SEARCH HERE

Tuesday, 1 January 2019

ಈಶ್ವರಬಳ್ಳಿ ಗಿಡದ ಬೇರಿನ ಉಪಯೋಗ eshwara balli uses parihara


ಈಶ್ವರಬಳ್ಳಿ ಗಿಡದ ಬೇರಿನ ಉಪಯೋಗದ ಬಗ್ಗೆ

ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ, ಇದು ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ, ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರಿತ್ತದೆ, ಈ ಬಳ್ಳಿಯು ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶಗಳಲ್ಲಿ ಕಂಡುಬರುತ್ತದೆ.

ಜ್ವರ ಮತ್ತು ಕೆಮ್ಮು ನಿವಾರಣೆಗೆ :
ಈಶ್ವರಬಳ್ಳಿಯ ಬೇರನ್ನು ನಯವಾದ ಚೂರ್ಣ ಮಾಡಿ, ೧/೪ ಟೀ ಚಮಚ ಚೂರ್ಣವನ್ನು ನೀರಿನಲ್ಲಿ ನೆನೆ ಹಾಕಿ ಕಷಾಯಮಾಡಿ ಶೋಧಿಸಿ ೩-೪ ಟೀ ಚಮಚದಷ್ಟು ದಿವಸಕ್ಕೆ ಎರಡು ಸೇವಿಸಿದರೆ ಜ್ವರ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.

ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆಗೆ :
ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ಚೂರ್ಣಿಸಿ, ಈ ನಯವಾದ ಚೂರ್ಣವನ್ನು ೨ ರಿಂದ ೨.೫ ಗ್ರಾಂ ಸೇವಿಸಿದ ಮೇಲೆ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆ ಯಾಗುತ್ತದೆ.

ವಿಷಮ ಜ್ವರ ನಿವಾರಣೆಗೆ :
ಶುದ್ಧವಾದ ೧/೨ ಲೀಟರ್ ತಣ್ಣೀರಿನಲ್ಲಿ ೧೫ಗ್ರಾಂ ಈಶ್ವರಿಬೇರು ಜಜ್ಜಿ ಹಾಕಿ ನೆನೆಸಿಡುವುದು, ತಿಳಿಯಾದ ನೀರನ್ನು ಶೋಧಿಸಿ, ಒಂದೆರಡು ಟೀ ಚಮಚ ದಿವಸಕ್ಕೆ ೪-೫ ಬಾರಿ ಸೇವಿಸಿದರೆ ವಿಷಮ ಜ್ವರ ಗುಣಮುಖವಾಗುತ್ತದೆ.

ಹಾವಿನ ವಿಷ ಅಥವಾ ಸರ್ಪದ ವಿಷದ ನಿವಾರಣೆಗೆ :
ಸರ್ಪದ ವಿಷ ನಿವಾರಣೆಗೆ ಇದರ ಎಲೆಯ ಕಷಾಯ ಮಾಡಿ ಸೇವಿಸುತ್ತಾರೆ, ಹಾವಿನ ವಿಷ ನಿವಾರಣೆಗೆ ೨ಗ್ರಾಂ ಇದರ ಹಸಿ ಎಲೆಗಳು, ೨ಗ್ರಾಂ ಮೆಣಸು ನುಣ್ಣಗೆ ಅರೆದು ಗಾಯದ ಮೇಲೆ ಮಂದವಾಗಿ ಲೇಪಿಸುತ್ತಾರೆ.

ಮುಟ್ಟಿನ ದೋಷ ನಿವಾರಣೆಗೆ :
ಇದರ ಬೇರಿನ ನಯವಾದ ಚೂರ್ಣಮಾಡಿ, ಕಡಿಮೆ ಪ್ರಮಾಣದಲ್ಲಿ ಬೆಲ್ಲ ಅಥವಾ ನಿಂಬೆರಸದ ಅನುಪಾನದೊಂದಿಗೆ ಸೇವಿಸಿದರೆ ಮುಟ್ಟಿನ ದೋಷ ನಿವಾರಣೆಯಾಗುತ್ತದೆ.

ದೃಷ್ಟಿ ದೋಷ ನಿವಾರಣೆಗೆ :
ಇದರ ಬೇರಿನ ನಯವಾದ ಚೂರ್ಣಮಾಡಿ, ಸ್ವಲ್ಪ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
*********



No comments:

Post a Comment