SEARCH HERE

Tuesday 1 January 2019

ಮಂಗಳಗೌರಿ ವ್ರತ mangala gowri vruta shravana masa every tuesday



Mangalagouri


How did Parvathi got the name Gauri? 
Gowri is one among the numerous names of Goddess Parvati. There is an interesting incident mentioned in the Matsya Purana which narrates how Goddess Parvati got the name “Gauri”    Parvati originally had a dark complexion. Once Shiva addressed Goddess Parvati as ‘Kali.’ The word ‘kali’ also means dark and Parvati thought Shiva was referring to her skin color. (Please note that Goddess Kali is also one of the incarnations of Goddess Shakti).

Goddess Parvati felt that addressing her as ‘kali’ was an insult and she decided to meditate on Brahma, the creator, and change her complexion.  Parvati continued her tapas for several days and finally, Brahma, granted her the wish and she became fair. After this incident, Goddess Parvati was also known as Goddess Gouri and the word Gowri also means fair.

When to do this Vratha ?

On Every Tuesday of Shravana Maasa

Who has to do ? –
Recently married ladies for the first five years after their marriage.

 
vivaahaat prathamam varShamaarabhya ApanchavarShakam |
shraavaNE maasi bhoumEShu chaturShu vratamaacharEt |
vrataraajanaamaasya mangaLaagourIvratam paapapraNaashanam|

Where to be done ? –

In the first year of Marriage at the Mathru house and in the next years to be done in the husband’s house.

prathamE vatsarE maatu: gEhE kartavyamEva cha |
tatO bhatRugRuham kaaryamavashyam strIbhiraadaraat|
man aniShTanichayam gamayati iShTaartham cha laatIti | mangaLaa |
mangaLaa cha saa gourI cha mangaLaa gourI ||
Who is the God/Goddess for this Vratha :

This vratha is done to please Mangala Gouri and Mano Niyamaka Rudra Devaru. Mangala Gouri is the pathni of Rudradevaru.  Her other names are parvathi, uma, etc.

- NARAHARI SUMADHWA
***

ಮಂಗಳಗೌರಿ ವ್ರತ


ಮಂಗಳ – ಮಂ ಅಂದರೆ ಅನಿಷ್ಟಸಮೂಹಗಳಾದ ಪತಿಯ ಅನಾರೋಗ್ಯ, ಪತಿಯ ಆಯಸ್ಸು ಹೋಗುವಿಕೆ ಮೊದಲಾದವು ಗ  ಅಂದರೆ ಹೋಗಲಾಡಿಸಿ ಳಾ ಭರ್ತೃವಿಗೆ ಆಯುರಾರೋಗ್ಯ  ಕೊಡುವವರು. 

ಶ್ರೀಕೃಷ್ಣ ಪರಮಾತ್ಮ ಧರ್ಮರಾಜನಿಗೆ ಈ ವ್ರತದ ಕಥೆಯನ್ನು ಹೇಳುತ್ತಾ ಈ ವ್ರತವನ್ನು ಸ್ತ್ರೀಯರಿಗೆ ವೈಧವ್ಯ ಬರದಂತೆ ತಡೆಯಬಲ್ಲ ವ್ರತ ಎಂದಿದ್ದಾನೆ.

ಮಂಗಳಗೌರಿ ವ್ರತವನ್ನು ಎಂದು ಆಚರಿಸುತ್ತಾರೆ ?

ಶ್ರಾವಣ ಮಾಸದ ಪ್ರತಿ ಮಂಗಳವಾರ ಆಚರಿಸುತ್ತಾರೆ.

ಮಂಗಳಗೌರಿ ವ್ರತವನ್ನು ಯಾರು ಆಚರಿಸಬೇಕು ?

ವಿವಾಹಿತ ಸ್ತ್ರೀಯರು ಮೊದಲ ಐದು ವರ್ಷಗಳ ಕಾಲ ಆಚರಿಸಬೇಕು.

ಈ ವ್ರತವನ್ನು ಎಲ್ಲಿ ಮಾಡತಕ್ಕದ್ದು ?

ಈ ವ್ರತವನ್ನು ಮೊದಲ ವರ್ಷ ತವರುಮನೆಯಲ್ಲೂ ಮುಂದಿನ ನಾಲ್ಕು ವರ್ಷ ಪತಿಯ ಗೃಹದಲ್ಲೂ ಮಾಡುವ ಕ್ರಮವಿದೆ.

ಯಾರನ್ನು ಕುರಿತು ಈ ವ್ರತವನ್ನು ಮಾಡಲಾಗುತ್ತದೆ?

ಈ ವ್ರತವನ್ನು ಗೌರಿ ಅಂದರೆ ಪಾರ್ವತೀ ದೇವಿಯ ಕುರಿತು ಮಾಡಲಾಗುತ್ತದೆ.

 ಚಿಂತನೆ – ಮಂಗಳಗೌರಿಯು ಪರಮೇಶ್ವರನ ಜೊತೆಯಲ್ಲಿ ಸದಾ ಇರುವವಳಾಗಿದ್ದು, ಭಕ್ತರ ಕಾಮನೆಗಳನ್ನು ಶೀಘ್ರ ಪರಿಹರಿಸುವಳಾಗಿದ್ದು, ನಮಗೆ ಜ್ಞಾನಪ್ರದಳಾಗಿ, ನಮ್ಮ ಕುಟುಂಬದ ಎಲ್ಲರಿಗೂ ಜ್ಞಾನ, ಭಕ್ತಿ, ಸತ್ಕಾರ್ಯದಲ್ಲಿ ಆಸಕ್ತಿ, ಸೌಭಾಗ್ಯದ್ರವ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಬೇಕು.

ಈ ವ್ರತ ಕಾಲದಲ್ಲಿ ಬಸುರಿ ಬಾಣಂತಿಯಾಗಿದ್ದರೆ ಆಚರಣೆ ಹೇಗೆ?

ಬಸುರಿಯಾಗಿ ಆರುತಿಂಗಳಾದ ನಂತರ ಮತ್ತು ಬಾಣಂತಿಯು ಮೊದಲ ಸಲ ದೇವಸ್ಥಾನಕ್ಕೆ ಹೋಗುವ ಮೊದಲು ಈ ವ್ರತವನ್ನು ಮಾಡುವಂತಿಲ್ಲ. ಅಂದರೆ ಆ ವರ್ಷ ಲೆಕ್ಕಕ್ಕೆ ಬರುವುದಿಲ್ಲ.

ಅಕಸ್ಮಾತ್ ರಜಸ್ವಲೆಯಾದರೋ / ಸೂತಕ ಬಂದರೋ ಏನು ಮಾಡಬೇಕು ?

ರಜಸ್ವಲೆಯಾದವರು ಮಂಗಳವಾರದ ಬದಲು ಶುಕ್ರವಾರ ಐದುನೀರು ಆಗಿದ್ದರೆ ಮಾಡಬಹುದು.   ಸೂತಕ/ವೃದ್ಧಿ ಸಮಯದಲ್ಲಿ ಮಾಡದವರಿಗೂ ತೊಂದರೆಯಿಲ್ಲ ಮುಂದಿನ ಮಂಗಳವಾರ ಶುಭವಾಗಿದ್ದರೆ (ಸೂತಕ ಮುಗಿದಿದ್ದರೆ) ಮಾಡಬಹುದು..


ಮಂಗಳಗೌರಿ – ಪಾರ್ವತಿಗೆ ಈ ಹೆಸರು ಬಂದಿದ್ದು ಹೇಗೆ ?

ಮತ್ಸ್ಯ ಪುರಾಣದಲ್ಲಿ ಪಾರ್ವತಿ ದೇವಿಗೆ ಗೌರಿ ಹೆಸರು ಬಂದ ಕಥೆಯಿದೆ. ಪಾರ್ವತಿ ಮೂಲತಃ ಕಪ್ಪು ಬಣ್ಣದವಳಾಗಿರುತ್ತಾಳೆ. ಒಮ್ಮೆ ರುದ್ರದೇವರು ಪಾರ್ವತಿಯನ್ನು “ಕಾಳಿ” ಎಂದು ಸಂಬೋಧಿಸುತ್ತಾರೆ. ಕಾಳಿ ಎಂಬ ಪದ ಕತ್ತಲು ಮತ್ತು ಕಪ್ಪು ಬಣ್ಣವನ್ನು ಹೇಳುತ್ತದೆ. ಪಾರ್ವತಿ ಕಾಳಿ ಎಂದು ಕರೆಯಲ್ಪಟ್ಪದ್ದನ್ನು ಅವಹೇಳನ ಎಂದು ಭಾವಿಸಿ ಬ್ರಹ್ಮನ ಕುರಿತು ತಪಸ್ಸು ಮಾಡಿ ತನ್ನ ಬಣ್ಣವನ್ನು ಬದಲಿಸುವಂತೆ ಕೋರಿದಳು. ಅವಳ ತಪಸ್ಸಿಗೆ ಮೆಚ್ಚಿದ ಚತುರ್ಮುಖನು ಹಾಗೆಯೇ ಅವಳ ವರ್ಣವನ್ನು ಬದಲಿಸಿದನು. ಹೀಗೆ ಬದಲಾದ ಬಣ್ಣದಿಂದ ಬಂದ ಹೆಸರು ಗೌರಿ ಅರ್ಥಾತ್ ಬಿಳಿ ಬಣ್ಣ ಅಥವಾ ಸುಂದರ.

- NARAHARI SUMADHWA
****

ಮದುವೆಯಾದ ಮೊದಲ ವರ್ಷ - ಹೆಣ್ಣು ಮಗಳಿಗೆ ಸಂಬಂಧಿಸಿದ ಪೂಜೆ 
 
ಮದುವೆಯಾದ ಮೊದಲನೇ ವರ್ಷದ ಆಷಾಢ ಮಾಸದಲ್ಲಿ ಅತ್ತೆಯ ಜೊತೆಯಲ್ಲಿ ಸೊಸೆಯಿರಬಾರದೆಂಬ ಸಂಪ್ರದಾಯವಿದೆ. ತವರುಮನೆಗೆ ಹೋಗಿರುವ ಸೊಸೆ ಅಲ್ಲೇ ದಿವಸೀಗೌರಿ ವ್ರತವನ್ನು ಆಚರಿಸಬೇಕು. ಮೊದಲ ವರ್ಷದ ಭೀಮನ ಅಮಾವಾಸ್ಯೆ ದಿನ ಗೌರೀಪೂಜೆ ಮಾಡುವ ಮೊದಲು ಆಷಾಢ ಬಹುಳ ದ್ವಾದಶಿ ಸಂಜೆ ಗೌರೀಪೂಜೆಯನ್ನು ಮಾಡಬೇಕು.

ಅಮಾವಾಸ್ಯೆಯಂದು ಮಂಗಳಗೌರಿ ಪೂಜೆಯನ್ನು ಪ್ರಾರಂಭ ಮಾಡುವುದು ತರವಲ್ಲ ಎಂದು ಹಿರಿಯರು ಆಷಾಢ ಬಹುಳ ದ್ವಾದಶಿಯಂದು ಪ್ರದೋಷ ಸಮಯದಲ್ಲಿ ಪೂಜೆಯನ್ನು ಮಾಡುವ ಸಂಪ್ರದಾಯ ಹಾಕಿದ್ದಾರೆ. 

 ದ್ವಾದಶಿಯಂದು ಮಂಗಳವಾರ ಇರಬೇಕೆಂಬ ನಿಯಮವಿಲ್ಲ. ಪ್ರದೋಷ ಕಾಲದಲ್ಲಿ ಶಿವ ಪಾರ್ವತಿಯ ವಿಶೇಷ ಸಾನ್ನಿಧ್ಯ ಹೊಂದಿರುತ್ತಾರೆ, ಆದ್ದರಿಂದ ಪ್ರದೋಷ ಕಾಲದಲ್ಲಿ ಮಾಡುವ ಸಂಪ್ರದಾಯವಿದೆ,

ಈದಿನ ಸೊಸೆ ತವರು ಮನೆಯಲ್ಲಿರುವುದರಿಂದ ಅತ್ತೆಯಾದವಳು ಬೀಗಿತ್ತಿಯ ಮನೆಗೇ ಬಂದು ಪೂಜೆಯನ್ನು ಮಾಡಿಸಬೇಕು. ಮಂಗಳಗೌರಿ ವ್ರತವನ್ನು ಕೂಡ ಆಷಾಢ ಬಹುಳ ದ್ವಾದಶಿ ಮಾಡಬೇಕು.

 ಜೊತೆಗೆ ದಿವಸೀಗೌರಿ ಪೂಜೆಯನ್ನೂ ಮಾಡಬೇಕು.


ವಿಧಾನ :. ಒಂದು ಪಾತ್ರೆಯಲ್ಲಿ ತೆಂಗಿನಕಾಯಿ, ಅಕ್ಕಿ, ಒಣಕೊಬ್ಬರಿ, ಬಟ್ಟಲಡಿಕೆ, ಇವುಗಳನ್ನು ತುಂಬಿ ಸೊಸೆಗೆ ನೀಡಬೇಕು. ಮರದ ಬಾಗಿನ ಕೊಡಬೇಕು. ಸೊಸೆಯ ಬೀಗಿತ್ತಿಗೂ ಸೀರೆಯನ್ನು ರವಿಕೆ ಸಹಿತ ನೀಡಬೇಕು.
ಆಷಾಢ ಬಹುಳ ದ್ವಾದಶಿ ಸಂಜೆ ಪೂಜೆ ಗೌರಿ ಪೂಜೆ ನಂತರ ಬ್ರಾಹ್ಮಣ ಮುತ್ತೈದೆಯರಿಗೆ ಭಕ್ಷ್ಯಸಹಿತ ಫಲಾಹಾರ ಮಾಡಿಸಬೇಕು. ನಂತರದಲ್ಲಿ ಮಂಗಳಗೌರಿಯ ಕಥೆಯನ್ನು ಹೇಳಬೇಕು / ಕೇಳಬೇಕು.

ಮುಂದೆ ಆಷಾಢ ಅಮಾವಾಸ್ಯೆ ದಿನ ಭೀಮನ ಅಮಾವಾಸ್ಯೆ ವ್ರತವನ್ನೂ ಮುಂದಿನ ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳಗೌರಿ ವ್ರತವನ್ನೂ ಮಾಡಬೇಕು.

ಸಂಗ್ರಹ - ನರಹರಿ ಸುಮಧ್ವ
***
ವಿಷ್ಣುಸ್ಮುತಿ ವಿಹೀನಾಂ ತು ಪೂಜಾ ಸ್ಯಾದಾಸುರೀ ಮತಾ |
ಗೃಹ್ಣಂತಿ ದೇವತಾ ನೈತಾಂ ತತ: ಸ್ಯಾದ್ ದೇಶ ವಿಪ್ಲವ: |
ಸಂಸ್ಕೃತೋ ಭಗವಾನ್ ವಿಷ್ಣು: ಸರ್ವಮಂಗಲಮಂಗಲ: |
ಸಮಸ್ತಾಭೀಷ್ಟದಾಯೀ ಸ್ಯಾತ್ ತೇನ ಧ್ಯೇಯೋ ಅಖಿಲೈ:ಜನೈ: |

ಆಚಮನ – ಕೇಶವಾಯ ಸ್ವಾಹ, ನಾರಾಯಣಾಯ ಸ್ವಾಹ, ಮಾಧವಾಯ ಸ್ವಾಹ.
ಗೋವಿಂದಾಯ ನಮ:……………………………………….ಶ್ರೀ ಹರಿಯೇ ನಮ :

ಅದ್ಯ ಪೂರ್ವೋಚ್ಚರಿತ ಏವಂಗುಣ ವಿಶೇಷಣ ವಿಶಿಷ್ಟಾಯಾಂ, ಶುಭತಿಥೌ, __ಸಂವತ್ಸರೇ, ದಕ್ಷಿಣಾಯಣೇ, ಶ್ರಾವಣಮಾಸೇ, ___ ಪಕ್ಷೇ,___ತಿಥೌ, ಭೌಮವಾಸರೇ, ಮಮ ಪುತ್ರ ಪೌತ್ರಾಭಿವೃದ್ದರ್ಥಂ, ಅವೈಧವ್ಯ, ಆಯುರಾರೋಗ್ಯಾದಿ ಸಕಲಾಭೀಷ್ಟ ಸಿದ್ಧಿದ್ವಾರಾ, ಶ್ರೀ ಶಿವ ಮಂಗಳಾಗೌರ್ಯಂತರ್ಗತ ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಜಯಾಪತಿ ಸಂಕರ್ಷಣ ಪ್ರೀತ್ಯರ್ಥಂ, ಪಂಚವರ್ಷ ಪರ್ಯಂತಂ ಮಂಗಲಗೌರೀವ್ರತಂ ಅಹಂ ಕರಿಷ್ಯೇ

ಆಗಮಾರ್ಥಂತು ದೇವಾನಾಂ ಗಮನಾರ್ಥಂ ತು ರಕ್ಷಸಾಂ |
ಕುರು ಘಂಟಾರವಂ ತತ್ರ ದೇವತಾಹ್ವಾನಲಾಂಛನಂ |

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ |
ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ |
ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ |  ಗಣಪತಿ ಅನುಗ್ರಹಸಿದ್ಧಿರಸ್ತು|

ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧೃತ: ಕರೇ |
ನಮಿತ: ಸರ್ವದೇಶೈಶ್ಚ ಪಾಂಚಜನ್ಯ ನಮೋಸ್ತುತೇ
***


|| ಮಂಗಳಗೌರಿ ವ್ರತ ||

ವಿವಾಹಾ ನಂತರಂ ಪಂಚವರ್ಷಾಣಿ
ವ್ರತಮಾಚರೇತ್ |
ನಾಮಸ್ಯ ಮಂಗಳಗೌರೀ ವ್ರತಂ ಪಾಪಪ್ರಣಾಶನಮ್ ||

ಶ್ರಾವಣಮಾಸದಲ್ಲಿ ಬರುವ ನಾಲ್ಕು ಅಥವಾ ಐದು ಮಂಗಳವಾರಗಳಲ್ಲಿ ಈ ಮಂಗಳಗೌರಿವ್ರತವನ್ನು ಆಚರಿಸಬೇಕು .ನೂತನವಾಗಿ ವಿವಾಹವಾದ ಸ್ತ್ರೀಯರು ವಿವಾಹವಾದ ವರ್ಷದಿಂದಾರಂಭಿಸಿ  ಸತತವಾಗಿ ಐದು ವರ್ಷಗಳ ಕಾಲ ಈ ವ್ರತವನ್ನು ಆಚರಿಸಬೇಕು .

ಪ್ರಥಮೇ ವತ್ಸರೇ ಮಾತುಃ ಗೇಹೇ ಕರ್ತವ್ಯಮೇವ ಚ |
ತತೋ ಭರ್ತೃಗೃಹಂ ಕಾರ್ಯಮವಶ್ಯಂ ಸ್ತ್ರೀಭಿರಾದರಾತ್ ||

ವಿವಾಹವಾದ ಮೊದಲನೆಯ ವರ್ಷದಲ್ಲಿ ಈವ್ರತವನ್ನು ತಾಯಿಯ ಮನೆಯಲ್ಲಿಯೆ ಆಚರಿಸಬೇಕು .ನಂತರದ ವರ್ಷಗಳಲ್ಲಿ ಗಂಡನ ಮನೆಯಲ್ಲಿ ಆಚರಿಸಬೇಕು .

 ಶ್ರಾವಣಮಾಸದ ಶುಕ್ಲ ಪಕ್ಷದ ಮೋದಲ ಮಂಗಳವಾರದಂದು ವ್ರತವನ್ನು ಧಾರಣೆ ಮಾಡಬೇಕು .
ಪುಷ್ಪ ಮಂಡಪಿಕಾ ಕಾರ್ಯಾ ಕದಲಿ ಸ್ಥಂಭಮಂಡಿತಾ |
ನಾನಾವಿಧೈಃ ಪಲೈಶ್ಚೈವ ಪಟ್ಟ ಕೂಲೈಶ್ಚ ಭೂಷಯೇತ್ ||

ಮಂಗಳಗೌರಿಯನ್ನು ಕೂಡಿಸಲು ಬಾಳೆಯಕಂಬಗಳನ್ನು ಕಟ್ಟಿ ಹೂವಿನ ಮಂಟಪವನ್ನು ಸಿದ್ಧ ಪಡಿಸಿ  ಈ.ಮಂಟಪದ ಸುತ್ತಲೂ  ಮಾವಿನಸೂಪ್ಪಿನಿಂದ ತೋರಣವನ್ನು ಕಟ್ಟಬೇಕು. ಈ ಮಂಟಪದ ಸುತ್ತಲೂ , ಹಾಗೂ ಮಧ್ಯ ದಲ್ಲಿ ನಾನಾವಿಧವಾದ ಫಲಗಳನ್ನು ತೂಗುಬಿಟ್ಟು ರೇಷ್ಮೆ ಪರದೆಯನ್ನು ಕಟ್ಟಬೇಕು .
ಮಂಟಪದ ಮಧ್ಯೆ ಪೀಠದ ಮೇಲೆ ಬಾಳೆಯಎಲೆ ಅಥವ ಬೆಳ್ಳಿಯ ತಟ್ಟೆಯನ್ನಿಟ್ಟು ಅಕ್ಕಿಯನ್ನು ಹರಡಬೇಕು ಅದರ ಮೇಲೆ ಸುವರ್ಣ, ರಜತ ,ತಾಮ್ರಗಳಿಂದ ನಿರ್ಮಿಸಿದ ಮಂಗಳಗೌರಿಯ ಪ್ರತಿಮೆಯನ್ನಿಡಬೇಕು. ಮತ್ತುಗೋಪುರಾಕಾರ ದಲ್ಲಿ  ಅರಿಷಿಣ ದಿಂದ ತಯಾರಿಸಿದ ಮಂಗಳಗೌರಿಯನ್ನುಸ್ಥಾಪಿಸಬೇಕು ಕಲಶವನ್ನು  ಸ್ಥಾಪಿಸಿ ಕನ್ನಡಿಯನ್ನು ಮುಂದೆಇಡಬೇಕು ಐದು ಕಣಗಳನ್ನು ಇಟ್ಟು ಪೂರ್ಣಫಲವಾದ ತೆಂಗಿನಕಾಯಿಯನ್ನು ಬದಿಯಲ್ಲಿಡಬೇಕು. 

ಉಪಚಾರೈಃ ಷೋಡಶಭಿರ್ಮಂಗಲಾಗೌರಿ ಸಂಜ್ಞಿತಾಮ್ |
ದೂರ್ವಾದಲೈಃ ಷೋಡಶಭಿರಪಾಮಾರ್ಗದಲೈಸ್ತಥಾ ||
ತಾವತ್ಸಂಖ್ಯೈಸ್ತಂಡುಲೈಶ್ಚ  ಚಣಕಾನಾಂ ಶಕಲೈಸ್ತಥಾ |
ಷೋಡಶೋನ್ಮಿತವರ್ತೀಭಿಸ್ತಾವದ್ದೀಪಾಂಶ್ಚ ದೀಪಯೇತ್ ||
ದಧ್ಯೋದನಂ ಚ ನೈವೇದ್ಯಂ ತತ್ರ ಭಕ್ತ್ಯಾ ಪ್ರಕಲ್ಪಯೇತ್ |
ಸಮೀಪಂ ಸ್ಥಾಪಯೇದ್ದೇವ್ಯಾ ದೃಷದಂ ಚೋಪಲಂ ತಥಾ ||
ಏವಂ ಕೃತ್ವಾ ತು ಪಂಚಾಬ್ದಂ ತತ ಉದ್ಯಾಪನಂ    ಚರೇತ್ ||

ಮಂಗಳಗೌರಿ ಯನ್ನು ಷೋಡಶೋಪಚಾರಗಳಿಂದ
ಪೂಜಿಸಬೇಕು. ಮಂಗಳಗೌರಿಗೆ.ಪ್ರಿಯವಾದ ಆಪಮಾರ್ಗ(ಉತ್ತರಾಣಿದದಳಗಳಿಂದ )ಹಾಗೂ 16 ಗರಿಕೆಗಳಿಂದ ಹಾಗೂ ಅಷ್ಟೇಸಂಖ್ಯೆಯ  ಅಕ್ಕಿಕಾಳುಗಳಿಂದಲೂ 16ಕಡಲೆಬೇಳೆಗಳಿಂದಲೂ  ಮಂಗಳಗೌರಿಯನ್ನು  ಪೂಜಿಸಬೇಕು .  ನೈವೇದ್ಯಕ್ಕಾಗಿ ಅಕ್ಕಿ ಕಡಲೆಬೇಳೆ ಇವು ಪೂಜೆಯಲ್ಲಿರಬೇಕು ಆದ್ದರಿಂದಲೇ ಅಕ್ಕಿಯನ್ನು ಹರಡಿ ಪ್ರತಿಮೆಯನ್ನು ಕೂಡಿಸುವುದು . ದೇವಿಯ ಮುಂದೆ 
ಹದಿನಾರು ಬತ್ತಿಯಿಂದ ಒಂದು ದೀಪವಾಗಲೀ,  ಹದಿನಾರು ಪ್ರತ್ಯೇಕ ದೀಪಗಳನ್ನಾಗಲೀ ಹಚ್ಚಬೇಕು. ದೇವಿಗೆ   ಭಕ್ತಿಯಿಂದ ಮೊಸರನ್ನವನ್ನು   ನೈವೇದ್ಯ ಮಾಡಬೇಕು ಮತ್ತು ಕೊಸಂಬರಿ ನೈವೇದ್ಯ ಮಾಡುವುದು  ಪದ್ದತಿಯಲ್ಲಿದೆ .

ಮಂಗಳಗೌರಿಯ ಎರಡೂ ಬದಿಯಲ್ಲಿ ಹದಿನಾರು ಹದಿನಾರು ವಿಳೆದೆಲೆಯಲ್ಲಿ ಕೊಬ್ಬರಿಬಟ್ಟಲು ಇರಿಸಿ ಅದರಲ್ಲಿ ಹದಿನಾರು  ಬಟ್ಟಲ ಅಡಿಕೆ ಹಾಕಬೇಕು. ಹದಿನಾರು ತಂಬಿಟ್ಟಿನ ದೀಪದ ಆರತಿಮಾಡಿ  ವ್ರತಕಥೆ ಯನ್ನು ಓದಬೇಕು ಅಥವಾ ಕೇಳುತ್ತ ಕಾಡಿಗೆ ಹಿಡಿಯಬೇಕು. ಅದನ್ನು ಸುವಾಸಿನಿಯರಿಗೆ ಕೊಟ್ಟು ತಾನೂ ಹಚ್ವಿಕೊಳ್ಳಬೇಕು.

ಶ್ರಾವಣಮಾಸದ ಪ್ರತಿ ಮಂಗಳವಾರ ಬಾಗಿಣವನ್ನು ದೇವಿಗೆ ಅರ್ಪಿಸಿ ಅದನ್ನು ತನ್ನ ತಾಯಿಗೆ ಮತ್ತು ಸುವಾಸಿನಿಸ್ತ್ರಿಯರಿಗೆ ಬಾಗಿಣವನ್ನು ಕೊಡಬೇಕು . ಐದು ವರ್ಷ ಪೂಜೆ ಮುಗಿದ ಮೇಲೆ ಉದ್ಯಾಪನೆಯನ್ನು ಮಾಡಿ ಉದ್ಯಾಪನೆಯ ಕಾಲದಲ್ಲಿ ತಾಯಿಗೆ ಬಾಗಿನ ಕೊಡುವುದು ಪದ್ಧತಿ. ಸುವರ್ಣ ಅಥವಾ ಬೆಳ್ಳಿ ಪ್ರತಿಮೆಯನ್ನು ಮಾಡಿಸಿ ಪೂಜಿಸಿ, ನಂತರ  ತಮ್ಮ ಶಕ್ತ್ಯಾನುಸಾರ ಬೆಳ್ಳಿ ಬಂಗಾರ ತಾಮ್ರ ಕಂಚು ಮೊದಲಾದ ಧಾತುಗಳಿಂದ ತಯಾರಿಸಿದ ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ಸೀರೆ-ಕುಪ್ಪಸ, ಬಳೆಗಳು, ಕಾಡಿಗೆ, ಗಂಗಾವನ(ಚೌರಿ), ಕಾಲುಂಗುರ, ತಾಳಿ ಇತರ ಸಾಮಗ್ರಿಗಳನ್ನು ಇಟ್ಟು ದಾನ ಮಾಡಬೇಕು. ಹದಿನಾರು ಜನಕ್ಕೆ ಕಡಿಮೆ ಆಗದಂತೆ ಸುವಾಸಿನಯರಿಗೆ ಭೋಜನ ಮಾಡಿಸಬೇಕು. ಈ ರೀತಿ ಮಂಗಳಗೌರಿ ವ್ರತವನ್ನು ಸ್ತ್ರೀ ಯರು ಆಚರಿಸುವುದರಿಂದ ಅವರ ಮನೋರಥಗಳೆಲ್ಲವೂ ಶೀಘ್ರವಾ ಗಿ ನೆರವೇರುತ್ತದೆ . ಎಂದು  ಶ್ರಾವಣಮಾಸ ಮಹಾತ್ಮೆ ಯಲ್ಲಿ  ರುದ್ರ ದೇವರು ಸನತ್ಕುಮಾರರಿಗೆ ತಿಳಿಸಿದ್ದಾರೆ.

ಸೂಚನೆ- ದಧಿವ್ರತದಲ್ಲಿ ಮೊಸರನ್ನ ನೈವೇದ್ಯ ಮಾಡಬಾರದು

         || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
**

[11:33 PM, 11/29/2019] SURESH HULIKUNTI RAO: ಮಂಗಳಗೌರಿ ವ್ರತವನ್ನು  ಶ್ರಾವಣ ಮಾಸದ ಮಂಗಳವಾರದಂದು ಪ್ರಾತಃ ಕಾಲದಲ್ಲಿ  ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಹಾಗೂ  ಕನ್ಯೆಯರು  ಆಚರಿಸುತ್ತಾರೆ . ಈ ವ್ರತವನ್ನು ಐದು ವರ್ಷಗಳು ಆಚರಿಸಿ ತದನಂತರ ಉದ್ಯಾಪನೆ ಮಾಡುತ್ತಾರೆ . ಭವಿಷ್ಯೋತ್ತರ ಪುರಾಣದಲ್ಲಿ ಈ ವ್ರತವನ್ನು ಉಲ್ಲೇಖಿಸಿದ್ದಾರೆ . ಇದನ್ನು ಕನ್ಯೆಯರು ಮತ್ತು ಮುತೈದೆಯರು  ತಮ್ಮ ಪತಿಯ ಆಯುರ್  ವೃದ್ಧಿಗಾಗಿ  ಸಕಲ ಸೌಭಾಗ್ಯವನ್ನುಗಳಿಸಲು  ತಾಯಿ ಮಂಗಳಗೌರಿಯ ಪೂಜೆಯನ್ನು ಭಕ್ತಿಯಿಂದ ಆಚರಿಸುತ್ತಾರೆ .


ಪೂಜೆಗೆ ಬೇಕಾದ ಸಾಮಾಗ್ರಿಗಳು :ಮಣೆ , (ರಂಗೋಲಿ ಹಾಕಬೇಕು ) ಕಳಸ ,೩೨ (32)ವೀಳ್ಯದೆಲೆ ,೩೨(32) ಬಟ್ಳಡಿಕೆ (ಮದ್ರಾಸ್ ಸುಪಾರಿ ), ೫(5) ಜರಿ ಅಂಚಿನ ಬ್ಲೌಸ್ ಪೀಸ್ , ೨ (2) ಅರಿಶಿನ ಗೌರಿಗಳು ,ಗೌರಿಯನ್ನು ಇಡುವುದಕ್ಕೆ ೨ (2)ವೀಳ್ಯದೆಲೆ ,೨(2) ಅಡಿಕೆ ,ಕಳಸಕ್ಕೆ ೫ (5)ವೀಳ್ಯದೆಲೆ ,ಒಂದು ಮೌಚೆಕಾಯಿ ( steel or  brass spatula ) ಕಣ್ಣು  ಕಪ್ಪು  ಮಾಡುವುದಕ್ಕೆ ,ಒಂದು ಬೆಳ್ಳಿ ಗಣೇಶ , ಪಂಚಾಮೃತ ಅಭಿಷೇಕಕ್ಕೆ  ಹಾಲು,ಮೊಸರು,ತುಪ್ಪ,ಜೇನುತುಪ್ಪ  ಹಾಗು ಮೊಸರು .ಎಲ್ಲವನ್ನು ಒಂದು ತಟ್ಟೆಯಲ್ಲಿ ಈ ರೀತಿ ಜೋಡಿಸಬೇಕು.( ಹಾಲು  -ಮಧ್ಯದಲ್ಲಿ ಇಡಬೇಕು ,ಮೊಸರು - ಪೂರ್ವದಲ್ಲಿ ಇಡಬೇಕು. ತುಪ್ಪ- ದಕ್ಷಿಣದಲ್ಲಿ ಇಡಬೇಕು. ಜೇನು ತುಪ್ಪ - ಪಶ್ಚಿಮದ  ಕಡೆ ಇಡಬೇಕು  ಹಾಗು ಸಕ್ಕರೆಯನ್ನು - ಉತ್ತರದಲ್ಲಿ ಇಡಬೇಕು. )    ೨(2) ಒಣಕೊಬ್ಬರಿಬಟ್ಟಲು ,ಒಂದು ಕಂಚುಕ (ಚೊಂಬು ) ಅದ್ರಲ್ಲಿ ೧೬(16) ಸಣ್ಣ ತಂಬಿಟ್ಟು ಉಂಡೆ ಹಾಕಬೇಕು ಅದನ್ನು ಒಂದು ಬ್ಲೌಸ್ ಪೀಸ್ ಅನ್ನು ಬಳಸಿ  ಮುಚ್ಚಬೇಕು . ಒಂದು ಕನ್ನಡಿ ,ಬಳೆ  ಬಿಚ್ಚೋಲೆ ,ಅರಿಶಿನ ಕುಂಕುಮ  ಪೊಟ್ಟಣ , ದೀಪದ ಕಂಬಗಳು,ಆರತಿ ತಟ್ಟೆ ಹಾಗು ದೀಪಗಳು , ತುಪ್ಪದ ಮಂಗಳಾರತಿ ಬತ್ತಿ,ಹೂವುಗಳು ,ಪತ್ರೆಗಳು ,೧೬ (16)ತಂಬಿಟ್ಟು ಸೊಡಲು  ದೀಪ,  ೧೬ (16)ತುಪ್ಪದ ಬತ್ತಿ , ೧೬ (16)ಗುಳ್ಳ (make tambittu  in  triangle  shape  for  Lord Ganapathi)ತೆಂಗಿನಕಾಯಿಗಳು ನೈವೇದ್ಯಕ್ಕಾಗಿ  ೫(5) ಬಗೆಯ ಹಣ್ಣುಗಳು ತೆಂಗಿನಕಾಯಿ ತಾಂಬೂಲ ದಕ್ಷಿಣೆ , ಭಕ್ಷ್ಯಗಳು ,ಹಾಲು ಸಕ್ಕರೆ  .  ಯಥಾ ಶಕ್ತಿ ಏನಾದರು ಮಾಡಿ  ನೈವೇದ್ಯ ಮಾಡಬಹುದು . 
                                             
                                      ಮದುವೆಯಾದ ಹೆಣ್ಣುಮಗಳು ಮೊದಲವರ್ಷ ತಾಯಿಗೆ ಬಾಗಿನ ಕೊಡಬೇಕು  ಹಾಗೆ ೫ನೇ  ವರ್ಷ ತಾಯಿಗೆ ಒಂದು ಬೆಳ್ಳಿ ಚೊಂಬಿನಲ್ಲಿ ೧೬(16)ತಂಬಿಟ್ಟಿನ ಉಂಡೆಗಳನ್ನು ಹಾಕಿ ಅದನ್ನು ಒಂದು ಬ್ಲೌಸ್ ಪೀಸ್ ಇಂದ ಕಟ್ಟಬೇಕು ,ಮತ್ತು ಮೊರದಬಾಗಿನದಲ್ಲಿ  ಧಾನ್ಯಗಳ ಜೊತೆ ತಾಯಿಗೆ ಸೀರೆ ಕುಪ್ಪಸ ,ಬಳೆಗಳು  ,ಹಣ್ಣುಗಳು ,ಪುರಿ ಉಂಡೆ,
ಕಾಲುಂಗುರ,ಚಕ್ಕಲಿ,ತೇಂಗೋಳು,ಒಬ್ಬಟ್ಟು ,ಕರ್ಜಿಕಾಯಿ,ಹುರಿಗಾಳು ಸ್ವಲ್ಪ ಚಕ್ಕಲಿ ಹಿಟ್ಟು  ಹಾಕಿ ಬಾಗಿನ ಕೊಡಬೇಕು .  

Morada  Jothe  Ingredients 
new mora-2
news paper or  Banana leaves 
rice-2 cups
togari bele-1 cup
kadale bele-1 cup
uddina bele-1cup
hesaru bele-1 cup
rava(sooji ) or godi -1 cup 
bellada achhu-1
salt-1/2 cup(madhwas  will  add )
balle- bichole-2
gejje -vastra-2
hoo bathi,mangalarathi bathi-5
coconut-1
arishina,kukuma-packets or dabbi
chandra
Bangles 
blouse- piece-1
elle-adikae
fruits
Dakshine 
can keep saree,silver or  gold   items   in that mora as gift.
Method -
Bring new mora,clean it,apply arishina kumkuma on it.
Spread paper or  Banana leaves on a bottom mora.
Keep all other things in separate plastic covers,arrange on the bottom mora, close with another mora ,keep betel leaves (pan leaves) adikae,dakshine ,one fruit on the top mora.
ಬಾಗಿನ ಕೊಡುವಾಗ ಸೆರಗನ್ನು ಹೊದ್ದಿಕೊಂಡು (ಬೆನ್ನ ಪೂರ್ತಿ )ಸೆರಗಿನ ಅಂಚನ್ನು ಹಿಡಿದುಕೊಂಡು ಹಾಗೆ ಬಾಗಿನ ತೆಗೆದುಕೊಳ್ಳುವರು ಸೆರಗಿನ ಅಂಚಿನಿಂದ  ಮೊರವನ್ನು ಹಿಡಿದು " ಮುತೈದೆ ಮುತೈದೆ ಬಾಗಿನ ತೊಗೋ" " ಸಾವಿತ್ರಿ ಸಾವಿತ್ರಿ ಬಾಗಿನ ಕೊಡು  "   ಎಂದು ಮೂರು ಬಾರಿ ಹೇಳಿ ಬಾಗಿನದ ಮುಚ್ಚಳ ತೆಗೆದು ತೋರಿಸಬೇಕು ನಂತರ ಆಶೀರ್ವಾದ  ಪಡೆದುಕೊಳ್ಳಬೇಕು.
***********

ಮಂಗಳಗೌರಿ ವ್ರತ ವಿಚಾರ
ಶ್ರಾವಣದಿ ಸುಮಂಗಲಿಯರು ಆಚರಿಸುವ ಮಂಗಳಗೌರಿ ವ್ರತ ವಿಚಾರ

ಮಾಂಗಲ್ಯ ರಕ್ಷಣೆಗೆ ಮಾನಿನಿಯರು ಆಚರಿಸುವ ವ್ರತವೇ ಮಂಗಳಗೌರಿ ವ್ರತ. 

ಹಿಂದೂ ಧರ್ಮದ ಆಚರಣೆಯ ರೀತ್ಯ ಸುಮಂಗಲಿಯರು, ಅದರಲ್ಲೂ ಕನ್ನಡನಾಡಿನ ಹೆಣ್ಣುಮಕ್ಕಳು ಶ್ರಾವಣ ಮಾಸದ ಎಲ್ಲ ಮಂಗಳವಾರಗಳಂದು ಶ್ರದ್ಧಾಭಕ್ತಿಯಿಂದ ಮಂಗಳಗೌರಿ ವ್ರತ ಆಚರಿಸುತ್ತಾರೆ.. ಮದುವೆಯಾದ ಮೊದಲ ಐದು ವರ್ಷಗಳ ಕಾಲ ಮಂಗಳಗೌರಿ ವ್ರತವಾಚರಿಸಿ, ಕೊನೆಯ ವರ್ಷ ತಾಯಿಗೆ ಕೊಬ್ಬರಿ, ಬೆಲ್ಲ, ಬಳೆ ಬಿಚ್ಚಾಲೆ, ಕುಪ್ಪಸ, ಸೀರೆಯೇ ಮೊದಲಾದ ಮಂಗಳದ್ರವ್ಯದ ಬಾಗಿನ ನೀಡುವುದು ವಾಡಿಕೆ. ಶಕ್ತರು ಬೆಳ್ಳಿ ಅಥವಾ ಚಿನ್ನಾಭರಣಗಳನ್ನೂ ನೀಡುತ್ತಾರೆ.

ಬಾಗಿನ ನೀಡುವ ಮೊದಲು ಮಂಗಳದ್ರವ್ಯವನ್ನು ಗೌರಿಯ ಮುಂದೆ ಇಟ್ಟು, ಕಲ್ಪೋಕ್ತಕ್ರಮದಲ್ಲಿ ಪೂಜಿಸಿ ವ್ರತಕಥೆಯನ್ನು ಓದುತ್ತಾರೆ. ಕತೆ ಓದುವ ಸಮಯದಲ್ಲಿ ಮಗುಚುವ ಕೈಯನ್ನು ತಂಬಿಟ್ಟಿನ ಆರತಿಯ ದೀಪದ ಮೇಲೆ ಹಿಡಿದು ಕಾಡಿಗೆ ಮಾಡಿಕೊಂಡು ಕಣ್ಣುಗಳಿಗೆ ಹಚ್ಚಿಕೊಳ್ಳುತ್ತಾರೆ.

ಇದಕ್ಕೂ ಮುನ್ನ ತಟ್ಟೆಯೊಂದರಲ್ಲಿ ಅಕ್ಕಿ ಹಾಕಿ, ಅದರ ಮೇಲೆ ಕಳಶವಿಟ್ಟು, ಕಳಶದಲ್ಲಿ ಅಕ್ಷತೆಕಾಳು, ದಕ್ಷಿಣೆ, ನಾಣ್ಯ, ನೀರು ಹಾಗೂ ವಿಳ್ಯದ ಎಲೆ ಇಟ್ಟು, ಕಳಶದ ಮುಂದೆ ಪುಟ್ಟ ಕನ್ನಡಿ ಇಟ್ಟು ಮೊದಲು ಗಣಪತಿ ವಿಗ್ರಹ ಪೂಜಿಸಿ, ಒಂದು ಅಚ್ಚು ಬೆಲ್ಲದ ಮೇಲೆ ಅರಿಶಿನದ ಗೌರಿ ಮಾಡಿ, ಅದಕ್ಕೆ ಚಂದ್ರ, ಕುಂಕುಮ, ಹೂ ಪತ್ರೆಗಳಿಂದ ಪೂಜಿಸಿ, ದೇವರ ಮುಂದೆ ಐದೈದು ವಿಳ್ಳೆದೆಲೆ, ಐದು ಬಟ್ಟಲ ಅಡಿಕೆ, ಕೊಬ್ಬರಿ ಹೋಳು ಅಥವಾ ಗಿಟಕು, ಹಾಗೂ ತ್ರಿಕೋನಾಕಾರವಾಗಿ ಮಡಚಿದ ಕುಪ್ಪಸದ ಕಣ ಇಟ್ಟು ದೇವಿಯ ಆವಾಹನೆ ಮಾಡಿ, ಮಂಗಳಗೌರಿಯ ಪೂಜೆ ಮಾಡುತ್ತಾರೆ.

ತಮಗೆ ಮಂಗಳವನ್ನುಂಟು ಮಾಡುವಂತೆ ಪ್ರಾರ್ಥಿಸುವ ಮಾನಿನಿಯರು, ತಮ್ಮ ಮಾಂಗಲ್ಯ ಭಾಗ್ಯ ಕಾಪಾಡುವಂತೆ ಕೋರುತ್ತಾರೆ.


ಶ್ರಾವಣಮಾಸದಲ್ಲಿ ಎಲ್ಲ ಮಂಗಳವಾರಗಳಂದೂ ಈ ವ್ರತ ಆಚರಿಸುತ್ತಾರೆ. ಆನಂತರ ಕಡಲೆಬೇಳೆ ಇಲ್ಲವೆ, ಹೆಸರು ಬೇಳೆ ಕೊಸಂಬರಿ ಮಾಡಿ, ಬಾಳೆಹಣ್ಣು ಇಲ್ಲವೆ ತೆಂಗಿನಕಾಯಿಯನ್ನು ಇಟ್ಟು ಐದು ಜನ ಮುತ್ತೈದೆಯರಿಗೆ ಕುಂಕುಮ ಕೊಡುತ್ತಾರೆ. ಕೆಲವರು ಮೊರದ ಬಾಗಿನವನ್ನೂ ನೀಡುತ್ತಾರೆ.
* ಕನ್ನಡರತ್ನ.ಕಾಂ ವಿಶೇಷ
********

No comments:

Post a Comment