secrets of mudra
simple finger exercise for cure for pain and heart blockages
*********
"ದಿನಕ್ಕೊಂದು ಮುದ್ರೆಗಳು "
ಮುದ್ರಾ ವಿಜ್ಞಾನದ ಮಹತ್ವ"
*ಹೆಬ್ಬೆಟ್ಟು ಮತ್ತು ಇತರ ಬೆರಳುಗಳ ಸಂಯೋಜನೆಯೇ ಮುದ್ರೆಗಳು.ಇವುಗಳು ಹಸ್ತ ಮುದ್ರೆಗಳು.
*ಮುದ್ರೆ ಚಿಕಿತ್ಸೆ ಮಾತ್ರವಲ್ಲ ರೋಗ ಪ್ರತೀಕಾರ ಶಕ್ತಿಯನ್ನು ಬೆಳೆಸುತ್ತದೆ.
*ಇದು ವಿಜ್ಞಾನದ ಚಿಕಿತ್ಸೆ ಔಷಧ ರಹಿತವಾದ ಚಿಕಿತ್ಸೆ.
*ಇದು ವೆಚ್ಚವಿಲ್ಲದ ಚಿಕಿತ್ಸೆ. ಯಾವ ಸಾಧನ ಸಾಮಗ್ರಿ ಬೇಡ.
*ಇದು ಸ್ವತಃ ಮಾಡುವ ಚಿಕಿತ್ಸೆ. ಯಾವ ಕಾಯಿಲೆಗೂ ಇದರಿಂದ ಚಿಕಿತ್ಸೆ ನೀಡಬಹುದು.
*ಇದನ್ನು ಯಾರೂ,ಎಲ್ಲಿಯೂ ಮಾಡಬಹುದು.
*ಎಲ್ಲಾ ಪ್ರಕಾರದ ರೋಗಗಳನ್ನು ಗುಣಪಡಿಸಬಲ್ಲದು.
"ಮುದ್ರೆಗಳ ನಿಯಮಗಳು"
*ಅಬಾಲವೃದ್ಧ, ಸ್ತ್ರೀ-ಪುರುಷರು ಎಲ್ಲರೂ ಈ ಮುದ್ರೆಗಳನ್ನು ಮಾಡಬಹುದು.
*ಮುದ್ರೆಗಳನ್ನು ಎರಡೂ ಕೈಗಳಿಂದ ಮಾಡಿದರೆ ಉತ್ತಮ ಲಾಭ.
*ಪ್ರತಿದಿನ ಕೆಲವು ಕ್ಷಣಗಳು,10 ನಿಮಿಷ,ಅರ್ಧತಾಸು ತನಕವೂ ಮಾಡಬಹುದು. ಇತರ ಬೆರಳುಗಳನ್ನು ಸಾಕಷ್ಟು ನೇರವಾಗಿಡಬೇಕು.
*ಮುದ್ರೆ ಮಾಡುವಾಗ ಬೆರಳಿನಿಂದ ಒತ್ತಡ ಕೊಡುವ ಅವಶ್ಯಕತೆ ಇಲ್ಲ.
*ಜ್ಞಾನ ಮುದ್ರೆ,ಪೃಥ್ವಿ ಮುದ್ರೆ,ಅಪಾನಮುದ್ರೆ,ಧ್ಯಾನಮುದ್ರೆ,ಪ್ರಾಣಮುದ್ರೆ,ಶೂನ್ಯವಾಯು ಮುದ್ರೆ ದಿನವೂ ಹತ್ತರಿಂದ ಹದಿನೈದು ನಿಮಿಷ ಮಾಡಿದರೆ ಆರೋಗ್ಯ ದೃಡವಾಗಿ ರೋಗ ಪ್ರತಿಕಾರಕ ಶಕ್ತಿ ಬೆಳೆಯುತ್ತವೆ. ಆದುದರಿಂದ ಕಡ್ದಾಯವಾಗಿ 6 ಮುದ್ರೆಗಳನ್ನು ಎಲ್ಲರೂ ಮಾಡಬೇಕು.
*ಪ್ರಾಣ ಮುದ್ರೆ
(ಜಪಿಸುವ ಮಂತ್ರ ಒಂ ಘಂ ಗಣಪತೇ ನಮಃ)
ವಿಧಾನ: ಹೆಬ್ಬೆಟ್ಟಿನ ತುದಿಯೊಂದಿಗೆ ಉಂಗುರ ಬೆರಳಿನ ತುದಿ ಮತ್ತು ಕಿರಿಬೆರಳಿನ ತುದಿ ಸ್ಪರ್ಶ ಮಾಡಬೇಕು.ಇತರ ಬೆರಳುಗಳನ್ನು ನೇರವಾಗಿಡಬೇಕು. ಇದರಿಂದ ಚೈತನ್ಯ ವಿಕಾಸಗೊಂಡು ಶರೀರದ ಅಂಗಾಂಗಗಳು,ಮನಸ್ಸು ಭಾವಗಳು ಸೂಕ್ಷ್ಮ ಪರಿವರ್ತನೆಗೊಳ್ಳುತ್ತದೆ.
ಉಪಯೋಗಗಳು:
*ಶಾರೀರಿಕವಾಗಿ ಮಾನಸಿಕವಾಗಿ ದೃಢಗೊಳಿಸುತ್ತದೆ.
*ದಣಿವು ದೂರವಾಗಿ ಶರೀರದಲ್ಲಿ ಲವಲವಿಕೆ ತುಂಬುತ್ತದೆ.
*ಕಾಲು ಸೆಳೆತ,ಪಾದಗಳ ನೋವು,ಹಿಮ್ಮಡಿ ನೋವು ಸರಿಪಡಿಸುತ್ತದೆ.
*ಶರೀರವಿಡೀ ರಕ್ತಸಂಚಾರ ಬಲಗೊಂಡು ರೋಗ ಪ್ರತಿರೋಧಕ ಶಕ್ತಿ ಬೆಳೆಯುತ್ತದೆ.
*ಕಣ್ಣಿನ ತೊಂದರೆಗಳನ್ನು ಸರಿಪಡಿಸುತ್ತದೆ.
*******
*******
*ಸೂರ್ಯ ಮುದ್ರೆ
(ಜಪಿಸುವ ಮಂತ್ರ ಒಂ ಘಂ ಗಣಪತೇ ನಮಃ)
ವಿಧಾನ: ಉಂಗುರ ಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ ಹೆಬ್ಬೆಟ್ಟನ್ನು ಉಂಗುರ ಬೆರಳಿನ ಬೆನ್ನಿನ ಮೇಲೆ ಇರಿಸಬೇಕು.(ಕಫ,ಶೀತ,ಗಂಟಲು ನೋವಿದ್ದಾಗ ಈ ಮುದ್ರೆ ಉಪಯೋಗಿಯಾಗಿದೆ)
ಉಪಯೋಗಗಳು:
*ಚಳಿ,ನಡುಕಗಳನ್ನು ಶಮನಗೊಳಿಸುತ್ತದೆ.
*ಬೊಜ್ಜು ಕರಗಿಸಲು ರಾಮಬಾಣ ಮುದ್ರೆ.ಈ ಮುದ್ರೆಯನ್ನು ದಿನವೂ 50 ನಿಮಿಷಗಳ ಕಾಲ ಮಾಡಿದಾಗ ಬಹುಬೇಗನೆ ಬೊಜ್ಜು ಕರಗುವುದು.
*ರಕ್ತದಲ್ಲಿ ಕೊಲೇಸ್ಟ್ರಾಲ್ ಕಡಿಮೆಗೊಳಿಸಿ ಹಸಿವು ಉಂಟುಮಾಡಲು ಈ ಮುದ್ರೆ ಬಹಳ ಉಪಯೋಗವಾಗಿದೆ.
*********
"ದಿನಕ್ಕೊಂದು ಮುದ್ರೆಗಳು "
*ರುದ್ರ ಮುದ್ರೆ
(ಜಪಿಸುವ ಮಂತ್ರ ಒಂ ಘಂ ಗಣಪತೇ ನಮಃ)
ಮಾಡುವ ವಿಧಾನ: ಈ ಮುದ್ರೆಯಿಂದ ಮಣಿಪೂರ ಚಕ್ರ ಉತ್ತೇಜಿತಗೊಳ್ಳುತ್ತದೆ.ಎರಡೂ ಕೈಗಳ ಉಂಗುರ ಬೆರಳು ಮತ್ತು ತೋರು ಬೆರಳ ತುದಿಗಳನ್ನು ಹೆಬ್ಬೆರಳ ತುದಿಗೆ ಹಚ್ಚಬೇಕು.
ಉಪಯೋಗಗಳು:
*ದೇಹಕ್ಕೆ ಶಾಖ ಮತ್ತು ಚೈತನ್ಯ ಲಭಿಸುತ್ತದೆ. ಜಠರ, ಮೇದೋ ಜೀರಕ ಗ್ರಂಥಿ ಕಾರ್ಯ ಪ್ರವೃತ್ತವಾಗುತ್ತದೆ.
*ಹೃದಯದ ತೊಂದರೆಗಳು ನಿವಾರಣೆ ಆಗುತ್ತದೆ.ತಲೆಭಾರ,ತಲೆಸುತ್ತು,ಬಳಲಿಕೆ, ಆಯಾಸಗಳನ್ನು ಈ ಮುದ್ರೆಯು ಪರಿಹರಿಸುತ್ತದೆ.
*****
*ಅಪಾನ ಮುದ್ರೆ
(ಜಪಿಸುವ ಮಂತ್ರ ಓಂ ಗಂ ಗಣಪತಯೇ ನಮಃ)
*ಮಾಡುವ ವಿಧಾನ:
*ಹೆಬ್ಬೆಟ್ಟಿನ ತುದಿಯೊಂದಿಗೆ ಮಧ್ಯದ ಬೆರಳಿನ ತುದಿ ಮತ್ತು ಉಂಗುರದ ಬೆರಳಿನ ತುದಿ ಜೋಡಿಸಿ.
ಉಪಯೋಗ:
** ಅಪಚನದ ತೊಂದರೆ ಶಮನ.
ಮೂಲವ್ಯಾಧಿ ಗುಣವಾಗುತ್ತದೆ.
ಮೂತ್ರರೋಗ ಸರಿಪಡಿಸುತ್ತದೆ.
ಮಧುಮೇಹ ಸರಿಪಡಿಸುತ್ತದೆ.
ವಾಕರಿಕೆ,ಬಿಕ್ಕಳಿಗೆ ಶಮನ.
ಹೊಟ್ಟೆ ನೋವು ನಿವಾರಣೆಯಾಗುತ್ತದೆ.*
*****
****
ದಿನವೂ ಈ ಮುದ್ರೆಗಳನ್ನು ಪಾಲಿಸಿ ನಿಮಗಿರುವ ಶುಗರ್, ಬಿಪಿ, ಕೊಲೆಸ್ಟರಾಲ್, ಎದೆ ಉರಿ ವಾತ, ಪಿತ್ತ, ಕಫ. ಇವುಗಳಿಂದ ದೂರವಾಗಿಸಿ.
ಮುದ್ರಾ ವಿಜ್ಞಾನದ ಮಹತ್ವ
*ಹೆಬ್ಬೆಟ್ಟು ಮತ್ತು ಇತರ ಬೆರಳುಗಳ ಸಂಯೋಜನೆಯೇ ಮುದ್ರೆ
ಗಳು.ಇವುಗಳು ಹಸ್ತ ಮುದ್ರೆಗಳು.
*ಮುದ್ರೆ ಚಿಕಿತ್ಸೆ ಮಾತ್ರವಲ್ಲ ರೋಗ ಪ್ರತೀಕಾರ ಶಕ್ತಿಯನ್ನು
ಬೆಳೆಸುತ್ತದೆ.
*ಇದು ವಿಜ್ಞಾನದ ಚಿಕಿತ್ಸೆ ಔಷಧ ರಹಿತವಾದ ಚಿಕಿತ್ಸೆ.
*ಇದು ವೆಚ್ಚವಿಲ್ಲದ ಚಿಕಿತ್ಸೆ. ಯಾವ ಸಾಧನ ಸಾಮಗ್ರಿ ಬೇಡ.
*ಇದು ಸ್ವತಃ ಮಾಡುವ ಚಿಕಿತ್ಸೆ. ಯಾವ ಕಾಯಿಲೆಗೂ ಇದರಿಂದ
ಚಿಕಿತ್ಸೆ ನೀಡಬಹುದು.
*ಇದನ್ನು ಯಾರೂ,ಎಲ್ಲಿಯೂ ಮಾಡಬಹುದು.
*ಎಲ್ಲಾ ಪ್ರಕಾರದ ರೋಗಗಳನ್ನು ಗುಣಪಡಿಸಬಲ್ಲದು.
"ಮುದ್ರೆಗಳ ನಿಯಮಗಳು"
*ಅಬಾಲವೃದ್ಧ, ಸ್ತ್ರೀ-ಪುರುಷರು ಎಲ್ಲರೂ ಈ ಮುದ್ರೆಗಳನ್ನು
ಮಾಡಬಹುದು.
*ಮುದ್ರೆಗಳನ್ನು ಎರಡೂ ಕೈಗಳಿಂದ ಮಾಡಿದರೆ ಉತ್ತಮ ಲಾಭ.
*ಪ್ರತಿದಿನ ಕೆಲವು ಕ್ಷಣಗಳು,10 ನಿಮಿಷ,ಅರ್ಧತಾಸು ತನಕವೂ
ಮಾಡಬಹುದು. ಇತರ ಬೆರಳುಗಳನ್ನು ಸಾಕಷ್ಟು ನೇರವಾಗಿಡ
ಬೇಕು.
*ಮುದ್ರೆ ಮಾಡುವಾಗ ಬೆರಳಿನಿಂದ ಒತ್ತಡ ಕೊಡುವ ಅವಶ್ಯಕತೆ
ಇಲ್ಲ.
*ಜ್ಞಾನ ಮುದ್ರೆ,ಪೃಥ್ವಿ ಮುದ್ರೆ,ಅಪಾನಮುದ್ರೆ,ಧ್ಯಾನಮುದ್ರೆ,ಪ್ರಾಣ
ಮುದ್ರೆ,ಶೂನ್ಯವಾಯು ಮುದ್ರೆ ದಿನವೂ ಹತ್ತರಿಂದ ಹದಿನೈದು
ನಿಮಿಷ ಮಾಡಿದರೆ ಆರೋಗ್ಯ ದೃಡವಾಗಿ ರೋಗ ಪ್ರತಿಕಾರಕ ಶಕ್ತಿ
ಬೆಳೆಯುತ್ತವೆ. ಆದುದರಿಂದ ಕಡ್ದಾಯವಾಗಿ 6 ಮುದ್ರೆಗಳನ್ನು
ಎಲ್ಲರೂ ಮಾಡಬೇಕು.
***
Be healthy by following the exercises given in this video
ಮುದ್ರೆಗಳು ಎಂಬುವ ಕೈ ಸನ್ನೆಗಳಾಗಿವೆ ಇವುಗಳಿಂದ ದೇಹದಲ್ಲಿ ಶಕ್ತಿ ಸಂಚಾರವಾಗುತ್ತದೆ.
ಈ 8 ಮುದ್ರೆಗಳನ್ನು ಅಭ್ಯಾಸ ಮಾಡಿ ಹಾಗು ರೋಗ ಮುಕ್ತರಾಗಿ
*****
Do above exercise everyday
***
ಸೂರ್ಯ ಮುದ್ರೆ :
ಯೋಗಮುದ್ರೆಗಳ ಬಗ್ಗೆ ತಿಳಿದುಕೊಳ್ಳುತ್ತಾ ಅದರ ಮುಂದುವರೆದ ಭಾಗವಾಗಿ ಈ ಅತ್ಯಂತ ಉಪಯುಕ್ತ ಸೂರ್ಯ ಮುದ್ರೆಯ ಬಗ್ಗೆ ವಿವರ.
ಸೂರ್ಯ ಮುದ್ರೆಯು ದೇಹದ ಉಷ್ಣತೆ ಹೆಚ್ಚಿಸುತ್ತದೆ ಹಾಗಾಗಿ ಇದನ್ನು ಅಗ್ನಿ ವರ್ಧಕ ಮುದ್ರಾ ಎಂದೂ ಕರೆಯುತ್ತಾರೆ.
ಈ ಮುದ್ರೆಯು ನಮ್ಮ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹ ಒಳ್ಳೆಯದು, ಜೀರ್ಣಕ್ರಿಯೆ ಸರಾಗವಾಗುತ್ತದೆ
ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಸರಳ ವಿಧಾನಗಳಲ್ಲಿ ಸೂರ್ಯ ಮುದ್ರೆಯು ಸಹಾ ಒಂದು. ಅಲ್ಲದೆ ದೇಹದ ಹೆಚ್ಚಿನ ಕೊಬ್ಬಿನ ಅಂಶ ಕರಗುವುದರಿಂದ ದೇಹದ ತೂಕ ಕಡಿಮೆ ಮಾಡುತ್ತದೆ. ಅಲ್ಲದೆ ಅಧಿಕ ಕೊಲೆಸ್ಟ್ರಾಲ್ ನಿಂದ ಉಂಟಾಗುವ ಇತರ ತೊಂದರೆಗಳು ನಿವಾರಣೆಯಾಗುತ್ತೆ.
ಮುದ್ರೆ ಹಾಕುವ ವಿಧಾನ :-
- ಒಂದು ಪ್ರಶಾಂತ ವಾತಾವರಣದಲ್ಲಿ ನಿಮಗೆ ಅನುಕೂಲವಾಗುವಂತೆ ಕುಳಿತುಕೊಳ್ಳಿ.
- ನಿಮ್ಮ ಎರಡೂ ಹಸ್ತಗಳನ್ನು ಬೆರಳುಗಳನ್ನು ಬಿಡಿಸಿ ತೊಡೆಗಳ ಮೇಲೆ ಇಟ್ಟುಕೊಳ್ಳಿ.
- ಉಂಗುರದ ಬೆರಳನ್ನು ( Ring finger ) ಬಗ್ಗಿಸಿ ಹೆಬ್ಬೆರಳಿನ ಬುಡಕ್ಕೆ ತಾಕಿಸಿ. ನಂತರ ಅದೇ ಹೆಬ್ಬೆರಳನ್ನು ಬಗ್ಗಿಸಿದ ಉಂಗುರ ಬೆರಳಿನ ಮದ್ಯಕ್ಕೆ ತಾಕಿಸಿ ( ಚಿತ್ರ ನೋಡಿ ).
- ಉಳಿದ ಕಿರುಬೆರಳು, ಮದ್ಯದ ಬೆರಳು ಹಾಗೂ ತೋರು ಬೆರಳುಗಳನ್ನು ಚಿತ್ರದಲ್ಲಿ ತೋರಿಸಿರುವಂತೆ ನೇರವಾಗಿ ಬಿಡಿ. ಹಸ್ತದ ಯಾವುದೇ ಭಾಗದಲ್ಲಿಯೂ ಬಿಗಿ ಮಾಡಬೇಡಿ. ಮುದ್ರೆಯನ್ನು ಎರಡೂ ಹಸ್ತಗಳಲ್ಲಿ ಏಕಕಾಲಕ್ಕೆ ಮಾಡಬೇಕು.
ಇಷ್ಟೇ ಮುದ್ರೆಯ ವಿಧಾನ. ಒಮ್ಮೆ ಮುದ್ರೆ ಹಾಕಿ ಕುಳಿತರೆ 15 - 45 ನಿಮಿಷಗಳ ಕಾಲ ನಿಮ್ಮ ಅವಶ್ಯಕತೆ ತಕ್ಕಂತೆ ಕುಳಿತುಕೊಳ್ಳಿ. ಮುದ್ರೆ ಹಾಕಲು ಬೆಳಿಗ್ಗೆ ಮತ್ತು ಸಂಜೆಯ ತಂಪು ಹೊತ್ತು ಮಾತ್ರ ಒಳ್ಳೆಯ ಸಮಯ. ಎರಡೂ ಹೊತ್ತು ಮಾಡಿದರೆ ಉತ್ತಮ ಫಲಿತಾಂಶ.
ಪ್ರಯೋಜನಗಳು :-
- ಈ ಸೂರ್ಯ ಮುದ್ರೆಯಿಂದ ಥೈರಾಯ್ಡ್ ಸಂಬಂಧಿತ ಖಾಯಿಲೆಗಳು ಸಹ ಗುಣವಾಗುತ್ತದೆ. ಕಾರಣ ಇದು ನಮ್ಮ ದೇಹದ ಮೇದೋಜೀರಕ ಗ್ರಂಥಿಯ ಕಾರ್ಯವನ್ನು ಸುಧಾರಿಸುತ್ತದೆ.
- ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಇದು ದೇಹ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಸಿಡಿಟಿ ಸಮಸ್ಯೆ ನಿವಾರಣೆಗೆ ಸಹಾಯಕ.
- ಮಾನಸಿಕ ಒತ್ತಡ ಹಾಗೂ ಆತಂಕ ಹೆಚ್ಚಾದಾಗ ಮನಸ್ಥಿತಿ ಸರಿಹೋಗಲು ಈ ಮುದ್ರೆ ತುಂಬಾ ಉಪಯುಕ್ತ.
- ದೇಹದಲ್ಲಿ ಹೆಚ್ಚಿನ ನೀರಿನಂಶ ಕಾರಣ ಊತಗಳಾಗಿದ್ದರೆ ( Edema ಮುಂತಾದ ) ಮುದ್ರೆಯಿಂದ ಉಂಟಾಗುವ ದೇಹದ ಹೆಚ್ಚಿನ ಉಷ್ಣತೆ ಕಾರಣ ತೊಂದರೆಗಳು ಪರಿಹಾರ ಆಗುತ್ತದೆ.
- ದೇಹದಲ್ಲಿ ಯೂರಿಯಾ ಅಂಶ ಜಾಸ್ತಿಯಾಗಿ ಮೂಳೆಗಳಲ್ಲಿ ಗಂಟುಗಳು ಆಗಿದ್ದರೆ ( Gouts - ಗೌತಿ ) ನಿಧಾನವಾಗಿ ಕರಗುತ್ತೆ.
- ಹೆಚ್ಚಿನ ಕೊಲೆಸ್ಟ್ರಾಲ್ ಕರಗಿ ದೇಹದ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.
- ಶೀತ ದೇಹ ಪ್ರಕೃತಿಯವರಿಗೆ ಚಳಿಗಾಲ, ಮಳೆಗಾಲ ಅಥವ ಇತರ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.
- ಈ ಮುದ್ರೆಯಿಂದ ಮಹಿಳೆಯರು ಪಿಸಿಓಎಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಇದು ಹೈಪೋಥೈರಾಯ್ಡಿಸಂ ನಂತಹ ಸಮಸ್ಯೆಗಳಿಗೂ ಮದ್ದು.
ಮುದ್ರೆ ಮಾಡುವಾಗ ಈ ವಿಷಯಗಳನ್ನು ನೆನಪಿಡಿ
ದೇಹದಲ್ಲಿ ಅತಿಯಾದ ಪಿತ್ತ ಆಗಿದ್ದಲ್ಲಿ ಈ ಮುದ್ರೆ ಮಾಡಬೇಡಿ.
ಬೇಸಿಗೆಯಲ್ಲಿ ಅಥವಾ ಬಿಸಿ ವಾತಾವರಣದಲ್ಲಿ ಇದನ್ನು ಮಾಡಬೇಡಿ.
ನೀವು ಅಲ್ಸರ್ ನಿಂದ ಬಳಲುತ್ತಿದ್ದರೆ, ನಿಮ್ಮ ಅಲ್ಸರ್ ಗುಣವಾಗುವವರೆಗೂ ಇದನ್ನು ಮಾಡಬೇಡಿ.
ಸೂರ್ಯ ಮುದ್ರೆ ಮಾಡುವುದು ಎಲ್ಲರಿಗೂ ಒಳ್ಳೆಯದು ಆದರೆ ಹೆಚ್ಚು ಮಾಡುವುದರಿಂದ ದೇಹದ ಒಳಗಿನ ಶಾಖ ಹೆಚ್ಚುತ್ತದೆ. ಹಾಗಾಗಿ ನಿಮ್ಮ ದೇಹದ ಪ್ರಕೃತಿ ಮತ್ತು ಪ್ರತಿಕ್ರಿಯೆ ನೋಡಿಕೊಂಡು ಮಾಡಿ.
ಈ ಮಾಹಿತಿ ಕೇವಲ ಗ್ರೂಪಿನ ಸದಸ್ಯರ ಮಾಹಿತಿಗಾಗಿ ಮಾತ್ರ. ಈಗಾಗಲೇ ಯಾವುದೇ ತೊಂದರೆಗೆ ಔಷಧಿ ಸೇವನೆ ಮಾಡುತ್ತಿದ್ದಲ್ಲಿ ನಿಮ್ಮ ಡಾಕ್ಟರ್ ಸಲಹೆ ಇಲ್ಲದೆ ನಿಲ್ಲಿಸಬೇಡಿ.
ಒಮ್ಮೆ ನಿಮ್ಮ ತೊಂದರೆ ನಿವಾರಣೆ ಆದ ಕೂಡಲೇ ಮುದ್ರೆ ಹಾಕುವುದನ್ನು ನಿಲ್ಲಿಸಿ.
ಚಿತ್ರ ಮತ್ತು ಲೇಖನ :- ಮಂಜುನಾಥ್ ಪ್ರಸಾದ್.
****
No comments:
Post a Comment