SEARCH HERE

Tuesday, 1 January 2019

ಪಾರಿಜಾತ parijatha parihara




ಸಾಮಾನ್ಯವಾಗಿ ಉಷ್ಣವಲಯದ ಪ್ರದೇಶದಲ್ಲಿ ಬೆಳೆಯುವ ಪಾರಿಜಾತಕ್ಕೆ ‘ರಾತ್ರಿ ಮಲ್ಲಿಗೆ’ ಎಂದೂ ಕರೆಯುತ್ತಾರೆ. ಇದರ ಮರ ಬೂದು ಮಿಶ್ರಿತ ತೊಗಟೆಯನ್ನು ಹೊಂದಿರುತ್ತದೆ.

ಪಾರಿಜಾತದಲ್ಲಿ ಪ್ರಕ್ಟೋಸ್, ಗ್ಲೂಕೋಸ್, ಕೆರೋಟೊನ್, ಫ್ಲೆವನಾಯ್್ಡಳು ಮತ್ತು ಪೈಟೋಕೆಮಿಕಲ್​ಗಳು ಇರುತ್ತವೆ. ಪಾರಿಜಾತದಲ್ಲಿ ಚಿಕನ್​ಗುನ್ಯಾ ಮತ್ತು ಡೆಂಘಿಯನ್ನು ಗುಣಪಡಿಸುವ ಅಂಶಗಳಿವೆ. ಪಾರಿಜಾತದ ಎಲೆಗಳನ್ನು ಸೇವಿಸುವುದರಿಂದ ಸಂಧಿವಾತ ಮತ್ತು ಊರಿಯೂತ ಕಡಿಮೆಯಾಗುತ್ತದೆ.

ನಾವು ಸೇವಿಸುವ ಕೃತ್ರಿಮ ಆಹಾರದಿಂದಾಗಿ ಬೇಗನೆ ವಯಸ್ಸಾದವರಂತೆ ಕಾಣಿಸುತ್ತಿದ್ದೇವೆ. ಇದಕ್ಕೆ ಕಾರಣ ನಮ್ಮ ಜೀವಕೋಶಕ್ಕೆ ಆಗುವ ಹಾನಿ. ಈ ಹಾನಿಯನ್ನು ಪಾರಿಜಾತ ನಿಧಾನಗೊಳಿಸುತ್ತದೆ. ಹಾನಿಗೊಳಗಾದ ಮುಕ್ತ ಮೂಲಭೂತ ಕೋಶಗಳನ್ನು ಪಾರಿಜಾತ ಗುಣಪಡಿಸುತ್ತದೆ ಹಾಗೂ ಕ್ಯಾನ್ಸರ್ ಜೀವಕೋಶದ ಬೆಳವಣಿಗೆಯನ್ನು ತಡೆೆಯುತ್ತದೆ. ಪಾರಿಜಾತ ಎಣ್ಣೆಯನ್ನು ಉಪಯೋಗಿಸುವುದರಿಂದ ಬ್ಯಾಕ್ಟಿರಿಯಾಗಳಾದ ಇ-ಕೋಲೈ ಮತ್ತು ಶಿಲೀಂದ್ರಿಯ ಸೋಂಕುಗಳನ್ನು ತಡೆೆಯಬಹುದು ಮತ್ತು ಹೃದಯಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡಬಹುದು.
ತಲೆಹೊಟ್ಟು, ತಲೆಸುತ್ತು, ಆತಂಕ, ಸಿಡುಬು, ಆಮ್ಲೀಯತೆ, ಅಧಿಕ ರಕ್ತದೊತ್ತಡ ಮುಂತಾದವುಗಳ ನಿರ್ವಹಣೆಯಲ್ಲಿ ಪಾರಿಜಾತವು ಪ್ರಮುಖ ಪಾತ್ರ ವಹಿಸುತ್ತದೆ. ಇದು ಮೂಲವ್ಯಾಧಿ ನಿವಾರಣೆಗೆ ಸಹಾಯಕಾರಿಯಾಗಿದೆ. ಪಾರಿಜಾತದ ಹಸಿ ಎಲೆಗಳನ್ನು ಸಂಗ್ರಹಿಸಿ ನೆರಳಿನಲ್ಲಿ ಒಣಗಿಸಿಟ್ಟುಕೊಳ್ಳಬೇಕು. ಇದನ್ನು ಪುಡಿ ಮಾಡಿ ಪ್ರತಿದಿನ ಒಂದು ಗ್ಲಾಸ್ ನೀರಿನಲ್ಲಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅನೇಕ ರೀತಿಯ ಫಂಗಸ್​ಗಳಿಂದ ಕಾಡುವ ತುರಿಕೆ, ಚರ್ಮದ ತೊಂದರೆ ಅಂತೆಯೇ ಐ.ಬಿ.ಎಸ್. ನಂತಹ ಕರುಳಿನ ತೊಂದರೆ ತ್ವರಿತವಾಗಿ ಹತೋಟಿಗೆ ಬರುತ್ತದೆ. ಒಳ್ಳೆಯ ಫಲಿತಾಂಶಕ್ಕಾಗಿ ನಲವತೆôದು ದಿನಗಳ ಕಾಲ ಸೇವಿಸಬಹುದು.
***

 ಪಾರಿಜಾತ

ಸಾಧಾರಣವಾಗಿ ದೇವಸ್ಥಾನ ಮತ್ತು ಹೂವಿನ ಬನಗಳಲ್ಲಿ ಕಾಣಸಿಗುವ ಪಾರಿಜಾತ  ಹೆಚ್ಚಿನ ಹೂವುಗಳು ಸಂಜೆ ಅರಳುವುದು ಕಾಣಬಹುದು.

ಕೇಸರಿ ತೊಟ್ಟು ಬಿಳಿಯ ಹೂವು ನೋಡಲು ಚಂದ ಒಳ್ಳೆಯ ಪರಿಮಳ

ದೇವಲೋಕದ ಪುಷ್ಪ ಎಂದೇ ಹೆಸರಾದ ಇದು ವಿಷ್ಣುಪ್ರಿಯ.

ಕರೋನಾದಲ್ಲಿ ಇದರ ಕಷಾಯ ತುಂಬಾ ಹೆಸರುವಾಸಿಯಾಗಿದೆ.

ಇದರ ಎಲೆ ಹೂವು ಕಾಂಡ ಬೇರು ಬೀಜ ಎಲ್ಲದರಲ್ಲೂ ಔಷಧೀಯ ಗುಣ ಹೊಂದಿದೆ.

1) ಮಕ್ಕಳ ಹೊಟ್ಟೆಯ ಕ್ರಿಮಿಗೆ ಎಲೆಯ ರಸವನ್ನು ಕಲ್ಲು ಸಕ್ಕರೆಯೊಂದಿಗೆ ಸೇರಿಸಿ ಕೊಡು ವುದು.

2) ಚಕ್ಕೆ ಅಥವಾ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುವುದರಿಂದ ಜ್ವರ ಗುಣವಾಗುತ್ತದೆ.

3) ಸೊಪ್ಪಿನ ಕಷಾಯದೊಂದಿಗೆ ಜೀರಿಗೆ ಪುಡಿ ಸೇರಿಸಿ ಸೇವಿಸುವುದರಿಂದ ಕಫ ನೀರಾಗಿ ದಮ್ಮು ಗುಣವಾಗುತ್ತದೆ.

4) ಏಳೆಂಟು ಎಲೆಯನ್ನು ಜೀರಿಗೆ ,ಕಾಳು ಮೆಣಸು ಸೇರಿಸಿ ಕಷಾಯ ಮಾಡಿ ಸೇವಿಸುವುದರಿಂದ ಮಂಡಿ ನೋವು ಗುಣವಾಗುತ್ತದೆ.

5) ಬೀಜವನ್ನು ಅರೆದು ಎಣ್ಣೆಯೊಂದಿಗೆ ಕುದಿಸಿ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

6) ಹೂಗಳನ್ನು ಅರೆದು ಮುಖಕ್ಕೆ ಹಚ್ಚುವುದರಿಂದ ನಿಧಾನವಾಗಿ ಬಂಗು ಗುಣವಾಗುತ್ತದೆ.

7) ಎಲೆ ಅಥವಾ ತೊಗಟೆಯನ್ನು ಅರೆದು ಹಚ್ಚುವುದರಿಂದ ಚರ್ಮರೋಗ ಗುಣವಾಗುತ್ತದೆ.

8) ಎಲೆಯ ರಸವನ್ನು ಕಷಾಯ ಮಾಡಿ ಕುಡಿಯುವುದರಿಂದ ಮೂತ್ರ ಸಲೀಸಾಗಿ ವಿಸರ್ಜನೆಯಾಗುತ್ತದೆ.

9) ಚಕ್ಕೆಯನ್ನು ನಿಂಬೆರಸದಲ್ಲಿ ತೇಯಿದು ನೆಕ್ಕುವುದರಿಂದ ನಾಲಿಗೆಯ ಮೇಲಿರುವ ಬಿಳಿಯ ಅಗ್ರ ಗುಣವಾಗುತ್ತದೆ ಮತ್ತು ಬಾಯಿ ರುಚಿ ಹೆಚ್ಚಿಸುತ್ತದೆ.

10) ಹೂವಿನಿಂದ ಮಾಡುವ ಕಾಡಿಗೆ ಕಣ್ಣಿಗೆ ತಂಪು.🥢  ⛳

***
ಪಾರಿಜಾತ ವೃಕ್ಷ ( ಲಕ್ಷ್ಮಿ ಮರ ) ಪರಿಚಯ ಅದ್ಬುತ ಉಪಯೋಗಗಳು  ಪಾರಿಜಾತ ಪುರಾಣ; ಆರೋಗ್ಯಕ್ಕೆ ರಾಮಬಾಣ 

ಸಾಮಾನ್ಯವಾಗಿ ಕೆಳಗೆ ಬಿದ್ದ ಹೂವುಗಳನ್ನು ದೇವರಿಗೇರಿಸುವುದಿಲ್ಲ. ಆದರೆ, ಸ್ವರ್ಗದ ವೃಕ್ಷಗಳಾದ ಕಾರಣ ಪಾರಿಜಾತ ಹಾಗೂ ಬಕುಳದ ಹೂವುಗಳು ನೆಲಕ್ಕೆ ಬಿದ್ದರೂ ದೇವರ ಮುಡಿಗೇರಲು ಅರ್ಹವಾಗಿವೆ ಎಂಬ ನಂಬಿಕೆ ಇದೆ. 

ಪಾರಿಜಾತಕ ಎಂಬ ರಾಜಕುಮಾರಿ ಸೂರ್ಯನೊಡನೆ ಪ್ರೀತಿಗೆ ಬಿದ್ದಳು. ಆದರೆ, ಸೂರ್ಯ ಮುಲಾಜಿಲ್ಲದೆ ಅವಳ ಪ್ರೀತಿಯನ್ನು ತಿರಸ್ಕರಿಸಿದ. ಇದರಿಂದ ನೊಂದ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು. ಅವಳ ದೇಹದ ಬೂದಿಯಿಂದ ಉದಯಿಸಿದ್ದೇ ಸುಂದರವಾದ ಪಾರಿಜಾತದ ಗಿಡ. ಹೀಗೆ ಗಿಡವಾಗಿ ಹುಟ್ಟಿದ ಪಾರಿಜಾತಕಳಿಗೆ ದಿನ ಬೆಳಗಾದರೆ ಕಣ್ಣಿಗೆ ಬೀಳುವ ತನ್ನ ಪ್ರೇಮಿಯ ನೋಟ ನೋವನ್ನು ನೀಡುತ್ತದೆ. ಅದಕ್ಕಾಗಿಯೇ ಪಾರಿಜಾತದ ಹೂವುಗಳು ಬೆಳಗಿನ ಹೊತ್ತು ಬಾಡಿದ್ದು, ಸಂಜೆಯ ನಂತರ ಅರಳುತ್ತವೆ ಎನ್ನುತ್ತದೆ ಪುರಾಣ. ಸಸ್ಯದ ಸ್ವಭಾವಕ್ಕೆ ತಕ್ಕಂತಿದೆ ಈ ಕತೆ. ಇದೇ ಕಾರಣಕ್ಕೆ ಸಸ್ಯಕ್ಕೆ ಪ್ರೇಮಿಗಳ ಮರ, ದುಃಖದ ಮರ, ಸಂಜೆಮಲ್ಲಿಗೆ, ರಾತ್ರಿರಾಣಿ ಮುಂತಾದ ಹೆಸರುಗಳಿವೆ. 

ಮಲ್ಲಿಗೆಯಂಥ ದಳಗಳು, ಕೇಸರಿ ಬಣ್ಣದ ತೊಟ್ಟುಗಳನ್ನು ಹೊಂದಿ ಮರದ ತುಂಬಾ ನಕ್ಷತ್ರಗಳಂತೆ ಹೊಳೆಯುವ ಪಾರಿಜಾತದ ಚೆಲುವು ಬಹಳ ಆಕರ್ಷಕ. ಭಾರತ, ಪಾಕಿಸ್ತಾನ, ಥೈಲ್ಯಾಂಡ್, ನೇಪಾಳ, ಇಂಡೋನೇಶ್ಯಾಗಳಲ್ಲಿ ಕಂಡುಬರುವ ಪಾರಿಜಾತ ಏಷ್ಯಾದ ಎಗ್ಗಿಲ್ಲದ ಚೆಲುವೆ. ಸ್ವರ್ಗದ ಐದು ವೃಕ್ಷಗಳಲ್ಲಿ ಪಾರಿಜಾತವೂ ಇದೆ. ಹೌದು, ಪುರಾಣ ಪುಣ್ಯ ಕತೆಗಳಲ್ಲಿ ಪಾರಿಜಾತ ಹಲವೆಡೆ ಸ್ಥಾನ ಪಡೆದುಕೊಂಡಿದೆ. ಪಾವಿತ್ರತೆಯ ಕಾರಣದಿಂದಲೇ ಮೊನ್ನೆ ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನೆರವೇರಿಸುವಾಗ ಪ್ರಧಾನಿ ನರೇಂದ್ರ ಮೋದಿ ಕೂಡಾ ಪಾರಿಜಾತದ ಸಸ್ಯ ನೆಟ್ಟು ಪೂಜೆ ನೆರವೇರಿಸಿದರು. 

ಸಮುದ್ರ ಮಂಥನ ಸಮಯದಲ್ಲಿ ಉದಯಿಸಿದ ಐದು ವೃಕ್ಷಗಳಲ್ಲೊಂದು ಪಾರಿಜಾತ. ಪತ್ನಿ ಸತ್ಯಭಾಮೆಗೆ ಪಾರಿಜಾತವನ್ನು ತಂದು ಕೊಡುವ ಸಲುವಾಗಿ ಕೃಷ್ಣನು ಇಂದ್ರನೊಡನೆ ಯುದ್ಧ ಮಾಡಿದ ಕತೆಯೂ ಇದೆ. ಹರಿವಂಶ ಪುರಾಣದಲ್ಲಿ ಈ ವೃಕ್ಷವನ್ನು ಕೇಳಿದ್ದೆಲ್ಲ ಕೊಡುವ ಕಲ್ಪವೃಕ್ಷ ಎಂದು ಕರೆಯಲಾಗಿದೆ. ಸಾಮಾನ್ಯವಾಗಿ ಕೆಳಗೆ ಬಿದ್ದ ಹೂವುಗಳನ್ನು ದೇವರಿಗೇರಿಸುವುದಿಲ್ಲ. ಆದರೆ, ಸ್ವರ್ಗದ ವೃಕ್ಷಗಳಾದ ಕಾರಣ ಪಾರಿಜಾತ ಹಾಗೂ ಬಕುಳದ ಹೂವುಗಳು ನೆಲಕ್ಕೆ ಬಿದ್ದರೂ ದೇವರ ಮುಡಿಗೇರಲು ಅರ್ಹವಾಗಿವೆ ಎಂಬ ನಂಬಿಕೆ ಇದೆ.

ಹೀಗೆ ಪವಿತ್ರವೆಂದು ಭಾವಿಸಿದ ಪಾರಿಜಾತ ಹೂವು ಮತ್ತು ಎಲೆಗಳಿಂದ ಹಲವಾರು ಆರೋಗ್ಯ ಲಾಭಗಳಿವೆ. ಏನೇನು ನೋಡೋಣ.

ತಂಪು
ಪಾರಿಜಾತದ ಎಲೆಗಳು ತಂಪಾಗಿರುವ ಕಾರಣ ದೇಹದ ಎಲ್ಲೇ ಉರಿ, ಗಾಯ, ಊತಗಳಿದ್ದರೂ ಇದರಿಂದ ತಯಾರಿಸಿದ ಎಣ್ಣೆ ಬಳಸುವುದರಿಂದ ಉರಿ ತಗ್ಗುತ್ತದೆ. ಇದರಲ್ಲಿರುವ ಬೆಂಜೋಯಿಕ್ ಆ್ಯಸಿಡ್ ಹಾಗೂ ಕೆರೋಟಿನ್ ಪಾರಿಜಾತದ ಎಲೆಗೆ ಈ ಗುಣ ನೀಡಿದೆ

ಜ್ವರ ಚಿಕಿತ್ಸಕ
ಆಯುರ್ವೇದ ಔಷಧಿಗಳಲ್ಲಿ ಪಾರಿಜಾತದ ಎಲೆಗಳನ್ನು ಮಲೇರಿಯಾ ಹಾಗೂ ಡೆಂಘೆ ಜ್ವರಗಳ ಚಿಕಿತ್ಸೆಗೆ ಔಷಧವಾಗಿ ಬಳಸಲಾಗುತ್ತದೆ. ಜ್ವರದ ಚಿಕಿತ್ಸೆಗೆ ಇದರ ತೊಗಟೆಯೂ ಉಪಯೋಗವಾಗುತ್ತದೆ. ಪಾರಿಜಾತದ ಎಣ್ಣೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಅಂಗಾಲಿಗೆ ತಿಕ್ಕುವುದರಿಂದ ಜ್ವರ ಕಡಿಮೆಯಾಗುತ್ತದೆ. 

ನೋವು ನಿವಾರಕ
ಮಂಡಿನೋವಿದ್ದಾಗ ಪಾರಿಜಾತದ ಎಲೆಗಳನ್ನು ಪೇಸ್ಟ್ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳುವುದರಿಂದ ಉಪಶಮನ ದೊರೆಯುತ್ತದೆ. 

ಕ್ಯಾನ್ಸರ್ ತಡೆ
ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗದಂತೆ ನೋಡಿಕೊಳ್ಳುವ ಗುಣ ಪಾರಿಜಾತದ ಎಲೆಗಳಿಗಿದೆ. ಇದರಲ್ಲಿರುವ ಅತ್ಯಧಿಕ ಆ್ಯಂಟಿ ಆಕ್ಸಿಡೆಂಟ್ ಗುಣ ಇದಕ್ಕೆ ಕಾರಣವಾಗಿದೆ. 20-25 ಎಲೆಗಳನ್ನು ಗ್ರೈಂಡ್ ಮಾಡಿ ನೀರಿನಲ್ಲಿ ಅರ್ಧದಿಂದ 1 ಗಂಟೆಗಳ ಕಾಲ ಕುದಿಸಿ. ನಂತರ ಶೋಧಿಸಿ ಪ್ರತಿದಿನ ಕುಡಿಯುವ ಅಭ್ಯಾಸ  ಉತ್ತಮ.

ಕೆಮ್ಮಿಗೆ ಮುಕ್ತಿ
ಪಾರಿಜಾತ ಹೂವು ಹಾಗೂ ಎಲೆಗಳಲ್ಲಿರುವ ಎಥನಾಲ್ ಎಂಬ ಕಾಂಪೌಂಡ್ ಕೆಮ್ಮನ್ನು ಗುಣ ಮಾಡುತ್ತದೆ. ಈ ಗುಣವೇ ಅಸ್ತಮಾ ನಿವಾರಣೆಗೆ ಕೂಡಾ ಸಹಕಾರಿಯಾಗಿದೆ. ಪಾರಿಜಾತ ಎಲೆಗಳನ್ನು ಕುದಿಸಿದ ನೀರಿಗೆ ಸ್ವಲ್ಪ ಶುಂಠಿ ಅಥವಾ ಜೇನುತುಪ್ಪ ಸೇರಿಸಿ ಸೇವಿಸಿ. 

ಮಲಬದ್ಧತೆ ನಿವಾರಣೆ
ಪಾರಿಜಾತದ ಎಲೆಗಳಲ್ಲಿರುವ ಮಿನರಲ್‌ಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಪಾರಿಜಾತದ ಟೀ(ಕಷಾಯ) ದಿನಕ್ಕೊಮ್ಮೆ ಸೇವಿಸಿದರೆ ಸಾಕು. 

ಮೂಳೆ ಸವೆತ ತಪ್ಪಿಸುತ್ತದೆ
ದೇಹದಲ್ಲಿ ಮೂಳೆ ಸವೆತ ಸಮಸ್ಯೆಯನ್ನು ನಿವಾರಣೆ ಮಾಡುವ ಶಕ್ತಿ ಪಾರಿಜಾತ ಕಷಾಯಕ್ಕಿದೆ. ಏಕೆಂದರೆ ಪಾರಿಜಾತ ಎಲೆಯ ಕಷಾಯದಲ್ಲಿ ಕಾರ್ಟಿಲೆಜ್ ಎಂಬ ಅಂಶವಿದ್ದು, ಮೂಳೆ ಸವೆದು ಹೋದಾಗ ಮತ್ತೆ ಮೂಳೆಗಳಿಗೆ ಕಾರ್ಟಿಲೆಜ್ ಅಂಶವನ್ನು ಪಾರಿಜಾತ ಕಷಾಯ ನೀಡುತ್ತದೆ.
****


*******


No comments:

Post a Comment