ಹವಾಮಾನ ಬದಲಾಗುತ್ತಿದ್ದಂತೆ ಮಕ್ಕಳು ಬಹಳ ಬೇಗನೆ ಅನಾರೋಗ್ಯಕ್ಕೀಡಾಗುತ್ತಾರೆ. ಅದರಲ್ಲೂ ಶೀತ, ಕಫ, ಗಂಟಲು ನೋವು ಪ್ರತಿ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಇಲ್ಲಿ ಸುಲಭವಾದ ಮನೆಮದ್ದನ್ನು ನೀಡಲಾಗಿದೆ.
ಬದಲಾಗುತ್ತಿರುವ ಋತುವಿನಲ್ಲಿ ಶೀತ, ಕೆಮ್ಮು ಮತ್ತು ಕಫದ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಅದರಲ್ಲೂ ಮಕ್ಕಳು ಬಹುಬೇಗನೇ ಈ ಸಮಸ್ಯೆಗೆ ತುತ್ತಾಗುತ್ತಾರೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗಿದ್ದರೆ, ಅವರು ಬೇಗನೆ ಸೋಂಕಿಗೆ ಒಳಗಾಗುತ್ತಾರೆ. ದೊಡ್ಡವರಾದರೆ ಶೀತ, ಕಫ ಆದಾಗ ಅದನ್ನು ಹೊರಹಾಕುತ್ತಾರೆ. ಕಫವನ್ನು ತೆಗೆಯುತ್ತಾರೆ.
ಮಕ್ಕಳಿಗೆ ಕಫವನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮಗುವಿಗೆ ಯಾವುದೇ ಶೀತ ಅಥವಾ ಹುಳಿ ಆಹಾರವನ್ನು ನೀಡದೇ ಇರುವುದು ಒಳ್ಳೆಯದು. ಮಗುವಿಗೆ ಗಂಟಲು ನೋವು, ತುರಿಕೆ ಮತ್ತು ಶೀತ ಮೂಗಿನಿಂದ ಇಳಿಯುತ್ತಿದ್ದರೆ ಅಥವಾ ಕೆಲವೊಮ್ಮೆ ಶೀತ ತುಂಬಿ ಮೂಗು ಕಟ್ಟಿರುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಮನೆಮದ್ದುಗಳನ್ನು ಬಳಸಬಹುದು. ಇದು ಮಕ್ಕಳಲ್ಲಿನ ಕಫದ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
1.ಉಪ್ಪು ನೀರಿನ ಗಾರ್ಗ್‌ಲಿಂಗ್
ಕಫ ಮತ್ತು ಗಂಟಲು ನೋವು ಇದ್ದಾಗ ಬೆಳಗ್ಗೆ ಎದ್ದ ತಕ್ಷಣ ಉಗುರುಬೆಚ್ಚನೆಯ ನೀರಿಗೆ ಉಪ್ಪು ಹಾಕಿ ಗಾರ್ಗಲ್ ಮಾಡಬೇಕು. ಬೇಕಾದರೆ ಚಿಟಿಕೆ ಅರಿಶಿನವನ್ನು ಇದಕ್ಕೆ ಸೇರಿಸಬಹುದು. ಅರಿಶಿನ ಆಂಟಿ ಬ್ಯಾಕ್ಟೀರಿಯಾ ಗುಣವನ್ನು ಹೊಂದಿದೆ. ಇದು ಗಂಟಲು ನೋವನ್ನು ಕಡಿಮೆ ಮಾಡುವುದರ ಜೊತೆಗೆ ಕಫವನ್ನು ಸಹ ತೆಗೆದುಹಾಕುತ್ತದೆ. ಮಕ್ಕಳಿಗೆ ಬೆಳಿಗ್ಗೆ ಎದ್ದ ತಕ್ಷಣ ಹಾಗು ರಾತ್ರಿ ಮಲಗುವ ಮುನ್ನ ಇದನ್ನು ಮಾಡಿಸಿ. ಹೀಗೆ ಮಾಡುವುದರಿಂದ ತ್ವರಿತವಾಗಿ ಕಫದ ಸಮಸ್ಯೆಯನ್ನು ನಿವಾರಿಸುತ್ತದೆ.
2.ಈರುಳ್ಳಿ ರಸ ಹಾಗೂ ನಿಂಬೆ ರಸ
ಮಕ್ಕಳ ಎದೆಯಲ್ಲಿ ಕಫ ಸಂಗ್ರವಾದಾಗ ಅವರಿಗೆ ಈರುಳ್ಳಿ ರಸ ಮತ್ತು ನಿಂಬೆ ರಸವನ್ನು ನೀಡಿ. ಇದು ಕಫವನ್ನು ತೆಗೆದುಹಾಕುತ್ತದೆ. ಇದಕ್ಕಾಗಿ ಸಣ್ಣ ಈರುಳ್ಳಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆ ಸಣ್ಣ ಸಣ್ಣ ಈರುಳ್ಳಿಯನ್ನು ಕಫವನ್ನು ತೆಗೆಯಲು ಬಲು ಉಪಕಾರಿಯಾಗಿದೆ. ಇಲ್ಲವಾದರೆ ನಾವು ಅಡುಗೆಗೆ ಬಳದುವ ಈರುಳ್ಳಿಯನ್ನು ಸಿಪ್ಪೆ ಸುಲಿದು ರುಬ್ಬಿಕೊಂಡು ರಸ ತೆಗೆಯಿರಿ. ಈಗ ಅದಕ್ಕೆ ನಿಂಬೆರಸ ಸೇರಿಸಿ ಬಿಸಿ ಮಾಡಿ. ಬೇಕಾದರೆ ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ.
3.ಕರಿಮೆಣಸು ಹಾಗೂ ಉಪ್ಪು
ಸಾಮಾನ್ಯವಾಗಿ ಕಫ ಹಾಗೂ ಗಂಟಲು ನೋವು ಇದ್ದಾಗ ಕರಿಮೆಣಸು ಹಾಗೂ ಉಪ್ಪನ್ನು ಜೊತೆಯಾಗಿ ಜಗಿಯುವುದರಿಂದ ಪ್ರಯೋಜನವನ್ನು ಪಡೆಯಬಹುದು. ಕರಿಮೆಣಸಿನಲ್ಲಿ ಆಂಟಿಬ್ಯಾಕ್ಟೀರಿಯಾ ಗುಣಗಳಿರುವುದರಿಂದ ಇದು ಗಂಟಲಿನಲ್ಲಿರುವ ಬ್ಯಾಕ್ಟೀರಿಯಾವನ್ನು ಹೋಗಲಾಡಿಸುತ್ತದೆ. ಗಂಟಲಿಗೆ ಆರಾಮವನ್ನು ನೀಡುತ್ತದೆ. ಕರಿಮೆಣಸನ್ನು ಹಾಗೆಯೇ ಬಾಯಿಗೆ ಹಾಕಿ ಜಗಿಯುವುದು ಉಪಕಾರಿಯಾಗಿದೆ.
4.ಜೇನುತುಪ್ಪ ಮತ್ತು ಶುಂಠಿ
ಮಗುವಿಗೆ ಕೆಮ್ಮು ಮತ್ತು ಕಫದ ಸಮಸ್ಯೆ ಇದ್ದರೆ, ಜೇನುತುಪ್ಪ ಮತ್ತು ಶುಂಠಿ ರಸವನ್ನು ಮಿಕ್ಸ್ ಮಾಡಿ ನೀಡಿ. ಇದರಿಂದ ಗಂಟಲು ನೋವು ಮತ್ತು ಕಫ ನಿವಾರಣೆಯಾಗುತ್ತದೆ. ಶುಂಠಿ ಮತ್ತು ಜೇನುತುಪ್ಪವನ್ನು ತಿನ್ನುವುದರಿಂದ ಶೀತ ಹೊರಬರುತ್ತದೆ. ಇದಕ್ಕಾಗಿ ಶುಂಠಿಯನ್ನು ತುರಿದು ರಸ ತೆಗೆಯಿರಿ ಇಲ್ಲವಾದಲ್ಲಿ ಶುಂಠಿಯನ್ನು ಜಜ್ಜಿ ರಸ ತೆಗೆಯ ಬಹುದು. ಆ ರಸಕ್ಕೆ 2 ಚಮಚ ಜೇನುತುಪ್ಪ ಸೇರಿಸಿ. ಬರೀ ಶುಂಠೀ ರಸ ಖಾರ ಇರುತ್ತದೆ. ಅದಕ್ಕೆ ಜೇಣುತುಪ್ಪ ಸೇರಿಸುವುದರಿಂದ ರುಚಿಯೂ ಚೆನ್ನಾಗಿರುತ್ತದೆ. ಈ ಮಿಶ್ರಣವನ್ನು ದಿನಕ್ಕೆ 2-3 ಬಾರಿ ತಿನ್ನಿಸಿ.
5.ಬೆಲ್ಲ ಮತ್ತು ಶುಂಠಿ
ಕೆಲವು ಮಕ್ಕಳಿಗೆ ಕೆಮ್ಮು ಕಫದ ಸಮಸ್ಯೆ ಕಾಡುತ್ತಲೇ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಗುವಿಗೆ ಪ್ರತಿದಿನ ಶುಂಠಿ ಮತ್ತು ಬೆಲ್ಲವನ್ನು ತಿನ್ನಿಸಿ. ಅದು ಶೀತ, ಕೆಮ್ಮು ಮತ್ತು ಗಂಟಲಿನ ಕಫಕ್ಕೆ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ, ಶುಂಠಿಯ ರಸ ತೆಗೆದು ಬೆಲ್ಲವನ್ನು ಸ್ವಲ್ಪ ಸ್ವಲ್ಪ ಸೇರಿಸಿ ಮಕ್ಕಳಿಗೆ ತಿನ್ನಿಸಿ.
ನಿಮಗೆ ಹೀಗೆ ಇಷ್ಟವಾಗದಿದ್ದಲ್ಲಿ, ಶುಂಠಿ ಹಾಗೂ ಬೆಲ್ಲ ಸೇರಿಸಿ ಚಾಕೋಲೇಟ್ ತಯಾರಿಸಿ. ಶೀತ, ಕಫ ಆದಾಗ ಮಕ್ಕಳಿಗೆ ಇದನ್ನು ಸವಿಯಲು ಕೊಡಿ. ಇದು ಗಂಟಲಿಗೆ ಪರಿಹಾರವನ್ನು ನೀಡುತ್ತದೆ. ಇದನ್ನು ಮಕ್ಕಳಷ್ಟೇ ಅಲ್ಲ ದೊಡ್ಡವರೂ ಸವಿಯಬಹುದು
***
ಜೇನುತುಪ್ಪದೊಂದಿಗೆ ಪಪ್ಪಾಯಿ ಎಲೆ ರಸ ಪವಾಡದಂತೆ ಕೆಲಸ ಮಾಡುತ್ತದೆ. 12 ಗಂಟೆಗಳಲ್ಲಿ ಪ್ಲೇಟ್‌ಲೆಟ್ ಎಣಿಕೆ 68,000 ದಿಂದ 2,00,000 ಕ್ಕೆ ಏರಿತು. ಎಲ್ಲ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ಸಹ ಸಂದೇಶವನ್ನು ಹಂಚಿಕೊಳ್ಳಿ. ಭಾರತದಾದ್ಯಂತ ಡೆಂಗು ಜ್ವರ ಹೆಚ್ಚಾಗಿದೆ. ಜೀವ ಉಳಿಸಿ.
ಬೆಳಿಗ್ಗೆ ಸಮಯದಲ್ಲಿ ಹಲ್ಲುಜ್ಜಿದ ನಂತರ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಕರಿಬೇವು ಹಾಗೂ ಅರ್ಧ ಚಮಚ ಜೀರಿಗೆಯನ್ನು ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ, ದೃಷ್ಟಿ ದೋಷ ಸಮಸ್ಯೆಗೂ ಪರಿಹಾರ ನೀಡುತ್ತದೆ.
ಟೀ ಗೆ ಸ್ವಲ್ಪ ಶುಂಠಿ, ಏಲಕ್ಕಿ, ಒಂದು ಎಸಳು ಬೆಳುಳ್ಳಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ತಲೆ ನೋವು ಕಡಿಮೆ ಮಾಡುತ್ತದೆ
ನೆಲ್ಲಿಕಾಯಿ ಜ್ಯೂಸ್ ಗೆ ಮೆಂತೆ ಪುಡಿ ಹಾಕಿ ಪ್ರತಿದಿನವೂ ಕುಡಿಯುವುದರಿಂದ ಡಯಾಬಿಟಿಸ್ ಅನ್ನು ನಿಯಂತ್ರಣ ಸಾಧಿಸಲು ಆಗುತ್ತದೆ.
ಟೀ ಗೆ ಸ್ವಲ್ಪ ಶುಂಠಿ, ಏಲಕ್ಕಿ, ಒಂದು ಎಸಳು ಬೆಳುಳ್ಳಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ತಲೆ ನೋವು ಕಡಿಮೆ ಮಾಡುತ್ತದೆ.
ನೆಲ್ಲಿಕಾಯಿ ಜ್ಯೂಸ್ ಗೆ ಮೆಂತೆ ಪುಡಿ ಹಾಕಿ ಪ್ರತಿದಿನವೂ ಕುಡಿಯುವುದರಿಂದ ಡಯಾಬಿಟಿಸ್ ಅನ್ನು ನಿಯಂತ್ರಣ ಸಾಧಿಸಲು ಆಗುತ್ತದೆ.
ಏಲಕ್ಕಿ ಕೇವಲ ಸಿಹಿ ಪದಾರ್ಥಗಳ ರುಚಿ ಹೆಚ್ಚಿಸಲು ಮಾತ್ರವಲ್ಲದೆ ನಮ್ಮ ದೇಹದ ಒಳಗಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವ ಗುಣ ಹೊಂದಿದೆ.
ದೇಹದ ಮೇಲೆ ಗಾಯಗಳು, ಹುಣ್ಣುಗಳಿದ್ದರೆ ಅರಿಶಿನ ಹಾಕಿದ ಹಾಲು ಕುಡಿಯುವುದರಿಂದ ಕಲೆ ಸಮೇತ ಗುಣವಾಗುತ್ತದೆ.
ದಾಳಿಂಬೆ ಹಣ್ಣಿನ ಮೇಲಿನ ಸಿಪ್ಪೆಯನ್ನು ಒಣಗಿಸಿ ಅದನ್ನು ಮಜ್ಜಿಗೆಯಲ್ಲಿ ತೇಯ್ದು ತಿಂದರೆ ಆಮಶಂಕೆ ಬೇಧಿ ನಿವಾರಣೆಯಾಗುತ್ತದೆ.
ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗೆಯುವುದರಿಂದ ದಂತಕ್ಷಯ ಹಾಗೂ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
ರಕ್ತಹೀನತೆಯಿಂದ ಬಳಲುತ್ತಿರುವವರು ದ್ರಾಕ್ಷಾರಸದೊಂದಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
ಊಟ ಮಾಡುವ ಕೆಲವು ನಿಮಿಷಗಳ ಮೊದಲು ನೀರು ಕುಡಿಯುವುದು ಒಳ್ಳೆಯದಲ್ಲ. ಇದರಿಂದ ಜೀರ್ಣಕ್ರಿಯೆ ನಿಗಧಿತ ಸಮಯಕ್ಕಿಂತ ಬೇಗನೆ ಆಗುತ್ತದೆ. ಇದರಿಂದ ಅಸಿಡಿಟಿ ಸಮಸ್ಯೆ ಹೆಚ್ಚಾಗುತ್ತದೆ.
ಕ್ಯಾರೆಟ್ ಉಪಯೋಗ ನಿತ್ಯ ಮಾಡಿದರೆ ದೇಹಕ್ಕೆ ನಿರೋಧಕ ಶಕ್ತಿಯನ್ನು ನೀಡುತ್ತದೆ.
ಮೂಲಂಗಿಯಲ್ಲಿ ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ವಿಟಮಿನ್ ಗಳು ಹೆಚ್ಚಾಗಿ ಇವೆ.
ಉಷ್ಣ ಪ್ರಕೃತಿ ಉಳ್ಳವರಹ ಕಾಮ ಕಸ್ತೂರಿ ಬೀಜಗಳನ್ನು ನೀರಿನಲ್ಲಿ ಹಾಕಿಕೊಂಡು ಸೇವಿಸುವುದರಿಂದ ದೇಹ ತಂಪಾಗಿಸುತ್ತದೆ.
ಅತಿ ಕಡಿಮೆ ನಿದ್ರೆ ನಮ್ಮ ಮೆದುಳಿನ ಮೇಲೂ ಅಗಾಧ ದುಷ್ಪರಿಣಾಮ ಬೀರಿ ಪಾರ್ಶ್ವವಾಯುವಿಗೆ ದಾರಿ ಮಾಡಿಕೊಡುತ್ತದೆ.
ಹಾಲು, ಸಕ್ಕರೆ ಬೆರಸದೆ ತಣ್ಣಗಿರುವ ಹಾಲನ್ನು ಕುಡಿಯಿರಿ. ತಣ್ಣಗಿರುವ ಹಾಲು ದೇಹದಲ್ಲಿರುವ ಆಸಿಡ್ ಅಂಶಗಳನ್ನು ಹೀರಿಕೊಳ್ಳುತ್ತದೆ. ಗ್ಯಾಸ್ಟ್ರಿಕ್ ನಿಂದಾಗುವ ಉರಿಯನ್ನು ಶಮನಗೊಳಿಸುತ್ತದೆ.
- ಪ್ರತಿದಿನ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕಾಮಾಲೆ ರೋಗವನ್ನು ನಿವಾರಿಸುತ್ತದೆ ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಚಳಿ ಹೆಚ್ಚಿದ್ದಾಗ ಪುರುಷರು ಬಿಸಿ ನೀರಿನ ಸ್ನಾನ ಮಾಡಿದರೆ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಕಂಡು ಬರುತ್ತವೆ.
ಲೋಟ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೊರೆಯುವ ಮೂಲಕ ದೇಹಕ್ಕೆ ಪೋಷಣೆ ಲಭಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಊಟದ ಜೊತೆಯಲ್ಲಿ ಹಸಿ ಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು, ಮೂಗು, ಕಿವಿ, ಗಂಟಲಿನ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.
ಮನಸ್ಸಿನಲ್ಲಿ ಮೂಡಿಬರುವ ಆಲೋಚನೆಗಳನ್ನು ಹಿಡಿದಿಟ್ಟು, ಮನಸ್ಸಿನ ಏಕಾಗ್ರತೆಯನ್ನು ಉಸಿರಿನ ಏರಿಳಿತದ ಕಡೆಗೆ ದೃಢೀಕರೀಸುವುದು ಧ್ಯಾನ.
ಆರೋಗ್ಯ ಸಲಹೆ ಸೌತೆಕಾಯಿ ಮತ್ತು ಟೊಮ್ಯಾಟೊವನ್ನು ಪೇಸ್ಟ್ ಮಾಡಿ, ದಿನಕ್ಕೆ ಎರಡು ಬಾರಿ ಕಣ್ಣಿನ ಸುತ್ತ ಉಜ್ಜಬೇಕು. ಇದರಿಂದ ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಮನೆ ಮದ್ದು - ಬೆನ್ನು ನೋವು : ಬ್ರಾಹ್ಮಿ ಎಲೆಗಳನ್ನು ಒಣಗಿಸಿ, ಪುಡಿ ಮಾಡಿ, ಒಂದು ಚಮಚ ಪುಡಿಯನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಇಲ್ಲವೇ ಹಾಲಿನೊಂದಿಗೆ ಮಿಶ್ರಣ ಮಾಡಿ ಸೇವಿಸಬೇಕು.
ಬಿಸಿ ನೀರಿನಲ್ಲಿ ಸ್ವಲ್ಪ ಕಲ್ಲಪ್ಪು ಹಾಕಿ ಅದರಲ್ಲಿ ಸ್ವಲ್ಪ ಹೊತ್ತಿನ ನಂತರ ತೊಳೆದರೆ ಕಾಲುಗಳ ಒರಟು ಕಡಿಮೆ ಮಾಡುತ್ತದೆ.
ವಾರಕ್ಕೊಮ್ಮೆ ಹರಳೆಣ್ಣೆಯಿಂದ ಬೆನ್ನನ್ನು ಮಸಾಜ್ ಮಾಡುತ್ತಾ ಬಂದರೆ ಸೊಂಟ ನೋವು ಕಡಿಮೆ ಮಾಡುತ್ತದೆ.
ಮನೆ ಮದ್ದು - ಬೆನ್ನು ನೋವು : ತುಂಬೆ ಸೊಪ್ಪನ್ನು ಅರೆದು, ಹರಳೆಣ್ಣೆ ಅಥವಾ ಎಳ್ಳೆಣ್ಣೆಯಲ್ಲೆ ಬೆರೆಸಿ, ತುಸು ಬೆಚ್ಚಗಿರುವಾಗ ನೋವಿರುವ ಜಾಗಕ್ಕೆ ಹಚ್ಚಿ, ಮೃದುವಾಗಿ ಮಸಾಜ್ ಮಾಡಬೇಕು.
ಬೆನ್ನು ನೋವು : ಒಂದು ಚಮಚ ತುಂಬೆಯ ರಸ ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದು.
ಬ್ರಾಹ್ಮಿ ಎಲೆಗಳನ್ನು ಒಣಗಿಸಿ, ಪುಡಿ ಮಾಡಿ, ಒಂದು ಚಮಚ ಪುಡಿಯನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಇಲ್ಲವೇ ಹಾಲಿನೊಂದಿಗೆ ಮಿಶ್ರಣ ಮಾಡಿ ಸೇವಿಸಬೇಕು.
ಸುಟ್ಟ ಜಾಗದಲ್ಲಿ ಶರೀರದ ಯಾವುದೇ ಭಾಗವಿರಲಿ ಅದಕ್ಕೆ ಆಲೂಗಡ್ಡೆಯನ್ನು ನುಣ್ಣಗೆ ಅರೆದು ಹಚ್ಚುವುದರಿಂದ ಗಾಯದ ಉರಿ ಕಡಿಮೆ ಆಗುವುದರ ಜೊತೆಗೆ ತಂಪಾಗಿಸುತ್ತದೆ.
ಮಧುಮೇಹ, ಹೃದಯ ಸಂಬಂಧಿ ರೋಗಗಳು, ಉದರ ಸಂಬಂಧಿಸಿದ ರೋಗಗಳಿಂದ ನರಳುತ್ತಿರುವವರಿಗೆ ಬೆಚ್ಚಗಿನ ನೀರು ಬಹಳಷ್ಟು ಮಟ್ಟಿಗೆ ಒಳ್ಳೆಯದನ್ನು ಮಾಡುತ್ತದೆ.
ಬೆಳಗಿನ ಉತ್ತಮ ಉಪಹಾರ ಸೇವಿಸುವವರು, ಉದ್ವಿಗ್ನ ಪರಿಸ್ಥಿತಿಯಲ್ಲಿ ಶೇಕಡಾ 80 ರಷ್ಟು ಒತ್ತಡ ರಹಿತರಾಗಿರುತ್ತಾರೆ, ಲಘು ಉಪಾಹಾರ ಮಾಡುವವರು ಗೊಂದಲ ಪರಿಸ್ಥಿತಿಯಲ್ಲಿ ಶೇಕಡಾ 7 ಬೇಗ ನಿರ್ಧಾರ ತೆಗೆದುಕೊಳ್ಳುವರು.
ಬೆಳಗಿನ ಉಪಹಾರ ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಬೆಳಿಗ್ಗೆ ಉತ್ತಮ ಉಪಹಾರ ಮಾಡುವವರು, ಇತರರಿಗಿಂತ ಕಡಿಮೆ ಒತ್ತಡದಲ್ಲಿ ಇರುತ್ತಾರಂತೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಒಂದು ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಸೇವಿಸಿದರೆ ಒಳ್ಳೆಯದು.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಒಂದು ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಸೇವಿಸಿದರೆ ಒಳ್ಳೆಯದು.
ಉಪ್ಪಿಗೆ ಅದರದ್ದೇ ಆದ ವಿಶೇಷ ರುಚಿಯಿದೆ. ಆ ರುಚಿಯಿಂದ ನಾವು ಸ್ವಲ್ಪ ದೂರ ಇದ್ದಿದ್ದೇ ಆದರೆ, ಹೃದಯ ಸಂಬಂಧಿ ಹಾಗೂ ರಕ್ತದೊತ್ತಡದ ಕಾಯಿಲೆಗಳಿಂದ ದೂರವಿರಬಹುದು.
ಬಸಳೆ ಸೊಪ್ಪಿನಲ್ಲಿ ಎ, ಬಿ ಜೀವಸತ್ವಗಳು, ಕಬ್ಬಿಣ, ಪೊಟ್ಯಾಸಿಯಮ್ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ.
ಹೊಟ್ಟೆಯಲ್ಲಿ ಸಂಕಟ ತರಹ ಆಗುತ್ತಿದ್ದರೆ ಎಳನೀರು ಸೇವಿಸುವುದು ಉತ್ತಮ.
ಮೊಣಕಾಲು ನೋವು ಇದ್ದರೆ ವಜ್ರಾಸನ ಮಾಡಬೇಕು.
ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಮೂತ್ರಪಿಂಡದ ಕಲ್ಲು ಹಾಗೂ ಮೂತ್ರಕೋಶದ ಸೋಂಕಿಗೆ ಉತ್ತಮ ಮದ್ದಾಗಿ ಕೆಲಸ ಮಾಡುತ್ತದೆ.
ಬೆಲ್ಲವು ಅಮೋಘವಾದ ರಕ್ತ ಶುದ್ಧಿ ಟಾನಿಕ್.
ಕಫ ಕಡಿಮೆ ಮಾಡಲು ಪ್ರತಿದಿನ ಶುಂಠಿ ಕಷಾಯವನ್ನು ಸೇವಿಸಿ.
ಅಲ್ಸರ್ ಸಮಸ್ಯೆ ಇರುವವರು ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ, ಆಮ್ಲೀಯತೆಯನ್ನು ತಗ್ಗಿಸುತ್ತದೆ. ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ, ಅದರ ಅಲ್ಸರ್ ತೊಂದರೆಯನ್ನು ಶಮನ ಮಾಡುತ್ತದೆ.
ಸೇಬು ಹಣ್ಣಿನ ತಿರುಳಿನಿಂದ ಮುಖಕ್ಕೆ ನಯವಾಗಿ ಉಜ್ಜಿಕೊಂಡರೆ ಜಿಡ್ಡಿನ ಅಂಶ ಹೋಗಿ ಮುಖ ಹೊಳೆಯುತ್ತದೆ.
ಎಳ್ಳೆಣ್ಣೆಯನ್ನು ತಲೆ ಸ್ನಾನ ಮಾಡುವ ಒಂದು ಗಂಟೆಗೆ ಮುಂಚೆ ಹಚ್ಚಿಕೊಂಡು ನಂತರ ಸ್ನಾನ ಮಾಡಿದರೆ, ಕೂದಲು ದಟ್ಟವಾಗಿ ಮತ್ತು ಕಾಂತಿಯುತವಾಗಿ ಕಾಣುತ್ತದೆ.
ಅಲೋವೆರಾದಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಶಕ್ತಿ ಇದೆ.
ಯಾವಾಗಲೂ ಹಸಿರು ಬಣ್ಣದ ಹಾಗಲಕಾಯಿಯನ್ನೇ ಉಪಯೋಗಿಸಿ. ನೀಲಿ ಅಥವಾ ಕೇಸರಿ ಬಣ್ಣದ ಕಲೆಗಳಿರುವ ಹಾಗಲಕಾಯಿಯನ್ನು ಸೇವಿಸಬಾರದು.
ಹಳದಿಗಟ್ಟಿದ ಹಲ್ಲುಗಳು ಬೆಳ್ಳಗಾಗಲು ಪ್ರತಿದಿನ ಹಲ್ಲುಜ್ಜುವ ಮುನ್ನ ಪೇಸ್ಟ್ ಜೊತೆ ಸ್ವಲ್ಪ ಪ್ರಮಾಣದ ಅಡುಗೆ ಸೋಡಾವನ್ನು ಸೇರಿಸಿ ಹಲ್ಲುಜ್ಜಿದರೆ ಹಲ್ಲುಗಳು ನಿಧಾನವಾಗಿ ಬೆಳ್ಳಗಾಗುತ್ತವೆ.
ಹೃದಯ ದೌರ್ಬಲ್ಯ ಇರುವವರು ಸೋರೆಕಾಯಿ ರಸ ಸೇವಿಸುವುದು ಉತ್ತಮ.
ಕಹಿಬೇವಿನ ಎಲೆಯನ್ನು ಸೇವನೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
ಹೆಸರು ಹಿಟ್ಟಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿರುವ ದುರ್ಗಂಧ ದೂರವಾಗುತ್ತದೆ.
ಹೊಟ್ಟೆಯಲ್ಲಿ ಸಂಕಟ ಆಗುತ್ತಿದ್ದರೆ ಎಳನೀರು ಸೇವಿಸುವುದು ಉತ್ತಮ.
ಕೇಸರಿ ಹಾಲು ಕುಡಿಯುವುದರಿಂದ ರಕ್ತ ದೋಷವಿದ್ದರೆ ನಿವಾರಣೆಯಾಗುತ್ತದೆ. *
ಹಲಸಿನ ಹಣ್ಣಿನ ಸೇವನೆಯಿಂದ, ಅದರಲ್ಲಿರುವ ಅಧಿಕ ಮೆಗ್ನೀಷಿಯಂ ಹಾಗೂ ಕ್ಯಾಲ್ಸಿಯಂ ಅಂಶಗಳು ಮೂಳೆಗಳನ್ನು ಗಟ್ಟಿಯಾಗಿಸುತ್ತದೆ. *
ಬೆನ್ನು ಅಥವಾ ಸೊಂಟ ನೋವಿದ್ದರೆ ತಲೆದಿಂಬು ಇಲ್ಲದೇ ಸಮತಟ್ಟಾದ ನೆಲದಲ್ಲಿ ಮಲಗುವುದರಿಂದ ಬೆನ್ನೆಲುಬಿಗೆ ವಿಶ್ರಾಂತಿ ಸಿಗುತ್ತದೆ.
ಅಲರ್ಜಿ ಏನಾದರೂ ಆಗಿದ್ದರೆ ಅಮೃತ ಬಳ್ಳಿಯ ಕಷಾಯ ಕುಡಿಯಬೇಕು. ಇದರಿಂದ ಅಲರ್ಜಿ ಕಡಿಮೆಯಾಗುತ್ತದೆ.
ಮಣ್ಣಿನ ಮಡಕೆಯು ಭೂಮಿಯಲ್ಲಿರುವ ಮಣ್ಣಿನಿಂದ ಆಗಿರುವುದರಿಂದ ಮನುಷ್ಯನ ದೇಹಕ್ಕೆ ಅಗತ್ಯವಾದ ಉತ್ಕೃಷ್ಟ ಅಂಶಗಳನ್ನು ಒಳಗೊಂಡಿರುತ್ತದೆ.
ಮಣ್ಣಿನ ಮಡಕೆಯ ನೀರು ವ್ಯತಿರಿಕ್ತ ಉಷ್ಣಾಂಶವನ್ನು ತಡೆಯುವುದರಲ್ಲಿ ಕೆಲಸ ಮಾಡುವುದರಿಂದ ಬಿಸಿಲಿನಿಂದಾಗುವ Sunstroke ಹತ್ತಿರಕ್ಕೂ ಸುಳಿಯುವುದಿಲ್ಲ.
ಮಣ್ಣಿನ ಮಡಕೆಯ ನೀರು ಜೀರ್ಣ ಪ್ರಕ್ರಿಯೆಯನ್ನು ಸುಲಲಿತಗೊಳಿಸುತ್ತದೆ. *
ಮೆಂತ್ಯಕಾಳಿನ ಸೇವನೆ - ರಾತ್ರಿ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ನೆನೆಸಿರುವ ಕಾಳನ್ನು ಚೆನ್ನಾಗಿ ಅಗಿದು ತಿನ್ನಬೇಕು. ಇದರಿಂದ ಹೊಟ್ಟೆ ಹಸಿವು ಬೇಗ ಆಗುವುದಿಲ್ಲ. ಇದರಿಂದ ದೇಹದ ತೂಕ ಸಮತೋಲನೆಗೆ ಬರುವಂತೆ ನೋಡಿಕೊಳ್ಳುತ್ತದೆ.
ಮೆಂತ್ಯಕಾಳಿನ ಸೇವನೆ - ಮೆಂತ್ಯೆ ಕಾಳಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದ್ದು ಇದು ಹೃದಯಾಘಾತದಿಂದ ತಪ್ಪಿಸುತ್ತದೆ.
ಮೆಂತ್ಯಕಾಳಿನ ಸೇವನೆ - ಮೆಂತ್ಯೆ ಕಾಳಿನಲ್ಲಿ ಸೋಡಿಯಮ್ ಇರುವುದರಿಂದ ಹೃದಯ ಮತ್ತು ರಕ್ತದೊತ್ತಡವನ್ನು ನಿಭಾಯಿಸುತ್ತದೆ.
ಮೆಂತ್ಯಕಾಳಿನ ಸೇವನೆ - ಕೆಮ್ಮು, ನೆಗಡಿ, ಶೀತ, ಜ್ವರ, ಗಂಟಲು ಬೇನೆ, ಸುಸ್ತು ಇಂತಹ ಕಾಯಿಲೆಗಳು ಬಂದಾಗ ಒಂದು ಚಮಚ ನಿಂಬೆರಸ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಅದರ ಜೊತೆಗೆ ಸ್ವಲ್ಪ ಮೆಂತ್ಯೆ ಕಾಳನ್ನು ಸೇರಿಸಿ ಸೇವಿಸುವುದು.
ಮೆಂತ್ಯಕಾಳಿನ ಸೇವನೆ - ಮಲಬದ್ಧತೆ ಇದ್ದಲ್ಲಿ ಮೆಂತ್ಯೆ ಕಾಳನ್ನು ನೆನೆಸಿ ಅದನ್ನು ಬೆಳಿಗ್ಗೆ ಎದ್ದು ಚೆನ್ನಾಗಿ ಕುದಿಸಿ, ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಬೇಕು.
ಮೆಂತ್ಯಕಾಳಿನ ಸೇವನೆ - ರಾತ್ರಿ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಎದ್ದ ತಕ್ಷಣ ಚೆನ್ನಾಗಿ ಅಗಿದು ತಿನ್ನಬೇಕು. ಇದರಿಂದ ಹೊಟ್ಟೆ ಹಸಿವು ಬೇಗ ಆಗುವುದಿಲ್ಲ. ಇದರಿಂದ ದೇಹದ ತೂಕ ಸಮತೋಲನಗೆ ಬರುವಂತೆ ನೋಡಿಕೊಳ್ಳುತ್ತದೆ.
ಮೆಂತ್ಯಕಾಳಿನ ಸೇವನೆ - ಮುಖದಲ್ಲಿ ಹೆಚ್ಚಾಗಿ ಬ್ಲಾಕ್ ಹೆಡ್ಸ್, ಮೊಡವೆ, ನೆರಿಗೆಗಳು ಹೆಚ್ಚಾಗಿ ಕಂಡು ಬಂದಾಗ ಮೆಂತ್ಯೆ ಕಾಳಿಂದ ಮುಕ್ತಿ ಪಡೆಯಬಹುದು.
ಮೆಂತ್ಯಕಾಳಿನ ಸೇವನೆ - ಮೆಂತ್ಯೆ ಕಾಳನ್ನು ನೆನೆಸಿ ಅದನ್ನು ಮೊಳಕೆ ಬರಿಸಿ ಅದರಿಂದ ಉಸಲಿ ಮಾಡಿಕೊಂಡು ತಿಂದರೆ ಎದೆ ಹಾಲು ಕುಡಿಸುವ ತಾಯಿಯಂದಿರಿಗೆ ಬಹಳ ಒಳ್ಳೆಯದು.
ಮೆಂತ್ಯಕಾಳಿನ ಸೇವನೆ - ಕೆಮ್ಮು, ನೆಗಡಿ, ಶೀತ, ಜ್ವರ, ಗಂಟಲು ಬೇನೆ, ಸುಸ್ತು ಇಂತಹ ಕಾಯಿಲೆಗಳು ಬಂದಾಗ ಒಂದು ಚಮಚ ನಿಂಬೆರಸ ಮತ್ತು ಸ್ವಲ್ಪ ಜೇನುತುಪ್ಪ ಅದರ ಜೊತೆಗೆ ಸ್ವಲ್ಪ ಮೆಂತ್ಯೆ ಕಾಳನ್ನು ಬೆರೆಸಿ ತಿನ್ನುವುದರಿಂದ ಈ ಕಾಯಿಲೆಗಳಿಂದ ಆರಾಮ ವಾಗುತ್ತದೆ
ಮೆಂತ್ಯಕಾಳಿನ ಸೇವನೆ - ಸ್ವಲ್ಪ ಮೆಂತ್ಯೆ ಕಾಳನ್ನು ದಿನವೂ ತಿನ್ನುವುದರಿಂದ ದೇಹಕ್ಕೆ ಸುಸ್ತು ಆಗದಂತೆ ನೋಡಿಕೊಳ್ಳುತ್ತದೆ.
*******
ಶೇಂಗಾ ಕಡಲೆಕಾಯಿ ಒಂದು ದ್ವಿದಳ ಧಾನ್ಯವಾದ ಕಾರಣ ಯಾವುದೇ ದ್ವಿದಳ ಧಾನ್ಯಗಳಲ್ಲಿರುವಂತೆ ಇದರಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನ್ ಗಳಿವೆ.
ಪಪ್ಪಾಯಿ ಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಷಿಯಂ, ನಿಯಾಸಿನ್ ನ ಹಲವಾರು ಅಂಶಗಳನ್ನು ಹೊಂದಿದೆ.
ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫೈಬರ್ ಇರುವ ಕಾರಣ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಿಸದಂತೆ ನೋಡಿಕೊಳ್ಳುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರ ಇರುವುದರ ಜೊತೆಗೆ ರಕ್ತದೊತ್ತಡ ತಡೆಗಟ್ಟಲು ಸಹಾಯ ಮಾಡುತ್ತದೆ.
ಪಪ್ಪಾಯಿ ಹಣ್ಣಿನ್ನು ಮಕ್ಕಳಿಗೆ ಹೆಚ್ಚಾಗಿ ತಿನ್ನಿಸಬೇಕು, ಇದರಿಂದ ಕಣ್ಣಿನ ಸಮಸ್ಯೆ ಕಾಡುವುದಿಲ್ಲ.
ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಕೆ ಇರುವುದರಿಂದ ಆರ್ಥರೈಟಿಸ್ ಅನ್ನು ತಡೆಗಟ್ಟುತ್ತದೆ ಹಾಗೂ ಕೀಲುನೋವಿನ ಸಮಸ್ಯೆ ಕಾಡುವುದಿಲ್ಲ.
ಪಪ್ಪಾಯಿ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಸಕ್ಕರೆ ಕಾಯಿಲೆ ಇರುವವರು ಕೂಡ ಯಾವುದೇ ಭಯವಿಲ್ಲದೆ ತಿನ್ನಬಹುದು.
ತೂಕ ಇಳಿಸಲಯ ಬಯಸುವವರು ಅಧಿಕವಾಗಿ ಪಪ್ಪಾಯಿ ಹಣ್ಣನ್ನು ತಿನ್ನಬೇಕು. ಇದರಿಂದ ದೇಹದಲ್ಲಿ ಬೇಡದಿರುವ ಕೊಬ್ಬನ್ನು ಕರಗಿಸುತ್ತದೆ.
ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಕೆ ಇರುವುದರಿಂದ ಮೂಳೆಗಳು ಸದೃಢಗೊಳ್ಳುತ್ತದೆ.
ಪಪ್ಪಾಯಿ ಹಣ್ಣಿನಲ್ಲಿ ನಾರಿನ ಅಂಶ ಹೊಂದಿದೆ, ಅಷ್ಟೇ ಅಲ್ಲದೇ ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಷಿಯಂ, ನಿಯಾಸಿನ್ ಇನ್ನೂ ಹಲವಾರು ಅಂಶಗಳನ್ನು ಇದು ಹೊಂದಿರುತ್ತದೆ.
ಋತು ಚಕ್ರದ ಸಮಸ್ಯೆ ಇರುವವರು ಪಪ್ಪಾಯ ಹಣ್ಣಿನ ಜ್ಯೂಸ್ ಅಥವಾ ಹಸಿ ಪರಂಗಿ ಕಾಯಿಯ ರಸವನ್ನು ಸೇವಿಸುತ್ತಾ ಬಂದರೆ ಈ ಸಮಸ್ಯೆ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ.
ಸಕ್ಕರೆ ಕಾಯಿಲೆ ಇರುವವರು ಕೂಡ ಪಪ್ಪಾಯಿ ಹಣ್ಣನ್ನು ಸೇವಿಸಬಹುದು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ತಡೆಗಟ್ಟುತ್ತದೆ.
ಪಪ್ಪಾಯಿ ಹಣ್ಣಿನಲ್ಲಿ ಕಿಣ್ವ ಎಂಬ ಅಂಶವು ಅಧಿಕವಾಗಿರುವುದರಿಂದ ಇದನ್ನು ನಿತ್ಯದಲ್ಲೂ ಸೇವಿಸುತ್ತಾ ಬಂದರೆ ದೇಹಕ್ಕೆ ಶಕ್ತಿ ಬರುವುದರ ಜೊತೆಗೆ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ.
ಪಪ್ಪಾಯ ವನ್ನು ಗರ್ಭಿಣಿ ಮಹಿಳೆಯರು ಸೇವಿಸುವುದು ಅಪಾಯ.
ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತ ಸಂಚಾರ ಸುಲಭವಾಗುತ್ತದೆ. ರಕ್ತವು ವೃದ್ಧಿಯಾಗುತ್ತದೆ
ತಾಮ್ರದ ವಸ್ತುಗಳನ್ನು ನಮ್ಮ ದಿನ ನಿತ್ಯದ ಜೀವನದಲ್ಲಿ ಬಳಸುವುದರಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಸುತ್ತದೆ.
ತಾಮ್ರದ ಬಳೆ ತೊಡಗುವುದರಿಂದ ಉಪಯೋಗ - ಇದನ್ನು ಧರಿಸುವುದರಿಂದ ಕೊಬ್ಬಿನಿಂದ ಆಗುವ ಹೃದಯದ ಮೇಲೆ ಆಗುವ ಪರಿಣಾಮ ದೂರವಾಗುತ್ತದೆ.
ತಾಮ್ರದ ಬಳೆ ತೊಡಗುವುದರಿಂದ ಉಪಯೋಗ - ಸಂಧಿವಾತ ಮತ್ತು ಕೈ ಕಾಲುಗಳು ಜುಮ್ ಎನ್ನುವವರು ತಾಮ್ರದ ಖಡಗ ಹಾಕಿಕೊಂಡರೆ ಪರಿಹಾರ ದೊರೆಯುತ್ತದೆ.
ತಾಮ್ರದ ಬಳೆ ತೊಡಗುವುದರಿಂದ ಉಪಯೋಗ - ನಮ್ಮ ದೇಹದಲ್ಲಿ ಇರುವ ಸೂಕ್ಷ್ಮ ಖನಿಜಗಳು ನಮ್ಮ ಬೆವರಿನ ಮೂಲಕ ರಕ್ತನಾಳಗಳನ್ನು ಪ್ರವೇಶಿಸುತ್ತವೆ. ಆದ್ದರಿಂದ ಈ ಬಳೆ ತುಂಬಾ ಪರಿಣಾಮ ಬೀರುತ್ತದೆ.
ಸೌತೆಕಾಯಿ ಸೇವನೆ - ಸಿಪ್ಪೆ ಸಹಿತ ಸೌತೆಕಾಯಿಯನ್ನು ಉಪ್ಪು ಮತ್ತು ಮೆಣಸು ಬಳಸಿ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ.ಸೌತೆಕಾಯಿ ಸೇವನೆ - ಹಸಿ ಸೌತೆಕಾಯಿಯ ಸೇವನೆಯು ಮಧುಮೇಹ ರಕ್ತದೊತ್ತಡ ಈ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಒಂದು ಉತ್ತಮ ಆಹಾರ.
ಸೌತೆಕಾಯಿ ಸೇವನೆ - ಸೌತೆಕಾಯಿಯನ್ನು ಕತ್ತರಿಸಿ ಅರ್ಧ ಗಂಟೆ ಫ್ರಿಟ್ಜ್ ನಲ್ಲಿ ಇಟ್ಟು ನಂತರ ಅದನ್ನು ಕಣ್ಣುಗಳ ಮೇಲೆ ಇರಿಸುವುದರಿಂದ ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳು ನಿವಾರಣೆಯಾಗುತ್ತದೆ ಮತ್ತು ಕಣ್ಣುಗಳ ಆಯಾಸ ಕಡಿಮೆಯಾಗುತ್ತದೆ ಹಾಗೂ ಕಣ್ಣುಗಳು ನಳನಳಿಸುತ್ತವೆ.
ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ಮೂತ್ರ ರೋಗದಿಂದ ಬಳಲುತ್ತಿರುವವರಿಗೆ ಹಸಿ ಸೌತೆಕಾಯಿಯ ಸೇವನೆ ಲಾಭದಾಯಕವಾಗಿದೆ.
ಸೌತೆಕಾಯಿ ಸೇವನೆ - ಸೌತೆಕಾಯಿ ರಸವನ್ನು ಅಂಗಾಲುಗಳಿಗೆ ಉಜ್ಜುವುದರಿಂದ ಕಣ್ಣುಗಳ ಉರಿ ಅಂಗಾಲಿನ ಉರಿಯು ಕಡಿಮೆಯಾಗಿ ಸುಖವಾದ ನಿದ್ರೆ ಬರುತ್ತದೆ.
ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ಟೊಮ್ಯಾಟೊ ಹಣ್ಣಿನ ರಸಕ್ಕೆ ಸಕ್ಕರೆ ಬೆರೆಸಿ ಕುಡಿಯುವುದು ಅಥವಾ ಟೊಮ್ಯಾಟೊ ಹಣ್ಣನ್ನು ತಿನ್ನುವುದರಿಂದಲೂ ದೇಹದ ಆಯಾಸ ಕಡಿಮೆಯಾಗಿ ಲವಲವಿಕೆಯಿಂದ ಇರಬಹುದು.
ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ಸೌತೆಕಾಯಿ, ಕಲ್ಲಂಗಡಿ, ನೇತಳರ, ಟೊಮ್ಯಾಟೊ, ಕರಬೂಜ - ಈ ಹಣ್ಣುಗಳ ಸೇವನೆ ದೇಹಕ್ಕೆ ಹಾಗೂ ಮನಸ್ಸಿನ ಚೈತನ್ಯಕ್ಕೆ ಲಾಭದಾಯಕ.
ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ಹಸಿ ಕ್ಯಾರೆಟ್ ಅನ್ನು ತುರಿದು ಉಪ್ಪು ನಿಂಬೆರಸ ಬೆರೆಸಿ ಸೇವಿಸುವುದರಿಂದ ದೇಹದ ಆಯಾಸ ನಿವಾರಣೆಯಾಗುವುದಲ್ಲದೇ ಚೈತನ್ಯದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಬಿಸಿಲಿನಿಂದ ಆಗುವ ದಾಹ - ಕಲ್ಲಂಗಡಿ ಹಾಗೂ ಕರಬೂಜ ಹಣ್ಣಿನ ಪಾನಕ ಸೇವನೆ ಆಯಾಸ ಮತ್ತು ನೀರಡಿಕೆ ಉತ್ತಮವಾಗಿದೆ.
ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ಟಮೊಟೋ ಹಣ್ಣಿನ ರಸಕ್ಕೆ ಸಕ್ಕರೆ ಬೆರೆಸಿ ಸೇವಿಸುವುದರಿಂದ ಅಥವಾ ಟಮೋಟೋ ತಿನ್ನುವುದರಿಂದ ದೇಹದ ಆಯಾಸವು ಬಹುಬೇಗನೆ ನಿವಾರಣೆಯಾಗುತ್ತದೆ.
ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ನಿಂಬೆಹಣ್ಣಿನ ಪಾನಕಕ್ಕೆ ಸಕ್ಕರೆಯ ಬದಲಾಗಿ ಬೆಲ್ಲವನ್ನು ಉಪಯೋಗಿಸಿ, ಕುಡಿಯುವುದರಿಂದ ಆಯಾಸವು ಬಹುಬೇಗನೆ ನಿವಾರಣೆಯಾಗುತ್ತದೆ.
ರಕ್ತಹೀನತೆಯನ್ನು ದೂರ ಮಾಡಲು ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸಬೇಕು. ಇದರಲ್ಲಿ ಕಬ್ಬಿಣದ ಅಂಶ ಅಧಿಕವಾಗಿರುತ್ತದೆ.
ಮಲಬದ್ಧತೆ ಆದಾಗ ಮಾತ್ರೆಗಳನ್ನು ಕೊಡುವ ಮೊದಲು ಬಾಳೆಹಣ್ಣನ್ನು ಕೊಡಬಹುದು. ಇದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.
ಗ್ಯಾಸ್ಟ್ರಿಕ್, ಅಸಿಡಿಟಿ ಅಥವಾ ಎದೆಯಲ್ಲಿ ಹುಳಿ ತೇಗು ತುಂಬಾ ಬರುತ್ತಿದ್ದರೆ, ಬಾಳೆಹಣ್ಣನ್ನು ಹೆಚ್ಚಾಗಿ ಉಪಯೋಗಿಸಬೇಕು.
ರಕ್ತದೊತ್ತಡ ಇರುವವರು ಬಾಳೆಹಣ್ಣಿನ ಸೇವನೆ ಮಾಡಬಹುದು. ಇದರಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿದ್ದು, ಲವನಾಂಶ ಕಡಿಮೆ ಇರುತ್ತದೆ.
ಬೇಸಿಗೆಯಲ್ಲಿ ದಿನಕ್ಕೆ ಒಂದು ಬಾಳೆಹಣ್ಣನ್ನು ತಿನ್ನಿಸುವುದರಿಂದ ದೇಹವು ತಂಪಾಗಿರುತ್ತದೆ.
ಮಲಗುವ ಮೊದಲು ಹದವಾದ ಬಿಸಿ ನೀರಿನಲ್ಲಿ ಸೋಪು ಹಚ್ಚಿ ಮೃದುವಾಗಿ ತೊಳೆದು, ನಂತರ ಸಾಸಿವೆ ಎಣ್ಣೆ ಹಚ್ಚಿ ಸಾಕ್ಸ್ ಹಾಕಿ ಮಲಗಿದರೆ, ಒರಟು ಕಡಿಮೆ ಮಾಡುತ್ತದೆ.
ನಿಂಬೆಹಣ್ಣಿನ ರಸವನ್ನು ಮುಖದ ಸುಕ್ಕುಗಳಿರುವ ಭಾಗಕ್ಕೆ ಲೇಪಿಸುತ್ತಿದ್ದರೆ, ಸುಕ್ಕುಗಳಿರುವ ಭಾಗದಲ್ಲಿನ ಗೆರೆಗಳು ಮತ್ತು ಕಲೆಗಳು ಕಳೆಗುಂದಿ, ಸುಕ್ಕುಗಳು ಮಾಯವಾಗುತ್ತವೆ.
ಮುಖದ ಸುಕ್ಕುಗಳನ್ನು ನಿವಾರಿಸಲು ಜೇನುತುಪ್ಪ, ಹಾಲಿನ ಕೆನೆ ಮತ್ತು ಆಲೀವ್ ಎಣ್ಣೆಯ ಮಿಶ್ರಣವನ್ನು ಬಳಸಬಹುದು.
ಪಪ್ಪಾಯಿ ಹಣ್ಣಿಗೆ ಸ್ವಲ್ಪ ನಿಂಬೆರಸ ಹಾಕಿ ಪಾದಗಳಿಗೆ 10 ನಿಮಿಷ ತಿಕ್ಕಿ ನಂತರ ಕಾಲುಗಳನ್ನು ತೊಳೆಯಬೇಕು. ಈ ರೀತಿಯಲ್ಲಿ ಎರಡು ಬಾರಿ ಮಾಡಿದರೆ ಪಾದಗಳು ನುಣುಪಾಗಿ ಸುಂದರವಾಗಿ ಕಾಣುತ್ತದೆ.
ಕೂದಲಿಗೆ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ, ಏಕೆಂದರೆ, ಬಿಸಿ ನೀರು ಕೂದಲನ್ನು ಒಣಗಿಸುತ್ತದೆ.
ನಿಂಬೆ ರಸ ಹಾಗೂ ತೆಂಗಿನಕಾಯಿ ಹಾಲಿನ ಪೇಸ್ಟ್ ನೈಸರ್ಗಿಕವಾಗಿ ಕೂದಲನ್ನು ನಯಗೊಳಿಸಲು ಉತ್ತಮ ವಿಧಾನ. ಅದು ಕ್ರೀಮ್ ಕಂಡೀಷನರ್ ರೀತಿ ಕೆಲಸ ಮಾಡುತ್ತದೆ.
ನಿಂಬೆಹಣ್ಣಿನ ರಸದಿಂದ ತುಟಿಗಳನ್ನು ಮಸಾಜ್ ಮಾಡುತ್ತಿದ್ದರೆ, ತುಟಿಗಳು ಕಪ್ಪಾಗುವುದನ್ನು ತಡೆಯಬಹುದು.
ಬೀಟ್ ರೂಟ್ ರಸವನ್ನು ಪ್ರತಿದಿನ ಹಚ್ಚುತ್ತಾ ಬಂದರೆ ತುಟಿ ಮೃದುವಾಗುತ್ತದೆ ಮತ್ತು ಸಹಜವಾದ ಗುಲಾಬಿ ಬಣ್ಣ ಬರುತ್ತದೆ.
ಬಾದಾಮಿ ಎಣ್ಣೆಯನ್ನು ಪ್ರತಿದಿನ ಹಚ್ಚುತ್ತಾ ಬಂದರೆ ತುಟಿ ಮೃದುವಾಗುತ್ತದೆ ಮತ್ತು ಹೊಳಪು ಹೆಚ್ಚುತ್ತದೆ.
ನಿಂಬೆರಸಕ್ಕೆ ಸ್ವಲ್ಪ ಗ್ಲಿಸರಿನ್ ಸೇರಿಸಿ ರಾತ್ರಿ ಮಲಗುವ ವೇಳೆ ನಯವಾಗಿ ಹಚ್ಚಬೇಕು, ಬೆಳಗೆದ್ದು ತೊಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ತುಟಿಗಳು ಮಾಯಿಶ್ಚರೈಸರ್ ಆಗುತ್ತವೆ.
ಸ್ವಲ್ಪ ಹಾಲಿನ ಕೆನೆಯೊಂದಿಗೆ ಸಕ್ಕರೆಯನ್ನು ಬೆರೆಸಿ ಹಚ್ಚದರೆ, ನಿರ್ಜೀವತೆಯನ್ನು ನಿವಾರಿಸಿ ತುಟಿಗಳನ್ನು ತೇವವಾಗಿರಿಸುತ್ತದೆ.
ತೆಂಗಿನ ಎಣ್ಣೆ ಹಾಗೂ ಹಾಲು ನೈಸರ್ಗಿಕ ಲಿಪ್ ಬಾಮ್ ನಂತೆ ಕೆಲಸ ಮಾಡುತ್ತದೆ. ಇದನ್ನು ಸೇರಿಸಿ ರಾತ್ರಿ ಮಲಗುವ ವೇಳೆ ನಯವಾಗಿ ಹಚ್ಚಬೇಕು, ಬೆಳಗೆದ್ದು ತೊಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ತುಟಿಗಳು ಮಾಯಿಶ್ಚರೈಸರ್ ಆಗುತ್ತವೆ.
ತೆಂಗಿನಕಾಯಿ ಯನ್ನು ತುರಿದು ಹಾಲು ತೆಗೆದು ತುಟಿಗಳಿಗೆ ಸವರಿದರೆ ತುಟಿಗಳು ಮೃದುವಾಗಿ ಹೊಳೆಯುತ್ತದೆ.
ಹೆಚ್ಚು ಕ್ಯಾರೆಟ್ ಹಾಗೂ ಹಸಿ ಸೌತೆಕಾಯಿ ತಿನ್ನುತ್ತಿದ್ದರೆ, ತುಟಿಗಳನ್ನು ಯಾವಾಗಲೂ ತಾಜಾತನದಿಂದ ಹೊಳೆಯುವಂತೆ ಮಾಡುತ್ತದೆ.
ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿಗಳು ಪಿಂಕ್ ಆಗಿ ಉಳಿಯುತ್ತದೆ.
ನೈಸರ್ಗಿಕವಾಗಿ ಕೆಂಪು ತುಟಿಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಬೀಟ್ ರೂಟ್ ನ್ನು ಲೇಪಿಸಿ ಮಲಗಿ.
ಮುಳ್ಳು ಸೌತೆಕಾಯಿಯನ್ನು ಸಿಪ್ಪೆ, ಬೀಜ ಸಮೇತ ನುಣ್ಣಗೆ ಕಡೆದು ಮುಖಕ್ಕೆ ಲೇಪನ ಮಾಡಿ, 30 ನಿಮಿಷಗಳ ನಂತರ ತೊಳೆದರೆ, ಮೊಡವೆಗಳು ನಿವಾರಣೆಯಾಗುತ್ತವೆ.
ನಿಂಬೆರಸ ಮತ್ತು ರೋಸ್ ವಾಟರ್ ಸಮ ಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಹಚ್ಚಿ. ಇದು ಮೊಡವೆಗಳನ್ನು ಹೋಗಲಾಡಿಸುತ್ತದೆ. ಶುಭ ಮೈಕಾಂತಿಯನ್ನೂ ನೀಡುತ್ತದೆ.
ವಿನೆಗರ್ ಮತ್ತು ಉಪ್ಪನ್ನು ನುಣ್ಣಗೆ ರುಬ್ಬಿ, ಮುಖಕ್ಕೆ ಬೆರಳ ತುದಿಯಿಂದ ಗೋಲಾಕಾರವಾಗಿ ಸವರಿ, ಐದು ನಿಮಿಷ ಬಿಟ್ಟು ತೊಳೆಯಲು, ಬ್ಲಾಕ್ ಹೆಡ್, ಡೆಡ್ ಸ್ಕಿನ್ ಗಳೆಲ್ಲವೂ ನಿವಾರಣೆಯಾಗುತ್ತದೆ. *
ಮುಖವನ್ನು ತೊಳೆದು ಕಣ್ಣಿಗೆ ಸೌತೆಕಾಯಿಯ ತುಂಡು ಅಥವಾ ಹಸಿ ಆಲೂಗಡ್ಡೆಯ ತುಂಡನ್ನು ಇಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಅರ್ಧ ಗಂಟೆ ಪ್ರತಿದಿನ ಇಡುತ್ತಾ ಬಂದರೆ ಒಂದು ತಿಂಗಳಿನಲ್ಲಿ ಕಣ್ಣಿನ ಸುತ್ತ ಬಿದ್ದಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ.
ಟೊಮ್ಯಾಟೊ ಮತ್ತು ನಿಂಬೆರಸ ಮಿಶ್ರಣ ಮಾಡಿ, ದಿನಕ್ಕೆ ಎರಡು ಬಾರಿ ಕಣ್ಣಿನ ಸುತ್ತ ಉಜ್ಜಬೇಕು. ಇದರಲ್ಲಿರುವ ಬ್ಲೀಚ್ ಅಂಶ ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಅರಿಶಿನ ಪುಡಿಯನ್ನು ಫೈನಾಫಲ್ ಜ್ಯೂಸ್ ಜೊತೆ ಮಿಶ್ರಣ ಮಾಡಿ ಪ್ರತಿದಿನ ಕಣ್ಣಿನ ಸುತ್ತ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು.
ಪುದೀನ ಎಲೆಯ ರಸವನ್ನು ಹಿಂಡಿ ಅದನ್ನು ಕಣ್ಣಿನ ಸುತ್ತ ಹಚ್ಚಿದರೂ ಕಪ್ಪು ಕಲೆಯ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು.
ಸ್ವಲ್ಪ ಮುಲ್ತಾನಿ ಮಿಟ್ಟಿಗೆ ಪುದೀನ ಎಲೆ ಸೇರಿಸಿ ಅರೆದು ಪೇಸ್ಟ್ ಮಾಡಿ ರಾತ್ರಿ ಫ್ರಿಟ್ಜ್ ನಲ್ಲಿಡಿ. ಬೆಳಿಗ್ಗೆ ಅದನ್ನು ಮುಖಕ್ಕೆ ಹಚ್ಚಿ, ಮೊಡವೆ ಮುಖಕ್ಕೆ ಇದು ಅತ್ಯುತ್ತಮ
ಆರೋಗ್ಯ ಸಲಹೆ
ತೊಗರಿಯನ್ನು ರಾತ್ರಿಯಿಡೀ ನೆನೆಹಾಕಿ ಬೆಳಿಗ್ಗೆ ಅರೆದು ಪೇಸ್ಟ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ, ಮೊಡವೆ ಮುಖಕ್ಕೆ ಇದು ಅತ್ಯುತ್ತಮ.
*********
ಕುಂತ್ರೆ ನಿಂತ್ರೆ ಡಾಕ್ಟರ್ ಹತ್ರೆ ಓಡ ಬ್ಯಾಡ್ರೋ
ಮನೆಮದ್ದು ಅಂಗೈಲಿದ್ರೆ ಚಿಂತೆಯಾಕ್ರೋ ll
ನೆಗಡಿ ಶೀತ ಕೆಮ್ಮು ಆದ್ರೆ ನಡುಗ ಬ್ಯಾಡ್ರೋ
ದೊಡ್ಡಪತ್ರೆ ಜೇನುತುಪ್ಪ ಕುಡಿದು ನೋಡ್ರೋ
||೧||
ಹೊಟ್ಟೆಬಾಧೆ ಬಂದದ್ದಾದ್ರೆ ಹೆದರಬ್ಯಾಡ್ರೋ
ಆಗೊಮ್ಮೆ ಈಗೊಮ್ಮೆ ಜೀರಿಗೆ ಕಷಾಯ ಕುಡ್ದು ನೋಡ್ರೋ
||೨||
ಕಫಕ್ಕೇನು ಮದ್ದಿಲ್ವೆ? ಕೇಳ ಬ್ಯಾಡ್ರೋ
ಕಾಳ್ಮೆಣ್ಸು-ಶುಂಠಿ ಕಷಾಯ ಇಲ್ವೇನು ತಿಳ್ದು ನೋಡ್ರೋ
||೩||
ಬಹಳವೇನು ಬಾಯಾರಿಕೆಯೇ ಏನು ಗೋಳ್ರೋ
ತುಳಸಿ ಎಲೆಯ ಸೇವ್ನೆ ಮಾಡಿ ಆಮೇಲ್ಹೇಳ್ರೋ ||೪||
ಬಾಯಾರಿಕೆಯೇ ಇಲ್ಲವೆಂದು ಮರುಗಬ್ಯಾಡ್ರೋ
ಬೆಲ್ಲವನ್ನು ಸವಿಯುತ್ತ ಸುಧಾರ್ಸಿಕೊಳ್ರೋ ||೫||
ಪಿತ್ತವಾದ್ರೆ ಚಹಾ ಸೇವನೆ ಬಿಟ್ಟುಬಿಡ್ರೋ
ಉಷ್ಣವಾದ್ರೆ ಕಾಫಿ ಕುಡಿಯೋದ್ ಬಂದುಮಾಡ್ರೋ
||೬||
ಬಹುಮೂತ್ರಕೆ ದಾಲ್ಚಿನ್ನಿಯ ಮದ್ದು ಸರಳ ಕಣ್ರೋ
ಮೂತ್ರ ತಡೆಗೆ ಮತ್ತೆ ಜೀರ್ಗೆ ಕಷಾಯ ಮಾಡ್ರೋ ||೭||
ಮಧುಮೇಹಕ್ಕೆ ರಾಗಿ ಮುದ್ದೆ ಮೆದ್ದು ನೋಡ್ರೋ
ಮೂಲವ್ಯಾಧಿಗೆ ಎಳ್ಳು ಸೇವ್ನೆ (ನಿತ್ಯ) ಬಿಡ ಬ್ಯಾಡ್ರೋ
||೮||
ವಾಂತಿಯಾದ್ರೆ ಎಳ್ನೀರ್-ಐತೆ ಹೆದರ ಬ್ಯಾಡ್ರೋ
ಭೇದಿ ಆದ್ರೆ ಅನ್ನ ಮಜ್ಜಿಗೆ ಊಟ ಮಾಡ್ರೋ ||೯||
ಹಲ್ಲು ಸಡಿಲತೆಗೆ ದಾಳಿಂಬೆ ಸಿಪ್ಪೆಯ ಕಷಾಯ ಕೊಡ್ರೋ
ಮೊಸರು ತಿಂದು ಕಾಮಾಲೆ ರೋಗವ ದೂರವಿಡ್ರೋ
||೧೦||
ತುಟಿ ಸೀಳಿದಿಯೇ? ಹಾಲಿನ ಕೆನೆಯ ಹಚ್ಚಿ ನೋಡ್ರೋ
ತೆಳ್ಳಗಾಗಲು ಬಿಸಿ ನೀರ್ ಕುಡಿವುಪಚಾರವ ಮಾಡ್ರೋ ||೧೧||
ರಕ್ತ ಹೀನತೆಗೆ ಪಾಲಕ್ ಸೊಪ್ಪು ಇಲ್ಲಿದೆ ಕಾಣ್ರೋ
ಹೊಟ್ಟೆಯ ಹರಳಿಗೆ ಬಾಳೆದಿಂಡಿನ ಪಲ್ಯವ ತಿನ್ರೋ
||೧೨||
ತಲೆ ಸುತ್ತುವುದಕೆ ಬೆಳ್ಳುಳ್ಳಿ ತಿನ್ನುತ
ಗುಣಮುಖರಾಗ್ರೋ
ರಕ್ತ ದೋಷಕೆ ಕೇಸರಿ ಹಾಲಿನ ಸವಿ-ಸುಖ ನೀಡ್ರೋ
||೧೩||
ಓಂ ಕಾಳಲಿದೆ ಹಸಿವೆ ಮಾಡುವ ಶಕ್ತಿಯ ಕಾಣ್ರೋ
ನೀಗದ ಹಸಿವೆಗೆ ಹಸಿ ಹಸಿ ಶೇಂಗಾ ಚಮತ್ಕಾರ ನೋಡ್ರೋ ||೧೪||
ಮಲೆನಾಡಿನ ಮಲೆ ಮಡಿಲಿನ ಮದ್ದಿನ ಮಹಿಮೆಯ ಪಾಡ್ರೋ
ಭಾಗ್ಯದ ಆರೋಗ್ಯದ ಬುನಾದಿಯಿದು ಮೂಗ-ಮುರಿಯಬ್ಯಾಡ್ರೋ
||೧೫||
ವಿಷಮ ಸಂದರ್ಭಕೆ ರಾಮ ಬಾಣವು ಮನೆ ಮದ್ದದು
ನೋಡ್ರೋ
ದಿವ್ಯೌಷಧಗಳ ಜ್ಞಾನಭಂಡಾರಕೆ ನಮೋನಮನ ಹಾಡ್ರೋ ||೧೬||.
****
ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ..ಅದು ಉಪ್ಪನ್ನು ಹೀರ್ಕೊಳುತ್ತೆ .
ಮೂಳೆಗಳನ್ನು ಕಾಪಾಡಿರಿ IMPROVE BONES
No comments:
Post a Comment