SEARCH HERE

Tuesday, 1 January 2019

ಭೀಮನ ಅಮಾವಾಸ್ಯೆ ವ್ರತ bhimana amavasye vruta ashada amavasya







Divashi Gowri Puja Song




2nd Audio by Mrs. Padmaja Vasudevachar



Bheemana Amavasye ಜ್ಯೋತಿರ್ಭೀಮೇಶ್ವರ ವ್ರತ

ದೀಪಸ್ತಂಭ ವ್ರತ
ಭೀಮನ ಅಮಾವಾಸ್ಯೆ   -  by narahari sumadhwa

This Vratha is also called as Jyothirbheemeshwara Vratha.  ಜ್ಯೋತಿರ್ಭೀಮೇಶ್ವರ ಎಂದರೆ ದೀಪದ ಜ್ಯೋತಿಯಲ್ಲಿ ಭೀಮೇಶ್ವರನೆನಿಸಿರುವ ರುದ್ರದೇವರು.

ಎರಡು ತುಪ್ಪದ ದೀಪದಲ್ಲಿ ಪಾರ್ವತೀ ಪರಮೇಶ್ವರರನ್ನು ಆಹ್ವಾನಿಸುವುದರಿಂದ ದೀಪಸ್ತಂಭ ವ್ರತ ಎಂದೂ ಕರೆಯುತ್ತಾರೆ

1.   Who has to do this Vratha?
 ಈ ವ್ರತವನ್ನು ಯಾರು ಮಾಡಬೇಕು.

Newly married ladies for first nine years after their marriage.   

2. ಎಷ್ಟು ವರ್ಷ ಈ ವ್ರತವನ್ನು ಆಚರಿಸಬೇಕು ? How many years to be done ?

ಒಂಭತ್ತು ವರ್ಷಗಳ ಕಾಲ (9 Years)
ಮದುವೆಯಾದ ಮೊದಲ ಒಂಭತ್ತು ವರ್ಷ ಈ ವ್ರತವನ್ನು ಹೆಣ್ಣುಮಕ್ಕಳು ಮಾಡತಕ್ಕದ್ದು.

3. ವಿವಾಹಿತ ಸ್ತ್ರೀಯರು ಮಾತ್ರ ಮಾಡಬೇಕಾ ?
Whether only married woman to perform?

ಉತ್ತರ : ಕನ್ಯೆಯರೂ  ತಮಗೆ ಉತ್ತಮ ಪತಿ ಸಿಗಲಿ ಎಂದು ಪ್ರಾರ್ಥಿಸುತ್ತ, ಕೈಗೆ ಕಂಕಣ ಕಟ್ಟಿಕೊಂಡು ಭಕ್ತಿಯಿಂದ ವ್ರತ ಆಚರಿಸಬಹುದು..

4.  When this vratha to be observed?
ಈ ವ್ರತವನ್ನು ಎಂದು ಆಚರಿಸಬೇಕು ?

On Ashada Bahula Amavasye day. Shravana maasa pooja starts with Bheemana Amavasye.    ಆಷಾಢ ಬಹುಳ ಅಮಾವಾಸ್ಯೆಯಂದು ಈ ವ್ರತವನ್ನು ಮಾಡತಕ್ಕದ್ದು.

5.    Why this Vratha is being observed? 
ಈ ವ್ರತವನ್ನು ಏಕೆ ಆಚರಿಸುತ್ತಾರೆ ?

Women pray for the wellbeing of their husbands and brothers on this day. On this day, married ladies and unmarried girls pray for the welfare, happiness and long life of husbands, brothers and other males in the house. 

ಈ ವ್ರತವನ್ನು ಆಚರಿಸುವುದರಿಂದ ಕನ್ಯೆಯರಿಗೆ ಉತ್ತಮ ಗುಣಗಳುಳ್ಳ ಪತಿಯೂ, ವಿವಾಹಿತ ಸ್ತ್ರೀಯರಿಗೆ ಸೌಭಾಗ್ಯ ಸಂಪದವಾಗುವುದು.

6.   For which God this Vratha is dedicated?

This Vratha is dedicated to Manoniyamaka Rudradevaru and parvathideviyaru

ಈ ವ್ರತವನ್ನು ಮನೋನಿಯಾಮಕರಾದ ಪಾರ್ವತಿ ಪರಮೇಶ್ವರರ  ಪ್ರೀತಿಗಾಗಿ ಆಚರಿಸಲಾಗುತ್ತದೆ.

7   What is the special of this Vratha?                           
ಈ  ವ್ರತದ ಆಚರಣೆಯ ವೈಶಿಷ್ಟ್ಯವೇನು?

ಮಣ್ಣಿನಿಂದ ಲಿಂಗಾಕಾರದಲ್ಲಿ ವಿಗ್ರಹ ಮಾಡಿ, ಅದರಲ್ಲಿ ಪಾರ್ವತೀ ಪರಮೇಶ್ವರನನ್ನು ಆಹ್ವಾನಿಸಿ ಪೂಜಿಸುತ್ತಾರೆ.  ನೈವೇದ್ಯಕ್ಕೆ ಕಡುಬು / ಇಡ್ಲಿ ಸಿದ್ಧಪಡಿಸುತ್ತಾರೆ.   ಈ ಕಡುಬಿನಲ್ಲಿ ಚಿಲ್ಲರೆಯನ್ನು ಇಟ್ಟು ಅದನ್ನು  ಹೊಸ್ತಿಲ ಎರಡೂ ಬದಿಯಲ್ಲಿ ವಿಳ್ಳೆದೆಲೆ ಮೇಲಿಟ್ಟು ಹರಿದ್ರಾ ಕುಂಕುಮದಿಂದ  ಪೂಜಿಸಿ ಮನೆಯ ಗಂಡುಮಕ್ಕಳು ಕೈಲಿ ಅ ಕಡುಬನ್ನು ಅವರ ಮಂಡಿಯೂರಿ ಮೊಣಕೈನಿಂದ ಒಡೆಯಬೇಕು. ಆ ಸಮಯದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳ ಬೆನ್ನಿಗೆ ಹೊಡೆಯುತ್ತಾರೆ.  ಇದನ್ನು “ಭಂಡಾರ ಒಡೆಯುವುದು” ಎನ್ನುತ್ತಾರೆ.   ಈ ದಿನ ಕರಿದ ಪದಾರ್ಥಗಳನ್ನು ಮಾಡುವುದಿಲ್ಲ.

An idol of Shiva and parvathi is made of mud in the form of Linga.   Pooja to Parvathi-rudradevaru is made to please them.   On this day, Kadubu are prepared. Coins will be kept inside the kadubu/idli/wheat balls and male children will be asked to broke the kadubu.    This process is called as “Bhandara broking”. or  ‘Bhandara Hodiyuvudhu’. Keep Bandara on either side of the hostilu / bottom doorsill on betel leaves, betel nut, coins.  Apply turmeric powder and kumkum / vermilion powder to hostilu.  The brothers are made to stand one at a time with legs on either side of the hostilu and he has to break the Bandara with his elbows and as he bends to break them the sisters should bang the brother’s back with their elbows.  This is lot of fun with laughter and guffaws.  The bandara is stuffed with soaked Bengal gram or with coins.

On this day no items will be usually fried.

 8.   ಈ ವ್ರತದ ಆಚರಣೆ ಬಗ್ಗೆ ಯಾವುದಾದರೂ ಕಥೆಯಿದೆಯಾ?   

Is there any story behind Bheemana Amavasye?
This is a Vratha available in Skanda Purana

Once there lived a king named Vajrabahu in Sourashtra, whose son (the Prince) dead prematurely. The King was getting his son married in a grand manner. Still he decides to get dead son married by announcing rewards for those who come forward to give their daughter to this dead son.
A poor Brahmin comes forward to marry his daughter to the dead prince. The wedding was celebrated . That was on Amavasya Day. After the marriage celebration was over, the dead prince’s body was brought near Bhageerathi River for final rites. As the people were preparing the, thunder and lightening strikes along with heavy rains. The people got panicked and ran back to their homes leaving the dead body and the innocent girl there itself.

The girl remembered that it was the day of Jyothirbheemeshwari vrata, which her mother made her perform without fail every year.  She took bath in the river and molded two lamps and rolled out fiber of a plant to form the wick for the lamps.  She poured water into the lamps and did bhandara with Mud as there was no rice/wheat .
Shiva & Parvathi were the silent spectators for all her activities and were pleased with her devotion and blessed her.

She finished her pooja with whatever is available at that place.

As she finished her pooja Rudradevaru and Parvathi Deviyaru appeared before her. Lord Shiva broke the mud balls / bandara and asked her to ask for a boon.  She requested them to bring her husband back to life, which was granted.   Next day People were happy and surprised to see the prince alive and they took the two back in a procession and they lived happily ever after. Thus the Vratha became more popular after this incident.

9  Why Bheema’s name is there in this festival?    ಇಲ್ಲಿ ಭೀಮನ ಹೆಸರೇಕೆ ಬಂದಿದೆ ?

– Bheema is one of the name of Mano Niyamaka Rudradevaru who is the main god for this festival.

ಭೀಮ ಕೂಡ ರುದ್ರದೇವರ ಹಲವಾರು ಹೆಸರುಗಳಲ್ಲಿ ಒಂದು.  ಈ ಹಬ್ಬಕ್ಕೆ ಭೀಮನೆಂಬ ರುದ್ರದೇವರ ಹೆಸರಿನಿಂದ ಪೂಜಿಸುತ್ತಾರೆ.

ಭಂಡಾರ ಒಡೆಯುವುದು – ಹಾಲಿಗೆ ಅರಿಶಿನ ಹಾಕಿ ಅದರಿಂದ ಅಕ್ಕಿ ಹಿಟ್ಟನ್ನು ಕಲಿಸಿ ಲಿಂಗಾಕಾರದಲ್ಲಿ ಮಾಡಿ ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಅದರೊಳಗೆ ಬೆಳ್ಳಿ ಅಥವಾ ಬಂಗಾರದ ನಾಣ್ಯ ಇಟ್ಟು ಅದನ್ನು ಮನೆಯಲ್ಲಿ ಶುಭ್ರಗೊಂಡ ಹೊಸ್ತಿಲಲ್ಲಿರಿಸಿ, ರಂಗವಲ್ಲಿ ಹಾಕಿ, ಆ ಹೊಸ್ತಿಲಲ್ಲಿ ಇರಿಸಿ, ಲಕ್ಷ್ಮೀ ನಾರಾಯಣರನ್ನು ಸ್ಮರಿಸಿ, ಹರಿದ್ರಾ ಕುಂಕುಮದಿಂದ ಪೂಜಿಸಿ, ಪಾರ್ವತೀ ಪರಮೇಶ್ವರರ ಸ್ಮರಿಸಿ, ಅದನ್ನು ಅಣ್ಣತಮ್ಮಂದಿರ ಕೈಲಿ ಅವರ ಮೊಣಕೈಯಿಂದ ಒಡೆಸಬೇಕು.

ಪೂಜಾ ವಿಧಾನ :

ಮಹಿಳೆಯರು ಕೈಗೆ ಕಂಕಣ ಕಟ್ಟಿಕೊಂಡು ಜ್ಯೋರ್ತಿರ್ಭೀಮೇಶ್ವರನ್ನು ಧ್ಯಾನಿಸಿ, ವ್ರತ ಕೈಗೊಳ್ಳುತ್ತಾರೆ. ಒಮ್ಮೆ ವ್ರತ ಕೈಗೊಂಡರೆ ಒಂಭತ್ತು ವರ್ಷ ಸಂಪೂರ್ಣಗೊಳಿಸಿ ತನ್ನ ತಾಯಿಗೆ ಬಾಗಿನ, ದೀಪದಾನಾದಿ ಗಳನ್ನು ಯಥಾಶಕ್ತಿ ಕೊಡಬೇಕು.

ಒಂದು ತಟ್ಟೆಯಲ್ಲಿ ಧಾನ್ಯ ರಾಶಿ (ಅಕ್ಕಿ) ಹಾಕಿ , ಅದರ ಮೇಲೆ 2 ದೀಪದ ಕಂಬಗಳನ್ನು ಇಡಬೇಕು. ತುಪ್ಪದ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಶಿವ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು.

ಪೂಜಾ ಸಾಮಾಗ್ರಿಗಳು:

ಮಣೆ, ಮಂಟಪ, ಶಿವಪಾರ್ವತಿಯರ ಚಿತ್ರ ಪಟ, ನಂದಾ ದೀಪ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಬತ್ತಿ, ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು, ಅರಿಶಿನ, ಕುಂಕುಮ, ಮಂತ್ರಾಕ್ಷತೆ, ವಿವಿಧ ಹೂವು, ಬಿಲ್ವ ಪತ್ರೆ, ಗೆಜ್ಜೆ ವಸ್ತ್ರ, ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ,ದಕ್ಷಿಣೆ

ನೈವೇದ್ಯ – ಪಾಯಸ, ಹಣ್ಣು..ಭಂಡಾರಕ್ಕೆ ಮಾಡಿದ ಹಿಟ್ಟಿನ ಪದಾರ್ಥ


9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಕೈಗೆ ಕಟ್ಟಿಕೊಳ್ಳಬೇಕು.

ಸಂಗ್ರಹ - ನರಹರಿ ಸುಮಧ್ವ

***



॥ಭೀಮನ ಅಮಾವಾಸ್ಯೆ ವ್ರತದ ಮಹತ್ವ॥
Divashi Gowri Puja ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ಬೇಡುವ ಹಬ್ಬವೇ ಭೀಮನ ಅಮವಾಸ್ಯೆ, ಅವಿವಾಹಿತ ಹೆಣ್ಣು ಮಕ್ಕಳು ತಮಗೆ ಭೀಮನಂತೆ ಇರುವ ಗಂಡ ಸಿಗಲೆಂದು ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ. ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ  ಕೂಡ ಕರೆಯುತ್ತಾರೆ. ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.

ಒಮ್ಮೆ ವ್ರತ ಕೈಗೊಂಡರೆ ಐದು, ಒಂಭತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ ಉದ್ಯಾಪನೆ ಮಾಡಿ ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಆಶೀರ್ವಾದ ಪಡೆಯುವುದು ವಾಡಿಕೆ.

ಭೀಮನ ಅಮಾವಾಸ್ಯೆ ಹಿನ್ನೆಲೆ:

ಆಸೆ ಬುರುಕ ಬ್ರಾಹ್ಮಣನೊಬ್ಬ ರಾಜಕುಮಾರನ ಶವದೊಂದಿಗೆ ತನ್ನ ಮಗಳ ಮದುವೆಯನ್ನು ಮಾಡಿ ಬಿಡುತ್ತಾನೆ. ಸುರಿಯುತ್ತಿದ್ದ ಮಳೆಯಲ್ಲಿ ಶವವನ್ನೂ ಹಾಗೂ ವಧುವನ್ನೂ ರಾಜ ಪರಿವರದವರೂ ನದಿ ತೀರದಲ್ಲಿ  ಬಿಟ್ಟು ಹೋಗುತ್ತಾರೆ. ಶವದ ಮುಂದೆ ಕುಳಿತು ರೋಧಿಸುತ್ತಿದ್ದ  ಆ ವಧು, ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿದ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ರಾಜಕುಮಾರನಿಗೆ ಜೀವದಾನ ಮಾಡುತ್ತಾರೆ. ಅಮವಾಸ್ಯೆಯ ದಿನ ತನ್ನ ಪತಿಯನ್ನು ಬದುಕಿಸಿಕೊಳ್ಳಲು ನಡೆಸಿದ ಪೂಜೆಯೇ ಜ್ಯೋತಿರ್ಭಿಮೇಶ್ವರ ವ್ರತ ಎಂಬ ಐತಿಹ್ಯವಿದೆ.  

ಭೀಮನ ಅಮವಾಸ್ಯೆ ವ್ರತಾಚಾರಣೆಯ ಹಿನ್ನೆಲೆಯ ಬಗ್ಗೆ ಇನ್ನು ಒಂದು ಐತಿಹ್ಯ ಇದೆ. ಕುಂಡಿನಿ ಪಟ್ಟಣದಲ್ಲಿ ಪತಿಭಕ್ತಳೂ, ಶಾಸ್ತ್ರಜ್ಞಳೂ, ನಿರ್ಮಲ ಮನದವಳೂ ಆದ ಚಾರುಮತಿ ಎಂಬ ಸಾಧ್ವಿ ಇರುತ್ತಾಳೆ. ಈ ಬ್ರಾಹ್ಮಣ ಸಾಧ್ವಿಗೆ ಮಹಾಲಕ್ಷ್ಮಿ ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ನಿರ್ದಿಷ್ಟ ಪ್ರಕಾರವಾಗಿ ಪೂಜಿಸಲು ತಿಳಿಸುತ್ತಾಳೆ. 

ಅದರಂತೆ ಚಾರುಮತಿ ಮಂಗಳಸ್ನಾನ ಮಾಡಿ, ಅಕ್ಕಿಯಿಂದ ಪರಿವೃತವಾದ ಕಲಶದಲ್ಲಿ ವರಲಕ್ಷ್ಮಿಯನ್ನು ಆವಾಹನೆ ಮಾಡಿ, 

ಕಲ್ಪೋಕ್ತ ಪ್ರಕಾರ ಸಂಧ್ಯಾಕಾಲದಲ್ಲಿ ಅರ್ಚಿಸಿ, ಬಲಗೈಗೆ ದಾರ ಕಟ್ಟಿಕೊಂಡು 

ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ಬ್ರಾಹ್ಮಣರಿಗೆ ನಿವೇದಿಸಿ,
 ಸುಹಾಸಿನಿಯರಿಗೆ ದಕ್ಷಿಣೆ ಸಹಿತ ತಾಂಬೂಲ ನೀಡಿ ವ್ರತವಾಚರಿಸುತ್ತಾಳೆ.

 ಇದರ ಫಲವಾಗಿ ಅವಳು ಸಕಲ ಸೌಭಾಗ್ಯ ಪಡೆಯುತ್ತಾಳೆ. ಈ ಪ್ರಕಾರವಾಗಿ ಭೀಮನ ಅಮಾವಾಸ್ಯೆಯ ದಿನ ಹೆಣ್ಣು ಮಕ್ಕಳು ಮತ್ತು ಸುಮಂಗಲಿಯರು ಮಂಗಳಸ್ನಾನ ಮಾಡಿ, ಮಂಟಪ ನಿರ್ಮಿಸಿ, ಅದರಲ್ಲಿ ಧಾನ್ಯರಾಶಿ ಮಾಡಿ, ಅದರ ಮೇಲೆ ದೀಪವನ್ನಿಟ್ಟು, ಗೋಧಿಹಿಟ್ಟಿನಿಂದ ಮಾಡಿದ ಭಕ್ಷ್ಯವನ್ನು ನೈವೇದ್ಯ ಮಾಡಿ ಈಶ್ವರನನ್ನು ಆರಾಧಿಸುತ್ತಾರೆ. ಹೊಸ್ತಿಲ ಮೇಲೆ ಭಂಡಾರ ಇಟ್ಟು ಸೋದರರಿಂದ ಒಡೆಸುವ ಪದ್ಧತಿಯೂ ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯಲ್ಲಿ ಇದೆ.

ಪೂಜಾ ವಿಧಾನ

ಈ ವ್ರತವನ್ನು ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನ ಆಚರಿಸಬೇಕು. ಹೆಣ್ಣು ಮಕ್ಕಳು ಮದುವೆಯಾದ ನಂತರ ಒಂಭತ್ತು ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಒಂದು ತಟ್ಟೆಯಲ್ಲಿ ಧಾನ್ಯ ರಾಶಿ ಹಾಕಿ , ಅದರ ಮೇಲೆ 2 ದೀಪದ ಕಂಭ ಇಡಬೇಕು. ತುಪ್ಪ ಹಾಕಿ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು . ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಕೈಗೆ ಕಟ್ಟಿಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಭೀಮೆಶ್ವರನ ಪೂಜೆ ಮಾಡಬೇಕು .ಜೊತಗೆ ಗಣೇಶ ಅಷ್ಟೋತ್ತರ , ಶಿವ ಅಷ್ಟೋತ್ತರ ಗಳನ್ನು ಹೇಳಿಕೊಂಡು ಪೂಜೆ ಮಾಡಬೇಕು.


ಹೀಗೆ ಪ್ರತಿ ವರ್ಷ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ, ಸಂತೋಷ ನೆಮ್ಮದಿ ದೊರೆತು ಆಯುಷ್ಯ, ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಹೆಣ್ಣು ಮಕ್ಕಳು ಪ್ರತಿ ವರ್ಷ ಭೀಮನ ಅಮಾವಾಸ್ಯೆಯಲ್ಲಿ ವ್ರತಾಚರಣೆ ಮಾಡುತ್ತಾರೆ.

*******




ಭೀಮನ ಅಮಾವಾಸ್ಯೆ ವ್ರತ- ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ_* ಆಷಾಢ ಮಾಸದ ಅಮವಾಸ್ಯೆಯಂದು ಭೀಮನ ಅಮವಾಸ್ಯೆ ಅಥವಾ ಭೀಮ ಅಮವಾಸ್ಯೆ ವ್ರತವನ್ನು ಮಾಡುತ್ತಾರೆ. ಶಿವ ಮತ್ತು ಪಾರ್ವತಿಯ ಮೇಲೆ ಯುವ ಹುಡುಗಿಯೊಬ್ಬಳು ಇಟ್ಟಂತಹ ಭಕ್ತಿಯ ಕಥೆಯನ್ನು ಇದು ತಿಳಿಸುತ್ತದೆ. ಮಹಿಳೆಯರು ಮತ್ತು ಹುಡುಗಿಯರು ಭೀಮನ ಅಮವಾಸ್ಯೆಯನ್ನು ತನ್ನ ಸಹೋದರ ಮತ್ತು ಪತಿಯ ಆರೋಗ್ಯ ಮತ್ತು ಆಯುಷ್ಯ ಹಾಗೂ ಅವರಿಗೆ ಅಭಿವೃದ್ಧಿಗಾಗಿ ಈ ವ್ರತವನ್ನು ಮಾಡುತ್ತಾರೆ.

ಈ ವ್ರತವು ಜನಪ್ರಿಯ ಕಥೆಯೊಂದನ್ನು ಹೊಂದಿದ್ದು ಜ್ಯೋತಿ ಭೀಮೇಶ್ವರ ಪೂಜೆ ಅಥವಾ ಭಾಗೀರಥಿ ನದಿ ಹೋಗಿ ಎಂದು ಕರೆಯಲಾಗಿದೆ. ದಂತಕಥೆಯ ಪ್ರಕಾರ ಬ್ರಾಹ್ಮಣ ದಂಪತಿಗಳು ಕಾಶಿಗೆ ಹೋಗಿ ಶಿವನನ್ನು ಪೂಜಿಸಲು ನಿರ್ಧರಿಸುತ್ತಾರೆ. ಆದರೆ ಆ ದಂಪತಿಗಳಿಗೆ ಒಬ್ಬ ಮಗಳಿದ್ದು ಆಕೆಯನ್ನು ತಮ್ಮೊಂದಿಗೆ ಕರೆದೊಯ್ಯಲು ಅವರಿಗೆ ಇಷ್ಟವಾಗುವುದಿಲ್ಲ. ಏಕೆಂದರೆ ಆಕೆ ಬೆಳೆದ ಹುಡುಗಿಯಾದ್ದರಿಂದ ಆಕೆಯ ಜವಬ್ದಾರಿ ಮಾಡುವುದು ಕಷ್ಟ ಎಂದು ತಿಳಿದು ಮನೆಯಲ್ಲೇ ಆಕೆಯನ್ನು ಬಿಟ್ಟು ಹೋಗಲು ನಿರ್ಧರಿಸುತ್ತಾರೆ.


ಅವರ ಹಿರಿಯ ಮಗ ವಿವಾಹಿತನಾಗಿದ್ದರಿಂದ ಪುತ್ರನ ಮನೆಯಲ್ಲಿ ಮಗಳನ್ನು ಬಿಟ್ಟು ಹೋಗಲು ದಂಪತಿಗಳು ನಿರ್ಧರಿಸುತ್ತಾರೆ. ಇನ್ನು ಅವರು ಮರಳಿ ಬರದೇ ಇದ್ದಲ್ಲಿ ಮಗಳಿಗೆ ಮದುವೆ ಮಾಡಿಸು ಎಂದು ತಿಳಿಸಿ ಹೋಗುತ್ತಾರೆ. ವರ್ಷಗಳು ಕಳೆದರೂ ದಂಪತಿಗಳು ಹಿಂತಿರುಗಿ ಬರುವುದಿಲ್ಲ. ಆದರೆ ಪುತ್ರನು ತಂಗಿಯ ಮದುವೆ ಮಾಡಲು ಮನಸ್ಸು ಮಾಡುವುದಿಲ್ಲ ಏಕೆಂದರೆ ಇದರಿಂದ ಸುಮ್ಮನೆ ಹಣ ಖರ್ಚು ಎಂದು ಭಾವಿಸುತ್ತಾನೆ.

ಆದರೆ ಪುತ್ರನ ಕಣ್ಣು ತಂಗಿಯ ಹೆಸರಿನಲ್ಲಿದ್ದ ಆಸ್ತಿಯ ಮೇಲಿತ್ತು ಅದನ್ನು ಆತ ಕಳೆದುಕೊಳ್ಳುವ ಮನಸ್ಸು ಮಾಡುವುದಿಲ್ಲ. ಆ ಪ್ರದೇಶದ ರಾಜನು ಒಮ್ಮೆ ವಿಚಿತ್ರ ಘೋಷಣೆಯನ್ನು ಮಾಡುತ್ತಾನೆ. ತನ್ನ ಮಗನು ಸತ್ತಿದ್ದು ಆತನ ಸಂಸ್ಕಾರವನ್ನು ಮಾಡುವ ಮೊದಲು ಆತನಿಗೆ ವಿವಾಹ ಮಾಡಬೇಕು ಹೀಗಾಗಿ ಪ್ರಜೆಗಳು ಮನಸ್ಸು ಮಾಡಬೇಕು ಎಂದು ತಿಳಿಸುತ್ತಾನೆ.

ಈ ವಿಚಿತ್ರ ಘೋಷಣೆಯನ್ನು ಯಾರೂ ಸಮ್ಮತಿಸುವುದಿಲ್ಲ ಆದರೆ ದುರಾಸೆಯ ಅಣ್ಣನು ರಾಜನ ಮರಣ ಹೊಂದಿದ ಮಗನಿಗೆ ತಂಗಿಯನ್ನು ವಿವಾಹ ಮಾಡಲು ನಿರ್ಧರಿಸುತ್ತಾನೆ. ಅಂತೆಯೇ ಆಕೆಯನ್ನು ಅಣಿಗೊಳಿಸಿ ರಾಜನ ಬಳಿ ಕರೆದುಕೊಂಡು ಬರುತ್ತಾರೆ ಮತ್ತು ಬದಲಿಗೆ ರಾಜನಿಂದ ಹಣವನ್ನು ಪಡೆದುಕೊಳ್ಳುತ್ತಾನೆ. ವಿವಾಹದ ನಂತರ ರಾಜ, ವಧು ಮತ್ತು ಸೈನಿಕರು ರಾಜಕುಮಾರನ ಹೆಣವನ್ನು ಸುಡಲು ಭಾಗೀರಥಿ ನದಿ ತಟಕ್ಕೆ ಕರೆದುಕೊಂಡು ಬರುತ್ತಾರೆ.

ಈ ಸಂದರ್ಭದಲ್ಲಿ ಅತೀವ ಮಳೆ ಉಂಟಾಗುತ್ತದೆ. ಆ ಹುಡುಗಿಯನ್ನು ಬಿಟ್ಟು ಹೆಣದ ಸಮೀಪದಿಂದ ಉಳಿದವರೆಲ್ಲರೂ ಮಳೆಯಿಂದ ತಪ್ಪಿಸಿಕೊಳ್ಳಲು ಓಡುತ್ತಾರೆ. ಹುಡುಗಿಯು ಈಗ ರಾಜಕುಮಾರಿಯಾಗಿದ್ದರಿಂದ ರಾಜಕುಮಾರನ ತಂದೆಯು ಆಕೆಯನ್ನು ಹೆಣವನ್ನು ಬಿಟ್ಟು ಬರುವಂತೆ ತಿಳಿಸುತ್ತಾನೆ. ಆದರೆ ಪತಿಯ ಹೆಣವನ್ನು ಬಿಟ್ಟು ತಾನು ಬರುವುದಿಲ್ಲವೆಂದು ಹುಡುಗಿ ಹೇಳುತ್ತಾಳೆ. ರಾಜಕುಮಾರನ ಶವವನ್ನು ನೋಡುತ್ತಾ ಆಕೆ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾಳೆ ತನ್ನ ತಂದೆ ತಾಯಿ ತನ್ನ ಜೊತೆಗಿರುತ್ತಿದ್ದರೆ ಈ ರೀತಿ ಸಂಭವಿಸುತ್ತಿರಲಿಲ್ಲವೆಂದು.

ರಾತ್ರಿ ಕಳೆಯಿತು ಮತ್ತು ಮರುದಿನ ಆಷಾಢ ಅಮವಾಸ್ಯೆಯಾಗಿತ್ತು ಮತ್ತು ಪೂಜಾ ದಿನವಾಗಿತ್ತು. ತನ್ನ ಪೋಷಕರನ್ನು ನೆನೆದು ಆಕೆ ವ್ರತವನ್ನು ಮಾಡುತ್ತಾಳೆ. ಸ್ನಾನವನ್ನು ಮಾಡಿ ನದಿ ತಟದಿಂದ ಮಣ್ಣನ್ನು ತೆಗೆದುಕೊಂಡು ಎರಡು ಕಾಳಿಕಾಂಬ ದೀಪಗಳನ್ನು ಮಾಡುತ್ತಾಳೆ. ಬಿದ್ದ ಮರದಿಂದ ನಾರನ್ನು ಸಿದ್ಧ ಮಾಡುತ್ತಾಳೆ ಮತ್ತು ಪೋಷಕರು ಅನುಸರಿಸುವ ವಿಧಾನವನ್ನು ಆಕೆ ಕೂಡ ಅನುಸರಿಸುತ್ತಾಳೆ. ಕಡುಬಿನ ಬದಲಿಗೆ ಆಕೆ ಮಣ್ಣಿನ ಮುದ್ದೆಗಳನ್ನು ತಯಾರಿಸುತ್ತಾಳೆ.

ಆಕೆ ಪೂಜೆಯನ್ನು ಮಾಡುತ್ತಿರುವಾಗ ಯುವ ದಂಪತಿಗಳು ಅಲ್ಲಿಗೆ ಬರುತ್ತಾರೆ ಮತ್ತು ಆಕೆ ಏನು ಮಾಡುತ್ತಿದ್ದಾಳೆ ಎಂದು ಕೇಳುತ್ತಾರೆ. ಶವದ ಮುಂದೆ ಆಕೆ ಪೂಜೆಯನ್ನು ಏಕೆ ಮಾಡುತ್ತಿದ್ದಾಳೆ ಎಂದು ಆ ಯುವ ದಂಪತಿ ಹುಡುಗಿಯನ್ನು ಕೇಳುತ್ತಾರೆ. ತನ್ನ ವಿಧಿಯನ್ನು ಆ ದಂಪತಿಗಳಿಗೆ ಆಕೆ ವಿವರಿಸುತ್ತಾಳೆ ಮತ್ತು ತಾನೀಗ ಒಂಟಿಯಾಗಿದ್ದು ಮಣ್ಣಿನ ಮುದ್ದೆಗಳನ್ನು ಒಡೆಯುವವರು ಯಾರೂ ಇಲ್ಲ ಎಂದು ಹೇಳುತ್ತಾಳೆ. ಯುವಕನು ಅದನ್ನು ತಾನು ಒಡೆಯುವುದಾಗಿ ಹೇಳುತ್ತಾನೆ. ಆ ಮುದ್ದೆಯನ್ನು ಒಡೆದು ಆತ ದೀರ್ಘ ಸುಮಂಗಲಿ ಭವ ಎಂದು ಹರಸುತ್ತಾನೆ (ದೀರ್ಘ ಮತ್ತು ಆನಂದಕರ ವೈವಾಹಿಕ ಜೀವನ ನಿನ್ನದಾಗಲಿ)

ಆಗ ಹುಡುಗಿಯು ನಗುತ್ತಾ ತನ್ನ ಪತಿ ಮರಣ ಹೊಂದಿದ್ದು ಇದು ಹೇಗೆ ನಡೆಯಲು ಸಾಧ್ಯ ಎಂದು ಕೇಳುತ್ತಾಳೆ. ಮರಣ ಹೊಂದಿದ ರಾಜಕುಮಾರನತ್ತ ಅವರು ನೋಡಿ ಆತ ನಿದ್ದೆ ಮಾಡಿದ್ದು ನೀನು ಏಕೆ ಅವನನ್ನು ಎಚ್ಚರಗೊಳಿಸಬಾರದು ಎಂದು ಕೇಳುತ್ತಾರೆ. ಹೋಗಿ ಅವನನ್ನು ಎಬ್ಬಿಸು ಎಂದು ಹೇಳುತ್ತಾರೆ. ಆಶ್ಚರ್ಯದಿಂದ ಆಕೆ ರಾಜಕುಮಾರನನ್ನು ನೋಡುತ್ತಾಳೆ ಮತ್ತು ಆತ ಕಣ್ಣುಗಳನ್ನು ತೆರೆಯುತ್ತಿರುತ್ತಾನೆ. ಆಕೆಗೆ ತನ್ನ ಕಣ್ಣುಗಳನ್ನೇ ನಂಬಲು ಆಗುವುದಿಲ್ಲ. ಕೂಡಲೇ ಅಲ್ಲಿಗೆ ಬಂದಿದ್ದ ಯುವ ದಂಪತಿಗಳು ಯಾರು ಎಂದು ಅವರಿಗೆ ಗೊತ್ತಾಗುತ್ತದೆ ಆದರೆ ಅಷ್ಟೊತ್ತಿಗೆ ಅವರು ಹೋಗಿರುತ್ತಾರೆ.

ದಿವ್ಯ ದಂಪತಿಗಳಾದ ಶಿವ ಪಾರ್ವತಿಯರಿಗೆ ಆಕೆ ಮನಸ್ಸಿನಲ್ಲಿಯೇ ವಂದಿಸುತ್ತಾಳೆ ಮತ್ತು ನಡೆದ ಸಂಗತಿಯನ್ನು ರಾಜಕುಮಾರನಿಗೆ ತಿಳಿಸುತ್ತಾಳೆ. ಹೆಣವನ್ನು ಸುಡಲು ರಾಜ ಮತ್ತು ಪರಿವಾರದವರು ಬಂದಾಗ ರಾಜಕುಮಾರ ಮತ್ತು ಆತನ ಪತ್ನಿ ಶಿವ ಪಾರ್ವತಿಯನ್ನು ನೆನೆಯುತ್ತಿರುವುದನ್ನು ಅವರು ನೋಡುತ್ತಾರೆ. ಈ ಸುದ್ದಿ ಕೂಡಲೇ ಊರಿನಲ್ಲಿ ಹರಡುತ್ತದೆ ಮತ್ತು ಆಷಾಢ ಮಾಸದಲ್ಲಿ ಭೀಮನ ಅಮವಾಸ್ಯೆಯನ್ನು ಮಾಡಲು ಜನರು ಆರಂಭಿಸುತ್ತಾರೆ. ಕಾಳಿಕಾಂಬ ದೀಪಗಳೊಂದಿಗೆ ಈ ವ್ರತವನ್ನು ಮಾಡಬೇಕು. ಮಣ್ಣಿನಿಂದಲೇ ತಯಾರಿಸಿದ ದೀಪಗಳನ್ನು ಕಾಳಿಕಾಂಬ ದೀಪ ಎಂದು ಕರೆಯುತ್ತಾರೆ.

ಈ ದಿನದಂದು ಮದುವೆಯಾಗಿರುವ ಮತ್ತು ಮದುವೆಯಾಗದ ಮಹಿಳೆಯರು ಶಿವ ಹಾಗೂ ಪಾರ್ವತಿಯಲ್ಲಿ ತಮ್ಮ ಕುಟುಂಬದ ಪುರುಷರಿಗೆ ಸುಖ, ಸಮೃದ್ಧಿ ಮತ್ತು ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತಾರೆ. ಮದುವೆಯಾಗಿರುವ ಮಹಿಳೆಯರು ತಮ್ಮ ಸಂಬಂಧವು ಶಿವ-ಪಾರ್ವತಿಯಷ್ಟೇ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ಅಲ್ಲದೆ ಈ ದಿನದಂದು ಮಹಿಳೆಯರು ಕಡುಬು ಮಾಡಿಕೊಂಡು ಅದರಲ್ಲಿ ನಾಣ್ಯವನ್ನು ಅಡಗಿಸಿಡುತ್ತಾರೆ. ಪೂಜೆ ಕೊನೆಗೊಂಡ ಬಳಿಕ ಬಾಲಕರು ಮತ್ತು ಪುರುಷರು ಕಡುಬನ್ನು ಒಡೆದು ಅದರಲ್ಲಿನ ನಾಣ್ಯವನ್ನು ತೆಗೆಯುತ್ತಾರೆ. ಇದರ ಹಿಂದೆ ತುಂಬಾ ಆಸಕ್ತಿದಾಯಕ ಕಥೆಯಿದೆ. ಹಿಂದಿನ ಕಾಲದಲ್ಲಿ ಹುಡುಗಿಯನ್ನು ರಾಜನ ಪ್ರೇತ್ಮತ್ಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆ ಹುಡುಗಿ ಶಿವ ಮತ್ತು ಪಾರ್ವತಿಯನ್ನು ತುಂಬಾ ಪೂಜಿಸುತ್ತಿದ್ದಳು. ಇದರಿಂದ ಶಿವ ಮತ್ತು ಪಾರ್ವತಿ ಆಕೆಯ ಭಕ್ತಿಗೆ ಒಲಿದು ಪ್ರತ್ಯಕ್ಷರಾಗಿ ರಾಜನಿಗೆ ಪುನರ್ಜೀವ ನೀಡುತ್ತಾರೆ. ಶಿವನು ಈ ಸಂದರ್ಭದಲ್ಲಿ ಮಣ್ಣಿನ ಕಡುಬನ್ನು ತುಂಡು ಮಾಡುತ್ತಾನೆ. ಇದನ್ನು ದೀರ್ಘಾಯುಷ್ಯ ಮತ್ತು ಸಮೃದ್ಧಿಯ ಸಂಕೇತವೆನ್ನಲಾಗುತ್ತದೆ.


ಜ್ಯೋತಿರ್ಭೀಮೇಶ್ವರ ವ್ರತ ವಿಧಿ,
ಮತ್ತು ವ್ರತದ ಕಥೆ.
ಜ್ಯೋತಿರ್ಭೀಮೇಶ್ವರ ವ್ರತ



ಈ ವ್ರತಕ್ಕೆ ಭೀಮನಮವಾಸ್ಯೆ ವ್ರತ,
ಭೀಮೇಶ್ವರ ವ್ರತ,
ಜ್ಯೋತಿರ್ಭೀಮೇಶ್ವರ ವ್ರತ ಎಂದು ಅನೇಕ ಹೆಸರಗಳಿವೆ.
ಕನ್ಯೆಯರು ತಮಗೆ ಉತ್ತಮವಾದ ಸಕಲಗುಣಸಂಪನ್ನನಾದ ಧೀರ್ಘಾಯುಸ್ಸಿರುವ ಯೋಗ್ಯ ಪತಿ,
ಸುಖೀ ದಾಂಪತ್ಯ ಪ್ರಾಪ್ತಿಗೆ,
ಸುಮಂಗಲಿಯರು ತಮ್ಮ ಮಾಂಗಲ್ಯ ಭಾಗ್ಯ ಶಾಶ್ವತವಾಗಿರಲಿ,ಪತಿಗೆ ದೀರ್ಘಾಯುಸ್ಸು,ಸುಖ,
ಸಂಪತ್ಸಮೃದ್ಧಿ ವೃದ್ಧಿಸುತ್ತಿರಲಿ ಎಂದು ಶ್ರದ್ಧಾ ಭಕ್ತಿಯಿಂದ ಈ ವ್ರತವನ್ನಾಚರಿಸುತ್ತಾರೆ.

ಪತಿವ್ರತೆ ಸಾವಿತ್ರಿಯು ಈ ವ್ರತವನ್ನಾಚರಿಸಿ ನಿಧನನಾಗಿದ್ದ ಪತಿ ಸತ್ಯವಾನನನ್ನು ಶಿವನ ಕೃಪೆಯಿಂದ ಬದುಕಿಸಿಕೊಂಡಳು.

ಈಶ್ವರನು ಕೈಲಾಸದಲ್ಲಿ ಮೊದಲು ಸನತ್ಕುಮಾರರಿಗೆ ಇದನ್ನು ಉಪದೇಶಿಸಿ,
ಅವರು ಭೂಲೋಕದ ತಪಸ್ವಿಗಳ ಪತ್ನಿಯರಿಗೆ ತಿಳಿಸಿ,ಅವರ ಮೂಲಕ ಎಲ್ಲೆಡೆ ವ್ಯಾಪಿಸಿತು.

ಜ್ಯೋತಿರ್ಭೀಮೇಶ್ವರ ವ್ರತವನ್ನು ಮೊಟ್ಟ ಮೊದಲು ಕೃತಯುಗದಲ್ಲಿ ಮೃಕಂಡ ಮುನಿಯ ಪತ್ನಿ ಸೌಮಿತ್ರೆ,
ತ್ರೇತಾಯುಗದಲ್ಲಿ ಅತ್ರಿ ಮಹರ್ಷಿಯ ಪತ್ನಿ ಅನಸೂಯಾ,
ದ್ವಾಪರದಲ್ಲಿ ಶ್ರೀಕೃಷ್ಣನ ಪತ್ನಿ ರುಕ್ಮಿಣಿ,
ಕಲಿಯುಗದಲ್ಲಿ ರತ್ನವೇಣಿ ಮಾಡಿದ್ದರು.

ವ್ರತ ಮಾಡುವ ಕ್ರಮ.

ಆಷಾಢ ಅಮವಾಸ್ಯೆಯಂದು,
ಗೋಧೂಳಿ ಸಮಯವಾದ ಸಂಜೆಯಲ್ಲಿ ,ಅಕ್ಕಿಯ ಮೇಲಿಟ್ಟ ಜೋಡಿ ಕಲಶಗಳ ಬಲಕ್ಕೆ ತುಪ್ಪದ,ಎಡಕ್ಕೆ ಎಣ್ಣೆಯ ದೀಪವನ್ನು ಹಚ್ಚಿಟ್ಟು ,ಅರಿಶಿನದ ನೀರಿನಲ್ಲಿ ನೆನಸಿದ ಹಸಿದಾರಕ್ಕೆ ೧೬ ಗಂಟು,ಹಾಕಿ ವಿಳೆಯದೆಲೆ ಅಡಿಕೆಯೊಂದಿಗೆ ಕಲಶದ ಅಕ್ಕಿಯ ಮೇಲಿಟ್ಟು ಈಶ್ವರನ ಸ್ವರೂಪವಾದ ಭೀಮೇಶ್ವರನನ್ನು ಕಲಶ ಮತ್ತು ದೀಪಕ್ಕೆ ಆವಾಹನೆ ಮಾಡಿ,
ಅರ್ಘ್ಯಪಾದ್ಯಾದಿ ಷೋಡಶೋಪಚಾರ,
ಅಂಗಪೂಜೆ,ಪತ್ರ,ಪುಷ್ಪಗಳಿಂದ ಪೂಜೆ,೧೦೮ ನಾಮ ಪೂಜೆ ಮಾಡಿ,ದಾರದ ಗ್ರಂಥಿ (ಗಂಟು)ಗಳನ್ನೂ ಪೂಜಿಸಿ ನಂತರ ಧೂಪ,ದೀಪಾರತಿ ಮಾಡಿ, ಕಡುಬು,ಚಕ್ಕುಲಿ,
ಪಾಯಸಾದಿ ಪಂಚಭಕ್ಷ್ಯಗಳು,
ವಿಧವಿಧವಾದ ಫಲಗಳನ್ನು,ತಾಂಬೂಲ ಸಹಿತ ನೇವೇದ್ಯ ಮಾಡಿ,ಮಂಗಳಾರತಿ ನೆರವೇರಿಸಿ,ದಾರವನ್ನು

ಮೃತ್ಯುಂಜಯ ನಮಸ್ತುಭ್ಯಂ,
ತವಮೇ ಸೂತ್ರಧಾರಣಂ |

ಸೌಭಾಗ್ಯಂ ಧನ ಧಾನ್ಯಂಚ
ಪ್ರಜಾವೃದ್ಧಿಂ ಸದಾಕುರು ||

ಎಂದು ಪ್ರಾರ್ಥಿಸಿ,
ದಾರವನ್ನು
ಆಚಾರ್ಯನಿಂದ ಬಲಗೈಗೆ ಕಟ್ಟಿಸಿಕೊಂಡು ವ್ರತದ ಕಥೆಯನ್ನು ಕೈಯಲ್ಲಿ ತೆಂಗಿನಕಾಯಿ,ಅಥವಾ ಯಾವುದಾದರೂ ಹಣ್ಣನ್ನು ಹಿಡಿದುಕೊಂಡು ಕೇಳಿ, ನಂತರ ಕೈಯಲ್ಲಿದ್ದ ಫಲವನ್ನು ದಕ್ಷಿಣೆಯೊಂದಿಗೆ ಪುರೋಹಿತರಿಗೆ ದಾನ ಕೊಡಬೇಕು.
ವ್ರತ ಮುಗಿದ ನಂತರ ಪುರೋಹಿತರಿಗೆ ಉಪಾಯನ ದಾನವನ್ನು, ಕೊಡಬೇಕು.

ವ್ರತದ ಕಥೆ ".
ಪೂರ್ವದಲ್ಲಿ ನೈಮಿಷಾರಣ್ಯದಲ್ಲಿದ್ದ ಶೌನಕಾದಿ ಋಷಿಗಳು,ಸಕಲಶಾಸ್ತ್ರ ಪಾರಂಗತರಾದ ಸೂತಪುರಾಣಿಕರನ್ನು "ಸ್ತ್ರೀಯರಿಗೆ ಯೋಗ್ಯ ಪತಿ ಪ್ರಾಪ್ತಿಗೆ,
ದೀರ್ಘಸೌಮಂಗಲ್ಯತ್ವಕ್ಕೆ, ಸುಖೀದಾಂಪತ್ಯಕ್ಕಾಗಿ ಆಚರಿಸಬಹುದಾದ ಉತ್ತಮ ವ್ರತ" ಒಂದನ್ನು ಹೇಳಬೇಕೆಂದು ಪ್ರಾರ್ಥಿಸಿದಾಗ ಸೂತಪುರಾಣಿಕರು ಅವರಿಗೆ ಆಷಾಢ ಅಮವಾಸ್ಯೆಯ ಭೀಮೇಶ್ವರ ವ್ರತವು ಬಹಳ ಪುಣ್ಯದಾಯಕ ಎಂದು ಆ ವ್ರತ ಮಹಾತ್ಮ್ಯೆಯನ್ನು ಹೇಳಿದರು.
ಬಹಳ ಹಿಂದೆ ಸೌರಾಷ್ಟ್ರ ದೇಶದಲ್ಲಿ ವಜ್ರಬಾಹುವೆಂಬ ಮಹಾಪರಾಕ್ರಮಿಯಾದ ರಾಜನಿಗೆ,
ಜಯಶೇಖರ ಎಂಬ ಸುಂದರನೂ,
ಸರ್ವಗುಣಸಂಪನ್ನನಾದ ಮಗನಿದ್ದನು.ಆದರೆ ಅವನು ವಿಧಿವಶದಿಂದ ಅಕಾಲಮರಣಕ್ಕೀಡಾದನು.
ವಜ್ರಬಾಹುವಿಗೆ ಪುತ್ರಶೋಕ ಬಲವಾಗಿ,
ತನಗೂ,ತನ್ನ ಪಿತೃಗಳಿಗೂ ತಿಲೋದಕ ಕೊಡುವವರೇ ಇಲ್ಲದಂತಾಯಿತಲ್ಲ ಎಂದು ದುಃಖಿಸುತ್ತ ಕೊನೆಗೊಂದು ನಿರ್ಧಾರಕ್ಕೆ ಬಂದು,
"ನನ್ನ ಮಗನ ಈ ಶವಕ್ಕೆ ಯಾರು ತನ್ನ ಮಗಳನ್ನು ಮದುವೆ ಮಾಡಿಕೊಡುತ್ತಾರೆಯೋ ಅವರಿಗೆ ಕೋಟಿ ನಾಣ್ಯವನ್ನು ಬಹುಮಾನವಾಗಿ ಕೊಡುತ್ತೇನೆ" ಎಂದು ಡಂಗುರ ಸಾರಿಸಿದನು.
ಅದೇ ಊರಿನಲ್ಲಿ ಸಕಲ ವೇದ ಶಾಸ್ತ್ರ ಪಾರಂಗತನಾದರೂ ಕಡುಬಡತನದಿಂದ ಸಂಸಾರ ಸಾಕುವುದೇ ಕಷ್ಟವಾಗಿದ್ದ ಮಾಧವಶರ್ಮನೆಂಬ ಬ್ರಾಹ್ಮಣನು ಇದನ್ನು ಕೇಳಿ,ತನ್ನ ಐವರು ಹೆಣ್ಣು ಮಕ್ಕಳಲ್ಲಿ ಹಿರಿಯವಳನ್ನು ಕೊಡುತ್ತೇನೆ,
ನಮಗಿರುವ ಹದಿನಾಲ್ಕು ಮಕ್ಕಳನ್ನು ಪೋಷಿಸುವುದು ಬಹಳ ಕಷ್ಟವಾಗಿದೆ ಎಂದು ತನ್ನ ಪತ್ನಿ ಸುಶೀಲೆಗೆ ತಿಳಿಸಿದನು.
ಸುಶೀಲೆಯು "ಪತಿಯೇ,ಲೋಕದಲ್ಲಿ ಮಗಳನ್ನು ಮದುವೆ ಮಾಡಿಕೊಡಲು ಬಹಳ ಆಲೋಚಿಸಿ,ಅತ್ಯುತ್ತಮ ಧನವಂತರ ಮನೆಗೇ ಬಡವರು ಹೆಣ್ಣು ಕೊಟ್ಟರೆ ಅವಮಾನ,ತಪ್ಪದು ಎಂದು ಕೊಡಲಿಚ್ಛಿಸುವುದಿಲ್ಲ.
ಇನ್ನು ನಪುಂಸಕ,ನಿರುದ್ಯೋಗಿ,
ಅಂಗಹೀನರಿಗೂ ಕನ್ಯೆಯನ್ನು ಕೊಡುವುದಿಲ್ಲ.
ಹೀಗಿರುವಾಗ ನೀವು ಮೃತನಾದವನಿಗೆ ಮಗಳನ್ನು ಕೊಡುತ್ತೇನೆ ಎನ್ನುವಿರಲ್ಲ!
ಅವಳು ವಿಧವೆಯಾಗಿಯೇ ಬಾಳಬೇಕೇ? ಇದು ಯುಕ್ತವಲ್ಲ" ಎಂದಳು.
ನಿನಗೆ ಒಬ್ಬಳು ಮಗಳು ಕಡಿಮೆ ಎಂದು ಭಾವಿಸಿಕೋ,
ನಾನು ಮೃತರಾಜಪುತ್ರನಿಗೆ ಹಿರಿಯ ಮಗಳು ಚಾರುಮತಿಯನ್ನು ಕೊಟ್ಟೇ ಕೊಡುತ್ತೇನೆಂದು ಮದುವೆ ಮಾಡಿಕೊಟ್ಟನು.
ಮಾತಿನಂತೆ ರಾಜನು ಅವನಿಗೆ ಕೋಟಿ ಹೊನ್ನು ಕೊಟ್ಟನು.ನಂತರ ಪುತ್ರನ ಶವವನ್ನು ಸ್ಮಶಾನಕ್ಕೆ ಸಾಗಿಸಿ,ಸೊಸೆಗೆ ಚಿತೆಗೆ ಅಗ್ನಿಸ್ಪರ್ಶ ಮಾಡಲು ಹೇಳಿದನು.
ಆಕೆಯು ಶುಚಿರ್ಭೂತಳಾಗಿ,
ಸರ್ವಾಭರಣ ಧರಿಸಿ,
ಯಥೇಚ್ಛ ಮಂಗಳದ್ರವ್ಯಗಳನ್ನು ದಾನಮಾಡಿ,ಭಕ್ತಿಯಿಂದ ಪರಮೇಶ್ವರನನ್ನು ಧ್ಯಾನಿಸುತ್ತ ,
ಶಾಂತ ಮನಸ್ಸಿನಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದಳು.
ಕೂಡಲೇ ಇದ್ದಕ್ಕಿದ್ದಂತೆ ವರ್ಷಧಾರೆಯಾಗಿ ಚಿತೆಯ ಬೆಂಕಿಯು ಆರಿಹೋಯಿತು.
ಸೂರ್ಯನೂ ಮುಳುಗಿ ಕತ್ತಲಾಗಿ ಸ್ವಲ್ಪ ಸಮಯದಲ್ಲಿಯೇ ಗಾಢಾಂಧಕಾರವು ಆವರಿಸಿತು.
ರಾಜ ಪರಿವಾರವು ಅವಳನ್ನು ಅಲ್ಲಿಯೇ ಬಿಟ್ಟು ಹಿಂದಿರುಗಿತು.
ಸ್ಮಶಾನದಲ್ಲಿ ಏಕಾಂಗಿಯಾಗಿದ್ದ ಚಾರುಮತಿಯು ಭಯಗ್ರಸ್ತಳಾಗಿ ನಡುಗುತ್ತ ,ದೈರ್ಯತಂದುಕೊಂಡು ದುಃಖಾತಿಶಯದಿಂದ
"ಭಗವಂತ ಕಾಪಾಡು,ಕಾಪಾಡು" ಎಂದು ದೀನಳಾಗಿ ಪ್ರಾರ್ಥಿಸುತ್ತ ,
"ನೀನು ಹಿಂದೆ ಮಾರ್ಕಂಡೇಯ,
ಸತ್ಯವಾನ,ಚ್ಯವನ,ಮನ್ಮಥ,ಶ್ವೇತವಾಹನ ಮೊದಲಾದ ಅಲ್ಪಾಯುಗಳಿಗೆ ದೀರ್ಘಾಯುವನ್ನು ಕರುಣಿಸಿದವನು.
ನಾನೇನು ಅಪರಾಧ ಮಾಡಿದ್ದೇನೆಂದು ನನಗೀ ಶಿಕ್ಷೆ ? ಕೃಪೆ ಮಾಡು ದೇವ" ಎಂದು ಅಳುತ್ತಲೇ ಪ್ರಜ್ಞಾಹೀನಳಾದಳು.
ಪರಶಿವನು ಪಾರ್ವತಿಯೊಂದಿಗೆ ವೃಷಭಾರೂಢನಾಗಿ ಪ್ರತ್ಯಕ್ಷನಾಗಿ,
"ಎದ್ದೇಳು ಪುತ್ರಿ.ಬೇಕಾದ ವರವನ್ನು ಕೇಳು" ಎಂದಾಗ ಎಚ್ಚೆತ್ತು ಶಿವನ ಪಾದದ ಮೇಲೆ ತಲೆ ಇಟ್ಟು , ಸೌಮಂಗಲ್ಯ,ಸೌಭಾಗ್ಯ,
ಸುಖ ಸಂಪತ್ಸಮೃದ್ಧಿಯನ್ನು ಕೊಡುವ ವ್ರತವನ್ನು ನನಗೆ ಉಪದೇಶಿಸು" ಎಂದು ಬೇಡಿದಳು.ಈಶ್ವರನು ತಥಾಸ್ತು ಎಂದು ಜ್ಯೋತಿರ್ಭೀಮೇಶ್ವರ ವ್ರತವನ್ನು ಉಪದೇಶಿಸಿ,
ವ್ರತವಿಧಿಯನ್ನು ತಿಳಿಸಿ,
ಒಂಬತ್ತು ವರ್ಷ ವ್ರತವನ್ನಾಚರಿಸಿ ನಂತರ ಉದ್ಯಾಪನೆ ಮಾಡಬೇಕು.
ನಾಡಿದ್ದು ಆಷಾಢ ಅಮವಾಸ್ಯೆ.
ಅಂದು ಇಲ್ಲಿ ಸಿಕ್ಕುವ ವಸ್ತುಗಳನ್ನೇ ವ್ರತಕ್ಕೆ ಬೇಕಾದ ಸಾಮಗ್ರಿಗಳೆಂದು ಮನಸ್ಸಿನಲ್ಲಿ ಭಾವಿಸಿ ವ್ರತ ಆಚರಿಸು.ನಿನ್ನ ಪತಿಯು ನಿದ್ದೆಯಿಂದೆಚ್ಚತ್ತವನಂತೆ ಮೇಲೆದ್ದು ನವತಾರುಣ್ಯದೊಂದಿಗೆ ನಿನ್ನೊಂದಿಗೆ ಇರುತ್ತಾನೆ" ಎಂದು ಹೇಳಿ ಅಂತರ್ಧಾನನಾದನು.
ಚಾರುಮತಿಯು ಸ್ಮಶಾನದ ಮರಗಳಪತ್ರೆ,ಪುಷ್ಪ,
ಫಲಾದಿಗಳನ್ನೇ ವ್ರತಸಾಮಗ್ರಿಯಾಗಿ ಭಾವಿಸಿ,
ಶುಚಿರ್ಭೂತಳಾಗಿ,ಮಣ್ಣಿನಿಂದ ದೀಪಸ್ತಂಭ ರಚಿಸಿ,
ಅಗ್ನಿಯನ್ನಾವಾಹಿಸಿ,
ಸಂಜೆ ಭಕ್ತಿಯಿಂದ ವ್ರತ ಮಾಡಿದಳು.
ವ್ರತಪೂಜಾ ಮಹಿಮೆಯಿಂದ ರಾಜಪುತ್ರನು ಕಣ್ತೆರೆದು ಎದ್ದು,
ಆಶ್ಚರ್ಯ ಚಕಿತನಾಗಿ,
ಅಲ್ಲಿಯವರೆಗಿನ ವೃತ್ತಾಂತವನ್ನು ಚಾರುಮತಿಯಿಂದ ಕೇಳಿ ಆನಂದಭರಿತನಾದನು.
ಬೆಳಗಾಗುತ್ತಲೇ ರಾಜಭಟರಿಂದ ವಿಷಯ ತಿಳಿದ ರಾಜ ವಜ್ರಬಾಹುವು ಆಗಮಿಸಿ,
ಚಾರುಮತಿಯಿಂದ ವಿಷಯ ತಿಳಿದು ಸಂತೋಷಗೊಂಡು ಅವಳನ್ನು ಸಮಾಧಾನ ಪಡಿಸಿ,ಇಬ್ಬರನ್ನೂ ಮೆರವಣಿಗೆಯ ಮೂಲಕ ಅರಮನೆಗೆ ಕರೆತಂದು,ಚಾರುಮತಿಯ ಕೈಯಿಂದ ಯಥೇಚ್ಛ ದಾನಧರ್ಮ ಮಾಡಿಸುತ್ತ ,
ಸಂತೋಷದಿಂದ ಇದ್ದನು."
ಹೀಗೆ ಸೂತಪುರಾಣಿಕರು ಹೇಳಿದ ಕತೆ ಕೇಳಿದ ಶೌನಕಾದಿ ಋಷಿಗಳೂ ಭಕ್ತಿಯಿಂದ ವ್ರತವನ್ನು ಆರಂಭಿಸಿದರು.
ಈ ಕಥೆಯನ್ನು ಯಾರು ಹೇಳುತ್ತಾರೆಯೋ,
ಯಾರು ವ್ರತವನ್ನು ಆಚರಿಸಿ ಈ ಕಥೆಯನ್ನು ಕೇಳುತ್ತಾರೆಯೋ ಅವರೆಲ್ಲ ಇಹದಲ್ಲಿ ಸುಖ ಸಂಪತ್ತನ್ನು ಹೊಂದಿ,
ಪರದಲ್ಲಿ ಮುಕ್ತಿ ಪಡೆಯುತ್ತಾರೆ ಎಂದು ಸ್ಕಾಂದ ಪುರಾಣದಲ್ಲಿ ಹೇಳಿದೆ.
ಜ್ಯೋತಿರ್ಭೀಮೇಶ್ವರಾರ್ಪಣಮಸ್ತು,

***

ಭೀಮನ ಅಮಾವಾಸ್ಯೆಯ ವಿಶೇಷ ೨೦೧೯
          ( ಸ್ವಂತ ಚಿಂತನೆ)

    ಈ ವರ್ಷದ ವಿಕಾರಿನಾಮ ಸಂವತ್ಸರದ ಭೀಮನ ಅಮಾವಾಸ್ಯೆಯು ವಿಶೇಷವಾಗಿದೆ. 
ಶ್ರೀ ರಾಘವೇಂದ್ರ ಸ್ತೋತ್ರದಲ್ಲಿ, ಒಂದು ಸಾಲನ್ನು ಗಮನಿಸಿದಾಗ ನಮಗೆ ವೇದ್ಯವಾಗುತ್ತದೆ. 

 || ಸೋಮಸೂರ್ಯೋಪರಾಗೇ ಚ ಪುಷ್ಯಾರ್ಕಾದಿ ಸಮಾಗಮೇ ||

ಅರ್ಥ- ಚಂದ್ರ ಸೂರ್ಯರು ಅಮಾವಾಸ್ಯೆ (ಉಪರಾಗೇ) ಯಂದು ಪುಷ್ಯ ನಕ್ಷತ್ರದಲ್ಲಿ ಅರ್ಕಾದಿ ( ಭಾನುವಾರ) ಸಮಾಗಮ ಹೊಂದ್ದಿದ್ದೇ ಆದರೆ, ಆ ದಿವಸ ಶ್ರೇಷ್ಠ ಎಂದು ಪರಿಗಣಿಸಬಹುದು. 

ಈ ವರ್ಷ ೧-೮-೨೦೧೯ ಗುರುವಾರ ಪುಷ್ಯ ನಕ್ಷತ್ರದಲ್ಲಿ ಗುರು-ಪುಷ್ಯ ಯೋಗ ವಿರುವುದರಿಂದ, ಸಿದ್ಧಿ ಯೋಗವಿರುವುದರಿಂದ, ಶ್ರೀರಾಘವೇಂದ್ರರ ಶ್ಲೋಕ ಸಾರದ ಪ್ರಕಾರ ಅರ್ಕ-ಪುಷ್ಯ ಯೋಗದ (ಭಾನುವಾರ ಪುಷ್ಯ ನಕ್ಷತ್ರದ) ಸಮೀಪದ ಫಲವನ್ನು ಕೊಡುತ್ತದೆ ಮತ್ತು ಶುಭ ಶ್ರಾವಣಮಾಸದ ಹಿಂದಿನ ದಿವಸದ ಭೀಮನ ಅಮಾವಾಸ್ಯೆಯ ವಿಶೇಷತೆಯೂ ಕೂಡಿಕೊಂಡು, ದೇವತಾ ಕಾರ್ಯಗಳನ್ನು ಮನಃ ಪೂರ್ವಕವಾಗಿ, ಭಕ್ತಿ, ಭಾವದಿಂದ ನೆರವೇರಿಸಿ ಶ್ರೀರಾಘವೇಂದ್ರ ಸ್ವಾಮಿಗಳ ಮತ್ತು ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. 
           || ಶುಭಮಸ್ತು ||

ಡಾ. ಗುರುರಾಜ ಏರಿ, ಮೈಸೂರು 
( ಸ್ವಂತ ಚಿಂತನೆ )
*****

Jyothir Bheemeshwara Vrata / Bheemana Amavasya
                                
ಆಷಾಢದಲ್ಲಿ ಬಹುಶಃ ಯಾವುದೇ ಶುಭಕಾರ್ಯ ಮಾಡುವ ಸಂಪ್ರದಾಯವಿಲ್ಲ. ಆಷಾಢ ಶುಕ್ರವಾರಗಳಲ್ಲಿ ಲಕ್ಷ್ಮೀಪೂಜೆ, ಗುರುಪೂರ್ಣಿಮೆ ಬಿಟ್ಟರೆ, ಆಷಾಢದಲ್ಲಿ ಕೆಲವರು ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳುತ್ತಾರೆ. ಆದರೆ, ಆಷಾಢ ಕೊನೆಗೆ ಬರುವ ಅಮಾವಾಸ್ಯೆ ಮಾತ್ರ ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಣೆಗೊಳಲ್ಪಡುತ್ತದೆ. 

ಜ್ಯೋತಿರ್ ಭೀಮೇಶ್ವರ  ವ್ರತ
ಸೌರಮಾನ ಪದ್ಧತಿ ಅಚರಿಸುವವರು, ಕನ್ನಡ ಜಿಲ್ಲೆಗಳಲ್ಲಿ ಆಟಿ ಅಮಾವಾಸ್ಯೆ ಆಚರಣೆ ಇರುತ್ತದೆ. ಆಷಾಢ ಬಹುಳ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ  ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.

                                 ಆಷಾಢ ಬಹುಳ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ. ಅಮಾವಾಸ್ಯೆಯನ್ನು ಎಲ್ಲೆಡೆ ಭೀಮನ ಅಮಾವಾಸ್ಯೆ, ಅಳಿಯನ ಅಮಾವಾಸ್ಯೆ ಎಂದು ಆಚರಿಸಿದರೆ, ಕಾರವಾರದಲ್ಲಿ ಮಾತ್ರ ಅದಕ್ಕೆ ಗಟಾರದ ಅಮಾವಾಸ್ಯೆ ಎಂದು ಕರೆಯುತ್ತಾರೆ. 

ಈ ಹಬ್ಬದ ಆಚರಣೆ ಏಕೆ: ಯಾವುದೇ ಹಬ್ಬ, ವ್ರತ ಕೈಗೊಳ್ಳುವ ಮೊದಲು ಸಂಕಲ್ಪ ಮುಖ್ಯ. ನಾವು ಏತಕ್ಕಾಗಿ ಈ ವ್ರತವನ್ನು ಕೈಗೊಳ್ಳುತ್ತಿದ್ದೇವೆ ಎಂಬುದರ ಅರಿವು ಇರಲೇಬೇಕು. ಭೀಮನ ಅಮಾವಾಸ್ಯೆ ಯನ್ನು ಮದುವೆಯಾಗದ ಹೆಣ್ಣುಮಕ್ಕಳು ಒಳ್ಳೆ ಗಂಡ ಸಿಗಲಿ ಎನ್ನುವ ಉದ್ದೇಶದಿಂದ ಹಾಗೂ ಮದುವೆಯಾದ ಹೆಂಗಸರೂ ಕೂಡ ತನ್ನ ಗಂಡನ ಆಯುಷ್ಯ ಹೆಚ್ಚಲಿ ಎಂದು ಆರಾಧ್ಯ ದೈವ ಜ್ಯೋತಿರ್ಭೀಮೇಶ್ವರನ ಪೂಜೆ ಮಾಡುತ್ತಾರೆ.

ವಿವಿಧ ರೀತಿ ಆಚರಣೆ: ವ್ರತಾಚರಣೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನತೆಯಿಂದ ಕೂಡಿದೆ. ಉದ್ದೇಶ ಒಂದೇ ಆದರೂ, ಆಚರಣೆಯಲ್ಲಿ ವಿವಿಧತೆಯನ್ನು ಕಾಣಬಹುದು. ಹೆಂಗಳೆಯರು ಕೈ ಕಂಕಣ ಕಟ್ಟಿಕೊಂಡು ಜ್ಯೋರ್ತಿರ್ಭೀಮೇಶ್ವರನ್ನು ಧ್ಯಾನಿಸಿ, ವ್ರತ ಕೈಗೊಳ್ಳುತ್ತಾರೆ. ರಾಹುಕಾಲ ಹೊರತುಪಡೆಸಿ ಬೆಳಗ್ಗೆ ಅಥವಾ ಸಂಜೆ ಯಾವುದೇ ಶುಭ ಮಹೂರ್ತದಲ್ಲಿ ವ್ರತ ಕೈಗೊಳ್ಳಬಹುದು.

ಭಂಡಾರ ಹೊಡೆಯುವುದು: ಕೆಲೆವೆಡೆ ಈ ಹಬ್ಬದಲ್ಲಿ ಸೋದರಿಯರು ಸೋದರರ ಕೈಯಿಂದ ಭಂಡಾರ ಒಡೆಸುತ್ತಾರೆ. ಭಂಡಾರ ಅಂದರೆ, ಕರಿದ ಸಿಹಿ  ಕಡಬು ; ಆದರೆ ಅದರೊಳಗೆ ಲಕ್ಷ್ಮೀ ಸ್ವರೂಪಿ ನಾಣ್ಯವನ್ನು ಇಟ್ಟು ಕರೆದಿರುತ್ತಾರೆ. ಅಂತಹ ಕಡುಬನ್ನು ಮುಂಬಾಗಿಲ ಹೊಸಿಲಲ್ಲಿಟ್ಟು ಸೋದರ ಹೊಸ್ತಿಲ  ಮುಂದೆ ಕೂತು ತನ್ನ ಮೊಣಕೈಯಿಂದ ಅದನ್ನು ಭಿನ್ನ  ಮಾಡುತ್ತಾನೆ . ಸೋದರಿ ಆ ಸಮಯದಲ್ಲಿ ಆವನ ಬೆನ್ನ ಮೇಲೆ ಪ್ರೀತಿಯಿಂದ ಗುದ್ದುತ್ತಾಳೆ. ನಂತರ ಅಣ್ಣನ ಆಶೀರ್ವಾದ ಬೇಡುವ ಸೋದರಿ, ಫಲ ತಾಂಬೂಲ ನೀಡುತ್ತಾಳೆ. ಒಂದು ರೀತಿ ರಕ್ಷಾ ಬಂಧನದ ಇನ್ನೊಂದು ರೂಪದ್ದಂತಿರುತ್ತದೆ ಈ ಆಚರಣೆ. ಸೋದರಿಯನ್ನು ಸದಾ ಸೋದರ ರಕ್ಷಣೆ ಮಾಡುತ್ತೇನೆಂದು ಸಾಂಕೇತಿಕವಾಗಿ ಸಾರುತ್ತದೆ. 


ಯಾರು ಆಚರಿಸಬೇಕು? : ಮೊದಲೇ ಹೇಳಿದಂತೆ ಅವಿವಾಹಿತ ಹೆಣ್ಣು ಮಕ್ಕಳು, ವಿವಾಹಿತ ನವ ವಧು ಆಚರಿಸಬಹುದು. ಒಮ್ಮೆ ವ್ರತ ಕೈಗೊಂಡರೆ ಒಂಭತ್ತು ವರ್ಷ ಸಂಪೂರ್ಣಗೊಳಿಸಿ ಉದ್ಯಾಪನೆ ಮಾಡಿ  ಅಣ್ಣಂದಿರಿಗೆ  ಒಂದೊಂದು ಜೊತೆ ದೀಪವನ್ನು  ಹಾಗು ಪಂಚೆ ಶಲ್ಯ  ಕೊಡಬೇಕು ಅತ್ತಿಗೆಗೆ  ಸೀರೆ ಮತ್ತು ಕಣವನ್ನು ಕೊಡಬೇಕು . ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಮತ್ತೆ ಜೀವನದ ಬಂಡಿ ಹೂಡುವುದು ವಾಡಿಕೆ.
****

ಅಷಾಢ ಮಾಸದ ಮಹತ್ವ

ಭೀಮನ ಅಮಾವಾಸ್ಯೆ ವ್ರತ


ಆಷಾಢಮಾಸದ ಅಮಾವಾಸ್ಯೆಯಂದು "ಭೀಮಾವ್ರತ" ಎಂದು ಹೇಳಲ್ಪಡುವ ವ್ರತವನ್ನು ಆಚರಿಸಬೇಕು. ಇದಕ್ಕೆ ಜ್ಯೋತಿರ್ಭೀಮೇಶ್ವರ ವ್ರತ ಎಂದು ನಾಮಾಂತರವಿದೆ. ಗೌರಿ ದೀಪಸ್ತಂಭ ಎಂದೂ ಹೆಸರಿದೆ. ಈ ವ್ರತವನ್ನು ವಿವಾಹಿತ ಹಾಗೂ ಅವಿವಾಹಿತ ಕನ್ಯೆಯರು ಆಚರಿಸುವುದು. ಈ ವ್ರತಾಚರಣೆಯಿಂದ ಕನ್ಯೆಯರು ಸದ್ಗುಣಿಗಳಾದ ಪತಿಯನ್ನು ಪಡೆಯುವರು. ವಿವಾಹಿತ ಸ್ತ್ರೀಯರು ಸೌಭಾಗ್ಯವನ್ನು ಪಡೆಯುವರು. "ಭೀಮ" ಎಂಬುದು ರುದ್ರದೇವರ ನಾಮವಾಗಿದೆ. ಅವರಿಗೂ ಈಶನಾದ ನರಸಿಂಹನನ್ನು ರುದ್ರ ಹಾಗೂ ರುದ್ರಾಣಿಯರ ಪ್ರತೀಕದಲ್ಲಿ ಪೂಜಿಸುವುದು. 

ರುದ್ರದೇವರ ಆದೇಶದಂತೆ ಧಾನ್ಯರಾಶಿಯ ಮೇಲೆ ಮಣ್ಣಿನಿಂದ ತಯಾರಿಸಿದ ಪ್ರತಿಮೆಗಳೆರಡನ್ನು ಅಲಂಕರಿಸಿ ಭಕ್ತಿಭಾವದಿಂದ ಪೂಜಿಸಬೇಕು. ಹತ್ತು ಗ್ರಂಥಿಗಳುಳ್ಳ ದಾರವನ್ನು (ದೋರ) ಸ್ಥಾಪಿಸಿ ರುದ್ರಾದಿ ನಾಮಗಳಿಂದ ಆವಾಹಿಸಿ ಪೂಜಿಸಬೇಕು. ಗೋಧಿಹಿಟ್ಟಿನಿಂದ ಮಾಡಿದ ಭಕ್ಷ್ಯವನ್ನು ನೈವೇದ್ಯಕ್ಕಾಗಿ ಇಡಬೇಕು. ಪೂಜೆಯ ನಂತರ ದಾರವನ್ನು ಬ್ರಾಹ್ಮಣ ದಂಪತಿಗಳಿಗೆ ದಾನ ಮಾಡಿ ತಾನೂ ಧರಿಸಬೇಕು. ದೋರಬಂಧನಾನಂತರ ವಾಯನದಾನ ನೀಡಿ ಆಶೀರ್ವಾದ ಪಡೆಯಬೇಕು.
        
            ಶ್ರೀಕೃಷ್ಣಾರ್ಪಣಮಸ್ತು

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ
***

vidushi Divya Giridhar



No comments:

Post a Comment