SEARCH HERE

Tuesday 1 January 2019

ಸಂಕಷ್ಟಹರ ಗಣಪತಿ ಚತುರ್ಥಿ ವ್ರತ ಸಂಕಷ್ಟಿ ಮತ್ತು ಅಂಗರಿಕ ಸಂಕಷ್ಟಿ sankashtahara chaturthi ganapati vruta angarika sankashti


ಸಂಕಷ್ಟಹರ ಚತುರ್ಥಿ ವ್ರತ 

ಸಂಕಷ್ಟ ಚತುರ್ಥಿಯು ಮಂಗಳವಾರದಂದು ಬಂದರೆ ಅದಕ್ಕೆ 'ಅಂಗಾರಕಿ" ಎಂಬ ವಿಶೇಷ ಮಹತ್ವ. ಅಂಗಾರ ಅಂದರೆ ಸಂಸ್ಕೃತದಲ್ಲಿ ಕೆಂಡ ಎಂದರ್ಥ. ಕೆಂಡದಂತೆ ನಿಗಿನಿಗಿ ಹೊಳೆಯುವುದು ಅಂಗಾರಕ - ಮಂಗಳಗ್ರಹ. ಮಂಗಳನನ್ನು ಭೂಮಿಪುತ್ರನೆಂದೂ ಪುರಾಣಗಳು ಹೇಳುತ್ತವೆ. ಭೂಮಿಪುತ್ರನಾದ್ದರಿಂದ ಭೌಮ. ಮಂಗಳವಾರಕ್ಕೆ ಭೌಮವಾರವೆಂದೂ ಹೆಸರಿದೆ. ಭೂಲೋಕಕ್ಕೆ ಗಣೇಶ ಅಧಿದೇವತೆಯಾಗಿರುವಂತೆಯೇ ಮಂಗಳಕ್ಕೂ ಕೂಡ. ಅದಕ್ಕೆಂದೇ ಮಂಗಳವಾರ ಸಂಕಷ್ಟಿ ಬಂದರೆ ಅದಕ್ಕೆ 'ಅಂಗಾರಕಿ"ಯೆಂಬ ವಿಶೇಷ. 

ಅಂಗಾರಿಕಾ ಸಂಕಷ್ಟಿ🕉

ಚೌತಿ ಎಂದ ಕೂಡಲೇ ಎಲ್ಲರ ಮನದಲ್ಲಿ ಮೂಡುವ ಮೊದಲ ಚಿತ್ರವೇ ಗಣಪತಿ.
ಅದರಲ್ಲೂ ನಾವು ಎರಡು ವಿಧದಲ್ಲಿ ಚತುರ್ಥಿ ನೋಡಬಹುದು.
೧.ಶುಕ್ಲ ಚೌತಿ
ಭಾದ್ರಪದ ಈ ಶುಕ್ಲ ಚೌತಿ ವಿನಾಯಕ ಚೌತಿ.

೨.ಕೃಷ್ಣ ಚೌತಿ

ಕೃಷ್ಣ ಪಕ್ಷದಲ್ಲಿ ಬರುವ ಚೌತಿಯನ್ನು ಕೃಷ್ಣ ಚೌತಿಯನ್ನು ಅಥವಾ ಸಂಕಷ್ಟಿ ಚೌತಿ ಎಂತಲೂ ಕರೆಯಲಾಗುತ್ತದೆ. ಮಂಗಳವಾರದಿಂದ ದಿನ ಕೃಷ್ಣ ಚೌತಿ ಬಂದರೆ ಅದಕ್ಕೆ ಅಂಗಾರಿಕ ಸಂಕಷ್ಟಿ ಎಂದು ಕರೆಯುತ್ತಾರೆ.

ಅಂಗಾರಿಕ ಸಂಕಷ್ಠಿ🕉 ಅಂದರೆ ಗಣಪತಿಗೆ ಎಲ್ಲಿಲ್ಲದ ಪ್ರೀತಿ. ಮಂಗಳ ಅಥವಾ ಕುಜಗ್ರಹನಿಗೆ ಇರುವ ಇನ್ನೊಂದು ಹೆಸರೇ ಅಂಗಾರಕ. ಈ ಅಂಗಾರಕನು ಗಣಪತಿಯನ್ನು ಒಲಿಸಿಕೊಂಡಿರುವ ಕಾರಣದಿಂದ ಮಂಗಳವಾರವು ಗಣಪತಿಗೆ ಅತ್ಯಂತ ಪ್ರಿಯವಾದ ವಾರವಾಗಿದೆ. ಆದುದರಿಂದಲೇ ಗಣಪನು ಮಂಗಳವಾರದಂದು ವಿಶೇಷ ವರಪ್ರದನಾಗಿರುತ್ತಾನೆ. ಇನ್ನು  ಅದರ ಜೊತೆಗೆ ಸಂಕಷ್ಠಿಯು ಸೇರಿದರೆ ಕೇಳಬೇಕೆ?
ಇನ್ನು ಅವನು ಕೊಡುವ ಅನುಗ್ರಹಕ್ಕೆ ಎಣೆಯೇ ಇಲ್ಲದಂತಾಗುವುದು.

ಮಂಗಲಂ ನಿತ್ಯ ಕಲ್ಯಾಣಂ ಲಕ್ಷ್ಮೀ ಸೌಭಾಗ್ಯವರ್ಧನಂ|
ಲಕ್ಷ್ಮೀ ಮನೋರಥಂ ಪ್ರಾಪ್ತಿಕರಂ ಪಂಚಾಂಗಂ ಫಲಮುತ್ತಮಂ||
ತಿಥೇಶ್ಚ ಶ್ರಿಯಮಾಪ್ನೋತಿ ವಾರದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗ ನಿವಾರಣಂ||
ಕರಣಾತ್ ಚಿಂತಿತಂ ಕಾರ್ಯಂ ಪಂಚಾಂಗಂ ಫಲಮುತ್ತಮಂ|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾ ಸ್ನಾನಫಲಂ ಲಭೇತ್||
*****

ಸಂಕಷ್ಟಹರ ಚತುರ್ಥಿ ವ್ರತ - ಹೆಸರೇ ಹೇಳುವಂತೆ ಸಂಕಷ್ಟಗಳನ್ನು ಹರಣ/ಪರಿಹಾರ ಮಾಡುವಂತ ವ್ರತ. ಸಂಕಷ್ಟ ಚೌತಿ ವ್ರತ / ಸಂಕಷ್ಟ ಗಣಪತಿ ವ್ರತ ಎಂದೂ ಕರೆಯುತ್ತಾರೆ. ಈ ವ್ರತದಲ್ಲಿ ಶ್ರೀ ವಿನಾಯಕನಿಗೆ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಬಹುಳ/ಕೃಷ್ಣ ಪಕ್ಷದ ಚತುರ್ಥಿ ದಿನ ಈ ವ್ರತವನ್ನು ಮಾಡುತ್ತಾರೆ. ಈ ವ್ರತವನ್ನು ಶ್ರಾವಣ ಬಹುಳ ಚತುರ್ಥಿ ದಿನ ಪ್ರಾರಂಭ ಮಾಡಬೇಕು ಅಂತ ಇದೆ. 
ಈ ದಿನ ಬೆಳಿಗ್ಗೆ ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳ ಸ್ನಾನ ಮಾಡಬೇಕು. ಸಂಕಷ್ಟಹರ ಗಣಪತಿ ವ್ರತ ಮಾಡುತ್ತಿದ್ದೀನಿ ಅಂತ ಸಂಕಲ್ಪ ಮಾಡಬೇಕು. ದಿನವೆಲ್ಲ ಉಪವಾಸ ಇರಬೇಕು. ಇದು ಕಷ್ಟವಾದರೆ ಹಾಲು, ಹಣ್ಣು ಸೇವಿಸಬಹುದು. ಗಣಪತಿ ಪೂಜೆಯನ್ನು ಚಂದ್ರನ ಪ್ರಕಾಶದಲ್ಲಿ ಮಾಡಬೇಕು. ಅದ್ದರಿಂದ ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು.

ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು ಹಾಕಿ, ಅದರ ಮೇಲೆ ತೆಂಗಿನಕಾಯಿ ಇಟ್ಟು, ಪಕ್ಕದಲ್ಲಿ ವೀಳ್ಯದ ಎಲೆ ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಗಣಪತಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು.  

ಕಲಶ ಸ್ಥಾಪನೆ 

ನೈವೇದ್ಯಕ್ಕೆ ಕರಿಗಡುಬು, ಮೋದಕ ಮಾಡಬೇಕು. ಮೈದಾ ಹಿಟ್ಟು ,ರವೆಯನ್ನು ಕಲಸಿ ಕಣಕ (dough) ಮಾಡಿ, ಒಳಗೆ ಹೂರಣ ಸೇರಿಸಿ ಎಣ್ಣೆಯಲ್ಲಿ ಕರಿಯುತ್ತಾರೆ. ಹೂರಣ 2 ತರಹ ಮಾಡುತ್ತಾರೆ - dry (ಕೊಬ್ಬರಿ ತುರಿ, ಸಕ್ಕರೆ ,ಏಲಕ್ಕಿ) ಅಥವಾ wet (ಬೆಲ್ಲ,ಕಾಯಿ ತುರಿ, ಏಲಕ್ಕಿ). ಈ ಹಬ್ಬಕ್ಕೆ ಮಾಡುವಾಗ ಹೂರಣಕ್ಕೆ ಎಳ್ಳನ್ನು ಸೇರಿಸಬೇಕು. ನೈವೇದ್ಯಕ್ಕೆ ಕನಿಷ್ಠ 10 ಕರಿಗಡುಬು 10 ಮೋದಕಗಳನ್ನು ಮಾಡಿಕೊಳ್ಳಬೇಕು. ಪೂಜೆಯ ನಂತರ 5 ಕಡುಬು, 5 ಮೋದಕ ದಾನ ಮಾಡಿ, ಉಳಿದ 5 ಕಡುಬು, ಮೋದಕ ನೀವು ಪ್ರಸಾದವಾಗಿ ಸ್ವೀಕರಿಸಿ. ಹತ್ತಕ್ಕಿಂತ ಜಾಸ್ತಿ , ಎಷ್ಟು ಬೇಕೋ ಅಷ್ಟು ಕರಿಗಡುಬು, ಮೋದಕ ಮಾಡಿಕೊಳ್ಳಬಹುದು 

ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು. ಕಲಶ ಸ್ಥಾಪಿಸಿ , ಜೊತೆಗೆ ಗಣಪತಿ ಪಟ, ವಿಗ್ರಹವನ್ನು ಇಟ್ಟು ಪೂಜೆ ಮಾಡಿ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಕರಿಗಡುಬು, ಮೋದಕವನ್ನು ನೈವೇದ್ಯ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆಯ ನಂತರ ಊಟ ಮಾಡಬಹುದು. 

ಪೂಜೆಯ ನಂತರ 5 ಕರಿಗಡುಬು, 5 ಮೋದಕ ಮತ್ತು ಉಪಾಯಿನ ದಾನ, ದಕ್ಷಿಣೆಯನ್ನು ಸತ್ಪಾತ್ರರಿಗೆ ದಾನ ಕೊಟ್ಟು ಆಶೀರ್ವಾದ ಪಡೆಯಿರಿ. ಹೀಗೆ ೨೧ ಸಾರಿ ವ್ರತಗಳನ್ನು ಆಚರಿಸಿ ನಂತರ ಉದ್ಯಾಪನ ಮಾಡುತ್ತಾರೆ. ನಿಮ್ಮ ಇಚ್ಛೆ , ಶಕ್ತಿ ಸಾಮರ್ಥ್ಯಗಳಿಗೆ ಅನುಸಾರವಾಗಿ ಎಷ್ಟು ಸಾರಿ ಬೇಕಾದರೂ ಈ ವ್ರತವನ್ನು ಆಚರಿಸಬಹುದು. 
ಗಣಪತಿಯು ನಿಮ್ಮ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ

ಅಂಗಾರಕ ಸಂಕಷ್ಟ ಚತುರ್ಥಿ / ಅಂಗಾರಕಿ ಸಂಕಷ್ಟ ಚತುರ್ಥಿ 
ಅಂಗಾರಕ ಎಂದರೆ ಮಂಗಳ ಗ್ರಹ . ಹೀಗಾಗಿ ಮಂಗಳ ವಾರ ಬರುವ ಸಂಕಷ್ಟ ಚತುರ್ಥಿಗೆ ಈ ಹೆಸರು. ಇದು ಅಪರೂಪ. ವರ್ಷದಲ್ಲಿ ಒಂದು - ಎರಡು ಬಾರಿ ಬರಬಹುದು ಅಷ್ಟೇ. ಅಂಗಾರಕ ಸಂಕಷ್ಟ ಚತುರ್ಥಿ ಹೆಚ್ಚು ವಿಶೇಷ. ಈ ದಿನ ಪೂಜೆ ಮಾಡಿದರೆ ಶ್ರೇಷ್ಟ ಎಂಬ ನಂಬಿಕೆ.
********

ಅಂಗಾರಿಕ ಸಂಕಷ್ಠಿ.

ಅಂಗಾರಿಕ ಸಂಕಷ್ಠಿ. ಎಲ್ಲರೂ ವಿಘ್ನ ನಿವಾರಕ ಗಣೇಶನೆಂದು. ಗಣೇಶನ ಮಹಿಮೆ ಏನೂ ಹೇಳಲಿ ವರ್ಣಿಸಲು ಸಾವಿರ ನಾಲಗೆ ಗಳಿದ್ದರೂ ಸಾಲದು. ಶ್ರೀ ಗಣೇಶ ವಾಹನಗಳ ಅಧಿಪತಿ. ನೂತನ ತಂತ್ರಜ್ಞಾನ ಅಧಿಪತಿ. ಇವನೇ ರೋಗಗಳ ನಿವಾರಣೆ ಮಾಡುವ ವೈಧ್ಯನೂ ಹೌದು. ಮೂಷಿಕ ಭಯ ನಿವಾರಣೆ ಮಾಡುವವನು. ಕೃಷಿಕರ ಪಾಲಿಗೆ ಕೀಟಕ ಬಾಧೆಗಳನ್ನು ನಿವಾರಣೆ ಮಾಡುವ ಸರ್ವೋತ್ತಮ ಮುಖಿ ಗಣೇಶ. ಗಣೇಶನ ಪೂಜೆ ಮಾಡುವವರಿಗೆ ಮೂಷಿಕ ಭಯ ಇರುವುದಿಲ್ಲ. ವಿಘ್ನ ನಿವಾರಣೆ ಆಗುವುದು. ಆರೋಗ್ಯ ವಂತನಾಗಿರುವನು. ಕಲಿಯುಗ ಅಗೋಚರ ಪ್ರತ್ಯಕ್ಷ ದೇವರು.

ಇಂತಹ ಅಂಗಾರಿಕ ಸಂಕಷ್ಠಿ ಈ ದಿನ ವಿಶೇಷ. ಈ ದಿನ ಉಪವಾಸ ಮಾಡಿದರೆ ವಿಶೇಷ ಫಲ. ಹಾಗೆಯೇ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಹಾಗೂ ಪರಿಶುದ್ಧ ದೇವರ ಪ್ರಸಾದ ಭಕ್ತರಿಗೆ ವಿತರಣೆ ಮಾಡಿದರೆ ವಿಶೇಷ ಫಲ ಸಿಗುತ್ತದೆ. ಗಣೇಶನ ಮಹಿಮೆ ಅಪಾರ. ಗಣೇಶನು ವೈದ್ಯನಾಗಿ ಏನು ಫಲ ಕೊಡುವನು? ಎಂದು ಈ ಮಂತ್ರವನ್ನು ಹೇಳಿ ಹೂಗಳನ್ನು ಗರಿಕೆ ಅರ್ಪಿಸಿ ಪ್ರತಿ ಮಂತ್ರದ ನಂತರ. ಆರೋಗ್ಯ ವಂತರಾಗುವಿರಿ.

(ಡಿಜಿಟಲ್ ತಂತ್ರಜ್ಞಾನ ಆರಾಧನೆ ವಿಧಾನ ಮಾಡಿ ಮಂತ್ರ ಹೇಳಿ ಪ್ರತಿ ಮಂತ್ರದ ನಂತರ ಹೂವು ಯಾ ದರ್ಬೆ ಅರ್ಪಿಸಿ)

(೧)ಓಂ ಗಣೇಶ್ವರಾಯ ನಮಃ।
ಪಾದಂ ಪೂಜಾಯಾಮಿ ।

ಪಾದ ರೋಗ ನಿವಾರಣಂ ಕುರು ಕುರು ಸ್ವಾಹ ಎಂದು ನಿಮ್ಮ ಬಲಗೈ ಹೆಬ್ಬೆರಳಿನ ತುದಿ ಯನ್ನು ಬಲಕೈಯ ಕಿರಿ ಬೆರಳು ತುದಿ ಗಂಟು ತಾಗಿಸಿ ಪಟಿಸಿ. ಇದರಿಂದ ಪಾದ ರೋಗ ನಿವಾರಣೆ ಆಗುವುದು.

(೨)ಓಂ ವಿಘ್ನ ರಾಜಾಯ ನಮಃ ।
ಜಾನೂನಿ ಪೂಜಾಯಾಮಿ ।

ಜಾನೂನಿ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಕಿರಿ ಬೆರಳು ಮಧ್ಯೆ ಗಂಟು ಇದಕ್ಕೆ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ ಪಟಿಸಿ. ಇದರಿಂದ ಮೊಣಕಾಲು ನೋವು ಗುಣ ಆಗುವುದು.

(೩)ಓಂ ಅಖುವಾಹನಾಯ ನಮಃ ।
ಊರೂ ಪೂಜಾಯಾಮಿ ।

ಊರೂ ರೋಗ ನಿವಾರಣಂ ಕುರು ಕುರು ಸ್ವಾಹ. ಎಂದು ಬಲಕೈಯ ಕಿರಿ ಬೆರಳು ಬುಡದ ಗಂಟಿಗೆ ಬಲಕೈಯ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ ಪಟಿಸಿ.
(ತೊಡೆ ಸಂಬಂಧ ರೋಗ ನಿವಾರಣೆ ಆಗುವುದು)

(೪)ಓಂ ಹೇರಾಂಭಾಯ ನಮಃ ।
ಕಟಿಂ ಪೂಜಾಯಾಮಿ ।

ಕಟಿ ರೋಗ ನಿವಾರಣಂ ಕುರು ಕುರು ಸ್ವಾಹ ।

ಎಂದು ಬಲಕೈಯ ಉಂಗುರ ಬೆರಳು ಬುಡದ ಗಂಟಿಗೆ ಬಲಕೈಯ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ ಪಟಿಸಿ.
(ಸೊಂಟನೋವು ಗುಣ ಆಗುವುದು)

(೫)ಓಂ ಕಾಮಾರಿಸೂನವೇ ಮಃ ।
ನಾಭಿಂ ಪೂಜಾಯಾಮಿ।

ನಾಭಿಯಾದಿ ಮೂತ್ರಾದಿ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಉಂಗುರ ಬೆರಳು ಮಧ್ಯೆ ಗಂಟು ಇದಕ್ಕೆ ಸ್ಪರ್ಶ ಮಾಡಿ ಪಟಿಸಿ.

(೬)ಓಂ ಲಂಬೋದರಾಯ ನಮಃ।
ಉದರಂ ಪೂಜಾಯಾಮಿ ।

ಉದರಾದಿ ಸರ್ವ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಉಂಗುರ ಬೆರಳು ತುದಿ ಗಂಟು ಇದಕ್ಕೆ ತಾಗಿಸಿ ಪಟಿಸಿ.ಹೊಟ್ಟೆ ಸಂಬಂಧ ರೋಗ ನಿವಾರಣೆ ಆಗುವುದು.

(೭)ಓಂ ಗಣನಾಯಕಾಯ ನಮಃ ।
ಹೃದಯಂ ಪೂಜಾಯಾಮಿ ।

ಹೃದಯಾದಿ ಸರ್ವ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಹೇಳಿ ಮಧ್ಯೆ ಬೆರಳ ತುದಿ ಗಂಟು ಇದಕ್ಕೆ ತಾಗಿಸಿ ಪಟಿಸಿ.ಹೃದಯ ಸಂಬಂಧ ರೋಗ ನಿವಾರಣೆ ಆಗುವುದು.

(೮)ಓಂ ಸ್ಕಂಧ ಗ್ರಜಾಯ ನಮಃ ।
ಸ್ಕಂಧಂ ಪೂಜಾಯಾಮಿ ।

ಬಾಹು ರೋಗ ನಿವಾರಣಂ ಕುರು ಕುರು ಸ್ವಾಹ. ಎಂದು ಸ್ಮರಿಸಿ ಮಧ್ಯೆ ಬೆರಳ ಮಧ್ಯ ಗಂಟು ಇದಕ್ಕೆ ಸ್ಪರ್ಶ ಮಾಡಿ ಪಟಿಸಿ. ಕೈಗಳ ಮೇಲ್ಭಾಗ ನೋವು ಗುಣ ಆಗುವುದು.

(೯)ಓಂ ಸ್ಥೂಲಕಂಠಾಯ ನಮಃ ।
ಕಂಠಂ ಪೂಜಾಯಾಮಿ ।

ಕಂಠಾದಿ ಸರ್ವ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಸ್ಮರಿಸಿ ಮಧ್ಯೆ ಬೆರಳ ಬುಡದ ಗಂಟಿಗೆ ಬಲಕೈಯ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ. ಇದರಿಂದ ಕುತ್ತಿಗೆ ಗಂಟಲು ಸಂಬಂಧ ರೋಗ ನಿವಾರಣೆ ಆಗುವುದು.

(೧೦)ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ ।
ನೇತ್ರಂ ಪೂಜಾಯಾಮಿ ।

ನೇತ್ರ ರೋಗ ನಿವಾರಣಂ ಕುರು ಕುರು ಸ್ವಾಹ ।ಎಂದು ಸ್ಮರಿಸಿ ತೋರು ಬೆರಳ ಬುಡದ ಗಂಟಿಗೆ ತಾಗಿಸಿ ಪಟಿಸಿ. ಇದರಿಂದ ಕಣ್ಣುಗಳು ಸಂಬಂಧ ರೋಗ ನಿವಾರಣೆ ಆಗುವುದು.

(೧೧)ಓಂ ಗಜವಕ್ತ್ರಾಯ ನಮಃ ।
ವಕ್ತ್ರಂ ಪೂಜಾಯಾಮಿ ।

ವಕ್ತ್ರಂ ಸಂಬಂಧ ರೋಗ ನಿವಾರಣಂ ಕುರು ಕುರು ಸ್ವಾಹ ಎಂದು ಸ್ಮರಿಸಿ ತೋರು ಬೆರಳ ಮಧ್ಯ ಗಂಟು ಇದಕ್ಕೆ ಸ್ಪರ್ಶ ಮಾಡಿ.

ಮುಖಕ್ಕೆ ಸಂಬಂಧ ರೋಗ ನಿವಾರಣೆ ಆಗುವುದು.

(೧೨)ಓಂ ಸರ್ವೇಶ್ವರಾಯ ನಮಃ ।
ಶಿರಃ ಪೂಜಾಯಾಮಿ ।

ಶಿರ ರೋಗ ನಿವಾರಣಂ ಕುರು ಕುರು ಸ್ವಾಹ ಎಂದು ಸ್ಮರಿಸಿ ತೋರು ಬೆರಳ ತುದಿ ಗಂಟು ಸ್ಪರ್ಶ ಮಾಡಿ. ತಲೆ ನೋವು ನಿವಾರಣೆ ಆಗುವುದು.

ಕೊನೇಯದಾಗಿ ಎರಡು ಕೈಗಳ ಬೆರಳು ಗಳನ್ನ ಜೋಡಿಸಿ

ಓಂ ಶ್ರೀ ಮನ್ಮಹಾಗಣಪತಾಯೇ ನಮಃ ।
ಸರ್ವಾಂಗಾಣಿ ಪೂಜಾಯಾಮಿ ।

ಸರ್ವ ವ್ಯಾಧಿಃನಿವಾರಣಂ ಕುರು ಕುರು ಸ್ವಾಹ ।ಎಂದು ಸ್ಮರಿಸಿ. ಎಲ್ಲಾ ರೋಗಗಳು ಗುಣ ಆಗುವುವು.

ಪ್ರತಿ ಮಂತ್ರ ಪಟಿಸಿ ನಂತರ ಹೂವನ್ನು ಅರ್ಪಿಸಿ. ಯಾ ಗರಿಕೆ ಯನ್ನು ಸಹಾ ಅರ್ಪಿಸಿ. ವಿಶೇಷ ಫಲ ಸಿಗುತ್ತದೆ.

ಇದೇ ರೀತಿ ದೇಹದ ಯಾವುದೇ ಭಾಗದ ರೋಗ ನಿವಾರಣೆ ಗೂ ಸಹಾ ವಿಶೇಷ ಮಂತ್ರ ಗಳು ಇವೆ .
ಓಂ ಶ್ರೀ ಗಣೇಶಾಯ ನಮಃ .

***

ಅಷ್ಟೋತ್ತರಶತನಾಮಾವಳಿ 
ll ಶ್ರೀ ಸಂಕಷ್ಟಹರಗಣಪತಿ ಅಷ್ಟೋತ್ತರ ಶತನಾಮಾವಳಿ ll 

ಓಂ ಸಂಕಷ್ಟಹರಾಯ ನಮಃ
ಓಂ ಸಂವೃತಪಾರ್ಷ್ಣಿಕಾಯ ನಮಃ
ಓಂ ಸಂಸಾರವೈದ್ಯಾಯ ನಮಃ 
ಓಂ ಸಂವಿದೇ ನಮಃ
ಓಂ ಸುರೂಪಾಯ ನಮಃ
ಓಂ ಸರ್ವನೇತ್ರಾಧಿವಾಸಾಯ ನಮಃ
ಓಂ ಸ್ಮರಪ್ರಾಣದೀಪಕಾಯ ನಮಃ
ಓಂ ಸರ್ವಾತ್ಮನೇ ನಮಃ
ಓಂ ಸರ್ವದೇವಾತ್ಮನೇ ನಮಃ
ಓಂ ಸತ್ಯಶಿರೋರುಹಾಯ ನಮಃ 10

ಓಂ ಸರ್ಪಾಂಗುಲೀಕಾಯ ನಮಃ
ಓಂ ಸೋಮಾರ್ಕಘಂಟಾಯ ನಮಃ
ಓಂ ಸೃಷ್ಟಿಲಿಂಗಾಯ ನಮಃ
ಓಂ ಸದ್ಭಕ್ತಧ್ಯಾನನಿಗಡಾಯ ನಮಃ
ಓಂ ಸ್ವೋಜಸೇ ನಮಃ
ಓಂ ಸಕಾಮದಾಯಿನೀಪೀಠಾಯ ನಮಃ  
ಓಂ ಸ್ಫುರದುಗ್ರಾಸನಾಶ್ರಯಾಯ ನಮಃ 
ಓಂ ಸತ್ಯಾನಿತ್ಯಾವತಂಸಿತಾಯ ನಮಃ
ಓಂ ಸವಿಘ್ನನಾಶಿನೀಪೀಠಾಯ ನಮಃ
ಓಂ ಸರ್ವಶಕ್ತ್ಯಮ್ಬುಜಾಶ್ರಯಾಯ ನಮಃ 20

ಓಂ ಸ್ಥೂಲೋರವೇ ನಮಃ
ಓಂ ಸ್ಥೂಲಕುಕ್ಷಯೇ ನಮಃ
ಓಂ ಸ್ತಬಕಾಕಾರಕುಮ್ಭಾಗ್ರಾಯ ನಮಃ
ಓಂ ಸರ್ಪಹಾರಕಟಿಸೂತ್ರಾಯ ನಮಃ
ಓಂ ಸರ್ಪಯಜ್ಞೋಪವೀತಯೇ ನಮಃ 
ಓಂ ಸರ್ಪಕೋಟೀರಕಟಕಾಯ ನಮಃ
ಓಂ ಸರ್ಪಗ್ರೈವೇಯಕಾಂಗದಾಯ ನಮಃ 
ಓಂ ಸರ್ಪಕಕ್ಷ್ಯೋದರಾಬನ್ಧಾಯ ನಮಃ 
ಓಂ ಸರ್ಪರಾಜೋತ್ತರೀಯಕಾಯ ನಮಃ
ಓಂ ಸರ್ವಾವಯವಸಮ್ಪೂರ್ಣಸರ್ವ
ಲಕ್ಷಣಲಕ್ಷಿತಾಯ ನಮಃ 30

ಓಂ ಸರ್ವಾಭರಣಶೋಭಾಢ್ಯಾಯ ನಮಃ
ಓಂ ಸರ್ವಶೋಭಾಸಮನ್ವಿತಾಯ ನಮಃ 
ಓಂ ಸರ್ವಮಂಗಲಮಾಂಗಲ್ಯಾಯ ನಮಃ 
ಓಂ ಸರ್ವಕಾರಣಕಾರಣಾಯ ನಮಃ
ಓಂ ಸರ್ವದೈಕಕರಾಯ ನಮಃ
ಓಂ ಸರೋಜಭೃತೇ ನಮಃ
ಓಂ ಸ್ವದನ್ತಭೃತೇ ನಮಃ
ಓಂ ಸಪ್ರಮೋದಪ್ರಮೋದನಾಯ ನಮಃ 
ಓಂ ಸಮೇಧಿತಸಮೃದ್ಧಿಶ್ರಿಯೇ ನಮಃ
ಓಂ ಸೇವೋನ್ನಿದ್ರಮದದ್ರವಾಯ ನಮಃ 40

ಓಂ ಸರ್ವಸದ್ಗುರುಸಂಸೇವ್ಯಾಯ ನಮಃ
ಓಂ ಸುಮಂಗಲಸುಮಂಗಲಾಯ ನಮಃ
ಓಂ ಸುಭಗಾಸಂಶ್ರಿತಪದಾಯ ನಮಃ
ಓಂ ಸರಸ್ವತ್ಯಾಶ್ರಯಾಯ ನಮಃ
ಓಂ ಸ್ವಾಹಾಶಕ್ತಯೇ ನಮಃ
ಓಂ ಸಕೀಲಕಾಯ ನಮಃ
ಓಂ ಸರ್ವಕಾಲಿಕಸಂಸಿದ್ಧಯೇ ನಮಃ
ಓಂ ಸರ್ವಜ್ಞಾಯ ನಮಃ
ಓಂ ಸರ್ವಭೇಷಜಭೇಷಜಾಯ ನಮಃ
ಓಂ ಸೃಷ್ಟಿಸ್ಥಿತಿಲಯಕ್ರೀಡಾಯ ನಮಃ 50

ಓಂ ಸುರಕುಂಜರಭೇದನಾಯ ನಮಃ 
ಓಂ ಸಿನ್ದೂರಿತಮಹಾಕುಮ್ಭಾಯ ನಮಃ 
ಓಂ ಸದಸದ್ ವ್ಯಕ್ತಿದಾಯಕಾಯ ನಮಃ 
ಓಂ ಸಾಕ್ಷಿಣೇ ನಮಃ
ಓಂ ಸಮುದ್ರಮಥನಾಯ ನಮಃ
ಓಂ ಸ್ವಸಂವೇದ್ಯಾಯ ನಮಃ
ಓಂ ಸ್ವದಕ್ಷಿಣಾಯ ನಮಃ
ಓಂ ಸ್ವತನ್ತ್ರಾಯ ನಮಃ
ಓಂ ಸತ್ಯಸಂಕಲ್ಪಾಯ ನಮಃ
ಓಂ ಸಾಮಗಾನರತಾಯ ನಮಃ 60

ಓಂ ಸುಖಿನೇ ನಮಃ
ಓಂ ಸೌಭಾಗ್ಯವರ್ಧನಾಯ ನಮಃ
ಓಂ ಸರ್ವವಶ್ಯಕರಾಯ ನಮಃ
ಓಂ ಸಪ್ತರ್ಷಿಭ್ಯೋ ನಮಃ
ಓಂ ಸೃಷ್ಟಯೇ ನಮಃ
ಓಂ ಸದಾಶಿವಾಯ ನಮಃ
ಓಂ ಸಾಧ್ಯೇಭ್ಯೋ ನಮಃ
ಓಂ ಸಮುದ್ರೇಭ್ಯೋ ನಮಃ
ಓಂ ಸರಿದ್ಭ್ಯೋ ನಮಃ
ಓಂ ಸ್ಮೃತ್ಯೈ ನಮಃ 70

ಓಂ ಸೌರಾಯ ನಮಃ
ಓಂ ಸತೇ ನಮಃ
ಓಂ ಸಚೇತನಾಯ ನಮಃ
ಓಂ ಸುಖಾಯ ನಮಃ
ಓಂ ಸತ್ಯಾಯ ನಮಃ
ಓಂ ಸ್ವಸ್ತಿನೆ ನಮಃ
ಓಂ ಸ್ವಧಾಯ ನಮಃ
ಓಂ ಸ್ವಾಹಾಯ ನಮಃ
ಓಂ ಸಪ್ತಪಾತಾಲಚರಣಾಯ ನಮಃ
ಓಂ ಸಪ್ತದ್ವೀಪೋರುಮಂಡಲಾಯ ನಮಃ 80

ಓಂ ಸಪ್ತಸ್ವರ್ಲೋಕಮುಕುಟಾಯ ನಮಃ 
ಓಂ ಸಪ್ತಸಾಪ್ತಿವರಪ್ರದಾಯ ನಮಃ
ಓಂ ಸಪ್ತಾಂಗರಾಜ್ಯಸುಖದಾಯ ನಮಃ
ಓಂ ಸಪ್ತರ್ಷಿಗಣಮಂಡಿತಾಯ ನಮಃ
ಓಂ ಸಪ್ತಛನ್ದೋನಿಧಯೇ ನಮಃ
ಓಂ ಸಪ್ತಹೋತ್ರೇ ನಮಃ
ಓಂ ಸಪ್ತಸ್ವರಾಶ್ರಯಾಯ ನಮಃ
ಓಂ ಸಪ್ತಾಬ್ಧಿಕೇಲಿಕಾಸಾರಾಯ ನಮಃ
ಓಂ ಸಪ್ತಮಾತೃನಿಷೇವಿತಾಯ ನಮಃ
ಓಂ ಸಪ್ತಛನ್ದೋ ಮೋದಮದಾಯ ನಮಃ 90

ಓಂ ಸಪ್ತಚಂದ್ರಮಖಪ್ರಭವೇ ನಮಃ
ಓಂ ಸಾಮಪಂಚದಶಾಯ ನಮಃ
ಓಂ ಸಪ್ತದಶಾಯ ನಮಃ
ಓಂ ಸಪ್ತದಶಾಕ್ಷರಾಯ ನಮಃ
ಓಂ ಸಹಸ್ರಪತ್ರನಿಲಯಾಯ ನಮಃ
ಓಂ ಸಹಸ್ರಫಣಭೂಷಣಾಯ ನಮಃ
ಓಂ ಸಹಸ್ರಶೀರ್ಷ್ಣೇ ಪುರುಷಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ಸಹಸ್ರಪದೇ ನಮಃ
ಓಂ ಸಾಮಬೃಂಹಿತಾಯ ನಮಃ 100

ಓಂ ಸ್ವರ್ಣವರ್ಣಾಯ ನಮಃ
ಓಂ ಸ್ವರ್ಧುನೀಭವಾಯ ನಮಃ
ಓಂ ಸರ್ವದುಃಖಪ್ರಶಮನಾಯ ನಮಃ
ಓಂ ಸರ್ವವಿಘ್ನವಿನಾಶಕಾಯ ನಮಃ
ಓಂ ಸರ್ವಲಕ್ಷಣಸಮ್ಪನ್ನಾಯ ನಮಃ
ಓಂ ಸಹಸ್ರನಾಮ ಸಂಸ್ತುತ್ಯಾಯ ನಮಃ
ಓಂ ಸಹಸ್ರಾಕ್ಷಬಲಾಪಹಾಯ ನಮಃ
ಓಂ ಸಪ್ತಕೋಟಿಮಹಾಮನ್ತ್ರಮನ್ತ್ರಿತಾವ
ಯವದ್ಯುತಯೇ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಸಂಕಷ್ಟಹರಗಣಪತಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
#ಅಷ್ಟೋತ್ತರಶತನಾಮಾವಳಿ
***






No comments:

Post a Comment