SEARCH HERE

Monday 12 April 2021

ಭಗವದ್ಭಕ್ತಿಯೇ ನಿಜವಾದ ಆರೋಗ್ಯ bhagavd bhakti

ಭಗವದ್ಭಕ್ತಿಯೇ ನಿಜವಾದ ಆರೋಗ್ಯದ ಮೂಲ - ರೋಗಕ್ಕೆ ತಕ್ಕ ಪರಿಹಾರ, ದೋಷಕ್ಕೆ ತಕ್ಕ ಪ್ರಾಯಶ್ಚಿತ್ತಗಳಾದರೆ ಮಾತ್ರ ಕ್ಷೇಮವಾಗುತ್ತದೆ. ಇದು ವೆತ್ಯಾಸವಾ ದರೆ ಇನ್ನೊಂದು ತೊಂದರೆ ಗಳು ಬರಬಹುದು.

ತಲೆನೋವಿಗೆ ಅದರ ಕಾರ ಣಕ್ಕೆ ತಕ್ಕಂತಹ ಔಷಧಿಯೇ ಸೂಕ್ತ.ಯಾವುದೋ pain killer. ಬಳಸಿದರೆ ಒಮ್ಮೆಗೆ ಶಮನವಾದರೂ ಅದರ ಹಿಂದೆ ದುಷ್ಪರಿಣಾಮ ಗಳಾಗುತ್ತದೆ.ಆದರೆ ಜ್ಯೋತಿಷ್ಯದಲ್ಲಿ ಸ್ವಲ್ಪ ವಿಭಿನ್ನ. ಪರಿಹಾರ ವೆತ್ಯಾಸವಾದರೆ ದುಷ್ಪರಿಣಾಮವಾಗದು. ಅಲ್ಲದೆ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ

ಯಾರೋ ವಿವಾಹ ವಿಳಂಬವೋ, ಪ್ರತಿಬಂಧಕವೋ ಇದ್ದವರಿಗೆ ಸರ್ಪಸಂಸ್ಕಾರ ಮಾಡಿಸಿ ಎಂದು ಸಲಹೆ ನೀಡು ತ್ತಾರೆ. ಇದರಿಂದೇನೂ ಪ್ರಯೋಜನವಿಲ್ಲ.

ಆಯಾಯ ಭಾವಾಭಿಮಾನಿ, ನಕ್ಷತ್ರಾಭಿಮಾನಿ, ದಶಾಭಿಮಾನಿ, ಭಾದಕ ನಿವಾರಣೆಗೆ ಸಂಬಂಧಿಸಿದ ದೇವತಾರಾಧನೆ ಮಾಡಿದರೆ ಕರ್ಮ ಸಮೃದ್ಧಿಯೂ ಕ್ಷೇಮವೂ ಆಗುತ್ತದೆ.

ಕುಜನು ಸರಿ ಇದ್ದರೆ ಮಂಗಲನೂ, ಪ್ರತಿ ಕೂಲವಿದ್ದಾಗ ಅಶುಭವೂ ಆಗುತ್ತದೆ. ಅವನ ದೋಷ ನಿವೃತ್ತಿಗೆ, ಕೆಲವೊಂದು ವಿಚಾರಕ್ಕನುಗುಣವಾಗಿ ಸುಬ್ರಹ್ಮಣ್ಯ, ನೃಸಿಂಹ, ಪಾರ್ವತೀ ಸ್ವರೂಪದ ದೇವಿಯರ ಆರಾಧನೆ ಬೇಕು.ಇದು ಸ್ಥಾನಗಳ ಆಧಾರದಲ್ಲಿ ನಿರ್ಣಯ ವಾಗುತ್ತದೆ.

ವಿವಾಹ ದೋಷಗಳಿಗೆ ಸುಬ್ರಹ್ಮಣ್ಯಾರಾಧನೆಯು ಶ್ರೇಯಸ್ಕರ. ಶೀಘ್ರ ವಿವಾಹ ಪ್ರಾಪ್ತಿಗಾಗಿ ಸ್ವಯಂವರ ಪಾರ್ವತಿ ಪೂಜೆ ಮಾಡಿಸಬೇಕು.ಹಾಗೆಯೇ ಬಾಲಗಣಪತಿ ಹೋಮವೂ ಇದಕ್ಕೆ ಪರಿಹಾರ.ಗಣಪತಿಯು ಕ್ಷಿಪ್ರಫಲ ನೀಡುವ ದೇವರು. ರೋಗ ನಿವಾರಣೆಗೂ ಸುಬ್ರಹ್ಮಣ್ಯ ಸೇವೆ ಉತ್ತಮ..

ಆದರೆ ಮೃತ್ಯುದೋಷ ನಿವಾರಕ ಸುಬ್ರಹ್ಮಣ್ಯನಲ್ಲ.ಅದಕ್ಕೆ ರುದ್ರದೇವರು.ಅದಕ್ಕಾಗಿ ಮೃತ್ಯುಂಜಯ ಹೋಮ ಮಾಡಿಸಬೇಕು.ಇಲ್ಲಿಯೂ ಯಾವ ಮಂತ್ರದಿಂದ, ಯಾವ ರೂಪದಲ್ಲಿ ಮಾಡಬೇಕೆಂಬ ನಿಯಮಗಳಿವೆ.ಅದು ದೋಷದ ಆಧಾರದಲ್ಲಿ ಆಗಬೇಕು. ತ್ರ್ಯಕ್ಷರಿ ಏಕಾಧ್ವರದಲ್ಲಿ, ಸಂಜೀವಿನಿ ಮೃತ್ಯುಂಜಯ,ಮೃತ್ಯು ಪಂಚಕ ದಾನ ಸಹಿತ ಮೃತಸಂಜೀವಿನಿ ಹೋಮ ಇತ್ಯಾದಿ ಹೋಮ ಬೇಧಗಳಿವೆ.

ಸುದರ್ಶನ ಹೋಮದಲ್ಲೂ ಬೇರೆ ಬೇರೆ ರೂಪಗಳಿವೆ. ಶತಾಕ್ಷರಿಯೋ,ಷಡಕ್ಷರಿಯೋ, ರೋಗ ನಿವಾರಣಾ ಮಂತ್ರ ಪೂರ್ವಕವಾಗಿಯೋ,ಶತ್ರುತ್ವ ನಾಶಕ್ಕಾಗಿಯೋ ಹೀಗೆ ಬೇರೆ ಬೇರೆ ರೂಪಗಳಿವೆ.

ರೋಗಕ್ಕೆ ತಕ್ಕಂತ ಹೋಮ ಪೂಜೆಗಳನ್ನು ಮಾಡಿಸಬೇಕು. ರೋಗ ನಿವಾರಣೆಗಾಗಿ ಧನ್ವಂರಿ ಹೋಮ ಹೇಳಿದೆ. ಹಾಗೆಯೇ ದೇವತಾ ಕೋಪ ನಿವಾರಣೆಗೂ ಧನ್ವಂತರಿ ಸೂಕ್ತ.ಭಾದಕ ನಿವಾರಣೆಗೂ ಧನ್ವಂತರಿ ಹೋಮವನ್ನು ಮಾಡಿಸುವ ವಿಧಾನವನ್ನೂ ಹೇಳಿದೆ.

ಬೇರೆ ಬೇರೆ ದೋಷಗಳಿಗೆ ಬೇರೆ ಬೇರೆ ಮಂತ್ರ, ಸಮ್ಮಿತ್ತುಗಳ ಮೂಲಕ ಹೋಮ ಯಾಗದಿಗಳನ್ನು ಮಾಡಿಸಲು ಶಾಸ್ತ್ರಗಳು ಹೇಳಿವೆ.

ಏನಿದ್ದರೂ‘ ತಸ್ಮತ್ ಶಾಸ್ತ್ರ ಪ್ರಮಾಣೇಶು ‘. ಎಂಬಂತೆ ಶಾಸ್ತ್ರ ವಚನದಂತೆ ಜ್ಯೋತಿಷ್ಯ ಪರಿಹಾರಗಳನ್ನು ಮಾಡಿಸಿದಾಗ ನೆಮ್ಮದಿ ಸಿಗುತ್ತದೆ ಅಲ್ಲದೆ ತತ್ತದ್ದೇವತೆಗಳು ತೃಪ್ತರಾಗಿ ಅನುಗ್ರಹ ಮಾಡುತ್ತಾರೆ.

ಎಲ್ಲಾ ಸಂತಾನ ದೋಷಕ್ಕೆ ಒಂದೇ ರೀತಿಯ ಪರಿಹಾರವಾಗಲಾರದು. ಸಂತಾನ ದೋಷವು ರೋಗದಿಂದ ಬರಬಹುದು, ಪೈತ್ರಿಕ ದೋಷದಿಂದ ಬರಬಹುದು, ಮಾಟ ಛಿದ್ರಾದಿ ದೋಷಗಳಿಂದ, ಶಾಪಾದಿಗಳಿಂದ, ಆಹಾರ ನಿಯಮಗಳಿಂದಲೂ ಬರಬಹುದು.ಇದಕ್ಕೆಲ್ಲ ಆಶ್ಲೇಷಾ ಬಲಿ ಮಾಡಿಸಿ ಎಂದರಾಗದು.

ಒಂದು ಗ್ರಹವು ಪ್ರತೀ ಕ್ಷಣ ಕ್ಷಣಕ್ಕೂ ವಿವಿಧ ದೇವತಾ ಶಕ್ತಿ ಕಿರಣಗಳ ಪರಿಣಾಮ ಬೀರುತ್ತಾನೆ. ಆಂದರೆ ಇದು ಆ ಗ್ರಹಗಳ ಅಂಶ ಚಿಂತನೆ.

ಶಕ್ತಿಯ ನಷ್ಟವಾಗುವಿಕೆ ಇತ್ತಾದಿಗಳು ದೋಷಗಳಿಗೆ ಕಾರಣವಾಗುತ್ತದೆ.
ಸ್ವತಃ ಪರಾಶರರೇ ಇದನ್ನು ಸಂಶೋಧಿಸಿದ್ದರೂ, ಅನುಷ್ಟಾನಿಸಿಕೊಳ್ಳಲಿಕ್ಕೆ ಸಾಧ್ಯವೇ ಎಂದೂ ಕೇಳಿದ್ದಾರೆ ? ಇದನ್ನು ಕೊನೆಗೆ ಒಂದು ಮಾತಿನ ಮೂಲಕವಾಗಿ ಹೇಳಿ ಮುಗಿಸಿದ್ದಾರೆ.

ಅದೇ ನೆಂದರೆ, ‘ಕೋ ವಕ್ತ್ರಾ ತಮಕಂ ವೇದಸಾ ವಿನಾ’ ಇದೆಲ್ಲಾ ತಿಳಿಯಲು ಸಾಧ್ಯವಾಗಬಹುದೇ ಎಂಬ ಸಂಶಯವನ್ನು ವ್ಯಕ್ತಪಡಿಸಿದ ಅಂಶವಿದು. ಅದಕ್ಕಾಗಿ ಯಾವುದೇ ಒಂದು ದೇವಸ್ಥಾನದ ಪ್ರಧಾನ ದೇವರ ಗುಡಿಯ ಆವರದಲ್ಲಿ ಅನೇಕ ರೂಪದ ಶಕ್ತಿದೇವರುಗಳ ಗುಡಿಗಳನ್ನು ಮಾಡಿದ್ದು. ದೇವತೋಪಾಸನೆಯಿಂದ ನೆಮ್ಮದಿ ಗಳಿಸಿಕೊಳ್ಳಬೇಕು. ನೆಮ್ಮದಿಯಿಂದ ಮನೋವಿಕಾರಗಳು ದೂರಹೋಗುತ್ತದೆ.ವಿಕಾರಗಳು ದೂರಹೋದಾಗ ದೇಹವು ಸ್ವಚ್ಛವಾಗುತ್ತದೆ. ಇದುವೇ –
' ಶರೀರ ಮಾಧ್ಯಂ ಖಲು ಧರ್ಮ ಸಾಧನಂ ‘ ಆಗುತ್ತದೆ.ಆದ್ದರಿಂದ ಮೊದಲು ಶರೀರ ಕಾಪಾಡಿಕೊಳ್ಳಿ..ಕಾಪಾಡಬೇಕಾದರೆ ಮನೋ ಶುದ್ಧಿಯಾಗಬೇಕು. ಮನೋ ಶುದ್ಧಿಗೆ ದೇವತಾರಾಧನೆಯೊಂದೇ ಸುಲಭ ಮಾರ್ಗ.ಹಾಗಾಗಿ ಭಗವದ್ಭಕ್ತಿಯೇ ನಿಜವಾದ ಆರೋಗ್ಯ.

OM SRI GURU RAGHAVENDRAYA NAMAHA.
*****

No comments:

Post a Comment