ಅಷ್ಟಾಂಗ ಯೋಗ - ಯಮ , ನಿಯಮ , ಆಸನ , ಪ್ರಾಣಾಯಾಮ , ಪ್ರತ್ಯಾಹಾರ , ಧಾರಣಾ , ಧ್ಯಾನ , ಸಮಾಧಿ , ಇವು ಎಂಟು .
ಯಮ ನಿಯಮಸ್ತುಮಾಲಾಃ - ಸೂತ್ರ. ಕೆಟ್ಟ ಪ್ರವೃತ್ತಿಗಳನ್ನುತಡೆಯುವುದು -ಯಮ ಇದು ಅಹಿಂಸೆ, ಸತ್ಯ, ಆಸ್ತೇಯ (ಕದಿಯದಿರುವುದು) , ಬ್ರಹ್ಮಚರ್ಯ,ಅಪರಿಗ್ರಹ (ಬೇರೆಯವರಿಂದ ಅನಾವಶ್ಯಕ ವಸ್ತುಗಳನ್ನು ಪಡೆಯದಿರುವುದು.
ನಿಯಮ ಆತ್ಮ ಶಿಕ್ಷಣ, ಶೌಚ (ಶುಚಿ), ಸಂತೋಷ , ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿದಾನ.
1. ಶೌಚ - ಕಾಯಾ, ವಾಚಾ,ಮನಸಾ, ಶುದ್ಧತೆ ;
2. ಸಂತೋಷ _ ಇರುವುದರಲ್ಲೇ ತೃಪ್ತಿ.
3. ತಪಸ್ಸು - ಸುಖದುಃಖಗಳನ್ನು ಸಮನಾಗಿಸಹಿಸುವುದು.
4. ಸ್ವಾಧ್ಯಾಯ - ಶಾಸ್ತ್ರದ ಅಧ್ಯಯನ ; ಈಶ್ವರ ಪ್ರಣಿದಾನ ಈಶ್ವರನಲ್ಲಿ ಸರ್ವಸಮರ್ಪಣೆ.
ಆಸನ ಸ್ಥಿರ ಸುಖಾಸನಮ್, ಸೂತ್ರ. ಸುಖಕರವಾದ ಆಸನದಲ್ಲಿ ಬಹಳಕಾಲ ಸ್ಥಿರವಾಗಿ ಇರುವುದು.
ಪ್ರಾಣಾಯಾಮ : ಶ್ವಾಸ ಪ್ರಶ್ವಾಸ ಕ್ರಿಯೆಗಳನ್ನು ನಿಲ್ಲಿಸುವುದು. ಇದು ಏಕಾಗ್ರತೆಗೆ ಸಹಕಾರಿ.
ಪ್ರತ್ಯಾಹಾರ : ಹೊರಮುಖವಾದ ಇಂದ್ರಿಯಗಳನ್ನು ತಡೆಯುವುದು-ಇಂದ್ರಿಯಗಳನ್ನು ಅಂತರ್ಮುಖಿಯಾಗಿಸುವುದು.
ಧಾರಣಾ : ಅಂತರಂಗದ ಯಾವುದಾದರೂ ಒಂದುವಸ್ತುವಿನ ಮೇಲೆ ಚಿತ್ತವನ್ನು ಕೇಂದ್ರೀಕರಿಸುವುದು. (ನಾಭಿ , ಹೃದಯ-ಇತ್ಯಾದಿ)
ಧ್ಯಾನ ತತ್ರ ಪತ್ಯಯೈಕ ತಾನತಾ ಧ್ಯಾನಂ ಸೂತ್ರ. -ಧ್ಯಾನಿಸಬೇಕಾದ ವಸ್ತುವನ್ನು ಏಕಾಗ್ರ ಚಿತ್ತದಿಂದ ದ್ಯಾನಿಸುವುದು.
ಸಮಾಧಿ ಚಿತ್ತದ ಏಕಾಗ್ರತೆಯ ಕೊನೆಯ ಹಂತ . (ಚಿತ್ತ) ಮನಸ್ಸು ಧ್ಯಾನಿಸುವ ವಸ್ತುವಿನಲ್ಲಿ ಲೀನವಾಗಿಬಿಡುತ್ತದೆ. ಹೊರ ಜಗತ್ತಿನ ಅರಿವು ಮಾಯವಾಗುತ್ತದೆ.
No comments:
Post a Comment