SEARCH HERE

Tuesday, 1 January 2019

ರಾಹು ಕಾಲ rahu kala kaala


ರಾಹು ಕಾಲ ವಿಚಾರ🕉
ಸಾಧಾರಣವಾಗಿ ಎಲ್ಲರೂ ಪ್ರತಿಯೊಂದು ಕರ್ಮಗಳಲ್ಲಿ ರಾಹು ಕಾಲವನ್ನು ನೋಡುವ ಸಂಪ್ರದಾಯ ಬಂದಿದೆ. ಆದರೆ ಈ ರಾಹು ಕಾಲವು ಎಲ್ಲಾ ಶುಭಕರ್ಮಗಳಿಗೆ ನೋಡಬೇಕಾದ ಅವಶ್ಯಕತೆ ಇಲ್ಲ. 
ಮೊದಲು ಈ ರಾಹುಕಾಲವೆಂದರೆ ಏನು ಎಂದು ವಿಚಾರಮಾಡೋಣ. 
ರವ್ಯಾದಿ ಸಪ್ತ ವಾರೇಷು ಅಶ್ವಗತ್ಯಾ ವಾಮಾವರ್ತೇನ ಯಾಮಾರ್ಧಂ ಪ್ರಾಪ್ಯ ಸಪ್ತದಿಕ್ಷು ರಾಹೋರ್ಗಮನಂ ರಾಹುಕಾಲಃ ಇತ್ಯುಚ್ಯತೇ ಬುಧೈಃ
ಅಂದರೆ ವಾರದ ಪ್ರತಿ ದಿನವೂ ರಾಹುವು ಕುದುರೆಯಂತೆ ವೇಗವಾಗಿ, ಹಿಮ್ಮುಖವಾಗಿ ಒಂದೊಂದು ದಿಕ್ಕಿನಲ್ಲಿ ಅರ್ಧಯಾಮದಷ್ಟು ಸಮಯ ಸಂಚರಿಸುತ್ತಾನೆ. ಆ ಸಮಯವನ್ನು ರಾಹುಕಾಲವೆಂದು ಕರೆಯುತ್ತಾರೆ. ರಾಹುವು ಪ್ರತಿದಿನ ದಿಕ್ಕಿನಲ್ಲಿ ಕ್ರಮವಾಗಿ ಸಂಚರಿಸುವುದಿಲ್ಲ. ಒಂದೊಂದು ದಿನ ಒಂದೊಂದು ದಿಕ್ಕಿನಲ್ಲಿ ಸಂಚರಿಸುತ್ತಾನೆ. ಆದ್ದರಿಂದ ಒಂದೊಂದು ದಿನ ಒಂದೊಂದು ರೀತಿಯ ಸಮಯ. 
ಪಶ್ಚಾದರ್ಕೋ, ವಿಧೌ ವಹ್ನೌ, ಸೌಮ್ಯಾಂ ಜ್ಞೇ, ವಾಯವೇ ಕುಜೇ, ರಕ್ಷೋ ದಿಶಿ ಭೃಗೌ, ಯಾಮ್ಯಾಂ ಗುರೌ, ಈಶೇ ಶನೌ ದಿನೇ
ರಾಹುರ್ಭ್ರಮತಿ ಯಾಮಾರ್ಧಾತ್ ಅಶ್ವಗತ್ಯಾ ಚ ವಾಮತಃ(ಸತ್ಕೃತ್ಯಮುಕ್ತಾವಲೀ) 
ಹೀಗೆ ಒಂದೊಂದು ದಿನ ಒಂದೊಂದು ದಿಕ್ಕಿನಲ್ಲಿ ಸಂಚರಿಸುವ ಈ ರಾಹುವಿಗೆ ಅಭಿಮುಖವಾಗಿ ಯಾವ ಯಾವ ಕರ್ಮಗಳನ್ನು ಮಾಡಬಾರದು ಎಂದು ಹೇಳುತ್ತಾರೆ. 
ದ್ಯೂತೇ ಯುದ್ಧೇ ವಿವಾದೇ ಚ ಯಾತ್ರಾಯಾಂ ಸಮ್ಮುಖಂ ಸ್ಥಿತಮ್
ರಾಹುಂ ವಿವರ್ಜಯೇತ್ ಯತ್ನಾತ್ ಯದೀಚ್ಛೇತ್ಕರ್ಮಣಃಫಲಮ್ಎಂದು ಕೇವಲ ದ್ಯೂತ, ಯುದ್ಧ, ವಾದಾರಂಭಣ, ಯಾತ್ರೆಗೆ ಹೊರಡುವ ಮೊದಲು ಈ ರಾಹುಕಾಲವನ್ನು ನೋಡಬೇಕು. ಇತರ ಯಾವ ಶುಭ ಕಾರ್ಯಗಳಿಗೆ ರಾಹುಕಾಲವನ್ನು ನೋಡುವ ಅವಶ್ಯಕತೆ ಇಲ್ಲ. 
ಆದರೆ ಯಮಘಂಟಕಾಲ ಮಾತ್ರ ಹೀಗಲ್ಲ. ಪ್ರತಿಯೊಂದು ಕರ್ಮಗಳಲ್ಲಿ ಇದನ್ನು ಬಿಡಲೇ ಬೇಕು. 
ಏನಿದೀ ಯಮಘಂಟಕಾಲ? 
ಯಮಂ ಘಂಟಯತೀತಿ ಯಮಘಂಟಃ(ಶಬ್ದಕಲ್ಪದ್ರುಮ) ಅಂದರೆ ಯಮನಿಗೆ ಸಂಬಂಧಿಸಿದ ಕಾಲವಿಶೇಷವು ಇದು. ಇದನ್ನು ಜ್ಯೋತಿಷ್ಶಾಸ್ತ್ರದಲ್ಲಿ ಒಂದು ಯೋಗವಿಶೇಷ ಎಂದು ಕರೆದಿದ್ದಾರೆ. 
ಅಂದರೆ ವಾರದ ಒಂದೊಂದು ದಿನವೂ ಬರುವ ಬೇರೆ ಬೇರೆ ನಕ್ಷತ್ರಗಳ ಯೋಗವೇ ಯಮಘಂಟಕಾಲ. ಆದರೆ ಆ ನಕ್ಷತ್ರದ ಯೋಗವಿದ್ದಷ್ಟು ಸಮಯವು ತ್ಯಾಜ್ಯವಲ್ಲ. ಹೊರತು ಮೊದಲಿನ ಅಷ್ಟನಾಡಿಕಾವಷ್ಟೇ ತ್ಯಾಜ್ಯ. 
ಯಮಘಂಟೇ ತ್ಯಜೇದಷ್ಟೌ ಮೃತ್ಯೌ ದ್ವಾದಶನಾಡಿಕಾ
ಅನ್ಯೇಷಾಂ ಪಾಪಯೋಗಾನಾಂ ಮಧ್ಯಾಹ್ನಾತ್ ಪರತಃಶುಭಮ್(ಸಾರಸಂಗ್ರಹ) 
ಈ ಕಾಲದಲ್ಲಿ ಯಾವ ಶುಭಕರ್ಮಗಳನ್ನೂ ಮಾಡಬಾರದು. 
ಮಾಡಿದರೆ ಏನು ದೋಷ ಎಂದು ಹೇಳುತ್ತಾರೆ. 
ಏಭಿರ್ಜಾತೋ ನ ಜಿವೇತ ಯದಿ ಶಕ್ರಸಮೋ ಭವೇತ್
ವಿವಾಹೇ ವಿಧವಾ ನಾರೀ ಯಾತ್ರಾಯಾಂ ಮರಣಂ ಭವೇತ್
ನಿಷ್ಫಲಂ ಕೃಷಿವಾಣಿಜ್ಯಂ ವಿದ್ಯಾರಂಭೇ ಚ ಮೂರ್ಖತಾ
ಗೃಹಪ್ರವೇಶೇ ಭಂಗಃ ಸ್ಯಾತ್ ಚೂಡಾಯಾಂ ಮರಣಂ ಧ್ರುವಮ್
ಋಣದಾನೇ ಫಲಂ ನಾಸ್ತಿ ವ್ರತದಾನೇ ಚ ನಿಷ್ಫಲೇ
ಶುಭಕರ್ಮಾಣಿ ಸರ್ವಾಣಿ ನೈವ ಕುರ್ಯಾತ್ ವಿಚಕ್ಷಣಃ(ಜ್ಯೋತಿಸ್ತತ ್ವಮ್) 

ರಾಹು ಕಾಲ ವಿಚಾರ.. ಸಾಧಾರಣವಾಗಿ ಎಲ್ಲರೂ ಪ್ರತಿಯೊಂದು ಕರ್ಮಗಳಲ್ಲಿ ರಾಹು ಕಾಲವನ್ನು ನೋಡುವ ಸಂಪ್ರದಾಯ ಬಂದಿದೆ.

******


Ravi : 

*ರಾಹು ಕಾಲ ತಿಳಿಯಲು ಸರಳಸೂತ್ರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಿನದ ಕಾಲವನ್ನು ಮೂರು ಭಾಗವಾಗಿ ಮಾಡಿರುವರು *ರಾಹುಕಾಲ ಗುಳಿಕ ಕಾಲ ಯಮಗಂಡ ಕಾಲ* ಇದರಲ್ಲಿ ರಾಹು ಕಾಲಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರುವರು .....ರಾಹು ಕಾಲವೂ ಪ್ರತಿದಿನ ಒಂದೇ ಸಮಯದಲ್ಲಿ ಬರುವುದಿಲ್ಲ ....ಏಳು ದಿನವೂ ಬೇರೆ ಬೇರೆ ಸಮಯದಲ್ಲಿ ಬರುವುದು ......ಆ ಸಮಯದಲ್ಲಿ ಸಾಮಾನ್ಯವಾಗಿ ಶುಭ ಕಾರ್ಯಗಳು ಮಾಡುವುದಿಲ್ಲ ......ಈ ಕಾರಣದಿಂದಲೇ ರಾಹುಕಾಲಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರುವುದು ......ರಾಹು ಕಾಲವು ದಿನದಲ್ಲಿ ಒಂದೂವರೆ ಗಂಟೆ ಕಾಲ ಇರುವುದು ......ಪ್ರತೀ ದಿನ ರಾಹು ಕಾಲದ ಸಮಯ ಬದಲಾವಣೆ ಆಗುವುದರಿಂದ ಈ ಸಮಯವನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಲು ಒಂದು ಸರಳ ಸೂತ್ರ ಇರುವುದು.

ವಾರದ ಏಳು ದಿನಕ್ಕೆ ಒಂದೊಂದು ಇಂಗ್ಲಿಷ್ ಅಕ್ಷರವನ್ನು ಕೊಡುವುದು ಸೋಮವಾರಕ್ಕೆ E ಮಂಗಳವಾರಕ್ಕೆ B ಬುಧವಾರಕ್ಕೆ H ಗುರುವಾರಕ್ಕೆ A ಶುಕ್ರವಾರಕ್ಕೆ G ಶನಿವಾರಕ್ಕೆ F ಭಾನುವಾರಕ್ಕೆ C

EBHAGFC

ಸೋಮವಾರ E ಇಂಗ್ಲೀಷ್ ವರ್ಣಮಾಲೆಯಲ್ಲಿ 5ನೇ ಸ್ಥಾನದಲ್ಲಿದೆ ಅದರ ಅರ್ಧ 2 1/2 ಇದನ್ನು ಅದರೊಂದಿಗೆ ಕೂಡಿಸಿದರೆ ಬರುವ ಮೊತ್ತ 7 1/2 ಸೋಮವಾರ 7.30 ರಿಂದ 9 ರವರೆಗೆ ರಾಹುಕಾಲ

ಮಂಗಳವಾರ B ಇಂಗ್ಲಿಷ್ ವರ್ಣಮಾಲೆಯಲ್ಲಿ 2 ನೇ ಸ್ಥಾನದಲ್ಲಿದೆ ....2 ರ ಅರ್ಧ 1 ಇದನ್ನು 2 ರೊಂದಿಗೆ ಕೂಡಿಸಿದರೆ ಬರುವ ಮೊತ್ತ 3 (2+1) ....

ಮಂಗಳವಾರ 3 ರಿಂದ 4.30 ರವರೆಗೆ ರಾಹುಕಾಲ

ಬುಧವಾರ H ಇಂಗ್ಲಿಷ್ ವರ್ಣಮಾಲೆಯಲ್ಲಿ H 8 ನೇ ಸ್ಥಾನದಲ್ಲಿದೆ 8 ರ ಅರ್ಧ 4 ಇದನ್ನು 8 ರೊಂದಿಗೆ ಕೂಡಿಸಿದರೆ ಬರುವ ಮೊತ್ತ12 (8+4=12) ಬುಧವಾರ 12ರಿಂದ 1.30 ರವರೆಗೆ ರಾಹುಕಾಲ

ಗುರುವಾರ A ಇಂಗ್ಲಿಷ್ ವರ್ಣಮಾಲೆಯಲ್ಲಿ A 1ನೇ ಸ್ಥಾನದಲ್ಲಿದೆ ...1 ರ ಅರ್ಧ 1/2....ಇದನ್ನು 1ರೊಂದಿಗೆ ಕೂಡಿಸಿದರೆ ಬರುವ ಮೊತ್ತ 11/2 (1 +1/2 =1 1/2 ) ಗುರುವಾರ1 .30 ರಿಂದ 3 ರವರೆಗೆ ರಾಹುಕಾಲ

ಶುಕ್ರವಾರ G ಇಂಗ್ಲಿಷ್ ವರ್ಣಮಾಲೆಯಲ್ಲಿ G 7ನೇ ಸ್ಥಾನದಲ್ಲಿದೆ 7 ರ ಅರ್ಧ 3 1/2 ಇದನ್ನು 7 ರೊಂದಿಗೆ ಕೂಡಿಸಿದರೆ ಬರುವ ಮೊತ್ತ 10 1/2 (7+3 1/2 =10 1/2) ಶುಕ್ರವಾರ 10 .30 ರಿಂದ 12 ರವರೆಗೆ ರಾಹುಕಾಲ

ಶನಿವಾರ F ಇಂಗ್ಲಿಷ್ ವರ್ಣಮಾಲೆಯಲ್ಲಿ F 6ನೇ ಸ್ಥಾನದಲ್ಲಿದೆ 6 ರ ಅರ್ಧ 3 ಇದನ್ನು 6 ರೊಂದಿಗೆ ಕೂಡಿಸಿದರೆ ಬರುವ ಮೊತ್ತ 9 ( 6+3=9) ಶನಿವಾರ 9 ರಿಂದ 10.30ರ ತನಕ ರಾಹುಕಾಲ

ಭಾನುವಾರ C ಇಂಗ್ಲಿಷ್ ವರ್ಣ ಮಾಲೆಯಲ್ಲಿ C 3 ನೇ ಸ್ಥಾನದಲ್ಲಿದೆ ಅದರ ಅರ್ಧ 1 1/2 ಇದನ್ನು 3 ರೊಂದಿಗೆ ಕೂಡಿಸಿದರೆ ಬರುವ ಮೊತ್ತ 4 1/2 (3 + 1 1/2=4 1/2) ಭಾನುವಾರ 4.30ರಿಂದ 6 ರ ತನಕ ರಾಹುಕಾಲ.
*********

 ‌            ‌                              ‌        ‌      ‌                                                                     ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡಕಾಲಗಳ ಅರ್ಥ ಔಚಿತ್ಯ ಮತ್ತು ಪ್ರಾಮುಖ್ಯತೆ !

ನಮ್ಮ ಹಿಂದೂ ಧರ್ಮದಲ್ಲಿ ಮುಖ್ಯವಾದ ಕೆಲಸ-ಕಾರ್ಯಗಳಿಗೆ ಮತ್ತು ಹಬ್ಬಗಳಾಚರಣೆಗೆ ಮುಹೂರ್ತ ನೋಡುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡ ಪದ್ಧತಿ. ನಮ್ಮವರು ಇಂದಿಗೂ ಹಬ್ಬ, ಮದುವೆ, ಗೃಹಪ್ರವೇಶ, ಮುಂಜಿವೆ ಮುಂತಾದ ಶುಭಕಾರ್ಯಗಳಿಗೆ ಮುಹೂರ್ತ ನೋಡುತ್ತಾರೆ. ಅಷ್ಟೇ ಏಕೆ, ರಾಜಕಾರಣಿಗಳು ಒಂದು ಹೆಜ್ಜೆ ಇಡಬೇಕೆಂದರೂ ಮುಹೂರ್ತ ನೋಡುತ್ತಾರೆ!

ಯಾವ ದೇವರು? ಯಾವ ಶನಿ? ಯಾವ ನಕ್ಷತ್ರ? ಎನ್ನುವ ನಾಸ್ತಿಕರೂ ಸಹ ಮನೆಯ ಹಿರಿಯರ ಮಾತು ಕೇಳಿಕೊಂಡು ತೆಪ್ಪಗೆ ಉತ್ತಮ ಮುಹೂರ್ತದಲ್ಲೇ ಮದುವೆ ಮತ್ತು ಗೃಹಪ್ರವೇಶ ಮಾಡಿಕೊಳ್ಳುತ್ತಾರೆ. ಆದರೆ ಹೊರಗೆ ತಮ್ಮಷ್ಟಕ್ಕೆ ತಾವೇ "ಹಿಂದೂ ಧರ್ಮಾಚರಣೆ ವಿರೋಧಿ"ಗಳು ಎಂದು ಬಿಂಬಿಸಿಕೊಳ್ಳುವ ಮೂಢರು ನಮ್ಮ ಪದ್ಧತಿಗಳನ್ನು ಮೂಢನಂಬಿಕೆ ಎಂದು ಬೊಬ್ಬೆ ಹಾಕುತ್ತಿರುತ್ತಾರೆ.

ಇಂಥಹವರು ಮೊದಲೇ ಬರೆದಿಡಬೇಕು "ನಾನು ಸತ್ತಾಗ ಯಾವುದೇ ಪೂಜೆ ಮಾಡುವ ಹಾಗಿಲ್ಲ ಮತ್ತು ಯಾವುದೇ ತಿಥಿ ಕೂಡ ಮಾಡುವ ಹಾಗಿಲ್ಲ" ಎಂದು. ಏಕೆಂದರೆ ವ್ಯಕ್ತಿ ಸತ್ತಾಗ ಸಮಯ ಮತ್ತು ನಕ್ಷತ್ರ ನೋಡಿಕೊಂಡೇ ತಿಥಿ ಮಾಡುವ ಪದ್ಧತಿ ನಮ್ಮಲ್ಲಿದೆ ಎಂಬುದು ಗೊತ್ತಿರದ ಪೆದ್ದರಿವರು.

 ನಾವು ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡಕಾಲ ಎನ್ನುವುದನ್ನು ಕೇಳಿದ್ದೇವೆ. ಆದರೆ ಆ ಕಾಲಗಳ ಮಹತ್ವ ಇಂದಿಗೂ ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಿದ್ದವರು ಹೇಳುವುದಿಲ್ಲ. ಹೇಳಿದರೆ ಎಲ್ಲಿ ನಮ್ಮನ್ನು ಅಪಹಾಸ್ಯ ಮಾಡುತ್ತಾರೋ ಎಂಬ ಭಯ ಅವರಿಗಿರಬಹುದು!

ಕಾಲಗಳ ಮಹತ್ವ ಗೊತ್ತಿದ್ದವರು ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಲೇ ಹೋಗುತ್ತಿರುತ್ತಾರೆ. ಇವರ ಯಶಸ್ಸನ್ನು ನೋಡಿ ಕೆಲವರು "ಇವನಿಗೇನೂ ಬರೋದೇ ಇಲ್ಲ! ಆದರೂ ಇವನೆಂಗೆ ಇಷ್ಟೆತ್ತರಕ್ಕೇರಿದ" ಎಂದು ಹುಬ್ಬೇರಿಸಿಕೊಂಡು ಹೊಟ್ಟೆಕಿಚ್ಚು ಪಡುತ್ತಾ ಚಡಪಡಿಸುತ್ತಿರುತ್ತಾರೆ.

ಆದರೆ, ಸಮಯ ನೋಡಿಕೊಂಡು ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ಸಾಗುತ್ತವೆ ಎಂಬ ಗುಟ್ಟು ಬಹಳಷ್ಟು ಜನರಿಗೆ ಗೊತ್ತಿಲ್ಲ. ಗೊತ್ತಿದ್ದು ಗೊತ್ತಿದ್ದು ಅವರು ನಿಷ್ಕಾಳಜಿ ಮಾಡುತ್ತಿರಬಹುದು ಎನ್ನಬಹುದು ಅಷ್ಟೇ. 

ರಾಹು ಕಾಲ

ಸಾಮಾನ್ಯವಾಗಿ ರಾಹುಕಾಲವು ವಾರದ ಒಂದೊಂದು ದಿನ ಸರಿಸುಮಾರು ಒಂದೇ ಸಮಯದಲ್ಲಿರುತ್ತದೆ. 

ರಾಹುಕಾಲಕ್ಕೆ "ವಿಷಘಳಿಗೆ" ಎಂದು ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮುಖ್ಯವಾದ ಕೆಲಸಗಳಿಗೆ ಹೊರಡದಿರುವುದು ಸೂಕ್ತ. ಏಕೆಂದರೆ ಯಾವ ಉದ್ದೇಶ ಇಟ್ಟುಕೊಂಡು ನಾವು ಈ ವೇಳೆಯಲ್ಲಿ ಹೊರಟಿರುತ್ತೇವೆಯೋ ಅದು ಯಶಸ್ಸಾಗುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೇ ಬಂದಿದೆ. ರಾಹುಕಾಲದಲ್ಲೇನಾದರೂ ಹೋದಿರೆನ್ನಿ, ಆಗಬೇಕಾದ ಕೆಲಸ ಲೇಟಾಗುತ್ತದೆ ಅಥವಾ ಏನಾದರೂ ಅಡೆತಡೆ ಬರುತ್ತದೆ ಇಲ್ಲವೇ ಆಗೋದೇ ಇಲ್ಲ. ಈ ಸಮಯದಲ್ಲಿ ಹಣದ ವ್ಯವಹಾರ ಮಾಡುವುದು ಕೂಡ ಸೂಕ್ತವಲ್ಲ. ಉದಾಹರಣೆಗೆ ಖರೀದಿ, ಸಾಲ ಕೊಡುವುದು-ಪಡೆಯುವುದು, ಮತ್ತಿತರೆ. ಇನ್ನು ಕೆಲವೊಂದು ಮಹತ್ವದ ಮಾತುಕತೆಗಳನ್ನು ಕೂಡ ರಾಹುಕಾಲದಲ್ಲಿ ಮಾಡದಿರುವುದು ಸೂಕ್ತ. ಏಕೆಂದರೆ ಮಾತುಕತೆಯಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದಿಲ್ಲ.

ಪ್ರತಿನಿತ್ಯ ಕೇವಲ ಒಂದೂವರೆ ಗಂಟೆಗಳಷ್ಟಿರುವ ರಾಹುಕಾಲವು, ರಾಹುದೋಷ ನಿವಾರಣಾ ಪೂಜೆಗೆ ಮತ್ತು ಮಾತೆ ದುರ್ಗಾದೇವಿಯ ಆರಾಧನೆಗೆ ತುಂಬಾ ಸೂಕ್ತ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ರಾಹುಕಾಲ ನಮಗೆ ಲಾಭವನ್ನೂ ತರುತ್ತದೆ. ಹೇಗೆಂದರೆ ನಮಗೇನಾದರೂ ಕೆಲಸ ಆಗದಿರುವ ಹಾಗೆ ಮಾಡಬೇಕೆಂದರೆ, ತೊಂದರೆಗಳಿಂದ ನಮಗೆ ಖುಷಿಯಾಗಬೇಕೆಂದರೆ ರಾಹುಕಾಲವನ್ನು ಆಯ್ಕೆ ಮಾಡಿಕೊಳ್ಳಬೇಕು! ಬೇಕಿದ್ದವರು ಪರೀಕ್ಷಿಸಿಕೊಳ್ಳಬಹುದು. 

ಗುಳಿಕ ಕಾಲ

ಗುಳಿಕ ಕಾಲವೂ ಕೂಡ ಪ್ರತಿನಿತ್ಯ ವಾರದಲ್ಲೊಂದೊಂದು ದಿನ ಒಂದೂವರೆ ಗಂಟೆಗಳಷ್ಟಿರುತ್ತದೆ. ರವಿವಾರ ಮಧ್ಯಾಹ್ನ 3 ರಿಂದ 4-30ರವರೆಗೆ ಗುಳಿಕ ಕಾಲ. ಆದರೆ, ಉಳಿದ ದಿನ ಬೇರೆ ಬೇರೆ ಸಮಯದಲ್ಲಿರುತ್ತದೆ ಎಂಬುದು ಗಮನದಲ್ಲಿರಿಸಿಕೊಂಡಿರಬೇಕು. ಈ ಗುಳಿಕ ಕಾಲದ ವಿಶೇಷವೇನೆಂದರೆ ಈ ಸಮಯದಲ್ಲಿ ಮಾಡಿದ ಕೆಲಸ ಕಾರ್ಯಗಳು ಪುನಃ ಮರುಕಳಿಸುತ್ತವೆ ಎಂಬ ನಂಬಿಕೆ ಹಿಂದಿನಿಂದ ಬಂದಿದೆ.

ಈ ಸಮಯದಲ್ಲಿಯೇ ಸಾಮಾನ್ಯವಾಗಿ ಗೃಹಪ್ರವೇಶ, ಹೊಸ ವಾಹನ ಮತ್ತು ಬಂಗಾರ ಖರೀದಿ ಮಾಡುತ್ತಾರೆ. ಏಕೆಂದರೆ ಇದರಿಂದ ಮತ್ತೆ ಹೊಸ ಮನೆ ಗೃಹಪ್ರವೇಶ ಮತ್ತು ವಾಹನ, ಬಂಗಾರ ಖರೀದಿ ಯೋಗ ಬರುತ್ತದೆ ಎಂಬ ನಂಬಿಕೆ.

ಆದರೆ, ಗುಳಿಕ ಕಾಲದಲ್ಲಿ ಮೃತ ವ್ಯಕ್ತಿಯ ಶರೀರವನ್ನು ಮನೆಯಿಂದ ಮಸಣಕ್ಕೆ ತೆಗೆದುಕೊಂಡು ಹೋಗುವ ಹಾಗಿಲ್ಲ. ಹಾಗೂ ಅಂತ್ಯಕ್ರಿಯೆ ನಡೆಸುವ ಹಾಗಿಲ್ಲ. ಇದಕ್ಕರ್ಥ ನಿಮಗೆ ಗೊತ್ತಾಗಿರಬಹುದು. ಗೊತ್ತಾಗದವರಿಗೆ ಗುಳಿಕ ಕಾಲದಲ್ಲಿ ಮಾಡಿದ ಕೆಲಸ-ಕಾರ್ಯಗಳು ಮರುಕಳಿಸುತ್ತವೆ ಎಂಬುದನ್ನು ನೆನಪಿಸಬೇಕಾಗುತ್ತದೆ.

ಗುಳಿಕ ಕಾಲದ ಇನ್ನೊಂದು ಮಜವಾದ ವಿಷಯವೆಂದರೆ, ಮದುವೆಯ ಮುಹೂರ್ತವನ್ನು ಈ ಸಮಯದಲ್ಲಿ ಮಾಡುವುದಿಲ್ಲ. ಏಕೆಂದರೆ, ಮದುವೆ ಎಂಬುದು ಜೀವನದಲ್ಲಿ ಒಂದೇ ಬಾರಿ ಬರುವುದು. ಗುಳಿಕ ಕಾಲದಲ್ಲಿ ಮಾಡಿದರೆ? ಅರ್ಥವಾಗಿರಬಹುದು ಆಸ್ತಿಕರಿಗೆ!

ಯಮಗಂಡ ಕಾಲ

ಯಮಗಂಡ ಕಾಲವೂ ಪ್ರತಿನಿತ್ಯ ಒಂದೂವರೆ ಗಂಟೆಗಳಷ್ಟಿರುತ್ತದೆ. ರವಿವಾರ ಮಧ್ಯಾಹ್ನ 12-00 ರಿಂದ 1-30 ರವರೆಗೆ. ಉಳಿದ ದಿನಗಳು ಬೇರೆ ಬೇರೆ ಸಮಯದಲ್ಲಿರುತ್ತದೆ. ಇದು ಯಾವುದೇ ಕೆಲಸಗಳನ್ನು ಅಂತ್ಯಗೊಳಿಸಬೇಕೆಂದರೆ ಉತ್ತಮ ಸಮಯ. ಈ ಸಮಯಕ್ಕೆ "ಸಾವಿನ ಸಮಯ" ಎಂದೂ ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮೃತ ಶರೀರದ ಅಂತ್ಯಕ್ರಿಯೆ, ತಿಥಿಯಾಚರಣೆ, ಶೋಕಾಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಹಾಗಿಲ್ಲ. ಮಾಡಿದಿರೆನ್ನಿ. ಆ ಕೆಲಸಕ್ಕೆ "ಎಳ್ಳು ನೀರು ಬಿಟ್ಟಂಗೆ!"

ಈ ಸಮಯದಲ್ಲಿ ಯಾವುದೇ ಮಾತುಕತೆ, ಹಣದ ವ್ಯವಹಾರ, ಖರೀದಿ ಮಾಡುವ ಹಾಗಿಲ್ಲ. ಮಾಡಲು ಹೋದರೆ ಅದು ಯಶಸ್ಸೂ ಆಗಲ್ಲ, ಅಲ್ಲದೇ ಅದೇ ಕೊನೆಯೂ ಕೂಡ ಆಗುತ್ತದೆ. ಮುಂದೆ ಆ ಯೋಗವೂ ಬರುವುದಿಲ್ಲ ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು.

ಅಲ್ಲದೇ ಉಲ್ಲಾಸ, ಉತ್ಸಾಹ ಕಳೆದುಕೊಂಡು ಬೇಸರಪಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ಯಮಗಂಡ ಕಾಲದಲ್ಲಿ ಮುಖ್ಯವಾದ ಕೆಲಸಕ್ಕೆ ಹೋಗುವುದನ್ನು ಮತ್ತು ಮಾತುಕತೆಗಳನ್ನು ತಪ್ಪಿಸಬೇಕು. ಯಾವುದೇ ವಿಷಯವನ್ನಾಗಲಿ ಅದಕ್ಕೊಂದು ಅಂತ್ಯ ಹಾಡಬೇಕೆಂದರೆ ಯಮಗಂಡ ಕಾಲ ಸೂಕ್ತ!

ಈ ಕಾಲವನ್ನೆಲ್ಲಾ ನೋಡುತ್ತಾ ಹೋದರೆ ಜಗತ್ತೇ ಕೆಲವೊಮ್ಮೆ ಸ್ತಬ್ದವಾಗುತ್ತದೆ ಎನ್ನುವವರಿಗೆ, "ವಿನಾಶಕಾಲೇ ವಿಪರೀತ ಬುದ್ಧಿ" ಎಂದು "ತುಂಬಿ ಬಂದವರಿಗೆ" ಏನ್ ಹೇಳಬೇಕು? ಕೆಲ ದುರಂತ ಮತ್ತು ಅಪಘಾತ ಆಗಿರುವ ಸಮಯ ಮತ್ತು ಅವರು ಮನೆ ಬಿಟ್ಟ ಸಮಯವನ್ನು ಪರಿಶೀಲಿಸಿದರೆ ಗೊತ್ತಾಗುತ್ತದೆ.
***

Edward Brought Home A Good Ford Car..

So every first letter of the word is considered for the day of that week

ಇನ್ನೂ ಸರಳವಾಗಿ ನೆನಪಿಟ್ಟುಕೊಳ್ಳಲು EDWARD BROUGHT HOME A GOOD FORD CAR. All first letter of the word!!!

Rest calculation is the same

Mother saw father wearing the turbon slowly.here mother means Monday 7.30to 9.saw_saturday too 10.30 . Father Friday 0.30 to 12. Wearing Wednesday 12to 1.30 .The. Thursday 1.30to3. turbon Thursday 3to 4.30. slowly Sunday 4.30to 6.

***

Who is Rahu & Who is Kethu ?
During  Samudra Mathana,  when Mohini roopi Srihari was distributing the amrutha, there were two rows, one for Daithyas and the other for gods. One daithya by name Swarbhanu,  came in a disguise and sat in the god’s row.   Srihari gave him also Amrutha.  At that time Sun and Moon,  {ಸೂರ್ಯಚಂದ್ರರು} on seeing that Swarbhanu has come in god’s row and taking amrutha, complained to Mohini.   Srihari through his Sudarshana removed the head of that daithya.  Srihari knowingly only distributed the amrutha to the daithya who has entered the god’s row.    Actually that daithya had done penance asking for Amrutha to be falling in his mouth.  As such, Srihari had allowed Amrutha to be swallowed upto its mouth, but it didn’t enter beyond mouth, Srihari removed his head.  As such, the head of the daithya was fixed to a snake’s body to become Rahu, and the other portion without head is called as Kethu.

Bhojana Vichara –
We can take food upto 12 hours before Eclipse.
For Children, patients, aged, and pregnants – upto 3 hours before Eclipse

Shubha Phala – this Grahana may give you some good result for you

Mishra phala –  As the name indicates it will be both Shubha + Ashubha

Ashubha Phala –  This Grahana may harm your progress.  But just hearing this don’t get panic.
There are so many suggestions for overcoming the Ashubha Phala which you can do –  Even if your Rashi is not having Ashubha Phala,  please  do all that is mentioned below to get maximum punya phala during Grahana.
 

Grahana Period is parva kaala – Whatever you are doing during Grahana –   the punya is more.
==================== 

What is Vedaramba? –
This is a period after start of  which period, we must not take eat/drink any thing. This will be 9 hours prior to Chandra Grahana and 12 hours before Surya Grahana, respectively.
 

Why we are keeping Darba on all the items during Grahana ? –
Darba is born from the body of Varaha devaru.   In Darba, there is sannidhana of Srihari, Brahma and Rudradevaru.  So, Darba is always pure.    During Grahana, all these items like milk, curds, vegetables, which are being kept will loose their power and becomes unusable.  But with the use of Darba being kept on these items, their shuddatwa will be maintained and one can use the same after Grahana also.

Do’s & Dont’s during Grahana Period :-
Do Snaana – during sparsha period (if possible do thirtha snaana)
Have Gopichandana, Mudradharana
Nirmalya Visarjana to be performed during Grahana, the same Nirmalya should be used for Tarpana.
During Madhyakaala give tarpana (tarpanaadhikarees) to sarva pitrugalu.
Do more Gayathri Japa as much as possible, for gents,  Vijayarayara kavacha, Madhwanama, Keshavanama,   etc for Ladies
Chant Vishnu Sahasra Naama /Harivayustuti/ Shanaishcharakrutha Narasimha Stotra, Navagraha Stotra
Do yathashakti daana – During Grahana we must do daanaas – Godaana, Suvarna Daana, Bhoodana, dhaanya dhaana   (yathaashakthi.)
After moksha of Grahana – take one more bath.
During Grahana Time avoid using Toilets,
Hastodaka on Grahana Day not to be given as Yatigalu will be fasting  on Grahana Day.
Clothes kept in Madi before Grahana are not to be used after Grahana.    After Grahana, do snaana and clothes to be kept freshly for drying.

 ಗ್ರಹಣಪೂರ್ವದಲ್ಲಿ ಒಣಗು ಹಾಕಿದ್ದ ಮಡಿ ಬಟ್ಟೆ  ಗ್ರಹಣ ನಂತರ ಬರುವುದಿಲ್ಲ. ಗ್ರಹಣ ಕಾಲದಲ್ಲಿ ಉಪಯೋಗಿಸಬಹುದು.  ಗ್ರಹಣಾನಂತರ ಮತ್ತೆ ಸ್ನಾನ ಮಾಡಿ ಹೊಸದಾಗಿ ಬಟ್ಟೆಯನ್ನು  ಒಣಗಿಹಾಕಿ ಕೊಳ್ಳಬೇಕು
Even those who are observing soothaka also must observe Grahana  snaana.
If you don’t know how to chant all the above – you can simply chant .
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ |
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |

हरे राम हरे राम राम राम हरे हरे ।
हरे कृष्ण हरे कृष्ण कृष्ण कृष्ण हरे हरे ।

Chanting of Sri Ramanama itself is equal to Vishnu Sahasra Naama.

Grahana Period is parva kaala – Whatever you are doing during  Grahana – it fetches  more punya .
Two days prior and two days after Grahana are Varjya for Shubha  Kaarya

Pregnants during Suryagrahana – Normally at the time of Surya Grahana,  pregnant women are supposed not to come out of the house, sunlight not to be allowed to enter either by doors or throws windows is to avoid harmful rays.
Please do not sleep during Grahana Time.
Even the Rajaswala ladies must observe Grahana snaana.
While doing sparsha snaana, we must do the snaana with the clothes  we are wearing in.
Avoid looking at Sun directly with naked eyes during Solar eclipse.
We must use Darbha ( Grass) during eclipse time for   protection of the water and food items from getting  contaminated. Keep Darbha  on all the  stored items like Water, Pickles, Milk, Curd, etc.
In case of death anniversary falling on the eclipse day, regular shraddha will be performed only after the eclipse is over
*******

No comments:

Post a Comment