ನಮ್ಮ ಹಿರಿಯರು ಊಟ ಮುಗಿಸಿ ಬೆಲ್ಲ ಬಾಯಿಗಿಡುವುದು ಸುಮ್ಮನಲ್ಲ!
ಸಾಮಾನ್ಯವಾಗಿ ಜನರು ಊಟವಾದ ಮೇಲೆ ಬೆಲ್ಲ ತಿನ್ನುತ್ತಾರೆ. ಆದರೆ ಅದೇಕೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಚಳಿಗಾಲದಲ್ಲಿ ಬೆಲ್ಲ ತಿಂದರೆ ವಿಟಮಿನ್ ಗಳು ಮತ್ತು ಲವಣಗಳು ಹೊಟ್ಟೆ ಸೇರುತ್ತವೆ. ಜೊತೆಯಲ್ಲಿಯೇ ನಿರೋಧಕ ಶಕ್ತಿಯನ್ನು ಸೃಷ್ಟಿಸಿ ದೇಹವನ್ನು ಬೆಚ್ಚಗಿಡುತ್ತದೆ. ಶೀತ ಮತ್ತು ಕೆಮ್ಮು ಇದ್ದರೆ ನಿವಾರಿಸುವುದಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದೇ ಕಾರಣದಿಂದ ಈ ಸಹಜ ಸಿಹಿ ಭಾರತದಲ್ಲಿ ಅತೀ ಜನಪ್ರಿಯ. ಇಲ್ಲಿ ಬೆಲ್ಲದ 15 ಲಾಭಗಳನ್ನು ವಿವರಿಸಿದ್ದೇವೆ.
1. ಮಲಬದ್ಧತೆಯಿಂದ ರಕ್ಷಣೆ : ಬೆಲ್ಲ ದೇಹದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಎನ್‌ಜೈಮ್‌ಗಳನ್ನು ಸಕ್ರಿಯಗೊಳಿಸುತ್ತದೆ. ಜಠರದ ಚಲನೆಗೆ ನೆರವಾಗಿ ಮಲಬದ್ಧತೆಯಿಂದ ರಕ್ಷಿಸುತ್ತದೆ.
2. ಮೂತ್ರಪಿಂಡಕ್ಕೆ ನೆರವು : ಬೆಲ್ಲವು ಮೂತ್ರಪಿಂಡದಲ್ಲಿರುವ ವಿಷಕಾರಿ ರಾಸಾಯನಿಕಗಳನ್ನು ಹೊರ ಹಾಕಲು ನೆರವಾಗುತ್ತದೆ. ದೇಹದಿಂದ ಪರಿಣಾಮಕಾರಿಯಾಗಿ ವಿಷನಿವಾರಿಸಬೇಕೆಂದಲ್ಲಿ ಬೆಲ್ಲ ತಿನ್ನಿ.
3. ಜ್ವರದ ಚಿಹ್ನೆಗಳಿಗೆ ಚಿಕಿತ್ಸೆ : ಶೀತ ಮತ್ತು ಕಫ ಇದ್ದಾಗ ಬೆಲ್ಲ ತಿನ್ನಬೇಕು. ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ ಅಥವಾ ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಬಹುದು.
4. ರಕ್ತ ಶುದ್ಧೀಕರಣ : ಬೆಲ್ಲದ ಅತೀ ಪ್ರಸಿದ್ಧ ಲಾಭವೆಂದರೆ ರಕ್ತ ಶುದ್ಧೀಕರಣ. ನಿತ್ಯವೂ ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತ ಶುದ್ಧವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ.
5. ನಿರೋಧಕ ಶಕ್ತಿಗೆ ಒತ್ತು : ಬೆಲ್ಲದಲ್ಲಿ ಹಲವು ಆಂಟಿ ಆಕ್ಸಿಡಂಟ್‌ಗಳು ಮತ್ತು ಲವಣಗಳಾದ ಸತು ಮತ್ತು ಸೆಲೆನಿಯಂ ಇವೆ. ಇವು ಸ್ವತಂತ್ರ ಕಣಗಳಿಗೆ ಹಾನಿಯಾಗದಂತೆ ನೆರವಾಗುತ್ತದೆ. ಸೋಂಕುಗಳ ವಿರುದ್ಧವೂ ನೆರವಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಏರಿಸಲೂ ಬೆಲ್ಲ ನೆರವಾಗುತ್ತದೆ.
6. ದೇಹ ಸ್ವಚ್ಛಗೊಳಿಸುವುದು : ಬೆಲ್ಲ ಒಂದು ಅತೀ ಸಹಜವಾದ ದೇಹ ಸ್ವಚ್ಛಗೊಳಿಸುವ ಸಾಧನ. ಹೀಗಾಗಿ ಬೆಲ್ಲ ಸೇವಿಸುವುದು ದೇಹದಿಂದ ಅನಗತ್ಯ ಕಣಗಳನ್ನು ನಿವಾರಿಸುತ್ತದೆ. ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು ಸ್ವಚ್ಛಗೊಳಿಸುತ್ತದೆ. ಅತೀ ಮಾಲಿನ್ಯವಿರುವ ಜಾಗದಲ್ಲಿ ಕೆಲಸ ಮಾಡುವವರು ಬೆಲ್ಲ ತಿನ್ನುವುದು ಉತ್ತಮ.
7. ಋತುಸ್ರಾವದ ನೋವು : ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಕಾರಣ ಋತುಸ್ರಾವದ ನೋವಿಗೆ ಇದು ಉಪಶಮನ. ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ. ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್‌ಗಳು ದೇಹಕ್ಕೆ ಆರಾಮ ಕೊಡುತ್ತದೆ.
8. ಅನೀಮಿಯದಿಂದ ರಕ್ಷಣೆ : ಬೆಲ್ಲದಲ್ಲಿ ಕಬ್ಬಿಣ ಮತ್ತು ಫೊಲೇಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿ ಇಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಉತ್ತಮ.
9. ಕರುಳಿನ ಆರೋಗ್ಯ : ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ.
10. ಹೊಟ್ಟೆಗೆ ತಂಪು : ಬೆಲ್ಲ ಸಾಮಾನ್ಯ ದೇಹದ ಉಷ್ಣತೆ ಕಾಪಿಡಲು ನೆರವಾಗುತ್ತದೆ. ಬೆಲ್ಲದ ತಂಪು ನೀರು ಕುಡಿಯುವುದು ಬೇಸಿಗೆಗೆ ಉತ್ತಮ.
11. ರಕ್ತದೊತ್ತಡ ನಿಯಂತ್ರಣ : ಬೆಲ್ಲದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಇರುವ ಕಾರಣ ದೇಹದಲ್ಲಿ ಆಮ್ಲೀಯ ತತ್ವಗಳನ್ನು ನಿಭಾಯಿಸುತ್ತದೆ. ಹೀಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
12. ಶ್ವಾಸಕೋಶದ ಸಮಸ್ಯೆ : ಬೆಲ್ಲವನ್ನು ನಿತ್ಯವೂ ಸೇವಿಸುವುದರಿಂದ ಆಸ್ತಮಾ, ಬ್ರೋನ್ಷಿಟಿಸ್ ಸಮಸ್ಯೆ ನಿವಾರಣೆಯಾಗಲಿದೆ. ಎಳ್ಳು ಬೆರೆಸಿ ಜೊತೆಗೆ ಸೇವಿಸಿದರೆ ಶ್ವಾಸಕೋಶಕ್ಕೆ ಉತ್ತಮ.
13. ಸಂಧಿ ನೋವು : ನಿಮಗೆ ಸಂಧಿ ನೋವಿದ್ದರೆ ಬೆಲ್ಲ ಉತ್ತಮ ನೋವು ನಿವಾರಕ. ಶುಂಠಿ ಜೊತೆ ಸೇವಿಸಿ ಬೆಲ್ಲ ತಿನ್ನಬಹುದು. ಮೂಳೆಗಳಿಗೂ ಇದು ಉತ್ತಮ.
14. ತೂಕ ನಷ್ಟ : ತೂಕ ಇಳಿಸಲು ಬೆಲ್ಲ ಉತ್ತಮ ಹಾದಿ. ಪೊಟಾಶಿಯಂ ಹೆಚ್ಚಾಗಿರುವ ಕಾರಣ ಎಲೆಕ್ಟ್ರೊಲೈಟ್ ಗಳನ್ನು ಸಮತೋಲನ ಮಾಡಿ ಚಯಾಪಚಯ ಚೆನ್ನಾಗಿರಲು ಬೆಲ್ಲ ನೆರವಾಗುತ್ತದೆ. ಹೀಗಾಗಿ ತೂಕ ಇಳಿಸುವಲ್ಲಿ ಉತ್ತಮ.
15. ಶಕ್ತಿಯ ಮೂಲ : ಸಕ್ಕರೆ ಕಾರ್ಬೋಹೈಡ್ರೇಟ್ ದೇಹಕ್ಕೆ ಕೊಟ್ಟರೆ, ಬೆಲ್ಲ ದೇಹಕ್ಕೆ ಧೀರ್ಘ ಕಾಲದ ಶಕ್ತಿ ಕೊಡುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಸುವುದಿಲ್ಲ. ಸುಸ್ತು ಮತ್ತು ನಿಶ್ಶಕ್ತಿ ಇರುವವರಿಗೂ ಉತ್ತಮ.
***
ಬೆಲ್ಲ, ಸಿದ್ಧೌಷಧ ಹಲವು ತೊಂದರೆಗಳಿಗೆಲ್ಲ!
ನಮ್ಮ ಹಳ್ಳಿಗಳಲ್ಲಿ ಕುಡಿಯಲು ನೀರು ಕೇಳಿದರೆ ನೀರಿನ ಜೊತೆ ಬೆಲ್ಲದ ತುಂಡುಗಳನ್ನು ಕೂಡ ತಂದಿಡುತ್ತಾರೆ. ಅ ದೊಂದು ಸಂಪ್ರದಾಯ, ಆದರೆ ಬೆಲ್ಲ ತಿಂದರೆ ಅದ್ಭುತವಾದ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ.
ಬೆಲ್ಲವನ್ನು ತಿಂದರೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಮಾತ್ರವಲ್ಲ, ದೊಡ್ಡ ಸಮಸ್ಯೆಗಳನ್ನೂ ದೂರವಿಡಬಹುದು.
ಬನ್ನಿ, ಬೆಲ್ಲದಲ್ಲಿರುವ ಆರೋಗ್ಯಕರ ಗುಣಗಳೇನು ಎಂದು ನೋಡೋಣ:
೧.ರಕ್ತವನ್ನು ಶುದ್ಧೀಕರಿಸುತ್ತದೆ. ಈ ಸಿಹಿ ವಸ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಆದ್ದರಿಂದ ದಿನಾ ಸ್ವಲ್ಪ ಬೆಲ್ಲವನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಜೀರ್ಣಕ್ರಿಯೆಗೆ ಒಳ್ಳೆಯದು ಇದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು.
೨.ಹೊಟ್ಟೆಯನ್ನು ತಂಪಾಗಿಸುತ್ತದೆ ಬೆಲ್ಲ ಹೊಟ್ಟೆಯನ್ನು ತಂಪಾಗಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಒಂದು ತುಂಡು ಬೆಲ್ಲವನ್ನು ಬಾಯಿಗೆ ಹಾಕಿಕೊಳ್ಳಿ.
೩.ರಕ್ತ ಹೀನತೆ ಇರುವವರಿಗೆ ಅತ್ಯುತ್ತಮವಾದ ಮನೆಮದ್ದು ಇದಾಗಿದೆ. ಇದರಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿದೆ. ಹದಿ ಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು.
೪.ತ್ವಚೆಗೆ ತುಂಬಾ ಒಳ್ಳೆಯದು ಬೆಲ್ಲ ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ, ಮೊಡವೆಯನ್ನು ನಿಯಂತ್ರಿಸಿ ಕಮ್ಮಿಗೊಳಿಸುತ್ತದೆ. ಇದು ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ.
೫.ಗಂಟಲು ಕೆರೆತ, ಕೆಮ್ಮು ಕಾಣಿಸಿದರೆ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.
೬.ತುಂಬಾ ದಣಿವಾದಾಗ ದುಬಾರಿ ಖರ್ಚಿನ ಗ್ಲೂಕೋಸ್ ಅಥವಾ ಎನರ್ಜಿ ಡ್ರಿಂಕ್ಸ್ ನ ಅಗತ್ಯವಿಲ್ಲ! ಒಂದು ಬೆಲ್ಲದ ತುಂಡನ್ನು ಬಾಯಿಗೆ ಹಾಕಿ ನೀರು ಕುಡಿದರೆ ಸಾಕು. ದಣಿವು ಕ್ಷಣಾರ್ಧದಲ್ಲಿ ಮಾಯ!
೭.ಬೆಲ್ಲದ ಚೂರನ್ನು ಬಾಯಿಗೆ ಹಾಕಿ ಕೊಂಡರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ. ಅಸ್ತಮಾ ಕಾಯಿಲೆ ಇರುವವರು ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದು ಒಳ್ಳೆಯದು.
೮. ನಿಯಮಿತವಾದ ಬೆಲ್ಲದ ಸೇವನೆ ಸಂಧಿನೋವನ್ನು ಕಡಿಮೆ ಮಾಡುತ್ತದೆ ಮಂಡಿ ನೋವು, ಕೈಕಾಲು ನೋವು ಇವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ.
೯.ಮೈಗ್ರೇನ್(ಅರ್ಧ ತಲೆಶೂಲೆ) ಕಾಯಿಲೆಯನ್ನು ಗುಣಪಡಿಸುವಲ್ಲಿ ಕೂಡ ಬೆಲ್ಲ ಸಹಾಯ ಮಾಡುತ್ತದೆ. ತಲೆನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದು ಆರಾಮವಾಗಿರಿ.
೧೦. ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲವನ್ನು ಸೇವಿಸುವದರಿಂದ ನೋವು ಕಡಿಮೆಯಾಗುವುದು.
ಬೆಲ್ಲವನ್ನು ಸೇವಿಸಿ ಉತ್ತಮ ಆರೋಗ್ಯ ಪಡೆಯಿರಿ.
ಕೃಪೆ ವಾಟ್ಸಪ್
***
ಶುದ್ಧ ಬೆಲ್ಲ ಅಂತ ಕಂಡು ಹಿಡಿಯುವುದು ಹೇಗೆ?
🌈🍀🌿🌻🌻🌻🌻🌈🌿
ಬೆಲ್ಲ ಇದರ ಆರೋಗ್ಯಕರ ಗುಣಗಳ ಬಗ್ಗೆ ಎರಡು ಮಾತೇ ಇಲ್ಲ, ಅಷ್ಟೊಂದು ಅದ್ಭುತ ಗುಣಗಳನ್ನು ಹೊಂದಿರುವಂಥ ಸಿಹಿ ವಸ್ತುವಾಗಿದೆ. ಯಾವುದೇ ಕಾಲವಾಗಿರಲಿ ಬೆಲ್ಲ ಬಳಸುವುದು ದೇಹಕ್ಕೆ ತುಂಬಾನೇ ಒಳ್ಳೆಯದು.
ಆರೋಗ್ಯಕ್ಕಾಗಿ ಸಕ್ಕರೆಯನ್ನು ದೂರವಿಟ್ಟು ಬೆಲ್ಲವನ್ನು ಸವಿಯುವಂತೆ ಆರೋಗ್ಯ ತಜ್ಞರು, ನ್ಯೂಟ್ರಿಷಿಯನಿಸ್ಟ್ ಸಲಹೆ ನೀಡುತ್ತಾರೆ. ಆರೋಗ್ಯದ ಬಗ್ಗೆ, ದೇಹದ ಫಿಟ್ನೆಸ್ ಬಗ್ಗೆ ಕಾಳಜಿ ಇರುವವರು ಕೂಡ ಬೆಲ್ಲವನ್ನೇ ಬಳಸುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವವರೆಗೆ ಆರೋಗ್ಯವನ್ನು ಕಾಪಾಡುವ ಗುಣವಿರುವ ಬೆಲ್ಲವನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅದರ ಗುಣಮಟ್ಟ ಕಳಪೆ ಮಾಡುತ್ತಿದ್ದಾರೆ. ಬೆಲ್ಲ ಮಾಡುವಾಗ ರಾಸಾಯನಿಕ ಬಣ್ಣಗಳನ್ನು ಸೇರಿಸಲಾಗುತ್ತದೆ ಎಂಬ ಆರೋಪವು ಕೇಳಿ ಬರುತ್ತಿರುವುದರಿಂದ ನಾವು ಬಳಸುವ ಬೆಲ್ಲ ಎಷ್ಟರ ಮಟ್ಟಿಗೆ ಶುದ್ಧವಾಗಿದೆ ಎಂಬ ಸಂಶಯ ಬಾರದೇ ಇರಲ್ಲ.
ಬೆಲ್ಲ ತಯಾರಿಸುವ ವಿಧಾನ ಬೆಲ್ಲವನ್ನು ಕಬ್ಬಿನ ರಸದಿಂದ ಮಾಡಲಾಗುವುದು. ಇದರಲ್ಲಿ ನ್ಯೂಟ್ರಿಷಿಯನ್ ಅಂಶ ಇರುವುದರಿಂದ ಸಕ್ಕರೆಗಿಂತ ಬೆಲ್ಲ ಆರೋಗ್ಯಕರ. ಕಬ್ಬಿನ ರಸವನ್ನು ಕುದಿಸಿ ಅದನ್ನು ಬೆಲ್ಲದ ಮೌಲ್ಡ್‌ನಲ್ಲಿ ಹಾಕಿ, ಅದು ತಣ್ಣಗಾದಾಗ ಬೆಲ್ಲದ ಹಚ್ಚು ತಯಾರಾಗುತ್ತದೆ ಈ ರೀತಿ ಬೆಲ್ಲ ತಯಾರಿಸಲಾಗುವುದು.
ಆದರೆ ಬೆಲ್ಲವನ್ನು ಹೀಗೆ ತಯಾರಿಸುವಾಗ ಕೆಲವರು ಗುಣಮಟ್ಟದ ಕಬ್ಬಿನ ರಸ ಬಳಸದೆ, ಅದಕ್ಕೆ ಉತ್ತಮ ಬಣ್ಣ ಸಿಗಲು ರಾಸಾಯನಿಕಗಳನ್ನು ಬಳಸುವುದುಂಟು. ಆದ್ದರಿಂದ ನಾವು ಬಳಸುವ ಬೆಲ್ಲದ ಗುಣ ಮಟ್ಟ ಪರೀಕ್ಷಿಸಿ ಬಳಸುವುದು ಒಳ್ಳೆಯದು.
ಬೆಲ್ಲದ ಗುಣಮಟ್ಟ ಪರೀಕ್ಷಿಸುವುದು ಹೇಗೆ?
ಸಾಮಾನ್ಯವಾಗಿ ಗುಣಮಟ್ಟದ ಬೆಲ್ಲ ಅದರ ಬಣ್ಣ ಹಾಗೂ ಗಟ್ಟಿಯನ್ನು ನೋಡಿದರೆ ತಿಳಿಯುತ್ತದೆ. ಜೊತೆಗೆ ಈ ಕೆಳಗಿನ ಅಂಶಗಳಿಂದಲೂ ತಿಳಿಯಬಹುದು.
ಬೆಲ್ಲ ಕೊಳ್ಳುವಾಗ ಗಮನಿಸಬೇಕಾದ ಅಂಶಗಳು ನೀವು ಸ್ವಲ್ಪ ಬೆಲ್ಲ ತೆಗೆದು ಬಾಯಿಗೆ ಹಾಕಿ, ಬೆಲ್ಲದ ರುಚಿ ಸಿಹಿ ಮಾತ್ರವಲ್ಲ ಸ್ವಲ್ಪ ಉಪ್ಪು ಕೂಡ ಇರಬೇಕು. ಏಕೆಂದರೆ ಬೆಲ್ಲದಲ್ಲಿರುವ ಪೋಷಕಾಂಶ ಬೆಲ್ಲಕ್ಕೆ ಉಪ್ಪಿನ ರುಚಿ ನೀಡುತ್ತದೆ, ಅಲ್ಲದೆ ಆ ರುಚಿಯೇ ಅದು ಒಳ್ಳೆಯ ಬೆಲ್ಲ ಹೌದೇ ಇಲ್ಲವೇ ಎಂಬುವುದನ್ನು ಹೇಳುತ್ತೆ.
ಒಂದು ವೇಳೆ ಬೆಲ್ಲದಲ್ಲಿ ಏನಾದರೂ ಸ್ವಲ್ಪ ಕಹಿ ರುಚಿ ಇದ್ದರೆ ಅದು ಶುದ್ಧವಾದ ಬೆಲ್ಲ ಅಲ್ಲವೆಂದು ಹೇಳಬಹುದು.
ಬೆಲ್ಲದ ಮೇಲೆ ಹರಳು-ಹರಳು ರೀತಿ ಇದ್ದರೆ ತಯಾರಿಸುವಾಗ ಬೇರೆ ಏನೋ ಮಿಶ್ರ ಮಾಡಿದ್ದಾರೆ ಎಂದು ಹೇಳಬಹುದು. ಬೆಲ್ಲದ ಬಣ್ಣ ಕೂಡ ಅದರ ಗುಣಮಟ್ಟ ತಿಳಿಯಲು ಸಹಾಯ ಮಾಡುತ್ತೆ.
ಬೆಲ್ಲದ ಬಣ್ಣ ಕಪ್ಪು ಬಣ್ಣದಲ್ಲಿ ಇರುತ್ತದೆ, ಅದರಲ್ಲಿ ಸ್ವಲ್ಪ ಹಳದಿ ಬಣ್ಣ ಇದ್ದರೆ ಅದು ಶುದ್ಧವಾದ ಬೆಲ್ಲವಲ್ಲ. ಬೆಲ್ಲ ಕೊಂಡ ಬಳಿಕ ಗಮನಿಸಬೇಕಾದ ಅಂಶಗಳು ನೀವು ಒಂದು ಪಾರದರ್ಶಕ ಬೌಲ್ ತೆಗೆದುಕೊಂದು ಅದರಲ್ಲಿ ನೀರು ಹಾಕಿ, ಬೆಲ್ಲವನ್ನು ಕರಗಿಸಿ, ಆಗ ತಳದಲ್ಲಿ ಪುಡಿ ನಿಂತರೆ ಅದು ಕಲಬೆರಿಕೆಯ ಬೆಲ್ಲವಾಗಿದೆ.
ಇನ್ನು ಬೆಲ್ಲಕ್ಕೆ ನೈಸರ್ಗಿಕ ಬೆಲ್ಲದ ಬಣ್ನದ ಸಿಗಲು ಕೆಲವರು ರಾಸಾಯನಿಕ ಸೇರಿಸುತ್ತಾರೆ. ಇದನ್ನುನೀವು ಲ್ಯಾಬ್ ಪರೀಕ್ಷೆ ಮನೆಯಲ್ಲಿಯೇ ಮಾಡಿ ತಿಳಿಯಬಹುದು. ಅರ್ಧ ಚಮಚ ಬೆಲ್ಲವನ್ನು ಕರಗಿಸಿ, ಅದಕ್ಕೆ 6 ಮಿ. ಲೀಟರ್ ಮದ್ಯ ಸೇರಿಸಿ, ನಂತರ 20 ಹನಿ ಹೈಡ್ರೋಕ್ಲೋರಿಕ್ ಆಮ್ಲ ಮಿಕ್ಸ್ ಮಾಡಿ. ಕೃತಕ ಬಣ್ಣ ಸೇರಿಸಿದರೆ ಅದು ಪಿಂಕ್ ಬಣ್ಣಕ್ಕೆ ತಿರುಗುತ್ತದೆ.
***
ಅ. ಮಕ್ಕಳಿಗೆ ಯೋಗ್ಯ ಪ್ರಮಾಣದಲ್ಲಿ ಬೆಲ್ಲ ಮತ್ತು ಶೇಂಗಾಕಾಳುಗಳನ್ನು (ನೆಲಗಡಲೆ) ಕೊಟ್ಟರೆ ಅವರ ಶಾರೀರಿಕ ವಿಕಾಸವು ಬೇಗನೇ ಆಗಿ ಮೂಳೆಗಳು ಗಟ್ಟಿಯಾಗುತ್ತವೆ
ಬೆಲ್ಲದಲ್ಲಿ ಕ್ಯಾಲ್ಸಿಯಂ (calcium) ಇರುವುದರಿಂದ ಸಣ್ಣ ಮಕ್ಕಳಿಗೆ ಬೆಲ್ಲವನ್ನು ತಿನ್ನಲು ಕೊಡುವುದು ಲಾಭದಾಯಕವಾಗಿದೆ, ಆದರೆ ಅದನ್ನು ಯೋಗ್ಯ ಪ್ರಮಾಣದಲ್ಲಿಯೇ ಕೊಡಬೇಕು (ಮಿತವಾಗಿರಬೇಕು). ಏಕೆಂದರೆ ಹೆಚ್ಚು ತಿಂದರೆ ಹುಳಗಳಾಗುವ (ಹೊಟ್ಟೆಯಲ್ಲಿ ಸಣ್ಣ ದೊಡ್ಡ ಜಂತುಗಳಾಗುವ) ಸಾಧ್ಯತೆಯಿರುತ್ತದೆ. ಮಕ್ಕಳಿಗೆ ಯೋಗ್ಯ ಪ್ರಮಾಣದಲ್ಲಿ ಬೆಲ್ಲ ಮತ್ತು ಶೇಂಗಾಕಾಳುಗಳನ್ನು ಕೊಟ್ಟರೆ ಅವರ ಶಾರೀರಿಕ ಬೆಳವಣಿಗೆ ವೇಗವಾಗಿ ಆಗುತ್ತದೆ. ಮೂಳೆಗಳು ಗಟ್ಟಿಯಾಗಿ ಶರೀರವು ಸಧೃಢವಾಗುತ್ತದೆ.
ಆ. ಮಹಿಳೆಯರು ಹುರಿಗಡಲೆಗಳೊಂದಿಗೆ ಬೆಲ್ಲವನ್ನು ತಿಂದರೆ ಲೋಹತತ್ತ್ವದ ಕೊರತೆಯು ತುಂಬಿ ಬರುತ್ತದೆ
ಮಹಿಳೆಯರಲ್ಲಿ ಸಾಧಾರಣವಾಗಿ ಲೋಹತತ್ತ್ವದ (ಕಬ್ಬಿಣ / iron deficiency) ಕೊರತೆಯು ಕಂಡುಬರುತ್ತದೆ. ಮಾಸಿಕ ಸರದಿಯ (ಮುಟ್ಟು) ನೈಸರ್ಗಿಕ ಚಕ್ರದಿಂದ ಈ ಕೊರತೆಯಾಗುತ್ತದೆ. ಅವರು ಹುರಿಗಡಲೆಗಳೊಂದಿಗೆ ಬೆಲ್ಲವನ್ನು ತಿಂದರೆ ಈ ಕೊರತೆಯು ತುಂಬಿ ಬರುತ್ತದೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್‌ನ ಪ್ರಮಾಣವೂ ಹೆಚ್ಚುವುದರಿಂದ ನಿಃಶಕ್ತಿಯು ಬರುವುದಿಲ್ಲ.
ಇ. ಹೃದಯರೋಗಿಗಳಿಗೆ ‘ಬೆಲ್ಲ’ವು ಉತ್ತಮ ಔಷಧವಾಗಿದೆ ಮತ್ತು ಬೆಲ್ಲದ ಸೇವನೆಯಿಂದ ಹಿಮೋಗ್ಲೋಬಿನ್‌ನ ಪ್ರಮಾಣ ಸರಿಸಮಾನವಾಗುತ್ತದೆ (Normal)
ಬೆಲ್ಲದಲ್ಲಿ ‘ಬಿ’ ಜೀವಸತ್ವವು ಹೇರಳವಾಗಿರುತ್ತದೆ. ಆದುದರಿಂದ ಮಾನಸಿಕ ಆರೋಗ್ಯಕ್ಕೆ ಬೆಲ್ಲವು ಲಾಭಕಾರಿಯಾಗಿದೆ. ಹೃದಯರೋಗಿಗಳಿಗೆ ಪೊಟಾಶಿಯಮ್ ಲಾಭದಾಯಕವಾಗಿದೆ. ಇದು ಬೆಲ್ಲದಿಂದ ನೈಸರ್ಗಿಕ ರೀತಿಯಲ್ಲಿ ಸಿಗುತ್ತದೆ. ಇದರ ಅರ್ಥವೇನೆಂದರೆ ಹೃದಯರೋಗಿಗಳಿಗೆ ‘ಬೆಲ್ಲ’ವು ಒಂದು ಉತ್ತಮ ಔಷಧಿಯಾಗಿದೆ. ಪಾಂಡುರೋಗ (ಎನಿಮಿಯಾ) (ರಕ್ತದಲ್ಲಿನ ಹಿಮೋಗ್ಲೋಬಿನ್‌ನ ಪ್ರಮಾಣ ಕಡಿಮೆಯಾಗುವುದು) ಹಾಗೆಯೇ ಅಧಿಕ ರಕ್ತಸ್ರಾವದಿಂದ ರಕ್ತದಲ್ಲಿ ಕಡಿಮೆಯಾದ ಹಿಮೋಗ್ಲೋಬಿನ್ ಪ್ರಮಾಣವು ಬೆಲ್ಲದ ಸೇವನೆಯಿಂದ ಸರಿಸಮಾನವಾಗುತ್ತದೆ.
(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು‘)
jaggery explained in Hindi
No comments:
Post a Comment