1. ಪಂಚಗವ್ಯ, ಪಂಚಾಮೃತ
ಪಂಚಗವ್ಯ(ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಗೋಮಯದ ಮಿಶ್ರಣ) ದಿಂದ ಅಭಿಷೇಕ ಮಾಡಿದರೆ ಎಲ್ಲ ರೀತಿಯ ಮಾನವ ಪಾಪಗಳು ನಿವರಣೆಯಾಗುತ್ತವೆ. ಪಂಚಾಮೃತ (ಬಾಳೆಹಣ್ಣು, ಬೆಲ್ಲ, ಸಕ್ಕರೆ, ಖರ್ಜೂರ, ಜೇನು ಹಾಗೂ ಒಣಹಣ್ಣುಗಳು) ಅಭಿಷೇಕದಿಂದ ಶ್ರೀಮಂತಿಕೆ ಪ್ರಾಪ್ತಿಯಾಗುತ್ತದೆ. ತುಪ್ಪದ ಅಭಿಷೇಕದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ.
2. ಹಾಲು-ಜೇನುತುಪ್ಪ ಹಾಲಿನ ಅಭಿಷೇಕದಿಂದ ದೀರ್ಘಾಯುಷ್ಯ,
3. ಜೇನುತುಪ್ಪದಿಂದ ಉತ್ತಮ ಧ್ವನಿ-ಸಂಗೀತ ಸಿದ್ಧಿ,
4. ಅಕ್ಕಿ ಹಿಟ್ಟಿನಿಂದ ಋಣ ವಿಮೋಚನೆ,
5. ಕಬ್ಬಿನ ಹಾಲಿನಿಂದ ಆರೋಗ್ಯ ಹಾಗೂ ಶತ್ರುನಾಶ,
6. ನಿಂಬೆಹಣ್ಣಿನ ಪಾನಕದಿಂದ ಜೀವ ಭಯ ನಿವಾರಣೆ-ಆರೋಗ್ಯ ಚೇತರಿಕೆ,
7. ಎಳನೀರಿನಿಂದ ಸಂತೃಪ್ತಿ
8. ಅನ್ನದಿಂದ ರಾಜ್ಯಪ್ರಾಪ್ತಿ
9. ಗಂಧದಿಂದ ಲಕ್ಷ್ಮಿ ಅನುಗ್ರಹ,
10 ನೀರಿನಿಂದ ನೆಮ್ಮದಿ,
11. ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿದರೆ ಅಪಮೃತ್ಯು ಪರಿಹಾರ,
12. ಹಸುವಿನ ಹಾಲಿನಿಂದ ನಾಗಭಯ ನಿವಾರಣೆ,
13. ಮೊಸರನ್ನದಿಂದ ಅಲ್ಸರ್ ನಂಥ ಕಾಯಿಲೆ ನಿವಾರಣೆ,
14. ತುಪ್ಪದಿಂದ ಆರ್ಥಿಕ ಅನುಗ್ರಹ,
15. ಭಸ್ಮದಿಂದ ಮಹಾಪಾಪ ವಿನಾಶ,
16. ಗಂಧದ ನೀರಿನಿಂದ ಮಕ್ಕಳ ಏಳ್ಗೆಯಾಗುತ್ತದೆ.
ಶ್ರೀ ಸುಧಾಕರ
*******
*******
No comments:
Post a Comment