SEARCH HERE

Tuesday, 1 January 2019

ashada shukla ekadashi tapta mudradharana ಆಷಾಢ ಶುಕ್ಲ ಏಕಾದಶೀ - ಶಯನೀ ಏಕಾದಶೀ - ತಪ್ತ ಮುದ್ರಾಧಾರಣೆ



Tapta Mudradharana on Ashada Shukla Ekadashi
by Narahari Sumadhwa

1. Who must have Tapta mudradharana?

Ans : It applies to all caste, all ashrama, and ladies. All Vishnu bhaktaas irrespective of Caste whether it is Brahmin, Kshatriya, Vaishya, Shoodra, all must have Tapta Mudradharana from Vaishnava only. Even the cattle in our house must have Tapta Mudradharana.


2. When one must have Tapta Mudradharana?


Ans : During Jaatakarma, Choula, Upanayana samskara, marriage, and on each day Prathama Ekadashi day. It is just like renewal of Vaishnava Deekshe., Other important days on which Tapta Mudradharana to be taken are : Shravana Dwadashi Upavasa day; Bhadrapada Shukla Ekadashi, Karthika Shukla Ekadashi; Upakarma day.


3. Whether gods also must have Tapta Mudradharana?


Ans : Yes. They too must have Tapta Mudradharana on Shravana Dwadashi, Prathama Ekadashi day – as per Yukti Mallika


4. Whether Gruhastaas can give Tapta Mudradharana?


Ans – No. Gruhastaas are not eligible to give Tapta Mudradharana. Those Gruhastaas who take Tapta Mudradharana themselves will not get any punya. It is just like Poundrika Vasudeva who got Mudra just to resemble Krishna, in vain. – Ramamruta Maharnava


5. When was the system of Tapta Mudradharana started?


Ans – Once All gods including Indra were defeated by Vrutrasura. They went to Srihari and prostrated for help. Srihari told “Let all of you have Chakra Shanka symbol and fight with him. Just with the mudradharana all Vrutradi daithyaas would be killed and you will win”. All gods followed Srihari’s directions and they won. Since then onwards, all Vaishnavaas started having Mudradharana as it helps in win over enemies, it helps in winning Kama-krodhadhi arishadvarga. – Source Padmapurana.


6. Why one must have Taptamudradharane?


Ans : Tapta Mudradharane is the “Vaishnavathva” symbol. Tapta mudradharane has a prominent place in Madhwa philosophy. In harivamsha – During Krishnavatara, Srikrishna had ordered that only those who have Mudradarane can enter Dwarake. Because of wearing Mudradharane – Power of Tamoguna – ajnaana, mithyaagnaana, will be removed, and through Shanka – Sathvaguna will be replacing tamoguna.


7. Chakra- Shanka – abhimani devate :


For Chakra – Durgadevi; Shanka- Sridevi; Padma – Boodevi; Gada – Vayu.


8. From whom one has to take Tapta Mudradharana?


ಲೋಭ್ಯಾಧ್ಯುಪಾದಿನಾ ವಾಪಿ ಯಸ್ಮಾತ್ ಕಸ್ಮಾಚ್ಚ ಪೂರುಷಾತ್ |

ಸ್ವಯಂ ವಾಪಿ ದಹೇದ್ಗಾತ್ರಂ ಚಕ್ರಶಂಖಾದಿಕೈರಪಿ |
ಸೋಪಿ ವ್ರಜೇತ ನಿರಯಂ ಸಾಕಂ ಸ್ವಗುರುಣಾ ಚಿರಂ |

लोभ्याध्युपादिना वापि यस्मात् कस्माच्च पूरुषात् ।

स्वयं वापि दहेद्गात्रं चक्रशंखादिकैरपि ।
सोपि व्रजेत निरयं साकं स्वगुरुणा चिरं ।

lObhyaadhyupaadinaa vaapi yasmaat kasmaachcha pUruShaat |


svayaM vaapi dahEdgaatraM chakrashaMKaadikairapi |

sOpi vrajEta nirayaM saakaM svaguruNaa chiraM |

One has to get Tapta Mudradharana from their respective Mutt Yathi only. As per Vishnu Rahasya shloka vyaakyana. It is observed from various Pandits of various mutts, that even though they have studied under various Mutt yathees, but they have taken Mudradharana from their respective mutt yathi only. Some of the example are :


Pandurangi Anandabhattarakaru even after defeating many pundits and handing over the “jayapatra” (win certificate) to Vadirajaru, he got mudradharana from Uttaradimutt yathi only.


Srikrishnavadootharu, even thouth he was one of the prominent bhakthaa of Raghavendra Tirtharu, his family members are getting mudradharana from Uttaradimutt yathi only.


Even though, Sri Bidarahalli Srinivasaachar got the title “Tirtha” from Rayaru, he was getting Mudradharana from Uttaradimutt yathi only.


LinGeri Acharyaru was the shishya of Yadavaryaru of UM parampare, but, he used to get Mudradharana from Raghavendra Mutt yathi only.


There is another opinion – we can take mudradharana from any yathigalu, when we are in a far off place where no yathi will come for mudradharana or you are not in a position to go to his place.


There is another opinion – We can take mudra from our gurugalu also, when there is no chance of getting mudradharana from your Mutt peetadhipathi.


In view of the above. even though one must take mudradharana from the respective mutt yathi only. But taking mudra from other mutt pontiffs is also accepted as better to have mudra instead of not having it at all.


9. Sri Vadiraja Tirtha quotes in his Yuktimallika : – Mudradharana will be given by Acharya Madhwa only. In Agni he will be agninamaka and gives Sudarshana and shanka Tapta Mudradharana. There will be sannidhana of Acharya Madhwa in the Madhwa Yathi on this day.


10. Sudarshana Homa on Ashada Shukla Ekadashi –


On Ekadashi day, there is no provision for annadana, jaladaana, and no havissu for gods. But on Ashada Shukla Ekadashi day, Sudarshana Homa to be done with chanting of Mantra only. Only Vishnu to be invited for the homa.


11. Importance of Mudradharana – some quotes :


Those who scolds/disrespects the one with Mudradharana, would be getting the sin of disrespecting/scolding Srihari.


One who does not have Taptamudradharana will not have Vedadyana adhikara.


Even during antya samskara time also Tapta mudradharana to be done (by Mudradharana) which will remove the fear of Yama and his servants.


We should invite for Bhojana only those who has Mudra, lest it should be bhojana for pitru with mala mootra.


As per Vamana Purana – the one who wears Sudarshana Chakra Mudra even for playing would get Vishnu loka


As per Shivapurana – All those who are singing, praying the mahima of Srihari would be having Mudra.


As per Skanda purana – One who has Chakradi ayudhaas, even if he has done so many sins, Yama will not come near him. The shareera which has Shanka-Chakra will be the home for gods.


As per Padmapurana – Uttarakhanda quote – Shiva told Parvathi “Those who have agnitapta Vishnuchakra would be a Mahatmya.


As per Markandeya Purana – Tapta Mudharana indicates the relationship between Srihari and us. It is similar to ladies wearing bangles, kumkuma, etc as the symbol of “muthaide”. Similarly those who have mudra would be recognized as “Vaishnava”.


As per Matsyapurana – Vishnubhakta should have Chakra to his right shoulder and Shanka to his left shoulder, which would fetch him Vishnuloka.


As per Skanda Purana – Even shoodras who possess Shanka Chakra symbol would get Svarga.


Kanyadaana to be done only for one who has Mudradharana.


As per Smruti muktavali – One who does sandhyavandana, japa, homa, etc with Ordhwapundra dharana, – he will not get any punya. Entire punya would be taken away by raakshasas.


12. Tapta mudradharana Mahatva can be found in various Granthaas:-


“Skanda Purana”, “Vishnu Rahasya”, “Padma Purana”, “Sanaka Smruti”, “Chakrastuthi” of Sri Vadirajaru, “Yukthimallika-Phalisaurabha” of Srivadirajaru, “Taptachakra meemamsa” by Sri Vijayeendraru, “Ramamruta Maharnava” by Satyabhinava Tirtharu, “Smrutyartha sagara” by Chalari Narasimhacharya; “Smruti Muktavali” by Krishnacharya, “Nirnaya RAtna” by Chalari Sheshacharya, “Tapta mudradharana samarthanam” – Kundalagiri Acharyaru, “Vaishnava Deekshe” by Sagri Raghavendra Upadhyaya,


13. Mantras to be chanted while applying –


Chakra Mudra –

sudarshana mahaajwaala koTisooryasamaprabha |

ajnaanaaMdhasya mE nityaM viShNOrmaargaM pradarshaya |

सुदर्शन महाज्वाल कॊटिसूर्यसमप्रभ ।

अज्ञानांधस्य मे नित्यं विष्णोर्मार्गं प्रदर्शय ।

ಸುದರ್ಶನ ಮಹಾಜ್ವಾಲ ಕೊಟಿಸೂರ್ಯಸಮಪ್ರಭ |

ಅಜ್ಞಾನಾಂಧಸ್ಯ ಮೇ ನಿತ್ಯಂ ವಿಷ್ಣೋರ್ಮಾರ್ಗಂ ಪ್ರದರ್ಶಯ |

Hey Sudarshana | You possess mahajwaale which is equivalent to crores of Suryaa’s power. I am a blind with ajnaana. Please guide me with Vishnu maarga.


Shanka Mudra :-

पांचजन्य निजध्वान ध्वस्तपातक संचय ।

त्राहिमां पापिनां घोरसंसारार्णव पातिनं ।

ಪಾಂಚಜನ್ಯ ನಿಜಧ್ವಾನ ಧ್ವಸ್ತಪಾತಕ ಸಂಚಯ |

ತ್ರಾಹಿಮಾಂ ಪಾಪಿನಾಂ ಘೋರಸಂಸಾರಾರ್ಣವ ಪಾತಿನಂ |

paaMchajanya nijadhwaana dhvastapaataka saMchaya |

traahimaaM paapinaaM GOrasaMsaaraarNava paatinaM |

hey | Paanchajanya shanka | With your voice, you would remove the entire group of sins. Lift me from the fear of samsara saagara.


Gadaa Mudra :-

ಬ್ರಹ್ಮಾಂಡ ಭುವನಾರಂಭ ಮೂಲಸ್ಥಂಭೋ ಗದಾಧರ: |

ಕೌಮೋದಕೀ ಕರೇ ಯಸ್ಯ ತಂ ನಮಾಮಿ ಗದಾಧರಂ |

ब्रह्मांड भुवनारंभ मूलस्थंभो गदाधर: ।

कौमोदकी करे यस्य तं नमामि गदाधरं ।

brahmaaMDFa bhuvanaaraMbha mUlasthaMbhO gadaadhara |

kaumOdakI karE yasya taM namaami gadaadharaM |

Srimaha Vishnu is the source or foundation for the Brahmaanda named entire world. You hold Kaumodaki gadha in your hand. With the smarana of Gadadara, we do the smarana of Gadaa mudra.


Padma Mudra –

संसारभयभीतानां योगिनां अभयप्रद: ।

पद्महस्तेन यो देवो योगीशं तं नमाम्यहं ।

ಸಂಸಾರಭಯಭೀತಾನಾಂ ಯೋಗಿನಾಂ ಅಭಯಪ್ರದ: |

ಪದ್ಮಹಸ್ತೇನ ಯೋ ದೇವೋ ಯೋಗೀಶಂ ತಂ ನಮಾಮ್ಯಹಂ |

saMsaarabhayabhItaanaaM yOginaaM abhayaprada: |
padmahastEna yO dEvO yOgIshaM taM namaamyahaM |

Srihari is abhayaprada for all yogees and samsarabhayabheetaas. Srihari holds Padma and he is yogeesha Narayana Mudra


ನಾರಾಯಣ ನಮಸ್ತೇಸ್ತು ನಾಮಮುದ್ರಾಂಕಿತಂ ನರಂ |

ದೃಷ್ಟೈವ ಲಭತೇ ಮುಕ್ತಿಂ ಚಂಡಾಲೋ ಬ್ರಹ್ಮಘಾತಕ: |

नारायण नमस्तेस्तु नाममुद्रांकितं नरं ।

दृष्टैव लभते मुक्तिं चंडालो ब्रह्मघातक: ।

naaraayaNa namastEstu naamamudraaMkitaM naraM |

dRuShTaiva labhatE muktiM chaMDaalO brahmaGaataka: |

Hey Narayana | with the naarayana named mudra even brahmahatya doshi Chaandala also would be free from his sins.



Source –
“Vaishnavadeekshe” by Sri Sagri Raghavendra Upadhyaya,

“Ramamrutra Maharnava”  vyakyana by Sri Vyasanakere Prabhanjanacharya

“Tapta Mudradharana” by Sri Vyasanakere Prabhanjanacharya

- collected by NARAHARI SUMADHWASEVA
******

ತಪ್ತಮುದ್ರಾಧಾರಣೆ ಸಂಖ್ಯೆ

ಕೆಲವರು ಐದು ಮುದ್ರೆಹಾಕುವ ಸಂಪ್ರದಾಯ ಇದೆಯಲ್ಲ ಅವರು ಐದೂ ಮುದ್ರೆಯನ್ನೂ ಹಾಕಿಸಿಕೊಳ್ಳಬೇಕಾ ಅಥವಾ ಯಾವುದಾದರೂ ಒಂದನ್ನೇ ಐದು ಸಲ ಹಾಕಿಸಿಕೊಳ್ಳಬೇಕಾ ಎಂಬ ಪ್ರಶ್ನೆ ಕೇಳಿದ್ದರು.

ಅದಕ್ಕೆ ವಿಷ್ಣು ರಹಸ್ಯದಲ್ಲಿ ಇರುವ ಉಲ್ಲೇಖ ಕೊಡುತ್ತಿದ್ದೇನೆ.

"ತಪ್ತಮುದ್ರಾಧಾರಣೆ"

- ತಪ್ತಮುದ್ರಾಧಾರಣೆಯಲ್ಲಿ ಬೇರೆ ಬೇರೆ ಸಂಪ್ರದಾಯ ಇದೆ.  ಕೆಲವರು ಒಂದೇ ಮುದ್ರೆ ಹಾಕಿಸಿಕೊಂಡರೆ, ಕೆಲವರು ಎರಡನ್ನೂ, ಕೆಲವರು ಐದನ್ಧೂ ಹಾಕಿಸಿಕೊಳ್ಳುತ್ತಾರೆ.

ಎಲ್ಲಾ ಸಂಪ್ರದಾಯಗಳೂ ಸರಿಯೆ.

ವಿಷ್ಣು ರಹಸ್ಯ ರೀತ್ಯಾ ಮುದ್ರಾಧಾರಣೆ ಯಾರು ಮಾಡಬೇಕು ಎಂಬುದನ್ನು ಗುರುವಾಗಲೀ, ಯತಿಯಾಗಲೀ, ಹಿರಿಯರಾಗಲಿ ಒಬ್ಬರಿಂದ ಮುದ್ರಾಧಾರಣೆ ಮಾಡಿಸಿಕೊಳ್ಳತಕ್ಕದ್ದು ಎಂದಿದೆ. 

ಪಿತಾವಪಿ ಗುರುರ್ವಾಪಿ ಯ: 
ಕೋಪಿ ಹಿ ಮಹಾನ್ ಭವೇತ್ ! 
ಸ ದಹೇದಕ್ಷಿಣೇ ಬಾಹೌ
ಚಕ್ರಂ ಶಂಖಂ ಚ ವಾಮತ: | ೮೯ |

ಅದೇ ರೀತಿ ಎಲ್ಲೆಲ್ಲಿ ಮುದ್ರೆ ಹಾಕಿಸಿಕೊಳ್ಳಬೇಕು ಮತ್ತು ಯಾವ ಮುದ್ರೆಯನ್ನು ಧರಿಸಬೇಕು ಎಂದೂ ಉಲ್ಲೇಖವಿದೆ. 

ಸ್ತನಯೋರೂರ್ಧ್ವತಶ್ಚಾಪಿ 
ಸ್ವೇಚ್ಛಯಾ ಚ ತಥೋದರೇ |
ಏವಂ ಮುದ್ರಾಪಂಚಕಂ ವಾ
ಮುದ್ರಾದ್ವಯಮಪಿ ವಾ| ೯೦|

ವಿಷ್ಣು ರಹಸ್ಯ ಅಧ್ಯಾಯ ೭

ಬಲಭುಜದಲ್ಲಿ ಚಕ್ರವನ್ನೂ, ಎಡಭುಜದಲ್ಲಿ ಶಂಖವನ್ನೂ, ಹೀಗೆಯೇ ಇಚ್ಛಾನುಸಾರ ಬಲಸ್ತನದಲ್ಲಿ ಚಕ್ರವನ್ನು, ಎಡಸ್ತನದಲ್ಲಿ ಶಂಖವನ್ನೂ, ಹಾಗೇ ಹೊಟ್ಟೆಯ ಮೇಲೆ ಚಕ್ರವನ್ನೂ ಮುದ್ರಿಸಬೇಕು..  ಹೀಗೆ ಪಂಚಮುದ್ರೆಯನ್ಧಾಗಲೀ ಎರಡು ಮುದ್ರೆಯನ್ನಾಗಲೀ ಸ್ವೀಕರಿಸಬೇಕು.  

ಹೀಗೆ ತಪ್ತಮುದ್ರೆಯಲ್ಲಿ ಶಂಖ ಮತ್ತು ಚಕ್ರವನ್ನು ಮಾತ್ರ ಹೇಳಿದ್ದಾರೆ .  

ಸುದರ್ಶನ ಮಹಾಜ್ವಾಲ ಕೊಟಿಸೂರ್ಯಸಮಪ್ರಭ |
ಅಜ್ಞಾನಾಂಧಸ್ಯ ಮೇ ನಿತ್ಯಂ ವಿಷ್ಣೋರ್ಮಾರ್ಗಂ ಪ್ರದರ್ಶಯ |. - ಚಕ್ರಮುದ್ರೆ
-ಚಕ್ರಮುದ್ರೆಯಿಂದ ಅಜ್ಞಾನ ನಾಶ

ಪಾಂಚಜನ್ಯ ನಿಜಧ್ವಾನ ಧ್ವಸ್ತಪಾತಕ ಸಂಚಯ |
ತ್ರಾಹಿಮಾಂ ಪಾಪಿನಾಂ ಘೋರಸಂಸಾರಾರ್ಣವ ಪಾತಿನಂ | - ಶಂಖಮುದ್ರೆ
- ಶಂಖಮುದ್ರೆಯಿಂದ ನಮ್ಮ ಪಾಪ ಪರಿಹಾರ .

ಬ್ರಹ್ಮಾಂಡ ಭುವನಾರಂಭ ಮೂಲಸ್ಥಂಭೋ ಗದಾಧರ:|
ಕೌಮೋದಕೀ ಕರೇ ಯಸ್ಯ ತಂ ನಮಾಮಿ ಗದಾಧರಂ |
ಗದಾಮುದ್ರೆ -  ಗದಾಮುದ್ರೆಗೆ ನಮಸ್ಕಾರ

ಸಂಸಾರಭಯಭೀತಾನಾಂ ಯೋಗಿನಾಂ ಅಭಯಪ್ರದ:|
ಪದ್ಮಹಸ್ತೇನ ಯೋ ದೇವೋ ಯೋಗೀಶಂ ತಂ ನಮಾಮ್ಯಹಂ |
- ಪದ್ಮಮುದ್ರೆ - ಅಭಯಪ್ರದ ಶ್ರೀಹರಿಗೆ ನಮಸ್ಕಾರ

ನಾರಾಯಣ ನಮಸ್ತೇಸ್ತು ನಾಮಮುದ್ರಾಂಕಿತಂ ನರಂ |
ದೃಷ್ಟೈವ ಲಭತೇ ಮುಕ್ತಿಂ ಚಂಡಾಲೋ ಬ್ರಹ್ಮಘಾತಕ: |
- ನಾರಾಯಣ ಮುದ್ರೆ
- ಇಲ್ಲಿಯೂ ಕೂಡ ನಮಸ್ಕಾರ 

ಶಂಖಚಕ್ರ ಮುದ್ರೆಯನ್ನು ಎಲ್ಲಾ ಮಠಗಳೂ ನೀಡುತ್ತಾರೆ .  ಏಕೆಂದರೆ ಅಜ್ಞಾನ ನಾಶ ಮತ್ತು ಪಾಪನಾಶಕ್ಕಾಗಿ.

ಉಳಿದ ಮೂರು ಮುದ್ರೆಗಳನ್ನೂ ಯಾರೂ ನೀಡುತ್ತಿಲ್ಲ.  ಆದರೆ ಕೆಲವು ಮಠದವರು ಅದನ್ನೇ - ಶಂಖಚಕ್ರವನ್ನೇ  ಹೆಚ್ಚು ಸಲ ನೀಡುತ್ತಾರೆ.  ಇದು ಅಧಿಕ ಫಲವೇ ಹೊರತು ತಪ್ಪಲ್ಲ.      ಆದ್ದರಿಂದ ಶಂಖಚಕ್ರ ಮುದ್ರೆಯನ್ನು ಹೆಚ್ಚುವರಿ ನೀಡುವುದು ಅಧಿಕ ಫಲಕ್ಕಾಗಿ.  ಉಳಿದ ಮೂರು ಮುದ್ರೆಗಳ ಮಂತ್ರಗಳಲ್ಲಿ ಅದನ್ನು ಧರಿಸಿರುವ ಶ್ರೀಹರಿಗೆ ನಮಸ್ಕಾರ ಹೇಳಿದ್ದಾರೆಯೇ ಹೊರತು ಅದರ ತಪ್ತಮುದ್ರಾಧಾರಣೆ ಫಲ ಹೇಳಿಲ್ಲ 

 ಆದ್ದರಿಂದ ಶಂಖ ಚಕ್ರ ಮುದ್ರೆಯನ್ನೇ ಎಲ್ಲರೂ ಹಾಕುವುದು, ಬೇರೆ ಮುದ್ರೆ ಹಾಕುವ ಸಂಪ್ರದಾಯ ಇಲ್ಲ

ನರಹರಿ ಸುಮಧ್ವ
***

ಚಾತುರ್ಮಾಸದ ಪ್ರಾರಂಭದಲ್ಲಿ ಬರುವ ಶಯನೈಕಾದಶಿಯನ್ನು ಪದ್ಮಾ ಏಕಾದಶೀ ಎಂದು ಸಹ ಕರೆಯಲಾಗಿದೆ. ಈ ಶ್ರೇಷ್ಟವಾದ ಏಕಾದಶಿಯಂದು ಉಪವಾಸವನ್ನು ಮಾಡಿ ವಿಷ್ಣುಮಂದಿರಗಳ ದರ್ಶನ ಮಾಡುವುದರಿಂದ ಮಹಾಪಾಪಗಳ ನಾಶ, ಇಹ ಮತ್ತು ಪರದಲ್ಲಿ ಉತ್ಕರ್ಷ ಖಂಡಿತ ಎನ್ನುವುದು ಶಾಸ್ತ್ರಗಳ ಆಣೆಯಾಗಿದೆ.

ಆಷಾಢ ಶುಕ್ಲ ಶಯನೀ ಏಕಾದಶೀ ಮಹಾತ್ಮೆ

ಶಯನೀ ಏಕಾದಶಿಯ ಮಹಾತ್ಮೆಯು ಭವಿಷ್ಯೋತ್ತರಪುರಾಣದಲ್ಲಿ ಶ್ರೀಕೃಷ್ಣ ಯುಧಿಷ್ಠಿರ ಸಂವಾದವಾಗಿ ಬರುತ್ತದೆ. ಈ ಆಖ್ಯಾನ ಅತೀ ವಿಷದವಾಗಿದೆ. ಅಧ್ಯಾಯದಲ್ಲಿ ಏಕಾದಶಿಯ ಮಹಿಮೆಯನ್ನು ಹೇಳಿ ಚಾತುರ್ಮಾಸ ವ್ರತ ನಿಯಮಾದಿಗಳ ವರ್ಣನೆ ದೀರ್ಘವಾಗಿ ಹೇಳಲಾಗಿದೆ. ಈ ಏಕಾದಶೀ ತಿಥಿಯಿಂದಲೇ ಚಾತುರ್ಮಾಸ ವ್ರತವು ಸಹ ಪ್ರಾರಂಭವಾಗುತ್ತದೆ. ಈ ದಿನದಂದು ಶ್ರೀಮನ್ನಾರಾಯಣನು ಕ್ಷೀರಸಾಗರದಲ್ಲಿ ನಿದ್ರೆಯನ್ನು ಹೊಂದುವುದರಿಂದ ಈ ಏಕಾದಶಿಯನ್ನು ಶಯನೀ ಏಕಾದಶೀ ಎಂತಲೂ ಕರೆಯಲಾಗುತ್ತದೆ. ಉಪವಾಸ, ಪಾರಾಯಣ, ಭಜನೆ, ಜಾಗರಣೆ ಮತ್ತು ವಿಷ್ಣುಮಂದಿರಗಳ ದರ್ಶನ ಈ ದಿನದ ಮಹಾಪುಣ್ಯ ವಿಶೇಷ. ಪಂಢರಾಪುರದಲ್ಲಿ ಈ ತಿಥಿಯಂದು ಶ್ರೀವಿಠ್ಠಲನ ದರ್ಶನಕ್ಕಾಗಿ ಲಕ್ಷಾನುಲಕ್ಷ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಈ ಲೇಖನದಲ್ಲಿ ಕೇವಲ ಏಕಾದಶೀ ಕುರಿತ ಮಹಾತ್ಮೆಯನ್ನು ಸಂಕ್ಷಿಪ್ತವಾಗಿ ಸಂಗ್ರಹಮಾಡಿದ್ದೇನೆ.


ಒಮ್ಮೆ ನಾರದರು ತನ್ನ ತಂದೆಯಾದ ಚತುರ್ಮುಖ ಬ್ರಹ್ಮದೇವರ ಕುರಿತು ಆಷಾಢಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯ ಮಹಿಮೆಯನ್ನು ಹೇಳಬೇಕಾಗಿ ಬೇಡಿಕೊಂಡರು. ಆಗ ಬ್ರಹ್ಮದೇವರು ನಾರದರನ್ನು ಕುರಿತು –

ಪರಮ ವೈಷ್ಣವನಾದ ನಾರದನೇ –

ನಾತಃ ಪರತರಂ ಲೋಕೇ ಪವಿತ್ರಂ ಹರಿವಾಸರಾತ್ |

ಕರ್ತವ್ಯಂ ತು ಪ್ರಯತ್ನೇನ ಸರ್ವಪಾಪಾಪನುತ್ತಯೇ ||


ಈ ಲೋಕದಲ್ಲಿ ಏಕಾದಶೀ ವ್ರತಕ್ಕಿಂತ ಶ್ರೇಷ್ಠವಾದ ಬೇರೊಂದು ಪವಿತ್ರವಾದ ವ್ರತವಿಲ್ಲ, ಆದುದರಿಂದ ಸರ್ವಪಾಪಗಳ ನಿವೃತ್ತಿಗಾಗಿ ಪ್ರಯತ್ನಪೂರ್ವಕ ಏಕಾದಶೀ ವ್ರತವನ್ನು ಆಚರಿಸಬೇಕು.


ಏಕಾದಶ್ಯಾಂ ವ್ರತಂ ಪುಣ್ಯಂ ಪಾಪಘ್ನಂ ಸರ್ವಕಾಮದಮ್ |

ನ ಕೃತಂ ಯೈರ್ನರೈರ್ಲೋಕೇ ತೇ ನರಾ ನಿರಯೈಷಿಣಃ ||


ಪಾಪಗಳನ್ನು ನಾಶಮಾಡುವಂತಹ, ಸಕಲ ಕಾಮನೆಗಳನ್ನು ತಂದುಕೊಡುವಂತಹ ಏಕಾದಶೀ ಎಂಬ ಪುಣ್ಯವ್ರತವನ್ನು ಈ ಲೋಕದಲ್ಲಿ ಯರು ಆಚರಿಸುವುದಿಲ್ಲವೋ ಅವರು ನರಕವನ್ನು ಸೇರುತ್ತಾರೆ. ಹೀಗೆ ಆದೇಶಿಸಿ, ಪದ್ಮಾ ಎಂಬ ಹೆಸರುಳ್ಳ ಶ್ರೀಹರಿಯ ಅತ್ಯಂತ ಪ್ರೀತಿಗೆ ಪಾತ್ರವಾದಂಥ ಈ ಏಕಾದಶಿಯ ಕುರಿತ ಪೌರಾಣಿಕವಾದ ಐತಿಹ್ಯವನ್ನು ಬ್ರಹ್ಮದೇವರು ಉಪದೇಶಿಸಿದರು. ಈ ಪುರಾಣ ಕಥಾಶ್ರವಣಮಾತ್ರದಿಂದ ಮಹಾಪಾಪಗಳು ನಾಶವಾಗಿ ಸದ್ಗತಿ ದೊರಕುತ್ತದೆ.

ಹಿಂದೆ ಕೃತಯುಗದಲ್ಲಿ ವೈವಸ್ವತಮನುವಿನ ವಂಶದಲ್ಲಿ ಮಹಾದರ್ಮಿಷ್ಠನಾದ ಮಾಂಧಾತಾ ಎಂಬ ರಾಜನು ಚಕ್ರವರ್ತಿಯಾಗಿ ಭೂಮಿಯನ್ನು ಆಳುತ್ತಿದ್ದನು. ಅತ್ಯಂತ ಪರಾಕ್ರಮಿಯು, ಸತ್ಯನಿಷ್ಠನು ಆದ ಆ ರಾಜರ್ಷಿಯು ತನ್ನ ಪ್ರಜೆಗಳನ್ನು ಮಕ್ಕಳ ಹಾಗೆ ಪಾಲಿಸುತ್ತಿದ್ದನು. ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ನಿರಾತಂಕರಾಗಿ, ಧರ್ಮದಿಂದ ಸಮೃದ್ಧ ಜೀವನ ನಡೆಸುವವರಾಗಿದ್ದರು. ದುರ್ಭಿಕ್ಷೆಯಾಗಲಿ ಆಧಿವ್ಯಾಧಿಗಳಾಗಲಿ ಅವನ ರಾಜ್ಯದಲ್ಲಿ ಇರಲಿಲ್ಲ.

ಒಮ್ಮೆ ಮಾಂಧಾತಾ ರಾಜನ ರಾಜ್ಯದಲ್ಲಿ ಪ್ರಾರಬ್ಧ ಕರ್ಮವಶಾತ್ ಎಂಬಂತೆಯೋ ಭಯಂಕರವಾದ ಸತತ ಮೂರುವರ್ಷಗಳಷ್ಟು ದೀರ್ಘಕಾಲ ಬರಗಾಲ ಬಿದ್ದಿತು. ಮಳೆ-ಬೆಳೆಗಳಿಲ್ಲದೆ ಪ್ರಜೆಗಳಲ್ಲಿ ಹಾಹಾಕಾರ ಉಂಟಾಯಿತು. ಹಸಿವೆ ನೀರಡಿಕೆಯಿಂದ ಪೀಡಿತರಾಗಿ ಜನ ರಾಜನ ಮೊರೆ ಹೊಕ್ಕರು. ಹೇ ರಾಜನೇ – ಪರ್ಜನ್ಯರೂಪಿಯಾದ ಭಗವಾನ್ ವಿಷ್ಣುವು ಸದಾ ಸರ್ವತ್ರ ವ್ಯಾಪ್ತನಾಗಿರುವನು, ಅವನೇ ಮಳೆಯನ್ನು, ಮಳೆಯಿಂದ ಧಾನ್ಯಗಳನ್ನು ಮತ್ತು ಧಾನ್ಯಗಳಿಂದ ಪ್ರಜೆಗಳನ್ನು ಸೃಷ್ಟಿಮಾಡುವನು. ಮಳೆಯ ಅಭಾವದಿಂದ ಪ್ರಜೆಗಳ ನಾಶವಾಗುತ್ತಿರುವ ಕಾರಣ, ನೀನು ಏನಾದರೂ ಉಪಾಯವನ್ನು ಮಾಡು – ಎಂದು ಪ್ರಾರ್ಥಿಸಿಕೊಂಡರು.

ಪ್ರಜಾಜನ ಪಾಲಕನಾದ ರಾಜನು ಉಪಾಯದ ಶೋಧನೆಗಾಗಿ ಋಷಿಮುನಿಗಳನ್ನು ಅರಸುತ್ತ ಅರಣ್ಯಕ್ಕೆ ತೆರಳಿದನು. ಒಂದೆಡೆ ಅತ್ಯಂತ ತೇಜೋರಾಶಿಯಂತಿರುವ ಪ್ರತಿಬ್ರಹ್ಮನ ಹಾಗೆ ಹೊಳೆಯುತ್ತಿರುವ ಬ್ರಹ್ಮದೇವರ ಮಗನಾದ ಅಂಗೀರಸ ಮುನಿಗಳನ್ನು ನೋಡಿದನು. ಅವರಿಂದ ಅನುಗ್ರಹ ಪಡೆಯಬೇಕೆಂದು ಇಚ್ಛಿಸಿ ಬಳಿಸಾರಿ ವಿನಯಪೂರ್ವಕವಾಗಿ ನಮಸ್ಕರಿಸಿ ನಿಂತುಕೊಂಡನು. ಚಕ್ರವರ್ತಿಯು ವನಾಗಮನದ ವಿಷಯವನ್ನು ಅಂಗೀರಸರಿಗೆ ತಿಳಿಸಿ ಕೃಪೆಮಾಡಬೇಕೆಂದು ಕೇಳಿಕೊಂಡನು. ಋಷಿಗಳು, ಮಾಂಧಾತಾ ರಾಜನೇ – ಈ ಕೃತಯುಗವು ಯುಗಗಳಲ್ಲಿ ಶ್ರೇಷ್ಠವಾಗಿದೆ, ಈ ಯುಗದಲ್ಲಿ ಎಲ್ಲರೂ ಬ್ರಹ್ಮನನ್ನು ಕುರಿತು ಉಪಾಸನೆಯನ್ನು ಮಾಡುವುದರಿಂದ ಧರ್ಮವು ನಾಲ್ಕೂ ಚರಣಗಳಿಂದ ಯುಕ್ತವಾಗಿದೆ. ಬ್ರಾಹ್ಮಣರು ಮಾತ್ರ ತಪವನ್ನಾಚರಿಸುವುದು ಈ ಯುಗಧರ್ಮ, ಆದರೆ ಇದಕ್ಕೆ ವಿರುದ್ಧವಾಗಿ ನಿನ್ನ ರಾಜ್ಯದಲ್ಲಿ ವಿಧರ್ಮಿಯಾದ ವೃಷಲನೆಂಬ ಅಂತ್ಯಜನು ತಪಸ್ಸನ್ನಾಚರಿಸುತ್ತಿರುವುದು ಈ ಕ್ಷಾಮಕ್ಕೆ ಕಾರಣವಾಗಿದೆ. ಅವನ ನಿವಾರಣೆಯಾದರೆ ಕ್ಷಾಮ ಕಳೆದು ಪುನಃ ಸುಭೀಕ್ಷವುಂಟಾಗುತ್ತದೆ ಎಂದು ಹೇಳಿದರು. ರಾಜನು, ನಿರಪರಾಧಿಯಾದ ಮತ್ತು ತಪಸ್ಸನ್ನಾಚರಿಸುತ್ತಿರುವ ಅವನನ್ನು ತಾನು ಸಂಹರಿಸಲಾರೆ, ಆದ್ದರಿಂದ ಇನ್ನೇನಾದರೂ ಧರ್ಮೋಪಾಯವನ್ನು ತಿಳಿಸಬೇಕೆಂದು ಬೇಡಿಕೊಂಡನು.

ರಾಜನ ಕ್ಷಮಾಗುಣ ಮತ್ತು ಧರ್ಮಬುದ್ಧಿಯಿಂದ ಅಂಗೀರಸರು ಪ್ರಸನ್ನರಾಗಿ, ಹೇ ರಾಜನೇ ಆಷಾಢ ಮಾಸದ ಶುಕ್ಲಪಕ್ಷದಲ್ಲಿ ಬರುವ ಪದ್ಮಾನಾಮಕ ಏಕಾದಶಿಯ ವ್ರತವನ್ನು ನೀನು ಪರಿವಾರ ಪ್ರಜಾಸಹಿತ ಮಾಡುವೀಯಾದರೆ ಕ್ಷಾಮ ನೀಗಿ ನಿನ್ನ ರಾಜ್ಯದಲ್ಲಿ ಸುವೃಷ್ಟಿಯಾಗುತ್ತದೆ. ಏಕೆಂದರೆ ಈ ಏಕಾದಶಿಯು –

ಸರ್ವಸಿದ್ಧಿಪ್ರದಾ ಹ್ಯೇಷಾ ಸರ್ವೋಪದ್ರವನಾಶಿನೀ |

ಸರ್ವಸಿದ್ಧಿಯನ್ನು ಕೊಡುವುದು ಮತ್ತು ಎಲ್ಲ ಉಪದ್ರವಗಳನ್ನು ನಾಶಮಾಡುವಂತಹದ್ದಾಗಿದೆ, ಆದ್ದರಿಂದ ನೀನು ಈ ವ್ರತವನ್ನು ಖಂಡಿತವಾಗಿ ಮಾಡು ಎಂದು ಉಪದೇಶವನ್ನು ಕೊಟ್ಟರು.

ಈ ಪ್ರಕಾರ ಅಂಗೀರಸರಿಂದ ಉಪದೇಶ ಪಡೆದವನಾಗಿ ರಾಜನು ತನ್ನ ರಾಜ್ಯಕ್ಕೆ ತೆರಳಿ, ಆಷಾಢ ಪ್ರಾಪ್ತವಾಗಲು ಸಮಸ್ತ ಪ್ರಜಾಜನ ಮತ್ತು ಪರಿವಾರ ಸಮೇತ ಈ ಏಕಾದಶೀ ವ್ರತವನ್ನು ಮಾಡಿದನು. ಶೀಘ್ರವಾಗಿ ವ್ರತಪ್ರಭಾವದಿಂದ ರಾಜ್ಯದಲ್ಲಿ ಸುವೃಷ್ಟಿಯಾಯಿತು ಮತ್ತು ಅವನ ರಾಜ್ಯ ಪುನಃ ಸಂಪದ್ಭರಿತವಾಯಿತು.

ಏತಸ್ಮಾತ್ಕಾರಣಾದೇವ ಕರ್ತವ್ಯಂ ವ್ರತಮುತ್ತಮಮ್ |
ಭುಕ್ತಿಮುಕ್ತಿಪ್ರದಂ ಚೈವ ಲೋಕಾನಾಂ ಸುಖದಾಯಕಮ್ ||

ಈ ಕಾರಣದಿಂದಲೇ ಶ್ರೇಷ್ಠವಾದ ಈ ಪದ್ಮಾವ್ರತವನ್ನು ಆಚರಿಸಬೇಕು. ಈ ವ್ರತವು ಭುಕ್ತಿ ಮುಕ್ತಿ ಪ್ರದವೂ, ಜನರಿಗೆ ಸುಖದಾಯಕವೂ ಆಗಿದೆ.


ಈ ವ್ರತದ ಮಹಾತ್ಮೆಯ ಪಠನ ಹಾಗೂ ಶ್ರವಣಗಳಿಂದ ಸರ್ವಪಾಪಗಳೂ ನಾಶವಾಗುತ್ತವೆ.

ತಪ್ತಮುದ್ರಾಧಾರಣೆ:- ಒಂದು ಹಿನ್ನೆಲೆ.
ವೈಷ್ಣವರಿಗೆ ಆಷಾಡ ಶುಧ್ಧ ಏಕಾದಶಿ(ಪ್ರಥಮ ಏಕಾದಶಿ)ಯಂದು ನಡೆಯುವ ಮುದ್ರಾಧಾರಣೆ ಪರಮ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯ ದಕ್ಷಿಣಕ್ಕೆ ವಾಲುತ್ತಾನೆ. ಅಂದರೆ ಭಗವಂತ ಮಲಗಿದಾಗ ನಾವು ಮಲಗಿ ಆತನನ್ನು ಮರೆಯಬಾರದು. ಆತನ ಚಿನ್ಹೆಯಾದ ಶಂಖ ಮತ್ತು ಚಕ್ರಗಳು ಅಚ್ಚೊತ್ತಿರಬೇಕು ಎಂಬ ಭಾವನೆಯಿಂದಲೆ ಶಯನೈಕಾದಶಿಯಂದು ತಪ್ತಮುದ್ರಾಧಾರಣೆ ಸಂಸ್ಕಾರ ಬೆಳೆದು ಬಂದಿದೆ. ದೇಹ ಸಂಸ್ಕಾರ ನಾನಾ ಬಗೆ. ಜಾತಕರ್ಮ(ಜನನ), ಉಪನಯನ, ಸ್ನಾನಶೌಚಾದಿ, ಶುಚಿಭೋಜನಾದಿ, ಉಪವಾಸಾದಿ, ಸ್ವಯಂ ಶ್ರೀಹರಿಯ ಆಯುಧಗಳ ಮುದ್ರಾಧಾರಣ. ಇದರಿಂದ ಸಂಸ್ಕಾರಗೊಂಡ ದೇಹ ಅಂತಃಸತ್ವವೆಂಬ ಶುಧ್ಧಿ ಪಡೆದು ಸಾಧನಕ್ಕೆ ಹದಗೊಳ್ಳುತ್ತದೆ.
ತಪ್ತಮುದ್ರಾಧಾರಣೆ ಬಗ್ಗೆ ಸಣ್ಣ ಹಿನ್ನೆಲೆ – ಹಿಂದೊಮ್ಮೆ ಇಂದ್ರಾದಿ ದೆವತೆಗಳೆಲ್ಲ ವೃತ್ರಾಸುರನಿಂದ ಸೋತಾಗ ಮಹಾವಿಷ್ಣುವಿನ ಬಳಿ ಹೋಗಿ ಪ್ರಾರ್ಥಿಸಿದಾಗ “ಎಲೈ ದೇವತೆಗಳೆ, ನೀವೆಲ್ಲ ನನ್ನ ಶಂಖ ಚಕ್ರಾದಿ ಲಾಂಛನಗಳನ್ನು ಧರಿಸಿ ದೈತ್ಯರೊಡನೆ ಯುಧ್ಧ ಮಾಡಿ ನಿಮಗೆ ವಿಜಯ ಲಭಿಸುತ್ತದೆ” ಎಂದು ಶ್ರೀಹರಿಯು ಅಪ್ಪಣೆಯಿತ್ತನು. ಇಂದ್ರಾದಿಗಳು ಇದರಿಂದ ಕೃತಾರ್ಥರಾದರು. ಅಂದಿನಿಂದ ಕಾಮ, ಕ್ರೋಧದಂತಹ ವೈರಿಗಳ ಜಯಕ್ಕೆ ಮುದ್ರಾಧಾರಣೆ ಅಗತ್ಯ ಎಂಬ ನಿಯಮ ವೈಷ್ಣವರಿಗೆ ಶಾಶ್ವತವಾಯಿತು. ತಪ್ತಮುದ್ರಾಧಾರಣೆಯ ಮಹತ್ವವನ್ನು ಋಗ್, ಯಜುರ್, ಸಾಮ, ಅಥರ್ವ ವೇದಗಳಲ್ಲೂ, ಪದ್ಮ ಮೊದಲಾದ ಪುರಾಣಗಳಲ್ಲೂ, ಮಹಾಭಾರತಾದಿ ಇತಿಹಾಸದಲ್ಲೂ ವರ್ಣಿತವಾಗಿದೆ. ಶ್ರೀಮನ್ ಮಧ್ವಾಚಾರ್ಯರ ಸುದರ್ಶನದ್ವಯ (ತಪ್ತ ಮುದ್ರೆ ಮತ್ತು ಶಾಸ್ತ್ರ) ತಮ್ಮ ಶಿಷ್ಯರಿಗೆ ಅನುಗ್ರಹಿಸಿದ ವಿವರ ಸುಮದ್ವವಿಜಯದಲ್ಲಿ ಉಕ್ತವಾಗಿದೆ. ಅಂತೆಯೇ ಶ್ರೀವಾದಿರಾಜರ ಚಕ್ರಸ್ತುತಿ, ಶ್ರೀಕೃಷ್ಣಾಚಾರ್ಯರ ಸ್ಮೃತಿ ಮುಕ್ತಾವಳಿ ಹಾಗು ತಪ್ತ ಚಕ್ರ ಭೂಷಣಗಳಲ್ಲಿ ವಿವರವಾಗಿ ತಿಳಿಸಲಾಗಿದೆ.
ತಪ್ತಮುದ್ರಾಧಾರಣ ಮಾಡುವ ವಿಧಾನ – ಆಚಾರ್ಯ ಮಧ್ವರು ಹಾಕಿ ಕೊಟ್ಟ ಸತ್ಪರಂಪರೆಯಂತೆ, ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಮಠದ ಪೀಠಾಧಿಪತಿಗಳಿಂದಲೇ ತಪ್ತಮುದ್ರಾಧಾರಣೆಯನ್ನು ಸ್ವೀಕರಿಸಬೇಕು. ಆಷಾಡ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸುದರ್ಶನ ಹೋಮವನ್ನು ಆಚರಿಸಿ ಶಾಸ್ತ್ರೋಕ್ತ ಕ್ರಮದಲ್ಲಿ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳನ್ನು ಸ್ಮರಿಸಿ, ತಮೋರಜೋಗುಣಗಳು ನಾಶಪಡಿಸುವಂತೆ ಪ್ರಾರ್ಥಿಸಿ ಏಕಾಗ್ರಚಿತ್ತದಿಂದ ಗುರುಗಳಿಂದ ತಪ್ತಮುದ್ರಾಧಾರಣವನ್ನು ಪಡೆದುಕೊಳ್ಳಬೇಕು.
ವೈಷ್ಣವತ್ವಕ್ಕೆ ದ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯಲಕ್ಷಣವೆಂಬುದು ತಪ್ತಮುದ್ರಾಧಾರಣದ ಹಿರಿಮೆ. ಇವರು ವೈಷ್ಣವರೆಂದು ಇತರರು ಗುರುತಿಸುವುದಕ್ಕಿಂತಲೂ ಮುಖ್ಯವಾಗಿ ತಾನು ವಿಷ್ಣು ಭಕ್ತನೆಂದು ಸ್ವಂತಕ್ಕೆ ಮರೆಯದಿರಲೆಂದು ಹುಟ್ಟಿಕೊಂಡ ಈ ಪರಂಪರೆ ನಿಜಕ್ಕೂ ಅರ್ಥಪೂರ್ಣ.
*******

ಆಷಾಢ ಶುದ್ಧ ಏಕಾದಶೀ, ಸರ್ವೇಷಾಂ ಏಕಾದಶೀ ( ಶಯನೀ) ತಪ್ತಮುಧ್ರಾಧಾರಣೆ.

ಧಾರಣಾದ್ಧರ್ಮ ಇತ್ಯಾಹು: ಧರ್ಮೋಧಾರಯತೆ ಪ್ರಜಾ: |
ತಸ್ಮಾದ್ಧರ್ಮಂ ಪ್ರಶಂಸಂತಿ ಧರ್ಮೋ ರಕ್ಷತಿ ರಕ್ಷಿತ: || ೮ ||
-ಮನುಸ್ಮೃತಿ.


ಧರ್ಮದ ಮಹತ್ವವನ್ನು ಈ ಶ್ಲೋಕದಲ್ಲಿ ಹೇಳಿದ್ದಾರೆ. ಧರ್ಮವು ಲೋಕವನ್ನು ಧರಿಸುವದು, ಪ್ರಜೆಗಳನ್ನು ಸದಾ ಸುಖಶಾಂತಿಯಿಂದ ಇರುವಂತೆ ಮಾಡುವುದು, ಆದುದರಿಂದಲೇ ಧರ್ಮವನ್ನು ಹೂಗಳುತ್ತಾರೆ, ಧರ್ಮವನ್ನು ರಕ್ಷಿಸಿದವರನ್ನು ಧರ್ಮವು ರಕ್ಷಿಸುವುದು.
*******



ಆಷಾಢ ಏಕಾದಶಿ
ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ (ದೇವರ ನಿದ್ರೆಯ) ಏಕಾದಶಿ’ ಎನ್ನುತ್ತಾರೆ ಮತ್ತು ಕೃಷ್ಣ ಪಕ್ಷದಲ್ಲಿನ ಏಕಾದಶಿಯನ್ನು ‘ಕಾಮಿಕಾ ಏಕಾದಶಿ’ ಎನ್ನುತ್ತಾರೆ.
ಇತಿಹಾಸ
ಹಿಂದೆ ದೇವ ಮತ್ತು ದಾನವರಲ್ಲಿ ಯುದ್ಧ ಪ್ರಾರಂಭವಾಯಿತು. ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಶಂಕರನಿಂದ ಅಮರತ್ವವನ್ನು ಪಡೆದನು. ಆದ್ದರಿಂದ ಅವನು ಬ್ರಹ್ಮದೇವ, ವಿಷ್ಣು, ಶಿವರಂತಹ ಎಲ್ಲ ದೇವತೆಗಳಿಗೆ ಅಜೇಯ ನಾದನು. ದೇವತೆಗಳು ಅವನ ಭಯದಿಂದ ತ್ರಿಕುಟ ಪರ್ವತದ ಮೇಲೆ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗೆ ಒಂದು ಗುಹೆಯಲ್ಲಿ ಅಡಗಿ ಕುಳಿತರು. ಆ ಆಷಾಢ ಏಕಾದಶಿಯಂದು ಅವರಿಗೆ ಉಪವಾಸ ಮಾಡಬೇಕಾಯಿತು. ಮಳೆಯ ನೀರಿನಲ್ಲಿ ಸ್ನಾನವಾಯಿತು. ಆಕಸ್ಮಿಕವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಉತ್ಪನ್ನವಾಯಿತು. ಆ ಶಕ್ತಿಯು ಗುಹೆಯ ಬಾಗಿಲಿನಲ್ಲಿ ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು. ಈ ಶಕ್ತಿದೇವಿಯೇ ಏಕಾದಶಿಯ ದೇವತೆಯಾಗಿದ್ದಾಳೆ.
ಮಹತ್ವ
ಅ. ಆಷಾಢ ಏಕಾದಶಿ ವ್ರತದಲ್ಲಿ ಎಲ್ಲ ದೇವತೆಗಳ ತೇಜಸ್ಸು ಒಂದಾಗಿರುತ್ತದೆ.
ಆ. ಕಾಮಿಕಾ ಏಕಾದಶಿಯು ಮನೋಕಾಮನೆಯನ್ನು ಪೂರ್ಣಗೊಳಿಸುವ ಏಕಾದಶಿಯಾಗಿದೆ. ಇದು ಪುತ್ರದಾಯೀ ಏಕಾದಶಿಯಾಗಿದೆ.
ವ್ರತವನ್ನು ಮಾಡುವ ಪದ್ಧತಿ
ಮೊದಲನೆಯ ದಿನ ದಶಮಿಗೆ ಏಕಭುಕ್ತವಿರಬೇಕು. ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಬೇಕು. ಪೂರ್ಣದಿವಸ ಉಪವಾಸ ಮಾಡಬೇಕು. ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಬೇಕು. ಆಷಾಢ ಶುಕ್ಲ ದ್ವಾದಶಿಗೆ ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು. (೧೪)

ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು ‘ಶ್ರೀಧರ’ ಎನ್ನುವ ಹೆಸರಿನಿಂದ ಪೂಜಿಸಿ ಅಹೋರಾತ್ರಿ ತುಪ್ಪದ ದೀಪವನ್ನು ಉರಿಸುವ ವಿಧಿಯನ್ನು ಮಾಡುತ್ತಾರೆ.
ಪಂಢರಪುರದ ಯಾತ್ರೆ (ವಾರಿ)
ಈ ವ್ರತವನ್ನು ಆಷಾಢ ಶುಕ್ಲ ಏಕಾದಶಿಯಿಂದ ಪ್ರಾರಂಭಿಸುತ್ತಾರೆ. ವಾರಕರಿ (ವಿಠಲನ ಭಕ್ತರು) ಸಂಪ್ರದಾಯವು ವೈಷ್ಣವ ಸಂಪ್ರದಾಯದಲ್ಲಿನ ಪ್ರಮುಖ ಸಂಪ್ರದಾಯವಾಗಿದೆ. ಈ ಸಂಪ್ರದಾಯದಲ್ಲಿ ವಾರ್ಷಿಕ, ಅರ್ಧವಾರ್ಷಿಕ ಹೀಗೆ ಪಡೆದಿರುವ ದೀಕ್ಷೆಯ ವಿಧಕ್ಕನುಸಾರವಾಗಿ ಯಾತ್ರೆಯನ್ನು ಮಾಡುತ್ತಾರೆ. ಈ ಯಾತ್ರೆಯನ್ನು ಕಾಲ್ನಡಿಗೆಯಿಂದ ಮಾಡಿದರೆ ಶಾರೀರಿಕ ತಪಸ್ಸಾಗುತ್ತದೆ ಎಂದು ನಂಬಲಾಗುತ್ತದೆ.
ವರ್ಷದ ಇಪ್ಪತ್ನಾಲ್ಕು ಏಕಾದಶಿಗಳಲ್ಲಿ ಆಷಾಢ ಏಕಾದಶಿಯ ಮಹತ್ವವು ಮುಂದಿನಂತಿದೆ.<br>
ಅ. ಈ ತಿಥಿಗೆ ಏಕಾದಶೀದೇವಿಯ ಉತ್ಪತ್ತಿಯಾಯಿತು.
ಆ. ಈ ತಿಥಿಯಂದು ಚಾತುರ್ಮಾಸವು ಪ್ರಾರಂಭವಾಗುತ್ತದೆ.
ಇ. ಇದೇ ದಿನ ಶ್ರೀವಿಷ್ಣು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ಲೀನನಾಗುತ್ತಾನೆ.
ಈ. ಇದೇ ತಿಥಿಗೆ ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದನು.
ಇತರ ಅಂಶಗಳು
ಅ. ಆಷಾಢ ಏಕಾದಶಿಯು ಕಾಲಕ್ಕೆ ಸಂಬಂಧಿಸಿದೆ. ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿ ಈ ನಾಲ್ಕು ತಿಂಗಳುಗಳಲ್ಲಿ ದಕ್ಷಿಣಾಯನವು ನಡೆಯುತ್ತಿರುತ್ತದೆ. ಆದ್ದರಿಂದ ಈ ಕಾಲಾವಧಿಯು ದೇವತೆಗಳ ನಿದ್ರೆಯ ಕಾಲಾವಧಿಯಾಗಿದೆ ಎಂದು ಹೇಳುತ್ತಾರೆ.
ಆ. ಈ ಕಾಲಾವಧಿಯಲ್ಲಿ ದೇವತೆಗಳ ತತ್ತ್ವಗಳ ಸಗುಣ-ನಿರ್ಗುಣ ತತ್ತ್ವಗಳ ಸ್ಪಂದನಗಳ ಪ್ರಕ್ಷೇಪಣೆಯ ಕಾರ್ಯವು ಅಪ್ರಕಟ ಸ್ವರೂಪದಲ್ಲಿರುತ್ತದೆ. ಆದುದರಿಂದ ಭೂಮಂಡಲದ ಕಡೆಗೆ ಅವುಗಳ ಪ್ರಕ್ಷೇಪಣೆಯ ಪ್ರಮಾಣವು ಕಡಿಮೆಯಿರುತ್ತದೆ.
ಇ. ಈ ಕಾಲಾವಧಿಯಲ್ಲಿ ದೇವತೆಗಳ ತತ್ತ್ವಗಳು ಅಪ್ರಕಟ ಸ್ವರೂಪದಲ್ಲಿರುವುದರಿಂದ ವಾಯುಮಂಡಲ ಮತ್ತು ಬ್ರಹ್ಮಾಂಡ ಮಂಡಲಗಳಲ್ಲಿ, ಹಾಗೆಯೇ ಭೂಮಿಯ ಮೇಲೆ ಅಸುರೀ ಶಕ್ತಿಗಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಇದರ ಪರಿಣಾಮವು ಭೂಮಿಯ ಮೇಲಿನ ಸಜೀವ ಸೃಷ್ಟಿಯ ಮೇಲೂ ಆಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ಉಪವಾಸ, ಪೂಜಾವಿಧಿ, ವ್ರತ ಮುಂತಾದವುಗಳನ್ನು ಮಾಡುವುದರಿಂದ ಜೀವದ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳ ಪ್ರಮಾಣವು ಕಡಿಮೆಯಾಗುತ್ತದೆ.



ಈ. ಆಷಾಢ ಶುಕ್ಲ ಏಕಾದಶಿಯ ದಿನ ಶ್ರೀವಿಷ್ಣುವಿಗೆ ಪಾರ್ಥನೆ ಮತ್ತು ಅವನನ್ನು ಪೂಜಿಸುವುದರಿಂದ, ಹಾಗೆಯೇ ಇಡೀರಾತ್ರಿ ಅವನ ಎದುರಿಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಕೆಟ್ಟ ಶಕ್ತಿಗಳಿಂದ ವಾಸ್ತುವಿನ ರಕ್ಷಣೆಯಾಗುತ್ತದೆ.’
******


ಪ್ರಥಮೈಕಾದಶಿ.ತನ್ನಿಮಿತ್ತ ಈ ಲೇಖನ "
*ಆಷಾಢ ಏಕಾದಶಿ* ಅಥವಾ *ಪ್ರಥಮೈಕಾದಶಿ*

ಆಷಾಢ ಮಾಸದ ಶುಕ್ಕ ಪಕ್ಷದಲ್ಲಿನ ಏಕಾದಶಿಯನ್ನು "ದೇವಶಯನಿ" (ದೇವರ ನಿದ್ರೆಯ) /'ಶಯನೈಕಾದಶಿ" ಎನ್ನುತ್ತಾರೆ.

ಕಾರಣ ಅಂದು ಮಹಾವಿಷ್ಣುವು ಆದಿಶೇಷ ತಲ್ಪದಲ್ಲಿ ಯೋಗನಿದ್ರೆಯಲ್ಲಿ ಮಲಗುತ್ತಾನೆ. ಅವನು ಏಳುವುದು ಕಾರ್ತಿಕ ಶುದ್ಧ ದ್ವಾದಶಿಯಂದು.ಅದನ್ನು "ಉತ್ಥಾನ(ಏಳುವುದು)ದ್ವಾದಶಿ" ಎಂದು ಕರೆಯುವರು.

ಹಿಂದೆ ದೇವ ದಾನವರ ಯುದ್ಧವಾದಾಗ, ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಈಶ್ವರನಿಂದ ಅಮರತ್ವವನ್ನು ಪಡೆದು ತ್ರಿಮೂರ್ತಿಗಳಾದಿಯಾಗಿ ಎಲ್ಲ ದೇವತೆಗಳನ್ನು ಸೋಲಿಸಿ ಸ್ವರ್ಗದಿಂದ ಓಡಿಸಿದನು.ದೇವತೆಗಳು ಅವನ ಭಯದಿಂದ ತ್ರಿಕೂಟ ಪರ್ವತದ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗಿನ ಒಂದು ಗುಹೆಯಲ್ಲಿ ಅಡಗಿ ಕುಳಿತರು.ಆ ದಿನವು ಆಷಾಢ ಶುದ್ಧ ಏಕಾದಶಿಯಾಗಿತ್ತು.!

ಅನಿವಾರ್ಯವಾಗಿ ಅವರು ಅಂದು ಉಪವಾಸ ಮಾಡುವಂತಾಯಿತು.

ಅವರ ಉಪವಾಸದ ಫಲವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಆವಿರ್ಭವಿಸಿ,ಗುಹೆಯ ಬಾಗಿಲಿನಲ್ಲಿ , ದೇವತೆಗಳು ಹೊರಬರುವುದನ್ನು ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು.

ಈ ಶಕ್ತಿದೇವತೆಯೇ ಏಕಾದಶಿ ತಿಥಿಯ ಅಧಿದೇವತೆಯಾಗಿದ್ದಾಳೆ.

ಅಂದಿನಿಂದ ಪ್ರಥಮೈಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯ ವರೆಗೆ ಒಂಬತ್ತು ಏಕಾದಶಿಗಳಂದು ಉಪವಾಸ ಮಾಡುವ ಪದ್ಧತಿ ಆರಂಭವಾಯಿತು.

ಏಕಾದಶಿಯಂದು ಸ್ನಾನ ಮಾಡಿ,ವಿಷ್ಣುವನ್ನು ತುಳಸಿ ಕುಡಿಯಿಂದ ಭಕ್ತಿಯಿಂದ ಅರ್ಚಿಸಿ,ತೀರ್ಥಪ್ರಾಶನ ಮಾಡಿ,ಅಹೋರಾತ್ರಿ ವಿಷ್ಣುನಾಮ ಸಂಕೀರ್ತನೆ,

ಭಜನೆ ಮಾಡುತ್ತ ಜಾಗರಣೆ ಮಾಡಿ,ದ್ವಾದಶಿಯ ದಿನ ಬೆಳಿಗ್ಗೆ ಸ್ನಾನ ಪೂಜೆ ಮುಗಿಸಿ,ನೈವೇದ್ಯ ಮಾಡಿದ ಪದಾರ್ಥಗಳನ್ನು ಸೇವಿಸಿ,ಉಪವಾಸ ಮುಕ್ತಾಯದ ಪಾರಣೆ ಮಾಡಬೇಕು.

ಸಾಮಾನ್ಯವಾಗಿ ಶಯನ ಏಕಾದಶಿಯಿಂದ,ಉತ್ಥಾನದ್ವಾದಶಿವರೆಗೆ, ವಿಷ್ಣುವು ಯೋಗನಿದ್ರಾವಸ್ಥೆಯಲ್ಲಿ ರುವುದರಿಂದ,ಮದುವೆ ,ಉಪನಯನ, ಗೃಹಪ್ರವೇಶಾದಿ ಮಂಗಳ ಕಾರ್ಯಗಳನ್ನು ನೆರವೇರಿಸುವುದಿಲ್ಲ.

ಉತ್ಥಾನ ದ್ವಾದಶಿಯಂದೇ ವಿಷ್ಣುವು ತುಲಸಿಯನ್ನು ವಿವಾಹವಾದುದು.

ನೆಲ್ಲಿ ಮರದ ಕೆಳಗಿನ ಗುಹೆ ದೇವತೆಗಳನ್ನು ರಕ್ಷಿಸಿತ್ತು.

ಇವೆರಡರ ಸವಿನೆನಪಿನಲ್ಲಿ ನೆಲ್ಲಿ ಕೊಂಬೆಯನ್ನು ತುಳಸಿಗಿಡದೊಂದಿಗೆ ಇಟ್ಟು "ತುಳಸಿ ಹಬ್ಬ/ತುಳಸಿದೀಪ" ಎಂದು ಪೂಜೆ,

ದೀಪಾರಾಧನೆ ಮಾಡುವುದು ಆಚರಣೆಗೆ ಬಂದಿದೆ.

ಪಂಢರಪುರದ ವಿಟ್ಠಲನ ಭಕ್ತರು ನೂರಾರು ಮೈಲಿ ದೂರದ ತಮ್ಮ ಊರಿನಿಂದ ವಿಟ್ಠಲನ ಭಜನೆ ಮಾಡುತ್ತ ಸಾಕಷ್ಟು ದಿನ ಮೊದಲೇ ಹೊರಟು ಕಾಲ್ನಡಿಗೆಯಲ್ಲಿಯೇ ಏಕಾದಶಿಗೆ ಮೊದಲು ಪಂಢರಪುರ ಸೇರಿ, ಅಂದು ವಿಟ್ಠಲನ ದರ್ಶನ ಮಾಡುತ್ತಾರೆ.ಇದನ್ನು "ವಾರ್ಕರಿ" ಅಥವಾ "ವಾರಕರಿಗಳು" ಎಂದು ಹೇಳುತ್ತಾರೆ.ಅವರಿಗೆ ವಿಟ್ಠಲನ ಪಾದ ಮುಟ್ಟಿ ನಮಸ್ಕರಿಸಲು ಮತ್ತು ಬೇಗ ದರ್ಶನವಾಗುವಂತೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಅಲ್ಲಿದೆ.

ಆಷಾಢ ಶುದ್ಧ ಏಕಾದಶಿಯಂದು ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದನೆಂದು,ಈಗಲೂ ಆ ದಿನ ವಿಷ್ಣುವು ಅಲ್ಲಿಗೆ ಬಂದು ಭಕ್ರನ್ನು ಹರಸುತ್ತಾನೆಂದು ಪ್ರತೀತಿ ಇದೆ.

ವಿಷ್ಣುವಿನ ಭಕ್ತರು,

ಮಾಧ್ವ ಸಂಪ್ರದಾಯದ ಬಂಧುಗಳು ಈ ಒಂಬತ್ತು ಏಕಾದಶಿ ಮಾತ್ರವಲ್ಲದೆ ವರ್ಷದ ಎಲ್ಲ ಏಕಾದಶಿಯಲ್ಲಿಯೂ ನಿರಾಹಾರ ಉಪವಾಸ ವ್ರತ ಆಚರಿಸುತ್ತಾರೆ.

ಅದಾಗದವರು ಆಷಾಢ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗೆ ಒಂಬತ್ತು ಏಕಾದಶಿಗಳಂದು ಉಪವಾಸ ವ್ರತ ಆಚರಿಸುತ್ತಾರೆ.

ವೈಜ್ಞಾನಿಕ ಮತ್ತು ವೈದ್ಯಕೀಯವಾಗಿಯೂ ವಾರದಲ್ಲಿ,ಅಥವಾ ಪಕ್ಷದಲ್ಲಿ ಒಂದು ದಿನ ಉಪವಾಸ ಮಾಡುವುದು ದೇಹ ಮತ್ತು ಆರೋಗ್ಯಕ್ಕೆ ಪರಿಣಾಮಕಾರಿ ಮತ್ತು ಬಹಳ ಒಳ್ಳೆಯದು ಎಂದು ಸಾಬೀತಾಗಿದೆ.

ಏಕಾದಶಿವ್ರತ ನಿಷ್ಠೆಯಿಂದ ಮಾಡಿ ಮೋಕ್ಷ ಪಡೆದ ಮಹರ್ಷಿಗಳ, ಮಹಾರಾಜ ಅಂಬರೀಷ,ಮೊದಲಾದವರ ಕತೆ ಪುರಾಣಗಳಲ್ಲಿವೆ.

ಓಂ ನಮೋ ನಾರಾಯಣಾಯ.
*************

#ಆಶಾಡಏಕಾದಶಿಮಹಾತ್ಮೆ

 ಶಯನಿ ಏಕಾದಶಿ 

ಆಷಾಢ ಏಕಾದಶಿಯನ್ನು ಶಯನಿ ಏಕಾದಶಿ ಅನ್ನುವರು , ಕಾರಣ ವಿಷ್ಣು ಇನ್ನು ನಾಲ್ಕು ತಿಂಗಳು ಯೋಗನಿದ್ರೆಗೆ ಜಾರುವನು ಅದಕ್ಕಾಗಿ ಅದನ್ನು ಶಯನೀ  ಏಕಾದಶಿ ಎನ್ನುವರು , ಈ ಏಕಾದಶಿಯನ್ನು ಮಾಡಿದರೆ ಸಂಪತ್ತನ್ನು ಭಾಗ್ಯವನ್ನು ಪಡೆಯುತ್ತಾರೆ , ದುಃಖ ದೂರವಾಗುತ್ತದೆ..... ಬನ್ನಿ ಸ್ನೇಹಿತರೆ ನಿಮಗೆ ಏಕಾದಶಿ ಬಗ್ಗೆ ತಿಳಿಸಿ ಕೊಡುವೆ

ಮೊದಲು ಏಕಾದಶಿಯ ಮಹತ್ವವೇನು ? ಏಕಾದಶಿಯ ದಿನ ಯಾಕೆ ಉಪವಾಸ ಮಾಡಬೇಕು ? ಮತ್ತು ಏನು ಫಲ ?

ಪ್ರಾಚೀನ ಸಮಯದಲ್ಲಿ ಮುರ ಎಂಬ ರಾಕ್ಷಸನಿದ್ದ .ಇವನು ಇಂದ್ರಾದಿ ದೇವತೆಗಳನ್ನೇಲ್ಲ ಸೋಲಿಸಿದನು. ಆಗ ದೇವತೆಗಳೆಲ್ಲ ಒಟ್ಟಾಗಿ ಕ್ಷೀರಸಾಗರದಲ್ಲಿ ಮಲಗಿದ್ದ ಶ್ರೀಮನ್ನಾರಾಣನನ್ನು ಮುರನಿಂದ ತಮ್ಮನ್ನು ರಕ್ಷಿಸುವಂತೆ ಪ್ರಾರ್ಥಿಸಿದರು.

ಆಗ ದೇವತೆಗಳೆಲ್ಲರ ಪ್ರಾರ್ಥನೆಯಂತೆ ಶ್ರೀಹರಿಯು ತನ್ನ ದಿವ್ಯ ಬಾಣಗಳು ಹಾಗೂ ಹಾಗೂ ಚಕ್ರವನ್ನು ಮುರಾಸುರನ ಮೇಲೆ ಪ್ರಯೋಗಿಸಿದನು ಇದರಿಂದ ಮುರಾಸುರನನ್ನು ಬಿಟ್ಟು ಉಳಿದೆಲ್ಲ ರಾಕ್ಷಸರು ಹತರಾದರು . ಶ್ರೀಹರಿಯು ಬದರಿಕಾಶ್ರಮಕೆ ಹೋಗಿ ಅಲ್ಲಿದ್ದ ಒಂದು ಗುಹೆಯಲ್ಲಿ ಮಲಗಿಬಿಟ್ಟರು. ಅಲ್ಲಿಗೆ ಬಂದ ಮುರನು ವಿಷ್ಣುವನ್ನು ಕೊಲ್ಲಲು ಬಂದನು. ಆಗ ಭಗವಂತನ ತೆಜಾಂಶದಿಂದ ಅಸ್ತ್ರ ಶಸ್ತ್ರ ಸಜ್ಜಿತಳಾದ ಒಂದು ಕನ್ಯೆ ಅವತಾರವಾಯಿತು. ಮುರನಿಗೂ ಆಕೆಗೂ ಯುದ್ಧವಾಯಿತು. ಆಕೆಯ ಒಂದೇ ಹೂಂಕಾರಕ್ಕೆ ಸುಟ್ಟು ಭಸ್ಮನಾದ ಇದರಿಂದ ಸಂತೋಷ ಗೊಂಡ ಶ್ರೀಹರಿಯು ಆಕೆಯು ಬೇಡಿದಂತೆ ವರ ಕರುಣಿಸಿದನು.

#ಆಕೆಯೇಸಾಕ್ಷಾತಏಕಾದಶಿ

ಆಕೆಯು ಪರಮಾತ್ಮನಲ್ಲಿ ಭಯಭಕ್ತಿಯಿಟ್ಟು ತನ್ನದಿನದಂದು ಉಪವಾಸ ಮಾಡಿದರೆ ಅವರ ಪಾಪಗಳನ್ನೇಲ್ಲ ಕಳೆದು ಮೊಕ್ಷ ಕರುಣಿಸುವಂತೆ ಕೋರಿಕೊಂಡಳು. ಅದಕ್ಕಾಗಿಯೇ ಎರಡೂ ಪಕ್ಷಗಳ ಏಕಾದಶಿಗಳು ಪಾಪನಾಶಕಗಳು .ಆದ್ದರಿಂದ ಏಕಾದಶಿಯ ಉಪವಾಸ ಅತ್ಯಂತ ಶ್ರೇಷ್ಠವಾದದ್ದು . ಆದಿನ ಉಪವಾಸ ಮಾಡಿ ಶ್ರೀಮನ್ನಾರಾಣನ ಸ್ಮರಣೆ ದ್ವಾದಶಿಯ ಪಾರಣೆ ಮಾಡಿದಲ್ಲಿ ಮಾಡಿದರೆ ಕಲಿಯ ದೋಷ ಪರಿಹಾರ .‌‌‌..

#ಆಶಾಡಏಕಾದಶಿಮಹಾತ್ಮೆ
#ಶಯನಿಏಕಾದಶಿ
 ಒಮ್ಮೆ ನಾರದರು ತನ್ನ ತಂದೆಯಾದ ಚತುರ್ಮುಖ ಬ್ರಹ್ಮದೇವರ ಕುರಿತು ಆಷಾಢಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯ ಮಹಿಮೆಯನ್ನು ಹೇಳಬೇಕಾಗಿ ಬೇಡಿಕೊಂಡರು. ಆಗ ಬ್ರಹ್ಮದೇವರು ನಾರದರನ್ನು ಕುರಿತು – ಹೇ ವಿಷ್ಣುಭಕ್ತರಲ್ಲಿ ಶ್ರೇಷ್ಠನದ ನಾರದನೇ – 
ಈ ಲೋಕದಲ್ಲಿ ಏಕಾದಶೀ ವ್ರತಕ್ಕಿಂತ ಶ್ರೇಷ್ಠವಾದ ಬೇರೊಂದು ಪವಿತ್ರವಾದ ವ್ರತವಿಲ್ಲ, ಆದುದರಿಂದ ಸರ್ವಪಾಪಗಳ ನಿವೃತ್ತಿಗಾಗಿ ಪ್ರಯತ್ನಪೂರ್ವಕ ಏಕಾದಶೀ ವ್ರತವನ್ನು ಆಚರಿಸಬೇಕು. ಏಕಾದಶ್ಯಾಂ ವ್ರತಂ ಪುಣ್ಯಂ ಪಾಪಘ್ನಂ ಸರ್ವಕಾಮದಮ್ | ನ ಕೃತಂ ಯೈರ್ನರೈರ್ಲೋಕೇ ತೇ ನರಾ ನಿರಯೈಷಿಣಃ || ಪಾಪಗಳನ್ನು ನಾಶಮಾಡುವಂತಹ, ಸಕಲ ಕಾಮನೆಗಳನ್ನು ತಂದುಕೊಡುವಂತಹ ಏಕಾದಶೀ ಎಂಬ ಪುಣ್ಯವ್ರತವನ್ನು ಈ ಲೋಕದಲ್ಲಿ ಯರು ಆಚರಿಸುವುದಿಲ್ಲವೋ ಅವರು ನರಕವನ್ನು ಸೇರುತ್ತಾರೆ. ಹೀಗೆ ಏಕಾದಶೀ ಉಪವಾಸದ ಮಹತ್ವವನ್ನು ವರ್ಣಿಸಿ, ಪದ್ಮಾ ಎಂಬ ಹೆಸರುಳ್ಳ ಶ್ರೀಹರಿಯ ಅತ್ಯಂತ ಪ್ರೀತಿಗೆ ಪಾತ್ರವಾದಂಥ ಈ ಏಕಾದಶಿಯ ಕುರಿತ ಪೌರಾಣಿಕವಾದ ಐತಿಹ್ಯವನ್ನು ಬ್ರಹ್ಮದೇವರು ಹೇಳಿದರು. ಈ ಪುರಾಣ ಕಥಾಶ್ರವಣಮಾತ್ರದಿಂದ ಮಹಾಪಾಪಗಳು ನಾಶವಾಗಿ ಸದ್ಗತಿ ದೊರಕುತ್ತದೆ. ಹಿಂದೆ ಕೃತಯುಗದಲ್ಲಿ ವೈವಸ್ವತಮನುವಿನ ವಂಶದಲ್ಲಿ ಮಹಾದರ್ಮಿಷ್ಠನಾದ ಮಾಂಧಾತಾ ಎಂಬ ರಾಜನು ಚಕ್ರವರ್ತಿಯಾಗಿ ಭೂಮಿಯನ್ನು ಆಳುತ್ತಿದ್ದನು. ಮಹಾ ಪರಾಕ್ರಮಿಯು, ಸತ್ಯನಿಷ್ಠನು ಆದ ಆ ರಾಜರ್ಷಿಯು ತನ್ನ ಪ್ರಜೆಗಳನ್ನು ಮಕ್ಕಳ ಹಾಗೆ ಪಾಲಿಸುತ್ತಿದ್ದನು. ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ನಿರಾತಂಕರಾಗಿ, ಧರ್ಮದಿಂದ ಸಮೃದ್ಧ ಜೀವನ ನಡೆಸುವವರಾಗಿದ್ದರು. ದುರ್ಭಿಕ್ಷೆಯಾಗಲಿ ಆಧಿವ್ಯಾಧಿಗಳ್ಯಾವವೂ ಅವನ ರಾಜ್ಯದಲ್ಲಿ ಇರಲಿಲ್ಲ. ಒಮ್ಮೆ ಮಾಂಧಾತಾ ರಾಜನ ರಾಜ್ಯದಲ್ಲಿ ವಿಧಿವಶಾತ್ ಎಂಬಂತೆ ಭಯಂಕರವಾದ ಮೂರುವರ್ಷಗಳಷ್ಟು ದೀರ್ಘಕಾಲವಾದ ಬರಗಾಲ ಬಿದ್ದಿತು. ಮಳೆ-ಬೆಳೆಗಳಿಲ್ಲದೆ ಪ್ರಜೆಗಳಲ್ಲಿ ಹಾಹಾಕಾರ ಉಂಟಾಯಿತು. ಹಸಿವೆ ನೀರಡಿಕೆಯಿಂದ ಪೀಡಿತರಾಗಿ ಜನ ರಾಜನ ಮೊರೆ ಹೊಕ್ಕರು. ಹೇ ರಾಜನೇ – ಪರ್ಜನ್ಯರೂಪಿಯಾದ ಭಗವಾನ್ ವಿಷ್ಣುವು ಸದಾ ಸರ್ವತ್ರ ವ್ಯಾಪ್ತನಾಗಿರುವನು, ಅವನೇ ಮಳೆಯನ್ನು, ಮಳೆಯಿಂದ ಧಾನ್ಯಗಳನ್ನು ಮತ್ತು ಧಾನ್ಯಗಳಿಂದ ಪ್ರಜೆಗಳನ್ನು ಸೃಷ್ಟಿಮಾಡುವನು. ಮಳೆಯ ಅಭಾವದಿಂದ ಪ್ರಜೆಗಳ ನಾಶವಾಗುತ್ತಿರುವ ಕಾರಣ, ನೀನು ಏನಾದರೂ ಉಪಾಯವನ್ನು ಮಾಡು – ಎಂದು ಪ್ರಾರ್ಥಿಸಿಕೊಂಡರು. ಪ್ರಜಾಜನ ಪಾಲಕನಾದ ರಾಜನು ಈ ಕ್ಷೋಭೆಯಿಂದ ಪರಿಹಾರದ ಶೋಧನೆಗಾಗಿ ಋಷಿಮುನಿಗಳ ಆಶ್ರಮಗಳನ್ನು ಅರಸುತ್ತ ಅರಣ್ಯಕ್ಕೆ ತೆರಳಿದನು. ಒಂದು ಪ್ರದೇಶದಲ್ಲಿ ಅತ್ಯಂತ ತೇಜೋರಾಶಿಯಂತಿರುವ ಪ್ರತಿಬ್ರಹ್ಮನ ಹಾಗೆ ಹೊಳೆಯುತ್ತಿರುವ ಬ್ರಹ್ಮದೇವರ ಮಗನಾದ ಅಂಗೀರಸ ಮುನಿಗಳನ್ನು ನೋಡಿದನು. ಅವರಿಂದ ಅನುಗ್ರಹ ಪಡೆಯಬೇಕೆಂದು ಇಚ್ಛಿಸಿ ಬಳಿಸಾರಿ ವಿನಯಪೂರ್ವಕವಾಗಿ ನಮಸ್ಕರಿಸಿ ನಿಂತುಕೊಂಡನು. ಚಕ್ರವರ್ತಿಯು ತನ್ನ ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪದ ವಿಷಯವನ್ನು ಅಂಗೀರಸರಿಗೆ ತಿಳಿಸಿ ಸಮಾಧಾನವನ್ನು ಹೇಳಬೇಕೆಂದು ಕೇಳಿಕೊಂಡನು. ಋಷಿಗಳು, ಮಾಂಧಾತಾ ರಾಜನೇ – ಈ ಕೃತಯುಗವು ಯುಗಗಳಲ್ಲಿ ಶ್ರೇಷ್ಠವಾಗಿದೆ, ಈ ಯುಗದಲ್ಲಿ ಎಲ್ಲರೂ ಬ್ರಹ್ಮನನ್ನು ಕುರಿತು ಉಪಾಸನೆಯನ್ನು ಮಾಡುವುದರಿಂದ ಧರ್ಮವು ನಾಲ್ಕೂ ಚರಣಗಳಿಂದ ಯುಕ್ತವಾಗಿದೆ. ಬ್ರಾಹ್ಮಣರು ಮಾತ್ರ ತಪವನ್ನಾಚರಿಸುವುದು ಈ ಯುಗಧರ್ಮ, ಆದರೆ ಇದಕ್ಕೆ ವಿರುದ್ಧವಾಗಿ ನಿನ್ನ ರಾಜ್ಯದಲ್ಲಿ ವಿಧರ್ಮಿಯಾದ ವೃಷಲನೆಂಬ ಅಂತ್ಯಜನು ತಪಸ್ಸನ್ನಾಚರಿಸುತ್ತಿರುವುದು ಈ ಕ್ಷಾಮಕ್ಕೆ ಕಾರಣವಾಗಿದೆ. ಅವನ ನಿವಾರಣೆಯಾದರೆ ಕ್ಷಾಮ ಕಳೆದು ಪುನಃ ಸುಭೀಕ್ಷವುಂಟಾಗುತ್ತದೆ ಎಂದು ಹೇಳಿದರು. ರಾಜನು, ನಿರಪರಾಧಿಯಾದ ಮತ್ತು ತಪಸ್ಸನ್ನಾಚರಿಸುತ್ತಿರುವ ಅವನನ್ನು ತಾನು ನಿವಾರಿಸಲಾರೆ, ಆದ್ದರಿಂದ ಇನ್ನೇನಾದರೂ ಪರ್ಯಾಯ ಧರ್ಮೋಪಾಯವನ್ನು ತಿಳಿಸಬೇಕೆಂದು ಬೇಡಿಕೊಂಡನು. ರಾಜನ ಕ್ಷಮಾಗುಣ ಮತ್ತು ಧರ್ಮಬುದ್ಧಿಯಿಂದ ಅಂಗೀರಸರು ಪ್ರಸನ್ನರಾಗಿ, ಹೇ ರಾಜನೇ ಆಷಾಢ ಮಾಸದ ಶುಕ್ಲಪಕ್ಷದಲ್ಲಿ ಬರುವ ಪದ್ಮಾನಾಮಕ ಏಕಾದಶಿಯ ವ್ರತವನ್ನು ನೀನು ಪರಿವಾರ ಪ್ರಜಾಸಹಿತ ಮಾಡುವೀಯಾದರೆ ಕ್ಷಾಮವು ನೀಗಿ ನಿನ್ನ ರಾಜ್ಯದಲ್ಲಿ ಮೊದಲಿನಂತೆ ಸುಭೀಕ್ಷ ಉಂಟಾಗುತ್ತದೆ, ಹೇಗೆಂದರೆ ಈ ಏಕಾದಶಿಯು – ಸರ್ವಸಿದ್ಧಿಪ್ರದಾ ಹ್ಯೇಷಾ ಸರ್ವೋಪದ್ರವನಾಶಿನೀ | ಸರ್ವಸಿದ್ಧಿಯನ್ನು ಕೊಡುವುದು ಮತ್ತು ಎಲ್ಲ ಉಪದ್ರವಗಳನ್ನು ನಾಶಮಾಡುವಂತಹದ್ದಾಗಿದೆ, ಆದ್ದರಿಂದ ನೀನು ಈ ವ್ರತವನ್ನು ಖಂಡಿತವಾಗಿ ಮಾಡು ಎಂದು ಉಪದೇಶವನ್ನು ಕೊಟ್ಟರು. ಈ ಪ್ರಕಾರ ಅಂಗೀರಸರಿಂದ ಉಪದೇಶ ಪಡೆದವನಾಗಿ ರಾಜನು ತನ್ನ ರಾಜ್ಯಕ್ಕೆ ತೆರಳಿ, ಆಷಾಢ ಪ್ರಾಪ್ತವಾಗಲು ಸಮಸ್ತ ಪ್ರಜಾಜನ ಮತ್ತು ಪರಿವಾರ ಸಮೇತ ಈ ಏಕಾದಶೀ ವ್ರತವನ್ನು ಮಾಡಿದನು. ಶೀಘ್ರವಾಗಿ ವ್ರತಪ್ರಭಾವದಿಂದ ರಾಜ್ಯದಲ್ಲಿ ಸುವೃಷ್ಟಿಯಾಯಿತು ಮತ್ತು ಅವನ ರಾಜ್ಯ ಪುನಃ ಸಂಪದ್ಭರಿತವಾಯಿತು.  ಈ ಕಾರಣದಿಂದಲೇ ಶ್ರೇಷ್ಠವಾದ ಈ ಪದ್ಮಾವ್ರತವನ್ನು ಆಚರಿಸಬೇಕು. ಈ ವ್ರತವು ಭುಕ್ತಿ ಮುಕ್ತಿ ಪ್ರದವೂ, ಜನರಿಗೆ ಸುಖದಾಯಕವೂ ಆಗಿದೆ. ಈ ವ್ರತದ ಮಹಾತ್ಮೆಯ ಪಠನ ಹಾಗೂ ಶ್ರವಣಗಳಿಂದ ಸರ್ವಪಾಪಗಳೂ ನಾಶವಾಗುತ್ತವೆ. ಇತಿ ಆಷಾಢ ಏಕಾದಶೀ ವ್ರತ ಮಾಹಾತ್ಮ್ಯಮ್.

#ಏಕಾದಶಿವ್ರತವನ್ನುಮಾಡುವಪದ್ಧತಿ :
ಮೊದಲನೆಯ ದಿನ ದಶಮಿಗೆ ಏಕಭುಕ್ತವಿರಬೇಕು. ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಬೇಕು. ಪೂರ್ಣದಿವಸ ಉಪವಾಸ ಮಾಡಬೇಕು. ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಬೇಕು. ಆಷಾಢ ಶುಕ್ಲ ದ್ವಾದಶಿಗೆ ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು. ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು ‘ಶ್ರೀಧರ’ ಎನ್ನುವ ಹೆಸರಿನಿಂದ ಪೂಜಿಸಿ

ಉಪವಾಸ ಮಾಡಿ ಭಗವಂತನಿಗೆ ಪೂಜೆ ಮಾಡಿ ತುಳಸಿಯಿಂದ ಅರ್ಚಿಸಿ ,  ಮಾರನೇಯ ದಿನ ದ್ವಾದಶಿ. ಪಾರಣೆಮಾಡಿದರೆ ಎಲ್ಲ ಕಷ್ಟಗಳೂ ಪರಿಹಾರವಾಗುವುದು . ವಿಷ್ಣು ಲೋಕ ಪ್ರಾಪ್ತಿಯಾಗುವದು.. ...‌✍️✍️✍️✍️
*****

year 2021

write-up by Sri.Nagaraju Haveri

" ತಪ್ತ ಮುದ್ರಾಧಾರಣೆ - ಒಂದು ಚಿಂತನೆ "
" ದಿನಾಂಕ : 20.07.2021 ಮಂಗಳವಾರ - ಶ್ರೀ ಪ್ಲವ ನಾಮ ಸಂವತ್ಸರ ದಕ್ಷಿಣಾಯಣ ಗ್ರೀಷ್ಮ ಋತು ಆಷಾಢ ಶುದ್ಧ ಏಕಾದಶೀ - ತನ್ನಿಮಿತ್ತ ವಿಶೇಷ ಲೇಖನ "
ಪ್ರಮಾಣಗಳು...
" ಪದ್ಮಪುರಾಣದ ಉತ್ತರಕಾಂಡ " ದಲ್ಲಿ....
ಸುದರ್ಶನಂ ಧಾರಯಿತ್ವಾ -
ವಹ್ನಿ ತಪ್ತ೦ ದ್ವಿಜೋತ್ತಮಃ ।
ಉಪನೀಯ ವಿಧಾನೇನ -
ಪಶ್ಚಾತ್ ಕರ್ಮಸು ಯೋಜಯೇತ್ ।।
" ಪಂಚರಾತ್ರಾಗಮೇ ವಿಹಗೇಶ್ವರ ಸಂಹಿತಾಯಾಮ್ " .....
ಅಗ್ನಿನೈವ ಸಂಯುಕ್ತ೦ -
ಚಕ್ರಮಾದಾಯ ಮಾಮಕಮ್ ।
ದಕ್ಷಿಣ ಬಾಹು ಮೂಲಂ -
ಸ್ವಂ ದಹೇ ದ್ವಿಗತಸಾಧ್ವಸಃ ।।
ಅಥವಾsನ್ಯೇನ ಕೇನಾಪಿ -
ವೈಷ್ಣವೇನ ಮಹಾತ್ಮನಾ ।
ಲಾಂಛಿತಂ ಬಿಭೃಯಾಚ್ಛಕ್ರಂ -
ಪಾಂಚಜನ್ಯ೦ ತಥೈವ ಚ ।।
" ಮಹಾಭಾರತ " ದಲ್ಲಿ...
ನಾನ್ಯ೦ ದೇವಂ ನಮಸ್ಕುರ್ಯಾ-
ನ್ನನ್ಯ೦ ದೇವಂ ನಿರೀಕ್ಷಯೇತ್ ।
ಚಕ್ರಾಂಕಿತಃ ಸದಾ -
ತಿಷ್ಟೇನ್ಮದ್ಭಕ್ತ: ಪಾಂಡುನಂದನ ।।
ಶ್ರೀ ಕೃಷ್ಣಾಚಾರ್ಯರು " ಸ್ಮೃತಿಮುಕ್ತಾವಲೀ " ಯಲ್ಲಿ...
ಸುದರ್ಶನಂ ಸಹಸ್ರಾರಂ 
ಪವಿತ್ರ ಚರಣಂ ಪವಿ: ।। ಇತಿ ।।
ಪವಿತ್ರಂ ಚರಣಂ ಚಕ್ರಂ 
ಲೋಕೋದ್ಧಾರಂ ಸುದರ್ಶನಮ್ ।
ಪರ್ಯಾಯ ವಾಚಕಾ ಹ್ಯೇತೇ 
ಚಕ್ರಸ್ಯ ಪರಮಾತ್ಮನಃ ।। ಇತಿ ಶಾಸ್ತ್ರ: ।।
ಶ್ರುತಾಸೋ ವಹ್ನಿ-
ತಪ್ತೇನ ಚಕ್ರೇಣ ತಪ್ತಾ: ।
ಕೇವಲಮೇಕವಾರಂ ತಪ್ತಾ -
ಕಿಂತು ವಹಂತ ಇತ್ ।
ಗೋಪಿಚಂದನಾದಿನಾ -
ನಿತ್ಯಂ ವಹಂತ ಏವ ।।
ಚಕ್ರಾಂಕಿತಭುಜಾ: ಕೇಚಿತ್ -
ಕೇಚಿಚ್ಛ೦ಖಧರಸ್ಥಾತಾ: ।
ಶಂಖ ಚಕ್ರಧರಾ ಕೇಚಿತ್ -
ಕುಲೇ ವಿಷ್ಣು ಪರಿಗ್ರಹಾ: ।।
1. ತಪ್ತ ಮುದ್ರಾಧಾರಣೆಯು ಸಕಲ ವರ್ಣದವರಿಗೂ; ಸಕಲ ಆಶ್ರಮದವರಿಗೂ; ಸ್ತ್ರೀಯರಿಗೂ ಕಡ್ಡಾಯ!
ಪ್ರಮಾಣ :
" ವ್ಯಾಸ ಸ್ಮೃತಿ " ಯಲ್ಲಿ....
ಅಗ್ನಾನೇವ ಪ್ರತಪ್ತ೦ ತು 
ಚಕ್ರಮಾದಾಯ ವೈಷ್ಣವ: ।
ದಾಹಯೇತ್ ಸರ್ವವರ್ಣಾನಾ೦ 
ಹರಿಸಾಲೋಕ್ಯಸಿದ್ಧಯೇ ।।
2. ತಪ್ತ ಮುದ್ರಾಧಾರಣೆಯು ಪ್ರತಿವರ್ಷ ಪ್ರಥಮೈಕಾದಶೀ ದಿನದಲ್ಲಿ ಇದು ವಿಶೇಷ ಕರ್ತವ್ಯವಾಗಿದೆ.
ಶ್ರೀ ಕೃಷ್ಣಾಚಾರ್ಯರು " ಸ್ಮೃತಿಮುಕ್ತಾವಲೀ " ಯಲ್ಲಿ...
ಏತೇನ ಯದುಕ್ತ೦ ಅಶೇಷಕರ್ಮ -
ಶೇಷತಯಾsಸ್ಯ ಸಕೃದೇವಾ-
ನುಷ್ಠಾನಂ ಯುಕ್ತಮ್ ।
ಶೇಷತ್ವ೦ ಚಾಂಕನ-
ರೂಪಕ್ರಿಯಾಸಂಬಂಧಾ-
ಚ್ಚಿತ್ವದ್ವಾರೇತಿ ನ ಪೌನಃಪುನ್ಯೇನ
ತಸ್ಯಾನುಷ್ಠಾನಮಿತಿ ಪ್ಯಾರಾಸ್ತಮ್ ।
ಕರ್ಮಶೇಷತ್ವೇಹ್ಯುಪಾಕರಣಾದಿವತ್ 
ಸ್ವಾತಂತ್ರ್ಯೇಣಾಪಿ 
ವಿಧಾನೇನ ಪ್ರತಿಸಂವತ್ಸರಂ
ತದನುಷ್ಠಾನಸ್ಯ ಅವಶ್ಯಕತ್ವಾತ್ ।।
3. ಪೀಠಾಧೀಶರಲ್ಲಿ ಸ್ವತಃ ಶ್ರೀಮನ್ಮಧ್ವಾಚಾರ್ಯರೇ ಸನ್ನಿಹಿತರಾಗಿದ್ದು ತಪ್ತ ಮುದ್ರೆಯನ್ನು ಹಾಕುವರು!!
ಪ್ರಮಾಣ :
ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು " ಯುಕ್ತಿಮಲ್ಲಿಕಾ " ದಲ್ಲಿ..
ಸತಾಂ ಭುಜೇ ಧಾರಯತಿ 
ಮುನಿನಾ೦ ಮಧ್ವರೂಪಧೃಕ್ ।
ಸ ಏವ ಧಾರಯೇದ್ವಾಯು-
ರನ್ಯತ್ರ ಗುರುಷು ಸ್ಥಿತಃ ।।
4. ಪರಮಹಂಸರಾದ " ಸ್ವಗುರು " ಗಳಿಗೆ ಮಾತ್ರ ಮುದ್ರಾಧಿಕಾರ!! 
ಆದ್ದರಿಂದ ಆಯಾ ಮಠದ ಶಿಷ್ಯರು ಆಯಾ ಮಠದ ಪೀಠಾಧಿಪತಿಗಳಿಂದಲೇ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕು!
ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು...
ಅರ್ಥ್ಯಮಾನಂ ತು ಮುನಿನಾ 
ತಪ್ತ ಚಕ್ರಸ್ಯ ಲಾಂಛನಮ್ ।
ಗುರೂಣಾ೦ ಕರಕಂಜೇನ 
ಧಾರ್ಯ೦ ಚಕ್ರಂ ತದೇವ ಹಿ ।।
ಶ್ರೀ ಕೃಷ್ಣಾಚಾರ್ಯರು " ಸ್ಮೃತಿಮುಕ್ತಾವಲೀ " ಯಲ್ಲಿ...
ಪ್ರತಪ್ತ೦ ವಿಧಿನಾ ವಹ್ನೌ 
ಸಹಸ್ರಾರಂ ಸುವರ್ಣಕಮ್ ।
ಪ್ರಣತಾಯ ಪ್ರಶಿಷ್ಯಾಯ 
ಹಂಸೋ ಗುರುರಥಾ೦ಕಯೇತ್ ।।
ಶಾಸ್ತ್ರೋಕ್ತವಾಗಿ ಅಗ್ನಿಯಲ್ಲಿ ( ಸುದರ್ಶನ ಹೋಮ ) ಚೆನ್ನಾಗಿ ಕಾಯಿಸಿದ ಚಕ್ರ ಶಂಖಗಳನ್ನು ತಪ್ತ ಮುದ್ರಾಧಾರಣೆಗೆ ಅರ್ಹರಾದ ಪರಮಹಂಸ ಯತಿಗಳು ಶಿಷ್ಯರಿಗೆ ಧಾರಣ ಮಾಡಿಸಬೇಕು. 
ಪರಮಹಂಸ " ಸ್ವಗುರು " ಗಳಿಗೆ ಮಾತ್ರ ತಪ್ತ ಮುದ್ರೆಗಳನ್ನು ಧಾರಣ ಮಾಡಿಸುವ ಅಧಿಕಾರ ಉಂಟು. 
ಈ ಅಧಿಕಾರ ಇತರರಿಗೆ ಇರುವುದಿಲ್ಲ!!
" ತಪ್ತ ಮುದ್ರೆಯೇ ವೈಷ್ಣವ ಲಕ್ಷಣ "
" ಕೂರ್ಮ ಪುರಾಣ " ದಲ್ಲಿ...
ಚಕ್ರಾದಿಧಾರಣಂ ಪುಂಸಾಂ 
ಹರಿಸಂಬಂಧ ವೇದನಮ್ ।
ಪತಿವ್ರತಾನಿಮಿತ್ತಂ ಹಿ 
ವಲಯಾದಿ ವಿಭೂಷಣಮ್ ।।
" ತಪ್ತ ಮುದ್ರಾಧಾರಣ ಮಹತ್ವ "
" ಶ್ರೀ ಭಾವಿಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮರು "...
ಪ್ರತಪ್ತ೦ ಬಿಭೃಯಾಚ್ಛಕ್ರ೦ 
ಶಂಖ೦ ಚ ಭುಜಮೂಲಯೋ: ।
ಶ್ರೌತಸ್ಮಾರ್ತಾದಿಸಿದ್ಧ್ಯರ್ಥಂ 
ಮಂತ್ರಸಿದ್ಧ್ಯರ್ಥಮೇವ ಚ ।।
" ತಪ್ತ ಮುದ್ರೆ ಧರಿಸದವನು ನಿಂದ್ಯನು "
" ಪದ್ಮ ಪುರಾಣ " ದಲ್ಲಿ...
ಕೃಷ್ಣ ಮುದ್ರಾ೦ಕಿತೋ 
ನೈವ ಲಲಾಟೇ ಪುಂಡ್ರವರ್ಜಿತಃ ।
ಯಶ್ಚ ವಿಪ್ರ: ಸ ದೇವರ್ಷೇ 
ವಿಜ್ಞೇಯೋ ದಾನವಾಂಶಕ: ।।
ಯಥಾ ಸ್ಮಶಾನಗಂ ಕಾಷ್ಠ೦ 
ಗರ್ಹಿತಂ ಸರ್ವಕರ್ಮಸು ।
ತಥಾsಚಕ್ರಾಂಕಿತೋ ವಿಪ್ರ: 
ಸರ್ವಕರ್ಮಸು ಗರ್ಹಿತಃ ।।
ತಪ್ತ ಮುದ್ರೆಯನ್ನು ಧರಿಸದ - ಹಣೆಯಲ್ಲಿ ಊರ್ಧ್ವ ಪುಂಡ್ರ ಲೇಪಿಸಿಕೊಳ್ಳದವನೂ - ತಪ್ತ ಮುದ್ರೆಗಳನ್ನು ಸ್ವೀಕರಿಸದ ವಿಪ್ರನು ಸ್ಮಶಾನದ ಕಾಷ್ಠದಂತೆ ಸರ್ವ ಕರ್ಮಗಳನ್ನೂ ಅನರ್ಹನೆನಿಸುವನು!!
" ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು " ಯುಕ್ತಿಮಲ್ಲಿಕಾ " ದಲ್ಲಿ...
ತದಾ ತೇಷಾ೦ ತು ಮೂರ್ಖಾನಾ೦
ಹೀನಾದಪಿ ಚ ಹೀನತಾ ।
ಕಿಂ ವಾಚ್ಯಾ ತೇನ ಚಂಡಾಲಾ-
ದಧಮಂ ತಂ ತಂ ಸ್ಮೃತಿರ್ಜಗೌ ।।
" ತಪ್ತ ಮುದ್ರಾ ಸ್ವೀಕರಿಸದವರು ನರಕ ಭಾಜನರು "
" ವಸಿಷ್ಠ ಸಂಹಿತಾಯಾಮ್ "
ತಥೈವ ಚಕ್ರಹೀನಸ್ಯ 
ಪೂಜನಾದ್ವಂದ್ವನಾದಪಿ ।
ವೈಷ್ಣವೋ ನರಕಂ ಯಾತಿ 
ಯಾವತ್ಕಲ್ಪಶತತ್ರಯಮ್ ।।
ತಪ್ತ ಮುದ್ರೆಯನ್ನು ಸ್ವೀಕರಿಸದವನಿಗೆ ನಮಸ್ಕರಿಸುವ ಜನರು ಸಹ 300 ಕಲ್ಪಗಳ ಕಾಲ ನರಕವನ್ನು ಹೊಂದುವರು!!
" ಶ್ರೀ ಬ್ರಹ್ಮಾದಿ ದೇವತೆಗಳೂ ತಪ್ತ ಮುದ್ರೆಯನ್ನು ಧರಿಸಿರುವರು "
" ಸ್ಕಾ೦ದ ಪುರಾಣ " ದಲ್ಲಿ..
ಪ್ರಹ್ಲಾದೇನ ತಥಾ ಮುದ್ರಾ -
ಧೃತಾ ನಾರಾಯಣೀ ಕರೇ ।
ವಿಭೀಷಣೇನ ರುದ್ರೇಣ -
ಬ್ರಹ್ಮಣಾ ವಜ್ರಪಾಣಿನಾ ।।
ಮಾಂಧಾತ್ರಾಚಾ೦ಬರೀಷೇಣ -
ಮಾರ್ಕಂಡೇಯಾದಿಭಿರ್ದ್ವಿಜೈ: ।
ಅಂಕಿತಂ ಶಂಖಚಕ್ರಾಭ್ಯಾ೦ 
ತಪ್ತಾಗ್ನೌ ಬಾಹು ಮೂಲಯೋ: ।।
ಶ್ರೀ ಬ್ರಹ್ಮದೇವರು - ಶ್ರೀ ರುದ್ರದೇವರು - ಶ್ರೀ ಇಂದ್ರದೇವರು ಮೊದಲಾದ ದೇವತೆಗಳೂ; ಪ್ರಹ್ಲಾದರಾಜರು - ಮಾಂಧಾತಾ - ವಿಭೀಷಣ - ಅಂಬರೀಷ - ಮಾರ್ಕಂಡೇಯ ಮೊದಲಾದ ಭಾಗವತ ಶಿರೋಮಣಿಗಳೂ ಬಾಹು ಮೂಲಗಳಲ್ಲಿ ( ಬಲ - ಎಡ ಭುಜಗಳಲ್ಲಿ ) ತಪ್ತ ಚಕ್ರ ಶಂಖಾದಿಗಳನ್ನು ಧರಿಸಿರುವರು!!
" ಅನರ್ಹರು ತಪ್ತ ಮುದ್ರೆಗಳನ್ನು ಸ್ವತಃ ಹಾಕಿಕೊಳ್ಳುವ ಮತ್ತು ಹಾಕಿಸಿಕೊಳ್ಳುವ ಜನರ ಮುಖದರ್ಶನ ಪಾಪಕರವು "
" ವಿಷ್ಣು ಸ್ಮೃತಿ " ಯಲ್ಲಿ...
ಗಂಗಾ ಸ್ನಾನರತೋ ವಾsಪಿ 
ಅಶ್ವಮೇಧರಾತೋsಪಿ ವಾ ।
ಶಂಖಚಕ್ರಾಂಕಿತತನುಂ 
ದೃಷ್ಟ್ವ ರೌರವಮಶ್ನುತೇ ।।
ಶ್ರೀ ಕೃಷ್ಣಾಚಾರ್ಯರು " ಸ್ಮೃತಿಮುಕ್ತಾವಲೀ " ಯಲ್ಲಿ...
ಗಂಗಾ ಸ್ನಾನರತೋ ವಾsಪಿ 
ಇತ್ಯೇತದಪಿ ಅವಿಧಿನಾ ಕೃತ 
ಚಕ್ರಾದಿ ಧಾರಣ ನಿಷೇಧಪರಮ್ ।।
" ಶ್ರೀ ವಿಜಯರಾಯರು "....
ಆವಾವ ಪಾಪ ಪುಣ್ಯಗಳದರ ಕಿಂಕರವು ।
ದೇವನ ನೆನಿಸಿದಂಥ ನೆನೆಯದಂಥ ।
ಜೀವರೊಳಗೊಬ್ಬ ಮುಕ್ತನು ಒಬ್ಬ ತಮಯೋಗ್ಯ ।
ಕೈವಲ್ಯಪತಿ ನಮ್ಮ ವಿಜಯವಿಠಲ ಪ್ರೇರಕಾ ।।
" ಶ್ರೀ ಪ್ರಾಣೇಶದಾಸರು ಹೇಳಿದ - ತಿಥಿ ತ್ರಯಗಳಲ್ಲಿ ವರ್ಜ್ಯ ಪದಾರ್ಥಗಳ ವಿವರ "
ಪುನಹ ಭೋಜನ, ಕಾಂಶ, ಹಾರಕ ।
ಚಣಕ, ಉದ್ಧಲ, ಸಂಧಿ, ಮಧು । ಮೈ ।
ಥುನ, ಪರಾನ್ನವು, ಶಾಕ -
ಈ ದಶ ವರ್ಜ್ಯ ದಶಮಿಯಲೀ ।।
ದಿನದಿ ನಿದ್ರಿ ಕದಳಿ ಮಧು । ದ್ವಿಭೋ ।
ಜನ ಸ್ತ್ರೀ ತೈಲದಕಾಂಶ ಈ । ಎಂ ।
ಟನು ಬಿಡಲು ದ್ವಾದಶಿಗೆ -
ಪ್ರಾಣೇಶವಿಠಲ ಮೆಚ್ಚುವನೂ ।।
ಆಚಾರ್ಯ ನಾಗರಾಜು ಹಾವೇರಿ....
ಏಕಾದಶೀ ವ್ರತವನ್ನು ಶುದ್ಧರಾಗಿ ಮಾಡಿ ।
ಶ್ರೀಕಾಂತ ಮೆಚ್ಚಿ ಮುಕ್ತಿ ಕೊಡುವ ।।
ಅನ್ನ ಪಾನಾದಿಗಳ ವರ್ಜಿಸಿ ವ್ರತ ಮಾಡೆ ।
ಮನಸಿಜನಯ್ಯ ವೆಂಕಟನಾಥಾ -
ಒಲಿದು ಪಾಪ ಪರಿಹಾರ ಮಾಡುವ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
***
#ತಪ್ತಮುದ್ರಾಧಾರಣೆ:- ಒಂದು ಹಿನ್ನೆಲೆ.

ವೈಷ್ಣವರಿಗೆ ಆಷಾಡ ಶುಧ್ಧ ಏಕಾದಶಿ(ಪ್ರಥಮ ಏಕಾದಶಿ)ಯಂದು ನಡೆಯುವ ಮುದ್ರಾಧಾರಣೆ ಪರಮ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯ ದಕ್ಷಿಣಕ್ಕೆ ವಾಲುತ್ತಾನೆ. ಅಂದರೆ ಭಗವಂತ ಮಲಗಿದಾಗ ನಾವು ಮಲಗಿ ಆತನನ್ನು ಮರೆಯಬಾರದು. ಆತನ ಚಿನ್ಹೆಯಾದ ಶಂಖ ಮತ್ತು ಚಕ್ರಗಳು ಅಚ್ಚೊತ್ತಿರಬೇಕು ಎಂಬ ಭಾವನೆಯಿಂದಲೆ ಶಯನೈಕಾದಶಿಯಂದು ತಪ್ತಮುದ್ರಾಧಾರಣೆ ಸಂಸ್ಕಾರ ಬೆಳೆದು ಬಂದಿದೆ. ದೇಹ ಸಂಸ್ಕಾರ ನಾನಾ ಬಗೆ. ಜಾತಕರ್ಮ(ಜನನ), ಉಪನಯನ, ಸ್ನಾನಶೌಚಾದಿ, ಶುಚಿಭೋಜನಾದಿ, ಉಪವಾಸಾದಿ, ಸ್ವಯಂ ಶ್ರೀಹರಿಯ ಆಯುಧಗಳ ಮುದ್ರಾಧಾರಣ. ಇದರಿಂದ ಸಂಸ್ಕಾರಗೊಂಡ ದೇಹ ಅಂತಃಸತ್ವವೆಂಬ ಶುಧ್ಧಿ ಪಡೆದು ಸಾಧನಕ್ಕೆ ಹದಗೊಳ್ಳುತ್ತದೆ.
ತಪ್ತಮುದ್ರಾಧಾರಣೆ ಬಗ್ಗೆ ಸಣ್ಣ ಹಿನ್ನೆಲೆ - ಹಿಂದೊಮ್ಮೆ ಇಂದ್ರಾದಿ ದೆವತೆಗಳೆಲ್ಲ ವೃತ್ರಾಸುರನಿಂದ ಸೋತಾಗ ಮಹಾವಿಷ್ಣುವಿನ ಬಳಿ ಹೋಗಿ ಪ್ರಾರ್ಥಿಸಿದಾಗ "ಎಲೈ ದೇವತೆಗಳೆ, ನೀವೆಲ್ಲ ನನ್ನ ಶಂಖ ಚಕ್ರಾದಿ ಲಾಂಛನಗಳನ್ನು ಧರಿಸಿ ದೈತ್ಯರೊಡನೆ ಯುಧ್ಧ ಮಾಡಿ ನಿಮಗೆ ವಿಜಯ ಲಭಿಸುತ್ತದೆ" ಎಂದು ಶ್ರೀಹರಿಯು ಅಪ್ಪಣೆಯಿತ್ತನು. ಇಂದ್ರಾದಿಗಳು ಇದರಿಂದ ಕೃತಾರ್ಥರಾದರು. ಅಂದಿನಿಂದ ಕಾಮ, ಕ್ರೋಧದಂತಹ ವೈರಿಗಳ ಜಯಕ್ಕೆ ಮುದ್ರಾಧಾರಣೆ ಅಗತ್ಯ ಎಂಬ ನಿಯಮ ವೈಷ್ಣವರಿಗೆ ಶಾಶ್ವತವಾಯಿತು. ತಪ್ತಮುದ್ರಾಧಾರಣೆಯ ಮಹತ್ವವನ್ನು ಋಗ್, ಯಜುರ್, ಸಾಮ, ಅಥರ್ವ ವೇದಗಳಲ್ಲೂ, ಪದ್ಮ ಮೊದಲಾದ ಪುರಾಣಗಳಲ್ಲೂ, ಮಹಾಭಾರತಾದಿ ಇತಿಹಾಸದಲ್ಲೂ ವರ್ಣಿತವಾಗಿದೆ. ಶ್ರೀಮನ್ ಮಧ್ವಾಚಾರ್ಯರ ಸುದರ್ಶನದ್ವಯ (ತಪ್ತ ಮುದ್ರೆ ಮತ್ತು ಶಾಸ್ತ್ರ) ತಮ್ಮ ಶಿಷ್ಯರಿಗೆ ಅನುಗ್ರಹಿಸಿದ ವಿವರ ಸುಮದ್ವವಿಜಯದಲ್ಲಿ ಉಕ್ತವಾಗಿದೆ. ಅಂತೆಯೇ ಶ್ರೀವಾದಿರಾಜರ ಚಕ್ರಸ್ತುತಿ, ಶ್ರೀಕೃಷ್ಣಾಚಾರ್ಯರ ಸ್ಮೃತಿ ಮುಕ್ತಾವಳಿ ಹಾಗು ತಪ್ತ ಚಕ್ರ ಭೂಷಣಗಳಲ್ಲಿ ವಿವರವಾಗಿ ತಿಳಿಸಲಾಗಿದೆ.
ತಪ್ತಮುದ್ರಾಧಾರಣ ಮಾಡುವ ವಿಧಾನ - ಆಚಾರ್ಯ ಮಧ್ವರು ಹಾಕಿ ಕೊಟ್ಟ ಸತ್ಪರಂಪರೆಯಂತೆ, ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಮಠದ ಪೀಠಾಧಿಪತಿಗಳಿಂದಲೇ ತಪ್ತಮುದ್ರಾಧಾರಣೆಯನ್ನು ಸ್ವೀಕರಿಸಬೇಕು. ಆಷಾಡ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸುದರ್ಶನ ಹೋಮವನ್ನು ಆಚರಿಸಿ ಶಾಸ್ತ್ರೋಕ್ತ ಕ್ರಮದಲ್ಲಿ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳನ್ನು ಸ್ಮರಿಸಿ, ತಮೋರಜೋಗುಣಗಳು ನಾಶಪಡಿಸುವಂತೆ ಪ್ರಾರ್ಥಿಸಿ ಏಕಾಗ್ರಚಿತ್ತದಿಂದ ಗಂಡಸರು ಬಲಭುಜಕ್ಕೆ ಚಕ್ರ ಎಡಬುಜಕ್ಕೆ ಶಂಖ, ಮದುವೆಯಾದ ಹೆಂಗಸರು ಬಲಗೈಯಿಗೆ ಚಕ್ರ ಎಡಗೈಯಿಗೆ ಶಂಖ, ಮದುವೆಯಾಗದ ಹೆಂಗಸರು ಬಲಗೈಯಿಗೆ ಚಕ್ರ ಹಾಗು ಚಿಕ್ಕ ಮಕ್ಕಳಿಗೆ ಹೊಟ್ಟೆಯಮೇಲೆ ಚಕ್ರವನ್ನು ಮುದ್ರಿಸಬೇಕು.
ವೈಷ್ಣವತ್ವಕ್ಕೆ ದ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯಲಕ್ಷಣವೆಂಬುದು ತಪ್ತಮುದ್ರಾಧಾರಣದ ಹಿರಿಮೆ. ಇವರು ವೈಷ್ಣವರೆಂದು ಇತರರು ಗುರುತಿಸುವುದಕ್ಕಿಂತಲೂ ಮುಖ್ಯವಾಗಿ ತಾನು ವಿಷ್ಣು ಭಕ್ತನೆಂದು ಸ್ವಂತಕ್ಕೆ ಮರೆಯದಿರಲೆಂದು ಹುಟ್ಟಿಕೊಂಡ ಈ ಪರಂಪರೆ ನಿಜಕ್ಕೂ ಅರ್ಥಪೂರ್ಣ.
|| ನಾಹಂ ಕರ್ತಾ ಹರಿಃ ಕರ್ತಾ ||
ಪ್ರೀತೋಸ್ತು ಕೃಷ್ಣ ಪ್ರಭುಃ
ಫಣೀಂದ್ರ ಕೆ
***

No comments:

Post a Comment