ್ರಹ "

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಾಮವೇತಾ ಯುಯುತ್ಸವಃ ।
ಮಾಮಕಾ: ಪಾಂಡವಾಶ್ಚೈವ ಕಿಮಕುರ್ವತ ಸಂಜಯಃ ।।

1. ಯುದ್ಧಾರಂಭವಾಗಲಿದ್ದಾಗ ಅರ್ಜುನನು ಗುರು ಬಾಂಧವರನ್ನು ಕೊಲ್ಲಲಾರದೆ ಅಭಿಮಾನದಿಂದ ಧಾರ್ಮ ಯುದ್ಧವನ್ನು ಕೂಡ ಅಧರ್ಮವೆಂದು ತಿಳಿದು ವಿಷಾದದಿಂದ ಯುದ್ಧ ವಿಮುಖನಾದಂತಾಗುವನು.

2. ಶ್ರೀ ಕೃಷ್ಣನು ಅರ್ಜುನನಿಗೆ ಜೀವೇಶರ ನಿತ್ಯತ್ವವನ್ನೂ; ಜೀವರ ಅಸ್ವಾತಂತ್ರ್ಯವನ್ನೂ, ಜ್ಞಾನದಿಂದ ಅಭಿಮಾನ ತ್ಯಾಗವನ್ನೂ; ನಿಷ್ಕಾಮ ಕಾರ್ಯವನ್ನೂ ಜ್ಞಾನಿ ಲಕ್ಷಣವನ್ನೂ ವರ್ಣಿಸುವನು.

3. ಜ್ಞಾನ ಸಾಧನವಾದುದು ಸ್ವೋಚಿತಕರ್ಮಾನಿಷ್ಠಾನವೇ ಸ್ವಕರ್ಮವನ್ನು ಭಗವತ್ಪ್ರೀತಿಗಾಗಿ ತಪ್ಪದೆ ಮಾಡಬೇಕು.

4. ಜ್ಞಾನ ಕರ್ಮೇಂದ್ರಿಯ ದೇವತೆಗಳಿಗೆ ಶ್ರೇಷ್ಠರಾದ ಬುದ್ಧ್ಯಾದಿ ದೇವತೆಗಳಿಗೆ ಮಿಗಿಲಾದವು ಶ್ರೀ ಹರಿ. ಶ್ರೀಶನೇ ಸರ್ವೋತ್ತಮನು. ಸರ್ವಜ್ಞನು. ಕರ್ಮಗಳು ವಿವಿಧವಾದರೂ ಅವುಗಳ ಫಲ ಜ್ಞಾನವೇ; ಅಂಥಹಾ ಜ್ಞಾನದಿಂದಲೇ ಶ್ರೀಮುಖ್ಯಪ್ರಾಣವಲ್ಲಭನ ಪ್ರಸಾದ.

5. ಕಾಮಾದಿ ವರ್ಜನ ರೂಪ ಸನ್ಯಾಸ; ಶ್ರವಣ ಮನನ ಫಲ ಸಮರ್ಪಣ; ಧ್ಯಾನಾದಿ ಈಶ್ವರಾರಾಧನೆ ಕರ್ಮಾನುಷ್ಠಾನ ರೂಪ ತ್ಯಾಗ; ಎರಡೂ ಕರ್ಮಯೋಗದ ಎರಡೂ ಅವಶ್ಯಕ ಭಾಗಗಳು.

6. ಇಂದ್ರಿಯ ನಿಗ್ರಹ, ಕಾಮಾದಿ ವರ್ಜನ ರೂಪ ಸಂನ್ಯಾಸದಿಂದ ಕೂಡಿದ ಶಾಸ್ತ್ರ ಶ್ರವಣಾದಿಗಳಿಂದ ಜ್ಞಾನ, ಅದರಿಂದ ಧ್ಯಾನ, ಅದರಿಂದ ಭವರೋಗ ನಿವಾರಕವಾದ ಭಗವದಪರೋಕ್ಷ ಮೋಕ್ಷಗಳು.

7. ಅಪರೋಕ್ಷ ಜ್ಞಾನಕ್ಕೆ ಬಹಿರಂಗ ಸಾಧಕವಾದ ಕಾಮಾದಿ ವರ್ಜನ, ಅಂತರಂಗ ಸಾಧನವಾದ ಶ್ರವಣ ಮನನ ಧ್ಯಾನಾದಿಗಳೂ ಕೂಡ ಭಕ್ತಿಯಿಂದ ಕೂಡಿದ್ದರೇನೇ ಫಲಪ್ರದ. ಶ್ರೀ ಹರಿಯು ತಾನಾಗಿ ಪ್ರಸನ್ನನಾಗಬೇಕು. ಭಕ್ತಿ ರಹಿತರಿಗೆ ಅವನು ಸಿಗನು.

8. ಅಂತ್ಯ ಕಾಲದಲ್ಲಿ ಶ್ರೀ ಹರಿಯನ್ನು ಸ್ಮರಿಸಿದವರಿಗೆ ಸದ್ಗತಿಯಾಗುವುದು. ಸ್ಮರಣೋಪಾಯದಿಂದ ಶ್ರೀ ಹರಿಯ ಪ್ರಾಪ್ತಿ. ಶ್ರೀ ಹರಿ ಲೋಕವನ್ನು ಜ್ಞಾನಿಗಳು ಸೇರುವ ಮಾರ್ಗಾದಿಗಳು.

9. ಭಗವಂತನು ಸರ್ವತ್ರ ವ್ಯಾಪ್ತನು. ಸೃಷ್ಠಿ ಸಂಹಾರಗಳ ಸ್ವತಂತ್ರಕರ್ತನು. ಅವನ ಅಧೀನ ಈ ಜಗವು. ಅವನು ಸರ್ವ ನಿಯಾಮಕನು. ಅವನಿಗೆ ಕರ್ಮ ಲೇಪವಿಲ್ಲ. ಅಸುರರು ಅವನನ್ನು ಅನಿತಾ ತಿಳಿದು ಅಂಧ೦ತಮವನ್ನೂ; ಸುಜೀವರು ಯಥಾರ್ಥವಾಗಿ ತಿಳಿದು ಸ್ವಯೋಗ್ಯ ಮೋಕ್ಷಾನಂದವನ್ನೂ ಹೊಂದುವರು.

10. ವಿಶಿಷ್ಠಾಧಿಕಾರಿಗಳು ಉಪಾಸಿಸಲು ಯೋಗ್ಯವಾದ ಭಗವಂತನ ವಿಭೂತಿ ರೂಪಗಳೂ; ವಿಭೂತಿ ರೂಪ ಸನ್ನಿಧಾನದಿಂದಲೇ ಆಯಾ ವಸ್ತುಗಳು ತಂತಮ್ಮ ಜಾತಿಯಲ್ಲಿ ಉತ್ತಮವೆನಿಸಿದೆ. ಅವುಗಳ ನಾಮ ರೂಪ ಕ್ರಿಯೆಗಳೆಲ್ಲವೂ ಶ್ರೀ ಭಗವಂತನ ಅಧೀನವಾದುವು.

11. ವ್ಯಾಪ್ತೋಪಾಸಕರು ಭಜಿಸಲು ಯೋಗ್ಯವಾದ ಶ್ರೀಶನ ವಿಶ್ವರೂಪದ ವರ್ಣನೆ ಅವನ ಅನಂತ ಮಹಿಮೆ.

12. ಶ್ರೀದೇವಿ ಪರಿಯಾದ ಶ್ರೀಮನ್ನಾರಾಯಣನ ಉಪಾಸನೆಯೇ ಅತಿ ಸುಲಭ. ಶೀಘ್ರ ಫಲಕಾರಿ ಮತ್ತು ಉಭಯೋಪಾಸನಾ ಫಲಪ್ರದವಾದುದರಿಂದ ಭಕ್ತನು ಕೇವಲ ಶ್ರೀದೇವಿಯನ್ನಲ್ಲದೆ ಶ್ರೀಶನನ್ನೂ ಭಜಿಸಿ ಸರ್ವ ಶ್ರೇಯೋಭಾಜನರಾಗುವರು.

13. ಕ್ಷೇತ್ರ ವಿವರಣೆ - ಅದರ ವಿಕಾರಗಳು - ಕ್ಷೇತ್ರಜ್ಞನ ಮಹಿಮೆ ಅವನನ್ನು ತಿಳಿದ ಜ್ಞಾನಿಗಳ ಲಕ್ಷಣ ಮತ್ತು ಜ್ಞಾನಫಲ!!

14. ತ್ರಿಗುಣ ಅಂದರೆ ಸತ್ವರಜಸ್ತಮೋ ಗುಣಗಳ ಸ್ವರೂಪ, ಅವುಗಳ ಕಾರ್ಯ, ಫಲಗಳ ವರ್ಣನೆ, ಗುಣಾತೀತನಾಗಲು ಉಪಾಯ.

15. ಸಂಸಾರ ಸ್ವರೂಪ. ಜಗತ್ತೆಂಬ ಅಶ್ವತ್ಥದ ವರ್ಣನೆ. ಸಂಸಾರ ತರುಣೋಪಾಯ; ಶ್ರೀಹರಿ ಸರ್ವೋತ್ತಮತ್ವ; ಜೀವಜಡಾತ್ಯಂತ ಭಿನ್ನತ್ವ; ಶ್ರೀಪತಿತ್ವ; ಶ್ರೀ ಮುಖ್ಯಪ್ರಾಣ ನಿಯಾಮಕತ್ವ; ಸರ್ವ ಜಗಜ್ಜನ್ಮಾದಿ ಸ್ವತಂತ್ರಕಾರಣತ್ವ; ಮುಕ್ತಿದಾತೃತ್ವ; ಶಾಸ್ತ್ರಸಾರ ನಿರೂಪಣೆ!

16. ದೈವೀ ಸಂಪತ್ತು - ಅಸುರೀ ಸಂಪತ್ತುಗಳ ವರ್ಣನೆ. ಅಸುರೀ ಸಂಪತ್ತಿನ ಅನರ್ಥ ಫಲ. ಶಾಸ್ತ್ರವೇ ಅನುಸರಣೀಯವಾಗಿದೆ. ಸ್ವಬುದ್ಧಿ ಕುತರ್ಕಗಳಲ್ಲ. ಶ್ರೀ ಹರಿಯೇ ಸಚ್ಚಾಸ್ತ್ರ ಪ್ರವರ್ತಕನು.

17 ಸತ್ವಾದಿ ಗುಣಗಳ ವರ್ಣನೆ. ಶ್ರದ್ಧೆ ಆಹಾರ ಯಜ್ಞ; ತಪಃ ( ತ್ರಿವಿಧ ) ದಾನಗಳ ಸಾತ್ವಿಕತೆ, ರಾಜಸತೆ, ತಾಮಸತೆಗಳ ವರ್ಣನೆ. ತತ್ಫಲ ಕಥನ.

18. ಮಹಾ ಪುರುಷಾರ್ಥವಾದ ಮೋಕ್ಷಕ್ಕೆ ಜ್ಞಾನವೇ ಸಾಧನ ಜ್ಞಾನವು. ಶ್ರವಣಾದಿಗಳಿಂದಲೇ ಜನ್ಯವು. ಶ್ರವಣಾದಿಗಳು ಭಕ್ತಿಯುತವಾಗಿರಬೇಕು. ಭಕ್ತಿಗೆ ಇಂದ್ರಿಯ ನಿಗ್ರಹ, ಕರ್ಮ ಫಲ, ತ್ಯಾಗಗಳು ಸಾಧನವಾಗಿದೆ. ಮಹಿಮಾ ಜ್ಞಾನವಿಲ್ಲದೆ ಭಕ್ತಿಯೇ ಇಲ್ಲ. ಅಂಥಹಾ ಭಕ್ತಿಯಿಂದ ಪ್ರಸನ್ನನಾಗಿ ಶ್ರೀ ಮುಖ್ಯಪ್ರಾಣ ವಲ್ಲಭನು ಸ್ವರೂಪಾನಂದಾವಿರ್ಭಾವ ರೂಪವಾದ ಮುಕ್ತಿಯನ್ನು ದಯಪಾಲಿಸುವನು.

ಇಂತೂ 18 ಅಧ್ಯಾಯಗಳಿಂದ ಕೂಡಿದ ಶ್ರೀಮದ್ಭಗವದ್ಗೀತೆಯನ್ನು ಶ್ರೀಮನ್ಮಹಾಭಾರತ ಪಾರಿಜಾತ ಮಧುವನ್ನು - ಶ್ರೀಕೃಷ್ಣ ಅರ್ಜುನ ಸಂವಾದವನ್ನು ಶ್ರೀ ವೇದವ್ಯಾಸದೇವರು ರಚಿಸಿ ಭೀಷ್ಮ ಪರ್ವದಲ್ಲಿ ಗ್ರಥಿಸಿದರು.

" ಶ್ರೀ ರಾಯರು " ಗೀತಾವಿವೃತ್ತಿ " ಯ ವೈಶಿಷ್ಟ್ಯ "

1. ಭಾಷ್ಯ ತಾತ್ಪರ್ಯಗಳಿಗನುಸಾರವಾಗಿ ಗೀತೆಯ ಶ್ಲೋಕಗಳಿಗೆ ಸರಳವಾಗಿ ಅರ್ಥವನ್ನು ವರ್ಣಿಸುವುದು.

2. ಅಲ್ಲಲ್ಲಿ ಭಾಷ್ಯ ತಾತ್ಪರ್ಯಗಳ ಸಮಗ್ರ ಆಶಯವನ್ನು ಸಂಗ್ರಹಿಸಿ ಕೊಡುವುದು.

3. ಗೀತೆಯಲ್ಲಿ ಬರುವ " ಮಹಾರಥ " ಮುಂತಾದ ಶಬ್ದಗಳಿಗೆ ಅಪೂರ್ವವಾದ - ಸೊಗಸಾದ ಅರ್ಥವನ್ನು ನೀಡುವುದು.

4. ಗೀತೆಯಲ್ಲಿ ಅಪಾತತಃ ತೋರುವ ವಿರೋಧಗಳನ್ನು ಭಾಷ್ಯ ತಾತ್ಪರ್ಯಗಳ ಆಶಯಕ್ಕೆ ಚ್ಯುತಿ ಬಾರದಂತೆ ಪರಿಹರಿಸುವುದು.

5. ಗೀತೆಯ ಪರಿಶುದ್ಧ ಪಾಠವನ್ನು ನಿರ್ಧರಿಸಲು ಸಹಕಾರಿಯಾಗುವುದು.

6. ಗೀತೆಯ ಪೂರ್ವೋತ್ತರ ಅಧ್ಯಾಯಗಳಿಗೆ ಸೊಗಸಾಗಿ ಸಂಗತಿಯನ್ನು ಪ್ರದರ್ಶಿಸುವುದು.

7. ಗೀತೆಯಲ್ಲಿ ಕಂಡು ಬರುವ ಚ, ತು, ವೈ, ಅಪಿ, ಏವ, ಹಿ ಮುಂತಾದ ಶಬ್ದಗಳಿಗೂ ಸ್ವಾರಸ್ಯಕರವಾದ ಅರ್ಥವನ್ನು ಹೇಳುವುದು.

8. ಅಲ್ಲಲ್ಲಿ ವ್ಯಾಕರಣ ಸೂತ್ರಗಳನ್ನುದಾಹರಿಸಿ ಗೀತೆಯ ಶಬ್ದಗಳಿಗೆ ನಿಷ್ಪತ್ತಿಯನ್ನು ತೋರಿಸುವುದು.

9. ಗೀತೆಯಲ್ಲಿ ಬರುವ ವಿಷಯಗಳ ಸಮರ್ಥನೆಗೆ ಬ್ರಹ್ಮಸೂತ್ರಗಳನ್ನುದಾಹರಿಸುವುದು.

10. ವ್ಯಾಖ್ಯಾನದ ಸಮಯದಲ್ಲಿ ಎದುರಾಗುವ ಕ್ಲಿಷ್ಟ ಸಮಸ್ಯೆಗಳನ್ನು ಬಾಳೇಹಣ್ಣು ಸುಲಿದಂತೆ ಸುಲಲಿತವಾಗಿಯೂ; ಸುಂದರವಾಗಿಯೂ ಮತ್ತು ಸರಳವಾಗಿಯೂ ಪರಿಹರಿಸುವುದು.

11. ಟೀಕೆಯಲ್ಲಿ ಅಸ್ಪಷ್ಟವಾದ ಪ್ರಮೇಯಗಳನ್ನು ಒಟ್ಟೊಟ್ಟಿಗೆ ಸಂಗ್ರಹಿಸುವುದು.

12. ಪೂರ್ವಾಚಾರ್ಯರಿಗೆ ಗೌರವ ಕೊಟ್ಟು ಅವರ ಅಭಿಪ್ರಾಯದ ಉಲ್ಲೇಖ.

13. ಅನ್ಯ ಶಾಸ್ತ್ರ ಪಾಂಡಿತ್ಯ ಪ್ರದರ್ಶನ

14. ಟೀಕೆಯಲ್ಲಿ ಉದಾಹೃತವಾದ ಆಕರ ಗ್ರಂಥಗಳ ಪೂರ್ಣ ವಾಕ್ಯದ ಉಲ್ಲೇಖ.

ಶ್ರೀ ವಾದೀಂದ್ರತೀರ್ಥರು...

ಗೀತಾಮಾತ್ಯರ್ಥದೂತಾಶ್ರೀತಜನದುರಿತಾಮಿಂದುವಂಶಪ್ರಸೂತೌ
ವ್ಯಾಚಕ್ಷಾಣೇ ಮುರುದ್ವಿಷ್ಯಭಿಜನಮಭಜದ್ ಭದ್ರಮಿಂದೋರನಿದ್ರಂ ।
ಧೀರಶ್ರೀ ರಾಘವೇಂದ್ರತ್ವಯಿ ಪುನರಘೆ ಹಂಸವಂಶೋದಿತೇ ತಾಂ
ವ್ಯಾಕುರ್ವತ್ಯದ್ಯ ಭವ್ಯ೦ ಕಥಮಿವ ನ ಭಜೇದಾಶು ಮಿತ್ರಾನ್ವವಾಯಃ ।।

ಚಂದ್ರ ವಂಶದಲ್ಲಿ ಅವತರಿಸಿದ ಶ್ರೀ ಕೃಷ್ಣ ಪರಮಾತ್ಮನು ಗೀತೋಪದೇಶ ಮಾಡಿದಾಗ ಇದು ನಮ್ಮ ವಂಶದ ಕೊಡುಗೆ ಎಂದು ಚಂದ್ರ ವಂಶವು ಸಂತೋಷಗೊಂಡಿತು. ಚಂದ್ರ ವಂಶಕ್ಕೆ ಮಂಗಳವಾಯಿತು. ನಿಜ.

ಆದರೆ ಹಂಸ ವಂಶದಲ್ಲಿ ಬಂದ ಶ್ರೀ ಗುರುಸಾರ್ವಭೌಮರು ಅದಕ್ಕೆ " ಗೀತಾವಿವೃತಿ " ಯೆಂಬ ವ್ಯಾಖ್ಯೆಯನ್ನು ಬರೆದಾಗ ಸೂರ್ಯ ವಂಶವೂ ಮಂಗಳವನ್ನು ಹೊಂದಿತು. ಏಕೆಂದರೆ...

" ಹಂಸ " ಶಬ್ದಕ್ಕೆ " ಸಂನ್ಯಾಸಿ " ಎಂಬುದು ಒಂದು ಅರ್ಥವಾದರೆ; " ಸೂರ್ಯ " ಯೆಂಬ ಮತ್ತೊಂದು ಅರ್ಥವಿದೆ.

ಆ ದೃಷ್ಟಿಯಲ್ಲಿ ಶ್ರೀ ಮಂತ್ರಾಲಯ ಪ್ರಭುಗಳು ಸೂರ್ಯ ವಂಶದವರೆಂದು ಶ್ರೀ ವಾದೀಂದ್ರತೀರ್ಥರು ಚಮತ್ಕಾರ ತೋರಿಸಿದ್ದಾರೆ.

" ಮಿತ್ರ " ಶಬ್ದಕ್ಕೆ " ಸೂರ್ಯ " ಯೆಂಬ ಅರ್ಥವಿರುವಂತೆ; " ಸ್ನೇಹಿತರು " ಯೆಂಬ ಅರ್ಥವೂ ಇರುವುದರಿಂದ ಶ್ರೀ ಮಂತ್ರಾಲಯ ಪ್ರಭುಗಳಲ್ಲಿ ಸ್ನೇಹ ರೂಪ ಭಕ್ತಿಯುಳ್ಳವರೆಲ್ಲರೂ ಶ್ರೀ ರಾಯರ " ಗೀತಾವಿವೃತಿ " ಪಠಣದಿಂದ ಶುಭವನ್ನು ಪಡೆದರು ಎಂಬುದು ಇಲ್ಲಿಯ ತಾತ್ಪರ್ಯ!

" ಉಪ ಸಂಹಾರ "

ಈ ಗೀತಾಮೃತವನ್ನು ಅಭಕ್ತರಿಗೆ - ಡಾಂಭಿಕರಿಗೆ - ತಪೋಹೀನರಿಗೆ - ಗುರು ಸೇವಾ ಹೀನರಿಗೆ - ಹರಿ ಗುರು ಸುಜನ ದ್ವೇಷಿಗಳಿಗೆ ಹೇಳಿ ಕೊಡಬೇಡ.

ಅರ್ಜುನಾ! ನನ್ನ ಭಕ್ತರಿಗೆ ಯಾರೇ ಆಗಲೀ, ಸಜ್ಜನರಿಗೆ ಉಪದೇಶಿಸುವವನು ನನ್ನ ಸುಭಕ್ತನಾಗಿ, ಜ್ಞಾನದಿಂದ ನನ್ನ ಲೋಕವನ್ನು ಹೊಂದುವನು.

ಅಂಥಹಾ ಸಜ್ಜನ ಭಕ್ತನಗಿಂತಲೂ ನನಗೆ ಪ್ರಿಯರಿಲ್ಲ!

ಈ ಗೀತಾ ಶಾಸ್ತ್ರವನ್ನು ಓದಿದವನು ನನ್ನನ್ನು ಜ್ಞಾನ ಯಜ್ಞದಿಂದ ಪೂಜಿಸುತ್ತಿರುವನು.

ಶ್ರದ್ಧೆಯಿಂದ ಅಸೂಯೆ, ಮತ್ಸರಗಳನ್ನು ತೊರೆದು, ಕೇಳಿದವನೂ ಕೂಡಾ ನನ್ನದಾದ ಸುಖಮಯ ಪುಣ್ಯ ಲೋಕಗಳನ್ನು ಹೊಂದಿ ಯಥಾಯೋಗ್ಯವಾಗಿ ಆನಂದಿಸಿ ಮುಕ್ತನಾಗಿರುವನು!!

ಶ್ರೀ ರಾಯರು " ಗೀತಾವಿವೃತಿ " ಅಂತ್ಯದಲ್ಲಿ...

ಇತಿ ಶ್ರೀಕೃಷ್ಣಗೀತಾಭಾಷ್ಯಾದ್ಯುಕ್ತಾರ್ಥ ಸಂಗ್ರಹಃ ।
ರಾಘವೇಂದ್ರೇಣ ಯತಿನಾ ಕೃತಃ ಸಜ್ಜನ ಸಂವಿದೇ ।।
**********

ಶ್ರೀಮದ್ ಭಗವದ್ಗೀತಾ ಚಿಂತನ  

ಗೀತಾಜಯಂತಿ ವಿಶೇಷ ಸಂಚಿಕೆ

ಭಗವದ್ಗೀತೆಯು ಜಗನ್ಮಾನ್ಯವಾದ ಅಮರ ಕೃತಿ ; ಎಲ್ಲರಿಗೂ ಅತ್ಯಂತ ಪ್ರಿಯಗ್ರಂಥ ಗಾತ್ರದಲ್ಲಿ ಅದರಂತಹ ಪುಟ್ಟ ತಾತ್ವಿಕೃತಿ ಜಗತ್ತಿನಲ್ಲೇ ಮತ್ತೊಂದಿಲ್ಲ ;  ಅದರಂತೆ ಹಿರಿಮೆಯಲ್ಲಿ ಅದನ್ನು. ಮೀರುವ ಗ್ರಂಥ ಕೂಡ .ಅದರಲ್ಲಿ ಬರುವ ಮಹಾಭಾರತವೊ ಹಾಗೇಯೇ ;  ಅರ್ಥದಲ್ಲಿರಲ್ಲಿ ಗಾತ್ರದಲ್ಲೂ ಇಂದೂ ಅದೇ ವಿಶ್ವದ ಸಾರ್ವಭೌಮಗ್ರಂಥ ಮಹಾಭಾರತವು ಮೂಲತಃ ಕೃಷ್ಣನ ಕಥೆಯಾದರೆ ಗೀತೆ ಆ ಕೃಷ್ಣನ ಉಪದೇಶದಸಾರವಾಗಿದೆ ಗೀತೆಯು ಮಹಾಭಾರತದ ದರ್ಶನವಾದರೆ ಮಹಾಭಾರತವು ಗೀತಾತತ್ವದ ನಿದರ್ಶನವಾಗಿದೆ.. ಗೀತೆಯು ವಾಮನನಾದರೆ ಮಹಾಭಾರತವು  ಅದರ ತ್ರಿವಿಕ್ರಮರೂಪವಾಗಿದೆ . ವಾಮನ - ತ್ರಿವಿಕ್ರಮ ಎರಡೂ ಮಹಾವಿಷ್ಣುವಿನ ಎರಡು ರೂಪಗಳೇ ಆಗಿವೆ . ಅರ್ಜುನನ ತಿಳಿವಿಗಾಗಿ ಯಾದವಕೃಷ್ಣ ಗೀತೆಯನ್ನು ಉಪದೇಶಿಸಿದರೆ ಜಗತ್ತಿನ ತಿಳಿವಿಗಾಗಿ ವಾಸಿಷ್ಠಕೃಷ್ಣ ವೇದವ್ಯಾಸದೇವರು ಅದನ್ನು ಗ್ರಂಥರೂಪದಲ್ಲಿ ಒದಗಿಸಿದ್ದಾರೆ..

ಏಕಾಂತೆ ಕಥಯನ್ನಪಿ ವ್ಯಾಸರೂಪೇಣ ತದೇವ ಲೋಕೇ ಪ್ರಕಾಶ್ಯತಿ ಹಿ ||
ಅವುಗಳಲ್ಲಿ ಯಾವ ಒಂದನ್ನು ತಿಳಿಯದಿದ್ದರೂ ಉಳಿದ ಮತ್ತೂಂದು ಅರ್ಥವಾಗುವುದಿಲ್ಲ.

ಪದ್ಮನಾಭನ ಮುಖಪದ್ಮದಿಂದ ಹೂರಹೂಮ್ಮಿದ ಗೀತೆ
ಯಾ ಸ್ವಯಂ ಪದ್ಮನಾಭಸ್ಯ
ಮುಖಪದ್ಮಾದ್ವಿನಿಸೃತಾ
ವ್ಯಾಸರ ಮುಖಪದ್ಮದಿಂದ ಜಗತ್ತಿಗೆ ತಲುಪಿತು .

ಮಹಾಭಾರತವು ಸಕಲ ಶಾಸ್ತ್ರಗಳ ಸಾರ

ಶಾಸ್ತ್ರೇಷು ಭಾರತಂ ಸಾರಂ ತತ್ರ ನಾಮಸಹಸ್ರಕಮ್ | 
ವೈಷ್ಣವಂ ಕೃಷ್ಣಾಗೀತಾ ಚ ತಜ್ಜ್ಞಾನತ್ ಮುಚ್ಯತೇಂಜಸಾ ||
ಶಾಸ್ತ್ರಗಳಲ್ಲಿ ಭಾರತವು ಸಾರಭೂತವಾದುದು .ಅದರಲ್ಲಿ ವಿಷ್ಣುಸಹಸ್ರನಾಮವೂ ಶ್ರೀಕೃಷ್ಣನು ಉಪದೇಶಿಸಿದ ಗೀತೆಯು ಸಾರಭೂತವಾದವು .ಇವುಗಳ ಜ್ಞಾನದಿಂದ ನಿಶ್ಚಿತವಾಗಿ ಮುಕ್ತಿ ಯಾಗುವುದು..

ಭಾರತಪಾರಿಜಾತಮಧುಭೂತಾಂ ಗೀತಮುಪನಿಬಂಧಃ |.
ಭಾರತಂ ಸರ್ವಶಾಸ್ತ್ರೇಷು ಭಾರತೇ ಗೀತಿಕಾ ವರ |
ವಿಷ್ಣೋಸಹಸ್ರನಾಮಾಪಿ ಜ್ಞೇಯಂ ಪಾಠ್ಯಂ ಚ ತದ್ವಯಮ್ ||
ಗೀತೆಯು ಮಹಾಭಾರತದ ಸರ್ವಾರ್ಥ ಸಂಗ್ರಹರೂಪವಾಗಿದ್ದು ಮಹಾಭಾರತಪಾರಿಜಾತಪುಷ್ಪವಾದರೆ ಗೀತೆ ಮಕರಂದದಂತಿದೆ.
ಜಗದ್ಗುರು ಶ್ರೀಮಧ್ವಾಚಾರ್ಯರು ಎರಡಕ್ಕೂ ಅರ್ಥಬರೆದ ಮಹನಿಯರು.

ಈ ವಿಷಯವನ್ನು ಮಹಾಕೌರ್ಮ ಪುರಾಣದಲ್ಲಿ ಹೀಗೆ ಹೇಳಲಾಗಿದೆ.- 
ಸರ್ವಶಾಸ್ತ್ರಗಳಲ್ಲೂ ಶ್ರೇಷ್ಠ ವಾದುದು ಮಹಾಭಾರತ. ಅದರಲ್ಲೂ ಭಗವದ್ಗೀತೆ  ಮತ್ತು ವಿಷ್ಣುಸಹಸ್ರನಾಮಗಳು ಶ್ರೇಷ್ಠವಾಗಿದೆ .ಆದ್ದರಿಂದ ಅವೆರಡನ್ನೂ ತಿಳಿದು  ಪಠಿಸಬೇಕು ಎಂದು 

ಜಗದ್ಗುರು ಶ್ರೀಮಧ್ವಾಚಾರ್ಯರು ಗೀತಾತಾತ್ಪರ್ಯನಿರ್ಣಯದಲ್ಲಿ ತಿಳಿಸಿದ್ದಾರೆ .

ಗೀತಾಗಂಗಾ ಚ ಗಾಯತ್ರೀ ಗೋವಿಂದೇತಿ ಹೃದಿಸ್ಥಿತೇ |
ಚತುರ್ಗಕಾರ ಸಂಯುಕ್ತೇ.ಪುನರ್ಜನ್ಮನವಿದ್ಯತೇ ||
ಮಹಾಭಾರತ (6/43/3)

ಗೀತಾ ,ಗಂಗಾ ,ಗಾಯತ್ರೀ ಮತ್ತು ಗೋವಿಂದ ಎಂಬ ನಾಲ್ಕನ್ನು ಹೃದಯದಲ್ಲಿ ಹೊತ್ತವನಿಗೆ ಮತ್ತೆ ಹುಟ್ಟುವ ಭಯವಿಲ್ಲ .ಗೀತೆಯು ಭಗವಂತನ ಮುಖಪದ್ಮದಿಂದ ಬಂದವಾಣಿ .ಗಂಗೆಯು ಆ ಶ್ರೀಹರಿಯ ಪವಿತ್ರ ಪಾದೋದಕ ,ಗಾಯತ್ರಿಯು ಅವನ ಮಹಿಮೆ. ಅಪಾರ ಎಂದು ಸಾರುವ ವೇದಗಳ ಸಾರಸರ್ವಸ್ವವೆನಿಸಿದ .ಮಹಾಮಂತ್ರ . ಗೋವಿಂದ ಮೋಕ್ಷ ನೀಡುವಂತ ಸಾಕ್ಷಾತ್ ಶ್ರೀಹರಿ ಹೀಗೆ ಚತುರ್ಗಕಾರಗಳಲ್ಲಿ ಮೊಕ್ಷ ಸಾಧನೆಯ ರಹಸ್ಯವೇ ಅಡಗಿದೆ .

ಮಹಾಭಾರತವೇ ತಿಳಿಸಿದಂತೆ.
 ಸರ್ವಶಾಸ್ತ್ರಮಯಿ ಗೀತಾ
ಭಿಷ್ಮಪರ್ವ 43/2

ಸರ್ವಶಾಸ್ತ್ರಾರ್ಥಸಂಗ್ರಹವಾದ ಗೀತೆಯನ್ನು  ಈ ಗೀತಾಜಯಂತಿ ಪರ್ವಕಾಲದಲ್ಲಿ  ಪಠಿಸಿ ಅದರ ಅರ್ಥ ತಿಳಿದು ಪುನೀತರಾಗೋಣ.
        || ಶ್ರೀಕೃಷ್ಣಾರ್ಪಣಮಸ್ತು||
**********

ಶ್ರೀಮದ್ ಭಗವದ್ಗೀತಾ ಚಿಂತನ 

   ಗೀತಾಜಯಂತಿ ವಿಶೇಷ ಸಂಚಿಕೆ -3

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕ ಶರಣಂ ವ್ರಜ

"ಎಲ್ಲ ಧರ್ಮಗಳನ್ನೂ ಬಿಟ್ಟುಬಿಡು, ಬಿಟ್ಟು ನನ್ನೊಬ್ಬನನ್ನೇ ಶರಣು ಹೊಂದು" ಎಂಬ ಮಾತು ಮೇಲ್ನೋಟಕ್ಕೆ ಗೊಂದಲ ಹುಟ್ಟಿಸುವಂತಹುದು. ಈವರೆಗೂ ಧರ್ಮಾಚರಣೆಗೆ ಒತ್ತು ಕೊಟ್ಟ ಕೃಷ್ಣ ಇಲ್ಲಿ ಬಿಡಲು ಸೂಚಿಸುತ್ತಿರುವಂತೆ ಕಾಣುತ್ತದೆ. ಅದರ ಆಂತರ್ಯವನ್ನು ಜಗದ್ಗುರು ಶ್ರೀಮಧ್ವಾಚಾರ್ಯರು ಗೀತಾಭಾಷ್ಯದಲ್ಲಿ ಸ್ಪಷ್ಟಪಡಿಸಿರುವರು. 
ಧರ್ಮತ್ಯಾಗಃ ಫಲತ್ಯಾಗಃ|ಕಥಮನ್ಯಾಥಾ ಯುದ್ಧವಿಧಿಃ |ಯಸ್ತು ಕರ್ಮಫಲತ್ಯಾಗಃ ಸ ತ್ಯಾಗಿತ್ಯ ಬಿಧೀಯತೇ | 

ಇಲ್ಲಿ ಹೇಳಿದ ಧರ್ಮತ್ಯಾಗ ಅಂದರೆ ಧರ್ಮಫಲತ್ಯಾಗ ಹೊರತು ವರ್ಣಾಶ್ರಮ ವಿಹಿತ ಧರ್ಮಗಳ ತ್ಯಾಗವಲ್ಲ ಹಾಗಿದಿದ್ದರೆ ಗೀತೆಯು ಕ್ಷತ್ರಿಯನಿಗೆ ಸ್ವಧರ್ಮವಾಗಿ ಯುದ್ಧವನ್ನು ಹೇಗೆ ವಿಧಿಸುತಿತ್ತು ? ಅಲ್ಲದೆ ಕರ್ಮಫಲ ತ್ಯಾಗಿಯೇ ಕರ್ಮತ್ಯಾಗಿ ಎಂದು ಶ್ರೀಕೃಷ್ಣಪರಮಾತ್ಮನು ಕರ್ಮತ್ಯಾಗಪದಕ್ಕೆ ಆರ್ಥವನ್ನು ತಿಳಿಸಿರುತ್ತಾನೆ 
          -ಗೀತಾಭಾಷ್ಯ 18-66

"ಮಾ ಫಲೇಷು ಕದಾಚನ" ಎಂಬುದಾಗಿ ಅವನು ಹೇಳಿರುವುದು ಅದನ್ನೇ ಅಲ್ಲವೇ ! ಸಕಲ ಅವೈಷ್ಣವಕರ್ಮಗಳನ್ನು ತೊರೆಯುವುದು ಎಂಬುದು ಮತ್ತೊಂದು ಬಗೆಯ ಅರ್ಥ. ಅದು
 "ಮಾ ತೇ ಸಂಗೋಽಸ್ತ್ವಕರ್ಮಣಿ ಎಂಬುದರ ಭಾವ. ಸರ್ವಧರ್ಮಗಳ ಫಲವನ್ನು ನನಗೇ ಒಪ್ಪಿಸು ಎಂಬುದು ಇನ್ನೊಂದು ರೀತಿಯ ಅರ್ಥ.

ಯತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |
ಯತ್ ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ||
  - ಎಂಬುದರ ವಿವರವಿದು. ಈ ಅರ್ಥಗಳನ್ನು ಒಪ್ಪದಿದ್ದಲ್ಲಿ 'ತಸ್ಮಾದ್ಯುದ್ಧ್ವಸ್ವಭಾರತ' ಎಂದು ಅವನು ಹೇಳುವುದು ಹೇಗೆ ಉಚಿತವಾಗುತ್ತಿತ್ತು ?

ಇಲ್ಲಿಯ "ಶರಣಂ ವ್ರಜ" ಎಂಬುದನ್ನು ವಿವರಿಸುತ್ತಾ ಗೀತಾತಾತ್ಪರ್ಯದಲ್ಲಿ  ಮಹಾವಿಷ್ಣುಪುರಾಣದ ವಚನಗಳ ಮೂಲಕ ಶರಣಾಗತಿಯ ಸ್ವರೂಪವನ್ನು *ಜಗದ್ಗುರು ಶ್ರೀಮಧ್ವಾಚಾರ್ಯರು ತೆರೆದಿಟ್ಟಿರುವ ರೀತಿ ತುಂಬಾ ಅಪೂರ್ವವಾದುದು -

ಸರ್ವೋತ್ತಮತ್ವವಿಜ್ಞಾನಪೂರ್ವಂ ತತ್ರ ಮನಃ ಸದಾ |
ಸರ್ವಾಧಿಕಪ್ರೇಮಯುಕ್ತಃ ಸರ್ವಸ್ಯಾತ್ರ ಸಮರ್ಪಣಮ್ ||
ಅಖಂಡಾ ತ್ರಿವಿಧಾ ಪೂಜಾ ತದ್ರತ್ಯೈವ ಸ್ವಭಾವತಃ |
ರಕ್ಷತೀತ್ಯೇವ ವಿಶ್ವಾಸಸ್ತದೀಯೋಽಹಮಿತಿ ಸ್ಮೃತಿಃ ||
ಶರಣಾಗತಿರೇಷಾ ಸ್ಯಾದ್ ವಿಷ್ಣೌ ಮೋಕ್ಷಫಲಪ್ರದಾ ||
        -ಗೀತಾತಾತ್ಪರ್ಯ18-66

ಭಗವಂತನು ಸರ್ವೋತ್ತಮ ಎಂದು ತಿಳಿದು ಅವನಲ್ಲಿ ಸರ್ವಾಧಿವಾದ ಪ್ರೀತಿಯಿಂದ ಕೂಡಿದ ಮನಸ್ಸನ್ನು ಹಾಕಿವುದು, ಎಲ್ಲವನ್ನೂ ಅವನಿಗೆ ಸಮರ್ಪಿಸುವುದು, ಅಖಂಡವಾದ ಮೂರು ಬಗೆಯ ಪೂಜೆಯನ್ನು ಅವನಲ್ಲಿ ಸಹಜವಾದ ಆದರದಿಂದಲೇ ಸಮರ್ಪಿಸುವುದು, ರಕ್ಷಿಸಿಯೇ ರಕ್ಷಿಸುವನು ಏಂಬುದಾಗಿ ನಂಬುವುದು, ನಾನು ಅವನಿಗೆ ಸೇರಿದವನು ಎಂದು ಸದಾ ಸ್ಮರಿಸುವುದು - ಇದು ವಿಷ್ಣುವಿನಲ್ಲಿ ಹೊಂದುವ ಶರಣಾಗತಿ ಎನ್ನಿಸುವುದು. ಮೋಕ್ಷವೇ ಇದಕ್ಕೆ ದೊರೆಯುವ ಫಲ .
          || ಶ್ರೀಕೃಷ್ಣಾರ್ಪಣಮಸ್ತು ||
*****

by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

" ಗೀತಾಜಯಂತೀ - 1 "

" ದಿನಾಂಕ : 25.12.2020 ಶುಕ್ರವಾರ - ಗೀತಾ ಜಯಂತೀ "

ನಾರಾಯಣಂ ನಮಸ್ಕೃತ್ಯ
ನರಂಚೈವ ನರೋತ್ತಮಂ ।
ದೇವೀಂ ಸರಸ್ವತೀಂ ವ್ಯಾಸಂ
ತತೋsಜಯಮುದೀರಯೇತ್ ।।

" ಮಹಾಭಾರತ - A graat source of Universal Knowledge "

ನಮ್ಮ ಇಂದಿನ ಯುವಕ ಯುವತಿಯರು ಅತ್ಯವಶ್ಯವಾಗಿ ಈ ಶ್ರೀಮನ್ಮಹಾಭಾರತ ಗ್ರಂಥವನ್ನು ಶುದ್ಧರಾಗಿ ಓದಿ - ಶ್ರೀ ವೇದವ್ಯಾಸರ ಗ್ರಂಥ ರಚನಾ ವೈಶಿಷ್ಟ್ಯವನ್ನೂ - ಭಾವ ವೈಶಾಲ್ಯವನ್ನೂ - ಪಾತ್ರ ನಿರ್ವಹಣ ಕೌಶಲವನ್ನೂ - ಕಲಾತ್ಮಕತೆಗಳನ್ನು ಅರ್ಥ ಮಾಡಿಕೊಳ್ಳುವಂತಾಗಲಿ.

ಇಂಥಾ ಮಹಾನ್ ಗ್ರಂಥಗಳಿಂದ ನಮ್ಮ ಸಾಂಸ್ಕೃತಿಕ ಪರಂಪರೆ ಜೀವಂತವಾಗಿ ಮೆರೆಯಲು ಸಾಧ್ಯವಾಯಿತು.

ಇಂದಿನ ಯಾಂತ್ರಿಕ ಯುಗದಲ್ಲಿ ವೈಜ್ಞಾನಿಕತೆಯ - ವೈಚಾರಿಕತೆಯ ಬಿಸಿಲುಗುದುರೆಯ ಬೆನ್ನಹತ್ತಿ ಮಾನವ ಸನಾತನ ಧರ್ಮದ ಹಾದಿಯನ್ನು ತೊರದಿದ್ದಾನೆ.

ನವ ನಾಗರೀಕ ಹೆಸರಿನಲ್ಲಿ ಅಧರ್ಮ ಮಾರ್ಗವನ್ನು ತುಳಿಯುತ್ತಿದ್ದಾನೆ.

ನಾನು ಎಲ್ಲಿಂದ ಬಂದೆ?

ಎಲ್ಲಿ ಇದ್ದೇನೆ?

ಎಲ್ಲಿಗೆ ಹೋಗುತ್ತೇನೆ?

ಒಂದೂ ತಿಳಿಯದು.

ಅದರ ಬಗ್ಗೆ ಆಲೋಚನೆ ಮಾಡಲು ಅವನ ಅಹಂಕಾರ ಅಡ್ಡಿ ಮಾಡುತ್ತದೆ.

ಪ್ರಪಂಚದ ಮೇಲೆ ವಿತಿಮೀರಿದ ವ್ಯಾಮೋಹ.

ಏನಾದರೂ ಸಾಧಿಸಬೇಕೆನ್ನುವ ಹಂಬಲ.

ಆದರೆ ಸಾಧಿಸಲಾಗದೆ ಕೈಸುಟ್ಟುಕೊಂಡು ಚಿಂತೆಗೊಳಗಾಗಿದ್ದಾರೆ.

ಮಾನಸಿನ ಶಾಂತಿ ನೆಮ್ಮದಿಗಳನ್ನು ಕಳೆದುಕೊಂಡು ಇಹಪರಗಳೆರಡಕ್ಕೂ ಎರವಾಗಿ ಮಾನವ ಜನ್ಮವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾನೆ.

ಇಂಥಹಾ ಪರಿಸ್ಥಿತಿ ಹಿಂದೆ ಅರ್ಜುನನಿಗೆ ಬಂದಿತ್ತು.

ಅವನಿಗೆ ಜ್ಞಾನೋದಯ ಉಂಟು ಮಾಡಲು " ಭಗವದ್ಗೀತೆ " ಬಂದಿತ್ತು.

ಅವನಿಗೆ ನೆಮ್ಮದಿ ತಂದಿತ್ತು.

ಇಂದು ಮಾನವ ಜನಾಂಗಕ್ಕೆ ಎದುರಾಗಿರುವ ಸವಾಲೂ ಅದೇ - ಪರಿಹಾರವೂ ಅದೇ!

ಜೀವನದ ಎಲ್ಲಾ ಸಮಸ್ಯೆಗಳಿಗೆ ಮನೋವೈಜ್ಞಾನಿಕ ಪರಿಹಾರ ನೀಡುತ್ತಾ ಅಂತಃಕರಣದಲ್ಲಿ ಹುದುಗಿರುವ ಎಲ್ಲಾ ಪಾಪಗಳನ್ನೂ ಪರಿಹರಿಸಿ ಸುಖ - ಶಾಂತಿ - ನೆಮ್ಮದಿ ನೀಡುವ ಪರಮ ಪವಿತ್ರ ಏಕಮಾತ್ರ ಗ್ರಂಥ " ಭಗವದ್ಗೀತೆ ".

ಹೊರ ನೋಟಕ್ಕೆ ಗೀತೆ ಬಲು ಸುಲಭ.

ಆದರೆ ಅರ್ಥ ಮಾಡಿಕೊಳ್ಳುವಲ್ಲಿ ಎಲ್ಲರೂ ಜಾರುತ್ತಾರೆ!

ಅದು ಸುಲಭವಾಗಿ ತನ್ನ ಹಾರ್ದವನ್ನು ತಾನೇ ಬಿಚ್ಚಿ ತೋರುವುದಿಲ್ಲ.

ಶ್ರೀಮದಾಚಾರ್ಯರು ಅದನ್ನು ತೋರಿಸಿದವರು.

ಅಂದು ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಗೀತೆಯನ್ನು ಉಪದೇಶಿಸುತ್ತಿದ್ದಾಗ ಮೇಲೆ ಅರ್ಜುನನ ಧ್ವಜದಲ್ಲಿ ವೀರ ಹನುಮನಾಗಿ. ಹಿಂದೆ ಪಾರ್ಥನ ರಕ್ಷಣೆಗೆಂದು ಶ್ರೀ ಭೀಮಸೇನರಾಗಿ ಶ್ರೀ ಮುಖ್ಯಪ್ರಾಣದೇವರು ಸಾಕ್ಷಾತ್ ಭಗವಂತನ ಮುಖದಿಂದ ಕೇಳಿ ತಿಳಿದಿದ್ದರು.

ಶ್ರೀ ಮಧ್ವ ರೂಪದಿಂದ ಅದರ ಹಾರ್ದವನ್ನು ತೋರಿದರು!
***
" ಗೀತಾಜಯಂತೀ - 2 "
ಭಗವದ್ಗೀತೆ - ಮನುಷ್ಯನ ಮಾನಸಿಕ ಸಮಸ್ಯೆಗಳಿಗೆಲ್ಲ ಸಾರ್ವಕಾಲಿಕವಾದ ಉತ್ತರ ನೀಡುವ ಗ್ರಂಥ. 
ಆದ್ದರಿಂದಲೇ ಶ್ರೀಮದ್ಭಗವದ್ಗೀತ ಒಂದು ವರ್ಗದ ಜನಕ್ಕೆ ಮತ್ತು ಒಂದು ಧರ್ಮದ ಗ್ರಾಹ್ಯವಾದ ಧಾರ್ಮಿಕ ಗ್ರಂಥವೂ ಅಲ್ಲ - ಸೀಮಿತವೂ ಅಲ್ಲ. 
ಕಾಲ - ದೇಶ - ಧರ್ಮಗಳ ಸೀಮೆಯನ್ನು ದಾಟಿ ನಿಲ್ಲ ಬಲ್ಲ ಮಹಾನ್ ಗ್ರಂಥವೆಂದರೆ - ಅದುವೇ " ಶ್ರೀಮದ್ಭಗವದ್ಗೀತೆ ".
ಅಂಥಾ ಅದ್ಭುತವಾದ ಗ್ರಂಥ ನಮ್ಮ ಭಾರದದೇಶದಲ್ಲಿ ನಿರ್ಮಾಣವಾಗಿದೆ.
ಅದರ ನಿರ್ಮಾತೃ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನೂ - ಜಗದ್ಗುರು - ಸರ್ವವೋತ್ತಮನೂ ಆದ ಶ್ರೀ ಕೃಷ್ಣ ಪರಮಾತ್ಮ. 
ಶ್ರೀ ಶ್ರೀ ಸರ್ವಜ್ಞಾಚಾರ್ಯರು ನಮಗೆ ಅನುಗ್ರಹಿಸಿದ ಮೊದಲ ಕೃತಿ " ಗೀತಾಭಾಷ್ಯ ". 
ಮುಂದೆ " ಗೀತಾ ತಾತ್ಪರ್ಯ " ವನ್ನು ರಚಿಸಿಕೊಟ್ಟರು.
ಅ ) ಭಾಷ್ಯದಲ್ಲಿ ಒಂದುರೀತಿ.....
ಆ ) ತಾತ್ಪರ್ಯದಲ್ಲಿ ಒಂದುರೀತಿ...
ಹೀಗೆ ಎರಡು ರೀತಿಗಳಿಂದ ಗೀತೆಗೆ ಕೆಲವೆಡೆ ಅಪೂರ್ವವಾದ ವಿವರಣೆ ನೀಡಿದ್ದಾರೆ ಶ್ರೀ ಸರ್ವಜ್ಞಾಚಾರ್ಯರು ! 
ಆದ್ದರಿಂದ ಎರಡೂ ಗ್ರಂಥಗಳ ಬೆಳಕಿನಲ್ಲಿ ಗೀತೆಯ ಅಧ್ಯಯನ ನಡೆಸಬೇಕು. 
ಆಗಲೇ ಗೀತೆಯ ನಿಜವಾದ ಹಾರ್ದ ತೆರೆದುಕೊಳ್ಳುತ್ತದೆ.
ಅದಕ್ಕೆ ಶ್ರೀ ಮಂತ್ರಾಲಯ ಪ್ರಭುಗಳು " ಗೀತಾವಿವೃತಿ " ಯಲ್ಲಿ ಸರಳ ಸುಂದರವಾಗಿ, ಸಂಕ್ಷೇಪವಾಗಿ ಗೀತೆಗೆ ಎರಡೂ ಬಗೆ ವಿವರಣೆ ತೋರಿಸಿದ್ದಾರೆ!!
" ಗೀತೆಯಲ್ಲಿ ಶ್ಲೋಕಗಳೆಷ್ಟು? "
ಭಗವದ್ಗೀತೆಯಲ್ಲಿರುವ ಶ್ಲೋಕಗಳ ಸಂಖ್ಯೆ 700 ಎಂದು ಕೆಲವರ ಅಭಿಪ್ರಾಯ!
ಇನ್ನೂ ಕೆಲವರು ಗೀತೆಯಲ್ಲಿರುವ ಶ್ಲೋಕಗಳ ಸಂಖ್ಯೆ 745 ಎಂದು ಹೇಳುತ್ತಾರೆ.
ಇದಕ್ಕೆ ಆಧಾರವಾಗಿ...
ಷಟ್ ಶತಾನಿ ಸವಿಂಶಾನಿ 
ಶ್ಲೋಕಾನಾ೦ ಪ್ರಾಹ ಕೇಶವಃ ।
ಅರ್ಜುನಃ ಸಪ್ತಪಂಚಾಶತ್ ಸ
ಪ್ತ ಷಷ್ಠಿ೦ ತು ಸಂಜಯಃ ।
ಧೃತರಾಷ್ಟ್ರ ಶ್ಲೋಕಮೇಕಂ 
ಗೀತಾಯಾ೦ ಮಾನಮುಚ್ಯತೇ ।।
1. ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದ ಶ್ಲೋಕಗಳ ಸಂಖ್ಯೆ : 620
2. ಅರ್ಜುನ ಹೇಳಿರುವ ಶ್ಲೋಕಗಳ ಸಂಖ್ಯೆ : 57
3. ಸಂಜಯ ಹೇಳಿರುವ ಶ್ಲೋಕಗಳ ಸಂಖ್ಯೆ : 67
4. ಧೃತರಾಷ್ಟ್ರ ಹೇಳಿದ ಶ್ಲೋಕದ ಸಂಖ್ಯೆ : 01
ಒಟ್ಟು :: 745
ಗೀತೆಗೆ ಭಾಷ್ಯವನ್ನು ಬರೆದ.....
ಶ್ರೀ ಶಂಕರಾಚಾರ್ಯರಾಗಲೀ - ಶ್ರೀ ರಾಮಾನುಜಾಚಾರ್ಯರಾಗಲೀ - ಶ್ರೀ ಶ್ರೀಮನ್ಮಧ್ವಾಚಾರ್ಯರಾಗಲೀ ಇಂತಿಷ್ಟೇ ಶ್ಲೋಕಗಳೆಂದು ಖಚಿತವಾಗಿ ಎಲ್ಲಿಯೂ ಹೇಳದಿರುವುದರಿಂದ ಈ ಸಮಸ್ಯೆ ಮತ್ತಷ್ಟೂ ಕಗ್ಗಂಟಾಗಿದೆ.
ಆದರೆ ಶ್ರೀ ರಾಘವೇಂದ್ರ ಪ್ರಭುಗಳು.....
" ಗೀತಾರ್ಥ ಸಂಗ್ರಹ " 
ಎಂಬ ಗ್ರಂಥದ ಆಧಾರದಿಂದ.....
ಭಗವದ್ಗೀತೆಯಲ್ಲಿರುವ ಶ್ಲೋಕಗಳ ಸಂಖ್ಯೆ : 701 
ಎಂದು ನಿರ್ಧರಿಸಬಹುದಾಗಿದೆ!!
ಈ ಹಿನ್ನೆಲೆಯಲ್ಲಿ ಶ್ರೀ ಗುರುಸಾರ್ವಭೌಮರು 18 ಅಧ್ಯಾಯಗಳಲ್ಲಿ ಪ್ರತಿಪಾದ್ಯವಾದ ವಿಷಯವನ್ನು ಪ್ರಾರಂಭದಲ್ಲಿಯೇ ಅರುಹಿ, ಈ ಗ್ರಂಥವನ್ನು ಓದಲು ಹೊರಟ ಎಲ್ಲಾ ಸಜ್ಜನರಿಗೂ ಮಹತ್ತರ ಫಲ ಲಭಿಸುವಂತೆ ಅನುಗ್ರಹಿಸಿರುತ್ತಾರೆ.
" ಗೀತಾಭಾಷ್ಯ "
ಆದಿ :
ದೇವಂ ನಾರಾಯಣಂ 
ನತ್ವಾ ಸರ್ವದೋಷ ವಿವರ್ಜಿತಂ ।
ಪರಿಪೂರ್ಣ೦ ಗುರೂ೦ಶ್ಚಾನ್ 
ಗೀತಾರ್ಥ ವಕ್ಷ್ಯಾಮಿ ಲೇಶತಃ ।।
ಅಂತ್ಯ :
ಪೂರ್ಣಾದೋಷ ಮಹಾವಿಷ್ಣೋ: 
ಗೀತಾಮಾಶ್ರಿತ್ಯ ಲೇಶತಃ ।
ನಿರೂಪಣಂ ಕೃತಂ ತೇನ 
ಪ್ರೀಯತಾಂ ಮೇ ಸದಾ ವಿಭು: ।।
" ಗೀತಾ ತಾತ್ಪರ್ಯ "
ಆದಿ :
ಸಮಸ್ತ ಗುಣ ಸಂಪೂರ್ಣ೦ 
ಸರ್ವದೋಷ ವರ್ಜಿತಂ ।
ನಾರಾಯಣಂ ನಮಸ್ಕೃತ್ಯ 
ಗೀತಾ ತಾತ್ಪರ್ಯಮುಚ್ಯತೇ ।।
ಅಂತ್ಯ :
ಗೀತಾತಾತ್ಪರ್ಯ :ನೀ:ಶೇಷ ದೋಷ 
ರಹಿತ ಕಲ್ಯಾಣಾಶೇಷ ಸದ್ಗುಣ ।
ಭೂತಿಸ್ವಯಂಭು ಶರ್ವಾದಿ 
ವಂದ್ಯ೦ ತ್ವಾ೦ ನೌಮಿ ಮೇ ಪ್ರಿಯಮ್ ।।
" ಗೀತಾವಿವೃತಿ "
ಆದಿ :   
ಲಕ್ಷ್ಮೀ ನಾರಾಯಣಂ ನತ್ವಾ 
ಪೂರ್ಣಬೋಧಾನ್ ಗುರೂನಪಿ ।
ಕುರ್ಮ: ಶ್ರೀಕೃಷ್ಣ ಗೀತಾಯ 
ಭಾಷ್ಯಾದುಕ್ತಾರ್ಥ ಸಂಗ್ರಹಮ್ ।।
ಅಂತ್ಯ :
ಅಶೇಷ ಗುಣಪೂರ್ಣಾಯ 
ದೋಷದೂರಾಯ ವಿಷ್ಣವೇ ।
ನಮಃ ಶ್ರೀಪ್ರಾಣನಾಥಾಯ 
ಭಕ್ತಾಭೀಷ್ಟಪ್ರದಾಯಿನೇ ।।
ಇತಿ ಶ್ರೀಕೃಷ್ಣಗೀತಾಭಾಷ್ಯಾ-
ದ್ಯುಕ್ತಾರ್ಥ ಸಂಗ್ರಹಃ ।
ರಾಘವೇಂದ್ರೇಣ ಯತಿನಾ 
ಕೃತಃ ಸಜ್ಜನ ಸಂವಿದೇ ।।
***
" ಗೀತಾಜಯಂತೀ - 3 "
" ಭಗವದ್ಗೀತೆ - ಒಂದು ಚಿಂತನ -  ಶ್ರೀ ರಾಯರ ಕಣ್ಣಲ್ಲಿ ಶ್ರೀ ಕೃಷ್ಣ ಗೀತಾಮೃತಮ್ "
ಶ್ರೀ ಕೃಷ್ಣ ಪರಮಾತ್ಮನು, ಇಂದ್ರ ದೇವರ ಅಂಶ ಸಂಭೂತನೂ, ತನಗೆ ಪ್ರಿಯತಮನೂ ಆದ ಅರ್ಜುನನಿಗೆ... 
ಶ್ರೀ ನಾರಾಯಣನ ದ್ವೇಷಿ - ತದನುಬಂಧಿಗಳನ್ನು ನಿಗ್ರಹಿಸುವುದಕ್ಕಾಗಿ ಮಾಡುವ ಯುದ್ಧವು ಸರ್ವ ಸಾಧಾರಣವಾದ ಧರ್ಮವೇ ಆಗಿದೆ ಮತ್ತು ಕ್ಷತ್ರೀಯರಿಗೆ ವಿಶೇಷವಾದ ಪರಮ ಧರ್ಮವಾಗಿದೆ. 
ಹೀಗಿರಲು ಬಂಧು ಸ್ನೇಹದಿಂದ ಅದನ್ನು ಅಧರ್ಮವೆಂದು ಶಂಕಿಸಿ - ಯುದ್ಧ ವಿಮುಖನಾದಂತಾದ ಅರ್ಜುನನ್ನು ನಿಮಿತ್ತ ಮಾಡಿಕೊಂಡು ಶ್ರೀ ಹರಿ ಭಗವದ್ಭಕ್ತರ ಶುಶ್ರೂಷೆ - ಅನಸೂಯೆ - ಭಕ್ತಿ - ಸ್ವರ್ಣಾಶ್ರಮ ವಿಹಿತ ಸತ್ಕರ್ಮಾನುಷ್ಠಾನ - ಭಗವಂತನಲ್ಲಿ ಸರ್ವ ಸುಕರ್ಮ ಫಲ ಸಮರ್ಪಣೆ - ಶಾಸ್ತ್ರ ವಿಚಾರ ನಿಷ್ಠೆ, ಮೊದಲಾದ ಸದ್ಧರ್ಮವನ್ನು ನಿರೂಪಿಸಿ ಸರ್ವ ಸುಜನರನ್ನೂ ಉದ್ಧರಿಸಲು " ಭಗವದ್ಗೀತೆ " ಯನ್ನು ಉಪದೇಶಿಸಿದನು. 
ಶ್ರೀ ರಾಯರು " ಗೀತಾವಿವೃತಿ " ಪ್ರಾರಂಭದಲ್ಲಿ... 
ಲಕ್ಷ್ಮೀ ನಾರಾಯಣಂ ನತ್ವಾ 
ಪೂರ್ಣಬೋಧಾನ್ ಗುರೂನಪಿ ।
ಕುರ್ಮ: ಶ್ರೀಕೃಷ್ಣ ಗೀತಾಯ 
ಭಾಷ್ಯಾದುಕ್ತಾರ್ಥ ಸಂಗ್ರಹಮ್ ।। 
ಭಾರತಂ ಸರ್ವ ಶಾಸ್ತ್ರೇಷು 
ಭಾರತೇ ಗೀತಿಕಾ ವರಾ ।
ವಿಷ್ಣೋಸಹಸ್ರನಾಮಾಪಿ 
ಜ್ಞೇಯಂ ಪಾಠ್ಯ೦ ಚ ತದ್ದ್ವಯಮ್ ।। 
ಸರ್ವ ಶಾಸ್ತ್ರಗಲ್ಲಿಯೂ ಶ್ರೇಷ್ಠವಾದುದು ಮಹಾಭಾರತ. 
ಆ ಮಹಾಭಾರತದಲ್ಲಿಯೂ ಭಗವದ್ಗೀತೆ ಹಾಗೂ ವಿಷ್ಣು ಸಹಸ್ರ ನಾಮ ಶ್ರೇಷ್ಠವಾದವುಗಳು. 
ಆದ್ದರಿಂದ ಅವೆರಡನ್ನೂ ತಿಳಿದುಕೊಳ್ಳಬೇಕು ಮತ್ತು ಪಠಿಸಬೇಕು. 
ಶಾಸ್ತ್ರಗಳಲ್ಲಿ " ಶ್ರೀ ಮಹಾಭಾರತ " ವು ಬಲು ರಮ್ಯವಾಗಿದೆ. 
ಭಾರತವೆಂದರೆ......
" ಪಂಚಮ ವೇದ " ವೆನಿಸಿ - " ಸರ್ವ ವೇದ ಪುರಾಣಾದಿಸಾರ " ವೆಂದು ಪ್ರಖ್ಯಾತವಾಗಿದೆ. 
ಶ್ರೀಮನ್ಮಹಾಭಾರತದಲ್ಲಿ " ಗೀತೆ ಮತ್ತು ಶ್ರೀ ವಿಷ್ಣು ಸಹಸ್ರನಾಮ " ಎಂಬ ಎರಡು ಘಟ್ಟಗಳಿವೆ. 
ಸಾಕ್ಷಾತ್ ಶ್ರೀ ಪದ್ಮನಾಭನ ಮುಖ ಪದ್ಮದಿಂದ ಹೊರ ಹೊಮ್ಮಿ ಬಂದ " ಗೀತೆ " ಗೆ ಮಿಗಲಾದ ಗ್ರಂಥವಿಲ್ಲ! 
ತಾಪತ್ರಯ ದುಃಖಿತನಾಗಿ - ಸಂಸಾರಾಂಧಕಾರದಲ್ಲಿ ತೊಳಲುತ್ತಾ - ಸಾಧು ಸಜ್ಜನರು ಕಷ್ಟ ಪಡುತ್ತಿರುವುದನ್ನು ಕಂಡು ಕರುಣಾವರಣಾಲಯರಾದ ಶ್ರೀ ವೇದವ್ಯಾಸದೇವರು ಸಜ್ಜನರಿಗೆ ಸದ್ ಜ್ಞಾನವನ್ನಿತ್ತು - ತತ್ತದ್ಯೋಗ ಸ್ವರೂಪ ಸುಖವನ್ನು ಹೊಂದಿಸಲು ಸಾಧಕವಾದ ಶ್ರೀ ಭಗವದ್ಗೀತೆಯನ್ನು ಶ್ರೀ ಕೃಷ್ಣ ಪರಮಾತ್ಮನು ಪಾರ್ಥನಿಗೆ ಹೇಳಿದ್ದನ್ನು ಶ್ರೀಮನ್ಮಹಾಭಾರತದಲ್ಲಿ ಶ್ಲೋಕ ರೂಪದಲ್ಲಿ ಗ್ರಥನ ಮಾಡಿರುವರು. 
ಶ್ರೀ ವೇದವ್ಯಾಸರೇ ಶ್ರೀ ಕೃಷ್ಣ ಪರಮಾತ್ಮನಲ್ಲವೇ? 
ಅಂತೆಯೇ ಅವರಿಂದ ರಚಿತವಾಗಿರು ಭಗವದ್ಗೀತೆಯು ಪರಮಾಪ್ತವಾಕ್ಯವಾಗಿ ಪರಮ ಪ್ರಮಾಣವಾಗಿದೆ. 
ಅಂಥಹಾ ಶ್ರೀ ಭಗವದ್ಗೀತೆಯು... 
ಸರ್ವೋಪನಿಷತ್ಸಾರವೂ. ಬ್ರಹ್ಮಸೂತ್ರ ಪದನಿಶ್ಚಿತವೂ - ಯಥಾರ್ಥ
ಜ್ಞಾನೋಪದೇಶಕವೂ ಆಗಿದೆ. 
ಸರ್ವೋಪನಿಷದೋ ಗಾವಃ 
ದೋಗ್ಧಾ ಗೋಪಾಲನಂದನಃ ।
ಪಾರ್ಥೋ ವತ್ಸ: ಸುಧೀರ್ಭೋಕ್ತಾ 
ದುಗ್ಧ೦ ಗೀತಾಮೃತಂ ಮಹತ್ ।। 
" ಉಪನಿಷತ್ತು " ಗಳೆಂಬ " ಹಸು " ಗಳಿಂದ ಅರ್ಜುನನೆಂಬ " ಕರು " ವಿನ ಮೂಲಕ ಗೋಪಾಲಕೃಷ್ಣನಾದ ಶ್ರೀ ಕೃಷ್ಣ ಪರಮಾತ್ಮನೇ ಕರೆದುಕೊಟ್ಟ ಪವಿತ್ರ ಕ್ಷೀರ - ಗೀತಾಮೃತ. 
ಮಾನವನ ಬದುಕು ಹಸನಾಗಲು ಈ ಗೀತಾಮೃತ ಅತ್ಯವಶ್ಯ! 
ಅದಕ್ಕೆ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು... 
ಗೀತಾ ಭಾಷ್ಯ - ತಾತ್ಪರ್ಯ ನಿರ್ಣಯ ಎಂಬ ಗ್ರಂಥಗಳನ್ನು ರಚಿಸಿದ್ದಾರೆ. 
ಅದನ್ನು ವಿವರಿಸಲು... 
ಶ್ರೀ ಪದ್ಮನಾಭತೀರ್ಥರು..
1. ಗೀತಾಭಾಷ್ಯಟೀಕಾ ( ಭಾವಪ್ರದೀಪಿಕಾ )
2. ಗೀತಾ ತಾತ್ಪರ್ಯ ನಿರ್ಣಯ ಟೀಕಾ ( ಪ್ರಕಾಶಿಕಾ ) 
ಶ್ರೀ ನರಹರಿತೀರ್ಥರು....
ಗೀತಾಭಾಷ್ಯ ವ್ಯಾಖ್ಯಾನ 
ಶ್ರೀ ಜಯತೀರ್ಥರು...
1. ಗೀತಾಟೀಕಾ ( ನ್ಯಾಯದೀಪಿಕಾ )
2.ಪ್ರಮೇಯದೀಪಿಕಾ ( ಗೀತಾಭಾಷ್ಯಟೀಕಾ ) 
ಶ್ರೀ ವಿಜಯೀ೦ದ್ರತೀರ್ಥರು...
1. ಗೀತಾರ್ಥರಾರ್ಥ:
2. ಗೀತಾಭಾಷ್ಯ ಪ್ರಮೇಯದೀಪಿಕಾ ವ್ಯಾಖ್ಯಾ
3. ಗೀತಾತಾತ್ಪರ್ಯನ್ಯಾಯದೀಪಿಕಾವ್ಯಾಖ್ಯಾನಮ್ 
ಶ್ರೀ ರಘೋತ್ತಮತೀರ್ಥರು.....
ಗೀತಾಭಾಷ್ಯಟಿಪ್ಪಣಿ ಭಾವಬೋಧ 
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು... 
1. ಗೀತಾ ಟೀಕಾ ಟಿಪ್ಪಣಿ ಭಾವದೀಪ
 2. ಗೀತಾ ಭಾಷ್ಯ ಟೀಕಾ ಭಾವದೀಪ
3. ಟೀಕಾ ಭಾಷ್ಯಾದಿ ದಿವ್ಯಾರ್ಥ ಸಂಗ್ರಹಕವೂ ಆದ " ಗೀತಾವಿವೃತ್ತಿ " ಎಂಬ ಗ್ರಂಥ ರಾಜವನ್ನೂ ಬರೆದಿರುವರು.
***
" ಗೀತಾಜಯಂತೀ - 4 "
" 18 ಅಧ್ಯಾಯಗಳ ಸಾರ ಸಂಗ್ರಹ " 
ಧರ್ಮಕ್ಷೇತ್ರೇ ಕುರುಕ್ಷೇತ್ರೇ 
ಸಾಮವೇತಾ ಯುಯುತ್ಸವಃ ।
ಮಾಮಕಾ: ಪಾಂಡವಾಶ್ಚೈವ 
ಕಿಮಕುರ್ವತ ಸಂಜಯಃ ।। 
1. ಯುದ್ಧಾರಂಭವಾಗಲಿದ್ದಾಗ ಅರ್ಜುನನು ಗುರು ಬಾಂಧವರನ್ನು ಕೊಲ್ಲಲಾರದೆ ಅಭಿಮಾನದಿಂದ ಧರ್ಮಯುದ್ಧವನ್ನು ಕೂಡ ಅಧರ್ಮವೆಂದು ತಿಳಿದು ವಿಷಾದದಿಂದ ಯುದ್ಧ ವಿಮುಖನಾದಂತಾಗುವನು. 
2. ಶ್ರೀ ಕೃಷ್ಣನು ಅರ್ಜುನನಿಗೆ ಜೀವೇಶರ ನಿತ್ಯತ್ವವನ್ನೂ; ಜೀವರ ಅಸ್ವಾತಂತ್ರ್ಯವನ್ನೂ, ಜ್ಞಾನದಿಂದ ಅಭಿಮಾನ ತ್ಯಾಗವನ್ನೂ; ನಿಷ್ಕಾಮ ಕಾರ್ಯವನ್ನೂ ಜ್ಞಾನಿ ಲಕ್ಷಣವನ್ನೂ ವರ್ಣಿಸುವನು. 
3. ಜ್ಞಾನ ಸಾಧನವಾದುದು ಸ್ವೋಚಿತಕರ್ಮಾನಿಷ್ಠಾನವೇ ಸ್ವಕರ್ಮವನ್ನು ಭಗವತ್ಪ್ರೀತಿಗಾಗಿ ತಪ್ಪದೆ ಮಾಡಬೇಕು. 
4. ಜ್ಞಾನ ಕರ್ಮೇಂದ್ರಿಯ ದೇವತೆಗಳಿಗೆ ಶ್ರೇಷ್ಠರಾದ ಬುದ್ಧ್ಯಾದಿ ದೇವತೆಗಳಿಗೆ ಮಿಗಿಲಾದವು ಶ್ರೀ ಹರಿ. ಶ್ರೀಶನೇ ಸರ್ವೋತ್ತಮನು. 
ಸರ್ವಜ್ಞನು. ಕರ್ಮಗಳು ವಿವಿಧವಾದರೂ ಅವುಗಳ ಫಲ ಜ್ಞಾನವೇ; ಅಂಥಹಾ ಜ್ಞಾನದಿಂದಲೇ ಶ್ರೀಮುಖ್ಯಪ್ರಾಣವಲ್ಲಭನ ಪ್ರಸಾದ.
 5. ಕಾಮಾದಿ ವರ್ಜನ ರೂಪ ಸನ್ಯಾಸ; ಶ್ರವಣ ಮನನ ಫಲ ಸಮರ್ಪಣ; ಧ್ಯಾನಾದಿ ಈಶ್ವರಾರಾಧನೆ ಕರ್ಮಾನುಷ್ಠಾನ ರೂಪ ತ್ಯಾಗ; ಎರಡೂ ಕರ್ಮಯೋಗದ ಎರಡೂ ಅವಶ್ಯಕ ಭಾಗಗಳು. 
6. ಇಂದ್ರಿಯ ನಿಗ್ರಹ, ಕಾಮಾದಿ ವರ್ಜನ ರೂಪ ಸಂನ್ಯಾಸದಿಂದ ಕೂಡಿದ ಶಾಸ್ತ್ರ ಶ್ರವಣಾದಿಗಳಿಂದ ಜ್ಞಾನ, ಅದರಿಂದ ಧ್ಯಾನ, ಅದರಿಂದ ಭವರೋಗ ನಿವಾರಕವಾದ ಭಗವದಪರೋಕ್ಷ ಮೋಕ್ಷಗಳು. 
7. ಅಪರೋಕ್ಷ ಜ್ಞಾನಕ್ಕೆ ಬಹಿರಂಗ ಸಾಧಕವಾದ ಕಾಮಾದಿ ವರ್ಜನ, ಅಂತರಂಗ ಸಾಧನವಾದ ಶ್ರವಣ ಮನನ ಧ್ಯಾನಾದಿಗಳೂ ಕೂಡ ಭಕ್ತಿಯಿಂದ ಕೂಡಿದ್ದರೇನೇ ಫಲಪ್ರದ. ಶ್ರೀ ಹರಿಯು ತಾನಾಗಿ ಪ್ರಸನ್ನನಾಗಬೇಕು. ಭಕ್ತಿ ರಹಿತರಿಗೆ ಅವನು ಸಿಗನು. 
8. ಅಂತ್ಯ ಕಾಲದಲ್ಲಿ ಶ್ರೀ ಹರಿಯನ್ನು ಸ್ಮರಿಸಿದವರಿಗೆ ಸದ್ಗತಿಯಾಗುವುದು. ಸ್ಮರಣೋಪಾಯದಿಂದ ಶ್ರೀ ಹರಿಯ ಪ್ರಾಪ್ತಿ. ಶ್ರೀ ಹರಿ ಲೋಕವನ್ನು ಜ್ಞಾನಿಗಳು ಸೇರುವ ಮಾರ್ಗಾದಿಗಳು. 
9. ಭಗವಂತನು ಸರ್ವತ್ರ ವ್ಯಾಪ್ತನು. 
ಸೃಷ್ಠಿ ಸಂಹಾರಗಳ ಸ್ವತಂತ್ರಕರ್ತನು.
ಅವನ ಅಧೀನ ಈ ಜಗವು. 
ಅವನು ಸರ್ವ ನಿಯಾಮಕನು. 
ಅವನಿಗೆ ಕರ್ಮ ಲೇಪವಿಲ್ಲ. 
ಅಸುರರು ಅವನನ್ನು ಅನಿತಾ ತಿಳಿದು ಅಂಧ೦ತಮವನ್ನೂ; ಸುಜೀವರು ಯಥಾರ್ಥವಾಗಿ ತಿಳಿದು ಸ್ವಯೋಗ್ಯ ಮೋಕ್ಷಾನಂದವನ್ನೂ ಹೊಂದುವರು. 
10. ವಿಶಿಷ್ಠಾಧಿಕಾರಿಗಳು ಉಪಾಸಿಸಲು ಯೋಗ್ಯವಾದ ಭಗವಂತನ ವಿಭೂತಿ ರೂಪಗಳೂ; ವಿಭೂತಿ ರೂಪ ಸನ್ನಿಧಾನದಿಂದಲೇ ಆಯಾ ವಸ್ತುಗಳು ತಂತಮ್ಮ ಜಾತಿಯಲ್ಲಿ ಉತ್ತಮವೆನಿಸಿದೆ. ಅವುಗಳ ನಾಮ ರೂಪ ಕ್ರಿಯೆಗಳೆಲ್ಲವೂ ಶ್ರೀ ಭಗವಂತನ ಅಧೀನವಾದುವು. 
11. ವ್ಯಾಪ್ತೋಪಾಸಕರು ಭಜಿಸಲು ಯೋಗ್ಯವಾದ ಶ್ರೀಶನ ವಿಶ್ವರೂಪದ ವರ್ಣನೆ ಅವನ ಅನಂತ ಮಹಿಮೆ. 
12. ಶ್ರೀದೇವಿ ಪರಿಯಾದ ಶ್ರೀಮನ್ನಾರಾಯಣನ ಉಪಾಸನೆಯೇ ಅತಿ ಸುಲಭ. 
ಶೀಘ್ರ ಫಲಕಾರಿ ಮತ್ತು ಉಭಯೋಪಾಸನಾ ಫಲಪ್ರದವಾದುದರಿಂದ ಭಕ್ತನು ಕೇವಲ ಶ್ರೀದೇವಿಯನ್ನಲ್ಲದೆ ಶ್ರೀಶನನ್ನೂ ಭಜಿಸಿ ಸರ್ವ ಶ್ರೇಯೋಭಾಜನರಾಗುವರು. 
13. ಕ್ಷೇತ್ರ ವಿವರಣೆ - ಅದರ ವಿಕಾರಗಳು - ಕ್ಷೇತ್ರಜ್ಞನ ಮಹಿಮೆ ಅವನನ್ನು ತಿಳಿದ ಜ್ಞಾನಿಗಳ ಲಕ್ಷಣ ಮತ್ತು ಜ್ಞಾನಫಲ!! 
14. ತ್ರಿಗುಣ ಅಂದರೆ ಸತ್ವರಜಸ್ತಮೋ ಗುಣಗಳ ಸ್ವರೂಪ, ಅವುಗಳ ಕಾರ್ಯ, ಫಲಗಳ ವರ್ಣನೆ, ಗುಣಾತೀತನಾಗಲು ಉಪಾಯ. 
15. ಸಂಸಾರ ಸ್ವರೂಪ. ಜಗತ್ತೆಂಬ ಅಶ್ವತ್ಥದ ವರ್ಣನೆ. ಸಂಸಾರ ತರುಣೋಪಾಯ; ಶ್ರೀಹರಿ ಸರ್ವೋತ್ತಮತ್ವ; ಜೀವಜಡಾತ್ಯಂತ ಭಿನ್ನತ್ವ; ಶ್ರೀಪತಿತ್ವ; ಶ್ರೀ ಮುಖ್ಯಪ್ರಾಣ ನಿಯಾಮಕತ್ವ; ಸರ್ವ ಜಗಜ್ಜನ್ಮಾದಿ ಸ್ವತಂತ್ರಕಾರಣತ್ವ; ಮುಕ್ತಿದಾತೃತ್ವ; ಶಾಸ್ತ್ರಸಾರ ನಿರೂಪಣೆ! 
16. ದೈವೀ ಸಂಪತ್ತು - ಅಸುರೀ ಸಂಪತ್ತುಗಳ ವರ್ಣನೆ. ಅಸುರೀ ಸಂಪತ್ತಿನ ಅನರ್ಥ ಫಲ. ಶಾಸ್ತ್ರವೇ ಅನುಸರಣೀಯವಾಗಿದೆ. ಸ್ವಬುದ್ಧಿ ಕುತರ್ಕಗಳಲ್ಲ. ಶ್ರೀ ಹರಿಯೇ ಸಚ್ಚಾಸ್ತ್ರ ಪ್ರವರ್ತಕನು. 
17 ಸತ್ವಾದಿ ಗುಣಗಳ ವರ್ಣನೆ. ಶ್ರದ್ಧೆ ಆಹಾರ ಯಜ್ಞ; ತಪಃ ( ತ್ರಿವಿಧ ) ದಾನಗಳ ಸಾತ್ವಿಕತೆ, ರಾಜಸತೆ, ತಾಮಸತೆಗಳ ವರ್ಣನೆ. ತತ್ಫಲ ಕಥನ. 
18. ಮಹಾ ಪುರುಷಾರ್ಥವಾದ ಮೋಕ್ಷಕ್ಕೆ ಜ್ಞಾನವೇ ಸಾಧನ ಜ್ಞಾನವು. ಶ್ರವಣಾದಿಗಳಿಂದಲೇ ಜನ್ಯವು. 
ಶ್ರವಣಾದಿಗಳು ಭಕ್ತಿಯುತವಾಗಿರಬೇಕು. 
ಭಕ್ತಿಗೆ ಇಂದ್ರಿಯ ನಿಗ್ರಹ, ಕರ್ಮ ಫಲ, ತ್ಯಾಗಗಳು ಸಾಧನವಾಗಿದೆ. 
ಮಹಿಮಾ ಜ್ಞಾನವಿಲ್ಲದೆ ಭಕ್ತಿಯೇ ಇಲ್ಲ. 
ಅಂಥಹಾ ಭಕ್ತಿಯಿಂದ ಪ್ರಸನ್ನನಾಗಿ ಶ್ರೀ ಮುಖ್ಯಪ್ರಾಣ ವಲ್ಲಭನು ಸ್ವರೂಪಾನಂದಾವಿರ್ಭಾವ ರೂಪವಾದ ಮುಕ್ತಿಯನ್ನು ದಯಪಾಲಿಸುವನು. 
ಇಂತೂ 18 ಅಧ್ಯಾಯಗಳಿಂದ ಕೂಡಿದ ಶ್ರೀಮದ್ಭಗವದ್ಗೀತೆಯನ್ನು ಶ್ರೀಮನ್ಮಹಾಭಾರತ ಪಾರಿಜಾತ ಮಧುವನ್ನು - ಶ್ರೀಕೃಷ್ಣ ಅರ್ಜುನ ಸಂವಾದವನ್ನು ಶ್ರೀ ವೇದವ್ಯಾಸದೇವರು ರಚಿಸಿ ಭೀಷ್ಮ ಪರ್ವದಲ್ಲಿ ಗ್ರಥಿಸಿದರು.
***
" ಗೀತಾಜಯಂತೀ - 5 "
 " ಶ್ರೀ ರಾಯರು " ಗೀತಾವಿವೃತ್ತಿ " ಯ ವೈಶಿಷ್ಟ್ಯ " 
1. ಭಾಷ್ಯ ತಾತ್ಪರ್ಯಗಳಿಗನುಸಾರವಾಗಿ ಗೀತೆಯ ಶ್ಲೋಕಗಳಿಗೆ ಸರಳವಾಗಿ ಅರ್ಥವನ್ನು ವರ್ಣಿಸುವುದು. 
2. ಅಲ್ಲಲ್ಲಿ ಭಾಷ್ಯ ತಾತ್ಪರ್ಯಗಳ ಸಮಗ್ರ ಆಶಯವನ್ನು ಸಂಗ್ರಹಿಸಿ ಕೊಡುವುದು. 
3. ಗೀತೆಯಲ್ಲಿ ಬರುವ " ಮಹಾರಥ " ಮುಂತಾದ ಶಬ್ದಗಳಿಗೆ ಅಪೂರ್ವವಾದ - ಸೊಗಸಾದ ಅರ್ಥವನ್ನು ನೀಡುವುದು. 
4. ಗೀತೆಯಲ್ಲಿ ಅಪಾತತಃ ತೋರುವ ವಿರೋಧಗಳನ್ನು ಭಾಷ್ಯ ತಾತ್ಪರ್ಯಗಳ ಆಶಯಕ್ಕೆ ಚ್ಯುತಿ ಬಾರದಂತೆ ಪರಿಹರಿಸುವುದು. 
5. ಗೀತೆಯ ಪರಿಶುದ್ಧ ಪಾಠವನ್ನು ನಿರ್ಧರಿಸಲು ಸಹಕಾರಿಯಾಗುವುದು. 
6. ಗೀತೆಯ ಪೂರ್ವೋತ್ತರ ಅಧ್ಯಾಯಗಳಿಗೆ ಸೊಗಸಾಗಿ ಸಂಗತಿಯನ್ನು ಪ್ರದರ್ಶಿಸುವುದು. 
7. ಗೀತೆಯಲ್ಲಿ ಕಂಡು ಬರುವ ಚ, ತು, ವೈ, ಅಪಿ, ಏವ, ಹಿ ಮುಂತಾದ ಶಬ್ದಗಳಿಗೂ ಸ್ವಾರಸ್ಯಕರವಾದ ಅರ್ಥವನ್ನು ಹೇಳುವುದು.
8. ಅಲ್ಲಲ್ಲಿ ವ್ಯಾಕರಣ ಸೂತ್ರಗಳನ್ನುದಾಹರಿಸಿ ಗೀತೆಯ ಶಬ್ದಗಳಿಗೆ ನಿಷ್ಪತ್ತಿಯನ್ನು ತೋರಿಸುವುದು. 
9. ಗೀತೆಯಲ್ಲಿ ಬರುವ ವಿಷಯಗಳ ಸಮರ್ಥನೆಗೆ ಬ್ರಹ್ಮಸೂತ್ರಗಳನ್ನುದಾಹರಿಸುವುದು. 
10. ವ್ಯಾಖ್ಯಾನದ ಸಮಯದಲ್ಲಿ ಎದುರಾಗುವ ಕ್ಲಿಷ್ಟ ಸಮಸ್ಯೆಗಳನ್ನು ಬಾಳೇಹಣ್ಣು ಸುಲಿದಂತೆ ಸುಲಲಿತವಾಗಿಯೂ; ಸುಂದರವಾಗಿಯೂ ಮತ್ತು ಸರಳವಾಗಿಯೂ ಪರಿಹರಿಸುವುದು. 
11. ಟೀಕೆಯಲ್ಲಿ ಅಸ್ಪಷ್ಟವಾದ ಪ್ರಮೇಯಗಳನ್ನು ಒಟ್ಟೊಟ್ಟಿಗೆ ಸಂಗ್ರಹಿಸುವುದು. 
12. ಪೂರ್ವಾಚಾರ್ಯರಿಗೆ ಗೌರವ ಕೊಟ್ಟು ಅವರ ಅಭಿಪ್ರಾಯದ ಉಲ್ಲೇಖ. 
13. ಅನ್ಯ ಶಾಸ್ತ್ರ ಪಾಂಡಿತ್ಯ ಪ್ರದರ್ಶನ 
14. ಟೀಕೆಯಲ್ಲಿ ಉದಾಹೃತವಾದ ಆಕರ ಗ್ರಂಥಗಳ ಪೂರ್ಣ ವಾಕ್ಯದ ಉಲ್ಲೇಖ. ಶ್ರೀ ವಾದೀಂದ್ರತೀರ್ಥರು... 
ಗೀತಾಮಾತ್ಯರ್ಥದೂತಾಶ್ರೀತಜನ-
ದುರಿತಾಮಿಂದುವಂಶಪ್ರಸೂತೌ
 ವ್ಯಾಚಕ್ಷಾಣೇ ಮುರುದ್ವಿಷ್ಯಭಿಜನ-
ಮಭಜದ್ ಭದ್ರಮಿಂದೋರನಿದ್ರಂ ।
 ಧೀರಶ್ರೀ ರಾಘವೇಂದ್ರತ್ವಯಿ 
ಪುನರಘೆ ಹಂಸವಂಶೋದಿತೇ ತಾಂ
ವ್ಯಾಕುರ್ವತ್ಯದ್ಯ ಭವ್ಯ೦ ಕಥಮಿವ 
ನ ಭಜೇದಾಶು ಮಿತ್ರಾನ್ವವಾಯಃ ।। 
ಚಂದ್ರ ವಂಶದಲ್ಲಿ ಅವತರಿಸಿದ ಶ್ರೀ ಕೃಷ್ಣ ಪರಮಾತ್ಮನು ಗೀತೋಪದೇಶ ಮಾಡಿದಾಗ ಇದು ನಮ್ಮ ವಂಶದ ಕೊಡುಗೆ ಎಂದು ಚಂದ್ರ ವಂಶವು ಸಂತೋಷಗೊಂಡಿತು. 
ಚಂದ್ರ ವಂಶಕ್ಕೆ ಮಂಗಳವಾಯಿತು. ನಿಜ. 
ಆದರೆ ಹಂಸ ವಂಶದಲ್ಲಿ ಬಂದ ಶ್ರೀ ಗುರುಸಾರ್ವಭೌಮರು ಅದಕ್ಕೆ " ಗೀತಾವಿವೃತಿ " ಯೆಂಬ ವ್ಯಾಖ್ಯೆಯನ್ನು ಬರೆದಾಗ ಸೂರ್ಯ ವಂಶವೂ ಮಂಗಳವನ್ನು ಹೊಂದಿತು. 
ಏಕೆಂದರೆ... 
" ಹಂಸ " ಶಬ್ದಕ್ಕೆ " ಸಂನ್ಯಾಸಿ " ಎಂಬುದು ಒಂದು ಅರ್ಥವಾದರೆ; " ಸೂರ್ಯ " ಯೆಂಬ ಮತ್ತೊಂದು ಅರ್ಥವಿದೆ. 
ಆ ದೃಷ್ಟಿಯಲ್ಲಿ ಶ್ರೀ ಮಂತ್ರಾಲಯ ಪ್ರಭುಗಳು ಸೂರ್ಯ ವಂಶದವರೆಂದು ಶ್ರೀ ವಾದೀಂದ್ರತೀರ್ಥರು ಚಮತ್ಕಾರ ತೋರಿಸಿದ್ದಾರೆ. 
" ಮಿತ್ರ " ಶಬ್ದಕ್ಕೆ " ಸೂರ್ಯ " ಯೆಂಬ ಅರ್ಥವಿರುವಂತೆ; " ಸ್ನೇಹಿತರು " ಯೆಂಬ ಅರ್ಥವೂ ಇರುವುದರಿಂದ ಶ್ರೀ ಮಂತ್ರಾಲಯ ಪ್ರಭುಗಳಲ್ಲಿ ಸ್ನೇಹ ರೂಪ ಭಕ್ತಿಯುಳ್ಳವರೆಲ್ಲರೂ ಶ್ರೀ ರಾಯರ " ಗೀತಾವಿವೃತಿ " ಪಠಣದಿಂದ ಶುಭವನ್ನು ಪಡೆದರು ಎಂಬುದು ಇಲ್ಲಿಯ ತಾತ್ಪರ್ಯ!
" ಉಪ ಸಂಹಾರ " 
ಈ ಗೀತಾಮೃತವನ್ನು ಅಭಕ್ತರಿಗೆ - ಡಾಂಭಿಕರಿಗೆ - ತಪೋಹೀನರಿಗೆ - ಗುರು ಸೇವಾ ಹೀನರಿಗೆ - ಹರಿ ಗುರು ಸುಜನ ದ್ವೇಷಿಗಳಿಗೆ ಹೇಳಿಕೊಡಬೇಡ. 
ಅರ್ಜುನಾ! 
ನನ್ನ ಭಕ್ತರಿಗೆ ಯಾರೇ ಆಗಲೀ, ಸಜ್ಜನರಿಗೆ ಉಪದೇಶಿಸುವವನು ನನ್ನ ಸುಭಕ್ತನಾಗಿ, ಜ್ಞಾನದಿಂದ ನನ್ನ ಲೋಕವನ್ನು ಹೊಂದುವನು. 
ಅಂಥಹಾ ಸಜ್ಜನ ಭಕ್ತನಗಿಂತಲೂ ನನಗೆ ಪ್ರಿಯರಿಲ್ಲ! 
ಈ ಗೀತಾ ಶಾಸ್ತ್ರವನ್ನು ಓದಿದವನು ನನ್ನನ್ನು ಜ್ಞಾನ ಯಜ್ಞದಿಂದ ಪೂಜಿಸುತ್ತಿರುವನು. 
ಶ್ರದ್ಧೆಯಿಂದ ಅಸೂಯೆ, ಮತ್ಸರಗಳನ್ನು ತೊರೆದು, ಕೇಳಿದವನೂ ಕೂಡಾ ನನ್ನದಾದ ಸುಖಮಯ ಪುಣ್ಯ ಲೋಕಗಳನ್ನು ಹೊಂದಿ ಯಥಾಯೋಗ್ಯವಾಗಿ ಆನಂದಿಸಿ ಮುಕ್ತನಾಗಿರುವನು!! 
ಶ್ರೀ ರಾಯರು " ಗೀತಾವಿವೃತಿ " ಅಂತ್ಯದಲ್ಲಿ... 
ಇತಿ ಶ್ರೀಕೃಷ್ಣಗೀತಾಭಾಷ್ಯಾ-
ದ್ಯುಕ್ತಾರ್ಥ ಸಂಗ್ರಹಃ ।
ರಾಘವೇಂದ್ರೇಣ ಯತಿನಾ 
ಕೃತಃ ಸಜ್ಜನ ಸಂವಿದೇ ।। 
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಗೀತಾ ಜಯಂತೀ - 6 "
" ಶ್ರೀ ಭಗವದ್ಗೀತೆ ವೈಶಿಷ್ಟ್ಯ "
" ಶ್ರೀಮದ್ಭಗವದ್ಗೀತಾ " ನಾಡಿನ ಸಕಲ ಸಜ್ಜನರ ನಾಲಿಗೆಯ ಮೇಲೆ ಸ್ಥಿರವಾಗಿ ನೆಲೆ ಮಾಡಿದೆ. 
ಅದರ ಬಗ್ಗೆ ನಾನೇನಾದರೂ ಬರೆದರೆ ತಪ್ಪಾಗುತ್ತದೆ. 
ಆದರೇ ದಿನಾಂಕ : 25.12.2020 " ಗೀತಾ ಜಯಂತೀ " ಶುಭ ಸಂದರ್ಭದಲ್ಲಿ " ಗೀತೆಯ ವೈಶಿಷ್ಟ್ಯ " ಕುರಿತು ಹೊಸ ರೀತಿಯ ಚಿಂತನೆಯನ್ನು ಸಜ್ಜನರೊಂದಿಗೆ ಹಂಚಿಕೊಳ್ಳುವ ಚಿಕ್ಕ ಪ್ರಯತ್ನ ಇಲ್ಲಿದೆ !!
ಶ್ರೀಮದ್ಭಗವದ್ಗೀತಾ ೧೦ನೇ ಅಧ್ಯಾಯದಲ್ಲಿ.... 
ಅರ್ಜುನ ಉವಾಚ :-
ಪರಂ ಬ್ರಹ್ಮ ಪರಂಧಾಮ 
ಪವಿತ್ರಂ ಪರಮಂ ಭವಾನ್ ।
ಪುರುಷಂ ಶಾಶ್ವತಂ ದಿವ್ಯಂ 
ಆದಿದೇವಂ ಅಜಂ ವಿಭುಮ್ ।। 12 ।।
ಆಹುಸ್ತ್ವಾಂ ಋಷಯಃ ಸರ್ವೇ 
ದೇವರ್ಷಿ ನಾರದಸ್ತಥಾ ।
ಅಸಿತೋ ದೇವಲೋ ವ್ಯಾಸಃ
ಸ್ವಯಂ ಚೈವ ಬ್ರವೀಷಿ ಮೇ ।। 13 ।।
ಸರ್ವಂ ಏತದೃತಂ ಮನ್ಯೇ 
ಯನ್ಮಾಂ ವದಸಿ ಕೇಶವ ।
ನ ಹಿ ತೇ ಭಗವನ್ ವ್ಯಕ್ತಿಂ 
ವಿದುರ್ದೇವಾ ನ ದಾನವಾ: ।। 14 ।।
ಅರ್ಜುನ ಹೇಳಿದ... 
ನೀನು ದೇವೋತ್ತಮ. 
ಪರಮ ಪುರುಷ - ಪರಂಧಾಮ - ಪವಿತ್ರ - ಪರಿಪೂರ್ಣ ಸತ್ಯ. 
ನೀನು ನಿತ್ಯನೂ - ದಿವ್ಯನೂ - ಆದಿ ಪುರುಷನು. 
ನಿನಗೆ ಹುಟ್ಟಿಲ್ಲ. 
ನೀನೆ ಅತ್ಯಂತ ಶ್ರೇಷ್ಠನು. 
ನಾರದ - ಆಸಿತ - ದೇವಲ ಮತ್ತು ವ್ಯಾಸರಂಥಹ ಮಹರ್ಷಿಗಳು ನಿನ್ನ ವಿಷಯದಲ್ಲಿ ಈ ಸತ್ಯವನ್ನು ಧೃಡೀಕರಿಸಿದ್ದಾರೆ. 
ಈಗ ನೀನೆ ಈ ವಿಷಯವನ್ನು ನನಗೆ ಹೇಳುತ್ತಿದ್ದೀಯ !
ಕೃಷ್ಣಾ ! 
ನೀನು ನನಗೆ ಹೇಳುವುದನ್ನೆಲ್ಲ ಸತ್ಯವೆಂದು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. 
ಪ್ರಭುವೇ !
ದೇವತೆಗಳಾಗಲೀ - ದಾನವರಾಗಲೀ ನಿನ್ನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲಾರರು. 
" ಗೀತಾವಿವೃತ್ತಿ " ಯ ಮಂಗಳಾಚರಣೆ.. 
ಲಕ್ಷ್ಮೀ ನಾರಾಯಣಂ ನತ್ವಾ 
ಪೂರ್ಣಬೋಧಾನ್ ಗುರೂನಪಿ ।
ಕುರ್ಮಃ ಶ್ರೀ ಕೃಷ್ಣ ಗೀತಾ ಚ 
ಭಾಷ್ಯಾದ್ಯುಕ್ತಾರ್ಥ ಸಂಗ್ರಹಂ ।। 
ಮಹಾಭಾರತದ ಸಾರವೇ ಭಗವದ್ಗೀತೆ. 
ಭಗವದ್ಗೀತೆಯು ಭಗವಂತನ ಮಾಹಾತ್ಮ್ಯವನ್ನು ನಿಃಸಂದಿಗ್ಧವಾಗಿ ನಿರೂಪಿಸುವ ಮಹೋನ್ನತ ಗ್ರಂಥವಾಗಿದೆ. 
ಶ್ರೀ ಕೃಷ್ಣನಿಗಿಂತ ಉತ್ತಮವಾದುದು ವಿಶ್ವದಲ್ಲಿ ಬೇರೊಂದು ವಸ್ತುವಿಲ್ಲ. 
ಶ್ರೀ ಕೃಷ್ಣನೇ ಪುರುಷೋತ್ತಮನು. ಜಗತ್ತಿನ ಎಲ್ಲಾ ವ್ಯವಹಾರಗಳೂ ಅವನಿಂದಲೇ ನಡೆಯುತ್ತದೆಂದು ಭಗವದ್ಗೀತೆಯೂ ಘೋಷಿಸುತ್ತದೆ. 
" ಕಿಮಲಭ್ಯಂ ಭಗವತೀ 
ಶ್ರೀನಿಕೇತನೆ " ಅಲ್ಲವೇ?
***
" ಗೀತಾ ಜಯಂತೀ - 7 "
" ಶ್ರೀ ಕೃಷ್ಣಾನುಗ್ರಹ "
ಶ್ರೀ ರಾಘವೇಂದ್ರತೀರ್ಥ ವಿರಚಿತ " ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ ಭಾವಸಂಗ್ರಹಃ " ದಲ್ಲಿ... 
ಸ್ಮೃತ್ವಾ ಯಂ ದ್ಯುಸರಿತ್ಸುತೋವ-
ಸುರಭೂದ್ರಾಜಾ ಯದಾಶ್ವಾಸಿತಃ 
ನಿರ್ದುಃಖೋsಸಿ ಜುಗೋಪ ಧರ್ಮ
ನಿರತೋ ಜಿತ್ವಾ ಸ್ವರಾಜ್ಯ೦ ಕಲಿಮ್ ।
ಯಃ ಪಾರ್ಥಂ ಸಮಬೋಧಯನ್ 
ಮೃತಶಿಶು೦ ಯೋ ಜೀವಯತ್ಪಾ೦ಡವೈ: 
ಯೋ ಯಜ್ಞ೦ ಸಮಕಾರಯದ್ಬಹುಧನೈ: 
ಧ್ಯಾಯಾಮಿ ತಂ ಕೇಶವಮ್ ।।
" ದ್ಯುಸರಿತ್ಸುತೋ "
ಗಂಗಾದೇವಿ ಪುತ್ರರಾದ ಶ್ರೀ ಭೀಷ್ಮಾಚಾರ್ಯರು 
" ವಸುರಭೂಯಾತ್ "
ಉತ್ತರಾಯಣವು ಬಂದೊಡನೆ ಸ್ವತಃ ಇಚ್ಛೆಯಿಂದ ದೇಹ ತ್ಯಾಗ ಮಾಡಿ ತಮ್ಮ ಮೂಲ ರೂಪವಾದ ದ್ಯುನಾಮಕ ವಸುಗಳಾದರು. 
ರಾಜಾ = ಧರ್ಮರಾಜನು 
" ಯಂ "
ಯಾವ ಶ್ರೀ ಭೀಷ್ಮಾಚಾಚಾರ್ಯರು ಸ್ವರ್ಗಸ್ಥರಾದುದನ್ನು 
" ಸ್ಮರನ್ "
ಸ್ಮರಿಸಿಕೊಂಡು ಶ್ರೀ ಭೀಷ್ಮಾಚಾರ್ಯರ ವಿಯೋಗ ದುಃಖದಿಂದ ಬಹಳ ದುಃಖಿತನಾಗಲು 
" ಯದಶ್ವಾಸಿತಃ "
ಶ್ರೀ ಕೃಷ್ಣನಿಂದ ಸಮಾಧಾನಗೊಳಿಸಲ್ಪಟ್ಟವನಾಗಿ
" ಸಮಾಹಿತಃ ಸನ್ "
ಸಮಾಧಾನ ಹೊಂದಿದವನಾಗಿ 
" ನಿರ್ದುಃಖಸ್ಸನ್ "
ದುಃಖವಿಲ್ಲದವನಾಗಿ 
ಅಪಿ = ಮತ್ತು 
" ಕಲಿಮ್ "
ತನ್ನ ರಾಜ್ಯದಲ್ಲಿ ಗೊಂದಲವನ್ನುಂಟ್ಟು ಮಾಡುತ್ತಿದ್ದ ಕಲಿಯನ್ನು 
" ಜಿತ್ವಾ "
ಜಯಿಸಿ 
" ಸ್ವರಾಜ್ಯಮ್ "
ಸಾಮ್ರಾಜ್ಯವನ್ನು 
" ಧರ್ಮನಿರತೋ "
ಧರ್ಮಿಷ್ಠನಾಗಿ 
" ಸಾಮ್ರಾಜ್ಯ೦ ಜುಗೋಪ "
ಕುರು ಸಾಮ್ರಾಜ್ಯವನ್ನು ರಕ್ಷಿಸಿದನು ಅಂದರೆ ಆಳಿದನು!
" ಯಃ "
ಯಾವ ಶ್ರೀ ಕೃಷ್ಣನು 
" ಪಾರ್ಥಂ "
ಅರ್ಜುನನಿಗೆ 
" ಸಮಬೋಧಯನ್ "
ಸತ್ತತ್ತ್ವ ಧರ್ಮಗಳನ್ನು ಬೋಧಿಸಿ ಸಾಂತ್ವನಗೊಳಿಸಿದನೋ 
" ಮೃತಶಿಶುಮ್ "
ಅಭಿಮನ್ಯುವಿನ ಮೃತವಾದ ಶಿಶುವನ್ನು 
" ಅಜೀವಯತ್ "
ಪುನರುಜ್ಜೀವನಗೊಳಿಸಿದನೋ 
" ಪಾಂಡವೈ: "
ಪಾಂಡವರಿಂದ 
" ಬಹುಧನೈ: "
ಅಪಾರ ಧನಗಳಿಂದ 
" ಯಜ್ಞ೦ "
ಅಶ್ವಮೇಧ ಯಾಗವನ್ನು 
" ಸಮಕಾರಯತ್ "
ಚೆನ್ನಾಗಿ ಮಾಡಿಸಿದನೋ 
" ತಂ "
ಅಂಥಾ 
" ಕೇಶವಂ "
ಶ್ರೀ ಚತುರ್ಮುಖ ಬ್ರಹ್ಮ ರುದ್ರಾದಿಗಳಿಗೆ ನಿಯಾಮಕನಾದ ಶ್ರೀ ಕೃಷ್ಣನನ್ನು 
" ಧ್ಯಾಯಾಮಿ " ಧ್ಯಾನಿಸುತ್ತೇನೆ!!
ಶರಪಂಜರದಲ್ಲಿ ಮಲಗಿದ್ದ ಪಿತಾಮಹ ಶ್ರೀ ಭೀಷ್ಮಾಚಾಚಾರ್ಯರು ಇಚ್ಚಾ ಮರಣ ವರವನ್ನು ಪಡೆದವರಾದ್ದರಿಂದ ಉತ್ತರಾಯಣ ಪರ್ವಕಾಲವನ್ನು ನಿರೀಕ್ಷಿಸುತ್ತಿದ್ದು -  ಶ್ರೀ ಕೃಷ್ಣ ಪರಮಾತ್ಮನ ಆದೇಶದಂತೆ ಧರ್ಮಾನಂದನನಿಗೆ ಅನೇಕ ತತ್ತ್ವ - ಧರ್ಮಗಳನ್ನು ಉಪದೇಶ ಮಾಡಿ -  ಸ್ವಇಚ್ಛೆಯಿಂದ ದೇಹ ತ್ಯಾಗ ಮಾಡಿ ತಮ್ಮ ಮೂಲ ರೂಪವಾದ " ದ್ಯು ನಾಮಕ " ವಸುವಿನಲ್ಲಿ ಐಕ್ಯವಾದರು. 
ಪಿತಾಮಹರ ಮರಣದಿಂದ ಧರ್ಮರಾಜನು ಬಹು ದುಃಖಿತನಾದನು. 
ಆಗ ಶ್ರೀ ಕೃಷ್ಣ ಪರಮಾತ್ಮನು ಸ್ವಾ೦ತನಗೊಳಿಸಿದನು. 
ಅದರಿಂದ ಯುಧಿಷ್ಠಿರನು ಸಮಾಧಾನಗೊಂಡು ದುಃಖವನ್ನು ಬಿಟ್ಟು ರಾಜ್ಯಭಾರ ಮಾಡಿದನು. 
ಅನಂತರ ಕಲಿಯು ತನ್ನ ಗುಣಗಳಿಂದ ಸಹಿತನಾಗಿ ಧರ್ಮರಾಜನ ರಾಜ್ಯದಲ್ಲಿ ಧರ್ಮಕಂಟಕ ಕಾರ್ಯಾಸಕ್ತನಾಗಿ ಬಹುವಾಗಿ ಗೊಂದಲ ಮಾಡಲಾರಂಭಿಸಿದನು. 
ಅದರಿಂದ ಕುಪಿತನಾದ ಯುಧಿಷ್ಠಿರನು ಶ್ರೀ ಕೃಷ್ಣನ ಅನುಗ್ರಹದಿಂದ ಕಲಿಯನ್ನು ಜಯಿಸಿದನು. 
ಶ್ರೀ ಕೃಷ್ಣ ಪರಮಾತ್ಮನು ಭಾರತಾವನಿಯಲ್ಲಿ ಪಾಂಡವರ ಸಂತತಿಯವರು ಆಳುತ್ತಿರುವವರೆಗೂ ಭೂಮಂಡಲದಲ್ಲಿ ಕಾಲಿಡಬಾರದೆಂದು ಶಾಸನ ಮಾಡಿದನು. 
ಆ ತರುವಾಯ ಧರ್ಮರಾಜನು ಧರ್ಮದಿಂದ ರಾಜ್ಯಭಾರವನ್ನು ಮಾಡಹತ್ತಿದನು. 
ಅರ್ಜುನನು ಪುತ್ರನಾದ ಅಭಿಮನ್ಯುವಿನ ಮರಣದಿಂದ ಅತ್ಯಂತ ವ್ಯಾಕುಲವುಳ್ಳವನಾಗಿ - ಪುತ್ರ ವಿಯೋಗ ದುಃಖದಿಂದ ಬಳಲುತ್ತಿರಲು ಶ್ರೀ ಕೃಷ್ಣ ಪರಮಾತ್ಮನು ತಾನು ಉಪದೇಶಿಸಿದ ಗೀತಾ ಉಪದೇಶವನ್ನು ಮರೆತಿರುವನೆಂದು ತಿಳಿದು ಅವನಿಗೆ ಮತ್ತೆ ಅದನ್ನು ವಿಸ್ತಾರವಾಗಿ ಬೋಧಿಸಿ ಅನೇಕ ಧರ್ಮ ರಹಸ್ಯಗಳನ್ನು ತಿಳಿಸಿ ಸಮಾಧಾನ ಪಡಿಸಿದನು. 
ಅದೇ ಸಮಯದಲ್ಲಿ ಶ್ರೀ ಅಶ್ವತ್ಥಾಮಾಚಾರ್ಯರ ಶಾಸ್ತ್ರದಿಂದ ದಗ್ಧವಾದ ಅಭಿಮನ್ಯುವಿನ ಶಿಶುವನ್ನು ಶ್ರೀ ಕೃಷ್ಣ ಪರಮಾತ್ಮನು ಪುನಃ ಜೀವಂತಗೊಳಿಸಿ ಎಲ್ಲರನ್ನೂ ಮುದಗೊಳಿಸಿದನು. 
ಶ್ರೀ ಕೃಷ್ಣದ್ವೈಪಾಯನರ ಸಲಹೆಯಂತೆ ಶ್ರೀ ಕೃಷ್ಣ ಪರಮಾತ್ಮನು ಪಾಂಡವರಿಂದ ಅಪಾರ ಧನ ವ್ಯಯದಿಂದ ಅಶ್ವಮೇಧ ಯಾಗವನ್ನು ಮಾಡಿಸಿದನು!
ಇಂಥಾ ಶ್ರೀ ಚತುರ್ಮುಖ ಬ್ರಹ್ಮ - ಶ್ರೀ ರುದ್ರಾದಿ ದೇವತೆಗಳಿಗೆ ನಿಯಾಮಕನಾದ್ದರಿಂದ " ಕೇಶವ " ನೆಂಬ ಹೆಸರಿನಿಂದ ಪೂಜ್ಯನಾದ ಶ್ರೀ ಕೃಷ್ಣ ಪರಮಾತ್ಮನನ್ನು ಧ್ಯಾನಿಸುತ್ತೇನೆ!! 
ಎಂದು ಕಲಿಯುಗದ ಕಲ್ಪವೃಕ್ಷ ಕಾಮಧೇನು ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಶ್ರೀ ಕೃಷ್ಣ ಪರಮಾತ್ಮನ ಕಾರುಣ್ಯವನ್ನು ಸ್ಮರಿಸಿದ್ದಾರೆ!!
ಶ್ರೀ ನಾರಾದಂಶ ಪುರಂದರದಾಸರು... 
ರಾಗ : ಯಮುನಾಕಲ್ಯಾಣಿ   ತಾಳ : ಅಟ್ಟ 
ಪನ್ನಗಾದ್ರಿಪತಿ 
ನಮಗೆ ನೀ ಗತಿ ।
ಎಂಬುವ ಮತಿಯರಿತು 
ಈ ಸ್ಥಿತಿ ।। ಪಲ್ಲವಿ ।।
ವೈಕುಂಠ ವಾಸ 
ವರ ಮಂದಹಾಸ ।
 ಭಕ್ತರುಲ್ಲಾಸ ಲಕ್ಷ್ಮೀ 
ನಿವಾಸ ।। ಚರಣ ।।
ಮಾನವ ವೇಷ 
ಮಂಜುಳ ಭಾಷ ।
ವಿನುತ ವಿಶೇಷ 
ಕೌಸ್ತುಭ ಭೂಷ  ।। ಚರಣ ।।
ಶಂಕಿಸುತಿರಲು 
ಸಾಕುವ ಬಾಲ ।
ಸಂಖ್ಯೆಯು ಬಲ್ಲ 
ಪುರಂದರವಿಠಲ ।। ಚರಣ ।।
ಪನ್ನಗ = ಹಾವು 
ಆದ್ರಿ = ಬೆಟ್ಟ 
ಪತಿ = ಒಡೆಯ 
" ಭಕ್ತರುಲ್ಲಾಸ "
ತನ್ನನ್ನು ಮೊರೆಹೊಕ್ಕವರಿಗೆ ಧೈರ್ಯ ಸಂತೋಷಗಳನ್ನುಂಟು ಮಾಡುವ 
" ಮಂಜುಳಭಾಷ "
ಸವಿಯಾದ ಮಾತನಾಡುವವನು 
" ಸಂಖ್ಯೆಯು "
" ಸಾಂಖ್ಯ " ವೆಂದರೆ ಮೋಕ್ಷ. 
ಆಚಾರ್ಯ ನಾಗರಾಜು ಹಾವೇರಿ  
ಗುರು ವಿಜಯ ಪ್ರತಿಷ್ಠಾನ
***
" ಗೀತಾ ಜಯಂತೀ - 8 "
" ಕನ್ನಡ ಭಗವದ್ಗೀತೆ "
ಶ್ರೀ ಪ್ರಹ್ಲಾದಾವತಾರಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರು " 9 ಪದ್ಯಗಳಲ್ಲಿ ಭಗವದ್ಗೀತಾ ಸಾರ " ದಲ್ಲಿ ಭಗವದ್ಗೀತೆಯ 700 ಶ್ಲೋಕಗಳ ಸಮಗ್ರ ಸಾರವನ್ನು " ವೃತ್ತನಾಮ " ದಲ್ಲಿ ಸೆರೆ ಹಿಡಿದು ಸಜ್ಜನರಿಗೆ ಮಹದುಪಾಕ ಮಾಡಿದ್ದಾರೆ. 
ರಾಗ : ನಾದನಾಮಕ್ರಿಯ ತಾಳ : ಛಾಪು 
ಕೇಳಯ್ಯಾ ಯೆನ್ನ ಮಾತಾ 
ಪಾರ್ಥನೆ ಗೀತಾರ್ಥವಾ ।। ಪಲ್ಲವಿ ।।
ಕುರುಕ್ಷೇತ್ರದಿ ಎನ್ನವರು 
ಪಾಂಡವರು ಕದನ ಹೂಡಿ ।
ಪೇಳೋ ಸಂಜಯ ಏನು 
ಮಾಡುವರು ಕೂಡಿ ।
ಕೇಳ್ವೆ ಅರಸನೇ 
ಪಾಂಡವರ ಸೇನೆ ನೋಡಿ ।
ಮಾತಾಡಿದ ನಿನ್ನ ಸುತನು 
ದ್ರೋಣರ ಕೂಡಿ ।। ಚರಣ ।।
" ಪದ "
ಕೇಳಿ ತಾ ಪಾರ್ಥನು ಕರದಂಡ । ರಣದಲಿ ಚಂದ । ಗಾಂಡೀವ ಕರದಂಡ । ಅಚ್ಯುತ ಪಿಡಿ ರಥ ನಡೆ ಮುಂದಾ । ಬಹು ತ್ವರದಿಂದ ನೋಡುವೆ । ನೇತ್ರದಿಂದಾ । ಗುರು ಹಿರಿಯರು ಕೂಡಾ ಯಾಕೆಂದಾ । ಯುದ್ಧ ಸಾಕೆಂದಾ । ಭಿಕ್ಷ ಸುಖವೆಂದಾ । ಕುಂತೀ ಸುತ ಈ ಮಾತು ಉಚಿತವಲ್ಲ । ನಿನಗಿದು ಸಲ್ಲ । ಪಿಡಿ ಗಾಂಡೀವ ಬಿಲ್ಲು ।।  
ಬಾಲ್ಯ ಯೌವನ ಮುಪ್ಪು 
ತನ್ನ ದೇಹದಲ್ಲಿ ।
ಇಂಥಾ ದೇಹಕೆ 
ಮೋಹ ಮತ್ಯಾತಕಲ್ಲಿ ।
ಕಾಯ್ದು ಕೊಲ್ಲಲು ನಾನು 
ಇರುತಿರಲು ನಾನು ।
ಬಿಲ್ಲು ಪಿಡಿದು ಕೀರ್ತಿ 
ಪಡೆ ಲೋಕದಲ್ಲಿ ।। ಚರಣ ।।
" ಪದ "
ಶಾಸ್ತ್ರದಂಜಿಕೆಯಿಲ್ಲ ಜೀವಕೆ । ಈ ದೇಹಕ್ಕೆ ಪಾವಕನ ದಾಹಕ್ಕೆ । ಉದಕಗಳಿಂದ ವೇದನೆಯಾಕೆ । ಈ ಜೀವಕ್ಕೆ ಮಾರುತದ ಶೋಷಕ್ಕೆ । ನಿತ್ಯ ಅಭೇದ್ಯ ತಾ ಜೀವನ । ಸನಾತನ । ವಸ್ತ್ರದ ಹಾಂಗೆ । ಈ ತನುವು । ಅದಾವು ಪೋದಾವು ನಿನಗಯ್ಯಾ । ಅದ ನಾ ಬಲ್ಲೆನಯ್ಯಾ ।।   
ಜ್ಞಾನ ದೊಡ್ಡದು ಕರ್ಮ 
ಬಂಧವ ಬಿಟ್ಟು ।
ಕರ್ಮ ಬಿಟ್ಟರೆ 
ಪ್ರತ್ಯವಾಯವೆಷ್ಟು ।
ಫಲ ಬಿಟ್ಟು ನೀ 
ಮಾಡು ಕರ್ಮಗಳ ।
ಸಮ ದೇಹಕೆ ಫಲ 
ಕರ್ಮ ಕಾರಣವಲ್ಲ ।। ಚರಣ ।।
" ಪದ "
ಕರ್ಮದಲ್ಲೇ ನಿನಗಧಿಕಾರ । ಫಲ ತಾ ದೂರ । ಧನಂಜಯಗೋಸ್ಕರ । ಜ್ಞಾನ ದೊಡ್ಡದು ಕರ್ಮ ದೂರಯ್ಯಾ ।ಇತ್ತ ಬಾರಯ್ಯ । ಯೋಗ ಬುದ್ಧಿ ಮಾಡಯ್ಯ । ಜೀತ ಬುದ್ಧಿ ಯಾವದ್ಯೆ ಕೇಶವ । ಜಗತ್ಪಾಶವ । ನೋಡದೆ ಪರಮೇಶ । ಗೋವಿಂದನಲ್ಲಿ ಮನವಿಟ್ಟವ । ಕಾಮ ಬಿಟ್ಟವ । ಜಿತ ದೇಹ ತಾನಾವ ।।
ಜ್ಞಾನ ದೊಡ್ಡದು 
ಕರ್ಮ ದಲ್ಯಾಕೆ ।
ಯೆನ್ನ ಬುದ್ಧಿ ಮೋಹಿಸಿ 
ಕೃಷ್ಣ ಕೇಳೈ ।
ಭಿನ್ನ ಕರ್ಮ ವಿಲ್ಲದೆ 
ಮೋಕ್ಷ ಫಲವುಂಟೇ ।
ಇನ್ನಾ ಕರ್ಮ ಮೋಕ್ಷದ 
ಬುದ್ಧಿಗೆ ಬೀಜವಲ್ಲೇ  ।। ಚರಣ ।।
" ಪದ "
ಯುದ್ಧ ಕರ್ಮವ ಮಾಡೋ ಪಾಂಡವ । ರಣ ತಾಂಡವ । ವೈರಿ ಷಂಡನೆಂಬುವಾ । ಜನರೆಲ್ಲಾ ಮಾಳ್ಪರೋ ನಿನ್ನ ನೋಡಿ । ಮತ್ತೇನ ನೋಡಿ । ನೋಡಿದರ ನೀ ಬೇಡಿ । ಎನಗ್ಯಾಕೆ ಪೇಳಯ್ಯ ಜನಕರ್ಮ । ಕ್ಷತ್ರಿಯ ಧರ್ಮ । ನಷ್ಟವಾಗುವುದು ಧರ್ಮ । ಅರ್ಪಿಸು ಯೆನ್ನಲಿ ಸರ್ವವು । ಬಿಟ್ಟು ಗರ್ವವು । ತಿಳಿ ಯೆನ್ನೋಳು ಸರ್ವವು ।।
ಯೋಗ ಸನ್ಯಾಸಗಳೆರಡೂ 
ಮುಕ್ತಿಗೆ ದೃಢವು ।
ಭೋಗ ವರ್ಜಿತ ಕೇಳು 
ಸನ್ಯಾಸಿಯಿರವು ।
ಹ್ಯಾಗೆ ಪದ್ಮಕೆ 
ಪಾಣಿಯ ಲೇಪವಿಲ್ಲ ।
ಹಾಗೆ ಭಕ್ತಿಗೆ 
ಸಂಸ್ಕೃತಿಯು ಇಲ್ಲ ।।
" ಪದ "
ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ । ಸಮ ನಾನಲ್ಲಿ । ಭಜಿಪರ ಮನದಲ್ಲಿ । ಮನಸು ಯಾರ ಜೀವಕೆ ಬಂದು । ಇತ್ತ ಬಾರೆಂದು । ಮತ್ತೆ ವೈರಿದಾರೆಂದೂ । ಲೋಷ್ಟಕಾಂಚನ ನೋಡು ಸಮ ಮಾಡಿ । ಅಸನ ಹೂಡಿ । ನಾಸಿಕ ತುದಿ ನೋಡಿ । ಧ್ಯಾನ ಮಾಡು ಹರಿ ಅಲ್ಲಿಹ । ಅವನಲ್ಲಿಹ । ಯೋಗ ಸನ್ನಿಹಿತನವನೇ ।।
ಯಾರ ಭಕ್ತಿಯು 
ಯೆನ್ನ ಪಾದಾಬ್ಜದಲ್ಲಿ ।
ಘೋರ ಸಂಸಾರ 
ಯಾತನೆ ಅವರಿಗಿಲ್ಲ ।
ಶರೀರವೇ ಕ್ಷೇತ್ರ-
ವೆಂತೆಂದು ತಿಳಿಯೋ ।
ಮರೆಯದೆ ಕ್ಷೇತ್ರಜ್ಞ-
ನೆಂದೆನ್ನ ತಿಳಿಯೋ ।।
" ಪದ "
ಶರೀರದೊಳಗಿದ್ದು ಪಾಪಿಲ್ಲ । ದುಃಖ ಲೇಪಿಲ್ಲ । ಆಕಾಶವು ಎಲ್ಲ । ಯಾತರಿಂದ ಹುಟ್ಟಿತು ಈ ಗುಣ । ಮೂರೂ ಸದ್ಗುಣ ಪೇಳಯ್ಯ ಫಲ್ಗುಣ । ಸುಖ ದುಃಖ ಸಮ ಮಾಡಿಕೊಂಡು । ನೀ । ಈಡ್ಯಾಡೋ ನೀ । ಬ್ರಹ್ಮನ ನೋಡೋ ನೀ । ಚಂದ್ರ ಸೂರ್ಯರ ತೇಜ ನನದಯ್ಯಾ । ಗುಡಾಕೇಶಯ್ಯ । ಅನ್ನ ಪಚನವೆನದಯ್ಯಾ ।।
ನಾನೆ ಉತ್ತಮ ಮನಸು 
ಯೆನ್ನಲಿ ಮಾಡೋ ।
ಜ್ಞಾನ ಅಜ್ಞಾನ ಪೇಳುವೆ 
ತಿಳಿದು ನೋಡೋ ।
ಜ್ಞಾನ ದುರ್ಲಭ 
ಅವರ ಭಕ್ತಿಗಳಂತೆ ।
ನಾನು ಕೊಡುವೆನು ಫಲವ 
ಮನಸು ಬಂದಂತೆ ।।
" ಪದ "
ಸ್ಮರಣೆ ಮಾಡುತ ದೇಹವ ಬಿಡುವರೋ । ಯೆನ್ನ ಪಡೆವರೋ । ಬಲು ಭಕ್ತಿ ಮಾಡುವರೋ । ಅನಂತ ಚೇತನ ಸುಳಿವೆನು । ಹರಿ ಸುಲಭನು । ಮತ್ತೆ ಜ್ಞಾನವಿಲ್ಲವಗೆ । ಯೆನ್ನ ಭಕ್ತರಿಗಿಲ್ಲ ನಾಶವು । ಸ್ವರ್ಗ ದಾಶವು । ಬಿಟ್ಟು ಚರಣ ಭಕುತಿಯು ।।
ಕೃಷ್ಣ ತೋರಿಸೋ 
ನಿನ್ನ ವಿಭೂತಿ ರೂಪ ।
ಇಷ್ಟು ಪೂರುತಿಯಾಗಲೊ 
ಯೆನಗೆ ಶ್ರೀಪತಿ ।
ರಾಮ ನಾನಯ್ಯ 
ರಾಜರ ಗುಂಪಿನಲ್ಲೀ ।
ಸೋಮ ನಾನಯ್ಯ 
ತಾರಾ ಮಂಡಲದಲ್ಲಿ ।।
" ಪದ "
ಅಕ್ಷರದೊಳಗೆ " ಅ " ಕಾರನು । ಗುಣಸಾರನು । ಪಕ್ಷಿಗಳಲ್ಲಿ ನಾನು ಗರುಡನು । ಸಕಲ ಜಾತಿಗಳಲ್ಲಿ । ಶ್ರೇಷ್ಠ ತನದಲ್ಲಿ । ಯೆನ್ನ ರೂಪ ತಿಳಿಯಲ್ಲೀ । ತೋರಿಸೋ ಶ್ರೀ ಕೃಷ್ಣ ನಿನ್ನ ರೂಪ । ನಾನಾ ರೂಪ । ಅರ್ಜುನ ನೋಡೋ ರೂಪ । ಕಂಡನು ತನ್ನನು ಸಹಿತಾದಿ । ಹರಿ ದೇಹದಿ । ಬ್ರಹ್ಮಾಂಡಗಳಲ್ಲಿ ।।
ಕ್ಷರ ಅಕ್ಷರ ಎರಡಕ್ಕೂ 
ಉತ್ತಮನು ।
ಘೋರ ನರಕಕೆ ಲೋಭ 
ಕಾಮನು ನಾನು ।
ಸಾರ ದಾನವು 
ಸಜ್ಜನರ ಹಸ್ತದಲ್ಲೀ । 
ಭೂರಿ ದಕ್ಷಿಣೆ ನೀಡೋ 
ಸತ್ಪಾತ್ರದಲ್ಲಿ ।।
ಸರ್ವ ದಾನಕ್ಕಿಂತ ಯೆನ ಭಕ್ತಿ । ಕೇಳೋ ಭೂಶಕ್ತಿ । ಮಾಡಯ್ಯ ವಿರಕ್ತಿ । ಕೃಷ್ಣ ಹರಣವಾಯ್ತು ನಿನ್ನಿಂದ । ಮೋಹ ಎನ್ನಿಂದ । ಬಹು ಸೂವಾಕ್ಯದಿಂದ । ಕೃಷ್ಣ ಭೀಮಾರ್ಜುನರ ಸಂವಾದ । ಮಹಾ ಸುಖಪ್ರದ । ಧೃತರಾಷ್ಟ್ರ ಕೇಳೀದ । ಬಲ್ಲೆನು ವ್ಯಾಸರ ದಯದಿಂದ । ಮನಸೀನಿಂದ । ಕೃಷ್ಣನಲ್ಲೇ ಜಯವೆಂದ ।।
***
" ಗೀತಾ ಜಯಂತೀ - 9 "
" ಮಹಾ ಭಾರತ ಭೀಷ್ಮ ಪರ್ವದಲ್ಲಿ ಗೀತೆಯ ಪ್ರಶಂಸೆ.. "
ಗೀತಾ ಸುಗೀತಾ ಕರ್ತವ್ಯಾ 
ಕಿಮನ್ನೈಃ ಶಾಸ್ತ್ರ ವಿಸ್ತರೈಃ ।
ಯಾ ಸ್ವಯಂ ಪದ್ಮನಾಭಸ್ಯ 
ಮುಖ ಪದ್ಮಾತ್ ವಿನಿಃಸೃತಾ ।।
ಸರ್ವ ಶಾಸ್ತ್ರಮಯೀ ಗೀತಾ 
ಸರ್ವ ದೇವಮಯೋ ಹರಿಃ ।
ಸರ್ವ ತೀರ್ಥಮಯೀ ಗಂಗಾ
ಸರ್ವ ವೇದಮಯೋ ಮನಃ ।।
ಗೀತಾ ಗಂಗಾ ಚ ಗಾಯತ್ರೀ 
ಗೋವಿಂದೇತಿ ಹೃದಿ ಸ್ಥಿತೇ ।
ಚತುರ್ಗಸಾರ ಸಂಯುಕ್ತೇ 
ಪುನರ್ಜನ್ಮ ನ ವಿದ್ಯತೇ ।।
ಭಾರತಾಮೃತ ಸರ್ವಸ್ವ 
ಗೀತಾಯಾ ಮಥಿತಸ್ಯ ಚ ।
ಸಾರಮುದ್ದ್ಹ್ರುತ್ಯ ಕೃಷ್ಣೇನ 
ಅರ್ಜುನಸ್ಯ ಮುಖೇ ಹುತಮ್ ।।
" ಗೀತೆಯ ಕುರಿತು ಉಪಯುಕ್ತ ಮಾಹಿತಿ "
ಪಾರ್ವತೀದೇವಿಗೆ ಭಗವದ್ಗೀತೆಯ ಮಹಿಮೆಯನ್ನು ತಿಳಿಸಿದವರು ಶ್ರೀ ಮಹಾರುದ್ರದೇವರು.
ಗೀತೆಗೆ ಭಾಷ್ಯ ಬರೆದವರು ಶ್ರೀಮನ್ಮಧ್ವಾಚಾರ್ಯರು. 
ಗೀತಾ ಭಾಷ್ಯಕ್ಕೆ ಟೀಕೆ ಬರೆದವರು :  
" ಭಾವ ಪ್ರದೀಪಿಕಾ "  ಶ್ರೀ ಪದ್ಮನಾಭತೀರ್ಥರು. 
ಗೀತಾ ಭಾಷ್ಯ ವ್ಯಾಖ್ಯಾನ " ಭಾವಪ್ರಕಾಶಿಕಾ " ಶ್ರೀ ನರಹರಿತೀರ್ಥರು "
ಪ್ರಮೇಯ ದೀಪಿಕಾ ಮತ್ತು ನ್ಯಾಯದೀಪಿಕಾ "  ಶ್ರೀ ಜಯತೀರ್ಥರು.
" ಭಗವದ್ಗೀತಾ ಟೀಕೆ " ಶ್ರೀ ವಿದ್ಯಾಧಿರಾಜತೀರ್ಥರು.  
" ಗೀತಾ ಭಾಷ್ಯ ಟೀಕೆ " ಶ್ರೀ ಭಾವಿಸಮೀರರಾದ ವಾದಿರಾಜರ ಗುರುಸಾರ್ವಭೌಮರು 
" ಗೀತಾಕ್ಷರಾರ್ಥಃ ", " ಗೀತಾಭಾಷ್ಯ ಪ್ರಮೇಯದೀಪಿಕಾವ್ಯಾಖ್ಯಾ ",  " ಗೀತಾತಾತ್ಪರ್ಯ ನ್ಯಾಯದೀಪಿಕಾ ವ್ಯಾಖ್ಯಾನಮ್ - " ಶ್ರೀ ವಿಜಯೀಂದ್ರತೀರ್ಥರು ( 3 ವ್ಯಾಖ್ಯಾನಗಳು ಬರೆದಿದ್ದಾರೆ ). 
" ಶ್ರೀಮದ್ಭಗವದ್ಗೀತಾ ಭಾಷ್ಯ ಟೀಕಾ ಪ್ರಮೇಯದೀಪಿಕಾ ಟಿಪ್ಪಣಿ ಭಾವದೀಪ ", " ಗೀತಾ ತಾತ್ಪರ್ಯ ಟೀಕಾ ನ್ಯಾಯದೀಪಿಕಾ ಟಿಪ್ಪಣೀ ಭಾವದೀಪ " ಮತ್ತು " ಗೀತಾವಿವೃತ್ತಿ " ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು 
" ಶ್ರೀ ರಾಯರ ಗೀತಾವಿವೃತ್ತಿಯ ವೈಶಿಷ್ಟ್ಯ "
ಶ್ರೀಮದಾಚಾರ್ಯರು ಭಾಷ್ಯದಲ್ಲಿ ಉದಹರಿಸಿದ ಆಕರಗಳ ಪೂರ್ಣ ಮಾಹಿತಿ ಕೊಡುವುದು. 
ಟೀಕೆಗಳಲ್ಲಿ ನಮ್ಮ ಮಟ್ಟಕ್ಕೆ ಗೊತ್ತಾಗದ ಕಬ್ಬಿಣದ ಕಡಲೆಯಂಥಹಾ ವಾಕ್ಯಗಳಿಗೆ ಸುಲಭವಾಗಿ ಅರ್ಥ ಮಾಡಿಸಿ ಕೊಡುವುದು. 
ತಮ್ಮ ( ಶ್ರೀ ರಾಯರ ) ಕಾಲದಲ್ಲೇ ಕಂಡು ಬಂದ ಪಾಠಾ೦ತರಗಳ ಉದಾಹರಣೆ ಮತ್ತು ಅವುಗಳ ಶುದ್ಧ ಪಾಠದ ಮಂಡನೆ. 
ಗೀತೆಯಲ್ಲಿ ಕಾಣಿಸಿರುವ ಶಬ್ದ ವ್ಯುತ್ಪತ್ತಿ, ವ್ಯಾಕರಣಗಳ ವಿಷಯಗಳಲ್ಲಿ  ಮಹಾ ವ್ಯಾಕರಣ ಸಹಿತ ಸಮಕಾಲೀನ ಪ್ರಮುಖ ವ್ಯಾಕರಣ ಗ್ರಂಥಗಳ ಉಲ್ಲೇಖ ಹಾಗೂ ಅದರ ಸಮರ್ಥನೆ. 
ಅನ್ಯ ಶಾಸ್ತ್ರ ಮತ್ತು ಅನ್ಯ ಮತಗಳಲ್ಲಿ ತಮಗಿದ್ದ ಜ್ಞಾನದ ಪರಿಚಯವನ್ನು ವಿನಯವಾಗಿ ತಿಳಿಸುವ ಜಾಣ್ಮೆ. 
ಸಂದರ್ಭಕ್ಕೆ ತಕ್ಕಂತೆ ಬಳಸುವ ಸೂಕ್ತಿಗಳು. 
ಭಾಷ್ಯ ಮತ್ತು ತಾತ್ಪರ್ಯಗಳಲ್ಲಿ ಅಸ್ಪಷ್ಟವಾಗಿ ಕಾಣುವಂತೆ ಅನ್ನಿಸುವ ಪ್ರಮೇಯಗಳನ್ನು ಒಂದುಕಡೆ ಸಂಗ್ರಹಿಸಿಕೊಡುವುದು.
ಗೀತೆಯಲ್ಲಿ ಗೊಂದಲಕ್ಕೀಡಾಗುವಂಥಾ ಕಡೆಗಳಲ್ಲಿ ಸಮನ್ವಯಿಸಿಕೊಂಡು ಅರ್ಥ ಮಾಡಿಕೊಳ್ಳುವುದು ಹೇಗೆಂಬುದರ ನಿರ್ವಹಣೆ. 
ಗೀತೆ, ಭಾಷ್ಯೇ, ಟೀಕೆ, ವ್ಯಾಖ್ಯಾನಗಳಲ್ಲಿ ಹುದುಗಿ ಹೋಗಿರುವ ಅಂತರ್ಯ ವಿಚಾರಗಳನ್ನು ಒಂದು ವೈಜ್ಞಾನಿಕ ಕ್ರಮದಲ್ಲಿ ಅಳವಡಿಸಿರುವುದು. 
ಇದರಿಂದಾಗಿ ಪ್ರತಿಯೊಂದು ಶ್ಲೋಕದ ಸಂಪೂರ್ಣ ಭಾಗ ಮನದಟ್ಟಾಗಿ ಆನಂದದಿಂದ ಅರ್ಥೈಸುಕೊಳ್ಳುವಲ್ಲಿ ಶ್ರೀ ರಾಯರ ಗೀತೆಯ ಮೇಲಿನ ಕೆಲಸಗಳು ಸಫಲ ಮತ್ತು ಮಾದರಿ!!!  
" ಗೀತಾಭಾಷ್ಯ ಟಿಪ್ಪಣಿ ಭಾವರತ್ನ ಕೋಶ " ಶ್ರೀ ಸುಮತೀಂದ್ರತೀರ್ಥರು 
" ಗೀತಾರ್ಥ ವೈಭವಂ " ಶ್ರೀ ಸತ್ಯಧರ್ಮತೀರ್ಥರು 
" ಕಿರಣಾವಳೀ " ಶ್ರೀ ಶ್ರೀನಿವಾಸಾಚಾರ್ಯ ತಾಮ್ರಪರ್ಣಿ
" ಗೀತಾ ಭಾಷ್ಯ ಟೀಕಾ ಭಾವ ಪ್ರಕಾಶ " ಶ್ರೀ ಸತ್ಯಪ್ರಜ್ಞತೀರ್ಥರು
" ಗೀತಾಭಾಷ್ಯ ಟಿಪ್ಪಣಿ ಗುರುರಾಜೀಯ " ಶ್ರೀ ಕೇಶವಾಚಾರ್ಯ ಪಾಂಡುರಂಗಿ 
" ಗೀತಾಭಾಷ್ಯಟಿಪ್ಪಣಿ " ಶ್ರೀ ಉಮರ್ಜಿ ಕೃಷ್ಣಾಚಾರ್ಯರು 
" ಗೀತಾಭಾಷ್ಯ ಟಿಪ್ಪಣಿ ಭಾವಬೋಧ " ಶ್ರೀ ರಘೂತ್ತಮತೀರ್ಥರು 
" ಗೀತಾಭಾಷ್ಯ ಟಿಪ್ಪಣಿ ಭಾವ ಪ್ರಕಾಶಿಕಾ " ಶ್ರೀ ಬಿದರಳ್ಳಿ ಶ್ರೀನಿವಾಸಾಚಾರ್ಯರು 
" ಗೀತಾಪಂಚಾನನ " ಶ್ರೀ ವರಖೇಡಿ ತಿಮ್ಮಣ್ಣಾಚಾರ್ಯರು 
" ಗೀತಾಭಾಷ್ಯ ವಿವೃತ್ತಿ " ಶ್ರೀ ಸಾತಾರಿ ರಾಘವೇಂದ್ರಾಚಾರ್ಯರು 
" ಗೀತಾ ವಿವೃತ್ತಿ ವ್ಯಾಖ್ಯಾನ " ಶ್ರೀ ಪಾಂಗರಿ ಆಚಾರ್ಯರು 
" ಗೀತಾ ವ್ಯಾಖ್ಯಾನ " ಶ್ರೀ ನರಹರಿ ಆಚಾರ್ಯ ಆಯಿ 
" ಉಪ ಸಂಹಾರ "
ವಿಶ್ವದ ಪ್ರಥಮ ಯೋಗಾಚಾರ್ಯನಾದ ಹೋಲಿಕೆಯಿಲ್ಲದ ಒಬ್ಬ ದಾರ್ಶನಿಕನಾಗಿ ಸರ್ವ ಕಾಲಕ್ಕೂ ಸಲ್ಲುವ ಓರ್ವ ಪ್ರಬುದ್ಧ ರಾಜಕಾರಣಿಯಾಗಿ ಕರೆದ ಕೂಡಲೇ ಬರುವ ನಿಜ ಗೆಳೆಯನಾಗಿ ಶ್ರೀ ಕೃಷ್ಣ ಪರಮಾತ್ಮ ನಮಗೆ ಬೇಕೇ ಬೇಕು. 
ಶ್ರೀ ಕೃಷ್ಣನನ್ನು ಒಲಿಸಿಕೊಳ್ಳುವುದು ಹೇಗೆ, ಆತನನ್ನು ಅರ್ಥೈಸಿಕೊಳ್ಳುವುದು ಹೇಗೆಂಬುದನ್ನು ತೋರಿಸಿ ಕೊಟ್ಟವರು ಶ್ರೀಮದಾನಂದತೀರ್ಥರು. 
ಶ್ರೀಕೃಷ್ಣನ ಭಾಷೆಯ ಭಾಷ್ಯ ಮತ್ತು ಆಂತರ್ಯದ ತಾತ್ಪರ್ಯ ತಿಳಿಸಿಕೊಟ್ಟ ಶ್ರೀಮದಾಚಾರ್ಯರು ನಮಗೆ ಜನ್ಮ ಜನ್ಮಕ್ಕೂ ಬೇಕು. 
ಚೆನ್ನಾಗಿ ಓದುವವರನ್ನು ತಯಾರು ಮಾಡುವುದು ದೊಡ್ಡದೇನಲ್ಲ. 
ದಡ್ದನನ್ನೂ, ಹೆಡ್ದನನ್ನೂ, ದೀನ ದಲಿತರನ್ನು ವೈಷ್ಣವ ಕಕ್ಷೆಗೆ ಸೇರಿಸುವ ಏಕೈಕ ಕಾಮಧೇನು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು. 
ಪ್ರತಿನಿತ್ಯ ದೊಡ್ದ ಬದರಿಯಲ್ಲಿ ಶ್ರೀ ವೇದವ್ಯಾಸರ " ಗೀತೆ " ಎಂಬ ಹೆಸರಿನಿಂದ ಶ್ರೀಮದಾಚಾರ್ಯರು ಪರಿಶುದ್ಧವಾದ " ಹಾಲನ್ನು " ಕರೆಯುತ್ತಿದ್ದಾರೆ. 
ತಮ್ಮನ್ನು ಆಶ್ರಯಿಸಿದ ಎಲ್ಲಾ ಯತಿಗಳಿಗೂ ಹಂಚುತ್ತಾರೆ. 
ಆದರೆ ಶ್ರೀ ರಾಯರಿಗೆ ಮಾತ್ರ ಹೆಚ್ಚಿಗೆ ಕೊಡುತ್ತಾರೆ. 
ಏಕೆಂದರೆ - ಈ ಚೇತನ ತನಗಾಗಿ ಏನೂ ಇಟ್ಟುಕೊಳ್ಳುವುದಿಲ್ಲವೆಂದು ಗೊತ್ತು. 
ಶ್ರೀ ಪ್ರಹ್ಲಾದರಾಜರಾಗಿದ್ದಾಗ ಸಾಕ್ಷಾತ್ ಶ್ರೀ ಹರಿಯೇ ಕೇಳಿದರೂ ತನಗಾಗಿ ಏನನ್ನೂ ಬೇಡಿಕೊಳ್ಳಲಿಲ್ಲ. 
ಭಕ್ತರಿಗಾಗಿ ಬೇಡಿದರು. 
ಶ್ರೀ ವ್ಯಾಸರಾಜರಾಗಿದ್ದಾಗ ಶ್ರೀ ಹರಿವಾಯುಗಳಿಗೆ ಪ್ರಿಯವಾದ ಸಿದ್ಧಾಂತ ಪ್ರಚಾರ ಪ್ರಸಾರವನ್ನು ಸಮರ್ಥವಾಗಿ ಸೇವೆ ಸಲ್ಲಿಸಿದರು. 
ಆರಾಮಾಗಿ ಪರಮಾತ್ಮನ ಬಳಿಗೆ ಹೋಗಿ ಕೂಡ ಬಹುದಿತ್ತು. 
ಊಹೂಂ ಮತ್ತೆ ಶ್ರೀರಾಯರಾಗಿ ಧರೆಗಿಳಿದು ಬಂದರು. 
ಶ್ರೀ ರಾಯರಾಗಿ ಬಂದ ಮೇಲೆ ಅಸಾಧಾರಣ ಕಾರ್ಯಗಳನ್ನು ಮಾಡಿ ಶ್ರೀ ಹರಿಯ ಪ್ರೀತಿ ಗಳಿಸಿದರು. 
ಪುಣ್ಯರಾಶಿಯೇ ಸೇರಿತು. 
ಈಗಲೂ ವೈಕುಂಠ ಭಕ್ತರಿಗಾಗಿ ಭುಮಿಯಲ್ಲೇ ಉಳಿದುಕೊಂಡರು. 
ತಾವು ಗಳಿಸಿದ ಪುಣ್ಯರಾಶಿಯನ್ನು ಭಕ್ತರಿಗೆ ಹಂಚುತ್ತಾ ಈಗಲೂ ಶ್ರೀ ಕ್ಷೇತ್ರ ಮಂತ್ರಾಲಯ ಸುಂದರ ವೃಂದಾವನದಲ್ಲಿ ವಿರಾಜಮಾನರಾಗಿದ್ದಾರೆ.  
ಶಾಸ್ತ್ರೇಷು ಭಾರತಂಸಾರಂ  
ತತ್ರ ನಾಮ ಸಹಸ್ರಕಮ್ ।
ವೈಷ್ಣವಾ ಕೃಷ್ಣ ಗೀತಾ ಚ 
ತಜ್ಞನಾತ್ ಮುಚ್ಯತ್ಯೇಂಜಸಾ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
**

ಗೀತೆಯ ಎಲ್ಲಾ 18 ಅಧ್ಯಾಯಗಳ ಸಾರವನ್ನು ನಾನು ಇಲ್ಲಿ ಕೇವಲ 18 ವಾಕ್ಯಗಳಲ್ಲಿ ನೀಡುತ್ತೇನೆ. ಒನ್ ಲೈನರ್ ಗೀತಾ (ಸನಾತನ ಧರ್ಮ-ಜೀವನದ ಶಾಶ್ವತ ಸತ್ಯ) - ಪ್ರತಿಯೊಬ್ಬರೂ ಇದನ್ನು 100 ವ್ಯಕ್ತಿಗಳಿಗೆ ರವಾನಿಸಲು ವಿನಂತಿಸಲಾಗಿದೆ. ನಿಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಇದನ್ನು ಇಡೀ ಜಗತ್ತಿಗೆ ರವಾನಿಸಬೇಕು.

ll ಒನ್ ಲೈನರ್ ಗೀತಾ ll:-
           ~~~
🕉️
ಅಧ್ಯಾಯ 1 - ತಪ್ಪು ಆಲೋಚನೆಯೇ ಜೀವನದ ಏಕೈಕ ಸಮಸ್ಯೆ .
ಅಧ್ಯಾಯ 2 - ಸರಿಯಾದ ಜ್ಞಾನವು ನಮ್ಮ ಎಲ್ಲಾ ಸಮಸ್ಯೆಗಳಿಗೆ ಅಂತಿಮ ಪರಿಹಾರವಾಗಿದೆ.
ಅಧ್ಯಾಯ 3 - ನಿಸ್ವಾರ್ಥತೆಯು ಪ್ರಗತಿ ಮತ್ತು ಸಮೃದ್ಧಿಯ ಏಕೈಕ ಮಾರ್ಗವಾಗಿದೆ.
ಅಧ್ಯಾಯ 4 - ಪ್ರತಿಯೊಂದು ಕ್ರಿಯೆಯು ಪ್ರಾರ್ಥನೆಯ ಕ್ರಿಯೆಯಾಗಿರಬಹುದು.
ಅಧ್ಯಾಯ 5 - ಪ್ರತ್ಯೇಕತೆಯ ಅಹಂಕಾರವನ್ನು ತ್ಯಜಿಸಿ ಮತ್ತು ಅನಂತತೆಯ ಆನಂದವನ್ನು ಆನಂದಿಸಿ .
ಅಧ್ಯಾಯ 6 - ಪ್ರತಿದಿನ ಉನ್ನತ ಪ್ರಜ್ಞೆಗೆ ಸಂಪರ್ಕಿಸಿ.
ಅಧ್ಯಾಯ 7 - ನೀವು ಕಲಿತದ್ದನ್ನು ಜೀವಿಸಿ .
ಅಧ್ಯಾಯ 8 - ನಿಮ್ಮನ್ನು ಎಂದಿಗೂ ಬಿಟ್ಟುಕೊಡಬೇಡಿ .
ಅಧ್ಯಾಯ 9 - ನಿಮ್ಮ ಆಶೀರ್ವಾದವನ್ನು ಗೌರವಿಸಿ .
ಅಧ್ಯಾಯ 10 - ಸುತ್ತಲೂ ದೈವತ್ವವನ್ನು ನೋಡಿ .
ಅಧ್ಯಾಯ 11 - ಸತ್ಯವನ್ನು ನೋಡಲು ಸಾಕಷ್ಟು ಶರಣಾಗತಿಯನ್ನು ಹೊಂದಿರಿ.
ಅಧ್ಯಾಯ 12 - ನಿಮ್ಮ ಮನಸ್ಸನ್ನು ಉನ್ನತ ಮಟ್ಟದಲ್ಲಿ ಹೀರಿಕೊಳ್ಳಿ.
ಅಧ್ಯಾಯ 13 - ಮಾಯೆಯಿಂದ ಬೇರ್ಪಟ್ಟು ಮತ್ತು ದೈವಿಕತೆಗೆ ಲಗತ್ತಿಸಿ .
ಅಧ್ಯಾಯ 14 - ನಿಮ್ಮ ದೃಷ್ಟಿಗೆ ಹೊಂದಿಕೆಯಾಗುವ ಜೀವನಶೈಲಿಯನ್ನು ಜೀವಿಸಿ.
ಅಧ್ಯಾಯ 15 - ದೈವತ್ವಕ್ಕೆ ಆದ್ಯತೆ ನೀಡಿ .
ಅಧ್ಯಾಯ 16 - ಒಳ್ಳೆಯವನಾಗಿರುವುದು ಸ್ವತಃ ಪ್ರತಿಫಲವಾಗಿದೆ .
ಅಧ್ಯಾಯ 17 - ಹಿತವಾದದಕ್ಕಿಂತ ಹಕ್ಕನ್ನು ಆರಿಸುವುದು ಶಕ್ತಿಯ ಸಂಕೇತವಾಗಿದೆ
ಅಧ್ಯಾಯ 18 - ಹೋಗಲಿ, ದೇವರೊಂದಿಗೆ ಐಕ್ಯವಾಗಲು ಹೋಗೋಣ .
~~~

(ಈ ಪ್ರತಿಯೊಂದು ತತ್ವದ ಬಗ್ಗೆ ಆತ್ಮಾವಲೋಕನ)

 || ॐ ತತ್ಸತ್ ||
***

gita gist in one minute

essence of gita in 3 minutes







No comments:

Post a Comment