SEARCH HERE

Tuesday, 1 January 2019

ekadashi various types and its benefits vaikunta ekadashi papankusha ಏಕಾದಶಿಗಳು ಮತ್ತು ಅವುಗಳ ಫಲಗಳು ವೈಕುಂಠ ಏಕಾದಶಿ

sorry you can't eat even fruits!


ಏಕಾದಶಿ ಎಂದರೇನು?

ಏಕಾದಶಿ ಚಂದ್ರನ ಚಕ್ರದ ಹನ್ನೊಂದನೇ ದಿನ, ಪೂರ್ಣಿಮಾ (ಹುಣ್ಣಿಮೆ) ಮತ್ತು ಅಮಾವಾಸ್ಯ (ಅಮಾವಾಸ್ಯೆ) ದಿಂದ. ಭಗವಾನ್ ಹರಿಯ ದಿನವೆಂದು ಪ್ರಸಿದ್ಧವಾಗಿರುವ ಇದನ್ನು ಉಪವಾಸಕ್ಕೆ ಸೂಕ್ತವಾದ ಅತ್ಯಂತ ಶುಭ ದಿನಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ.

ಏಕಾದಶಿ ವ್ರತವನ್ನು ಯಾರು ಆಚರಿಸಬೇಕು?

ಏಕಾದಶಿಯನ್ನು ಮಕ್ಕಳು ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರು ಆಚರಿಸಬೇಕು. ಧರ್ಮಗ್ರಂಥಗಳ ಪ್ರಕಾರ, ಎಂಟನೆಯ ವಯಸ್ಸಿನಿಂದ ಎಂಭತ್ತು ವರ್ಷದವರೆಗೆ ಒಬ್ಬ ವ್ಯಕ್ತಿಯು ಏಕಾದಶಿ ದಿನಗಳಲ್ಲಿ ಉಪವಾಸ ಮಾಡಬೇಕು.

ಏಕಾದಶಿಯಲ್ಲಿ ನಿಷೇಧಿಸಲಾದ ಆಹಾರಗಳು ಯಾವುವು?

ಏಕಾದಶಿಯಂದು ಅಕ್ಕಿ, ಗೋಧಿ, ರಾಗಿ, ಮೆಕ್ಕೆಜೋಳ,  ಜೋಳ, ರವೆ, ಅವಲಕ್ಕಿ, ಆಹಾರ ಧಾನ್ಯಗಳು, ಧಾನ್ಯಗಳು ಮತ್ತು ಬೀನ್ಸ್ (ದ್ವಿದಳ ಧಾನ್ಯಗಳು) ತಿನ್ನಲೇಬಾರದು.

ಮಸಾಲೆಗಳನ್ನು ಅಡುಗೆಗೆ ಬಳಸಬಹುದಾದರೂ, ಸಾಸಿವೆ, ಎಳ್ಳು ಬೀಜಗಳನ್ನು ತಪ್ಪಿಸಬೇಕು.

ನೀವು ಸಾಮಾನ್ಯವಾಗಿ ಧಾನ್ಯಗಳನ್ನು ಹೊಂದಿರುವ ಪುಡಿ ಮಾಡಿದ ಅಫೊಫೈಟಿಡಾ (ಹಿಂಗ್) ಅನ್ನು ನೀವು ಬಳಸಲಾಗುವುದಿಲ್ಲ.

ಧಾನ್ಯಗಳೊಂದಿಗೆ ಬೆರೆಸಬಹುದಾದ ಯಾವುದೇ ಅಡುಗೆ ಪದಾರ್ಥಗಳನ್ನು ಬಳಸದಂತೆ ನೋಡಿಕೊಳ್ಳಿ. ಉದಾಹರಣೆಗೆ, ನೀವು ಪ್ಯೂರಿಸ್ ಫ್ರೈ ಮಾಡಲು ಬಳಸಿದ ತುಪ್ಪ ಮತ್ತು ಚಪಾತಿ ಹಿಟ್ಟಿನಿಂದ ಧೂಳಿನಿಂದ ಕೈಯಿಂದ ಸ್ಪರ್ಶಿಸಿದ ಮಸಾಲೆಗಳನ್ನು ತಪ್ಪಿಸಿ.

ಮೇಲಿನ ನಿಷೇಧಿತ ಆಹಾರಗಳನ್ನು ಹೊಂದಿರುವ ವಿಷ್ಣು-ಪ್ರಸಾದವನ್ನು ಸಹ ನೀವು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಅಂತಹ ಪ್ರಸಾದವನ್ನು ಮರುದಿನ ಗೌರವಿಸಲು ಇಡಬಹುದು.

ಏಕಾದಶಿಯನ್ನು ಆಚರಿಸುವ ವಿವಿಧ ಹಂತಗಳು

ಈ ಕೆಳಗಿನಂತೆ ಏಕಾದಶಿಯನ್ನು ವಿವಿಧ ಹಂತಗಳಲ್ಲಿ ಆಚರಿಸಬಹುದು ಮತ್ತು ಒಬ್ಬರ ವಯಸ್ಸು, ಆರೋಗ್ಯ ಮತ್ತು ಒಬ್ಬರ ಜೀವನಶೈಲಿಗೆ ಸಂಬಂಧಿಸಿದ ಹಲವಾರು ಇತರ ಅಂಶಗಳನ್ನು ಅವಲಂಬಿಸಿ ನಿರ್ದಿಷ್ಟ ಮಟ್ಟದ ಉಪವಾಸವನ್ನು ಆಯ್ಕೆ ಮಾಡಬಹುದು.

1 ನಿರ್ಜಲ ಉಪವಾಸ - ನೀರಿಲ್ಲದೆ ಉಪವಾಸ ಮಾಡುವುದು.

2.ಸಜಲ-  ನೀವು ನಿರ್ಜಲ ಉಪವಾಸವನ್ನು ಆಚರಿಸಲು ಸಾಧ್ಯವಾಗದಿದ್ದರೆ, ನೀವು ಕೇವಲ ನೀರನ್ನು ತೆಗೆದುಕೊಳ್ಳಬಹುದು.

3 ಸಫಲ :- ನಿಮಗೆ ಸಜಲ ಮಾಡಲು ಸಾಧ್ಯವಾಗದಿದ್ದರೆ, ನೀವು ಸ್ವಲ್ಪ ಹಣ್ಣು ಮತ್ತು ಹಾಲನ್ನು ಸಹ ತೆಗೆದುಕೊಳ್ಳಬಹುದು.

4. ಮುಂದಿನ ಆಯ್ಕೆಯು ನೀವು ಧಾನ್ಯೇತರ ಆಹಾರಗಳಾದ ತರಕಾರಿಗಳು (ಈರುಳ್ಳಿ ಮತ್ತು ಬೆಳ್ಳುಳ್ಳಿ ಹೊರತುಪಡಿಸಿ), ಬೇರುಗಳು, ಬೀಜಗಳು ಇತ್ಯಾದಿಗಳನ್ನು ಕಡಲೆ ಬೀಜ ಅಂದರೆ ನೆಲಕಡಲೆ, ಗೆಣಸು, ಮರ ಗೆಣಸು, ಸಬಕ್ಕಿ( ಸಾಬುದಾನ) ಆಲೂಗಡ್ಡೆ ಮತ್ತು ಇತರ ತರಕಾರಿಗಳನ್ನು ಬೇಯಿಸಿ ಉಪವಾಸದ ಸಮಯದಲ್ಲಿ ಒಮ್ಮೆ ಮಾತ್ರ ತೆಗೆದುಕೊಳ್ಳಬಹುದು.  (ಬೀನ್ಸ್ ಅವರೆಕಾಳು, ಹಲಸಂದೆ ಮುಂತಾದುವನ್ನು ತಿನ್ನಬಾರಾದು)

5. ಕೊನೆಯ ಆಯ್ಕೆಯು ಮೇಲಿನ ವಸ್ತುಗಳನ್ನು ನಿಯಮಿತ ದಿನದಂತೆ ಮೂರು ಬಾರಿ ತೆಗೆದುಕೊಳ್ಳುವುದು.

ಏಕಾದಶಿ ವ್ರತವನ್ನು ನಾವು ಹೇಗೆ ಆಚರಿಸುತ್ತೇವೆ?

ನಾವು  ಏಕಾದಶಿ ಸೂರ್ಯೋದಯದಿಂದ ದ್ವಾದಶಿ ಸೂರ್ಯೋದಯದವರೆಗೆ ಏಕಾದಶಿ ವ್ರತವನ್ನು ಆಚರಿಸುತ್ತೇವೆ.

ಏಕಾದಶಿ ಸಮಯದಲ್ಲಿ, ನಿಮ್ಮ ಸಮಯವನ್ನು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ -

ಹರೇ ಕೃಷ್ಣ ಮಹಾ-ಮಂತ್ರವನ್ನು ಸಾಧ್ಯವಾದಷ್ಟು ಬಾರಿ ಜಪಿಸುವುದು.

ಭಗವದ್ಗೀತೆ ಮತ್ತು ಶ್ರೀಮದ್-ಭಾಗವತದಂತಹ ಗ್ರಂಥಗಳನ್ನು ಓದುವುದು.

ವಿಷ್ಣು / ಕೃಷ್ಣನ ದೇವಸ್ಥಾನಕ್ಕೆ ಭೇಟಿ ನೀಡುವುದು.

ಏಕಾದಶಿಯ ಉದ್ದೇಶ ಮತ್ತು ಪ್ರಯೋಜನಗಳು

ಏಕಾದಶಿಯಂತಹ ದಿನಗಳಲ್ಲಿ ಉಪವಾಸ ಮಾಡುವುದು ದೇಹದೊಳಗಿನ ಕೊಬ್ಬನ್ನು ಕಡಿಮೆ ಮಾಡಲು ಉದ್ದೇಶಿಸಿರುತ್ತದೆ, ಇಲ್ಲದಿದ್ದರೆ ಹೆಚ್ಚು ನಿದ್ರೆ, ನಿಷ್ಕ್ರಿಯತೆ ಮತ್ತು ಸೋಮಾರಿತನವನ್ನು ಉಂಟುಮಾಡುತ್ತದೆ.

ಏಕಾದಶಿಯಂದು, ಹೆಚ್ಚಿನ ಸಮಯವನ್ನು ಆಧ್ಯಾತ್ಮಿಕ ಚಟುವಟಿಕೆಗೆ ಬಳಸಿಕೊಳ್ಳಬಹುದು. ಈ ರೀತಿಯಾಗಿ, ಒಬ್ಬರು ಬಾಹ್ಯ ಮತ್ತು ಆಂತರಿಕ ಶುದ್ಧತೆಯನ್ನು ಸಾಧಿಸಬಹುದು.

ಏಕಾದಶಿಯ ಉಪವಾಸದ ನಿಜವಾದ ಉದ್ದೇಶವೆಂದರೆ ಭಗವಂತನ ಬಗ್ಗೆ ಒಬ್ಬರ ನಂಬಿಕೆ ಮತ್ತು ಪ್ರೀತಿಯನ್ನು ಹೆಚ್ಚಿಸುವುದು. ಏಕಾದಶಿಯ ಉಪವಾಸವನ್ನು ಆಚರಿಸುವ ಮೂಲಕ, ನಾವು ದೈಹಿಕ ಬೇಡಿಕೆಗಳನ್ನು ಕಡಿಮೆ ಮಾಡಬಹುದು ಮತ್ತು ಹರೇ ಕೃಷ್ಣ ಮಂತ್ರವನ್ನು ಪಠಿಸುವ ಮೂಲಕ ಅಥವಾ ಅದೇ ರೀತಿಯ ಸೇವೆಯನ್ನು ಮಾಡುವ ಮೂಲಕ ಭಗವಂತನ ಸೇವೆಯಲ್ಲಿ ನಮ್ಮ ಸಮಯವನ್ನು ತೊಡಗಿಸಿಕೊಳ್ಳಬಹುದು.

ಏಕಾದಶಿ ವ್ರತವನ್ನು ಪಾಲಿಸುವುದು ಸರ್ವೋತ್ತಮ ಭಗವಂತನನ್ಬು ಸಂತೋಷಪಡಿಸುತ್ತದೆ ಮತ್ತು ಅದನ್ನು ನಿಯಮಿತವಾಗಿ ಆಚರಿಸುವುದರಿಂದ ಕೃಷ್ಣ ಪ್ರಜ್ಞೆಯಲ್ಲಿ ಪ್ರಗತಿ ಸಾಧಿಸುತ್ತದೆ.

ಏಕಾದಶಿ ದಿನದಂದು ಉಪವಾಸವನ್ನು ಆಚರಿಸುವವನು ಪಾಪಕಾರ್ಯಗಳು ಮತ್ತು ಎಲ್ಲಾ ರೀತಿಯ ಪ್ರತಿಕ್ರಿಯೆಗಳಿಂದ ಮುಕ್ತನಾಗುತ್ತಾನೆ ಮತ್ತು ಆಧ್ಯಾತ್ಮಿಕ ಪ್ರಗತಿಯಾಗುತ್ತದೆ ಎಂದು ಬ್ರಹ್ಮ-ವೈವರ್ತ ಪುರಾಣದಲ್ಲಿ ಹೇಳಲಾಗಿದೆ.

ಪದ್ಮ ಪುರಾಣವು ಒಬ್ಬನು ಏಕಾದಶಿಯನ್ನು ಅನುಸರಿಸಲೇಬೇಕು ಎಂದು ಹೇಳುತ್ತದೆ, ಏಕೆಂದರೆ ಒಬ್ಬರು ಗೊತ್ತಿಲ್ಲದೇ ಏಕಾದಶಿಯನ್ನು ಅನುಸರಿಸುತ್ತಿದ್ದರೂ, ಅವನ ಎಲ್ಲಾ ಪಾಪಗಳು ಪರಿಪೂರ್ಣವಾಗುತ್ತವೆ ಮತ್ತು ಅವನು ವೈಕುಂಠದ ವಾಸಸ್ಥಾನವಾದ ಸರ್ವೋಚ್ಚ ಗುರಿಯನ್ನು ಬಹಳ ಸುಲಭವಾಗಿ ಸಾಧಿಸುತ್ತಾನೆ‌ ಎಂದು ಹೇಳಿದೆ.

ಏಕಾದಶಿ ವೃತವನ್ನು ಮುರಿಯುವುದು :-
ಮರುದಿನ ದ್ವಾದಶಿಯಂದು ಸೂರ್ಯೋದಯದ ನಂತರ  ಏಕಾದಶಿ ಉಪವಾಸವನ್ನು ಮುರಿಯಬೇಕು.

ಅನ್ನ ಹಾಗೂ ದವಸ ಧಾನ್ಯಗಳನ್ನು ತೆಗೆದುಕೊಳ್ಳುವ (normal food) ಮೂಲಕ ಅದನ್ನು ಮುರಿಯಬೇಕು.

ಉಪವಾಸಕ್ಕೆ ವೈಜ್ಞಾನಿಕ ಕಾರಣ ಬಹಳಷ್ಟು ಇವೆ. ಮಾನವ ದೇಹದ ಮೇಲೆ ಉಪವಾಸದ ಜೈವಿಕ ಪರಿಣಾಮಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಬಹಳಷ್ಟು ಜನರಿಗೆ ಇದರ ಬಗ್ಗೆ ತಿಳಿದಿಲ್ಲ.

ಏಕಾದಶಿ ದಿನದಂದು ಉಪವಾಸ ಮಾಡುವುದು ಯಾವುದೇ  ಪವಿತ್ರ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವುದಕ್ಕೆ ಸಮ. ಈ ಉಪವಾಸದ ಮಾಡುವುದು ಪ್ರಸಿದ್ಧ ಅಶ್ವಮೇಧ ಯಜ್ಞ ಕ್ಕೆ ಸಮವೆಂದು ಪರಿಗಣಿಸಲಾಗಿದೆ.

ಮಾನಸಿಕ ಶಾಂತಿ ಮತ್ತು ಸ್ಥಿರತೆಯನ್ನು ಬಯಸುವವರಿಗೆ ತಿಂಗಳಲ್ಲಿ 2 ಏಕಾದಶಿ ಆಚರಿಸುವುದು ಅವಶ್ಯವಾಗಿದೆ. ನಿಮ್ಮ ಎಲ್ಲಾ ಪಾಪಗಳನ್ನು ತೊಡೆದುಹಾಕಲು ಮತ್ತು ನಿಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸಲು ನೀವು ಬಯಸಿದರೆ, ಈ ಏಕಾದಶಿ ಉಪವಾಸ  ನೀವು ಮಾಡಬೇಕು.

ಏಕಾದಶಿ ಉಪವಾಸವು ನಿಮ್ಮ ಆತ್ಮವನ್ನು ಶುದ್ಧೀಕರಿಸುವುದಲ್ಲದೆ ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ದೇಹದ ಚಯಾಪಚಯವನ್ನು ಉತ್ತಮಗೊಳಿಸುತ್ತದೆ. ವಿಷ್ಣುವಿನ ಆರಾಧಕರಿಗೆ ಏಕಾದಶಿ ಉಪವಾಸದ ಬಗ್ಗೆ ತಿಳಿದಿದೆ. ಅಂತಿಮ ಮೋಕ್ಷ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಉನ್ನತಿ ಏಕಾದಶಿಯ ಪ್ರಯೋಜನಗಳಾಗಿವೆ.
***

ಸಂಪೂರ್ಣೈಕಾದಶೀಯಂದೇ ಉಪವಾಸ

ಉದಯಾತ್ ಪ್ರಾಗ್ ಯದಾ ವಿಪ್ರಾ ಮುಹೂರ್ತದ್ವಯಸಂಯುತಾ|
ಸಂಪೂರ್ಣೈಕಾದಶೀ ನಾಮ ತತ್ರೈವೋಪವಸೇದ್ಗೃಹೀ||

ಸೂರ್ಯೋದಯದ ಮುಂಚಿನ ಎರಡು ಮುಹೂರ್ತಗಳಿಂದ 
ಕೂಡಿದ ಕಾಲದಲ್ಲಿ ಏಕಾದಶಿಯು ಇದ್ದಲ್ಲಿ ಅದನ್ನು
ಸಂಪೂರ್ಣೈಕಾದಶಿ ಎಂದು ಕರೆಯಲಾಗುತ್ತದೆ
ಗೃಹೀ ಅಂದ್ರೆ ಗೃಹಸ್ಥನು ಉಪಲಕ್ಷಣತಯಾ ವಟು ವಾನಪ್ರಸ್ಥ ಮತ್ತು ಯತಿಗಳೂ ಅಂತ ಅನ್ವಯ ಮಾಡಿಕೊಂಡು  ಸರ್ವರೂ ಉಪವಾಸ ಮಾಡಬೇಕು

ಅರುಣೋದಯ ಕಾಲಕ್ಕೆ ಏಕಾದಶಿ ತಿಥಿ ಇದ್ದಲ್ಲಿ ಅದು
ಸಂಪೂರ್ಣೈಕಾದಶಿ ಎನ್ನಿಸುವುದರಿಂದ ಅದು ಉಪವಾಸಕ್ಕೆ ಅತ್ಯಂತ ವಿಹಿತವಾದದ್ದು ಯೋಗ್ಯವಾದದ್ದು ಎಂದರ್ಥ 

ಏಕಾದಶೀ ತಿಥಿಯ ನಿರ್ಣಯ ಸಕಲ ವೈಷ್ಣವರಿಗೂ ಒಂದೇ ಬಗೆಯಾದುದು
ಇದರಲ್ಲಿ ಆಶ್ರಮ ಭೇದವಾಗಲಿ ವರ್ಣಭೇದವಾಗಲಿ ಸರ್ವಥಾ ಇಲ್ಲ ಎಂಬುದಾಗಿ ತಿಳಿದು 
ಸಂಪೂರ್ಣೈಕಾದಶಿ ಯಂದೇ ಉಪವಾಸ ವ್ರತವನ್ನು ಕೈಗೊಳ್ಳಬೇಕೆಂಬುದರಲ್ಲಿ ತಾತ್ಪರ್ಯವಿದೆ
***

Various fortnight's Ekadashi Names
-ps: names may differ from purana to purana
೨೪ ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲ
ಈ ಹೆಸರುಗಳು ಪುರಾಣದಿಂದ ಪುರಾಣಕ್ಕೆ ಸ್ವಲ್ಪ ಭಿನ್ನವಾಗಿರುತ್ತವೆ.

1. Chaitra Shukla Ekadashi - Kaamada
೧) ಚೈತ್ರ ಶುಕ್ಲ ಏಕಾದಶಿ - ಕಾಮದಾ - ಕೋರಿಕೆಗಳನ್ನು ಪೂರೈಸುತ್ತದೆ.

2. Chaitra Bahula Ekadashi  - Varoodhini
೨) ಚೈತ್ರ ಬಹುಳ ಏಕಾದಶಿ - ವರೂಧಿನಿ - ಸಹಸ್ರ ಗೋದಾನ ಫಲವು ಲಭಿಸುತ್ತದೆ.

3. Vaishakha Shukla Ekadashi - Mohini
೩) ವೈಶಾಖ ಶುದ್ಧ ಏಕಾದಶಿ - ಮೋಹಿನಿ - ದರಿದ್ರನು ಧನವಂತನಾಗುತ್ತಾನೆ.

4. Vaishakha Bahula Krishna Ekadashi - Apara
೪) ವೈಶಾಖ ಬಹುಳ ಏಕಾದಶಿ - ಅಪರಾ - ರಾಜ್ಯಪ್ರಾಪ್ತಿ

5. Jyeshta Shukla Ekadashi - Nirjala
೫) ಜ್ಯೇಷ್ಠ ಶುಕ್ಲ ಏಕಾದಶಿ - ನಿರ್ಜಲ - ಆಹಾರ ಸಮೃದ್ಧಿ

6. Jyeshta Krishna Ekadashi - Yogini
೬) ಜ್ಯೇಷ್ಠ ಬಹುಳ ಏಕಾದಶಿ - ಯೋಗಿನಿ - ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)

7. Ashada Shukla Ekadashi - Devashayani
೭) ಆಷಾಢ ಶುದ್ಧ ಏಕಾದಶಿ - ದೇವಶಯನಿ - ಸಂಪತ್ ಪ್ರಾಪ್ತಿ - ವಿಷ್ಣುವು ಯೋಗನಿದ್ರೆಗೆ ಜಾರುವ ದಿನ

8. Ashada Krishna Ekadashi - Kamika
೮) ಆಷಾಢ ಬಹುಳ ಏಕಾದಶಿ - ಕಾಮಿಕಾ - ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.


9. Shravana Shukla Ekadashi - Putrada
೯) ಶ್ರಾವಣ ಶುಕ್ಲ ಏಕಾದಶಿ - ಪುತ್ರದಾ - ಸತ್ ಸಂತಾನ ಪ್ರಾಪ್ತಿ


10. Shravana Krishna Ekadashi - Aja
೧೦) ಶ್ರಾವಣ ಬಹುಳ ಏಕಾದಶಿ - ಅಜಾ - ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ

11. Bhadrapada Shukla Ekadashi - Parivartana
೧೧) ಭಾದ್ರಪದ ಶುದ್ಧ ಏಕಾದಶಿ - ಪರಿವರ್ತನ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) - ಯೋಗ ಸಿದ್ಧಿ


12. Bhadrapada Krishna Ekadashi - Indira
೧೨) ಭಾದ್ರಪದ ಬಹುಳ ಏಕಾದಶಿ - ಇಂದಿರಾ - ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.

13. Ashwina Shukla Ekadashi - Papankusha
೧೩) ಆಶ್ವಯುಜ ಶುಕ್ಲ ಏಕಾದಶಿ - ಪಾಪಾಂಕುಶ - ಪುಣ್ಯಪ್ರದವಾದುದು

14. Ashwina Krishna Ekadashi - Rama
೧೪) ಆಶ್ವಯುಜ ಬಹುಳ ಏಕಾದಶಿ - ರಮಾ - ಸ್ವರ್ಗಪ್ರಾಪ್ತಿ

15. Karteeka Shukla Ekadashi - Prabodhini/ Devutthana
೧೫) ಕಾರ್ತೀಕ ಶುಕ್ಲ ಏಕಾದಶಿ - ಪ್ರಬೋಧಿನಿ or ದೇವುತ್ಥಾನ ಏಕಾದಶಿ
(ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ


16. Karteeka Krishna Ekadashi - Utpatti
೧೬) ಕಾರ್ತೀಕ ಬಹುಳ ಏಕಾದಶಿ - ಉತ್ಪತ್ತಿ - ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)


17. Margashira Shukla Ekadashi - Mokshada
೧೭) ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದಾ - ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)


18. Margashira Krishna Ekadashi - Vimala/ Safala
೧೮) ಮಾರ್ಗಶಿರ ಬಹುಳ ಏಕಾದಶಿ - ವಿಮಲಾ (ಸಫಲಾ) - ಅಜ್ಞಾನ ನಿವೃತ್ತಿ

19. Pushya Shukla Ekadashi - Putrada
If this comes in Dhanurmasa, it becomes Vaikunta Ekadashi. Vaikunta Ekadashi may come either in Margashira or Pushya Masa.
೧೯) ಪುಷ್ಯ ಶುಕ್ಲ ಏಕಾದಶಿ - ಪುತ್ರದಾ - ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)
*ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ ಮುಂಚೆಯೇ ಹೇಳಿದೆ.

20. Pushya Krishna Ekadashi - Kalyani/ Shattila
೨೦) ಪುಷ್ಯ ಕೃಷ್ಣ ಏಕಾದಶಿ - ಕಲ್ಯಾಣೀ (ಷಟ್‌ತಿಲಾ) - ಶಾರೀರಿಕ ಬಾಧೆಗಳಿಂದ ಮುಕ್ತಿ

21. Magha Shukla Ekadashi - Kamada/ Jaya
೨೧) ಮಾಘ ಶುಕ್ಲ ಏಕಾದಶಿ - ಕಾಮದಾ (ಜಯಾ) - ಶಾಪವಿಮುಕ್ತಿ

22. Pushya Krishna Ekadashi - Vijaya/ Bheeshma
೨೨) ಮಾಘ ಕೃಷ್ಣ ಏಕಾದಶಿ - ವಿಜಯಾ - ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)

23. Phalguna Shukla Ekadashi - Amalaki
೨೩) ಫಾಲ್ಗುಣ ಶುಕ್ಲ ಏಕಾದಶಿ - ಆಮಲಕೀ - ಆರೋಗ್ಯ ಪ್ರಾಪ್ತಿ


24. Phalguna Krishna Ekadashi - Soumya
೨೪) ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯಾ - ಪಾಪ ವಿಮುಕ್ತಿ
- ಕೃಷ್ಣಪ್ರಸನ್ನ ಆಚಾರ್ ದಾವಣಗೆರೆ
***

25 and 26


25. Adhika Masa Shukla Ekadashi - Kamada
೨೫) ಅಧಿಕ ಮಾಸ ಶುಕ್ಲ ಏಕಾದಶಿ - ಕಾಮದಾ ಏಕಾದಶಿ - ಮನುಷ್ಯನ ಕಾಮನೆಗಳು, ಆಸೆ, ಆಕಾಂಕ್ಷೆಗಳನ್ನು ಈಡೇರಿಸುತ್ತದೆ.    ‌              ‌    

26. Adhika Masa Krishna Ekadashi - Kamala
೨೬) ಅಧಿಕ ಮಾಸ ಕೃಷ್ಣ ಏಕಾದಶಿ - ಕಮಲ ಏಕಾದಶಿ - ಶ್ರೀ ಮಹಾಲಕ್ಷ್ಮಿಯ ಪ್ರಸನ್ನತೆಗಾಗಿ, ಶ್ರೀಮಂತ ರಾಗಲು.
******



#ಏ ನನ್ನೂ ತಿನ್ನದೇ,ಕುಡಿಯದೇ
#ಕಾ ,ಕಾಮ, ಕ್ರೋ ಧಾ ದಿ ಗ ಳ ವರ್ಜಿಸಿ
#ದ ದಮನಿಸಿ ಇಂದ್ರಿಯ ಗಳ
#ಶಿ ಶಿರಬಾಗಿ ವಂದಿಸಿ  ನಿರುತ
ಏಕಾದಶೇಂದ್ರಿಯ ಕರ್ಮ ಶ್ರೀ ಕೃಷ್ಣ ವಿಠಲಗರ್ಪಿಸಿ ಸುಖಿಸುವುದೇ ಏಕಾದಶಿ ವ್ರತ
****


ಏ... ಏಕಾಂತವಾಗಿ 
ಕಾ ...ಕಾಮನೆ ಬದಿಗಿಟ್ಟು
ದ...ದಶೇಂದ್ರಿಯಗಳನ್ನು ಹಿಡಿತದಲ್ಲಿರಿಸಿ.
ಶಿ ... ಶಿಸ್ತು ಬದ್ಧವಾಗಿ 
ಉ .... ಉಪಾಹಾರ ಇಲ್ಲದೆ
ಪ ... ಪರಮಾತ್ಮನ ಹತ್ತಿರ 
ವಾ ...ವಾಸವಾಗಿದ್ದು .
ಸ ... ಸತ್ಸಂಗದಲ್ಲಿ  ಇರುವುದೇ ಏಕಾದಶಿ ಉಪವಾಸ
*******


ಏಕಾದಶಿ ಪ್ರಾರಂಭದ ಬಗ್ಗೆ  ಹಿನ್ನೆಲೆ

ಪ್ರಪ್ರಥಮವಾಗಿ ಏಕಾದಶಿ ಆಚರಣೆ ಪ್ರಾರಂಭವಾಗಿದ್ದು ಆಷಾಢ ಮಾಸದಿಂದ. ಆಷಾಢ ಮಾಸದ ಶುಕ್ಲಪಕ್ಷದಲ್ಲಿನ ಏಕಾದಶಿಯನ್ನು "ದೇವಶಯನಿ" (ದೇವರ ನಿದ್ರೆಯ)  'ಶಯನೈಕಾದಶಿ #ಶಯನಿ ಏಕಾದಶಿ , #ಮಹಾ ಏಕಾದಶಿ , #ಪ್ರಥಮ ಏಕಾದಶಿ, ಪದ್ಮ ಏಕಾದಶಿ, #ದೇವಪೋಢಿ ಏಕಾದಶಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

ಕಾರಣ ಅಂದು ಮಹಾವಿಷ್ಣುವು ಆದಿಶೇಷ ತಲ್ಪದಲ್ಲಿ ಯೋಗನಿದ್ರೆಯಲ್ಲಿ ಮಲಗುತ್ತಾನೆ. ಅವನು ಏಳುವುದು ಕಾರ್ತಿಕ ಶುದ್ಧ ದ್ವಾದಶಿಯಂದು.ಅದನ್ನು "ಉತ್ಥಾನ(ಏಳುವುದು)ದ್ವಾದಶಿ" ಎಂದು ಕರೆಯುವರು.

ನಾಲ್ಕು ತಿಂಗಳು ಸನ್ಯಾಸಿಗಳು ಯತಿಗಳು ಚಾತುರ್‌ಮಾಸ್ಯವನ್ನು ಮಾಡುತ್ತಾರೆ.

ಹಿಂದೆ ದೇವ ದಾನವರ ಯುದ್ಧವಾದಾಗ, ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಈಶ್ವರನಿಂದ ಅಮರತ್ವವನ್ನು ಪಡೆದು ತ್ರಿಮೂರ್ತಿಗಳಾದಿಯಾಗಿ ಎಲ್ಲ ದೇವತೆಗಳನ್ನು ಸೋಲಿಸಿ ಸ್ವರ್ಗದಿಂದ ಓಡಿಸಿದನು.ದೇವತೆಗಳು ಅವನ ಭಯದಿಂದ ತ್ರಿಕೂಟ ಪರ್ವತದ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗಿನ ಒಂದು ಗುಹೆಯಲ್ಲಿ ಅಡಗಿ ಕುಳಿತರು.ಆ ದಿನವು ಆಷಾಢ ಶುದ್ಧ ಏಕಾದಶಿಯಾಗಿತ್ತು.!

ಅನಿವಾರ್ಯವಾಗಿ ಅವರು ಅಂದು ಉಪವಾಸ ಮಾಡುವಂತಾಯಿತು.

ಅವರ ಉಪವಾಸದ ಫಲವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಆವಿರ್ಭವಿಸಿ,ಗುಹೆಯ ಬಾಗಿಲಿನಲ್ಲಿ , ದೇವತೆಗಳು ಹೊರಬರುವುದನ್ನು ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು. ಈ ಶಕ್ತಿದೇವತೆಯೇ ಏಕಾದಶಿ ತಿಥಿಯ ಅಧಿದೇವತೆಯಾಗಿದ್ದಾಳೆ.

ಅಂದಿನಿಂದ ಪ್ರಥಮೈಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯ ವರೆಗೆ ಒಂಬತ್ತು ಏಕಾದಶಿಗಳಂದು ಉಪವಾಸ ಮಾಡುವ ಪದ್ಧತಿ ಆರಂಭವಾಯಿತು.

ಏಕಾದಶಿಯಂದು ಸ್ನಾನ ಮಾಡಿ,ವಿಷ್ಣುವನ್ನು ತುಳಸಿ ಕುಡಿಯಿಂದ ಭಕ್ತಿಯಿಂದ ಅರ್ಚಿಸಿ,ತೀರ್ಥಪ್ರಾಶನ ಮಾಡಿ,ಅಹೋರಾತ್ರಿ ವಿಷ್ಣುನಾಮ ಸಂಕೀರ್ತನೆ, ಭಜನೆ ಮಾಡುತ್ತ ಜಾಗರಣೆ ಮಾಡಿ,ದ್ವಾದಶಿಯ ದಿನ ಬೆಳಿಗ್ಗೆ ಸ್ನಾನ ಪೂಜೆ ಮುಗಿಸಿ,ನೈವೇದ್ಯ ಮಾಡಿದ ಪದಾರ್ಥಗಳನ್ನು ಸೇವಿಸಿ,ಉಪವಾಸ ಮುಕ್ತಾಯದ ಪಾರಣೆ ಮಾಡಬೇಕು.

#ಸಾಮಾನ್ಯವಾಗಿ ಶಯನ ಏಕಾದಶಿಯಿಂದ, ಉತ್ಥಾನದ್ವಾದಶಿವರೆಗೆ, ವಿಷ್ಣುವು ಯೋಗನಿದ್ರಾವಸ್ಥೆಯಲ್ಲಿರುವುದರಿಂದ,ಮದುವೆ ,ಉಪನಯನ,ಗೃಹಪ್ರವೇಶಾದಿ ಮಂಗಳ ಕಾರ್ಯಗಳನ್ನು ನೆರವೇರಿಸುವುದಿಲ್ಲ.

ಉತ್ಥಾನ ದ್ವಾದಶಿಯಂದೇ ವಿಷ್ಣುವು ತುಲಸಿಯನ್ನು ವಿವಾಹವಾದುದು. ನೆಲ್ಲಿ ಮರದ ಕೆಳಗಿನ ಗುಹೆ ದೇವತೆಗಳನ್ನು ರಕ್ಷಿಸಿತ್ತು. ಇವೆರಡರ ಸವಿನೆನಪಿನಲ್ಲಿ ನೆಲ್ಲಿ ಕೊಂಬೆಯನ್ನು ತುಳಸಿಗಿಡದೊಂದಿಗೆ ಇಟ್ಟು "ತುಳಸಿ ಹಬ್ಬ/ತುಳಸಿದೀಪ" ಎಂದು ಪೂಜೆ, ದೀಪಾರಾಧನೆ ಮಾಡುವುದು ಆಚರಣೆಗೆ ಬಂದಿದೆ.

#ವಿಷ್ಣುವಿನ ಭಕ್ತರು,

ಮಾಧ್ವ ಸಂಪ್ರದಾಯದ ಬಂಧುಗಳು ಈ ಒಂಬತ್ತು ಏಕಾದಶಿ ಮಾತ್ರವಲ್ಲದೆ ವರ್ಷದ ಎಲ್ಲ ಏಕಾದಶಿಯಲ್ಲಿಯೂ ನಿರಾಹಾರ ಉಪವಾಸ ವ್ರತ ಆಚರಿಸುತ್ತಾರೆ.
ಅದಾಗದವರು ಆಷಾಢ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗೆ ಒಂಬತ್ತು ಏಕಾದಶಿಗಳಂದು ಉಪವಾಸ ವ್ರತ ಆಚರಿಸುತ್ತಾರೆ.

ವೈಜ್ಞಾನಿಕ ಮತ್ತು ವೈದ್ಯಕೀಯವಾಗಿಯೂ ವಾರದಲ್ಲಿ,ಅಥವಾ ಪಕ್ಷದಲ್ಲಿ ಒಂದು ದಿನ ಉಪವಾಸ ಮಾಡುವುದು ದೇಹ ಮತ್ತು ಆರೋಗ್ಯಕ್ಕೆ ಪರಿಣಾಮಕಾರಿ ಮತ್ತು ಬಹಳ ಒಳ್ಳೆಯದು ಎಂದು ಸಾಬೀತಾಗಿದೆ.

ಏಕಾದಶಿವ್ರತ ನಿಷ್ಠೆಯಿಂದ ಮಾಡಿ ಮೋಕ್ಷ ಪಡೆದ ಮಹರ್ಷಿಗಳ, ಮಹಾರಾಜ ಅಂಬರೀಷ,ಮೊದಲಾದವರ ಕತೆ ಪುರಾಣಗಳಲ್ಲಿವೆ.
*********

ಇನ್ನು “ಏಕಾದಶಿ” ಎಂದರೆ

 ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶಿ” ಒಂದು ವ್ರತ. 


ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.


ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. 


ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.


 ಎಂದರೆ ಶುಚಿರ್ ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.

ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. 

ಹೀಗೆ ಎಡಬಿಡದೆ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಮಹಾಕವಿ ಕಾಳಿದಾಸ ಹೇಳಿರುವಂತೆ : “ಶರೀರಮಾಧ್ಯಂ ಖಲು ಧರ್ಮಸಾಧನಂ”, ಧರ್ಮ ಸಂಪಾದನೆಗೆ, ಸ್ವಸ್ಥ್ಯ ಶರೀರ ಅತ್ಯಗತ್ಯ.
******

ನಾವೇಕೆ ಉಪವಾಸವಿರುತ್ತೇವೆ - 
ಉಪವಾಸದ ಹಿಂದಿನ ತತ್ವವು ಆಯುರ್ವೇದದಲ್ಲಿ ಅಡಗಿದೆ. ಈ ಪ್ರಾಚೀನ ವೈಧ್ಯ ವಿಜ್ಞಾನವು ಹಲವಾರು ಕಾಯಿಲೆಗಳಿಗೆ ಮೂಲ ಕಾರಣವು ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಬಿಡುಗಡೆಯಾಗುವ ಟಾಕ್ಸಿಕ್ ಪದಾರ್ಥಗಳೇ ಆಗಿರುತ್ತದೆ ಎಂದು ಹೇಳುತ್ತದೆ. ಈ ಟಾಕ್ಸಿಕ್ ಪದಾರ್ಥಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತ ಇರುವುದರಿಂದ ನಾವು ಆರೋಗ್ಯವಾಗಿರಬಹುದು. ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತದೆ ಮತ್ತು ದೇಹದಲ್ಲಿರುವ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಒಂದು ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಈ ಅವಧಿಯಲ್ಲಿ ನಿಯಮಿತವಾಗಿ ಲಿಂಬೆ ರಸವನ್ನು ಸೇವಿಸುವುದರಿಂದ ದೇಹದಲ್ಲಿ ವಾಯು ತುಂಬಿಕೊಳ್ಳುವ ಸಮಸ್ಯೆಯು ತಲೆದೋರುವುದಿಲ್ಲ. ಆಯುರ್ವೇದದಲ್ಲಿ ಹೇಳಿರುವಂತೆ ನಮ್ಮ ದೇಹದ್ಲಲಿ ಶೇ 80% ರಷ್ಟು ನೀರು ಮತ್ತು ಶೇ.20% ರಷ್ಟು ಘನ ಪದಾರ್ಥಗಳು ಇರುತ್ತವೆ. ಭೂಮಿಯ ಮೇಲೆ ಪರಿಣಾಮ ಬೀರಿದಂತೆ ಚಂದ್ರನು ನಮ್ಮ ದೇಹದಲ್ಲಿನ ನೀರಿನಂಶದ ಮೇಲೆ ಪ್ರಭಾವ ಬೀರುತ್ತಾನೆ. ಆಗ ಜನರು ಉದ್ವೇಗ, ಕಿರಿಕಿರಿ ಮತ್ತು ಹಿಂಸಾ ಪ್ರವೃತ್ತಿಗೆ ಇಳಿಯುತ್ತಾರೆ. ಈ ಸಮಸ್ಯೆಗೆ ಉಪವಾಸವು ಪ್ರತಿ ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿನ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ತಮ್ಮ ವಿವೇಕವನ್ನು ಉಳಿಸಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಮಧುಮೇಹ, ರೋಗ ನಿರೋಧಕ ಶಕ್ತಿಯಲ್ಲಿನ ನ್ಯೂನತೆಗಳನ್ನು ಹಾಗು ಇತ್ಯಾದಿಗಳನ್ನು ಇದು ಸರಿಪಡಿಸುತ್ತದೆ.

ಪ್ರತಿ ಮಾಸದಲ್ಲಿ ಎರಡು ಏಕಾದಶಿಗಳು ಬರುತ್ತವೆ .ವರ್ಷದಲ್ಲಿ ಒಟ್ಟು 24 ಏಕಾದಶಿಗಳು . ಒಂದಕ್ಕಿಂತ ಒಂದು ಭಿನ್ನ , ಅವುಗಳ ತತ್ವಾಭಿಮಾನಿ ದೇವತೆಗಳು ಬೇರೆ ಬೇರೆ . ಹಾಗೆಯೇ ಒಂದೊಂದರ ಫಲಗಳೂ ಬೇರೆ ಬೇರೆ. 

ಪ್ರತಿಯೊಂದು ಏಕಾದಶಿಗೂ ಒಂದೊಂದು ಪುರಾಣೋಕ್ತ ಹೆಸರಿರುವುದಾಗಿದ್ದು ಒಂದಲ್ಲ ಒಂದು ವಿಧದಲ್ಲಿ ಅವು ಒಂದೊಂದು ಹೆಚ್ಚಿನ ಪುಣ್ಯಪ್ರದವಾಗಬಲ್ಲದಾಗಿದೆ. ಅವುಗಳ ಪೈಕಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಗೆ ಶಯನಿ ಅಂತಲೂ, ಕ್ರಮವಾಗಿ ಪ್ರಥಮೇಕಾದಶಿ ಮತ್ತು ವೈಕುಂಠ ಏಕಾದಶಿ ಅಂತಲೂ ಸಾವಿರಾರು ವರ್ಷಗಳಿಂದ ಕರೆಯಲಾಗಿದ್ದು, ಅವುಗಳ ಹಿನ್ನೆಲೆಯಾಗಿ ಅನೇಕ ಮಹಿಮೆಗಳು ಇರುವುದಾಗಿದೆ.

ಪುರಾತನವಾದ ಹಿಂದಿನ ಒಂದು ಕಾಲದಲ್ಲಿ ಗೋಕಲವೆಂಬ ನಗರದಲ್ಲಿ ವಾಸವಾಗಿದ್ದ ವೈಖಾನಸನೆಂಬ ರಾಜರ್ಷಿಗೆ ಒಂದು ದಿನ ಇದ್ದಕ್ಕಿದ್ದಂತೆ ತನ್ನ ತಂದೆ ಸತ್ತ ಬಳಿಕ ಪ್ರೇತತ್ವ ನಿವಾರಣೆ ಹೊಂದದೇ ನರಕವನ್ನು ಅನುಭವಿಸುತ್ತಿರುವುದಾಗಿ ಅವನ ದಿವ್ಯ ದೃಷ್ಟಿಗೆ ಗೋಚರವಾಗುವುದಾಯಿತು. ಖಿನ್ನನಾದ ರಾಜನು ಪಂಡಿತರನ್ನು ಕುರಿತು ತನ್ನ ತಂದೆಯ ಆತ್ಮವನ್ನು ನರಕದಿಂದ ಪಾರು ಮಾಡುವ ಬಗೆಯನ್ನು ಕೇಳಿದನು. ಅದಕ್ಕೆ ಉತ್ತರವಾಗಿ ಅವರು ಅಂತಹ ನಿವಾರಣೆಯು ಕೇವಲ ಯಜ್ಞ ದಾನಗಳಿಂದ ಮಾತ್ರ ಆಗುವುದಲ್ಲ, ಜತೆಗೆ ಮಾರ್ಗಶಿರ್ಷ ಶುಕ್ಷ ಪಕ್ಷದ ಏಕಾದಶಿ ಆಚರಣೆಯ ಫಲವಾಗಿ ಅವನ ತಂದೆಯು ನರಕದಿಂದ ಪಾರಾಗುವನೆಂದರು. ಅವನು ಹಾಗೆಯೇ ಏಕಾದಶಿ ವೃತಾಚರಣೆಯನ್ನು ಒಂದಾದರ ಮೇಲೊಂದರಂತೆ ಆಚರಿಸಿ ಕೊನೆಗೆ ಮಾರ್ಗಶೀರ್ಷ ಶುಕ್ಲ ಪಕ್ಷದ ವೈಕುಂಠ ಏಕಾದಶಿ ವೃತವನ್ನು ಆಚರಿಸಿ ಸೂಕ್ತ ದಾನಾದಿಗಳನ್ನು ಮಾಡುತ್ತಿದ್ದಂತೆ ಅವನ ತಂದೆಯ ದೇಹವು ನರಕದಿಂದ ಬಿಡಲ್ಪಟ್ಟು, ಮುಂದೆ ಬೇರೆ ದೇಹವು ಪ್ರಾಪ್ತವಾಗಿ ಸ್ವರ್ಗವನ್ನು ಸೇರಿದನು ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು, ಭಗವಂತನು ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ತಮ್ಮ ಹೃದಯದಲ್ಲಿ ಸಂದರ್ಶಿಸುವವರಿಗೆ ಅವರ ಹಿಂದಿನ ಘೋರ ಪಾಪಗಳು ನೀಗುತ್ತದೆ; ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪ್ರಾಪ್ತವಾಗುತ್ತದೆ ಎಂದು ನಂಬಿಕೆಯಿದೆ.
*********

a ಎರಡು ದಿನ ಏಕಾದಶಿ ಬಂದಾಗ

ಏಕಾದಶೀ ದಿವಸ ಉಪವಾಸ ಮಾಡುವುದು ಸಾಮಾನ್ಯ ನಿಯಮ. 
ದ್ವಾದಶಿಯಂದು ಶ್ರವಣನಕ್ಷತ್ರವಿದ್ದರೆ ಅಂದೂ ಉಪವಾಸವನ್ನು ಆಚರಿಸುವುದು ವಿಶೇಷ ನಿಯಮ. . 
ಇದಕ್ಕೆ "ಶ್ರವಣೋಪವಾಸ" ಎಂದು ಹೆಸರು. 
ಅಂದರೆ ಏಕಾದಶಿಯ ದಿನ ಮತ್ತು ದ್ವಾದಶಿಯ ದಿನ, ಹೀಗೆ ಎರಡೂ ದಿನ ಉಪವಾಸ ಮಾಡಿ, ತ್ರಯೋದಶಿಯ ದಿನ ಪಾರಣೆ ಮಾಡುವುದಾಗಿರುತ್ತದೆ. 

ಇಂತಹ ಶ್ರವಣದ್ವಾದಶೀ ಉಪವಾಸ (ಅಂದರೆ ಎರಡು ದಿನದ ಉಪವಾಸ) ಮಾಡುವ ಪ್ರಸಂಗ ಬರುವುದು ಬಾದ್ರಪದ, ಮಾಘ ಮತ್ತು ಫಾಲ್ಗುಣ ಮಾಸಗಳಲ್ಲಿ ಮಾತ್ರ. 

ಈ ಶ್ರವಣದ್ವಾದಶಿಯು ಉಪೋಷಣಾರ್ಹವಾಗಬೇಕಾದರೆ, ಅಂದು ಶ್ರವಣ ನಕ್ಷತ್ರಕ್ಕೆ ಉತ್ತರಾಷಾಢ ನಕ್ಷತ್ರದ ಸಂಪರ್ಕ ಇರಕೂಡದು; 
ಧನಿಷ್ಠಾ ನಕ್ಷತ್ರದ ಸಂಪರ್ಕ ಇರಬೇಕು; 
ಹಾಗೂ ಶ್ರವಣ ನಕ್ಷತ್ರವು ಮಧ್ಯಾಹ್ನವ್ಯಾಪಿನಿಯಾಗಿ ಇರಬೇಕು. 

ಶುಕ್ಲ ವಾ ಯದಿ ವಾ ಕೃಷ್ಣಾ ದ್ವಾದಶೀ ಶ್ರವಣಾನ್ವಿತಾ| 
ತತ್ರೋಪವಾಸಂ ಕುರ್ವೀತ ಏಕಾದಶ್ಯಯುತಂ ಫಲಮ್|| 

ಅಂದರೆ ಶ್ರವಣ ನಕ್ಷತ್ರವು ಶುಕ್ಲಪಕ್ಷದ ದ್ವಾದಶಿಯಲ್ಲಿ ಬರಲಿ, ಕೃಷ್ಣಪಕ್ಷದ ದ್ವಾದಶಿಯಲ್ಲಿ ಬರಲಿ, ಆ ದಿವಸ ಉಪವಾಸ ಮಾಡುವುದರಿಂದ ಹತ್ತು ಸಾವಿರ ಏಕಾದಶಿಗಳಲ್ಲಿ ಉಪವಾಸ ಮಾಡಿದ ಫಲ ದೊರೆಯುತ್ತದೆ. 

"ಬುಧಶ್ರವಣಸಂಯುಕ್ತಾ ಯಾ ಚ ವೈ ದ್ವಾದಶೀ ಭವೇತ್| 
ಅತೀವ ಮಹತೀ ತಸ್ಯಾಂ ಕೃತಂ ಸರ್ವಮಥಾಕ್ಷಯಂ||" 

ಬುಧವಾರ, ಶ್ರವಣನಕ್ಷತ್ರ, ದ್ವಾದಶೀ ಈ ರೀತಿ ಕೂಡಿ ಬಂದ ದಿನ ಉಪವಾಸವ್ರತವನ್ನು ಆಚರಿಸಿದರೆ  ಬಹುವಾದ ಪುಣ್ಯವನ್ನು ಕೊಡತಕ್ಕದ್ದು. 
ಅಕ್ಷಯವಾದುದು; ಪುಣ್ಯಪ್ರದವಾದುದು; ಬಹುಫಲವುಂಟು; ಸಮಸ್ತ ಇಷ್ಟಗಳನ್ನೂ, ಸೌಭಾಗ್ಯಗಳನ್ನೂ ಕೊಡುತ್ತದೆ; ಇಹಲೋಕ ಪರಲೋಕಗಳಲ್ಲಿ ಉತ್ತಮ ಸ್ಥಾನವನ್ನು ಕೊಡುತ್ತದೆ. 

ಶ್ರವಣದ್ವಾದಶೀ ವಿಷ್ಣೋ: ವಾಸರ: ಪ್ರೀತಿದೋ ನೃಣಾಮ್| 
ಸಾಲಗ್ರಾಮಂ ಹರೇ ರೂಪಂ ತುಲಸೀ ಹರೇನೇತ್ರಜಾ| 
ಏಕಾದಶೀ ಹರಿದಿನಂ ನಕ್ಷತ್ರಂ ಶ್ರವಣಂ ಹರೇ:|| 

ಶ್ರವಣ, ಏಕಾದಶೀ, ದ್ವಾದಶೀ, ತುಲಸೀ ಮತ್ತು ಸಾಲಿಗ್ರಾಮಗಳಿಗೆ ನೇರವಾಗಿ ನಿಯಾಮಕನಾದವನು ಶ್ರೀಹರಿಯೇ. 
ಶ್ರವಣ ವಿಷ್ಣುನಕ್ಷತ್ರ; 
ಏಕಾದಶಿ-ದ್ವಾದಶಿಗಳು ವಿಷ್ಣುತಿಥಿಗಳು;
ತುಲಸೀ ಸಸ್ಯ-ಸಾಲಿಗ್ರಾಮ ಶಿಲೆ ಹರಿಯ ನಿತ್ಯಸನ್ನಿಧಾನಯುಕ್ತವಾದದ್ದು. 
ಆದುದರಿಂದ ಶ್ರವಣದ್ವಾದಶೀಯು ಅತ್ಯಂತ ಶ್ರೇಷ್ಠವಾಗಿದ್ದು, ಶ್ರವಣೋಪವಾಸವು ಅಧಿಕವಾದ ಫಲವನ್ನು ಕೊಡುತ್ತದೆ. 

ಉಪವಾಸವ್ರತಗಳಲ್ಲಿ ಸರ್ವೋತ್ತಮವ್ರತ ಕೃಷ್ಣಜಯಂತೀ. 
ಆ ನಂತರದಲ್ಲಿ ಬರುವ ವ್ರತ ಶ್ರವಣದ್ವಾದಶೀ. 
ಆ ನಂತರ ಏಕಾದಶೀ. 

ಏಕಾದಶಿಯಂದು ಉಪವಾಸ ಮಾಡಿಯೇ ಶ್ರವಣದ್ವಾದಶಿಯಂದು ಉಪವಾಸ ಮಾಡಿದರೆ ಮಾತ್ರ ಎರಡೂ ಉಪವಾಸದ ಫಲ ದೊರೆಯುತ್ತದೆ. 

ಎರಡು ಉಪವಾಸ ಮಾಡಲು ಸಾಧ್ಯವೇ ಇಲ್ಲದ ಅಶಕ್ತರಿಗೆ ಕೆಲವು ಅವಕಾಶಗಳಿವೆ:-

ಎಷ್ಟು ಹೊತ್ತಿನವರೆಗೆ ಸಾಧ್ಯವೋ ಅಷ್ಟು ಹೊತ್ತಿನವರೆಗೆ ಪೂರ್ಣವಾಗಿ ಉಪವಾಸವಿದ್ದು; 
ಸಾಧ್ಯವೇ ಇಲ್ಲದ ಹಂತವನ್ನು ಮುಟ್ಟಿದಾಗ ನೀರನ್ನು ಮಾತ್ರ ಸೇವಿಸಿ; 
ಅದೂ ಸಾಧ್ಯವಾಗದಿದ್ದಾಗ ಹಾಲನ್ನು ಕುಡಿದು; 
ಅದೂ ಸಾಧ್ಯವಾಗದಿದ್ದಾಗ ಹಣ್ಣನ್ನು ಮಾತ್ರ ಸೇವಿಸುವುದು. 

ಈ ಎರಡು ದಿನದ ಉಪವಾಸದ ಪ್ರಸಂಗದಲ್ಲಿ ಒಟ್ಟು ಆರು ಭೋಜನ ನಿಷಿದ್ಧ ಎಂದಾಗುವುದು. 
ಅಂದರೆ ದಶಮೀ ಮತ್ತು ತ್ರಯೋದಶಿಯ ರಾತ್ರಿಕಾಲದ ಬೋಜನ (2); ಏಕಾದಶೀ ಮತ್ತು ದ್ವಾದಶಿಯ ಮಧ್ಯಾಹ್ನ ಮತ್ತು ರಾತ್ರಿಕಾಲದ ಭೋಜನ (4); 
ಹೀಗೆ ಒಟ್ಟು ಆರು ಭೋಜನ ನಿಷಿದ್ಧ. 
***

b ಎರಡು ದಿನ ಏಕಾದಶಿ ಬಂದಾಗ
ಎರಡೂ ದಿನವು ಉಪವಾಸ ಮಾಡಬೇಕು.

ಏಕಾದಶಿ ಪ್ರತಿಪಕ್ಷವೂ ಬಂದರೆ ಶ್ರವಣೋಪವಾಸವು ಅಪರೂಪಕ್ಕೆ ಬರುತ್ತದೆ. 
ಶ್ರವಣ ನಕ್ಷತ್ರವು ವಿಷ್ಣುವಿನ ನಕ್ಷತ್ರವು. ದ್ವಾದಶೀ ತಿಥಿ ವಿಷ್ಣು ಪ್ರಧಾನ.
ಮಧ್ಯಾಹ್ನದವರೆಗೆ ದ್ವಾದಶಿ ತಿಥಿ ಹಾಗೂ ಶ್ರವಣ ನಕ್ಷತ್ರವು ಇದ್ದರೆ ಅಂದು ಉಪವಾಸ ಮಾಡಬೇಕು ಎಂದು ಧರ್ಮಶಾಸ್ತ್ರವು ಹೇಳುತ್ತದೆ. 
(ಎರಡು ದಿನ ಉಪವಾಸ ಮಾಡಲು ಅಶಕ್ತರಾದರೆ ಶ್ರವಣೋಪವಾಸದಂದು ಶುದ್ಧ ನಿರಾಹಾರಿಯಾಗಿ ಉಪವಾಸ ಮಾಡಿ.  ಏಕಾದಶಿಯಂದು ಹಾಲು  ಸ್ವೀಕರಿಸಬಹುದು. (ಅಶಕ್ತರು ಮಾತ್ರ). ಏಕಾದಶಿಯು ಮೋಕ್ಷಪ್ರದವಾದರೆ ಶ್ರವಣೋಪವಾಸವು 12 ಏಕಾದಶಿ ಉಪವಾಸದ ಫಲ. 
ಆದ್ದರಿಂದ ಅಪರೂಪಕ್ಕೆ ಬಂದ ಶ್ರವಣೋಪವಾಸವನ್ನು ಆಚರಿಸುವ ಮೂಲಕ ಈ ಜನ್ಮವನ್ನು ಸಾರ್ಥಕ ಮಾಡಿಕೊಳ್ಳೋಣ.

ಏಕಾದಶಿ ಆಚರಣೆ ವಿಧಾನ
ಏಕಾದಶಿ” ಒಂದು ವ್ರತ. ಏಕಾದಶಿ ದಿನದಂದು ಸಂಪೂರ್ಣ ನೀರಾಹಾರ ಉಪವಾಸವಿದ್ದು, ದ್ವಾದಶಿಯ ದಿನ, ಸೂರ್ಯೋದಯಕ್ಕೆ ನಿತ್ಯಕರ್ಮ ಮುಗಿಸಿ ಭೋಜನ( ಪಾರಣೆ)ಮಾಡಬೇಕು. 

ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಅಂದರೆ ಮಧ್ಯಾಹ್ನ ಊಟಮಾಡಿ, ಸಕಲ ಐಹಿಕ ಭೋಗಗಳನ್ನು ತ್ಯಜಿಸಿ, ಸಂಜೆ ಸಂಧ್ಯಾವಂದನೆ ಆದಮೇಲೆ ಉಪವಾಸದ ಸಂಕಲ್ಪವನ್ನು ಮಾಡಬೇಕು. ಅಂದು ರಾತ್ರಿ ಉಪವಾಸಮಾಡಬೇಕು. ದ್ವಾದಶಿಯ ಪಾರಣೆಯ ತನಕ ನೀರು ಕೂಡ ಸೇವಿಸದೆ ಉಪವಾಸ ಇರಬೇಕು. ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು. ಎಂದರೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.
ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. ಹೀಗೆ ಎಡಬಿಡದೆ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. 
ಮಹಾಕವಿ ಕಾಳಿದಾಸ ಹೇಳಿರುವಂತೆ : “ಶರೀರಮಾಧ್ಯಂ ಖಲು ಧರ್ಮಸಾಧನಂ”, ಧರ್ಮ ಸಂಪಾದನೆಗೆ, ಸ್ವಸ್ಥ ಶರೀರ ಅತ್ಯಗತ್ಯ.ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತ ಏಕಾದಶಿ ವ್ರತ. ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು. ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯಗಳಿಂದ (5 ಕರ್ಮೇಂದ್ರಿಯ 5 ಜ್ಞಾನೇಂದ್ರಿಯ ಮತ್ತು ಮನಸ್ಸು) ಸಂಪಾದಿಸಿದ ಸಕಲಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ವ್ರತ ಯಾವುದೂ ಇಲ್ಲ.
***

c ಏಕಾದಶಿ/ಶ್ರವಣೋಪವಾಸ ಕುರಿತಾಗಿ

೧. ಸಾಧ್ಯವಾದರೆ ಎರಡೂ ದಿನ ಕಟ್ಟುನಿಟ್ಟಿನ ಉಪವಾಸ ಮಾಡಿ ಅಥವಾ 
೨. ನೀರು ಕುಡಿದು ಉಪವಾಸ ಮಾಡಿ
೩. ಹಾಲು,  ನಿಷಿದ್ಧವಲ್ಲದ ಹಣ್ಣು, ಡ್ರೈ ಫ್ರೂಟ್ಸ್ (ಬಾದಾಮಿ, ಖರ್ಜೂರ, ಒಣದ್ರಾಕ್ಷಿ....) ತಿನ್ನಬಹುದು
ಅಥವಾ
೪. ರವೆ ಗಂಜಿ (ನೀರನ್ನು ಹಾಕದೆ ಕೇವಲ ಹಾಲಿನಲ್ಲಿ ಬೇಯಿಸಿ ಮಾಡಬಹುದು, ಸಕ್ಕರೆ ತುಪ್ಪ allowed)

ಅರ್ಧ ಹೊಟ್ಟೆಗಿಂತ ಕಡಿಮೆ ಪ್ರಮಾಣದಲ್ಲಿ ಮೇಲೆ ಹೇಳಿದ ಆಹಾರವನ್ನು ಸ್ವೀಕರಿಸಿಬೇಕು.

ಉಪ್ಪನ್ನು ಯಾವುದೇ ಕಾರಣಕ್ಕೂ ಬಳಸುವ ಹಾಗಿಲ್ಲ - ಬಳಸಿದರೆ ಅದು ಮುಸುರೆ

ಹಾಗೆ, ನೀರು ಹಾಕಿ ಬೈಸಿದ ಪದಾರ್ಥ ಕೂಡ ಬಳಸಬಾರದು   - ಒಂದು ವೇಳೆ ಹಾಗೆ ಮಾಡಿದರೆ, ಅದು ಮುಸುರೆ

ಏನ್ನನ್ನೂ ತೆಗೆದುಕೊಳ್ಳದೇ ಮಾಡುವ ಉಪವಾಸ, ಉತ್ತಮ

ನೀರನ್ನು ಕುಡಿದು ಮಾಡುವುದು, ಮಧ್ಯಮ.

ಮೇಲೆ‌ ಹೇಳಿರುವಂತೆ ಆಹಾರ ಸ್ವೀಕರಿಸಿ ಉಪವಾಸ ವ್ರತ ಮಾಡೋದು ಅಧಮ 

ಶಕ್ತಿ ಇದ್ದೂ ಅಶಕ್ತರಂತೆ ಭಾವಿಸಿ ಆಹಾರ ಸ್ವೀಕರಿಸೋದ್ರಿಂದ ವ್ರತಭಂಗ ಮಾತ್ರವಲ್ಲ, ಘೋರ ಅಪಚಾರ (ವರಂ ಸ್ವಮಾತೃಗಮನಂ, ವರಂ ಗೋಮಾಂಸ ಭಕ್ಷಣಂ....)

ಅಶಕ್ತಿಯಿಂದ ಕಿಂಚಿತ್ತಾದರೂ ಸ್ವೀಕಾರ ಮಾಡಲೇ ಬೇಕು ಅನ್ನೋ ಪರಿಸ್ಥಿತಿ ಇರುವವರು ಮಾತ್ರ ಮೇಲೆ ಹೇಳಿದಂತೆ ಮಾಡಬಹುದು. ಇದರಿಂದ ವ್ರತ ಲೋಪ ಉಂಟಾಗುವುದಿಲ್ಲ 
********



ಏಕಾದಶೀ
ನಮ್ಮ ದೇಶದಲ್ಲಿ ಏಕಾದಶೀ ಮತ್ತು ಉಪವಾಸ ಇವು ಪರ್ಯಾಯ ವಾಚಕಗಳಾಗಿವೆ. ನಮ್ಮ ಧರ್ಮಶಾಸ್ತ್ರಗಳಲ್ಲಿ ಅನೇಕ ರೀತಿಯ ಉಪವಾಸ ವ್ರತಗಳಿದ್ದು ಎಲ್ಲವುಗಳಿಗೂ ತನ್ನದೇ ಆದ ಮಹತ್ವವಿದೆ ಮತ್ತು ಅವುಗಳನ್ನು ಪಾಲಿಸುವ ಶ್ರದ್ಧೇಯ ಬಳಗವಿದೆ. ಆದರೆ ಏಕಾದಶಿಯ ಉಪವಾಸಕ್ಕಿರುವ ಮಹತ್ವ ಮತ್ತು ಪ್ರಧಾನತೆ ಬೇರೆ ಇನ್ಯಾವುದೇ ವ್ರತಕ್ಕಾಗಲೀ ಉಪವಾಸಕ್ಕಾಗಲೀ ಇಲ್ಲ. ಹಾಗೆಯೇ ಏಕಾದಶಿಯ ಪ್ರಾಚೀನತೆಯು ಸಹ ಇನ್ನಾವುದೇ ಉಪವಾಸ ವ್ರತಕ್ಕಿಲ್ಲ. ವೈದಿಕ ಸಾಹಿತ್ಯ, ಇತಿಹಾಸ, ಪುರಾಣ, ತಂತ್ರಾಗಮ, ಧರ್ಮಶಾಸ್ತ್ರ, ಸ್ಮೃತಿಗಳು, ನಿಬಂಧ ಗ್ರಂಥಗಳು, ಶಾಸ್ತ್ರ ಕಾವ್ಯಗಳು, ಜ್ಯೋತಿಷ್ಯ – ಹೀಗೆ ಏಕಾದಶಿಯ ಕುರಿತು ನಿರ್ಣಯಮಾಡದ ಗ್ರಂಥಗಳೇ ಇಲ್ಲ. ಈ ವ್ರತವು ಭಾರತದಾದ್ಯಂತ (ಜಗದಾದ್ಯಂತವೂ ಸಹ!) ಎಲ್ಲ ವೈಷ್ಣವ ಮತ್ತು ಭಾಗವತ ಸಂಪ್ರದಾಯದ ಅನುಯಾಯಿಗಳಿಗೆ ನಿತ್ಯವ್ರತವಾಗಿದೆ.

ಜನ್ಮಾಂತರದ ಪಾಪಗಳನ್ನು ಕಳೆಯುವುದರಲ್ಲಿ, ಶ್ರೀಹರಿಯ ಕೃಪೆಯನ್ನು ತಂದು ಕೊಡುವುದರಲ್ಲಿ ಏಕಾದಶಿಗೆ ಸಮನಾದ ವ್ರತವು ಇನ್ನೊಂದಿಲ್ಲ. ಅಂತಃಕರಣ ಶುದ್ಧಿ, ಬಹಿರಂಗ ಶುದ್ಧಿ, ಆರೋಗ್ಯ ಭಾಗ್ಯ, ಸಕಲ ದೋಷಗಳ ಪರಿಹಾರ ಈ ವ್ರತಾಚರಣೆಯ ಫಲವಾಗಿದೆ.

ಏಕಾದಶೀಸಮುತ್ಥೇನ ವಹ್ನಿನಾ ಪಾತಕೇಂಧನಮ್ |
ಭಸ್ಮೀಭವತಿ ರಾಜೇಂದ್ರ ಅಪಿ ಜನ್ಮಶತೋದ್ಭವಮ್ || 
(ಪದ್ಮಪುರಾಣ ಉತ್ತರಖಂಡ ೨೬೨-೧೦)

ಏಕಾದಶೀ ಎಂಬ ವ್ರತಾಗ್ನಿಯಿಂದ ಹುಟ್ಟುವ ಅಗ್ನಿಯು ನೂರಾರು ಜನ್ಮಗಳಿಂದ ಸಂಚಿತವಾದ ಪಾತಕಗಳೆಂಬ ಇಂಧನವನ್ನು ಸಂಪೂರ್ಣವಾಗಿ ಸುಟ್ಟು ಭಸ್ಮಮಾಡುತ್ತದೆ.

ಗ್ರಹಣ, ವ್ಯತಿಪಾತಾದಿ ಮುಹೂರ್ತಗಳಲ್ಲಿ ಮಾಡಿದ ಜಪ-ದಾನ-ಹೋಮ ಮೊದಲಾದ ದೈವಕಾರ್ಯಗಳು ಶ್ರೇಷ್ಟ ಫಲವನ್ನು ಕೊಡುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ, ಆದರೆ ಏಕಾದಶೀ ಉಪವಾಸವು ಈ ಎಲ್ಲ ಸಿದ್ಧದಿನಗಳಿಗಿಂತಲೂ ಶ್ರೇಷ್ಟವಾದದ್ದಾಗಿದೆ –

ಉಪರಾಗಸಹಸ್ರಾಣಿ ವ್ಯತೀಪಾತಾಯುತಾನಿ ಚ |
ಅಮಾಲಕ್ಷಂ ತು ದ್ವಾದಶ್ಯಾಃ ಕಲಾಂ ನಾರ್ಹಂತಿ ಷೋಡಶೀಮ್ || 
(ವಾಯು ಪುರಾಣ ಮಾಘಮಾಹಾತ್ಮ್ಯ)

ಸಾವಿರಾರು ಗ್ರಹಣಗಳಾಗಲಿ, ಹತ್ತು ಸಾವಿರ ವ್ಯತೀಪಾತಗಳಾಗಲಿ, ಲಕ್ಷ ಅಮಾವಾಸ್ಯೆಗಳಾಗಲಿ ಏಕಾದಶೀ ವ್ರತದ ಹದಿನಾರನೇಯ ಒಂದಂಶಕ್ಕೂ ಸಮನಾಗಲಾರವು.

ಎಲ್ಲ ಯಜ್ಞ ಯಾಗಗಳಿಗಿಂತಲೂ ಏಕಾದಶೀಯ ಮಹಿಮೆ ಹಿರಿದಾಗಿದೆ –

ಅಶ್ವಮೇಧಸಹಸ್ರಾಣಿ ವಾಜಪೇಯಶತಾನಿ ಚ |
ಏಕಾದಶ್ಯುಪವಾಸಸ್ಯ ಕಲಾಂ ನಾರ್ಹಂತಿ ಷೋಡಶೀಮ್ || 
(ಪದ್ಮ ಪುರಾಣ ಉತ್ತರಖಂಡ ೨೩೪-೦೭)

ಸಾವಿರಾರು ಅಶ್ವಮೇಧ, ಹತ್ತು ಸಾವಿರ ವಾಜಪೇಯಿ ಯಜ್ಞಗಳಾಗಲಿ ಏಕಾದಶೀ ಉಪವಾಸದ ಹದಿನಾರನೇಯ ಒಂದಂಶದಷ್ಟೂ ಸಮ ಆಗಲಾರವು.

ಏಕಾದಶೀಯಂದು ಆಹಾರ ನಿಷೇಧಕ್ಕೆ ಕಾರಣ ಏನು? ಬೃಹನ್ನಾರದೀಯ ಪುರಾಣ ಈ ಕುರಿತು ಹೀಗೆ ಹೇಳಿದೆ –

ಪೃಥಿವ್ಯಾಂ ಯಾನಿ ಪಾಪಾನಿ ಬ್ರಹ್ಮಹತ್ಯಾದಿಕಾನಿ ಚ |
ಅನ್ನಮಾಶ್ರಿತ್ಯ ತಿಷ್ಠಂತಿ ಸಂಪ್ರಾಪ್ತೇ ಹರಿವಾಸರೇ ||

ಬ್ರಹ್ಮಹತ್ಯಾ ಮೊದಲಾದ ಯಾವ ಯಾವ ಮಹಾಪಾಪಗಳು ಈ ಭೂಮಿಯಲ್ಲಿ ಇವೆಯೋ ಅವೆಲ್ಲವು ಏಕಾದಶಿ ತಿಥಿಯಂದು ಅನ್ನವನ್ನು ಆಶ್ರಯಿಸಿಕೊಂಡಿರುತ್ತವೆ.

ಆದ್ದರಿಂದ ಏಕಾದಶಿಯಲ್ಲಿ ಆಹಾರ ಸ್ವೀಕಾರ ಮಹಾಪಾಪಕಾರಕ, ನರಕಕ್ಕೆ ಗತಿಯೆಂದು ಅನೇಕ ಪ್ರಮಾಣಗಳು ಸಾರಿರುತ್ತವೆ. ಕಾರಣ ಪ್ರತಿಯೊಬ್ಬರೂ ಏಕಾದಶೀ ಉಪವಾಸವನ್ನು ಅವಶ್ಯವಾಗಿ ಮಾಡಬೇಕು ಎಂದು ಧರ್ಮಶಾಸ್ತ್ರಗಳ ಆದೇಶ.

ಹರಿದಿನದಲಿ ಉಂಡ ನರರಿಗೆ ಘೋರ
ನರಕ ತಪ್ಪದು ಎಂದು ಶ್ರುತಿಯು ಸಾರುತಲಿದೆ ||

ಎಂಬ ಪುರಂದರದಾಸರ ಒಂದು ಕೀರ್ತನೆ ಏಕಾದಶಿಯ ಮಹತ್ವವನ್ನು ಸುಂದರವಾಗಿ ವರ್ಣಿಸುತ್ತದೆ.

ಎಲ್ಲ ವಿಧವಾದ ಗ್ರಹಬಾಧೆ, ನವಗ್ರಹ ದೋಷ, ಸಾಡೇಸಾತೀ ಮುಂತಾದವುಗಳ ಶಮನಕ್ಕಾಗಿಯೂ ಏಕಾದಶೀ ವೃತ ಶೀಘ್ರ ಫಲಪ್ರದ. ತಪ್ಪದೇ ಏಕಾದಶೀ ಆಚರಣೆಯಿಂದ ಗ್ರಹದೋಷ ನಿವಾರಣೆಯಾಗಿರುವುದು ಪ್ರತ್ಯಕ್ಷ ಅನುಭವಕ್ಕೆ ಬಂದಿರುವ ಸಂಗತಿ. ಈ ಕುರಿತು ಪದ್ಮ ಪುರಾಣ ವಚನ ಹೀಗೆ ಇದೆ –

ಏಕಾದಶೀಸಮಂ ಕಿಂಚಿತ್ ಪಾಪತ್ರಾಣಂ ನ ವಿದ್ಯತೇ |
ವ್ಯಾಜೇನಾಪಿ ಕೃತಾ ರಾಜನ್ ನ ದರ್ಶಯತಿ ಭಾಸ್ಕರಿಮ್ ||


ಏಕಾದಶಿಗೆ ಸಮನಾದ, ಪಾಪಗಳಿಂದ ರಕ್ಷಿಸುವ ವೃತ ಬೇರೊಂದಿಲ್ಲ. ಯಾವುದೇ ನೆಪದಿಂದಾದರೂ ಸರಿ ಈ ವೃತವನ್ನಾಚರಿಸಿದವನಿಗೆ, ಭಾಸ್ಕರನ ಮಗನಾದ ಯಮ (ಮತ್ತು ಶನೈಶ್ಚರ) ದರ್ಶನವಿಲ್ಲ ಅರ್ಥಾತ್ ಅವರಿಂದ ಯಾವುದೇ ಭಯವಿಲ್ಲ.

ಪ್ರತಿ ಮಾಸಕ್ಕೆ ಶುಕ್ಲ ಪಕ್ಷ, ಕೃಷ್ಣ ಪಕ್ಷಗಳಲ್ಲಿ ಎರಡು ಏಕಾದಶಿಗಳು ಬರುತ್ತವೆ. ವರ್ಷದಲ್ಲಿ ಒಟ್ಟು 24. ಅಧಿಕಮಾದ ಬಂದಾಗ ಎರಡು ಹೆಚ್ಚು. ವರ್ಷದಲ್ಲಿ 24 ಉಪವಾಸಗಳನ್ನು ಮಾಡುವುದು ಕಷ್ಟಕರವಲ್ಲ ವಿನಃ ಅತ್ಯಂತ ಸುಲಭ. ಯಾವುದೇ ದೇಶ, ಪರಿಸ್ಥಿತಿಯ ನಿರ್ಬಂಧ ಈ ಉಪವಾಸ ವೃತಕ್ಕೆ ಇಲ್ಲ.

ವರ್ಷದ ಎಲ್ಲ ಏಕಾದಶಿಗಳಲ್ಲಿ ಎರಡು ಏಕಾದಶಿಗಳಿಗೆ ವಿಶೇಷವಾದ ಮಹತ್ವವಿದೆ. ಆಷಾಢ ಶುದ್ಧೈಕಾದಶೀ ಮತ್ತು ಕಾರ್ತಿಕ ಶುದ್ಧೈಕಾದಶೀಗಳೇ ಈ ಎರಡು ಏಕಾದಶಿಗಳು. ಆಷಾಢಮಾಸದ ಈ ಏಕಾದಶಿಯ ದಿವಸದಿಂದ ಕಾರ್ತಿಕ ಶುಕ್ಲ ಏಕಾದಶೀಯ ವರೆಗಿನ ಅತ್ಯಂತ ಪುಣ್ಯಪ್ರದವಾದ ನಾಲ್ಕು ತಿಂಗಳ ಕಾಲವನ್ನು ಚಾತುರ್ಮಾಸವೆಂದು ಕರೆಯಲಾಗುತ್ತದೆ. ಪರಮಾತ್ಮನಾದ ಶ್ರೀಮನ್ಮಹಾವಿಷ್ಣುವು ಕ್ಷೀರಸಾಗರದಲ್ಲಿ ಆಷಾಢ ಶುಕ್ಲ ಏಕಾದಶಿಯಂದು ಶಯನವನ್ನು ಮಾಡುತ್ತಾನೆ. ಆದ್ದರಿಂದ ಈ ಏಕಾದಶಿಗೆ ಶಯನೈಕಾದಶೀ, ವಿಷ್ಣುಶಯನೈಕಾದಶೀ, ದೇವಶಯನೈಕಾದಶೀ ಎಂದು ಕರೆಯಲಾಗಿದೆ. ಈ ರೀತಿ ಕೇವಲ ಲೀಲಾಮಾತ್ರಕ್ಕಾಗಿ ಯೋಗನಿದ್ರೆಯಲ್ಲಿ ಪವಡಿಸಿದ ಶ್ರೀಮನ್ನಾರಾಯಣನು ಕಾರ್ತಿಕ ಶಕ್ಲೈಕಾದಶಿಯಂದು ಜಾಗ್ರತನಾಗುತ್ತಾನೆ, ಆ ದಿನ ಪ್ರಬೋಧಿನೀ ಏಕಾದಶೀ ಎಂದು ಕರೆಯಿಸಿಕೊಳ್ಳುತ್ತದೆ.
*****

ಏಕಾದಶಿ ಇತರೆ ವಿವರಗಳು 

ಏಕಾದಶೀ ವಿಷಯ ಬಂದಾಗ ನಾವು ತಿಳಿಯಲೇ ಬೇಕಾದ ಕೆಲವು ಮಹತ್ವದ ವಿಚಾರಗಳಿವೆ. ಪಂಚಾಂಗದಲ್ಲಿ ಕೆಲವೊಮ್ಮೆ ವಿದ್ವೈಕಾದಶೀ, ಉಪೋಷ್ಠದ್ವಾದಶೀ, ಪಾರಣತ್ರಯೋದಶೀ ಎಂಬುದಾಗಿಯೂ ಹರಿವಾಸರ, ಅತಿರಿಕ್ತೋಪವಾಸ ಎಂದೂ ಬರೆದಿರುತ್ತದೆ. ಏನಿದು?

ವಿದ್ವೈಕಾದಶೀ :

“ವಿದ್ಧ” ಎಂದರೆ ವೇಧವುಳ್ಳದ್ದು.ವೇಧವೆಂದರೆ ಸಂಬಂಧ. ವಿದ್ವೈಕಾದಶೀ ಎಂದರೆ ಸಂಬಂಧವುಳ್ಳ ಏಕಾದಶೀ ಎಂದರ್ಥವಾಯಿತು. ಏಕಾದಶಿಗೆ ಯಾವುದರ ಸಂಬಂಧ ? ಯಾವಾಗ ? ಅರುಣೋದಯಕಾಲದಲ್ಲಿ ದಶಮಿಯ ಸಂಬಂಧವಿರುವ ಏಕಾದಶಿಯೇ ವಿದ್ವೈಕಾದಶೀ.

ಸೂರ್ಯೋದಯಕ್ಕಿಂತ ಮುಂಚೆ ೪ ಘಳಿಗೆ (ಒಂದು ಘಂಟೆ ೩೬ ನಿಮಿಷ) ಕಾಲಕ್ಕೆ ಅರುಣೋದಯಕಾಲವೆಂದು ಹೆಸರು. ಈ ಕಾಲದಲ್ಲಿ ಸ್ವಲ್ಪವಾದರೂ ದಶಮಿಯಿದ್ದು ಸೂರ್ಯೋದಯಕ್ಕೆ ಏಕಾದಶಿಯೇ ಇದ್ದರೂ ಅಂದು ವಿದ್ವೈಕಾದಶೀಯಾಗಿರುತ್ತದೆ. ಉದಾಹರಣೆಗೆ ಇಂದು ೬ ಗಂಟೆಗೆ ಸೂರ್ಯೋದಯವೆಂದು ಭಾವಿಸೋಣ. ಸುಮಾರು ನಾಲ್ಕೂವರೆಯಿಂದ ಅರುಣೋದಯಕಾಲವೆಂದು ತಿಳಿಯಬಹುದು. ನಿನ್ನೆ ದಶಮಿಯು ೫೮ ಘಳಿಗೆಯಿದ್ದುದಾದರೆ ಬೆಳಗ್ಗೆ ಸುಮಾರು ೫ ಘಂಟೆಯವರೆಗೆ ದಶಮಿಯೇ ಇರುವುದರಿಮ್ದ ಇಂದಿನ ಏಕಾದಶಿಗೆ ದಶಮೀ ವೇಧ ಬರುತ್ತದೆ.

ಈ ವಿದ್ವೈಕಾದಶೀಯಂದು ಉಪವಾಸ ಮಾಡಬಾರದು. ಅಂದು ಉಪವಾಸಮಾಡುವುದು ಅಪರಾಧ. ಈ ಅಪರಾಧದ ಫಲವಾಗಿಯೇ ಗಾಂಧಾರಿಗೆ ಪುತ್ರವಿಯೋಗದ ದುಃಖವೊದಗಿದೆ. ಆದ್ದರಿಂದ ವಿದ್ವೈಕಾದಶೀಯನ್ನು ದಶಮಿಯಂತೆ ಆಚರಿಸಿ ದ್ವಾದಶಿಯಂದು ಉಪವಾಸ ಮಾಡಬೇಕು. ಉಪವಾಸ ಮಾಡಬೇಕಾದ ಈ ದ್ವಾದಶಿಯು “ಉಪೋಷ್ಠದ್ವಾದಶೀ” ಅಥವಾ ಉಪೋಷಿತ ದ್ವಾದಶೀ ಎಂದು ಕರೆಯಲ್ಪಡುತ್ತದೆ. ದ್ವಾದಶಿಯಂದು ಉಪವಾಸಮಾಡಿದಾಗ ತ್ರಯೋದಶಿಯಂದು ಪಾರಣೆಯಿರುವುದರಿಂದ ಅದು “ಪಾರಣತ್ರಯೋದಶೀ” ಎನಿಸುತ್ತದೆ.

ಇಂತಹಾ ಸಂದರ್ಭದಲ್ಲಿ ಸಂಕಲ್ಪಮಾಡುವಾಗ ತಿಥಿಯನ್ನು ಹೇಗೆ ಉಲ್ಲೇಖಿಸಬೇಕೆಂಬುದು ಅನೇಕರನ್ನು ಕಾಡುವ ಪ್ರಶ್ನೆ. “ಏಕಾದಶ್ಯಾಂ ತಿಥೌ” ಅನ್ನೋಣವೇ ? ಅಂದು ಉಪವಾಸ ಮಾಡುತ್ತಿಲ್ಲ. ದಶಮ್ಯಾಂ ಅನ್ನೋಣವೆಂದರೆ ಸೂರ್ಯೋದಯಕಾಲದಲ್ಲಿ ದಶಮೀ ತಿಥಿಯಿಲ್ಲ. ಉತ್ತರವಿಷ್ಟೇ. ವಿದ್ವೈಕಾದಶ್ಯಾಂ ತಿಥೌ (ಅಥವಾ ದಶಮೀ ವಿದ್ವೈಕಾದಶ್ಯಾಂ) ಎನ್ನಬೇಕು. ಮರುದಿನ “ಉಪೋಷ್ಠದ್ವಾದಶ್ಯಾಂ” ಎಂದೂ ತ್ರಯೋದಶಿಯಂದು “ಪಾರಣತ್ರಯೋದಶ್ಯಾಮ್” ಎಂದೂ ಹೇಳಬೇಕು.

ಶ್ರವಣೋಪವಾಸ :

ದ್ವಾದಶಿಯಂದು ಶ್ರವಣ ನಕ್ಷತ್ರವಿದ್ದರೂ ಅಂದು ಉಪವಾಸವನ್ನು ಮಾಡಬೇಕು. ಆದರೆ ಶ್ರವಣ ನಕ್ಷತ್ರದ ಸಂಬಂಧವುಳ್ಳ ದ್ವಾದಶಿಗೆ ಉತ್ತರಾಷಾಢ ನಕ್ಷತ್ರದ ವೇಧವಿರಬಾರದು. ಏಕಾದಶಿಯ ಕೊನೆಯಲ್ಲೂ ಶ್ರವಣ ನಕ್ಷತ್ರವಿದ್ದು ದ್ವಾದಶಿಗೂ ಆ ನಕ್ಷತ್ರದ ಸಂಬಂಧವಿದ್ದಾಗ ಬಹಳ ಮಹತ್ವದ ವಿಷ್ಣುಶೃಂಖಲಾಯೋಗವಿರುತ್ತದೆ.

ಏಕಾದಶಿಯಂದು ಉಪವಾಸ ಮಾಡಿ ಆ ದಿನ ದ್ವಾದಶಿಯಂದೂ ಉಪವಾಸ ಮಾಡಬೇಕು. ಇದನ್ನು ಪಂಚಾಂಗದಲ್ಲಿ “ಶ್ರವಣೋಪವಾಸ” ಎಂದು ಬರೆದಿರುತ್ತಾರೆ. ಒಟ್ಟಿನಲ್ಲಿ ದ್ವಾದಶಿಯಂದು ಉಪವಾಸ ಮಾಡಬೇಕಾಗಿ ಬರುವ ಸಂದರ್ಭ ಮೂರು ಬಾರಿ ಬರುತದೆ. ಏಕಾದಶಿಗೆ ದಶಮೀ ವೇಧವಿದ್ದಾಗ, ದ್ವಾದಶಿಯಂದು ಉತ್ತರಾಷಾಢಾ ನಕ್ಷತ್ರದ ಸಂಬಂಧವಿಲ್ಲದ ಶ್ರವಣ ನಕ್ಷತ್ರವೊದಗಿದಾಗ ಮತ್ತು ಅತಿರಿಕ್ತೋಪವಾಸ ಬಂದಾಗ. ಇವುಗಳಲ್ಲಿ ಮೊದಲನೇ ಪ್ರಸಂಗದಲ್ಲಿ ದ್ವಾದಶಿಯಂದು ಮಾತ್ರ ಉಪವಾಸಮಾಡಬೇಕೇ ಹೊರತು ಏಕಾದಶಿಯಂದು ಉಪವಾಸ ಮಾಡಬಾರದು. ಆದರೆ ಎರಡನೇ ಮತ್ತು ಮೂರನೇ ಪ್ರಸಂಗದಲ್ಲಿ ಎರಡೂ ದಿನ ಉಪವಾಸವು ಕರ್ತವ್ಯವಾಗಿದೆ.

ಹರಿವಾಸರ :

ಕೆಲವು ಸಲ ದ್ವಾದಶಿಯಂದು ಹರಿವಾಸರವಿರುತ್ತದೆ. ಅಂದು ಹರಿವಾಸರ ಮುಗಿಯುವಲ್ಲಿಯ ತನಕ ಪಾರಣೆ ಮಾಡುವ ಹಾಗಿಲ್ಲ. ಈ ಹರಿವಾಸರವೆಂದರೇನು ? ಎಂಬ ಪ್ರಶ್ನೆಗೆ ನಾರದೀಯ ಸ್ಮೃತಿಗ್ರಂಥವು ಹೀಗೆ ಉತ್ತರಿಸಿದೆ.

ದ್ವಾದಶ್ಯಾಮಾದ್ಯಪಾದಸ್ತು ಕೀರ್ತಿತೋ ಹರಿವಾಸರಃ |
ನ ತತ್ರ ಪಾರಣಂ ಕುರ್ಯಾತ್ ಸಾಪಿ ಏಕಾದಶೀ ಸಮಾ ||

ದ್ವಾದಶಿಯ ಒಟ್ಟು ಪೂರ್ಣಘಟಿಯ ನಾಲ್ಕನೇ ಒಂದು ಭಾಗವು ಪಾದವೆನಿಸಿದೆ. ದ್ವಾದಶಿಯ ಮೊದಲ ಪಾದವನ್ನು ಹರಿವಾಸರ ಎಂದು ಕರೆಯುತ್ತೇವೆ. ಇದು ಏಕಾದಶೆ ಸದೃಶವಾಗಿದ್ದು ಈ ಹರಿವಾಸರ ಕಾಲದಲ್ಲಿ ಏಕಾದಶಿಯಂತೆ ಉಪವಾಸವಿರಬೇಕು. ಅಂದರೆ ದ್ವಾದಶಿಯ ಮೊದಲಪಾದ ಮುಗಿದ ಮೇಲೆ ಪಾರಣೆಯನ್ನು ಮಾಡಬೇಕು. ಸಾಧಾರಣವಾಗಿ ಏಕಾದಶಿಯು ೪೬ ಘಳಿಗೆಗಿಂತಲೂ ಜಾಸ್ತಿಯಿದ್ದಾಗ ಮರುದಿನ ಹರಿವಾಸರಯಿದೆಯೆಂದು ಭಾವಿಸಬಹುದಾಗಿದೆ.

ಮತ್ತೆ ಕೆಲವೊಮ್ಮೆ ದಶಮಿಯಂದು ರಾತ್ರಿ ಹರಿವಾಸರವೆಂದು ಬರೆದಿರುತ್ತದೆ. ಇದೇನು? ದಶಮಿಯಂದು ದ್ವಾದಶಿ ಬರುವುದು ಸಾಧ್ಯವೇ ? ಕೃಷ್ಣ್ಚಾರ್ಯಸ್ಮೃತಿಮುಕ್ತಾವಲೀ ಈ ಪ್ರಶ್ನೆಗೆ ಉತ್ತರಿಸುತ್ತದೆ. ದ್ವಾದಶಿಯ ಮೊದಲ ಪಾದವು ಮಾತ್ರವಲ್ಲದೆ ಏಕಾದಶಿಯ ಪ್ರಾಂತಭಾಗವೂ ಹರಿವಾಸರವಾಗಿದೆ. ದಶಮಿಯಂದು ರಾತ್ರಿ ಏಕಾದಶಿಯ ಕೊನೆಯ ಪಾದ ಪ್ರಾರಂಭವಾಗುವುದಕ್ಕೆ ಮುಂಚೆಯೇ ಆಹಾರ ಸೇವನೆ ಮುಗಿಸಬೇಕು. “ಹರಿವಾಸರತಃ ಪೂರ್ವಂ ದಶಮ್ಯಾಂ ಭೋಜನಂ ಸ್ಮೃತಮ್” ಎಂಬ ವರಾಹವಚನವು ಈ ವಿಷಯವನ್ನು ಹೇಳುತ್ತಿದೆ. ಅದಕ್ಕಾಗಿ ದಶಮಿಯ ರಾತ್ರಿ ಹರಿವಾಸರವನ್ನು ಪಂಚಾಂಗಗಳು ಉಲ್ಲೇಖಿಸುತ್ತವೆ.

ಅತಿರಿಕ್ತೋಪವಾಸ :

ದ್ವಾದಶೀ ತಿಥಿಯ ಆದ್ಯಪಾದವು ಹರಿವಸರವೆಂದು ಹೇಳಿದ್ದೇವೆ. ಈ ಹರಿವಾಸರವು ಕೆಲವೊಮ್ಮೆ ದ್ವಾದಶಿಯ ಬೆಳಿಗ್ಗೆ ೧೦ ಘಂಟೆಯ ವರೆಗೂ ಇರುತ್ತದೆ. ಒಂದುವೇಳೆ ಮಧ್ಯಾಹ್ನದವರೆಗೂ ಈ ಹರಿವಾಸರ ಮುಂದುವರಿದರೆ ಆಗ ಅಂತಹಾ ದ್ವಾದಶಿಯನ್ನು ಪೂರ್ತಿ ಉಪವಾಸ ಮಾಡಬೇಕು.

ದ್ವಾದಶ್ಯಾಮಾದ್ಯ ಪಾದಸ್ತು ಸಂಗವಾತ್ಪರತೋ ಯದಿ |
ಉಪವಾಸದ್ವಯಂ ಕಾರ್ಯಮನ್ಯಥಾ ನರಕಂ ವ್ರಜೇತ್ ||

ದ್ವಾದಶಿಯಂದು ಆದ್ಯಪಾದವು (ಹರಿವಾಸರವು) ಸಂಗವದ ನಂತರವೂ ಇದ್ದರೆ ಆಗ ಏಕಾದಶಿ ಹಾಗೂ ದ್ವಾದಶಿಯನ್ನು ಸೇರಿಸಿ ೨ ದಿನ ಉಪವಾಸ ಮಾಡಬೇಕು. ಇಲ್ಲದಿದ್ದರೆ ನರಕವಿದೆ. ಸಂಗವವೆಂದರೆ ಹಗಲನ್ನು ೫ ಭಾಗ ಮಾಡಿದರೆ ಎರಡನೇ ಭಾಗ . ಅಂದರೆ ದ್ವಾದಶಿಯಂದು ಬೆಳಗ್ಗೆ ಸುಮಾರು ೧೧ ಗಂಟೆಗಿಂತಲೂ ಹೆಚ್ಚು ಕಾಲ ಹರಿವಾಸರವಿರುವುದಾದರೆ ದ್ವಾದಶಿಯು ಪೂರ್ತಿ ಉಪವಾಸ ವಿರಬೇಕು. ಅಂತಹಾ ಉಪವಾಸವನ್ನು ಅತಿರಿಕ್ತೋಪವಾಸ ಎನ್ನುತ್ತಾರೆ. ಪಂಚಾಂಗದಲ್ಲಿ ಈ ಬಗ್ಗೆ ಉಲ್ಲೇಖವಿರುತ್ತದೆ.

ಪ್ರದೋಷ :

ಪ್ರದೋಷವೆಂದರೆ ಮುಸ್ಸಂಜೆಯೆಂಬುದು ಪ್ರಸಿದ್ಧವಾದ ಅರ್ಥ. ಆದರೆ ಪಂಚಾಂಗದಲ್ಲಿ ಇದನ್ನು ಪಾರಿಭಾಷಿಕವಾಗಿ ಬಳಸಿದೆ. ಷಷ್ಠೀ ಚತುರ್ಥೀ ದ್ವಾದಶಿಗಳಂದು ಪ್ರದೋಷವಿರುವುದಾದರೂ ಪ್ರಸಿದ್ಧವಾದ ದ್ವಾದಶಿಯ ಪ್ರದೋಷವನ್ನು ಮಾತ್ರ ಇಲ್ಲಿ ಪರಿಚಯಿಸುತ್ತೇನೆ.

ರಾತ್ರೌ ಯಾಮದ್ವಯಾದರ್ವಾಕ್ ಸಪ್ತಮೀಸ್ಯಾತ್ ತ್ರಯೋದಶೀ |
ಪ್ರದೋಷ ಸತು ವಿಜ್ಞೇಯಃ ಸರ್ವವಿದ್ಯಾ ವಿಗರ್ಹಿತಃ ||

ಎಂಬ ವೃದ್ಧ ಗರ್ಗರ ಪ್ರಮಾಣ ವಾಕ್ಯದಂತೆ ರಾತ್ರಿ ೨ ಯಾಮಗಳು ಮುಗಿಯುವುದಕ್ಕೆ ಮೊದಲೇ ತ್ರಯೋದಶಿಯು ಪ್ರಾರಂಭವಾದರೆ ಪ್ರದೋಷವೆಂದು ತಿಳಿಯಬೇಕು. ಪ್ರದೋಷಕಾಲದಲ್ಲಿ ವೇದಾದಿಗಳ ಅಧ್ಯಯನವನ್ನು ಮಾಡಬಾರದು. ದ್ವಾದಶಿಯಂದು ರಾತ್ರಿಯೇ ತ್ರಯೋದಶಿಯು ಒದಗುವುದರಿಂದ ದ್ವಾದಶಿಯಂದೇ ಪ್ರದೋಷವಿರುತ್ತದೆ. ಈ ಪ್ರದೋಷಕಾಲವು ಸೂರ್ಯಾಸ್ತಕ್ಕಿಂತ ಪೂರ್ವಾಪರಗಳಲ್ಲಿ ಸಾಮಾನ್ಯವಾಗಿ ೩ ಗಂಟೆಗಳಿರುತ್ತದೆ. ದ್ವಾದಶಿಯಂದು ಸಾಯಂಕಾಲ ೬ ಗಂಟೆಗೆ ಸೂರ್ಯಾಸ್ತವಾಗುವುದೆಂದು ಭಾವಿಸಿದರೆ ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ಪ್ರದೋಷವಿದೆಯೆಂದು ತಿಳಿಯಬಹುದು.

ದ್ವಾದಶಿಯಂದು ಹರಿವಾಸರವಿದ್ದರೆ ಅಂದು ಪ್ರದೋಷವಿರುವುದಿಲ್ಲ. ಏಕೆಂದರೆ ಅಂದು ಪ್ರಾತಃಕಾಲದಲ್ಲಿ ತಾನೇ ಪ್ರಾರಂಭವಾಗಿರುವ ದ್ವಾದಶಿಯು ರಾತ್ರಿ ಕಾಲದಲ್ಲಿ ಮುಂದುವರಿಯುವುದರಿಂದ ಯಾಮದ್ವಯದಲ್ಲಿ ತ್ರಯೋದಶಿ ಪ್ರವೇಶದ ಸಾಧ್ಯತೆ ಇರುವುದಿಲ್ಲ. ಅಂತಹಾ ಸಂದರ್ಭದಲ್ಲಿ ತ್ರಯೋದಶಿಯಂದೇ ರಾತ್ರಿಯಲ್ಲಿ ತ್ರಯೋದಶಿಯು ಸಿಗುವುದರಿಂದ ಅಂದೇ ಪ್ರದೋಷವಿರುವುದನ್ನು ಪಂಚಾಂಗದಲ್ಲಿ ಕಾಣಬಹುದಾಗಿದೆ. ಹೀಗೆಯೇ ಷಷ್ಠೀ ಅಥವಾ ಸಪ್ತಮಿಯಂದೂ ಪ್ರದೋಷವಿರುತ್ತದೆ.
*****

ಶ್ರೀಕೃಷ್ಣ ಪರಮಾತ್ಮನ ಪತ್ನಿಯರ ಸಂಖ್ಯೆ ..16,108..
(16,100 ಜನ ರಾಜ ಪುತ್ರಿಯರು  ಮತ್ತು 08 ಜನ ಅಷ್ಟ ಮಹಿಷಿಯರು).
ಪುತ್ರರ ಸಂಖ್ಯೆ... 
ಪ್ರತಿಯೊಬ್ಬ ಪತ್ನಿಯಲ್ಲಿ 10 ಜನರಂತೆ 1,61,080 ಒಟ್ಟು ಪುತ್ರರು..
(16,108×10=1,61080)
ಪುತ್ರಿಯರ ಸಂಖ್ಯೆ.. .
ಪ್ರತಿಯೊಬ್ಬರಲ್ಲಿ ಒಬ್ಬರಂತೆ 16,108  ಜನ ಪುತ್ರಿ ಯರು..
(16108×1=16,108)
ಒಟ್ಟು ಮಕ್ಕಳ ಸಂಖ್ಯೆ.1,77,188..ಜನರು..

ಈ ರೀತಿಯ ಅದ್ಭುತವಾದ ಮತ್ತು ವಿಶಿಷ್ಠವಾದ ವ್ಯಾಪಾರದಿಂದ ತಾನು ಸರ್ವಶಕ್ತನಾದ ಭಗವಂತನೆಂದು  ಶ್ರೀಕೃಷ್ಣ ಪರಮಾತ್ಮ ಜಗತ್ತಿಗೆ ತೋರಿಸಿದ..
ತನ್ನ ಪ್ರತಿಯೊಬ್ಬ ಪತ್ನಿಯಲ್ಲಿ ಪಡೆದ ಮಕ್ಕಳ ಸಂಖ್ಯೆ.. ೧೦+೧=೧೧..ಎಂದು ತೋರುವ ಮೂಲಕ 
ತಾನು ಏಕಾದಶೇಂದ್ರಿಯಾಧಿಪತಿಯಾದ ಶ್ರೀಹೃಷೀಕೇಶ ರೂಪಿ ಯಾದ ಶ್ರೀಹರಿಯೇ ತಾನು ಎಂದು ನಿರೂಪಿಸಿದ....
ಹಾಗು 
ತನಗೆ  ಅತ್ಯಂತ ಪ್ರಿಯವಾದ ವ್ರತವು ಪ್ರತಿ ಮಾಸದ(ತಿಂಗಳು) ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿ ಬರುವ ೧೧ನೆಯ ದಿನವಾದ ಏಕಾದಶಿ ಎಂದು ಸಾರಿದ..
ಈ ದಿನ ಅನ್ನ, ಪಾನ ,ತಾಂಬೂಲ, ದರ್ಪಣಾದಿ, ಚೆನ್ನ ವಸ್ತ್ರಗಳೆಲ್ಲ, ವರ್ಜಿತವು,|
ಆದರೆ
ಭಗವಂತನ ನಾಮ ಸ್ಮರಣೆ,ಕಥಾ ಶ್ರವಣ, ಕೀರ್ತನೆ ಮಾತ್ರ ನಿಷಿದ್ದವಲ್ಲ....
🙏ಶ್ರೀ ಕೃಷ್ಣಾರ್ಪಣಮಸ್ತು🙏
ಏಕಾದಶಿಯಂದು ನಿರಾಹಾರನಾಗಿದ್ದು ಮುಂದಿನ ದಿನ ಭೇೂಜನ ಮಾಡುವೆ, ಅಚ್ಯುತ! 
ಚ್ಯುತಿ ಬರದಂತೆ ರಕ್ಷಿಸು. ಪುಂಡರೀಕಾಕ್ಷ ನೀನು ರಕ್ಷಕನಾಗು.
🙏ಶ್ರೀ ಕಪಿಲಾಯ ನಮಃ
****



೨೪ ಏಕಾದಶಿಗಳು ಮತ್ತು ಅವುಗಳ ವಿವರಗಳು  
Various Ekadashi discussed herebelow

೧) ಚೈತ್ರ ಶುಕ್ಲ ಏಕಾದಶಿ - ಕಾಮದಾ
 - ಕೋರಿಕೆಗಳನ್ನು ಪೂರೈಸುತ್ತದೆ.
 
ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ |
ಪ್ರಣತಃಕ್ಲೇಶನಾಶಾಯ ಗೋವಿಂದಾಯ ನಮೋನಮಃ ||

ನವಸಂವತ್ಸರದ ಮೊಟ್ಟ ಮೊದಲ ಏಕಾದಶಿ ಕಾಮದಾ' ಏಕಾದಶಿ. ಚೈತ್ರಮಾಸ ಶುಕ್ಲಪಕ್ಷದಲ್ಲಿ ಆಚರಿಸುವ ಈ ವ್ರತದಿಂದ ವರ್ಷಪೂರ್ತಿ ಇಷ್ಟ ಕಾಮ್ಯ ಈಡೇರುವುದು. ಈ ವ್ರತದ ಮಹತ್ವ ಕುರಿತುವರಾಹ' ಪುರಾಣದಲ್ಲಿ ಉಲ್ಲೇಖವಿದೆ. ಏಕಾದಶಿ ವ್ರತವೆಂದರೆ ಶ್ರೀವಿಷ್ಣುವಿನ ಪೂಜೆಯೇ ಆಗಿದೆ. ಒಂದೊಂದು ಏಕಾದಶಿಗೂ ಶ್ರೀರಾಮನ ಒಂದೊಂದು ರೂಪವನ್ನು ಪೂಜೆ ಸಲ್ಲಿಸಿ ಭಗವಂತನನ್ನು ಒಲಿಸಿಕೊಳ್ಳುವ ಕ್ರಮವಾಗಿದೆ. ಕಾಮದಾ ಏಕಾದಶಿಯಂದು ದೇವರ ವಾಸುದೇವ ರೂಪವನ್ನು ಪೂಜೆ ಸಲ್ಲಿಸಬೇಕು. ವಾಸುದೇವನ ನಾಮವನ್ನು ಬಾಯ್ತುಂಬ ನೆನೆಯಬೇಕು.

ಧರ್ಮರಾಜನು ಒಮ್ಮೆ ಆಪದ್ಬಾಂಧವ ಶ್ರೀಕೃಷ್ಣನನ್ನು ಕೇಳುತ್ತಾನೆ ಯಾವ ವ್ರತ ಮಾಡಿದರೆ ಎಲ್ಲ ಅಭೀಷ್ಟೆ ಪೂರೈಸುವುದೋ ಅಂಥದನ್ನು ತಿಳಿಸು ಎಂದು. ಆಗ ಶ್ರೀಕೃಷ್ಣ ಪರಮಾತ್ಮನೇ ಪಾಂಡವರಿಗೆ ಈ ವ್ರತಾಚರಣೆ ಬಗ್ಗೆ ಹೇಳಿದನು. ಅದಕ್ಕೂ ಮೊದಲು ವಶಿಷ್ಠ ಋಷಿಗಳು ದಿಲೀಪ ರಾಜನಿಗೆ ದೃಷ್ಟಾಂತ ಸಹಿತವಾಗಿ `ಕಾಮದಾ' ಏಕಾದಶಿ ವ್ರತದ ಮಹತ್ವ ತಿಳಿಸಿದ್ದಾರೆ.

ದೃಷ್ಟಾಂತ:
ರತ್ನಪುರವೆಂಬ ಪಟ್ಟಣವನ್ನು ಪುಂಡರೀಕನೆಂಬ ರಾಜ ಆಳುತ್ತಿದ್ದ. ಬಂಗಾರ,ಬೆಳ್ಳಿ, ರತ್ನಗಳಿಂದ ಸಿಂಗರಿಸಲಾದ ಆತನ ಆಸ್ಥಾನದಲ್ಲಿ ಲಲಿತ-ಲಲಿತಾ ಎಂಬ ಗಂಧರ್ವ ದಂಪತಿ ಗಾನ-ನೃತ್ಯಪಟುಗಳಾಗಿದ್ದರು. ಲಲಿತ ಸುಶ್ರಾವ್ಯವಾಗಿ ಹಾಡು ಹೇಳಿದರೆ ಲಲಿತಾ ಅದಕ್ಕೆ ತಕ್ಕಂತೆ ಮೋಹಕ ನೃತ್ಯಮಾಡಿ ರಾಜನನ್ನು ತೃಪ್ತಿಪಡಿಸುತ್ತಿದ್ದಳು. ಒಮ್ಮೆ ಲಲಿತ ಮಾತ್ರ ಆಸ್ಥಾನಕ್ಕೆ ಬಂದು ಗಾಯನ ಆರಂಭಿಸುತ್ತಾನಂತೆ ಆಗ ಆತನ ಮನಸ್ಸು ಮನೆಯಲ್ಲಿ ಒಬ್ಬಳೇ ಇದ್ದ ಲಲಿತಾಳತ್ತ ತಿರುಗಿ ಅವಳ ಬಗ್ಗೆ ಚಿಂತಿಸುತ್ತಾನೆ ಇದರಿಂದ ರಾಗ-ತಾಳ ತಪ್ಪಿ ಹೋಗುತ್ತದೆ.

ಇದನ್ನು ಅರಿತ ಆಸ್ಥಾನದಲ್ಲಿದ್ದ ಕ್ರೂರ ಹಾವೊಂದು ಈ ವಿಷಯವನ್ನು ರಾಜನಿಗೆ ತಿಳಿಸುತ್ತದೆ. ಲಲಿತನಿಗೆ ಅನ್ನಹಾಕುವ ಯಜಮಾನನಿಗಿಂತ ಹೆಂಡತಿಯೇ ಹೆಚ್ಚು ಎಂದು ಚಾಡಿ ಹೇಳುತ್ತದೆ. ಇದರಿಂದ ರಾಜ ಪುಂಡರೀಕನಿಗೆ ತುಂಬಾ ಕೋಪಬಂದು ಲಲಿತನಿಗೆ ರಾಕ್ಷಸನಾಗು ಎಂದು ಶಾಪ ಕೊಡುತ್ತಾನೆ. ತಕ್ಷಣ ಲಲಿತ ಸುಮಾರು 64 ಮೈಲಿ ಎತ್ತರದ ರಾಕ್ಷಸನ ರೂಪ ತಾಳುತ್ತಾನೆ. ಬೆಟ್ಟದಂತಹ ಕುತ್ತಿಗೆ, ಗುಹೆಯಂತಹ ಬಾಯಿ, ಕಂಬಗಳಂತೆ ಕೈಕಾಲು ಹೊಂದಿದ ರಾಕ್ಷಸನಾಗುತ್ತಾನೆ. ಇಂಥ ವಿಕಾರ ರೂಪದ ಗಂಡನೊಂದಿಗೆ ಲಲಿತಾ ಆತನ ಕೆಟ್ಟ ಕಾರ್ಯಗಳನ್ನು ಸಹಿಸುತ್ತಾ ಅಡವಿಯಲ್ಲಿ ಸಂಚರಿಸುತ್ತಾಳೆ.

ಹಾಗೆ ಸಂಚರಿಸುತ್ತ ವಿಂದ್ಯಾಚಲಕ್ಕೆ ಬರುತ್ತಾರೆ. ಅಲ್ಲಿ ಲಲಿತಾ ಶೃಂಗಿ' ಎಂಬ ಮುನಿಯನ್ನು ಭೆಟ್ಟಿಯಾಗಿ ನಮಸ್ಕರಿಸುತ್ತಾಳೆ. ತಪಸ್ಸಿಗೆ ಕುಳಿತ ಶೃಂಗಿ ಮುನಿ ಲಲಿತಾಳ ಸವಿನಯತೆ, ಸಂಸ್ಕಾರಕ್ಕೆ ಬೆರಗಾಗಿ ಕಣ್ತೆರೆಯುತ್ತಾನೆ. ಆಗ ಲಲಿತಾ ತನಗೆ ಬಂದ ಕಷ್ಟವನ್ನು ತಿಳಿಸಿ ಪರಿಹಾರ ಸೂಚಿಸುವಂತೆ ಕೇಳಿಕೊಳ್ಳುತ್ತಾಳೆ. ಆಗ ಶೃಂಗಿ ಮುನಿಯುಕಾಮದಾ' ಏಕಾದಶಿ ವ್ರತ ಆಚರಿಸುಂತೆ ಹೇಳುತ್ತಾರೆ.

ಅವರು ಹೇಳಿದ ಕ್ರಮದಲ್ಲಿ ಏಕಾದಶಿ ವ್ರತಾಚರಣೆ ಮಾಡಿ ದ್ವಾದಶಿಯಂದು ಋಷಿಯನ್ನು ಭೆಟ್ಟಿಯಾದ ಲಲಿತಾ ಶ್ರೀಕೃಷ್ಣ ಪರಮಾತ್ಮನಲ್ಲಿ ಗಂಡನ ಶಾಪ ವಿಮೋಚನೆಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಾಳೆ. ಕೃಷ್ಣನ ಒಲುಮೆಯಿಂದ ಲಲಿತ ಮತ್ತೆ ಮೊದಲಿನಂತೆ ಸುಂದರ ಗಂಧರ್ವನಾಗುತ್ತಾನೆ. ಗಂಧರ್ವ ದಂಪತಿ ಪುಷ್ಪಕ ವಿಮಾನದಲ್ಲಿ ಸ್ವರ್ಗಲೋಕಕ್ಕೆ ತೆರಳುತ್ತಾರೆ.

ಆದ್ದರಿಂದ ದೇ ಧರ್ಮರಾಜನೇ, ನೀನೂ ಕೂಡ ಇದೇ ಏಕಾದಶಿ ಆಚರಿಸಿ ನಿನ್ನ ಅಭೀಷ್ಟವನ್ನು ಪೂರೈಸಿಕೊ ಎಂದು ಶ್ರೀಕೃಷ್ಣ ಹೇಳುತ್ತಾನೆ. ಅದರಂತೆ ಪಾಂಡವರು ಈ ಏಕಾದಶಿ ವ್ರತ ಮಾಡಿ ಅಭೀಷ್ಠೆಯನ್ನು ಹೊಂದಿದರು.

-ಈ ವ್ರತದ ಸಂಕಲ್ಪ ಮಾಡುವಾಗ ಮನೋಭೀಷ್ಟೆಗಳನ್ನು ಅಂದರೆ "ವಿದ್ಯಾ ಪ್ರಾಪ್ತ್ಯರ್ಥಂ", "ಪುತ್ರ ಪ್ರಾಪ್ತ್ಯರ್ಥಂ" ಇತ್ಯಾದಿ ಹೇಳಿಕೊಳ್ಳುವದು ರೂಢಿಯಲ್ಲಿದೆ. ಆದರೆ ಏಕಾದಶಿ ವ್ರತಗಳು ನಿಷ್ಕಾಮ ಭಕ್ತಿಯ ಪ್ರತೀಕ ಆದ್ದರಿಂದ "ಶ್ರೀವಿಷ್ಣು ಪ್ರೀತ್ಯರ್ಥಂ" ಅಥವಾ "ಪಾರ್ವತಿ ಪರಮೇಶ್ವರ ಪ್ರೀತ್ಯರ್ಥಂ" ಎಂಬ ಸಂಕಲ್ಪ ಮಾಡುವದು ಸೂಕ್ತ.
***
#ಕಾಮದಾ #ಏಕಾದಶೀ
🌺🌺🌺🌺🌺🌺
ಹಿಂದೆ ರತ್ನಪುರವೆಂಬ ಅತ್ಯಂತ ವೈಭವಯುತವಾದ ನಗರಿಯನ್ನು ಪುಂಡರೀಕನೆಂಬ ಅರಸನು ಆಳುತ್ತಿದ್ದನು. ಆತನ ಆಸ್ಥಾನದಲ್ಲಿ ಅತ್ಯುತ್ತಮ, ಸುಪ್ರಸಿದ್ಧ ಹಾಡುಗಾರನಾಗಿದ್ದ ಲಲಿತ್ ಎಂಬುವನು ಮತ್ತು ಆತನ ಪತ್ನಿಯೂ ಅತ್ಯುತ್ತಮ ನೃತ್ಯಗಾತಿಯಾಗಿದ್ದ ಲಲಿತ ಎಂಬಾಕೆಯೂ ಇದ್ದರು. ಒಮ್ಮೆ ಕಾರಣಾಂತರದಿಂದ ಲಲಿತಳಿಗೆ ಆಸ್ಥಾನಕ್ಕೆ ಬಂದು ನೃತ್ಯ ಪ್ರದರ್ಶಿಸಲು ಸಾಧ್ಯವಾಗಲಿಲ್ಲ.

ಹಾಡುಗಾರ ಲಲಿತ್ ಬಂದು ಹಾಡಲಾರಂಬಿಸಿದನಾದರೂ ತನ್ನ ಪತ್ನಿಯ ಅನುಪಸ್ಥಿತಿಯಿಂದ ಆತನಿಗೆ ಸಂಪೂರ್ಣ ಗಮನವನ್ನು ತನ್ನ ಹಾಡಿನಲ್ಲಿ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಒಂದೆರಡು ಕಡೆ ಆತನು ತಾಳ, ಶೃತಿಗಳನ್ನು ತಪ್ಪುತ್ತಾನೆ. ಅವನ ಅಚಾತುರ್ಯವನ್ನು ಗಮನಿಸಿದ ಸರ್ಪವೊಂದು ರಾಜನಿಗೆ ದೂರು ನೀಡುತ್ತದೆ. ಲಲಿತ್ಗೆ ದೊರೆಗಿಂತ ಪತ್ನಿಯೇ ಹೆಚ್ಚು ಮುಖ್ಯ. ಆದ್ದರಿಂದಲೇ ಆತನು ಗಮನ ಕೊಟ್ಟಿರಲಿಲ್ಲ ಎಂದು ಸರ್ಪವು ಪುಂಡರೀಕ ಮಹಾರಾಜನಿಗೆ ದೂರು ನೀಡುತ್ತದೆ.

ಇದರಿಂದ ಕುಪಿತನಾದ ಪುಂಡರೀಕನು ಒಡನೆಯೇ ಲಲಿತ್ಗೆ ನರಭಕ್ಷಕನಾಗೆಂದು ಶಾಪ ನೀಡುತ್ತಾನೆ. ಕೂಡಲೇ ಲಲಿತ್ನ ದೇಹವು ಅರವತ್ಮೂರು ಮೈಲುಗಳಷ್ಟು ಎತ್ತರ, ಎಂಟು ಮೈಲುಗಳಷ್ಟು ಉದ್ದದ ಕೈಗಳು, ಪರ್ವತದಷ್ಟು ದೊಡ್ಡದಾದ ಕುತ್ತಿಗೆ ಮತ್ತು ಗುಹೆಯಂತಿದ್ದ ಬಾಯಿಯನ್ನು ಹೊಂದುತ್ತಾನೆ. ತನ್ನ ದೈಹಿಕ ಸ್ಥಿತಿಯಂತೆ ಆತನು ಹಲವಾರು ಪಾಪಕರ್ಮಗಳನ್ನು ಮಾಡುತ್ತಿರುತ್ತಾನೆ. ಲಲಿತಳು ಎಲ್ಲವನ್ನೂ ಮರೆತು ಪತಿಸೇವೆಯಲ್ಲಿ ನಿರತಳಾಗುತ್ತಾಳೆ. ಕಾಡುಮೇಡುಗಳನ್ನು ಅಲೆಯುತ್ತಿದ್ದ ಲಲಿತ್-ಲಲಿತ ದಂಪತಿಗಳು ವಿಂಧ್ಯಾಚಲವನ್ನು ತಲುಪುತ್ತಾರೆ.

ಅಲ್ಲಿ ಆಹಾರಕ್ಕಾಗಿ ಅಲೆಯುತ್ತಿದ್ದಾಗ ಅಕಸ್ಮಾತ್ತಾಗಿ ಶೃಂಗ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾರೆ. ಲಲಿತಳು ತನ್ನ ಅಳಲನ್ನು ಶೃಂಗ ಮಹರ್ಷಿಗಳ ಮುಂದೆ ತೋಡಿಕೊಳ್ಳುತ್ತಾಳೆ. ಆಗ ಮಹರ್ಷಿಗಳು ಕಾಮದ ಏಕಾದಶಿ ವ್ರತವನ್ನು ಆಚರಿಸಿ ವಿಷ್ಣುವನ್ನು ಪೂಜಿಸಿದರೆ ಲಲಿತ್ನ ಶಾಪವು ನಿವಾರ್ಣೆಯಾಗುತ್ತದೆಂದು ಹೇಳುತ್ತಾರೆ. ಅದರಂತೆಯೇ ಶ್ರದ್ಧಾಭಕ್ತಿಗಳಿಂದ ಆಕೆ ಉಪವಾಸ ವ್ರತವನ್ನಾಚರಿಸಿ ವಿಷ್ಣುವನ್ನು ವಿಶೇಷವಾಗಿ ಪೂಜಿಸುತ್ತಾಳೆ.

ನಂತರ ಮಾರನೆ ದಿನದಂದು ಆಕೆ ಋಷಿಗಳನ್ನು ಕಾಣಲು ಆಶ್ರಮಕ್ಕೆ ಹೋದಾಗ ಅಲ್ಲಿ ಆಕೆಗೆ ಶ್ರೀ ಕೃಷ್ಣನ ದರ್ಶನವಾಗುತ್ತದೆ. ಆಕೆಯು ಶ್ರೀಕೃಷ್ಣನಲ್ಲಿ ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ಆಕೆಯು ಆಚರಿಸಿದ್ದ ಕಾಮದ ಏಕಾದಶಿ ವ್ರತದಿಂದ ಸುಪ್ರೀತನಾಗಿದ್ದ ಶ್ರೀ ಕೃಷ್ಣನು ಲಲಿತ್ನ ಶಾಪವನ್ನು ನಿವಾರಿಸುತ್ತಾನೆ. ಕೂಡಲಿ ಲಲಿತ್ ತನ್ನ ಮೂಲರೂಪವನ್ನು ಪುನಃ ಪಡೆಯುತ್ತಾನೆ. ಹೀಗಾಗಿ ಕಾಮದ ಏಕಾದಶಿಯಂದು ಯಾರು ವ್ರತವನ್ನಾಚರಿಸುತ್ತಾರೋ ಅವರ ಎಲ್ಲ ಸಂಚಿತ ಪಾಪಗಳು ನಷ್ಟವಾಗಿ ಮೋಕ್ಷವನ್ನು ಪಡೆಯುತ್ತಾರೆ.
 ಕಾಮದಾ ಏಕಾದಶೀ
ಕೃಪೆ :Whatsapp
***


೨) ಚೈತ್ರ ಬಹುಳ ಏಕಾದಶಿ - ವರೂಧಿನಿ - 
ಸಹಸ್ರ ಗೋದಾನ ಫಲವು ಲಭಿಸುತ್ತದೆ.

ಅಜಿನದಂಡ ಕಮಂಡಲು ಮೇಖಲಾ ರುಚಿರ ಪಾವನ ವಾಮನ ಮೂರ್ತಯೇ| 
ಮಿತ ಜಗತ್ಪ್ರಿತ ಯಾಯ ಜಿತಾರಯೇ ನಿಗಮ ವಾಕ್ಪಟವೇ ವಟವೇ ನಮಃ||

ಚೈತ್ರ ಮಾಸ ಕೃಷ್ಣಪಕ್ಷದಲ್ಲಿ ಬರುವ ಏಕಾದಶಿಗೆ `ವರೂಥಿನಿ' ಏಕಾದಶಿ ಎನ್ನುವರು. ಈ ಏಕಾದಶಿಯು ಸೌಭಾಗ್ಯ ದಾಯಕವಾಗಿದೆ.  ಇಂದು ದಶಾವತಾರದ ಐದನೇ ಅವತಾರವಾದ ವಾಮನರೂಪಿ ಭಗವಂತನ ಧ್ಯಾನಾದಿ ಪೂಜೆ ಮಾಡಬೇಕು.. ಈ ಕುರಿತು ಭವಿಷ್ಯ ಪುರಾಣದಲ್ಲಿ ಶ್ರೀಕೃಷ್ಣ-ಜ್ಯೇಷ್ಠಪಾಂಡವ ಸಂವಾದದಲ್ಲಿ ಉಲ್ಲೇಖವಿದೆ.  ಪುಣ್ಯದಾಯಿನಿ, ಸೌಭಾಗ್ಯದಾಯಿನಿ, ಮೋಕ್ಷಪ್ರದಾಯಿನಿ ಏಕಾದಶಿ ಎಂದೂ ಇದನ್ನು ಕರೆಯುತ್ತಾರೆ.

ದೃಷ್ಟಾಂತ :

ನರ್ಮದಾ ನದಿ ತಟದಲ್ಲಿನ ಒಂದು ಪಟ್ಟಣವನ್ನು ಮಾಂಧಾತನೆಂಬ ರಾಜ ಆಳುತ್ತಿದ್ದ. ಆತ ಶೂರನೂ, ಮಹಾದಾನಿಯೂ, ತಪಸ್ವಿಯೂ ಆಗಿದ್ದ. ಒಮ್ಮೆ ಮಾಂಧಾತ ತಪಸ್ಸಿಗೆ ಕುಳಿತಾಗ ಕಾಡಿನಿಂದ ತಪ್ಪಿಸಿಕೊಂಡು ಬಂದ ಕರಡಿಯೊಂದು ಬಂದು ಆತನ ಕಾಲು ನೆಕ್ಕಲು ಶುರುಮಾಡಿತು. ಆತ ವಿಚಲಿತನಾಗಲಿಲ್ಲ. ಆದರೆ ಕರಡಿ ಅವನನ್ನು ಎಳೆದುಕೊಂಡು ಅಡವಿಗೆ ಹೋದಾಗ ಕೋಪಬಂದರೂ ಅದರ ಮೇಲೆ ಖಡ್ಗ ಬೀಸಲಿಲ್ಲ ಬದಲಾಗಿ ಶ್ರೀವಿಷ್ಣುವನ್ನು ಪ್ರಾರ್ಥಿಸಿದ. 

ಭಕ್ತನ ಕರೆಗೆ ಓಗೊಟ್ಟ ಶ್ರೀವಿಷ್ಣು ಪ್ರತ್ಯಕ್ಷನಾಗಿ ಸುದರ್ಶನ ಚಕ್ರದಿಂದ ಕರಡಿಯನ್ನು ಸಂಹರಿಸಿ ಮಾಂಧಾತನನ್ನು ರಕ್ಷಿಸಿದ. ಆದರೆ ಅದಾಗಲೇ ಕರಡಿ ಮಾಂಧಾತನ ಒಂದು ಕಾಲನ್ನು ತಿಂದುಬಿಟ್ಟಿತ್ತು. ಸುಂದರಾಂಗನಾಗಿದ್ದ ಮಾಂಧಾತ ಕರಡಿ ದಾಳಿಯಿಂದ ಅಂಗಹೀನನೂ, ಕುರೂಪಿಯೂ ಆಗಿದ್ದ. 

ಆತನ ಮನದಿಂಗಿತ ಅರಿತ ಶ್ರೀವಿಷ್ಣುವು ಆತನಿಗೆ ತಿಳಿಸಿದ. ರಾಜಾ ಮಾಂಧಾತನೇ ನಿನಗೀಗ ಬಂದ ಆಪತ್ತು ನೀನು ಪೂರ್ವ ಜನ್ಮದಲ್ಲಿ ಮಾಡಿದ ಅಪರಾಧದ ಫಲ. ಚಿಂತಿಸಬೇಡ,  ವರೂಥಿನಿ ಏಕಾದಶಿ ವ್ರತ ಆಚರಿಸಿ ಪಾಪವಿಮುಕ್ತನಾಗಲು ಹೇಳಿದ. ಅದರಂತೆ  ಮಾಂಧಾತ ಶ್ರೀವಿಷ್ಣುವಿನ ಆಜ್ಞೆಯಂತೆ ವ್ರತ ಆಚರಿಸಿ,ದೇವರ ಪೂಜೆ ಸಲ್ಲಿಸಿ ಮತ್ತೆ ಮೊದಲಿನಂತಾಗಿ ರಾಜ್ಯವಾಳಿ ಸ್ವರ್ಗಲೋಕಕ್ಕೆ ತೆರಳಿದ.

ಶಿವನಿಂದ ಶಾಪಗ್ರಸ್ತನಾಗಿ ಕುಷ್ಠರೋಗದಿಂದ ಬಳಲುತ್ತಿದ್ದ ಇಕ್ಷ್ವಾಕು ವಂಶದ ಧುಂಧುಮಾರಾ ಎಂಬ ಮಹಾರಾಜ ಕೂಡ ಇದೇ ವರೂಥಿನಿ ಏಕಾದಶಿ ವ್ರತ ಆಚರಿಸಿ ಶಾಪ ವಿಮೋಚನೆ ಪಡೆದ.  ನೀವೂ ಕೂಡ ಈ ಏಕಾದಶಿ ವ್ರತ ಆಚರಿಸಿ ಶ್ರೀಹರಿ ಕೃಪೆಗೆ ಪಾತ್ರರಾಗುವಂತೆ ಶ್ರೀಕೃಷ್ಣ ಪಾಂಡವರಿಗೆ ಹೇಳುತ್ತಾನೆ.ಯುಧೀಷ್ಠಿರ ಈ ವ್ರತ ಆಚರಿಸಿ ವೈಕುಂಠಕ್ಕೆ ತೆರಳಿದಂತೆ. 

ಫಲ:

ಈ ವ್ರತವು ಹತ್ತು ಸಾವಿರ ವರ್ಷ ತಪಸ್ಸಿಗೆ ಸಮವಾಗಿದೆ. ಈ ವ್ರತದಿಂದ ಸ್ತ್ರೀಯರಿಗೆ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಕುರುಕ್ಷೇತ್ರದಲ್ಲಿ ಸೂರ್ಯಗ್ರಹಣ ಸಮಯಕ್ಕೆ ಅಪಾರ ಸುವರ್ಣ ದಾನ ಮಾಡಿದ ಫಲ, ಜೀವನದಲ್ಲಿ ಆಯುಷ್ಯ, ಆರೋಗ್ಯ  ನಂತರ ಸ್ವರ್ಗಾದಿ ಫಲವಿದೆ. ಅನ್ನದಾನಮಾಡಿದ ಫಲ ದೊರೆಯುತ್ತದೆ. ಗಂಗಾಸ್ನಾನಕ್ಕಿಂತ ಅಧಿಕ ಫಲ ಪ್ರಾಪ್ತಿ. ಕನ್ಯಾದಾನ, ಗಂಗಾಸ್ನಾನದ ಫಲ ದೊರೆಯುತ್ತದೆ. ಸ್ತ್ರೀಹತ್ಯಾದಿ ದೋಷಗಳು ಪರಿಹಾರವಾಗುತ್ತವೆ.
****



೩) ವೈಶಾಖ ಶುದ್ಧ ಏಕಾದಶಿ - ಮೋಹಿನಿ 
- ದರಿದ್ರನು ಧನವಂತನಾಗುತ್ತಾನೆ.

ವೈಶಾಖ ಮಾಸ ಶುಕ್ಲ ಪಕ್ಷ ಏಕಾದಶಿ, ಅದನ್ನು ಮೋಹಿನಿ ಏಕಾದಶಿ ಎಂದು ಕರೆಯಲಾಗಿದೆ. ಈ ದಿನವು ಮಹಾವಿಷ್ಣುವಿನ ಆರಾಧನೆಗೆ ಅತ್ಯಂತ ಪವಿತ್ರ ದಿನವಾಗಿದೆ. ಮೋಹಿನಿ ಏಕಾದಶಿ ವ್ರತಾಚರಣೆಯು ಶುಭತರಲಿ ಮೋಹಿನಿ ಏಕಾದಶಿ ಮಹಾತ್ಮೆ ವೈದೇಹಿ ಸಹಿತಂ ಸುರದ್ರುಮತಲೇ ಹೈಮೇ ಮಹಾಮಂಡಲೇ ಮಧ್ಯೇಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ | ಅಗ್ರೇ ವಾಚಯತಿ ಪ್ರಭಂಜನಸುತೇ ತತ್ವಂ ಮುನಿಭ್ಯಃ ಪರಮ್ ವ್ಯಾಖ್ಯಾತಂ ಭರತಾದಿಭಿಃ ಪರಿವ್ರತಂ ರಾಮಂಭಜೇ ಶ್ಯಾಮಲಮ್ || ವೈಶಾಖ ಶುಕ್ಲ ಏಕಾದಶಿಗೆ ಮೋಹಿನಿ ಏಕಾದಶಿ ಎಂಬ ಹೆಸರಿದೆ. ಇಂದು ಶ್ರೀರಾಮನಿಗೆ ಪೂಜೆ ಸಲ್ಲಿಸಿ ಏಕಾದಶಿ ವ್ರತ ಆಚರಿಸಬೇಕು. ಈ ವ್ರತ ಕುರಿತು ಕೂರ್ಮ ಪುರಾಣ ಮತ್ತು ಸೂರ್ಯ ಪುರಾಣದಲ್ಲಿ ಉಲ್ಲೇಖವಿದೆ. ಮೋಹಿನಿ ಏಕಾದಶಿಯ ಮಹಾತ್ಮೆಯನ್ನು ವಶಿಷ್ಠ ಋಷಿಗಳು ಶ್ರೀರಾಮಚಂದ್ರನಿಗೆ ದೃಷ್ಟಾಂತ ಸಹಿತ ಹೇಳಿದ್ದಾರೆ. ದೃಷ್ಟಾಂತ: ಸರಸ್ವತಿ ನದಿ ದಂಡೆಯ ಮೇಲಿರುವ ಸುಂದರ ನಗರ ಭದ್ರಾವತಿ. ಅದನ್ನು ಚಂದ್ರವಂಶದ ದ್ಯುತಿಮಾನ್ ಎಂಬ ರಾಜ ಆಳುತ್ತಿದ್ದ. ಆತ ಧರ್ಮಾತ್ಮನಾಗಿದ್ದ. ಆತನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲರೂ ಸುಖದಿಂದಿದ್ದರು. ಅದೇ ನಗರದಲ್ಲಿ ಧನಪಾಲನೆಂಬ ವ್ಯಾಪಾರಿಯೂ ಇದ್ದ. ಅವನೂ ಕೂಡ ಧರ್ಮಿಷ್ಠನೆನಿಸಿದ್ದ. ನಗರದಲ್ಲಿ ಜನರ ಅನುಕೂಲಕ್ಕಾಗಿ ಸುಂದರವಾದ ಕೊಳಗಳನ್ನು ನಿರ್ಮಿಸಿದ್ದ. ಧಾರ್ಮಿಕ ಕಾರ್ಯಕ್ಕಾಗಿ ಅನೇಕ ಧಾಮಗಳನ್ನೂ, ಉದ್ಯಾನವನಗಳನ್ನು ನಿರ್ಮಾಣ ಮಾಡಿದ್ದ. ಆತ ವಿಷ್ಣುವಿನ ಭಕ್ತನಾಗಿದ್ದ. ಅವನಿಗೆ ಸುಮನಾ, ಸದ್ಬುದ್ಧಿ, ಮೇಧಾವಿ, ಸುಕೃತಿ, ದುಷ್ಟಬುದ್ಧಿ ಎಂಬ ಐವರು ಪುತ್ರರಿದ್ದರು. ಹೇಸರೇ ಹೇಳುವಂತೆ ಅವರಲ್ಲಿ ನಾಲ್ವರು ತಂದೆಯಂತೆ ಸದ್ಗುಣಿಗಳಾಗಿದ್ದರು. ಆದರೆ ದುಷ್ಟಬುದ್ಧಿ ಮಾತ್ರ ಸದಾಕಾಲ ಪಾಪಕಾರ್ಯದಲ್ಲಿ ತೊಡಗಿರುತ್ತಿದ್ದ. ಜೂಜಾಡುವುದು, ದೇವ-ಬ್ರಾಹ್ಮಣ, ಗುರು-ಹಿರಿಯರಿಗೆ ಗೌರವ ಕೊಡದಿರುವುದು, ತಂದೆ ಗಳಿಸಿದ ಹಣವನ್ನು ದುರಾಚಾರಕ್ಕೆ ಬಳಸುವುದು, ತಿನ್ನಬಾರದ್ದನ್ನು ತಿನ್ನುತ್ತಾ, ಮಾಡಬಾರದ್ದನ್ನು ಮಾಡುತ್ತಾ ಇದ್ದ. ಒಂದು ದಿನ ಧನಪಾಲನು ತನ್ನ ಮಗ ದುಷ್ಟಬುದ್ಧಿಯು ಓರ್ವ ವೇಶ್ಯೆಯೊಂದಿಗೆ ಹೋಗುವುದನ್ನು ನೋಡಿದ. ಆತ ಮಗನಿಗೆ ಏನನ್ನೂ ಹೇಳಲಿಲ್ಲ. ಬಂಧುಗಳೆಲ್ಲ ದೂರ ಸರಿದರು. ದುಷ್ಟಬುದ್ಧಿಗೆ ಬುದ್ಧಿ ಬರಲಿಲ್ಲ. ತಂದೆಯಿಂದ ಬಂದ ಆಭರಣಗಳು, ಆಸ್ತಿಯನ್ನೆಲ್ಲ ಕಳೆದುಕೊಂಡ. ಬಡತನಕ್ಕೆ ಗುರಿಯಾದ. ಆತನೊಂದಿಗೆ ಇದ್ದ ವೇಶ್ಯೆ ಕೂಡ ಆತನ ಬಡತನ ನೋಡಿ ಅವಮಾನಿಸಿದಳು. ಆಗ ದುಷ್ಟಬುದ್ಧಿಗೆ ಸಿಟ್ಟು ಬಂತು. ಬಡತನ ನೀಗಿಸಲು ಕಳ್ಳತನಕ್ಕಿಳಿದ, ರಾಜಭಟರು ಇವನನ್ನು ಹಿಡಿದು ಥಳಿಸುತ್ತಿದ್ದರು. ನಂತರ ವರ್ತಕ ಧನಪಾಲನ ಮಗನೆಂದು ಬಿಟ್ಟುಬಿಡುತ್ತಿದ್ದರು. ಹೀಗೇ ಹಲವಾರು ಬಾರಿ ನಡೆಯಿತು. ಇವನ ಉಪಟಳ ಅತಿಯಾಯಿತು. ಆಗ ರಾಜಭಟರು ಅವನಿಗೆ ನಗರದಲ್ಲಿ ಸ್ಥಾನವಿಲ್ಲ ಎಂದು ಹೊರಹಾಕಿದರು. ಅಡವಿಗೆ ತೆರಳಿದ. ಹಸಿವು ನೀರಡಿಕೆಯಿಂದ ಬಳಲಿ ಬೆಂಡಾದಾಗ ಕಾಡುಪ್ರಾಣಿ, ಪಕ್ಷಿಗಳನ್ನು ಕೊಂದು ತಿಂದ. ಸಾಕಷ್ಟು ಪಾಪಕಾರ್ಯ ಮಾಡಿದ. ಯಾವಾಗಲೂ ದು:ಖಿತನಾಗಿ ಜೀವಿಸುತ್ತಿದ್ದ. ಹಿಂದಿನ ಜನ್ಮದ ಪುಣ್ಯದ ಫಲವೇನೋ ಅಲೆದಾಡುತ್ತಾ ಕೌಂಡಿನ್ಯ ಋಷಿಯ ಆಶ್ರಮಕ್ಕೆ ಬಂದ. ಋಷಿಗಳು ಆಗತಾನೆ ಗಂಗೆಯಲ್ಲಿ ಮಿಂದು ಬಂದಿದ್ದರು. ಅವರ ಬಟ್ಟೆಯಲ್ಲಿನ ಒಂದೆರಡು ಹನಿ ಗಂಗೆಯ ನೀರು ಇವನ ಮೇಲೆ ಬಿತ್ತು. ಆಗಲೇ ಅವನ ಅರ್ಧ ಪಾಪ ನಾಶವಾಯಿತು. ಕೆಟ್ಟಬುದ್ಧಿ ಮಾಯವಾಯಿತು. ಋಷಿಗಳಿಗೆ ಕೈಮುಗಿದು "ನಾನು ಜೀವನದಲ್ಲಿ ಸಾಕಷ್ಟು ಪಾಪ ಮಾಡಿದ್ದೇನೆ. ಇದರಿಂದ ಮುಕ್ತಿ ಹೇಗೆ ತಿಳಿಸಿ" ಎಂದು ಬೇಡಿಕೊಂಡ. ಅದಕ್ಕೆ ಕೌಂಡಿನ್ಯರು ಮೋಹಿನಿ ಏಕಾದಶಿ ಆಚರಿಸು ಬೆಟ್ಟದಂತಹ ಪಾಪ ನಾಶವಾಗಿ ಶ್ರೀಹರಿಯ ಪ್ರೀತಿಗೆ ಪಾತ್ರನಾಗುವಿ ಎಂದರು. ಅದರಂತೆ ದುಷ್ಟಬುದ್ಧಿ ವ್ರತಾಚರಣೆ ಮಾಡಿ ದೇವರ ಕೃಪೆಗೆ ಪಾತ್ರನಾಗಿ ಸುಂದರ ರೂಪ ತಾಳಿ ಗರುಡವಾಹನದಲ್ಲಿ ದೇವಲೋಕಕ್ಕೆ ತೆರಳಿದ. ತ್ರೇತಾಯುಗದಲ್ಲಿ ಶ್ರೀರಾಮ ಸೀತೆಯ ಹುಡುಕಾಟದಲ್ಲಿದ್ದಾಗ ವಶಿಷ್ಠ ಮುನಿಗಳು ಹೇಳಿದಂತೆ ಲೋಕಕಲ್ಯಾಣಕ್ಕಾಗಿ ಹಾಗೂ ಲೋಕಶಿಕ್ಷಣಕ್ಕಾಗಿ ಸ್ವತಃ ಆಚರಿಸಿದ. ದ್ವಾಪರಯುಗದಲ್ಲಿ ಶ್ರೀಕೃಷ್ಣ ಹೇಳಿದ್ದಕ್ಕೆ ಜೇಷ್ಠ ಪಾಂಡವ ಯುಧಿಷ್ಠಿರನೂ ಸಹ ಆಚರಿಸಿರುವನು. ಎಲ್ಲ ಏಕಾದಶಿಯಂತೆಯೇ ವ್ರತ ಆಚರಣೆ ಕ್ರಮವಿದೆ. ಶ್ರೀರಾಮದೇವರ ಪ್ರತಿಮಾ ಪೂಜೆಯನ್ನು ಅತ್ಯಂತ ಭಕ್ತಿ-ಶ್ರದ್ಧೆಯಿಂದ ಮಾಡಬೇಕು. ವಿಷ್ಣು ಸಹಸ್ರನಾಮ, ಶ್ರೀರಾಮರಕ್ಷಾ ಸ್ತೋತ್ರ ಮುಂತಾದ ಸ್ತೋತ್ರ-ಮಂತ್ರಗಳ ಪಾರಾಯಣ ಮಾಡಬೇಕು. ದೇವರಿಗೆ ಹಣ್ಣುಗಳನ್ನು ಸಮರ್ಪಿಸಬೇಕು. ದೇವರ ಧ್ಯಾನ, ಭಜನೆ, ಗೀತ-ನೃತ್ಯಗಳಿಂದ ಅರ್ಚಿಸಬೇಕು.. ಈ ವ್ರತ ಆಚರಣೆಯಿಂದ ಜನ್ಮಾಂತರದ ಪಾಪನಾಶವಾಗುತ್ತದೆ. ಅನೇಕ ಸಂಕಷ್ಟಕ್ಕೆ ಪರಿಹಾರ ದೊರೆಯುತ್ತದೆ. ಶ್ರೀಹರಿಯ ಕೃಪೆಯಿಂದ ಎಲ್ಲ ತಾಪತ್ರಯಗಳಿಂದ ಮುಕ್ತಿ ದೊರೆಯುತ್ತದೆ. ಕೇವಲ ಕಥೆ ಕೇಳಿದರೂ, ಓದಿದರೂ ಸಹ ಒಂದು ಸಾವಿರ ಗೋದಾನ ಮಾಡಿದ ಫಲ ಪ್ರಾಪ್ತಿಯಾಗುತ್ತದೆ. ವಿಷ್ಣು ದೇವರ ಆಶೀರ್ವಾದವನ್ನು ಪಡೆಯಲು, ಮೋಹಿನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ದಿನ ವಿಷ್ಣು ದೇವರು ಮೋಹಿನಿಯ ಅವತಾರ ತಾಳಿದರೆಂಬ ಪ್ರತೀತಿಯಿದೆ. ರಾಮ ದೇವರಿಗೂ ಈ ಹಬ್ಬಕ್ಕೂ ಇರುವ ಕಥೆ ಇಂತಿದೆ. ರಾವಣ ಸೀತೆಯನ್ನು ಅಪಹರಿಸಿದ ನಂತರ ರಾಮನು ಪರಿತ್ಯಕ್ತ ಭಾವದಲ್ಲಿದ್ದನು. ಇದನ್ನು ಗಮನಿಸಿದ ವಶಿಷ್ಟ ಮುನಿಗಳು ಮೋಹಿನಿ ಏಕಾದಶಿಯನ್ನು ಆಚರಿಸುವ ಮೂಲಕ ಜೀವನದಲ್ಲಿನ ಎಲ್ಲ ದುಃಖಗಳಿಗೂ ಕೊನೆ ಹಾಡಬಹುದು ಎಂದು ತಿಳಿಹೇಳಿ ಈ ಹಬ್ಬದ ದಂತಕಥೆಯನ್ನು ವಿವರಿಸಿದರು. ಒಂದನೊಂದು ಕಾಲದಲ್ಲಿ ಸರಸ್ವತಿ ನದಿ ದಂಡೆಯ ಮೇಲಿನ ರಾಜ್ಯವನ್ನು ಧನಪಾಲನೆಂಬ ರಾಜನು ಆಳುತ್ತಿದ್ದನು. ಅವನಿಗೆ ಸುಮನ, ದ್ಯುತಿಯಂ, ಮೇಧಾವಿ, ಸುಕ್ತಿ ಮತ್ತು ದೃಷ್ಟಬುದ್ಧಿ ಎಂಬ ಮಕ್ಕಳಿದ್ದರು. ಅವನ ಮಕ್ಕಳಲ್ಲಿ, ದೃಷ್ಟಬುದ್ದಿಯು ಕೆಟ್ಟ ಜನರ ಸಹವಾಸ ಮಾಡಿ, ತನ್ನೆಲ್ಲ ಧನ ಸಂಪತ್ತನ್ನು ಕಳೆದುಕೊಂಡು, ಹಣಕ್ಕಾಗಿ ರಾಜ್ಯದಲ್ಲಿ ಜನರನ್ನು ಸುಲಿಗೆ ಮಾಡುವಾಗ ಸಿಕ್ಕಿಬಿದ್ದು ರಾಜ್ಯದಿಂದ ಹೊರಹಾಕಲ್ಪಟ್ಟನು. ಅಂದಿನಿಂದ ಆಹಾರಕ್ಕಾಗಿ ಕಾಡಿನಲ್ಲಿ ಬೇಟೆ ಆಡುತ್ತಾ, ದಾರಿಹೋಕರನ್ನು ದೋಚುತ್ತಿದ್ದನು. ಒಂದು ಬಾರಿ ದೋಚುವಾಗ ಮುನಿಯ ತೇಜಸ್ಸನ್ನು, ದೋಚಲು ಮನಸ್ಸು ಬಾರದೆ ಪಾಪ ಪರಿಹಾರದ ಮಾರ್ಗಕ್ಕಾಗಿ ಬೇಡಿದನು. ಆಗ ಮುನಿಯು ಮೋಹಿನಿ ಏಕಾದಶಿಯೆಂದು ಉಪವಾಸ ಆಚರಿಸಲು ಹೇಳಿದರು. ನಂತರ ಹಾಗೆ ಮಾಡಿ ತನ್ನ ಪಾಪಕರ್ಮಗಳನ್ನು ಕಳೆದುಕೊಂಡನು. ಕೃಷ್ಣಾರ್ಪಣಮಸ್ತು. 🙏
*******

ಮೋಹಿನಿ ಏಕಾದಶಿ ಮಹಾತ್ಮೆ


ವೈದೇಹಿ ಸಹಿತಂ ಸುರದ್ರುಮತಲೇ ಹೈಮೇ ಮಹಾಮಂಡಲೇ ಮಧ್ಯೇಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |

ಅಗ್ರೇ ವಾಚಯತಿ ಪ್ರಭಂಜನಸುತೇ ತತ್ವಂ ಮುನಿಭ್ಯಃ ಪರಮ್ ವ್ಯಾಖ್ಯಾತಂ ಭರತಾದಿಭಿಃ ಪರಿವ್ರತಂ ರಾಮಂಭಜೇ ಶ್ಯಾಮಲಮ್ ||


ವೈಶಾಖ ಶುಕ್ಲ ಏಕಾದಶಿಗೆ ಮೋಹಿನಿ ಏಕಾದಶಿ ಎಂಬ ಹೆಸರಿದೆ. ಇಂದು ಶ್ರೀರಾಮನಿಗೆ ಪೂಜೆ ಸಲ್ಲಿಸಿ ಏಕಾದಶಿ ವ್ರತ ಆಚರಿಸಬೇಕು. ಈ ವ್ರತ ಕುರಿತು ಕೂರ್ಮ ಪುರಾಣ ಮತ್ತು ಸೂರ್ಯ ಪುರಾಣದಲ್ಲಿ ಉಲ್ಲೇಖವಿದೆ. ಮೋಹಿನಿ ಏಕಾದಶಿಯ ಮಹಾತ್ಮೆಯನ್ನು ವಶಿಷ್ಠ ಋಷಿಗಳು ಶ್ರೀರಾಮಚಂದ್ರನಿಗೆ ದೃಷ್ಟಾಂತ ಸಹಿತ ಹೇಳಿದ್ದಾರೆ.


ದೃಷ್ಟಾಂತ:

ಸರಸ್ವತಿ ನದಿ ದಂಡೆಯ ಮೇಲಿರುವ ಸುಂದರ ನಗರ ಭದ್ರಾವತಿ. ಅದನ್ನು ಚಂದ್ರವಂಶದ ದ್ಯುತಿಮಾನ್ ಎಂಬ ರಾಜ ಆಳುತ್ತಿದ್ದ. ಆತ ಧರ್ಮಾತ್ಮನಾಗಿದ್ದ. ಆತನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲರೂ ಸುಖದಿಂದಿದ್ದರು. ಅದೇ ನಗರದಲ್ಲಿ ಧನಪಾಲನೆಂಬ ವ್ಯಾಪಾರಿಯೂ ಇದ್ದ. ಅವನೂ ಕೂಡ ಧರ್ಮಿಷ್ಠನೆನಿಸಿದ್ದ. ನಗರದಲ್ಲಿ ಜನರ ಅನುಕೂಲಕ್ಕಾಗಿ ಸುಂದರವಾದ ಕೊಳಗಳನ್ನು ನಿರ್ಮಿಸಿದ್ದ. ಧಾರ್ಮಿಕ ಕಾರ್ಯಕ್ಕಾಗಿ ಅನೇಕ ಧಾಮಗಳನ್ನೂ, ಉದ್ಯಾನವನಗಳನ್ನು ನಿರ್ಮಾಣ ಮಾಡಿದ್ದ. ಆತ ವಿಷ್ಣುವಿನ ಭಕ್ತನಾಗಿದ್ದ.


ಅವನಿಗೆ ಸುಮನಾ, ಸದ್ಬುದ್ಧಿ, ಮೇಧಾವಿ, ಸುಕೃತಿ, ದುಷ್ಟಬುದ್ಧಿ ಎಂಬ ಐವರು ಪುತ್ರರಿದ್ದರು. ಹೇಸರೇ ಹೇಳುವಂತೆ ಅವರಲ್ಲಿ ನಾಲ್ವರು ತಂದೆಯಂತೆ ಸದ್ಗುಣಿಗಳಾಗಿದ್ದರು. ಆದರೆ ದುಷ್ಟಬುದ್ಧಿ ಮಾತ್ರ ಸದಾಕಾಲ ಪಾಪಕಾರ್ಯದಲ್ಲಿ ತೊಡಗಿರುತ್ತಿದ್ದ. ಜೂಜಾಡುವುದು, ದೇವ-ಬ್ರಾಹ್ಮಣ, ಗುರು-ಹಿರಿಯರಿಗೆ ಗೌರವ ಕೊಡದಿರುವುದು, ತಂದೆ ಗಳಿಸಿದ ಹಣವನ್ನು ದುರಾಚಾರಕ್ಕೆ ಬಳಸುವುದು, ತಿನ್ನಬಾರದ್ದನ್ನು ತಿನ್ನುತ್ತಾ, ಮಾಡಬಾರದ್ದನ್ನು ಮಾಡುತ್ತಾ ಇದ್ದ.


https://play.google.com/store/apps/details?id=com.starlinetechnologies.sakshipanchang


ಒಂದು ದಿನ ಧನಪಾಲನು ತನ್ನ ಮಗ ದುಷ್ಟಬುದ್ಧಿಯು ಓರ್ವ ವೇಶ್ಯೆಯೊಂದಿಗೆ ಹೋಗುವುದನ್ನು ನೋಡಿದ. ಆತ ಮಗನಿಗೆ ಏನನ್ನೂ ಹೇಳಲಿಲ್ಲ. ಬಂಧುಗಳೆಲ್ಲ ದೂರ ಸರಿದರು. ದುಷ್ಟಬುದ್ಧಿಗೆ ಬುದ್ಧಿ ಬರಲಿಲ್ಲ. ತಂದೆಯಿಂದ ಬಂದ ಆಭರಣಗಳು, ಆಸ್ತಿಯನ್ನೆಲ್ಲ ಕಳೆದುಕೊಂಡ. ಬಡತನಕ್ಕೆ ಗುರಿಯಾದ. ಆತನೊಂದಿಗೆ ಇದ್ದ ವೇಶ್ಯೆ ಕೂಡ ಆತನ ಬಡತನ ನೋಡಿ ಅವಮಾನಿಸಿದಳು. ಆಗ ದುಷ್ಟಬುದ್ಧಿಗೆ ಸಿಟ್ಟು ಬಂತು.


ಬಡತನ ನೀಗಿಸಲು ಕಳ್ಳತನಕ್ಕಿಳಿದ, ರಾಜಭಟರು ಇವನನ್ನು ಹಿಡಿದು ಥಳಿಸುತ್ತಿದ್ದರು. ನಂತರ ವರ್ತಕ ಧನಪಾಲನ ಮಗನೆಂದು ಬಿಟ್ಟುಬಿಡುತ್ತಿದ್ದರು. ಹೀಗೇ ಹಲವಾರು ಬಾರಿ ನಡೆಯಿತು. ಇವನ ಉಪಟಳ ಅತಿಯಾಯಿತು. ಆಗ ರಾಜಭಟರು ಅವನಿಗೆ ನಗರದಲ್ಲಿ ಸ್ಥಾನವಿಲ್ಲ ಎಂದು ಹೊರಹಾಕಿದರು. ಅಡವಿಗೆ ತೆರಳಿದ. ಹಸಿವು ನೀರಡಿಕೆಯಿಂದ ಬಳಲಿ ಬೆಂಡಾದಾಗ ಕಾಡುಪ್ರಾಣಿ, ಪಕ್ಷಿಗಳನ್ನು ಕೊಂದು ತಿಂದ. ಸಾಕಷ್ಟು ಪಾಪಕಾರ್ಯ ಮಾಡಿದ. ಯಾವಾಗಲೂ ದು:ಖಿತನಾಗಿ ಜೀವಿಸುತ್ತಿದ್ದ.


ಹಿಂದಿನ ಜನ್ಮದ ಪುಣ್ಯದ ಫಲವೇನೋ ಅಲೆದಾಡುತ್ತಾ ಕೌಂಡಿನ್ಯ ಋಷಿಯ ಆಶ್ರಮಕ್ಕೆ ಬಂದ. ಋಷಿಗಳು ಆಗತಾನೆ ಗಂಗೆಯಲ್ಲಿ ಮಿಂದು ಬಂದಿದ್ದರು. ಅವರ ಬಟ್ಟೆಯಲ್ಲಿನ ಒಂದೆರಡು ಹನಿ ಗಂಗೆಯ ನೀರು ಇವನ ಮೇಲೆ ಬಿತ್ತು. ಆಗಲೇ ಅವನ ಅರ್ಧ ಪಾಪ ನಾಶವಾಯಿತು. ಕೆಟ್ಟಬುದ್ಧಿ ಮಾಯವಾಯಿತು. ಋಷಿಗಳಿಗೆ ಕೈಮುಗಿದು "ನಾನು ಜೀವನದಲ್ಲಿ ಸಾಕಷ್ಟು ಪಾಪ ಮಾಡಿದ್ದೇನೆ. ಇದರಿಂದ ಮುಕ್ತಿ ಹೇಗೆ ತಿಳಿಸಿ" ಎಂದು ಬೇಡಿಕೊಂಡ.


ಅದಕ್ಕೆ ಕೌಂಡಿನ್ಯರು ಮೋಹಿನಿ ಏಕಾದಶಿ ಆಚರಿಸು ಬೆಟ್ಟದಂತಹ ಪಾಪ ನಾಶವಾಗಿ ಶ್ರೀಹರಿಯ ಪ್ರೀತಿಗೆ ಪಾತ್ರನಾಗುವಿ ಎಂದರು. ಅದರಂತೆ ದುಷ್ಟಬುದ್ಧಿ ವ್ರತಾಚರಣೆ ಮಾಡಿ ದೇವರ ಕೃಪೆಗೆ ಪಾತ್ರನಾಗಿ ಸುಂದರ ರೂಪ ತಾಳಿ ಗರುಡವಾಹನದಲ್ಲಿ ದೇವಲೋಕಕ್ಕೆ ತೆರಳಿದ.


ತ್ರೇತಾಯುಗದಲ್ಲಿ ಶ್ರೀರಾಮ ಸೀತೆಯ ಹುಡುಕಾಟದಲ್ಲಿದ್ದಾಗ ವಶಿಷ್ಠ ಮುನಿಗಳು ಹೇಳಿದಂತೆ ಲೋಕಕಲ್ಯಾಣಕ್ಕಾಗಿ ಹಾಗೂ ಲೋಕಶಿಕ್ಷಣಕ್ಕಾಗಿ ಸ್ವತಃ ಆಚರಿಸಿದ. ದ್ವಾಪರಯುಗದಲ್ಲಿ ಶ್ರೀಕೃಷ್ಣ ಹೇಳಿದ್ದಕ್ಕೆ ಜೇಷ್ಠ ಪಾಂಡವ ಯುಧಿಷ್ಠಿರನೂ ಸಹ ಆಚರಿಸಿರುವನು.


ಎಲ್ಲ ಏಕಾದಶಿಯಂತೆಯೇ ವ್ರತ ಆಚರಣೆ ಕ್ರಮವಿದೆ. ಶ್ರೀರಾಮದೇವರ ಪ್ರತಿಮಾ ಪೂಜೆಯನ್ನು ಅತ್ಯಂತ ಭಕ್ತಿ-ಶ್ರದ್ಧೆಯಿಂದ ಮಾಡಬೇಕು. ವಿಷ್ಣು ಸಹಸ್ರನಾಮ, ಶ್ರೀರಾಮರಕ್ಷಾ ಸ್ತೋತ್ರ ಮುಂತಾದ ಸ್ತೋತ್ರ-ಮಂತ್ರಗಳ ಪಾರಾಯಣ ಮಾಡಬೇಕು. ದೇವರಿಗೆ ಹಣ್ಣುಗಳನ್ನು ಸಮರ್ಪಿಸಬೇಕು. ದೇವರ ಧ್ಯಾನ, ಭಜನೆ, ಗೀತ-ನೃತ್ಯಗಳಿಂದ ಅರ್ಚಿಸಬೇಕು..


ಈ ವ್ರತ ಆಚರಣೆಯಿಂದ ಜನ್ಮಾಂತರದ ಪಾಪನಾಶವಾಗುತ್ತದೆ. ಅನೇಕ ಸಂಕಷ್ಟಕ್ಕೆ ಪರಿಹಾರ ದೊರೆಯುತ್ತದೆ. ಶ್ರೀಹರಿಯ ಕೃಪೆಯಿಂದ ಎಲ್ಲ ತಾಪತ್ರಯಗಳಿಂದ ಮುಕ್ತಿ ದೊರೆಯುತ್ತದೆ. ಕೇವಲ ಕಥೆ ಕೇಳಿದರೂ, ಓದಿದರೂ ಸಹ ಒಂದು ಸಾವಿರ ಗೋದಾನ ಮಾಡಿದ ಫಲ ಪ್ರಾಪ್ತಿಯಾಗುತ್ತದೆ.

ಸಂಗ್ರಹ

ಶ್ರೀಮತಿ ಪ್ರೇಮಾ ಅಚ್ಯುತರಾವ ಕುಲಕರ್ಣಿ

ಹುಬ್ಬಳ್ಳಿ.

***


೪) ವೈಶಾಖ ಬಹುಳ ಏಕಾದಶಿ - ಅಪರಾ - ರಾಜ್ಯಪ್ರಾಪ್ತಿ



 
೪.ವೈಶಾಖ ಬಹುಳ ಏಕಾದಶಿ - ಅಪರಾ - ರಾಜ್ಯಪ್ರಾಪ್ತಿ- ವೈಶಾಖ ಮಾಸದ ಕೃಷ್ಣಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿ ಎನ್ನುವರು. ಈ ಕುರಿತು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಾಗಿದೆ. ಅಂದು ಭಗವಂತನ ತ್ರಿವಿಕ್ರಮ ರೂಪವನ್ನು ಪೂಜೆ ಮಾಡಬೇಕು. ಶ್ರೀವಿಷ್ಣುಸಹಸ್ರನಾಮ ಮೊದಲಾದ ಸ್ತೋತ್ರ ಮಂತ್ರಗಳಿಂದ ಅರ್ಚಿಸಬೇಕು.ಅಪಾರ ಧನಸಂಪತ್ತು, ಆಯುಷ್ಯ, ಕೀರ್ತಿ ಹಾಗೂ ಸಂತೋಷವನ್ನು ಕೊಡುವಂಥ ಈ ವ್ರತ ಅತ್ಯಂತ ಶ್ರೇಷ್ಠವಾಗಿದೆ.

ಮಹಾರಾಷ್ಟ್ರದಲ್ಲಿ ಇದಕ್ಕೆ ವೈಶಾಖ ವಾಡಿ ಏಕಾದಶಿ ಎಂದು ಕರೆಯುತ್ತಾರೆ. ಅಲ್ಲಿ ಶ್ರೀವಿಷ್ಣುವಿನ ವಾಮನಾವತಾರಕ್ಕೆ ಪೂಜೆ ಮಾಡುವರು. ಪಂಜಾಬ, ಹರ್ಯಾಣ ಮತ್ತು ಕಾಶ್ಮೀರದಲ್ಲಿ ಇದಕ್ಕೆ ಭದ್ರಕಾಳಿ ಏಕಾದಶಿ ಎನ್ನುವರು. ಭದ್ರಕಾಳಿ ಜಯಂತಿಯನ್ನು ಆಚರಿಸಿ ದೇವಿಗೆ ಪೂಜೆ ಸಲ್ಲಿಸಿ ಉಪವಾಸ ಆಚರಿಸುತ್ತಾರೆ.
ಓರಿಸ್ಸಾದಲ್ಲಿ ಜಲಕ್ರೀಡಾ ಏಕಾದಶಿ ಎನ್ನುವರು. ಅಂದು ಪುರಿ ಜಗನ್ನಾಥನಿಗೆ ಅರ್ಚನೆ ಮಾಡಿ ಇಷ್ಟಾರ್ಥ ಪೂರೈಸುವಂತೆ ಪ್ರಾರ್ಥಿಸುವರು. 
ದೃಷ್ಟಾಂತ:
ಹಿಂದೆ ಧರ್ಮನಿಷ್ಠನಾದ ಮಹಿಧ್ವಜನೆಂಬ ರಾಜನಿದ್ದ. ಆತನಿಗೆ ವಜ್ರಧ್ವಜನೆಂಬ ದುಷ್ಟ, ವಂಚಕನೆನಿಸಿದ ತಮ್ಮನಿದ್ದ. ವಜ್ರಧ್ವಜನಿಗೆ ಅಣ್ಣ ಮಹಿಧ್ವಜನನ್ನು ಕಂಡರೆ ಆಗುತ್ತಿರಲಿಲ್ಲ. ಹೀಗಾಗಿ ಆತ ಅಣ್ಣನನ್ನು ಕೊಂದು ಒಂದು ಅಶ್ವಥ್ಥ ಮರದ ಕೆಳಗೆ ಸುಟ್ಟುಹಾಕಿದ. ಈ ರೀತಿಯ ಕೆಟ್ಟಸಾವು ಪಡೆದ ಮಹಿಧ್ವಜ ಪಶಾಚಿಯಾದ. ಅದೇ ಗಿಡದ ಮೇಲೆ ಕುಳಿತು ಜನರಿಗೆ ತೊಂದರೆ ಕೊಡುಲು ಆರಂಭಿಸಿದ.
ಒಮ್ಮೆ ಆ ಮಾರ್ಗವಾಗಿ ಧುಮ್ರ ಎಂಬ ಋಷಿಗಳು ಹೋಗುತ್ತಿದ್ದರು. ಅವರಿಗೆ ಆ ಪಿಶಾಚಿ ಯಾರೆಂದು, ಅದಕ್ಕೆ ಈ ಗತಿ ಯಾಕೆ ಬಂದಿದೆ ಎಂಬುದು ತಮ್ಮ ತಪ:ಶಕ್ತಿಯಿಂದ ತಿಳಿಯಿತು. ಅವರು ತಾವೇ ಅಪರಾ ಏಕಾದಶಿ ವ್ರತ ಆಚರಿಸಿ ದ್ವಾದಶಿಯಂದು ಆ ವ್ರತದ ಪುಣ್ಯವನ್ನು  ಪಿಶಾಚಿಯಾಗಿದ್ದ ಮಹಿಧ್ವಜನಿಗೆ ಧಾರೆ ಎರೆದರು. ಮಹಿಧ್ವಜ ಪಿಶಾಚ ರೂಪದಿಂದ ಮುಕ್ತಿಹೊಂದಿದ. 

ಈ ವ್ರತದ ಆಚರಣೆಯಿಂದ ಬ್ರಹ್ಮಹತ್ಯಾ ದೋಷ, ಭೂತಬಾಧೆ, ದುಷ್ಟಯೋನಿಯಲ್ಲಿ ಜನನ, ಪರನಿಂದೆ ಇತ್ಯಾದಿ ಪಾಪಗಳಿಂದ ಮುಕ್ತಿ ದೊರೆಯುತ್ತದೆ. 
ಪರಸ್ತ್ರೀ ಮೋಹದಿಂದ, ಸುಳ್ಳುಸಾಕ್ಷಿ ಯಿಂದ, ಮೋಸಮಾಡಿದ್ದರಿಂದ, ಸುಳ್ಳು ಹೇಳಿದ್ದರಿಂಧ, ಅನ್ಯಥಾ ವಾದದಿಂದ, ಅಭಕ್ಷ ಭಕ್ಷಣದಿಂದ ಅಲ್ಲದೇ ಅನೇಕ ಪಾಪಕರ್ಮಗಳವಶಾತ್ ಪರಿತಪಿಸುತ್ತಿರುವವರು ಈ ವ್ರತಾಚರಣೆಯಿಂದ ಪಾಪಮುಕ್ತಿ ಪಡೆಯುತ್ತಾರೆ. ಯುದ್ಧದಿಂದ ಓಡಿಹೋದ ಕ್ಷತ್ರೀಯ, ಗುರುವಿಗೆ ದ್ರೋಹಬಗೆದ ಶಿಷ್ಯನಿಗೆ ನರಕವೇ ಗತಿ  ಆದರೆ ಅಪರಾ ಏಕಾದಶಿ ವ್ರತ ಆಚರಿಸಿದರೆ ಪ್ರಾಯಶ್ಚಿತ್ತವಾಗುತ್ತದೆ. 

ಈ ವ್ರತಾಚರಣೆಯಿಂದ ಪುಷ್ಕರ ಕ್ಷೇತ್ರದಲ್ಲಿ ಮೂರುಬಾರಿ ಸ್ನಾನದ ಫಲ, ಗಂಗೆಯಲ್ಲಿ ಮಿಂದು ಪಿಂಡಪ್ರದಾನ ಮಾಡಿದ ಪುಣ್ಯ ಲಭಿಸುತ್ತದೆ.ಸೂರ್ಯ ಮಕರದಲ್ಲಿದ್ದಾಗ ಪ್ರಯಾಗದಲ್ಲಿ ಮಾಘ ಸ್ನಾನ ಮಾಡಿದ ಫಲ, ಶಿವರಾತ್ರಿ ವ್ರತಾಚರಣೆ ಫಲ, ಗುರು ಸಿಂಹದಲ್ಲಿದ್ದಾಗ ಗೋದಾವರಿ ನದಿ ಸ್ನಾನದ ಫಲ, ಕುಂಭದಲ್ಲಿದ್ದಾಗ ಬದರಿ-ಕೇದಾರ ಯಾತ್ರೆಯ ಫಲ, ಸೂರ್ಯಗ್ರಹಣ ಕಾಲದಲ್ಲಿ ಕುರುಕ್ಷೇತ್ರದಲ್ಲಿ ಸ್ನಾನ ಮಾಡಿದ ಫಲ ದೊರೆಯುತ್ತದೆ, ಸ್ವರ್ಣ, ಆನೆ, ಕುದುರೆ, ಇಲ್ಲವೆ ಕರುವಿನೊಂದಿಗೆ ಹಸುವನ್ನು ಭೂಮಿ, ಬಂಗಾರ ಸಹಿತ ದಾನ ಮಾಡಿದ ಫಲ ಈ ವ್ರತದಿಂದ ದೊರೆಯುತ್ತದೆ. 

ಇದು ಪಾಪವೆಂಬ ವೃಕ್ಷವನ್ನು ಕಡಿಯುವಂಥ ಕೊಡಲಿಯಾಗಿದೆ. ಪಾಪವೆಂಬ ದಟ್ಟಡವಿಯನ್ನು ಸುಡುವಿ ಅಗ್ನಿಎನಿಸಿದೆ. ಮನುಷ್ಯನ ಪಾಪವೆಂಬ ಅಂಧಕಾರವನ್ನು ಅಳಿಸುವ ಸೂರ್ಯನ ಬೆಳಕಾಗಿದೆ. ಇದನ್ನು ಆಚರಿಸಿದವರು ಎಲ್ಲ ಪಾಪಗಳಿಂದ ಮುಕ್ತಿಪಡೆದು ವಿಷ್ಣುಲೋಕ ಪಡೆಯುತ್ತಾರೆ.

ಈ ವ್ರತದ ಮಹಿಮೆಯನ್ನು ಲೋಕಹಿತಕ್ಕಾಗಿ ಶ್ರೀಕೃಷ್ಣ ನೆಪಮಾತ್ರಕ್ಕೆ ಧರ್ಮರಾಜನಿಗೆ ಹೇಳಿರುವನು. ಇದನ್ನು ಓದಿದರೂ, ಕೇಳಿದರೂ ಎಲ್ಲ ಪಾಪದಿಂದ ಮುಕ್ತಿ ಸಿಗುವುದು ಇದಕ್ಕೆ ಸಂದೇಹ ಬೇಡ.
ಶ್ರೀಕೃಷ್ಣಾರ್ಪಣಮಸ್ತು
***

ಅಂದು ಶ್ರೀವಿಷ್ಣುವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. 

ಈ ಏಕಾದಶಿಯಂದು ಉಪವಾಸ ವ್ರತ ಕೈಗೊಂಡರೆ ಸಕಲ ಸಂಕಷ್ಟವೂ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. 

ಅಪರಾ ಏಕಾದಶಿ ಮಾಡುವುದು ಹೇಗೆ ಹಾಗೂ ಅದರ ಮಹತ್ವ ಹೀಗಿದೆ

   
ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿ ಎನ್ನುವರು. ಈ ಏಕಾದಶಿಯಂದು ಶ್ರೀವಿಷ್ಣುವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.

ಈ ಉಪವಾಸವನ್ನು ನಾವು ಆಚರಿಸಿದರೆ ನಮ್ಮ ದುಃಖ, ಕಷ್ಟ, ಕಾರ್ಪಣ್ಯಗಳೆಲ್ಲವೂ ದೂರಾಗುತ್ತದೆ ಎಂಬ ನಂಬಿಕೆಯಿದೆ. ಸೋಮವಾರದಂದು ಆಚರಿಸಲಿರುವ ಅಪರಾ ಏಕಾದಶಿಯನ್ನು ಸಾಮಾನ್ಯವಾಗಿ ಜಲಕ್ರಿ ಏಕಾದಶಿ, ಅಚಲ ಏಕಾದಶಿ ಮತ್ತು ಭದ್ರಕಾಳಿ ಏಕಾದಶಿ ಎಂದೂ ಕೂಡ ಕರೆಯಲಾಗುತ್ತದೆ. ಅಪರಾ ಏಕಾದಶಿಯ ಮಹತ್ವವೇನು ಗೊತ್ತಾ..?

​ಶ್ರೀ ಹರಿಯ ವಿಶೇಷ ಅವತಾರಕ್ಕೆ ಪೂಜೆ

ಅಪರಾ ಏಕಾದಶಿಯಂದು ಶ್ರೀವಿಷ್ಣುವಿನ ಇನ್ನೊಂದು ಅವತಾರವಾದ ವಾಮನ ಅವತಾರವನ್ನು ಪೂಜಿಸಲಾಗುತ್ತದೆ. ಈ ದಿನದಂದು ವಾಮನ ಅವತಾರವನ್ನು ಪೂಜಿಸಿದರೆ ಮನುಷ್ಯನು ತನ್ನೆಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆಂದು ನಂಬಲಾಗಿದೆ. ಈ ದಿನ ಗಂಗಾ ಸ್ನಾನಕ್ಕೂ ಕೂಡ ಅಷ್ಟೇ ಮಹತ್ವವಿದೆ. ಅಪರಾ ಏಕಾದಶಿಯಲ್ಲಿ ಗಂಗಾ ಸ್ನಾನ ಮಾಡಿದರೆ ಕೂಡ ಪಾಪಗಳು ಪರಿಹಾರವಾಗುತ್ತದೆ ಎನ್ನಲಾಗಿದೆ. ಆದರೆ ಪ್ರಸ್ತುತ ಲಾಕ್‌ಡೌನ್‌ನಿಂದ ಇದು ಸಾಧ್ಯವಿಲ್ಲ. ಆದರೂ ಕೂಡ ಚಿಂತಿಸುವ ಅಗತ್ಯವಿಲ್ಲ. ಒಂದು ವೇಳೆ ಮನೆಯಲ್ಲಿ ಗಂಗಾ ಜಲವಿದ್ದರೆ ಆ ನೀರನ್ನು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಬಹುದು.

​ಅಪರಾ ಏಕಾದಶಿಯ ಮುಹೂರ್ತ

please ask your kula purohita for commencement and ending time.

​ಅಪರಾ ಏಕಾದಶಿಯ ಪೂಜಾ ವಿಧಿ

ಅಪರಾ ಏಕಾದಶಿಯಂದು ಬೆಳಗ್ಗೆ ಸ್ನಾನ ಮಾಡಿ ಶುಚಿಯಾಗಿ ವಿಷ್ಣು ದೇವರನ್ನು ಪ್ರಾರ್ಥಿಸಿ, ವ್ರತವು ನಿರ್ವಿಘ್ನವಾಗಿ ಮುಕ್ತಾಯಗೊಳ್ಳಲಿ ಎಂದು ಮನಪೂರ್ವಕವಾಗಿ ಬೇಡಿಕೊಂಡು ಉಪವಾಸ ವ್ರತವನ್ನು ಆರಂಭಿಸಿ. 

ತದನಂತರ ಗಂಗಾ ಜಲದಲ್ಲಿ ವಿಷ್ಣುವಿನ ಫೋಟೋವನ್ನು ಹಾಗೂ ವಾಮನ ಪೋಟೋವನ್ನು ಶುದ್ಧೀಕರಿಸಿ ಪೂಜೆಯನ್ನು ಪ್ರಾರಂಭಿಸಿ. 

ಪೂಜೆ ಪ್ರಾರಂಭಿಸುವ ಮೊದಲು ಅಕ್ಷತೆ, ತಿಲಕ, ಬಿಳಿಬಣ್ಣದ ಹೂವು, ಫಲವನ್ನು ಎತ್ತಿಟ್ಟುಕೊಳ್ಳಿ. 

ಪೂಜೆ ಆರಂಭವಾಗುತ್ತಿದ್ದಂತೆ ಈ ಎಲ್ಲಾ ವಸ್ತುವನ್ನು ದೇವರಿಗೆ ಅರ್ಪಿಸಿ, ಈ ದಿನ ಬೆಳಗ್ಗೆ ಮತ್ತು ಸಂಜೆ ದೇವಸ್ಥಾನಕ್ಕೆ ಹೋಗಿ ದೇವರ ಪೂಜೆಯನ್ನು ಮಾಡಬೇಕು. 

ಇದೀಗ ಲಾಕ್‌ಡೌನ್‌ ನಲ್ಲಿ ಹೋಗಲು ಸಾಧ್ಯವಿಲ್ಲದ ಕಾರಣ ಮನೆಯಲ್ಲಿರುವ ದೇವರ ಕೋಣೆಯಲ್ಲೇ ಪೂಜೆಯನ್ನು ಮಾಡಿ. ಪೂಜೆಯು ಸಂಪೂರ್ಣ ಮುಗಿದ ನಂತರ, ಹಣ್ಣುಗಳನ್ನು ಅಥವಾ ನಿಮ್ಮ ಕೈಲಾದಷ್ಟು ಧನ, ಫಲಾಹಾರವನ್ನು ನಿರ್ಗತಿಕರಿಗೆ ಮತ್ತು ಬ್ರಾಹ್ಮಣರಿಗೆ ದಾನ ಮಾಡಬೇಕು.

​ಜಾಗರಣೆ

ಅಪರಾ ಏಕಾದಶಿಯಂದು ನಿಮಗೆ ಸಾಧ್ಯವಾದರೆ ರಾತ್ರಿಯಿಡಿ ಎಚ್ಚರವಿದ್ದು, ವಿಷ್ಣುವಿನ ಸ್ತೋತ್ರಗಳನ್ನು ಪಠಿಸಿ. 

ಒಂದು ವೇಳೆ ನಿಮ್ಮ ಕೈಯಲ್ಲಿ ಜಾಗರಣೆ ಮಾಡಲು ಸಾಧ್ಯವಾಗದಿದ್ದರೆ ಹಾಸಿಗೆಯ ಮೇಲೆ ಮಲಗುವ ಬದಲು ನೆಲದ ಮೇಲೆ ಮಲಗಿಕೊಳ್ಳಬಹುದು. 

ಮರುದಿನ ಬೆಳಗ್ಗೆ ಸೂರ್ಯೋದಯದ ಮುನ್ನ ಎದ್ದು, ಸ್ನಾನ ಮಾಡಿ ನಂತರ ವಿಷ್ಣುವಿಗೆ ಧೂಪ, ದೀಪವನ್ನು ಬೆಳಗಿ ನಿನ್ನೆಯ ಉಪವಾಸ ವ್ರತಕ್ಕೆ ಧನ್ಯವಾದವನ್ನು ಸಲ್ಲಿಸಿ.

 ನಂತರ ಸೂರ್ಯದೇವನಿಗೂ ಕೂಡ ತುಳಸಿ ಹಾಕಿದ ನೀರನ್ನು ಅರ್ಪಿಸಿ, ತುಳಸಿಯನ್ನು ಪೂಜಿಸಿ. ಈ ರೀತಿ ಮಾಡುವುದರಿಂದ ನಮ್ಮೆಲ್ಲಾ ಬಯಕೆಗಳು ಈಡೇರುತ್ತದೆ ಎಂದು ನಂಬಲಾಗಿದೆ.

​ಉಪವಾಸದ ನಂತರ ಈ ತಪ್ಪನ್ನು ಮಾಡದಿರಿ

ಅಪರಾ ಏಕಾದಶಿ ವ್ರತವನ್ನು ಕೈಗೊಂಡವರು ಕೆಲವೊಂದು ವಸ್ತುಗಳ ಬಗ್ಗೆ ಹೆಚ್ಚು ಜಾಗೃತಿಯನ್ನು ವಹಿಸಬೇಕು.

 ಇಲ್ಲವಾದಲ್ಲಿ ಅವರು ಉಪವಾಸ ಮಾಡಿದ ಫಲವನ್ನು ಅನುಭವಿಸಲಾರರು. ಉಪವಾಸ ವ್ರತ ಮಾಡುವವರು ಆ ದಿನದಂದು ಟೂತ್‌ಬ್ರಷ್‌ನ್ನು ಉಪಯೋಗಿಸುವ ಬದಲು ಕಹಿ ಬೇವಿನ ಕಡ್ಡಿಯನ್ನು ಅಥವಾ ಕೈ ಬೆರಳುಗಳಿಂದಲೇ ಹಲ್ಲನ್ನು ಶುಚಿಗೊಳಿಸಿಕೊಳ್ಳಬೇಕು. 

ಅಪರಾ ಏಕಾದಶಿಯ ಉಪವಾಸ ವ್ರತದಂದು ಎಲೆ ಅಡಿಕೆಯನ್ನಾಗಲಿ, ಮದ್ಯ, ಧೂಮಪಾನವನ್ನಾಗಲಿ ಸೇವಿಸಬಾರದು. 

ಹಾಸಿಗೆಯ ಮೇಲೆ ಮಲಗುವ ಬದಲು ನೆಲದ ಮೇಲೆ ಮಲಗಿರಿ. 
ಅಕ್ಕಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು ಹಾಗೂ ಆ ಸಮಯದಲ್ಲಿ ನಮ್ಮ ಮನಸಿನಲ್ಲೂ ಕೂಡ ಯಾರೊಬ್ಬರ ಬಗ್ಗೆಯು ಅಸೂಯೆ ಪಡಬಾರದು.
ಕೆಟ್ಟ ವಿಷಯಗಳ ಬಗ್ಗೆ ಅನಗತ್ಯವಾಗಿ ಚರ್ಚೆ ಮಾಡಬಾರದು.
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು.
******* 

೫) ಜ್ಯೇಷ್ಠ ಶುಕ್ಲ ಏಕಾದಶಿ - ನಿರ್ಜಲ 
- ಆಹಾರ ಸಮೃದ್ಧಿ
ನಿರ್ಜಲಾ_ಏಕಾದಶಿ

ಭೀಮಸೇನೋ ಸಮೋ ನಾಸ್ತಿ ಸೇನಯೋರುಭಯೋ ರಪಿ |
ಪಂಡಿತ್ಯೇ ಚ ಪಟುತ್ವೇ ಚ ಶೂರತ್ವೇ ಚ ಬಲೇ ಪಿ ಚ ||

ಊಟ ಎಂಧರೆ ಭೀಮನಿಗೆ ಬಹಳ ಇಷ್ಟ. ಹತ್ತಾರು ಜನರಿಗೆ ಆಗುವಷ್ಟು ಆನ್ನವನ್ನು ಒಬ್ಬನೇ ಉಂಡು ಮುಗಿಸುತ್ತಿದ್ದ. ಎಷ್ಟು ಉಂಡರೂ ಹಸಿವು ಮಾತ್ರ ತಣಿಯುತ್ತಿರಲಿಲ್ಲ. ಆತನ ಉದರದಲ್ಲಿ "ವ್ರಕ" ಎಂಬ ವಿಶೇಷ ಅಗ್ನಿ ಇದೆ. ಇಂಥ ಜಠರಾಗ್ನಿಯನ್ನು ಶಾಂತವಾಗಿ ಇಡುವದು ಬಹಳ ಸಾಹಸದ ಕೆಲಸ. 

ಕುಂತೀದೇವಿ, ಯುಧಿಷ್ಟಿರ, ನಕುಲ, ಸಹದೇವ, ದ್ರೌಪದಿದೇವಿ ಎಲ್ಲರೂ ಏಕಾದಶಿ ವ್ರತವನ್ನು ತಪ್ಪದೇ ಮಾಡುತ್ತಿದ್ದರು. ಭೀಮನಿಗೂ ಏಕಾದಶಿ ವ್ರತವನ್ನು ಮಾಡಬೇಕೆಂಬ ಆಶೆ ಆದರೆ ಹಸಿವನ್ನು ತಾಳುವದು ಹೇಗೆ ?  ಆಗ ಭೀಮ  " ಹೇ ಪಿತಾಮಹ ನಾನು ವ್ರಕೋದರ, ನನ್ನ ಹೊಟ್ಟೆಯಲ್ಲಿರುವ ಅಗ್ನಿಯನ್ನು ಶಾಂತಗೊಳಿಸಿ, ಏಕಾದಶಿ ವ್ರತವನ್ನು ಆಚರಿಸಲು ಒಂದು ಉಪಾಯ ಹೇಳಿ" ಎಂದು ಮುತ್ತಾತ ವ್ಯಾಸರನ್ನೇ ಕೇಳುತ್ತಾರೆ.

" ಭೀಮ ನೀನು ಮಹಾಬಲಿ, ನೀನು ಎಷ್ಟು ಊಟ ಮಾಡುತ್ತೀಯೋ ಅಷ್ಟೇ ಉಪವಾಸವನ್ನೂ ಮಾಡುವ ಶಕ್ತಿ ನಿನ್ನಲ್ಲಿದೆ. ನೀರು ಸಹ ಕುಡಿಯದೇ, ಕೇವಲ ತುಳಸಿ-ತೀರ್ಥ ಸ್ವೀಕರಿಸಿ ಜ್ಯೇಷ್ಠಮಾಸ, ಶುಕ್ಲಪಕ್ಷದ ನಿರ್ಜಲಾ ಏಕಾದಶಿ ವ್ರತವನ್ನು ಆಚರಿಸು. ವರ್ಷದ ಇಪ್ಪತ್ನಾಲ್ಕೂ ಏಕಾದಶಿ ವ್ರತ ಆಚರಿಸಿದ ಫಲ ಬರುತ್ತದೆ" ಎಂದು ವ್ಯಾಸರು ಭೀಮನ ಬಲವನ್ನು ಜ್ಞಾಪಿಸಿ, ವಿಶ್ವಾಸ ಮೂಡಿಸಿದರು.

ಅದರಂತೆ ಭೀಮ ಉಪವಾಸ ವ್ರತವನ್ನು ಆಚರಿಸಿದ. ತನ್ನ ಹೊಟ್ಟೆಯಲ್ಲಿದ್ದ ಅಗಾಧವಾದ ಅಗ್ನಿಯನ್ನು ಶ್ರೀಕೃಷ್ಣನ ನಾಮಸ್ಮರಣೆಯಿಂದ ತಣಿಸಿದ. ಲೋಕಕಲ್ಯಾಣಾರ್ಥವಾಗಿ ಭೀಮಸೇನ ದೇವರೇ ಈ ವ್ರತವನ್ನು ಆಚರಿಸಿ ತೋರಿಸಿದ್ದಾರೆ. ಎಂಥ ಹಸಿವೆಯನ್ನೂ ಕೂಡ ಕೇವಲ ಭಗವಂತನ ನಾಮ ಸ್ಮರಣೆಯಿಂದ ತಾಳಬಹುದು. ಯಾರು ಭಗವಂತನ ಧ್ಯಾನದಲ್ಲಿ ಇರುವರೋ ಅವರಿಗೆ ಹಸಿವಯೇ ಆಗುವದಿಲ್ಲ ! ಅವರ ಮನೆಯಲ್ಲಿ ಅನ್ನ, ಆಹಾರದ ಕೊರತೆ ಆಗುವದಿಲ್ಲ. ಉದರ ಸಂಬಂಧಿ ರೋಗಗಳು ಬರುವದಿಲ್ಲ.
ಶ್ರೀಕೃಷ್ಣಾರ್ಪಣಮಸ್ತು.
*ಕೃಪೆ Gururajachar herkal
Sakshi panchanga
***
ನಿರ್ಜಲ ಏಕಾದಶಿಯ ಪುಣ್ಯ :- 
🌺🌺🌺🌺🌺🌺🌺
ಪುರಾಣಕಾಲದಲ್ಲಿ   ವಾರಣಾಸಿಯ  ಒಂದು ಗ್ರಾಮದಲ್ಲಿ  ವೇದಶಾಸ್ತ್ರ ಪಾರಂಗತನಾದ  ದೇವಶರ್ಮ ಎಂಬ ಬ್ರಾಹ್ಮಣ ವಾಸವಾಗಿದ್ದನು. ಆತನ ಪತ್ನಿ ನಾಗರತ್ನಮ್ಮ ಹಾಗೂ  ಮಗ  ಸುಮಂತ.  ಅದು ವರ್ಷದ ಜೇಷ್ಠ  ಮಾಸದ ಬಿಸಿಲಿನ ತಾಪ, ಬ್ರಾಹ್ಮಣ  ತಪಸ್ಸು ಮಾಡ ಬೇಕೆಂದು  ಕಾಡಿಗೆ ಹೋದನು. ಭಗವಂತನ ಧ್ಯಾನ ಮಾಡುತ್ತಾ ತಪಸ್ಸು ಮಾಡುತ್ತಿದ್ದನು.  ಜೇಷ್ಠ ಮಾಸದ  ವಿಪರೀತ ಬಿಸಿಲು, ಸೆಕೆ ಹಾಗೂ ಬಾಯಾರಿಕೆಯಿಂದ  ಬಳಲಿದ ಅವನು  ಸ್ವಲ್ಪ ನೀರು ಕುಡಿದು ಬರೋಣವೆಂದು  ಹತ್ತಿರದಲ್ಲಿದ್ದ ಸರೋವರಕ್ಕೆ ಬಂದನು. ಸಾಕಷ್ಟು ನೀರು ಕುಡಿದು,  ಕೈಕಾಲು ಮುಖ ತೊಳೆದುಕೊಂಡು ಅಲ್ಲಿದ್ದ ಮರದ ನೆರಳಲ್ಲಿ  ಮಲಗಿದನು. ತಂಪಾದ ಗಾಳಿಯಿಂದಾಗಿ ಅವನಿಗೆ ನಿದ್ರೆ ಹತ್ತಿತು. ಆ ಸಮಯದಲ್ಲಿ ಕಾಡಿನ ಪ್ರಾಣಿಗಳಾದ ಜಿಂಕೆ, ಮೊಲ, ಸಾರಂಗ, ತಮ್ಮ ಮರಿಗಳೂಂದಿಗೆ ನೀರು ಕುಡಿಯಲು ಬಂದವು. ಅಲ್ಲಿ ಮಲಗಿ ನಿದ್ರಿಸುತ್ತಿದ್ದ ಬ್ರಾಹ್ಮಣನನ್ನು  ನೋಡಿ ಭಯದಿಂದ ಅವು ನೀರು ಕುಡಿಯದೆ ಹಾಗೆಯೇ ಓಡಿಹೋಗುತ್ತಿದ್ದವು. ಬಿಸಿಲಿನ ಝಳದಿಂದ  ಮರಿಗಳಿಗೆ ನೀರು ಇಲ್ಲದೆ  ಓಡುತ್ತಿರುವಾಗಲೇ ಬಿದ್ದು ಸತ್ತು ಹೋದವು.  

ಸ್ವಲ್ಪ ಹೊತ್ತಿಗೆ ಬ್ರಾಹ್ಮಣನಿಗೆ ಎಚ್ಚರವಾಯಿತು. ಇದನ್ನೆಲ್ಲಾ ನೋಡಿದಾಗ ಅವನಿಗೆ ಬಹಳ ಹೆದರಿಕೆ ಆಯ್ತು. ಅಯ್ಯೋ ಭಗವಂತ ನನ್ನ ಕಾರಣದಿಂದಾಗಿ ಈ ಮೂಕಪ್ರಾಣಿಗಳು ಸಾಯುವಂತಾಯಿತಲ್ಲ ಇದರಿಂದ ಎಂತಹ ಘೋರ ಶಾಪಕ್ಕೆ ಗುರಿಯಾದೆ  ಎಂದು ಕಣ್ಣೀರು ಹಾಕಿದ. ಬೇಸರದಿಂದಲೇ  ಮನೆಗೆ ಬಂದನು. ಆತಂಕಕ್ಕೆ ಅವನಿಗೆ ಜ್ವರ ಬಂದಿತು. ಪಾಪಪ್ರಜ್ಞೆ  ಅವನನ್ನು ಕಾಡುತ್ತಿದ್ದು ಅದೇ ಚಿಂತೆಯಲ್ಲಿಯೇ ಅವನು ಮರಣ ಹೊಂದಿದನು. ಅವನ ಪತ್ನಿಯು ಅವನ ಜೊತೆ ಸಹಗಮನ ಹೋದಳು. ಇವರಿಬ್ಬರು ಸತ್ತು ನರಕಕ್ಕೆ ಹೋದರು.  ಮತ್ತೊಂದು ಜನ್ಮದಲ್ಲಿ ಇಬ್ಬರೂ  ಗಂಡು-ಹೆಣ್ಣು  ಪಕ್ಷಿಗಳಾಗಿ ಹುಟ್ಟಿ ಒಟ್ಟಿಗೆ ಇದ್ದು ಹಿಂದಿನ ಜನ್ಮದ ಮಗ ಸುಮಂತನ  ಮನೆಯ ಮುಂದಿರುವ ಮರದ ಮೇಲೆ ನೆಲೆಸಿದವು. 

ಅವಕ್ಕೆ ಪೂರ್ವಜನ್ಮದ ಸ್ಮರಣೆ ಇದ್ದ ಕಾರಣ, ಅವು ಜೋರು ಜೋರಾಗಿ ಅಳುತ್ತಾ  ಚೀರುತ್ತಿದ್ದವು. ಮಗ ಸುಮಂತನಿಗೆ  ಪಕ್ಷಿಗಳ  ಅಳು, ಚೀರಾಟ, ಕೇಳಲಾಗಲಿಲ್ಲ. ಅವನು ಅವುಗಳನ್ನು ಓಡಿಸುವ ಸಲುವಾಗಿ ಮರಕ್ಕೆ ಕಲ್ಲು, ಕೋಲು, ಹೊಡೆದರು ಅವು ಹೋಗಲಿಲ್ಲ. ಆದ್ದರಿಂದ ಅವನು ಮರದ ಕೆಳಗೆ ಬೆಂಕಿ ಹಾಕಿದನು. ಆ ಪಕ್ಷಿಗಳು ಬೆಂಕಿಯ ತಾಪ ತಾಳಲಾರದೆ  ಸತ್ತು ಬಿದ್ದವು. ಆ ರಾತ್ರಿ  ಸುಮಂತನ ಕನಸಿನಲ್ಲಿ ಜೋಡಿ ಪಕ್ಷಿಗಳು ಬಂದು, ನಾವು ನಿನ್ನ ತಂದೆ-ತಾಯಿಗಳು  ಎಂಬುದನ್ನು ತಿಳಿಸಿದರು. ಹಾಗೂ ನಾವು ಮಾಡಿದ ಪಾಪಕ್ಕಾಗಿ ಪಕ್ಷಿ ಜನ್ಮದಿಂದ ಇನ್ನೂ ಮುಕ್ತಿಸಿಕ್ಕಿಲ್ಲ ಎಂದರು. ಕನಸಿನಿಂದ ಎಚ್ಚೆತ್ತ ಅವನಿಗೆ ತುಂಬಾ ದುಃಖವಾಯಿತು. ತಂದೆ ತಾಯಿಗಳಿಗೆ  ಈ ಪಾಪದಿಂದ ಮುಕ್ತಿ ಹೇಗೆ ಕೊಡಿಸುವುದು ಎಂದು ಯೋಚಿಸುತ್ತಾ ಮಹಾಜ್ಞಾನಿಗಳಾದ ಪಂಡಿತರಿರುವ  ಕುಟೀರಕ್ಕೆ  ಬಂದನು. ಕಥೆಯನ್ನೆಲ್ಲ ಹೇಳಿದನು. ಮತ್ತು ತನ್ನ ತಂದೆ ತಾಯಿ ಪಾಪದಿಂದ ವಿಮೋಚನೆ ಪಡೆದು ಸ್ವರ್ಗಕ್ಕೆ ಹೋಗಬೇಕು ಏನು ಮಾಡಲಿ ಎಂದನು. 

ಋಷಿಗಳು,‌ ಎಲ್ಲವನ್ನೂ ಬಲ್ಲವರಾಗಿದ್ದರು ಅವರು ಹೇಳಿದರು ಪೂರ್ವಜನ್ಮದ ಪಾಪ ಕಠಿಣವಾಗಿದೆ. ಆದರೆ ಉಪಾಯವೊಂದಿದೆ, ಅದು ಜೇಷ್ಠ ಮಾಸದಲ್ಲಿ ಬರುವ ಏಕಾದಶಿಯಂದು ನಿರ್ಜಲ ಏಕಾದಶಿ ಅಂದರೆ  ನೀರನ್ನು ಕುಡಿಯದೇ  ವ್ರಥವನ್ನು ಆಚರಣೆ ಮಾಡಬೇಕು, ಹಾಗೂ  ಈ ಜೇಷ್ಠ ಮಾಸದ ಕಾಲದಲ್ಲಿ, ಪಶು-ಪಕ್ಷಿ,  ಜೀವ-ಜಂತುಗಳಿಗೆ ಆಹಾರ ನೀರಿನ ವ್ಯವಸ್ಥೆ ಮಾಡು . ಇದರಿಂದ ನಿನ್ನ ತಂದೆ-ತಾಯಿಗೆ ಮುಕ್ತಿ ಸಿಗುತ್ತದೆ ಎಂದರು. ಅವರ ಮಾತಿನಂತೆ  ಸುಮಂತನು ನಿಷ್ಠೆಯಿಂದ ನಿರ್ಜಲ ಏಕಾದಶಿ ವ್ರತ ಮಾಡಿದನು. ಜೇಷ್ಠಮಾಸ ಕಳೆಯುವವರೆಗೂ ಪಶುಪಕ್ಷಿಗಳಿಗೆ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಿದನು. ಅವನು ಮಾಡಿದ ಪುಣ್ಯದಿಂದಾಗಿ, ಅವನ ತಂದೆ ತಾಯಿಗಳಿಗೆ ಪಕ್ಷಿ ಜನ್ಮದಿಂದ ಮುಕ್ತಿ ದೊರಕಿ,  ಮಾನವ ಶರೀರ ಧಾರಣೆ ಮಾಡಿ ಬಂದು ಮಗನಿಗೆ ಆಶೀರ್ವಾದ ಮಾಡಿ   ವೈಕುಂಟಕ್ಕೆ ಹೋದರು. ಯಾವುದೇ ವ್ಯಕ್ತಿ ಯಾವ ವ್ರತವನ್ನು ಮಾಡದಿದ್ದರೂ  ವರ್ಷಕ್ಕೆ ಒಂದು ಸಾರಿ ನಿರ್ಜಲ  ಏಕಾದಶಿ ವ್ರತವನ್ನು ಮಾಡಿದರೆ ಅವರ ಸಕಲ ಪಾಪಗಳು ಪರಿಹಾರವಾಗಿ. ವೈಕುಂಠ  
ಪ್ರಾಪ್ತಿಯಾಗುತ್ತದೆ. 
🌹ಪಂಡಿತ ಶ್ರೀ ಲಕ್ಷ್ಮಣ ರಾವ್
*


೬) ಜ್ಯೇಷ್ಠ ಬಹುಳ ಏಕಾದಶಿ - ಯೋಗಿನಿ - 
ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)

Jyeshta Krishna Ekadashi - Yogini ekadashi


ಯೋಗಿನಿ #ಏಕಾದಶಿ #ಮಹಿಮೆ

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೆ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||

ಅಲಕಾಪುರಿಯ ರಾಜ ಕುಬೇರ ಕೈಲಾಸವಾಸಿ ಗಂಗಾಧರ ಶ್ರೀಪರಮೇಶ್ವರನ ಭಕ್ತ. ಆತ ಸದಾ ಶಿವಪೂಜೆಯಲ್ಲಿ ನಿರತನಾಗಿರುತ್ತಿದ್ದ. ಆದ್ದರಿಂದ ಶಿವನ ಪೂಜೆಗೆ ಹೂವು ತರಲೆಂದು ಹೇಮಮಾಲಿ ಎಂಬ ಯಕ್ಷನನ್ನು ನೇಮಿಸಿದ್ದ. ಹೇಮಮಾಲಿಗೆ ಆಕರ್ಷಕ ಕಣ್ಣುಳ್ಳ ಸ್ವರೂಪವತಿ ಎಂಬ ಪತ್ನಿಯಿದ್ದಳು. ಹೇಮಮಾಲಿ ದಿನವೂ ಮಾನಸರೋವರಕ್ಕೆ ಹೋಗಿ ಹೂವು ತಂದು ಕುಬೇರನಿಗೆ ಕೊಡುತ್ತಿದ್ದ. 

ಆ ಹೂಗಳಿಂದ ಕುಬೇರ ಶಿವನನ್ನು ಅಲಂಕರಿಸಿ ಅರ್ಚಿಸುತ್ತಿದ್ದ. ಒಮ್ಮೆ ಕುಬೇರನಿಗೆ ಮಧ್ಯಾಹ್ನದ ಪೂಜೆಗೆ ಪುಷ್ಪವಿರದೇ ತುಂಬಾ ಸಿಟ್ಟು ಬಂತು. ಅಂದು ಹೇಮಮಾಲಿ ಮಾನಸರೋವರದಿಂದ ಹೂಗಳನ್ನು ಕೊಯ್ದು ತೆಗೆದುಕೊಂಡು ಹೋಗಿ ಕುಬೇರನಿಗೆ ಕೊಡದೇ ಸೀದಾ ಮನೆಗೆ ಹೋಗಿ ಪ್ರೀಯಪತ್ನಿಗೆ ಕೊಟ್ಟ. ತನ್ನ ಕೆಲಸವನ್ನೇ ಮರೆತ, ಹೆಂಡತಿಯೊಂದಿಗೆ ಸರಸ ಸಲ್ಲಾಪದಲ್ಲಿ ಕಾಲಕಳೆದ. 

ಕುಬೇರನು ಹೇಮಮಾಲಿ ಏನು ಮಾಡುತ್ತಿದ್ದಾನೆ ಎಂದು ತಿಳಿಯಲು ರಾಜಭಟರನ್ನು ಆತನ ಮನೆಗೆ ಕಳಿಸುತ್ತಾನೆ. ಅವರು ಹೇಮಮಾಲಿಯನ್ನು ಆಸ್ಥಾನಕ್ಕೆ ಕರೆತರುತ್ತಾರೆ. ಹೇಮಮಾಲಿ ಕರ್ತವ್ಯವನ್ನು ತನ್ನ ತಪ್ಪು ಒಪ್ಪಿಕೊಳ್ಳುತ್ತಾನೆ.
ನಿನ್ನ ಕೆಟ್ಟ ವರ್ತನೆಯಿಂದ ದೇವರ ಕಾರ್ಯಕ್ಕೆ ಅಡಚಣೆಯಾಗಿದೆ. ಇದರಿಂದ ನಮ್ಮ ಅನುಷ್ಠಾನವೂ ಭಂಗವಾಗಿದೆ. ದೇವತೆಗಳಿಗೂ ಅಪಮಾನವಾಗಿದೆ. ಆದ್ದರಿಂದ ಹೇಮಮಾಲಿಯೆ ನೀನು ಇನ್ನು ಮುಂದೆ ಈ ಯಕ್ಷಲೋಕದಿಂದ ಮತ್ತು ಅಲಕಾಪುರಿಯಿಂದ ದೂರಾಗಿ, ಭೂಮಿಯ ಮೇಲೆ ಕುಷ್ಟರೋಗಿಯಾಗಿ ಹೆಂಡತಿಯಿಂದ ದೂರವಿದ್ದು ಕಷ್ಟವನ್ನು ಅನುಭವಿಸು ಎಂದು ಕುಬೇರ ಶಾಪ ಕೊಡುತ್ತಾನೆ. 

ಅಲಕಾಪುರಿಯಿಂದ ಹೊರಬಂದ ಹೇಮಮಾಲಿ ಕುಷ್ಟರೋಗಿಯಾಗಿ ಅಡವಿಯಲ್ಲಿ ತಿರುಗುತ್ತಾನೆ. ಅನ್ನ-ನೀರು ಇಲ್ಲದೇ ಬಳಲುತ್ತಾನೆ. ನೋವಿನಿಂದ ನಿದ್ರೆಯಿಲ್ಲದೇ ರಾತ್ರಿಗಳನ್ನು ಕಳೆಯುತ್ತಾನೆ. ಆದರೆ ಆ ಕಷ್ಟದಲ್ಲಿಯೂ ಶಿವನ ಪೂಜೆ ಮಾಡುತ್ತಾನೆ, ತನ್ನ ಹಿಂದಿನ ಬದುಕನ್ನು ನೆನೆಯುತ್ತ ಜೀವನ ನಡೆಸುತ್ತಾನೆ. 

ಹೀಗೆ ಬೆಟ್ಟ-ಬಯಲು ದಾಟುತ್ತ ಹಿಮಾಚಲ ಪರ್ವತಕ್ಕೆ ಬರುತ್ತಾನೆ. ಅಲ್ಲಿ ಆತನಿಗೆ ಭವಿಷ್ಯದ ಬೆಳಕು ಕಂಡಂತಾಗುತ್ತದೆ. ಆ ಪರ್ವತಗಳ ಮಧ್ಯೆ ಚಿರಂಜೀವಿಯಾದ ಮಾರ್ಕಂಡೇಯ ಋಷಿಗಳ ಭೆಟ್ಟಿಯಾಗುತ್ತದೆ. ಸದಾ ಲೋಕಹಿತವನ್ನೇ ಬಯಸುವ ಕರುಣಾಮಯಿಗಳಾದ ಮಾರ್ಕಂಡೇಯ ಋಷಿಗಳು ಹೇಮಮಾಲಿಯ ಕಥೆಯನ್ನು ಕೇಳಿ 

ಯಕ್ಷ ಹೇಮಮಾಲಿ ನೀನು ಸತ್ಯವನ್ನೇ  ಹೇಳಿರುವಿ, ಆದ್ದರಿಂದ  ನಿನಗೆ ಒಂದು ಉಪವಾಸ ವ್ರತ ಹೇಳುತ್ತೇನೆ. ಆ ವ್ರತವನ್ನು ಆಚರಿಸಉವದರಿಂದ ಶಾಪವಿಮೋಚನೆ ಆಗುತ್ತದೆ. ಈ ಕಷ್ಟದಿಂದ ಮುಕ್ತಿ ಸಿಗುತ್ತದೆ. ಜ್ಯೇಷ್ಠಮಾಸ ಕೃಷ್ಣಪಕ್ಷದಲ್ಲಿ ಬರುವ ಯೋಗಿನಿ ಏಕಾದಶಿಯನ್ನು ಆಚರಿಸು. ಬೆಳಿಗ್ಗೆ ಅಮೃತ ಸಮಾನವಾದ ಮೃತ್ತಿಕಾ ಸ್ನಾನ, ತಿಲೋದಕ ಸ್ನಾನ ಮಾಡಿ ನಿತ್ಯಾನುಷ್ಠಾನಗಳನ್ನು ಮಾಡು. ಆಲದ ಮರದಲ್ಲಿ ಮಹಾವಿಷ್ಣುವಿನ ನಿತ್ಯ ಸಾನ್ನಿಧ್ಯ ಇರುವದರಿಂದ ವೃಕ್ಷಪೂಜೆ ಮಾಡು, ಶ್ರೀಮನ್ನಾರಾಯಣನನ್ನು ಸ್ತೋತ್ರಗಳಿಂದ ಅರ್ಚಿಸು-ಮೆಚ್ಚಿಸು, ಉಪವಾಸ ಜಾಗರಣೆ ಮಾಡು, ನಿನಗೆ ಶುಭವಾಗಲಿ.

ಎಂದು ಮಾರ್ಕಂಡೇಯ ಋಷಿಗಳು ಹೇಳಿದಂತೆ ಹೇಮಮಾಲಿ ಯೋಗಿನಿ ವ್ರತ ಆಚರಿಸಿ ಮತ್ತೆ ಮೊದಲಿನಂತೆ ಸುಂದರವಾದ ಯಕ್ಷರೂಪ ತಾಳಿ ಮನೆಗೆ ಮರಳುತ್ತಾನೆ. ಪತ್ನಿ ಸ್ವರೂಪವತಿಯೊಂದಿಗೆ ಸುಖವಾಗಿ ಜೀವನ ಸಾಗಿಸುತ್ತಾನೆ. ಶ್ರೀಕೃಷ್ಣನ ಆದೇಶದಂತೆ ಪಾಂಡವರಾಜ ಯುಧಿಷ್ಠಿರ ಪರಿವಾರ ಸಹಿತನಾಗಿ ಈ ವ್ರತ ಆಚರಿಸಿದ್ದಾನೆ

#Saakshi_panchanga*

( ಸಂಗ್ರಹ ಶ್ರೀಮತಿ ಪ್ರೇಮಾ ಅಚ್ಯುತರಾವ ಕುಲಕರ್ಣಿ- ಹುಬ್ಬಳ್ಳಿ )
***
ಯೋಗಿನಿ ಏಕಾದಶಿ ವ್ರತ: ಇಲ್ಲಿದೆ ವ್ರತದ ಪ್ರಯೋಜನ ಮತ್ತು ಆಚರಣೆಯ ವಿಧಾನ
ಯೋಗಿನಿ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನದಂದು ವಿಷ್ಣುವನ್ನು ಆರಾಧಿಸಲಾಗುತ್ತದೆ. ಯೋಗಿನಿ ಏಕಾದಶಿ ವ್ರತವನ್ನು ಆಚರಿಸುವುದರ ಮಹತ್ವ, ಪ್ರಯೋಜನ, ಆಚರಿಸುವ ವಿಧಾನ, ಆಚರಣೆಗೆ ಶುಭ ಸಮಯ ಮತ್ತು ಈ ವ್ರತದ ಹಿನ್ನೆಲೆ ಇಲ್ಲಿದೆ.
ನಿರ್ಜಲ ಏಕಾದಶಿ ನಂತರ ಮತ್ತು ದೇವಶಯನಿ ಏಕಾದಶಿಗೂ ಮುನ್ನ ಬರುವ ಏಕಾದಶಿಯನ್ನು 'ಯೋಗಿನಿ ಏಕಾದಶಿ' ಎಂದು ಕರೆಯಲಾಗುತ್ತದೆ. ಉತ್ತರ ಭಾರತದ ಪಂಚಾಂಗದ ಪ್ರಕಾರ, ಯೋಗಿನಿ ಏಕಾದಶಿ ಅಥವಾ 2020 ಯೋಗಿನಿ ಏಕಾದಶಿಯು ಆಶಾಡ ತಿಂಗಳ ಕೃಷ್ಣ ಪಕ್ಷದ ಅಮಯದಲ್ಲಿ ಬರುತ್ತದೆ ಹಾಗೂ ದಕ್ಷಣ ಭಾರತದ ಪಂಚಾಂಗದ ಪ್ರಕಾರ, 2020 ಯೋಗಿನಿ ಏಕಾದಶಿಯು ಜ್ಯೇಷ್ಠ ತಿಂಗಳ ಕೃಷ್ಣ ಪಕ್ಷದ ಸಮಯದಲ್ಲಿ ಬರುತ್ತದೆ.
ನಿರ್ಜಲ ಏಕಾದಶಿ ನಂತರ ಮತ್ತು ದೇವಶಯನಿ ಏಕಾದಶಿಗೂ ಮುನ್ನ ಬರುವ ಏಕಾದಶಿಯನ್ನು 'ಯೋಗಿನಿ ಏಕಾದಶಿ' ಎಂದು ಕರೆಯಲಾಗುತ್ತದೆ. ಉತ್ತರ ಭಾರತದ ಪಂಚಾಂಗದ ಪ್ರಕಾರ, ಯೋಗಿನಿ ಏಕಾದಶಿ ಅಥವಾ 2020 ಯೋಗಿನಿ ಏಕಾದಶಿಯು ಆಶಾಡ ತಿಂಗಳ ಕೃಷ್ಣ ಪಕ್ಷದ ಅಮಯದಲ್ಲಿ ಬರುತ್ತದೆ ಹಾಗೂ ದಕ್ಷಣ ಭಾರತದ ಪಂಚಾಂಗದ ಪ್ರಕಾರ, 2020 ಯೋಗಿನಿ ಏಕಾದಶಿಯು ಜ್ಯೇಷ್ಠ ತಿಂಗಳ ಕೃಷ್ಣ ಪಕ್ಷದ ಸಮಯದಲ್ಲಿ ಬರುತ್ತದೆ.
ಈ ದಿನ ವಿಷ್ಣುವನ್ನು ಪೂಜಿಸಲಾಗುತ್ತದೆ ಹಾಗೂ ಆತನ ಆಶೀರ್ವಾದವನ್ನು ಪಡೆಯಲು ಉಪವಾಸ ವ್ರತವನ್ನು ಕೈಗೊಳ್ಳಲಾಗುತ್ತದೆ. ಈ ವರ್ಷದ ಯೋಗಿನಿ ಏಕಾದಶಿಯನ್ನು 2020 ರ ಜೂನ್‌ 17 ರಂದು ಅಂದರೆ ನಾಳೆ ದೇಶದ ಹಲವೆಡೆ, ಹಲವು ವಿಷ್ಣು ಆರಾಧಕರು ಆಚರಿಸುತ್ತಾರೆ.
ಯೋಗಿನಿ ಏಕಾದಶಿಯ ಪ್ರಯೋಜನ:
ಯೋಗಿನಿ ಏಕಾದಶಿಯನ್ನು ಆಚರಿಸುವುದರಿಂದ ಎಲ್ಲಾ ಪಾಪಗಳು ನಿರ್ಮೂಲನೆಯಾಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಯೋಗಿನಿ ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ಸ್ವರ್ಗವು ಪ್ರಾಪ್ತಿಯಾಗುತ್ತದೆ. ಯೋಗಿನಿ ಏಕಾದಶಿಯು ಕೇವಲ ಒಂದು ಲೋಕದಲ್ಲಿ ಮಾತ್ರವಲ್ಲ, ತ್ರಿಲೋಕದಲ್ಲೂ ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ಏಕಾದಶಿ ಉಪವಾಸವನ್ನು ಆಚರಿಸಿದರೆ 88 ಸಾವಿರ ಬ್ರಾಹ್ಮಣರಿಗೆ ಆಹಾರವನ್ನು ನೀಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ.
year 2020 ಯೋಗಿನಿ ಏಕಾದಶಿಯ ಶುಭ ಸಮಯ:
2020 ಯೋಗಿನಿ ಏಕಾದಶಿ ದಿನಾಂಕ: ಜೂನ್‌ 17
ಏಕಾದಶಿ ಪ್ರಾರಂಭ: 2020 ರ ಜೂನ್‌ 16 ರಂದು ಬೆಳಗ್ಗೆ 5.40 ಕ್ಕೆ
ಏಕಾದಶಿ ಕೊನೆಗೊಳ್ಳುವ ಸಮಯ: 2020 ರ ಜೂನ್‌ 17 ರಂದು ಬೆಳಗ್ಗೆ 4.50 ಕ್ಕೆ
ಪಾರಣ ಸಮಯ: 2020ರ ಜೂನ್‌ 18 ರಂದು ಬೆಳಗ್ಗೆ 5.28 ರಿಂದ 8.14 ರವರೆಗೆ.
ಯೋಗಿನಿ ಏಕಾದಶಿ ಪೂಜಾ ವಿಧಾನ:
ಏಕಾದಶಿಯಂದು ಬೆಳಗ್ಗೆ ಬೇಗ ಎದ್ದು, ಮನೆಯನ್ನು ಸ್ವಚ್ಛಗೊಳಿಸಿ. ನಂತರ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಈಗ ಮನೆಯ ಪೂಜಾಸ್ಥಳದಲ್ಲಿ ವಿಷ್ಣುವಿನ ವಿಗ್ರಹವನ್ನೋ, ಫೋಟೋವನ್ನೂ ಇಟ್ಟು ಆ ವಿಗ್ರಹಕ್ಕೆ ಅಕ್ಷತೆಯನ್ನು, ಹೂಗಳನ್ನು, ತುಳಸಿ ಎಲೆಗಳನ್ನು ಮತ್ತು ತೆಂಗಿನಕಾಯಿಯನ್ನು ಅರ್ಪಿಸಿ. ತದನಂತರ ಅರಳಿ ಮರವನ್ನು ಪೂಜಿಸಿ, ಮರುದಿನ ಏಕಾದಶಿ ಕಥೆಯನ್ನು ಕೇಳಿ ಅಥವಾ ವಿಷ್ಣುವಿನ ಪಾರಾಯಣ ಮಾಡಿ.
ಯೋಗಿನಿ ಏಕಾದಶಿ ಕಥೆ:
ಸ್ವರ್ಗಧಾಮ ಎಂಬಲ್ಲಿನ ಅಲಕಾಪುರಿ ಪಟ್ಟಣದಲ್ಲಿ ಕುಬೇರ ಎನ್ನುವ ರಾಜನಿದ್ದನು. ಈ ರಾಜಜನು ಶಿವನ ಪರಮ ಭಕ್ತನಾಗಿದ್ದನು ಹಾಗೂ ಒಂದು ದಿನ ಕೂಡ ತಪ್ಪಿಸದೇ ಪ್ರತಿನಿತ್ಯ ಶಿವನನ್ನು ಆರಾಧಿಸುತ್ತಿದ್ದನು. ರಾಜನ ಪೂಜೆಗಾಗಿ ಹೇಮ ಎನ್ನುವ ಕೆಲಸಗಾರನು ರಾಜನಿಗೆ ಪ್ರತಿನಿತ್ಯ ಹೂವುಗಳನ್ನು ತರುತ್ತಿದ್ದನು. ಹೇಮನಿಗೆ ವಿಶಾಲಾಕ್ಷಿ ಎನ್ನುವ ಸ್ಪುರದ್ರೂಪಿ ಸತಿಯಿದ್ದಳು. ಒಂದು ದಿನ ರಾಜ ಕುಬೇರನಿಗೆ ಪೂಜೆಗೆಂದು ಹೂವು ತರಲು ಹೇಮ ನು ಮಾನಸ ಸರೋವರಕ್ಕೆ ಹೋಗುತ್ತಾನೆ. ಅಲ್ಲಿಂದ ಹೂವುಗಳನ್ನು ತೆಗೆದುಕೊಮಡು ಹಿಂದಿರುಗುವಾಗ ಕಾಮಾಸಕ್ತನಾಗಿ ಹೆಂಡತಿಯೊಂದಿಗೆ ವಿನೋದವನ್ನು ಕಳೆಯತ್ತಾನೆ.
ಇತ್ತ ರಾಜ ಕುಬೇರನು ಶಿವ ಪೂಜೆಯ ಹೂವಿಗಾಗಿ ಹೇಮನನ್ನು ಕಾಯುತ್ತಿರುತ್ತಾನೆ. ಮಧ್ಯಾಹ್ನವಾದರೂ ಕೂಡ ಹೇಮ ಕುಬೇರನಿಗೆ ಹೂವುಗಳನ್ನು ತಂದುಕೊಡುವುದಿಲ್ಲ. ಆಗ ರಾಜನು ತನ್ನ ಸೇವಕರನ್ನು ಕರೆದು, ಹೇಮ ನ ಮನೆಗೆ ಹೋಗಿ ಏನಾಯಿತೆಂದು ತಿಳಿದು ಬರಲು ಕಳುಹಿಸುತ್ತಾನೆ. ಸ್ವಲ್ಪ ಸಮಯದ ಬಳಿಕ ಸೇವಕರು ಬಂದು ರಾಜನಲ್ಲಿ, ಹೇಮ ಓರ್ವ ಕಾಮುಕ. ಆತ ದೇವರಿಗೆ ಹೂವುಗಳನ್ನು ತರುವುದು ಬಿಟ್ಟು ಹೆಂಡತಿಯೊಂದಿಗೆ ರಾಸಲೀಲೆಯಾಡುತ್ತಿದ್ದಾನೆಂದು ಹೇಳುತ್ತಾರೆ. ಇದರಿಂದ ಕೋಪಗೊಂಡ ರಾಜ ಕುಬೇರನು ತನ್ನ ಸೇವಕರ ಬಳಿ ಹೇಮನನ್ನು ಕರೆತರುವಂತೆ ಹೇಳಿ ಕಳುಹಿಸುತ್ತಾನೆ.
ಹೇಮನು ಭಯದಿಂದಲೇ ನಡುಗುತ್ತಾ ಅರಸನ ಬಳಿ ಬರುತ್ತಾನೆ. ಈಗಾಗಲೇ ಕೋಪಗೊಂಡಿದ್ದ ಅರಸ ಕುಬೇರನು ಹೇಮನಿಗೆ ನಿನ್ನಿಂದ ನನ್ನ ಶಿವಪೂಜೆ ಹಾಳಾಯಿತು. ನನ್ನ ಶಿವಪೂಜೆಗೆ ನೀನು ಅಗೌರವ ತೋರಿಸಿದ್ದೀಯಾ ಎಂದು ಆತನನ್ನು ಶಪಿಸುತ್ತಾನೆ. ನೀವು ಸ್ರೀ ಸಂಪರ್ಕವನ್ನು ಕಳೆದುಕೊಳ್ಳುವಿರಿ ಹಾಗೂ ನೀನು ಕುಷ್ಠರೋಗದಿಂದ ಸಾವನ್ನಪ್ಪುತ್ತೀಯಾ ಎಂದು ಶಾಪವನ್ನು ನೀಡುತ್ತಾನೆ.
ರಾಜ ಕುಬೇರನ ಶಾಪದಿಂದ ಹೇಮನ ಪತ್ನಿಯು ಮಾಯವಾಗುತ್ತಾಳೆ. ಹೇಮನು ಕುಷ್ಠರೋಗದಿಂದ ಬಳಲುತ್ತಾನೆ. ಹೇಮನು ಕುಷ್ಠರೋಗದಿಂದ ನರಕವನ್ನೇ ಅನುಭವಿಸುತ್ತಾನೆ. ಕುಡಿಯಲು ನೀರಿಲ್ಲದೆ, ಸೇವಿಸಲು ಆಹಾರವಿಲ್ಲದೆ ಭಯಾನಕ ಕಾಡಿನಲ್ಲಿ ಒಂಟಿಯಾಗಿ ಅಲೆದಾಡಲು ಆರಂಭಿಸಿದನು.
ಅಲೆದಾಡುತ್ತ ಕೆಲಸಗಾರ ಹೇಮನು ಬ್ರಹ್ಮನಿಗಿಂತಲೂ ಹೆಚ್ಚು ವಯಸ್ಕನಾಗಿದ್ದ. ಹಾಗೂ ಈತ ಒಂದು ದಿನ ಕಾಡಿನಲ್ಲಿ ಅಲೆದಾಡುತ್ತಾ ಮಾರ್ಕಂಡೇಯ ಮುನಿಯ ಆಶ್ರಮವನ್ನು ತಲುಪುತ್ತಾನೆ. ಹೇಮನು ಋಷಿ ಮಾರ್ಕಂಡೇಯನನ್ನು ನೋಡಿದಾಕ್ಷಣ ಆತನ ಪಾದಗಳಿಗೆ ಎರಗುತ್ತಾನೆ. ಆಗ ಮಾರ್ಕಂಡೇಯ ಋಷಿಯು ನೀನು ಯಾವ ಪಾಪದಿಂದ ಈ ನೋವನ್ನು ಅನುಭವಿಸುತ್ತಿದ್ದೀಯಾ ಎಂದು ಕೇಳುತ್ತಾರೆ. ಆಗ ಹೇಮನು ನಡೆದೆಲ್ಲಾ ಘಟನೆಗಳನ್ನು ಮಾರ್ಕಂಡೇಯನಿಗೆ ಹೇಳುತ್ತಾನೆ. ಆಗ ಮಾರ್ಕಂಡೇಯನು ನೀನು ನನ್ನ ಬಳಿ ಸತ್ಯವನ್ನೇ ಹೇಳಿದ್ದೀಯಾ. ಹಾಗಾಗಿ ನೀನು ಮೋಕ್ಷವನ್ನು ಅಥವಾ ಇದರಿಂದ ಹೊರಬರಲು ನಿನಗೊಂದು ಉಪಯಾವನ್ನು ಹೇಳುತ್ತೇನೆ ಹಾಗೇ ಮಾಡು ಇದರಿಂದ ನಿನ್ನ ಪಾಪ ಶಮನವಾಗುತ್ತದೆ ಎಂದು ಹೇಳುತ್ತಾನೆ.
ಪಾಪದ ಮೋಕ್ಷಕ್ಕಾಗಿ ಮಾರ್ಕಂಡೇಯನು ಹೇಮನಿಗೆ ಆಶಾಢ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸಲಾಗುವ ಯೋಗಿನಿ ಏಕಾದಶಿಯಂದು ಕಠಿಣ ಉಪವಾಸವನ್ನು ಆಚರಿಸು ಇದರಿಂದ ನಿನ್ನ ಪಾಪಗಳು ಪರಿಹಾರವಾಗುತ್ತದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಹೇಮನು ಮಾರ್ಕಂಡೇಯನಿಗೆ ಧನ್ಯವಾದವನ್ನು ಸಲ್ಲಿಸಿ ಅಲ್ಲೇ ಆಶ್ರಮದಲ್ಲಿ ತನ್ನ ಯೋಗಿನಿ ಏಕಾದಶಿ ವ್ರತವನ್ನು ಕಠಿಣ ಪರಿಶ್ರಮದಿಂದ, ಶ್ರದ್ಧಾ, ಭಕ್ತಿಯಿಂದ ಪೂರ್ಣಗೊಳಿಸುತ್ತಾನೆ. ಇದರಿಂದ ಆತನ ಪಾಪವು ನಿವಾರಣೆಯಾಗಿ, ಹೇಮನು ತನ್ನ ಹಳೆಯ ರೂಪವನ್ನು ಮತ್ತೊಮ್ಮೆ ಪಡೆದುಕೊಳ್ಳುತ್ತಾನೆ. ಹಾಗೂ ತಾನು ಕಳೆದುಕೊಂಡ ಪತ್ನಿಯನ್ನು ಮತ್ತೊಮ್ಮೆ ಪಡೆದುಕೊಂಡು ಆಕೆಯೊಂದಿಗೆ ಸಂತಸದ ದಿನಗಳನ್ನು ಕಳೆಯುತ್ತಾನೆ.
**********

೭) ಆಷಾಢ ಶುದ್ಧ ಏಕಾದಶಿ - ದೇವಶಯನಿ - 
ಸಂಪತ್ ಪ್ರಾಪ್ತಿ - ವಿಷ್ಣುವು ಯೋಗನಿದ್ರೆಗೆ ಜಾರುವ ದಿನ

ಆಷಾಢ ಏಕಾದಶಿ ಅಥವಾ   ಪ್ರಥಮೈಕಾದಶಿ 
ಆಷಾಢ ಮಾಸದ ಶುಕ್ಲಪಕ್ಷದಲ್ಲಿನ ಏಕಾದಶಿಯನ್ನು "ದೇವಶಯನಿ" (ದೇವರ ನಿದ್ರೆಯ) / 'ಶಯನೈಕಾದಶಿ" ಎನ್ನುತ್ತಾರೆ.
ಕಾರಣ ಅಂದು ಮಹಾವಿಷ್ಣುವು ಆದಿಶೇಷ ತಲ್ಪದಲ್ಲಿ ಯೋಗನಿದ್ರೆಯಲ್ಲಿ ಮಲಗುತ್ತಾನೆ. ಅವನು ಏಳುವುದು ಕಾರ್ತಿಕ ಶುದ್ಧ ದ್ವಾದಶಿಯಂದು.ಅದನ್ನು "ಉತ್ಥಾನ(ಏಳುವುದು)ದ್ವಾದಶಿ" ಎಂದು ಕರೆಯುವರು.

ಈ ನಾಲ್ಕು ತಿಂಗಳು ಸನ್ಯಾಸಿಗಳು ಯತಿಗಳು ಚಾತುರ್‌ಮಾಸ್ಯವನ್ನು ಮಾಡುತ್ತಾರೆ.

#ಶಯನಿ ಏಕಾದಶಿ , #ಮಹಾ ಏಕಾದಶಿ , #ಪ್ರಥಮ ಏಕಾದಶಿ , ಪದ್ಮ ಏಕಾದಶಿ , #ದೇವಶಯನಿ  ಏಕಾದಶಿ , #ದೇವಪೋಢಿ ಏಕಾದಶಿ ಎಂಬ ಹೆಸರುಗಳಿಂದ ಕರೆಯಲಾಗುವ ಈ ದಿನವು  ಹಿಂದೂ ತಿಂಗಳು ಆಷಾಢ (ಜೂನ್ - ಜುಲೈ)  ಶುಕ್ಲ ಪಕ್ಷದ   ಹನ್ನೊಂದನೇ  ದಿನ (ಏಕಾದಶಿ) ಆದ್ದರಿಂದ . ಇದನ್ನು #ಆಷಾಢ ಏಕಾದಶಿ ಅಥವಾ ಆಷಾಢಿ  ಎಂದೂ ಕರೆಯಲಾಗುತ್ತದೆ. ಇದನ್ನು ತೆಲುಗು ಭಾಷೆಯಲ್ಲಿ  #ತೊಲಿಏಕಾದಶಿ ಎಂದು ಕರೆಯುತ್ತಾರೆ.  ಈ ಪವಿತ್ರ ದಿನವು     ಹಿಂದೂ  ಸ್ಥಿತಿಕರ್ತ ದೇವರು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ.   ಈ ದಿನ ವಿಷ್ಣು ಮತ್ತು ಲಕ್ಷ್ಮಿ  ಇವರ ಪೂಜೆ ಮಾಡಲಾಗುತ್ತದೆ, ಇಡೀ ರಾತ್ರಿಯನ್ನು  ಪ್ರಾರ್ಥನೆ, ಭಜನೆಗಳಲ್ಲಿ  ಕಳೆಯುತ್ತಾರೆ.  ಭಕ್ತರು  ಉಪವಾಸವಿದ್ದು , ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ದ ಆಚರಿಸಬೇಕಾದ ವ್ರತಗಳನ್ನು ಈ ದಿನ ಇಟ್ಟುಕೊಳ್ಳುತ್ತಾರೆ. ಇದು ಯಾವುದಾದರು ಆಹಾರಪದಾರ್ಥವನ್ನು ಬಿಡುವ  ಬಗ್ಗೆ   ಮತ್ತು ಪ್ರತಿ ಏಕಾದಶಿ ದಿನ ಉಪವಾಸವನ್ನು ಆಚರಿಸುವ ಬಗ್ಗೆ ಇರುತ್ತದೆ.ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆಗೆ ಈದಿನ ಮಲಗಿ ನಿದ್ದೆ ಮಾಡುತ್ತಾನೆ ಎಂಬ ನಂಬಿಕೆ ಇದೆ.  ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ  ಎಂದು  ಕರೆಯಲಾಗುತ್ತದೆ. ವಿಷ್ಣುವು ನಾಲ್ಕು ತಿಂಗಳ ನಂತರ  ಬರುವ #ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ.   ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯುತ್ತಾರೆ.  ಈ ಹೊತ್ತಿಗೆ ಮಳೆಗಾಲ  ಇರುತ್ತದೆ. ಹೀಗಾಗಿ, ಶಯನಿ ಏಕಾದಶಿಯು ಚಾತುರ್ಮಾಸದ  ಆರಂಭ.  ಭಕ್ತರು ವಿಷ್ಣುವಿನ  ಪ್ರೀತ್ಯರ್ಥ ಚಾತುರ್ಮಾಸ ವ್ರತವನ್ನು ಆಚರಿಸಲು   ಈ ದಿನ  ಆರಂಭಿಸುತ್ತರೆ. ಈ ದಿನ ಉಪವಾಸವನ್ನು   ಆಚರಿಸಲಾಗುತ್ತದೆ. ಈ ಉಪವಾಸದಲ್ಲಿ  ಕೆಲವು ಅಹಾರಪದಾರ್ಥಗಳನ್ನು ಸೇವಿಸುವದಿಲ್ಲ.

ಹಿಂದೆ ದೇವ ದಾನವರ ಯುದ್ಧವಾದಾಗ, ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಈಶ್ವರನಿಂದ ಅಮರತ್ವವನ್ನು ಪಡೆದು ತ್ರಿಮೂರ್ತಿಗಳಾದಿಯಾಗಿ ಎಲ್ಲ ದೇವತೆಗಳನ್ನು ಸೋಲಿಸಿ ಸ್ವರ್ಗದಿಂದ ಓಡಿಸಿದನು.ದೇವತೆಗಳು ಅವನ ಭಯದಿಂದ ತ್ರಿಕೂಟ ಪರ್ವತದ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗಿನ ಒಂದು ಗುಹೆಯಲ್ಲಿ ಅಡಗಿ ಕುಳಿತರು.ಆ ದಿನವು ಆಷಾಢ ಶುದ್ಧ ಏಕಾದಶಿಯಾಗಿತ್ತು.!

ಅನಿವಾರ್ಯವಾಗಿ ಅವರು ಅಂದು ಉಪವಾಸ ಮಾಡುವಂತಾಯಿತು.
ಅವರ ಉಪವಾಸದ ಫಲವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಆವಿರ್ಭವಿಸಿ,ಗುಹೆಯ ಬಾಗಿಲಿನಲ್ಲಿ , ದೇವತೆಗಳು ಹೊರಬರುವುದನ್ನು ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು.
ಈ ಶಕ್ತಿದೇವತೆಯೇ ಏಕಾದಶಿ ತಿಥಿಯ ಅಧಿದೇವತೆಯಾಗಿದ್ದಾಳೆ.
ಅಂದಿನಿಂದ ಪ್ರಥಮೈಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯ ವರೆಗೆ ಒಂಬತ್ತು ಏಕಾದಶಿಗಳಂದು ಉಪವಾಸ ಮಾಡುವ ಪದ್ಧತಿ ಆರಂಭವಾಯಿತು.
ಏಕಾದಶಿಯಂದು ಸ್ನಾನ ಮಾಡಿ,ವಿಷ್ಣುವನ್ನು ತುಳಸಿ ಕುಡಿಯಿಂದ ಭಕ್ತಿಯಿಂದ ಅರ್ಚಿಸಿ,ತೀರ್ಥಪ್ರಾಶನ ಮಾಡಿ,ಅಹೋರಾತ್ರಿ ವಿಷ್ಣುನಾಮ ಸಂಕೀರ್ತನೆ,
ಭಜನೆ ಮಾಡುತ್ತ ಜಾಗರಣೆ ಮಾಡಿ,ದ್ವಾದಶಿಯ ದಿನ ಬೆಳಿಗ್ಗೆ ಸ್ನಾನ ಪೂಜೆ ಮುಗಿಸಿ,ನೈವೇದ್ಯ ಮಾಡಿದ ಪದಾರ್ಥಗಳನ್ನು ಸೇವಿಸಿ,ಉಪವಾಸ ಮುಕ್ತಾಯದ ಪಾರಣೆ ಮಾಡಬೇಕು.

#ಸಾಮಾನ್ಯವಾಗಿ ಶಯನ ಏಕಾದಶಿಯಿಂದ, ಉತ್ಥಾನದ್ವಾದಶಿವರೆಗೆ, ವಿಷ್ಣುವು ಯೋಗನಿದ್ರಾವಸ್ಥೆಯಲ್ಲಿರುವುದರಿಂದ,ಮದುವೆ ,ಉಪನಯನ,ಗೃಹಪ್ರವೇಶಾದಿ ಮಂಗಳ ಕಾರ್ಯಗಳನ್ನು ನೆರವೇರಿಸುವುದಿಲ್ಲ.

ಉತ್ಥಾನ ದ್ವಾದಶಿಯಂದೇ ವಿಷ್ಣುವು ತುಲಸಿಯನ್ನು ವಿವಾಹವಾದುದು.
ನೆಲ್ಲಿ ಮರದ ಕೆಳಗಿನ ಗುಹೆ ದೇವತೆಗಳನ್ನು ರಕ್ಷಿಸಿತ್ತು.
ಇವೆರಡರ ಸವಿನೆನಪಿನಲ್ಲಿ ನೆಲ್ಲಿ ಕೊಂಬೆಯನ್ನು ತುಳಸಿಗಿಡದೊಂದಿಗೆ ಇಟ್ಟು "ತುಳಸಿ ಹಬ್ಬ/ತುಳಸಿದೀಪ" ಎಂದು ಪೂಜೆ,
ದೀಪಾರಾಧನೆ ಮಾಡುವುದು ಆಚರಣೆಗೆ ಬಂದಿದೆ.

#ವಿಷ್ಣುವಿನ ಭಕ್ತರು,

ಮಾಧ್ವ ಸಂಪ್ರದಾಯದ ಬಂಧುಗಳು ಈ ಒಂಬತ್ತು ಏಕಾದಶಿ ಮಾತ್ರವಲ್ಲದೆ ವರ್ಷದ ಎಲ್ಲ ಏಕಾದಶಿಯಲ್ಲಿಯೂ ನಿರಾಹಾರ ಉಪವಾಸ ವ್ರತ ಆಚರಿಸುತ್ತಾರೆ.
ಅದಾಗದವರು ಆಷಾಢ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗೆ ಒಂಬತ್ತು ಏಕಾದಶಿಗಳಂದು ಉಪವಾಸ ವ್ರತ ಆಚರಿಸುತ್ತಾರೆ.

ವೈಜ್ಞಾನಿಕ ಮತ್ತು ವೈದ್ಯಕೀಯವಾಗಿಯೂ ವಾರದಲ್ಲಿ,ಅಥವಾ ಪಕ್ಷದಲ್ಲಿ ಒಂದು ದಿನ ಉಪವಾಸ ಮಾಡುವುದು ದೇಹ ಮತ್ತು ಆರೋಗ್ಯಕ್ಕೆ ಪರಿಣಾಮಕಾರಿ ಮತ್ತು ಬಹಳ ಒಳ್ಳೆಯದು ಎಂದು ಸಾಬೀತಾಗಿದೆ.

ಏಕಾದಶಿವ್ರತ ನಿಷ್ಠೆಯಿಂದ ಮಾಡಿ ಮೋಕ್ಷ ಪಡೆದ ಮಹರ್ಷಿಗಳ, ಮಹಾರಾಜ ಅಂಬರೀಷ,ಮೊದಲಾದವರ ಕತೆ ಪುರಾಣಗಳಲ್ಲಿವೆ.

ಭವಿಷ್ಯೋತ್ತರಪುರಾಣ ಗ್ರಂಥದಲ್ಲಿ ದೇವ ಕೃಷ್ಣ ನು ಈ ದಿನದ ಮಹತ್ವವನ್ನು  ಯುಧಿಷ್ಠಿರನಿಗೆ , ಸೃಷ್ಟಿಕರ್ತ-ದೇವರ ಬ್ರಹ್ಮನು ತನ್ನ ಮಗ ನಾರದನಿಗೆ ಹೇಳಿದಂತೆ ,   ವಿವರಿಸಿದ್ದಾನೆ .   

ಪಂಢರಪುರ ಯಾತ್ರೆ

ಪಂಢರಾಪುರದ ವಿಠ್ಠಲನ ಚಿತ್ರ
ಈ ದಿನ  ಭಕ್ತರ  ಯಾತ್ರೆಯು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ  ಪಂಢರಪುರದಲ್ಲಿ ಕೊನೆಗೊಳ್ಳುತ್ತದೆ.  
ಪಂಢರಪುರದ ವಿಟ್ಠಲನ ಭಕ್ತರು ನೂರಾರು ಮೈಲಿ ದೂರದ ತಮ್ಮ ಊರಿನಿಂದ ವಿಟ್ಠಲನ ಭಜನೆ ಮಾಡುತ್ತ ಸಾಕಷ್ಟು ದಿನ ಮೊದಲೇ ಹೊರಟು ಕಾಲ್ನಡಿಗೆಯಲ್ಲಿಯೇ ಏಕಾದಶಿಗೆ ಮೊದಲು ಪಂಢರಪುರ ಸೇರಿ, ಅಂದು ವಿಟ್ಠಲನ ದರ್ಶನ ಮಾಡುತ್ತಾರೆ.ಇದನ್ನು "#ವಾರ್ಕರಿ" ಅಥವಾ "#ವಾರಕರಿಗಳು" ಎಂದು ಹೇಳುತ್ತಾರೆ.ಅವರಿಗೆ ವಿಟ್ಠಲನ ಪಾದ ಮುಟ್ಟಿ ನಮಸ್ಕರಿಸಲು ಮತ್ತು ಬೇಗ ದರ್ಶನವಾಗುವಂತೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಅಲ್ಲಿದೆ.

ಆಷಾಢ ಶುದ್ಧ ಏಕಾದಶಿಯಂದು ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದನೆಂದು,ಈಗಲೂ ಆ ದಿನ ವಿಷ್ಣುವು ಅಲ್ಲಿಗೆ ಬಂದು ಭಕ್ತರನ್ನು ಹರಸುತ್ತಾನೆಂದು ಪ್ರತೀತಿ ಇದೆ.

ಪಂಢರಪುರವು ವಿಷ್ಣುವಿನ ಸ್ಥಳೀಯ ರೂಪವಾದ ವಿಠ್ಠಲನ ಆರಾಧನೆಯ ಕೇಂದ್ರವಾಗಿದ್ದು ಚಂದ್ರಭಾಗಾ ನದಿಯ ದಂಡೆಯಮೇಲಿದೆ.  ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ದಿನ ಇಲ್ಲಿಗೆ ಬರುತ್ತಾರೆ.
*****

ಈ ದಿನ ಆಷಾಢ ಏಕಾದಶಿ
 ಇದನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ  ಎಂದು ಆಚರಿಸುತ್ತೇವೆ. 

  ಈ ಏಕಾದಶಿಯೊಂದಿಗೆ  ಚಾತುರ್ಮಾಸ್ಯ ಆರಂಭವಾಗುತ್ತದೆ. ಇದೇ ದಿನ ತಪ್ತಮುದ್ರಾಧಾರಣೆ ಹಾಗೂ ವಿಷ್ಣು ಶಯನೋತ್ಸವವು ನಡೆಯುತ್ತದೆ.

  ಇಂದಿನಿಂದ ಶ್ರೀಹರಿ (ಮಹಾವಿಷ್ಣು) ನಾಲ್ಕು ತಿಂಗಳು ಕಾಲ ಯೋಗನಿದ್ರೆಯಲ್ಲಿ ತೊಡಗುವುದು ವಿಶೇಷ. ಹಾಗಾಗಿ ಶಯನಿ ಏಕಾದಶಿ ಎನ್ನಲಾಗುತ್ತದೆ. ಇವುಗಳ ಮಹತ್ವ ಅರಿಯೋಣ.

 ಮೊದಲಿಗೆ ಏಕಾದಶಿ ಎಂದರೇನು ತಿಳಿಯೋಣ

 ಹಿಂದೆ ಬಲಿಷ್ಠನಾಗಿದ್ದ ಮುರ ಎಂಬ ರಾಕ್ಷಸ ದೇವತೆಗಳನ್ನು ಸೋಲಿಸಿ ಮೆರೆಯುತ್ತಿದ್ದ. ಇವನ ಉಪಟಳ ತಾಳಲಾರದ ದೇವತೆಗಳು ಮುರನಿಂದ ರಕ್ಷಿಸುವಂತೆ ಶ್ರೀಹರಿಯನ್ನು ಪ್ರಾರ್ಥಿಸಿದರು.

 ದೇವತೆಗಳ ಪ್ರಾರ್ಥನೆಗೆ ಒಲಿದ ಮಹಾವಿಷ್ಣು, ತನ್ನಲ್ಲಿದ್ದ ಅಸ್ತ್ರ, ಶಸ್ತ್ರಗಳನ್ನು ಮುರನ ಮೇಲೆ ಪ್ರಯೋಗಿಸಿದನು ಇದರಿಂದ ಮುರಾಸುರನ ಹೊರತು ಉಳಿದ ರಾಕ್ಷಸರು ಹತರಾದರು. ಪರಾರಿಯಾಗಿದ್ದ ಮುರ ಸಮಯಕ್ಕಾಗಿ ಕಾಯುತ್ತಿದ್ದ.

  ನಂತರ ಶ್ರೀಹರಿ ಬದರಿ ಕ್ಷೇತ್ರಕ್ಕೆ ತೆರಳಿ ಅಲ್ಲಿನ ಒಂದು ಗುಹೆಯಲ್ಲಿ ಯೋಗನಿದ್ರೆಗೆ ಜಾರಿದ. ಇದೇ ಸರಿ ಸಮಯವೆಂದು ಹೊಂಚು ಹಾಕಿ, ಅಲ್ಲಿಗೂ ಬಂದ ಮುರಾಸುರ ವಿಷ್ಣುವನ್ನು ಕೊಲ್ಲಲು ಯತ್ನಿಸಿದ. ಆಗ ಭಗವಂತನ ತೇಜಸ್ಸಿನಿಂದ ಅಸ್ತ್ರ ಶಸ್ತ್ರ ಸಜ್ಜಿತಳಾದ ಒಬ್ಬ ಕನ್ಯೆ ಅವತರಿಸಿ, ಮುರನನ್ನು ಸಂಹರಿಸಿದಳು. ಸಂತಸಗೊಂಡ ಶ್ರೀಪತಿ ಆಕೆಯನ್ನು ಅನುಗ್ರಹಿಸಿದ. ಈ ದಿನ ತಿಂಗಳ ಹನ್ನೊಂದನೇ ದಿನವಾಗಿತ್ತು.‌ ಹಾಗಾಗಿ ಈ ದಿನ ನಿನ್ನ ಹೆಸರಲ್ಲಿ ಶ್ರದ್ಧಾ ಭಕ್ತಿಯಿಂದ ಯಾರು ನನ್ನ ಸಮೀಪ(ಉಪವಾಸ) ವಿದ್ದು ಸೇವಿಸುತ್ತಾರೋ ಅವರಿಗೆ ವಿಶೇಷ ಫಲ ನೀಡುತ್ತೇನೆ ಎಂದು ಹೇಳಿದ. ಅಂದಿನಿಂದ ಏಕಾದಶಿ ಆಚರಣೆ ಜಾರಿಗೆ ಬಂತು. ಬೇಡಿದಂತೆ ವರ ಕರುಣಿಸಿದನು.
 
 ಏಕಾದಶಿ ಆಚರಣೆ:
 ಈದಿನ ನಿರಾಹಾರಿಯಾಗಿ ಶುದ್ಧ ದೇಹ ಹಾಗೂ ಮನಸ್ಸಿನಿಂದ ಶ್ರೀಹರಿಯನ್ನು ಅರ್ಚಿಸಬೇಕು. ಊಟ, ಉಪಹಾರದ ಜತೆ ಏಲಕ್ಕಿ, ಪಚ್ಚಕರ್ಪೂರ, ಶ್ರೀಗಂಧಾದಿ ಸುಗಂಧ ದ್ರವ್ಯಗಳನ್ನು ವರ್ಜಿಸಬೇಕು. 
 ಯಥಾಶಕ್ತಿ ದೇವರನ್ನು ಸೇವಿಸಿ, ರಾತ್ರಿ ಜಾಗರಣೆ ಮಾಡಿ ಮರುದಿನ(ದ್ವಾದಶಿ) ಮುಂಜಾನೆ ದೇವರಪೂಜೆ ಮಾಡಿ ತೀರ್ಥ ಪ್ರಸಾದ(ಭೋಜನ) ಸ್ವೀಕರಿಸಬೇಕು. ಇದು ಏಕಾದಶಿ ಆಚರಣೆ.

  ವೈಜ್ಞಾನಿಕವಾಗಿ ಏಕಾದಶಿ ವ್ರತ ಆರೋಗ್ಯಕ್ಕೆ ಸಹಕಾರಿ. ಲಂಘನಂ ಪರಮೌಷಧಂ ಎಂಬಂತೆ ಉಪವಾಸ ಮಾಡುವುದು ಆರೋಗ್ಯಕ್ಕೆ ಒಳಿತು. ಹದಿನೈದು ದಿನಕ್ಕೊಮ್ಮೆ ದೇಹಕ್ಕೆ‌ ಬಿಡುವು ನೀಡಬೇಕೆಂಬುದು ಆಯುರ್ವೇದ ಹೇಳುತ್ತದೆ. ದೇಹದಲ್ಲಿ ಜೀರ್ಣಕ್ರಿಯೆಗೆ ತೊಡಗುವ ಅಂಗಗಳಿಗೆ ವಿಶ್ರಾಂತಿ ಅಗತ್ಯವಿದೆ. ತಿಂಗಳಲ್ಲಿ ಎರಡು ದಿನ‌ ಈ ರೀತಿ ಉಪವಾಸಾಚರಣೆ ಮಾಡಿದರೆ ಸ್ವಾಮಿ ಕಾರ್ಯದ ಜತೆ ಸ್ವಕಾರ್ಯ ವೂ ಆಗುತ್ತದೆ.

ತಪ್ತಮುದ್ರಾಧಾರಣೆ:

 ಈ ದಿನ ತಾಮ್ರದಿಂದ ತಯಾರಿಸಿದ ಶ್ರೀವಿಷ್ಣುವಿನ ಚಿಹ್ನೆಗಳಾದ ಸುದರ್ಶನ ಹಾಗೂ ಶಂಖ ಮುದ್ರೆಗಳನ್ನು ಬೆಂಕಿಯಲ್ಲಿ ಕಾಯಿಸಿ ದೇಹದ ಮೇಲೆ ಒತ್ತಲಾಗುತ್ತದೆ. ಇಂದು ಎಲ್ಲ ಮಾಧ್ವ ಮಠಾಧಿಪತಿಗಳು ಈ ಕಾಯಕ ನಡೆಸುತ್ತಾರೆ. ಯತಿಗಳು ಬೆಳಗ್ಗೆ ಸಂಸ್ಥಾನ ಪೂಜೆ ನಡೆಸುತ್ತಾರೆ. ಇದೇ ವೇಳೆ ಶ್ರೀಸುದರ್ಶನ ಹೋಮ ನಡೆಯುತ್ತದೆ, ಪೂರ್ಣಾಹುತಿಯ ನಂತರ ಗುರುಗಳು ತಾಮ್ರದಿಂದ ತಯಾರಿಸಿದ ಮುದ್ರೆಗಳನ್ನು ಅದೇ ಅಗ್ನಿ(ಬೆಂಕಿ)ಯಲ್ಲಿ ಕಾಯಿಸಿ ಸ್ವಯಂ ಮುದ್ರೆ ಹಚ್ಚಿಕೊಳ್ಳುತ್ತಾರೆ. ನಂತರ ಶಿಷ್ಯರಾದಿಯಾಗಿ ಎಲ್ಲರಿಗೂ ಮುದ್ರೆ ಹಾಕುತ್ತಾರೆ.

  ತಪ್ತ ಮುದ್ರಾಧಾರಣೆಗೆ ಧಾರ್ಮಿಕ ಆಚರಣೆಯ ಜತೆ ವೈಜ್ಞಾನಿಕ ಕಾರಣವೂ ಇದೆ. ಹಿಂದೆ ಆಷಾಢ ಬಂತೆಂದರೆ ಮಳೆಗಾಲ ಜೋರು, ಸದಾ ಎಡೆಬಿಡದೆ ಸುರಿಯುವ ಮಳೆ ಜನರನ್ನು ರೋಗಗಳಿಂದ ಭಾಧಿಸುತ್ತಿತ್ತು. ಮಳೆಯ ಶೀತದಿಂದ ಹಲವಾರು ರೋಗಗಳು ಬರುತ್ತಿದ್ದವು. ಬೆಂಕಿಯಲ್ಲಿ ಕಾಯಿಸಿದ ತಾಮ್ರದ ಲೋಹದಿಂದ ದೇಹದ ಮೇಲೆ ಸೂಕ್ತ ಸ್ಥಳದಲ್ಲಿ ಮುದ್ರೆ ಹಾಕಿಕೊಂಡರೆ ಕೆಲ ರೋಗಗಳನ್ನು ನಿಯಂತ್ರಿಸಬಹುದಿತ್ತು. ಇದಕ್ಕೆ ಉದಾಹರಣೆ ಹಿಂದಿನ ದಿನಗಳಲ್ಲಿ ಗೋವುಗಳಿಗೆ ಕಾಯಿಲೆ ಬಂದರೆ ಬೆಂಕಿಯಲ್ಲಿ ಕಾಯಿಸಿದ ತಾಮ್ರದ ಠಸ್ಸೆಯಿಂದ ಚುಟುಕೆ ಹಾಕಲಾಗುತ್ತಿತ್ತು. 
   ಅಂದಿನ ಕಾಲಕ್ಕೆ  ಸ್ವತಃ ವಿಜ್ಞಾನದ ಆಳವನ್ನು ಅರಿತಿದ್ದ ಸರ್ವಜ್ಞಾಚಾರ್ಯರು (ಶ್ರೀಮಧ್ವಾಚಾರ್ಯರು) ಶ್ರೀಹರಿಯ ಲಾಂಛನಗಳನ್ನು ದೇಹದ ಮೇಲೆ ಧರಿಸುವ ಪದ್ಧತಿಯನ್ನು ಕಡ್ಡಾಯಗೊಳಿಸಿದರು. 
 ತುಳುನಾಡಿನಲ್ಲಿ ಇಂದಿಗೂ ಮಾಧ್ವರಲ್ಲದೇ ಉಳಿದ ಹಲವಾರು ಮಂದಿ ಮುದ್ರೆ ಹಾಕಿಸಿಕೊಳ್ಳುತ್ತಾರೆ. 

 ಶಯನಿ ಏಕಾದಶಿ:

 ಇಂದಿನಿಂದ ನಾಲ್ಕು ತಿಂಗಳಕಾಲ ವಿಷ್ಣು ಶಯನೋತ್ಸವ. ಮಹಾವಿಷ್ಣುವನ್ನು ಪೂಜಿಸಿ, ಯೋಗನಿದ್ರೆಯಲ್ಲಿ ತೊಡಗುವಂತೆ ಪ್ರಾರ್ಥಿಸಲಾಗುತ್ತದೆ. ಈ ಆಚರಣೆ ಹೆಚ್ಚಾಗಿ ಘಟ್ಟ(ಕರಾವಳಿ)ದ ಕೆಳಗಿನ ಪ್ರದೇಶಗಳಲ್ಲಿ ಆಚರಿಸಲಾಗುತ್ತೆ. ಇಂದಿನಿಂದ ಈ ಭಾಗದ ದೇವಾಲಯಗಳಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತೆಗೆಯುವುದಿಲ್ಲ ಹಾಗಾಗಿ ಉತ್ಸವಗಳನ್ನು ಆಚರಿಸುವುದಿಲ್ಲ. ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಪ್ರಭೋದೋತ್ಸವ ನಡೆಸಿ, ಮಹಾವಿಷ್ಣುವನ್ನು ಯೋಗ ನಿದ್ರೆಯಿಂದ ಎಬ್ಬಿಸಲಾಗುತ್ತಿದೆ.

ಚಾತುರ್ಮಾಸ:

   ಇಂದಿನಿಂದ ನಾಲ್ಕು ತಿಂಗಳ ಕಾಲ ಆಚರಿಸುವ ವ್ರತಕ್ಕೆ ಚಾತುರ್ಮಾಸ್ಯ ಎನ್ನುತ್ತೇವೆ. ಈ ನಾಲ್ಕು ತಿಂಗಳು ಯತಿಗಳು ಹಾಗೂ ಆಚಾರ್ಯತ್ವ ಪಾಲನೆ ಮಾಡುವ ಸದ್ಗೃಹಸ್ಥರು ಈ ವ್ರತವನ್ನು ಹಿಡಿಯುತ್ತಾರೆ. 
   ಇಂದಿನಿಂದ ಒಂದೊಂದು ತಿಂಗಳು ಒಂದೊಂದು ವ್ರತವನ್ನು ಆಚರಿಸಬೇಕು. ಈ ನಾಲ್ಕು ತಿಂಗಳು ಮಳೆಗಾಲದಿಂದ ಕೂಡಿವೆ. ಆಷಾಢ ಹಾಗೂ ಶ್ರಾವಣ ಮಾಸದಲ್ಲಿ ಗ್ರೀಷ್ಮ ಮತ್ತು ವರ್ಷ ಋತುಗಳ ಸಮಾಗಮ. ಈ ವೇಳೆ ಮಳೆ ಹೆಚ್ಚು. ಪುರಾತನ ಕಾಲದಲ್ಲಿ ಮನೆ, ಮಠ‌ಗಳಿಂದ ಹೊರಗೆ ಕಾಲಿಡಲಾರದಷ್ಟು ಮಳೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಯತಿಗಳ ಸಂಚಾರಕ್ಕೆ ಇದು ಅಡ್ಡಿಯಾಗುತ್ತಿತ್ತು. ಇದಲ್ಲದೇ ಮಳೆಗಾಲದಲ್ಲಿ ಸಣ್ಣ ಕ್ರಿಮಿಕೀಟಗಳ ಉತ್ಪತ್ತಿಯೂ ಜೋರು. ಹೊರಗೆ ಸಂಚರಿಸುವಾಗ ಯತಿಗಳು ಕಾಲಿಗೆ ಹಾಕಿಕೊಳ್ಳುತ್ತಿದ್ದ ಮರದ ಹಾವುಗೆ(ಪಾದುಕೆ)ಗಳಿಗೆ ಸಿಕ್ಕ ಕೀಟಗಳು ಸಾಯುವ ಸಾಧ್ಯತೆ ಹೆಚ್ಚು. ಅಹಿಂಸೆಯೇ ಪರಮಧರ್ಮ ಎಂದರಿತಿದ್ದ ಯತಿಗಳು ಕೀಟಗಳ ಸಾವಿಗೆ ಕಾರಣರಾಗುತ್ತಿರಲಿಲ್ಲ. ಹಾಗಾಗಿ ಹೊರಗೆ ಸಂಚರಿಸುತ್ತಿರಲಿಲ್ಲ. (ಇದು ಹಿಂದೂ ಧರ್ಮೀಯ ಯತಿಗಳಷ್ಟೇ ಅಲ್ಲ ಜೈನ, ಬೌದ್ಧ ಧರ್ಮ‌ ಸೇರಿದಂತೆ ಹಲವಾರು ಧರ್ಮೀಯ ಯತಿಗಳು ಪಾಲಿಸುತ್ತಾರೆ.)

  ಇದರ ಜತೆಗೆ ಪುಣ್ಯ ಸಂಚಯನ ಮಾಡುವ ದಕ್ಷಿಣಾಯನ ಪುಣ್ಯಕಾಲ ಕೂಡಿರುತ್ತಿದ್ದ ಕಾರಣ ಯತಿಗಳು ಒಂದೆಡೆ ವ್ರತಕ್ಕೆ ಕೂರುತ್ತಿದ್ದರು. ಇನ್ನು ಇವರ ಶಿಷ್ಯರು ಶ್ರದ್ಧಾವಂತರಾದ ಕಾರಣ ಗುರುಗಳ ಮಾರ್ಗ ಅನುಸರಿಸಿ ಅವರೂ ವ್ರತಕ್ಕೆ ಕೂರುತ್ತಿದ್ದರು.

  ಮೊದಲ ತಿಂಗಳು ಶಾಕವ್ರತ. ಈ ತಿಂಗಳಲ್ಲಿ ತರಕಾರಿ, ಸುಗಂಧ ದ್ರವ್ಯ ಬಳಸುವಂತಿಲ್ಲ. ಮಾವಿನ ಹಣ್ಣಿನ ಹೊರತಾಗಿ ಬೇರೆ ಹಣ್ಣುಗಳನ್ನು ದೇವರಿಗೆ ಸಮರ್ಪಿಸುವಂತಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣವಿದೆ. ಹಿಂದೆ ವ್ಯಾಪಾರ ದೃಷ್ಠಿಯಿಂದ ತರಕಾರಿ ಬೆಳೆಯುತ್ತಿರಲಿಲ್ಲ. ಜನರು ಅವರ ಅಗತ್ಯಕ್ಕೆ ತಕ್ಕಹಾಗೆ ಹಿತ್ತಲು ಹಾಗೂ ಕೈತೋಟದಲ್ಲಿ ತರಕಾರಿ ಬೆಳೆದುಕೊಳ್ಳುತ್ತಿದ್ದರು. ಮಳೆಗಾಲದ ಆರಂಭದ ದಿನಗಳಲ್ಲಿ ಭೂಮಿಯಲ್ಲಿ ಅಮಿತ ಉಷ್ಣಾಂಶವಿರುತ್ತದೆ. ಈ ಕಾಲದಲ್ಲಿ ಬೆಳೆದ ತರಕಾರಿಯಲ್ಲೂ ಈ ಉಷ್ಣಾಂಶ ಇರುವುದರಿಂದ ತರಕಾರಿ ಬಳಕೆ ಉತ್ತಮವಲ್ಲವೆಂದು ನಿಷೇಧಿಸಲಾಗಿತ್ತು. 
 ಇದಲ್ಲದೆ ಜೋರು ಮಳೆಗಾಲವಾದ ಕಾರಣ ಹಣ್ಣುಗಳು ಕೆಡುತ್ತವೆ ಜತೆಗೆ ಸರಿಯಾಗಿ ಜೀರ್ಣವಾಗುವುದಿಲ್ಲ. ಆಗೆಲ್ಲಾ ಈಗಿನಂತೆ ಸಂಚರಿಸಲು ವಾಹನಗಳಿರಲಿಲ್ಲ.  ಮಳೆಯ ಕಾರಣ ಕೂತ ಕಡೆಯೇ ಹೆಚ್ಚು ಕಾಲ ಕಳೆಯುತ್ತಿದ್ದ ಜನರ ದೇಹದಲ್ಲಿ ಅಗತ್ಯಕಿಂತ ಪೋಷಕಾಂಶಗಳು ಹೆಚ್ಚಾಗಿ ಬೊಜ್ಜು, ಮತ್ತಿತರ ಅನಾರೋಗ್ಯ ಉಂಟಾಗುತ್ತಿತ್ತು.

  ಹಾಗಾಗಿ ಈ ಪದಾರ್ಥಗಳನ್ಬು ನಿಷೇಧಿಸಿದ್ದರು ಈಗಲೂ ನಾವು ಗಮನಿಸಬಹುದು, ಈ ಆಚರಣೆ ಮಾಡುವ ಎಲ್ಲ ಯತಿಗಳು ಒಂದು ದಿನವೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಿಲ್ಲ. ಇದು ಸಕಾಲದಲ್ಲಿ ಮಾಡುವ ಆಚರಣೆಯ ಮಹತ್ವ.
 (ದಧಿ, ಕ್ಷೀರ ಹಾಗೂ ದ್ವಿದಳ ಧಾನ್ಯ ವ್ರತದ ಬಗ್ಗೆ ಮತ್ತೆ ತಿಳಿಸುತ್ತೇನೆ.)

 ಧಾರ್ಮಿಕ‌ ಹಾಗೂ ವೈಜ್ಞಾನಿಕವಾಗಿ ನಮ್ಮನ್ನು ಕಾಯುವ ಆಚರಣೆಗಳನ್ನು ಪಾಲಿಸೊಣ.
ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
****



೮) ಆಷಾಢ ಬಹುಳ ಏಕಾದಶಿ - ಕಾಮಿಕಾ - 
ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.


೯) ಶ್ರಾವಣ ಶುಕ್ಲ ಏಕಾದಶಿ - ಪುತ್ರದಾ - 
ಸತ್ ಸಂತಾನ ಪ್ರಾಪ್ತಿ


೧೦) ಶ್ರಾವಣ ಬಹುಳ ಏಕಾದಶಿ - ಅಜಾ - 
ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ

೧೧) ಭಾದ್ರಪದ ಶುದ್ಧ ಏಕಾದಶಿ - ಪರಿವರ್ತನ 
(ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) - ಯೋಗ ಸಿದ್ಧಿ
Parivartini Ekadashi vrat katha: The Ekadashi Tithi in Bhadrapada, Shukla Paksha, is called Parivartini or Parsva Ekadashi. Read on to know about the Vrat Katha or the reason why devotees observe this Ekadashi.
Parivartini Ekadashi: Know the Vrat Katha associated with it
Parivartini Ekadashi: Know the Vrat Katha associated with it
The Ekadashi Tithi in the month of Bhadrapada, Shukla Paksha (bright phase of the Lunar cycle) is known as Parivartini Ekadashi or Parsva Ekadashi. On this day, Lord Vishnu, who is in a state of Yogic sleep (Yoga Nidra), changes his posture. Hence, it is referred to as Parivartini Ekadashi (which literally means the Ekadashi of change). Read on to know about the Vrat Katha or the reason why devotees observe this Ekadashi.

Parivartini Ekadashi Vrat Katha
The Parivartini Ekadashi Vrat Katha dates back to the Treta Yuga, when King Mahabali (also known as Bali), the grandson of Prahlad ruled the three worlds - Deva Loka, Prithvi Loka and Patala Loka. He was an Asura (demon) and yet a devotee of Lord Vishnu. He was an able king like his grandfather Prahlad who, despite being born to an Asura like Hiranyakashipu, did not exhibit demon-like traits. Once, in a battle, Bali defeated Indra (the King of the Devas) and went on to become the undisputed leader. However, the Devas knew that if the Asuras continued to rule the Universe, then the destruction of creation was inevitable, sooner or later.

Therefore, the Devas headed by Indra appealed to Lord Vishnu to intervene and retrieve Deva Loka and Prithvi Loka from Bali. But since Bali was a devotee of Vishnu and a generous King, Lord Vishnu decided to test his devotion. Lord Vishnu took his fifth main avatar, Vamana (a dwarf) and appeared in Bali's court. After greeting the King, Vamana (Lord Vishnu as a young and short Brahmin boy) wondered if Bali could give him the land that he would cover thrice with his foot. And the King, who took the little boy's height for granted, agreed to provide him with the ground that he would cover in three steps. Interestingly, Bali's guru Shukracharya realised that Vamana was no one else but Lord Vishnu. He cautioned the King against the trick, but the latter refused to take back his words.


Thus, with the first step, Vamana covered the earth, with the second, he occupied the sky. And for the third step, he needed some more space. Eventually, Bali realised that it was none other than Lord Vishnu. He conceded defeat and offered his head. In the end, Lord Vishnu kept his foot on Bali's head and sent him to Patala Loka (underground).

On the day of Parivartini Ekadashi, devotees who keep a fast, worship the Vamana Avatar of Lord Vishnu and read this katha.
[7:57 PM, 8/28/2020] +91 83103 08846: It is said that by observing a vrat on Parivartini Ekadashi, a devotee can reap the benefits of the Vajpayee Yagna. And by sincerely keeping a fast on this day, a devotee can rid himself/herself of the burden of the wrongs he/she may have committed.
****

#ಪರಿವರ್ತಿನಿ #ಏಕಾದಶಿ

ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪರಿವರ್ತಿನಿ ಏಕಾದಶಿ ಅಥವಾ ಪದ್ಮ ಏಕಾದಶಿ ಎಂದು ಕರೆಯಲಾಗುವುದು. ವಿಷ್ಣುವಿನ ವಾಮನ ಅವತಾರವನ್ನು ಈ ದಿನ ಪೂಜಿಸಲಾಗುತ್ತದೆ.

ಈ ವರ್ಷ ಪರಿವರ್ತಿನಿ ಏಕಾದಶಿ ಸೆಪ್ಟೆಂಬರ್ 06 ದಂದು ಆಚರಿಸಲಾಗುವುದು. ಧಾರ್ಮಿಕ ನಂಬಿಕೆಗಳ ಪ್ರಕಾರ ಪರಿವರ್ತಿನಿ ಏಕಾದಶಿ ಮಾಡುವುದರಿಂದ ವಿಷ್ಣುವಿನ ಹಾಗೂ ಲಕ್ಷ್ಮಿಯ ಆಶೀರ್ವಾದಿಂದ ಜೀವನದಲ್ಲಿ ಯಾವುದಕ್ಕೂ ಕೊರತೆ ಉಂಟಾಗುವುದಿಲ್ಲ.

ಪರಿವರ್ತಿನಿ ಏಕಾದಶಿ  ಇದು ತುಂಬಾ ಮಹತ್ವವಾದ ಏಕಾದಶಿ, ಹೇಗೆ? ಪೂಜೆಗೆ ಶುಭ ಮುಹೂರ್ತ ಯಾವಾಗ?

ಹಿಂದೂ ಪುರಾಣದ ಪ್ರಕಾರ ಭಗವಾನ್ ವಿಷ್ಣು ದೇವಶಯನ ಏಕಾದಶಿಯಿಂದ ಯೋಗ ನಿದ್ರೆಗೆ ಹೋಗುತ್ತಾನೆ ಮತ್ತು   ಪರಿವರ್ತಿನಿ ಏಕಾದಶಿಯ ದಿನ ಬದಿಗೆ ಬದಲಾಗುತ್ತಾನೆ. ಬದಿಯನ್ನು ಬದಲಾಯಿಸುವುದು ವಿಷ್ಣುವಿನ ಸ್ಥಾನವನ್ನು ಬದಲಾಯಿಸುತ್ತದೆ.

ಅದಕ್ಕಾಗಿಯೇ ಇದನ್ನು ಪರಿವರ್ತಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಮಾಡುವ ಉಪವಾಸ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ. ಈ ಏಕಾದಶಿಯಂದು ಉಪವಾಸವಿದ್ದು ಆಚರಿಸಿದರೆ ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.

ಧಾರ್ಮಿಕ ಮಹತ್ವ
ಧಾರ್ಮಿಕ ನಂಬಿಕೆಯ ಪ್ರಕಾರ ವಿಷ್ಣುವು ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕದಂದು ಮಲಗುವ ಸ್ಥಿತಿಯನ್ನು ಬದಲಾಯಿಸುತ್ತಾನೆ. ಇದರಿಂದ ಅನೇಕ ಬದಲಾವಣೆಗಳಾಗುತ್ತವೆ ಎಂದು ಹೇಳಲಾಗುವುದು. ಆದ್ದರಿಂದ ಇದನ್ನು ಪರಿವರ್ತಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಕಟ್ಟು ನಿಟ್ಟಿನ ಉಪವಾಸವಿದ್ದು ವಿಷ್ಣುವಿನ ವಿಶೇಷ ಪೂಜೆಯನ್ನು ಮಾಡಲಾಗುವುದು. ಪ್ರಸ್ತುತ ಚಾತುರ್ಮಾಸ ನಡೆಯುತ್ತಿದೆ. ಈ ದಿನ, ಚಾತುರ್ಮಾಸದ ಅವಧಿಯಲ್ಲಿ, ಯೋಗನಿದ್ರೆಯಲ್ಲಿ ಮಲಗಿರುವ ವಿಷ್ಣು ತಿರುವುಗಳನ್ನು ಪಡೆಯುತ್ತಾನೆ ಮತ್ತು ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ ಎಂದು ನಂಬಲಾಗಿದೆ. ಇದರ ಜೊತೆಯಲ್ಲಿಈ ದಿನಾಂಕದಂದು ವಿಷ್ಣುವಿನ ವಾಮನ ರೂಪವನ್ನು ಪೂಜಿಸುವುದು. ಈ ಸಮಯದಲ್ಲಿ ವಿಷ್ಣು ವಾಮನ ರೂಪದಲ್ಲಿ ಪಾತಾಳ ಲೋಕದಲ್ಲಿ ನೆಲೆಸಿರುತ್ತಾನೆ ಎಂದು ನಂಬಲಾಗಿದೆ.

ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಬರುವ ಈ ಏಕಾದಶಿ ತುಂಬಾ ಮಹತ್ವವನ್ನು ಹೊಂದಿದೆ. ಈ ಏಕಾದಶಿ ಆಚರಿಸಿದರೆ ವಾಜಪೇಯಿ ಯಜ್ಞ ಮಾಡಿದಷ್ಟು ಫಲ ಸಿಗುವುದು ಎಂದು ಹೇಳಲಾಗುವುದು. ಈ ಏಕಾದಶಿ ಆಚರಿಸುವುದರಿಂದ ಜೀವನದಲ್ಲಿ ಯಾವುದೇ ಕೊರತೆಯಾಗುವುದಿಲ್ಲ. ಐಶ್ವರ್ಯ, ಆರೋಗ್ಯ ತುಂಬಿರುತ್ತದೆ.

ಪೂಜೆ ಫಲಕ್ಕಾಗಿ ಕಟ್ಟುನಿಟ್ಟಿನ ಉಪವಾಸ ಮಾಡಬೇಕು
ಏಕಾದಶಿ ಉಪವಾಸವನ್ನು ಅತ್ಯಂತ ಕಷ್ಟಕರವಾದ ಉಪವಾಸವೆಂದು ಪರಿಗಣಿಸಲಾಗಿದೆ. ಏಕಾದಶಿ ತಿಥಿಯ ಆರಂಭದಿಂದಲೇ ಈ ಉಪವಾಸದ ಸಿದ್ಧತೆ ಆರಂಭವಾಗುತ್ತದೆ. ಉದಯದ ದಿನದಂದು ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸವನ್ನು ಮುಂದಿನ ದಿನಾಂಕದಂದು ಅಂದರೆ ದ್ವಾದಶಿಯ ದಿನದಂದು ಮುರಿಯಲಾಗುವುದು. ಏಕಾದಶಿ ಉಪವಾಸದ ವಿವರಣೆಯು ಮಹಾಭಾರತದ ಕಥೆಯಲ್ಲೂ ಕಂಡುಬರುತ್ತದೆ.
****

ಪರಿವರ್ತಿನಿ ಏಕಾದಶಿ: ಏಕಾದಶಿ ಪರಿಹಾರ ಕ್ರಮಗಳಾವುವು..? ಈ ಮಂತ್ರವನ್ನು ಪಠಿಸಿ..!

ಭಾದ್ರಪದ ಶುಕ್ಲ ಏಕಾದಶಿಯ ದಿನ ಪೂಜೆಯ ದೃಷ್ಟಿಯಿಂದ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ಪರಿವರ್ತಿನಿ ಏಕಾದಶಿ, ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುವುದು. ಭಗವಾನ್ ವಿಷ್ಣುವಿನ ವಾಮನ ಅವತಾರವನ್ನು ಪರಿವರ್ತಿನಿ ಏಕಾದಶಿ ಉಪವಾಸದ ಸಮಯದಲ್ಲಿ ಪೂಜಿಸಲಾಗುತ್ತದೆ. ಆದ್ದರಿಂದ ಈ ದಿನವನ್ನು ವಾಮನ ಜಯಂತಿಯೆಂದೂ ಕರೆಯಲಾಗುತ್ತದೆ. ಈ ದಿನದಂದು ಉಪವಾಸ ಮಾಡುವುದರಿಂದ ಎಲ್ಲಾ ರೀತಿಯ ಆಸೆಗಳು ಈಡೇರುತ್ತದೆ. ಪರಿವರ್ತಿನಿ ಏಕಾದಶಿಗೆ ಸಂಬಂಧಿಸಿದಂತೆ, ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕದಂದು, ವಿಷ್ಣು ವಿಶ್ರಾಂತಿಯ ಸಮಯದಲ್ಲಿ ತನ್ನ ಮಗ್ಗುಲನ್ನು ಬದಲಾಯಿಸುತ್ತಾನೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಈ ಏಕಾದಶಿಯನ್ನು ಪರಿವರ್ತಿನಿ ಏಕಾದಶಿ, ಪದ್ಮ ಏಕಾದಶಿ ಎಂದೂ ಕರೆಯಲಾಗುತ್ತದೆ.
                                                        "ಪರಿವರ್ತಿನಿ ಏಕಾದಶಿ ಮಂತ್ರ'

- ಭಗವಾನ್ ವಿಷ್ಣುವಿನ ದ್ವಾದಶಾಕ್ಷರ ಮಂತ್ರವಾದ ' ಓಂ ನಮೋ ಭಗವತೇ ವಾಸುದೇವಾಯ' ಮಂತ್ರವನ್ನು ಕನಿಷ್ಠ 108 ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ತುಳಸಿ ಮಾಲೆಯನ್ನು ಹಿಡಿದು ಪಠಿಸಿ.

- ' ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಕೃಷ್ಣ ಗೋವಿಂದಾಯ ಗೋಪಿಜನ ವಲ್ಲಭಾಯ ಶ್ರೀ ಶ್ರೀ ಶ್ರೀ ಶ್ರೀ'

- ' ಕ್ರಿಂ ಕೃಷ್ಣಾಯ ನಮಃ' ಮಂತ್ರವನ್ನು 108 ಬಾರಿ ಪಠಿಸಬೇಕು.

​ಸಾಲದಿಂದ ಪರಿಹಾರ ಪಡೆಯಲು
ನೀವು ಮತ್ತೆ ಮತ್ತೆ ಸಾಲ ತೆಗೆದುಕೊಳ್ಳುವ ಸಮಸ್ಯೆಯನ್ನು ಎದುರಿಸಿದರೆ. ಸಾಕಷ್ಟು ಪ್ರಯತ್ನ ಮಾಡಿದರೂ ಸಾಲ ತೀರಿಸಲು ಸಾಧ್ಯವಾಗದಿದ್ದರೆ, ಈ ಏಕಾದಶಿಯಂದು, ಅರಳಿ ಮರದ ಬುಡಕ್ಕೆ ಸಕ್ಕರೆ ಹಾಕಿ ಮತ್ತು ನೀರನ್ನು ಅರ್ಪಿಸಿ ಮತ್ತು ಸಂಜೆ ಅರಳಿ ಮರದ ಕೆಳಗೆ ದೀಪವನ್ನು ಹಚ್ಚಿ.

​ಆರ್ಥಿಕ ಪರಿಸ್ಥಿತಿ ಸುಧಾರಿಸಲು 
ಏಕಾದಶಿಯ ದಿನದಂದು ವಿಷ್ಣುವನ್ನು ಪೂಜಿಸುವಾಗ, ಆತನ ಮುಂದೆ ಕೆಲವು ನಾಣ್ಯಗಳನ್ನು ಇಡಿ. ಪೂಜೆಯ ನಂತರ, ಈ ನಾಣ್ಯಗಳನ್ನು ಕೆಂಪು ರೇಷ್ಮೆ ಬಟ್ಟೆಯಲ್ಲಿ ಕಟ್ಟಿಕೊಳ್ಳಿ ಮತ್ತು ಅವುಗಳನ್ನು ಯಾವಾಗಲೂ ನಿಮ್ಮ ಪರ್ಸ್‌ನಲ್ಲಿ ಅಥವಾ ಸುರಕ್ಷಿತವಾದ ಸ್ಥಳದಲ್ಲಿ ಇರಿಸಿ. ಇದು ನಿಮ್ಮಲ್ಲಿನ ಹಣವನ್ನು ಹೆಚ್ಚಾಗುವಂತೆ ಮಾಡುತ್ತದೆ. ಇದನ್ನು ಹೆಚ್ಚಾಗಿ ವ್ಯಾಪಾರಸ್ಥರು ಮಾಡಬೇಕು.

​ಏಕಾದಶಿ ರಾತ್ರಿ ದೀಪ ಆರದಂತೆ ನೋಡಿಕೊಳ್ಳಿ
ಏಕಾದಶಿಯ ರಾತ್ರಿ, ನಿಮ್ಮ ಮನೆಯಲ್ಲಿ ಅಥವಾ ಯಾವುದೇ ವಿಷ್ಣು ದೇವಸ್ಥಾನದಲ್ಲಿ, ಭಗವಾನ್ ಶ್ರೀ ಹರಿ ವಿಷ್ಣುವಿನ ಮುಂದೆ 9 ದೀಪಗಳನ್ನು ಹಚ್ಚಿ, ಆ ದೀಪವು ರಾತ್ರಿಯಿಡೀ ನಂದಿ ಹೋಗದಂತೆ ನೋಡಿಕೊಳ್ಳಿ. ಇದು ತ್ವರಿತ ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ. ಎಲ್ಲಾ ಸಾಲಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ವ್ಯಕ್ತಿಯ ಜೀವನವು ಸಂತೋಷ ಮತ್ತು ಅದೃಷ್ಟದಿಂದ ತುಂಬಿರುತ್ತದೆ.

​ಆರ್ಥಿಕ ಲಾಭಕ್ಕಾಗಿ
ಜೀವನದಲ್ಲಿ ಆರ್ಥಿಕ ಲಾಭಗಳನ್ನು ಪಡೆಯಲು, ಈ ಏಕಾದಶಿಯಂದು, ವಿಷ್ಣುವಿನ ದೇವಸ್ಥಾನದಲ್ಲಿ ಒಂದು ಸಂಪೂರ್ಣ ಶ್ರೀಫಲ ಮತ್ತು ನೂರು ಗ್ರಾಂ ತುಂಡಾಗದ ಬಾದಾಮಿಯನ್ನು ಅರ್ಪಿಸಿ.

​ಲಕ್ಷ್ಮಿ ಪೂಜೆ
ಈ ದಿನ ಲಕ್ಷ್ಮೀ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿಯ ಆರಾಧನೆಯು ಹಣದ ಕೊರತೆಯನ್ನು ನಿವಾರಿಸುತ್ತದೆ.

​ಶೀಘ್ರ ವಿವಾಹಕ್ಕಾಗಿ ಪರಿಹಾರ
ವಿವಾಹದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು, ಈ ಏಕಾದಶಿಯಂದು ವಿಷ್ಣುವನ್ನು ಹಳದಿ ಹೂವುಗಳಿಂದ ಅಲಂಕರಿಸಬೇಕು. ಪರಿಮಳಯುಕ್ತ ಶ್ರೀಗಂಧವನ್ನು ಹಚ್ಚುವ ಮೂಲಕ ಅವರಿಗೆ ಕಡಲೆ ಬೇಳೆಯಿಂದ ತಯಾರಿಸಿದ ಸಿಹಿ ನೈವೇದ್ಯವನ್ನು ಅರ್ಪಿಸಿ. ಇದರಿಂದ ವಿವಾಹ ಶೀಘ್ರದಲ್ಲೇ ನಡೆಯಲಿದೆ.

​ಇವುಗಳನ್ನು ದಾನ ಮಾಡಿ
ಈ ಏಕಾದಶಿ ದಿನದಂದು ಅಕ್ಕಿ, ಮೊಸರು ಮತ್ತು ಬೆಳ್ಳಿಯನ್ನು ದಾನ ಮಾಡಿ, ಈ ದಾನವು ಬಹಳ ಫಲಪ್ರದವಾಗಿದೆ. ಆದರೆ ಇವುಗಳನ್ನು ಏಕಾದಶಿ ದಿನದಂದು ಸ್ವತಃ ನೀವೇ ಸೇವಿಸಬಾರದು.

​ಇದನ್ನು ಪಠಿಸಿ
ಈ ದಿನ ಶ್ರೀ ವಿಷ್ಣು ಸಹಸ್ರನಾಮ, ಶ್ರೀ ಕೃಷ್ಣ ಚಾಲೀಸಾ ಮತ್ತು ಕೃಷ್ಣ ನಾಮಗಳನ್ನು ತಪ್ಪದೇ ಜಪಿಸಬೇಕು. ಇವುಗಳನ್ನು ಪಠಿಸುವುದರಿಂದ ನೀವು ಪೂಜೆಯ ಸಂಪೂರ್ಣ ಫಲವನ್ನು ಪಡೆದುಕೊಳ್ಳುವಿರಿ.
*****

೧೨) ಭಾದ್ರಪದ ಬಹುಳ ಏಕಾದಶಿ - ಇಂದಿರಾ - 
ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.
ಇಂದಿರಾ ಏಕಾದಶಿ : ಇಲ್ಲಿದೆ ಶುಭ ಮುಹೂರ್ತ, ಮಹತ್ವ, ಪೂಜೆ ವಿಧಾನ ಮತ್ತು ಶ್ರಾದ್ಧ ವಿಧಾನ..!

ಇಂದಿರಾ ಏಕಾದಶಿ ವ್ರತ ಪಿತೃ ಪಕ್ಷದಲ್ಲಿ ಬರುವುದರಿಂದ ಇದರ ಮಹತ್ವ ಹೆಚ್ಚಾಗಿರುತ್ತದೆ. ಈ ವ್ರತವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ಏಕಾದಶಿ ವ್ರತವನ್ನು ಆಚರಿಸುವುದರಿಂದ ಭಗವಾನ್ ವಿಷ್ಣುವು ಪ್ರಸನ್ನನಾಗುವುದಲ್ಲದೆ ಪೂರ್ವಜರಿಗೆ ಆತ್ಮವು ಮೋಕ್ಷವನ್ನು ಪಡೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಪಿತೃ ಪಕ್ಷದಲ್ಲಿ ಬರುವ ಇಂದಿರಾ ಏಕಾದಶಿಯಂದು ಯಾವ ದೇವರನ್ನು ಪೂಜಿಸಬೇಕು..? ಮತ್ತು ಅದರ ಮಹತ್ವವೇನು ಎಂಬುದನ್ನು ತಿಳಿಯೋಣ.

​ಇಂದಿರಾ ಏಕಾದಶಿಯಂದು ಏನು ಮಾಡಬೇಕು..?

ಶ್ರಾದ್ಧ ಪಕ್ಷದಲ್ಲಿ ಬರುವ ಈ ಏಕಾದಶಿಯ ಪುಣ್ಯವನ್ನು ಪೂರ್ವಜರಿಗೆ ನೀಡಿದರೆ ನರಕಕ್ಕೆ ಹೋದ ಪೂರ್ವಜರೂ ಅಲ್ಲಿಂದ ಮುಕ್ತಿ ಪಡೆದು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಪದ್ಮ ಪುರಾಣದಲ್ಲಿ ಹೇಳಲಾಗಿದೆ. ಇಂದಿರಾ ಏಕಾದಶಿಯ ದಿನದಂದು ಪುಣ್ಯನದಿಗಳಲ್ಲಿ ಸ್ನಾನ ಮಾಡಿದ ನಂತರ ಪೂರ್ವಜರ ಹೆಸರಿನಲ್ಲಿ ತರ್ಪಣವನ್ನು ಮಾಡಬೇಕು. ಇದರೊಂದಿಗೆ ವಿಷ್ಣುವಿನ ಚತುರ್ಭುಜ ರೂಪವನ್ನು ಕಪ್ಪು ಎಳ್ಳು ಮತ್ತು ಕೆಲವು ಹಣ್ಣುಗಳಿಂದ ಪೂಜಿಸಬೇಕು. ಇಂದಿರಾ ಏಕಾದಶಿಯ ದಿನ ಪೂರ್ವಜರ ಹೆಸರಿನಲ್ಲಿ ದಾನವನ್ನೂ ಮಾಡಬೇಕು, ಹೀಗೆ ಮಾಡುವುದರಿಂದ ಪೂರ್ವಜರ ಅನುಗ್ರಹ ದೊರೆಯುತ್ತದೆ. ಧರ್ಮಗ್ರಂಥಗಳಲ್ಲಿ, ಶ್ರಾದ್ಧ ಪಕ್ಷದಲ್ಲಿ ದೇವತೆಗಳ ಮುಂದೆ ಪೂರ್ವಜರನ್ನು ಮೆಚ್ಚಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ದೇವಪೂಜೆಯ ಮೊದಲು ಪಿತೃ ಪೂಜೆಯನ್ನು ಮಾಡಲಾಗುತ್ತದೆ.

​ಇಂದಿರಾ ಏಕಾದಶಿಯಂದು ಯಾರ ಶ್ರಾದ್ಧವನ್ನು ಮಾಡಬೇಕು..?

ಏಕಾದಶಿಯ ದಿನದಂದು ಮರಣ ಹೊಂದಿದವರು, ಅದು ಕೃಷ್ಣ ಪಕ್ಷ ಅಥವಾ ಶುಕ್ಲ ಪಕ್ಷದಲ್ಲಿ ಮರಣ ಹೊಂದಿದ ಪಿತೃಗಳ ಶ್ರಾದ್ಧ ಕರ್ಮವನ್ನು ಈ ದಿನ ಮಾಡಲಾಗುತ್ತದೆ. ದೇಶ ಮತ್ತು ಪ್ರಪಂಚದಿಂದ ಸನ್ಯಾಸತ್ವ ಸ್ವೀಕರಿಸುವ ಜನರಿಗೆ ಈ ದಿನದಂದು ಶ್ರಾದ್ಧವನ್ನು ಮಾಡಲಾಗುತ್ತದೆ. ಮತ್ತೊಂದೆಡೆ, ದ್ವಾದಶಿ ತಿಥಿಯಂದು ಸಂತರು ಮತ್ತು ಸನ್ಯಾಸಿಗಳ ಶ್ರಾದ್ಧವನ್ನು ಮಾಡಲಾಗುತ್ತದೆ. ಕೆಲವು ಕಾರಣಗಳಿಂದ ನಿಮಗೆ ಶ್ರಾದ್ಧ ಮಾಡಲು ಸಾಧ್ಯವಾಗದಿದ್ದರೆ, ಈ ದಿನದಂದು ಉಪವಾಸ ಮಾಡಿ ಮತ್ತು ಪೂರ್ವಜರ ಹೆಸರಿನಲ್ಲಿ ದಾನ ಮಾಡಬೇಕು.

​ಇಂದಿರಾ ಏಕಾದಶಿಯಂದು ಶ್ರಾದ್ಧವನ್ನು ಏಕೆ ಮಾಡಬೇಕು..?

ಹಿಂದೂ ಧರ್ಮದಲ್ಲಿ ಶ್ರಾದ್ಧ ಪಕ್ಷಕ್ಕೆ ವಿಶೇಷ ಮಹತ್ವವಿದೆ ಮತ್ತು ಏಕಾದಶಿಯ ದಿನದಂದು ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರಿಗೆ ಮೋಕ್ಷ ಸಿಗುತ್ತದೆ. ಏಕಾದಶಿಯಂದು ಶ್ರಾದ್ಧವನ್ನು ಮಾಡುವುದರಿಂದ ಆತ್ಮವು ಜನನ ಮತ್ತು ಮರಣದ ಬಂಧನದಿಂದ ಮುಕ್ತವಾಗುತ್ತದೆ ಮತ್ತು ಮೋಕ್ಷವನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ. ಯಾವುದೇ ಪೂರ್ವಜರು ತಿಳಿದೋ ತಿಳಿಯದೆಯೋ ಪಾಪಕರ್ಮಗಳಿಂದ ಯಮಲೋಕದಲ್ಲಿ ಕರ್ಮಫಲವನ್ನು ಅನುಭವಿಸುತ್ತಿದ್ದರೆ ಪಿತೃ ಪಕ್ಷದಲ್ಲಿ ಬರುವ ಏಕಾದಶಿಯ ದಿನದಂದು ನಿಯಮಾನುಸಾರ ಉಪವಾಸವಿದ್ದು ದಾನಧರ್ಮಗಳನ್ನು ಮಾಡುವುದರಿಂದ ಮೋಕ್ಷ ದೊರೆಯುತ್ತದೆ. ಇದರೊಂದಿಗೆ ಈ ಏಕಾದಶಿಯಂದು ಉಪವಾಸದಿಂದ ಪಡೆದ ಪುಣ್ಯವನ್ನು ಪೂರ್ವಜರ ಹೆಸರಿನಲ್ಲಿ ದಾನ ಮಾಡಿ, ಹೀಗೆ ಮಾಡುವುದರಿಂದ ಆತ್ಮವು ಶಿಕ್ಷೆಯಿಂದ ಮುಕ್ತಿ ಪಡೆದು ಸ್ವರ್ಗವನ್ನು ಪಡೆಯುತ್ತದೆ.

​ಏಕಾದಶಿಯಂದು ಉಪವಾಸ ಮಾಡುವುದರಿಂದ ಯಮದೂತರ ಭಯವಿರದು
ಪಿತೃ ಪಕ್ಷದಲ್ಲಿ ಬರುವ ಇಂದಿರಾ ಏಕಾದಶಿಗೆ ವಿಶೇಷ ಮಹತ್ವವಿದೆ. ಈ ಏಕಾದಶಿಯನ್ನು ಪುಣ್ಯ ಮತ್ತು ಮೋಕ್ಷದ ದಿನವೆಂದು ಪರಿಗಣಿಸಲಾಗುತ್ತದೆ. ಈ ಏಕಾದಶಿಯ ಉಪವಾಸವನ್ನು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಿ ಮಾಡಿದರೆ, ವ್ಯಕ್ತಿಯು ಮರಣದ ನಂತರ ಯಮದೂತರ ಭಯವನ್ನು ಹೊಂದಿರುವುದಿಲ್ಲ ಮತ್ತು ಆತ್ಮಕ್ಕೆ ಮೋಕ್ಷವು ಸರಳವಾಗಿ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಈ ಏಕಾದಶಿಯಂದು ಉಪವಾಸ ಮಾಡುವುದರಿಂದ ಅದರ ಪುಣ್ಯ ಫಲವನ್ನು ಪೂರ್ವಜರಿಗೆ ನೀಡುವುದರಿಂದ ಹೆಚ್ಚಿನ ಫಲವೂ ದೊರೆಯುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಹಿಂದಿನ ಜನ್ಮದಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳಿಂದ ಮುಕ್ತಿ ಪಡೆದು ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ.

​ಇಂದಿರಾ ಏಕಾದಶಿ ಮಹತ್ವ
ಏಕಾದಶಿ ಉಪವಾಸದಲ್ಲಿ ಮುಖ್ಯವಾಗಿ ಭಗವಾನ್‌ ವಿಷ್ಣು, ಶ್ರೀ ಕೃಷ್ಣ ಅಥವಾ ಅವನ ಅವತಾರಗಳನ್ನು ಪೂಜಿಸಲಾಗುತ್ತದೆ. ಈ ಉಪವಾಸದಿಂದ ಮನಸ್ಸು ಮತ್ತು ದೇಹ ಎರಡೂ ಸಮತೋಲನದಲ್ಲಿರುತ್ತವೆ. ಇಂದಿರಾ ಏಕಾದಶಿ ಉಪವಾಸದಿಂದ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಮತ್ತು ಆ ವ್ಯಕ್ತಿಯ ಇಷ್ಟಾರ್ಥಗಳು ಈಡೇರುತ್ತದೆ. ಈ ವ್ರತದ ಮಹಿಮೆಯಿಂದ ಪಾಪಗಳು ನಾಶವಾಗುತ್ತವೆ ಜೊತೆಗೆ ಪೂರ್ವಜರಿಗೂ ಮೋಕ್ಷ ಸಿಗುತ್ತದೆ.

​ಇಂದಿರಾ ಏಕಾದಶಿ ಪೂಜೆ ವಿಧಾನ
                                                                                                                   ಮೊದಲನೆಯದಾಗಿ ಈ ದಿನದಂದು ಬೆಳಿಗ್ಗೆ ಸ್ನಾನ ಮಾಡಿದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ನಂತರ ವಿಷ್ಣುವಿನ ಶಾಲಿಗ್ರಾಮ ರೂಪವನ್ನು ಪೂಜಿಸಿ. ಅವನಿಗೆ ಹಳದಿ ಹೂವುಗಳು, ಪಂಚಾಮೃತ ಮತ್ತು ತುಳಸಿ ದಳವನ್ನು ಅರ್ಪಿಸಿ. ನೀವು ಹಣ್ಣುಗಳನ್ನು ಸಹ ಈ ದಿನ ವಿಷ್ಣುವಿಗೆ ಅರ್ಪಿಸಬಹುದು. ದೇವರನ್ನು ಧ್ಯಾನಿಸಿ ಮತ್ತು ಆತನ ಮಂತ್ರಗಳನ್ನು ಪಠಿಸಿ. ನಿಮ್ಮ ಬಳಿ ಕಠಿಣ ಉಪವಾಸವನ್ನು ಮಾಡಲು ಸಾಧ್ಯವಾಗದಿದ್ದರೆ ಫಲಾಹಾರವನ್ನು ತೆಗೆದುಕೊಳ್ಳಬಹುದು. ಈ ದಿನ ಹಣ್ಣುಗಳನ್ನು ದಾನ ಮಾಡಿ ಮತ್ತು ಹಸುವಿಗೆ ಹಣ್ಣು ಇತ್ಯಾದಿಗಳನ್ನು ತಿನ್ನಿಸಿ. ಮರುದಿನ ಬೆಳಗ್ಗೆ ಬಡವರಿಗೆ ಊಟ ನೀಡಿ. ವಸ್ತ್ರ ಇತ್ಯಾದಿಗಳನ್ನು ದಾನ ಮಾಡಿ ಮತ್ತು ನಂತರ ನೀವೇ ಊಟ ಮಾಡುವ ಮೂಲಕ ಉಪವಾಸವನ್ನು ಮುಕ್ತಾಯಗೊಳಿಸಿ.

​ಇಂದಿರಾ ಏಕಾದಶಿ ವ್ರತ ನಿಯಮಗಳು
- ಇಂದಿರಾ ಏಕಾದಶಿಯಂದು ಸೂರ್ಯೋದಯವಾಗುವ ಮೊದಲು ಎದ್ದೇಳಲು ಪ್ರಯತ್ನಿಸಿ.

- ಬೆಳ್ಳುಳ್ಳಿ, ಈರುಳ್ಳಿ ಅಥವಾ ತಾಮಸಿಕ ಆಹಾರವನ್ನು ಮನೆಯಲ್ಲಿ ತಯಾರಿಸಲೇಬೇಡಿ.

- ಏಕಾದಶಿಯ ಪೂಜೆಯಲ್ಲಿ ಸ್ವಚ್ಛವಾದ ಬಟ್ಟೆಗಳನ್ನು ಬಳಸಿ, ಕಪ್ಪು ಅಥವಾ ನೀಲಿ ಬಟ್ಟೆಗಳನ್ನು ಧರಿಸಬೇಡಿ.

- ಏಕಾದಶಿಯ ಉಪವಾಸದ ಸಮಯದಲ್ಲಿ ಕುಟುಂಬದಲ್ಲಿ ಶಾಂತಿಯುತ ವಾತಾವರಣವನ್ನು ಇರಿಸಿ. ಮನೆಯಲ್ಲಿ ಜಗಳ, ಮನಸ್ಥಾಪದ ವಾತಾವರಣ ನಿರ್ಮಾಣ ಮಾಡಬೇಡಿ.

- ಏಕಾದಶಿ ಉಪವಾಸದ ಸಮಯದಲ್ಲಿ ಅನ್ನ ತಿನ್ನುವುದನ್ನು ತಪ್ಪಿಸಿ.
***
ಇಂದಿರಾ ಏಕಾದಶಿ ಕಥೆ :-

ಧರ್ಮರಾಯನು  ಶ್ರೀ ಕೃಷ್ಣನನ್ನು ಕೇಳುತ್ತಾನೆ, ಹೇ ವಾಸುದೇವ, ಪಿತೃ ಪಕ್ಷದಲ್ಲಿ ಬರುವ ಏಕಾದಶಿ ಯಾವುದು ಮತ್ತು ಇದರ ಮಹತ್ವ ಗಳು ಏನು? ಹೇಗೆ ಆಚರಿಸಬೇಕು ಎಲ್ಲವನ್ನು ಕುರಿತು  ಹೇಳುವಂಥವನಾಗು.  ಕೃಷ್ಣ ಹೇಳಿದ, ಯುಧಿಷ್ಠಿರ ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಈ ಏಕಾದಶಿಯನ್ನು "ಇಂದಿರಾ ಏಕಾದಶಿ" ಎಂದು ಕರೆಯುತ್ತಾರೆ. ಈ ಏಕಾದಶಿ ವ್ರತವನ್ನು ಆಚರಣೆ ಮಾಡುವುದರಿಂದ ಮನುಷ್ಯನು  ತಾನು ಮಾಡಿದ ಪಾಪ ಕರ್ಮಗಳನ್ನು ಕಳೆದುಕೊಳ್ಳುವುದರ ಜೊತೆಗೆ ತನ್ನ ಪೂರ್ವಿಕರು ಗೊತ್ತಿದ್ದು ಗೊತ್ತಿಲ್ಲದೆಯೋ, ಪಾಪಗಳನ್ನು ಮಾಡಿ ನರಕ  ಲೋಕದಲ್ಲಿದ್ದರೆ, ಅವರ ಪಾಪಗಳು ಕಳೆದು ಅವರಿಗೂ ಸದ್ಗತಿ ದೊರೆಯುತ್ತದೆ. ಹಾಗೂ ಈ ಏಕಾದಶಿ ಆಚರಣೆ ಮಾಡುವುದರಿಂದ ಅಶ್ವಮೇಧಯಾಗದ  ಫಲ ದೊರೆಯುತ್ತದೆ. ಈ ಕುರಿತಾಗಿ ನಿನಗೊಂದು ಕಥೆ ಹೇಳುತ್ತೇನೆ ಎಂದನು. 

ಪೂರ್ವದಲ್ಲಿ "ಮಾಹೀಶ್ಮತಿ" ಎಂಬ ನಗರವನ್ನು  "ಇಂದ್ರಸೇನಾ" ಎಂಬ ರಾಜನು ಆಳುತ್ತಿದ್ದನು. ರಾಜನು, ಧರ್ಮಿಷ್ಟನು, ಪ್ರಜಾ ಪರಿಪಾಲಕನು, ಉದಾರಿಯು, ಕರುಣೆಉಳ್ಳವನು ಆಗಿದ್ದನು. ಇವನ ಆಡಳಿತದಲ್ಲಿ ಪ್ರಜೆಗಳು ಸಂತೃಪ್ತಿಯಿಂದ ಜೀವನ ಮಾಡುತ್ತಿದ್ದರು. ರಾಜನು ಶ್ರೀವಿಷ್ಣುವಿನ  ಭಕ್ತ ನಾಗಿದ್ದು ಪೂಜೆ, ನೇಮ, ನಿಷ್ಠೆ, ಆಚರಣೆಗಳನ್ನು ಕ್ರಮದಂತೆ ಪಾಲಿಸುತ್ತಿದ್ದನು. ರಾಜನ ಈ ಎಲ್ಲಾ  ಪುಣ್ಯದ ಫಲದಿಂದಲೋ ಎಂಬಂತೆ  ಅರಮನೆಯವರು, ಹಾಗೂ ಪರಿವಾರ ವಾದ  ಪತ್ನಿ, ಪುತ್ರ, ಪುತ್ರಿ, ಮೊಮ್ಮಕ್ಕಳು, ಬಂಧುಗಳು, ಆಡಳಿತ ಸಿಬ್ಬಂದಿ, ಸಹಿತ  ಸುಖ ಸಂತೋಷ  ಸಮೃದ್ಧಿಯಿಂದ  ತುಂಬಿತ್ತು. ಒಮ್ಮೆ ರಾಜ ಇಂದ್ರಸೇನನು, ಪಂಡಿತರು,ಸಭಿಕರು ಹಾಗೂ ಪ್ರಜೆಗಳ ಮಧ್ಯೆ ಕುಳಿತು ಧಾರ್ಮಿಕ ವಿಷಯ ಕುರಿತು ಚರ್ಚಿಸುವಾಗ , ಶ್ರೀಮನ್ನಾರಾಯಣಗೆ  ಪ್ರಿಯರಾದ ನಾರದರು ಆಕಾಶ ಮಾರ್ಗದಿಂದ  ಬರುತ್ತಿದ್ದು, ಪೃಥ್ವಿಯ ಮೇಲೆ ಇಳಿದರು. ಇದನ್ನು ಕಂಡ ರಾಜನು ಎದ್ದು  ಬಂದು  ಕೈಮುಗಿದು ನಾರದರನ್ನು ಸ್ವಾಗತಿಸಿ, ಅರಮನೆಗೆ ಕರೆದೊಯ್ದು , ಆಸನದಲ್ಲಿ ಕೂರಿಸಿ ಆದರಾತಿಥ್ಯ ಸತ್ಕಾರ ಮಾಡಿ ಕುಶಲೋಪರಿ ವಿಚಾರಿಸಿದನು. 

ರಾಜನ ಸತ್ಕಾರದಿಂದ ಸಂತುಷ್ಟರಾದ ನಾರದರು, ರಾಜನಿಗೆ ಮೂರು ಪ್ರಶ್ನೆಯನ್ನು ಕೇಳಿದರು. ನಿನ್ನ  ರಾಜ್ಯದಲ್ಲಿ  ನಿನ್ನ ಪರಿವಾರ, ಬ್ರಾಹ್ಮಣರು, ಪ್ರಜೆಗಳು ಸೌಖ್ಯವಾಗಿದ್ದೀರಾ? ಮತ್ತು ಆಡಳಿತಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ಪ್ರಜೆಗಳ ಜೊತೆ ಚರ್ಚೆ ಮಾಡುತ್ತೀಯಾ? ಮುಖ್ಯವಾಗಿ ಭಗವಂಥನಾದ  ನಾರಾಯಣನಿಗೆ  ಪೂಜಾ ಕಾರ್ಯಗಳು ಸೇರಿದಂತೆ ಅನಂತ ಸೇವಾ  ಕಾರ್ಯಗಳನ್ನು  ಸಮರ್ಪಕವಾಗಿ ಸಲ್ಲಿಸುತ್ತಿದ್ದೀಯಾ?  ನಾರದರು ಕೇಳಿದ ಪ್ರಶ್ನೆಗೆ ರಾಜನು, ಹೇ ನಾರದಮುನಿ ಶ್ರೇಷ್ಠನೆ, ಶ್ರೀಹರಿಯ ಕೃಪೆಯಿಂದ ನಮ್ಮ ರಾಜ್ಯ ಸುಭೀಕ್ಷವಾಗಿದೆ. ಬ್ರಾಹ್ಮಣರೆಲ್ಲರೂ ಯಜ್ಞ ಯಾಗಾದಿಗಳನ್ನು ಮಾಡುತ್ತಾ ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ರಾಜ್ಯದ ಪ್ರಜೆಗಳೆಲ್ಲರೂ ಸೌಖ್ಯವಾಗಿದ್ದಾರೆ, ಅರಮನೆಯು, ಬಂದು ಬಳಗ, ಪರಿವಾರ ಆಪ್ತಮಿತ್ರರು ಸಭಿಕರು ಪಂಡಿತೋತ್ತಮರಿಂದ ಕಂಗೊಳಿಸುತ್ತಿದೆ. ಹಾಗೂ ದಿನದ ಹೆಚ್ಚಿನ ಸಮಯವನ್ನು ಭಗವಾನ್ ಶ್ರೀ ಮಹಾವಿಷ್ಣುವಿನ  ಸೇವಾ ಕಾರ್ಯದಲ್ಲಿ  ತೊಡಗಿಸಿ ಕೊಂಡಿದ್ದೇನೆ.  ಎಂದು ವಿವರವಾಗಿ ಒಪ್ಪಿಸಿದನು. ಶ್ರೇಷ್ಠ  ಮುನಿಯೇ  ಇಂದು  ಇಲ್ಲಿಗೆ ತಾವು ನಮ್ಮಲ್ಲಿಗೆ ಬಂದ  ಕಾರಣವೇನು ದಯವಿಟ್ಟು ಹೇಳುವಿರಾ? ಎಂದು ವಿನಯದಿಂದ ಕೇಳಿದನು. 

ಕೇಳು ರಾಜ, ನಾನು ಬ್ರಹ್ಮ ಲೋಕದಿಂದ ಯಮಲೋಕಕ್ಕೆ ಹೋಗಿದ್ದೆ.ಯಮರಾಜನ ಸಭೆಯಲ್ಲಿ  ನಿನ್ನ ತಂದೆಯನ್ನು ನೋಡಿದೆ. ಇದರಿಂದ ನಾನು ಆಶ್ಚರ್ಯ ಚಕಿತನಾದೆ.  ಏಕೆಂದರೆ ಇಷ್ಟೂಂದು  ಧರ್ಮ ಕಾರ್ಯಗಳನ್ನು ನಡೆಸುತ್ತಿರುವ  ನಿನ್ನ ತಂದೆಯ  ಅದೋಗತಿಗೆ ಕಾರಣವೇನು  ಎಂಬುದು ತಿಳಿಯದೆ ಬಹಳ ಬೇಸರವಾಯಿತು. ನಾನು ನಿನ್ನ ತಂದೆಯನ್ನು  ನರಕ ವಾಸದಂಥ ಗತಿ ಬರಲು ಕಾರಣವೇನು ಎಂದು ಆತಂಕದಿಂದ ಕೇಳಿದೆ?
ಅದಕ್ಕವರು, ನನ್ನ ಜೀವಿತಾವಧಿಯ ಕಾಲದಲ್ಲಿ, ಏಕಾದಶಿ ವ್ರತಗಳನ್ನು ಸರಿಯಾಗಿ ಪಾಲನೆ ಮಾಡುಲಾಗುತ್ತಿರಲಿಲ್ಲ. ಅದರಲ್ಲೂ ಇಂದಿನ ಏಕಾದಶಿ ಇಂದಿರಾ ಏಕಾದಶಿ ವ್ರತವನ್ನು ಸಮರ್ಪಕವಾಗಿ ಮಾಡಲಿಲ್ಲ. ಆದ ಕಾರಣ ನನಗೆ ಈ ನರಕ ಪ್ರಾಪ್ತಿಯಾಗಿದೆ.  ( ನರಕ ಎಂದರೆ ಅಲ್ಲಿ ಯಾವ ಶಿಕ್ಷೆಯು ಇರುವುದಿಲ್ಲ. ಪುಣ್ಯ ಲೋಕಗಳಿಗಿಂತ ಕೆಳಗಿನ ಲೋಕ ಇವರೆಲ್ಲರೂ ಪುಣ್ಯಾತ್ಮರೆ ಆಗಿದ್ದರು. ಅಂದಿನ ಕಾಲದಲ್ಲಿ ಸಣ್ಣಪುಟ್ಟ ತಪ್ಪುಗಳು ತಪ್ಪೇ ಆಗುತ್ತೆ ಅದರ ಪ್ರಾಯಶ್ಚಿತ್ತಕ್ಕಾಗಿ, ಸ್ವಲ್ಪ ಕಾಲ ಇಂಥ ಲೋಕದಲ್ಲಿದ್ದು ಪ್ರಾಯಶ್ಚಿತ್ತ ಮಾಡಿಕೊಳ್ಳುವುದು) ಆದ್ದರಿಂದ  ನಾರದರೆ ನೀವು ಭೂಲೋಕ ದಲ್ಲಿ ನನ್ನ ಮಗನ ಬಳಿ ಹೋಗಿ ನಾನು ಕೊಡುವ ಸಂದೇಶವನ್ನು ತಿಳಿಸಿ ಎಂದು ಹೇಳಿದ ಕಾರಣ ನಾನು ಇಲ್ಲಿಗೆ ಬರಬೇಕಾಯಿತು ಎಂದನು. 

ಇಂದ್ರಸೇನನು  ತನ್ನ ತಂದೆ ನರಕ ಲೋಕದಲ್ಲಿ ಇದ್ದಾರೆಂದು ತಿಳಿದು ಖಿನ್ನನಾಗಿ ಅದು ಯಾವ ಸಂದೇಶ ಎಂದು ಕೇಳಿದನು. ನಾರದರು ಈ ರೀತಿ ಹೇಳಿದರು. ನೀನು ಭಾಧ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಅಂದರೆ ಪಿತೃ ಪಕ್ಷದಲ್ಲಿ ಬರುವ ಇಂದಿರಾ ಏಕಾದಶಿ ವ್ರತವನ್ನು ಕ್ರಮಬದ್ಧವಾಗಿ ಆಚರಿಸಿದರೇ ನಿನ್ನ ತಂದೆಗೆ ನರಕ ಲೋಕದಿಂದ ಮುಕ್ತಿ ಸಿಗುತ್ತದೆ ಎಂದು ಹೇಳಿದಾಗ ರಾಜನು ಅದು ಹೇಗೆ ಆಚರಿಸುವುದು ಎಂದು ಕೇಳಿದನು. ಆಗ ಮುನಿಯು, ಅಂತ ಕಠಿಣವೇನಲ್ಲ ಪ್ರತೀ ಏಕಾದಶಿ ವ್ರತದಂತೆ, ಇಂದಿರಾ ಏಕಾದಶಿ  ವ್ರತವನ್ನು  ನಿಯಮದಂತೆ ಆಚರಿಸು. ಆಚರಿಸುವ ಹಿಂದಿನ  'ದಶಮಿ' ದಿನ  ಮಹಾ ವಿಷ್ಣುವಿನ ಪೂಜೆ ಮಾಡಿ, ಅಂದು ಒಂದು ಹೊತ್ತು ಊಟ ಮಾಡಬೇಕು. ರಾತ್ರಿ ಲಘು ಉಪಹಾರ ಮಾಡಿ, ಮರುದಿನ ಏಕಾದಶಿ ವ್ರತವನ್ನು ಆಚರಿಸಿ, ರಾತ್ರಿ ಜಾಗರಣೆ ಮಾಡಿ, ದ್ವಾದಶಿ ದಿನ ಬ್ರಾಹ್ಮಿ ಮುಹೂರ್ತಕ್ಕೆ ಸ್ನಾನ ಮಾಡಿ, ಪಿತೃ ಕಾರ್ಯವನ್ನು ಮಾಡಬೇಕು. ಬ್ರಾಹ್ಮಣರಿಗೆ ಭೋಜನ, ದಾನ, ದಕ್ಷಿಣಾಧಿ ಗಳ ಸಹಿತ ಸತ್ಕಾರ ಮಾಡಬೇಕು. ಇದರಿಂದ ನಿನ್ನ ತಂದೆಯ ಪಾಪ ಕಾರ್ಯ ಗಳಿಗೆಲ್ಲ ಮುಕ್ತಿ ದೊರೆತು ನರಕ ಲೋಕದಿಂದ ಬಿಡುಗಡೆಯಾಗಿ, ಸ್ವರ್ಗ ಲೋಕವನ್ನು ಸೇರುತ್ತಾನೆ. ಈ ಸಂದೇಶವನ್ನು ನಿನ್ನ ತಂದೆ ತಿಳಿಸಿದ್ದಾರೆ. ಇಷ್ಟು ಹೇಳಿದ ನಾರದರು ಅಂತರ್ದಾನರಾದರು. ರಾಜ ಇಂದ್ರಸೇನನು  ನಾರದರ ಸಂದೇಶವನ್ನು ಪಾಲಿಸಿ  ಪೂರ್ವಜರ ಪಾಪ ಕರ್ಮವನ್ನು ಮುಕ್ತಿ ಗೊಳಿಸಿದನು ಎಂಬಲ್ಲಿಗೆ ಇಂದಿರಾ ಏಕಾದಶಿ ವ್ರತ ಕಥೆಯ ಮಹಿಮೆ ಆಗಿದೆ. 

ಲಘು ವಿಷ್ಣು ಸಹಸ್ರನಾಮಸ್ತವ:- 

ಅಲಂ ನಾಮ ಸಹಸ್ರೇಣ, ಕೇಶವೊರ್ಜುನ ಮಬ್ರವೀತ್
ಶೃಣು ಮೇ ಪಾರ್ಥ ನಾಮಾನಿ ಯೈ ಶ್ಚತುಷ್ಯಾಮಿ ಸರ್ವದ!
ಕೇಶವ  ಪುಂಡರೀಕಾಕ್ಷ ಸ್ವಯಂ ಭೂರ್ಮಧುಸೂದನಃ 
ದಾಮೋದರೋ  ವೃಷಿಕೇಶ ಪದ್ಮನಾಭೋಜನಾರ್ಧನ!
ವಿಶ್ವಕ್ಸೇ ನೋ ವಾಸುದೇವೋ ಹರಿರ್ನಾರಾಯಣ ಸ್ತಥಾ 
ಅನಂತಶ್ಚ ಪ್ರಬೋಧಶ್ಚ  ಸತ್ಯ ಕೃಷ್ಣ ಸುರೂತ್ತಮ !
ಆದಿ ಕರ್ತ ವರಾಹಶ್ಚ ವೈಕುಂಠೋ  ವಿಷ್ಣುರಚ್ಯುತ
ಶ್ರೀಧರ ಶ್ರೀಪತಿ ಶ್ರೀಮಾನ್ ಪಕ್ಷಿರಾಜ ಧ್ವಜ ಸ್ತಥಾ!
ಏತಾನಿ ಮಮ ನಾಮಾನಿ ವಿದ್ಯಾರ್ಥೀ ಬ್ರಾಹ್ಮಣ ಪಠೇತ್
ಕ್ಷತ್ರಿಯೋ ವಿಜಯಸ್ಯಾರ್ಥೇ ವೈಶ್ಯೋ ಧನ ಸಮೃದ್ಧಯೇ!
ನಾಗ್ನಿ ರಾಜಭಯಂ ತಸ್ಯ ನ ಚೋರಾತ್ ಪನ್ನಗಾದ್ಭಯಂ 
ರಾಕ್ಷಸೇ ಭ್ಯೋ ಭಯಂ ನಾಸ್ತಿ ವ್ಯಾಧಿಭಿನೈರ್ವ ಪೀಡ್ಯತೇ!
ಇದಂ ನಾಮ ಸಹಸ್ರಂ ತು ಕೇಶವೇನೋದ್ಧೃತಂ ಸ್ತವಂ
ಉದ್ಧೃತ್ಯ ಚಾರ್ಜುನೇ ದತ್ತಂ ಯುದ್ಧೇ ಶತ್ರು ವಿನಾಶನಂ!
!!ಇತಿ ಶ್ರೀ ವಿಷ್ಣು ಪುರಾಣೇ ಲಘು ವಿಷ್ಣು ಸಹಸ್ರನಾಮಸ್ತವ!! 
****


೧೩) ಆಶ್ವಯುಜ ಶುಕ್ಲ ಏಕಾದಶಿ - ಪಾಪಾಂಕುಶ - 
ಪುಣ್ಯಪ್ರದವಾದುದು


ಪಾಶಾಂಕುಶ ಏಕಾದಶಿ ಮಹತ್ವ

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ ಸ್ತುನ್ವಂತಿದಿವೈಃಸ್ತವೈ-
ವೇದೈಃಸಾಂಗಪದಕ್ರಮೋಪನಿಷದೈಃ ಗಾಯಂತಿ ಯಂ ಸಮಗಾಃ |
ಧ್ಯಾನಾವಸ್ತಿತ ತದ್ ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ 
ಯಸ್ತಾನಂ ನ ವಿದುಃ ಸುರಾಸುರಗಣಾ ದೇವಾಯ ತಸ್ಮೈ ನಮಃ ||

ಅಶ್ವಿನ ಮಾಸ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿ ವ್ರತಕ್ಕೆ ಪಾಶಾಂಕುಶ ಏಕಾದಶಿ ಎನ್ನುವರು. ಈ ಕುರಿತು ಬ್ರಹ್ಮವೈವರ್ತ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪಾಶಾಂಕುಶ ಏಕಾದಶಿಯ ದಿನ ದೇವರ ಶ್ರೀಅನಂತಪದ್ಮನಾಭ ರೂಪದ ಧ್ಯಾನ ಆವಾಹನಾದಿ ಪೂಜೆ ಸಲ್ಲಿಸಬೇಕು. ಈ ವ್ರತ ಆಚರಣೆಯಿಂದ ಇಹಲೋಕದಲ್ಲಿ ಎಲ್ಲ ಭೋಗಭಾಗ್ಯವ ಪಡೆದು ವಿಷ್ಣುಲೋಕ ಪ್ರಾಪ್ತವಾಗುವುದು.

ಏಕಾದಶಿ ಭಕ್ತಿಯ ಪ್ರತೀಕ, ಉಪವಾಸಾಧಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ವಿಷ್ಣುವಿನ ನಾಮಜಪದಿಂದ ತೀರ್ಥಕ್ಷೇತ್ರ ಸಂದರ್ಶಿಸಿದ ಪುಣ್ಯ ಲಭಿಸುತ್ತದೆ. ಶ್ರೀಕೃಷ್ಣ ಮಂತ್ರ, ಶ್ರೀರಾಮಮಂತ್ರ, ಶ್ರೀವಿಷ್ಣುಸಹಸ್ರನಾಮ ಮೊದಲಾದ ಜಪ ಮತ್ತು ಪಾರಾಯಣ ಮಾಡಬೇಕು.

ಭಗವಂತನ ನಾಮಸ್ಮರಣೆಯನ್ನು ನಿತ್ಯವೂ ಮಾಡುತ್ತಿದ್ದರೆ ಯಮರಾಜ ಕೂಡ ಹತ್ತಿರ ಸುಳಿಯುವದಿಲ್ಲ. ಯಾರು ಶ್ರೀಕೃಷ್ಣನ್ನು ಸ್ಮರಿಸುವರೋ ಅವರಿಗೆ ನೂರು ಅಶ್ವಮೇಧ, ನೂರು ರಾಜಸೂಯ ಯಾಗದ ಫಲ ದೊರೆಯುವದು.

ಈ ಏಕಾದಶಿ ಮಾಡಿದರೆ ಮೂರು ಲೋಕದಲ್ಲೂ ಸ್ಥಾನ ಲಭಿಸುವದು. ಈ ವ್ರತದ ವಿಶೇಷವೆಂದರೆ ಆಚರಿಸಿದವರಿಗೆ ಯಮರಾಜ ಸ್ವಾತಂತ್ರ್ಯ ಕೊಡುತ್ತಾನೆ, ಸ್ವರ್ಗಕ್ಕೆ ಮಾರ್ಗ ತೋರುತ್ತಾನೆ, ಒಳ್ಳೆಯ ಕುಟುಂಬ, ಆರೋಗ್ಯ, ಸಂಪತ್ತು ಕೊಟ್ಟು ಕಾಯುತ್ತಾನೆ.ಗಂಗಾ ಗಯಾ, ಕಾಶಿ, ಪುಷ್ಕರ ಕ್ಷೇತ್ರ ದರ್ಶನ ಮಾಡಿದ ಪುಣ್ಯ ಪಾಶಾಂಕುಶ ಏಕಾದಶಿಯಿಂದ ಬರುವುದು. ಯಮನ ಪಾಶ-ಅಂಕುಶಗಳ ಭಯ ಅಂದರೆ ಮೃತ್ಯುಭಯ ಇರುವದಿಲ್ಲ. ಅಪಮೃತ್ಯು ದೋಷ ಪರಿಹಾರವಾಗುತ್ತದೆ.

ಏಕಾದಶಿ ರಾತ್ರಿ ಜಾಗರಣೆ, ಜಪ, ಪೂಜೆ, ಪಾರಾಯಣ ಮಾಡಿದವರ ಹತ್ತು ತಲೆಮಾರಿನ ಪಿತೃವರ್ಗಕ್ಕೆ ಮುಕ್ತಿದೊರೆಯುತ್ತದೆ. ಅವರು ವೈಕುಂಠ ಸೇರುತ್ತಾರೆ. ಅವರೆಲ್ಲ ಪೀತಾಂಬರವನ್ನುಟ್ಟು , ವನಮಾಲೆಗಳಿಂದ ಅಲಂಕೃತರಾಗಿ ಗರುಡನ ಮೇಲೇರಿ ನಾರಾಯಣನೊಂದಿಗೆ ವೈಕುಂಠಕ್ಕೆ ತೆರಳುವರು.

ತಿಲದಾನ, ಸುವರ್ಣದಾನ, ಭೂಮಿದಾನ, ಗೋದಾನ, ಧನಧಾನ್ಯದಾನ, ಕುಂಭದಾನ, ಛತ್ರದಾನ ಮಾಡುವರೋ ಅವರು ನರಕವನ್ನೇ ನೋಡಲಾರರು. ಎಲ್ಲ ರೋಗಗಳಿಂದ ಮುಕ್ತರಾಗುವರು. ಈ ಏಕಾದಶಿ ಮಾಡುವುದರಿಂದ ಮನೋಕಾಮನೆ ಈಡೇರುವುದು.

ದೃಷ್ಟಾಂತ

ವಿಂದ್ಯಪರ್ವತದಲ್ಲಿ ಮಹಾಕ್ರೂರಿ ಹಾಗೂ ಕೋಪಿಷ್ಠನಾದ ಕ್ರೋಧನ ಎಂಬವ ವಾಸಿಸುತ್ತಿರುತ್ತಾನೆ. ಅವನಿಗೆ ಅಂತಿಮ ಸಮಯ ಬಂದಾಗ ಯಮರಾಜ ಅವನನ್ನು ಎಳೆದು ತರಲು ದೂತರಿಗೆ ತಿಳಿಸುತ್ತಾನೆ. ಅದ್ಹೇಗೋ ಯಮದೂತರು ಕ್ರೋಧನನಿಗೆ ಈ ಬಗ್ಗೆ ಮೊದಲೇ ತಿಳಿಸುತ್ತಾರೆ.

ಮೃತ್ಯುಭಯದಿಂದ ಕ್ರೋಧನ ಅಂಗೀರಸ ಋಷಿಯ ಆಶ್ರಮ ಸೇರುತ್ತಾನೆ. ಯಮಲೋಕಕ್ಕೆ ಹೋಗುವುದನ್ನು ತಪ್ಪಿಸುವಂತೆ ಋಷಿಗಳಲ್ಲಿ ಪ್ರಾರ್ಥಿಸುತ್ತಾನೆ. ಆಗ ಋಷಿಗಳು ಪಾಪಾಂಕುಶ ಏಕಾದಶಿ ಆಚರಿಸಿ ಪಾಪಮುಕ್ತನಾಗಿ ಸ್ವರ್ಗಸ್ಥನಾಗಲು ತಿಳಿಸುವರು. ಅದರಂತೆ ಕ್ರೋಧನ ಪಾಶಾಂಕುಶ ಏಕಾದಶಿ ಆಚರಿಸಿ ವಿಷ್ಣುಲೋಕಕ್ಕೆ ತೆರಳುತ್ತಾನೆ.

ಶ್ರೀಕೃಷ್ಣಾರ್ಪಣಮಸ್ತು. 
****

ಪಾಪಾಂಕುಶ ಏಕಾದಶಿಯನ್ನು ಆಚರಿಸುವ ಮೂಲಕ ಆ ವ್ಯಕ್ತಿಯು ಎಲ್ಲಾ ಪಾಪಗಳಿಂದ ಮುಕ್ತನಾಗಿ ಅದೃಷ್ಟವನ್ನು ಪಡೆಯುತ್ತಾನೆ. ವಿಜಯದಶಮಿ ನಂತರ, ರಾಮ ಮತ್ತು ಅವನ ಸಹೋದರ ಭಾರತನು ಈ ಏಕಾದಶಿಯನ್ನು ಆಚರಿಸಿದ್ದರು ಎನ್ನುವ ನಂಬಿಕೆಯಿದೆ. 

​ಪಾಪಾಂಕುಶ ಏಕಾದಶಿ ಪ್ರಾಮುಖ್ಯತೆ

ಪುರಾಣಗಳ ಪ್ರಕಾರ, ಪಾಪಾಂಕುಶ ಏಕಾದಶಿಯ ಉಪವಾಸವನ್ನು ಆಚರಿಸುವುದರಿಂದ ನಾವು ತಪಸ್ಸಿನ ಮೂಲಕ ಪಡೆದ ಫಲಗಳಷ್ಟೇ ಪ್ರಯೋಜನವನ್ನು ಪಡೆದುಕೊಳ್ಳಬಹುದು. ವಿಷ್ಣುವಿನ ಪದ್ಮನಾಭ ಸ್ವರೂಪವನ್ನು ಪಾಪಾಂಕುಶ ಏಕಾದಶಿಯಂದು ಪೂಜಿಸಲಾಗುತ್ತದೆ. ಈ ಉಪವಾಸವನ್ನು ಆಚರಿಸುವುದರಿಂದ ಮೂರು ತಲೆಮಾರುಗಳ ಪಾಪಗಳನ್ನು ತೊಡೆದು ಹಾಕಬಹುದು. ಈ ಏಕಾದಶಿಯನ್ನು ಆಚರಿಸುವ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಮತ್ತು ಚಂದ್ರನ ಕೆಟ್ಟ ಪರಿಣಾಮಗಳಿಂದ ಮುಕ್ತಿಯನ್ನು ಹೊಂದುತ್ತಾನೆ ಎನ್ನುವ ನಂಬಿಕೆಯಿದೆ. ಅಲ್ಲದೆ, ಈ ಏಕಾದಶಿ ಉಪವಾಸದಿಂದ ಶುಭ ಫಲವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

​ಈ ಉಪವಾಸವು ಸೂರ್ಯ ಯಜ್ಞದಂತಹ ಪುಣ್ಯವನ್ನು ನೀಡುವುದು

ಮಹಾಭಾರತ ಯುದ್ಧದ ಸಮಯದಲ್ಲಿ ಕೃಷ್ಣನು ಸ್ವತಃ ಧರ್ಮರಾಜ ಯುಧಿಷ್ಠಿರನಿಗೆ ಈ ಉಪವಾಸದ ಮಹತ್ವದ ಬಗ್ಗೆ ತಿಳಿಸಿದನು. ಈ ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ಪಾಪವು ನಾಶವಾಗುತ್ತದೆ. ಅಂದರೆ ಅದು ಪಾಪ ಕೃತ್ಯಗಳಿಂದ ಮನುಷ್ಯನನ್ನು ರಕ್ಷಿಸುತ್ತದೆ ಎಂದು ಶ್ರೀಕೃಷ್ಣ ಹೇಳಿದ್ದಾನೆ. ಈ ಏಕಾದಶಿಯಲ್ಲಿ, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದಕ್ಕೆ ಮತ್ತು ದಾನ - ಧರ್ಮ ಮಾಡವುದಕ್ಕೆ ವಿಶೇಷ ಮಹತ್ವವಿದೆ. ಪಾಪಾಂಕುಶ ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ಸೂರ್ಯ ಯಜ್ಞದಿಂದ ಪಡೆಯಬಹುದಾದ ಪುಣ್ಯವನ್ನೇ ಇದರಿಂದ ಕೂಡ ಪಡೆಯಬಹುದು.

ಪುರಾಣಗಳ ಪ್ರಕಾರ, ಪಾಪಾಂಕುಶ ಏಕಾದಶಿಯೆಂದರೆ ಆನೆಯ ರೂಪದ ಪಾಪವನ್ನು ಅಂಕುಶ ರೂಪದ ಸದ್ಗುಣಶೀಲ ಗುರುತುಗಳಿಂದ ನಾಶ ಮಾಡುವುದಾಗಿದೆ. ಪರೋಕ್ಷವಾಗಿ ಯಾವುದೇ ಓರ್ವ ವ್ಯಕ್ತಿ ಪಾಪವನ್ನು ಮಾಡಿದ್ದರೆ ಆ ವ್ಯಕ್ತಿ ಪಾಪಾಂಕುಶ ಏಕಾದಶಿಯನ್ನು ಆಚರಿಸಬೇಕೆಂದು ಭಗವಾನ್ ಶ್ರೀ ಕೃಷ್ಣನು ಹೇಳಿದ್ದಾನೆ. ಈ ಏಕಾದಶಿಯಿಂದ ಆತನ ಪಾಪಗಳು ಪರಿಹಾರವಾಗಿ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾನೆ. ಈ ದಿನ, ಒಬ್ಬರು ದೇವರನ್ನು ಮೌನವಾಗಿ ಆರಾಧಿಸಬೇಕು, ಅದರ ಮೂಲಕ ಶುದ್ಧ ಆಲೋಚನೆಗಳು ಹುಟ್ಟಿಕೊಳ್ಳುತ್ತದೆ.

​ಪಾಪಾಂಕುಶ ಏಕಾದಶಿ ವ್ರತ ಕಥೆ

ಪ್ರಾಚೀನ ಕಾಲದಲ್ಲಿ, ಕ್ರೋಧನ ಎನ್ನುವ ಕ್ರೂರ ಪಕ್ಷಿಯೊಂದು ವಿಂಧ್ಯಾ ಪರ್ವತಗಳಲ್ಲಿ ವಾಸಿಸುತ್ತಿತ್ತು. ಹಿಂಸೆ, ಮದ್ಯಪಾನ, ದರೋಡೆ, ಸುಳ್ಳು, ವಂಚನೆ ಮುಂತಾದ ಕೆಟ್ಟ ಕಾರ್ಯಗಳಿಲ್ಲಿ ಅದು ತನ್ನ ಇಡೀ ಜೀವನವನ್ನು ಕಳೆಯುತ್ತಿತ್ತು. ಕೊನೆಯ ಕ್ಷಣದಲ್ಲಿ ಕ್ರೂರ ಪಕ್ಷಿಯನ್ನು ತರಲು ಯಮರಾಜ ತನ್ನ ದೂತರನ್ನು ಕಳುಹಿಸಿದಾಗ, ನಾಳೆ ನಿಮ್ಮ ಜೀವನದ ಕೊನೆಯ ದಿನ ಎಂದು ಯಮದೂತ್‌ಗಳು ಆ ಪಕ್ಷಿಗೆ ಹೇಳಿದರು. ಸಾವಿಗೆ ಹೆದರಿದ ಕ್ರೂರ ಪಕ್ಷಿ ಭಯಭೀತಗೊಂಡಿತು ಮತ್ತು ಮಹರ್ಷಿ ಅಂಗಿರಾ ಅವರ ಆಶ್ರಮಕ್ಕೆ ಹೋಗಿ ಅವರ ಆಶ್ರಯದಲ್ಲಿ ಸಾವಿನಿಂದ ಪಾರು ಮಾಡುವಂತೆ ಬೇಡಿಕೊಂಡಿತು. ಮಹರ್ಷಿ ಪಕ್ಷಿ ಬಗ್ಗೆ ಕರುಣೆ ತೋರಿ ಪಾಪಾಂಕುಶ ಏಕಾದಶಿಯಂದು ಉಪವಾಸ ವ್ರತವನ್ನು ಮಾಡಲು ಸೂಚಿಸಿದರು. ಪಕ್ಷಿಯು ಈ ಏಕಾದಶಿಯನ್ನು ಪೂರ್ಣ ಭಕ್ತಿಯಿಂದ ಆಚರಿಸಿತು. ಏಕಾದಶಿಯ ನಂತರ ಪಕ್ಷಿಯ ಎಲ್ಲಾ ಪಾಪಗಳು ನಾಶವಾಯಿತು ಮತ್ತು ದೇವರ ಅನುಗ್ರಹದಿಂದ ಮೋಕ್ಷವನ್ನು ಪಡೆಯಿತು.

ಪಾಪಾಂಕುಶ ಏಕಾದಶಿ ವ್ರತ ವಿಧಾನ

ನಾರದ ಪುರಾಣದ ಪ್ರಕಾರ, ಪಾಪಾಂಕುಶ ಏಕಾದಶಿ ಉಪವಾಸದಲ್ಲಿರುವ ವ್ಯಕ್ತಿಯು ಮೇಲಿನ ಶುಭ ಮುಹೂರ್ತದಲ್ಲಿ ಸ್ನಾನ, ಇತ್ಯಾದಿ ಕಾರ್ಯಗಳನ್ನು ಮಾಡಿದ ನಂತರ ವಿಷ್ಣುವನ್ನು ಸ್ಮರಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ಇದರ ನಂತರ, ಒಂದು ಸಣ್ಣ ಅನುಸ್ಥಾಪನೆಯನ್ನು ಮಾಡಿ ಮತ್ತು ಅದರ ಮೇಲೆ ವಿಷ್ಣುವಿನ ಪ್ರತಿಮೆ ಅಥವಾ ಫೋಟೋವನ್ನಿಟ್ಟು, ಪೂಜೆ ಸ್ಥಳದಲ್ಲಿ ಗಂಗಾಜಲವನ್ನು ಸಿಂಪಡಿಸಿ. ಇದರ ನಂತರ, ಅಕ್ಷತೆಯನ್ನು ಅರ್ಪಿಸಿ, ಬಿಳಿ ಹೂವುಗಳನ್ನು ದೇವರಿಗೆ ಅರ್ಪಿಸಿ. ನಂತರ, ದೇಸಿ ತುಪ್ಪದ ದೀಪವನ್ನು ದೇವರ ಮುಂದೆ ಬೆಳಗಿ ಅವನಿಗೆ ಆರತಿಯನ್ನು ಮಾಡಿ. ಇದರ ನಂತರ ವಿಷ್ಣು ಸಹಸ್ರನಾಮ ಪಠಿಸಿ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆಯನ್ನು ಕೇಳಬೇಕು. ನಂತರ ನಿಮ್ಮ ಸಾಮರ್ಥಯಕ್ಕೆ ಅನುಗುಣವಾಗಿ ದಾನ ಮಾಡಬೇಕು.

  🙏ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು🙏
         ಸರ್ವಜನಾಃ ಸುಖಿನೋಭವತು
***

ಪರಿವರ್ತಿನಿ ಏಕಾದಶಿ ಮಹತ್ವ

ಭಾದ್ರಪದ ಮಾಸದಲ್ಲಿ ಬರುವ ಈ ಪರಿವರ್ತಿನಿ ಏಕಾದಶಿಯ ಮಹತ್ವವು ತುಂಬಾ ಹೆಚ್ಚಾಗಿರುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಪರಿವರ್ತಿನಿ ಏಕಾದಶಿ ವ್ರತವನ್ನು ಆಚರಿಸುವುದರಿಂದ ನಾವು ವಾಜಪೇಯಿ ಯಜ್ಞ ಮಾಡಿದಷ್ಟು ಫಲವನ್ನು ಪಡೆದುಕೊಳ್ಳಬಹುದು . 

ಈ ಏಕಾದಶಿಯನ್ನು ಮಹಾಭಾರತದಲ್ಲಿಯೂ ವಿವರಿಸಲಾಗಿದೆ. ಇದರ ಪ್ರಕಾರ, ಯುಧಿಷ್ಠಿರ ಮಹಾರಾಜನು ತನ್ನ ಚಿಕ್ಕಪ್ಪ ಅರ್ಜುನನಿಗೆ ಈ ಏಕಾದಶಿಯ ಬಗ್ಗೆ ಹೇಳಿದ್ದನು. 

ಈ ದಿನ ಲಕ್ಷ್ಮಿ ದೇವಿಯನ್ನು ಮತ್ತು ಭಗವಾನ್‌ ವಿಷ್ಣುವಿನ ವಾಮನ ಅವತಾರವನ್ನು ಪೂಜಿಸುವುದರಿಂದ ನಿಮಗೆ ಸಂಪತ್ತು, ಅದೃಷ್ಟ ಮತ್ತು ಸಂತೋಷ ಸಿಗುತ್ತದೆ ಎಂದು ಹೇಳಲಾಗುತ್ತದೆ. 

ಅಷ್ಟು ಮಾತ್ರವಲ್ಲ, ಈ ವ್ರತವನ್ನು ಆಚರಿಸುವ ಒಬ್ಬ ವ್ಯಕ್ತಿಯು ಎಲ್ಲಾ ರೀತಿಯ ಪಾಪಗಳಿಂದ ಸ್ವಾತಂತ್ರ್ಯವನ್ನು ಪಡೆಯುತ್ತಾನೆ ಮತ್ತು ಎಂದಿಗೂ ಆತ ಹಣದ ಕೊರತೆಯನ್ನು ಎದುರಿಸುವುದಿಲ್ಲ ಎನ್ನುವ ನಂಬಿಕೆಯಿದೆ.

ಪರಿವರ್ತಿನಿ ಏಕಾದಶಿಯಂದು ದಾನ

ಪರಿವರ್ತಿನಿ ಏಕಾದಶಿಯಂದು ದಾನ ಮಾಡುವುದಕ್ಕೆ ಶಾಸ್ತ್ರದಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ದಿನ ಅಕ್ಕಿ, ಮೊಸರು, ತಾಮ್ರ ಮತ್ತು ಬೆಳ್ಳಿ ವಸ್ತುಗಳನ್ನು ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ವಿಷ್ಣು ಭಗವಂತನಿಗೆ ಕಮಲದ ಹೂವನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

​ಪರಿವರ್ತಿನಿ ಏಕಾದಶಿ ಪೂಜೆ ಸಮಾಗ್ರಿ

- ಪೂಜೆ ಭಗವಾನ್‌ ವಿಷ್ಣುವಿನ ಮೂರ್ತಿ ಅಥವಾ ಪ್ರತಿಮೆ

- ಹೂವುಗಳು

- ತೆಂಗಿನಕಾಯಿ

-ವೀಳ್ಯದೆಲೆ

- ಅಡಿಕೆ

- ಹಣ್ಣುಗಳು

- ಧೂಪ

- ದೀಪ

- ತುಪ್ಪ

- ಅಕ್ಷತೆ

- ಪಂಚಾಮೃತ

- ಭೋಗ

- ತುಳಸಿ ದಳ

- ಶ್ರೀಗಂಧ

​ಪರಿವರ್ತಿನಿ ಏಕಾದಶಿ ಪೂಜೆ ವಿಧಾನ

ಧಾರ್ಮಿಕ ದೃಷ್ಟಿಕೋನದಿಂದ, ಪರಿವರ್ತಿನಿ ಏಕಾದಶಿ ವ್ರತದ ಸಂಕಲ್ಪವನ್ನು ಶುಭ ಸಮಯದಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ವ್ರತವು ಸೂರ್ಯಾಸ್ತದ ನಂತರ ದಶಮಿಯ ಸಂಜೆಯಿಂದ ಆರಂಭವಾಗುತ್ತದೆ ಮತ್ತು ಏಕಾದಶಿಯ ಮರುದಿನ ಪಾರಣ ಸಮಯದಲ್ಲಿ ಕೈಬಿಡಲಾಗುತ್ತದೆ. 

ಉಪವಾಸದ ದಿನ, ಮೊದಲು ಬೆಳಿಗ್ಗೆ ಎದ್ದು ಸ್ನಾನ ಮಾಡಿ. ಇದರ ನಂತರ, ದೇವರ ಕೋಣೆಯನ್ನು ಅಲಂಕರಿಸಿ. ಮರದ ಪೀಠದ ಮೇಲೆ ಹಳದಿ ಬಟ್ಟೆಯನ್ನು ಹಾಕಿ ಮತ್ತು ಅದರ ಮೇಲೆ ವಿಷ್ಣುವಿನ ಮೂರ್ತಿಯನ್ನು ಇರಿಸಿ. ವಿಷ್ಣುವಿನ ವಾಮನ ಅವತಾರವನ್ನು ಈ ದಿನ ಪೂಜಿಸಲಾಗುತ್ತದೆ. 

ವಿಷ್ಣುವಿನ ವಾಮನ ಅವತಾರವನ್ನು ಧ್ಯಾನಿಸಿದ ನಂತರ ಪೂಜೆ ಮತ್ತು ಆರತಿಯನ್ನು ಮಾಡಿ. ಉಪವಾಸದ ದಿನ ಹಳದಿ ಬಣ್ಣದ ವಸ್ತುಗಳನ್ನು ಬಳಸಿ. ವಿಷ್ಣುವಿಗೆ ಹಳದಿ ಬಣ್ಣ ಹೆಚ್ಚು ಪ್ರಿಯವೆಂದು ಹೇಳಲಾಗುತ್ತದೆ, ಹಾಗಾಗಿ ಪರಿವರ್ತಿನಿ ಏಕಾದಶಿಯ ದಿನ ಹಳದಿ ಬಣ್ಣವನ್ನು ಬಳಸಿ. ಮತ್ತು ಸ್ವತಃ ನೀವು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ.

ಪೂಜೆಯಲ್ಲಿ ಭಗವಂತನಿಗೆ ಹಳದಿ ಹೂವುಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ. ತುಳಸಿ ಎಲೆ, ಹಣ್ಣುಗಳನ್ನು ಮತ್ತು ಎಳ್ಳನ್ನು ಪೂಜೆಯಲ್ಲಿ ಸೇರಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ದ್ವಾದಶಿಯ ದಿನ ಪೂರ್ಣ ವಿಧಿವಿಧಾನಗಳೊಂದಿಗೆ ಉಪವಾಸವನ್ನು ಕೈಬಿಡಬೇಕು. 

ಪರಿವರ್ತನಿ ಏಕಾದಶಿಯ ಉಪವಾಸವನ್ನು ಸಂಪೂರ್ಣ ಆಚರಣೆಗಳೊಂದಿಗೆ ಆಚರಿಸುವ ಭಕ್ತನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಪಾಪಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
***


Papankusha - Ekadasi in Ashvina Masa

Yudhishthira maharaj said, Oh Madhusudana, what is the name of the Ekadasi that comes during the light fortnight of the month of Ashvina (September - October)? Please be merciful and disclose this truth to me." The Supreme Personality of Godhead Sri Krishna replied, "Oh king, please listen as I explain the glories of this Ekadasi- Papankusha Ekadasi - which removes all sins. On this day one should worship the Deity of Padmanabha, the lotus naveled Lord Vishnu, according to the rules of archana viddhi (regulations). By so doing, one achieves whatever heavenly pleasures one may want in this world, and at last attains liberation from this world thereafter. Simply by offering one's humble obeisances unto Lord Vishnu, the rider of Garuda, one can achieve the same merit as is gained by performing great penances for a long time restraining and controlling the senses. Although a person might have committed unlimited and abominable sins, he can still escape hellish punishment just by paying his obeisances to Lord Sri Hari, the taker away of all sin." "The merits gained by going on pilgrimage to the Holy Tirthas of this earthly planet can also be achieved simply by chanting the Holy names of Lord Vishnu. Whosoever chants these sacred names - such as Rama, Vishnu, Janardana or Krishna - especially on Ekadasi, never sees Yamaraj, the king of death's punishing abode. Nor does such a devotee who fasts on Papankusha Ekadasi, which is very dear to Me, see that plutonic abode." "Both the Vaishnava who criticizes Lord Shiva and the Shaivite (Saivite) who criticizes Me certainly go to hell. The merit obtained by performing one hundred horse sacrifices and one hundred Rajasurya sacrifices is not even equal to one sixteenth of the merit a devotee is able to attain by fasting on Ekadasi. There is no higher merit one can achieve than that attained by fasting on Ekadasi. Indeed, nothing in all the three worlds is as pleasing or as able to purify one of accumulated sin as Ekadasi, the day of the lotus-naveled Lord, Padmanabha. "O king, until a person observes a fast on the day of Lord Padmanabha named Papankusha Ekadasi, he remains sinful, and the reactions of his past sinful activities never leave him like a chaste wife. There is no merit in all the three worlds that can match the merit that one gains by observing a fast on this Ekadasi. Whosoever observes it faithfully never has to see death personified, Lord Yamaraj. One who desires liberation, elevation to the heavens, good health, beautiful women, wealth, and food grains should simply fast on this Pashunkusha Ekadasi. O king, neither the Ganges, Gaya, Kashi, nor Pushkara, nor even the Holy site of Kurukshetra, can grant as much auspicious merit as this Papankusha Ekadasi. "O Maharaj Yudhishthira, protector of the earth, after observing Ekadasi during the daytime, the devotee should remain awake through the night, absorbed in hearing, chanting and serving the lord - for by so doing he easily attains to the Supreme abode of Lord Vishnu. Not only that, but ten generations of ancestors on his mother's side, ten generations on his father's side, and ten generations on his wife's side are all liberated by a single observance of a fast on this Ekadasi. All these ancestors attain their original, four armed transcendental Vaikuntha forms. Wearing yellow garments and beautiful garlands, they ride to the spiritual realm on the back of Garuda, the renown great enemy of the snakes. This is the benediction My devotee earns simply by observing one Papankusha Ekadasi properly. "O best of kings, whether one is a child, a youth, or in old age, fasting on Papankusha Ekadasi frees him from all sins and makes him immune to suffering a hellish rebirth. Whosoever observes a fast on the Papankusha Ekadasi becomes free of all his sins and returns to the spiritual abode of Lord Sri Hari. Whosoever donates gold, sesame seeds, fertile land, cows, grain, drinking water, an umbrella, or a pair of shoes on this most auspicious of Holy days will never have to visit the abode of Yamaraj, who always punishes the sinners. But if a resident of earth fails to perform spiritual deeds, especially the observance of a fast on days such as Ekadasi, his breathing is said to be no better, or of as much use as the breathing/puffing of a blacksmith's bellows. "O best of the kings, especially on this Papankusha Ekadasi, even the poor should first bathe and then give some charity according to their means, and perform other auspicious activities in accordance with their ability. "Whosoever performs sacrifices and benefits the people, or builds public ponds, resting places, gardens, or houses does not suffer the punishments of Yamaraj. Indeed, one should understand that a person much have performed such pious activities as these in the past life if he is long lived, wealthy, of high birth, or free from all diseases. But a person who observes Papankusha Ekadasi goes to the abode of the Supreme Personality of Godhead, Vishnu. Lord Sri Krishna then concluded, "Thus, Oh saintly Yudhishthira, I have narrated to you the glories of the auspicious Papankusha Ekadasi." Thus ends the narration of the glories of the Papankusha Ekadasi, or Ashwina-shukla Ekadasi, from the Brahma-vaivarta Purana.


******

೧೪) ಆಶ್ವಯುಜ ಬಹುಳ ಏಕಾದಶಿ - ರಮಾ - 
ಸ್ವರ್ಗಪ್ರಾಪ್ತಿ
*ರಮಾ ಏಕಾದಶಿ: ಇಲ್ಲಿದೆ ಶುಭ ಮುಹೂರ್ತ ಮತ್ತು ಪೂಜೆ ವಿಧಾನ*
ರಮಾ ಏಕಾದಶಿ ಯನ್ನು ಆಚರಿಸಲಾಗುತ್ತಿದೆ. ರಮಾ ಏಕಾದಶಿ ದಿನದಂದು ಪೂಜೆ ಮಾಡುವುದು ಹೇಗೆ ಗೊತ್ತಾ..? ಇಲ್ಲಿದೆ ರಮಾ ಏಕಾದಶಿ ಪೂಜೆ ವಿಧಾನ.
                                                                                               ಎಲ್ಲಾ ಉಪವಾಸಗಳಲ್ಲಿ ರಮಾ ಏಕಾದಶಿ ಉಪವಾಸವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಪಂಚಾಂಗದ ಪ್ರಕಾರ, ಆಶ್ವೀಜ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ರಮಾ ಏಕಾದಶಿ ಎಂದು ಕರೆಯಲಾಗುತ್ತದೆ. ಸಂಪತ್ತನ್ನು ಬಯಸುವವರು ಈ ಏಕಾದಶಿಯನ್ನು ಆಚರಿಸಲು ಕಾಯುತ್ತಿರುತ್ತಾರೆ. ಏಕೆಂದರೆ ಈ ಏಕಾದಶಿಯ ಮೇಲೆ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ.
ರಮಾ ಏಕಾದಶಿ ಪೂಜೆ
                                                                                                    ರಮಾ ಏಕಾದಶಿಯಂದು, ಲಕ್ಷ್ಮಿ ದೇವಿಯ ರಮಾ ರೂಪವನ್ನು ಮತ್ತು ವಿಷ್ಣುವಿನ ಕೇಶವ ರೂಪವನ್ನು ವಿಧಿ - ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ರಮಾ ಏಕಾದಶಿಯನ್ನು ಆಚರಿಸಲು ಅದರದ್ದೇ ಆದ ವಿಧಿ - ವಿಧಾನಗಳಿವೆ. ರಮಾ ಏಕಾದಶಿಯನ್ನು ಆಚರಿಸುವ ಮೂಲಕ ಸಂಪತ್ತು ಮತ್ತು ಸಮೃದ್ಧಿಯನ್ನು ಗಳಿಸಬಹುದೆಂಬ ನಂಬಿಕೆಯಿದೆ.
ರಮಾ ಏಕಾದಶಿ ಚತುರ್ಮಾಸದ ಕೊನೆಯ ಏಕಾದಶಿ:
ರಮಾ ಏಕಾದಶಿ ಚಾತುರ್ಮಾಸದ ಕೊನೆಯ ಏಕಾದಶಿ. ಈ ಸಮಯದಲ್ಲಿ ಚಾತುರ್ಮಾಸಗಳು ಚಾಲನೆಯಲ್ಲಿರುತ್ತದೆ. ಚಾತುರ್ಮಾಸದಲ್ಲಿ, ವಿಷ್ಣು ವಿಶ್ರಾಂತಿ ಪಡೆಯಲು ಪಾತಾಳ ಲೋಕಕ್ಕೆ ಹೋಗುತ್ತಾನೆ ಮತ್ತು ಭೂಮಿಯನ್ನು ಶಿವನಿಗೆ ಒಪ್ಪಿಸಲಾಗುತ್ತದೆ.  ಏಕಾದಶಿ ಉಪವಾಸವು ಎಲ್ಲರ ಆಶಯಗಳನ್ನು ಈಡೇರಿಸುತ್ತದೆ ಮತ್ತು ಮೋಕ್ಷದತ್ತ ಒಲವನ್ನು ಮೂಡಿಸುತ್ತದೆ ಎನ್ನುವ ನಂಬಿಕೆಯಿದೆ.
ರಮಾ ಏಕಾದಶಿ ಉಪವಾಸ :*
ಏಕಾದಶಿ ಉಪವಾಸವನ್ನು ಎಲ್ಲಾ ಉಪವಾಸಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಏಕಾದಶಿ ಉಪವಾಸದ ಸಮಯದಲ್ಲಿ, ಈ ಉಪವಾಸದ ಸದ್ಗುಣವನ್ನು ಸಾಧಿಸಿದ ನಂತರವೇ ನಿಯಮಗಳನ್ನು ಗಂಭೀರವಾಗಿ ಪಾಲಿಸಬೇಕು. ನಿಯಮದ ಪ್ರಕಾರ, ಏಕಾದಶಿ ಉಪವಾಸದ ಪ್ರಾರಂಭವು ದಶಮಿಯ ದಿನಾಂಕದ ಕೊನೆಯಲ್ಲಿ ಪ್ರಾರಂಭವಾಗುತ್ತದೆ. ಆದ್ದರಿಂದ, ದಶಮಿ ತಿಥಿಯಲ್ಲಿ ಸೂರ್ಯಾಸ್ತದ ನಂತರ ಆಹಾರವನ್ನು ತೆಗೆದುಕೊಳ್ಳಬಾರದು. ರಮಾ ಏಕಾದಶಿ ದಿನದಂದು ಒಬ್ಬರು ಮುಂಜಾನೆ ಸ್ನಾನ ಮಾಡಿದ ನಂತರ ಉಪವಾಸ ತೆಗೆದುಕೊಂಡು ವಿಷ್ಣುವನ್ನು ಪೂಜಿಸುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು.
ಏಕಾದಶಿ ಪೂಜೆ ವಿಧಾನ:
ಏಕಾದಶಿ ದಿನದಂದು ಬೆಳಗ್ಗೆ ಸ್ನಾನ ಮಾಡಿದ ನಂತರ ಪೂಜೆ ಪ್ರಾರಂಭವಾಗಬೇಕು. ಧೂಪ, ತುಳಸಿ ಪತ್ರೆಗಳು, ದೀಪಗಳು, ನೈವೇದ್ಯ, ಹೂಗಳು ಮತ್ತು ಹಣ್ಣುಗಳನ್ನು ಪೂಜೆಯಲ್ಲಿ ಬಳಸಬೇಕು. ಈ ದಿನ ವಿಷ್ಣುವನ್ನು ಹಳದಿ ಬಟ್ಟೆ ಮತ್ತು ಹೂವುಗಳಿಂದ ಅಲಂಕರಿಸಬೇಕು. ಇದರ ನಂತರವೇ ಪೂಜೆಯನ್ನು ಪ್ರಾರಂಭಿಸಬೇಕು. ಏಕಾದಶಿ ಉಪವಾಸದಲ್ಲಿ, ರಾತ್ರಿ ಪೂಜೆಯ ನಿಯಮವನ್ನೂ ಉಲ್ಲೇಖಿಸಲಾಗಿದೆ. ಏಕಾದಶಿ ಉಪವಾಸದ ಪಾರಣೆ ಕೂಡ ಮುಖ್ಯ. ಪಾರಣೆ ನಿಯಮಗಳನ್ನು ಸಹ ಹೇಳಲಾಗಿದೆ. ನಿಯಮದ ಪ್ರಕಾರ, ಏಕಾದಶಿ ಉಪವಾಸವನ್ನು ದ್ವಾದಶಿ ದಿನಾಂಕದಂದೇ ಮುಗಿಸಬೇಕು. ‌     ‌     ‌    ‌    ‌    ‌   ‌   ‌   ‌      ‌      ‌        ‌             ‌               ‌                     ‌                                                                                                             ರಮಾ ಏಕಾದಶಿ ಆಚರಣೆಗಳು ಮತ್ತು ಮಹತ್ವ
                                                                                                                          ಹಿಂದೂ ನಂಬಿಕೆಗಳ ಪ್ರಕಾರ ರಮಾ ಏಕಾದಶಿಯನ್ನು ಅತ್ಯಂತ ಮಂಗಳಕರ ಮತ್ತು ಮಹತ್ವದ ಏಕಾದಶಿ ಎಂದು ಪರಿಗಣಿಸಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಆಶ್ವೀಜ ಮಾಸದ ಕೃಷ್ಣ ಪಕ್ಷದಲ್ಲಿ 11 ನೇ ದಿನದಂದು ರಮಾ ಏಕಾದಶಿ ನಡೆಯುತ್ತದೆ. ಇದು ಆಶ್ವೀಜ ಕೃಷ್ಣ ಏಕಾದಶಿ ಅಥವಾ ರಂಭಾ ಏಕಾದಶಿಯಂತಹ ಇತರ ಹೆಸರುಗಳಿಂದ ಜನಪ್ರಿಯವಾಗಿದೆ ಮತ್ತು ಇದು ದೀಪಾವಳಿ ಆಚರಣೆಗಳಿಗೆ ನಾಲ್ಕು ದಿನಗಳ ಮೊದಲು ನಡೆಯುತ್ತದೆ. ರಮಾ ಏಕಾದಶಿ ವ್ರತವನ್ನು ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಅತ್ಯಂತ ಮಹತ್ವದ ಏಕಾದಶಿ ಉಪವಾಸವೆಂದು ಗುರುತಿಸಲಾಗಿದೆ. ಏಕೆಂದರೆ ಈ ಉಪವಾಸವನ್ನು ಧಾರ್ಮಿಕವಾಗಿ ಆಚರಿಸುವ ಮೂಲಕ ಭಕ್ತರು ತಮ್ಮ ಎಲ್ಲಾ ಪಾಪಗಳಿಂದ ಮುಕ್ತರಾಗಬಹುದು.
ರಮಾ ಏಕಾದಶಿಯ ವ್ರತ ಕಥೆ ಏನು?
                                                                           ಹಿಂದೆ ಮುಚುಕುಂದ ಎಂಬ ರಾಜನಿದ್ದನು, ಅವನಿಗೆ ಚಂದ್ರಭಾಗ ಎಂಬ ಮಗಳು ಇದ್ದಳು. ಅವಳು ರಾಜ ಚಂದ್ರಸೇನನ ಮಗನಾದ ಶೋಭನನನ್ನು ಮದುವೆಯಾಗಿದ್ದಳು. ರಾಜ ಮುಚುಕುಂದನು ಭಗವಾನ್ ವಿಷ್ಣುವಿನ ತೀವ್ರ ಭಕ್ತನಾಗಿದ್ದನು ಮತ್ತು ರಮಾ ಏಕಾದಶಿಯ ಉಪವಾಸವನ್ನು ಕಟ್ಟುನಿಟ್ಟಾಗಿ ಆಚರಿಸಲು ತನ್ನ ರಾಜ್ಯದ ಎಲ್ಲಾ ವ್ಯಕ್ತಿಗಳಿಗೆ ಸೂಚಿಸಿದನು. ಚಂದ್ರಭಾಗ ತನ್ನ ಬಾಲ್ಯದಿಂದಲೂ ರಮಾ ಏಕಾದಶಿ ಉಪವಾಸವನ್ನು ಆಚರಿಸುತ್ತಿದ್ದಳು. ‌       ‌           ‌       ‌   ‌         ‌                                                                ‌ಒಮ್ಮೆ ಅವಳ ಪತಿ ರಾಜಕುಮಾರ ಶೋಭನನು ಕೃಷ್ಣ ಪಕ್ಷದ ಸಮಯದಲ್ಲಿ ಮುಚುಕುಂದ ರಾಜನ ರಾಜ್ಯದಲ್ಲಿ ಉಪಸ್ಥಿತನಿದ್ದನು ಮತ್ತು ಅದು ರಮಾ ಏಕಾದಶಿ ಉಪವಾಸವನ್ನು ಆಚರಿಸುವ ದಿನವಾಗಿತ್ತು. ಆದ್ದರಿಂದ, ಅವರು ದಿನದ ಉಪವಾಸವನ್ನು ಆಚರಿಸಬೇಕಾಗಿತ್ತು. ಶೋಭನನ ಆರೋಗ್ಯ ಹದಗೆಟ್ಟಿದ್ದರಿಂದ ಉಪವಾಸ ಇರಲು ಸಾಧ್ಯವಾಗಿರಲಿಲ್ಲ. ಚಂದ್ರಭಾಗ ತನ್ನ ಪತಿಗೆ ಬೇರೆ ಕಡೆಗೆ ಹೋಗುವಂತೆ ಹೇಳಿದಳು. ಅವನು ಇಲ್ಲೇ ಇರುತ್ತೇನೆ, ಅವನು ವಿಧಿವಿಧಾನವನ್ನು ಮಾಡಬೇಕು. ಆದರೆ, ಅಲ್ಲೇ ಉಳಿದುಕೊಳ್ಳುತ್ತೇನೆ ಮತ್ತು ರಮಾ ಏಕಾದಶಿ ಉಪವಾಸವನ್ನೂ ಮಾಡುತ್ತೇನೆ ಎಂದು ಶೋಭನು ಹೇಳಿದನು.
ಶೋಭನನು ದುರ್ಬಲಳಾಗಿದ್ದರಿಂದ ಬಾಯಾರಿಕೆ ಮತ್ತು ಹಸಿವಿನಿಂದ ಅವರು ಮಧ್ಯರಾತ್ರಿ ನಿಧನರಾದರು. ಆದರೆ ರಮಾ ಏಕಾದಶಿ ವ್ರತವನ್ನು ಆಚರಿಸುವ ಮೂಲಕ ಗಳಿಸಿದ ಪುಣ್ಯದಿಂದಾಗಿ, ರಾಜಕುಮಾರನು ಆಕಾಶಲೋಕವನ್ನು ಪ್ರವೇಶಿಸಿದನು ಮತ್ತು ವಿಶಿಷ್ಟವಾದ ಮತ್ತು ಶ್ರೇಷ್ಠವಾದ ರಾಜ್ಯವನ್ನು ಪಡೆದನು. ಆದರೆ ಅವನು ಬಲವಂತವಾಗಿ ಉಪವಾಸ ಮಾಡಿದ ಕಾರಣದಿಂದ ರಾಜ್ಯವು ಅದೃಶ್ಯವಾಗಿತ್ತು. ಒಮ್ಮೆ ಮುಚುಕುಂದ ಸಾಮ್ರಾಜ್ಯದಿಂದ ಒಬ್ಬ ಬ್ರಾಹ್ಮಣ ಹೊರಗೆ ಹೋದನು ಮತ್ತು ಅವನು ಶೋಭನ ಮತ್ತು ಅವನ ರಾಜ್ಯವನ್ನು ನೋಡಿದನು. ರಾಜಕುಮಾರನು ಬ್ರಾಹ್ಮಣನಿಗೆ ಎಲ್ಲಾ ದೃಶ್ಯಗಳನ್ನು ವಿವರಿಸಿದನು ಮತ್ತು ಅವನ ಹೆಂಡತಿ ಚಂದ್ರಭಾಗನಿಗೆ ಎಲ್ಲವನ್ನೂ ಹೇಳಲು ಹೇಳಿದನು. ಬ್ರಾಹ್ಮಣನು ಹಿಂತಿರುಗಿ ರಾಜಕುಮಾರನ ಹೆಂಡತಿಗೆ ಎಲ್ಲವನ್ನೂ ಹೇಳಿದನು. ಹಲವಾರು ರಮಾ ಏಕಾದಶಿ ಉಪವಾಸಗಳನ್ನು ಆಚರಿಸುವುದರಿಂದ ಚಂದ್ರಭಾಗವು ಸಾಧಿಸಿದ ಪ್ರಯೋಜನಗಳು ಮತ್ತು ಪುಣ್ಯಗಳಿಂದಾಗಿ, ಚಂದ್ರಭಾಗವು ತನ್ನ ದೈವಿಕ ಆಶೀರ್ವಾದದಿಂದ ರಾಜ್ಯವನ್ನು ವಾಸ್ತವಕ್ಕೆ ಪರಿವರ್ತಿಸಿದಳು ಮತ್ತು ಅವರಿಬ್ಬರೂ ರಾಜ್ಯವನ್ನು ಶಾಶ್ವತವಾಗಿ ಉಳಿಸಿಕೊಂಡರು ಮತ್ತು ದೈವಿಕ ಮತ್ತು ಆನಂದದಾಯಕ ಜೀವನವನ್ನು ಪ್ರಾರಂಭಿಸಿದರು.
ರಮಾ ಏಕಾದಶಿಯ ಆಚರಣೆಗಳೇನು?
                                                                    ಉಪವಾಸ ಆಚರಣೆಯು ಏಕಾದಶಿಯ ಒಂದು ದಿನದ ಮೊದಲು ಪ್ರಾರಂಭವಾಗುತ್ತದೆ, ಅಂದರೆ ಅದು ದಶಮಿಯಿಂದ ಪ್ರಾರಂಭವಾಗುತ್ತದೆ. ಈ ನಿರ್ದಿಷ್ಟ ದಿನದಂದು, ವೀಕ್ಷಕರು ಸಿರಿಧಾನ್ಯಗಳು ಅಥವಾ ಅಕ್ಕಿಯನ್ನು ಸೇವಿಸುವುದನ್ನು ನಿರ್ಬಂಧಿಸಲಾಗಿದೆ ಮತ್ತು ಸಾತ್ವಿಕ ಆಹಾರವನ್ನು ಮಾತ್ರ ತೆಗೆದುಕೊಳ್ಳಲು ಅನುಮತಿಸಲಾಗಿದೆ. ಸೂರ್ಯೋದಯದ ನಂತರ ವೀಕ್ಷಕರಿಗೆ ಏನನ್ನೂ ತಿನ್ನಲು ಅನುಮತಿಸಲಾಗುವುದಿಲ್ಲ.
ಏಕಾದಶಿಯ ಮುನ್ನಾದಿನದಂದು, ವೀಕ್ಷಕರು ಇಡೀ ದಿನ ಏನನ್ನೂ ತಿನ್ನುವುದರಿಂದ ಅಥವಾ ಕುಡಿಯುವುದರಿಂದ ದೂರವಿರುತ್ತಾರೆ. ಉಪವಾಸವು ಮರುದಿನ ಅಂದರೆ ಚಾಂದ್ರಮಾನದ 12ನೇ ದಿನದಂದು ಪಾರಣ ಸಮಯದಲ್ಲಿ ದ್ವಾದಶಿ ಎಂದು ಕರೆಯಲ್ಪಡುತ್ತದೆ.‌   ‌        ‌           ‌        ‌                                                          ‌ರಮಾ ಏಕಾದಶಿಯ ನಿರ್ದಿಷ್ಟ ಮುನ್ನಾದಿನದಂದು, ವೀಕ್ಷಕರು ಬೇಗನೆ ಎಚ್ಚರಗೊಂಡು, ಪವಿತ್ರ ಸ್ನಾನ ಮಾಡಿ ನಂತರ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಪೂಜೆಯ ಸಮಯದಲ್ಲಿ ದೇವರಿಗೆ ಹೂವುಗಳು, ಹಣ್ಣುಗಳು, ವಿಶೇಷ ಭೋಗ್ ಮತ್ತು ಇತರ ಅಗತ್ಯ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಆರತಿ ಮುಗಿದ ನಂತರ, ಪ್ರಸಾದವನ್ನು (ಪವಿತ್ರ ಆಹಾರ) ಎಲ್ಲಾ ಭಕ್ತರಿಗೆ ವಿತರಿಸಲಾಗುತ್ತದೆ.
ಈ ದಿನದಂದು, ಭಕ್ತರು ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ ಮತ್ತು ಭಗವಾನ್ ವಿಷ್ಣುವಿನ ಮಹಿಮೆಗಳನ್ನು ಕೇಳುವುದರ ಮೂಲಕ ಮತ್ತು ಭಜನೆಗಳನ್ನು ಹಾಡುವ ಮೂಲಕ ಮತ್ತು ಕೀರ್ತನೆಗಳನ್ನು ಮಾಡುವುದರ ಮೂಲಕ ಇಡೀ ರಾತ್ರಿಯನ್ನು ಕಳೆಯುತ್ತಾರೆ.
ಈ ಪದವು ಲಕ್ಷ್ಮಿ ದೇವಿಯನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಭಕ್ತರು ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಮಧ್ಯರಾತ್ರಿ ಜಾಗರಣೆ ಸಮಯದಲ್ಲಿ ಭಕ್ತರು ಭಗವದ್ಗೀತೆಯನ್ನು ಓದುತ್ತಾರೆ.
                                                                               ರಮಾ ಏಕಾದಶಿ ವ್ರತದ ಮಹತ್ವ ಮತ್ತು ಪ್ರಯೋಜನಗಳೇನು ?
ಬ್ರಹ್ಮ ವೈವರ್ತ ಪುರಾಣದಂತಹ ಹಿಂದೂ ನಂಬಿಕೆಗಳು ಮತ್ತು ಧರ್ಮಗ್ರಂಥಗಳ ಪ್ರಕಾರ, ರಾಮ ಏಕಾದಶಿ ಉಪವಾಸವನ್ನು ಆಚರಿಸುವ ಮೂಲಕ, ವೀಕ್ಷಕರು ತಮ್ಮ ಎಲ್ಲಾ ಹಿಂದಿನ ಪಾಪಗಳಿಂದ ಮುಕ್ತರಾಗುತ್ತಾರೆ.
ಈ ದಿನ ವಿಷ್ಣುವಿನ ಮಹಿಮೆಗಳನ್ನು ಕೇಳುವ ಭಕ್ತರು ಮೋಕ್ಷವನ್ನು ಸಾಧಿಸುತ್ತಾರೆ.
ಹಲವಾರು ಅಶ್ವಮೇಧ ಯಜ್ಞಗಳು ಮತ್ತು ರಾಜಸೂಯ ಯಜ್ಞಗಳನ್ನು ಮಾಡುವುದರಿಂದ ಸಾಧಿಸುವ ಪುಣ್ಯಕ್ಕಿಂತ ಈ ವ್ರತವನ್ನು ಆಚರಿಸುವ ಮೂಲಕ ಸಾಧಿಸುವ ಪುಣ್ಯವು ಹೆಚ್ಚು.
ಈ ಉಪವಾಸವನ್ನು ಶ್ರದ್ಧೆಯಿಂದ ಆಚರಿಸುವ ಭಕ್ತರು ತಮ್ಮ ಜೀವನದಲ್ಲಿ ಅಗಾಧವಾದ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ.
***

೧೫) ಕಾರ್ತೀಕ ಶುಕ್ಲ ಏಕಾದಶಿ - ಪ್ರಬೋಧಿನಿ or ದೇವುತ್ಥಾನ ಏಕಾದಶಿ
(ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ

ಪವಿತ್ರವಾದ  ಕಾರ್ತಿಕ ಮಾಸದ ಪ್ರಭೋದಿನಿ ಏಕಾದಶಿ  ಆ ಪ್ರಯುಕ್ತ ಕಿಂಚಿತ್ ಭಾಗವತ ಚಿಂತನೆ.
ಕಾರ್ತಿಕ ಮಾಸದಲ್ಲಿ ನದಿಗಳ ಸ್ನಾನ ಅತ್ಯಂತ ಪುಣ್ಯಕರವಾದದ್ದು. ಆದರೆ ನದಿ ಸ್ನಾನಕ್ಕೆ ಸೂಕ್ತ ಅವಕಾಶ ಸಿಗಿದಿದ್ದಾಗ ನಮಗೆ ಅದಕ್ಕಿಂತ ಪುಣ್ಯ ಕರವಾದದ್ದು ಶ್ರೀ ಹರಿಯ ನಾಮ ಅವನ ಕಥೆಯ ಶ್ರವಣ ಮನನ ಧ್ಯಾನ.
ಶ್ರೀ ಜಗನ್ನಾಥ ದಾಸರು  ತಮ್ಮ ಮೇರು ಕೃತಿ" ಶ್ರೀ ಹರಿಕಥಾಮೃತ  ಸಾರ "ದಲ್ಲಿ  ಕ್ರೀಡಾವಿಲಾಸ ಸಂಧಿಯಲ್ಲಿ" ಶ್ರೀಮದ್ಭಾಗವತ  ಸುಶ್ರವಣಗೈದು ಭವಾಖ್ಯ   ರೋಗವನ್ನು ನೀಗಿ ಸರ್ವದ್ಯಖಿಳ  ವಿಷಯ ನಿಯೋಗಿಸು ದಶೆಂದ್ರೀಯವನಿಲನೊಳು ಶ್ರೀ ಗುರು ಜಗನ್ನಾಥ ವಿಠ್ಠಲ ಪ್ರೀತನಾಗುವ " ಎಂದಿರುವ ದಾಸರ ಆಂತರ್ಯ ಶ್ರೀಮದ್ಭಾಗವತ  ಚಿಂತನದಿಂದ  ಶ್ರೀ ವಾಯುದೇವರು, , ಲಕ್ಷ್ಮೀನಾರಾಯಣನ ಅನುಗ್ರಹವಾಗುತ್ತದೆ ಎಂದು ಎಂದು ದಾಸರ ಅಭಿಪ್ರಾಯ.ಇಂತಹ  ಔಷದ ಭಾಗವತದ ಕಿಂಚಿತ್ ಸ್ಮರಣೆ.
ಚಾತುರ್ಮಾಸ ವ್ರತ ಸಮಾಪ್ತಿಯಾಗಿದೆ. ಈ ಮೂಲಕ ಪರಮಾತ್ಮನಿಗೆ ಅರ್ಪಣೆ.
 ನಾಳೆ ತುಳಸಿದೇವಿಯ ವಿವಾಹವಾದದಿನ. ಶ್ರೀ ಲಕ್ಷ್ಮಿಯ ಸನ್ನಿದಾನ ಇರುವ  ತುಳಸಿ ಅತ್ಯಂತ ಪವಿತ್ರಳಾದವಳು. ಹಾಗೇ ಎಲ್ಲಾ ಕೃಷ್ಣ ಪತ್ನಿಯರ ಸ್ಮರಣೆ.
ಒಮ್ಮೆ  ಸೂರ್ಯಗ್ರಹಣ ಸಂದರ್ಭದಲ್ಲಿ  ಶ್ರೀ ಕೃಷ್ಣ  ತನ್ನ ಪರಿವಾರದೊಡನೆ  ಪರಮ ಪವಿತ್ರವಾದ ಕುರುಕ್ಷೇತ್ರಕ್ಕೆ ಆಗಮಿಸಿದ. ಆ ಪರಿವಾರದಲ್ಲಿ  ಅನೇಕ ರಾಜರುಗಳು, ನಂದಗೋಪ  ಗೋಪಿಯರು, ಕೃಷ್ಣ ಪತ್ನಿಯರು, ಕುಂತಿ ವಸುದೇವ,ಭೀಷ್ಮಾದಿಗಳು,  ಹಿರಿಯರು ಕಿರಿಯರು, ಒಟ್ಟಿನಲ್ಲಿ ಕೃಷ್ಣ ಭಕ್ತರು  ಅಲ್ಲಿ ನೆರದಿದ್ದರು. ಹಿರಿಯರಿಗೆ ಕಿರಿಯರು ನಮಸ್ಕರಿಸಿದರು. ಹಿರಿಯರು ಕಿರಿಯರಿಗೆ ಆಶೀರ್ವದಿಸಿದರು. ಒಟ್ಟಿನಲ್ಲಿ ಆಧುನಿಕ ಕಾಲದಲ್ಲಿ ನಡೆಯುವಂತ ಒಂದು ಬಂಧುಗಳ ಭೇಟಿ ಸಮಾರಂಭ.
ಕುಂತಿ ವಾಸುದೇವನನ್ನು ಆಪತ್ತಿನಲ್ಲಿ  ರಕ್ಷಣೆ ಮಾಡಲಿಲ್ಲ ಎಂದಳು, ವಸುದೇವ ನಂದಗೋಪನನ್ನು ಆಲಂಗಿಸಿ ಕೃತಜ್ಞತೆ ಸಲ್ಲಿಸಿದ,  ರೋಹಿಣಿ ದೇವಕಿಯರು  ಯಶೋದೆಯನ್ನು ಆಲಂಗಿಸಿ ನಮ್ಮ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿರಿ ಎಂದರು ಯಾರು ಏನೇ ಅನ್ನಲಿ ನಮ್ಮ ಕೃಷ್ಣ ಪರಮಾತ್ಮ ಯಶೋದಾ ನಂದಗೋಪರಿಗೆ ಅಭಿವಾದನ ಮಾಡಿದ , ಇದೇ ಅಂತಿಮ ಸಕಲಜೀವಿಗಳಿಗೆ "ನಿನ್ನ ಒಲುಮೆಯಿಂದ ಸಕಲ ಜನರೂ ಬಂದು ಮನ್ನಿಸುವರೋ "ಎಂದು ಇಂದು ಉತ್ತರಾರಾಧನೆ ಮಾಡಿಸಿಕೊಳ್ಳುತ್ತಿರುವ ದಾಸವರೇಣ್ಯರು  ಹೇಳಿದಂತೆ,   ಎಲ್ಲಾ ಹಿರಿಯರು ಕೃಷ್ಣನ ಪತ್ನಿಯರನ್ನು ಕೊಂಡಾಡಿ "ನೀವೇ ಭಾಗ್ಯವಂತರು, ಯೋಗಿಗಳಿಗೂ ಸಿಗದ ಶ್ರೀಕೃಷ್ಣನನ್ನು ಸದಾ ಸೇವಿಸುತ್ತೀರಿ, ನಾವು ಅವನ ಪಾದದಿಂದ ಜನಿಸಿದ ಗಂಗೆಯನ್ನು, ವೇದಶಾಸ್ತ್ರಗಳನ್ನ ಸೇವಿಸುತ್ತಿದ್ದೇವೆ ಅದೇ ನಮಗೆ ಸಕಲ ಸಂಪತ್ತನ್ನೂ ನೀಡುತ್ತದೆ. ಎಂದು ಹೇಳಿದರು.
ಇಲ್ಲಿ ಭಾಗವತ ಒಂದು ವಿಷಯ ಹೇಳುತ್ತದೆ, ಕೃಷ್ಣನನ್ನು ಭೇಟಿಯಾಗಲು ಬಂದಿದ್ದ ಗೋಪಿಯರು ಕೃಷ್ಣನನ್ನು ನೋಡಿ ಆನಂದಿಸುವಾಗ , ತಮಗೆ ಕೃಷ್ಣನನ್ನು ಪೂರ್ಣವಾಗಿ ನೋಡಲು ಅಡ್ಡಿಯಾಗುವ ರೆಪ್ಪೆಗಳನ್ನು ನಿರ್ಮಿಸಿದ ಬ್ರಹ್ಮನನ್ನು ಶಪಿಸಿದರಂತೆ, ಅಂತಹ ಅನನ್ಯ ಪ್ರೇಮ ಅವರದು. ಭಗವಂತನಿಗೆ ಯಾರೂ ಸಾಟಿಯಿಲ್ಲ ಎನ್ನುವುದಕ್ಕೆ, ಗೋಪಿಯರನ್ನು ಸಾಂತ್ವನಗೊಳಿಸುತ್ತಾ  ಮದುರೆಗೆ  ಹೋದವನು ಬೇರೇ ಕಾರ್ಯಗಳಲ್ಲಿ ಮಗ್ನನಾದೆ, ನಿಮ್ಮನ್ನು ನೋಡಲು ಬರಲಾಗಲಿಲ್ಲ ಎಂದು ಹೇಳಿ ಈ ಮೂಲಕ ಮಾನವ ಕೋಟಿಗೇ ಒಂದು ಸಂದೇಶ ಕೊಡುತ್ತಾನೆ. " ನಾನು ಎಲ್ಲರೊಳಗೂ, ಹೊರಗೂ ಇರುವ ಪರಮಾತ್ಮನೆಂದು ತಿಳಿಯಿರಿ ಎನ್ನುತ್ತಾನೆ.
ಕೃಷ್ಣ ಪತ್ನಿಯರು ಪರಸ್ಪರ ಕಷ್ಟ ಸುಖಗಳನ್ನು ಹೇಳುವ ವಿಡಂಬನೆ  ಈಗ, ದ್ರೌಪದಿ ಕೇಳಿದಳು  ನೀವೆಲ್ಲ ಯಾವರೀತಿ  ವಿವಾಹವಾದಿರೆಂದು ಹೇಳಿ ಈಗ ಎಂದಳು.
ರುಕ್ಮಿಣಿ,ತನ್ನನ್ನು ಶಿಶುಪಾಲನಿಗೆ ಕೊಡಬೇಕೆಂದಾಗ ಸಿಂಹ ತನ್ನಪಾಲನ್ನು  ಎತ್ತಿಕೊಂಡು ಬಂದಂತೆ ಶ್ರೀಕೃಷ್ಣ ಕರೆದುಕೊಂಡುಬಂದು  ತನ್ನ ಚರಣ ಸೇವೆಗೆ ಅವಕಾಶ ನೀಡಿದ, ಎಂದಳು
ಸತ್ಯಭಾಮೆ ,ನಮ್ಮ ತಂದೆ ಮಣಿ ಕದ್ದವನು ಶ್ರೀಕೃಷ್ಣ ಎಂದು ಸುಳ್ಳು ಅಪವಾದ ಹೋರಿಸಿದ ಜಾಂಬವಂತನನ್ನು ಗೆದ್ದು ಮಣಿಯನ್ನು ತಂದಿದ್ದರಿಂದ ನಾಚಿ ನಮ್ಮ ತಂದೆ ಮಣಿಯೊಡನೆ ನನ್ನನ್ನೂ ಕೃಷ್ಣನಿಗೆ ಕೊಟ್ಟ ಎಂದಳು.
ಜಾಂಬವತಿ ದೇವಿ, ಕೃಷ್ಣ ರಾಮನಾಗಿ ಕಾಣಿಸಿದ್ದನ್ನು ಹೇಳಿ ತಾನು ಅವನಮೇಲೆ ಯುದ್ಧ ಮಾಡಿದ ತಪ್ಪಿಗೆ ನಾಚಿ ಮಣಿಯೊಂದಿಗೆ ನನ್ನನ್ನೂ ನೀಡಿದ ಎಂದಳು
ಕಾಳಿಂದಿ, ತಪಸ್ಸು  ಮಾಡುತ್ತಿದ್ದ ತನ್ನನ್ನು  ಅರ್ಜುನನ  ಮೂಲಕ ತಿಳಿದು ಕೃಷ್ಣ ಪಾಣಿಗ್ರಹಣ  ಮಾಡಿಕೊಂಡ ಎಂದಳು.
ಮಿತ್ರವಿಂದೆ, ತನ್ನ ಸೋದರರ ವಿರೋಧ ಲೆಕ್ಕಿಸದೆ ಕೃಷ್ಣ ವಿವಾಹವಾಗಿದ್ದನ್ನು ಹೇಳಿದಳು.
ನೀಲ,ಘೊಳಿಗಳನ್ನು ಅನಾಯಾಸವಾಗಿ ಮರ್ದಿಸಿ ಸ್ಪರ್ಧೆಯಲ್ಲಿ ಜಯಗಳಿಸಿ ವಿವಾಹವಾದದನ್ನು  ವರ್ಣಿಸಿದಳು.
ಭದ್ರೆ,  ಸೋದರಮಾವನ ಮಗನಲ್ಲಿ ನನ್ನ ಪ್ರೀತಿಯನ್ನು ನೋಡಿ ನನ್ನ ತಂದೆ ಸ್ವಯಂಪ್ರೇರಣೆಯಿಂದ  ಕೃಷ್ಣನನ್ನು  ಕರೆಸಿ  ವಿವಾಹ ಮಾಡಿದ  ಎಂದಳು
ಲಕ್ಷಣೆ ,ದ್ರೌಪದಿಯ ಸ್ವಯಂವರದಂತೆ  ತನ್ನ ಸ್ವಯಂವರವೂ  ಮತ್ಸ್ಯ ಯಂತ್ರ ಭೇದಿಸಿ ನನ್ನನ್ನು ವಿವಾಹವಾದ ಎಂದು ಹೇಳಿದಳು. ಇವಳದು ಸ್ವಲ್ಪ ಧೀರ್ಘವಾದ ವಿವರಣೆ.
ಇವರೆಲ್ಲರ ಯಶೋಗಾಥೆಯಾನಂತರ  ಹದಿನಾರು ಸಾವಿರ ನೂರು ಪತ್ನಿಯರು, ರಾಜಕುಮಾರಿಯರಾಗಿದ್ದ ತಮ್ಮನ್ನು, ನರಕಾಸುರ, ಬಂಧಿಸಿದ್ದಾಗ ನರಕ ನನ್ನು ಕೊಂದು ತಮ್ಮನ್ನು ಬಿಡುಗಡೆ ಮಾಡಿದ್ದನ್ನು ನೆನೆದು, ಭಾವುಕತೆಯಿಂದ  ತಮಗೆ ಯಾವ ಪದವಿ ಬೇಡ ಶ್ರೀಕೃಷ್ಣನ ಪಾದ ದೂಳಿ ಸಿಕ್ಕರೆ ಅಷ್ಟೇ ಸಾಕು ಎಂದರು.
ಇದು ಶ್ರೀಕೃಷ್ಣನ ಮಾಡದಿಯರು ನಡೆಸಿದ ಮಹಿಳಾ ಗೊಷ್ಟಿ.
ನಾಳೆ ತುಳಸಿ ವಿವಾಹ ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣರ ಒಂದು ಚಿಂತನೆ.
ಕುಂತಿ ಗಾಂಧಾರಿಯರು  ಕೃಷ್ಣ ಪತ್ನಿಯರ ಅನನ್ಯ ಭಕ್ತಿ ನೆನೆದು ಆನಂದ ಹೊಂದಿದರು.
ಈ ಮೊದಲೇ ಹೇಳಿದಂತೆ  ಕಾರ್ತಿಕ ಮಾಸದ ತೀರ್ಥ ಸ್ನಾನ ಅಲಭ್ಯವಾದಾಗ ಶ್ರೀ ಕೃಷ್ಣ ಈ ಸಂದರ್ಭದಲ್ಲಿ  ಒಂದು ಸರ್ವಕಾಲಿಕ  ವಿಷಯ ಹೇಳುತ್ತಾನೆ " ನೀರಿನ ತೀರ್ಥ ಕಲ್ಲಿನ ದೇವರಾಗಲಿ ದರ್ಶನ ಮಾತ್ರದಿಂದಲೇ ಪಾವಿತ್ರ್ಯ ತಂದುಕೊಡುವುದಿಲ್ಲ ಅಲ್ಲಿಗೆ ಬರುವ ನಿಮ್ಮಂತ ಹಿರಿಯರ ದರ್ಶನ, ಉಪದೇಶದಿಂದಲೇ  ಪಾವಿತ್ರ್ಯ ಬರುವುದು, ಗುರುಗಳಲ್ಲಿ ಎಲ್ಲಾ ತೀರ್ಥ ಕ್ಷೇತ್ರಗಳು, ದೇವತೆಗಳು ನೆಲೆಸಿರುವುದರಿಂದ ಎಲ್ಲಾ ಕ್ಷೇತ್ರದ ಫಲ ಜ್ಞಾನಿಗಳಿಂದಲೇ  ದೊರೆಯುವುದು. ಹಾಗೇ ಮುಂದುವರೆದು ಭಗವಂತ, "ಜ್ಞಾನಿಗಳನ್ನು ಕಡೆಗಣಿಸಿ , ತನ್ನ ಹೆಂಡತಿ ಮಕ್ಕಳನ್ನು ತನ್ನವರು, ನೀರು ತೀರ್ಥ, ಪ್ರತಿಮೆಯೇ ದೇವರು ಎನ್ನುವವನು 'ಕತ್ತೆ 'ಎಂದಿದ್ದಾನೆ. ಅಂದರೆ ಜ್ಞಾನವಿಲ್ಲದೆ ಗುರುಹಿರಿಯರನ್ನು ಕಡೆಗಾಣಿಸಿ ಮಾಡುವ ಪೂಜೆ ಪೂಜೆಯೇ ಅಲ್ಲ ಎನ್ನುವ ಭಾವ.
ಇಂದು ಕಾರ್ತೀಕ ಮಾಸದ ದ್ವಿತೀಯ ಸೋಮವಾರ. ಮಹರುದ್ರದೇವರಲ್ಲಿ
" ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ " ಎಂದು ಶ್ರೀ ವಿಜಯರಾಯರ ಆರಾಧ್ಯ ದೈವ ವಿಜಯವಿಠ್ಠಲನಲ್ಲಿ ಪ್ರಾರ್ಥನೆ
ಕಿಂಚಿತ್ ಶ್ರೀಮದ್ಭಾಗವತದ ದಶಮ ಸ್ಕಂದದ ಚಿಂತನೆ-----
           ಶ್ರೀ ಮದ್ವೇಶಾರ್ಪಣಮಸ್ತು
***
" ಪ್ರಬೋಧಿನಿ ಏಕಾದಶಿ ವೃತದ ಹಿನ್ನಲೆ ಮತ್ತು ಮಹತ್ವ : -"


ಏಕಾದಶಿಯ ಯಾವುದೇ ರೂಪವಾದರೂ ಎಲ್ಲಾ ಏಕಾದಶಿಗೂ ಸನಾತನ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಪುರಾಣಗಳಲ್ಲಿ ಒಂದಾದ ಪದ್ಮಪುರಾಣವು ಎಲ್ಲಾ ಏಕಾದಶಿಯನ್ನು ವಿಸ್ತಾರವಾಗಿ ವಿವರಿಸಿ ಹೇಳುತ್ತದೆ. ಏಕಾದಶಿ ಉಪವಾಸದ ಮಹಿಮೆಯನ್ನು ಯಾರು ಕೇಳುತ್ತಾರೋ, ಓದುತ್ತಾರೋ ಅವರು ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿಯನ್ನು ಹೊಂದಿ ಶ್ರೀಹರಿ ಲೋಕವಾದ ವೈಕುಂಠದಲ್ಲಿ ಸ್ಥಾನವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಅಂದರೆ ಇಂದು ದೇವ ಉತ್ಥಾನ ಅಥವಾ ದೇವ ಪ್ರಬೋಧಿನಿ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಈ ಮಂಗಳಕರ ದಿನದಂದು ವಿಷ್ಣು ಪರಮಾತ್ಮನು ಎಚ್ಚರಗೊಳ್ಳುವುದರಿಂದ ಈ ದಿನದ ವೃತವು ವಿಶೇಷ ಮಹತ್ವವನ್ನು ಹೊಂದಿದೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಿಷ್ಣು ಪರಮಾತ್ಮನು ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಕ್ಷೀರಸಾಗರಕ್ಕೆ ಹೋಗುವನು. ಇದನ್ನು "ದೇವ ಶಯನಿ ಏಕಾದಶಿ"ಯಾಗಿ ಆಚರಿಸಲಾಗುತ್ತದೆ. ಈ ಚಾತುರ್ಮಾಸದಲ್ಲಿ ಯಾವುದೇ ಶುಭ ಕಾರ್ಯವನ್ನು ನಿಷೇಧಿಸಲಾಗಿದ್ದು, ಪ್ರಬೋಧಿನಿ ಏಕಾದಶಿಯಂದು ಶ್ರೀಹರಿಯು ಎಚ್ಚರಗೊಳ್ಳುವನೆಂದು ನಂಬಲಾಗಿದೆ. ಮಾತ್ರವಲ್ಲ, ಎಲ್ಲಾ ರೀತಿಯ ಧಾರ್ಮಿಕ ಮತ್ತು ಶುಭಕರ ಚಟುವಟಿಕೆಗಳನ್ನು ಮತ್ತೆ ಆರಂಭಿಸಬಹುದು. ಹಾಗಾಗೀ ಈ ದಿನದ ಏಕಾದಶಿ ವೃತದಂದು ಭಕ್ತರು ಅತೀ ಉತ್ಸಾಹದಿಂದ ಆಚರಿಸುವರು ಮತ್ತು ವಿಷ್ಣು ದೇವನಿಗೆ ತುಳಸಿ ಎಲೆಗಳ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸುವರು. ಕೆಲವೆಡೆಗಳಲ್ಲಿ ವಿಷ್ಣುವಿನ ವಿವಾಹ ಸಮಾರಂಭವನ್ನು ನಡೆಸಲಾಗುತ್ತದೆ. ಇದಕ್ಕೆ " ತುಳಸಿ ವಿವಾಹ"ವೆಂದು ಕರೆಯಲಾಗುತ್ತದೆ.

ಪ್ರಬೋಧಿನಿ ಏಕಾದಶಿಯನ್ನು ಭಾರತ ದೇಶದಾದ್ಯಂತ ವಿಷ್ಣು ಪರಮಾತ್ಮನ ಭಕ್ತರು ದೇವಸ್ಥಾನಗಳಲ್ಲಿ ಹೂವುಗಳಿಂದ ಮತ್ತು ದೀಪಗಳಿಂದ ಅಲಂಕರಿಸುವರು. ಸ್ಕಂದ ಪುರಾಣದ ಪ್ರಕಾರ, ಪ್ರಬೋಧಿನಿ ಏಕಾದಶಿಯ ಮಹಿಮೆಯನ್ನು ಬ್ರಹ್ಮ ದೇವನು ನಾರದ ಮುನಿಗಳಿಗೆ ವಿವರಿಸುವರು. ಮದುವೆ, ನಿಶ್ಚಿತಾರ್ಥಗಳು, ಮಕ್ಕಳ ನಾಮಕರಣ ಸಮಾರಂಭಗಳು, ಗೃಹಪ್ರವೇಶ ಸೇರಿದಂತೆ ಮೊದಲಾದ ಎಲ್ಲಾ ಶುಭ ಕಾರ್ಯಗಳ ಆರಂಭವಾಗಿ ಈ ದಿನವು ಹಿಂದೂಗಳಿಗೆ ಬಹಳ ಮಹತ್ವದ್ದಾಗಿದೆ. ಭಕ್ತರು ತಮ್ಮ ಹಿಂದಿನ ಪಾಪಗಳನ್ನು ತೊಡೆದುಹಾಕಲು ಈ ಪವಿತ್ರ ಉಪವಾಸವನ್ನು ಆಚರಿಸುವರು.

ಪ್ರಬೋಧಿನಿ ಏಕಾದಶಿಯ ದಿನದಂದು ಭಕ್ತರು ಮುಂಜಾನೆ ಬೇಗನೆ ಎದ್ದು ತಮ್ಮ ಮನೆಯ ಆವರಣವನ್ನು ಶುಚಿಗೊಳಿಸಿ ನಂತರ ಪವಿತ್ರ ಸ್ನಾನ ಮಾಡಿ ದೇವರ ಕೋಣೆಯನ್ನು ದೀಪಗಳಿಂದ ಹೂವುಗಳಿಂದ ಅಲಂಕರಿಸುವರು. ಮಾತ್ರವಲ್ಲ, ವಿಷ್ಣು ಪರಮಾತ್ಮನ ವಿವಿಧ ಬಗೆಯ ಪ್ರಾರ್ಥನೆಗಳನ್ನು ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಭಜನೆಯನ್ನು ಪಠಿಸುವರು. ಕೊನೆಗೆ ವಿಷ್ಣು ಪರಮಾತ್ಮನಿಗೆ ವಿವಿಧ ಹಣ್ಣುಗಳನ್ನು ಮತ್ತು ತಿಂಡಿಗಳನ್ನು ಅರ್ಪಿಸುವರು.

"ಪ್ರಬೋಧಿನಿ ಏಕಾದಶಿ ವೃತದ ಮಹತ್ವ: -"


1. ಪಾಪಗಳ ನಾಶ ಮತ್ತು ಸದ್ಗುಣ ಬೆಳೆಯುವಿಕೆ :-

ಪದ್ಮಪುರಾಣದ ಪ್ರಕಾರ, ಈ ಏಕಾದಶಿ ದಿನದಂದು ಉಪವಾಸವನ್ನು ಕೈಗೊಂಡು ಹರಿಯನ್ನು, ಲಕ್ಷ್ಮಿಯನ್ನು ಪೂಜಿಸುವುದರಿಂದ ನಮ್ಮೆಲ್ಲಾ ಪಾಪಗಳು ಪರಿಹಾರವಾಗುತ್ತದೆ. ನಮ್ಮಲ್ಲಿ ಸದ್ಗುಣ ಹೆಚ್ಚಾಗುತ್ತದೆ. ಅಷ್ಟು ಮಾತ್ರವಲ್ಲ, ಮೋಕ್ಷವನ್ನು ಸಾಧಿಸುವುದಕ್ಕೂ ಸಹ ಸಾಧ್ಯವಿದೆ. ಯಾವ ವ್ಯಕ್ತಿಯು ಈ ಉಪವಾಸವನ್ನು ಮಾಡುತ್ತಾನೋ, ಆ ವ್ಯಕ್ತಿ ಒಂದು ಸಾವಿರ ಯಾಗವನ್ನು ಮಾಡಿದ ಫಲವನ್ನು ಮತ್ತು ನೂರು ರಾಜಸೂಯ ಯಜ್ಞ ಮಾಡಿದಷ್ಟು ಪುಣ್ಯವನ್ನು ಪಡೆದುಕೊಳ್ಳುತ್ತಾನೆ ಎನ್ನಲಾಗಿದೆ.

2. ಜನ್ಮ ಜನ್ಮಾಂತರಗಳ ಪಾಪವು ದೂರಾಗುವುದು :-

ಪದ್ಮಪುರಾಣದ ಪ್ರಕಾರ, ಈ ಉಪವಾಸವನ್ನು ಯಾರು ಆಚರಿಸುತ್ತಾರೋ ಅವರು ಅಪರೂಪದ ಮತ್ತು ದುಬಾರಿ ವಸ್ತುಗಳನ್ನು ಪಡೆಯುತ್ತಾರೆ. ಈ ಉಪವಾಸವನ್ನು ಶ್ರದ್ಧೆಯಿಂದ ಇಟ್ಟುಕೊಂಡರೆ, ಒಂದೇ ಕ್ಷಣದಲ್ಲಿ ಮಹಾ ಪಾಪಗಳು ಕೂಡ ನಾಶವಾಗುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಸಾವಿರ ಜನ್ಮಗಳ ಪಾಪಗಳಿಂದ ಮುಕ್ತಿಯನ್ನು ಕೂಡ ನಾವು ಈ ಒಂದು ಏಕಾದಶಿ ಉಪವಾಸದ ಮೂಲಕ ಪಡೆದುಕೊಳ್ಳಬಹುದು.

3. ಪಿತೃಗಳು ಕೂಡ ನರಕದಿಂದ ಮುಕ್ತಿ ಹೊಂದುತ್ತಾರೆ :-

ಪದ್ಮಪುರಾಣದ ಪ್ರಕಾರ, ಈ ಉಪವಾಸವನ್ನು ಆಚರಿಸುವ ಎಲ್ಲಾ ಜನರಿಗೂ ಫಲ ಸಿಗುತ್ತದೆ. ಅದೇ ಸಮಯದಲ್ಲಿ, ಅವರ ಪಿತೃಗಳು ಸಹ ನರಕದ ತೊಂದರೆಗಳಿಂದ ಮುಕ್ತಿ ಹೊಂದುತ್ತಾರೆ ಮತ್ತು ಶ್ರೀಹರಿಯ ವಾಸಸ್ಥಾನದಲ್ಲಿ ಸ್ಥಾನ ಪಡೆಯುತ್ತಾರೆ. ಇದಲ್ಲದೆ, ಇಡೀ ತೀರ್ಥಯಾತ್ರೆಯಲ್ಲಿ ಸ್ನಾನ ಮಾಡುವುದರಿಂದ ಮತ್ತು ಭೂಮಿಯನ್ನು ದಾನ ಮಾಡುವುದರಿಂದ ಸಿಗುವ ಫಲವನ್ನು ನಾವು ಕೇವಲ ಈ ಒಂದು ಉಪವಾಸದಿಂದ ಪಡೆದುಕೊಳ್ಳಬಹುದು. ಈ ಉಪವಾಸದಿಂದ ಸದ್ಗುಣವನ್ನು ಕೂಡಾ ಹೊಂದಬಹುದು.

4. ಮಾಧವನು ಸಂತೋಷಗೊಳ್ಳುವಿಕೆ :-

ಪದ್ಮಪುರಾಣದ ಪ್ರಕಾರ, ಮಾಧವನನ್ನು ದೇವ ಪ್ರಭೋಧಿನಿ ಏಕಾದಶಿಯಂದು ಅನೇಕ ರೀತಿಯ ಹೂವುಗಳು, ಹಣ್ಣುಗಳು, ಕರ್ಪೂರ, ಅಗರಬತ್ತಿ ಮತ್ತು ಕುಂಕುಮದೊಂದಿಗೆ ಪೂಜಿಸಬೇಕು. ಅಲ್ಲದೆ, ಸಾಧ್ಯವಾದಷ್ಟು ದಾನವನ್ನು ಮಾಡಬೇಕು. ಏಕಾದಶಿಯಂದು ಮಾಡಿದ ದಾನವು ಅಸಂಖ್ಯಾತ ಪುಣ್ಯವನ್ನು ತರುತ್ತದೆ. ಈ ದಿನ ಭಾಗವತ ಕಥೆಯನ್ನು ಕೇಳಬೇಕು. ದೇವಪ್ರಬೋಧಿನಿ ಏಕಾದಶಿ ಉಪವಾಸದಲ್ಲಿ ಯಾರು ಭಾಗವತ ಪುರಾಣವನ್ನು ಪಠಿಸುತ್ತಾರೋ ಕಪಿಲದಾನದ ಫಲವನ್ನು ಪಡೆದುಕೊಳ್ಳುತ್ತಾರೆ.

5. ಈ ಒಂದು ಎಲೆ ದೇವರನ್ನು ಸಂತೋಷಗೊಳಿಸುತ್ತದೆ :-

ಕೇದಿಗೆಯ ಎಲೆಯೊಂದಿಗೆ ದೇವ ಪ್ರಭೋದಿನಿ ಏಕಾದಶಿಯನ್ನು ಪೂಜಿಸಿದರೆ, ವಿಷ್ಣು ಪರಮಾತ್ಮನು ತುಂಬಾ ಸಂತೋಷಪಡುತ್ತಾನೆ. ಈ ಏಕ ಎಲೆಯೊಂದಿಗೆ ಪೂಜಿಸಿದ ನಂತರ ಭಗವಾನ್ ಗರುಡನು ಒಂದು ಸಾವಿರ ವರ್ಷಗಳ ಕಾಲ ಬಹಳ ತೃಪ್ತಿ ಹೊಂದುತ್ತಾನೆ ಎಂದು ಪದ್ಮಪುರಾಣದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ಅಗಸ್ತ ಹೂವಿನೊಂದಿಗೆ ಭಗವಾನ್ ಮಾಧವನ ಆರಾಧನೆ ಮಾಡಿದರೆ, ಮರಣಾ ನಂತರ ನರಕಕ್ಕೆ ಹೋಗಬೇಕೆಂದಿಲ್ಲ. ಅಷ್ಟೇ ಅಲ್ಲ, ಕಾರ್ತಿಕ ತಿಂಗಳಲ್ಲಿ ಶ್ರೀ ಹರಿಯನ್ನು ಪೂಜಿಸುವಾಗ ಅವರಿಗೆ ತುಳಸಿ ಎಲೆಗಳನ್ನು ಮತ್ತು ಹೂವುಗಳನ್ನು ಅರ್ಪಿಸುವುದರಿಂದ ಜನ್ಮ ಜನ್ಮಾಂತರದ ಪಾಪಗಳು ನಾಶವಾಗುತ್ತದೆ.
ಈ ಮೇಲೆ ಸೂಚಿಸಿದ ಕ್ರಮಗಳನ್ನು ಅನುಸರಿಸುವುದರಿಂದ ನಾವು ವಿಷ್ಣು ಪರಮಾತ್ಮನಿಗೆ ಹತ್ತಿರವಾಗಬಹುದು.
***

ದೇವೋತ್ಥಾನ ಏಕಾದಶಿ ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ, ಮಹತ್ವ ಹೀಗಿದೆ..!

ದೇವ ಪ್ರಬೋಧಿನಿ ಅಥವಾ ದೇವುತ್ಥಾನ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಈ ಏಕಾದಶಿಯ ಉಪವಾಸವು ಎಲ್ಲಾ ಪಾಪಗಳಿಂದ ಮುಕ್ತವಾಗಿಸುತ್ತದೆ ಮತ್ತು ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ಪರಿಗಣಿಸಲಾಗಿದೆ.

ಧಾರ್ಮಿಕ ಗ್ರಂಥಗಳ ಪ್ರಕಾರ, ದೇವುತ್ಥಾನ ಏಕಾದಶಿಯ ದಿನದಂದು, ಭಗವಾನ್ ಶ್ರೀ ಹರಿವಿಷ್ಣುವಿನ ಶಯನ ಅವಧಿಯು ಕೊನೆಗೊಳ್ಳುತ್ತದೆ ಮತ್ತು ಮದುವೆ ಸಮಾರಂಭ, ಮುಂಡನ, ಸಂಸ್ಕಾರ ಮುಂತಾದ ಮಂಗಳಕರ ಕಾರ್ಯಗಳು ಪುನರಾರಂಭಗೊಳ್ಳುತ್ತವೆ. ಈ ಬಾರಿ ಸುಮಾರು 117 ದಿನಗಳ ನಂತರ, ಭಗವಾನ್ ಶ್ರೀ ವಿಷ್ಣುವು ನವೆಂಬರ್ 4 ರಂದು 4 ತಿಂಗಳ ಯೋಗ ನಿದ್ರಾದಿಂದ ಎಚ್ಚರಗೊಳ್ಳುತ್ತಾನೆ, ಆದರೆ ಈ ವರ್ಷ ದೇವಪ್ರಬೋಧನಿ ಏಕಾದಶಿಯಂದು ಮಂಗಳಕರ ವಿವಾಹಗಳು ನಡೆಯುವುದಿಲ್ಲ.

ಭಗವಾನ್ ಶ್ರೀ ಹರಿವಿಷ್ಣುವಿನ ಜಾಗರಣೆಯ ನಂತರ ಈ ದಿನದಿಂದ ಪ್ರತಿ ವರ್ಷ ಶುಭ ವಿವಾಹಗಳು ಮತ್ತು ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ, ಆದರೆ ಈ ಬಾರಿ ಶುಕ್ರ ನಕ್ಷತ್ರವು ಅಸ್ತವ್ಯಸ್ತವಾಗಿರುವ ಕಾರಣ ದೇವುತ್ಥಾನ ಏಕಾದಶಿಯಿಂದ ವಿವಾಹ ಮುಹೂರ್ತವು ಪ್ರಾರಂಭವಾಗುವುದಿಲ್ಲ. ದೇವಪ್ರಬೋಧಿನಿ ಏಕಾದಶಿಯ ಶುಭ ಕಾಕತಾಳೀಯ, ಮದುವೆ ಸಮಯ ಮತ್ತು ಈ ಏಕಾದಶಿಗೆ ಸಂಬಂಧಿಸಿದ ವಿಶೇಷ ವಿಷಯಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ..ದೇವುತ್ಥಾನ ಏಕಾದಶಿಯಂದು ಯಾವ ಕೆಲಸಗಳನ್ನು ಮಾಡಬೇಕು..?

- ದೇವುತ್ಥಾನ ಏಕಾದಶಿಯ ಕಥೆಯನ್ನು ಸರಳವಾಗಿ ಓದುವುದರಿಂದ ಮತ್ತು ಕೇಳುವುದರಿಂದ ಗೋವನ್ನು ದಾನ ಮಾಡಿದ ಫಲ ಸಿಗುತ್ತದೆ.

- ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯ ದಿನದಂದು ಭಗವಾನ್ ಶ್ರೀ ವಿಷ್ಣುವನ್ನು ಗುಲಾಬಿ ಹೂವಿನಿಂದ ಪೂಜಿಸುವವರು ಮೋಕ್ಷವನ್ನು ಪಡೆಯುತ್ತಾರೆ.

- ದೇವುತ್ಥಾನ ಏಕಾದಶಿಯಂದು ಶ್ರೀ ಹರಿಗೆ ಮಂಜರಿಯನ್ನು ಅರ್ಪಿಸುವುದರಿಂದ ಕೋಟಿಗಟ್ಟಲೆ ಗೋವುಗಳನ್ನು ದಾನ ಮಾಡಿದ ಫಲ ದೊರೆಯುತ್ತದೆ.

- ಈ ದಿನ ಶಮಿ ಪತ್ರದೊಂದಿಗೆ ಶ್ರೀ ಹರಿಯನ್ನು ಪೂಜಿಸುವುದರಿಂದ ಯಮರಾಜನಿಗೆ ಭಯಪಡುವ ಅವಶ್ಯಕತೆಯಿರುವುದಿಲ್ಲ.

- ಈ ದಿನ ಸ್ನಾನ ಮಾಡಿದ ನಂತರ ಮೊಸರು ಮತ್ತು ಜೇನುತುಪ್ಪವನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

​ದೇವುತ್ಥಾನ ಏಕಾದಶಿ ಪೂಜೆ ವಿಧಾನ:

ದೇವುತ್ಥಾನ ಏಕಾದಶಿಯ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ, ವಿಷ್ಣುವನ್ನು ಪೂಜಿಸುವಾಗ, ಉಪವಾಸದ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ. ಸಂಜೆ, ಪೂಜಾ ಸ್ಥಳದಲ್ಲಿ ರಂಗೋಲಿಯನ್ನು ಮಾಡಿ ಮತ್ತು ದೇವತೆಗಳಿಗೆ 11 ತುಪ್ಪದ ದೀಪವನ್ನು ಬೆಳಗಿಸಿ. ಸಾಧ್ಯವಾದರೆ ಕಬ್ಬಿನ ಮಂಟಪವನ್ನು ಮಾಡಿ ಮಧ್ಯದಲ್ಲಿ ವಿಷ್ಣುವಿನ ವಿಗ್ರಹವನ್ನು ಇರಿಸಿ. ಈ ದಿನದಂದು, ಭಗವಾನ್ ಹರಿಗೆ ಕಬ್ಬು, ಕಮಲದ ಬೀಜ, ಲಡ್ಡುಗಳು, ಎಲೆಗಳು, ಮೂಲಂಗಿಯಂತಹ ಆಯಾ ಋತುಮಾನದ ಹಣ್ಣುಗಳನ್ನು ಅರ್ಪಿಸಿ. ರಾತ್ರಿ ತುಪ್ಪದ ದೀಪವನ್ನು ಹಚ್ಚಿ, ಹರಿ ವಾಸರ ಅಂತ್ಯದ ನಂತರವೇ ಉಪವಾಸವನ್ನು ಮುರಿಯಿರಿ.

​ದೇವುತ್ಥಾನ ಏಕಾದಶಿ ಮಹತ್ವ:

ಹಿಂದೂ ತ್ರಿಮೂರ್ತಿಗಳಾದ ಭಗವಾನ್ ವಿಷ್ಣುವು ಆಷಾಢ ಮಾಸದ ದೇವಶಯನಿ ಏಕಾದಶಿಯ ದಿನದಂದು ನಾಲ್ಕು ತಿಂಗಳ ಕಾಲ ಯೋಗ ನಿದ್ರೆಯನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ. ಈ ಅವಧಿಯನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಸಮಯದಲ್ಲಿ ಸಂಭವಿಸುವ ಏಕಾದಶಿಯ ದಿನದಂದು ವಿಷ್ಣು ತನ್ನ ಯೋಗ ನಿದ್ರೆಯಿಂದ ಹೊರಬರುತ್ತಾನೆ. ಈ ಏಕಾದಶಿಯನ್ನೇ ದೇವುತ್ಥಾನ ಏಕಾದಶಿ ಎಂದು ಕರೆಯಲಾಗುತ್ತದೆ.

ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಗಳಲ್ಲಿ ದೇವುತ್ಥಾನ ಏಕಾದಶಿ ಪ್ರಮುಖವಾದುದು. ಜೊತೆಗೆ ದ್ವಾದಶಿ ತಿಥಿಯು ತುಳಸಿ ವಿವಾಹಕ್ಕೆ ಉತ್ತಮ ದಿನವಾಗಿದೆ. ಈ ಸಂದರ್ಭದ ಗೌರವಾರ್ಥವಾಗಿ, ಸಾಲಿಗ್ರಾಮದೊಂದಿಗೆ ತುಳಸಿ ದೇವಿಯ ವಿವಾಹವನ್ನು ಮಾಡಲಾಗುತ್ತದೆ.

​ದೇವುತ್ಥಾನ ಏಕಾದಶಿ ಮಂತ್ರ:

''ಉತ್ತಿಷ್ಟೋ ಉತ್ತಿಷ್ಟ ಗೋವಿಂದೋ
ಉತ್ತಿಷ್ಟೋ ಗರುಢಧ್ವಜ |
ಉತ್ತಿಷ್ಟೋ ಕಮಲಾಕಾಂತ
ಜಗತಾಂ ಮಂಗಲಂ ಕುರು ||''

''ಬ್ರಹ್ಮೇಂದ್ರರುದಾಗ್ನಿ ಕುಬೇರ ಸೂರ್ಯಸೋಮಾದಿಭಿರ್ವಂದಿತ ವಂದನೀಯ|
ಬುಧ್ಯಸ್ಯ ದೇವೇಶ ಜಗನ್ನಿವಾಸ ಮಂತ್ರ ಪ್ರಭಾವೇಣ ಸುಖೇನ ದೇವ||''
****


೧೬) ಕಾರ್ತೀಕ ಬಹುಳ ಏಕಾದಶಿ - ಉತ್ಪತ್ತಿ - 
ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)
ಉತ್ಪತ್ತಿ ಅಥವಾ ಉತ್ಪನ್ನ ಏಕಾದಶಿ 

ಕಾರ್ತೀಕ ಮಾಸದ ( ಉತ್ಪತ್ತಿ ) ಏಕಾದಶಿ ...
ದುಷ್ಟ ಸಂಹಾರ  ( ಮುರಾಸುರನನ್ನು ಸಂಹರಿಸಿದ ಕನ್ನೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ ) ...

ಹಿಂದೊಮ್ಮೆ ಮುರ ಎಂಬ ರಾಕ್ಷಸನು ಅತ್ಯಂತ ಬಲಶಾಲಿ ಹಾಗೂ ಶೂರವಂತನೂ ಆಗಿದ್ದನು. ಈತನು ಇಂದ್ರಲೋಕಕ್ಕೆ ದಾಳಿಯಿಟ್ಟು, ಇಂದ್ರನನ್ನು ಪದಚ್ಯುತಿಗೊಳಿಸಿ, ಇತರ ದೇವಾದಿದೇವತೆಗಳನ್ನು ಯುದ್ಧದಲ್ಲಿ ಪರಾಭವಗೊಳಿಸಿದ್ದನು.

 ಸಜ್ಜನರಿಗೆ, ಋಷಿಮುನಿಗಳಿಗೆ ಮತ್ತು ಇತರ ದೇವತೆಗಳಿಗೆ ಕಂಟಕನಾಗಿದ್ದ ಈ ಅಸುರನ ಉಪಟಳವನ್ನು ತಡೆಯಲಾರದೆ ಎಲ್ಲರೂ ಮಹಾವಿಷ್ಣುವಿನಲ್ಲಿ ಕಾಪಾಡುವಂತೆ ಮೊರೆಯಿಡುತ್ತಾರೆ. 

ಅಂತೆಯೇ, ಮಹಾವಿಷ್ಣುವು ಮುರಾಸುರನ ಮೇಲೆ ಯುದ್ಧವನ್ನು ಆರಂಭಿಸುತ್ತಾನೆ. ಈ ಯುದ್ಧವು ಹಲವಾರು ವರ್ಷಗಳವರೆಗೂ ನಡೆಯುತ್ತಲೇ ಇದ್ದುದರಿಂದ, ಮಹಾವಿಷ್ಣುವು ಬಳಲಿದಂತೆ ನಟಿಸುತ್ತಾ ಗುಹೆಯೊಂದರೊಳಗೆ ಹೋಗಿ ವಿಶ್ರಮಿಸುತ್ತಾನೆ. ಇದನ್ನು ಕಂಡ ಮುರನು ವಿಷ್ಣುವನ್ನು ಸೋಲಿಸಿಬಿಟ್ಟೆನೆಂದು ಭಾವಿಸಿ, ಗುಹೆಯೊಳಗೆ ಪ್ರವೇಶಿಸುತ್ತಾನೆ.

 ಅಲ್ಲಿ ಆತನಿಗೆ ಪರಮಸುಂದರಿಯಾದ ಓರ್ವ ಕನ್ಯೆಯು ಕಾಣಿಸುತ್ತಾಳೆ. ಆಕೆಯನ್ನು ಮೋಹಿಸಬೇಕೆಂದುಕೊಳ್ಳುತ್ತಿರುವಾಗಲೆ ಆ ಸ್ತ್ರ್ರೀಯು ಈತನ ಮೇಲೆ ಹಲ್ಲೆನಡೆಸಿ, ಕ್ಷಣಮಾತ್ರದಲ್ಲಿ ಅವನನ್ನು ಕೊಂದುಬಿಡುತ್ತಾಳೆ.

ಅಂತಹ ಸಂದರ್ಭದಲ್ಲಿ ನಿದ್ರೆಯಿಂದೆಚ್ಚೆತ್ತ ವಿಷ್ಣುವು ಈಕೆಯನ್ನು ಮತ್ತು ಗತಪ್ರಾಣನಾದ ಮುರನನ್ನು ಕಂಡು ಮುಗುಳುನಗೆಯನ್ನು ಸೂಸುತ್ತಾನೆ. 

ತಾನು ಮಲಗುವ ಮುನ್ನ ತನ್ನ ಹನ್ನೊಂದು ಅಂಗಾಂಶಗಳಿಂದ ಆ ದೇವಿಯನ್ನು ಸೃಷ್ಟಿಸಿದ್ದನು. ಆಕೆಯೇ ಮುರನನ್ನು ಸಂಹರಿಸಿದವಳು. ವಿಷ್ಣುವಿನ ಹನ್ನೊಂದು ಅಂಗಾಂಶಗಳಿಂದ ಜನಿಸಿದವಳಾದ್ದರಿಂದ, ಈಕೆಯನ್ನು ಏಕಾದಶಿ ದೇವಿಯೆಂದು ಕರೆದ .

ಪರಮಾತ್ಮನು ಏಕಾದಶಿಯಂದು ಉಪವಾಸವಿದ್ದು ತನ್ನನ್ನು ಅಂದರೆ ವಿಷ್ಣುವನ್ನು ಪೂಜಿಸಿದವರಿಗೆ ಆಯುರಾರೋಗ್ಯ, ಅಭೀಷ್ಟಗಳ ಸಿದ್ಧಿ ಹಾಗೂ ಮೋಕ್ಷಗಳು ದೊರಕುವಂತೆ ವರವನ್ನು ನೀಡುವ ಶಕ್ತಿಯನ್ನು ಆಕೆಗೆ ನೀಡುತ್ತಾನೆ. ಆದ್ದರಿಂದಲೇ ಏಕಾದಶಿವ್ರತವು ಸದಾಕಾಲವೂ ಸರ್ವಮಾನ್ಯವಾದ ವ್ರತವಾಗಿದೆ.
***
೧೭) ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದಾ - 
ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)


೧೮) ಮಾರ್ಗಶಿರ ಬಹುಳ ಏಕಾದಶಿ - ವಿಮಲಾ (ಸಫಲಾ) 
- ಅಜ್ಞಾನ ನಿವೃತ್ತಿ

ಸಫಲಾ ಏಕಾದಶಿ ಮಹಿಮೆ

ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ
ಖಂಡಮಂಡನಂ ಪ್ರೀಣಯಾಮೋ ವಾಸುದೇವಮ್ ॥

ಅಕ್ಷಯಂ ಕರ್ಮ ಯಸ್ಮಿನ್ ಪರೇ ಸ್ವರ್ಪಿತಂ
ಪ್ರಕ್ಷಯಂ ಯಾಂತಿ ದುಃಖಾನಿ ಯನ್ನಾಮತಃ ।
ಅಕ್ಷರೋ ಯೋಽಜರಃ ಸರ್ವದೈವಾಮೃತಃ
ಕುಕ್ಷಿಗಂ ಯಸ್ಯ ವಿಶ್ವಂ ಸದಾಽಜಾದಿಕಮ್ ।

ಮಾರ್ಗಶಿರ ಕೃಷ್ಣಪಕ್ಷದಲ್ಲಿ ಬರುವ ಏಕಾದಶಿಗೆ ಸಫಲಾ ಏಕಾದಶಿ ಎನ್ನುವರು. ಈ ವ್ರತದ ಕುರಿತು ಭವಿಷ್ಯೋತ್ತರ ಪುರಾಣದಲ್ಲಿ ಉಲ್ಲೇಖವಿದೆ. ಮಹಾಭಾರತದಲ್ಲಿ ಶ್ರೀಕೃಷ್ಣ ಪರಮಾತ್ಮ ಯುಧೀಷ್ಠಿರನಿಗೆ ಈ ಏಕಾದಶಿಯ ಮಹತ್ವ ಕುರಿತು ದೃಷ್ಟಾಂತ ಸಹಿತ ವಿವರಿಸುತ್ತಾನೆ.

ದೃಷ್ಟಾಂತ :

ಹಿಂದೆ ಚಂಪಾವತಿ ಎಂಬ ನಗರವಿತ್ತು ಆ ನಗರವನ್ನು ಮಹಿಷ್ಮತನೆಂಬ ರಾಜ ಆಳುತ್ತಿದ್ದ. ಆತನಿಗೆ ನಾಲ್ವರು ಪುತ್ರರು. ಹಿರಿಯ ಮಗನಾದ ಲುಂಪಕನು ವಿಷಯ ಲಂಪಟನೂ ಜೂಜುಗಾರನೂ ಆಗಿ ಸದಾ ಪಾಪಕೃತ್ಯದಲ್ಲಿ ತೊಡಗಿದ್ದ. ಅದರಿಂದ ರಾಜ್ಯದ ಸಂಪತ್ತು ಕಡಿಮೆಯಾಗತೊಡಗಿತು. 

ಲುಂಪಕ ದೇವರ ಬಗ್ಗೆ ಅಸಡ್ಡೆಹೊಂದಿದ್ದ. ದೇವರು ಬ್ರಾಹ್ಮಣರೆಂದರೆ ಆತನಿಗೆ ಆಗಿ ಬರುತ್ತಿರಲಿಲ್ಲ. ವೈಷ್ಣವರ ವಿರೋದೀಯಾಗಿದ್ದ. ಮಗನ ಈ ಅತಿರೇಕ ಬುದ್ಧಿಯನ್ನು ಸಹಿಸದ ರಾಜ ಅವನ್ನು ಅಡವಿಗೆ ಅಟ್ಟುತ್ತಾನೆ. ರಾಜನ ಹೆದರಿಕೆಯಿಂದ ಬಂಧುಗಳೂ ಅವನನ್ನು ರಕ್ಷಿಸುವುದಿಲ್ಲ. ಇದರಿಂದ ಲುಂಪಕ ಮತ್ತಷ್ಟು ಪಾಪದ ಕೃತ್ಯ ಮಾಡಲು ಮುಂದಾದ ಅಪ್ಪನೇ ನನ್ನನ್ನು ಹೊರಹಾಕಿದ್ದಾನೆ ಆದ್ದರಿಂದ ಇಂದು ರಾತ್ರಿ ಮನೆಗೆ ಹೋಗಿ ನನಗೆ ಬೇಕಾದಷ್ಟು ಸಂಪತ್ತನ್ನು ಕೊಳ್ಳೆ ಹೊಡೆಯಬೇಕು ಎಂದುಕೊಂಡ. 

ಕೊಳ್ಳೆ ಹೊಡೆದ ಸಂಪತ್ತು ನಾನು ಅರಣ್ಯದಲ್ಲಿ ಇರುವವರೆಗೆ ಅದು ಸಾಕಾಗುವಷ್ಟಿರಬೇಕು ಎಂದು ಚಿಂತಿಸಿದ. ಅದರಂತೆಯೇ ಮಾಡಿದ ನಂತರ  ರಾತ್ರಿ ವೇಳೆ ಪಟ್ಟಣಕ್ಕೆ ಕಳ್ಳತನ ಮಾಡುತ್ತಾನೆ.  ಹಗಲೆಲ್ಲ ಪ್ರಾಣಿಗಳನ್ನು ಬೇಟೆಯಾಡುವುದು ರಾತ್ರಿ ಕದಿಯುವದು ಅವನ ಕೆಲಸವಾಗುತ್ತದೆ. 

ಗ್ರಾಮಸ್ಥರು ಇದನ್ನು ನೋಡಿದರೂ ನೋಡದಂತೆ ಇರುತ್ತಾರೆ. ಅವರಿಗೆ ರಾಜನ ಹೆದರಿಕೆ ಇರುತ್ತದೆ. ಜನರು ಲುಂಪಕನ ಹಿಂದಿನ ಜನ್ಮದ ಕಾರ್ಯ ಹೀಗೆ ಮಾಡಲು ಅವನಿಗೆ ಪ್ರರೇಪಿಸುತ್ತದೆ ಇಲ್ಲದಿದ್ದರೆ ಅವನೇಕೆ ರಾಜನ ಮಗನಾಗಿ ಹೀಗೆ ಕಳ್ಳನಂತೆ ವರ್ತಿಸುತ್ತಾನೆ ಎಂದುಕೊಳ್ಳುತ್ತಾರೆ.

ಆತ ನಿತ್ಯ ಮಧ್ಯಮಾಂಸವನ್ನು ಸೇವಿಸುತ್ತಿದ್ದ, ಅದೃಷ್ಟವಶಾತ್ ಆತ ಒಂದು ಆಲದ ಮರದ ಕೆಳಗೆ ವಾಸಿಸುತ್ತಿದ್ದ. ಆಲದ ಮರ ಪರಮಾತ್ಮ ವಾಸುದೇವನ ಪ್ರೀತಿಯ ವೃಕ್ಷ. ಉಳಿದ ಮರಗಳೆಲ್ಲ ಆ ವೃಕ್ಷಕ್ಕೆ ಪೂಜೆ ಸಲ್ಲಿಸುತ್ತಿದ್ದವು ಅಂಥ ಮರದ ಕೆಳಗೆ ಲುಂಪಕ ಪಾಪದ ಕೆಲಸ ಮಾಡುತ್ತಿದ್ದ. 

ಆಗ ಒಮ್ಮೆ ಸಫಲಾ ಏಕಾದಶಿ ಬರುತ್ತದೆ.  ಲುಂಪಕನಿಗೆ ರಾತ್ರೆಯೆಲ ನಿದ್ದೆ ಹತ್ತಿರ ಸುಳಿಯಲೇ ಇಲ್ಲ. ಏಕೆಂದರೆ ಆಗ ತುಂಬ ಛಳಿಯಿತ್ತು ಎಷ್ಟು ಹೊದ್ದುಕೊಂಡರೂ ಚಳಿ ಕಡಿಮೆಯಾಗಲಿಲ್ಲ ಹೀಗೆ ನಡುಗುತ್ತ ಬೆಳಗಿನವರೆಗೂ ಕಳೆದ. ಎಂದಿನಂತೆ ಸೂರ್ಯೋದಯವಾಗುತ್ತದೆ. ಆದರೂ ಆಲಸ್ಯದಿಂದ ಲುಂಪಕನಿಗೆ ಏಳಲು ಆಗುವುದಿಲ್ಲ. ಮಧ್ಯಾಹ್ನವಾಗುತ್ತದೆ ಎದ್ದು ಆಹಾರಕ್ಕಾಗಿ ಪ್ರಾಣಿಗಳ ಬೇಟೆಗೆ ಹೋಗಬೇಕು ಆದರೆ ಆತನಿಗೆ ಒಂದು ಹೆಜ್ಜೆ ಕೂಡ ಮುಂದಿಡಲು ಆಗುವುದಿಲ್ಲ. 

ಹಾಗೇ ಸಾವರಿಸಿಕೊಂಡು ಅಡವಿಯ ಮಧ್ಯದಲ್ಲಿ ಬರುತ್ತಾನೆ. ಅವನಿಗೆ ಬೇಟೆಯಾಡುವುದು ಅಸಾಧ್ಯವಾಗುತ್ತದೆ. ಶಕ್ತಿ ಕುಂದಿರುತ್ತದೆ. ಹೀಗಾಗಿ ಅಲ್ಲಲ್ಲಿ ಬಿದ್ದ ಹಣ್ಣುಗಳನ್ನು ಸಂಗ್ರಹಿಸಿ ಹೊರಳಿ ಆಲದಮರ ಕೆಳಗೆ ಬಂದು ಕುಳಿತುಕೊಳ್ಳುತ್ತಾನೆ. ಅಷ್ಟೊತ್ತಿಗೆ ಸಂಜೆಯಾಗಿರುತ್ತದೆ. ಪಕ್ಕದಲ್ಲಿ ಹಣ್ಣುಗಳನ್ನು ಇಟ್ಟುಕೊಂಡು ಅಳುತ್ತಾನೆ. ತನ್ನ ಪಾಪಕೃತ್ಯಗಳನ್ನು ನೆನೆಸಿ ದುಃಖಿಸುತ್ತಾನೆ ಓ ದೇವರೆ ಈ ಹಣ್ಣುಗಳನ್ನೇ ನಿನಗೆ ಅರ್ಪಿಸುವೆ ಸ್ವೀಕರಿಸು ಎನ್ನತ್ತ ಆ ರಾತ್ರಿಯನ್ನು ಉಪವಾಸವಾಗಿಯೇ ಕಳೆದ.

ಆಗ ದಯಾವಂತನಾದ ಮಧುಸೂದನನಿಗೆ ಇವನ ಮೇಲೆ ಕರುಣೆಯುಕ್ಕಿ ಬರುತ್ತದೆ. ಲುಂಪಕ ತನಗೆ ಗೊತ್ತಿಲ್ಲದೇ ಸಫಲಾ ಏಕಾದಶಿ ವ್ರತ ಮಾಡಿರುತ್ತಾನೆ. ಮರುದಿನ ಸೂರ್ಯೋದಯವಾದಾಗ ಸುಂದರವಾದ ಕುದುರೆಯೊಂದು ಅವನ ಪಕ್ಕ ನಿಂತಿರುತ್ತದೆ. ಅದೇ ವೇಳೆ ಆತನಿಗೆ ಆಕಾಶವಾಣಿ ಕೇಳಿಸುತ್ತದೆ. ಲುಂಪಕ ಈ ಕುದುರೆ ನಿನಗಾಗಿ ಅದನ್ನು ಏರಿ ನೀನು ನಿನ್ನ ಕುಟುಂಬವನ್ನು ಸೇರು. ನಿನ್ನ ಮೇಲೆ ಭಗವಂತನ ಕೃಪೆಯಾಗಿದೆ. 

ಸಫಲಾ ಏಕಾದಶಿವ್ರತ ಆಚರಿಸಿದ್ದ ಪರಿಣಾಮ ಆತನ ಕಷ್ಟ ಪರಿಹಾರವಾಯಿತು . ಲುಂಪಕ ಈಗಲೇ ನೀನು ನಿಮ್ಮ ತಂದೆಯನ್ನು ಸೇರು ನಿನ್ನ ರಾಜ್ಯವಾಳುವ ಹಕ್ಕನ್ನು ಪಡೆದುಕೊ ಎಂಬ ಆಕಾಶವಾಣಿ ಕೇಳಿಸುತ್ತದೆ. ಈ ಮಾತು ಕೇಳಿದ ಲುಂಪಕ ಚಂಪಾವತಿಗೆ ಬರುತ್ತಾನೆ. 

ಸಫಲಾ ಏಕಾದಶಿ ವ್ರತ ಆಚರಿಸಿದ್ದರ ಫಲವಾಗಿ ಆತನಿಗೆ ರಾಜ್ಯ ಸಿಗುತ್ತದೆ. ಕಾಲಾಂತರದಲ್ಲಿ ಸಾಧ್ವಿಪತ್ನಿ, ಸುಗುಣಿ ಮಗ ಮೊದಲಾದ ಸೌಭಾಗ್ಯ ಪಡೆಯುತ್ತಾನೆ. ನೂರಾರು ವರ್ಷ ರಾಜ್ಯವಾಳಿ ಮಗನಿಗೆ ರಾಜ್ಯವೊಪ್ಪಿಸುತ್ತಾನೆ.  ಆತ ವ್ರತಗಳನ್ನು ಆಚರಿಸಿ ನಿಜವಾದ ಭಕ್ತನಾಗಿ ಮೋಕ್ಷ ಪಡೆಯುತ್ತಾನೆ. 

ಗಂಗಾದಿ ಸ್ನಾನ, ಅನೇಕ ಕ್ಷೇತ್ರಗಳ ಯಾತ್ರೆ ಮಾಡುವುದರಿಂದ ಸಿಗುವ ಪುಣ್ಯ ಈ ಏಕಾದಶಿ ವ್ರತಾಚರಣೆಯಿಂದ ಸಿಗುತ್ತದೆ. 

|| ಶ್ರೀಕೃಷ್ಣಾರ್ಪಣಮಸ್ತು ||
****
ಸಫಲ ಏಕಾದಶಿ                                                 ‌     ‌                                        ‌    ‌   ‌       ‌                                                                                     ಈ ದಿನ ಸಫಲ ಏಕಾದಶಿ.  ಸಫಲ ಏಕಾದಶಿಯ ವಿಶೇಷ ಮಹತ್ವವನ್ನು ಗ್ರಂಥಗಳಲ್ಲಿ ಮತ್ತು ಪುರಾಣಗಳಲ್ಲಿ ಹೇಳಲಾಗಿದೆ. ಈ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಮತ್ತು ಸಾವಿರಾರು ವರ್ಷಗಳ ತಪಸ್ಸಿಗೆ ಸಮಾನವಾದ ಪುಣ್ಯ ಫಲವನ್ನು ಪಡೆಯುತ್ತಾನೆ. ಯುಧಿಷ್ಠಿರನ ಕೋರಿಕೆಯ ಮೇರೆಗೆ ಶ್ರೀಕೃಷ್ಣನು ಏಕಾದಶಿ ಉಪವಾಸದ ವಿಧಿವಿಧಾನಗಳು ತನಗೆ ತೃಪ್ತಿಯನ್ನು ನೀಡುವಷ್ಟು ಯಾವುದೇ ದೊಡ್ಡ ಯಜ್ಞಗಳು ನೀಡುವುದಿಲ್ಲ ಎನ್ನುವುದನ್ನು ಪದ್ಮ ಪುರಾಣದಲ್ಲಿ ಹೇಳಲಾಗಿದೆ. ಸಫಲ ಏಕಾದಶಿಯು ಕಲ್ಯಾಣ ಮತ್ತು ಅದೃಷ್ಟವನ್ನು ದಯಪಾಲಿಸುತ್ತದೆ ಎಂದು ಪರಿಗಣಿಸಲಾಗಿದೆ ಮತ್ತು ಈ ದಿನದಂದು ಪ್ರಾಮಾಣಿಕ ಹೃದಯದಿಂದ ವಿಷ್ಣುವನ್ನು ಆರಾಧಿಸಿದರೆ ವೈಕುಂಠ ಧಾಮ ಪ್ರಾಪ್ತಿಯಾಗುತ್ತದೆ. ಈ ಉಪವಾಸದ ಪರಿಣಾಮದಿಂದಾಗಿ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಮತ್ತು ನಕಾರಾತ್ಮಕತೆ ಕೊನೆಗೊಳ್ಳುತ್ತದೆ ಎನ್ನುವ ನಂಬಿಕೆಯೂ ಇದೆ.

ಸಫಲ ಏಕಾದಶಿ ವ್ರತದ ಶುಭ ಮುಹೂರ್ತ
- ಸಫಲ ಏಕಾದಶಿ ಉಪವಾಸ 30 ರಂದು ಗುರುವಾರ ಬಂದಿದೆ.
- ಏಕಾದಶಿಯ ಆರಂಭ ದಿನಾಂಕ: ಡಿಸೆಂಬರ್ 29, ಬುಧವಾರ ಸಂಜೆ 04:11 ರಿಂದ
- ಏಕಾದಶಿ ಮುಕ್ತಾಯದ ತಿಥಿ: ಡಿಸೆಂಬರ್ 30, ಗುರುವಾರ ಮಧ್ಯಾಹ್ನ 01.40 ರವರೆಗೆ
- ಸಫಲ ಏಕಾದಶಿ ವ್ರತದ ಪಾರಣ ಮುಹೂರ್ತ: ಡಿಸೆಂಬರ್ 31 ರಂದು ಶುಕ್ರವಾರ, ಬೆಳಿಗ್ಗೆ 10 ಗಂಟೆಯವರೆಗೆ.


ಸಫಲ ಏಕಾದಶಿ ವ್ರತ ವಿಧಾನ
- ಸಫಲ ಏಕಾದಶಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಶುಚಿಯಾಗಿ ಸ್ನಾನ ಇತ್ಯಾದಿಗಳನ್ನು ಮುಗಿಸಿ ಮಂತ್ರದಿಂದ ವಿಷ್ಣುವನ್ನು ಧ್ಯಾನಿಸಿ ಉಪವಾಸ ವ್ರತವನ್ನು ಕೈಗೊಳ್ಳಿ.
- ಪೂಜೆಗಾಗಿ, ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹಾಸಿ ಅದರ ಮೇಲೆ ವಿಷ್ಣು ಮತ್ತು ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಚಿತ್ರವನ್ನು ಪ್ರತಿಷ್ಠಾಪಿಸಿ. 

 ನಂತರ, ಸುತ್ತಲೂ ಗಂಗಾಜಲವನ್ನು ಸಿಂಪಡಿಸಿ.

ಸಫಲ ಏಕಾದಶಿ ದಿನದಂದು ಏನು ಮಾಡಬೇಕು..? ಏನು ಮಾಡಬಾರದು..?
- ಏಕಾದಶಿಯಂದು ಯಾರು ಉಪವಾಸ ಇರುತ್ತಾರೋ ಅವರು ಸದಾ ಒಳ್ಳೆಯ ನಡತೆಯನ್ನು ಅನುಸರಿಸಬೇಕು. ವ್ರತವನ್ನು ಆಚರಿಸುವವರು ದಶಮಿಯ ದಿನದಿಂದ ವಿಷ್ಣುವನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು.
- ಉಪವಾಸ ಮಾಡದವರು ಕೂಡ ಏಕಾದಶಿಯ ದಿನದಂದು ಬೆಳ್ಳುಳ್ಳಿ, ಬದನೆ, ಈರುಳ್ಳಿ, ಮಾಂಸ-ಮದ್ಯ, ತಂಬಾಕು ಮತ್ತು ವೀಳ್ಯದೆಲೆ ಸೇವನೆಯನ್ನು ಸಹ ತ್ಯಜಿಸಬೇಕು.
- ಏಕಾದಶಿಯ ದಿನ ಹಾಸಿಗೆಯ ಮೇಲೆ ಮಲಗದೆ ನೆಲದ ಮೇಲೆ ಮಲಗಿ ರಾತ್ರಿ ಜಾಗರಣೆ ಮಾಡಬೇಕು.
****

೧೯) ಪುಷ್ಯ ಶುಕ್ಲ ಏಕಾದಶಿ - ಪುತ್ರದಾ
ವೈಕುಂಠ ಏಕಾದಶಿ CHECK AFTER  24    ೨೪

೨೦) ಪುಷ್ಯ ಕೃಷ್ಣ ಏಕಾದಶಿ - ಕಲ್ಯಾಣೀ (ಷಟ್‌ತಿಲಾ) 
- ಶಾರೀರಿಕ ಬಾಧೆಗಳಿಂದ ಮುಕ್ತಿ

೨೧) ಮಾಘ ಶುಕ್ಲ ಏಕಾದಶಿ - ಕಾಮದಾ (ಜಯಾ) 
- ಶಾಪವಿಮುಕ್ತಿ
ಮಾಘ ಮಾಸದ ಕಥೆ: ಏಕಾದಶಿಯ ವ್ರತ ಮಹಿಮೆ:- 

ಒಮ್ಮೆ ದೇವೇಂದ್ರನು  ದೇವತೆಗಳೂಂದಿಗೆ  ದೇವಲೋಕದ ಆನೆ ಐರಾವತದ ಮೇಲೆ ಕುಳಿತು ಭೂಲೋಕಕ್ಕೆ ಬಂದನು. ಅಲ್ಲಿ ಸುಂದರವಾದ ಹೂಗಳಿಂದ ಅರಳಿರುವ ಉದ್ಯಾನವನ ವಿತ್ತು. ಹೂವುಗಳನ್ನು ಕಳ್ಳರು ಕದಿಯಬಾರದೆಂದು
ತೋಟದ ಮಾಲಿ  ಶೂದ್ರನು  ಶ್ರೀಹರಿಯ, ಅಭಿಷೇಕದ ಜಲ ಪೂಜೆಯ ಗಂಧ, ಪುಷ್ಪಗಳ ನಿರ್ಮಾಲ್ಯವನ್ನು ತೋಟದಲ್ಲೇ ಹರಡಿದ್ದನು. ಅಲ್ಲಿಗೆ ಬಂದ ದೇವೇಂದ್ರ  ಅರಳಿರುವ  ಪುಷ್ಪಗಳನ್ನು ನೋಡಿ ದೇವಲೋಕದ ಸ್ತ್ರೀಯರಿಗೆ ಕೊಡಲು ಹೂಗಳನ್ನು ಕೊಯ್ಯುವಂತೆ ದೇವತೆಗಳಿಗೆ ಆಜ್ಞಾಪಿಸಿದನು. ಪಾರಿಜಾತದ ವೃಕ್ಷದ ಬಳಿಗೆ ಹೋಗುವಾಗ  ಶ್ರೀಹರಿಯ ನಿರ್ಮಾಲ್ಯ ದಾಟಿ ಹೋಗಬೇಕಿತ್ತು ದಾಟಿ ಹೋದರು. ಇದರಿಂದ ಅವರಿಗೆಲ್ಲ ದೋಷ  ತಗುಲಿ ಹಾರುವ ಶಕ್ತಿ ಕಳೆದುಕೊಂಡರು. 

ಈ ದೃಶ್ಯವನ್ನು ಕಂಡ ತೋಟದ ಮಾಲಿ ಶೋದ್ರನು, ದೇವತೆಗಳ ಬಳಿ ಬಂದು ಅವರಿಗೆಲ್ಲ ನಮಸ್ಕರಿಸಿ, ದೇವತೆಗಳೇ ನೀವು ಮಾಡಿದ್ದು ಸರಿಯಲ್ಲ. ಹರಿಯ ಪೂಜೆಗಾಗಿ ನಾನು ಈ ತೋಟವನ್ನು ನಿರ್ಮಿಸಿದೆನು. ಅಂಥ ಹೂ ಗಳನ್ನು ಕೇವಲ ದೇವಲೋಕದ ಸ್ತ್ರೀಯರಿಗಾಗಿ  ಕಳ್ಳತನ ಮಾಡಿದ ಕಾರಣ ನೀವು ಗಗನಗಾಮಿ ಶಕ್ತಿಯನ್ನು ಕಳೆದುಕೊಂಡಿರಿ ಎಂದನು. ತೋಟಗಾರನ ಮಾತನ್ನು ಕೇಳಿದ ದೇವೇಂದ್ರನು ಮುಂದೆ ಬಂದು ಅಯ್ಯಾ ತೋಟಗಾರ ನಮ್ಮದು ಅಪರಾಧವಾಗಿದೆ, ದೇವತೆಗಳ ಒಡೆಯ ಇಂದ್ರ ನಾನು, ಇವರೆಲ್ಲರ ಮುಂದಿನ ಸ್ಥಿತಿ ಏನು ತಿಳಿಸು ಎಂದು ಮಾತನಾಡುವಾಗ ಇಂದ್ರನ ಕಾಲಿಗೂ ಹರಿಯ ನಿರ್ಮಾಲ್ಯ ಸೋಕಿ ಅವನು ಸಹ ಸುರಲೋಕ ಸೇರಲು ಆಗದಾಯಿತು. ತೋಟಗಾರ ಏನು ಮಾತಾಡದೆ ಮನೆಗೆ ಹೋದನು. 

ದೇವತೆಗಳಿಗೆ ಭೂಲೋಕದ ಆಹಾರ ರುಚಿಸದೇ ಕಂಗೆಟ್ಟರು ವಾರ ಉರುಳಿತು ಅಮೃತವು ಇಲ್ಲದೆ ಒಣಗಿದರು. ಶರೀರದ ಮೈ ತಾಪ ಹೆಚ್ಚಿತು. ತೋಟಗಾರ ಬಂದು ಅವರ ಸ್ಥಿತಿಯನ್ನು ನೋಡಿ ಮರುಗಿ, ವಿಷ್ಣುವಿನ ನಿರ್ಮಾಲ್ಯವನ್ನು ನೀರಿನಿಂದ ತೊಳೆದು ಶುದ್ದಿ ಮಾಡಿದನು. ಉಪವಾಸವಿದ್ದ ದೇವತೆಗಳ ಜೊತೆ ತಾನು ಉಪವಾಸ ಮಾಡಿದನು. ಭೂಲೋಕಕ್ಕೆ ಬಂದು ಮಾಸಗಳೇ ಕಳೆದರೂ ಸುರಲೋಕಕ್ಕೆ ಬರದೇ ಇರುವಾಗ ಸ್ತ್ರೀಯರು ಕಂಗೆಟ್ಟರು. ದೇವತೆಗಳಿಗೆ ನೋಡಿ ಬರಲು ಕಳಿಸಿದರು. ದೇವತೆಗಳು ಶೂದ್ರನ ತೋಟಕ್ಕೆ ಬಂದು ಅಲ್ಲಿ ಹೀನಾಯ ಸ್ಥಿತಿಯಲ್ಲಿದ್ದ ದೇವತೆಗಳನ್ನು ನೋಡಿ ನೊಂದರು.  ಈ ಸ್ಥಿತಿಗೆ ಕಾರಣವಾದ ಪಾರಿಜಾತ ವೃಕ್ಷದ ಮೇಲೆ  ಕೋಪಗೊಂಡು ಬೇರು ಸಹಿತ ಕಿತ್ತು ಎಸೆಯಲು ನೋಡಿದರು ಆದರೆ ಅಲುಗಾಡಿಸಲು ಆಗಲಿಲ. ಆಗ ಆಕಾಶ ಮಾರ್ಗದಲ್ಲಿದ್ದ ನಾರದರು ಇಳಿದು ದೇವತೆಗಳ  ಅವಸ್ಥೆಯನ್ನು ಕಂಡು ಅದಕ್ಕೆ ಪರಿಹಾರ ಕೇಳಲು ವಿಷ್ಣು ಲೋಕಕ್ಕೆ ಬಂದರು. ವಿಷ್ಣುವಿಗೆ ನಮಸ್ಕರಿಸಿ, ಹೇ ನಾರಾಯಣ  ಒಬ್ಬ ತೋಟಗಾರನು  ಭಕ್ತಿಯಿಂದ ನಿರ್ಮಿಸಿದ ಹೂತೋಟ ದಲ್ಲಿ ಮಾಲಿಯನ್ನು ಕೇಳದೆ ದೇವತೆಗಳು ಪಾರಿಜಾತ ಹೂಗಳನ್ನು ಅಪಹರಿಸಿ ಅಪಚಾರ ಮಾಡಿದ್ದಾರೆ ಇದರ ಫಲವಾಗಿ ತಮ್ಮ ಗಗನಗಾಮಿ ಶಕ್ತಿಯನ್ನು ಕಳೆದುಕೊಂಡು ಭೂಲೋಕದಲ್ಲಿ ಹೀನಾಯ ಸ್ಥಿತಿಯಲ್ಲಿದ್ದಾರೆ ಅವರನ್ನು ಉದ್ದರಿಸು ಎಂದು ಪ್ರಾರ್ಥಿಸಿದನು. 

ನಾರಾಯಣನು, ಮಹರ್ಷಿಗಳೇ ಇಂದ್ರನು, ರಂಭಾದಿ ದೇವತೆಗಳಿಗಾಗಿ ಅಪಹರಿಸಿದ್ದು ತಪ್ಪು. ಅಲ್ಲದೆ ಪಾರಿಜಾತ ಅಮೃತದಿಂದ ಉದ್ಭವಿಸಿದ ಪವಿತ್ರ ವೃಕ್ಷ. ಶೂದ್ರನು ಬಡವನಾದರೂ, ಗಿಡಗಳಿಗೆ ನೀರು ಹಾಕಿ ನಿರ್ಮಿಸಿ ತೋಟ ದಲ್ಲಿ ಬೆಳೆದ ಹೂಗಳನ್ನು ಮಾರುವುದು ಅವನ ವೃತ್ತಿ. ಹೂಗಳು ಕಳ್ಳತನ ಆಗ ಬಾರದೆಂದು ಪೂಜಾ ನಿರ್ಮಾಲ್ಯವನ್ನು  ಹರಡಿದ್ದನು. ಅರಿತೋ, ಅರಿಯದೆ ಯೋ, ನನಗೆ ಭಕ್ತಿಯಿಂದ ಅರ್ಪಿಸಿದ ಫಲ-ಪುಷ್ಪ ಗಂಧ, ಅಭಿಷೇಕದ ಜಲ ವನ್ನು ದಾಟಿ ಅಥವಾ ತುಳಿದವರು ಕಾಲಿನ ಶಕ್ತಿ ಕಳೆದು ಕೊಳ್ಳುವರು. ಈ ಸ್ಥಿತಿ ತಂದುಕೊಂಡ ದೇವತೆಗಳ ದುಃಖ ಕಂಡು ಮರುಗಿ ತೋಟಗಾರ ನಿರ್ಮಾಲ್ಯ ವನ್ನು  ಪುನಹ ತೊಳೆದನು. ಆದರೆ ಈಗಾಗಲೇ ಇಂದ್ರಾದಿ ದೇವತೆಗಳು ನಿರ್ಮಾಲ್ಯವನ್ನು ತುಳಿದು ಕುಂಟರಾಗಿ ಅನ್ನಹಾರವಿಲ್ಲದೆ ಭೂಲೋಕದಲ್ಲಿ ಇರುವ ಸ್ಥಿತಿ  ನೋಡಿ ಶೂದ್ರನು ಸಹ ಉಪವಾಸ ಮಾಡುತ್ತಿದ್ದಾನೆ.  

ಮಾಘ ಶುಕ್ಲ ಏಕಾದಶಿ ಪವಿತ್ರವಾದ ದಿನ, ಇಂದು ರಾತ್ರಿ ಶೂದ್ರನು ಶ್ರದ್ದಾ ಭಕ್ತಿಯಿಂದ ಪೂಜಿಸಿ ಅಷ್ಟಾಕ್ಷರಿ ಮಂತ್ರವನ್ನು ಜಪಿಸಿ ಇಡೀ ರಾತ್ರಿ ಜಾಗರಣೆ ಮಾಡಿದರೆ ಅವನಿಗೆ ನಾನು ಒಲಿಯುವೆನು ಬಳಿಕ ದೇವತೆಗಳು ಸುರಲೋಕಕ್ಕೆ ಬರಲು ಸಾಧ್ಯವಾಗುತ್ತದೆ. ಈಗ ನೀವು ಹೋಗಿ ಅದಕ್ಕೆ ವ್ಯವಸ್ಥೆ ಮಾಡಿ ಎಂದು ಹೇಳಿದನು. ನಾರದರು ನಾರಾಯಣನ ಆದೇಶದಂತೆ ಭೂಲೋಕಕ್ಕೆ ಬಂದು ನೋಡಿದರು ಇಂದ್ರಾದಿ ದೇವತೆಗಳು ಉಪವಾಸದಿಂದ ಮೂರ್ಛಿತ ರಾಗಿ ಬಿದ್ದಿದ್ದರು. ಶೂದ್ರನಲ್ಲಿ ನಿವೇದಿಸಿ, ಪೂಜೆ ಮಾಡಿ ಉಪವಾಸ ಕೈಗೊಳ್ಳು ವಂತೆ ಹೇಳಿದರು. ನಾರದರಿಂದ ಉಪದೇಶ ಪಡೆದ ಶೂದ್ರನು ತನ್ನ ಮನೆಗೆ ಹೋಗಿ ಹೆಂಡತಿಯೊಡನೆ ಕುಳಿತು ಶ್ರೀ ಹರಿಯನ್ನು ಪತ್ರ ಪುಷ್ಪಾದಿಗಳಿಂದ ಪೂಜಿಸಿ 'ಓಂ ನಮೋ ನಾರಾಯಣಾಯ' ಎಂಬ  ಮಂತ್ರವನ್ನು ಭಕ್ತಿಯಿಂದ ಇಡೀ ರಾತ್ರಿ ಜಪಿಸಿ  ಏಕಾದಶಿ ವ್ರತವನ್ನು ನಿಯಮಬದ್ಧವಾಗಿ ಆಚರಿಸಿದನು. 

ಕೊಟ್ಟ ಮಾತಿನಂತೆ ನಾರಾಯಣ ಪ್ರಾತಃಕಾಲ ಶೂದ್ರನ ಮುಂದೆ ಪ್ರತ್ಯಕ್ಷ ನಾದನು.‌" ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನೂ, ಶಂಕ-ಚಕ್ರ ಗದ ಪಾಣಿಯು, ತುಳಸಿ ಮಾಲೆಯನ್ನು ಧರಿಸಿದವನು ಪೀತಾಂಬರಧಾರೆಯೂ
ಮಹತೋ ಮಹಿಮನು ಆದ ಪರಮಾತ್ಮನು, ಹುಟ್ಟಿನಿಂದ ಶೂದ್ರನಾಗಿದ್ದ ತೋಟದ ಮಾಲಿ ತನ್ನ ಮನೆಗೆ ಶ್ರೀಹರಿ ಬಂದುದನ್ನು ಕಂಡು, ಶೂದ್ರನು ತನ್ನ ಭಾಗ್ಯಕ್ಕೆ ಎಣೆಯೇ ಇಲ್ಲ ಎಂದುಕೊಂಡನು. ನಾರಾಯಣನು ಅಯ್ಯಾ ನಿನ್ನ ಕೋರಿಕೆ ಏನು ಕೇಳು ಎಂದನು. 

ದೇವತೆಗಳು ಗಗನ ಸಂಚಾರ ಶಕ್ತಿಯನ್ನು ಕಳೆದುಕೊಂಡು ಅನ್ನ ಹಾರಗಳಿಲ್ಲದೆ ಇರುವುದನ್ನು ನಾರಾಯಣನಿಗೆ ತಿಳಿಸಿ ಅವರು ಸುರಲೋಕಕ್ಕೆ ಹೋಗುವ ಶಕ್ತಿಯನ್ನು ದಯಪಾಲಿಸು ಎಂದು ಶೂದ್ರನು ಬೇಡಿದನು. ವಿಷ್ಣುವು, ಶೂದ್ರನೆ, ನಿನಗಾಗಿ ಏನನ್ನು ಬೇಡಿಕೊಳ್ಳದೆ ಪರೋಪಕಾರ ಬುದ್ಧಿಯನ್ನು ಪ್ರಕಟಿಸಿ ಧನ್ಯ ನಾದೆ ನೀನು ಏಕಾದಶಿದಿನ ವ್ರಥ ಕೈಗೊಂಡು ನನಗೆ ಪ್ರಿಯನಾದೆ. ದೇವಲೋಕದ  ಪಾರಿಜಾತ ವೃಕ್ಷವನ್ನು ಇಂದ್ರನಿಗೆ ಕೊಡು, ತುಳಸಿ ಪ್ರಿಯನಾದ ನನಗೆ  ಪವಿತ್ರವಾದ ತುಳಸಿ ವೃಕ್ಷವನ್ನು ಕೊಡು ಇದರಿಂದ ನಿನಗೆ ಒಳ್ಳೆಯದಾಗುವುದು ಎಂದು ಹೇಳಲು ಶೂದ್ರನು ಸಂತೋಷದಿಂದ ತೋಟದಲ್ಲಿದ್ದ ಇಂದ್ರಾದಿಗಳನ್ನು ಎಬ್ಬಿಸಿ, ಬೇರು ಸಹಿತ ಪಾರಿಜಾತ ವೃಕ್ಷವನ್ನು ಇಂದ್ರನಿಗೂ, ತುಳಸಿ ವೃಕ್ಷ ವನ್ನು ಶ್ರೀಮನ್ನಾರಾಯಣನಿಗೂ ಕೊಟ್ಟು ಧನ್ಯನಾದನು. 

ದೇವತೆಗಳು ವಿಷ್ಣುವಿಗೆ ನಮಸ್ಕರಿಸಿ ತಮ್ಮ ಅಪರಾದಕ್ಕೆ ಕ್ಷಮೆ ಕೇಳಿದರು. ಶ್ರೀ ಹರಿ ಎಲ್ಲರನ್ನೂ ಕ್ಷಮಿಸಿದನು. ಪಾರಿಜಾತ ವೃಕ್ಷವನ್ನು ದೇವಲೋಕದಲ್ಲಿ ನೆಟ್ಟು ಬೆಳೆಸು , ಅದು  ಸುರಲೋಕ ವೃಕ್ಷವೆಂದು ಹೆಸರಾಗುತ್ತದೆ ಎಂದು
ಇಂದ್ರನಿಗೆ ಹೇಳಿದನು. ದೇವತೆಗಳ ಸಮೇತ ಇಂದ್ರನು ಸಂತೋಷದಿಂದ  ದೇವಲೋಕಕ್ಕೆ ತೆರಳಿದನು. 

ನಂತರ ವಿಷ್ಣುವು,  ಶೂದ್ರನಿಗೆ ನೀನು  ಕ್ರಮವಾಗಿ ಏಕಾದಶಿ ವ್ರತವನ್ನು ಮಾಡಿರುವೆ. ಇದನ್ನು ಯಾರು ಮಾಡುತ್ತಾರೋ  ಅವರು ನನ್ನ ಪ್ರೀತಿ ಪಾತ್ರರಾಗಿ  ಮುಂದೆ ವೈಕುಂಠವನ್ನು ಸೇರುತ್ತಾರೆ. ಏಕಾದಶಿ ವ್ರತ ಸಾವಿರ ಅಶ್ವಮೇಧ ಯಾಗಗಳನ್ನು ಮಾಡಿದ ಫಲವನ್ನು ಕೊಡುತ್ತದೆ. ಶ್ರೀಹರಿಯ ಪ್ರಿತ್ಯರ್ತಕ್ಕಾಗಿ  ಈ ವ್ರಥವನ್ನು ಮಾಡುವವರು ಸಕಲ ಪಾಪಗಳಿಂದ ಮುಕ್ತ ರಾಗಿ ಶ್ರೀಹರಿಗೆ ಪ್ರಿಯರಾಗುವರು ಎಂದು ಹೇಳಿ ಅಂತರ್ದಾನನಾದನು. 

ಕರಣಂ ಕಾರಣಂ ಕರ್ತಾ ಕಾರ್ಯಂ
ಕರ್ಮ ಕ್ರಿಯಾ ಮತಿ: !
ಕಾರ್ಯಾತೀತೋ ಗವಾಂ ನಾಥೋ
ಜಗನ್ನಾಥೋ ಗುಣಾಕರ: !! 

ಕೀರ್ತಿಪ್ರದ: ಕೀರ್ತಿದಾತಾ
ಗಜೇಂದ್ರ ಭುಜ ಪೂಜಿತ: 
ಸರ್ವಾಂತರಾತ್ಮ ಸರ್ವಾತ್ಮಾ
ಮೋಕ್ಷರೂಪೀ  ನಿರಾಯುಧ:!!
***
೨೨) ಮಾಘ ಕೃಷ್ಣ ಏಕಾದಶಿ - ವಿಜಯಾ 
- ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)
ವಿಜಯ ಏಕಾದಶಿ ಮಹಿಮೆ

ಆದೌ ರಾಮ ತಪೋವನಾಭಿಗಮನಂ ಹತ್ವಾಮೃಗಂ ಕಾಂಚನಮ್  
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಮ್ | 
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೀ ದಾಹನಮ್ 
ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತಧ್ಧಿ ರಾಮಾಯಣಮ್|| 

ಮಾಘಮಾಸ, ಕೃಷ್ಣಪಕ್ಷದ ಏಕಾದಶಿಗೆ  ವಿಜಯ ಏಕಾದಶಿ ಎನ್ನುವರು. ಹೆಸರೇ ಸೂಚಿಸುವಂತೆ ಈ ಏಕಾದಶಿ ವ್ರತಾಚರಣೆಯಿಂದ ಎಲ್ಲ ಕಾರ್ಯದಲ್ಲಿ ವಿಜಯ ದೊರೆಯುವದು. ಈ ಏಕಾದಶಿಯ ಮಹಾತ್ಮೆ ಕುರಿತು ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ. ಬ್ರಹ್ಮದೇವರು ನಾರದರಿಗೆ ಹೇಳಿದ ಈ ವ್ರತವನ್ನು ಧರ್ಮರಾಜ ಯುಧೀಷ್ಠಿರನಿಗೆ ಶ್ರೀಕೃಷ್ಣನು ದೃಷ್ಟಾಂತದೊಂದಿಗೆ ತಿಳಿಸುತ್ತಾನೆ. 

ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಸೀತೆ ಹಾಗೂ ಲಕ್ಷ್ಮಣನ ಸಹಿತವಾಗಿ ಹದಿನಾಲ್ಕು ವರ್ಷ ವನವಾಸಕ್ಕೆ ಹೊರಡುತ್ತಾನೆ. ಅರಣ್ಯದ ಮಧ್ಯದಲ್ಲಿ "ಪಂಚವಟಿ" ಎಂಬ ಸ್ಥಳದಲ್ಲಿ ವಾಸವಾಗಿರುತ್ತಾನೆ. ಅಲ್ಲಿಯೇ ಸೀತೆಯ ಅಪಹರಣವಾಗುತ್ತದೆ. 

ಪ್ರಭು ಶ್ರೀರಾಮನು ಸೀತೆಯನ್ನು ಹುಡುಕುತ್ತ ಸಾಗುತ್ತಾನೆ. ಮರಣಾವಸ್ಥೆಯಲ್ಲಿದ್ದ ಜಟಾಯು ರಾವಣನೇ ಸೀತೆಯನ್ನು ಅಪಹರಿಸಿದ ಸುದ್ದಿ ತಿಳಿಸಿ ಶ್ರೀರಾಮನಿಂದ ಮುಕ್ತಿಹೊಂದುತ್ತಾನೆ. ಕಾನನದಲ್ಲಿ ಸೀತಾನ್ವೇಷಣೆಯಲ್ಲಿ ನಿರತನಾದ ಶ್ರೀರಾಮನಿಗೆ ಹನುಮಂತನ ಸಖ್ಯ ಬೆಳೆಯುತ್ತದೆ. 

ಮಾತೆ ಸೀತೆಯನ್ನು ರಾವಣ ಲಂಕೆಯ ಅಶೋಕವನದಲ್ಲಿ ಇರಿಸಿರುವುದಾಗಿ ಹನುಮಂತನಿಂದ ತಿಳಿಯುತ್ತದೆ. ನಂತರ ಹನುಮಂತನು ಲಂಕೆಯನ್ನು ಸುಟ್ಟು ಸೀತೆಗೆ ಮುದ್ರಿಕೆಯನ್ನು ಕೊಟ್ಟು ಬರುತ್ತಾನೆ. ವಾಯುಪುತ್ರನಾದ ಹನುಮಂತ  ಸಾಗರವನ್ನೇ ಹಾರಿ ಲಂಕೆಯನ್ನು ತಲುಪಿದ ಮರಳಿ ಸುದ್ದಿ ತಂದ. 

ಆದರೆ ಮಾನವನಾಗಿ, ವಾನರ ಸೈನ್ಯ ಸಹಿತನಾಗಿ ಶ್ರೀರಾಮನು ಸಮುದ್ರವನ್ನು ದಾಟುವದು ಹೇಗೆ ? ಶ್ರೀರಾಮ ಸಮುದ್ರದ ಹತ್ತಿರ ಬಂದು ನೋಡುತ್ತಾನೆ. ಅಲ್ಲಿರುವ ಭಯಂಕರ ಜಲಚರಗಳು, ಅಗಾಧವಾದ ಜಲರಾಶಿ, ಇಂಥ ಸಮುದ್ರವನ್ನು ದಾಟಿ ಲಂಕೆಯನ್ನು ತಲುಪಿ ಸೀತೆಯನ್ನು ಕರೆತರುವದಾದರೂ ಹೇಗೆ ? ಎಂದು ಚಿಂತಿತನಾಗುತ್ತಾನೆ. 


ಯಾವ ಪುಣ್ಯದ ಫಲದಿಂದ ನಾವು ಸಮುದ್ರ ದಾಟಬಲ್ಲೆವು ? ಎಂದು ಲಕ್ಷ್ಮಣನನ್ನು ಕೇಳುತ್ತಾನೆ. ಅದಕ್ಕೆ ಲಕ್ಷ್ಮಣ ಆದಿ ಪುರುಷನಾದ ನಿನಗೆ ತಿಳಿಯದ್ದು ಯಾವುದಿದೆ ? ಆದರೂ ಸಮೀಪದಲ್ಲಿರುವ ಕುಮಾರದ್ವೀಪದಲ್ಲಿ  ಋಷಿಗಳ ಆಶ್ರಮವಿದೆ ಅಲ್ಲಿಗೆ ಹೋಗಿ ಅವರ ಸಲಹೆ ಕೇಳೋಣ ಎನ್ನುತ್ತಾನೆ.

ಶ್ರೀರಾಮನನ್ನು ನೋಡಿದ ಮಹರ್ಷಿಗೆ ಅತ್ಯಾನಂದವಾಗುತ್ತದೆ ವಿಷ್ಣುವಿನ ಅವತಾರವೇ ಆದ ಶ್ರೀರಾಮ ತನ್ನ ಆಶ್ರಮಕ್ಕೇ ಬಂದಿದ್ದಾನೆ. ಎಂಥ ಭಾಗ್ಯ ?  ಶ್ರೀರಾಮನು ತನ್ನ ಆಶ್ರಮಕ್ಕೆ ಬಂದ ಕಾರಣವೇನು? ಎಂದು ಕೇಳುತ್ತಾನೆ. 

ಆಗ ಶ್ರೀರಾಮ ತಾನು ಈ ಭಯಂಕರ ಸಮುದ್ರವನ್ನು ದಾಟಿ ರಾಕ್ಷಸರಾಜ, ಲಂಕಾಧೀಶ ರಾವಣನೊಡನೆ ಹೋರಾಡಿ ಗೆಲುವು ಸಾಧಿಸಿ ಸೀತೆಯನ್ನು ಮರಳಿ ಕರೆತರಬೇಕು.  ಅದಕ್ಕಾಗಿ ಏನು ಮಾಡಬೇಕು ? ಹೇಳಿ ಎನ್ನುತ್ತಾನೆ. ಅದಕ್ಕೆ ಋಷಿಗಳು ನಿನ್ನ ಸಹೋದರ ಲಕ್ಷ್ಮಣ ಹಾಗೂ ವಾನರಸೈನ್ಯದ ಸಹಿತವಾಗಿ ವಿಜಯ ಏಕಾದಶಿ ವ್ರತವನ್ನು ಆಚರಿಸು, ವಿಜಯ ಲಭಿಸುತ್ತದೆ ಎಂದು ಹೇಳುತ್ತಾರೆ. ಸ್ವತಃ ವಿಷ್ಣುವೇ ಶ್ರೀರಾಮನಾಗಿ ಅವತರಿಸಿದ್ದರೂ ಋಷಿಯ ಉಪದೇಶದಂತೆ ವಿಜಯ ಏಕಾದಶಿ ವ್ರತ ಆಚರಿಸುತ್ತಾನೆ. ರಾವಣನೊಡನೆ ಯುದ್ಧಮಾಡಿ ವಿಜಯಿಯಾಗಿ ಸೀತೆಯೊಂದಿಗೆ ಮರಳುತ್ತಾನೆ. 

ವೈದೇಹಿ ಸಹಿತಂ ಸುರದ್ರುಮತಲೇ ಹೈಮೇ ಮಹಾಮಂಡಲೇ 
ಮಧ್ಯೇಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ | 
ಅಗ್ರೇ ವಾಚಯತಿ ಪ್ರಭಂಜನಸುತೇ ತತ್ವಂ ಮುನಿಭ್ಯಃ ಪರಮ್ 
ವ್ಯಾಖ್ಯಾಂತಂ ಭರತಾದಿಭಿಃ ಪರಿವ್ರತಂ ರಾಮಂಭಜೇ ಶ್ಯಾಮಲಮ್ || 

|| ಶ್ರೀಕೃಷ್ಣಾರ್ಪಣಮಸ್ತು ||
***
೨೩) ಫಾಲ್ಗುಣ ಶುಕ್ಲ ಏಕಾದಶಿ - ಆಮಲಕೀ 
- ಆರೋಗ್ಯ ಪ್ರಾಪ್ತಿ


Significance of Phalguna Masa Shukla Paksha Ekadashi – Aamalaki Ekadashi

As narrated by Sree Krishna Paramathma to Yudhishtira

Dharmaraja,

Phalguna Masa Shukla Paksha Ekadashi is called AAMALAKI Ekadashi..Observance of this Ekadashi ( Complete fasting, without even drinking water) and keeping jagaran under the sacred AMLA tree, will help to get punya equivalent to giving as dhana of one thousand cows.

Once upon a time, King Mandhatha requested Saint Vasishta to explain him regarding the origin of AMLA tree as well as how it attained sacredness .

During PRALAYA, the entire universe was destroyed. MAHA VISHNU while going to his abode to decide the recreation of the universe, spit. The spit was shining like moon and the place where it fell was converted into a GOOSEBERRY tree (AMLA tree) with plenty of branches and leaves filled with AMLAS. Thereafter, MAHAVISHNU created BRAHMA ,  other DEITIES (Devas)and the rest of the populace.

BRAHMA reached the AMLA tree and started thinking about the origin of the tree. He heard an etherial voice (Ashareera vani) which said “ This tree is very much liked by MAHA VISHNU. Mere thinking of this tree will fetch the thinker the punya equivalent to performing a godhana. Touching this tree and eating AMLA will be beneficial. MAHA VISHNU, BRAHMA and RUDRA reside in the  trunk of AMLA tree. All the other DEITIES (Devas) reside in the branches of the tree, VASOOS reside in the leaves, MARUTHS reside in the flowers and PRAJESHWARAS reside in the AMLAS.  This tree is to be worshipped by all Vishnu Bhakthaas.”

The saints present there at that time started wondering about the source of the etherial voice suspecting whether it is a divine voice or someone else’s. The voice informed them that it belongs to MAHA VISHNU. The saints were very happy and started praying MAHA VISHNU. As per the request of the saints, MAHA VISHNU told them about the observance of a sacred , not- too- difficult- to follow and very much beneficial vrata.

MAHA VISHNU said :  Phalguna Masa Shukla Paksha Ekadashi is very sacred. Observance of this Ekadashi ( Complete fasting, without even drinking water) and keeping jagaran under the sacred AMLA tree will help to get  punya equivalent to giving as dhana of one thousand cows. It will help to get rid of the consequences of all the bad deeds performed earlier (“papaas”)

When requested by the saints the procedure for performance of the vrata, MAHA VISHNU said:

1. Pray Bhagavantha early in the morning seeking His help in the successful culmination of the fast.

2. Brush teeth and finish bathing.

3. Don’t converse with people of questionable character & undesirable behaviour

4. Take bath in a river applying mrithika

5. Go to AMLA tree, keep a kalasha with pancharatna. Keep umbrella, footwear and new cloth along with it.

6. Decorate the kalasha with flowers. Keep diyas (Deepas) around the kalasha.

7. In a vessel, spread puffed paddy (ARALU), keep the golden idol of Parashurama ( if affordable) in it and perform pooja

8. Perform arghya pradaana (Like Janmaashtami)

9. In the night, keep jagaran accompanied by vadhya ghosha, music, dance and devotional songs.

10. Perform pradakshina to AMLA tree ( 28 or 108 times)

11. On Dwadashi morning, perform pooja with mangala harathi.

12. Perform pooja to brahmins and give Parashurama idol as dhaana

13. Touch the AMLA tree, perform pradakshina and feed Brahmins.

14. Take food along with family.

By doing as mentioned above, the punya attained will be more than the punya attained by performing all theertha snanas and all yagnas.

MAHA VISHNU disappeared after saying as above.

All the saints performed the vrata and were immensely benefitted.

Courtesy: Sath Katha Sagara – Sadachara Taranga 3 ,– Aithareya Shodhana Prakasha Peetha,  Bangaluru – Translated version from Kannada for the benefit of interested Samaj Bhandhvas- For internal use only)

********

೨೪) ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯಾ - ಪಾಪ ವಿಮುಕ್ತಿ

ಪಾಪ ವಿಮೋಚನಿ ಏಕಾದಶಿ ಕುರಿತಾದ ಹಿನ್ನೆಲೆ ಕಥೆ ಓದಿ ತಿಳಿಯಿರಿ.
🌼🌼🌼🌼🌼🌼🌼🌼🌼🌼🌼🌼🌼🌼🌼

ಭವಿಷ್ಯೋತ್ತರ ಪುರಾಣದಲ್ಲಿ ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಪಾಪವಿಮೋಚಿನಿ ಏಕಾದಶಿ ಮಹಿಮೆಯನ್ನು ವಿವರಿಸಿದನೆಂದು ಹೇಳಲಾಗಿದೆ. ಹಿಂದೆ ಮೇಧಾವಿ ಎಂಬೊಬ್ಬ ಋಷಿಯು ಚೈತ್ರರಥವೆಂಬ ಒಂದು ಸುಂದರ ಅರಣ್ಯದಲ್ಲಿ ತಪೋನಿರತನಾಗಿದ್ದನು. ಚೈತ್ರರಥ ಅರಣ್ಯವು ಸದಾ ಪುಷ್ಪಗಳಿಂದ ಕಂಗೊಳಿಸುವ ಅನೇಕ ವೃಕ್ಷರಾಶಿಗಳಿಂದ ನಿಬಿಡವಾಗಿದ್ದು ಸುಮನೋಹರವಾಗಿತ್ತು. 

ಅದರ ಪರಿಶುದ್ಧ ವಾತಾವರಣ ಮತ್ತು ನಯನಮನೋಹರವಾದ ಸ್ಥಳಗಳನ್ನು ಸಂದರ್ಶಿಸಲು ಸ್ವರ್ಗಾಧಿಪತಿ ಇಂದ್ರ, ಗಂಧರ್ವಾಪ್ಸರು ಸೇರಿದಂತೆ ಅನೇಕ ದೇವದೇವತೆಗಳು ಆಗಾಗ್ಗೆ ಧರೆಗಿಳಿದು ಬರುತ್ತಿದ್ದರು.

 ಅವರಲ್ಲೊಬ್ಬಳಾದ ಮಂಜುಘೋಶ ಎಂಬ ಸುಂದರಳಾಗಿದ್ದ ಅಪ್ಸರಸ್ಥ್ರೀಯು ಮೇಧಾವಿ ಋಷಿಯನ್ನು ಕಂಡು ಮೋಹಿತಳಾಗುತ್ತಾಳೆ.

ಆದರೆ, ಮೇಧಾವಿ ಋಷಿಯನ್ನು ಆಕೆ ಮಾಡಿದ ಪ್ರಯತ್ನಗಳೆಲ್ಲವೂ ನಿರರ್ಥಕವಾದುವು. ಹೀಗಿರುವಾಗ ಮಂಜುಘೋಷಳು ಒಮ್ಮೆ ಅತ್ಯಂತ ಶುಶ್ರಾಯವಾಗಿ ಹಾಡಲಾರಂಭಿಸುತ್ತಾಳೆ. ಆಕೆಯ ಹಾಡುಗಾರಿಕೆಯಿಂದ ಕಾಮದೇವನೂ ವಿಚಲಿತನಾಗುತ್ತಾನೆ. ಮಂಜುಘೋಷಳ ಪ್ರೇರೇಪಣೆಯಂತೆ, ಕಾಮದೇವನು ಮೇಧಾವಿ ಋಷಿಯ ಮನಸ್ಸನ್ನು ವಿಕಲ್ಪಗೊಳಿಸುತ್ತಾನೆ.

ಅಲ್ಲಿಯೇ ಸುಳಿದಾಡುತ್ತಿದ್ದ ಮಂಜುಘೋಷಳ ಸೌಂದರ್ಯಕ್ಕೆ ಮಾರುಹೋಗುತ್ತಾನೆ. ಅವರೀರ್ವರು ಅನೇಕ ವರ್ಷಗಳ ಕಾಲ ಸಂಸಾರ ಮಾಡಿದರು. ಏತನ್ಮಧ್ಯೆ ಮಂಜುಘೋಷಳಿಗೆ ಮೇಧಾವಿಯೊಂದಿಗಿನ ಜೀವನ ಬೇಸರ ತಂದಿತ್ತು. 

ಸ್ವರ್ಗಲೋಕಕ್ಕೆ ಹಿಂದಿರುಗಲು ಆಕೆ ಮೇಧಾವಿಯ ಅಪ್ಪಣೆಯನ್ನು ಕೇಳಿದಾಗ, ಆತನಿಗೆ ತನ್ನ ತಪ್ಪಿನ ಅರಿವುಂಟಾಯಿತು. ಮಂಜುಘೋಷಳು ತನ್ನ ತಪಸ್ಸನ್ನು ಭಗ್ನಗೊಳಿಸಿದಳೆಂದು ಆಕೆಯ ಮೇಲೆ ಕೋಪಗೊಂಡವನಾಗಿ ಆಕೆಗೆ ಶಾಪವನ್ನು ನೀಡಿ ತನ್ನ ತಂದೆ ಚ್ಯವನಮಹರ್ಷಿಯ ಆಶ್ರಮಕ್ಕೆ ಹೋಗುತ್ತಾನೆ. 

ಚ್ಯವನ ಮಹರ್ಷಿಗಳು ಆತನ ಮನೋವೇದನೆಯನ್ನು ಗುರುತಿಸಿ ಫಾಲ್ಗುಣ ಕೃಷ್ಣ ಪಕ್ಷದಲ್ಲಿ ಬರುವ ಪಾಪವಿಮೋಚಿನಿ ಏಕಾದಶಿಯಂದು ಉಪವಾಸ ವ್ರತವನ್ನು ಕೈಗೊಳ್ಳಲು ಹೇಳುತ್ತಾನೆ. 

ಅಂತೆಯೇ, ಮೇಧಾವಿಯು ಪಾಪವಿಮೋಚಿನಿ ಏಕಾದಶಿ ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಿ, ಮಹಾವಿಷ್ಣುವನ್ನು ಭಕ್ತಿಯಿಂದ ಪೂಜಿಸುತ್ತಾನೆ. ಆತನ ಆಚರಣೆಯಿಂದ ಸುಪ್ರೀತನಾದ ವಿಷ್ಣುವು ಮೇಧಾವಿಯ ಪಾಪಗಳನ್ನು ನಾಶಮಾಡುತ್ತಾನೆ. ಅಂದಿನಿಂದ ಪಾಪವಿಮೋಚಿನಿ ಏಕಾದಶಿಯಂದು ಯಾರು ಉಪವಾಸ ಮಾಡುವರೋ ಅವರ ಪಾಪಗಳು ನಾಶವಾಗುತ್ತವೆಯೆಂದು ನಂಬಲಾಗಿದೆ.  

ನಾಳೆ  ಪಾಪ ವಿಮೋಚನ ಏಕಾದಶಿ ಪ್ರಯುಕ್ತ ಈ ಪೋಸ್ಟ್
ನಾರಾಯಣ ಸ್ತೋತ್ರ ಓದಿ ಶುಭಮಸ್ತು

end of types of ekadshi
********
???

19 ವೈಕುಂಠ ಏಕಾದಶಿ

೧೯) ಪುಷ್ಯ ಶುಕ್ಲ ಏಕಾದಶಿ - ಪುತ್ರದಾ - 
ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)
*ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆ

ಪುಷ್ಯ ಮಾಸ ಶುಕ್ಲ ಪಕ್ಷ ಏಕಾದಶಿ - ಪುತ್ರದಾ ಏಕಾದಶಿ  
ಲೇಖಕರು – ವಿಶ್ವಂಭರ ಗಣಪತಿ ವಿಠಲ ದಾಸರು
ಪುತ್ರದಾ ಏಕಾದಶಿ ಎಂದು ಕರೆಯಲು ಕಾರಣವೇನು ?


ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪುತ್ರದಾ ಏಕಾದಶಿ ಅನ್ನುತ್ತಾರೆ. ಪುತ್ರದಾ ಏಕಾದಶಿಯ ಮಹಿಮೆಯ ಬಗ್ಗೆ ಧರ್ಮರಾಜನು ಶ್ರೀ ಕೃಷ್ಣನನ್ನು ಪ್ರಶ್ನೆ ಮಾಡುತ್ತಾನೆ. ಶುಕ್ಲ ಪಕ್ಷದ ಏಕಾದಶಿ ದಿನದಂದು ಬರುವುದೇ “ಪುತ್ರದಾ” ಏಕಾದಶಿ. ಈ ಏಕಾದಶಿ ಮಾಡುವವರು ಸರ್ವಸಂಪತ್ತನ್ನು, ಕೀರ್ತಿಯನ್ನು, ಸತ್ಸಂತಾನವನ್ನು ಹೊಂದುತ್ತಾರೆ.

ಆಗ ಶ್ರೀ ಕೃಷ್ಣನು, ಧರ್ಮರಾಜನನ್ನು ಕುರಿತು ಹೀಗೆ ಹೇಳುತ್ತಾನೆ. ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪುತ್ರದಾ ಏಕಾದಶಿ ಅನ್ನುತ್ತಾರೆ. ಈ ವಿಷಯವಾಗಿ ಒಂದು ಪುರಾತನ ಇತಿಹಾಸವನ್ನು ಹೇಳುತ್ತೇನೆ ಕೇಳು.

ಹಿಂದೆ ಭದ್ರಾವತಿ ಎಂಬ ಪಟ್ಟಣದಲ್ಲಿ “ಸುಕೇತಮಾನ್” ಎಂಬ ರಾಜನಿದ್ದನು. ಅವನ ಹೆಂಡತಿ ಶೈಭ್ಯಾ ಎಂಬುವಳು ಇದ್ದಳು. ಅವರಿಗೆ ಸಂತಾನ ಯೋಗ ಇಲ್ಲದವರಾಗಿ ತುಂಬಾ ದುಃಖಿತರಾಗಿ ಕಾಲಕಳೆಯುತ್ತಾ ಇದ್ದರು. ಅವರು ಎಲ್ಲ ವಿಧವಾದ ವ್ರತ ನಿಯಮಗಳನ್ನು ಮಾಡಿದ್ದರು. ಆದರೂ ಪುತ್ರಸಂತಾನ ಆಗಿರಲಿಲ್ಲ. ಆದ್ದರಿಂದ ಅವನು ತುಂಬ ದುಃಖವನ್ನು ಮನದಲ್ಲಿಟ್ಟುಕೊಂಡು ಅವನು, ಅವನ ಹೆಂಡತಿ ಸರ್ವರಾಜ್ಯವನ್ನು ತ್ಯಾಜ್ಯಮಾಡಿ ಕಾಡಿಗೆ ಹೊರಟರು. ಆ ಕಾಡಿನಲ್ಲಿ, ರಾಜನಿಗೆ ಒಂದು ಆಶ್ರಮ ಕಂಡಿತು. ಆ ಆಶ್ರಮವನ್ನು ನೋಡಿದ ಕೂಡಲೆ ರಾಜನು ಆಶ್ರಮದತ್ತ ಹೊರಟನು.

ಅಲ್ಲಿ ೧೧ ಜನ ಋಷಿಗಳನ್ನು ಕಂಡರು. ಆಗ ಆರಾಜನು ಆ ಋಷಿಗಳಿಗೆಲ್ಲ ನಮಸ್ಕಾರ ಸಲ್ಲಿಸಿ ನೀವೆಲ್ಲ ಯಾರು ಈ ಕಾಡಿಗೆ ಯಾತಕ್ಕಾಗಿ ಬಂದಿರಿ ಎಂದು ವಿಚಾರಿಸಿದಾಗ ಆ ಋಷಿಗಳು ನಾವೆಲ್ಲ ವಿಶ್ವೇ ದೇವತೆಗಳು. ಪುಷ್ಯಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಭೂಲೋಕದಲ್ಲಿ ಆಚರಿಸುವುದರಿಂದ ಒಳ್ಳೆಯ ಸಂತಾನವನ್ನು ಆ ಭಗವಂತ ದಯಪಾಲಿಸುತ್ತಾನೆ ಅಂತ ಆಚರಿಸುವ ಉದ್ದೇಶವನ್ನು ರಾಜನಿಗೆ ತಿಳಿಸಿದರು.

ಆಗ ಆ ರಾಜನು ನಾನು ಸಹ ಪುತ್ರದಾ ಏಕಾದಶಿಯ ಆಚರಣೆ ನಿಮ್ಮ ಸನ್ನಿಧಾನದಲ್ಲಿ ಮಾಡುತ್ತೇನೆ ಎಂದು ಆ ಋಷಿ, ಮುನಿಗಳನ್ನು ಪ್ರಾರ್ಥಿಸುತ್ತಾನೆ. ವಿಶ್ವೇ ದೇವತೆಗಳು ಆಗಲಿ ಎಂದು ಹೇಳಿದಾಗ. ರಾಜನು ಅವರ ಸನ್ನಿಧಾನದಲ್ಲಿ ಏಕಾದಶಿಯನ್ನು ಆಚರಣೆ ಮಾಡಿ ಋಷಿಮುನಿಗಳ ಅನುಗ್ರಹ ಪಡೆದುಕೊಂಡು ರಾಜ್ಯಕ್ಕೆ ಹೊರಡುತ್ತಾನೆ. ಪುತ್ರದಾ ಏಕಾದಶಿಯ ಫಲದಿಂದ ರಾಜನು ಅತಿ ಶೀಘ್ರದಲ್ಲಿ ಉತ್ತಮವಾದ “ಮಗನನ್ನು” ಪಡೆದನು. ಆ ಮಗನು ಮುಂದೆ ತಾಯಿ, ತಂದೆಯಲ್ಲಿ ಭಗವಂತನಲ್ಲಿ ಗೌರವ, ಭಕ್ತಿಯಿಂದ ಕೂಡಿಕೊಂಡು ರಾಜ್ಯವನ್ನು, ಸಮರ್ಥವಾಗಿ ನಿರ್ವಹಿಸುತ್ತಿದ್ದನು.


ಈ ರೀತಿಯಾಗಿ ಶ್ರೀ ಕೃಷ್ಣನನ್ನು ಧರ್ಮರಾಜನಿಗೆ ಭವಿಷ್ಯೋತ್ತರ ಪುರಾಣದಲ್ಲಿ “ಪುತ್ರದಾ” ಏಕಾದಶಿಯ ಮಹಾತ್ಮೆಯನ್ನು ತಿಳಿಸಿದನು.

****

ಪುತ್ರದಾ - ವೈಕುಂಠ ಏಕಾದಶಿ ಮಹಿಮೆ

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯತೇ ನಮಃ ||

ವೇಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ |
ವೇಂಕಟೇಶ ಸಮೋ ದೇವೋ ನ ಭೂತೋ ನ ಭವಿಷ್ಯತಿ |

ಪುಷ್ಯಮಾಸದ ಏಕಾದಶಿಗೆ ಪುತ್ರದಾ ಏಕಾದಶಿ ಎನ್ನುವರು. ಈ ಏಕಾದಶಿ ವ್ರತ ಕುರಿತು  ಭವಿಷ್ಯೋತ್ತರ ಪುರಾಣದಲ್ಲಿ ಶ್ರೀಕೃಷ್ಣಯುಧಿಷ್ಠಿರ ಸಂವಾದದಲ್ಲಿ ಉಲ್ಲೇಖಿತವಾಗಿದೆ. 

ದೃಷ್ಟಾಂತ : 

ಹಿಂದೆ ಭದ್ರಾವತಿಯೆಂಬ ರಾಜ್ಯವನ್ನು ಸುಕೇತುಮಾನ್ ಎಂಬ ರಾಜನಾಳುತ್ತಿದ್ದ. ಅವನ ರಾಣಿ ಶೈಬ್ಯ. ಆ ರಾಜ ದಂಪತಿಗೆ ಸಂತಾನವಿರದೆ ಕೊರಗಿತ್ತು. ತನ್ನ ನಂತರ ರಾಜ್ಯಭಾರ ಮಾಡುವವರು ಯಾರು ಎಂದು ಚಿಂತಿಸುತ್ತ ರಾಜ ಸುಕೇತುಮಾನ್ ಸದಾ ರಾಣಿವಾಸದಲ್ಲಿಯೇ ಕಾಲ ಕಳೆಯುತ್ತಿದ್ದ. ದಂಪತಿ ಚಿಂತಾಕ್ರಾಂತರಾಗಿದ್ದರು. 

ಒಮ್ಮೆ ತನ್ನ ಹಿರಿಯರಿಗೆ ತರ್ಪಣ ಬಿಡುವ ವೇಳೆ ರಾಜನಿಗೆ ಆ ತರ್ಪಣದ ನೀರು ಬಿಸಿಯಾಗಿ ಇರುವಂತೆ ಅನಿಸಿತು. ಮುಂದೆ ಹಿರಿಯರಿಗೆ ತರ್ಪಣ ಬಿಡುವವರು ಯಾರು. ಮಕ್ಕಳಿಲ್ಲದಿದ್ದರೆ ಹೇಗೆ? ಹಿರಿಯರೆಲ್ಲ ಪ್ರೇತಗಳಾಗಿ ಸಂಚರಿಸಬೇಕೆ? ಎಂದೆನಿಸಿತು. ಈ ಸಮಸ್ಯೆಯನ್ನು ಯಾರಲ್ಲಿ ಹೇಳಿಕೊಂಡರೂ ಪರಿಹಾರ ಸಿಗದು. ಯಾವ ಸೈನ್ಯ, ಸಂಪತ್ತು ಉಪಯೋಗಕ್ಕೆ ಬಾರದು. ಎಲ್ಲರೂ ಈ ವಿಷಯದಲ್ಲಿ ಅಸಹಾಯಕರೇ ಆಗಿದ್ದಾರೆ. ಮಕ್ಕಳಿಲ್ಲದಿದ್ದರೆ ಮದುವೆಯಾಗಿಯೂ ವ್ಯರ್ಥ. 

ಒಂದು ಕುಟುಂಬಕ್ಕೆ ಗಂಡು ಸಂತಾನವಿರದಿದರೆ ಋಣ ಸಂದಾಯ ಮಾಡುವವರು ಯಾರು?  ಮದುವೆಯಾದ ಪ್ರತಿವ್ಯಕ್ತಿಗೂ ಒಬ್ಬ ಮಗ ಇರಬೇಕು. ಇಲ್ಲದಿದ್ದರೆ ಅವನು ಏನೇ ಸಾಧನೆ ಮಾಡಿದರೂ ಅಷ್ಟೇ. ಮಗನಿದ್ದರೆ ಆತ ತನ್ನ ಸಾಧನೆಯ ಬಗ್ಗೆ ಹೇಳಿಕೊಳ್ಳಬಲ್ಲ ಮುಂದೆ ತನ್ನೆಲ್ಲ ಕರ್ತವ್ಯವನ್ನು ಮುಂದುವರೆಸುವ ವಾರಸುದಾರನಾಗುತ್ತಾನೆ. ತಂದೆಯ ಸಾಧನೆಗೆ ಮಗನೇ ಸಾಕ್ಷಿಯಲ್ಲವೆ. ಎಂದು ಚಿಂತಿಸುತ್ತ ಅಸಮಾಧಾನವಾಗಿಯೇ ಇರುತ್ತಿದ್ದ ಸುಕೇತುಮಾನ್. 

ಒಮ್ಮೆ ಆತ್ಮಹತ್ಯೆಗೆ ನಿರ್ಧರಿಸಿದ. ಆದರೆ ಆತನ ವಿವೇಕ ಅವನನ್ನು ಎಚ್ಚರಿಸಿತು. ಧರ್ಮಿಷ್ಟನಾದ ತಾನು ಆತ್ಮಹತ್ಯೆ ಮಾಡಿಕೊಂಡರೆ ಮತ್ತೆ ಹುಟ್ಟಿ ಮತ್ತೆ ಕರ್ಮಗಳನ್ನು ಅನುಭವಿಸಲೇ ಬೇಕು.. ಅದಕ್ಕೇ ಈ ಕಾರ್ಯಬೇಡ ಎಂದುಕೊಂಡು ಆತ್ಮಹತ್ಯೆಯ ನಿರ್ಧಾರ ಕೈಬಿಟ್ಟ. 

ಒಬ್ಬನೇ ಕುದುರೆ ಹತ್ತಿ ದಟ್ಟಡವಿಗೆ ಹೋದ. ಅಲ್ಲಿನ ಪ್ರಾಣಿ, ಪಕ್ಷಿ, ಕ್ರಿಮಿ-ಕೀಟ, ಕ್ರೂರ ಮೃಗಗಳೂ ಕೂಡ ತಮ್ಮ ಮರಿಗಳೊಂದಿಗೆ ಸುಖವಾಗಿ ಜೀವಿಸುವುದನ್ನು ಕಂಡ. ತನಗೆ ಮಾತ್ರ ಆ ಭಾಗ್ಯವಿಲ್ಲ ಎಂದು ನೊಂದುಕೊಂಡ. ಹಾಗೆ ಹೋಗುವಾಗ ತುಂಬಾ ಹಸಿವು-ನೀರಡಿಕೆಯಾಯಿತು. ಹತ್ತಿರದಲ್ಲೆಲ್ಲೋ ಆಶ್ರಮವಿರಬೇಕು. ಅಲ್ಲಿ ಋಷಿಗಳಿರಬೇಕು ಎಂದುಕೊಂಡು ಬರುವಷ್ಟರಲ್ಲಿ ಅಲ್ಲೊಂದು ಕೊಳ ಕಾಣಿಸಿತು. ಅಲ್ಲಿ ಮುನಿಗಳು ಜಪ-ಧ್ಯಾನದಲ್ಲಿದ್ದರು. 

ರಾಜ ಸಹ ಅವರಂತೆ ಕೈಮುಗಿದು ಕುಳಿತ. ಮುನಿಗಳೆಲ್ಲ ನೀನೇಕೆ ಇಲ್ಲಿಗೆ ಬಂದಿರುವೆ ನಿನ್ನ ಮನದಲ್ಲಿ ಏನಿದೆ ಎಂದು ಪ್ರಶ್ನಿಸಿದರು. ಆಗ ರಾಜ ನೀವ್ಯಾರು ಎಂದು ಮರುಪ್ರಶ್ನೆ ಹಾಕಿದ. ನಾವು ಹತ್ತೂಜನ ವಿಶ್ವೇದೇವತೆಗಳು, ಧರ್ಮನೆಂಬ ಮುನಿಯ ಮಕ್ಕಳು, ದಕ್ಷಪುತ್ರಿ ವಿಶ್ವಾನಮ್ಮ ತಾಯಿ: ಕೃತು, ದಕ್ಷ, ವಸು, ಸತ್ಯ, ಕಾಲಕಾಮ, ಮುನಿ, ಕುರಜ, ಮನುಜ, ವಿರಜ ಮತ್ತು ರೋಚಮಾನ ಎಂದು ನಮ್ಮ ಹೆಸರು. ನಾವು ಇಂದು ಪುಷ್ಯಮಾಸದ ಪುತ್ರದಾ ಏಕಾದಶಿ ನಿಮಿತ್ತ ಸ್ನಾನಕ್ಕಾಗಿ ಇಲ್ಲಿಗೆ ಬಂದಿದ್ದೇವೆ ಎಂದರು. 

ಇನ್ನೂ ಐದು ದಿನ ಇಲ್ಲೇ ಇರುತ್ತೇವೆ ಎಂದರು. ಆಗ ರಾಜ ಹೇಳುತ್ತಾನೆ ನನಗೆ ಸಂತಾನವಿಲ್ಲ. ಅದರಿಂದ ಬೇಸತ್ತು ಇಲ್ಲಿಗೆ ಬಂದಿರುವುದಾಗಿ ತಿಳಿಸಿದ. ಹಾಗಾದರೆ ನೀನೂ ಸಹ ಈ ಏಕಾದಶಿ ವ್ರತ ಆಚರಿಸು. ಯೋಗ್ಯ ಪುತ್ರ ಜನಿಸುವನು ಎನ್ನುತ್ತಾರೆ. ವಿಶ್ವೇದೇವತೆಗಳು ಹೇಳಿದಂತೆ  ವ್ರತ ಆಚರಿಸಿದ ಸುಕೇತುಮಾನಗೆ ಪುತ್ರ ಸಂತಾನವಾಗುತ್ತದೆ. 

ರಾಜ ದಂಪತಿ ಸಂತೋಷದಿಂದ ಕಾಲಕಳೆಯುವರು.ಮುಂದೆ ಅವರ ಮಗನೂ ಸಹ ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಣುತ್ತಾ ರಾಜ್ಯವಾಳುವನು ಅಲ್ಲದೆ ತಪ್ಪದೇ ಪುತ್ರದಾ ಏಕಾದಶಿ ವ್ರತ ಆಚರಿಸುವನು.

ಪುತ್ರದಾ ಏಕಾದಶಿ ಆಚರಿಸಿದ ಮನುಜ ಇಹಪರಗಳೆರಡರಲ್ಲೂ ಸಂತೋಷ ಹೊಂದಿ ಮುಂದೆ ದು:ಖದಿಂದ ಬಂಧಮುಕ್ತರಾಗುವರು. ಈ ವ್ರತ ಕೇಳಿದರೆ ಅಶ್ವಮೇಧಯಾಗದ ಫಲ ದೊರಕುತ್ತದೆ. ಎಲ್ಲ ಭೋಗಭಾಗ್ಯ ಲಭಿಸುತ್ತದೆ. 


ಗೋಪಾಲಕರಿಗೆ ವೈಕುಂಠ ದರ್ಶನ

ಈ ವ್ರತಕ್ಕೆ ವೈಕುಂಠ ಏಕಾದಶಿ ಎಂಬ ಹೆಸರೂ ಇದೆ. ನಂದಗೋಪನು ಶ್ರೀಕೃಷ್ಣನ ಸನ್ನಿಧಾನದಲ್ಲಿ ಏಕಾದಶಿವ್ರತವನ್ನು ತಪ್ಪದೇ ಆಚರಿಸುತ್ತಿದ್ದ. ಒಮ್ಮೆ ಏಕಾದಶಿ ವ್ರತಮಾಡಿ ಮರುದಿನ ಅಲ್ಪದ್ವಾದಶಿ ಇದ್ದುದರಿಂದ ನಸುಕಿನಲ್ಲಯೇ ಯಮುನಾ ನದಿಯಲ್ಲಿ ಸ್ನಾನಕ್ಕೆ ಇಳಿಯುತ್ತಾನೆ. 

ಆ ಸಮಯ ಇನ್ನೂ ರಾಕ್ಷಸರ ಸಂಚಾರಕಾಲವಾಗಿತ್ತು. ವರುಣನ ಸೇವಕನಾದ ಒಬ್ಬ ರಾಕ್ಷಸ ನಂದಗೋಪನನ್ನು ಎಳೆದುಕೊಂಡು ವರುಣನಲ್ಲಿಗೆ ಬರುತ್ತಾನೆ. ಇತ್ತ ನಂದಗೋಪ ಸ್ನಾನಕ್ಕೆಂದು ನದಿಗೆ ಹೋದ ನಂದಗೋಪ ಬಾರದೇ ಇದ್ದುದರಿಂದ ಗೋಪಾಲಕರೆಲ್ಲ ಚಿಂತಾಕ್ರಾಂತರಾಗುತ್ತಾರೆ. ತಮ್ಮ ಆತಂಕವನ್ನು ಬಲರಾಮನಿಗೆ ತಿಳಿಸುತ್ತಾರೆ.

ಶ್ರೀಕೃಷ್ಣನು ವಿಷಯ ತಿಳಿದವನಾಗಿ ಎಲ್ಲ ಗೋಪಾಲಕರಿಗೆ ಅಭಯವನ್ನು ಕೊಡುತ್ತಾನೆ. ಕೃಷ್ಣಾವತಾರದಲ್ಲಿ ತಂದೆಯಾದ ನಂದಗೋಪನನ್ನು ಕರೆತರುವದಾಗಿ ಗೋಪಾಲಕರಿಗೆ ತಿಳಿಸಿ ವರುಣಲೋಕಕ್ಕೆ ಹೋಗುತ್ತಾನೆ. 

ವರುಣಲೋಕದಲ್ಲಿ ಶ್ರೀಕೃಷ್ಣನನ್ನು ನೋಡಿದ ವರುಣ ಸಂತೋಷದಿಂದ ಬರಮಾಡಿಕೊಳ್ಳುತ್ತಾನೆ, ತನ್ನ ಸೇವಕನಾದ ರಾಕ್ಷಸನಿಂದ ಆದ ಪ್ರಮಾದವನ್ನು ಕ್ಷಮಿಸುವಂತೆ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾನೆ. ಶ್ರೀಕೃಷ್ಣ ವರುಣನಿಗೆ ಆಶೀರ್ವದಿಸಿ ನಂದಗೋಪನೊಂದಿಗೆ ಯಮುನಾತೀರಕ್ಕೆ ಬರುತ್ತಾನೆ. 

ಗೋಪಾಲಕರಿಗೆ ನಂದಗೋಪನು ವರುಣಲೋಕದಲ್ಲಿ ಕಂಡ ಶ್ರೀಕೃಷ್ಣನ ನಿಜರೂಪವನ್ನು ಮತ್ತು ಅಲ್ಲಿ ದೊರೆತ ಭವ್ಯ ಸ್ವಾಗತವನ್ನು ವರ್ಣಿಸುತ್ತಿದ್ದರೆ ಎಲ್ಲ ಗೋಪಾಲಕರು ಭಕ್ತಿಯುಕ್ತರಾಗಿ ಆಲಿಸುತ್ತಿದ್ದರು. ನಮಗೆ ಶ್ರೀಮನ್ನಾರಾಯಣನ ದಿವ್ಯದರ್ಶನದ ಭಾಗ್ಯ ಇಲ್ಲವಾಯಿತಲ್ಲ ಎಂದು ಪರಿತಪಿಸುತ್ತಿದ್ದರು.

ಇದನ್ನು ತಿಳಿದ ಶ್ರೀಕೃಷ್ಣ ಎಲ್ಲ ಗೋಪಾಲಕರಿಗೆ ಯಮುನಾತೀರ್ಥದ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬರುವಂತೆ ತಿಳಿಸಿದ. ಗೋಪಾಲಕರು ಸ್ನಾನಮಾಡಿ ಬರುತ್ತಿದ್ದಂತೆ ವೈಕುಂಠಲೋಕ ಗೋಚರಿಸಿತು. ಶ್ರೀಕೃಷ್ಣನ ದಿವ್ಯವಾದ ಅನೇಕ ರೂಪಗಳು  ಅವರಿಗೆ ಕಂಡವು. 

ಈ ಏಕಾದಶಿ ವ್ರತ ಆಚರಣೆ ಮಾಡಿ ಭೂ ವೈಕುಂಠ ಎಂದೇ ಪ್ರಸಿದ್ಧವಾದ ತಿರುಪತಿಯಲ್ಲಿ ಶ್ರೀನಿವಾಸನ ದರ್ಶನಮಾತ್ರದಿಂದ ಪುನರ್ಜನ್ಮವಿಲ್ಲ. ಪುತ್ರಪೌತ್ರಾದಿ ಸಕಲ ಸೌಭಾಗ್ಯ ದೊರೆಯುವದು.

|| ಶ್ರೀಕೃಷ್ಣಾರ್ಪಣಮಸ್ತು ||
*************


ಪೌಷ ಶುಕ್ಲ ಏಕಾದಶಿಯಾದ ಇಂದು, ಏಕದಶೀ ವ್ರತವನ್ನು ಆಚರಿಸಲಾಗುತ್ತದೆ, ಅದನ್ನು ಪುತ್ರದಾ ಏಕಾದಶೀ ಎಂದು ಕರೆಯಲಾಗಿದೆ. ಈ ಪವಿತ್ರ ದಿನದಂದು ಉಪವಾಸದಿಂದಿದ್ದು ಮಹಾವಿಷ್ಣುವನ್ನು ಆರಾಧಿಸುವುದು ಶ್ರೇಯಸ್ಕರ.

ಒಂದಾನೊಂದು ಕಾಲದಲ್ಲಿ ವೈಖಾನಸನೆಂಬ ರಾಜರ್ಷಿಯು ಗೋಕುಲವೆಂಬ ನಗರದಲ್ಲಿ ವಾಸವಾಗಿದ್ದ. ಒಮ್ಮೆ ಸ್ವಪ್ನದಲ್ಲಿ ತನ್ನ ತಂದೆಯ ಮರಣಾ ನಂತರ ಪ್ರೇತತ್ವ ನಿವಾರಣೆಯಾಗದೇ ನರಕವನ್ನು ಅನುಭವಿಸುತ್ತಿರುವುದಾಗಿ ಗೋಚರವಾಗುತ್ತದೆ. ತನ್ನ ತಂದೆಯ ಆತ್ಮವನ್ನು ನರಕದಿಂದ ಪಾರು ಮಾಡುವ ಬಗೆಯನ್ನು ಪಂಡಿತೋತ್ತಮರಲ್ಲಿ ವಿಚಾರಿಸಲು, ಪುಷ್ಯ ಮಾಸ ಶುಕ್ಷ ಪಕ್ಷದ ಏಕಾದಶಿ ಆಚರಣೆಯನ್ನು ಮಾಡುವುದರಿಂದ ತನ್ನ ತಂದೆಗೆ ಮೊಕ್ಷ ದೊರೆಯುವುದಾಗಿ ತಿಳಿಸಿದರು.

ರಾಜನು ಅಂತೆಯೇ ಪುಷ್ಯಮಾಸ ಶುಕ್ಲ ಪಕ್ಷದ ಏಕಾದಶಿ ವ್ರತವನ್ನೂ ಆಚರಿಸಿ ಸೂಕ್ತ ದಾನಾದಿಗಳನ್ನು ಮಾಡಾಲು, ಆತನ ತಂದೆಯ ಆತ್ಮವು ನರಕದಿಂದ ಮುಕ್ತಿಹೊಂದಿ, ಸ್ವರ್ಗವನ್ನು ಸೇರುತ್ತದೆ ಎಂಬುದಾಗಿ ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅಂದಿನಿಂದ ಏಕಾದಶಿಯ ದಿನ ಭಕ್ತರು ಉಪವಾಸವಿದ್ದು, ದೇವಸ್ಥಾನಗಳಿಗೆ ತೆರಳಿ ಭಕ್ತಿಯಿಂದ ಅರ್ಚಿಸಿ ಭಗವಂತನ ದರ್ಶನವನ್ನು ಮಾಡಿ ಪುನೀತರಾಗುತ್ತಾರೆ. 

ಏಕಾದಶೇಂದ್ರಿಯೈಃ ಪಾಪಂ ಯತ್ಕೃತಂ ಭವತಿ ಪ್ರಭೋ |
ಏಕಾದಶ್ಯುಪವಾಸೇನ ತತ್ಸರ್ವಂ ವಿಲಯಂ ವ್ರಜೇತ್ ||

ಈ ವ್ರತವನ್ನು ಕೈಗೊಳ್ಳುವುದರಿಂದ ಮನುಷ್ಯನು ತಮ್ಮ ಏಕಾದಶ ಇಂದ್ರಿಯಗಳಿಂದ ಮಾಡಿದ ಎಲ್ಲ ಪಾಪಗಳಿಂದ ಮುಕ್ತರಾಗಿ ಸರ್ವಯಜ್ಞಗಳ ಫಲವನ್ನು ಪಡೆದು ವಿಷ್ಣುಸಾಯುಜ್ಯವನ್ನು ಹೊಂದಿವುದಾಗಿ ಭಕ್ತರ ನಂಬಿಕೆ.
*****

ವೈಕುಂಠ ಏಕಾದಶಿ ದಿನ ವಿಶೇಷ ಫಲ ಪೂಜಾ ಕ್ರಮ Pooja Krama

ವೈಕುಂಠ ಏಕಾದಶಿ ದಿನ ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ ಮಹಾ ವಿಷ್ಣು ಅಥವಾ ಶ್ರೀ ಕೃಷ್ಣ ದೇವರ ದರ್ಶನ ಮಾಡಿದರೆ ವಿಶೇಷ ಫಲ ಸಿಗುತ್ತದೆ. ನಿಮಗೆ ಸಾಧ್ಯ ಆಗದಿದ್ದರೆ ನಿಮ್ಮ ಹಣೆಯ ತುದಿಯಲ್ಲಿ ಭಗವಾನ್ ಶ್ರೀ ವಿಷ್ಣು ವಿರಾಜಮಾನರಾಗಿದ್ದಾರೆಂದು ಭಾವಿಸಿ ೨೪ ಭಗವಾನ್ ಶ್ರೀ ವಿಷ್ಣು ಮಂತ್ರ ಗಳನ್ನ ಡಿಜಿಟಲ್ ತಂತ್ರಜ್ಞಾನ ಮೂಲಕ ಆರಾಧನೆ ಮಾಡಿ.


(೧)ನಿಮ್ಮ ಎಡಕೈ ತೋರು ಬೆರಳ ತುದಿ ಗಂಟು ಇದನ್ನು ಎಡಕೈ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ


ಓಂ ಕೇಶವಾಯ ನಮಃ ಸ್ಮರಿಸಿ.


(೨)ಎಡಕೈ ತೋರು ಬೆರಳು ಮಧ್ಯೆ ಗಂಟು ಸ್ಪರ್ಶ ಮಾಡಿ


ಓಂ ನಾರಾಯಣಾಯ ನಮಃ


(೩)ಎಡಕೈ ತೋರು ಬೆರಳ ಕೆಳಗೆ ಇರುವ ಗಂಟಿಗೆ ತಾಗಿಸಿ


ಓಂ ಮಾಧವಾಯ ನಮಃ


(೪)ಎಡಕೈ ಮಧ್ಯೆ ಬೆರಳ ಬುಡದ ಗಂಟು ಇದಕ್ಕೆ ಎಡಕೈ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ

ಓಂ ಗೋವಿಂದಾಯ ನಮಃ 


(೫)ಮಧ್ಯೆ ಗಂಟು ಸ್ಪರ್ಶ ಮಾಡಿ


ಓಂ ಮಹಾ ವಿಷ್ಣುವೇ ನಮಃ ಸ್ಮರಿಸಿ.


(೬)ಮಧ್ಯೆ ಬೆರಳ ತುದಿ ಗಂಟು ಸ್ಪರ್ಶ ಮಾಡಿ


ಓಂ ಮಧುಸೂದನಾಯ ನಮಃ ಸ್ಮರಿಸಿ.


(೭)ಎಡಕೈ ಉಂಗುರ ಬೆರಳು ತುದಿಗೆ ಎಡಕೈ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ

ಓಂ ತ್ರಿವಿಕ್ರಮಾಯ ನಮಃ


(೮)ಮಧ್ಯೆ ಗಂಟು ಸ್ಪರ್ಶ ಮಾಡಿ


ಓಂ ವಾಮನಾಯ ನಮಃ


(೯)ಬುಡದ ಗಂಟಿಗೆ ಸ್ಪರ್ಶ ಮಾಡಿ


ಓಂ ಶ್ರೀಧರಾಯ ನಮಃ ಸ್ಮರಿಸಿ.


(೧೦)ಎಡಕೈ ಕಿರಿ ಬೆರಳು ಬುಡದ ಗಂಟಿಗೆ ಎಡಕೈ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ


ಓಂ ಹೃಷಿಕೇಶಾಯ ನಮಃ


(೧೧)ಮಧ್ಯೆ ಗಂಟು ಇದಕ್ಕೆ ತಾಗಿಸಿ


ಓಂ ಪದ್ಮನಾಭಾಯ ನಮಃ


(೧೨)ತುದಿ ಗಂಟು ಇದಕ್ಕೆ ತಾಗಿಸಿ


ಓಂ ದಾಮೋದರಾಯ ನಮಃ


(೧೩)ಬಲಕೈಯ ಕಿರಿ ಬೆರಳು ತುದಿಗಂಟಿಗೆ ಬಲಕೈಯ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ 


ಓಂ ಸಂಕರ್ಷನಾಯ ನಮಃ


(೧೪)ಮಧ್ಯೆ ಗಂಟು ಇದಕ್ಕೆ ತಾಗಿಸಿ


ಓಂ ವಾಸುದೇವಾಯ ನಮಃ


(೧೫)ಬುಡದ ಗಂಟಿಗೆ ಬಲಕೈಯ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ


ಓಂ ಪ್ರದ್ಯುಮ್ನಾಯ ನಮಃ


(೧೬)ಬಲಕೈಯ ಉಂಗುರ ಬೆರಳು ಬುಡದ ಗಂಟಿಗೆ ಬಲಕೈಯ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ

ಓಂ ಅನಿರುದ್ಧಾಯ ನಮಃ


(೧೭)ಮಧ್ಯೆ ಗಂಟು ಇದಕ್ಕೆ ಸ್ಪರ್ಶ ಮಾಡಿ


ಓಂ ಪುರುಷೋತ್ತಮಾಯ ನಮಃ


(೧೮)ತುದಿ ಗಂಟು ಸ್ಪರ್ಶ ಮಾಡಿ


ಓಂ ಅದೋಕ್ಷಜಾಯ ನಮಃ


(೧೯)ಬಲಕೈಯ ಮಧ್ಯೆ ಬೆರಳ ತುದಿಗಂಟಿಗೆ ಸ್ಪರ್ಶ ಮಾಡಿ


ಓಂ ನರಸಿಂಹಾಯ ನಮಃ


(೨೦)ಮಧ್ಯೆ ಬೆರಳ ಗಂಟಿಗೆ ತಾಗಿಸಿ


ಓಂ ಅಚ್ಯುತಾಯ ನಮಃ


(೨೧)ಬುಡದ ಗಂಟಿಗೆ ಸ್ಪರ್ಶ ಮಾಡಿ


ಓಂ ಜನಾರ್ದನಾಯ ನಮಃ 


(೨೨)ಬಲಕೈಯ ತೋರು ಬೆರಳ ಬುಡದ ಗಂಟಿಗೆ ಬಲಕೈಯ ಹೆಬ್ಬೆರಳಿನ ತುದಿ ಸ್ಪರ್ಶ ಮಾಡಿ


ಓಂ ಉಪೇಂದ್ರಾಯ ನಮಃ


(೨೩)ಮಧ್ಯೆ ಗಂಟು ಇದಕ್ಕೆ ತಾಗಿಸಿ


ಓಂ ಹರಿಯೇ ನಮಃ


(೨೪)ಬಲಕೈಯ ತೋರು ಬೆರಳ ತುದಿಗಂಟಿಗೆ ಸ್ಪರ್ಶ ಮಾಡಿ


ಓಂ ಶ್ರೀ ಕೃಷ್ಣಾಯ ನಮಃ ಎಂದು ಸ್ಮರಿಸಿ.


ಈ ರೀತಿ ಬೆಳಿಗ್ಗೆ ದೇವರ ಎದುರು ಪೂರ್ವ ಅಥವಾ ಉತ್ತರ ಅಭಿಮುಖ ವಾಗಿ ಪದ್ಮಾಸನದಲ್ಲಿ ಆಸೀನರಾಗಿ ಸ್ಮರಿಸಿ. ನೀವು ಪ್ರತ್ಯಕ್ಷ ವೈಕುಂಠ ದೇವರ ದರ್ಶನ ಪಡೆದ ಪುಣ್ಯ ಫಲವೇ ಸಿಗುತ್ತದೆ. ನಿಮ್ಮ ಮನಸ್ಸೇ ಮಂತ್ರಾಲಯ. ನಿಮ್ಮ ಹಣೇಯೇ ದೇವಾಲಯ. ಹಣೆಯ ಮೇಲೆ ತುದಿಯಲ್ಲಿ ವಿರಾಜ ಮಾನರಾದವರೇ ಭಗವಾನ್ ಶ್ರೀ ಮಹಾವಿಷ್ಣು ಎಂದು ಭಾವಿಸಿ. ಎಲ್ಲಿ ಸಹಾ ಮಾಡಿ ಪ್ರಯಾಣ ಗಾರ್ಡನ್ ವಾಕಿಂಗ್ ಹೋಗುವಾಗ ಸಹಾ ಮಾಡಬಹುದು. ಆದರೆ ಮನೆಯಲ್ಲಿ ಮಾತ್ರ ದೇವರ ಎದುರು ಮಾಡಿ. ಈ ದಿನ ೧೦೦%ಶುದ್ಧ ಸಸ್ಯಾಹಾರಿ ಗಳಾಗಬೇಕು. ಉಪವಾಸ ಮಾಡಿದರೆ ವಿಶೇಷ ಫಲ ಸಿಗುತ್ತದೆ. ಇದನ್ನ ನೀವು ಎಷ್ಟು ಜನರಿಗೆ ಹಂಚಿಕೆ ಮಾಡುವರೋ ಅಷ್ಟು ಪುಣ್ಯ ಫಲ ಸಿಗುತ್ತದೆ.
end
***
ಏಳು ಜನ್ಮಗಳ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನವೇ ವೈಕುಂಠ ಏಕಾದಶಿ. ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂತಲೂ ಕರೆಯುವರು. ಈ ದಿನ ದೇವಾಲಯದ ಉತ್ತರ ದ್ವಾರದಲ್ಲಿ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸುತ್ತಾರೆ. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಧನುರ್ಮಾಸದ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ. 
ಸೂರ್ಯನು ಧನಸ್ಸು ರಾಶಿ ಪ್ರವೇಶ ಮಾಡಿ ಮಕರ ಸಂಕ್ರಮಣದವರೆಗೂ ಈ ರಾಶಿಯಲ್ಲಿ ಇರುತ್ತಾನೆ.
ಗರುಡವಾಹನನಾದ ವಿಷ್ಣು ವೈಕುಂಠದಿಂದ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕದಲ್ಲಿ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದುದರಿಂದ ಈ ದಿನವನ್ನು ಮುಕ್ಕೋಟಿ ಏಕಾದಶಿ ಎನ್ನುವರು. ಈ ದಿನ ಉಪವಾಸವಿದ್ದು ವಿಷ್ಣುವಿನ ದರ್ಶನ ಮಾಡಬೇಕು. ಮಾಸದ ಏಕಾದಶಿಯ ದಿನ ಶ್ರೀಮನ್ನಾರಾಯಣನು ಯೋಗನಿದ್ರೆಯಿಂದ ಏಳುವನು. ಈ ದಿನ ವಿಷ್ಣು ದರ್ಶನ ಮಾತ್ರದಿಂದ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನಕ್ಕೆ ಅಷ್ಟು ಮಹತ್ವವಿದೆ. 

ಮಹಾವಿಷ್ಣುವು ಮುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನವೇ ಇದು. ಬಹಳ ದಿನಗಳವರೆಗೆ ಮುರ ಅಕ್ಕಿಯಲ್ಲಿ ಬಚ್ಚಿಟ್ಟುಕೊಂಡಿದ್ದ. ಅದಕ್ಕಾಗಿ ಈ ದಿನ ಅಕ್ಕಿ ಸೇವೆನೆ ಮಾಡಬಾರದು. ಏಕಾದಶಿ ದೇವಿಯನ್ನು ಉಪವಾಸದಿಂದ ದರ್ಶನದಿಂದ ಪೂಜಿಸಿ ಪಾಪ ಪರಿಹಾರ ಮಾಡಿಕೊಳ್ಳಬೇಕು ಐದು ಜ್ಞಾನೇಂದ್ರಿಯಗಳು ಐದು ಕರ್ಮೇಂದ್ರಿಯಗಳು ಮತ್ತು ಮನಸ್ಸು ಒಟ್ಟು 11- ಹನ್ನೊಂದು ಇಂದ್ರಿಯಗಳನ್ನು ನಿಗ್ರಹ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು.
ಅಮೃತ ಮತ್ತು ಹಾಲಾಹಲ ಉದ್ಭವಿಸಿದ ದಿನವಿದು. ಶಿವ ನೀಲಕಂಠನಾದ ದಿನ. ಈ ದಿನ ದೇವರ ದರ್ಶನ ಮಾಡಿ ಹರಿ ನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು. ತುಳಸಿ ಎಲೆ ಅರ್ಪಿಸಬೇಕು. ಇದರಿಂದ ಮೋಕ್ಷ ಪ್ರಾಪ್ತಿ ಖಂಡಿತವಾಗಿ ಲಭಿಸುವುದು. ಪುಷ್ಯ ಮಾಸವನ್ನು ಶೂನ್ಯಮಾಸವೆಂತಲು ಕರೆಯುವರು. ಈ ಸಮಯದಲ್ಲಿ ಯಾವುದೇ ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ. ಕಾರಣ ಇಲ್ಲಿ ಪ್ರತಿಫಲ ಶೂನ್ಯ. ಆದ್ದರಿಂದ ಈ ಪೂರ್ತಿ ಮಾಸವನ್ನು ವಿಷ್ಣುವನ್ನು ಆರಾಧಿಸುವುದರ ಮೂಲಕ ವಿಷ್ಣುವಿಗೆ ಅರ್ಪಣೆ ಮಾಡಬೇಕು. 
✍️ ನಿತಿನ್ ಶಾಮನೂರು
***

ವೈಕುಂಠ ಏಕಾದಶಿ ಹಿನ್ನೆಲೆಯ ಮಹತ್ವ  
ಉಪವಾಸದ ವೈಜ್ಞಾನಿಕ ಸತ್ಯ….!

“ವೈಕುಂಠಏಕಾದಶಿ” ಇದರಲ್ಲಿ ಎರಡು ಪದಗಳು ಸೇರಿಕೊಂಡಿವೆ. ಒಂದು “ವೈಕುಂಠ”, 


ಎರಡನೆಯದು ಏಕಾದಶಿ, ಮೊದಲು ಇವುಗಳ ಸ್ಥೂಲ ಅರ್ಥ :


“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ ಎಂದು ತಿಳಿದುಬರುತ್ತದೆ, ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.


ಇನ್ನು “ಏಕಾದಶಿ” ಎಂದರೆ


 ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶಿ” ಒಂದು ವ್ರತ. 


ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.


ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. 


ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.


 ಎಂದರೆ ಶುಚಿರ್ ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.

ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. 

ಹೀಗೆ ಎಡಬಿಡದೆ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಮಹಾಕವಿ ಕಾಳಿದಾಸ ಹೇಳಿರುವಂತೆ : “ಶರೀರಮಾಧ್ಯಂ ಖಲು ಧರ್ಮಸಾಧನಂ”, ಧರ್ಮ ಸಂಪಾದನೆಗೆ, ಸ್ವಸ್ಥ್ಯ ಶರೀರ ಅತ್ಯಗತ್ಯ.


ವೈಕುಂಠ ಏಕಾದಶಿಯ ಬಗ್ಗೆ ಕಥೆ ಇಂತಿದೆ : 


 ಭಾಗವತೋತ್ತಮನಾದ ನಂದಗೋಪನು ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದನು.


ಒಮ್ಮೆ ಏಕಾದಶಿವ್ರತ ಆಚರಿಸಿ, ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಝಾವಕ್ಕೆ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ.


 ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು.


ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ಧಿ ಮುಟ್ಟಿಸಿದರು. 


ಸರ್ವಜ್ಞನಾದ ಶ್ರೀಕೃಷ್ಣ ಅವರಿಗೆಲ್ಲಾ ಅಭಯವಿತ್ತು ತಂದೆಯವರನ್ನು ಕರೆತರುವುದಾಗಿ ಹೇಳಿ, ವರುಣಲೋಕಕ್ಕೆ ಬಂದನು.


 ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ. 


ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.

ನಂದಗೋಪನಿಗೆ ಪರಮಾನಂದವಾಯಿತು. 

ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು ಆದರೆ ಶ್ರೀಕೃಷ್ಣ ಸಾಕ್ಷತ್ ಪರಮೇಶ್ವರನೇ ನಿಜ ಆದರೆ ಅವನ ನಿಜ ರೂಪ ಅರಿಯಲಾರೆವು ಎಂದು ಪರಿತಪಿಸಿದರು.


ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, ಅದರಂತೆ ಅವರೆಲ್ಲಾ ಮಾಡಲಾಗಿ ಅವರ ಕಣ್ಣಿಗೆ ವೈಕುಂಠ ಕಾಣಿಸಿತು,


 ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು ಬಹುಶಃ ಈ ಕಾರಣಕ್ಕೆ ಏಕಾದಶಿಯನ್ನು “ವೈಕುಂಠಏಕಾದಶಿ” ಎಂದು ಕರೆದಿರಬಹುದೆಂದು ಊಹಿಸಬಹುದು.


ಪುರಾಣಗಳಿಗೆ ಮಹತ್ವವಾದ ಸ್ಥಾನವಿದೆ, ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಪ್ರತಿಪಾದಿಸುತ್ತವೆ. ಸಾಮಾನ್ಯಜನರಿಗೆ ಅವುಗಳಿಂದ ಉಪಕಾರವಾಗುತ್ತದೆ.


 ಲೋಕೋಪಕಾರಕ್ಕಾಗಿ ವ್ಯಾಸರು ಹದಿನೆಂಟು ಪುರಾಣಗಳನ್ನು ರಚಿಸಿದರು. ಇಂತಹ ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು ನಾರದರ ಪ್ರೇರಣೆಯಿಂದ ಅನೇಕ ಪವಿತ್ರ ಗ್ರಂಥಗಳ, ಪೂಜೆ ಪುನಸ್ಕಾರಗಳು, ವ್ರತಕಥೆಗಳೂ, ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು, ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತ ಏಕಾದಶಿ ವ್ರತ.


ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು. 


ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯಗಳಿಂದ ಸಂಪಾದಿಸಿದ ಸಕಲಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ಪಾವನವಾದದ್ದು ಯಾವುದೂ ಇಲ್ಲ.


ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬರಬೇಕು. 


ಹೀಗೆ ಮಾಡಿದ್ರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಅನ್ನೋದು ನಂಬಿಕೆ. ಅಲ್ಲದೇ ವೈಕುಂಠ ಏಕಾದಶಿಯ ಪವಿತ್ರ ದಿನ ಅಭ್ಯಂಜನ ಮಾಡಿ, ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆಯೂ ಇದೆ..

ಪುರಾಣಗಳಿಗೆ ಮಹತ್ವವಾದ ಸ್ಥಾನವಿದೆ, ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಪ್ರತಿಪಾದಿಸುತ್ತವೆ. ಸಾಮಾನ್ಯಜನರಿಗೆ ಅವುಗಳಿಂದ ಉಪಕಾರವಾಗುತ್ತದೆ. #ಲೋಕೋಪಕಾರಕ್ಕಾಗಿವ್ಯಾಸರುಹದಿನೆಂಟುಪುರಾಣಗಳನ್ನುರಚಿಸಿದರು. ಇಂತಹ ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು ನಾರದರ ಪ್ರೇರಣೆಯಿಂದ ಅನೇಕ ಪವಿತ್ರ ಗ್ರಂಥಗಳ, ಪೂಜೆ ಪುನಸ್ಕಾರಗಳು, ವ್ರತಕಥೆಗಳೂ, ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು, ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, #ಸಕಲರೂಸುಲಭದಲ್ಲಿ ಆಚರಿಸಲು ಯೋಗ್ಯವಾದವ್ರತ ಏಕಾದಶಿವ್ರತ. ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು. ವಸಿಷ್ಠರ ಪ್ರಕಾರ, #ಹನ್ನೊಂದು ಇಂದ್ರಿಯಗಳಿಂದ ಸಂಪಾದಿಸಿದಸಕಲ ಪಾಪಗಳನ್ನು ಹನ್ನೊಂದನೆಯತಿಥಿ ಯಾದಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ಪಾವನವಾದದ್ದು ಯಾವುದೂ ಇಲ್ಲ.ಅಲ್ಲದೇ ವೈಕುಂಠ ಏಕಾದಶಿಯ ಪವಿತ್ರ ದಿನ ಅಭ್ಯಂಜನ ಮಾಡಿ, ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆಯೂ ಇದೆ.

##ವೈಕುಂಠದ್ವಾರದಲ್ಲಿತೋರಿಹೋಗುವುದೆಂದರೆನಾವುತಲೆಬಾಗಿಹೋಗಬೇಕುತಲೆಬಾಗುವುದೆಂದರೆನಮ್ಮಅಹಂಕಾರವನ್ನುಕಳೆದುಕೊಂದಂತೆಯೇಅಂದರೆಎಲ್ಲಿಯವರೆಗೆ ನಮ್ಮಲ್ಲಿ ಅಹಂಕಾರವಿರುವುದೊ ಅಲ್ಲಿಯವರೆಗೆ ನಮಗೆ ದೇವರ ದರುಶನ ಸಾಧ್ಯವಿಲ್ಲ ಅದನ್ನು ಕಳೆದುಕೊಂಡ ಕೂಡಲೇ ಇರುವುದೆಲ್ಲಾ ದೈವವೇ  ಆಗುವುದೆಲ್ಲಾ ದೈವ ದರುಶನವೇ...ಏಕಾದಶಿ ಅಂದರೆ ಕೂಡಾ ಇದೇ  ಅರ್ಥ ಬರುತ್ತದೆ  ಏಕಾದಶಿ ಅಂದರೆ ಹನ್ನೊಂದು. ಅಂದರೆ ಹತ್ತು ಭಗವಂತನ ಸಮಸ್ತ  ಸೃಷ್ಟಿಯನ್ನು  ಪ್ರತಿನಿಧಿಸುತ್ತದೆ ಆ ಇನೊಂದು ನಮ್ಮ ವೈಯುಕ್ತಿಕತೆಯನ್ನು ಪ್ರತಿನಿಧಿಸುತ್ತದೆ ಅಂದರೆ ನಮ್ಮ ವೈಯುಕ್ತಿಕತೆ ಅಂದರೆ ಅಹಂಕಾರ ಅಥವಾ ಮನಸ್ಸು ಇವುಗಳನ್ನು ಕರಗಿಸಿ ಅಥವಾ ಇಲ್ಲವಾಗಿಸಿ ಅಥವಾ ಇಡೀ ವಿಶ್ವದೊಂದಿಗೆ ಸಮ್ಮಿಲನಗೊಲಿಸದ ಹೊರತು ನಮಗೆ ಭಗವಂತನನ್ನು ಕಾಣಲು ದರ್ಶಿಸಲು ಸಾಧ್ಯವಿಲ್ಲಾ ಎಂದರ್ಥ. ಏಕಾದಶಿಯ ಬಗ್ಗೆ ಕೇಳಿರದ, ನಮ್ಮ ಪುರಾಣ ಪರಂಪರೆಗಳ ಬಗೆಗೆ ಏನೂ ಗೊತ್ತಿರದ, ಜಗತ್ಪ್ರಸಿದ್ಧ ಶಸ್ತ್ರಚಿಕಿತ್ಸಾ ವೈದ್ಯ ಅಲೆಕ್ಲಿಸ್ ಕಾರೆಲ್ ತನ್ನ ಖ್ಯಾತಕೃತಿ ‘Man the Unknown (ಅವ್ಯಕ್ತ ಮಾನವ)’ದಲ್ಲಿ ಒಂದು ಮಾತು ಹೇಳುತ್ತಾನೆ:  “#ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ.  ಹಾಗಾಗಿ 15ದಿನಗಳಿಗೊಮ್ಮೆ 24 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ದೊರಕಿತೆಂದರೆ ಈ ಪಚನೆಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ.  ಉಪವಾಸವೇ ದೊಡ್ಡ ಚಿಕಿತ್ಸೆ ಎನ್ನುತ್ತಾನೆ". ನಮ್ಮ ಪ್ರಾಚೀನ ಭಾರತೀಯರು ಇದೇ ಮಾತನ್ನು ಹೇಳಿದ್ದರು ಅಲೆಕ್ಸಿಸ್ ಕಾರೆಲ್ ಇದನ್ನು ವೈಜ್ಞಾನಿಕವಾಗಿ ಬರೆದರೆ ಪ್ರಾಚೀನರು ಏಕೆ-ಏನು ಅನ್ನೋ ವಿವರ ನೀಡದೆ ವಿಧಿವಾಕ್ಯವಾಗಿ ಬರೆದರು. #ಈಎಲ್ಲದೃಷ್ಟಿಯಿಂದಏಕಾದಶಿತುಂಬಮಹತ್ವದದಿನ.  ಅಂದು ವಾತಾವರಣದಲ್ಲಿ ಕೂಡ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ.  ಏಕಾದಶಿಯನ್ನು ‘#ಹರಿದಿನ’ ಎಂದೂ ಸಹ ಕರೆಯುತ್ತಾರೆ.  #ಅಂದುವೈಷ್ಣವೀಶಕ್ತಿಜಾಗೃತವಾಗಿಕೆಲಸಮಾಡುತ್ತದೆಎನ್ನುವುದುತಾತ್ಪರ್ಯ.
******
ವೈಕುಂಠ ಏಕಾದಶಿಯ ಮಹತ್ವ ...

ಕಾಮದಾ ಏಕಾದಶಿ, ಅಥವಾ ವೈಕುಂಠ ಏಕಾದಶಿ ಎಂದರೆ ಶ್ರೀಮನ್ನಾರಾಯಣ ವೈಕುಂಠದಿಂದ ಬಂದು ಭಕ್ತರಿಗೆ ದರುಶನದ ಭಾಗ್ಯ ಕೊಡುವ ದಿನ.
ಮನುಷ್ಯರ ಪಾಪಗಳು ಶ್ರೀಹರೀಯನ್ನು ಸೇವಿಸುವದರಿಂದ ಕಳೆಯುವ ದಿನ . ಮನುಜನ ಜೀವನದ ಪಯಣದಲಿ ಸಾಧನೆಗೆ ರಹದಾರೀ ಮಾಡಿಕೊಡುವ ದಿನ .
ಈ ದಿನ ಮನದಲಿ ಏನೇ ಸಂಕಲ್ಪಿಸಿ ಅದೇ ದಾರೀಯಲೀ ಮುಂದುವರೇದರೇ ಯಶ ಪಡೆಯುತ್ತಾನೆ. ಉತ್ತರ ದ್ವಾರದಿಂದ ಸ್ವಾಮಿಯ ದರುಶನ ಮಾಡಿದರೆ ಮೋಕ್ಷ ಪ್ರಾಪ್ತಿ ಎಂದು ಹೇಳುತ್ತಾರೆ ....

ಧಾರ್ಮಿಕ ಮಹತ್ವ :--

ಆಂಬರೀಷ ಮಹರಾಜ ಏಕಾದಶಿ ಮಾಡಿ ಪಾರಣೆಯಂದು ತೀರ್ಥ ಸೇವೀಸಲು , ತಮಗೆ ಅವಮಾನಿಸಿದನೇಂದು ದೂರ್ವಾಸರು ಹತ್ತು ಜನ್ಮ ಪಡೆಯೇಂದು ಶಾಪ ಕೊಡುತ್ತಾರೆ ಆದರೆ ಏಕಾದಶಿ ಉಪವಾಸ ವ್ರತ ಮಾಡುತ್ತೀದ್ದ ಅಂಬರೀಷ್ನ ಭಕ್ತಿಗೆ ಮೆಚ್ಚಿದ ಶ್ರೀ ನಾರಾಯಣನು ತಾನೇ ಆ ಶಾಪವನ್ನು ತೆಗೆದುಕೊoಡು 10 ಅವತಾರವೇತ್ತುತ್ತಾನೆ . ತನ್ನ ಭಕ್ತನ ರಕ್ಷಣೇಗಾಗಿ ತನ್ನ ಸುದರ್ಶನ ಚಕ್ರವನ್ನೇ ಕಳಿಸಿದ ಸುದರ್ಶನ ಚಕ್ರ ದೂರ್ವಾಸರ ಕಡೆಗೆ ಹೋದಾಗ, ಅಂಬರೀಷನೇ ಬೇಡಿಕೊoಡು ಅದು ತಿರುಗಿ ವಿಷ್ಣುವಿನ ಕಡೆಗೆ ಹೋಗುವಂತೆ ಮಾಡಬೇಕಾಯಿತು. ಭಗವಾನ್
ವಿಷ್ಣು ಮೂರಾಸುರನನ್ನೂ ಏಕಾದಶಿ ಎಂಬ ಆಯುಧದಿಂದ ಕೊoದ ದಿನ .

ಭೀಷ್ಮಾಚಾರ್ಯರು ವಿಷ್ಣುಸಹಸ್ರನಾಮ ಹೇಳಿದ ದಿನ .ಮುಕ್ಕೋಟಿದೇವತೆಗಳಿಗೆ ವಿಷ್ಣು ದರ್ಶನ ಕೊಡುವ ದಿನ .
ಆದ್ದರಿಂದ ಈ ಏಕದಾಶಿಗೆ ಬಹಳೇ ಮಹತ್ವವಿದೆ .

ವೈಜ್ಞಾನಿಕ ಕಾರಣ :-

ಚಂದ್ರ ಭೂಮಿಗೆ ಸಾಮೀಪ್ಯ ಬಂದಾಗ ಅನೇಕ ಏರುಪೆರುಗಳಾಗುತ್ತವೆ. ಅದಕ್ಕೆ ನಮ್ಮ ಆರೋಗ್ಯ ಸರಿಯಾಗಿರಲೂ ಉಪವಾಸ ಮಾಡಬೇಕು. ಓಮ್ ನಮೋ ನಾರಾಯಣನಾಯ ಎಂಬ ಮಂತ್ರ ನಮ್ಮ ನರನಾಡಿಗಳಲ್ಲಿ ಸಂಚರಿಸಿ ಎಲ್ಲೆಡೆ ರಕ್ತ ಸಂಚಾರ ಸರಿಯಾಗುವಂತೇ ಮಾಡುತ್ತದೆ .ಮಂಗಳಮಯವಾದ ಶಾಲಗ್ರಾಮದ ತೀರ್ಥ ಸೇವಿಸುವದರಿಂದ ಒಳ್ಳೆಯದಾ ಗುತ್ತದೆ .

ಸ್ವಯಮ್ಭೂ ವಿಷ್ಣು ದೇವಾಲಯಗಳು :--

ತಿರುಪತಿಯ ಶ್ರೀ ವೇಂಕಟೇಶ್ವರಸ್ವಾಮಿ

ಶ್ರೀರಂಗoನ ಶ್ರೀ ರಂಗನಾಥಸ್ವಾಮಿ

ಮೇಲುಕೋಟೆಯ
ಶ್ರೀ ಚೆಲುವನಾರಾಯಣಸ್ವಾಮಿ

ಕಾಂಚಿಪುರಂನ
ವರದರಾಜಸ್ವಾಮಿ

ಈ ದೇವರ ದರ್ಶನ ಮಾಡಿದರೆ
ಉತ್ತಮ ..ಅಥವಾ ಬೇರೇ ಯಾವುದೇ ವಿಷ್ಣುವಿನ ಮಂದಿರ ದರ್ಶನ

ಇದು ಧನುರ್ಮಾಸವಾಗಿದೆ. "ಪ್ರಣವೋ ಧನುಃ" ಹೇಳುವಂತೆ ಓಂಕಾರವೇ ಧನುಸ್ಸಾಗಿದೆ. ಶ್ರೀ ಸ್ವಾಮಿಯನ್ನು ಪ್ರಣವಮೂರ್ತಿಯಾಗಿ ಉಪಾಸಿಸುವುದೇ ಧನುರ್ಮಾಸ ಪೂಜೆಯಾಗಿದೆ. ಹಾಗಾಗಿ ವೈಕುಂಠ ಏಕಾದಶಿಯು ಸರ್ವವನ್ನೂ ಸಮರ್ಪಿಸುವ ತ್ಯಾಗದ ಪ್ರತಿರೂಪವಾದ ಸತ್ತ್ವ ಗುಣದ ಸಂಕೇತವಾಗಿದೆ. ಸ್ವಾಮಿಯು ’ಪವಿತ್ರಾಣಾಂ ಚ ಪವಿತ್ರಂ ಮಂಗಳಾನಾಂ ಚ ಮಂಗಳಂ’ ಅಲ್ಲವೇ! ಅಂತಹ ಮಂಗಳರೂಪನ ಕೈಯ್ಯಲ್ಲಿರುವ ದಿವ್ಯಾಯುಧವೇ ಸುದರ್ಶನ ಚಕ್ರವಾಗಿದೆ. ಈ ಸುದರ್ಶನ ಚಕ್ರವು ಕಾಲಚಕ್ರಕ್ಕೆ ಮತ್ತು ದರ್ಶನಮಾತ್ರದಿಂದ ಮುಕ್ತಿಯನ್ನುಂಟು ಮಾಡುವ ತತ್ತ್ವಕ್ಕೆ ಪ್ರತೀಕವಾಗಿದೆ. ಸುದರ್ಶನಚಕ್ರ ಸ್ನಾನ ಸ್ಪರ್ಶದಿಂದ ಕೂಡಿದ ಜಲದಲ್ಲಿ (ಪುಷ್ಕರಿಣೀ ತೀರ್ಥದಲ್ಲಿ) ಸ್ನಾನ ಮಾಡುವುದರಿಂದ ಜೀವಾತ್ಮರು ಪರಿಶುದ್ಧರೂ, ’ಸುದರ್ಶನ’ರೂ ಆಗುತ್ತಾರೆ. ಇಂತಹ ಜೀವಿಗಳಿಗೆ ವೈಕುಂಠದ ಬಾಗಿಲುಗಳು ಒಂದೇ ದಿನವಲ್ಲ ಎಂದಿಗೂ ತೆರೆದೇ ಇರುತ್ತವೆ.

ಇಂತಹ ಮಹಿಮಾನ್ವಿತವಾದ ವೈಕುಂಠ ಏಕಾದಶಿ ಮತ್ತು ದ್ವಾದಶಿಗಳನ್ನು ಶ್ರದ್ಧಾ-ಭಕ್ತಿಯಿಂದ ಆಚರಿರಿಸಿದವರಿಗೆ ಪುನರ್ಜನ್ಮ ವಿಲ್ಲ
********


ವೈಕುಂಠ ಏಕಾದಶಿ...!!!

ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.

ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.
ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ವೈಷ್ಣವ ಆಲಯಗಳಲ್ಲಿ ಉತ್ತರ ದ್ವಾರದ ಬಳಿ ಮುಂಜಾನೆ ಭಗವಂತನ ದರ್ಶನಕ್ಕಾಗಿ ಕಾದಿರುತ್ತಾರೆ.
ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದುಬಂದು ಭಕ್ತರಿಗೆ ದರ್ಶನ ನೀಡುತ್ತಾನೆ.
ಆದಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು ಬಂದಿದೆ. ಈ ಒಂದು ಏಕಾದಶಿ ಮೂರು ಕೋಟಿ ಏಕಾದಶಿಗಳಿಗೆ ಸಮವಾದ ಪವಿತ್ರತೆಯನ್ನು ಹೊಂದಿರುವ ಕಾರಣ ಇದನ್ನು ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.
ಮುಕ್ಕೋಟಿ ಏಕಾದಶಿ ದಿನ ಹಾಲಾಹಲ, ಅಮೃತ ಎರಡೂ ಹುಟ್ಟಿದವು. ಈ ದಿನವೇ ಶಿವನು ಹಾಲಾಹಲ ನುಂಗಿದ. ಮಹಾಭಾರತ ಯುದ್ಧದಲ್ಲಿ ಭಗವದ್ಗೀತೆಯನ್ನು ಕೃಷ್ಣನು ಅರ್ಜುನನಿಗೆ ಇದೇ ದಿನ ಉಪದೇಶಿಸಿದ ಎಂಬ ನಂಬಿಕೆ ಇದೆ.
ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು , ಹೋಮ, ಹವನ ಜಪ ,ತಪಗಳು ನಡೆಯುತ್ತವೆ .ಈ ದಿನ ಉಪವಾಸ ಹಾಗು ಜಾಗರಣೆ ಮಾಡಿದರೆ ಒಳ್ಳೆಯದಂತೆ . 
ವಿಷ್ಣು ಪುರಾಣದ ಪ್ರಕಾರ ಇಬ್ಬರು ರಾಕ್ಷಸರು ತನಗೆ ವಿರೋದ ವಾಗಿದ್ದರೂ ವೈಕುಂಠ ಏಕಾದಶಿ ದಿನ ತನ್ನ ಬಾಗಿಲನ್ನು ತೆರೆದಿರುತ್ತಾನಂತೆ ಈ ಕತೆಯನ್ನು ಕೇಳಿದವರಿಗೆ ಮೋಕ್ಷ ಪ್ರಾಪ್ತಿಯಾಗುವಂತೆ ವೈಕುಂತದ ಬಾಗಿಲನ್ನು ತೆರೆದಿಡುವಂತೆ ಬೇಡಿಕೊಳ್ಳುತ್ತಾರೆ.
ಆದುದರಿಂದ ಎಲ್ಲಾ ವಿಷ್ಣು ದೇವಾಲಯದ ಬಾಗಿಲುಗಳನ್ನು ಆ ದಿನ ತೆಗೆದಿರುತ್ತಾರೆ . ಮಾಮೂಲಿ ದಿನಗಳಲ್ಲಿ ಉತ್ತರ ದ್ವಾರಗಳನ್ನು ಮುಚ್ಚಿರುತ್ತಾರೆ .
ಆದರೆ, ವೈಕುಂಠ ಏಕಾದಶಿದಿನ ಬಾಗಿಲನ್ನು ತೆರೆದಿರುತ್ತಾರೆ .
ವೈಕುಂಠ ಏಕಾದಶಿ ದಿನ ತಿರುಮಲೆಯ ದೇವಾಲಯದಲ್ಲಿರುವ ಉತ್ತರ ದ್ವಾರವನ್ನು ತೆರೆದಿರುತ್ತಾರೆ. ಪದ್ಮ ಪುರಾಣದ ಪ್ರಕಾರ ವಿಷ್ಣುವಿನಿಂದ ಬಂದ ಶಕ್ತಿಯಿಂದ ಮೊರಾ ಎಂಬ ರಾಕ್ಷಸನನ್ನು ಸಂಹರಿಸಿದ ದಿನವಂತೆ . 
ಮುಕ್ಕೋಟಿ ಏಕಾದಶಿ ದಿನದಂದು ಅಂದರೆ ಧನುರ್ಮಾಸ ಶುಕ್ಲ ಏಕಾದಶಿ ದಿನದಂದು ಉಪಾಸವಿರ ಬೇಕಂತೆ ಇದಕ್ಕೆ ಕಾರಣವೇನೆಂದರೆ.. 
ಮೊರಾ ಎಂಬ ರಾಕ್ಷಸನು ಅಂದು ಅಕ್ಕಿಯಲ್ಲಿ ಅಡಗಿ ಕುಳಿತಿರುತ್ತಾನಂತೆ ಆದುದರಿಂದ ಅಂದು ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥವನ್ನು ತಿನ್ನ ಬಾರದು .
ಮುಕ್ಕೋಟಿ ಏಕಾದಶಿ ಒಂದು ದಿನ ಉಪವಾಸ ವಿದ್ದರೆ ಮಿಕ್ಕ 23 ಏಕಾದಶಿಗಳಲ್ಲಿ ಉಪವಾಸ ವಿದ್ದಂತೆಯೇ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.
ಮೊರಾ ಎಂದರೆ ರಾಜಸಿಕ ಹಾಗೂ ತಾಮಾಸಿಕ ಗುಣಗಳಿಗೆ ಪ್ರತೀಕ ಅವುಗಳನ್ನು ಉಪವಾಸ ವಿರುವುದರ ಮೂಲಕ ಜಯಿಸುವುದರ ಮೂಲಕ ಮುಕ್ತಿಗೆ ಮಾರ್ಗ ದೊರೆಯುತ್ತದಂತೆ....
*****

ಶ್ರೀ ವೈಕುಂಠ ಏಕಾದಶಿಯ ಮಹತ್ವ ...


ಕಾಮದಾ ಏಕಾದಶಿ, ಅಥವಾ  ವೈಕುಂಠ ಏಕಾದಶಿ  ಎಂದರೆ  ಶ್ರೀಮನ್ನಾರಾಯಣ  ವೈಕುಂಠದಿಂದ  ಬಂದು  ಭಕ್ತರಿಗೆ  ದರುಶನದ ಭಾಗ್ಯ  ಕೊಡುವ ದಿನ.

ಮನುಷ್ಯರ ಪಾಪಗಳು  ಶ್ರೀಹರಿಯನ್ನು  ಸೇವಿಸುವುದರಿಂದ  ಕಳೆಯುವ  ದಿನ. ಮನುಜನ ಜೀವನದ ಪಯಣದಲಿ ಸಾಧನೆಗೆ  ರಹದಾರಿ  ಮಾಡಿಕೊಡುವ ದಿನ .


ಈ  ದಿನ  ಮನದಲಿ  ಏನೇ  ಸಂಕಲ್ಪಿಸಿ  ಅದೇ  ದಾರಿಯಲಿ ಮುಂದುವರದರೆ  ಯಶ ಪಡೆಯುತ್ತಾನೆ. ಉತ್ತರ  ದ್ವಾರದಿಂದ ಸ್ವಾಮಿಯ  ದರುಶನ  ಮಾಡಿದರೆ  ಮೋಕ್ಷ  ಪ್ರಾಪ್ತಿ  ಎಂದು  ಹೇಳುತ್ತಾರೆ ....


ಧಾರ್ಮಿಕ ಮಹತ್ವ :--
  1. ಅಂಬರೀಷ ಮಹರಾಜ  ಏಕಾದಶಿ  ಮಾಡಿ  ಪಾರಣೆಯಂದು  ತೀರ್ಥ  ಸೇವಿಸಲು , ತಮಗೆ  ಅವಮಾನಿಸಿದನೆಂದು  ದೂರ್ವಾಸರು  ಹತ್ತು  ಜನ್ಮ  ಪಡೆಯೆಂದು  ಶಾಪ  ಕೊಡುತ್ತಾರೆ  ಆದರೆ  ಏಕಾದಶಿ  ಉಪವಾಸ  ವ್ರತ  ಮಾಡುತ್ತಿದ್ದ ಅಂಬರೀಷನ ಭಕ್ತಿಗೆ  ಮೆಚ್ಚಿದ ಶ್ರೀ ನಾರಾಯಣನು ತಾನೇ  ಆ ಶಾಪವನ್ನು  ತೆಗೆದುಕೊoಡು 10 ಅವತಾರವೆತ್ತುತ್ತಾನೆ . ತನ್ನ  ಭಕ್ತನ  ರಕ್ಷಣೆಗಾಗಿ  ತನ್ನ ಸುದರ್ಶನ ಚಕ್ರವನ್ನೆ ಕಳಿಸಿದ  ಸುದರ್ಶನ  ಚಕ್ರ ದೂರ್ವಾಸರ  ಕಡೆಗೆ  ಹೋದಾಗ, ಅಂಬರೀಷನೆ ಬೇಡಿಕೊoಡು  ಅದು  ತಿರುಗಿ ವಿಷ್ಣುವಿನ  ಕಡೆಗೆ ಹೋಗುವಂತೆ  ಮಾಡಬೇಕಾಯಿತು. ಭಗವಾನ್  ವಿಷ್ಣು  ಮೂರಾಸುರನನ್ನೂ  ಏಕಾದಶಿ  ಎಂಬ  ಆಯುಧದಿಂದ  ಕೊoದ ದಿನ. 

ಭೀಷ್ಮಾಚಾರ್ಯರು ವಿಷ್ಣುಸಹಸ್ರನಾಮ  ಹೇಳಿದ ದಿನ. ಮುಕ್ಕೋಟಿ ದೇವತೆಗಳಿಗೆ  ವಿಷ್ಣು  ದರ್ಶನ ಕೊಡುವ ದಿನ. ಆದ್ದರಿಂದ  ಈ  ಏಕದಾಶಿಗೆ  ಬಹಳ  ಮಹತ್ವವಿದೆ .


ವೈಜ್ಞಾನಿಕ ಕಾರಣ :-


ಚಂದ್ರ  ಭೂಮಿಗೆ  ಸಾಮೀಪ್ಯ  ಬಂದಾಗ  ಅನೇಕ  ಏರುಪೇರುಗಳಾಗುತ್ತವೆ. ಅದಕ್ಕೆ ನಮ್ಮ ಆರೋಗ್ಯ  ಸರಿಯಾಗಿರಲೂ ಉಪವಾಸ  ಮಾಡಬೇಕು. ಓಮ್  ನಮೋ  ನಾರಾಯಣನಾಯಃ  ಎಂಬ  ಮಂತ್ರ  ನಮ್ಮ ನರನಾಡಿಗಳಲ್ಲಿ  ಸಂಚರಿಸಿ  ಎಲ್ಲೆಡೆ  ರಕ್ತ  ಸಂಚಾರ  ಸರಿಯಾಗುವಂತೆ ಮಾಡುತ್ತದೆ .ಮಂಗಳಮಯವಾದ  ಶಾಲಗ್ರಾಮದ ತೀರ್ಥ  ಸೇವಿಸುವುದರಿಂದ  ಒಳ್ಳೆಯದಾಗುತ್ತದೆ .

ಸ್ವಯಂಭು ವಿಷ್ಣು  ದೇವಾಲಯಗಳು :--

ತಿರುಪತಿಯ ಶ್ರೀ  ವೆಂಕಟೇಶ್ವರಸ್ವಾಮಿ ಶ್ರೀರಂಗoನ  ಶ್ರೀ  ರಂಗನಾಥಸ್ವಾಮಿ ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿ ಕಾಂಚಿಪುರಂನ ವರದರಾಜಸ್ವಾಮಿ ಈ ದೇವರ ದರ್ಶನ  ಮಾಡಿದರೆ ಉತ್ತಮ ಅಥವಾ  ಬೇರೆ ಯಾವುದೇ ವಿಷ್ಣುವಿನ  ಮಂದಿರ  ದರ್ಶನ ಮಾಡಬಹುದು.

********** 

from internet

#ವೈಕುಂಠಏಕಾದಶಿ: ಏಕಾದಶಿ ಉಪವಾಸ, 'ವೈಕುಂಠ' ಹೆಸರಿನ ತತ್ವದ ಮಹತ್ವ
#ವೈಕುಂಠಏಕಾದಶಿ" ಇದರಲ್ಲಿ ಎರಡು ಪದಗಳು ಸೇರಿಕೊಂಡಿವೆ. ಒಂದು "#ವೈಕುಂಠ", ಎರಡನೆಯದು #ಏಕಾದಶಿ, ಮೊದಲು ಇವುಗಳ ಸ್ಥೂಲ ಅರ್ಥ ಹೀಗಿದೆ: "ವೈಕುಂಠ" ಎಂದರೆ #ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರು ಬರಲು ಕಾರಣ ಚಾಕ್ಷುಷ #ಮನ್ವಂತರದಲ್ಲಿವಿಷ್ಣುವು #ವಿಕುಂಠ ಯೆಂಬ "ಸ್ತ್ರೀ"ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತೆಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.
#ವಿಷ್ಣುಸಹಸ್ರನಾಮದಲ್ಲಿಯೂ ವೈಕುಂಠ ಎಂಬ ಹೆಸರಿನ ಉಲ್ಲೇಖವಿದೆ. ನಮಗೆ ತಿಳಿದಿರುವಂತೆ 'ಕುಂಠ' ಎಂದರೆ ಅಸಾಮರ್ಥ್ಯ, 'ವಿಕುಂಠ' ಎಂದರೆ ಬದುಕಿನ ನಡೆಯಲ್ಲಿ ಎಂದೂ ಜಾರದವರು, #ಅಂದರೆಭಗವಂತನಸಾಕ್ಷಾತ್ಕಾರವಾದಮುಕ್ತರುಎಂದರ್ಥ. ಆದ್ದರಿಂದ ಬದುಕಿನ ಅಸಾಮರ್ಥ್ಯಗಳನ್ನು ಹೋಗಲಾಡಿಸುವವನು ಎಂಬುದೂ ಈ ಹೆಸರಿಗೆ ಅರ್ಥವಾಗಿದೆ.
ಇನ್ನು "#ಏಕಾದಶಿ" ಎಂದರೆ ಹನ್ನೊಂದನೆಯ ತಿಥಿ. "ಏಕಾದಶಿ" ಒಂದು ವ್ರತ. ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು. #ದಶಮಿಯಂದುಅಂದರೆಏಕಾದಶಿಯಹಿಂದಿನದಿನಒಂದುಹೊತ್ತುಮಧ್ಯಾಹ್ನಊಟಮಾಡಿಭೋಗಗಳನ್ನುತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ #ಇನ್ನೊಂದುಅರ್ಥ ಭಗವಂತನ ಸಮೀಪದಲ್ಲಿರುವುದು. ಎಂದರೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.
ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. ಹೀಗೆ ಎಡಬಿಡದೆ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. #ಮಹಾಕವಿಕಾಳಿದಾಸಹೇಳಿರುವಂತೆ : "ಶರೀರಮಾಧ್ಯಂ ಖಲು ಧರ್ಮಸಾಧನಂ", ಧರ್ಮ ಸಂಪಾದನೆಗೆ, ಸ್ವಸ್ಥ್ಯ ಶರೀರ ಅತ್ಯಗತ್ಯ.
#ವೈಕುಂಠಏಕಾದಶಿಯಬಗ್ಗೆಕಥೆಯೊಂದುಹೀಗಿದೆ: ಭಾಗವತೋತ್ತಮನಾದ ನಂದಗೋಪ ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದ ಒಮ್ಮೆ ಏಕಾದಶಿವ್ರತ ಆಚರಿಸಿ, ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಝಾವಕ್ಕೆ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ. ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು. ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ದಿ ಮುಟ್ಟಿಸಿದರು. ಸರ್ವಜ್ಞನಾದ ಶ್ರೀಕೃಷ್ಣ ಅವರಿಗೆಲ್ಲಾ ಅಭಯವಿತ್ತು ತಂದೆಯವರನ್ನು ಕರೆತರುವುದಾಗಿ ಹೇಳಿ, ವರುಣಲೋಕಕ್ಕೆ ಬಂದನು. ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ. ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.
ನಂದಗೋಪನಿಗೆ ಪರಮಾನಂದವಾಯಿತು. ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು #ಆದರೆಶ್ರೀಕೃಷ್ಣಸಾಕ್ಷತ್ಪರಮೇಶ್ವರನೇನಿಜಆದರೆ ಅವನ ನಿಜರೂಫ ಅರಿಯಲಾರೆವು ಎಂದು ಪರಿತಪಿಸಿದರು. #ಇದನ್ನರಿತಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, #ಕೃಷ್ಣಹೇಳಿದಂತೆಮಾಡಿದಅವರಿಗೆವೈಕುಂಠದದರ್ಶನವಾಯಿತು. ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು ಬಹುಶಃ ಈ ಕಾರಣಕ್ಕೆ ಏಕಾದಶಿಯನ್ನು "ವೈಕುಂಠಏಕಾದಶಿ" ಎಂದು ಕರೆದಿರಬಹುದೆಂಬ ನಂಬಿಕೆ ಹಲವರಲ್ಲಿದೆ. ಪುರಾಣಗಳಿಗೆ ಮಹತ್ವವಾದ ಸ್ಥಾನವಿದೆ, ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಪ್ರತಿಪಾದಿಸುತ್ತವೆ. ಸಾಮಾನ್ಯಜನರಿಗೆ ಅವುಗಳಿಂದ ಉಪಕಾರವಾಗುತ್ತದೆ. #ಲೋಕೋಪಕಾರಕ್ಕಾಗಿವ್ಯಾಸರುಹದಿನೆಂಟುಪುರಾಣಗಳನ್ನುರಚಿಸಿದರು. ಇಂತಹ ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು ನಾರದರ ಪ್ರೇರಣೆಯಿಂದ ಅನೇಕ ಪವಿತ್ರ ಗ್ರಂಥಗಳ, ಪೂಜೆ ಪುನಸ್ಕಾರಗಳು, ವ್ರತಕಥೆಗಳೂ, ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು, ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, #ಸಕಲರೂಸುಲಭದಲ್ಲಿಆಚರಿಸಲುಯೋಗ್ಯವಾದವ್ರತಏಕಾದಶಿವ್ರತ. ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು. ವಸಿಷ್ಠರ ಪ್ರಕಾರ, #ಹನ್ನೊಂದುಇಂದ್ರಿಯಗಳಿಂದಸಂಪಾದಿಸಿದಸಕಲಪಾಪಗಳನ್ನುಹನ್ನೊಂದನೆಯತಿಥಿಯಾದಏಕಾದಶಿಯುಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ಪಾವನವಾದದ್ದು ಯಾವುದೂ ಇಲ್ಲ.
#ವೈಕುಂಠಏಕಾದಶಿದಿನಶ್ರೀಮನ್ನಾರಾಯಣನದರ್ಶನಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬರಬೇಕು. ಹೀಗೆ ಮಾಡಿದ್ರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಅನ್ನೋದು ನಂಬಿಕೆ. ಅಲ್ಲದೇ ವೈಕುಂಠ ಏಕಾದಶಿಯ ಪವಿತ್ರ ದಿನ ಅಭ್ಯಂಜನ ಮಾಡಿ, ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆಯೂ ಇದೆ.
##ವೈಕುಂಠದ್ವಾರದಲ್ಲಿತೋರಿಹೋಗುವುದೆಂದರೆನಾವುತಲೆಬಾಗಿಹೋಗಬೇಕುತಲೆಬಾಗುವುದೆಂದರೆನಮ್ಮಅಹಂಕಾರವನ್ನುಕಳೆದುಕೊಂದಂತೆಯೇಅಂದರೆಎಲ್ಲಿಯವರೆಗೆ ನಮ್ಮಲ್ಲಿ ಅಹಂಕಾರವಿರುವುದೊ ಅಲ್ಲಿಯವರೆಗೆ ನಮಗೆ ದೇವರ ದರುಶನ ಸಾಧ್ಯವಿಲ್ಲ ಅದನ್ನು ಕಳೆದುಕೊಂಡ ಕೂಡಲೇ ಇರುವುದೆಲ್ಲಾ ದೈವವೇ ಆಗುವುದೆಲ್ಲಾ ದೈವ ದರುಶನವೇ...ಏಕಾದಶಿ ಅಂದರೆ ಕೂಡಾ ಇದೇ ಅರ್ಥ ಬರುತ್ತದೆ ಏಕಾದಶಿ ಅಂದರೆ ಹನ್ನೊಂದು. ಅಂದರೆ ಹತ್ತು ಭಗವಂತನ ಸಮಸ್ತ ಸೃಷ್ಟಿಯನ್ನು ಪ್ರತಿನಿಧಿಸುತ್ತದೆ ಆ ಇನೊಂದು ನಮ್ಮ ವೈಯುಕ್ತಿಕತೆಯನ್ನು ಪ್ರತಿನಿಧಿಸುತ್ತದೆ ಅಂದರೆ ನಮ್ಮ ವೈಯುಕ್ತಿಕತೆ ಅಂದರೆ ಅಹಂಕಾರ ಅಥವಾ ಮನಸ್ಸು ಇವುಗಳನ್ನು ಕರಗಿಸಿ ಅಥವಾ ಇಲ್ಲವಾಗಿಸಿ ಅಥವಾ ಇಡೀ ವಿಶ್ವದೊಂದಿಗೆ ಸಮ್ಮಿಲನಗೊಲಿಸದ ಹೊರತು ನಮಗೆ ಭಗವಂತನನ್ನು ಕಾಣಲು ದರ್ಶಿಸಲು ಸಾಧ್ಯವಿಲ್ಲಾ ಎಂದರ್ಥ. ಏಕಾದಶಿಯ ಬಗ್ಗೆ ಕೇಳಿರದ, ನಮ್ಮ ಪುರಾಣ ಪರಂಪರೆಗಳ ಬಗೆಗೆ ಏನೂ ಗೊತ್ತಿರದ, ಜಗತ್ಪ್ರಸಿದ್ಧ ಶಸ್ತ್ರಚಿಕಿತ್ಸಾ ವೈದ್ಯ ಅಲೆಕ್ಲಿಸ್ ಕಾರೆಲ್ ತನ್ನ ಖ್ಯಾತಕೃತಿ ‘Man the Unknown (ಅವ್ಯಕ್ತ ಮಾನವ)’ದಲ್ಲಿ ಒಂದು ಮಾತು ಹೇಳುತ್ತಾನೆ: “#ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ. ಹಾಗಾಗಿ 15ದಿನಗಳಿಗೊಮ್ಮೆ 24 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ದೊರಕಿತೆಂದರೆ ಈ ಪಚನೆಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ. ಉಪವಾಸವೇ ದೊಡ್ಡ ಚಿಕಿತ್ಸೆ ಎನ್ನುತ್ತಾನೆ". ನಮ್ಮ ಪ್ರಾಚೀನ ಭಾರತೀಯರು ಇದೇ ಮಾತನ್ನು ಹೇಳಿದ್ದರು ಅಲೆಕ್ಸಿಸ್ ಕಾರೆಲ್ ಇದನ್ನು ವೈಜ್ಞಾನಿಕವಾಗಿ ಬರೆದರೆ ಪ್ರಾಚೀನರು ಏಕೆ-ಏನು ಅನ್ನೋ ವಿವರ ನೀಡದೆ ವಿಧಿವಾಕ್ಯವಾಗಿ ಬರೆದರು. #ಈಎಲ್ಲದೃಷ್ಟಿಯಿಂದಏಕಾದಶಿತುಂಬಮಹತ್ವದದಿನ. ಅಂದು ವಾತಾವರಣದಲ್ಲಿ ಕೂಡ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ. ಏಕಾದಶಿಯನ್ನು ‘#ಹರಿದಿನ’ ಎಂದೂ ಸಹ ಕರೆಯುತ್ತಾರೆ.#ಅಂದುವೈಷ್ಣವೀಶಕ್ತಿಜಾಗೃತವಾಗಿಕೆಲಸಮಾಡುತ್ತದೆಎನ್ನುವುದುತಾತ್ಪರ್ಯ.
*********
ವೈಕುಂಠ ಏಕಾದಶಿ  ಸಂಶಯ ಹಾಗೂ ಪರಿಹಾರ 

೧. ವೈಕುಂಠ ಏಕಾದಶಿ ಎಂದು ಆಚರಿಸಲಾಗುತ್ತದೆ?
ಉತ್ತರ - ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿ (ಸಾಮಾನ್ಯವಾಗಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ) ಆಚರಿಸಲಾಗುತ್ತದೆ.

೨. ವೈಕುಂಠ ಏಕಾದಶಿಯಂದು ಉಪವಾಸ ಮಾಡಬೇಕಾ ? ಫಲಾಹಾರ ಮಾಡಬಹುದಾ?

ಉತ್ತರ - ಎಲ್ಲಾ ಏಕಾದಶಿಯಂದೂ ಉಪವಾಸ ಮಾಡಬೇಕು.  
 ಅಶಕ್ತರು, ಬಸುರಿ, ಬಾಣಂತಿಯರು, ಎಂಟು ವರ್ಷದ ಒಳಗಿನವರು ಮತ್ತು ಎಂಭತ್ತು ದಾಟಿದವರು ಫಲಾಹಾರ ಮಾಡಬಹುದು.

೩. ಕೆಲವು ದೇವಸ್ಥಾನಗಳಲ್ಲಿ ನೈವೇದ್ಯ ರೂಪದಲ್ಲಿ ಪೊಂಗಲ್, ಹುಗ್ಗಿ, ಚಿತ್ರಾನ್ನ ಇತ್ಯಾದಿ ಕೊಡುತ್ತಾರಲ್ಲ ಅದನ್ನು ತಿನ್ನಬಹುದೆ?

ಉತ್ತರ  - ತಿನ್ನಬಾರದು.  ಮಾಧ್ವ ಸಂಪ್ರದಾಯದ ಯಾವ ದೇವಸ್ಥಾನದಲ್ಲೂ ಕೊಡುವುದಿಲ್ಲ.  ಅಕಸ್ಮಾತ್ ಅವರೇನಾದರೂ ಕೊಟ್ಟರೆ ಅವರಿಗೆ ಕೊಡಬಾರದೆಂದು ಹೇಳಿ.

೪. ಏಕಾದಶಿಯಂದು ತೀರ್ಥ ಎಷ್ಟು ಸಲ ತೆಗೆದುಕೊಳ್ಳಬೇಕು.

ಉತ್ತರ - ನಿರ್ಮಾಲ್ಯ ಒಂದು ಸಾರೀ ಮತ್ತು ತೀರ್ಥ ಒಂದು ಸಾರಿ ಮಾತ್ರ.

೫. ಮನೆಯಲ್ಲಿ ತೀರ್ಥ ತೆಗೆದುಕೊಂಡವರು ದೇವಸ್ಥಾನದಲ್ಲೂ ತೆಗೆದುಕೊಳ್ಳಬಹುದಾ?

ಉತ್ತರ  - ಮನೆಯಲ್ಲಿ ತೆಗೆದುಕೊಂಡಿದ್ದರೆ ಏಕಾದಶಿಯಂದು ಅಲ್ಲಿ ಸ್ವೀಕರಿಸಬೇಡಿ.

೬. ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಏನು ಫಲ?

ಉತ್ತರ - ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಒಂದು ವರ್ಷದ ೨೪ ಏಕಾದಶಿ ಉಪವಾಸ ಮಾಡಿದ ಫಲ.    ಪ್ರತಿ ಏಕಾದಶಿಯೂ ಉಪವಾಸ ಮಾಡಲೇಬೇಕು.

7. ದಿನತ್ರಯ ಎಂದರೇನು?
ಉತ್ತರ - ದಶಮಿ, ಏಕಾದಶಿ, ದ್ವಾದಶಿ ಈ ಮೂರೂ ದಿನಗಳನ್ನು ದಿನತ್ರಯವೆನ್ನುತ್ತಾರೆ.

8. ಏಕಾದಶಿ ಶ್ರಾದ್ಧ ಏಕಾದಶಿಯಂದೇ ಮಾಡಬಹುದಾ?
ಉತ್ತರ - ಏಕಾದಶಿಯಂದು ಶ್ರಾದ್ಧ ಮಾಡಬಾರದು.  ದಶಮೀ ಅಥವಾ ದ್ವಾದಶಿ ಮಾಡಬೇಕು (ನಿಮ್ಮ ಮಠದ ಪಂಚಾಂಗದಲ್ಲಿ ಶ್ರಾದ್ಧ ಕಾಲಂ ನೋಡಿ)

9. ಏಕಾದಶಿ ಆಚರಿಸಿದ ಕೆಲವು ಭಾಗವತೋತ್ತಮರ ಹೆಸರು ತಿಳಿಸಿ.

ಉತ್ತರ - ಭೀಮಸೇನ, ದೂರ್ವಾಸರು, ಅಂಬರೀಷ, ರುಕ್ಮಾಂಗದ ಮುಂತಾದವರು.

10. ದೂರ್ವಾಸರು ಅಂಬರೀಷನಿಗಿಂತ ದೊಡ್ಡವರಾದರೂ ಅವರು ಏಕಾದಶಿಯ ಅನುಸರಿಸಲಿಲ್ಲವೇಕೆ?
ಉತ್ತರ - ದೂರ್ವಾಸರು ರುದ್ರದೇವರ ಅವತಾರ.  ಪರಮ ವೈಷ್ಣವರು.  ಆದರೆ ಅವರು ಅಂಬರೀಷನ ಏಕಾದಶಿ ಮಹತ್ವ ತಿಳಿಸಬೇಕಿತ್ತು.  ಅದಕ್ಕೇ ಪರಮಾತ್ಮನ ಪ್ರೇರಣಾನುಸಾರ ಹಾಗೆ ಮಾಡಿರುತ್ತಾರೆ .

11. ಏಕಾದಶಿ ಅಭಿಮಾನಿ ದೇವತೆ ಯಾರು?

ದಶಮಿ, ಏಕಾದಶಿ ಮತ್ತು ದ್ವಾದಶಿಗೆ ಶ್ರೀಹರಿಯೇ ಅಭಿಮಾನಿ ದೇವತೆ.
*****************

ವೈಕುಂಠ ಏಕಾದಶಿಯ ಈ ಸುದಿನದಂದು   ಹರಿನಾಮಾಮೃತ ಧರ್ಮ ಚಾವಡಿ ವೇದಿಕೆಯಿಂದ🕉
ಅನಂತ ಕೋಟಿ
ಬ್ರಹ್ಮಾಂಡ ನಾಯಕ
ರಮಾ ಬ್ರಹ್ಮ
ರುದ್ರೇದಾದ್ಯ ವಂದ್ಯ
ಭಕ್ತ ವತ್ಸಲ
ಭವ ರೋಗ ವೈದ್ಯ
ಶರಣಾಗತ ವಜ್ರ ಪಂಜರ
ಆಪಧ್ಬಾಂದವ
ಅನಾಥ ಬಂಧು
ಅನಿಮಿತ್ತ ಬಂಧು
ಪತಿತ ಪಾವನ
ಮಹಾ ಭಯನಿವಾರಣ
ಮಹಾ ಭವನಿವಾರಣ
ಮಹಾ ಬಂಧವಿಮೋಚನ
ಭಯಕೃದಯವಿನಾಶನ 
ಕೃಪಾ ವಾರಿಧಿ
ದೇವ ದೇವೋತ್ತಮ
ದೇವ ಶಿಖಾಮಣಿ 
ಕಪಟ ನಾಟಕ ಸೂತ್ರಧಾರ 
ನಿತ್ಯರೊಳು ನಿತ್ಯ ಸತ್ಯ ಸಂಕಲ್ಪ
ಮುಕ್ತ ಮುಕ್ತ ನಿಯಾಮಕ
ಮೋಕ್ಷಧರ
ಸುವೈಕುಂಠಪತಿ
ವೈಕುಂಠ ವಿಹಾರಿ
ತ್ರಿಧಾಮ
ಜಗದ್ಯಂತ ಭಿನ್ನ
ಜಗದೀಶ
ಜಗದೋದ್ಧಾರ
ಜಗತ್ಸಾಮಿ 
ಜಗದ್ವೀಲಕ್ಷಣ 
ಜಗನ್ನಾಥ
ವಿಶ್ವಕುಟುಂಬಿ
ವಿರಾಟ ಮೂರ್ತಿ
ಹೇ ಮಂಗಳಾಂಗ
ಹೇ ಶುಭಾಂಗ
ಪರಮ ಮಂಗಳ ಮೂರ್ತಿ
ಕೋಮಲಾಂಗ 
ನೀಲ ಮೇಘ ಶಾಮ
ಇಂದು ವದನ 
ಬಹುಸುಂದರ
ಇಂದಿರಾ ವಂದಿತ ಚರಣ
ವೈಕೋದರ ವಂದ್ಯ
ಕೇಶವಾದಿರೂಪ
ಅಜಾದಿ ರೂಪ
ವಿಶ್ವಾದಿ ರೂಪ
ಆತ್ಮಾದಿ ರೂಪ
ಅನಿರುದ್ಧಾದಿ ರೂಪ
ಅನ್ನ ಮಯಾದಿ ರೂಪ
ಅನೇಕ ಮಂತ್ರ ಪ್ರತಿ ಪಾದ್ಯ
ಸರ್ವ ಸಾರ ಭೋಕ್ತ
ಅಷ್ಟೈಶ್ವರ್ಯ ಪ್ರದಾಪ
ಓಂಕಾರ ಶಬ್ದ ವಾಚ್ಯ
ವಿಶಿಷ್ಟ ತಾರತಮ್ಯ ವಾಚ್ಯ
ಅನಂತಾನಂತ ಶಬ್ದ ವಾಚ್ಯ
ಅಣುಮಹುದ್ರೂಹಿ
ಶಂಖ ಚಕ್ರ ಪೀತಾಂಬರಧಾರಿ
ಕಮಲಾಕ್ಷ
ಕಮಲನಾಭ 
ವೈಜಯಂತಿ ವನಮಾಲ ಶೋಬಿತ
ಕೌಸ್ತುಭ ಭೂಷಿತ
ಸುವರ್ಣ ವರ್ಣ 
ನವರತ್ನ ಕುಂಡಲ ಧಾರಿ
ಕಸ್ತೂರಿ ಶ್ರೀಗಂಧ ಲೇಪನ
ಗರುಡಾರೂಡ ಶೋಬಿತ 
ಕಾಮಧೇನು 
ಶ್ರೀ ವತ್ಸ ಲಾಂಛನ
ಕಲ್ಪ ವೃಕ್ಷ 
ಚಿಂತಾಮಣಿ 
ಕ್ಷೀರಾಬ್ದಿ ಶಾಯಿ
ಶೇಷ ಶಾಯಿ
ವಟ ಪತ್ರ ಶಾಯಿ
ಖಗವಾಹನ
ದೇಶ ಕಾಲ ಗುಣಾತೀತ
ಅನಂತ ಬ್ರಹ್ಮ
ಅನಂತ ಶಕ್ತಿ 
ಅನಂತ ಮೂರ್ತಿ
ಅನಂತ ಕೀರ್ತಿ
ಪುರಾಣ ಪುರುಷೋತ್ತಮ 
ಅಕ್ರೂರ ವರದೇ
ಅಂಬರೀಷ ವರದೇ
ನಾಮವರದ
ಪ್ರಹ್ಲಾದ ವರದಾ
ಗಜೇಂದ್ರ ವರದಾ
ಮುಚುಕುಂದ ವರದ
ಧ್ರುವ ವರದ
ವಿಭೀಷಣ ವರದಾ
ಕುಲಾಲ ಭೀಮ ಸಂರಕ್ಷಕ
ಪುಂಡಲೀಕ ವರದ
ಪರಾಶರ ವರದ
ಪಾರ್ಥಸಾರಥಿ 
ಪಾಪವಿದೂರ
ಅರಿಜನ ಪ್ರಚಂಡ
ಚಾಣೂರ ಮಲ್ಲ ಮುಷ್ಠಿಕಾಸುರ ಮರ್ಧನ
ಕಾಳಿಂದಿಕೂಲ
ವನ ಕಂಠೀರ ಮರ್ಧನ
ಮದನ ಗೋಪಾಲ
ವೇಣು ಗೋಪಾಲ
ವೇದ ನಾದ ಪ್ರಿಯ
ಗೋಸಹಸ್ರ ಗೋಪಿಕಾ ಪ್ರಿಯ ವಿಲಾಸ
ಅಹಲ್ಯಾ ಶಾಪವಿಮೋಚನ
ದ್ರೌಪದಿ ಅಭಿಮಾನ ರಕ್ಷಕ
ದುಷ್ಟ ಜನ ಮರ್ಧನ 
ಶಿಷ್ಟ ಜನ ಪರಿಪಾಲ
ಮುಕುಂದ 
ಮುರಾರಿ
ಕಂಸಾರಿ ಸಂಹಾರ
ಅಸುರಾರಿ
ದೈತ್ಯ ಕುಲ ಸಂಹಾರಿ
ಕ್ಷಾತ್ರ ಕುಲಾಂತಕ
ಸೋಮಕಾಸುರಂತ
ಹಿರಣ್ಯಾಕ್ಷ ಹಿರಣ್ಯಕಶ್ಯಪು ಸಂಹಾರಿ
ರಾವಣ ಕುಂಭಕರ್ಣ ಮರ್ಧನ 
ಶಿಶುಪಾಲ ದಂತ ವಕ್ರ ಶಿರಚ್ಛೇದನ
ರಘುಕುಲೋಧ್ಬವ
ದಶರಥ ಕೌಸಲ್ಯಾನಂದನ
ಸಿಂಧೂರ ವರದ
ಸೀತಾಪತೆ ಶ್ರೀ ರಾಮಚಂದ್ರ
ಯದುಕುಲೋತ್ಪನ್ನ 
ಯದುಕುಲೋದ್ದಾರ
ಯದುಕುಲ ತಿಲಕ 
ಯದುಕುಲ ಶ್ರೇಷ್ಠ 
ವಸುದೇವಕೀನಂದನ
ಯಶೋದೆ ಕಂದ
ವೃಂದಾವನವಾಸಿ
ಗೋವ ಕುಮಾರ
ಗೋಕುಲದ್ವಾರಕವಾಸ
ಗೋವರ್ಧನೋದ್ದಾರಿ
ಕಾಲಿಯ ಮರ್ಧನ 
ಪೂತನಪ್ರಾಣಪಹಾರಿ
ಶಕಟಾಸುರ ಮರ್ಧನ
ಪಾಂಡವ ಬಂಧು
ಪಾಂಡವ ಪರಿಪಾಲ
ಪಾಂಡವ ಪ್ರಿಯ
ಸುಧಾಮ ಸಖ
ರುಕ್ಮಿಣಿ ವಲ್ಲಭ
ಸತ್ಯಭಾಮ ಪ್ರಿಯ
ಗೋಪಿಜನಜಾರ
ನವನೀತ ಚೋರ
ಗೋಪಾಲಕೃಷ್ಣ 
ಗಂಗಾಜನಕ
ಪ್ರಯಾಗ ಮಾಧವ
ಕಾಶಿ ಬಿಂಧು ಮಾಧವ
ಪಂಪಾವತಿ ಗುಲಗುಂಜಿ ಮಾಧವ
ರಾಮೇಶ್ವರ ಸೇತು ಮಾಧವ
ಬದರೀ ನಾರಾಯಣ 
ಶ್ರೀ ರಂಗನಾಥ
ಉಡುಪಿ ಶ್ರೀ ಕೃಷ್ಣ 
ಮೇಲುಕೋಟೆಯ ಚೆಲವರಾಯ
ಬೇಲೂರ ಚೆನ್ನಿಗರಾಯ
 ಪಾಂಡುರಂಗ ವಿಠಲ
ಶ್ರೀ ಶೈಲವಾಸ
ಅರುಣಾಚಲ ನಿಲಯ
ವೃಷಭಾಚಲ ವಿಹಾರಿ
ಅನಂತ ಶಯನ
ದರ್ಭ ಶಯನ
ಕಪಿಲ
ಹಯಗ್ರೀವ 
ದತ್ತಾತ್ರೇಯ 
ಶಿಂಶುಕುಮಾರ
ಧನ್ವಂತರಿ 
ಮಮ ಸ್ವಾಮಿ
ಸರ್ವ ಸ್ವಾಮಿ
ಜಗದಂತರ್ಯಾಮಿ
ಜಗದೀಶ 
ಪ್ರಾಣೇಶ
ಧ್ವಿಜಪಣಿಪ ಮೃಡೇಷ
ಶ್ರೀ ರಮಣ
ಭೂ ರಮಣ
ದುರ್ಗಾರಮಣ
ಶ್ರೀ ಲಕ್ಷ್ಮಿ ವೆಂಕಟರಮಣ 
ಭಾರತೀ ರಮಣ
ಮುಖ್ಯಪ್ರಾಣಂತರ್ಗತ ಸೀತಾಪತೆ ಶ್ರೀ ರಾಮಚಂದ್ರ
ಸಾಕ್ಷಾತ್ ಮನ್ಮದಮನ್ಮಥ
ಹರಿ ವಿಠ್ಠಲ
*****

Vaikunta Ekadashi

Margashira Maasa Shukla Paksha ekadashi is known as Vaikunta Ekadashi and also as Geetha Jayanthi, this day Sri Krishna gave the bhagavadgita sermon to Sri Arjuna in Kurukshetra as part of the Mahabharatha war in Dwapara yuga around 5000 years ago...

Vaikunta Ekadashi is when we get to go through the doors of Vaikunta and pray to the lord to give us Jnana Bhakthi and Vairagya on the path of Moksha. In most of the Vishnu temples on this day, the uttara dwara will be open and we could walk through that door. While we walk in this practice, its more important that we head north (meaning progress) in our daily activities be it following the principles of dharma through our involvement in helping the society to improve, in helping the poor and needy and also in improving our knowledge in shastras. 
Today we get to see the Sri Srinivasa devara darshana at Sri Vyasaraja Matha (Sosale) in Gandhi Bazaar Bangalore. 

Lets pray to the lord to bless us with good health and happiness all through the next year from this vaikunta ekadashi to the next years vaikunta ekadashi.

********** 
Vaikuntha Ekadashi is an important ekadashi observance that falls on the ‘ekadashi’ (11th day) of the Shukla Paksha (the waxing phase of moon) in the month of ‘Pausha’ in the Hindu calendar. This date corresponds to the months of December to January in the Gregorian calendar. The day of Vaikuntha Ekadashi is auspicious for Vaishnavism followers as it is believed that ‘Vaikuntha Dwaram’ that is the gateway to Lord Vishnu’s abode, opens up on this day. Therefore it is believed that a person who keeps a sacred fast on Vaikuntha Ekadashi will definitely reach the ‘Vaikuntha’ and never has to face Yama Raja, the Lord of Death.

Hindu devotees observe Vaikuntha Ekadashi with full enthusiasm and zeal all across the country. In the southern states of India, this ekadashi is often known as ‘Mukkoti Ekadashi’ and is celebrated in the month of ‘Margazhi’ in the Tamilian calendar. In Kerala, Vaikuntha Ekadashi is celebrated as ‘Swargavathil Ekadashi’. On this day special prayers, discourses, speeches and yagnas are organized at the temple of Lord Vishnu, in different parts of the world. In India, the celebrations in the temples of ‘Tirumala Venkateswar Temple’ at Tirupati, the ‘Mahalakshmi Temple’ at Gubbi , the ‘Sri Ranganathaswamy Temple’ at Srirangam and ‘Rajagopalaswamy Temple’ at Mannargudi is very renowned. The festivities are very grandeur particularly in South Indian temples that are dedicated to Lord Vishnu.


********


Pushya Shukla Ekadashi

Ekadashi fasting story - Putrada Ekadashi (Pausha-Shukla Ekadasi). The pious and saintly Yudhishthira Maharaj said, "Oh Lord, please be merciful to me and explain to me the details of the Ekadasi that occurs in the light fortnight (Shukla or Gaura paksha) of this month. What is its name, and what Deity is to be worshiped on that sacred day? Oh Purushottama, Oh Hrishikesha, please also tell me how You can be pleased on this day?" 

Lord Shri Krishna then replied, "Oh saintly king, for the benefit of all humanity I shall now tell you how to observe fasting on the Pausha-shukla Ekadashi.

As previously explained, everyone should observe the rules and regulations of the Ekadashi vrata, to the very best of their ability. This injunction also applies to the Ekaadasi named Putradaa, which destroys all sins and elevates one to the spiritual abode. 

The Supreme Personality of Godhead Shri Narayana, the original personality, is the worshipable Deity of the Ekaadasi, and for His faithful devotees He happily fulfills all desires and awards full perfection.Thus among all the animate and inanimate beings in the three worlds(lower, middle and higher planetary systems), there is no better personality than Lord Narayana. Oh King, now I shall narate to you the history of Putradaa Ekaadasi, which removes all kinds of sins and makes one famous and learned. 

There was once a kingdom named Bhadraavati, which was ruled by King Suketumaan. His queen was the famous Shaibyaa. Because he had no son, he spent a long time in anxiety, thinking, "If I have no son, who will carry on my dynasty?" In this way the king meditated in a religious attitude for a very long time, thinking, "Where should I go? What should Ido? How can I get a pious son (putra)?" In this way King Suketumaan could find no happiness any where in his kingdom, even in his own palace, and soon he was spending more and more time inside his wife's palace, gloomily thinking only of how he could get a son. Thus both King Suketumaan and Queen Shaibyaa were in great distress. Even when they offered tarpana (oblations of water to their forefathers), their mutual misery made them think that it was as undrinkable as boiling water. They thus thought that they would have no descendants to offer tarpana to them when they died and thus become lost souls (ghosts). The king and queen were especially upset to learn that their forefathers were worried that soon there would be no one to offer them tarpana also.

After learning of their forefather's unhappiness, the king and queen became more and more miserable, and neither ministers, nor friends, nor even loved ones could cheer them up. To the king, his elephants and horses and infantry were no solace, and at last he became practically inert and helpless.

The king thought to himself, "It is said that without a son, marriage is wasted. Indeed, for a family man with no son, both his heart and his splendid house remain vacant and miserable.Bereft of a son, a man cannot liquidate the debts that he owes his forefathers, the demigods (devas) and to other human beings. Therefore every married man should endeavor to beget a son; thus he will become famous within this world and at last attain the auspicious celestial realms. A son is proof of the pious activities a man performed in his past one hundred lifetimes, and such a person achieves a long duration of life in this world, along with good health and great wealth. Possessing sons and grandsons in this lifetime proves that one has worshiped Lord Vishnu, the Supreme Personality of Godhead, in the past. The great blessing of sons, wealth, and sharp intelligence can be achieved only by worshiping the Supreme Lord, Shri Krishna. That is my opinion."

Thinking thus, the king had no peace. He remained in anxiety day and night, from morning to evening, and from the time he lay down to sleep at night until the sun rose in the morning, his dreams were equally full of great anxiety. Suffering such constant anxiety and apprehension, King Suketumaan decided to end his misery by committing suicide. But he realized that suicide throws a person into hellish conditions of rebirth, and so he abandoned that idea. Seeing that he was gradually destroying himself by his all consuming anxiety over the lack of a son, the king at last mounted his horse and left for the dense forest alone. No one, not even the priests and brahmins of the palace, knew where he had gone.

In that forest, which was filled with deer and birds and other animals, King Suketumaan wandered aimlessly.He was tormented by hunger and thirst also. He thought, "What sinful deed could possibly have done so that I am now forced to suffer like this, with my throat parched and burning, and my stomach empty and rumbling? I have pleased the devas (demigods) with numerous fire sacrifices and abundant devotional worship. I have given many gifts and delicious sweets in charity to all the worthy brahmins too. And I have taken care of my subjects as though they were my very own children. Why then am I suffering so? What unknown sins have come to bear fruit and torment me in this dreadful way?" 

Absorbed in these thoughts, King Suketumaan struggled forward, and eventually, due to his pious credits, he came upon a beautiful lotus bearing pond that resembled the famous Lake Manasarovar. It was filled with aquatics, including crocodiles and many varieties of fish, and graced with varieties of lilies and lotuses. The beautiful lotuses had opened to the Sun, and swans, cranes and ducks swam happily in its waters. Nearby were many attractive ashramas, where there resided many saints and sages who could fulfill the desires of anyone. Indeed, they wished everyone well. When the king saw all this, his right arm and right eye began to quiver, a sakuna sign (for a male) that something auspicious was about to happen. As the king dismounted his horse and stood before the sages, who sat on the shore of the pond, he saw that they were chanting the holy names of God on japa beads.The king paid his obeisances and, joining his palms, addressed them with glorified praises. Observing the respect the king offered them, the sages said, "We are very pleased with you, Oh king. Kindly tell us why you have come here. What is on your mind? Please inform us what is your heart's desire." 

The king replied, "Oh great sages, who are you? What are your names, surely your presence reveals that you are auspicious saints? Why have you come to this beautiful place? Please tell me everything." 

The sages replied,"Oh king, we are known as the ten Vishvadevas (the sons of Vishva;Vasu, Satya, Kratu, Daksha, Kaala, Kaama, Dhriti, Pururavaa, Maadrava and Kuru). We have come here to this very lovely pond to bathe. The month of Magha (Madhava mase) will soon be here in five days (from the Magh nakshatra), and today is the famous Putradaa Ekadashi. One who desires a son should strictly observe this particular Ekadashi". The king said, "I have tried so hard to havea son. If you great sages are pleased with me, kindly grant the boon of having a good son (putra)." The very meaning of Putradaa, the sages replied, "…is giver of a putra, pious son. So please observe a complete fast on this Ekadashi day. If you do so, then by our blessing and by the mercy of Lord Shri Keshav invested inus - surely you will obtain a son." On the advice of the Vishvadevas, the king observed the auspicious fast day of Putradaa Ekadashi according to the established rules and regulations, and on the Dvasdasi, after breaking his fast, he paid obeisances again and again to all of them. Soon after Suketumaan returned to his palace and united with his queen. Queen Shaibya immediately became pregnant, and exactly as the Vishvadevas had predicted, a bright faced, beautiful son was born to them. In due course of time he became famous as an heroic prince, and the king gladly pleased his noble son by making him his successor. The son of Suketumaan took care of his subjects very conscientiously, just as if they were his own children. 

In conclusion, Oh Yudhishthira, one who wises to fulfill his desires should strictly observe Putradaa Ekadashi. While on this planet, one who strictly observes this Ekadashi will surely obtain a son, and after death he will achieve liberation. Anyone who even reads or hears the glories of Putradaa Ekadashi obtains the merit earned by performing an horse sacrifice. It is to benefit all humanity that I have explained all this to you." 

Thus ends the narration of the glories of Pausha-Shukla Ekaadasii, or Putradaa Ekaadasii, from the Bhavishya Purana of Ved Vyaasadeva.

********


Vaikunta Ekadashi  or Mokshada Ekaadasi or Mukkoti Ekadsahi

Ekaadasi that occurs in sukla paksha (bright fortnight) of the lunar Month either Margasira maasa or Pushya maasa coinciding with sacred solar month Dhanurmasa is reckoned as Vaikunta Ekaadasi.

If it occurs in Margasira maasa it is also known as Mokshada Ekaadasi (capable of bestowing salvation) and if it occurs in Pushya maasa it is also called as Puthrada Ekaadasi (capable of bestowing progeny).

Though all Ekaadasis' are equal in merits, Vaikunta Ekaadasi has attained lot of prominence in terms of spirituality as it occurs during Dhanurmasa before the onset of Uttaraayana.

VaiKuNta (muKkoTi) eKaAdAsi.....

(significance of UTTARA-dwAaRa dArsHana)

Vaikunta EkaAdasi is also known as Mukkoti Ekaadasi. Dwaadasi thithi following Vaikunta Ekaadasi is called Mukkoti Dwaadasi.

Uttara means north and dwaara means the gate or opening.

Like we have geographical directions (North, South, East, & West) to the world, we also have similar directions to our body.

North is towards our head, south is towards our feet, front portion is east and back portion is west.

On top of the head (skull) we have a hole called Brahma Randhra (Sahasraara Chakra) towards the Northern direction which is not visible. Since it is in the northern direction it is called Northern gate of the human body.

It is said that one should visualize the image of God through the route of... Ida; Pingala Naadi (which run through left and right nostrils) and Sushumna Naadi (running through centre of the nose); concentrating at midpoint of the eyebrows called Jnaana Nethra where Aajna chakra is located; take it further upwards to the centre of the head where Sahasraara chakra is located and have darshan of the God through the door that gets opened Brahma Randhra when we meditate.  This is how one should visualize God even during daily prayers or whenever one visits a temple.

Since it is through the route of the confluence of three naadis (Ida, Pingala and Sushumna) taken further north towards the Sahasraara Chakra it is called Mukkoti.  Koti also means an angle, a knot, an edge and Mu means tying or binding.

Having darshana of the Lord from an angle where the three Naadi’s meet is spiritually known as Uttara dwaara darshana and the day is known as Mukkoti Ekaadasi.

There are fourteen lokaas (worlds) in this Universe, seven above (including Earth) and seven below.  Above the Earth are called Uurdhwa Lokaas which are in the Northern direction and Vaikunta is one among them in the Northern direction.

Darshan of the lord of Vaikunta (which is in the northern direction) Lord Vishnu on this day which is nearer to Uttaraayana the most auspicious time also catches significance for Uttara dwaara darshana.

On this most sacred day of Mukkoti Ekaadasi one should have darshan of the Lord in this form and to give significance to this concept perhaps all temples provide darshan of the Lord on this day through the northern entrance that is popularly known as Uttara dwaara darshana.

Bhagawad Darshana is always auspcious/subha, paapa-haaraka, it should always be UtTara-DwaAra Darshana, that need not be on Mukkoti Ekaadasi alone.

It is believed that on this sacred day of Mukkoti Ekaadasi, BrahmaAdi Devatas will have darshana of Lord Vishnu at His abode Vaikunta during Arunodaya kaala.

Mukkoti Ekaadasi that occurs during Dhanur Maasa also signifies worshiping of Lord Vishnu during Arunodayakaala around which time DEvatas also worship and have darshan of the Supreme God Sri Hari Sarvottama - Lord Vishnu.

How to reckon Vaikunta Ekaadasi?

Ekaadasi that occurs in sukla paksha (bright fortnight) of the lunar Month either Margasira maasa or Pushya maasa coinciding with sacred solar month Dhanurmasa is reckoned as Vaikunta Ekaadasi.

If it occurs in Margasira maasam it is also known as Mokshada Ekaadasi (capable of bestowing salvation) and if it occurs in Pushya maasam it is also called as Puthrada Ekaadasi (capable of bestowing progeny);

Though all Ekaadasis' are equal in merits, Vaikunta Ekaadasi has attained lot of prominence in terms of spirituality as it occurs during Dhanurmasa before the onset of Uttaraayana.
Hari SArvottama - Vaayu Jeevottama
Sri GuruRaajoVijayate
***********


Vaikunta Ekadashi 
by Chandra Shekar G V

Among all the Ekadashis we observe through out the year, Vaikunta Ekadashi which we celebrate today is most auspicious since this day falls in the Solar month of Dhanurmasa.. To day is Shukla Paksha ekadashi in Margashira Maasa.This is also known as Mukkoti Ekadashi.It is the firm belief of the observers of this Ekadashi that, the doors of the Vaikunta, the abode of the Lord Vishnu will be opened.To facilitate the devotees to pass through the gates of the Vaikunta Dhwara, Every temple across the state will erect Vaikunta Dhwara where the presiding deity is Lord Venkateswara, so as to pass through the gate.On this day, the deity will be decorated with the flowers and different colored lights to have the Darshan of the Lord to the devotees.This is a special day in Thirupathi Tirumala Devasthanam. Thousands of devotees will throng the place to pass through this Vaikunta Dwara which will be feast for the eyes who visit the place on this occasion and feel happy to have the blessings of the Lord. This day is also important in srirragam and srirangapatna near Mandya as the presiding deity is Lord Sri Ranganatha swamy. Devotees as usual will strictly observe Upavasa Vratham with out taking any food all through out the day. The devotees will get up early in the morning having their bath and other routine rituals at their homes and visit the temple of their choice where Vaikunta Dwara is erected and pray the God with utmost devotion to have the blessings of the Lord. The entire night will be spent either in attending to Hari katha or reciting the Hari Kirthanas in praise of the Lord Vishnu.

Next day is Dwadashi when they have to break their Upavasa Vratha.This is called Parana.Ekadashi parana has to be done only after the sun rise unless dwadashi expires before the Sun rise.Parana shall not be done during Hari Vasara.Hari vasara means one forth of the duration of the Dwadashi.Hence the most suitable time to break upavasam is Pratah Kaala after the sun rise.

Some times it so happens that, Ekadashi is required to be observed for two days. It is suggested in the scriptures that, on such occasion fasting may be observed on the first day.

Let us observe this day with all our devotion and seek the blessings of the Lord to attain Moksha/salvation.
***
.
ಏಳು ಜನ್ಮಗಳ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನವೇ ವೈಕುಂಠ ಏಕಾದಶಿ. ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂತಲೂ ಕರೆಯುವರು. ಈ ದಿನ ದೇವಾಲಯದ ಉತ್ತರ ದ್ವಾರದಲ್ಲಿ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸುತ್ತಾರೆ. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಧನುರ್ಮಾಸದ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ. 
ಸೂರ್ಯನು ಧನಸ್ಸು ರಾಶಿ ಪ್ರವೇಶ ಮಾಡಿ ಮಕರ ಸಂಕ್ರಮಣದವರೆಗೂ ಈ ರಾಶಿಯಲ್ಲಿ ಇರುತ್ತಾನೆ.

ಗರುಡವಾಹನನಾದ ವಿಷ್ಣು ವೈಕುಂಠದಿಂದ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕದಲ್ಲಿ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದುದರಿಂದ ಈ ದಿನವನ್ನು ಮುಕ್ಕೋಟಿ ಏಕಾದಶಿ ಎನ್ನುವರು. ಈ ದಿನ ಉಪವಾಸವಿದ್ದು ವಿಷ್ಣುವಿನ ದರ್ಶನ ಮಾಡಬೇಕು. ಮಾಸದ ಏಕಾದಶಿಯ ದಿನ ಶ್ರೀಮನ್ನಾರಾಯಣನು ಯೋಗನಿದ್ರೆಯಿಂದ ಏಳುವನು. ಈ ದಿನ ವಿಷ್ಣು ದರ್ಶನ ಮಾತ್ರದಿಂದ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನಕ್ಕೆ ಅಷ್ಟು ಮಹತ್ವವಿದೆ. 

ಮಹಾವಿಷ್ಣುವು ಮುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನವೇ ಇದು. ಬಹಳ ದಿನಗಳವರೆಗೆ ಮುರ ಅಕ್ಕಿಯಲ್ಲಿ ಬಚ್ಚಿಟ್ಟುಕೊಂಡಿದ್ದ. ಅದಕ್ಕಾಗಿ ಈ ದಿನ ಅಕ್ಕಿ ಸೇವೆನೆ ಮಾಡಬಾರದು. ಏಕಾದಶಿ ದೇವಿಯನ್ನು ಉಪವಾಸದಿಂದ ದರ್ಶನದಿಂದ ಪೂಜಿಸಿ ಪಾಪ ಪರಿಹಾರ ಮಾಡಿಕೊಳ್ಳಬೇಕು ಐದು ಜ್ಞಾನೇಂದ್ರಿಯಗಳು ಐದು ಕರ್ಮೇಂದ್ರಿಯಗಳು ಮತ್ತು ಮನಸ್ಸು ಒಟ್ಟು 11- ಹನ್ನೊಂದು ಇಂದ್ರಿಯಗಳನ್ನು ನಿಗ್ರಹ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು.

ಅಮೃತ ಮತ್ತು ಹಾಲಾಹಲ ಉದ್ಭವಿಸಿದ ದಿನವಿದು. ಶಿವ ನೀಲಕಂಠನಾದ ದಿನ. ಈ ದಿನ ದೇವರ ದರ್ಶನ ಮಾಡಿ ಹರಿ ನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು. ತುಳಸಿ ಎಲೆ ಅರ್ಪಿಸಬೇಕು. ಇದರಿಂದ ಮೋಕ್ಷ ಪ್ರಾಪ್ತಿ ಖಂಡಿತವಾಗಿ ಲಭಿಸುವುದು. ಪುಷ್ಯ ಮಾಸವನ್ನು ಶೂನ್ಯಮಾಸವೆಂತಲು ಕರೆಯುವರು. ಈ ಸಮಯದಲ್ಲಿ ಯಾವುದೇ ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ. ಕಾರಣ ಇಲ್ಲಿ ಪ್ರತಿಫಲ ಶೂನ್ಯ. ಆದ್ದರಿಂದ ಈ ಪೂರ್ತಿ ಮಾಸವನ್ನು ವಿಷ್ಣುವನ್ನು ಆರಾಧಿಸುವುದರ ಮೂಲಕ ವಿಷ್ಣುವಿಗೆ ಅರ್ಪಣೆ ಮಾಡಬೇಕು.
***

ವೈಕುಂಠ ಏಕಾದಶಿ - by narahari sumadhwa

ವೈಕುಂಠ ಏಕಾದಶಿ ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ.  ಸಾಮಾನ್ಯವಾಗಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲೇ ಧನುರ್ಮಾಸ ಆಚರಿಸುವುದರಿಂದ ಆ ಸಮಯದಲ್ಲಿ ಯಾವ ಶುಕ್ಲ ಪಕ್ಷದಲ್ಲಿ ಏಕಾದಶಿ ಬರುವುದೋ ಅಂದೇ ಆಚರಿಸಲಾಗುತ್ತದೆ.  

ಅಂದು ವೈಕುಂಠದ ಉತ್ತರ ಬಾಗಿಲ ಮೂಲಕ ನಾರಾಯಣ ದೇವರು ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬುದು ಪ್ರತೀತಿ. ಅದೇ ಕಾರಣಕ್ಕೆ ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠ ದ್ವಾರ ರೂಪಿಸಿ, ಭಕ್ತರಿಗೆ ಪ್ರವೇಶ ಕಲ್ಪಿಸಿರುತ್ತಾರೆ.  

ಏಕಾದಶಿಗೆ ಸಂಬಂಧಿಸಿದ ಕೃಷ್ಣಕಥೆ ಭಾಗವತದಲ್ಲಿ ಬಂದಿದೆ

ನಂದಗೋಪನು ಶ್ರೀಕೃಷ್ಣನ ಸನ್ನಿಧಾನದಲ್ಲಿ ಏಕಾದಶಿ ವ್ರತವನ್ನು ತಪ್ಪದೇ ಆಚರಿಸುತ್ತಿದ್ದ.  ಒಮ್ಮೆ ಏಕಾದಶಿ ವ್ರತಮಾಡಿ ಮರುದಿನ ಅಲ್ಪದ್ವಾದಶಿ ಇದ್ದುದರಿಂದ ನಸುಕಿನಲ್ಲಯೇ ಯಮುನಾ ನದಿಯಲ್ಲಿ ಸ್ನಾನಕ್ಕೆ ಇಳಿಯುತ್ತಾನೆ.

ಆ ಸಮಯ ಇನ್ನೂ ರಾಕ್ಷಸರ ಸಂಚಾರಕಾಲವಾಗಿತ್ತು.  ರಾತ್ರಿ ಕಾಲದಲ್ಲಿ ನದೀ ಸ್ನಾನಕ್ಕೆ ಹೋಗಬಾರದು.  ಆ ತಪ್ಪಿಗೆ ಶಿಕ್ಷೆಯಾಗಿ  ವರುಣನ ಭೃತ್ಯನೊಬ್ಬ ನಂದಗೋಪನನ್ನು ಎಳೆದುಕೊಂಡು ವರುಣ ಲೋಕಕ್ಕೆ ಬರುತ್ತಾನೆ. ಇತ್ತ ನಂದಗೋಪ ಸ್ನಾನಕ್ಕೆಂದು ನದಿಗೆ ಹೋದ ನಂದಗೋಪ ಬಾರದೇ ಇದ್ದುದರಿಂದ ಗೋಪಾಲಕರೆಲ್ಲ ಚಿಂತಿತರಾಗಿ ಕೃಷ್ಣ ಬಲರಾಮರಿಗೆ ತಿಳಿಸುತ್ತಾರೆ.

ಶ್ರೀಕೃಷ್ಣನು ವಿಷಯ ತಿಳಿದವನಾಗಿ ಎಲ್ಲ ಗೋಪಾಲಕರಿಗೆ ಅಭಯವನ್ನು ಕೊಡುತ್ತಾನೆ. ಕೃಷ್ಣಾವತಾರದಲ್ಲಿ ತಂದೆಯಾದ ನಂದಗೋಪನನ್ನು ಕರೆತರುವದಾಗಿ ಗೋಪಾಲಕರಿಗೆ ತಿಳಿಸಿ ವರುಣಲೋಕಕ್ಕೆ ಹೋಗುತ್ತಾನೆ.

ವರುಣಲೋಕದಲ್ಲಿ ಶ್ರೀಕೃಷ್ಣನನ್ನು ನೋಡಿದ ವರುಣ ಸಂತೋಷದಿಂದ ಬರಮಾಡಿಕೊಳ್ಳುತ್ತಾನೆ, ತನ್ನ ಸೇವಕನಿಂದ ಆದ ಪ್ರಮಾದವನ್ನು ಕ್ಷಮಿಸುವಂತೆ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾನೆ. ಶ್ರೀಕೃಷ್ಣ ವರುಣನಿಗೆ ಆಶೀರ್ವದಿಸಿ ನಂದಗೋಪನೊಂದಿಗೆ ಯಮುನಾತೀರಕ್ಕೆ ಬರುತ್ತಾನೆ.

ಗೋಪಾಲಕರಿಗೆ ನಂದಗೋಪನು ವರುಣಲೋಕದಲ್ಲಿ ಕಂಡ ಶ್ರೀಕೃಷ್ಣನ ನಿಜರೂಪವನ್ನು ಮತ್ತು ಅಲ್ಲಿ ದೊರೆತ ಭವ್ಯ ಸ್ವಾಗತವನ್ನು ವರ್ಣಿಸುತ್ತಿದ್ದರೆ ಎಲ್ಲ ಗೋಪಾಲಕರು ಭಕ್ತಿಯುಕ್ತರಾಗಿ ಆಲಿಸುತ್ತಿದ್ದರು. ನಮಗೆ ಶ್ರೀಮನ್ನಾರಾಯಣನ ದಿವ್ಯದರ್ಶನದ ಭಾಗ್ಯ ಇಲ್ಲವಾಯಿತಲ್ಲ ಎಂದು ಪರಿತಪಿಸುತ್ತಿದ್ದರು.

ಇದನ್ನು ತಿಳಿದ ಶ್ರೀಕೃಷ್ಣ ಎಲ್ಲ ಗೋಪಾಲಕರಿಗೆ ಯಮುನಾತೀರ್ಥದ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬರುವಂತೆ ತಿಳಿಸಿದ. ಗೋಪಾಲಕರು ಸ್ನಾನಮಾಡಿ ಬರುತ್ತಿದ್ದಂತೆ ವೈಕುಂಠಲೋಕ ಗೋಚರಿಸಿತು. ಶ್ರೀಕೃಷ್ಣನ ದಿವ್ಯವಾದ ಅನೇಕ ರೂಪಗಳು ಅವರಿಗೆ ಕಂಡವು.

ಮುಕ್ಕೋಟಿ ದ್ವಾದಶಿ ಅಂದರೇನು?  

ಧನುರ್ಮಾಸದಲ್ಲಿ ಬರುವ ಶುದ್ಧ ದ್ವಾದಶಿಯಂದು ಮುಕ್ಕೋಟಿ ದ್ವಾದಶಿ ಆಚರಿಸುತ್ತಾರೆ.  ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ.

ಯಾವ ಕ್ಷೇತ್ರದಲ್ಲಿ ವಿಷ್ಣುವಿನ ದರ್ಶನ ಮಾಡಿದರೆ ಶ್ರೇಷ್ಠ?
ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಮಹಾವಿಷ್ಣುವಿನ ದರ್ಶನ ಮಾಡುವುದು ಶ್ರೇಷ್ಠ. ಅವುಗಳು – ತಿರುಮಲ, ಶ್ರೀಮುಷ್ಣಂ, ತೋತಾದ್ರಿ, ಶ್ರೀರಂಗ, ಇತ್ಯಾದಿ. ಇಲ್ಲಿ ಮಾಡಲಾಗದಿದ್ದರೆ ವೈಷ್ಣವ ಸಂಪ್ರದಾಯದ ದೇವಸ್ಥಾನ ಗಳಲ್ಲಿ ಕೂಡ ಮಾಡಬಹುದು.


ಪ್ರಶ್ನೋತ್ತರ ವೈಕುಂಠ ಏಕಾದಶಿ ಬಗ್ಗೆ :

೧. ವೈಕುಂಠ ಏಕಾದಶಿ ಎಂದು ಆಚರಿಸಲಾಗುತ್ತದೆ?

ಉತ್ತರ – ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿ (ಸಾಮಾನ್ಯವಾಗಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ) ಆಚರಿಸಲಾಗುತ್ತದೆ.

೨. ವೈಕುಂಠ ಏಕಾದಶಿಯಂದು ಉಪವಾಸ ಮಾಡಬೇಕಾ ? ಫಲಾಹಾರ ಮಾಡಬಹುದಾ

ಉತ್ತರ – ಎಲ್ಲಾ ಏಕಾದಶಿಯಂದೂ ಉಪವಾಸ ಮಾಡಬೇಕು.
ಅಶಕ್ತರು, ಬಸುರಿ, ಬಾಣಂತಿಯರು, ಎಂಟು ವರ್ಷದ ಒಳಗಿನವರು ಮತ್ತು ಎಂಭತ್ತು ದಾಟಿದವರು ಫಲಾಹಾರ ಮಾಡಬಹುದು.  ಬೇರೆ ಕಾರಣಗಳಿಂದ ಉಪವಾಸ ಮಾಡಲಾಗದವರು ಹಣ್ಣೂ ಸಜ್ಜಿಗೆ  ಮುುಂತಾದ ಉಪ್ಪು ರಹಿತ ಪದಾರ್ಥ  ತಿನ್ನಬಾರದು.

೩. ಕೆಲವು ದೇವಸ್ಥಾನಗಳಲ್ಲಿ ನೈವೇದ್ಯ ರೂಪದಲ್ಲಿ ಪೊಂಗಲ್, ಹುಗ್ಗಿ, ಚಿತ್ರಾನ್ನ ಇತ್ಯಾದಿ ಕೊಡುತ್ತಾರಲ್ಲ ಅದನ್ನು ತಿನ್ನಬಹುದೆ?

ಉತ್ತರ – ತಿನ್ನಬಾರದು. ಉಪವಾಸ  ಮಾಡಬೇಕೆಂದು ಸಂಪ್ರದಾಯ ಇರುವಾಗ ಅದನ್ನು ಕೊಡುವುದೇ ತಪ್ಪು ಯಾವ ದೇವಸ್ಥಾನದಲ್ಲೂ ಕೊಡುವುದಿಲ್ಲ. ಅಕಸ್ಮಾತ್ ಅವರೇನಾದರೂ ಕೊಟ್ಟರೆ ಅವರಿಗೆ ಕೊಡಬಾರದೆಂದು ಹೇಳಿ.

೪. ಏಕಾದಶಿಯಂದು ತೀರ್ಥ ಎಷ್ಟು ಸಲ ತೆಗೆದುಕೊಳ್ಳಬೇಕು.

ಉತ್ತರ – ನಿರ್ಮಾಲ್ಯ ಒಂದು ಸಾರೀ ಮತ್ತು ತೀರ್ಥ ಒಂದು ಸಾರಿ ಮಾತ್ರ.

೫. ಮನೆಯಲ್ಲಿ ತೀರ್ಥ ತೆಗೆದುಕೊಂಡವರು ದೇವಸ್ಥಾನದಲ್ಲೂ ತೆಗೆದುಕೊಳ್ಳಬಹುದಾ?

ಉತ್ತರ – ಮನೆಯಲ್ಲಿ ತೆಗೆದುಕೊಂಡಿದ್ದರೆ ಏಕಾದಶಿಯಂದು ಅಲ್ಲಿ ಸ್ವೀಕರಿಸಬೇಡಿ.

೬. ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಏನು ಫಲ?

ಉತ್ತರ – ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಒಂದು ವರ್ಷದ ೨೪ ಏಕಾದಶಿ ಉಪವಾಸ ಮಾಡಿದ ಫಲ. ಪ್ರತಿ ಏಕಾದಶಿಯೂ ಉಪವಾಸ ಮಾಡಲೇಬೇಕು.

ದಿನತ್ರಯ ಎಂದರೇನು?
ಉತ್ತರ – ದಶಮಿ, ಏಕಾದಶಿ, ದ್ವಾದಶಿ ಈ ಮೂರೂ ದಿನಗಳನ್ನು ದಿನತ್ರಯವೆನ್ನುತ್ತಾರೆ.

ಏಕಾದಶಿ ಶ್ರಾದ್ಧ ಏಕಾದಶಿಯಂದೇ ಮಾಡಬಹುದಾ?
ಉತ್ತರ – ಏಕಾದಶಿಯಂದು ಶ್ರಾದ್ಧ ಮಾಡಬಾರದು. ದಶಮೀ ಅಥವಾ ದ್ವಾದಶಿ ಮಾಡಬೇಕು (ನಿಮ್ಮ ಮಠದ ಪಂಚಾಂಗದಲ್ಲಿ ಶ್ರಾದ್ಧ ಕಾಲಂ ನೋಡಿ)

ಏಕಾದಶಿ ಆಚರಿಸಿದ ಕೆಲವು ಭಾಗವತೋತ್ತಮರ ಹೆಸರು ತಿಳಿಸಿ.

ಉತ್ತರ – ಭೀಮಸೇನ, ದೂರ್ವಾಸರು, ಅಂಬರೀಷ, ರುಕ್ಮಾಂಗದ ಮುಂತಾದವರು.

ದೂರ್ವಾಸರು ಅಂಬರೀಷನಿಗಿಂತ ದೊಡ್ಡವರಾದರೂ ಅವರು ಏಕಾದಶಿಯ ಅನುಸರಿಸಲಿಲ್ಲವೇಕೆ?
ಉತ್ತರ – ದೂರ್ವಾಸರು ರುದ್ರದೇವರ ಅವತಾರ. ಪರಮ ವೈಷ್ಣವರು. ಆದರೆ ಅವರು ಅಂಬರೀಷನ ಏಕಾದಶಿ ಮಹತ್ವ ತಿಳಿಸಬೇಕಿತ್ತು. ಅದಕ್ಕೇ ಪರಮಾತ್ಮನ ಪ್ರೇರಣಾನುಸಾರ ಹಾಗೆ ಮಾಡಿರುತ್ತಾರೆ .

ಏಕಾದಶಿ ಅಭಿಮಾನಿ ದೇವತೆ ಯಾರು?
ದಶಮಿ, ಏಕಾದಶಿ ಮತ್ತು ದ್ವಾದಶಿಗೆ ಶ್ರೀಹರಿಯೇ ಅಭಿಮಾನಿ ದೇವತೆ.

ನರಹರಿ ಸುಮಧ್ವ
***
 
MISCELLANEOUS

ಏಕಾದಶೀ  

ಏಕಾದಶಿ ವೈಜ್ಞಾನಿಕ ಮಹತ್ವ

ಇಂದಿನ ದಿನದಲ್ಲಿ ದೇಹದ ಗಾತ್ರ ಕಡಿಮೆ ಮಾಡಲು, ಕೊಬ್ಬಿನಂಶ ಕಡಿಮೆ ಮಾಡಿಕೊಳ್ಳಲು ಡಯಟೀಷಿಯನ್ ಬಳಿ ಹೋಗಿ ಹಣ ಕೊಟ್ಟು ವಿಧ ವಿಧದ ಆಹಾರೋಪಾಯ, ವ್ಯಾಯಾಮ, ವಿಹಾರಗಳನ್ನು ಇಂದಿನವರು ಮಾಡುತ್ತಿದ್ದೇವೆ. ಧಾರ್ಮಿಕವಾಗಿ ವಿವಿಧ ಧರ್ಮಗಳು ಉಪವಾಸದ ಕುರಿತಾದ ಆಚರಣೆಗಳ ಬಗ್ಗೆ ತಿಳಿ ಹೇಳಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಹಿಂದೂಧರ್ಮದಲ್ಲಿ ಏಕಾದಶಿ ದಿನ ಉಪವಾಸದ ದಿನ.

ಏಕಾದಶಿಯ ಬಗ್ಗೆ ಕೇಳಿರದ, ನಮ್ಮ ಪುರಾಣ ಪರಂಪರೆಗಳ ಬಗೆಗೆ ಏನೂ ಗೊತ್ತಿರದ, ಜಗತ್ಪ್ರಸಿದ್ಧ ಶಸ್ತ್ರವೈದ್ಯ ಅಲೆಕ್ಲಿಸ್ ಕಾರೆಲ್ ತನ್ನ ಖ್ಯಾತ ಕೃತಿ ‘Man the Unknown (ಅವ್ಯಕ್ತ ಮಾನವ)’ದಲ್ಲಿ ಒಂದು ಮಾತು ಹೇಳುತ್ತಾನೆ: “ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ. ಉಪವಾಸವೇ ದೊಡ್ಡ ಚಿಕಿತ್ಸೆ.”

ಆಯುರ್ವೆದವೂ ಎಲ್ಲ ರೋಗಗಳಿಗೂ ಅಜೀರ್ಣವೆ ಕಾರಣ ಎನ್ನುತ್ತದೆ: “ಅಜೀರ್ಣಪ್ರಭಾವಾ ರೋಗಾಃ.”

ಹೊಟ್ಟೆಕೆಟ್ಟು ಜೀರ್ಣಶಕ್ತಿ ಕಡಿಮೆಯಾದಾಗ ಎಲ್ಲ ರೋಗಗಳೂ ದಾಳಿ ಮಾಡುತ್ತವೆ. ಉಂಡದ್ದೆಲ್ಲ ಕರಗುತ್ತಿರುವ ತನಕ ಯಾವ ರೋಗವೂ ಬರುವುದಿಲ್ಲ. ಹೊಟ್ಟೆ ಹಾಳಾದಾಗ ದೇಹವೂ ಹಾಳಾಗುತ್ತದೆ.

ಹೊಟ್ಟೆ ಹಾಳಾಗದಂತೆ ಕಾಪಾಡುವ ವಿಧಾನ ಅದಕ್ಕೆ ಪೂರ್ಣ ವಿಶ್ರಾಂತಿ. ಮಲಗಿದಾಗ ಕಣ್ಣಿಗೆ, ಕಿವಿಗೆ, ಇತರ ಇಂದ್ರಿಯಗಳಿಗೆ ವಿಶ್ರಾಂತಿ. ಬೆಳಗ್ಗಿನಿಂದ ರಾತ್ರಿಯ ತನಕವೂ ತಿನ್ನುತ್ತಲೇ ಇದ್ದರೆ, ತಿಂದದ್ದನ್ನು ಬೆಳಗಿನ ತನಕ ಜೀರ್ಣಿಸಿಕೊಳ್ಳಲೂ ಅವಕಾಶ ನೀಡದೆ ಇದ್ದರೆ ಪಚನೆಂದ್ರಿಯಕ್ಕೆ ವಿಶ್ರಾಂತಿಯೇ ಇಲ್ಲ. ಅದು ಸೋತು ಕೈಕಟ್ಟಿ ಕೂತಿತು ಎಂದರೆ ಅಜೀರ್ಣ. ಹಾಗಾಗಿ 15ದಿನಗಳಿಗೊಮ್ಮೆ 24 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ದೊರಕಿತೆಂದರೆ ಈ ಪಚನೆಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ.

ಇದು ಅಲೆಕ್ಸಿಸ್ ಕಾರೆಲ್ ಹೇಳಿದ ಮಾತು. ನಮ್ಮ ಪ್ರಾಚೀನ ಶಾಸ್ತ್ರಕಾರರೂ ಇದೇ ಮಾತನ್ನು ಹೇಳಿದರು. ಅಲೆಕ್ಸಿಸ್ ಕಾರೆಲ್ ಇದನ್ನು ವೈಜ್ಞಾನಿಕವಾಗಿ ಬರೆದರೆ ಪ್ರಾಚೀನರು ಏಕೆ-ಏನು ಅನ್ನೋ ವಿವರ ನೀಡದೆ ವಿಧಿವಾಕ್ಯವಾಗಿ ಬರೆದರು. ಹೊಸ ಗಾಳಿ ಕಿವಿಯೊಳಗೆ ಹೊಕ್ಕ ಜನಕ್ಕೆ ಈ ಮಾತು ಪ್ರಿಯವಾಗಲಿಲ್ಲ. ಅದಕ್ಕೆಂದೆ ಕಾರೆಲ್ ಹೀಗೆ ಹೇಳುತ್ತಾನೆ: “ಜನರಿಗೆ ನಾಗರಿಕತೆಯ ಭ್ರಮೆ ಹತ್ತಿದೆ. ಹೀಗೆ ನಾಗರಿಕತೆಯ ಅಮಲು ಹತ್ತಿದ ಜನಕ್ಕೆ ಈ ಉಪವಾಸದ ಉಪದೇಶ ಹಿಡಿಸಲಿಕ್ಕಿಲ್ಲ. ನಾಗರಿಕತೆ ಜನಾಂಗವನ್ನು ಹಾಳುಗೆಡಹುತ್ತಿದೆ. ಅದರಿಂದ ಸಕಾರಣವಾಗಿ ಹೇಳಿದರೂ ಜನ ನಂಬುವುದು ಕಷ್ಟ.”

ಈ ಎಲ್ಲ ದೃಷ್ಟಿಯಿಂದ ಏಕಾದಶಿ ತುಂಬ ಮಹತ್ವದ ದಿನ. ಅಂದು ವಾತಾವರಣದಲ್ಲಿ ಕೂಡ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ. ಏಕಾದಶಿಯನ್ನು ‘ಹರಿದಿನ’ ಎಂದು ಕರೆಯುತ್ತಾರೆ. ಅಂದು ವೈಷ್ಣವೀಶಕ್ತಿ ಜಾಗೃತವಾಗಿ ಕೆಲಸ ಮಾಡುತ್ತದೆ ಎನ್ನುವುದು ತಾತ್ಪರ್ಯ.


ಏಕಾದಶಿ ದಿನ ಆಹಾರತ್ಯಾಗ ಮಾಡಬೇಕು. ಆದರೆ ಮನಸ್ಸಿಗೆ ಹೆಚ್ಚು ಆಹಾರ ಕೊಡಬೇಕು. ಹೊಟ್ಟೆ ತುಂಬಿದರೆ ಬುದ್ಧಿ ಕೆಲಸ ಮಾಡೋದಿಲ್ಲ. ಹೀಗೆ ದೇಹ-ಬುದ್ಧಿ ಎರಡನ್ನೂ ಸಮತೋಲನದಲ್ಲಿಡಬೇಕಾಗುತ್ತದೆ. ಆಹಾರವನ್ನು ವರ್ಜಿಸುವುದು ಎಂದರೆ ಬುದ್ಧಿಯನ್ನು ಶುದ್ಧೀಕರಿಸುವುದು, ಚುರುಕುಗೊಳಿಸುವುದು ಎಂದೇ ಅರ್ಥ.
**********
                        ‌     ‌          ‌           ‌                                      ‌           ‌       ‌                                          
ಏಕಾದಶಿ ಉಪವಾಸ - ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ

ಆಧಾರ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ‘ಸಂಗ್ರಹ ಭಾಗವತ’
ಶ್ರೀ ಕ್ರಷ್ಣಾರ್ಪಣ ಮಸ್ತು
ಇಂದಿನ ದಿನದಲ್ಲಿ ದೇಹದ ಗಾತ್ರ ಕಡಿಮೆ ಮಾಡಲು, ಕೊಬ್ಬಿನಂಶ ಕಡಿಮೆ ಮಾಡಿಕೊಳ್ಳಲು ಡಯಟೀಷಿಯನ್ ಬಳಿ ಹೋಗಿ ಹಣ ಕೊಟ್ಟು ವಿಧ ವಿಧದ ಆಹಾರೋಪಾಯ, ವ್ಯಾಯಾಮ, ವಿಹಾರಗಳನ್ನು ಇಂದಿನವರು ಮಾಡುತ್ತಿದ್ದೇವೆ. ಧಾರ್ಮಿಕವಾಗಿ ವಿವಿಧ ಧರ್ಮಗಳು ಉಪವಾಸದ ಕುರಿತಾದ ಆಚರಣೆಗಳ ಬಗ್ಗೆ ತಿಳಿ ಹೇಳಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಹಿಂದೂಧರ್ಮದಲ್ಲಿ ಏಕಾದಶಿ ದಿನ ಉಪವಾಸದ ದಿನ.

ಏಕಾದಶಿಯ ಬಗ್ಗೆ ಕೇಳಿರದ, ನಮ್ಮ ಪುರಾಣ ಪರಂಪರೆಗಳ ಬಗೆಗೆ ಏನೂ ಗೊತ್ತಿರದ, ಜಗತ್ಪ್ರಸಿದ್ಧ ಶಸ್ತ್ರವೈದ್ಯ ಅಲೆಕ್ಲಿಸ್ ಕಾರೆಲ್ ತನ್ನ ಖ್ಯಾತಕೃತಿ ‘Man the Unknown (ಅವ್ಯಕ್ತ ಮಾನವ)’ದಲ್ಲಿ ಒಂದು ಮಾತು ಹೇಳುತ್ತಾನೆ: “ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ. ಉಪವಾಸವೇ ದೊಡ್ಡ ಚಿಕಿತ್ಸೆ.”

ನಮ್ಮ ಆಯುರ್ವೇದವೂ ಎಲ್ಲಾ ರೋಗಗಳಿಗೂ ಅಜೀರ್ಣವೇ ಕಾರಣ ಎನ್ನುತ್ತದೆ: “ಅಜೀರ್ಣಪ್ರಭಾವಾ ರೋಗಾಃ.”

ಹೊಟ್ಟೆಕೆಟ್ಟು ಜೀರ್ಣಶಕ್ತಿ ಕಡಿಮೆಯಾದಾಗ ಎಲ್ಲಾ ರೋಗಗಳೂ ದಾಳಿ ಮಾಡುತ್ತವೆ. ಉಂಡದ್ದೆಲ್ಲ ಕರಗುತ್ತಿರುವ ತನಕ ಯಾವ ರೋಗವೂ ಬರುವುದಿಲ್ಲ. ಹೊಟ್ಟೆ ಹಾಳಾದಾಗ ದೇಹವೂ ಹಾಳಾಗುತ್ತದೆ.

ಹೊಟ್ಟೆ ಹಾಳಾಗದಂತೆ ಕಾಪಾಡುವ ವಿಧಾನ ಅದಕ್ಕೆ ಪೂರ್ಣ ವಿಶ್ರಾಂತಿ. ಮಲಗಿದಾಗ ಕಣ್ಣಿಗೆ, ಕಿವಿಗೆ, ಇತರ ಇಂದ್ರಿಯಗಳಿಗೆ ವಿಶ್ರಾಂತಿ. ಬೆಳಗ್ಗಿನಿಂದ ರಾತ್ರಿಯ ತನಕವೂ ತಿನ್ನುತ್ತಲೇ ಇದ್ದರೆ, ತಿಂದದ್ದನ್ನು ಬೆಳಗಿನ ತನಕ ಜೀರ್ಣಿಸಿಕೊಳ್ಳಲೂ ಅವಕಾಶ ನೀಡದೆ ಇದ್ದರೆ ಪಚನೆಂದ್ರಿಯಕ್ಕೆ ವಿಶ್ರಾಂತಿಯೇ ಇಲ್ಲ. ಅದು ಸೋತು ಕೈಕಟ್ಟಿ ಕೂತಿತು ಎಂದರೆ ಅಜೀರ್ಣ. ಹಾಗಾಗಿ 15 ದಿನಗಳಿಗೊಮ್ಮೆ 24 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ದೊರಕಿತೆಂದರೆ ಈ ಪಚನೇಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ.

ಇದು ಅಲೆಕ್ಸಿಸ್ ಕಾರೆಲ್ ಹೇಳಿದ ಮಾತು. ನಮ್ಮ ಪ್ರಾಚೀನ ಶಾಸ್ತ್ರಕಾರರೂ ಇದೇ ಮಾತನ್ನು ಹೇಳಿದರು. ಅಲೆಕ್ಸಿಸ್ ಕಾರೆಲ್ ಇದನ್ನು ವೈಜ್ಞಾನಿಕವಾಗಿ ಬರೆದರೆ ಪ್ರಾಚೀನರು ಏಕೆ-ಏನು ಎನ್ನುವ ವಿವರ ನೀಡದೆ ವಿಧಿವಾಕ್ಯವಾಗಿ ಬರೆದರು. ಹೊಸ ಗಾಳಿ ಕಿವಿಯೊಳಗೆ ಹೊಕ್ಕ ಜನಕ್ಕೆ ಈ ಮಾತು ಪ್ರಿಯವಾಗಲಿಲ್ಲ. ಅದಕ್ಕೆಂದೆ ಕಾರೆಲ್ ಹೀಗೆ ಹೇಳುತ್ತಾನೆ: “ಜನರಿಗೆ ನಾಗರಿಕತೆಯ ಭ್ರಮೆ ಹತ್ತಿದೆ. ಹೀಗೆ ನಾಗರಿಕತೆಯ ಅಮಲು ಹತ್ತಿದ ಜನಕ್ಕೆ ಈ ಉಪವಾಸದ ಉಪದೇಶ ಹಿಡಿಸಲಿಕ್ಕಿಲ್ಲ. ನಾಗರಿಕತೆ ಜನಾಂಗವನ್ನು ಹಾಳುಗೆಡಹುತ್ತಿದೆ. ಅದರಿಂದ ಸಕಾರಣವಾಗಿ ಹೇಳಿದರೂ ಜನ ನಂಬುವುದು ಕಷ್ಟ.”

ಈ ಎಲ್ಲಾ ದೃಷ್ಟಿಯಿಂದ ಏಕಾದಶಿ ತುಂಬ ಮಹತ್ವದ ದಿನ. ಅಂದು ವಾತಾವರಣದಲ್ಲಿ ಕೂಡ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ. ಏಕಾದಶಿಯನ್ನು ‘ಹರಿದಿನ’ ಎಂದು ಕರೆಯುತ್ತಾರೆ. ಅಂದು ವೈಷ್ಣವೀಶಕ್ತಿ ಜಾಗೃತವಾಗಿ ಕೆಲಸ ಮಾಡುತ್ತದೆ ಎನ್ನುವುದು ತಾತ್ಪರ್ಯ.

ಗ್ರಹಣ ಕಾಲದಲ್ಲೂ ಹೀಗಾಗುತ್ತದೆ. ಆ ಸಮಯದಲ್ಲಿ ಶರೀರಕ್ಕೆ ಮೈಲಿಗೆ ಆದರೂ ಬುದ್ಧಿಗೆ ಮಹಾಮಡಿ. ಆಗ ನಮ್ಮ ಮೆದುಳಿನಲ್ಲಿ ಒಂದು ವಿಶಿಷ್ಟವಾದ ಶಕ್ತಿ ಜಾಗೃತವಾಗುತ್ತದೆ.

ಏಕಾದಶಿ ದಿನ ಆಹಾರತ್ಯಾಗ ಮಾಡಬೇಕು. ಆದರೆ ಮನಸ್ಸಿಗೆ ಹೆಚ್ಚು ಆಹಾರ ಕೊಡಬೇಕು. ಹೊಟ್ಟೆ ತುಂಬಿದರೆ ಬುದ್ಧಿ ಕೆಲಸ ಮಾಡೋದಿಲ್ಲ. ಹೀಗೆ ದೇಹ-ಬುದ್ಧಿ ಎರಡನ್ನೂ ಸಮತೋಲನದಲ್ಲಿಡಬೇಕಾಗುತ್ತದೆ. ಆಹಾರವನ್ನು ವರ್ಜಿಸುವುದು ಎಂದರೆ ಬುದ್ಧಿಯನ್ನು ಶುದ್ಧೀಕರಿಸುವುದು, ಚುರುಕುಗೊಳಿಸುವುದು ಎಂದೇ ಅರ್ಥ.

ಪ್ರತಿಪಕ್ಷದ ಹನ್ನೊಂದನೆಯ ದಿನ ಇಂಥ ಉಪವಾಸವನ್ನು ಆಚರಿಸುತ್ತಾರೆ. ಇಂಥ ಉಪವಾಸ ದೀಕ್ಷೆಯ ಮಹತ್ವದ ಬಗೆಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಅಂಬರೀಷ ಇಂಥ ಏಕಾದಶಿ ದೀಕ್ಷಿತರಲ್ಲಿ ಒಬ್ಬ.

ಏಕಾದಶಿಯ ದಿನ ಶುದ್ಧನಾಗಿ ನಿರಾಹಾರದಿಂದಿದ್ದು, ದ್ವಾದಶಿಯಂದು ಬೆಳಿಗ್ಗೆದ್ದು ದೇವರ ಪೂಜೆ ಮಾಡಿ ತೀರ್ಥ ಸ್ವೀಕರಿಸಿ ಆಹಾರ ಸೇವಿಸುವುದು ಅವನ ದೀಕ್ಷೆ.

ಇಂಥ ಒಂದು ಘಟನೆಯ ಮೂಲಕ ಅಂಬರೀಷನ ಉಪವಾಸದ ಮಹತ್ವ, ಭಗವದ್ ಭಕ್ತಿಯ ಮಹತ್ವ ಇವೆರಡನ್ನೂ ಶುಕಾಚಾರ್ಯರು ಭಾಗವತದಲ್ಲಿ ವಿವರಿಸಿದ್ದಾರೆ.

ಒಂದು ಏಕಾದಶಿ. ಅಂಬರೀಷ ಉಪವಾಸವನ್ನಾಚರಿಸಿ ಮರುದಿನ ಬೆಳಗ್ಗೆದ್ದು ಮುಹೂರ್ತ ದಾಟುವುದರೊಳಗೆ ಪಾರಣೆ ಮಾಡಬೇಕು ಎನ್ನುವಷ್ಟರಲ್ಲಿ ದೂರ್ವಾಸರು ಅತ್ತ ಬಂದರು. ಅಂಬರೀಷ ಅವರನ್ನೂ ಪಾರಣೆಗೆ ಆಹ್ವಾನಿಸಿದ. ದುರ್ವಾಸರು ಮಹಾ ಕೋಪಿಷ್ಠ. “ಸ್ವಲ್ಪ ಕಾದಿರು, ಸ್ನಾನ ಮಾಡಿ ಬರುತ್ತೇನೆ,” ಎಂದು ಹೊರಟು ಹೋದರು.

ದುರ್ವಾಸರು ಇವನ ವ್ರತ ನಿಷ್ಠೆಯನ್ನು ಪರೀಕ್ಷಿಸಲೆಂದೇ ಬಂದವರು. ಅವರ ಕೋಪವೂ ಒಂದು ಅನುಗ್ರಹವೇ. ಮಕ್ಕಳು, ತಪ್ಪು ಮಾಡಿದಾಗ ದೊಡ್ಡವರು ಶಿಕ್ಷೆ ಕೊಡುವುದಿದೆ. ಅದು ಶಿಕ್ಷೆ ಅಲ್ಲ; ಶಿಕ್ಷಣ. ದುರ್ವಾಸರದೂ ಹಾಗೆಯೇ. ಭಕ್ತರ ಶಿಕ್ಷಣಕ್ಕಾಗಿ ಅವರದೊಂದು ನಾಟಕ.

ಇನ್ನೇನು ಪಾರಣದ ಮುಹೂರ್ತ ದಾಟುತ್ತದೆ. ಆದರೆ ದುರ್ವಾಸರ ಸುಳಿವಿಲ್ಲ. ಬಂದ ಅತಿಥಿಗೆ ಅಪಚಾರವಾಗಬಾರದು; ತನ್ನ ವ್ರತಕ್ಕೂ ಭಂಗ ಬರಬಾರದು. ಹೇಗೆ ನಡೆದುಕೊಳ್ಳಬೇಕು ಎನ್ನುವುದು ಸಮಸ್ಯೆ. ಅಂಬರೀಷನಿಗೆ ಉಭಯಸಂಕಟ.

ಹೊತ್ತು ಮೀರಿದರೆ ಏನು ಮಾಡುವುದು? ವ್ರತಲೋಪವಾಗಬಾರದಲ್ಲ? ಅಂಬರೀಷ ಈ ಸಮಸ್ಯೆಗೆ ಒಂದು ತಾತ್ಕಾಲಿಕ ಪರಿಹಾರ ಕೊಂಡುಕೊಂಡ. ಪಾರಣದ ಸಮಯ ಮೀರುವ ಮುನ್ನ ಊಟದ ಬದಲು ನೀರು ಕುಡಿದು ಬಿಡುವುದು. ನೀರು ಕುಡಿದರೆ ಊಟದ ಫಲವೂ ಆಯಿತು. ಉಪವಾಸದ ಫಲವೂ ಆಯಿತು. ಶಾಸ್ತ್ರಕಾರರು ನೀರನ್ನು ಆಹಾರದ ಪ್ರತಿನಿಧಿಯೂ ಹೌದು, ಉಪವಾಸದ ಪ್ರತಿನಿಧಿಯೂ ಹೌದು ಎಂದು ಒಪ್ಪಿಕೊಂಡಿದ್ದಾರೆ. ನಮ್ಮ ವೈದ್ಯ ಪದ್ಧತಿಗಳೂ ಇದನ್ನು ಅನುಮೋದಿಸಿವೆ.

ಹೀಗೆ ಯೋಚಿಸಿ ಅಂಬರೀಷ ಮಹಾರಾಜ ನೀರು ಕುಡಿದ. ಅಷ್ಟರಲ್ಲಿ ದುರ್ವಾಸರು ಬಂದರು. ವಿಷಯ ತಿಳಿದು ಸಿಟ್ಟುಗೊಂಡರು “ನೀನು ಅತಿಥಿಗೆ ಅಪಚಾರ ಮಾಡಿದ್ದೀಯ, ನೀನು ಮೋಸಗಾರ, ನಿನಗೆ ಶಾಪ ಕೊಡುತ್ತೇನೆ,” ಎಂದು ಗುಡುಗಿದರು. ಕೃತ್ಯೆಯನ್ನು ಅಭಿಮಂತ್ರಿಸಿ ಅವನ ಮೇಲೆ ಛೂಬಿಟ್ಟರು. ಅಂಬರೀಷ ಮಹಾಭಗವದ್ ಭಕ್ತ. ಆತ ಭಗವಂತನಿಗೆ ಮೊರೆಹೊಕ್ಕ. ವಿಷ್ಣು ತನ್ನ ಭಕ್ತನ ರಕ್ಷಣೆಗಾಗಿ ಚಕ್ರವನ್ನು ಕಳುಹಿಸಿದ.

ದುರ್ವಾಸರ ಮಂತ್ರ ತಿರುಮಂತ್ರವಾಯಿತು. ವಿಷ್ಣುಚಕ್ರಕ್ಕೆ ಹೆದರಿದ ಕೃತ್ಯೆ ದುರ್ವಾಸರನ್ನೇ ಬೆನ್ನಟ್ಟಿತು. ಇದರಿಂದ ತಪ್ಪಿಸಿಕೊಳ್ಳಲು ದುರ್ವಾಸರು ಬ್ರಹ್ಮನಿಗೆ ಶರಣಾದರು. ತನ್ನನ್ನು ವಿಷ್ಣುಚಕ್ರದಿಂದ ಪಾರುಮಾಡಬೇಕೆಂದು ಪ್ರಾರ್ಥಿಸಿದರು. ಆಗ ಬ್ರಹ್ಮದೇವ ಹೇಳಿದ ಮಾತು: “ನಾರಾಯಣ ಜಗತ್ತಿನ ನಿಯಮಾಶಕ್ತಿ. ಅವನ ಆಜ್ಞೆಯಂತೆ ಚಲಿಸುವ ಭಕ್ತರು ನಾವು. ವಿಷ್ಣುಭಕ್ತನನ್ನು ತಡೆಯುವ ಶಕ್ತಿ ನಮಗಿಲ್ಲ. ನಾನು, ರುದ್ರಾದಿ ಸಮಸ್ತ ದೇವತೆಗಳು ಅವನ ಆಜ್ಞೆಯನ್ನು ತಲೆಯಲ್ಲಿ ಹೊತ್ತು ಬದುಕುವವರು. ಆ ಆಜ್ಞೆಯನ್ನು ಮೀರಿ ನಡೆಯುವ ಶಕ್ತಿ ಯಾರಿಗೂ ಇಲ್ಲ.”

ದುರ್ವಾಸರು ರುದ್ರನಲ್ಲಿಗೆ ಹೋಗಿ ಬೇಡಿದರು. ವಾಸ್ತವವಾಗಿ ದುರ್ವಾಸರು ಸ್ವಯಂ ರುದ್ರಾಂಶಸಂಭೂತರು. ಇದೆಲ್ಲ ಅಂಬರೀಷನ ಭಗವದ್ ಭಕ್ತಿಯ ಯೋಗ್ಯತೆಯ ಆಳವನ್ನು ಪರೀಕ್ಷಿಸಲು ದೊಡ್ಡವರು ಮಾಡಿದ ಒಂದು ನಾಟಕ. ಅದರಲ್ಲಿ ದುರ್ವಾಸರಿಗೆ ದ್ವಿಪಾತ್ರಾಭಿನಯ. ರುದ್ರದೇವರಿಂದಲೂ ನಿರಾಸೆಯ ಉತ್ತರವೆ ಬಂತು, “ಇಂಥ ಬ್ರಹ್ಮಾಂಡಗಳು ಎಷ್ಟೋ ಬಾರಿ ಸೃಷ್ಠಿಯಾಗಿವೆ; ನಾಶವಾಗಿವೆ. ಬ್ರಹ್ಮಾಂಡದಲ್ಲಿ ನೂರಾರು ಬಾರಿ ಸತ್ತು ಹುಟ್ಟುವ ಜೀವಗಳು ನಾವು. ಭಗವಂತನ ಲೀಲಾನಾಟಕದಲ್ಲಿ ನಾವೂ ಚಿಕ್ಕ ಪಾತ್ರಧಾರಿಗಳು. ಅವನು ಸೂತ್ರಧಾರ. ಅವನ ಆಜ್ಞೆಯನ್ನು ಮೀರಿ ನಾವೇನೋ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿನಗೆ ರಕ್ಷೆ ಬೇಕಿದ್ದರೆ ವಿಷ್ಣುವಿಗೇ ಶರಣಾಗು. ಅವನು ನಿನ್ನನ್ನು ಕಾಪಾಡುತ್ತಾನೆ.”

ದುರ್ವಾಸರು ನೇರ ವಿಷ್ಣುವಿನ ಬಳಿಗೆ ಬಂದರು. “ನಿನ್ನ ಚಕ್ರದಿಂದ ನನ್ನನ್ನು ಪಾರುಮಾಡು,” ಎಂದು ಪ್ರಾರ್ಥಿಸಿಕೊಂಡರು. ಆಗ ವಿಷ್ಣು ಹೇಳಿದ: “ನನ್ನಿಂದಲೂ ಸಾಧ್ಯವಿಲ್ಲ. ಏಕೆಂದರೆ, ನಾನು ಭಕ್ತರ ಪರಾಧೀನ. ನಾನೂ ಅವರ ಮಾತನ್ನು ಮೀರಲಾರೆ. ನಾನೆಂದರೆ ಅವರಿಗೆ ಮೆಚ್ಚು. ಅವರೆಂದರೆ ನನಗೆ ಮೆಚ್ಚು. ನಮ್ಮಿಬ್ಬರ ಹೃದಯವೂ ಒಂದೇ. ಅಂಬರೀಷ ನನ್ನ ಮಹಾಭಕ್ತ. ನನ್ನನ್ನು ಬಿಟ್ಟು ಇನ್ನೊಬ್ಬರನ್ನು ಸ್ಮರಿಸಿದವನಲ್ಲ. ನಾನೂ ಅವನನ್ನು ಬಿಟ್ಟು ಕೊಡಲಾರೆ. ಭಕ್ತರ ಮೇಲೆ ನನಗೂ ಅಂಥ ಗೌರವ. ಅಂಬರೀಷ ಇನ್ನೊಬ್ಬನಿಗೆ ತಲೆಬಾಗಿದವನಲ್ಲ. ಆತನಲ್ಲಿಗೇ ಹೋಗಿ ಕ್ಷಮೆ ಯಾಚಿಸು.”

ದುರ್ವಾಸರು ಮರಳಿ ಅಂಬರೀಷನಲ್ಲಿಗೆ ಬರುತ್ತಾರೆ. “ಅಯ್ಯಾ, ನೀನು ಗೆದ್ದೆ. ನಾನೇ ಸೋತೆ. ತಪ್ಪಾಯಿತು,” ಎಂದು ಕೇಳಿಕೊಳ್ಳುತ್ತಾರೆ. ಅಂಬರೀಷನ ಪ್ರಾರ್ಥನೆಯಂತೆ ವಿಷ್ಣುಚಕ್ರ ಮರಳಿ ಹೋಗುತ್ತದೆ.

ಹೀಗೆ ದುರ್ವಾಸರ ಪ್ರಸಂಗದ ಏಕಾದಶಿಯ ಮಹತ್ವವನ್ನೂ ಭಗವದ್ ಭಕ್ತಿಯ ಮಹಿಮೆಯನ್ನೂ ಭಾಗವತ ವಿವರಿಸುತ್ತದೆ.
*************


info from madhwasaints.wordpress.com-->


Few have asked how to fast, what to eat and what not to eat on Ekadhasi days.

Hope this helps, 

On Dhashami, single time meals is taken, at night phalahara can be taken. But should not use onion and garlic on dhashami.

On Ekadhasi, the best way of fasting is not to have even a single drop of water.
If that is not possible, the next option can be water, fruits, fruit juices alone.
The next option can be fruits, fruit juices, water and milk. (Fruits and milk should not be taken simultaneously one after the other as it will be counted as having food)
– Many are having upma (without onion,garlic) milk, water and fruits.(Upma should not be done with rice flour, wheat flour can be used)

– Few have rotis and poori. But I dont advice that because they contain grains. If people are aged or have work and if they cant resist they are having rotis etc. But I was able to sustain very well with fruits and nuts once when I had work the whole day. So I hope everyone can do ekadhashi vratha either nirjala or at least with fruits… 

On Dwadhasi, one should break his fast after the sunrise,

Wake up early morning, finish nithya karma and pooja. Food should be cooked in madi and should be kept as neivedhya to Lord Sri Vishnu.
People who have salagraama in house will prepare salagraama theertha and will break fast with that.
People who dont have salagraama in house can take theertha which is used for abhisheka to Sri Vishnu paada or Sri Vishnu vigraha. 
By having the thulasi theertham (which is prepared with salagraama theertha) it means one is breaking the fast.
Then on can have the food which is kept as neivedhya to Lord which is known as Dwadhashi parane. Even on dwadhasi onion and garlic should be avoided.

REMEMBER :

1. NEVER CONSUME RICE, ONION, GARLIC, TOMATOES, DRUMSTICK ON EKADHASI.

2. Having thulasi theertham on ekadhashi is counted as having food, one should not have that.

Question: Can you eat potatoes, carrot and other root vegetables(like sweet potato, chamadumpa)?

Answer: Sorry, it should not be taken…

Question: It is said we should not sleep on ekadasi and dwadasi mornings.. ? please let me know

Answer: Yes  It is said so… Am not very sure on those reasons, but I have heard that if we sleep on dwadhasi morning (after parana till 1pm), the punyam we have earned will be taken by Mohini pishacha, as she had got some varam on this… On Ekadhasi, we should completely dedicate ourselves to Sri Hari. Our mind, body and soul should completely be concentrated on him and we should Hari smarane all the time. Thus we have told not to sleep on that day. But what can one do if he is completely tired??? But am very very sure that it not a sin to sleep on Ekadhasi and dwadhasi. But we should try our very best to be awake and do hari smarane. I do nirjala fasting on every ekadhasi and I can tell you that due to complete fasting I almost dont get sleep at night. As stomach is completely empty, it keeps us active. So please try your best to stay awake, if not possible you can do hari smarane all the time.. That’s very much possible.. I ahve heard one purandara dasaru’s song. If one does jagarne on ekadhasi night, the merits earned cannot be calculated even by chithragupta. Its such a great punya. And even Sri Prahaladha keeps watching and gives immense anugraha to one how does jagarne on ekadhasi night. Let us pray to him that we get sufficient energy and bhakthi to do jagarne and hari smarane completely on ekadhasi.. Thanks a lot for making me write this madam. OM SHREE RAGHAVENDRAYA NAMAHA!!!

Question: I am from the smarta community. I really admire Madhwas observance of Ekadashi and yours is amazing. I am influenced by ISKCON and have been observing Ekadashi sometimes nirjala sometimes with fruit and milk. Unfortunately I take a nap after parana because I get tired, and also office is there. Does it mean I got no Punya, quite upset to know this. thanks.

Answer: That’s very great sir… We may be any community, but Ekadhashi is common for all. I have heard a flautist, a musalman, who observes Ekadhashi fast very sincerely. And usually we should not sleep after having parana. The reason is Mohini pisasha has taken a vara that who ever sleeps immediately after having parana on dwadhashi, she will get the punya from us. So 4hours after eating we are told not to sleep. But if body does not cooperate, what can we do… But there is nothing like sin to sleep after parana sir. There is always merits for what is done.. Even the god know’s how we fast in devotion. I hope there may be some consideration. Please continue Ekadhasi vratha life long sir. That’s the greatest tool sir. Please spread the ekadhashi mahathmyam to ur friends and relatives also sir. Thank you. OM Shree Raghavendraya Namaha!!! end.
**********

೨೪ ಏಕಾದಶಿಳು 
ಈ ಹೆಸರುಗಳು ಪುರಾಣದಿಂದ ಪುರಾಣಕ್ಕೆ ಸ್ವಲ್ಪ ಭಿನ್ನವಾಗಿರುತ್ತವೆ.

೧) ಚೈತ್ರ ಶುಕ್ಲ ಏಕಾದಶಿ - ಕಾಮದಾ
 - ಕೋರಿಕೆಗಳನ್ನು ಪೂರೈಸುತ್ತದೆ.
೨) ಚೈತ್ರ ಬಹುಳ ಏಕಾದಶಿ - ವರೂಧಿನಿ - ಸಹಸ್ರ ಗೋದಾನ ಫಲವು ಲಭಿಸುತ್ತದೆ.
೩) ವೈಶಾಖ ಶುದ್ಧ ಏಕಾದಶಿ - ಮೋಹಿನಿ - ದರಿದ್ರನು ಧನವಂತನಾಗುತ್ತಾನೆ.
೪) ವೈಶಾಖ ಬಹುಳ ಏಕಾದಶಿ - ಅಪರಾ - ರಾಜ್ಯಪ್ರಾಪ್ತಿ
೫) ಜ್ಯೇಷ್ಠ ಶುಕ್ಲ ಏಕಾದಶಿ - ನಿರ್ಜಲ - ಆಹಾರ ಸಮೃದ್ಧಿ
೬) ಜ್ಯೇಷ್ಠ ಬಹುಳ ಏಕಾದಶಿ - ಯೋಗಿನಿ - ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)
೭) ಆಷಾಢ ಶುದ್ಧ ಏಕಾದಶಿ - ದೇವಶಯನಿ - ಸಂಪತ್ ಪ್ರಾಪ್ತಿ - ವಿಷ್ಣುವು ಯೋಗನಿದ್ರೆಗೆ ಜಾರುವ ದಿನ
೮) ಆಷಾಢ ಬಹುಳ ಏಕಾದಶಿ - ಕಾಮಿಕಾ - ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.
೯) ಶ್ರಾವಣ ಶುಕ್ಲ ಏಕಾದಶಿ - ಪುತ್ರದಾ - ಸತ್ ಸಂತಾನ ಪ್ರಾಪ್ತಿ
೧೦) ಶ್ರಾವಣ ಬಹುಳ ಏಕಾದಶಿ - ಅಜಾ - ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ
೧೧) ಭಾದ್ರಪದ ಶುದ್ಧ ಏಕಾದಶಿ - ಪರಿವರ್ತನ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) - ಯೋಗ ಸಿದ್ಧಿ
೧೨) ಭಾದ್ರಪದ ಬಹುಳ ಏಕಾದಶಿ - ಇಂದಿರಾ - ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.
೧೩) ಆಶ್ವಯುಜ ಶುಕ್ಲ ಏಕಾದಶಿ - ಪಾಪಾಂಕುಶ - ಪುಣ್ಯಪ್ರದವಾದುದು
೧೪) ಆಶ್ವಯುಜ ಬಹುಳ ಏಕಾದಶಿ - ರಮಾ - ಸ್ವರ್ಗಪ್ರಾಪ್ತಿ
೧೫) ಕಾರ್ತೀಕ ಶುಕ್ಲ ಏಕಾದಶಿ - ಪ್ರಬೋಧಿನಿ (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ
೧೬) ಕಾರ್ತೀಕ ಬಹುಳ ಏಕಾದಶಿ - ಉತ್ಪತ್ತಿ - ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)
೧೭) ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದಾ - ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)
೧೮) ಮಾರ್ಗಶಿರ ಬಹುಳ ಏಕಾದಶಿ - ವಿಮಲಾ (ಸಫಲಾ) - ಅಜ್ಞಾನ ನಿವೃತ್ತಿ
೧೯) ಪುಷ್ಯ ಶುಕ್ಲ ಏಕಾದಶಿ - ಪುತ್ರದಾ - ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)
*ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ ಮುಂಚೆಯೇ ಹೇಳಿದೆ.
೨೦) ಪುಷ್ಯ ಕೃಷ್ಣ ಏಕಾದಶಿ - ಕಲ್ಯಾಣೀ (ಷಟ್‌ತಿಲಾ) - ಶಾರೀರಿಕ ಬಾಧೆಗಳಿಂದ ಮುಕ್ತಿ
೨೧) ಮಾಘ ಶುಕ್ಲ ಏಕಾದಶಿ - ಕಾಮದಾ (ಜಯಾ) - ಶಾಪವಿಮುಕ್ತಿ
೨೨) ಮಾಘ ಕೃಷ್ಣ ಏಕಾದಶಿ - ವಿಜಯಾ - ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)
೨೩) ಫಾಲ್ಗುಣ ಶುಕ್ಲ ಏಕಾದಶಿ - ಆಮಲಕೀ - ಆರೋಗ್ಯ ಪ್ರಾಪ್ತಿ
೨೪) ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯಾ - ಪಾಪ ವಿಮುಕ್ತಿ
- ಕೃಷ್ಣಪ್ರಸನ್ನ ಆಚಾರ್ ದಾವಣಗೆರೆ
***
25 and 26
೨೫) ಅಧಿಕ ಮಾಸ ಶುಕ್ಲ ಏಕಾದಶಿ - ಕಾಮದಾ ಏಕಾದಶಿ - ಮನುಷ್ಯನ ಕಾಮನೆಗಳು, ಆಸೆ, ಆಕಾಂಕ್ಷೆಗಳನ್ನು ಈಡೇರಿಸುತ್ತದೆ.    ‌              ‌    
೨೬) ಅಧಿಕ ಮಾಸ ಕೃಷ್ಣ ಏಕಾದಶಿ - ಕಮಲ ಏಕಾದಶಿ - ಶ್ರೀ ಮಹಾಲಕ್ಷ್ಮಿಯ ಪ್ರಸನ್ನತೆಗಾಗಿ, ಶ್ರೀಮಂತ ರಾಗಲು.
********

another version

ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲ

೧) ಚೈತ್ರ ಶುಕ್ಲ ಏಕಾದಶಿ - ಕಾಮದಾ - ಕೋರಿಕೆಗಳನ್ನು ಪೂರೈಸುತ್ತದೆ.
೨) ಚೈತ್ರ ಬಹುಳ ಏಕಾದಶಿ - ವರೂಧಿನಿ - ಸಹಸ್ರ ಗೋದಾನ ಫಲವು ಲಭಿಸುತ್ತದೆ.
೩) ವೈಶಾಖ ಶುದ್ಧ ಏಕಾದಶಿ - ಮೋಹಿನಿ - ದರಿದ್ರನು ಧನವಂತನಾಗುತ್ತಾನೆ.
೪) ವೈಶಾಖ ಬಹುಳ ಏಕಾದಶಿ - ಅಪರಾ - ರಾಜ್ಯಪ್ರಾಪ್ತಿ
೫) ಜ್ಯೇಷ್ಠ ಶುಕ್ಲ ಏಕಾದಶಿ - ನಿರ್ಜಲ - ಆಹಾರ ಸಮೃದ್ಧಿ
೬) ಜ್ಯೇಷ್ಠ ಬಹುಳ ಏಕಾದಶಿ - ಯೋಗಿನಿ - ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)
೭) ಆಷಾಢ ಶುದ್ಧ ಏಕಾದಶಿ - ದೇವಶಯನಿ - ಸಂಪತ್ ಪ್ರಾಪ್ತಿ - ವಿಷ್ಣುವು ಯೋಗನಿದ್ರೆಗೆ ಜಾರುವ ದಿನ
೮) ಆಷಾಢ ಬಹುಳ ಏಕಾದಶಿ - ಕಾಮಿಕಾ - ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.
೯) ಶ್ರಾವಣ ಶುಕ್ಲ ಏಕಾದಶಿ - ಪುತ್ರದಾ - ಸತ್ ಸಂತಾನ ಪ್ರಾಪ್ತಿ
೧೦) ಶ್ರಾವಣ ಬಹುಳ ಏಕಾದಶಿ - ಅಜಾ - ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ
೧೧) ಭಾದ್ರಪದ ಶುದ್ಧ ಏಕಾದಶಿ - ಪರಿವರ್ತನ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) - ಯೋಗ ಸಿದ್ಧಿ
೧೨) ಭಾದ್ರಪದ ಬಹುಳ ಏಕಾದಶಿ - ಇಂದಿರಾ - ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.
೧೩) ಆಶ್ವಯುಜ ಶುಕ್ಲ ಏಕಾದಶಿ - ಪಾಪಾಂಕುಶ - ಪುಣ್ಯಪ್ರದವಾದುದು
೧೪) ಆಶ್ವಯುಜ ಬಹುಳ ಏಕಾದಶಿ - ರಮಾ - ಸ್ವರ್ಗಪ್ರಾಪ್ತಿ
೧೫) ಕಾರ್ತೀಕ ಶುಕ್ಲ ಏಕಾದಶಿ - ಪ್ರಬೋಧಿನಿ (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ
೧೬) ಕಾರ್ತೀಕ ಬಹುಳ ಏಕಾದಶಿ - ಉತ್ಪತ್ತಿ - ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)
೧೭) ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದಾ - ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)
೧೮) ಮಾರ್ಗಶಿರ ಬಹುಳ ಏಕಾದಶಿ - ವಿಮಲಾ (ಸಫಲಾ) - ಅಜ್ಞಾನ ನಿವೃತ್ತಿ
೧೯) ಪುಷ್ಯ ಶುಕ್ಲ ಏಕಾದಶಿ - ಪುತ್ರದಾ - ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)
*ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ ಮುಂಚೆಯೇ ಹೇಳಿದೆ.
೨೦) ಪುಷ್ಯ ಕೃಷ್ಣ ಏಕಾದಶಿ - ಕಲ್ಯಾಣೀ (ಷಟ್‌ತಿಲಾ) - ಶಾರೀರಿಕ ಬಾಧೆಗಳಿಂದ ಮುಕ್ತಿ (ತೆಲುಗಿನಲ್ಲಿ ಈತಿ ಬಾಧಾ ನಿವಾರಣಂ ಎಂದು ಹೇಳಲಾಗಿದೆ)
೨೧) ಮಾಘ ಶುಕ್ಲ ಏಕಾದಶಿ - ಕಾಮದಾ (ಜಯಾ) - ಶಾಪವಿಮುಕ್ತಿ
೨೨) ಮಾಘ ಕೃಷ್ಣ ಏಕಾದಶಿ - ವಿಜಯಾ - ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)
೨೩) ಫಾಲ್ಗುಣ ಶುಕ್ಲ ಏಕಾದಶಿ - ಆಮಲಕೀ - ಆರೋಗ್ಯ ಪ್ರಾಪ್ತಿ
೨೪) ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯಾ - ಪಾಪ ವಿಮುಕ್ತಿ......
*********



vaikunta ekadashi

MAGHA KRISHNA EKADASHI IN 2021


*****
ಏಕಾದಶಿಯಂದುಯಾಕೆಮಾಧ್ವರು_ಶ್ರಾದ್ಧಮಾಡುವುದಿಲ್ಲ ! ಮಾಧ್ವರು ಏಕಾದಶಿಯಂದು ದೇವತೆಗಳಿಗೆ ನೈವೇದ್ಯವನ್ನು ಅಥವಾ ಶ್ರಾದ್ಧವಿದ್ದರೂ ಮಾಡುವುದಿಲ್ಲ. ಅನ್ಯಮತೀಯರು ಹೇಳುವುದುಂಟು " ಮಾಧ್ವರು ಮೃತತಿಥಿಯಲ್ಲಿ ಮಾಡದೆ ದ್ವಾದಶಿಯಂದು ಮಾಡುತ್ತಾರೆ ಅದಲ್ಲದೆ ಮಧ್ಯಾಹ್ನ ಮಾಡಬೇಕಾದ ಶ್ರಾದ್ಧವನ್ನು ಬೆಳಿಗ್ಗೆಯೇ ಮುಗಿಸಿ ಶಾಸ್ತ್ರವಿರುದ್ಧವಾಗಿ ನಡೆದುಕೊಳ್ಳುತ್ತಾರೆ" ಎನ್ನುವರು. ಹಾಗಾದರೆ ಮಾಧ್ವರು ಮಾಡುತ್ತಿರುವುದು ಶಾಸ್ತ್ರವಿರುದ್ಧವೇ !? ನೋಡೋಣ. ಏಕಾದಶಿವ್ರತದ ಮಾಹಾತ್ಮೆಯನ್ನು ಹೇಳುವಾಗ ಸಾತ್ವಿಕವಾದ ಪಾದ್ಮಪುರಾಣವು - ಏಕಾದಶೀಂ ಪರಿತ್ಯಜ್ಯ ಯೋ ಹ್ಯನ್ಯದ್ವ್ರತಮಾಚರೇತ್ ಸ ಕರಸ್ಥಂ ಮಹಾರಾಜ್ಯಂ ತ್ಯಕ್ತ್ವಾ ಭೈಕ್ಷ್ಯಂ ತು ಯಾಚತೇ ೯ ಏಕಾದಶಿಯೆಂಬ ಮಹಾವ್ರತವನ್ನು ಬಿಟ್ಟು ಬೇರೆ ವ್ರತಗಳನ್ನು ಯಾರು ಆಚರಿಸುವರೋ ಅಂತವರು ತನ್ನ ಕೈಯಲ್ಲಿದ್ದ ಮಹಾಸಾಮ್ರಾಜ್ಯವನ್ನು ಮರೆತು ಭಿಕ್ಷೆಯನ್ನು ಯಾಚಿಸಿದಂತೆ ಎನ್ನುತ್ತಾರೆ. ಅಂದರೆ ಏಕಾದಶಿಯ ದಿವಸ ಅದರ ಪರಿಪಾಲನೆಯೇ ಪಿತೃವ್ರತವೇ ಮೊದಲಾದ ವ್ರತಗಳಿಗಿಂತ ಹಿರಿದಾದ್ದು. ಶ್ರಾದ್ಧಕ್ಕಾಗಿ ಏಕಾದಶಿ ಬಿಟ್ಟರೆ ದೊಡ್ಡ ಹಾನಿಯು. ಹಾಗಾದರೆ ಏಕಾದಶಿಯ ದಿವಸ ಶ್ರಾದ್ಧಾದಿಗಳು ಬಂದರೆ ಏನುಮಾಡುವುದು !? ಎಂದರೆ ಮುಂದುವರೆದು ಪದ್ಮಪುರಾಣವು - ಏಕಾದಶ್ಯಾಂ ಚ ಪ್ರಾಪ್ತಾಯಾಂ ಮಾತಾಪಿತ್ರೋರ್ಮೃತೇಽಹನಿ ೧೩ ದ್ವಾದಶ್ಯಾಂ ತು ಪ್ರದಾತವ್ಯಂ ನೋಪವಾಸದಿನೇ ಕ್ವಚಿತ್ ಗರ್ಹಿತಾನ್ನಂ ನ ವಾಶ್ನಂತಿ ಪಿತರಶ್ಚ ದಿವೌಕಸಃ ೧೪ ಏಕಾದಶಿಯು ಒಂದು ವೇಳೆ ಮಾತಾದಿಗಳ ಮೃತತಿಥಿಯಾಗಿದ್ದರೆ ಆ ಶ್ರಾದ್ಧವನ್ನು ದ್ವಾದಶಿಯಂದು ಮಾಡಬೇಕೇ ಹೊರತು ಉಪವಾಸದಿನದಂದು ಅಲ್ಲ. ಏಕಾದಶಿಯಂದು ಅನ್ನವನ್ನು ಕೊಟ್ಟರೆ ಪಿತೃಗಳಾಗಲಿ ದೇವತೆಗಳಾಗಲಿ ಸ್ವೀಕರಿಸುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಅದೇ ಪದ್ಮಪುರಾಣದ ಪುಷ್ಕರಕಾಂಡದಲ್ಲಿ - ಏಕಾದಶ್ಯಾಂ ಯದಾ ರಾಮ ಶ್ರಾದ್ಧಂ ನೈಮಿತ್ತಿಕಂ ಭವೇತ್ | ತದ್ದಿನಂ ತು ಪರಿತ್ಯಜ್ಯ ದ್ವಾದಶ್ಯಾಂ ಶ್ರಾದ್ಧಮಾಚರೇತ್ || ಹೇ ರಾಮನೇ ಒಂದು ವೇಳೆ ಏಕಾದಶಿಯಂದು ನೈಮಿತ್ತಿಕ ಶ್ರಾದ್ಧವು ಬಂದರೆ ಆ ದಿನದಂದು ಮಾಡದೆ ದ್ವಾದಶಿಯಂದು ಮಾಡಬೇಕು ಎಂದಿದ್ದಾರೆ. ಹಾಗೆಯೇ ರಾಜಸಪುರಾಣವಾದ ಬ್ರಹ್ಮವೈವರ್ತಪುರಾಣದಲ್ಲಿ - ಯೇ ಕುರ್ವ್ವನ್ತಿ ಮಹೀಪಾಲ ಶ್ರಾದ್ಧಂ ತ್ವೇಕಾದಶೀದಿನೇ| ತ್ರಯಸ್ತೇ ನರಕಂ ಯಾನ್ತಿ ದಾತಾ ಭೋಕ್ತಾ ಪರೇತಕಃ || ರಾಜನೇ ! ಯಾರು ಏಕಾದಶಿಯಂದು ಶ್ರಾದ್ಧವನ್ನು ಮಾಡಿದರೆ ಮಾಡಿದವರು, ಪಿತೃಗಳು ಹಾಗೆಯೇ ಮಾಡಿಸಿದವನು ಹೀಗೆ ಮೂವರೂ ನರಕವನ್ನು ಹೊಂದುವರು ಎಂದಿದ್ದಾರೆ. ತಾಮಸವಾದ ಸ್ಕಾಂದಪುರಾಣ - ಏಕಾದಶೀ ಯದಾ ನಿತ್ಯಾ ಶ್ರಾದ್ಧಂ ನೈಮಿತ್ತಿಕಂ ಭವೇತ್ | ಉಪವಾಸಂತದಾ ಕುರ್ಯ್ಯಾತ್ ದ್ವಾದಶ್ಯಾಂ ಶ್ರಾದ್ಧಮಾಚರೇತ್ || ಏಕಾದಶಿಯ ದಿವಸ ಶ್ರಾದ್ಧವು ಬಂದರೆ ಆ ಶ್ರಾದ್ಧವನ್ನು ದ್ವಾದಶಿಯಂದೇ ಮಾಡಬೇಕೆಂದಿದ್ದಾರೆ. ಇದೇ ಅಭಿಪ್ರಾಯವನ್ನು ತಿಳಿಸುವ ಸ್ಮೃತಿವಚನಗಳನ್ನು ವಾಚಸ್ಪತ್ಯ, ವೈಖಾನಸಗೃಹ್ಯ ಮೊದಲಾದವು ಕಡೆ ಉದ್ದರಿಸಿದ್ದಾರೆ. ಸೂತಾಕಾದೌ ಯದಾ ಶ್ರಾದ್ಧಂ ಭೂತಕಾನ್ತೇ ಯಥಾ ಭವೇತ್ | ತಥಾ ಚೈಕಾದಶೀಶ್ರಾದ್ಧಂ ದ್ವಾದಶ್ಯಾಮೇವ ಕಾರಯೇತ್ || ವೃದ್ಧಹಾರೀತ ಪಿತ್ರೋಃ ಶ್ರಾದ್ಧಂ ನ ಕುವನ ಏಕಾದಶ್ಯಾಂ ದ್ವಿಜೋತ್ತಮಃ | ದ್ವಾದಶ್ಯಾಂ ತತ್ ಪ್ರಕುರ್ವೀತ ನೋಪಾಸದಿನೇ ಕ್ವಚಿತ್ || ಹಾರೀತ ಏಕಾದಶ್ಯಾಂ ನ ಭುಞ್ಜೀತ ಪಕ್ಷಯೋರುಭಯೋರಪಿ | ಅನೇನ ವಿಧಿವಾಕ್ಯೇನ ತತ್ರ ಶ್ರಾದ್ಧೇ ಪರೇಽಹನಿ || ಪರಾಶರ ಆದಿಶ್ರಾದ್ಧಂ ಹರೇದೇನೇ ಯದಿ ಸ್ಯಾತ್ ತನ್ನ ಕಾರವೇತ್ | ಪಿಂಡಮೇಕಂ ಭದಾಯಾಽಥ ದ್ವಾದಶ್ಯಾಂ ಶ್ರಾದ್ಧಮಾಚರೇತ್ || ಶೋಧಾಯನ ಏಕಾದಶಾಹೇ ಯದಿ ಶುಕ್ರವಾರೋ ರೋಹಿಣ್ಯಥಾಪ್ಯುತರಫಲ್ಗುನೀ ವಾ | ಪ್ರೇತಾಯ ದದ್ಯಾದಥ ಪಿಂಡಮೇಕಂ ಶ್ರಾದ್ಧಂ ತು ದದ್ಯಾದಪರೇದ್ಯುರೇವ || ಅಂಗಿರ ನಿತ್ಯಶ್ರಾದ್ಧಂ ನ ಕುಚತ ಸಂಪ್ರಾಪ್ತೇ ಹರಿವಾಸರೇ | ಅಪರೇಽಹನಿ ತನ್ತ್ರೇಣ ಶ್ರಾದ್ಧದ್ವಿತಯಮಾಚರೇತ್ || ಆದ್ಯಶ್ರಾದ್ಧಂ ವಿಷ್ಣುದಿನೇ ಯದಿ ಕುರ್ಯಾದ್ವಿಮೋಹಿತಃ | ಕರ್ತಾ ಪ್ರತಿಗೃಹೀತಾ ಚ ಉಭೌ ನರಕಾಮಿನೌ || ಉಶನಾ ಹೀಗೆ ಹಲವಾರು ಪ್ರಮಾಣಗಳ ಅನುಸಾರ ಮಾಧ್ವರು ಏಕಾದಶಿ ಶ್ರಾದ್ಧವನ್ನು ಮಾಡದೆ ದ್ವಾದಶಿಯಲ್ಲೇ ಮಾಡುತ್ತಾರೆ. ಇನ್ನೂ ಪಂಚರಾತ್ರದ ಶೇಷಸಂಹಿತೆಯಲ್ಲಿ - ತದ್ವದೇಕಾದಶೀಶ್ರಾದ್ಧಂ ತತ್ಕುರ್ಯಾತದನನ್ತರಮ್ | ಬ್ರಾಹ್ಮೇ ಮುಹೂರ್ತೇ ಸಂಪ್ರಾಪ್ತೇ ಸ್ವಗಹ್ಯೋಕ್ತವಿಧಾನತಃ ||.... ಏಕಾದಶಿಯ ಶ್ರಾದ್ಧವನ್ನು ದ್ವಾದಶಿಯಂದು ಸ್ವಗೃಹ್ಯೋಕ್ತವಿಧಾನದಂತೆ ಮಾಡಿ ದೇವಪೂಜೆ ವೈಶ್ವದೇವ ಬ್ರಾಹ್ಮಣಾರಾಧನಾದಿಗಳೊಂದಿಗೆ ಪಾರಣೆಯನ್ನು ಮಾಡುವಂತೆ ತಿಳಿಸುತ್ತದೆ. ದ್ವಾದಶಿಯ ಪ್ರಾತಃಕಾಲದಲ್ಲಿ ಶ್ರಾದ್ಧವು ಶಾಸ್ತ್ರ ಸಮ್ಮತ. ಇದೇ ನಿಯಮ ಕೃಷ್ಣಜಯಂತಿಯಲ್ಲೂ ಅನುಸರಿಸುತ್ತಾರೆ. ಯಾಕೆಂದರೆ ಭವಿಷ್ಯತ್ಪುರಾಣದಲ್ಲಿ ಯುಧಿಷ್ಠಿರನು ಕೃಷ್ಣನು ಭಗವಂತನನ್ನು ಪ್ರಶ್ನಿಸುವಾಗ ಕೀದೃಶಂ ತದ್ವ್ರತಂ ದೇವ ಸರ್ವೈರ್ದೇವೈರನುಷ್ಠಿತಮ್ ಎಂಬುದಾಗಿ ಎಲ್ಲಾ ದೇವತೆಗಳು ಕೃಷ್ಣಜಯಂತಿಯನ್ನು ಆಚರಿಸುತ್ತಾರೆ ಎಂಬುದನ್ನು ತಿಳಿಸಿದ್ದಾನೆ. ಆದ್ದರಿಂದ ಅವತ್ತೂ ದೇವಪಿತೃಗಳಿಗೆ ಅನ್ನಸಮರ್ಪಣೆ ಇಲ್ಲ. ಹರಿಪ್ರೀಯತಾಮ್ -ಬೆಳ್ಳೆ ಸುದರ್ಶನ ಆಚಾರ್ಯ
****

wripte-up by Sri Nagaraju Haveri

"ಏಕಾದಶೀ - 1 "
" ಏಕಾದಶೀ ಮಹಾತ್ಮ್ಯೇ - ಒಂದು ಚಿಂತನೆ  "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಪ್ರಾರಂಭವಾದ ಸತ್ಪರಂಪರೆಯಾದ  ಶ್ರೀಮದಾನಂದತೀರ್ಥ ಭಗವತ್ಪಾದರಿಂದ ಸುಪ್ರತಿಷ್ಠಿತವಾದ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದ ಭವ್ಯ ದಿವ್ಯ ಪೀಠಾಧಿಪತಿಪತಿಗಳೂ - ಕಲ್ಪವೃಕ್ಷ ಕಾಮಧೇನುಗಳೆಂಬ ದಿಗಂತ ವಿಶ್ರಾಂತ ಕೀರ್ತಿ ಪ್ರತಿಷ್ಠೆಗಳಿಂದ ಜಗತ್ಪ್ರಸಿದ್ಧರಾದ - ಶ್ರೀ ವಾಯುದೇವರ ನಿತ್ಯಾsವೇಶಯುಕ್ತರೂ - ಶ್ರೀ ಲಕ್ಷ್ಮೀನಾರಾಯಣನ ನಿತ್ಯ ಸನ್ನಿಧಾನಯುಕ್ತರೂ - ಮೂಲರೂಪದ ಶ್ರೀ ಶಂಖುಕರ್ಣಾವತಾರಿಗಳಾದ ಶ್ರೀ ರಾಘವೇಂದ್ರತೀರ್ಥರ ವಿದ್ಯಾ ಶಿಷ್ಯರೂ - ಪಂಡಿತಾಗ್ರಗಣ್ಯರಾದ ಶ್ರೀ ಕೃಷ್ಣಾಚಾರ್ಯರು ಧರ್ಮಶಾಸ್ತ್ರಕ್ಕೆ ಸಂಬಂಧ ಪಟ್ಟ ಪ್ರಾಚೀನ ಗ್ರಂಥಗಳನ್ನೆಲ್ಲಾ ಪರಿಶೋಧಿಸಿ - ವಿಮರ್ಶಿಸಿ - ಮುಕ್ತಿಯೋಗ್ಯರಾದ ಜನತೆಯ ಉಪಕಾರಕ್ಕಾಗಿ ನಿತ್ಯ ನೈಮಿತ್ತಿಕ ಆಚಾರ ವಿಚಾರಗಳಿಗೆ ಸಂಬಂಧ ಪಟ್ಟಂತೆ ಅನೇಕ ಪ್ರಮಾಣಗಳೊಂದಿಗೆ ನಿಷ್ಕರ್ಷಿಸಿ " ಸ್ಮೃತಿ ಮುಕ್ತಾವಲೀ " ಎಂಬ ಗ್ರಂಥವನ್ನು ರಚಿಸಿರುತ್ತಾರೆ. 
ಇದು ಎಲ್ಲರಿಗೂ ಪರಮ ಪ್ರಮಾಣಭೂತವಾದ ಧರ್ಮಶಾಸ್ತ್ರ ಗ್ರಂಥವಾಗಿದೆ. 
" ಸ್ಮೃತಿ ಮುಕ್ತಾವಲೀ " ಎಂಬ ಗ್ರಂಥದಲ್ಲಿ 4 ಪ್ರಕರಣಗಳಿವೆ. 
1. ಕಾಲ ನಿರ್ಣಯ ಪ್ರಕರಣ 
2. ಆಹ್ನೀಕ ಪ್ರಕರಣ 
3. ಷೋಡಶಕರ್ಮ ಪ್ರಕರಣ 
4. ಶ್ರಾದ್ಧ ಪ್ರಕರಣ 
ಮೇಲ್ಕಂಡ ನಾಲ್ಕು ಪ್ರಕರಣಗಳಿಂದ ಗರ್ಭಿತವಾದ ಧರ್ಮ ಶಾಸ್ತ್ರ ಗ್ರಂಥವಾಗಿದೆ. 
ಇವುಗಳಲ್ಲಿ ಈ ಗ್ರಂಥಕಾರರು ಉದಾಹರಿಸಿದ ಪ್ರಮಾಣಗಳನ್ನು ತಮ್ಮ ವಿದ್ಯಾ ಗುರುಗಳಾದ ಶ್ರೀ ರಾಘವೇಂದ್ರತೀರ್ಥರಿಂದಲೇ ತಿಳಿದು ಅದನ್ನೆಲ್ಲಾ ಸಂಗ್ರಹಿಸಿ ಬರೆದಿರುವುದಾಗಿ " ಆಹ್ನೀಕ ಪ್ರಕರಣ " ದಲ್ಲಿ ಸ್ಪಷ್ಟ ಪಡಿಸಿದ್ದಾರೆ. 
ಇತ್ಯೇತದಖಿಲಂ ಸ್ಮೃತ್ಯುಕ್ತಂ 
ಚಾಹ್ನೀಕಂ ಗುರುಃ ।
ಅಭಿಪ್ರೇತ್ಯ ಸದಾಚಾರ
ಸ್ಮೃತಿ ಮೂಚೇ ಮಹಾಮನಾಃ ।।
" ಕಾಲ ನಿರ್ಣಯ " ದ ಅಂತ್ಯ ಭಾಗದಲ್ಲೂ ಕೂಡಾ ಈ ಗ್ರಂಥಕಾರರು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಶಿಷ್ಯರೆಂದೇ ಉಲ್ಲೇಖಿಸಿದ್ದಾರೆ. 
" ಇತಿ ಶ್ರೀ ರಾಘವೇಂದ್ರತೀರ್ಥ ಶ್ರೀಪಾದಾನಾಂ ಶಿಷ್ಯೇಣ ಕುಮಾರ ನರಸಿಂಹ ಭಟ್ಟ ಪುತ್ರೇಣ ಸಂಗೃಹೀತಾಯಾಂ ಸ್ಮೃತಿ ಮುಕ್ತಾವಳ್ಯಾ೦ ಕಲನಿರ್ಣಯ ಸಮಾಪ್ತಮ್ ।।". 
ಶ್ರೀ ಕೃಷ್ಣಾಚಾರ್ಯರು ತಾವು ರಚಿಸಿರುವ ಈ " ಸ್ಮೃತಿಮುಕ್ತಾವಲೀ " ಗ್ರಂಥವು ವಿದ್ವಾಂಸರ ಕಂಠಭೂಷಣವೆಂದೂ; ಸಜ್ಜನರ ಪ್ರೀತಿಗಾಗಿ ರಚಿತವಾಗಿದೆಎಂದೂ ಬಹಳ ರಂಜಕವಾದ ಮಾತುಗಳನ್ನು ಆಡಿದ್ದಾರೆ. 
ಸ್ಮೃತಿ ಮುಕ್ತಾವಳೀರ್ನಾಮಾ 
ವಿಧುಷಾಂ ಕಂಠಭೂಷಣಮ್ ।
ಕ್ರಿಯತೇ ಸಜ್ಜನ ಪ್ರೀತ್ಯೈ 
ಕೃಷ್ಣಾಚಾರ್ಯ ವಿಪಶ್ಚಿತಾ ।।
ತೀಕ್ಷ್ಣ ಪ್ರತಿಭಾ ಸಂಪನ್ನರಾದ ಗಂಥಕಾರರಾದಾಗ್ಯೂ ಕೂಡಾ ಈ ಪಂಡಿತ ಪ್ರಕಾಂಡರು ಹಿಂದಿನ ಹಿರಿಯರ ಸರಣಿಯನ್ನೇ ಅವಲಂಭಿಸಿ ಸ್ವಾಹಂಕಾರ ಖಂಡನೆಯನ್ನು ಮಾಡಿಕೊಂಡು - ಬಹಳ ಉತ್ತಮವಾದ ನಡುವಳಿಕೆಯನ್ನು ಮಹೋನ್ನತ ಮೇರು ಕೃತಿಯಾದ ಶ್ರೀಮನ್ನ್ಯಾಯಸುಧಾಕಾರರಾದ ಶ್ರೀ ಜಯತೀರ್ಥರು ಗ್ರಂಥದ ಆರಂಭದಲ್ಲಿ.. 
" ನ ಶಬ್ದಾಬ್ಧೌ ಗಾಢಾಃ ನ ಚ 
ನಿಗಮಚರ್ಚಾಸು ಚತುರಾಃ "
ಎಂದು ಹೇಳಿರುವಂತೆ - ತಮ್ಮ ಈ ಸ್ಮೃತಿ ಮುಕ್ತಾವಲೀ ಗ್ರಂಥದಲ್ಲಿ ಆರಂಭದಲ್ಲೇ ಅತ್ಯಂತ ಮೇಧಾವಿಗಳ ಆಚರಣೆಯನ್ನೇ ಅನುಸರಿಸಿ ನುಡಿದಿರುವುದು ಅತ್ಯಂತ ರಂಜಕವಾದ ವಿಷಯವಾಗಿದೆ. 
ನ ಜಾನಾಮಿ ಪದಾರ್ಥಂ ವಾ 
ವಾಕ್ಯಾರ್ಥಂ ವಾಪಿ ಕುತ್ರಚಿತ್ ।
ಸ್ಮೃತಿ ಸಂಗ್ರಹ ಮಾತ್ರೇಣ 
ದಯಾಂ ಕುರ್ವಂತು ಸಜ್ಜನಾಃ ।।
ಎಂದು ಕಳಕಳಿಯಿಂದ ನುಡಿದಿದ್ದಾರೆ. ಇದೊಂದು ಇತ್ತೀಚಿನ ಗ್ರಂಥಕಾರರಿಗೆಲ್ಲಾ ಮಾರ್ಗದರ್ಶಕವಾದ ನಡುವಳಿಕೆಯಾಗಿದೆ. 
ಈ ಸ್ಮೃತಿ ಮುಕ್ತಾವಲೀ ಎಂಬ ಗ್ರಂಥದ ಆರಂಭದ ಶೈಲಿಯಾ ವಿಚಾರವಾಗಿಯೂ - ಪ್ರತಿಪಾದಿಸಲ್ಪಟ್ಟ ವಿಷಯಗಳ ಬಗ್ಗೆಯೂ - ತಾವು ಅನುಸರಿಸಿದ ಕ್ರಮವನ್ನು ಎತ್ತಿ ತೋರಿಸಿ ಇದರ ವಿಷಯವಾಗಿ ಪಂಡಿತರೂ - ಸಜ್ಜನರೂ ದೋಷ ಶಂಕೆಯನ್ನು ಮಾಡದಿರಲೀ ಎಂದು ಬಹಳ ನಮ್ರತೆಯಿಂದ ನುಡಿದಿದ್ದಾರೆ. 
ಕ್ವಚಿದ್ ಸ್ಮೃತ್ಯರ್ಥ ಸಂಗ್ರಹಾತ್ 
ಕ್ವಚಿದ್ ಸ್ಮೃತ್ಯಾದಿ ಸಂಗ್ರಹಾತ್ ।
ದೋಷ ಶಂಕಾ ನ ಕರ್ತವ್ಯಾ 
ಹಸ್ಮಿನ್ ಗ್ರಂಥೇ ವಿಮತ್ಸರೈಃ ।।
" ಏಕಾದಶೀ ಮಹಾತ್ಮ್ಯೇ "
ರಾಗ : ಸಾರಂಗ  ತಾಳ : ಅಟ್ಟ 
ಹರಿ ದಿನದಲಿ -
ಉಂಡ ನರರಿಗೆ ।
ನರಕ ತಪ್ಪದೆಂದು -
ಶ್ರುತಿ ಸಾರುತಲಿದೆ ।। ಪಲ್ಲವಿ ।।
ಗೋಮಾಂಸ ಮದ್ಯ -
ಭಕ್ಷಣ । ಸ್ವಮಾತೃ ಗಮ ।
ನ ಮಹಿಸುರರ -
ಗೋ ಹತ ಮಾಡಿದ ।
ಆ ಮಾಯಗಳಗಿಂತ -
ಹರಿ ದಿನದಲಿ । ಭೋಜ ।
ನಾ ಮಾಡಿದವರಿಗೆ 
ಶತ ಗುಣಧಿಕ ।। ಚರಣ ।।
ಅನ್ನಪಾನ ತಾಂಬೂಲ -
ದರ್ಪಣಗಳು ।
ಚನ್ನ ವಸ್ತ್ರಗಳು -
ವರ್ಜಿತವು ।
ತನ್ನ ಸತಿಯ ಸಂಗವಾ -
ದಿನದಲ್ಲಿ ಮಾಡೆ ।
ಬೆನ್ನಿಂದ ಕರಳ -
ತೆಗೆಸುವ ಯಮನು ।। ಚರಣ ।।
ಝಾವು ಜಾಗರ ಮಾಡಿ -
ಕ್ರತು ಸಾವಿರದ ಫಲ ।
ಝಾವ ಚತುರ್ದಶ-
ಕಮಿತ ಉಂಟು ।
ಈ ವಿದಧಿಂದ -
" ಏಕಾದಶೀ " ನಡಸಲು ।
ದೇವ ಪುರಂದರವಿಠ್ಠಲ -
ಮೆಚ್ಚುವನು ।। ಚರಣ ।।
ಇಷ್ಟು ಮಾತ್ರವಲ್ಲದೇ ಈ ಸ್ಮೃತಿ ಮುಕ್ತಾವಲೀ ಎಂಬ ಪ್ರಮಾ ಪ್ರಮಾಣಭೂತವಾದ ಗ್ರಂಥ ರತ್ನವನ್ನು ಕೇವಲ ಅಜ್ಞರಾದ ಬಾಲಕರಾಗಲೀ - ಪ್ರಾಜ್ಞರಾದ ಪಂಡಿತರಾಗಲೀ - ಯಾರು ಯಾವಾಗಲೂ ಕಂಠಪಾಠ ಮಾಡಿ-  ಮನಸ್ಸಿನಿಂದ ಪ್ರಮಾಣ ವಾಕ್ಯಗಳನ್ನು ಸ್ಮರಿಸುತ್ತಾರೋ - ಬುದ್ಧಿಯಿಂದ ಧಾರಣೆ ಮಾಡುತ್ತಿರುವರೋ ಅವರೆಲ್ಲರೂ ಶ್ರೀ ಹರಿಯ ಕಾರುಣ್ಯಕ್ಕೆ ಪಾತ್ರರಾಗುತ್ತಾರೆಂದೂ ಶ್ರೀ ಹರಿಯ ಭಕ್ತರಿಗೆ ಪ್ರೀತಿಕರವಾದ ಮಾತನ್ನಾಡಿರುತ್ತಾರೆ. 
" ಪದ್ಮಪುರಾಣ " ವಾಕ್ಯದಂತೆ... 
ಏಕಾದಶೀ ವ್ರತಕ್ಕೆ ಸಮನಾದ ವ್ರತವು ಮತ್ತಾವ ವ್ರತವೂ ಇಲ್ಲ. 
ಯಾರು " ಏಕಾದಶೀ " ವ್ರತವನ್ನು ಬಿಟ್ಟು ಬೇರೇ ಬೇರೇ ವ್ರತಗಳನ್ನು ಆಚರಿಸುತ್ತಾರೋ ಅವರು ತಮ್ಮ ಕೈಯಲ್ಲಿದ್ದ ಮಹಾರಾಜ್ಯವನ್ನು ಬಿಟ್ಟು ಭಿಕ್ಷೆ ಬೇಡುವವರಂತೆ ಆಗುತ್ತಾರೆ. 
ಮಹಾ ಪಾಪಿಯಾದ ಮಾನವರು " ಏಕಾದಶೀ " ದಿನ ಉಪವಾಸ ಮಾಡಿ ವ್ರತವನ್ನು ಆಚರಿಸಿದರೆ ಸಮಸ್ತ ಪಾಪಗಳಿಂದ ಬಿಡುಗಡೆ ಹೊಂದಿ ಶ್ರೇಷ್ಠವಾದ ಮಹಾವಿಷ್ಣುವಿನ ವೈಕುಂಠವನ್ನು ಪಡೆಯುತ್ತಾರೆಂದು " ಪದ್ಮಪುರಾಣ " ಸಾರುತ್ತಿದೆ. 
" ಧರ್ಮ ಸಂಹಿತೆಯ " ವಚನದಂತೆ.. 
ಪ್ರಾಯಶ್ಚಿತ್ತವೇ ಇಲ್ಲದ ಬೇರೇ ಬೇರೇ ಪಾಗಳನ್ನು ಮಾಡಿದವರಿಗೂ ಅವರ ಎಲ್ಲಾ  ಪಾಪಗಳನ್ನೂ ನಾಶ ಮಾಡಿ ಅವರನ್ನು ಪರಮ ಪವಿತ್ರವನ್ನಾಗಿ ಮಾಡುವ ಒಂದೇ ಒಂದು ವ್ರತವಾದ " ಏಕಾದಶೀ " ಎಂಬುದಾಗಿ ಸ್ಮೃತಿಕಾರರೆಲ್ಲರೂ ಹೇಳಿದ್ದಾರೆ. 
ಶುಕ್ಲಪಕ್ಷ, ಕೃಷ್ಣಪಕ್ಷ ಹೀಗೆ ಎರಡು ಪಕ್ಷಗಳಲ್ಲಿಯೂ ಪಾಪಿಗಳು ಸಂಪಾದಿಸಿದ ಪಾಪ ರಾಶಿಗಳೆಲ್ಲವನ್ನೂ ಕಳೆಯಬೇಕೆಂದೇ ಶ್ರೀಮನ್ನಾರಾಯಣನು ಪರಮ ಪವಿತ್ರವಾದ - ಅಲೌಕಿಕವಾದ " ಏಕಾದಶೀ ತಿಥಿಯನ್ನು " ನಿರ್ಮಾಣ ಮಾಡಿದ್ದಾನೆ. 
" ಏಕಾದಶೀ ತಿಥಿ " ಒಂದು ದಿನ ಮಾತ್ರ ಉಪವಾಸ ಮಾಡಿದ ಪುಣ್ಯದಿಂದ " ಶ್ವಪಚನೂ " ಕೂಡಾ ಶ್ರೀ ಹರಿ ಸನ್ನಿಧಾನವನ್ನು ಪಡೆಯುತ್ತಾನೆ. 
ಬೇರೇ ಯಾವ ವ್ರತ ನಿಯಮ ಉಪವಾಸಗಳನ್ನು ಮಾಡಿ ಗಳಿಸಿದ ಪುಣ್ಯದಿಂದಲೂ ಶ್ರೀ ಹರಿಯನ್ನು ಪಡೆಯಲು ಸಾಧ್ಯವಿಲ್ಲ. 
ಶ್ರೀಮದಾಚಾರ್ಯರ " ಕೃಷ್ಣಾsಮೃತ ಮಹಾರ್ಣವ " ದಲ್ಲಿ.. 
ನ ಗಂಗಾ ನ ಗಯಾ ಕಾಶೀ -
ನ ರೇವಾ ನ ಚ ಗೌತಮೀ ।
ನ ಚಾಪಿ ಕೌರವಂ ಕ್ಷೇತ್ರಂ 
ತುಲ್ಯಂ ಭೂಪ ಹರೇರ್ದಿನಾತ್ ।।
ಗಂಗೆಯು ಹರಿ ದಿನಕ್ಕೆ ಸಮಾನಳಲ್ಲ. 
ಗಯಾ ಮತ್ತು ಕಾಶೀ ಕ್ಷೇತ್ರವೂ ಹರಿದಿನಕ್ಕೆ ಸಮಾನವಲ್ಲ. 
ವೃದ್ಧಗಂಗಾ ಎಂದು ಪ್ರಸಿದ್ಧಳಾದ ಗೌತಮರ ಪಾಪ ಪರಿಹಾರ ಮಾಡಿದ ಗೋದಾವರಿಯೂ ಏಕಾದಶಿಗೆ ಸಮಾನಳಲ್ಲ. 
ಕುರುಕ್ಷೇತ್ರವೂ ಹರಿದಿನಕ್ಕೆ ಸಮವಲ್ಲ. 
ಈ  ಕ್ಷೇತ್ರೆಗಳ ಮತ್ತು ಪುಣ್ಯ ತೀರ್ಥ ಯಾತ್ರೆಗಳಿಗಿಂತ " ಏಕಾದಶೀ " ಹೆಚ್ಚು ಪುಣ್ಯಪ್ರದವಾದುದು. 
" ವಶಿಷ್ಠ ಸ್ಮೃತಿ " ಯಲ್ಲಿ... 
ಪಂಚ ಜ್ಞಾನೇಂದ್ರಿಯಗಳೂ - ಪಂಚ ಕರ್ಮೇಂದ್ರಿಯಗಳೂ - ಮನಸ್ಸು ಎಂಬ ಹನ್ನೊಂದು ಇಂದ್ರಿಯಗಳಿಂದ ಯಾವ ಪಾಪವನ್ನು ಮಾನವರು ಮಾಡುವರೋ ಅದೆಲ್ಲವೂ " ಏಕಾದಶೀ ದಿನ ಉಪವಾಸ ವ್ರತಾಚರಣೆಯಿಂದ ನಾಶವಾಗುತ್ತವೆ. 
ಏಕಾದಶೀ ಉಪವಾಸ ವ್ರತಾಚರಣೆ ಮಾಡುವವರಿಗೆ ಯಾವ ಆಯಾಸವೂ ಇಲ್ಲದೇ ಶ್ರೀಮನ್ನಾರಾಯಣನ ಲೋಕವು ಪ್ರಾಪ್ತವಾಗುತ್ತದೆ. 
ಈ ಏಕಾದಶೀಯೂ " ಚಿಂತಾಮಣಿ " ಎಂಬ ದೇವಲೋಕದ ರತ್ನಕ್ಕೆ ಸಮಾನವಾಗಿದೆ ಅಥವಾ ಏಕಾದಶೀ ನಿಧಿಗೆ ಸಮಾನವಾಗಿದೆ. 
ಈ ಏಕಾದಶೀಯು ಕಲ್ಪವೃಕ್ಷಕ್ಕೆ ಸಮಾನವಾದದ್ದು. 
ವೇದಗಳನ್ನು ಪಾರಾಯಣ ಮಾಡಿ ಅದರ ಅರ್ಥವನ್ನು ತಿಳಿಯುವುದಕ್ಕೆ ಸಮಾನವಾದದ್ದು. 
1000 ಅಶ್ವಮೇಧ ಯಾಗಗಳೂ; 100 ವಾಜಪೇಯ ಯಾಗಗಳೂ " ಏಕಾದಶೀ " ಉಪವಾಸದ 16ನೇಯ ಅಂದಂಶಕ್ಕೂ ಸಮಾನವಾಗುವುದಿಲ್ಲ. 
ಏಕಾದಶೀ ಉಪವಾಸದಿಂದ ಉಂಟಾದ ತೇಜಸ್ಸಿನಿಂದ ಬೆಂಕಿಯಿಂದ ಕಟ್ಟಿಗೆಗಳು ಸುಟ್ಟು ಬೂದಿಯಾಗುವಂತೆ ಪಾಪಗಳೆಲ್ಲವೂ ಸುಟ್ಟು ಬೂದಿಯಾಗುತ್ತವೆ. 
ಏಕಾದಶೀ ವ್ರತಾಚರಣೆಯಿಂದ ಹಿಂದಿನ 100 ಜನ್ಮಗಳಲ್ಲಿ ಮಾಡಿದ ಪಾಪಗಳು ನಾಶವಾಗುತ್ತದೆ. 
ಭೂಲೋಕದಲ್ಲಿ ಹುಟ್ಟಿದ ಮಾನವರಿಗೆ ಅವರ ಪಾಪಗಳನ್ನೆಲ್ಲಾ ನಾಶ ಮಾಡಿಕೊಳ್ಳುವ ಒಂದೇ ಒಂದು ಉಪಾಯವೆಂದರೆ ಶ್ರೀ ಹರಿಯ ದಿನವಾದ " ಏಕಾದಶೀ " ಯಂದು ಉಪವಾಸ ಮಾಡುವುದು. ಇದನ್ನು ಬಿಟ್ಟು ಮತ್ತಾವ ಉಪಾಯವೂ ಇಲ್ಲ!
ಯಾವ ಪ್ರಾಣಿಯೇ ಆಗಲೀ ಅತ್ಯಂತ ಪರಮ ಪವಿತ್ರವಾದ ಶ್ರೀ ಪದ್ಮನಾಭನ ದಿವಸದಲ್ಲಿ ಅಂದರೆ, ಏಕಾದಶೀ ದಿನದಲ್ಲಿ ಉಪವಾಸ ಮಾಡವರಿಗೆ ಅವರ ದೇಹದಲ್ಲಿ ಪಾಪಗಳು ತುಂಬಿರುತ್ತವೆ. 
ಶ್ರೀ ಹರಿಯ ದಿನದಲ್ಲಿ ಉಪವಾಸ ಮಾಡಿದ ಕೂಡಲೇ ಆ ಪಾಪಗಳೆಲ್ಲವೂ ಹೇಳ ಹೆಸರಿಲ್ಲದೆ ನಾಶವಾಗಿ ಬಿಡುತ್ತವೆ. 
**
" ಏಕಾದಶೀ - 2 "
" ಹಾರಿತ ಸ್ಮೃತಿ ವಾಕ್ಯ " ದಂತೆ... 
ಕಿಮತ್ರ ಬಹುನೋಕ್ತೇನ ಸಾರಂ -
ವಕ್ಷ್ಯಾಮಿ ತೇನಘ ।
ಏಕಾದಶ್ಯುಪವಾಸಶ್ಚ ಶಂಖ-
ಚಕ್ರಾದಿ ಧಾರಣಮ್ ।।
ತದೀಯಾನಾಂ ಪೂಜನಂ ಚ 
ವೈಷ್ಣವಂ ತ್ರಿವಿಧಂ ಸ್ಮೃತಂ ।
ಅಮಾಲಕ್ಷಂ ಚ ದ್ವಾದಶ್ಯಾಃ
ಕಲಾಂ ನಾರ್ಹಂತಿ ಷೋಡಶೀಮ್ ।।
ಎಲೈ ಸಮಸ್ತ ಪಾಪ ಪರಿಹಾರ ಮಾಡಿಕೊಳ್ಳುವ ಯೋಗ್ಯತೇಯುಳ್ಳವನೇ! 
ಧರ್ಮದ ವಿಷಯದಲ್ಲಿ ಬಹಳ ಹೇಳಿದ್ದರಿಂದ ಏನು ಉಪಯೋಗ? 
ಧರ್ಮದ ಸಾರ ಸರ್ವವನ್ನೂ ಶ್ರೀ ಹಾರಿತರು ಈ ರೀತಿ ಹೇಳಿದ್ದಾರೆ. 
ಏಕಾದಶೀ ದಿನ ಉಪವಾಸ 
ಶಂಖ ಚಕ್ರಾದಿ ವಿಷ್ಣು ಚಿಹ್ನೆಗಳ ಧಾರಣೆ 
ವಿಷ್ಣು ಭಕ್ತರಾದ ಜ್ಞಾನಿಗಳ ಪೂಜೆ 
ಹೀಗೆ ಮೂರು ವಿಧವಾದ ವೈಷ್ಣವ ಧರ್ಮಾಚರಣೆಯೇ ಧರ್ಮದಲ್ಲಿ ಅತ್ಯಂತ ಶ್ರೇಷ್ಠವಾದುದು ಎಂಬುದು ಸ್ಮೃತಿಗಳ ಸಾರವಾಗಿದೆ. 
1000 ಗ್ರಹಣಗಳೂ, ಹತ್ತು ಸಾವಿರ ವ್ಯತಿಪಾತಗಳೂ - ಒಂದು ಲಕ್ಷ ಅಮಾವಾಸ್ಯೆಗಳೂ ಕೂಡಾ ದ್ವಾದಶೀಯ 16ನೇ ಒಂದು ಭಾಗಕ್ಕೆ ಸಮಾನವಲ್ಲ!
ಏಕಾದಶೀ ವ್ರತಕ್ಕೆ ಯಾರು ಅಧಿಕಾರಿಗಳು? 
ಫಲವೇನು? ವ್ರತಾಚಣೆ ಏಕೆ? 
ಈ ಕೆಳಗೆ ತಿಳಿಸಿದವರನ್ನು ಏಕಾದಶೀ ವ್ರತ ಮಾಡಲು ಅಧಿಕಾರಿಗಳೆಂದು ಹೇಳಲಾಗಿದೆ. 
ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಿಗಳು. 
ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರರು. 
ಸುಮಂಗಲೀ ಸ್ತ್ರೀಯರೂ, ವಿಧವಾ ಸ್ತ್ರೀಯರೂ, ಸೂತರೂ ( ಬ್ರಾಹ್ಮಣ ಸ್ತ್ರೀಯಲ್ಲಿ ಕ್ಷತ್ರೀಯನಿಂದ ಹುಟ್ಟಿದವನು ಸೂತನು )
ವೈದೇಹಿಕರು ( ಬ್ರಾಹ್ಮಣ ಸ್ತ್ರೀಯಲ್ಲಿ ವೈಶ್ಯನಿಂದ ಹುಟ್ಟಿದವರು ). 
ಇನ್ನೂ ಇತರ ಸಂಕರ ಜಾತಿಯವರೆಲ್ಲರೂ ಏಕಾದಶೀ ದಿನದಂದು ಸರ್ವಥಾ ಭೋಜನ ಮಾಡಬಾರದು. 
ಜಾತಾ ಶೌಚ, ಮೃತಾ ಶೌಚದಲ್ಲಿಯೂ ಪುರುಷರೂ, ಸ್ತ್ರೀಯರೂ ಮತ್ತು ರಜಸ್ವಲೆಯಾದ ಹೆಂಗಸರು " ಏಕಾದಶೀ ದಿನ " ಊಟ ಮಾಡಬಾರದು . 
ಒಟ್ಟಿನಲ್ಲಿ ಎಲ್ಲಾ ಅವಸ್ಥೆಯಲ್ಲಿಯೂ ಏಕಾದಶೀ ಉಪವಾಸ ಮಾಡಲೇಬೇಕೆಂದು " ಕೃಷ್ಣಾಮೃತಮಹಾರ್ಣವ " ದಲ್ಲಿಯೂ ಮತ್ತು " ವರಾಹ ಪುರಾಣ " ದಲ್ಲಿಯೂ ಉಲ್ಲೇಖಿತವಾಗಿದೆ. 
8 ರಿಂದ 80 ವರ್ಷದ ಎಲ್ಲಾ ಸ್ತ್ರೀ ಪುರುಷರು ತಪ್ಪದೇ ಏಕಾದಶೀ ದಿನದಂದು ಪರಿಶುದ್ಧವಾದ ಮನಸ್ಸಿನಿಂದ ಉಪವಾಸ ಮಾಡಲೇಬೇಕೆಂದು " ಕಾತ್ಯಾಯನ ಸ್ಮೃತಿ " ಹೇಳಿದೆ. 
ಮೇಲ್ಕಂಡ ವಯೋಮಾನದವರು ಮೋಹದಿಂದ, ಭ್ರಮೆಯಿಂದ, ದೇಹಾಭಿಮಾನದಿಂದ ಅಥವಾ ಇನ್ನಾವುದೋ ಭ್ರಾಮಕ ವಚನದಿಂದ ಮರಳಾಗಿ " ಏಕಾದಶೀ " ದಿನ ಭೋಜನ ಮಾಡಿದರೆ ಅವನು ಮಹಾ ಪಾಪಿಯಾಗುತ್ತಾನೆ. 
ಶ್ರೀ ಮಹಾಲಕ್ಷ್ಮೀದೇವಿಯೇ ಮೊದಲಾಗಿ ಎಲ್ಲಾ ದೇವತೆಗಳೂ ಏಕಾದಶೀ ಉಪವಾಸ ವ್ರತ ಮಾಡುತ್ತಾರೆಂಬ ವಿಷಯವು " ಪದ್ಮಪುರಾಣ " ದಲ್ಲಿ ಉಕ್ತವಾಗಿದೆ. 
ಎಲ್ಲಾ ದೇವತೆಗಳೂ, ಎಲ್ಲಾ ಮಾನವರೂ ಏಕಾದಶೀ ದಿನ ಉಪವಾದ ವ್ರತ ಮಾಡಲೇಬೇಕು. ಈ ವಿಷಯದಲ್ಲಿ ಸಂಶಯ ಇಟ್ಟುಕೊಳ್ಳಬೇಕಾಗಿಲ್ಲವೆಂದು " ಶ್ರೀ ವಿಷ್ಣುತೀರ್ಥರು ಏಕಾದಶೀ ನಿರ್ಣಯ " ದಲ್ಲಿ ಹೇಳಿದ್ದಾರೆ. 
ಎಲ್ಲರಿಗೂ ಏಕಾದಶೀ ವ್ರತ ನಿತ್ಯ ವ್ರತವಾಗಿದೆ. ಅಂದರೆ ಯಾವಗಾಲೂ ಮಾಡಲ್ಪಡಬೇಕಾದುದು ಮತ್ತು ಬಿಡಬೇಕಾದದ್ದು ಅಲ್ಲ ಎಂದು ಅರ್ಥ. ಆಯುಸ್ಸು ಇರುವ ವರೆಗೂ ಎಲ್ಲಾರು ಮಾಡತಕ್ಕ ಮುಕ್ತಿಯೋಗ್ಯವಾದ ವ್ರತವೆಂದರೆ " ಏಕಾದಶೀ ವ್ರತ ". 
ಎಲ್ಲಾರು ಏಕಾದಶೀ ವ್ರತ ಆಚರಿಸಲೇಬೇಕೆಂದು " ವಿಷ್ಣು ರಹಸ್ಯ " ಎಂಬ ಗ್ರಂಥದಲ್ಲಿ ಹೇಳಿದೆ. 
ಏಕಾದಶೀ ವ್ರತವನ್ನು ಕುಲ, ಜಾತಿ, ಮತ, ಪಂಥಗಳೆಣಿಸದೆ ಎಲ್ಲಾರೂ ವ್ರತಾಚರಣೆ ಮಾಡಲೇಬೇಕೆಂದೂ, ಇಲ್ಲವಾದರೆ ಮಹಾ ಪಾಪ ಬರುತ್ತದೆಂದೂ " ಸನತ್ಕುಮಾರ ಸಂಹಿತೆ, ಗರುಡ ಪುರಾಣ ಮತ್ತು ಕಣ್ವ ಋಷಿಗಳೂ " ಕೂಡಾ ಹೇಳಿದ್ದಾರೆ.  
ಏಕಾದಶೀ ವ್ರತವು ಕಾಮ್ಯವೆಂದು ತಿಳಿಯುತ್ತದೆ. ಏಕಾದಶೀ ವ್ರತ ಉಪವಾಸ ಮಾಡುವುದರಿಂದ ಅದಕ್ಕೆ " ಸಾಯುಜ್ಯ " ಮುಂತಾದ ಫಲಗಳು ಬರುತ್ತದೆ ಎಂದು ಸಾಕಷ್ಟು ಪ್ರಮಾಣಗಳಿವೆ. 
ಸಾತ್ವಿಕ ಮಾನವನು ವಿಷ್ಣುವಿನ ಜೊತೆಗೆ ಸಾಯುಜ್ಯ ಮೋಕ್ಷವನ್ನೂ, ಪುತ್ರ ಸಂಪತ್ತನ್ನೂ ಮತ್ತು ಇತರ ಸಂಪತ್ತನ್ನೂ ತನಗೆ ಅಪೇಕ್ಷಿಸುವುದಾದರೆ ಶುಕ್ಲ ಮತ್ತು ಕೃಷ್ಣ ಪಕ್ಷ ಏಕಾದಶೀ ಎಂಬ ವ್ಯತ್ಯಾಸ ಮಾಡದೇ ಎರಡೂ ಪಕ್ಷಗಳ ಏಕಾದಶೀಗಳಲ್ಲಿಯೂ ಭೋಜನ ಮಾಡದೆ ಉಪವಾಸ ವ್ರತ ಮಾಡಬೇಕೆಂದು " ವಿಷ್ಣು ರಹಸ್ಯ " ದಲ್ಲಿ ಹೇಳಿದೆ. 
ಶ್ರೀ ಹರಿಯಲ್ಲಿ ಅವಿಚ್ಛಿನ್ನವಾದ ಭಕ್ತಿ ಉಳ್ಳವನೇ ಸಾತ್ವಿಕ ಮಾನವನು. ಸಂಸಾರವೆಂಬ ಸಮುದ್ರವನ್ನು ದಾಟಬೇಕೆಂದು ಬಯಸುವೀಯಾದರೆ, ಇಹ ಲೋಕದಲ್ಲಿ ಐಶ್ವರ್ಯ, ಸತ್ಸಂತಾನ, ಸ್ವರ್ಗ ಮತ್ತು ಮುಕ್ತಿ ಇನ್ನೂ ಇತರವಾದ ಯಾವ ಯಾವ ಫಲಗಳನ್ನು ಬಯಸುವಿಯೋ ಅದೆಲ್ಲವೂ " ಏಕಾದಶೀ ಉಪವಾಸ " ಮಾಡುವುದರಿಂದ ದೊರಕುತ್ತದೆ ಎಂದು " ಕಾತ್ಯಾಯನ ಸ್ಮೃತಿ " ತಿಳಿಸಿದೆ. 
ಬಿಳಿ ಅಥವಾ ಕಪ್ಪು ಗೋವುಗಳು ಸರ್ವಥಾ ಹಿಂಸೆಗೆ ಅರ್ಹವಲ್ಲ. ಬಿಳಿ ಮತ್ತು ಕಪ್ಪು ಎಂಬ ವಿವೇಚನೆ ಇಲ್ಲದೇ ಯಾವ ಗೋವನ್ನು ಕೊಲ್ಲಬಾರದು. ಅದರಂತೆ ಎರಡೂ ಪಕ್ಷಗಳ ಏಕಾದಶೀಯಲ್ಲಿಯೂ ಭೋಜನ ಮಾಡಬಾರದು. ಉಪವಾಸ ಮಾಡಬೇಕೆಂದು " ಕೃಷ್ಣಾಮೃತ ಮಹಾರ್ಣವ " ದಲ್ಲಿ ಉಕ್ತವಾಗಿದೆ. 
ದೈವಜ್ಞನಾದ ಬ್ರಾಹ್ಮಣನು ಬೆಳ್ಳಗಿರಲೀ ಅಥವಾ ಕಪ್ಪಾಗಿ ಇರಲೀ ಅವನನ್ನು ಚೆನ್ನಾಗಿ ಪೂಜಿಸಿ ದಾನವನ್ನಿತ್ತರೆ ಅವನು ನಮ್ಮನ್ನು ಸಂಸಾರ ಸಮುದ್ರದಿಂದ ದಾಟಿಸುತ್ತಾನೆ. ಅದರಂತೆ ಏಕಾದಶೀ ವ್ರತವನ್ನು ವಿಧಿ ಪೂರ್ವಕವಾಗಿ ಅನುಷ್ಠಾನ ಮಾಡಿದ ಕರ್ತೃವನ್ನು ಸಂಸಾರದಿಂದ ಪಾರು ಮಾಡುತ್ತದೆಂದು " ಪದ್ಮಪುರಾಣ " ಹೇಳಿದೆ. 
ಮಾನವನು ಎರಡೂ ಪಕ್ಷಗಳ ಏಕಾದಶೀ ಉಪವಾಸ ವ್ರತ ಮಾಡಿದರೆ ಸತ್ಪುತ್ರರನ್ನೂ, ಆಯುಷ್ಯವನ್ನೂ, ಐಶ್ವರ್ಯವನ್ನೂ, ಸಾಯುಜ್ಯ ಪದವಿಯನ್ನೂ ಪಡೆಯುತ್ತಾನೆಂದೂ " ಮತ್ಸ್ಯ, ಕೂರ್ಮ ಪುರಾಣ " ಗಳಲ್ಲಿ ತಿಳಿಸಲಾಗಿದೆ. 
" ಏಕಾದಶೀ ಶ್ರಾದ್ದಕ್ಕೆ ನಿಷೇಧ "
ಏಕಾದಶೀ ಶ್ರಾದ್ಧ ಏಕಾದಶೀ ಉಪವಾಸದ ದಿನ ಮಾಡಬಾರದು. ಆ ದಿನ ಪಿತೃಗಳನ್ನು ಉದ್ಧೇಶಿಸಿ ಅನ್ನವನ್ನು ದಾನ ಮಾಡಿದವನಿಗೂ, ಶ್ರಾದ್ಧದಲ್ಲಿ ಭೋಕ್ತೃಆಗಿ ಕುಳಿತು ಭೋಜನವನ್ನು ಮಾಡಿದವನಿಗೂ, ಯಾರನ್ನುಉದ್ಧೇಶಿಸಿ ಬ್ರಾಹ್ಮಣ ಭೋಜನ ಪಿಂಡ ಪ್ರದಾನಾದಿಗಳನ್ನು ಮಾಡುತ್ತಾರೋ ಅಂಥಹಾ ಏಕಾದಶೀ ಪಿತೃಗಳಿಗೂ ಏಕಾದಶಿಯ ದಿನ ಕೊಟ್ಟ ಅನ್ನವು ಪಾಪಕ್ಕೆ ಸಾಧನವಾಗುತ್ತದೆ. 
ಏಕಾದಶಿಯ ದಿನ ಅನ್ನವನ್ನು ತಿನ್ನಬೇಕೆಂದು ಬಯಸುವವನೂ, ಅನ್ನದಾನ ಮಾಡುವವನೂ, ಆ ದಿನ ಅನ್ನವನ್ನು ಭೋಜನ ಮಾಡುವವನೂ ತನ್ನನ್ನು ಮತ್ತು ತನ್ನ ಪಿತೃಗಳನ್ನೂ ಶಾಶ್ವತವಾಗಿ ನರಕಕ್ಕೆ ತಳ್ಳುತ್ತಾರೆ. 
ಏಕಾದಶೀ ದಿನ ಮೃತ ತಿಥಿಯೇ ಆಗಿರಲಿ ಆ ದಿನವನ್ನು ಬಿಟ್ಟು ದ್ವಾದಶೀ ದಿನವೇ ಏಕಾದಶೀ ಶ್ರಾದ್ಧ ಮಾಡಬೇಕು. ಯಾರು ಅಜ್ಞಾನದಿಂದ, ಭ್ರಾಂತಿಯಿಂದ ಮತ್ತು ಮತ್ತವುದಾದರೂ ಮೋಹದಿಂದ ಏಕಾದಶೀ ದಿನ ಶ್ರಾದ್ಧ ಮಾಡುತ್ತಾರೋ, ಅನ್ನವನ್ನು ಕೊಡುತ್ತಾರೋ ಅವರು ಹಾಳಾಗಿ ಹೋಗುತ್ತಾರೆ. ಅಂಥಹಾ ಮೂಢರು ಖಂಡಿತವಾಗಿಯೂ ನರಕಕ್ಕೆ ಬೀಳುತ್ತಾರೆ ಎಂದು ಗುರುಡನಿಗೆ ಶ್ರೀ ಹರಿಯು ಹೇಳಿದ್ದು " ಗರುಡ ಪುರಾಣ " ದಲ್ಲಿ ಉಕ್ತವಾಗಿದೆ. ಈ ವಿಷಯವು ಹಾರಿತ ಸ್ಮೃತಿಯಲ್ಲಿಯೂ, ಸಂಗ್ರಹವೆಂಬ ಧರ್ಮ ಶಾಸ್ತ್ರ ಗ್ರಂಥ " ದಲ್ಲಿಯೂ ಉಲ್ಲೇಖಿತವಾಗಿದೆ. 
ತಂದೆ ತಾಯಿಯ ಶ್ರಾದ್ಧ ಮತ್ತು ಇತರರ ಶ್ರಾದ್ಧ ಏಕಾದಶೀ ಮಾಡಬಾರದು. ಏಕಾದಶಿಯ ಶ್ರಾದ್ಧವನ್ನು ದ್ವಾದಾಶೀಯಂದೇ ಮಾಡಬೇಕೆಂದು " ಹಯಗ್ರೀವ ಸಂಹಿತೆ " ಯಲ್ಲಿ ಹೇಳಿದೆ. 
ಮೋಹದಿಂದ ಯಾರಾದರೂ ಏಕಾದಶೀ ದಿನ ಶ್ರಾದ್ಧ ಮಾಡಿದರೆ ತನ್ನ ಪಿತೃಗಳಿಗೆ ರೇತಸ್ಸು, ಮೂತ್ರ, ಅಮೇಧ್ಯ = ಮಲ, ಮುಂತಾದ ಹೊಲಸು ಪದಾರ್ಥಗಳನ್ನು ಕೊಟ್ಟಂತೆ ಆಗುತ್ತದೆ. 
ಏಕಾದಶೀ ಪ್ರಾಪ್ತವಾದಾಗ ಯಾರು ಆಬ್ಧಿಕ ಮುಂತಾದ ಶ್ರಾದ್ಧವನ್ನು ಮಾಡುತ್ತಾರೋ ಆ ಶ್ರಾದ್ಧದ ಅನ್ನವನ್ನು ರಾಕ್ಷಸರೇ ಊಟ ಮಾಡುತ್ತಾರೆ. ಆ ಶ್ರಾದ್ಧಾನ್ನವು ರಾಕ್ಷಸರಿಗೆ ಮಾತ್ರವೇ ಊಟಕ್ಕೆ ಅರ್ಹವಾದುದು. ಆದುದರಿಂದ ಶ್ರಾದ್ಧವನ್ನು ಮಾಡುವವರು ಏಕಾದಶೀ ದಿನ ಶ್ರಾದ್ಧ ಮಾಡಬಾರದೆಂದು " ಭಾರದ್ವಾಜ ಸ್ಮೃತಿ " ಯಲ್ಲಿ ಸವಿಸ್ತಾರವಾಗಿ ತಿಳಿಸಲಾಗಿದೆ. 
ಏಕಾದಶೀ ದಿನ ಬ್ರಾಹ್ಮಣರು ಸತ್ತರೆ ಮಕ್ಕಳು ಮಂತ್ರ ಪುರಸ್ಸರವಾಗಿ ಎಲ್ಲಾ ಔರ್ಧ್ವ ದೇಹಿಕ ಸಂಸ್ಕಾರಗಳನ್ನೂ ಮಾಡಬೇಕು. ಆದರೆ ಪ್ರೇತಾಹುತಿಯನ್ನು ಕೊಡಬಾರದು. ಎಲ್ಲವೂ ದ್ವಾದಶೀಯಂದೇ ಮಾಡಬೇಕು. ಅಂತೆಯೇ ಶಾಸ್ತ್ರದ ಆಜ್ಞೆಯೋ ಇದೆ. ಏಕಾದಶೀ ಪಿಂಡ ದಾನಾದಿಗಳನ್ನು ಮಾಡದೇ ಇದ್ದ ಕಾರಣ ಕರ್ಮ ಲೋಪವಾಗುವುದಿಲ್ಲ. ಇದು ಅನಾದಿ ಸಿದ್ಧವಾದ ಸಂಪ್ರದಾಯ. ಏಕಾದಶೀ ಮರಣವಾದರೂ ಆ ದಿನ ತಿಲೋದಕ, ಪಿಂಡದಾನ, ಹೋಮ, ತರ್ಪಣ, ತಿಲದಾನ, ಆಮ ಶ್ರಾದ್ಧ ಇವೆಲ್ಲವನ್ನೂ ಏಕಾದಶೀ ಮಾಡದೇ ದ್ವಾದಶೀ ದಿನದಲ್ಲಿಯೇ ಮಾಡಬೇಕೆಂದು " ದತ್ತಾತ್ರೇಯ ಸಂಹಿತೆ " ಯಲ್ಲಿ ಹೇಳಿದೆ.
**
" ಏಕಾದಶೀ - 3 "
" ತಿಥಿ ತ್ರಯಗಳಲ್ಲಿ ವರ್ಜ್ಯ ಪದಾರ್ಥಗಳ ವಿವರವನ್ನು ಶ್ರೀ ಪ್ರಾಣೇಶ ದಾಸರು ಈ ರೀತಿ ಹೇಳಿದ್ದಾರೆ "
ಪುನಹ ಭೋಜನ, ಕಾಂಶ, ಹಾರಕ ।
ಚಣಕ, ಉದ್ಧಲ, ಸಂಧಿ, ಮಧು, । ಮೈ ।
ಥುನ, ಪಾರಾನ್ನವು, ಶಾಕ ಈ -
ದಶ ವರ್ಜ್ಯ ದಶಮಿಯಲಿ ।।
ದಿನದಿ ನಿದ್ರಿ ಕದಳಿ ಮಧು । ದ್ವಿ ಭೋ ।
ಜನ ಸ್ತ್ರೀ ತೈಲುದಕಾಂಶ  ಈ । ಎಂ ।
ಟನು ಬಿಡಲು ದ್ವಾದಶಿಗೆ -
ಪ್ರಾಣೇಶವಿಠ್ಠಲ ಮೆಚ್ಚುವನು ।।
ವಿವರಣೆ :
ತಾಂಬೂಲ - ಸ್ತ್ರೀಸಂಗ - ತೈಲ ಲೇಪನ - ಅಂಗ ಮರ್ದನ ( ಕೈ ಕಾಲು ಒತ್ತಿಸಿಕೊಳ್ಳುವುದು ) ಜೂಜು - ತೃಪ್ತಿ ಆಗುವವರೆಗೂ ಆಹಾರ ಸೇವನೆ ಇವುಗಳಲ್ಲಿ ಒಂದನ್ನು ಮಾಡಿದರೂ ಏಕಾದಶೀ ವ್ರತವೆಲ್ಲವೂ ನಾಶವಾಗುತ್ತದೆ. 
ಹಗಲು ನಿದ್ದೆ ಮಾಡುವುದು - ವ್ರತ ಹೀನನಾದವರ ಜೊತೆ ಸಂಭಾಷಣೆ - ಸಹವಾಸ - ವೇಶ್ಯ - ನಟರು ಮತ್ತು ನಾಟ್ಯ ನಾಟಕಾದಿಗಳ ದರ್ಶನ - ಮೈಗೆ ಸುಗಂಧ ದ್ರವ್ಯಗಳಿಂದ ಸಂಸ್ಕಾರ - ಅಹಂಕಾರ ಮತ್ತು ಹುಳಹುಪ್ಪಟಿಗಳನ್ನು ಹಿಂಸಿಸುವುದರಿಂದ- ವ್ಯಾಯಾಮ ಇವೆಲ್ಲವೂ ಏಕಾದಶೀ ಕಾಲು ಅಂಶವನ್ನು ಸುಟ್ಟು ಬಿಡುತ್ತವೆ. 
ತೀರ್ಥ ಕ್ಷೇತ್ರಗಳಲ್ಲಿ ಗಡ್ಡಾ ಮೀಸೆಗಳನ್ನು ಕ್ಷೌರ ಮಾಡಿಸಿಕೊಳ್ಳುವುದೂ - ನಿಷಿದ್ಧ ವಸ್ತುಗಳನ್ನು ಸ್ವೀಕರಿಸಿದರೂ - ಗುರುಗಳ ವಾಕ್ಯವನ್ನು ಪಾಲಿಸದಿದ್ದರೂ - ಫಲ ಹಾನಿಯೂ ಸ್ವಲ್ಪವೇ ಆಗುತ್ತದೆ. 
ಆದರೆ ಶ್ರೀ ಹರಿಗೆ ಅತ್ಯಂತ ಪ್ರಿಯವಾದ ಏಕಾದಶೀ ವ್ರತವನ್ನು ಮಾಡದೆ ಇದ್ದವರು ಮಾತ್ರ ಮಹಾ ಪಾಪಿಯಾಗಿ ಸಾವಿರ ಸಾವಿರ ವರ್ಷಗಳು ನರಕ ಭಾಜಕರಾಗಿ ಶ್ರೀ ಹರಿಗೆ ದ್ರೋಹ ಮಾಡಿದವನು ಆಗುತ್ತಾನೆ. 
ಮಹತ್ತಾದ ಆಪತ್ಕಾಲ ಬಂದಾಗ್ಯೂ ಏಕಾದಶೀ ದಿನದಂದು ಅನ್ನ ತಿನ್ನುತ್ತಾನೋ ಲಕ್ಷ್ಮೀದೇವಿಯೇ ಮೊದಲಾದ ನನ್ನ ಭಕ್ತರು ಪ್ರಾರ್ಥಿಸಿದರೂ ಅವರ ಅಪರಾಧವನ್ನು ನಾನು ಸಹಿಸುವುದಿಲ್ಲವೆಂದು ಭಗವಂತನು ಹೇಳಿದ್ದಾನೆ. 
ಉದ್ದು - ಉಪ್ಪು - ಮಾಂಸವನ್ನು ಎಳ್ಳಿನಷ್ಟಾದರೂ ಯಾರು ಏಕಾದಶೀ ದಿನ ಭಕ್ಷಿಸುತ್ತಾರೋ ಅವರ ಏಕಾದಶೀ ವ್ರತವು ಸಂಪೂರ್ಣವಾಗಿ ನಿಷ್ಫಲವಾಗುತ್ತದೆ. 
ಮೂರು ಲೋಕಗಳಲ್ಲಿಯೂ ಎಷ್ಟು ಪಾಪ ರಾಶಿಗಳಿರುತ್ತವೆಯೋ ಅವೆಲ್ಲವೂ ಏಕಾದಶೀ ಪ್ರಾಪ್ತವಾದಾಗ ಅನ್ನವನ್ನು ಆಶ್ರಯಿಸುತ್ತವೆ. 
ಆ ದಿನ ಅನ್ನದ ವಾಸನೆಯನ್ನೂ ತೆಗೆದುಕೊಳ್ಳಬಾರದು. 
ಅಕ್ಕಿ ಬೆಂಕಿ ನೀರುಗಳ ಸಂಬಂಧ ಅನ್ನವಾಗುತ್ತದೆ. 
ಇದು ಮುಸುರೆ ಆಗುತ್ತದೆ. 
ಹಿಟ್ಟು, ಉಪ್ಪಿನ ಸಂಬಂಧ ಅನ್ನ ಆಗುತ್ತದೆ. 
ಇದೂ ಮುಸುರೆ. 
ಹಣ್ಣು, ನೀರು, ಉಪ್ಪು ಮತ್ತು ಬೆಂಕಿಯ ಸಂಬಂಧ ಅನ್ನ ಎನ್ನಿಸಿಕೊಳ್ಳುತ್ತದೆ. 
ಇದು ಮುಸುರೆ ಆಗುತ್ತದೆ. 
ಆದ್ದರಿಂದ ಏಕಾದಶೀ ದಿನ ಮುಸುರೆ ಪದಾರ್ಥಗಳು ನಿಷಿದ್ಧ. 
ಯಾವ ನೀಚ ಮನುಷ್ಯನು ಒಂದುಬಾರಿಯಾದರೂ ಈ ಏಕಾದಶೀ ವ್ರತವನ್ನು ಕೇಡಿಸುತ್ತಾನೋ ಅವನು ಒಂದು ಕಲ್ಪ ಪರ್ಯಂತ ರೌರವಾದಿ ನರಕದಲ್ಲಿ ಬೀಳುತ್ತಾನೆ. ಇದು ನಿಶ್ಚಯ. 
ಏಕಾದಶೀ ವ್ರತದ ವ್ರತ ಅರ್ಧ ಹಾನಿಯಾದರೆ ಪುಣ್ಯವೂ ಅರ್ಧವಾಗುತ್ತದೆ. 
ಕಾಲು ಅಂಶ ವ್ರತ ಹಾನಿಯಾದರೆ ಪುಣ್ಯವೂ ಕಾಲು ಅಂಶ ಕಡಿಮೆ ಆಗುತ್ತದೆ. 
ತಿಳಿಯದೆ ಅಜ್ಞಾನದಿಂದ ಅಥವಾ ಅಜಾಗರೂಕತೆಯಿಂದ ಯಾರು ಹರಿ ದಿನದಲ್ಲಿ ಅನ್ನವನ್ನು ತಿನ್ನುತ್ತಾನೋ ಅವನಿಗೆ ಒಂದು ಲಕ್ಷ ಹರಿ ನಮಸ್ಕಾರವೇ ಪ್ರಾಯಶ್ಚಿತ್ತ. 
ಏಕಾದಶೀ ವ್ರತ ಮಾಡಲು ಸಮರ್ಥನಾಗಿದ್ದರೂ ಯಾರು ಫಲಹಾರ ಮಾಡುತ್ತಾರೋ ಅವರಿಗೆ 10000 ನಮಸ್ಕಾರಗಳೂ - ಅರ್ಧ ಹಾನಿಯಾದರೆ 5000, ಕಾಲು ಭಾಗ ವ್ರತ ಹಾನಿಯಾದರೆ 2500 ನಮಸ್ಕಾರಗಳು ಪ್ರಾಯಶ್ಚಿತ್ತವೆಂದು ತಿಳಿಯಬೇಕು. 
ಆಶಕ್ತನಾದವರು ಇನ್ನೊಬ್ಬರಿಂದ ಕೊಡಲ್ಪಟ್ಟ ಫಲಾಹಾರವನ್ನು ಮಾಡಿದರೆ ( ಮಾಡಿಸಿದರೆ ) ಫಲಾಹಾರ ಕೊಟ್ಟವನಿಗೆ ಪೂರ್ತಿ ಪುಣ್ಯ ಬರುತ್ತದೆ. 
ತಿಂದವನಿಗೆ ಅರ್ಧ ಪುಣ್ಯ ನಾಶವಾಗುತ್ತದೆ. 
" ಏಕಾದಶೀ ಜಾಗರಣೆ ಫಲ "
ಶ್ರೀಮನ್ನಾರಾಯಣನ ಎದುರಿನಲ್ಲಿ ಎಷ್ಟು ಏಕಾದಶೀ ಜಾಗರಣೆ ಮಾಡುತ್ತಾನೋ ಅಷ್ಟು ದಿನಗಳ ಪರ್ಯಂತ ಸ್ವರ್ಗ ಲೋಕದಲ್ಲಿ ಶ್ರೀ ಹರಿಯ ಭವನದಲ್ಲಿ ಭಕ್ತನು ವಾಸಿಸುತ್ತಾನೆ. 
ಶ್ರೀ ಹರಿಯ ದಿನ ಏಕಾದಶೀ ದಿನದಲ್ಲಿ ಜಾಗರಣೆ ಇಲ್ಲದೇ ಇರುತ್ತಾನೋ ಅಷ್ಟು ವರ್ಷಗಳ ವರೆಗೆ ನರಕದಲ್ಲೇ ದುಃಖ ಅನುಭಿಸುತ್ತಾ ಇರುತ್ತಾನೆ. 
ಏಕಾದಶೀ ದಿನ ಹರಿಸ್ಮರಣೆ, ಕೀರ್ತನೆ, ಜಾಗರಣೆ ಆಚರಿಸದೇ ನಿದ್ದೆ ಮಾಡುವವನಿಗೆ ಏಳು ಜನ್ಮಗಳಲ್ಲಿ ಹೆಳವತನ ಬರುತ್ತದೆ ಎಂದು ಶ್ರೀ ಮಹಾರುದ್ರದೇವರು ಪಾರ್ವತೀದೇವಿಗೆ ಹೇಳಿದ್ದಾರೆ. 
ಶ್ರೀ ಹರಿಯ ದಿನಲ್ಲಿ ಯಾರು ಜಾಗರಣೆ ಮಾಡುತ್ತಾ ಗಾನದೊಂದಿಗೆ ನರ್ತನ ಮಾಡುತ್ತಾರೋ ಅವರಿಗೆ ನನ್ನ ಲೋಕವದ ಕೈಲಾಸವೂ, ಬ್ರಹ್ಮನ ಸತ್ಯಲೋಕವೂ, ಶ್ರೀ ಹರಿಯ ವೈಕುಂಠವೂ ದೂರವಲ್ಲ. ಹತ್ತಿರವಾಗುತ್ತದೆ. 
ಶ್ರೀ ಹರಿಯ ದಿನದಲ್ಲಿ ಯಾರು ಜಾಗರಣೆಗೆ ಎಬ್ಬಿಸುತ್ತಾರೋ ಅವರು 600 ಸಾವಿರ ಯುಗ ಯುಗ ಪರ್ಯಂತರವಾಗಿ ಪಿತೃಗಳೊಡನೆ ವಾಸಿಸುತ್ತಾರೆ. 
ಏಕಾದಶೀ ದಿನದಲ್ಲಿ ಶ್ರೀ ಹರಿಯ ಪ್ರೀತ್ಯರ್ಥವಾಗಿ ಜಾಗರಣೆ ಮಾಡಬೇಕೆಂದು ಯಾರು ನೆನಪು ಮಾಡುತ್ತಾರೋ ಅವರು 60000 ವರ್ಷಗಳು ಶ್ವೇತದ್ವೀಪದಲ್ಲಿ ವಾಸಿಸುತ್ತಾನೆ, 
ಮನುಷ್ಯರು ಮಾಡುವ ವ್ರತ, ಯಜ್ಞ ಮುಂತಾದವುಗಳಲ್ಲಿ ಏನಾದರೂ ಲೋಪ ದೋಷಗಳು ಕಂಡು ಬಂದರೂ ಏಕಾದಶೀ ಜಾಗರಣೆ ಮಾಡುವುದರಿಂದ ಆ ನ್ಯೂನ್ಯತೆಗಳು ನಾಶವಾಗುತ್ತವೆ.
ದ್ವಾದಶಿಯಲ್ಲಿ ಕರು ಸಹಿತವಾಗಿ ಗೋವನ್ನು ಬ್ರಾಹ್ಮಣರಿಗೆ ದಾನ ಕೊಟ್ಟರೆ ಏನು ಫಲ ಉಂಟಾಗುತ್ತದೆಯೋ, ಪಾಪ ರಹಿತಳಾದ ಪಾರ್ವತಿಯೇ! ಆ ಫಲವು ಒಂದು ನಿಮಿಷದ ಹತ್ತನೇ ಒಂದು ಭಾಗದಲ್ಲಿಯೇ ಏಕಾದಶಿಯ ಜಾಗರಣೆ ಮಾಡುವನಿನೆ ಫಲ ಬರುತ್ತದೆ. 
ಪಾರ್ವತಿಯೇ! ಮನುಷ್ಯನು ಕೋಟಿ ಜನ್ಮಗಳಲ್ಲಿ ಏನೇನು ಪಾಪಗಳನ್ನು ಮಾಡುತ್ತಾನೋ ಹರಿ ದಿನದಲ್ಲಿ ರಾತ್ರಿ ಜಾಗರಣೆ ಮಾಡಿದರೆ ಆ ಪಾಪಗಳೆಲ್ಲವೂ ಸುಟ್ಟು ಹೋಗುತ್ತವೆ. 
ಏಕಾದಶೀ ರಾತ್ರಿ ಜಾಗರಣೆ ಮಾಡುತ್ತಿರುವ ವೈಷ್ಣವರ ಸಮೀಪದಲ್ಲಿ ಯಾರು ಸಚ್ಛಾಸ್ತ್ರಗಳನ್ನೂ ಪಾರಾಯಣ ಮಾಡುತ್ತಾರೋ ಅವರು ಸಮಸ್ತ ಭೂಮಂಡಲವನ್ನು ದಾನ ಮಾಡಿದ ಫಲವನ್ನು ಪಡೆಯುತ್ತಾರೆ. 
ಜಾಗರಣೆ ಮಾಡುವಾಗ ಅತಿಶಯ ಭಕ್ತಿಯಿಂದ ಪಾರಾಯಣ ಮಾಡಬೇಕು. ಪಾರಾಯಣ ಮಾಡುವ ಮನುಷ್ಯರಿಗೆ ನೂರು ವರ್ಷಗಳ ಕಾಲ ಕೃಷ್ಣಾಜಿನೋಭಯಮುಖಿಯನ್ನು ದಾನ ಮಾಡಿದ ಫಲ ಬರುತ್ತದೆ.         
ಕೇಶವನ ಆಲಯವನ್ನು ಕುರಿತು ಜಾಗರಣೆಗಾಗಿ ಹೋಗುತ್ತಾ ಪ್ರಯತ್ನ ಪೂರ್ವಕವಾಗಿ ಹೆಜ್ಜೆಗಳನ್ನು ಇಡುತ್ತಾನೋ ಅಷ್ಟೂ ಹೆಜ್ಜೆಗಳೂ ಅಶ್ವಮೇಧ ಯಾಗಕ್ಕೆ ಸಮಾನವಾಗುತ್ತದೆ.    
" ಏಕಾದಶೀ ಜಾಗರಣೆ ಮಾಡದೇ ಇದ್ದರೆ ಏನು ಆಗುತ್ತದೆ? 
ಎಂಬ ಪ್ರಶ್ನೆಗೆ ಉತ್ತರ... 
ಹರಿ ದಿನದಲ್ಲಿ ಯಾರು ಜಾಗರಣೆ ಮಾಡುವುದಿಲ್ಲವೋ ಅವರ ಪುಣ್ಯವೆಲ್ಲವೋ ನಾಶವಾಗಿ ಹೋಗುತ್ತವೆ. 
ಇಷ್ಟ ಪಟ್ಟ ಪ್ರಯೋಜನಗಳೂ - ಸಂಪತ್ತು - ಮಕ್ಕಳು - ಕೀರ್ತಿ - ಶಾಶ್ವತವಾದ ಲೋಕಗಳೂ ಇವೆಲ್ಲವೂ ಏಕಾದಶೀ ಜಾಗರಣೆ ಮಾಡದೇ ಇದ್ದರೆ 10000 ಯಜ್ಞಗಳು ಮಾಡಿದರು ಲಭ್ಯವಾಗುವುದಿಲ್ಲ. 
ಯಥಾರ್ಥ ವಚನವನ್ನು ಆಡುವುದೂ, ಬಾಹ್ಯ ಅಂತರ ಶುಚಿತ್ವ, ಕೃಚ್ಛ್ರ, ಚಂದ್ರಾಯಣಾದಿ ತಪಸ್ಸು, ಅಧ್ಯಯನ, ದಾನ, ಯಾಗ, ಶಾಸ್ತ್ರಾಭ್ಯಾಸ ಇವೆಲ್ಲವೂ ಹರಿದಿನದಲ್ಲಿ ಜಾಗರಣೆ ಮಾಡದಿದ್ದರೆ ವ್ಯರ್ಥವಾಗುತ್ತದೆ. 
ಹರಿ ದಿನದಲ್ಲಿ ಯಾರಿಗೆ ಹರಿ ಸ್ಮರಣೆ ಬರುವುದಿಲ್ಲವೋ, ಶ್ರೀ ಹರಿಯ ಮಹಿಮೆಗಳನ್ನು ಮನನ ಮಾಡುವುದಿಲ್ಲವೋ ಅವರಿಗೆ ಶ್ರೀಮನ್ನಾರಾಯಣನ ಪೂಜೆ ಮಾಡುವ ಅಧಿಕಾರ ಇಲ್ಲ. 
ಅನೇಕ ವ್ರತಗಳನ್ನು ಮಾಡಿದರೂ, ಬಹು ಕಾಲ ತೀರ್ಥ ಕ್ಷೇತ್ರಗಳಲ್ಲಿ ವಾಸ ಮಾಡಿದರೂ ಏಕಾದಶೀ ಜಾಗರಣೆ ಮಾಡದಿದ್ದರೆ ಅವೆಲ್ಲವೂ ಪ್ರಯೋಜನಕ್ಕೆ ಬರುವುದಿಲ್ಲ. 
ಯಾರ ಮನಸ್ಸು ಸ್ವಸ್ಥವಾಗಿದ್ದರೂ, ತನ್ನ ಮನೆಯಲ್ಲೇ ಸುಖವಾಗಿದ್ದರೂ ಏಕಾದಶೀ ಜಾಗರಣೆ ಮಾಡುವುದಿಲ್ಲವೋ ಅವನಿಂದ ಆಗಬೇಕಾದುದು ಏನೂ ಇಲ್ಲ. ಅಂಥವರ ಸೇವೆಯನ್ನು ನಾನು ( ಶಿವ ) ಸ್ವೀಕರಿಸುವುದಿಲ್ಲ. ಅಂಥವರನ್ನು ತ್ಯಜಿಸುತ್ತೇನೆ ಎಂದು ಶ್ರೀ ಮಹಾರುದ್ರದೇವರು ಪಾರ್ವತೇದೇವಿಗೆ ಹೇಳಿದರು. 
ಮಧ್ಬಕ್ತೋ ನ ಹರೇಃ ಕುರ್ಯಾತ್ 
ಜಾಗರಂ ಪಾಪ ಮೋಹಿತಃ ।
ವ್ಯರ್ಥಂ ಮತ್ಪೂಜನಂ ತಸ್ಯ 
ಮತ್ಪೂಜ್ಯಂ ಯೋ ನ ಪೂಜ್ಯಯೇತ್ ।।
ಶ್ರೀ ಮಹಾರುದ್ರದೇವರ ವಚನದಂತೆ... 
" ಶಿವ ಭಕ್ತನಾದವನು ಹರಿ ಭಕ್ತಿ ಮಾಡಬಾರದು " ಎಂಬ ಪಾಪಕರವಾದ ಆಲೋಚನೆಯಿಂದ ಮಿಥ್ಯಾಜ್ಞಾನ ಭ್ರಾಂತನಾಗಿ ಏಕಾದಶೀ ಜಾಗರಣೆ ಮಾಡದಿದ್ದರೆ ಅಂಥವನು ನನ್ನನ್ನು ಪೂಜಿಸಿದ್ದೆಲ್ಲವೂ ವ್ಯರ್ಥವಾಗುತ್ತದೆ. 
ಏಕೆಂದರೆ ನನಗೆ ಪೂಜ್ಯನಾದವನು ಶ್ರೀ ಹರಿಯು. 
ಅವನನ್ನು ಪೂಜಿಸದೇ ನನ್ನ ಪೂಜೆಯೇ ತಾರಕವೆಂದು ತಿಳಿದವನು ಪಾಪಾಭಿಮಾನಿ ದೇವತೆಗಳಿಂದ ಮೋಹಕ್ಕೊಳಗಾಗಿ ಹರಿ ಪೂಜೆ, ಜಾಗರಣೆಯನ್ನು ಮಾಡದೇ ನನ್ನನ್ನು ಪೂಜಿಸಿರುತ್ತಾನೆ. 
ಆದ್ದರಿಂದ ನನ್ನ ಅಭಿಪ್ರಾಯಕ್ಕೆ ವಿರುದ್ಧವಾದ ನನ್ನ ಪೂಜೆಯು ವಿಷ್ಣು ಪೂಜೆ ಮಾಡ ಭಕ್ತನಿಗೆ ಫಲಪ್ರದವಾಗುವುದಿಲ್ಲ!!
ಏಕಾದಶಿಯ ಜಾಗರದಲ್ಲಿ । ಪುಣ್ಯ ।
ಲೋಕ ಪಾವನ ಭಾಗವತರಲ್ಲಿ ।।
ಆದ್ದರಿಂದ ಎಲ್ಲರೂ ಏಕಾದಶೀ ವ್ರತವನ್ನು ಜಾಗರಣೆಯೊಂದಿಗೆ ಆಚರಿಸೋಣ....
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***


ಏಕಾದಶಿ ತಾರತಮ್ಯ ಭಜನೆ - ಆರೋಹಣ ಕ್ರಮ

ದಾಸರ ತಾರತಮ್ಯ

೧)ಶೇಷದಾಸರು
೨)ಜಗನ್ನಾಥಸಾಸರು
೩)ಗೋಪಾಲದಾಸರು
೪)ವಿಜಯದಾಸರು
೫)ಪುರಂದರದಾಸರು

ಯತಿಗಳ ತಾರತಮ್ಯ
೧)ಸತ್ಯಪ್ರಮೋದತಿರ್ಥರು
೨)ಸತ್ಯಜ್ಞಾನತಿರ್ಥರು
೩)ವಿಷ್ಣುತಿರ್ಥರು
೪)ಸತ್ಯಭೋದರು
೫)ರಾಯರು
೬)ರಘೂತ್ತಮ ತಿರ್ಥರು
೭)ವಾದಿರಾಜರು
೮)ವ್ಯಾಸರಾಜರು
೯)ಶ್ರೀಪಾದರಾಜರು
೧೦)ಟೀಕಾರಾಯರು
೧೧)ಮಧ್ವಾಚಾರ್ಯರು

ದೇವತಾ ತಾರತಮ್ಯ
೧)ಗಣಪತಿ
೨) ಪಾರ್ವತಿ*
೩)ರುದ್ರದೇವರು
೪)ಗರುಡ, ಶೇಷ
೫)ಸರಸ್ವತಿ, ಭಾರತಿ
೬)ಪ್ರಾಣದೇವರು
೭)ಲಕ್ಷ್ಮೀದೇವಿಯರು
೮)ವೇದವ್ಯಾಸರು
೯)ದೇವರ ಹಾಡುಗಳು.
   ೧)ದೇವರನ್ನ ಕಾಣುವ ಹಂಬಲ
   ೨)ದೇವರನ್ನ ಕರೆಯುವುದು
   ೩)ದೇವರು ಬಂದಿದ್ದು
   ೪)ದೇವರನ್ನ ಕಂಡಿದ್ದು
   ೫)ದೇವರು ನಿಂತಿದ್ದು
   ೬)ದೇವರ ರೂಪ ಚಿಂತನೆ
   ೭)ದೇವರಲ್ಲಿ ಶರಣಾಗತಿ(ಆತ್ಮ ನೀವೆದನೆ)
   ೮)ದೇವರ ದಶಾವತಾರ ಹಾಡುಗಳು
   ೯)ದೇವರ ನಿಂದಾಸ್ತುತಿ
೧೦)ವೈರಾಗ್ಯದ ಹಾಡುಗಳು
೧೧)ದೇವರ ಲಾಲಿ ಹಾಡು
ಎಲ್ಲಾ ಹಾಡುಗಳನ್ನು ಪೂರ್ಣ ಹಾಡಬೇಕು
***



ಶ್ರೀ ವಿದ್ಯಾಮಾನ್ಯ ತೀರ್ಥರು ಮತ್ತು ಏಕಾದಶೀ ವೃತ ಪ್ರಾತಃಸ್ಮರಣೇಯ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಆರಾಧನೆ ಮಗ್ಗುಲಲ್ಲಿದೆ. ಏಕಾದಶೀ ವ್ರತವನ್ನು ನಿಷ್ಠೆಯಿಂದ ಆಚರಿಸಿದರೆ ಭಗವಂತ ಎಷ್ಟು ಸುಪ್ರೀತನಾಗುತ್ತಾನೆಂಬುದಕ್ಕೆ ೨೦ನೆ ಶತಮಾನ ಕಂಡ ಮಹಾ ತಪಸ್ವಿಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರೇ ಸಾಕ್ಷಿ. ‘ಪ್ರಾಣವನ್ನಾದರೂ ಬಿಟ್ಟೇನು ಆದರೆ ಏಕಾದಶೀ ಉಪವಾಸವನ್ನು ಬಿಡೆನು’ ಎಂಬುದು ಅವರ ಛಲ. ಆರೋಗ್ಯ ಎಷ್ಟೇ ಹದಗೆಟ್ಟಿದ್ದರೂ ಏಕಾದಶಿಯಂದು ಉಪವಾಸ ಮಾಡಿಯೇ ತೀರುತ್ತೇನೆ ಎಂಬ ಅವರ ಮನಸ್ಸಿನ ಬಲ ಇನ್ನೆಲ್ಲಿ ಇನ್ನೆಲ್ಲಿ ಕಾಣಲು ಸಾಧ್ಯ! ಅದಕ್ಕಲ್ಲವೇ, ಭೀಷ್ಮರು ಯುಧ್ಧರಂಗದಲ್ಲಿ ರಕ್ತಸಿಕ್ತರಾಗಿ ಮರಣಶಯ್ಯೆಯಲ್ಲಿ ಮಲಗಿದ್ದರೂ ಉತ್ತರಾಯಣ ಪುಣ್ಯಕಾಲಕ್ಕಾಗಿ ನಿರೀಕ್ಷಿಸುತ್ತಿದ್ದಂತೆ ಶ್ರೀಪಾದರು ಅನಾರೋಗ್ಯಕ್ಕೊಳಗಾದರೂ, ಎರಡು-ಮೂರು ಬಾರಿ ಪ್ರಾಣೋತ್ಕ್ರಮಣವಾಯಿತೆಂದು ವೈದ್ಯರು ಭ್ರಮಿಸಿದರೂ ಅದೆಲ್ಲವನ್ನೂ ಮೀರಿ ಏಕಾದಶಿಯನ್ನೇ ನಿರೀಕ್ಷಿಸುತ್ತಾ ಶುಧ್ಧವಾದ ಏಕಾದಶಿಯದೇ ಶುದ್ಧವಾದ ಉಪವಾಸವನ್ನು ಆಚರಿಸುತ್ತಲೇ, ಅತ್ಯಂತ ಶುದ್ಧವಾದ ಆ ಭಗವಂತನನ್ನು ನೆನೆಯುತ್ತಲೇ ಸಂಜೆಯ ಶುದ್ಧವಾದ ಅಮೃತ ಘಳಿಗೆಯಲ್ಲಿ ಅಮೃತಪ್ರದನಾದ ವಾಸುದೆವನನ್ನು ಸೇರಿದ್ದು. ನೂರಾರು ವ್ರತಗಳಿದ್ದರೂ ಯಾವ ವ್ರತವೂ ಉಪವಾಸಕ್ಕೆ ಇಷ್ಟು ಇಂಬು ಕೊಡುವುದಿಲ್ಲ. ಏಕಾದಶಿಯಂದು ಮಾತ್ರ ಉಪವಾಸಕ್ಕೆ ಏಕಿಷ್ಟು ಮಹತ್ವ? ಉಪವಾಸದಿಂದ ಭಗವಂತನು ಪ್ರೀತನಾಗುತ್ತಾನೆ ಎಂದು ಹೇಳುವುದಾದರೆ ಭಗವಂತನಿಗೆ ಒಬ್ಬ ಹಸಿವಿನಿದ ಬಳಲುತ್ತಿದ್ದರೆ ಅದನ್ನು ಕಂಡು ಆನಂದವೆಂದು ಹೇಳಿದಂತಾಗುವುದಿಲ್ಲವೇ? ಇದು ಕೇವಲ ನಮ್ಮ ದೇಹವನ್ನು ಹಿಂಸಿಸುವುದಲ್ಲವೇ? ‘ಶರೀರಮಾದ್ಯಂ ಖಲು ಧರ್ಮಸಾಧನಂ’ ಎಂಬಂತೆ ಈ ದೇಹ ಗಟ್ಟಿಮುಟ್ಟಾಗಿದ್ದರಷ್ಟೇ ಧರ್ಮಾಚರಣೆ ಸಾಧ್ಯ.ಈ ರೀತಿಯ ಉಪವಾಸಗಳಿಂದ ಶರೀರ ಸ್ವಾಸ್ಥ್ಯ ಕೆಡುವುದಿಲ್ಲವೇ? ಆಗ ಧರ್ಮಾಚರಣೆ ಹೇಗೆ ಸಾಧ್ಯ? ಮನುಷ್ಯ ಧರ್ಮದ ಸಾರ್ಥಕತೆ ಹೇಗೆ? ಈ ರೀತಿಯ ಪ್ರಶ್ನೆಗಳ ಸರಮಾಲೆ ಏಳುತ್ತದೆ. ಆದರೆ ಇದೆಲ್ಲ ಭಗವದ್ಭಕ್ತಿಯೇ ಇಲ್ಲದ ಕುಹಕಿಗಳ ಪ್ರಶ್ನೆಗಳು. ಏಕೆಂದರೆ ತಾಯಿಯೊಬ್ಬಳು ತನ್ನ ಮಗುವನ್ನು ದೂರ ಬಿಟ್ಟು ಹೋಗಿದ್ದಾಳೆ. ಮಗು ಸ್ವಲ್ಪ ಹೊತ್ತು ಆಟವಾಡಿತು. ನಂತರ ಅದಕ್ಕಿ ಅಮ್ಮನ ನೆನಪು ಪ್ರಾರಂಭವಾಯಿತು. ಅಮ್ಮ ಬೇಕು ಎಂದು ಹಠ ಮಾಡಲು ಪ್ರಾರಂಭಿಸಿತು. ಆ ಮಗುವಿನ ರಕ್ಷಣೆಗೆ ಇದ್ದ ಬಾಲಕಿ ಆಟಿಕೆಗಳನ್ನು ತೋರಿಸಿದಳು..ಆಟವಾದಿಸಿದಳು, ಏನು ಮಾಡಿದರೂ ಆ ಮಗು ಕೇಳುತ್ತಲೇ ಇಲ್ಲ. ಏನನ್ನು ಕೊಟ್ಟರೂ ಸ್ವೀಕರಿಸಲೂ ಇಲ್ಲ. ಕಡೆಗೆ ದೂರ ಹೋಗಿದ್ದ ತಾಯಿ ಬಂದಳು. ತಾಯಿ ಬರುವವರೆಗೂ ಮಗುವು ಒಂದು ತೊಟ್ಟು ನೀರನ್ನೂ ಸ್ವೀಕರಿಸದೆ ಅಮ್ಮನದೇ ಧ್ಯಾನದಲ್ಲಿದೆ. ಬಂದ ತಾಯಿ ವಿಷಯ ತಿಳಿದು ಬೇಸರಿಸುತ್ತಾಳೋ ಖುಷಿಪಡುತ್ತಾಳೋ? ಅಬ್ಬಾ ಮಗುವಿಗೆ ನನ್ನ ಮೇಲೆ ಎಷ್ಟು ಪ್ರೀತಿಯೆಂದು ಮಗುವನ್ನು ಎತ್ತಿ ಮುದ್ದಾಡಿಸುವಳಷ್ಟೇ. ಹಾಗೆಯೇ ನಾವು ನಡೆಸುವ ಏಕಾದಶೀ ವ್ರತ ಆ ಮಗುವಿನ ಹಟದಂತೆ. ಆ ಮಗುವು ತಾಯಿಗಾಗಿ ಆಹಾರ ಬಿಟ್ಟರೆ ನಾವು ಜಗದ ತಾಯಿಯಾದ ಭಗವಂತನಿಗೆ ಆಹಾರ ಬಿಡಬೇಕು. ಮಗು ತಾಯಿಯನ್ನೇ ನೆನೆದು ಹಲುಬುವಂತೆ ನಾವು ಆ ಭಗವಂತನಿಗಾಗಿ ಹಂಬಲಿಸಬೇಕು. ಆಗ ಖಂಡಿತವಾಗಿಯೂ ತಾಯಿ ಮಗುವಿಗಾಗಿ ಓಡೋಡಿ ಬರುವಂತೆ ಆ ಭಗವಂತ ನಮ್ಮ ಬಳಿ ಬಾರದಿರುತ್ತಾನೆಯೇ? ಖಂಡಿತವಾಗಿ ಬರುವನಷ್ಟೇ. ಇದೇ ಏಕಾದಶೀ ವ್ರತ. ನಮ್ಮ ಜೀರ್ಣಾಂಗಗಳು ಯಂತ್ರವಿದ್ದಂತೆ. ಯಂತ್ರಕ್ಕೆ ವಿಶ್ರಾಂತಿಯೇ ನೀಡದಿದ್ದರೆ ಬಹಳ ಬೇಗ ಹಾಳಾಗುವುದಿಲ್ಲವೇ? ಹಾಗೆಯೇ ನಮ್ಮ ಜೀರ್ಣಾಂಗಗಳಿಗೆ ವಿಶ್ರಾಂತಿ ಬೇಡವೇ? ಅದಕ್ಕಾಗಿಯೇ ಏಕಾದಶೀ ಉಪವಾಸ. ಇದರಿಂದ ನಮ್ಮ ಜೀರ್ಣಾಂಗಗಳು ಇನ್ನಷ್ಟು ಚುರುಕಾಗುತ್ತವೆಯೇ ಹೊರತು ಹಾಳಾಗುವುದಿಲ್ಲ. ಶ್ರೀ ವಿದ್ಯಾಮಾನ್ಯತೀರ್ಥರ ಆದರ್ಶ ನಮ್ಮ ಕಣ್ಮುಂದಿದೆ. ನಾವೂ ಅವರಂತೆಯೇ ಆಚರಿಸಲು ಏಕೆ ಶುದ್ಧ ಏಕಾದಶೀ ವ್ರತ ಆಚರಿಸಲು ಪ್ರಯತ್ನಿಸಬಾರದು?

**

No comments:

Post a Comment