SEARCH HERE

Tuesday, 1 January 2019

ಶಿವ ಪೂಜೆ ಮಾಡಿ ಗ್ರಹ ದೋಷ ನಿವಾರಣೆ gruha dosha nivarane by shiva pooja


ಶಿವ ಪೂಜೆ ಮಾಡಿ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಿ 

ಸೂರ್ಯನಿಗೆ ಸಂಬಂಧಿಸಿದ ದೋಷ 
ಸೂರ್ಯನಿಗೆ ಸಂಬಂಧಿಸಿದ ದೋಷ ಇದ್ದಲ್ಲಿ ಶಿವನಿಗೆ ಕೆಂಪು ಹೂವು ಮತ್ತು ಅದರ ಎಲೆಯನ್ನು ಅರ್ಪಿಸಬೇಕು. ಪಂಚಪೊಹಾರ್ ಪೂಜೆಯನ್ನು ಮಾಡಬೇಕು. ಕೆಂಪು ಹೂವು ಸೂರ್ಯನಿಗೆ ಅತಿ ಪ್ರಿಯವಾದುದು

ಚಂದ್ರನಿಗೆ ಸಂಬಂಧಿಸಿದ ದೋಷ 
ಚಂದ್ರನಿಗೆ ಸಂಬಂಧಿಸಿದ ದೋಷವಿದ್ದರೆ ಶಿವನಿಗೆ ಹಸುವಿನ ಹಾಲನ್ನು ನೀಡಬೇಕು. ಚಂದ್ರ ದೇವರು ಇದರಿಂದ ಪ್ರಸನ್ನಗೊಳ್ಳುತ್ತಾರೆ ಎಂದು ಹೇಳಲಾಗಿದೆ. ಅಂತೆಯೇ ಸೋಮವಾರ ಉಪವಾಸವಿರುವುದು ಕೂಡ ಶಿವನ ಅನುಗ್ರಹ ಪಡೆಯಲು ಒಳ್ಳೆಯದು.

ಮಂಗಳನಿಗೆ ಸಂಬಂಧಿಸಿದ ದೋಷ 
ಮಂಗಳನಿಂದ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ ಶಿವನಿಗೆ ಅಮೃತ ಬಳ್ಳಿಯ ರಸವನ್ನು ನೀಡಬೇಕು. ಲಿಂಗಕ್ಕೆ ಇದನ್ನು ಅಭಿಷೇಕ ರೂಪದಲ್ಲಿ ಅರ್ಪಿಸಬೇಕು.

ಬುಧಕ್ಕೆ ಸಂಬಂಧಿಸಿದ ದೋಷ 
ವಿದರ್ಭ ಸಸ್ಯದ ರಸವನ್ನು ದೇವರಿಗೆ ನೀಡಿ ಈ ದೋಷದಿಂದ ಪರಿಹಾರ ಕಂಡುಕೊಳ್ಳಬಹುದು

ಗುರುವಿಗೆ ಸಂಬಂಧಿಸಿದ ದೋಷ
 ಗುರುಗ್ರಹಕ್ಕೆ ಸಂಬಂಧಿಸಿದ ದೋಷ ನಿವಾರಣೆಗಾಗಿ ಶಿವ ಅಭಿಷೇಕದ ಸಮಯದಲ್ಲಿ ಹಾಲಿಗೆ ಅರಶಿನ ಸೇರಿಸಿ ಕೊಡಬೇಕು. ಗುರುಗ್ರಹವನ್ನು ಬೃಹಸ್ಪತಿ ದೇವ ಮತ್ತು ಹಳದಿ ಬಣ್ಣ ಆಳುತ್ತದೆ, ಆದ್ದರಿಂದ ಹಾಲಿಗೆ ಅರಶಿನ ಮಿಶ್ರ ಮಾಡಿ ನೀಡುವುದರಿಂದ ಗುರು ಗ್ರಹ ದೋಷ ನಿವಾರಣೆಯಾಗುತ್ತದೆ.

ಶುಕ್ರ ಗ್ರಹಕ್ಕೆ ಸಂಬಂಧಿಸಿದ ದೋಷ 
ಶುಕ್ರ ಗ್ರಹದ ದೋಷ ಪರಿಹಾರಕ್ಕಾಗಿ ನೀವು ಪಂಚಾಮೃತ ಮತ್ತು ತುಪ್ಪವನ್ನು ದೇವರಿಗೆ ನೀಡಬೇಕು. ತುಪ್ಪ, ಮೊಸರು, ಜೇನು, ಹಾಲು, ಸಕ್ಕರೆಯಿಂದ ಮಾಡಿರುವುದೇ ಪಂಚಾಮೃತವಾಗಿದೆ. ಐದು ಭಕ್ಷ್ಯಗಳನ್ನು ಪಂಚಾಮೃತ ವಿವರಿಸುತ್ತದೆ.

ಶನಿಗೆ ಸಂಬಂಧಿಸಿದ ದೋಷ 
ಜನ್ಮಕುಂಡಲಿಯಲ್ಲಿ ಶನಿಯ ಕಾರಣದಿಂದ ದೋಷಗಳು ಉದ್ಭವಿಸಿದ್ದರೆ, ಕಬ್ಬಿನ ಹಾಲಿನ ಅಭಿಷೇಕವನ್ನು ಶಿವನಿಗೆ ಮಾಡಬೇಕು.

ರಾಹು ಕೇತುವಿನಿಂದ ದೋಷ 
ನೀರಿನಲ್ಲಿ ಕುಶ್ ಸಸ್ಯವನ್ನು ಮಿಶ್ರ ಮಾಡಿ ರಾಹು ಕೇತುವಿಗೆ ದೋಷ ಪರಿಹಾರಕ್ಕಾಗಿ ಶಿವನಿಗೆ ಅರ್ಪಿಸಬೇಕು.

ಸರಳ ಪರಿಹಾರ ಶ್ರೀ ಸುಧಾಕರ 🙌🕉🙌
********


No comments:

Post a Comment