SEARCH HERE

Tuesday 1 January 2019

ಮಾರ್ಗಶೀರ್ಷ ಮಾಸ margasheersha masa


ಮಾರ್ಗಶಿರ ಮಾಸದಲ್ಲಿ ಬರುವ ಹಬ್ಬಗಳು/ವಿಶೇಷ ದಿನಗಳು

ಮೋಕ್ಷದಾ ಏಕಾದಶಿ, ಗೀತಾ ಜಯಂತಿ (ಶುಕ್ಲ ಏಕಾದಶಿ)
ದತ್ತಾತ್ರೇಯ ಜಯಂತಿ (ಹುಣ್ಣಿಮೆ)
ಸಫಲಾ ಏಕಾದಶಿ (ಕೃಷ್ಣ ಏಕಾದಶಿ)
ಸ್ಕಂದ ಷಷ್ಠೀ
ಧನುರ್ಮಾಸಾರಂಭ
ವಿಷ್ಣು ದೀಪೋತ್ಸವ 
ಹುತ್ತರೀ ಹಬ್ಬ - ಧಾನ್ಯಲಕ್ಷ್ಮೀ ಪೂಜೆ 
ಕಾಲಭೈರವಾಷ್ಟಮಿ 
ಎಳ್ಳು ಅಮವಾಸ್ಯೆ - ಧನುರ್ಮಾಸ

please also read article on dhanurmasa

ಚಳಿ, ಮರಗಟ್ಟುವ ವಾತಾವರಣದಲ್ಲಿ ಸೂರ್ಯೋದಯಕ್ಕೂ ಮುನ್ನವೇ ಪವಿತ್ರ ಸ್ನಾನ, ಬ್ರಾಹ್ಮಿ ಮುಹೂರ್ತದಲ್ಲಿ ಇಷ್ಟ ದೇವದ ಆರಾಧನೆ ಇವು ಮಾರ್ಘಶಿರ ಮಾಸದ ಆಚರಣೆಯ ಸ್ಥೂಲ ಚಿತ್ರಣ.


ಹಿಂದೂ ಪಂಚಾಂಗದ 12 ಮಾಸಗಳಲ್ಲಿ ಮಾರ್ಘಶಿರ ಮಾಸ ದೈವಾರಾಧನೆಗೆ ಅತ್ಯಂತ ಶ್ರೇಷ್ಠವಾದ ಮಾಸ. ಚಾಂದ್ರಮಾನ ಮಾಸಗಳಲ್ಲಿ ಮಾರ್ಘಶಿರ ಮಾಸ, ಸೌರಮಾನದ ಪ್ರಕಾರ ಧನುರ್ಮಾಸ ಎಂದು ಕರೆಯಲ್ಪಡುವ ಈ 9 ನೇ ಮಾಸದಲ್ಲಿ ಉಳಿದೆಲ್ಲದಕ್ಕಿಂತಲೂ ದೈವಾರಾಧನೆಗೇ ಅದರಲ್ಲೂ ವಿಷ್ಣುವಿನ ಆರಾಧನೆಗೇ ಹೆಚ್ಚು ಮಹತ್ವ ನೀಡಲಾಗಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಸಹ ಮಾಸಾನಾಮ್ ಮಾರ್ಗಶೀರ್ಷಃ ಅಂದರೆ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಎಂದು ತನ್ನನ್ನು ವರ್ಣಿಸಿದ್ದಾನೆ.
ಸೂರ್ಯ ಧನು ರಾಶಿಗೆ ಪ್ರವೇಶಿಸುವ ದಿನದಿಂದ ಧನುರ್ಮಾಸ ಪ್ರಾರಂಭವಾಗುತ್ತದೆ. ವೇದ, ಆಗಮಗಳಲ್ಲಿ ಈ ಮಾಸವನ್ನು ದೈವೀ ಕಾರ್ಯಗಳಿಗೆ ಶ್ರೇಷ್ಠ ಎಂದು ಹೇಳಲಾಗಿದೆಯಾದರೂ, ವಿವಾಹವೇ ಮೊದಲಾದ ಶುಭ ಕಾರ್ಯಗಳನ್ನು ಮಾತ್ರ ಮಾಡುವುದಕ್ಕೆ ಇದು ಅತ್ಯಂತ ಶ್ರೇಷ್ಠವಾದ ಮಾಸ ಅಲ್ಲ. ಕೇವಲ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುವುದಕ್ಕೆ ಈ ಮಾಸವನ್ನು ಮೀಸಲಿರಿಸಲಾಗಿದೆ ಆದ್ದರಿಂದ ಇದನ್ನು ಶೂನ್ಯ ಮಾಸ ಎಂದೂ ಹೇಳಲಾಗುತ್ತದೆ.
ಧನುರ್ಮಾಸದಲ್ಲಿಯೇ ಏಕೆ ಪೂಜೆಗಳಿಗೆ ವಿಶೇಷ ಫಲ? ಶುಭಕಾರ್ಯಗಳಿಗೆ ಶ್ರೇಶ್ಠವಲ್ಲ?
ಉತ್ತರಾಯಣ ಪ್ಯುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ನಮ್ಮ ಹಿಂದೂ ಪಂಚಾಂಗವನ್ನು ವಿಭಾಗಿಸಿದ್ದೇವೆ. ನಮ್ಮ ಕಾಲ ಗಣನೆಗೂ ದೇವತೆಗಳ ಕಾಲಗಣನೆಗೂ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ನಮಗೆ ಒಂದು ವರ್ಷದ ಅವಧಿ. ಮಾರ್ಘಶಿರ ಮಾಸ/ ಧನು ಮಾಸದ ಅವಧಿಯು ದೇವತೆಗಳಿಗೆ ಶ್ರೇಷ್ಠ ಮುಹೂರ್ತ ಇರುವ ಸಮಯ. ನಮ್ಮ ಈ ಒಂದು ಮಾಸದ ಅವಧಿ ದೇವತೆಗಳಿಗೆ ಪೂರ್ತಿ ಬ್ರಹ್ಮ ಮುಹೂರ್ತವಿದ್ದಂತೆ ಆದ ಕಾರಣ ದೇವತೆಗಳಿಗೇ ಶ್ರೇಷ್ಠವಾದ ಸಮಯದಲ್ಲಿ ನಾವು ದೈವಾರಾಧನೆ ಮಾಡಿದರೆ ಅದಕ್ಕೆ ವಿಶೇಷ ಫಲ ಇದೆ ಎನ್ನುತ್ತಾರೆ.
ಈ ಮಾಸದಲ್ಲಿ ಅವತಾರ ಪುರುಷರಿಗೆ ಸಂಬಂಧಪಟ್ಟ ಅನೇಕ ಘಟನಾವಳಿಗಳಿವೆ. ಈ ಮಾಸದ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಅಂದರೆ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವದು. ಅದಕ್ಕೆ ಮೋಕ್ಷದಾ ಏಕಾದಶಿ ಎಂಬ ಹೆಸರಿದೆ. ಮೋಕ್ಷದಾ ಅಂದರೆ ಮೋಕ್ಷವನ್ನು ನೀಡುವ, ಭವಬಂಧನಗಳಿಂದ ಮನಸನ್ನು ಕಳಚುವುದು ಎಂದು ಅರ್ಥ. ಹಾಗಾಗಿಯೇ ಅದಕ್ಕೆ ಗೀತಾ ಜಯಂತಿಯ ದಿನವನ್ನು ಮೋಕ್ಷದಾ ಏಕಾದಶಿ ಎಂದೂ ಹೇಳುತ್ತಾರೆ. ಇನ್ನು ಸನಾತನ ಧರ್ಮದಲ್ಲಿ ಶ್ರೇಷ್ಠ ಗುರುಗಳೆಂದು ಆರಾಧಿಸಲ್ಪಡುವ ದತ್ತಾತ್ರೇಯ ಜಯಂತಿಯೂ ಸಹ ಮಾರ್ಗಶಿರ ಮಾಸದಲ್ಲಿಯೇ ಬರುತ್ತದೆ. ಮಾರ್ಗಶಿರ ಮಾಸದ ಹುಣ್ಣಿಮೆಯಂದು ದತ್ತಾತ್ರೆಯ ಜಯಂತಿಯನ್ನು ಭಕ್ತಿ, ಆದರಗಳಿಂದ ಆಚರಿಸಲಾಗುತ್ತದೆ. ಮಾರ್ಗಶಿರ ಕೃಷ್ಣ ಏಕಾದಶಿಯ ದಿನದಂದು ಉಪಾವಾಸವಿರುವ ಆಚರಣೆಯಿದ್ದು, ಇದನ್ನು ವಿಮಲಾ ಏಕಾದಶಿ (ಸಫಲಾ) ಎಂದೂ ಕರೆಯುತ್ತಾರೆ, ಈ ದಿನದಂದು ಉಪವಾಸವಿದ್ದು, ಜ್ಞಾನಕ್ಕಾಗಿ ಪ್ರಯತ್ನಿಸಿದರೆ ನಮ್ಮಲ್ಲಿರುವ ಅಜ್ಞಾನ ನಿವೃತ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ವಿಷ್ಣುವಿನ ಅವತಾರವೇ ಆಗಿರುವ ಶ್ರೀಕೃಷ್ಣ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಎಂದು ಹೇಳಿದ್ದು, ಈ ಮಾಸದಲ್ಲಿ ವಿಷ್ಣುವಿಗೆ ವಿಶೇಷ ಪೂಜೆಗಳು ನಡೆಯುತ್ತದೆ. ಈ ಮಾಸದ ಮತ್ತೊಂದು ಆಚರಣೆಯೆಂದರೆ ಅಮಾವಾಸ್ಯೆಯ 6 ದಿನಗಳ ನಂತರ ಸ್ಕಂದ ಷಷ್ಟಿಯನ್ನು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಈ ರೀತಿಯ ಸ್ಕಂದ ಷಷ್ಠಿ ಆಚರಣೆ ಹೆಚ್ಚು ನಡೆಯಲಿದ್ದು, ಸಂತಾನವಿಲ್ಲದವರು ಈ ಷಷ್ಠಿಯ ದಿನದಂದು ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರೆ ಸಂತಾನ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ.

*********

ಮಾರ್ಗಶೀರ್ಷಮಾಸದ ಮಹತ್ವ ಸಂಚಿಕೆ-1

ಮಾರ್ಗಶೀರ್ಷ ಮಾಸಕ್ಕೆ ಕೇಶವರೂಪಿ ಪರಮಾತ್ಮನು ನಿಯಾಮಕನಾಗಿರುವನು ಈ ತಿಂಗಳೂ ಪೂರ್ತಿಯಾಗಿ ಒಂದೆ ಹೊತ್ತು ಊಟ(ಏಕಬುಕ್ತ )ಮಾಡಿ ಬ್ರಾಹ್ಮಣ -ಸುವಾಸಿನಿಯರಿಗೆ ಭೋಜನವನ್ನು ಮಾಡಿಸಬೇಕು .ಇದರಿoದ ಧನ-ಧಾನ್ಯವುಳ್ಳವರಾಗುವರು ಈ ಮಾಸದಲ್ಲಿ

ಗೊದಾನ,ಹಿರಣ್ಯ(ಬಂಗಾರ)ದಾನ ರಜತ(ಬೆಳ್ಳಿ)ದಾನ ಜಲದಾನ ವಸ್ತ್ರದಾನ, ಶಯ್ಯಾದಾನ, ಅನ್ನದಾನ,ಭೂದಾನ ,ಆಭರಣಗಳ ದಾನ ,ಗೃಹದಾನ ಮುಂತಾದ ಯೋಗ್ಯವಾದ ದಾನಗಳನ್ನು ಮಾಡಬೇಕು ಎಂದು ಮಾರ್ಗಶೀರ್ಷಮಾಸ ಮಹಾತ್ಮೆಯಲ್ಲಿ ಹೇಳಿದೆ.

ಶ್ರೀದಶಪ್ರಮತಿ ವ್ರತಾನುಶ್ಠಾನ ಚಿಂತನ ಗ್ರೂಪ್
***********



ಮಾರ್ಗಶೀರ್ಷಮಾಸದ ಮಹತ್ವ -2 

ಮಾರ್ಗಶೀರ್ಷ ಶುಕ್ಲ (ಸ್ಕಂಧ) ಷಷ್ಠೀ ಮಹತ್ವ


ಮಾರ್ಗಶೀರ್ಷ ಶುಕ್ಲ ಷಷ್ಠಿ ಯಂದು ಸ್ಕಂಧ ಷಷ್ಠಿಯಾಗಿದೆ ಇದನ್ನೆ ಸಃಬ್ಬರಾಯನ ಷಷ್ಠಿ ಎಂದು ಕರೆಯುತ್ತಾರೆ 
ಸ್ಕಂಧ ಷಷ್ಠಿಯಂದು ಸ್ಕಂಧನ ಅಂತರ್ಯಾಮಿ ಪ್ರದ್ಯುಮ್ನರೂಪಿ ಪಲಮಾತ್ಮನನ್ನು ಗಂಧ ಪುಷ್ಪ ದೂಪ ದೀಪರಾತಿಗಳಿಂದ ಪೂಜಿಸಬೇಕು ‌

*ರಂ ಸ್ಕಂಧಾಯನಮಃ ಎಂದು ಆವಾಹಿಸಿ ಪೂಜಿಸಬೇಕು.*

*ಧನುಃಶಕ್ತಿಧರೋ ಧ್ಯೇಯಃ ಕಾಮದೋ ಭಯನಾಶನಃ*

ಎಂದು ಧ್ಯಾನ ಮಾಡಬೇಕು..

ಈದಿನ ವಟುಗಳಲ್ಲಿದ್ದು ಸ್ಕಂಧನೇ ಪೂಜಾದಿಗಳನ್ನು ಸ್ವೀಕರಿಸುವುದರಿಂದ ವಿಶೇಷವಾಗಿ ವಟುಗಳನ್ನು ಪೂಜಿಸಿ ಪಾದ ತೂಳೆದುಅವರಿಗೆ ಗೋಪಿಚಂದನ, ಯಜ್ಞೋಪವೀತ ,ಪಂಚಪಾತ್ರೆ ,ಮಡಿಪಂಚೆ ,ಫಲದಕ್ಷಿಣೆಗಳನ್ನು ಕೂಟ್ಟು ಸಂತೋಷಪಡಿಸಬೇಕು ಉದ್ದಿನ ಭಕ್ಷ್ಯ , ಸಿಹಿ ಭಕ್ಷ್ಯ ಗಳು, ಪಾಯಸಾದಿಗಳಿಂದ ವಟುಭೋಜನ ಮಾಡಿಸಬೇಕು. 

ಇದರಿಂದ ಸರ್ಪಭಯ ನಿವೃತ್ತಿ ,ಸತ್ಸಾಂತನ ಲಾಭ ,ಚರ್ಮರೋಗ ಪದಿಹಾರ ಮೊದಲಾದ ಫಲಗಳು ಲಭಿಸುವುವು .ಈದಿನ ವಟುಗಳಿಗೆ ರಜತ ( ಬೆಳ್ಳಿಯ)ಪಾತ್ರೆಯನ್ನು ದಾನಮಾಡಿದರೆ ವಿಶೇಷ ಫಲಪ್ರದ.


ಸ್ಕಂಧನು ಚೈತ್ರ. ಷಷ್ಠಿಯಂದು ಅವತರಿಸಿದನು ಮಾರ್ಗಶೀರ್ಷ. ಮಾಸದ ಶುಕ್ಲ ಷಷ್ಠಿಯಂದು ತಾರಕಸುರನನ್ನು ಸಂಹರಿಸಿದನು ಆದ್ದರಿಂದ ಸ್ಕಂಧನಿಗೆ ಷಷ್ಠಿಯು ಪ್ರಿಯವಾಗಿದೆ.

ನಿಹತ್ಯ ತಾರಕಂ ಷಷ್ಠ್ಯಾ ಗುಹಸ್ತಾರಕರಾಜವತ್ |
ರರಾಜ ದಯಿತಾ ತೇನ ತಾರಕೇಯಸ್ಯ ಸಾ ತಿಥಿಃ ||

ಸ್ಕಂಧನ ಪ್ರಾರ್ಥನ ಮಂತ್ರ

ಷಡನನಂ ಕುಂಕುಮ ರಕ್ತವರ್ಣಂ
ಮಹಾಮತಿಂ ದಿವ್ಯ ಮಯೂರವಾಹನಮ್ |
ರುದ್ರಸ್ಯ ಸೂನುಂ ಸುರಸೈನ್ಯ ನಾಥಂ
ಗುಹಂ ಸದಾ ಶರಣಮಹಂ ಪ್ರಪದ್ಯೆ ||

ಸೇನಾವಿದಾರಕ ಸ್ಕಂಧ ಮಹಾಸೇನ ಮಹಾಬಲ | 
ರುದ್ರೋಮಾಗ್ನಿಜ ಷಡ್ವಕ್ತ್ರ ಗಂಗಾಗರ್ಭ
ನಮೋಸ್ತು ತೇ ||


ಸುಬ್ರಹ್ಮಣ್ಯ ಸ್ತುತಿ

*ಸುಬ್ರಹ್ಮಣ್ಯ ಸುರಾಗ್ರಗಣ್ಯ ಕುಜನಾರಣ್ಯಜ್ವಲತ್ಪಾವಕ ಪ್ರಬ್ರೂಯಾತ್ ತವ ವಿಕ್ರಮಂ ಭುವಿ ಕವಿ: ಕೋ ವಾsಮರೋ ವಾ ದಿವಿ |*
*ಯ: ಪ್ರಾಗಪ್ರತಿಮಲ್ಲತಾರಕಮಹಾದೈತ್ಯಂ 
ಸುದೃಪ್ತಂ ಭವಾನ್ ವಿಪ್ರೌಘಪ್ರಿಯ ಸುಪ್ರಭಾವ ಸಮರೇ ಕ್ರೀಡನ್ನಜೈಷೀದ್ದ್ವಿಷಂ ||*
*ಅನ್ನಂ ದದಾಸಿ ವಿದಧಾಸ್ಯಖಿಲಸ್ಯ ರಕ್ಷಾಂ ಕ್ಲಿನ್ನಂ ಪುನಾಸಿ ವಿಲುನಾಸಿ ಸಮಸ್ತದೋಷಾನ್ |*
*ಹೇ ಸ್ಕಂದ ವಂದ್ಯ ಭವತೋ ಭುವನೇ ಭವಾನೀಸೂನೇ ಕೃಪಾಜಲನಿಧೇ ಕತಮ: ಸಮ: ಸ್ಯಾತ್ ||*
*ಪ್ರವರ್ತಿತಸ್ಕಾಂದಮತ: ಪೃಥಿವ್ಯಾಂ ಜಗತ್ಪತಿಂ ಶ್ರೀಪತಿಮಾತ್ಮನಾಥಂ |*
*ರಹಸ್ಯುಪಾರಾಧಯಿತುಂ ಗುಹಾದ್ಯ ಗುಹಾಂಶ್ರಿತೋsಸೀತಿ ಮಮ ಪ್ರಕರ್ಕಃ||*
*ಶ್ರೀವಿಷ್ಣುತೀರ್ಥಮುನಿಮಿತ್ರ ಸುರಾರಿಜೈತ್ರ ಶ್ರೀಕೃಷ್ಣಪಜ್ಜಲಜಭೃಂಗ ಕೃತಾಘಭಂಗ |*
*ಸಹ್ಯೇಶ ದೇಹಿ ಸಕಲೈರುಪಜೀವ್ಯಮನ್ನಂ ಸಂಹರ್ತೃ ಸರ್ವಭುವನಸ್ಯ ಕುಮಾರಮಹ್ಯಂ ||*
*ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್*
*****

ಮಾರ್ಗಶಿರ್ಷಮಾಸದ ಮಹತ್ವ ಸಂಚಿಕೆ-3

ಹನುಮದ್ವ್ರತದ ಮಹತ್ವ ಮಾರ್ಗಶಿರ ತ್ರಯೋದಶಿ

ಧರ್ಮರಾಜನಿಗೆ ವೇದವ್ಯಾಸದೇವರು ಉಪದೇಶ ಮಾಡಿದ ವ್ರತವಿದು.
ಪಾಂಚಾಲಿದೇವಿಯು ಈ ವ್ರತವನ್ನು ಭಕ್ತ್ಯಾದರಗಳಿಂದ ಆಚರಿಸಿದಳು. 

ಶ್ರೀಕೃಷ್ಣಪರಮಾತ್ಮನಿಂದ ಉಪದೇಶ ಪಡೆದ ದ್ರೌಪದಿಯು ಹನುಮದ್ವ್ರತವನ್ನು ಆಚರಿಸುತ್ತಿದ್ದಳು. ಹನುಮದ್ವ್ರತವನ್ನು ಆಚರಿಸಿ ಹನುಮಂತನ ದೋರವನ್ನು ಕೈಗೆ ಕಟ್ಟಿಕೊಂಡಿದ್ದಳು. ಆ ಅರ್ಜುನನು ದ್ರೌಪದಿಯನ್ನು ಕುರಿತು ಯಾವ ದಾರವನ್ನು ಕಟ್ಟಿಕೊಂಡಿರುವಿ ಎಂದನು.


ದ್ರೌಪದಿಯಾದರೂ ಸಕಲ ಸೌಭಾಗ್ಯಗಳನ್ನು ಕೊಡುವ ಹನುಮದ್ವ್ರತವನ್ನು ಮಾಡಿರುವೆನು. ವ್ರತದ ಪರಿಪೂರ್ಣ ಫಲಪ್ರಾಪ್ತಿಗಾಗಿ ಹದಿಮೂರು ಗಂಟುಗಳುಳ್ಳ ದೋರವನ್ನು ಕಟ್ಟಿಕೊಂಡಿರುವೆನು ಎಂದಳು. ಈ ಮಾತನ್ನು ಕೇಳಿದ ಅರ್ಜುನನು ಕೋಪದಿಂದ ಹೀಗೆ ಹೇಳಿದನು -

"ನೀನು ಯಾವ ಕಪಿಯನ್ನು‌ಪೂಜಿಸುತ್ತಿರುವೆಯೋ ಕಾಡಿನಲ್ಲಿ ಗೆಡ್ಡೆಗೆಣಸು ತಿಂದು ಬದುಕುವ, ಪರಾಧೀನವಾದ, ಚಂಚಲಬುದ್ಧಿಯುಳ್ಳ ಕಪಿಯನ್ನು ನನ್ನ ಧ್ವಜದಲ್ಲಿ ಬಂಧಿಸಿರುವೆನು. ಇಂತಹ ತಿರ್ಯಕ್ ಯೋನಿಯಲ್ಲಿ ಹುಟ್ಟಿರುವ ಕಪಿಯಿಂದ ನಮಗೆ ಏನಾಗಬೇಕು ? ಆ ದೋರವನ್ನು ಬಿಸಾಡು" ಎಂದನು.

ಧ್ವಜ ಏವ ನಿಬದ್ಧೋಽಯಮಯಿ ಶಾಳಾಮೃಗೋ ಮಯಾ |

ಕಿಂ ದಾಸ್ಯತ್ಯಯಮಾಖ್ಯಾಹಿ ವಟುರ್ವನ್ಯಾಶನೋ ಮೃಗಃ ||
      - ಭವಿಷ್ಯೋತ್ತರ ಪುರಾಣ

ಯಾವ ಹನುಮಂತನ ಸ್ಮರಣೆಯಿಂದ ಬುದ್ಧಿ, ಬಲ ಯಶಸ್ಸನ್ನು ಪಡೆಯಬಹುದೋ ಅಂತಹ ರಾಮಭಕ್ತನಾದ ಹನುಮಂತನ ಪ್ರತೀಕವಾದ ಹದಿಮೂರು ಗಂಟುಗಳುಳ್ಳ ದೋರವನ್ನು ಅವಮಾನ ಮಾಡಿದ್ದರಿಂದ ಸಕಲ ಸಂಪತ್ತು ಶತ್ರುವಶವಾಗಿ ಹದಿಮೂರು ವರ್ಷಗಳ ಕಾಲ ವನವಾಸಾದಿಗಳನ್ನು ಮಾಡಬೇಕಾಯಿತು.


ತ್ರಯೋದಶಗ್ರಂಥಿಯುಕ್ತದೋರಸ್ಯೋಲ್ಲಂಘನೇನ ವೈ |

ಭವದ್ಭೀರೀದೃಶಂ ಪ್ರಾಪ್ತಂ ವ್ಯಸನಂ ವಸನಂ ವನೇ ||

ಈ ವಿಚಾರವನ್ನು ವೇದವ್ಯಾಸದೇವರಿಂದ ಕೇಳಿದ ಧರ್ಮರಾಜಾದಿಗಳು ದ್ರೌಪದಿಯನ್ನು ಈ ವಿಷಯವಾಗಿ ಕೇಳಿದಾಗ ಸತ್ಯವೆಂದು ತಿಳಿಸಿದಳು. 

ಪೂರ್ವದಲ್ಲಿ ಹನುಮಂತನು ಇಂದ್ರದೇವರ ವಜ್ರಾಯುಧದ ಹೊಡೆತಕ್ಕೆ ಮೂರ್ಛೆ ಹೋದಂತೆ ನಟಿಸಿದರು. ಇಂದ್ರದೇವರ ವಜ್ರಾಯುಧದಿಂದ ಹನುವಿನ ಭಂಗದ ಪ್ರಸಕ್ತಿ ಇದ್ದರೂ ಭಂಗವಾಗದೇ ಪ್ರಶಸ್ತವಾದ ಹನುವುಳ್ಳವರಾದ್ದರಿಂದಲೇ ಹನುಮಾನ್ ಎನಿಸಿದನು. ಇಂದ್ರದೇವರು ವಜ್ರಾಯುಧದಿಂದ ತನ್ನ ಪುತ್ರನನ್ನು ಹೊಡೆದರೆಂದು ವಾಯುದೇವರು ಹನುಮಂತನನ್ನು ಎತ್ತಿಕೊಂಡು ಗುಹೆಯೊಳಗೆ ಪ್ರವೇಶಿಸಿದರು.


ಬ್ರಹ್ಮಾದಿದೇವತೆಗಳು ವಾಯುದೇವರನ್ನು ಸಂತೋಷಪಡಿಸಲೆಂದು ಪುತ್ರನಾದ ಹನುಮಂತನಿಗೆ ವರಗಳನ್ನು ನೀಡಿದರು. "ಹನುಮಂತನೇ, ನೀನು ಚಿರಂಜೀವಿಯಾಗು, ಪರಾಕ್ರಮಶಾಲಿಯಾಗಿ ರಾಮಕಾರ್ಯ ಧುರಂಧರರಲ್ಲಿ ಅಗ್ರಗಣ್ಯನಾಗುವೆ. ಮಾರ್ಗಶಿರಮಾಸದ ತ್ರಯೋದಶಿಯಂದು ಯಾರು ನಿನ್ನ ವ್ರತವನ್ನು ಮಾಡುವರೋ ಅವರಿಗೆ ಸಮಸ್ತ ಕಾರ್ಯಗಳಲ್ಲಿ ಜಯವುಂಟಾಗುವುದು" ಎಂದು. ಹನುಮಂತದೇವನನ್ನು ತ್ರಯೋದಶಿಯಂದು ಜಯವೆಂಬ ಹೆಸರುಳ್ಳ ಅಭಿಜಿನ್ ಮುಹೂರ್ತದಲ್ಲಿ ಪೂಜಿಸುವವನು ವಿಶೇಷ ಫಲವನ್ನು ಹೊಂದುವನು.


ವ್ರತದ ಕ್ರಮ

ಹನುಮಂತದೇವನನ್ನು ಹದಿಮೂರು ಗ್ರಂಥಿಗಳುಳ್ಳ ದಾರದಲ್ಲಿ ಓಂ ನಮೋ ವಾಯುನಂದನಾಯ ಓಂ ಎಂದು ಆವಾಹಿಸಬೇಕು. ಹನುಮಂತನ ಅಂತರ್ಯಾಮಿಯಾದ ಶ್ರೀರಾಮಚಂದ್ರನನ್ನು ಷೋಡಶೋಪಚಾರಗಳಿಂದ ಅರ್ಚಿಸಿ ನಂತರ ನೈವೇದ್ಯಾದಿಗಳಿಂದ ಪೂಜಿಸಿ ವಾಯನದಾನವನ್ನು ಮಾಡಬೇಕು. ಗೋಧೂಮ(ಗೋಧಿ) ಧಾನ್ಯವನ್ನು ಗಂಟಿನ ಸಂಖ್ಯೆಯಷ್ಟು ಅಂದರೆ ಹದಿಮೂರು ಸೇರು ವಾಯನದಲ್ಲಿ ಕೊಡಬೇಕು.

ಹನುಮಂತನ ಈ ವ್ರತಾಚರಣೆಯಿಂದ ಸುಗ್ರೀವನು ತನ್ನ ಇಷ್ಟಾರ್ಥವನ್ನು ಪಡೆದನು. ವಿಭೀಷಣನು ಲಂಕಾಸಾಮ್ಯಾಜ್ಯಕ್ಕೆ ಅಧಿಪತಿಯಾದನು. ಈ ವ್ರತವನ್ನು ಹದಿಮೂರು ವರ್ಷಗಳ ಕಾಲ ಮಾಡಿ ನಂತರ ಉದ್ಯಾಪನೆಯನ್ನು ಮಾಡಬೇಕು. ಈ ವ್ರತವನ್ನು ಮಾರ್ಗಶಿರಮಾಸ ಶುಕ್ಲ ತ್ರಯೋದಶಿಯಂದು ರೋಹಿಣೀ ನಕ್ಷತ್ರವಿರುವಾಗ ಆಚರಿಸಬೇಕು. ಈ ವ್ರತಾಚರಣೆಯನ್ನು ಪೂರ್ವವಿದ್ಧವಾದ (ದ್ವಾದಶಿಯುಕ್ತ) ತ್ರಯೋದಶಿಯಲ್ಲಿ ಮಾಡುವುದು ಪ್ರಶಸ್ತವಲ್ಲ.

ಪಂಪಾ ಪೂಜೆ

ಹನುಮಂತದೇವರು ಋಷ್ಯಮೂಕಪರ್ವತದಲ್ಲಿ ವಾಸವಾಗಿದ್ದರು. ಋಷ್ಯಮೂಕ ಪರ್ವತದ ಸಾನು ಪ್ರದೇಶವಾದರೂ ಪಂಪಾಪತಿಯಾದ ವಿರೂಪಾಕ್ಷನು ವಾಸವಾಗಿರುವ ಜಾಗೃತ ಸ್ಥಳವಾಗಿದೆ. ಪಂಪಾದೇವಿಯು ತನ್ನ ನಾಮೋಚ್ಛಾರಣ ಮಾತ್ರದಿಂದಲೇ ಪಾಪಗಳನ್ನು ತಿರುವು ಮುರುವು ಮಾಡುವವಳು (ಪಂಪಾ - ಪಾಪಂ)‌. ಹನುಮನ ಪೂಜೆಯನ್ನು ಮಾಡುವ ಪೂಜಕನು ಮೊದಲು ಪಂಪಾಸ್ಮರಣೆಯಿಂದ ಪಾಪಗಳನ್ನು ದೂರೀಕರಿಸಿ ನಂತರ ಚಿತ್ತಶುದ್ಧನಾಗಿ ಹನುಮನ ಪೂಜೆಯನ್ನು ಮಾಡಲೆಂದೇ ಪಂಪಾದೇವಿಯ ಪೂಜೆಯನ್ನು ವಿಧಿಸಲಾಗಿದೆ. ಹೀಗೆ ಆವಾಹಿತಳಾದ ಪಂಪಾದೇವಿಯನ್ನು ಷೋಡಶೋಪಚಾರಗಳಿಂದ ಅರ್ಚಿಸಬೇಕು.

ಹನುಮತ್ಪೂಜಾ :— ಆಚಮ್ಯ - ಪ್ರಾಣಾನಾಯಮ್ಯ - ಶುಭತಿಥೌ, ಶ್ರೀಮದ್ಹನುಮದಂತರ್ಗತ ಸೀತಾಪತಿ ಶ್ರೀರಾಮಚಂದ್ರ ಪ್ರೀತ್ಯರ್ಥಂ ಜ್ಞಾನಭಕ್ತಿವೈರಾಗ್ಯಾದಿ ಸಿದ್ಧ್ಯರ್ಥಂ ಹನುಮದ್ವ್ರತಾಂಗ ಹನುಮತ್ಪೂಜಾಂ ಕರಿಷ್ಯೇ |

ಈ ಮೇಲಿನಂತೆ ಸಂಕಲ್ಪಿಸಿ ಕುಂಕುಮದ ನೀರಿನಲ್ಲಿ ಒದ್ದೆ ಮಾಡಿದ ನೂತನ ವಸ್ತ್ರವನ್ನು ಪಂಪಾಕಲಶದ ಮೇಲೆ ಇಟ್ಟು ಅರಿಶಿನದಿಂದ ಹಳದಿಬಣ್ಣವಾಗಿಸಿದ ಹದಿಮೂರು ಗ್ರಂಥಿಗಳುಳ್ಳ ದೋರಕವನ್ನು ಇಡಬೇಕು. ಅನಂತರ ಆವಾಹನಾದಿ ಷೋಡಶ ಉಪಚಾರ ಪೂಜೆಯನ್ನು ಮಾಡಬೇಕು.


*ಪೂಜಾಂಗ ಅರ್ಘ್ಯದಾನ :— *

ನಮಸ್ತೇ ವಾಯುಪುತ್ರಾಯ ಧ್ವಂಸಿತಾಮರವೈರಿಣೇ |
ಸುಜನಾಂಬುಧಿ ಚಂದ್ರಾಯ ಭವಿಷ್ಯದ್ ಬ್ರಹ್ಮಣೇ ನಮಃ ||

ದೋರಬಂಧನ ಮಂತ್ರ -

ಹನೂಮಾನ್ ದೋರರೂಪೇಣ ಸಂಸ್ಥಿತೋ ಮಯಿ ಸರ್ವದಾ |
ಸರ್ವಾಪದ್ಭ್ಯೋ ರಕ್ಷ ರಕ್ಷ ಪ್ರಸೀದ ಕಪಿಪುಂಗವ ||

ಪ್ರಾರ್ಥನೆ :—


ಬಳಿತ್ಥಾದಿತ್ರಯೀವೇದ್ಯ ತ್ರಿರೂಪಾಯ ಮಹಾತ್ಮನೇ |

ಭಕ್ತಾಭೀಷ್ಟಪ್ರದಾಯಸ್ತು ನಮಸ್ತೇ ಭಾರತೀಪತೇ ||

ವಾಯನದಾನಂ :—

ಹನೂಮಾನ್ ಪ್ರತಿಗೃಹ್ಣಾತಿ ಹನುಮಾನ್ ವೈ ದದಾತಿ ಚ |
ಹನೂಮಾನ್ ತಾರಕೋಭಾಭ್ಯಾಂ ನತೋಸ್ಮಿ ತ್ವಾಂ ಹನುಮತೇ ||
ಇದಂ ವಾಯನದಾನಂ ಸದಕ್ಷಿಣಾಕಂ ಸತಾಂಬೂಲಂ ಹನೂಮತಃ ಪ್ರೀತಿ ಕಾಮಯಮಾನಃ ತುಭ್ಯಂ ಸಂಪ್ರದದೇ |
ಅನೇನ ಶ್ರೀಹರೀಃ ಪ್ರೀಯತಾಮ್ ||
         || ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
**********

ಹಿಂದೂ ಪಂಚಾಂಗದ ಪ್ರಕಾರ ಮಾರ್ಗಶಿರವು 9ನೇ ಮಾಸವಾಗಿದೆ. ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಇದೇ ಮಾಸದಲ್ಲಿ ಗೀತೋಪದೇಶ ಮಾಡಿರುವುದರಿಂದ ಈ ಮಾಸವು ಹಿಂದೂ ಧರ್ಮೀಯರಿಗೆ ಅತ್ಯಂತ ಪವಿತ್ರ ಮಾಸವಾಗಿದೆ. ಹೀಗಾಗಿ ಮಾರ್ಗಶಿರ ಮಾಸವು ಹಿಂದೂಗಳಿಗೆ ಅತ್ಯಂತ ಪವಿತ್ರ ಮಾಸವಾಗಿದೆ. ಮಾರ್ಗಶಿರ ಮಾಸದಲ್ಲಿ ಕೃಷ್ಣನನ್ನು ಹೇಗೆ ಪೂಜಿಸಬೇಕು..? ಮಾರ್ಗಶಿರ ಮಾಸದ ಕೃಷ್ಣ ಪೂಜೆಯಿಂದಾಗುವ ಲಾಭಗಳೇನು..? ಇನ್ನೇನು ಕೆಲವೇ ದಿನಗಳಲ್ಲಿ ಮಾರ್ಗಶಿರ ಮಾಸವು ಮುಗಿಯಲಿದೆ. ಆದಷ್ಟು ಬೇಗ ಕೃಷ್ಣನನ್ನು ಪೂಜಿಸಿ ಮೋಕ್ಷವನ್ನು ಪಡೆದುಕೊಳ್ಳಿ..!

ಮಾರ್ಗಶಿರ ಮಾಸದಲ್ಲಿ ಭಗವಾನ್ ಶ್ರೀಕೃಷ್ಣನ ಆರಾಧನೆಗೆ ಮಹತ್ವದ ಸ್ಥಾನವಿದೆ. ಶ್ರಾವಣದಲ್ಲಿ ಶಿವನನ್ನು ಹಾಗೂ ಕಾರ್ತಿಕದಲ್ಲಿ ವಿಷ್ಣುವನ್ನು ಆರಾಧಿಸುವ ರೀತಿಯಲ್ಲೇ ಮಾರ್ಗಶಿರ ಮಾಸದಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಮಾಸದಲ್ಲಿ ಶ್ರದ್ಧೆಯಿಂದ ಕೃಷ್ಣನ ಪೂಜೆ ಮಾಡಿದರೆ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂಬ ಬಲವಾದ ನಂಬಿಕೆಯಿದೆ. ಇನ್ನು ಶ್ರೀಕೃಷ್ಣ ಪರಮಾತ್ಮನ ವಿಶೇಷ ಕೃಪೆಗೆ ಪಾತ್ರರಾಗಬಯಸುವಿರಾದರೆ ಈ ತಿಂಗಳಲ್ಲಿ ಭಗವಾನ್ ಶ್ರೀಕೃಷ್ಣನನ್ನು ಶುದ್ಧ ಮನಸ್ಸಿನಿಂದ ಪೂಜಿಸಿ ಮತ್ತು ಕೃಷ್ಣನನ್ನು ಆರಾಧಿಸುವಾಗ ಇಲ್ಲಿ ತಿಳಿಸಲಾದ ವಿಶೇಷ ಕ್ರಮಗಳನ್ನು ಅನುಸರಿಲು ಮರೆಯಬೇಡಿ.
​ಒಂಭತ್ತನೇ ಮಾಸ
ಹಿಂದೂ ಪಂಚಾಂಗದ ಪ್ರಕಾರ ಮಾರ್ಗಶಿರ ಅಥವಾ ಧನುರ್ಮಾಸವು 9ನೇ ಮಾಸವಾಗಿದೆ. ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿದ ಗೀತಾ ಜಯಂತಿಯು ಇದೇ ಮಾಸದಲ್ಲಿ ಆಚರಿಸಲ್ಪಡುತ್ತದೆ. ಹೀಗಾಗಿ ಮಾರ್ಗಶಿರ ಮಾಸವು ಹಿಂದೂಗಳಿಗೆ ಅತ್ಯಂತ ಪವಿತ್ರ ಮಾಸವಾಗಿದೆ.

​ನಿತ್ಯವೂ ಗೀತಾಪಠಣ ಮಾಡಿ
ಶ್ರೀಕೃಷ್ಣ ಭಗವಾನನ ಕೃಪೆಗೆ ಪಾತ್ರರಾಗಬೇಕೆಂದು ಬಯಸುವವರು ಪ್ರತಿನಿತ್ಯವೂ ಶ್ರೀಮದ್ಭಗವದ್ಗೀತೆಯನ್ನು ಪಠಣ ಮಾಡಲೇಬೇಕು. ಮಾರ್ಗಶಿರ ಮಾಸವು ಕೃಷ್ಣನ ಆರಾಧನೆಗಾಗಿಯೇ ಮೀಸಲಿರುವುದರಿಂದ ಕನಿಷ್ಠ ಈ ತಿಂಗಳಲ್ಲಿ ಪ್ರತಿದಿನವೂ ತಪ್ಪದೇ ಗೀತಾಪಠಣ ನಡೆಸಿ. ಗೀತಾ ಪಠಣದಿಂದ ಖಂಡಿತವಾಗಿಯೂ ಕೃಷ್ಣನ ಕೃಪಾಶೀರ್ವಾದಗಳು ನಿಮಗೆ ಲಭಿಸಲಿವೆ.
******

No comments:

Post a Comment