SEARCH HERE

Tuesday 1 January 2019

ವಾಸ್ತು ಪ್ರಕಾರ ಹೀಗೆ ಮನೆಯಲ್ಲಿ ಅನುಸರಿಸಿ vaastu actions in home


ವಾಸ್ತು ಪ್ರಕಾರ ಸಾಮಾನ್ಯವಾಗಿ ತಿಳಿದುಕೊಂಡಿರಬೇಕಾದ ವಿಷಯಗಳು

1. ಪೂರ್ವ ಮತ್ತು ಉತ್ತರ ದಿಕ್ಕಿಗೆ ನಿಂತುಕೊಂಡು ಅಡುಗೆ ಮಾಡಬೇಕು..

2. ದಕ್ಷಿಣ ದಿಕ್ಕಿಗೆ ಮುಖವಾಗಿ ಪಾತ್ರೆ ತೊಳೆಯಬೇಕು.

3. ಮಕ್ಕಳು ಮಲಗುವ ಕೋಣೆ ಉತ್ತರ ಪೂರ್ವಕ್ಕೆ ಇರಬೇಕು.

4. ಅಪ್ಪ ಅಮ್ಮ ಮಲಗುವ ಕೋಣೆ ದಕ್ಷಿಣ-ಪಶ್ಚಿಮ ದಿಕ್ಕಿಗೆ ಇರಬೇಕು.

5. ಮಲಗುವ ಕೋಣೆಯಲ್ಲಿ ಕನ್ನಡಿ ಇರಬಾರದು ಯಾಕೆಂದರೆ ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ನಮ್ಮ ಮುಖವನ್ನು ನಾವೇ ನೋಡಿಕೊಳ್ಳಬಾರದು.ಹಾಗೇನಾದರೂ ಕನ್ನಡಿ ಇದ್ದರೆ ಅದನ್ನು ಬಟ್ಟೆಯಿಂದ ಮುಚ್ಚಿಬಿಡಿ.

6. ಊಟದ ಕೋಣೆಯಲ್ಲಿ ಕನ್ನಡಿ ಇದ್ದರೆ ಒಳ್ಳೆಯದು ಆರೋಗ್ಯ ವೃದ್ಧಿಸುತ್ತದೆ.

7. ಊಟ ಮಾಡುವಾಗ ಪೂರ್ವ ದಿಕ್ಕಿಗೆ ಕುಳಿತು ಊಟ ಮಾಡಬೇಕು ಅಂದರೆ ಸೂರ್ಯ ಉದಯಿಸುವ ದಿಕ್ಕು.

8. ಅನ್ನ ಮಾಡಿದ ಪಾತ್ರೆ ಮತ್ತು ಅಡುಗೆಯನ್ನು ಮಾಡಲು ಬಳಸಿದ ಪಾತ್ರೆಗಳನ್ನು ತೊಳೆದ ನಂತರ ಮಗುಚಿ ಇಡಬಾರದು. ಅದೇ ರೀತಿ ಊಟ ಮಾಡಲು ಬಳಸುವ ತಟ್ಟೆ ಹಾಗೂ ಲೋಟಗಳನ್ನು ಮಗುಚಿ ಇಡಬಾರದು ಹೇಗೆ ಮಾಡಿದರೆ ಮನೆಗೆ ದರಿದ್ರ ಆವರಿಸುತ್ತದೆ ಅನ್ನಕ್ಕೆ ಕೊರತೆ ಉಂಟಾಗುತ್ತದೆ.

9. ಅಡುಗೆ ಕೋಣೆಯಲ್ಲಿ ದೇವರ ಚಿತ್ರಗಳನ್ನ ಇಡಬಾರದು ಹಾಗೂ ದೇವರ ಕೋಣೆಯ ಪಕ್ಕದಲ್ಲಿಯೇ ಅಡುಗೆ ಅಥವಾ ಸ್ನಾನ ಮತ್ತು ಶೌಚಾಲಯ ದ ಕೋಣೆಗಳು ಇರಬಾರದು.ಹೀಗೆ ಇದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿಗಿಂತ ಹೆಚ್ಚಾಗಿ ಋಣಾತ್ಮಕ ಶಕ್ತಿಯು ಅಧಿಕವಾಗಿ ಉಂಟಾಗುತ್ತದೆ.

10. ಯಾವುದೇ ಔಷಧಿಗಳೂ, ಮಾತ್ರೆಗಳನ್ನು ಆಡುಗೆ ಕೋಣೆಯಲ್ಲಿ ಇಡಬಾರದು.
***

ವಾಸ್ತು ಶಾಸ್ತ್ರ: ವಾಸ್ತು ಪ್ರಕಾರ ಮನೆಗೆ ಸಕಾರಾತ್ಮಕತೆ ತುಂಬುವುದು ಹೇಗೆ?

☘️☘️☘️☘️☘️☘️☘️☘️☘️☘️

ನಾವು ಸದಾ ಸಕಾರಾತ್ಮಕವಾಗಿರಬೇಕು, ಒಳ್ಳೆಯದನ್ನೇ ಯೋಚಿಸಬೇಕು, ಒಳಿತನ್ನೇ ಸದಾ ಬಯಸಬೇಕು. ಆದರೆ ಇದೆಲ್ಲವೂ ನಮ್ಮ ಮಾನಸಿಕ ಭಾವನೆಗಳು ಒಂದಾದರೆ ದೈವಿಕ ಶಕ್ತಿ ಸಹ ಇರಬೇಕು, ನಮ್ಮ ಸುತ್ತಮುತ್ತ ವಾತಾವರಣ ಸಹ ಅದಕ್ಕೆ ಸಹಕಾರ ನೀಡುವಂತಿರಬೇಕು.

ಮನೆಯಲ್ಲಿ, ಕಚೇರಿಯಲ್ಲಿ ಸಕಾರಾತ್ಮಕತೆಯನ್ನು ತರುವುದು ಹೇಗೆ, ಇದಕ್ಕೆ ಮನೆಯ ವಾಸ್ತು ಹೇಗಿರಬೇಕು ಎಂಬುದು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ವಿನ್ಯಾಸ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯಿಂದ ಹೊರಹೊಮ್ಮುವ ಸಕಾರಾತ್ಮಕತೆಯು ಅಲ್ಲಿ ವಾಸಿಸುವ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರನ್ನು ಸಂತೋಷದಿಂದ ಮತ್ತು ಆರೋಗ್ಯಕರವಾಗಿ ಮಾಡುತ್ತದೆ.ಹೀಗಾಗಿ, ಸರಿಯಾದ ವಾಸ್ತು ತತ್ವಗಳು ಅದು ಸೃಷ್ಟಿಸುವ ಸಕಾರಾತ್ಮಕ ಶಕ್ತಿಯು ಮನೆಯ ಸದಸ್ಯರನ್ನು ರೀಚಾರ್ಜ್ ಮಾಡುತ್ತದೆ ಮತ್ತು ಜೀವನವು ಅವರ ಮೇಲೆ ಎಸೆಯುವ ಎಲ್ಲಾ ಸವಾಲುಗಳನ್ನು ಎದುರಿಸಲು ಅವರನ್ನು ಸಿದ್ಧಪಡಿಸುತ್ತದೆ.

ವಾಸ್ತು ತಜ್ಞರು ಇದರ ಬಗ್ಗೆ ಏನು ಹೇಳುತ್ತಾರೆ, ಮನೆಯಲ್ಲಿ ಸಕಾರಾತ್ಮತೆ ತುಂಬುವುದು ಹೇಗೆ ಮುಂದೆ ನೋಡೋಣ:

ನಿಮ್ಮ ಮುಖ್ಯ ಬಾಗಿಲು ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಮನೆಯ ಮುಖ್ಯ ದ್ವಾರದ ಹೊರಗೆ ಕಸವನ್ನು ಇಡಬೇಡಿ. ಅಲ್ಲದೆ, ಯಾವುದೇ ಭಾರವಾದ ವಸ್ತುವನ್ನು ಮುಖ್ಯ ಬಾಗಿಲಿನ ಬಳಿ ಇಡಬೇಡಿ ಏಕೆಂದರೆ ಅದು ಶಕ್ತಿಯ ಹರಿವಿಗೆ ಅಡ್ಡಿಯಾಗುತ್ತದೆ.

ಅಡುಗೆ ಮನೆ

ಅಗ್ನಿಯ ಅಧಿಪತಿಯಾದ ಅಗ್ನಿ ಭಗವಂತನ ದಿಕ್ಕು ಎಂದು ನಂಬಿರುವುದರಿಂದ ಆಗ್ನೇಯ ದಿಕ್ಕಿನಲ್ಲಿ ಮಾತ್ರ ಅಡುಗೆ ಮನೆಯನ್ನು ನಿರ್ಮಿಸಬೇಕು.

ಕಿರಣಗಳು

ವಾಸ್ತು ಶಾಸ್ತ್ರದ ಪ್ರಕಾರ, ಕಿರಣಗಳ ಕೆಳಗೆ ಕುಳಿತುಕೊಳ್ಳುವುದರಿಂದ ನಾವು ದೈವಿಕ ಶಕ್ತಿಯ ಮೂಲದೊಂದಿಗೆ ಹಂಚಿಕೊಳ್ಳುವ ಸಂಪರ್ಕವನ್ನು ಮುರಿಯಬಹುದು ಮತ್ತು ಆದ್ದರಿಂದ, ಹಾಸಿಗೆ, ಸ್ಟಡಿ ಟೇಬಲ್ ಮುಂತಾದ ಯಾವುದೇ ಪೀಠೋಪಕರಣಗಳನ್ನು ಕಿರಣದ ಕೆಳಗೆ ಇಡಬಾರದು.

ವಾಶ್‌ರೂಮ್‌ಗಳು

ವಾಶ್‌ರೂಮ್‌ಗಳನ್ನು ಮೆಟ್ಟಿಲುಗಳ ಕೆಳಗೆ ಅಥವಾ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬಾರದು ಏಕೆಂದರೆ ಇದು ಕುಟುಂಬದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಹಣಕಾಸಿನಲ್ಲಿ ಕುಸಿತವನ್ನು ತರುತ್ತದೆ.

ಪೂಜಾ ಕೊಠಡಿ

ಬೃಹತ್ ಪೂಜಾ ಕೊಠಡಿಗಳನ್ನು ನಿರ್ಮಿಸಬೇಡಿ ಮತ್ತು ಮಲಗುವ ಕೋಣೆಯಲ್ಲಿ ಎಂದಿಗೂ ಪೂಜಾ ಕೋಣೆಯನ್ನು ಮಾಡಬೇಡಿ. ಇದನ್ನು ಬದಲಾಯಿಸಲಾಗದಿದ್ದರೆ, ರಾತ್ರಿಯ ಸಮಯದಲ್ಲಿ ಅದನ್ನು ಬಟ್ಟೆಯಿಂದ ಮುಚ್ಚಿ. ಅಲ್ಲದೆ, ಮೆಟ್ಟಿಲುಗಳ ಕೆಳಗೆ ಪೂಜಾ ಕೊಠಡಿಯನ್ನು ಮಾಡಬೇಡಿ.

ಪೀಠೋಪಕರಣಗಳ ಆಯ್ಕೆ

ಯಾವಾಗಲೂ ಚೂಪಾದ ಅಂಚುಗಳನ್ನು ಹೊಂದಿರದ ಸಾಮಾನ್ಯ ಆಕಾರದ ಪೀಠೋಪಕರಣಗಳನ್ನು ಬಳಸಿ. ಅಲ್ಲದೆ, ಸಾಮಾನ್ಯ ಕಂದು ಬಣ್ಣವನ್ನು ಆರಿಸಿ ಮತ್ತು ಮನೆಯನ್ನು ಸಜ್ಜುಗೊಳಿಸಲು ಬೂದು, ಕಪ್ಪು ಮತ್ತು ಕೆಂಪು ಬಣ್ಣಗಳನ್ನು ಬಳಸುವುದನ್ನು ತಪ್ಪಿಸಿ.

ವರ್ಣಚಿತ್ರಗಳು

ಯಾವಾಗಲೂ ಮನೆಯಲ್ಲಿ ಪ್ರಕೃತಿ ದೃಶ್ಯಗಳು, ಸಕಾರಾತ್ಮಕ ಆಲೋಚನೆಗಳಂತಹ ಸಕಾರಾತ್ಮಕ ಚಿತ್ರಗಳನ್ನು ಇರಿಸಿ. ಅಲ್ಲದೆ, ಯಾವುದೇ ಯುದ್ಧದ ವರ್ಣಚಿತ್ರಗಳು ಅಥವಾ ಬಡತನದ ಚಿತ್ರಗಳನ್ನು ಬಳಸಬೇಡಿ ಏಕೆಂದರೆ ಇದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ.

ಮನೆಯ ಅಲಂಕಾರ

ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ಆಹ್ವಾನಿಸಲು ಗೋಡೆಗಳನ್ನು ಚಿತ್ರಿಸಲು ಸೂಕ್ತವಾದ ವಾಸ್ತು ಬಣ್ಣಗಳನ್ನು ಬಳಸಿ. ಅಲ್ಲದೆ, ಹಿತವಾದ ವಾತಾವರಣವನ್ನು ಸೃಷ್ಟಿಸಲು ಏರ್ ಫ್ರೆಶ್ನರ್, ಬೆಳಕಿನ ಕರ್ಪೂರ ಮತ್ತು ಅಗರಬತ್ತಿಗಳನ್ನು ಬಳಸಿ.

ಮುಂಜಾನೆ ಸಕಾರಾತ್ಮಕತೆ

ಮುಂಜಾನೆಯ ಸಮಯವು ಮನೆಯಲ್ಲಿ ಸಕಾರಾತ್ಮಕತೆಯನ್ನು ತುಂಬಲು ಕಿಟಕಿಗಳನ್ನು ತೆರೆಯುವ ಮೂಲಕ ಧನಾತ್ಮಕ ಶಕ್ತಿಯನ್ನು ತುಂಬಲು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತದೆ, ಇದರಿಂದ ಸೂರ್ಯನ ಬೆಳಕು ತಾಜಾ ಗಾಳಿಯೊಂದಿಗೆ ಮನೆಗೆ ಪ್ರವೇಶಿಸುತ್ತದೆ ಮತ್ತು ಕೆಲವು ದೈವಿಕ ಸಂಗೀತವನ್ನು ನುಡಿಸುತ್ತದೆ. ನಿಮ್ಮ ದಿನಕ್ಕೆ ಉತ್ತಮ ಆರಂಭ.

ಅಸ್ತವ್ಯಸ್ತತೆಯನ್ನು ಸ್ವಚ್ಛಗೊಳಿಸಿ

ಇನ್ನು ಬಳಕೆಯಲ್ಲಿಲ್ಲದ ವಸ್ತುಗಳನ್ನು ರಾಶಿ ಹಾಕುವುದು ಮನೆಯಲ್ಲಿ ಬಹಳಷ್ಟು ನಕಾರಾತ್ಮಕತೆಯನ್ನು ತರುತ್ತದೆ. ಆದ್ದರಿಂದ, ನೀವು ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಇದರಿಂದ ಅದು ಧನಾತ್ಮಕ ಶಕ್ತಿಗೆ ದಾರಿ ಮಾಡಿಕೊಡುತ್ತದೆ.

ವಿಶೇಷ ಸೂಚನೆ

ಮೇಲೆ ತಿಳಿಸಿದ ಸಲಹೆಗಳ ಹೊರತಾಗಿ, ನಿಮ್ಮ ಮನೆಗೆ ಹಿತವಾದ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುವ ಧನಾತ್ಮಕ ಶಕ್ತಿಯ ಮಾರ್ಗಸೂಚಿಗಳಿಗಾಗಿ ಅನೇಕ ಇತರ ವಾಸ್ತುಗಳಿವೆ. ಎಲ್ಲಾ ಕಡೆಯಿಂದ ನಿಮ್ಮ ಮನೆಗೆ ಧನಾತ್ಮಕತೆಯನ್ನು ತರುವ ವೈಯಕ್ತೀಕರಿಸಿದ ಪರಿಹಾರಗಳನ್ನು ಪಡೆಯಲು ನೀವು ವಾಸ್ತು ತಜ್ಞರನ್ನು ಸಂಪರ್ಕಿಸಿ.
*******

👆ತಿಜೋರಿ ದಿಕ್ಕು
where to keep money?.. brahma sthana





ಗಿಡ ನೆಡಿ ವಾಸ್ತು ದೋಷ ದೂರಮಾಡಿ

ಮನೆಯ ಪಶ್ಚಿಮ ದಿಕ್ಕಿಗೆ ತೆಂಗು, 

ಉತ್ತರಕ್ಕೆ ಮಾವು, 
ದಕ್ಷಿಣಕ್ಕೆ ಅಡಿಕೆಮರ 
ಪೂರ್ವಕ್ಕೆ ಹಲಸಿನ ಮರವನ್ನು ಬೆಳೆಸಿದರೆ ಮನೆಯ ಮೇಲೆ ಯಾವ ಕುದೃಷ್ಟಿಯೂ ಬೀಳುವುದಿಲ್ಲ.

ಮನೆಯ ಪೂರ್ವದಲ್ಲಿ ಬಿಲ್ವವೃಕ್ಷವನ್ನು ನೆಟ್ಟು ಬೆಳೆಸಿ. ಸೋಮವಾರ ಹಾಗೂ ಶುಕ್ರವಾರ ಆ ಮರಕ್ಕೆ ಪ್ರದಕ್ಷಿಣೆ ಬಂದು ಪೂಜೆ ಸಲ್ಲಿಸಿ. ಬಿಲ್ವ ಪತ್ರೆಯಿಂದ ಲಕ್ಷ್ಮೇ ದೇವರ ಆರಾಧನೆ ಮಾಡಿದರೆ ಲಕ್ಷ್ಮೇ ಕಟಾಕ್ಷವಾಗುತ್ತದೆ. 


ಮನೆಯ ಮುಂಬದಿಯಲ್ಲಿರುವ ವೃಂದಾವನದೊಳಗೆ ನೆಲ್ಲಿ ಕೊನೆಯ ನೆಟ್ಟು ಬೆಳೆಸಿ. ಪ್ರತಿ ಮಂಗಳವಾರ ಹಾಗೂ ದ್ವಾದಶಿಯಂದು ನೆಲ್ಲಿ ಗಿಡವನ್ನು ಪೂಜಿಸಿದರೆ ಮನೆಯಲ್ಲಿ ಸುಖ, ಶಾಂತಿ ಉಂಟಾಗುತ್ತದೆ. 


ಮನೆಯ ಈಶಾನ್ಯ ದಿಕ್ಕಿನಲ್ಲಿ ಔದುಂಬರ ವೃಕ್ಷವನ್ನು ಬೆಳೆಸುವುದರಿಂದ ಗುರುವಿನ ಅನುಗ್ರಹವಾಗುತ್ತದೆ. ಗುರುವಿಗೆ ಸಂಬಂಧ ಪಟ್ಟ ದೋಷಗಳು ಪರಿಹಾರವಾಗುತ್ತವೆ. 


ಮನೆಯ ಹಿತ್ತಲಲ್ಲಿ ಬಿಳಿ ತುಂಬೆ ಹೂವಿನ ಗಿಡ ಬೆಳೆಸುವುದರಿಂದ ಉತ್ತಮ ಫಲ ಉಂಟಾಗುತ್ತದೆ. ವಾಸ್ತು ದೋಷವೂ ಪರಿಹಾರವಾಗುತ್ತದೆ. 



ತುಳಸಿಯನ್ನು ಮನೆಯ ಉತ್ತರ, ಈಶಾನ್ಯ ಅಥವಾ ಪೂರ್ವ ಭಾಗದಲ್ಲಿ ಬೆಳೆಸಬೇಕು. ತುಳಸಿಯನ್ನು ಮನೆಯ ಪ್ರವೇಶದ್ವಾರಕ್ಕೆ ಹೊಂದಿಕೊಳ್ಳುವಂತೆ ನೆಡಬಾರದು. ತುಳಸಿ ಗಿಡಗಳನ್ನು ಯಾವುದೇ ಕಾರಣಕ್ಕೂ ಸರಿ ಸಂಖ್ಯೆಯಲ್ಲಿ ನೆಡಬೇಕೇ ಹೊರತು, ಬೆಸ ಪ್ರಮಾಣದಲ್ಲಿ ಅಲ್ಲ.

*****


ನೆಮ್ಮದಿಯ ಜೀವನಕ್ಕೆ ವಾಸ್ತು

ನೇಮ್ ಪ್ಲೇಟ್ ಮನೆಯ ಮುಖ್ಯ ದ್ವಾರದ ಹೊರ ಬದಿಯಲ್ಲಿ ನೇಮ್ ಪ್ಲೇಟ್ ಇರಬೇಕು. ಇದರಿಂದ ಮನೆಗೆ ಪಾಸಿಟಿವ್ ಎನರ್ಜಿ ಮತ್ತು ಉತ್ತಮ ಅವಕಾಶಗಳು ಮಾಲೀಕರಿಗೆ ಲಭ್ಯವಾಗುತ್ತದೆ ಎಂದು ವಾಸ್ತು ನಿಯಮ ಹೇಳುತ್ತದೆ. 


ದೀಪ ಹಚ್ಚಿ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ, ಹಣತೆ ಮತ್ತು ಅಗರಬತ್ತಿ ಹಚ್ಚಬೇಕು. ಇದು ನೆಗೆಟಿವ್ ಎನರ್ಜಿಯನ್ನು ಮನೆಯಿಂದ ಹೊರ ದೂಡಲು ನೆರವು ನೀಡುತ್ತದೆ. 


ಅಡುಗೆ ಮನೆ ಮನೆಯ ಆಗ್ನೇಯ ಮೂಲೆಯಲ್ಲಿ ಅಡುಗೆ ಮನೆ ಇರಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ವಾಯುವ್ಯ ಭಾಗವನ್ನು ಆರಿಸಿಕೊಳ್ಳಬಹುದು. ಆದರೆ ಸ್ಟೌವ್ ಮಾತ್ರ ಆಗ್ನೇಯ ದಿಕ್ಕಿನಲ್ಲಿರಲಿ


ಲಿಂಬೆಯ ಶಕ್ತಿ: ಲಿಂಬೆ ಹಣ್ಣಿಗೆ ನೆಗೆಟಿವ್ ಎನರ್ಜಿಯನ್ನು ಓಡಿಸುವ ಶಕ್ತಿಯಿದೆ. ಹೀಗಾಗಿ ಯಾವಾಗಲೂ ಮನೆಯಲ್ಲಿ ಒಂದು ಗ್ಲಾಸ್ ನೀರಿನಲ್ಲಿ ಲಿಂಬೆಯನ್ನು ಹಾಕಿಟ್ಟು, ಪ್ರತಿ ಶನಿವಾರ ಅದನ್ನು ಬದಲಾಯಿಸಿ. 


ಔಷಧ ಸಾಮಗ್ರಿ: ಅಡುಗೆ ಮನೆಯಲ್ಲಿ ಔಷಧಗಳನ್ನು ಇಡಲೇ ಬಾರದು. ಯಾಕೆಂದರೆ ಔಷಧ ಕೂಡ ಕೆಟ್ಟ ದೃಷ್ಟಿಯ ಸಂಕೇತ. ಹೀಗಾಗಿ ಆರೋಗ್ಯಕರ ಜೀವನಕ್ಕೆ ಅಡುಗೆ ಮನೆಯಲ್ಲಿ ಇವುಗಳನ್ನು ಇಡಲೇ ಬಾರದು. 


ಧ್ಯಾನಕ್ಕೆ ಒತ್ತು: ಮೈ ಮನಸ್ಸನ್ನು ಶುದ್ಧಗೊಳಿಸುವ ಸಾಮರ್ಥ್ಯ ಧ್ಯಾನಕ್ಕೆ ಇದೆ. ಹೀಗಾಗಿ ಪ್ರತಿ ದಿನ 15ರಿಂದ 20 ನಿಮಿಷ ಧ್ಯಾನ ಮಾಡಿ. ಇದು ಮನಸ್ಸನ್ನು ಹಗುರಗೊಳಿಸುತ್ತದೆ. ಸುತ್ತಲು ಪಾಸೆಟಿವ್ ಎನರ್ಜಿಯನ್ನು ತುಂಬಲು ನೆರವಾಗುತ್ತದೆ. 


ಕನ್ನಡಿ ಬಳಕೆ: ಬೆಡ್ ರೂಂನಲ್ಲಿ ಕನ್ನಡಿ ಇರಬಾರದು. ಒಂದು ವೇಳೆ ಈಗಾಗಲೇ ಡ್ರೆಸ್ಸಿಂಗ್ ಟೇಬಲ್ ಅಥವಾ ವಾರ್ಡ್ರೋಬ್ನಲ್ಲಿ ಕನ್ನಡಿ ಇದ್ದರೆ ಅದನ್ನು ಮಲಗುವ ಸಮಯದಲ್ಲಿ ಕರ್ಟನ್ನಿಂದ ಮುಚ್ಚಬೇಕು. 


ಪವಿತ್ರ ತೀರ್ಥ: ಮನೆಯ ಬಳಕೆ ಮಾಡದ ಮೂಲೆಯಲ್ಲಿ ಯಾವಾಗಲೂ ಗಂಗಾ ಜಲ ಇಡಬೇಕು. ಇದನ್ನು ಪ್ರತಿ ವಾರ ಬದಲಾಯಿಸಬೇಕು. ಇದು ಪಾಸಿಟಿವ್ ಎನರ್ಜಿ ಮನೆಯಲ್ಲಿ ತುಂಬಲು ಸಹಾಯ ಮಾಡುತ್ತದೆ. 


ಸ್ವಸ್ತಿಕ್ ಇರಲಿ: ಸ್ವಸ್ತಿಕ ಚಿನ್ಹೆಯು ಸಂಪತ್ತು ಮತ್ತು ಶ್ರೇಯಸ್ಸಿನ ಸಂಕೇತ. ಆದ್ದರಿಂದ ಮನೆಯಲ್ಲಿ ಸ್ವಸ್ತಿಕ ಚಿನ್ಹೆಯನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರ. ಯಾವಾಗಲೂ ಮನೆಯ ಹೊರ ಬಾಗಿಲ ಹೊರಗಡೆ ಇದನ್ನು ಅಳವಡಿಸಿ. 


ಕಿರು ಗಂಟೆಗೆ ಆದ್ಯತೆ: ಮನೆಯಲ್ಲಿ ಕಿರು ಗಂಟೆಗಳನ್ನು ಅಲ್ಲಲ್ಲಿ ತೂಗು ಹಾಕಿ. ಅದರಲ್ಲೂ ದೇವರ ಕೋಣೆಯ ಬಾಗಿಲಿಗೆ ಹಾಕಿದರೆ ಉತ್ತಮ. ಇದರ ನಾದದಿಂದ ನೆಗೆಟಿವ್ ಎನರ್ಜಿ ಮನೆಯಿಂದ ಹೊರಗೆ ಹೋಗುತ್ತದೆ. 


ಉಪ್ಪಿನ ಬಳಕೆ: ಉಪ್ಪು ನೆಗೆಟಿವ್ ಎನರ್ಜಿಯನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮನೆಯ ಮೂಲೆಗಳಲ್ಲಿ ಚಿಕ್ಕ ಬೌಲ್ನಲ್ಲಿ ಉಪ್ಪು ಹಾಕಿಡಬೇಕು.

********



ಗ್ರಹ ದೋಷಕ್ಕೆ ಸುಲಭ ಪರಿಹಾರ

ರವಿ ದೋಷ:  ರವಿ ದೋಷ ನಿವಾರಣೆಗೆ ಪ್ರತಿನಿತ್ಯ ಬೆಳಿಗ್ಗೆ ಸೂರ್ಯೋದಯದ ಕಾಲದಲ್ಲಿ ಕನಿಷ್ಠ ಪಕ್ಷ 12 ಸೂರ್ಯನಮಸ್ಕಾರವನ್ನಾದರೂ ಹಾಕಿ. ಬೆಳಗಿನ ಸೂರ್ಯ ಕಿರಣಗಳಲ್ಲಿ ವಿಟಮಿನ್ ಡಿ, ವಿಟಮಿನ್ ಇ ಮತ್ತಿತರ ಪೌಷ್ಟಿಕಾಂಶಗಳಿರುತ್ತವೆ. ಅವುಗಳ ಕಾರಣ ದೇಹ ಕಾಂತಿಯುಕ್ತವಾಗುತ್ತದೆ. ಬೆಳಗಿನ ಆಲಸ್ಯವೂ ದೂರಾಗುತ್ತದೆ. ರವಿಯ ಧಾನ್ಯ ಗೋಧಿ. ವಾರ ಭಾನುವಾರ. ಹಾಗಾಗಿ ಭಾನುವಾರದಂದು ಸೂರ್ಯನ ಪ್ರೀತ್ಯರ್ಥವಾಗಿ ಗೋಧಿ ಪಾಯಸ ಮಾಡಿ ನೈವೇದ್ಯಕ್ಕಿಡಿ. ಕುಟುಂಬದವರೊಂದಿಗೆ ಹಂಚಿಕೊಂಡು ಸೇವಿಸಿ. ರವಿ ಪಿತೃಕಾರಕನಾದ್ದರಿಂದ ತಂದೆ, ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಿ. 


ಚಂದ್ರ  ಚಂದ್ರ ಶ್ವೇತವರ್ಣ. ರಜತ ಅವನ ಆಭರಣ. ಮನೋಕಾರಕ ಚಂದ್ರನ ಪ್ರೀತ್ಯರ್ಥವಾಗಿ ಬೆಳ್ಳಿಯ ಕಡಗವನ್ನು ಮುಂಗೈಗೆ ಧರಿಸಿ. ಬೆಳ್ಳಿಯ ಪ್ರಭಾವದಿಂದ ನರಮಂಡಲದಲ್ಲಿ ರಕ್ತದ ಹರಿವು ಚೆನ್ನಾಗಿರುತ್ತದೆ. ಮನಸ್ಸೂ ಶಾಂತವಾಗುತ್ತದೆ. ಮನೆಗೆ ಬಂದ ಅತಿಥಿಗಳಿಗೆ ಕೇಸರಿ ಮಿಶ್ರಿತ ಹಾಲು ಕೊಡುವುದರಿಂದ ಸಂತೃಪ್ತಿಯೂ ಉಂಟಾಗುತ್ತದೆ. ಚಂದ್ರ ಮಾತೃಕಾರಕನಾದ್ದರಿಂದ ತಾಯಿಗೆ ನಮಸ್ಕರಿಸಿ, ಗೌರವಿಸಿ, ಉಪಚರಿಸಿ


ಕುಜ : ಮಂಗಳೀಕ ದೋಷ ಎನ್ನುತ್ತಾರೆ. ಈ ದೋಷದ ಕಾರಣ ಸಂತಾನ ಭಾಗ್ಯ, ಕಳತ್ರ ಭಾಗ್ಯ, ದಾಂಪತ್ಯದಲ್ಲಿ ಸುಖವಿಲ್ಲದಿರುವುದು ಮತ್ತಿತರ ಸಮಸ್ಯೆಗಳು ಕಾಡುತ್ತವೆ. ಕುಜ ಋುಣಮೋಚಕ. ಋುಣ ಎನ್ನುವುದು ಭ್ರಾತೃತ್ವದ ಸಂಕೇತ. ಸೋದರ, ಸೋದರಿಯರನ್ನು ಚೆನ್ನಾಗಿ ನೋಡಿಕೊಳ್ಳಿ. ಅವರೊಂದಿಗೆ ವೈಮನಸ್ಯ ತೊರೆದು ಪ್ರೀತಿ, ವಿಶ್ವಾಸದಿಂದ ವರ್ತಿಸಿ. ಅವರ ಮನಸ್ಸಿಗೆ ಸಂತೋಷವಾಗುವ ಕೆಲಸಗಳನ್ನು ಮಾಡಿ, ಊಟ, ಉಪಚಾರಗಳನ್ನು ಕೊಟ್ಟು ಸತ್ಕರಿಸಿ. ಬಡ ಹೆಣ್ಣುಮಕ್ಕಳಿಗೆ ಮಾಂಗಲ್ಯದಾನ ಮಾಡಿ ಅವರ ಕಷ್ಟಕ್ಕೆ ನೆರವಾಗಿ. 


ಬುಧ : ಬುಧ ಬುದ್ದಿಯ ಸಂಕೇತ. ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವಾಗುವ ಸಹಾಯ ಮಾಡಿ. ಅವರ ಸಂತೋಷದಲ್ಲಿ ಭಾಗಿ ನೀವೂ ಸಂಭ್ರಮಿಸಿ. ಮನೆಯಲ್ಲಿ ನಕಾರಾತ್ಮಕ ಅಂಶಗಳಿದ್ದರೆ ಮನಸ್ಸು ಚಂಚಲವಾಗುತ್ತದೆ. ವ್ಯಾಸಂಗವೂ ಹಿನ್ನಡೆಯಾಗುತ್ತದೆ. ಹಾಗಾಗಿ ಮನೆಯ ಮುಂದೊಂದು ತುಳಸಿ ಗಿಡ ನೆಡಿ. ಪ್ರತಿನಿತ್ಯ ತುಳಸಿ ಗಿಡಕ್ಕೆ ನೀರು ಹಾಕಿ. ಪರಿಸರಕ್ಕೆ ಪೂರಕವಾದ ಗಿಡಗಳನ್ನು ಸಾಧ್ಯವಾದಷ್ಟು ಬೆಳೆಸಿ. ಉತ್ತಮ ಪರಿಸರ ದೇಹದ, ಮನಸ್ಸಿನ ಆರೋಗ್ಯಕ್ಕೆ ಪೂರಕ ಎನ್ನುವುದನ್ನು ನೀವೇ ಮನಗಾಣುವಿರಿ. 


ಗುರು : ಗುರುವಿಗಿಂತ ದೇವರಿಲ್ಲ. ಬ್ರಹ್ಮ ಬರೆದದ್ದನ್ನೂ ಬದಲಿಸುವ ಶಕ್ತಿ ಗುರುವಿಗಿದೆ ಎನ್ನುವುದು ಶಾಸ್ತ್ರದ ಮಾತು. ಗುರು ಬಲವಿದ್ದಾಗ ಯಾವ ದೋಷವೂ ತಟ್ಟುವುದಿಲ್ಲ. ಯಶಸ್ಸು ಶತಸ್ಸಿದ್ಧ ಎನ್ನುವುದು ಬಲ್ಲವರ ಮಾತು. ಗುರುವಿನ ಸಂಕೇತವೇ ಪಿಪ್ಪಲ (ಅಶ್ವತ್ಥ) ವೃಕ್ಷ. ಸೂರ್ಯೋದಯದ ಸಂದರ್ಭದಲ್ಲಿ ಅಶ್ವತ್ಥ ವೃಕ್ಷವು ಪರಿಶುದ್ಧವಾದ ಆಮ್ಲಜನಕವನ್ನು ಹೊರಸೂಸುತ್ತದೆ. ಈ ಸಮಯದಲ್ಲಿ ಅಶ್ವತ್ಥ ವೃಕ್ಷ ಪ್ರದಕ್ಷಿಣೆ ಮಾಡುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ. ಒಂದಕ್ಷರ ಕಲಿಸಿದಾತನೂ ಗುರು ಎಂಬಂತೆ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಕೊಡಿ. ಅವರ ಅಗತ್ಯತೆಗೆ ನೆರವಾಗಿ. 


ಶುಕ್ರ : ಶುಕ್ರ ಎಂದರೆ ಭಾಗ್ಯೋದಯದ ಸಂಕೇತ. ಭಾಗ್ಯೋದಯಕ್ಕೆ ಪೂರಕವಾದವರೇ ಒಡಹುಟ್ಟಿದ ಅಕ್ಕ, ತಂಗಿಯರು ಮತ್ತು ಗೃಹಿಣಿ. ಅವರ ಮನಸ್ಸನ್ನು ತೃಪ್ತಿ ಪಡಿಸುವಂತೆ ವರ್ತಿಸಿ. ಯತ್ರ ನಾರ್ಯಸ್ತು ಪೂಜ್ಯತೇ ತತ್ರ ಸ್ಥಿತಾ ದೇವತಾಃ ಎನ್ನುವಂತೆ ಎಲ್ಲಿ ನಾರಿಯರನ್ನು ಪೂಜನೀಯ ಭಾವನೆಯಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ದೇವತೆಗಳಿರುವಲ್ಲಿ ಸಕಾರಾತ್ಮಕ ಗುಣಗಳಿರುತ್ತವೆ. ಮನೆಯ ಮುಂದಿನ ರಂಗೋಲಿಯೂ ಶುಭದ ಸಂಕೇತ. ಸಂಗೀತ, ನೃತ್ಯ, ಕಲೆಗಳನ್ನು ಮನೆಯೊಳಗೆ ಅಭ್ಯಾಸ ಮಾಡುವುದರಿಂದ ಮನೆಯ ವಾತಾವರಣವೂ ಚೆನ್ನಾಗಿರುತ್ತದೆ. ಮನಸ್ಸು ಮುದಗೊಳ್ಳುತ್ತದೆ. 


ಶನಿ : ಶನಿ ಕರ್ಮಸೂಚಕ. ಕರ್ಮ ಎಂದರೆ ನಾವು ಮಾಡುವ ಕೆಲಸ. ಒಳಿತನ್ನೇ ಮಾಡಿದರೆ, ಬಯಸಿದರೆ ಅದರ ಪರಿಣಾಮವೂ ಒಳ್ಳೆಯದಾಗುತ್ತದೆ. ಶನಿಯೂ ಅಷ್ಟೇ. ನಿಮ್ಮ ಕರ್ಮಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತಾನೆ. ಬಡವರು, ಅಶಕ್ತರು, ತೀರಾ ಅತ್ಯವಶ್ಯವಿರುವ ಯೋಗ್ಯರನ್ನು ಸತ್ಕರಿಸಿ, ಉಪಚರಿಸಿ. ಭಿಕ್ಷುಕರಿಗೆ ಹೊದೆಯಲು ಕಪ್ಪು ಕಂಬಳಿ ಕೊಟ್ಟು ಸತ್ಕರಿಸಿ. 


ರಾಹು : ಸಹೋದರತ್ವ, ಮಮತೆಯ ಸಂಕೇತ. ಗುರು, ಹಿರಿಯರನ್ನು ಗೌರವಿಸಿ. ಕ್ಯಾನ್ಸರ್ನಂತ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರ್ಥಿಕವಾಗಿ ಸಹಾಯ ಮಾಡಿ. ಅವರನ್ನೂ ನಿಮ್ಮ ಮಕ್ಕಳಂತೆ ಉಪಚರಿಸಿ. 


ಕೇತು : ಹಸಿದ ಹೊಟ್ಟೆಗೆ ಊಟ ಕೊಡಿ. ಅನ್ನದಾನಕ್ಕಿಂತ ಮಹಾದಾನವಿಲ್ಲ. ಅದರಲ್ಲೂ ಹಸಿದ ಮೂಕ ಪ್ರಾಣಿಗಳಿಗೆ ಅನ್ನವನ್ನಿಟ್ಟು ಅವನ್ನು ಸಂತೃಪ್ತಿಗೊಳಿಸಿ. ಅದರ ಒಂದು ಸಂತೃಪ್ತಿಯ ನಗೆಯೇ ಕೇತು ಸಂಬಂಧ ದೋಷ ನಿವಾರಣೆಗೆ ಪೂರಕವಾಗುತ್ತದೆ. ವಾರಕ್ಕೊಮ್ಮೆಯಾದರೂ ಅದರಲ್ಲೂ ವಿಶೇಷವಾಗಿ ಮಂಗಳವಾರ ಮೌನವ್ರತವನ್ನು ಆಚರಿಸುವುದು ಒಳ್ಳೆಯದು.
ಸರಳ ಪರಿಹಾರ.. ಶ್ರೀ ಸುಧಾಕರ
**********

ರಾಶಿ ಆಧಾರದಲ್ಲಿ ಮುಖ್ಯ ಬಾಗಿಲುಗಳ ನಿರ್ಧಾರ


ಮನೆಯ ಒಳಗೆ ಬರುವಾಗ ನೆಲದಿಂದ ಮೆಟ್ಟಿಲನ್ನು ಹತ್ತಿಕೊಂಡು ಬರುವಂತಿರಬೇಕು. ಮನೆಯಿಂದ ಹೊರ ಹೋಗುವಾಗ ಮೆಟ್ಟಿಲನ್ನು ಇಳಿದು ಹೋಗುವಂತಿರಬೇಕು.


 ಆ ಮೆಟ್ಟಿಲುಗಳ ಸಂಖ್ಯೆ 3 ಅಥವಾ 5 ಇರಬೇಕು. ಅದಕ್ಕಿಂರ ಹೆಚ್ಚಿನ ಸಂಖ್ಯೆಯಲ್ಲಿದ್ದಲ್ಲಿ ಬೆಸ ಪ್ರಮಾಣದಲ್ಲೇ ಹೆಚ್ಚಿಸುತ್ತಾ ಹೋಗಬೇಕು. ಮನೆಯ ಮುಖ್ಯ ಬಾಗಿಲು ಪೂರ್ವ, ಉತ್ತರ, ಈಶಾನ್ಯ ಎಲ್ಲರಿಗೂ ಉತ್ತಮವಾಗಿ ಆಗಿಬರುತ್ತದೆ.


 ಆ ದಿಕ್ಕಿನಲ್ಲಿ ಬಾಗಿಲು ಇಡಲು ಸಾಧ್ಯ ಆಗದಿದ್ದಲ್ಲಿ ಪಶ್ಚಿಮ ಅಥವಾ ವಾಯವ್ಯ ದಿಕ್ಕು ಮಧ್ಯಮ ಫಲ ನೀಡುತ್ತದೆ.


 ಇನ್ನು ರಾಶಿ ಆಧಾರದಲ್ಲಿ ಹೇಳಬೇಕು ಅಂದರೆ, 


ಕರ್ಕಾಟಕ- ವೃಶ್ಚಿಕ- ಮೀನ ರಾಶಿಯವರಿಗೆ ಉತ್ತರ ದಿಕ್ಕು,

 ಮೇಷ- ಸಿಂಹ- ಧನುಸ್ಸು ರಾಶಿಯವರಿಗೆ ಪೂರ್ವ ದಿಕ್ಕು,
 ವೃಷಭ- ಕನ್ಯಾ- ಮಕರದವರಿಗೆ ದಕ್ಷಿಣ ದಿಕ್ಕು,
ಮಿಥುನ- ತುಲಾ- ಕುಂಭ ರಾಶಿಯವರಿಗೆ ಪಶ್ಚಿಮ ದಿಕ್ಕಿನ ಬಾಗಿಲು ಆಗಿಬರುತ್ತದೆ.

ಸರಳ ವಾಸ್ತು ಪರಿಹಾರ 
ಶ್ರೀ ಸುಧಾಕರ

************

another one
ಆರೋಗ್ಯಕ್ಕೆ ವಾಸ್ತು ನಿಯಮ

ಮುಖ್ಯ ದ್ವಾರವನ್ನು ವಾಸ್ತು ನಿಯಮದ ಪ್ರಕಾರ ಸಿದ್ಧ ಪಡಿಸಬೇಕು. ಇದು ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿರಬೇಕು. ಬಾಗಿಲಿಗೆ ತೇಗದ ಮರಕ್ಕೆ ಆದ್ಯತೆ ನೀಡಿ. 

- ಪ್ರವೇಶ ದ್ವಾರದಲ್ಲಿ ಯಾವುದೇ ಆಡತಡೆ ಇಲ್ಲದಂತೆ ನೋಡಿಕೊಳ್ಳಿ. ಮುಖ್ಯ ದ್ವಾರದ ಸುತ್ತಮುತ್ತ ಪಾದರಕ್ಷೆ ಬಿಡಬಾರದು. ಇಲ್ಲವಾದರೆ ಪಾಸಿಟಿವ್ ಎನರ್ಜಿಗೆ ತಡೆಯಾಗುತ್ತದೆ. 

- ಬೆಡ್ ರೂಂ ಯಾವಾಗಲೂ ತುಂಬಾ ಶುಚಿಯಾಗಿರಬೇಕು. ಕನಿಷ್ಟವೆಂದರೂ ದಿನಕ್ಕೆ 20 ನಿಮಿಷ ಬೆಡ್ ರೂಂ ಕಿಟಕಿ ಬಾಗಿಲು ತೆರೆದಿಡಬೇಕು. ಈ ಮೂಲಕ ಸರಿಯಾಗಿ ಗಾಳಿಯಾಡುವಂತೆ ಮಾಡಿ. 

- ಇದರಿಂದ ನೈಸರ್ಗಿಕ ಬೆಳಕು ಮತ್ತು ಗಾಳಿ ಮನೆಯೊಳಗೆ ಬಂದು ಪಾಸಿಟಿವ್ ಎನರ್ಜಿ ತುಂಬುತ್ತದೆ. ಯಾವಾಗಲೂ ದಕ್ಷಿಣಕ್ಕೆ ತಲೆ ಮಾಡಿಯೇ ಮಲಬೇಕು. ಇದರಿಂದ ಸಂಪತ್ತು ವೃದ್ಧಿಸುತ್ತದೆ. 

- ಮನೆಯೊಳಗೆ ಮನಿ ಪ್ಲಾಂಟ್ ಇಟ್ಟರೆ ಶ್ರೇಯಸ್ಸಾಗುತ್ತದೆ. ಮನೆ ಮಂದಿಗೆ ಅದೃಷ್ಟವನ್ನು ಇದು ತರುತ್ತದೆ. ಹಸಿರು ವೇಸ್ನಲ್ಲಿ ಉತ್ತರ ದಿಕ್ಕಿನಲ್ಲಿ ಮನಿ ಪ್ಲಾಂಟ್ ಗಿಡವನ್ನು ಇಡಬೇಕು. 

- ಮೀನುಗಳು ನೋಡಲು ಸುಂದರ ಮಾತ್ರವಲ್ಲ ಹಣಕಾಸು ಲಾಭವನ್ನು ಕೂಡ ತರುತ್ತವೆ. ಹೀಗಾಗಿ ಮನೆಯಲ್ಲಿ ಅಕ್ವೇರಿಯಂ ಇದ್ದರೆ ಅದು ಹಣಕಾಸು ಸ್ಥಿರತೆಯ ಜೊತೆಗೆ ನೆಮ್ಮದಿಯನ್ನೂ ನೀಡುತ್ತದೆ. 

- ವಾಸ್ತು ಪ್ರಕಾರ ಗಡಿಯಾರ ಎನರ್ಜಿ ಹರಿದು ಬರುವಂತೆ ಮಾಡುತ್ತದೆ. ಹೀಗಾಗಿ ಮನೆಯಲ್ಲಿರುವ ಎಲ್ಲಾ ಗಡಿಯಾರಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ. ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇದು ಇರಲಿ. 

- ಹಕ್ಕಿಗಳು ಸಾಮರಸ್ಯ, ಸಂಪತ್ತು ಮತ್ತು ಸಂತೋಷದ ಪ್ರತೀಕ. ಇವು ಸಂಪತ್ತು ಮತ್ತು ಎನರ್ಜಿಯನ್ನು ಕೂಡ ಆಕರ್ಷಿಸುತ್ತವೆ. ಹೀಗಾಗಿ ಬಾಲ್ಕನಿಯಲ್ಲಿ ಹಕ್ಕಿಗಳಿಗಾಗಿ ನೀರು ಮತ್ತು ಕಾಳು ಇಡಬೇಕು. 

- ವಾಸ್ತು ನಿಯಮದ ಪ್ರಕಾರ ನೇರಳೆ ಬಣ್ಣ ಸಂಪತ್ತಿನ ಸಂಕೇತ. ಹೀಗಾಗಿ ಆರ್ಕಿಡ್ನಂತಹ ನೇರಳೆ ಬಣ್ಣದ ಗಿಡಗಳನ್ನು ಮನೆಯೊಳಗೆ ಇಟ್ಟುಕೊಂಡರೆ ಶ್ರೇಯಸ್ಸಾಗುತ್ತದೆ.
*****


No comments:

Post a Comment