ಜಾತಕದಲ್ಲಿ ರಾಹು ಮತ್ತು ಕೇತು ಇವುಗಳ ನಡುವೆ –ರಾಹುವಿನಿಂದ ಅಪಸವ್ಯದಲ್ಲಿ (anticlock-wise) ಕೇತುವಿನೆಡೆಗೆ- ಉಳಿದ ಏಳೂ ಗ್ರಹಗಳು ಇದ್ದರೆ ಅದನ್ನು ಕಾಳಸರ್ಪದೋಷವೆನ್ನಲಾಗಿದೆ. ಈ ದೋಷವು ಈಚಿನ ಎರಡು ದಶಕಗಳಿಂದ ಹೆಚ್ಚು ಆತಂಕಗೊಳಿಸುತ್ತಿರುವುದಾಗಿ ತಿಳಿಯುತ್ತದೆ.
ಪರಾಶರ ಸಂಹಿತೆಯಿಂದ ತೊಡಗಿ ವರಾಹಮಿಹಿರಾಚಾರ್ಯರ ಬೃಹಜ್ಜಾತಕದ ವರೆಗೆ ಕಾಲಸರ್ಪ ಯೋಗ ಅಥವಾ ಕಾಳಸರ್ಪ ದೋಷದ ಬಗೆಗೆ ಏನೂ ಹೇಳಿಲ್ಲ. ಕೆಲವರು ಬೇರೆ ರೀತಿಯಲ್ಲಿ ಅರ್ಥೈಸಿದ್ದರೂ-, ಕಾಲಸರ್ಪದೋಷ, ಕಾಲಸರ್ಪ ಯೋಗ ಇವೆರಡೂ ಒಂದೇ. ಹಾಗೇ ಕಾಲಸರ್ಪ, ಕಾಳಸರ್ಪ ಇವೆರಡೂ ಒಂದೇ. ಭಯಗೊಳಿಸಲು ಕಾಲಕ್ಕಿಂತ ‘ಕಾಳ’ ಎಂಬುದೇ ಸೂಕ್ತಪದವೆನಿಸಿರಬೇಕು. ತಿಳಿದಿರಬೇಕಾದ ಇನ್ನೊಂದು ಸಂಗತಿಯೆಂದರೆ ಕಾಳಹಸ್ತಿಗೂ ಕಾಳಸರ್ಪದೋಷಕ್ಕೂ ಯಾವ ಸಂಬಂಧವೂ ಇಲ್ಲ. ಹಸ್ತಿ ಎಂದರೆ ಆನೆ, ಕಾಳಹಸ್ತಿ = ಕರಿಯ ಆನೆ. ಹೆಸರಿನ ಸಾಮ್ಯತೆಯಿಂದ ಕಾಳಸರ್ಪದೋಷಕ್ಕೂ ಈ ಯಾತ್ರಾಸ್ಥಳಕ್ಕೂ ತಳಕು ಉಂಟಾಗಿರಬೇಕು.
ಸರ್ಪ = ಹಾವು; ಸರ್ಪ = ಭಯವೂ ಹೌದು. ಕಾಲಸರ್ಪ = ಭಯದ ಕಾಲ. ಕಾಲಸರ್ಪ ಯೋಗವು ಮನಸ್ಸಿನ ಭಯಕ್ಕೆ ಸಂಬಂಧಿಸಿದ್ದು. ಕಾಲಸರ್ಪ ದೋಷವಿದ್ದಾಗ ದೇಹದಲ್ಲಿ ವಿಷವಸ್ತುಗಳು ಹೆಚ್ಚಾಗುವುವೆಂದೂ ವಾತದೋಷ .. ವಾಯು ಮತ್ತಿತರ ನೋವುಗಳು ಉಂಟಾಗುವುವೆಂದೂ ತಿಳಿಯಬಹುದು. ದೇಹವನ್ನು ಶಿಸ್ತುಬದ್ಧವಾಗಿಟ್ಟುಕೊಳ್ಳುವುದು, ಧ್ಯಾನ, ಪ್ರಾಣಾಯಾಮ ಇವುಗಳಿಂದ ಕಾಲಸರ್ಪ ದೋಷ ಕುರಿತಂತೆ ಮನಸ್ಸು ಅನಗತ್ಯವಾಗಿ ಭೀತಿಗೊಳ್ಳುವುದು ನಿಲ್ಲುತ್ತದೆ. ರಾಹು ಮತ್ತು ಕೇತುಗಳ ನಡುವೆ ಸಪ್ತ ಗ್ರಹಗಳು. ಚಂದ್ರನನ್ನುಳಿದು ಇನ್ನು ಆರು ಇದ್ದರೂ ಆಗುತ್ತೆ.
ಘಟಕಾಳಸರ್ಪ ಯೋಗ: ಏಳು ಗ್ರಹಗಳ ಬದಲು ಆರು ಗ್ರಹ ರಾಹು-ಕೇತು ವಲಯದೊಳಗೆ. ಒಂದು ಕ್ರೂರ ಗ್ರಹ ಹೊರಗೆ ಇದ್ದರೆ ಘಟಕಾಳಸರ್ಪ ಯೋಗ. ಇದಕ್ಕೆ ಬೇರೆ ಶಾಂತಿ ಇದೆಯೆನ್ನುವರು.
ಕೆಲವು ಜ್ಯೋತಿಷಿಗಳು ಎರಡು ಮೂರು ಗ್ರಹಗಳು ರಾಹು-ಕೇತುಗಳ (ಮೇಲೆ ಹೇಳಿದ) ವಲಯದಿಂದ ಹೊರಗಿದ್ದರೂ ಕಾಳಸರ್ಪದೋಷವೆನ್ನುವುದನ್ನು ತಿಳಿದಿದ್ದೇನೆ. ಹೀಗಾದರೆ ಬಹುತೇಕ ಎಲ್ಲ ಜಾತಕಗಳಲ್ಲೂ ಕಾಳಸರ್ಪದೋಷ ಕಂಡೀತು! ಇದು ಸರ್ವಥಾ ಸಮ್ಮತವಾಗದು.
ನಿಜವಾಗಿ ಶಾಂತಿಯುಂಟಾಗಬೇಕಾದ್ದು ಬದುಕಿನ ಸಮಸ್ಯೆ ಸವಾಲುಗಳಿಂದ ನೊಂದು ಆತಂಕದಲ್ಲಿರುವವರಿಗೋ ಅಥವಾ ಗ್ರಹಗಳಿಗೋ? ಈಚೆಗೆ ‘ಶಾಂತಿ’ಯ ಹೆಸರಲ್ಲಿ ‘ಅಶಾಂತಿ’ಯನ್ನೇ ಮೂಡಿಸುವ ಪರಿಸರ ಉಂಟಾಗುತ್ತಿರುವುದು ನಿಜಕ್ಕೂ ಶೋಚನೀಯ. ಶಾಸ್ತ್ರವಿರುವುದು ಆತಂಕಗೊಂಡವರ ಆತಂಕ ನಿವಾರಣೆಗಾಗಿ, ನೊಂದವರಲ್ಲಿ ಧೈರ್ಯ ತುಂಬುವುದಕ್ಕಾಗಿ; ಮತ್ತಷ್ಟು ಹೆದರಿಸಲು ಅಲ್ಲ.
ಅನಗತ್ಯವಾಗಿ ಭಯಗೊಳ್ಳುವವರೂ ಸಾಕಷ್ಟು ಸಂಖ್ಯೆಯಲ್ಲಿರುವರೆಂದು ನನ್ನ ಅನುಭವ ತಿಳಿಸಿದೆ. ನನ್ನಲ್ಲಿಗೆ ಕಾಳಸರ್ಪದೋಷದ ಭೀತಿಯಿಂದ ಬಂದ ಕೆಲವರಿಗೆ ಅಂಥ ದೋಷವೇನಿಲ್ಲವೆಂದು ಹೇಳಿದಾಗ ಅವರು ಸಮಾಧಾನಗೊಳ್ಳುವ ಬದಲು ನನ್ನಿಂದ ‘ಪರಿಹಾರ’ ಸಿಗಲಿಲ್ಲವೆಂದು ನಿರಾಶರಾದದ್ದೂ ಇದೆ.
ದಾಂಪತ್ಯಕ್ಕೆ ಸಂಬಂಧಿಸಿದ ಹಾಗೆ ಕಾಳಸರ್ಪದೋಷವು ಮುಖ್ಯವಾಗಿ ಈ ಮೂರರಲ್ಲೊಂದು ಬಗೆಯ ತೊಂದರೆಯುಂಟುಮಾಡಿರುವುದು ನನ್ನ ಸಂಪರ್ಕಕ್ಕೆ ಬಂದ ಜಾತಕಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ: 1. ವಿವಾಹದಲ್ಲಿ ಅನಗತ್ಯ ವಿಳಂಬ 2. ಸಂತಾನ ವಿಳಂಬ, ಗರ್ಭಪಾತ, ಇತ್ಯಾದಿ 3. ಗಂಡಹೆಂಡಿರು ಬೇರೆಬೇರೆ ಕಾರಣಗಳಿಂದ ದೂರ ಇರಬೇಕಾದ ಸನ್ನಿವೇಶ. ಕಾಳಸರ್ಪಯೋಗವು ಜಾತಕನ ಇಡೀ ಜೀವಮಾನ ಇರುವುದೆಂದೂ, ಜಾತಕದಲ್ಲಿ ಜನ್ಮಲಗ್ನದಿಂದ ರಾಹುವಿನ ಸ್ಥಾನವನ್ನವಲಂಬಿಸಿ 20 ರಿಂದ 33 ವರ್ಷಗಳವರೆಗೂ ಇರುವುದೆನ್ನುವ ಅಭಿಪ್ರಾಯಗಳೂ ಇವೆ. ಆದರೆ -ನನ್ನ ಅನುಭವ ಆಧಾರಿತ ಅನಿಸಿಕೆ ಸೇರಿದಂತೆ - ಇವಾವುದಕ್ಕೂ ಶಾಸ್ತ್ರಾಧಾರವಿಲ್ಲದಿರುವುದು ಗಮನಾರ್ಹ.
ಅನಂತ ಕಾಲಸರ್ಪ ದೋಷ: ಲಗ್ನದಲ್ಲಿ ರಾಹು, ಏಳರಲ್ಲಿ ಕೇತು – ವೃಥಾ ಅಪವಾದ; ಕೋರ್ಟು ಕಚೇರಿ ವ್ಯವಹಾರಗಳಲ್ಲಿ ತೊಂದರೆ. ಕಾಳಿಕಾ ಕಾಲಸರ್ಪ ದೋಷ : ಲಗ್ನದಿಂದ 2ರಲ್ಲಿ ರಾಹು. ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಾನೆ. ವಾಸು ಕಾಲಸರ್ಪದೋಷ ರಾಹುವು ಲಗ್ನದಿಂದ 3 ನೇ ಮನೆ: ಕಳತ್ರ ದೋಷ. ಕೋರ್ಟಿನ ವ್ಯವಹಾರಗಳು ಅವನ ಕಡೆ ಆಗೋದು ಕಡಮೆ…. ಮುಂತಾಗಿ ವಿವಿಧ ಬಗೆಯ ಕಾಲಸರ್ಪ ದೋಷಗಳನ್ನು (ಮುಖ್ಯವಾಗಿ ಸರ್ಪಗಳನ್ನು ಕುರಿತು ಹೆಚ್ಚಿನ ಆದರ, ಭಯಭಕ್ತಿಗಳನ್ನುಳ್ಳ ದಕ್ಷಿಣ ಕನ್ನಡ ಮುಂತಾದ ಭಾಗಗಳ) ಜ್ಯೋತಿಷಿಗಳು ಹೇಳುವುದುಂಟು. ಆದರೆ ಇವುಗಳಿಗೆ ಶಾಸ್ತ್ರಾಧಾರ ಕಾಣುವುದಿಲ್ಲ. ಕಾಳಸರ್ಪದೋಷ/ಯೋಗವಿಲ್ಲದೆಯೂ ಜಾತಕದಲ್ಲಿ ರಾಹುವಿನ ಸ್ಥಾನದಿಂದ ವಿವಿಧ ಫಲಗಳನ್ನು ಹೇಳುವುದು ಇದ್ದೇ ಇದೆ. ರಾಹು, ಕೇತುಗಳು ಛಾಯಾಗ್ರಹಗಳು. ಅವುಗಳ ಸ್ಥಾನಕ್ಕನುಗುಣವಾಗಿ ಮತ್ತು ಅವುಗಳೊಂದಿಗಿರುವ ಇತರ ಗ್ರಹಗಳ ಪ್ರಭಾವದಿಂದ ಕೆಲವು ಫಲಗಳನ್ನಷ್ಟೇ ಅವು ನೀಡುವುವೆಂಬುದೂ ಶಾಸ್ತ್ರಕ್ಕೆ ಒಪ್ಪಿತವಾದ ಸಂಗತಿ.
ಕಾಳಸರ್ಪ ದೋಷಕ್ಕೂ ಕಾಳಹಸ್ತಿಗೂ ಸಂಬಂಧವಿಲ್ಲ. 20 ವರ್ಷದ ಹಿಂದೆ ಕಾಳಹಸ್ತಿಯ ದೇವಸ್ಥಾನದಲ್ಲೂ ಕಾಳಸರ್ಪದೋಷಕ್ಕೆ ತಮ್ಮಲ್ಲಿ ಪರಿಹಾರವುಂಟೆಂಬ ಸಂಗತಿ ಗೊತ್ತಿತ್ತೋ ಇಲ್ಲವೋ ಕಾಣೆ! ಕಾಳಸರ್ಪದೋಷದ ಶಾಂತಿಗೆ ಕಾಳಹಸ್ತಿಗೇ ಹೋಗಬೇಕಾದ್ದಿಲ್ಲ.
ಕಾಳ ಸರ್ಪದೋಷ ವೆಂದರೆ ಪ್ರತ್ಯಕ್ಷ ವಾಗಿಯೊ ಪರೋಕ್ಷವಾಗಿಯೊ ಯಾವುದಾದರು ಪ್ರಾಣಿಯನ್ನು ಕೊಂದಾಗ ಬರುವ ದೋಷವೆ ನಾಗದೋಷ ಆದರೆ ಅದು ಅತಿರೇಖ ಮುಟ್ಟಿದಾಗ ಅದನ್ನು ಕಾಳಸರ್ಪದೋಷವೆನ್ನುತ್ತಾರೆ,ಅದು ಎಲ್ಲಾ ಪ್ರಾಣಿಗಳಿಗಿಂತ ಹಾವುನ್ನು ಕೊಂದಗಲೆ ಬರುತ್ತೆ ಕಾರಣ ಹಾವಿನಲ್ಲಿ ಇರುವ ಇಚ್ಚಾಶಕ್ತಿ.ಅದು ಎಲ್ಲಾ ಪ್ರಾಣಿಗಳಲ್ಲು ಇರುತ್ತೆ ಆದರೆ ಸರ್ಪದಲ್ಲಿ ಅತಿಯಾದ 90% ಇರುವ ಕಾರಣ ಅದು ಮನುಷ್ಯನ ಇಚ್ಚಾ ಶಕ್ತಿಗಿಂತ ಹೆಚ್ಚಾಗಿರುವುದರಿಂದ ಅದು ಪಂಚಬೂತಗಳ ಕಾರ್ಯಕ್ರಮ ಬದಲಾಯಿಸಿಬಿಡುತ್ತೆ ಹಾಗಾಗಿ ಕಾಳ ಸರ್ಪ ದೋಷ ಎನ್ನುತ್ತಾರೆ,ಅದು ಎಲ್ಲೋರಿಗು ಬರಲ್ಲ ತನ್ನ ಇಚ್ಚಾಶಕ್ತಿ ತಾನು ಕೊಂದ ಪ್ರಾಣಿಯ ಇಚ್ಚಾಶಕ್ತಿಗಿಂತ ಹೆಚ್ಚಾಗಿದ್ದರೆ ಅಂತವರಿಗೆ ಬರಲ್ಲ.ಉದಾ:- ರೇಬಿಸ್ ಎಂಬುವ ಬುಲೆಟ್ ಆಕಾರ ದ ರೋಗಾಣು ಎಲ್ಲಾ ಪ್ರಾಣಿಗಳ ಜೊಲ್ಲಿನಲ್ಲಿರುವ ವೈರಸ್ ಆದರೆ ಅದು ಹೆಚ್ಚಾಗಿ ನಾಯಿಯ ಜೊಲ್ಲಿನಲ್ಲಿರುವುದರಿಂದ ನಾಯಿಯನ್ನು ರೇಬಿಸ್ ಮೂಲ ಎಂದು ಗುರುತಿಸುತ್ತಾರೆ .ಆದರೆ ರೇಬಿಸ್ ಸೊಂಕು ಇಲ್ಲದ ನಾಯಿ ಕಚ್ಚಿದರೆ ರೇಬಿಸ್ ಬರಲ್ಲ ಅದೇ ರೇಬಿಸ್ ಸೊಂಕಿರುವ ಒಂದು ಮಂಗ ಅಥವಾ ಹೆಗ್ಗಣ ಕಚ್ಚಿದರೆ ರೇಬಿಸ್ ಬರುತ್ತೆ.ಅದರಲ್ಲಿ ಒಂದು ಮಂದ ಸ್ವರೂಪ ಇನ್ನೊಂದು ರೌದ್ರ ಸ್ವರೂಪ ,ಅದೇ ರೀತಿ ಮಾನಸಿಕ ಇಚ್ಚಾಶಕ್ತಿಯ ಖಾಯಿಲೆಯಲ್ಲಿ ಒಂದು ನಾಗ ದೋಷ,ಇನ್ನೋಂದು ಕಾಳಸರ್ಪ ದೋಷ.ಇದರ ನಿವಾರಣೆ ಗಾಗಿ ಪಂಡಿತರನ್ನು ವಿಚಾರಿಸಿದಾಗ ಸಿಕ್ಕಿದೆ ಶಿವ ಅಂತ ಇಲ್ಲದ್ದನ್ನೆಲ್ಲ ಹೇಳಿ ಬಯ ಉಟ್ಟಿಸಿ ಹತ್ತಾರು ಸಾವಿರ ಕಸಿದು ಕೊಳ್ತಾರೆ,ಆದರೂ ನಿವಾರಣೆ ಆಗಲ್ಲ ಅದಕ್ಕೆ ಸುಲಭ ಉಪಾಯ ಪಂಚಬೂತಗಳೆ ಸೂಚಿಸುತ್ತಾವೆ ಯಾವ ಪಂಡಿತರ ಅವಶ್ಯಕತೆ ಇಲ್ಲಾ ಹೀಗೆ ಮಾಡಿ,ಹುಣ್ಣಿಮೆಯ ದಿನ ಯಾರೊಂದಿಗೂ ಮಾತಾನಾಡದೆ ಮುಂಜಾನೆ ಹೋಗಿ ನಾಲ್ಕು ಬಾವಿಗಳ ನೀರನ್ನು ತನ್ನಿ ಆಮೇಲೆ ಹುತ್ತವನ್ನು ಪೂಜಿಸಿ ಸ್ವಲ್ಪ ಹುತ್ತದ ಮೇಲಿನ ಮಣ್ಣನ್ನು ತನ್ನಿ ಇದು ಬೆಳಿಗ್ಗೆ 7 ಗಂಟೆಯ ಒಳಗೆ ನಡೆಯಬೇಕು ಆಮೇಲೆ ಇಡಿ ದಿನ ಉಪವಾಸವಿರಿ ಹಾಲನ್ನು ಮಾತ್ರ ಕುಡಿಯಬಹುದು ಹಾಲಿಗೆ ಏನು ಬೆರೆಸುವಂತಿಲ್ಲ ಮತ್ತೆ ಸೂರ್ಯ ಮುಳುಗಿದ ಮೇಲೆ ಆ ಮಣ್ಣನ್ನು ಆಕಳ ಹಾಲಿನಲ್ಲಿ ಬೆರೆಯಿಸಿ ಮೈಗೆಲ್ಲ ಲೇಪಿಸಿ ಕೊಳ್ಳಿ ನಗ್ನವಾಗಿ ಒಂದು ಕೊಠಡಿ ಯಲ್ಲಿ ಕುಳಿತು ಈ ನಾಗ ಮಂತ್ರ ಪಠಿಸಿ ಆ ಮಂತ್ರ ಈ ರೀತಿ ಇದೆ,ಓಂ ನಮೋ ಭಗವತೆ ಕಾಮ ರೂಪೀನೆ ಮಹಾಬಲಾಯ ನಾಗದೀಪತಿಯೆ ಸ್ವಾಹ 108 ಪಠಿಸಿ ಆಮೇಲೆ ನಾಲ್ಕು ಬಾವಿಯಿಂದ ತಂದಿರುವ ನೀರನ್ನು ಒಟ್ಟಿಗೆ ಮಿಶ್ರಮಾಡಿ ಸ್ನಾನ ಮಾಡಿ ,ಸಾಬೂನು ಬಳಸಬಾರದು ಮತ್ತು ನೀರು ಬಿಸಿಮಾಡಬಾರದು ಈಗೆ ಮಾಡಿದ ನಂತರ ತೊಗರಿ ಬೇಳೆ ದಾನ ಮಾಡಿ ಮತ್ತು ಯಾವುದಾದರು ಪ್ರಾಣಿಗೆ ಊಟಹಾಕಿ ಇಲ್ಲಿಗೆ ಸರ್ವ ಸರ್ಪ ದೋಷಗಳು ವಿಮೋಚನೆಯಾಗುವವು,ಆಮೇಲೆ ನೀವು ಊಟಮಾಡಿಕೊಳ್ಳಬಹುದು.
by sri sudhakara
*********
No comments:
Post a Comment