SEARCH HERE

Monday, 12 April 2021

ಪಚ್ಚೆಕರ್ಪೂರ camphor

Verify Everything by yourself before you follow
ಪಚ್ಚೆಕರ್ಪೂರ ಮತ್ತು ಮಹತ್ವಗಳು.. 
ಪಚ್ಚೆಕರ್ಪೂರದ ತಿಳಿವನ್ನು ತಿರುಮಲೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಗೆ, ಪ್ರತಿದಿನವೂ ಇಡುತ್ತಾರೆ..
ಭಕ್ತಾದಿಗಳು ಸ್ವಾಮಿಗೆ ಕಾಣಿಕೆ ಕಳುಹಿಸಿದರೆ, ದೇವಸ್ಥಾನದವರು ಪಚ್ಚೆಕರ್ಪೂರದ ಪ್ರಸಾದ ಕಳುಹಿಸುತ್ತಾರೆ..
ಇದನ್ನು ಏನು ಮಾಡಬೇಕು ಅಂತ ಗೊತ್ತಾಗೊಲ್ಲ ..
೧. ಸ್ವಾಮಿಯ ಪಚ್ಚೆಕರ್ಪೂರವನ್ನು ಹಾಲಿಗೆ ಹಾಕಿಕೊಂಡು ಕುಡಿದರೆ, ಸ್ವಾಮಿಯ ಪ್ರಸಾದ ಸೇವಿಸಿದಂತೆ ಆಯಿತು..
೨. ಪಚ್ಚೆಕರ್ಪೂರವನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿ, ತಲೆಗೆ ಹಚ್ಚಿಕೊಂಡರೆ, ಕೂದಲು ಸುಗಂಧಮಯವಾಗಿರುತ್ತದೆ.. ಮತ್ತು ಹೊಟ್ಟು ಏಳೋದಿಲ್ಲ..
೩. ಪಚ್ಚೆಕರ್ಪೂರವನ್ನು ಕುಂಕುಮದಲ್ಲಿ ಬೆರೆಸಿ ಹಣೆಗೆ ಇಟ್ಟುಕೊಂಡರೆ, ಸಾಕ್ಷಾತ್ ಲಕ್ಷ್ಮೀವೆಂಕಟೇಶ್ವರರ ಅನುಗ್ರಹ ಎಂದೆಂದೂ ಇರುತ್ತದೆ.. ಮತ್ತು ನೀವು ಎಂದೂ ಸಾಲಗಾರರಾಗುವುದಿಲ್ಲ..

೪. ಪಚ್ಚೆಕರ್ಪೂರವನ್ನು ನೀರಿನಲ್ಲಿ ಕಲೆಸಿ, ಹಣೆ ಮತ್ತು ಮೂಗಿಗೆ ಹಚ್ಚಿಕೊಂಡರೆ, ಶೀತವ್ಯಾಧಿಗಳು ಮತ್ತು ಅರ್ಧ ತಲೆನೋವು ನಿವಾರಣೆಯಾಗುತ್ತದೆ..
೫. ಪಚ್ಚೆಕರ್ಪೂರ ಮತ್ತು ಕೇಸರಿ ಮಿಶ್ರ ಮಾಡಿ, ನಗದು ಪೆಟ್ಟಿಗೆಯಲ್ಲಿ ಇಟ್ಟರೆ, ಅಧಿಕ ಧನಲಾಭ ಆಗುತ್ತದೆ..
ನಗದು ಪೆಟ್ಟಿಗೆ ಅಂದರೆ ಕ್ಯಾಶ್ ಬಾಕ್ಸ್..
೬. ವ್ಯಾಪಾರಸ್ಥರು ಪ್ರತಿದಿವಸ ಪಚ್ಚೆಕರ್ಪೂರದ ಕುಂಕುಮವನ್ನು ಹಣೆಗೆ ಇಟ್ಟುಕೊಂಡರೆ, ಅಂದು ಅಧಿಕವಾದ ವ್ಯಾಪಾರ ಆಗುತ್ತದೆ..
೭. ಪಚ್ಚೆಕರ್ಪೂರವನ್ನು ಸಿಹಿ ತಿಂಡಿಗೆ ಮಿಶ್ರ ಮಾಡಿ, ದೇವರಿಗೆ ನೈವೇದ್ಯ ಮಾಡಿ, ದಾನ ಮಾಡಿದರೆ,ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಬೇಗ ನಡೆಯುತ್ತದೆ..
೮. ಪಚ್ಚೆಕರ್ಪೂರದ ನೀರನ್ನು ಪ್ರತಿದಿನವೂ ಕುಡಿದರೆ ಗ್ಯಾಸ್ಟಿಕ್ ಕಾಯಿಲೆ ಗುಣವಾಗುತ್ತದೆ..
೯. ಪಚ್ಚೆಕರ್ಪೂರವನ್ನು ದೇವಾಲಯಕ್ಕೆ ದಾನ ಮಾಡಿದರೆ, ನಿಮಗೆ ಗೌರವ, ಸನ್ಮಾನ ಜಾಸ್ತಿಯಾಗುತ್ತದೆ..
೧೦. ಮಕ್ಕಳು ಇಲ್ಲದವರು ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ,ಪಚ್ಚೆಕರ್ಪೂರ ಹಾಕಿರುವ ಹಾಲಿನಿಂದ, ಅಭಿಷೇಕ ಮಾಡಿಸಿ, ಆ ಹಾಲನ್ನು ಕುಡಿಯುತ್ತ ಬಂದರೆ, ಸಮಸ್ತ ಗರ್ಭದೋಷಗಳು ನಿವಾರಣೆಯಾಗಿ, ಸಂತಾನವಾಗುತ್ತದೆ..
೧೧. ಪಚ್ಚೆಕರ್ಪೂರವನ್ನು ಬ್ರಾಹ್ಮಣರಿಗೆ ದಾನ ಮಾಡಿದರೆ, ಸಕಲ ಕಾರ್ಯಗಳು, ಶೀಘ್ರವಾಗಿ ನಡೆದು, ಗೌರವ ಹೆಚ್ಚುತ್ತದೆ..
ಸಂಗ್ರಹ ಶ್ರೀ ನಾಗರಾಜು
***

ಕರ್ಪೂರದಿಂದ ಸರಳ ಪರಿಹಾರ 

ಪ್ರತಿಯೊಂದು ವಸ್ತುಗಳಿಗೂ ಋಣಾತ್ಮಕ ಹಾಗೂ ಧನಾತ್ಮಕ ಗುಣಗಳು ಎಂಬುದು ಇರುತ್ತವೆ, ಇನ್ನು ಕೆಲವು ವಸ್ತುಗಳಲ್ಲಿ ಋಣಾತ್ಮಕ ಶಕ್ತಿ ಯು ಅತಿ ಹೆಚ್ಚು ಇದ್ದರೆ ಇನ್ನು ಕೆಲವು ವಸ್ತುಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರುತ್ತದೆ, ಅಂತಹ ಧನಾತ್ಮಕ ಶಕ್ತಿ ಅತಿ ಹೆಚ್ಚಿರುವ ವಸ್ತುಗಳಲ್ಲಿ ಒಂದು ಕರ್ಪೂರ, ಕರ್ಪೂರವನ್ನು ನಾವು ದೇವರ ಪೂಜೆ ಪುನಸ್ಕಾರ ಹಾಗೂ ಆರತಿ ಮಾಡುವುದಕ್ಕಾಗಿ ಬಳಸುತ್ತೇವೆ, ಕರ್ಪೂರ ಕ್ಕೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದು ಅದ್ಭುತವಾದ ಶಕ್ತಿಯಿದೆ, ಇಂತಹ ಅದ್ಭುತ ಧನಾತ್ಮಕ ಶಕ್ತಿಯನ್ನು ಹೊಂದಿರುವ ಕರ್ಪೂರವನ್ನು ಬಳಸಿ ಹೇಗೆ ನಿಮ್ಮ ಜೀವನದಲ್ಲಿ ಇರುವ ದಾರಿದ್ರ್ಯ ತೊಲಗಿಸಿ.

ನಿಮ್ಮ ಮನೆಯಲ್ಲಿ ಇರುವ ಯಾರಿಗಾದರೂ ಆರೋಗ್ಯದ ಸಮಸ್ಯೆ, ಉದ್ಯೋಗದ ಸಮಸ್ಯೆ ಅಥವಾ ಮಾನಸಿಕ ಕಿರಿಕಿರಿ ಉಂಟಾಗುತ್ತಿದ್ದರೆ ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿ ಗಳು ಇದೆ ಎಂದು ಅರ್ಥ, ಈ ಋಣಾತ್ಮಕ ಶಕ್ತಿಯನ್ನು ತೊಲಗಿಸಲು ರಾತ್ರಿಯೇ ಒಂದು ಬಕೆಟ್ ನೀರಿನಲ್ಲಿ ಶುದ್ಧ ಕರ್ಪೂರವನ್ನು ನೆನೆ ಹಾಕಿ ಬೆಳಗ್ಗೆ ಬೇಗ ಎದ್ದು ನೆನೆಹಾಕಿದ ಕರ್ಪೂರದ ನೀರಿನಿಂದ ಮನೆಯ ನೆಲವನ್ನು ಸ್ವಚ್ಛ ಮಾಡಿ, ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಗಳು ನಿಮ್ಮ ಮನೆಯಿಂದ ನಾಶವಾಗುವುದು, ಹೀಗೆ ಪ್ರತಿ ಶುಕ್ರವಾರ ಮಾಡುವುದು ಒಳ್ಳೆಯದು.

ಹೀಗೆ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಕಳುಹಿಸಿದ ನಂತರ ಧನಾತ್ಮಕ ಶಕ್ತಿಯನ್ನು ಆಗಮನ ಮಾಡಲು ಎರಡು ಕರ್ಪೂರವನ್ನು ತೆಗೆದುಕೊಂಡು ಒಂದು ಸ್ವಚ್ಛ ಕೆಂಪು ಬಟ್ಟೆಯನ್ನು ಬಿಟ್ಟು, ದೇವರ ಕೋಣೆಯಲ್ಲಿ ತಾಯಿ ಲಕ್ಷ್ಮಿ ಫೋಟೋದ ಮುಂದೆ ಇಟ್ಟು ತುಪ್ಪದ ದೀಪವನ್ನು ಹಚ್ಚಬೇಕು, ಹಾಗೂ ಲಕ್ಷ್ಮಿ ತಾಯಿಯ ಮುಂದೆ ನಿಮ್ಮ ಸಮಸ್ಯೆಗಳನ್ನು ಮನಸ್ಸಿನಲ್ಲಿ ನೆನೆಯುತ್ತಾ ಎಲ್ಲಾ ಕಷ್ಟಗಳನ್ನು ನಿವಾರಿಸುವಂತೆ ಭಕ್ತಿಯಿಂದ ಮಾಡಿಕೊಳ್ಳಬೇಕು, ನಂತರ ಆ ಕರ್ಪೂರವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯಲ್ಲಿ ಹಣ ಇರುವ ಸ್ಥಳದಲ್ಲಿ ಇಡಬೇಕು, ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಆಕರ್ಷಣೆಯಾಗಿ ನೀವು ಅಂದುಕೊಂಡ ಕೆಲಸ ಕೈಗೂಡುತ್ತದೆ ಆರ್ಥಿಕ ಸಮಸ್ಯೆ ಯಾವುದೇ ಕಾರಣಕ್ಕೂ ಬರುವುದಿಲ್ಲ.

ಗಮನಿಸಿ : ಈ ಕಾರ್ಯವನ್ನು ನೀವು ಮಾಡಬೇಕಾದರೆ ಇದನ್ನು ನಿಮ್ಮ ಮನೆಯವರಿಗೂ ಸಹ ಹೇಳಬಾರದು ಹಾಗೂ ಕಡ್ಡಾಯವಾಗಿ ಈ ಆಚರಣೆಯನ್ನು ಮನೆಯ ಹೆಂಗಸರು ಮಾಡಬೇಕು.
***


No comments:

Post a Comment