SEARCH HERE

Tuesday 1 January 2019

ರುದ್ರಾಕ್ಷಿ rudrakshi parihara


.
ರುದ್ರಾಕ್ಷಿ ಮಹಿಮೆ ಮತ್ತು ಕಥೆ.

ಯಾರು ರುದ್ರಾಕ್ಷಿಗಳ ಧರಿಸಿರುತ್ತಾರೋ ಅವರಿಗೆ ಪಾಪಗಳಿರುವುದಿಲ್ಲ. ಬಹಳ ಪುಣ್ಯ ಲಭಿಸುತ್ತದೆ ಎಂದು  ಶೃತಿ, ಸ್ಮೃತಿ , ಪುರಾಣಗಳು ಹೇಳುತ್ತವೆ. ರುದ್ರಾಕ್ಷಿ ಮತ್ತು ಸ್ಪಟಿಕಮಣಿಯನ್ನು ಸೇರಿಸಿ ಚಿನ್ನದಲ್ಲಿ ಸುತ್ತಿಸಿ ಧರಿಸಿದವರಿಗೆ ರುದ್ರ ಲೋಕ ಪ್ರಾಪ್ತಿ ಯಾಗುತ್ತದೆ. ರುದ್ರಾಕ್ಷಿ ಸರದಿಂದ ಜಪ ಮಾಡಿದರೆ ಅನಂತ ಫಲ ಬರುತ್ತದೆ.
ಭಸ್ಮ ರುದ್ರಾಕ್ಷಿ ಧರಿಸದವನ  ಜನ್ಮವೇ ವ್ಯರ್ಥ.
ರುದ್ರಾಕ್ಷಿ ಧರಿಸಿ ಸ್ನಾನ ಮಾಡಿದರೆ ಗಂಗಾ ಸ್ನಾನದ ಫಲ ಲಭಿಸುತ್ತದೆ. ಯಾವುದೇ ರುದ್ರಾಕ್ಷಿಯನ್ನು ಧರಿಸಿದರೂ ನಾಲ್ಕು ಪುರುಷಾರ್ಥಗಳು ಸಿದ್ಧಿಸುತ್ತದೆ.

ಹಿಂದೆ ಕಾಶ್ಮೀರ ದೇಶದಲ್ಲಿ ಭದ್ರಸೇನಾ ಎನ್ನುವ ರಾಜನಿದ್ದನು.ಅವನಿಗೆ ತಾರಕನೆಂಬ ಮಗ ಇದ್ದು,  ಮಂತ್ರಿ ಸುಧರ್ಮನಿಗೆ, ಸದ್ಗುಣ ಎನ್ನುವ ಮಗ ಇದ್ದನು.ಈ ಮಕ್ಕಳು ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದು,ಯಾವಾಗಲೂ ಜೊತೆಯಾಗಿರುತ್ತಾ, ಅರಮನೆಯ  ಆಭರಣಗಳಿಗೆ ಆಸೆ ಪಡದೆ, ಪ್ರತಿ ದಿನವೂ ರುದ್ರಾಕ್ಷಿ ಧರಿಸಿ ಶಿವನ ಆರಾಧನೆ ಮಾಡಿದ ನಂತರವೇ ಅವರು ಊಟ ಮಾಡುತ್ತಿದ್ದರು.
ಒಂದು ದಿನ ರಾಜನ  ಅರಮನೆಗೆ ಪರಾಶರ ಮಹರ್ಷಿಗಳು ಬಂದರು. ರಾಜ ಭದ್ರಸೇನನು ಅವರನ್ನು ಸ್ವಾಗತಿಸಿ ಅರ್ಘ್ಯಪಾದ್ಯಾದಿ ಗಳಿಂದ ಸತ್ಕರಿಸಿ ಪೂಜಿಸಿದನು. ರಾಜನು ತನ್ನ ಮಗ ತಾರಕ ಹಾಗೂ ಮಂತ್ರಿಯ ಮಗ ಸುಧರ್ಮ ಇವರಿಬ್ಬರ ಕುರಿತು ಹೇಳಿ,ಅವರು ರುದ್ರಾಕ್ಷಿ ಧರಿಸುವ ಬಗ್ಗೆಯೂ ಹೇಳಿ, ಮಕ್ಕಳಿಬ್ಬರ ವಿಚಿತ್ರ ನಡವಳಿಕೆಗೆ ಕಾರಣವೇನು ಹೇಳಿರಿ ಎಂದು ಪ್ರಾರ್ಥಿಸಿದನು.
ಪರಾಶರ ಮಹರ್ಷಿಗಳು ಈ ಕುರಿತು ಒಂದು ಕಥೆ ಹೇಳಿದರು.  

ರಾಜಾ,ಹಿಂದೆ ನಂದಿ ಎಂಬ ಗ್ರಾಮದಲ್ಲಿ ಅಪೂರ್ವ  ಸೌಂದರ್ಯವತಿಯೂ ಶ್ರೀಮಂತಳೂ  ಆಗಿದ್ದ "ಮಹಾನಂದಾ" ಎನ್ನುವ ವೇಶ್ಯೆ ಇದ್ದಳು. ಆಕೆ ಗುಣ ವಂತಳು, ವೃತ್ತಿ ಧರ್ಮವನ್ನು ಪಾಲಿಸುತ್ತಿದ್ದಳು.  ಸ್ವೇಚ್ಛಾಚಾರಿಣಿಯಾಗಿ ಬದುಕದೆ, ಹಿರಿಯರಿಂದ ಸಕಲ ಧರ್ಮಗಳನ್ನು ಅರಿತು ದಾನ ಧರ್ಮಗಳನ್ನು ಮಾಡುತ್ತ ಜೀವನ ನಡೆಸುತ್ತಿದ್ದಳು.ಆಕೆ ಪ್ರತಿದಿನವೂ ಅಲಂಕಾರ ಮಾಡಿ ಕೊಂಡು ತನ್ನ ಮನೆಯಲ್ಲಿದ್ದ ನೃತ್ಯ ಮಂಟಪದಲ್ಲಿ ಶಿವನ  ಆರಾಧನೆಯಂತೆ ಭಕ್ತಿಯಿಂದ ನೃತ್ಯ  ಮಾಡುತ್ತಿದ್ದಳು.ಅವಳು ತನ್ನ ಜೊತೆ ಒಂದು ಕೋಳಿ ಮತ್ತು ಒಂದು ಮಂಗನನ್ನು  ಸಾಕಿದ್ದಳು.ಆ ವೇಶ್ಯೆ, ಸುಮ್ಮನೆ ತಮಾಷೆಗಾಗಿ ಮಂಗ ಮತ್ತು ಕೋತಿಯನ್ನು ರುದ್ರಾಕ್ಷಿ  ಸರಗಳಿಂದ ಅಲಂಕರಿಸುತ್ತಿದ್ದಳು. 

ಒಂದು ದಿನ ಶಿವವ್ರತಾದೀಕ್ಷಿತನಾದ,  ಆಗರ್ಭ ಶ್ರೀಮಂತನೊಬ್ಬನು ಅವಳ ಮನೆಗೆ ಬಂದನು.ಅವನು ಮೈಮೇಲೆ ವಿಭೂತಿ, ಕೈಗಳಲ್ಲಿ ರತ್ನ ಕಂಕಣಗಳು, ಹಾಗೂ  ಅವನ ಬಲಗೈಯಲ್ಲಿ ಸೂರ್ಯನಂತೆ ಬೆಳಗುತ್ತಿರುವ ರತ್ನ ಲಿಂಗವು ಇತ್ತು. ಅದನ್ನು ನೋಡಿ ಆ ವೇಶ್ಯೆ ಆಸೆಪಟ್ಟು ಅವನಿಗೆ ತನ್ನ ಸಖಿಯಮೂಲಕ ಹೇಳಿ ಕಳಿಸಿ ಒಳಗೆ ಕರೆಸಿಕೊಂಡಳು.
ಆತನು ಆ ಮಂಟಪದಲ್ಲಿ ಕುಳಿತು,ಮಹಾ ಸೌಂದರ್ಯವತಿಯಾದ ಆ ವೇಶ್ಯೆಗೆ, "ನನ್ನನ್ನು ಸಂತೋಷಪಡಿಸಿದರೆ,  ನಾನು ನಿನಗೆ ಈ ರತ್ನ ಲಿಂಗವನ್ನು ಕೊಡುತ್ತೇನೆ" ಎಂದನು.ಇದನ್ನು ಕೇಳಿ ವೇಶ್ಯೆ ಬಹಳ ಸಂತೋಷಪಟ್ಟು,"ಆಯಿತು ನಾನು ಇಂದಿನಿಂದ ಮೂರು ರಾತ್ರಿಗಳು ಪತಿವ್ರತಾ ಧರ್ಮವನ್ನು ಅನುಸರಿಸಿ ನಿನ್ನನ್ನು ಸೇರುತ್ತೇನೆ" ಎಂದಳು.

ಆ ವೈಶ್ಯನು ಅವಳ ಮಾತು ಕೇಳಿ, "ನನ್ನ ವಿಷಯದಲ್ಲಿ ನಿಮಗೆ ಅಂತಹ ಸಂದೇಹಕ್ಕೆಡೆಯೇ ಇಲ್ಲ ಎಂದು ಹೇಳಿದಾಗ ಆಕೆಯು, ನಾನು ತ್ರಿಕರಣ ಶುದ್ದಿಯಾಗಿ ಆ ಮೂರು ದಿನಗಳು ಪಾತಿವ್ರತ್ಯವನ್ನು ಅವಲಂಬಿಸಿರುತ್ತೇನೆ."  ಎಂದು ಹೇಳಿ ಆ ಲಿಂಗದ ಮೇಲೆ ಕೈ ಇಟ್ಟು ಸೂರ್ಯ, ಚಂದ್ರರ ಸಾಕ್ಷಿಯಾಗಿ ಪ್ರಮಾಣ ಮಾಡಿದಳು.  ನಂತರ ವೈಶ್ಯನು ರತ್ನ ಖಚಿತವಾದ ಆ ಶಿವಲಿಂಗವನ್ನು ಅವಳ ಕೈಲಿ ಕೊಟ್ಟು,.
"ಪ್ರಿಯೆ ಇದು ನನ್ನ ಪ್ರಾಣಕ್ಕೆ ಸಮಾನವಾದದ್ದು, ಇದಕ್ಕೇನಾದರೂ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ" ಎಂದನು.ಆಕೆಯುಚಆ ರತ್ನಲಿಂಗವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸಿದಳು.
ವೈಶ್ಯ ಮತ್ತು ವೇಶ್ಯೆ, ಅವರಿಬ್ಬರೂ ಆ ರಾತ್ರಿ ಅಂತಃಪುರದೊಳಕ್ಕೆ ಹೋದರು.ಅದೇ ಸಮಯಕ್ಕೆ ಅದೇನು ವಿಚಿತ್ರವೋ ನಾಟ್ಯಮಂದಿರ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡು ಭಸ್ಮವಾಗಿ ಹೋಯಿತು. ಆ ಕೋತಿ  ಮತ್ತು ಕೋಳಿ ಕೂಡ ಸುಟ್ಟು ಹೋದವು. ಸುತ್ತಮುತ್ತಲಿನವರೆಲ್ಲ ಸೇರಿ ಬೆಂಕಿಯನ್ನು  ಆರಿಸುತ್ತಿದ್ದರು.
ಈ ವಿಚಾರ ಬೆಳಗಾದ ನಂತರವೇ ವೈಶ್ಯಗೆ ತಿಳಿದು  ಆತ ರೋದಿಸುತ್ತಾ, "ಅಯ್ಯೋ ನನ್ನ ಪ್ರಾಣ ಲಿಂಗವೇ ಹೋಯಿತು ನಾನಿನ್ನು ಬದುಕುವುದಿಲ್ಲ" ಎಂದು ಅಳುತ್ತಾ  ಬೂದಿಯನ್ನೆಲ್ಲ ಜಾಲಾಡಿದರು ಆ ಲಿಂಗ ಸಿಗಲಿಲ್ಲ. ವೈಶ್ಯನು ಒಂದು ಚಿತೆ ಮಾಡಿ ಅದಕ್ಕೆ ಬೆಂಕಿ ಕೊಟ್ಟು ಅದರೊಳಗೆ  ಬಿದ್ದನು.ಇದನ್ನು ನೋಡುತ್ತಿ ದ್ದಂತೆಯೇ,ವೇಶ್ಯೆ ಕೂಡ ಪ್ರಾಣನಾಥ ಎಂದು ಕೂಗುತ್ತಾ ತನ್ನ ಧರ್ಮವನ್ನು ಅನುಸರಿಸಿ ಸಹಗಮನಕ್ಕೆ  ಸಿದ್ದಳಾದಳು. 

ಅವಳ ಬಂಧು-ಬಳಗದವರು ಆಕೆಯನ್ನು ಎಳೆಯುತ್ತಾ, ವೇಶ್ಯೆಯಾದ ನಿನಗೆ ಇದೇನು ಹುಚ್ಚು ಎಂದು ಅವಳಿಗೆ ತಿಳುವಳಿಕೆ ಹೇಳತೊಡಗಿದರು.ಆದರೆ ಅವಳು ಅವರ ಯಾವ ಮಾತನ್ನು ಕೇಳಿಸಿಕೊಳ್ಳದೆ ಸೂರ್ಯ- ಚಂದ್ರರ ಸಾಕ್ಷಿಯಾಗಿ ಅವನಲ್ಲಿ ಪಾತಿವ್ರತ್ಯವನ್ನು ಅವಲಂಬಿಸಿದ ನನಗೆ ಇದೇ ಧರ್ಮ.
ನಾನೀಗ ಸಹಗಮನ ಮಾಡದಿದ್ದರೆ ನನ್ನ ಜೊತೆಗೆ ನನ್ನ 21 ತಲೆಮಾರಿನವರು ನರಕಕ್ಕೆ ಹೋಗುತ್ತಾರೆ.ನನ್ನ ಧರ್ಮ ನಾನು ಪಾಲಿಸಿದರೆ ಅವರೆಲ್ಲರೂ ಉದ್ಧಾರವಾಗುತ್ತಾರೆ. ಮರಣವೆನ್ನುವುದು  ಎಂದಿಗಾದರೂ ಬರುವುದಲ್ಲವೇ?  ಹೀಗೆ  ಹೀನಾಯವಾಗಿ ಬದುಕುವುದಕ್ಕಿಂತ ನನ್ನ ಧರ್ಮವನ್ನು ಆಚರಿಸಿ ಉದ್ಧಾರವಾಗುವುದು ಬಹಳ ಶ್ರೇಷ್ಠ ಎಂದು ಹೇಳಿ ಬೆಂಕಿಯಲ್ಲಿ ಬೀಳಲು ಹೋದಳು. 

ತಕ್ಷಣವೇ ಶಿವನು ಪ್ರತ್ಯಕ್ಷನಾಗಿ "ಸುಂದರಿ ನಿನ್ನ ಗುಣವನ್ನು ಪರೀಕ್ಷೆ ಮಾಡಬೇಕೆಂದು, ನಾನೇ ಆ ವೈಶ್ಯನ ರೂಪದಲ್ಲಿ ಬಂದೆ. ನಿನಗೆ ಕೊಟ್ಟಿದ್ದು ನನ್ನ ಆತ್ಮ ಲಿಂಗವೇ! ಈ ಮಂಟಪಕ್ಕೆ ನಾನೇ ಬೆಂಕಿ ಇಟ್ಟು,ನಿನ್ನ ಪಾತಿವ್ರತ್ಯದ ಪರೀಕ್ಷೆ ಮಾಡಿದೆ.‌ ನಿನಗಿಷ್ಟ ಬಂದ ವರ ಕೋರಿಕೋ" ಎಂದು ಹೇಳಿದನು.ಅವಳು ಆಶ್ಚರ್ಯಪಟ್ಟು ಭಕ್ತಿಯಿಂದ ನಮಸ್ಕಾರ ಮಾಡಿ,  "ಸ್ವಾಮಿ,ನನಗೆ ಇನ್ನು ಮುಂದೆ ಈ ಮೂರು ಲೋಕಗಳಲ್ಲೂ ಇಂತಹ ಭೋಗಾಸಕ್ತಿಯು ಬೇಡ.  ನನ್ನನ್ನು ಈ ಸಂಸಾರ ಬಂಧನದಿಂದ ಬಿಡಿಸಿ, ಶಾಶ್ವತವಾದ ಶಿವಾಸಾಯುಜ್ಯವನ್ನು ಪ್ರಸಾದಿಸು" ಎಂದು ಪ್ರಾರ್ಥಿಸಿದಳು.ಶಿವನು ಸಂತೋಷಪಟ್ಟು ಆಕೆಯನ್ನು ಕೈಲಾಸಕ್ಕೆ ಕರೆದುಕೊಂಡು ಹೋದನು.

ಆ ದಿನ ನಾಟ್ಯ ಮಂಟಪದಲ್ಲಿ ಬೆಂಕಿಯಲ್ಲಿ ಸಿಕ್ಕಿ ಸುಟ್ಟುಹೋದ ಆ ಕೋಳಿ ಮತ್ತು ಕೋತಿ ಈಗ ಈ ಮಕ್ಕಳಾಗಿ ಹುಟ್ಟಿದ್ದಾರೆ. ಪೂರ್ವಜನ್ಮ ಸಂಸ್ಕಾರದಿಂದ ಶಿವಭಕ್ತರಾಗಿ ಭಸ್ಮ- ರುದ್ರಾಕ್ಷಿಗಳನ್ನು ಇಷ್ಟೊಂದು ಪ್ರೀತಿಯಿಂದ ಧರಿಸುತ್ತಾರೆ. ಇವರ ಪುಣ್ಯ ಹೇಳಲಸದಳ ವಾದುದು ಎಂದ ಪರಾಶರ ಮಹರ್ಷಿಗಳು ಕಾಶ್ಮೀರದ ಭದ್ರಸೇನ ರಾಜನಿಗೆ ಈ ಕಥೆಯನ್ನು ಹೇಳಿದ್ದರು.

ರುದ್ರಾಕ್ಷಿಯ ಮಹಿಮೆ ಮತ್ತು ವಿಧಗಳು.

ಧರಿಸಿದರೆ ಸಿಗುವ ಫಲಗಳು.

ರುದ್ರಾಕ್ಷಿಮರವು ಸಸ್ಯಸಾಮ್ರಾಜ್ಯದ ಇಲಾಯಿಯೊಕಾರ್ಪೇಸಿ ಎಂಬ ಕುಟುಂಬಕ್ಕೆ ಸೇರಿರುವ ಮಧ್ಯಮ ಗಾತ್ರದ ಮರ.ಇದರ ವೈಜ್ಞಾನಿಕ ನಾಮ ಇಲಾಯಿಯೊಕಾರ್ಪಸ್ ಜ್ಯಾನಿಟ್ರಸ್.
ಸುಮಾರು ೬ ರಿಂದ ೧೦ ಮೀಟರ್ ಎತ್ತರಕ್ಕೆ ಬೆಳೆಯುವ ಈ ಮರಗಳು ನೇಪಾಳ, ಬಿಹಾರ, ಬಂಗಾಲ, ಅಸ್ಸಾಮ್, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ದಟ್ಟಕಾಡುಗಳಲ್ಲಿ ಕಂಡುಬರುತ್ತವೆ. ಅಪರೂಪಕ್ಕೆ ಈ ಸಸ್ಯವನ್ನು ಅಲಂಕಾರಕ್ಕಾಗಿಯೂ ಬೆಳೆಸುವುದುಂಟು.

ರುದ್ರನ ಅಕ್ಷಿಯೇ ರುದ್ರಾಕ್ಷಿ.ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ.
ಆದ್ದರಿಂದ ರುದ್ರಾಕ್ಷಿಗೆ ಪೂಜೆ-ಪುನಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ. ಹಿಮಾಲಯ ಪ್ರದೇಶಗಳಲ್ಲಿ ರುದ್ರಾಕ್ಷಿ ಮರಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಈ ವೃಕ್ಷಗಳು ಶೀಘ್ರಗತಿಯಲ್ಲಿ ಫಲ ಬಿಡುವ ಜಾತಿಗೆ ಸೇರಿದ್ದು, ಮೂರ್ನಾಲ್ಕು ವರ್ಷಗಳಲ್ಲೇ ರುದ್ರಾಕ್ಷಿ ಬೀಜಗಳನ್ನು ಬಿಡತೊಡಗುತ್ತವೆ.ಇಂತಹ ರುದ್ರಾಕ್ಷಿಗಳಲ್ಲಿ ಏಕಮುಖದಿಂದ ಹಿಡಿದು ಇಪ್ಪತ್ತೊಂದು ಮುಖದ ರುದ್ರಾಕ್ಷಿವರೆಗೂ ಪ್ರಭೇದಗಳಿವೆ. ಪ್ರತಿಯೊಂದಕ್ಕೂ ಅದರದೇ ಆದ ಮಹತ್ವವಿದೆ. ಈ ಕಾರಣದಿಂದಲೇ ಆಸ್ತಿಕರು ರುದ್ರಾಕ್ಷಿಮಾಲೆಯನ್ನು ಧರಿಸುವರು.

ಪೌರಾಣಿಕ ಕಲ್ಪನೆಯಲ್ಲಿ ರುದ್ರಾಕ್ಷಿಯನ್ನೇ ಶಿವನ ಸ್ವರೂಪ ಎಂದು ಹೇಳಲಾಗಿದೆ.
ನಾವು ರುದ್ರಾಕ್ಷಿಯ ಬಗ್ಗೆ ಅನೇಕ ಕತೆಗಳನ್ನು ಕೇಳಿದ್ದೇವೆ.ರುದ್ರಾಕ್ಷಿಯನ್ನು ಶಿವನ ಪ್ರತೀಕವಾಗಿ ಧರಿಸಿ ಪೂಜಿಸುವುದಲ್ಲದೆ.ಔಷಧಿಯ ರೂಪದಲ್ಲಿಯೂ ಉಪಯೋಗಿಸುತ್ತೇವೆ. ನಮ್ಮ ಧರ್ಮದಲ್ಲಿ ಇದು ಯಾವ ರೀತಿ ಮಾನ್ಯತೆ ಪಡೆದಿದೆ ಎಂದರೆ, ಇದನ್ನು ಪೂಜಿಸಿದರೆ ಮತ್ತು ಧರಿಸಿದರೆ ಮನೆಯಲ್ಲಿ ಸದಾ ಲಕ್ಷ್ಮೀವಾಸವಿರುತ್ತಾಳೆ ಹಾಗೂ ಧನ, ಕನಕ, ವಸ್ತು, ವಾಹನ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ರುದ್ರಾಕ್ಷಿಯನ್ನು ಸ್ಪರ್ಶಿಸಿದರೆ ಸರ್ವ ಪಾಪ ನಾಶವಾಗುವುದು ಮತ್ತು ಮುಕ್ತಿಯನ್ನು ಪಡೆಯುವರೆಂಬ ನಂಬಿಕೆ ಇದೆ.

ರುದ್ರಾಕ್ಷಿ ಎಂದರೆ ರುದ್ರ+ಅಕ್ಷಿ=ರುದ್ರಾಕ್ಷಿ . ರುದ್ರನ ಕಣ್ಣಿನೀಂದ ಉತ್ಪನ್ನವಾದ ಒಂದು ಹಣ್ಣು ಮತ್ತು ಹೂ ಇದ್ದಂತೆ.
ಇದರಲ್ಲಿ ಕಂದು,ಕೆಂಪು ಮತ್ತು ಬಿಳಿಯ ಬಣ್ಣದ ಮೂರು ರೀತಿಯ ರುದ್ರಾಕ್ಷಿಗಳಿವೆ.ಮನುಷ್ಯರ ರಕ್ತವಿಕಾರವನ್ನು ನಷ್ಟ ಮಾಡುವುದು.ಜಪ ಮಾಲೆಗಳಲ್ಲಿ ರುದ್ರಾಕ್ಷಿ ಮಾಲೆಯು ಶ್ರೇಷ್ಠವಾದುದು ಎಂದು ಋಷಿಗಳು ರುದ್ರಾಕ್ಷಿಯ ಬಗ್ಗೆ ವರ್ಣಿಸಿದ್ದಾರೆ.

ರುದ್ರಾಕ್ಷಿಯಲ್ಲಿ ಮುಖ್ಯವಾಗಿ ೧ ರಿಂದ ೧೪ ಮುಖಗಳ ಪ್ರಕಾರಗಳು ಇವೆ.
ಅವುಗಳೆಂದರೆ..

೧) ಏಕಮುಖಿ ರುದ್ರಾಕ್ಷಿ

ಈ ರುದ್ರಾಕ್ಷಿಯಲ್ಲಿ ನೈಸರ್ಗಿಕವಾಗಿ ಒಂದೇ ಒಂದು ಶಿರ ಬರುತ್ತದೆ. ಅದಕ್ಕೆ ಇದು ಏಕಮುಖಿ ಎಂದು ಗುರುತಿಸಲ್ಪಟ್ಟಿದೆ. ಇದಕ್ಕೆ ರಂಧ್ರ ಇರುವುದಿಲ್ಲ.
ಸ್ವಯಂ ಶಿವನು ವಿರಾಜಮಾನವಾಗಿರುತ್ತಾನೆ.ಇದರ ವಿಶೇಷತೆ ಎಂದರೆ ಇದರ ದರ್ಶನದಿಂದ ಮನುಷ್ಯನ ಕಲ್ಯಾಣವಾಗುತ್ತದೆ.ಇದನ್ನು ಸಾಕ್ಷಾತ್ ಶಿವನ ಸ್ವರೂಪ ಎಂದು ಹೇಳಲಾಗಿದೆ.
ಇದರ ಪೂಜೆ ಮತ್ತು ಧಾರಣೆಯಿಂದ ಸರ್ವ ಪಾಪ ಪರಿಹಾರವಾಗುತ್ತದೆ. ಮತ್ತೊಂದು ವಿಶೇಷವೆಂದರೆ ಬ್ರಹ್ಮಹತ್ಯಾ ಎಂಬ ಮಹಾಪಾಪವು ಕೂಡ ನಷ್ಟವಾಗುವುದು.ಯಾವ ಮನೆಯಲ್ಲಿ ಏಕಮುಖಿ ರುದ್ರಾಕ್ಷಿ ಇರುವುದೋ ಅಲ್ಲಿ ಸಕಲ ಸುಖ ಸೌಭಾಗ್ಯ ಲಭಿಸುವುದು.

೨) ದ್ವಿಮುಖಿ ರುದ್ರಾಕ್ಷಿ.

ಈ ರುದ್ರಾಕ್ಷಿಯಲ್ಲಿ ಪ್ರಾಕೃತಿಕವಾಗಿ ಎರಡು ಶಿರಗಳಿರುತ್ತವೆ.ಅಂದರೆ ಅರ್ಧ ನಾರೀಶ್ವರ ಸ್ವರೂಪ. ಶಿವ ಮತ್ತು ಶಕ್ತಿಯ ರೂಪ ಇರುತ್ತದೆ.ಇದನ್ನು ಧರಿಸುವುದರಿಂದ ಶಿವ ಮತ್ತು ಪಾರ್ವತಿ ಪ್ರಸನ್ನರಾಗಿ ಗೋಹತ್ಯಾ ಪಾಪದಿಂದ ಮುಕ್ತಿ ಸಿಗುತ್ತದೆ.ಮನಸ್ಸು ಸ್ಥಿರವಾಗುತ್ತದೆ.ಈ ರುದ್ರಾಕ್ಷಿಯು ಹಿಮಾಲಯ ಪರ್ವತ ಪ್ರದೇಶ ನೇಪಾಳದಲ್ಲಿ ಸಿಗುತ್ತದೆ.

೩) ತ್ರಿಮುಖಿ ರುದ್ರಾಕ್ಷಿ.

ಈ ರುದ್ರಾಕ್ಷಿಯಲ್ಲಿ ಪ್ರಾಕೃತಿಕವಾಗಿ ಮೂರು ಧಾರಿಗಳಿರುತ್ತವೆ.ಈ ರುದ್ರಾಕ್ಷಿಯನ್ನು ಅಗ್ನಿ ಸ್ವರೂಪ,ಸತ್ವ, ರಜ, ತಮ, ಗುಣಗಳ ತ್ರಿಗುಣಾತ್ಮಕ ಶಕ್ತಿ ಇದೆ ಎಂದು ಶಿವಪುರಾಣದಲ್ಲಿ ಹೇಳಿದೆ.  ಇದನ್ನು ಧರಿಸಿದರೆ ಮನಸ್ಸಿನಲ್ಲಿ ದಯೆ, ಧರ್ಮ, ಪರೋಪಕಾರ ಭಾವನೆ ಹೆಚ್ಚುತ್ತದೆ ಮತ್ತು ಪರಸ್ತ್ರೀ ಗಮನ ಪಾಪ ನಾಶವಾಗುತ್ತದೆ.

೪) ಚತುರ್ಮುಖಿ ರುದ್ರಾಕ್ಷಿ.

ಈ ರುದ್ರಾಕ್ಷಿಯಲ್ಲಿ ನಾಲ್ಕು ಧಾರಿಗಳಿರುತ್ತವೆ.ಇದನ್ನು ಚತುರ್ಮುಖ ಬ್ರಹ್ಮ ದೇವರ ಸ್ವರೂಪ ಎಂದು ಹೇಳುವರು.ಇದನ್ನು ಚಿಕ್ಕ ಮಕ್ಕಳು ಧರಿಸಿದರೆ ವಿದ್ಯಾಭಿವೃದ್ಧಿಯಾಗುವುದು.ವಯಸ್ಕರು ಧರಿಸಿದರೆ ಆರೋಗ್ಯ ಸುಧಾರಿಸಿ, ರೋಗ ದೂರವಾಗುತ್ತದೆ. ನಾಸ್ತಿಕನು ಆಸ್ತಿಕ ಆಗುವನು ಮತ್ತು ನರಹತ್ಯಾ ಎಂಬ ಮಹಾಪಾಪವು 

ಪಂಚಮುಖಿ ರುದ್ರಾಕ್ಷಿ.

ಐದು ಮುಖದ ಪಂಚಮುಖಿ ರುದ್ರಾಕ್ಷಿಯು ಹೇರಳವಾಗಿ ಸಿಗುತ್ತದೆ.
ಬೆಲೆಯೂ ಅತಿ ಕಡಿಮೆ.ಕೊಳ್ಳುವ ಜಪಮಾಲೆಯಲ್ಲಿ ಇವೇ ಇರುವುದು.
ರುದ್ರಾಕ್ಷಿಯು ಸಣ್ಣದಾಗಿದ್ದಷ್ಟೂ ಫಲ ಹೆಚ್ಚು.ಉದ್ದಿನಕಾಳಿನ ಗಾತ್ರದಿಂದ ನೆಲ್ಲಿಕಾಯಿ ಗಾತ್ರದ ವರೆಗಿನ ರುದ್ರಾಕ್ಷಿಗಳಿವೆ.
ರುದ್ರಾಕ್ಷಿ ಹಿಮಾಲಯ ತಪ್ಪಲು ಪ್ರದೇಶದಲ್ಲಿ ಮತ್ತು ನೇಪಾಳದಲ್ಲಿ ಬೆಳಯುತ್ತದೆ. ಆಗ್ನೇಯ ಏಷಿಯಾ ದೇಶಗಳಲ್ಲಿಯೂ ಬೆಳೆಯುತ್ತದೆ.
ರುದ್ರಾಕ್ಷಿ ಕಾಯಿ ನೋಡಲು ನಸು ನೀಲಿ ಬಣ್ಣದ್ದಾಗಿರುತ್ತದೆ.
ಇದು ಸಿಪ್ಪೆಯ ಭಾಗ.ಸಿಪ್ಪೆ ಸುಲಿದರೆ ಒಳಗಡೆ ಹಸಿರು ಬಣ್ಣದ ರುದ್ರಾಕ್ಷಿ ಸಿಗುತ್ತದೆ.
ಒಣಗಿದ ನಂತರ ಕಂದುಬಣ್ಣ ಬರುತ್ತದೆ.

ಯಾವ ಯಾವ ರಾಶಿಯವರು,ಎಷ್ಟು ಮುಖದ ರುದ್ರಾಕ್ಷಿ ಧರಿಸಬೇಕು….?

ಒಂದು ಮುಖದಿಂದ ಹಿಡಿದು ೨೧ ಮುಖಗಳವರೆಗೂ ಇರುವ ರುದ್ರಾಕ್ಷಿ ಸಿಗುವುದೆಂದು ಹೇಳುತ್ತಾರಾದರೂ,
 ೫ ಮುಖದಿಂದ ೧೪ ಮುಖಗಳಿರುವ ರುದ್ರಾಕ್ಷಿಗಳು ಹೆಚ್ಚು ಇರುತ್ತವೆ.
ಏಕ ಮುಖ ರುದ್ರಾಕ್ಷಿ ಬಹಳ ವಿರಳವಾಗಿ ದೊರೆಯುತ್ತವೆ. ಪಂಚಮುಖಿ ರುದ್ರಾಕ್ಷಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತದೆ. ಒಂದೊಂದು ಬಗೆಯ ರುದ್ರಾಕ್ಷಿಗೂ ಅದರದೇ ಮಹತ್ವವಿದೆ. ಒಂದೊಂದು ಮುಖಕ್ಕೂ ಒಬ್ಬೊಬ್ಬ ದೇವತೆಯನ್ನು ಗುರುತಿಸುತ್ತಾರೆ. ಇದಲ್ಲದೆ ರುದ್ರಾಕ್ಷಿಗೆ ಔಷಧೀಯ ಗುಣಗಳಿವೆ. ಅನೇಕ ರೋಗಗಳಿಗೆ ಆಯುರ್ವೇದದಲ್ಲಿ ರುದ್ರಾಕ್ಷಿಯನ್ನು ಉಪಯೋಗಿಸುತ್ತಾರೆ.

ಒಂದರಿಂದ ಹದಿನಾಲ್ಕು ಮುಖಗಳ ರುದ್ರಾಕ್ಷಿಗಳ ವಿವರ ಕೆಳಗಿದೆ. 

ಏಕ ಮುಖ ರುದ್ರಾಕ್ಷಿ.

ಏಕ ಮುಖ ರುದ್ರಾಕ್ಷಿ ಯನ್ನು ಸಾಕ್ಷಾತ್ ಶಿವನ ಸ್ವರೂಪವೆಂದು ತಿಳಿಯುತ್ತಾರೆ.ಒಂದು ರುದ್ರಾಕ್ಷಿ ಮರದಲ್ಲಿ ಏಕಮುಖ ರುದ್ರಾಕ್ಷಿಯು ಒಂದೇ ಒಂದು ಬಿಡುತ್ತದೆ ಎಂದು ಹೇಳುತ್ತಾರೆ.ಇದು ಬಹಳ ಭಾಗ್ಯಶಾಲಿಯೂ, ಶಿವನಿಗೆ ಪ್ರೀತಿ ಪಾತ್ರನೂ ಆದವನಿಗೆ ಮಾತ್ರ ದೊರೆಯುತ್ತದೆ ಎಂಬ ನಂಬಿಕೆ ಇದೆ.ಇದಕ್ಕೆ ಬೆಲೆಯೂ ಬಹಳ ಜಾಸ್ತಿ. ಅಂದರೆ ಸಾವಿರ ರೂ ಗಳಿಂದ ಇದರ ಬೆಲೆ ಆರಂಭವಾಗುತ್ತದೆ.ಏಕಮುಖಿಯನ್ನು ಧರಿಸಿದರೆ ಇಹದ ಎಲ್ಲಾ ಸೌಭಾಗ್ಯಗಳೂ ಈಶ್ವರನ ಕೃಪೆ ಸದಾ ದೊರೆಯುತ್ತದೆ ಎಂಬ ಧೃಢ ನಂಬಿಕೆ ಇದೆ.
ಏಕ ಮುಖದ ರುದ್ರಾಕ್ಷಿಯನ್ನು ಮಕರ ರಾಶಿ,ಲಗ್ನದಲ್ಲಿ  ಹುಟ್ಟಿದವರು ಧರಿಸಬೇಕು.

ದ್ವಿಮುಖ_ರುದ್ರಾಕ್ಷಿ.

ಇದು ಶಿವ ಪಾರ್ವತಿ ಸ್ವರೂಪ ಎಂದು ಹೇಳುತ್ತಾರೆ ಈ ರುದ್ರಾಕ್ಷಿಯೂ ಸಿಗುವುದು ತುಂಬಾ ವಿರಳ. ಇದನ್ನು ಧರಿಸುವುದರಿಂದ ಗೋಹತ್ಯೆಯೇ ಮೊದಲಾದ ಇತರೆ ದೋಷಗಳೂ ನಾಶವಾಗುತ್ತದೆ. ಈ ರುದ್ರಾಕ್ಷಿಯು ಉತ್ತಮ ಗೃಹಸ್ತ ಜೀವನ ಸುಖ ಶಾಂತಿ, ಸೌಬಾಗ್ಯವನ್ನು ಕೊಡುವುದೆಂದು ಹೇಳಲಾಗುತ್ತದೆ. ಇದರ ಬೆಲೆಯೂ ತುಂಬಾ ಹೆಚ್ಚು.
*ಮೇಷರಾಶಿ,ಲಗ್ನದಲ್ಲಿ ಹುಟ್ಟಿದವರು ಎರಡು ಮುಖದ ರುದ್ರಾಕ್ಷಿ ಧರಿಸಬೇಕು.

ತ್ರಿಮುಖ ರುದ್ರಾಕ್ಷಿ.

ಮೂರುಮುಖದ ರುದ್ರಾಕ್ಷಿ ಅಗ್ನಿ ದೇವನ ಸ್ವರೂಪ ಎಂದು ಹೇಳುತ್ತಾರೆ.ಇದೂ ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ.ಇದರ ಧಾರಣೆಯಿಂದ ಸಕಲ ಪಾಪಗಳೂ ನಿವಾರಣೆ ಆಗುವುದು.ಇದರ ಬೆಲೆಯೂ ಸ್ವಲ್ಪ ಹೆಚ್ಚಾಗಿಯೇ ಇದೆ.
ಕನ್ಯಾ ರಾಶಿ,ಲಗ್ನದಲ್ಲಿ ಹುಟ್ಟಿದವರು ಇದನ್ನು ಧರಿಸಬೇಕು.

ಚತುರ್ಮುಖ ರುದ್ರಾಕ್ಷಿ.

ಇದನ್ನು ಬ್ರಹ್ಮ ಸ್ವರೂಪ ಎಂದು ಗುರುತಿಸುತ್ತಾರೆ. ಇದು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದು.ಇದು ಭ್ರೂಣ ಹತ್ಯಾದೋಷವನ್ನು ನಿವಾರಣೆ ಮಾಡುವುದು. ಸ್ಮರಣ ಶಕ್ತಿ, ಬುದ್ಧಿ, ಶಿಕ್ಷಣದಲ್ಲಿ ಸಫಲತೆ,ಇವು ದೊರಕುವುದೆಂದು ಹೇಳುವರು.ಬೆಲೆ ಸಾಧಾರಣ ಮಟ್ಟದ್ದು.
ಇದನ್ನು ಮಿಥುನ ರಾಶಿ,ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು.

ಪಂಚಮುಖಿ ರುದ್ರಾಕ್ಷಿ.

ಪಂಚ ಮುಖಿ ರುದ್ರಾಕ್ಷಿ ಯನ್ನು ಸ್ವಯಂ ಭಗವಾನ್ ಶಂಕರನ,ಸದ್ಯೋಜಾತ,
ತತ್ಪುರುಷ,ವಾಮದೇವ,
ಅಘೋರ,ಈಶಾನ ಸ್ವರೂಪ ಎಂದು ಹೇಳುತ್ತಾರೆ. 
ಹೆಚ್ಚಿನ ರುದ್ರಾಕ್ಷಿಗಳು ಪಂಚ ಮುಖಿಯೇ ಆಗಿರುತ್ತವೆ. ಈ ರುದ್ರಾಕ್ಷಿ ಹೆಚ್ಚು ಸಿಗುವುದರಿಂದ ಬೆಲೆಯೂ ಕಡಿಮೆ.ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಈಶ್ವರನ ಕೃಪೆ ದೊರಕಿ ಮನಸ್ಸಿಗೆ ಶಾಂತಿ ದೊರೆಯುವುದು ಎಂಬ ನಂಬುಗೆ ಇದೆ.
ಕಟಕ ರಾಶಿ,ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು.

ಷಷ್ಠಮುಖಿ ರುದ್ರಾಕ್ಷಿ.

ಆರು ಮುಖದ ರುದ್ರಾಕ್ಷಿಯು ಶಿವಪುತ್ರ ಕುಮಾರ ಕಾರ್ತಿಕೇಯನ ರೂಪವೆಂದು ತಿಳಿಯಲಾಗುತ್ತದೆ.
ಈ ರುದ್ರಾಕ್ಷಿಯೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುದು.ಇದನ್ನು ಧರಿಸುವುದರಿಂದ ಅಧರ್ಮಾಚರಣೆ ಮಾಡಿದ್ದಲ್ಲಿ ಅದರಿಂದ ಉಂಟದ ಪಾಪಗಳು ನಿವಾರಣೆ ಆಗುವುದು ಹಾಗೂ ಸ್ಮರಣ ಶಕ್ತಿ ಹೆಚ್ಚುವುದು ಎಂಬ ನಂಬುಗೆ ಇದೆ.
ಇದನ್ನು ವೃಷಭ ರಾಶಿ/ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು.

ಸಪ್ತ ಮುಖಿ ರುದ್ರಾಕ್ಷಿ.

ಏಳು ಮುಖದ ರುದ್ರಾಕ್ಷಿ ಅನಂತನಾಗನ (ಅಥವಾ ಆದಿ ಶೇಷನ )ಸ್ವರೂಪ ಎಂದು ಹೇಳುವರು.ಇದು ವಿರಳವಾಗಿ ದೊರೆಯುವುದು. ಆದ್ದರಿಂದ ಬೆಲೆಯೂ ಹೆಚ್ಚು.ಈ ರುದ್ರಾಕ್ಷಿ ಧಾರಣೆಯಿಂದ ಹಾವಿನ ಭಯ ಇರುವುದಿಲ್ಲ.ಶರೀರ ಧೃಢವಾಗಿ ಬುದ್ಧಿ ಚುರುಕಾಗುವುದು ಎಂದು ನಂಬಲಾಗಿದೆ.
ಸಿಂಹರಾಶಿ/ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು.

ಅಷ್ಟ ಮುಖಿ ರುದ್ರಾಕ್ಷಿ.

ಎಂಟು ಮುಖದ ರುದ್ರಾಕ್ಷಿಯು ಗಣಪತಿಯ ರೂಪವಾಗಿದೆ.ಈ ರುದ್ರಾಕ್ಷಿ ಬಹಳ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ.ಬೇಡಿಕೆ ಜಾಸ್ತಿ ಇರುವುದರಿಂದ,ಬೆಲೆಯೂ ಜಾಸ್ತಿ ಈ ರುದಾಕ್ಷಿಯನ್ನು ಧರಿಸುವುದಿಂದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಮತ್ತು ಸರ್ವ ಸಿದ್ಧಿಯುಂಟಾಗುವುದೆಂಬುದು ಭಕ್ತರ ನಂಬಿಕೆ.
ಈ ರುದ್ರಾಕ್ಷಿ ಎಲ್ಲಾ ರಾಶಿ,ಲಗ್ನದವರು ಧರಿಸಬಹುದು.

ನವ ಮುಖಿ ರುದ್ರಾಕ್ಷಿ.

ಒಂಭತ್ತು ಮುಖದ ರುದ್ರಾಕ್ಷಿಯನ್ನು ಭೈರವ ಮತ್ತು ನವ ದುರ್ಗಾ ಸ್ವರೂಪ ಎಂದು ಹೇಳುತ್ತಾರೆ.ಈ ರುದ್ರಾಕ್ಷಿಯೂ ಕೂಡಾ ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುವುದು. ಆದ್ದರಿಂದ ಬೆಲೆಯೂ ಹೆಚ್ಚು.ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಉತ್ತಮ ಸಂತಾನ ಪ್ರಾಪ್ತಿಯಾಗುವುದೆಂದು ಹೇಳುತ್ತಾರೆ.
ತುಲಾ ರಾಶಿ,ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು

ದಶ ಮುಖಿ ರುದ್ರಾಕ್ಷಿ.

ಹತ್ತುಮುಖದ ರುದ್ರಾಕ್ಷಿಯು ಭಗವಾನ್ ನಾರಾಯಣನ ಸ್ವರೂಪ,ದಶಾವತಾರದ ಪ್ರತೀಕ ಎಂದು ಹೇಳಲಾಗಿದೆ.
ಈ ರುದ್ರಾಕ್ಷಿ ಧಾರಣೆಯಿಂದ ಇಹದ ಎಲ್ಲ ಸುಖಸೌಲಭ್ಯಗಳೂ ಲಭಿಸುತ್ತವೆ. ಮತ್ತು ಕುಟುಂಬದಲ್ಲಿ ಸದಾ ಸುಖ ಶಾಂತಿ ಇರುತ್ತದೆ ಎಂದು ಹೇಳುವರು.
ವೃಶ್ಚಿಕ ರಾಶಿ ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು.

ಏಕಾದಶ ಮುಖದ ರುದ್ರಾಕ್ಷಿ.

ಹನ್ನೊಂದು ಮುಖದ ರುದ್ರಾಕ್ಷಿ ಪರಶಿವನ ಏಕಾದಶ ರುದ್ರ ಸ್ವರೂಪ ಎಂದು ಹೇಳುತ್ತಾರೆ.
ಇದೂ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ. ಸಾಮಾನ್ಯವಾಗಿ ಸಂನ್ಯಾಸಿಗಳು,ಯತಿಗಳು, ಸಾಧಕರು ಇದನ್ನು ಧರಿಸುತ್ತಾರೆ.ಯಜ್ಞ ಯಾಗಾದಿಗಳ ಫಲ ಈ ರುದ್ರಾಕ್ಷಿ ಧರಿಸುವುದರಿಂದ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.
ಧನಸ್ಸು ರಾಶಿ,ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು.

ದ್ವಾದಶ ಮುಖಿ ರುದ್ರಾಕ್ಷಿ.

ಹನ್ನೆರಡು ಮುಖದ ಈ ರುದ್ರಾಕ್ಷಿಯು ಭಗವಾನ್ ಸೂರ್ಯನಾರಾಯಣನ ದ್ವಾದಶಾದಿತ್ಯ ಸ್ವರೂಪ.
ಈ ರುದ್ರಾಕ್ಷಿಯ ಬೆಳೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದನ್ನು ಧರಿಸುವುದರಿಂದ ಮನುಷ್ಯನಲ್ಲಿ ತೇಜಸ್ಸು ಹೆಚ್ಚುತ್ತದೆ ಹಾಗೂ ಪ್ರಭಾವ ಶಾಲೀ ವ್ಯಕ್ತಿತ್ವವುಂಟಾಗುತ್ತದೆ ಎಂದು ಹೇಳುತ್ತಾರೆ. ಇದರ ಬೆಲೆಯೂ ಹೆಚ್ಚು.
 ಮೀನ ರಾಶಿ,ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು.

ತ್ರಯೋದಶ ಮುಖಿ ರುದ್ರಾಕ್ಷಿ

ಹದಿಮೂರು ಮುಖದ ರುದ್ರಾಕ್ಷಿಯು ಇಂದ್ರ ದೇವನ ಸ್ವರೂಪ ಎಂದು ಭಾವಿಸುತ್ತಾರೆ.ಈ ರುದ್ರಾಕ್ಷಿಯ ಧಾರಣೆಯಿಂದ ಆತ್ಮ ಶಾಂತಿ,ಶಾರೀರಿಕ ಶಾಂತಿ ದೊರೆಯುವುದು.
ಇದನ್ನು ಯಾವುದೇ ರಾಶಿಯವರೂ ಧರಿಸಬಹುದು.

ಚತುರ್ದಶ ಮುಖದ ರುದ್ರಾಕ್ಷಿ.

ಹದಿನಾಲ್ಕು ಮುಖದ ರುದ್ರಾಕ್ಷಿ ಆಂಜನೇಯನ ಸ್ವರೂಪವೆಂದು ತಿಳಿಯಲಾಗುತ್ತದೆ.
ಇದು ಸಹಾ ಕಡಿಮೆ ಪ್ರಮಾಣದಲ್ಲಿ ದೊರೆಯುವುದು.
ಈ ರುದ್ರಾಕ್ಷಿ ಧಾರಣೆಯಿಂದ ರೋಗಗಳಿಂದ ಮುಕ್ತಿ ದೊರೆತು,ಮನುಷ್ಯ ನಿರೋಗಿಯಾಗಿ ಬಲಶಾಲಿಯಾಗುತ್ತಾನೆ ಎಂದು ಹೇಳುತ್ತಾರೆ. ಬೆಲೆಯೂ ಹೆಚ್ಚುಇದೆ.
ಕುಂಭ ರಾಶಿ,ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು.

ಈ ಹದಿನಾಲ್ಕು ವಿಧದ ರುದ್ರಾಕ್ಷಿಗಳು ಪ್ರಕೃತಿಯಲ್ಲಿ ದೊರೆಯುತ್ತವೆ.ಇಚ್ಛೆಗೆ ಅನುಗುಣವಾಗಿ ಈ ರುದ್ರಾಕ್ಷಿಗಳನ್ನು ಧರಿಸುವುದರಿಂದ ಇಚ್ಛಿತ ಫಲ ದೊರಕುವುದೆಂದು ದೈವ ಭಕ್ತರಲ್ಲಿ ನಂಬಿಕೆ ಇದೆ.

ಇದಕ್ಕೂ ಹೆಚ್ಚಿನ ೩೪ ಮುಖಗಳ ವರೆಗಿನ ರುದ್ರಾಕ್ಷಿಗಳಿವೆ.ಆದರೆ ಅವು ಸಿಗುವುದು ತುಂಬಾ ವಿರಳ.ಜನ ಮನ್ನಣೆ ಪಡೆದಿರುವುದು ಈ ಹದಿನಾಲ್ಕು ಬಗೆಗಳು ಮಾತ್ರ.

ಸಂಕ್ಷಿಪ್ತವಾಗಿ ಮುಖಗಳಿಗನುಗುಣವಾಗಿ ದೇವತೆಗಳ ಪ್ರಾತಿನಿಧ್ಯ.

ಒಂದು ಮುಖ - ಶಿವಸ್ವರೂಪ.
ಎರಡು ಮುಖ - ಶಿವ ಶಕ್ತಿ.
ಮೂರು - ಅಗ್ನಿ
ನಾಲ್ಕು - ಬ್ರಹ್ಮ
ಐದು - ಕಾಲಾಗ್ನಿ
ಆರು - ಸುಬ್ರಹ್ಮಣ್ಯ
ಏಳು - ಆದಿಶೇಷ
ಎಂಟು - ವಿನಾಯಕ
ಒಂಬತ್ತು - ಭೈರವ,ದುರ್ಗಿ
ಹತ್ತು - ಮಹಾವಿಷ್ಣು
ಹನ್ನೊಂದು - ಏಕಾದಶ ರುದ್ರರು
ಹನ್ನೆರಡು - ದ್ವಾದಶಾದಿತ್ಯರು
ಹದಿಮೂರು - ಷಣ್ಮುಖ
ಹದಿನಾಲ್ಕು - ಭಗವಾನ್ ಶಿವ

ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ರುದ್ರಾಕ್ಷಿ ಧಾರಣೆ ಅತ್ಯುತ್ತಮವಾದ ಪರಿಹಾರ. ತಾಮ್ರದ ತಂಬಿಗೆಯಲ್ಲಿ ರಾತ್ರಿ ಮಲಗುವ ಮುನ್ನ ನೀರಿಟ್ಟು, ಅದರಲ್ಲಿ ರುದ್ರಾಕ್ಷಿಯನ್ನು ಹಾಕಿಡಬೇಕು. ಬೆಳಗ್ಗೆ ರುದ್ರಾಕ್ಷಿಯನ್ನು ಹೊರಗೆ ತೆಗೆದು, ಆ ನೀರನ್ನು ಸೇವನೆ ಮಾಡಿದರೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತವೆ.
ಇದಕ್ಕಾಗಿ ಪಂಚಮುಖಿ ರುದ್ರಾಕ್ಷಿಯನ್ನೇ ಬಳಸಬೇಕು.

ಪಂಚಮುಖಿ ರುದ್ರಾಕ್ಷಿಯನ್ನು ಸ್ತ್ರೀಪುರುಷ ಭೇದವಿಲ್ಲದೆ,
ಅಬಾಲವೃದ್ಧರಾದಿಯಾಗಿ ಯಾರು ಬೇಕಾದರೂ ಧರಿಸಬಹುದು.
***
ರುದ್ರಾಕ್ಷಿ ಮರ ರುದ್ರಾಕ್ಷಿಯ ಹಣ್ಣಿನೊಳಗೆ ರುದ್ರಾಕ್ಷಿ

ಹಣ್ಣಿನ ಮೂಲೆಯನ್ನು ಗಮನಿಸಿದರೆ,ಒಳಗಿರುವ ರುದ್ರಾಕ್ಷಿ ಎಷ್ಟು ಮುಖದ್ದು ಎಂದು ಗೊತ್ತಾಗುತ್ತದೆ.
ನೇಪಾಳದಲ್ಲಿ ಬೇಕಾದಷ್ಟು ಮರಗಳಿವೆ.
ನಾವು ನೇಪಾಳಕ್ಕೆ ಹೋದಾಗ ನೋಡಿದ್ದೆವು.
ಹವಾಯಿ ದ್ವೀಪಗಳಲ್ಲಿ ರುದ್ರಾಕ್ಷಿ ಮರಗಳ ವನವೇ ಇದೆ.ಅಲ್ಲಿನ ಕಾಡಿನಲ್ಲಿ ಶಿವಲಿಂಗವೂ ಇದೆ.!!
ಮರದ ಕೆಳಗೆ ರಾಶಿಗಟ್ಟಲೆ ರುದ್ರಾಕ್ಷಿ ಉದುರಿ ಬಿದ್ದಿರುವುದನ್ನು ನಾವು ನೋಡಬಹುದು.
ನಮ್ಮಲ್ಲಿ ಸಾಗರದ ಹತ್ತಿರದ ಮುರುಘಾ ಮಠದ ಪ್ರೌಢಶಾಲೆಯಲ್ಲಿ,
ಕೊಪ್ಪದ ಸಮೀಪದ ಜಯಪುರದ ಹಳ್ಳಿಯ ಒಬ್ಬರ ಮನೆಯಲ್ಲಿ ರುದ್ರಾಕ್ಷಿ ಮರ ಇದೆ.
***

ಯಾರು ಯಾವ ರುದ್ರಾಕ್ಷಿ ಧರಿಸಬೇಕು…!!!
ಏಕ ಮುಖಿ ರುದ್ರಾಕ್ಷಿ : ಈ ರುದ್ರಾಕ್ಷಿಯು ಶಿವನ ಸ್ವರೂಪ ಇದಕ್ಕೆ ಸೂರ್ಯ ದೇವ ಅಧಿಪತಿ. ಸಿಂಹ ರಾಶಿಯವರು ಮತ್ತು ಕೃತಿಕ, ಉತ್ತರ, ಉತ್ತರಾಷಾಢ ನಕ್ಷತ್ರದವರು ಧರಿಸಬೇಕು.

ದ್ವಿಮುಖಿ ರುದ್ರಾಕ್ಷಿ : ಈ ರುದ್ರಾಕ್ಷಿಗೆ ಚಂದ್ರ ಗ್ರಹ ಅಧಿಪತಿ. ಕರ್ಕಾಟಕ ರಾಶಿಯವರು ಮತ್ತು ರೋಹಿಣಿ, ಹಸ್ತ, ಶ್ರವಣ ನಕ್ಷತ್ರದವರು ಧರಿಸಬೇಕು

ತ್ರಿಮುಖ ರುದ್ರಾಕ್ಷಿ : ಈ ರುದ್ರಾಕ್ಷಿಗೆ ಕುಜ ಗ್ರಹ ಅಧಿಪತಿ. ಮೇಷ, ವೃಶ್ಚಿಕ ರಾಶಿಯವರು ಮತ್ತು ಮೃಗಶಿರ, ಚಿತ್ತ, ಧನಿಷ್ಠ ನಕ್ಷತ್ರದವರು ಧರಿಸಬೇಕು.

ಚರ್ತುಮುಖಿ ರುದ್ರಾಕ್ಷಿ : ಈ ರುದ್ರಾಕ್ಷಿಗೆ ಬುಧ ಗ್ರಹ ಅಧಿಪತಿ. ಕನ್ಯಾ, ಮಿಥುನ ರಾಶಿಯವರು ಮತ್ತು ಆಶ್ಲೇಷ, ಜೇಷ್ಠ, ರೇವತಿ ನಕ್ಷತ್ರದವರು ಧರಿಸಬೇಕು.

ಪಂಚಮುಖಿ ರುದ್ರಾಕ್ಷಿ : ಈ ರುದ್ರಾಕ್ಷಿಗೆ ಗುರು ಗ್ರಹ ಅಧಿಪತಿ. ಧನಸ್ಸು, ಮೀನ ರಾಶಿಯವರು ಮತ್ತು ಪುನರ್ವಸು, ವಿಶಾಖ, ಪೂರ್ವಭಾದ್ರ ನಕ್ಷತ್ರದವರು ಧರಿಸಬೇಕು.

ಷಷ್ಟಮುಖಿ ರುದ್ರಾಕ್ಷಿ : ಈ ರುದ್ರಾಕ್ಷಿಗೆ ಶುಕ್ರ ಗ್ರಹ ಅಧಿಪತಿ. ವೃಷಭ, ತುಲಾ ರಾಶಿಯವರು ಮತ್ತು ಭರಣಿ, ಪುಬ್ಬ, ಪೂರ್ವಾಷಾಢ ನಕ್ಷತ್ರದವರು ಧರಿಸಬೇಕು.

ಸಪ್ತಮಮಖಿ ರುದ್ರಾಕ್ಷಿ : ಈ ರುದ್ರಾಕ್ಷಿಗೆ ಶನಿ ಗ್ರಹ ಅಧಿಪತಿ. ಮಕರ, ಕುಂಭ ರಾಶಿಯವರು ಮತ್ತು ಪುಷ್ಯ, ಅನುರಾಧ, ಉತ್ತರಭಾದ್ರ ನಕ್ಷತ್ರದವರು ಧರಿಸಬೇಕು.

ಅಷ್ಟಮುಖಿ ರುದ್ರಾಕ್ಷಿ : ಈ ರುದ್ರಾಕ್ಷಿಗೆ ರಾಹು ಗ್ರಹ ಅಧಿಪತಿ ವಿಘ್ನೇಶ್ವರನ ಸ್ವರೂಪ. ಗಣಪತಿ ಪ್ರಿಯರು ಮತ್ತು ಆರಿದ್ರ, ಸ್ವಾತಿ, ಶತಭಿಷ ನಕ್ಷತ್ರದವರು ಧರಿಸಬೇಕು.

ನವಮುಖಿ ರುದ್ರಾಕ್ಷಿ : ಈ ರುದ್ರಾಕ್ಷಿಗೆ ಕೇತು ಗ್ರಹ ಅಧಿಪತಿ ದುರ್ಗ ಸ್ವರೂಪ. ದೇವಿ ಪ್ರಿಯರು ಮತ್ತು ಅಶ್ವಿನಿ, ಮಖ, ಮೂಲ ನಕ್ಷತ್ರದವರು ಧರಿಸಬೇಕು.

ದಶಮುಖಿ ರುದ್ರಾಕ್ಷಿ : ಈ ರುದ್ರಾಕ್ಷಿ ದೇವಿ ಲಕ್ಷ್ಮೀ ಸ್ವರೂಪ. ಹಣದ ಸಮಸ್ಸೆಯಲ್ಲಿರುವವರು ಈ ರುದ್ರಾಕ್ಷಿಯನ್ನು ಧರಿಸಬೇಕು.

ಸರಳ ಪರಿಹಾರ ಮಾಹಿತಿ 72
ಶ್ರೀ



ರುದ್ರಾಕ್ಷಿ ಮಣಿಗಳ ಉಪಯೋಗ


ರುದ್ರಾಕ್ಷಿ ಮಣಿಗಳು ಬಲವಾದ ವಿದ್ಯುತ್ಕಾಂತೀಯ ಗುಣಗಳನ್ನು ಹೊಂದಿವೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಹೆಚ್ಚು ಉಪಯುಕ್ತವಾಗಿವೆ. ದೇಹದಿಂದ ಶಾಖವನ್ನು ನಿವಾರಿಸುವ ಮೂಲಕ, ರುದ್ರಾಕ್ಷಿ ಸಹ ದೇಹವನ್ನು ಸಡಿಲಗೊಳಿಸುತ್ತದೆ.


ವಿಶೇಷವಾಗಿ ನಾಲ್ಕು ಮುಖದ ರುದ್ರಾಕ್ಷಿಯು ಸ್ಮರಣ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಸುಧಾರಿಸಲು ಸಹಾಯ ಮಾಡಲಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ರುದ್ರಾಕ್ಷವನ್ನು ಹೆಚ್ಚು ಉಪಯುಕ್ತವಾಗಿ ಧರಿಸುತ್ತಾರೆ.


ತ್ವಚೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ರುದ್ರಾಕ್ಷಿಯನ್ನು ಧರಿಸಿರುವುದು ಪ್ರಯೋಜನಕಾರಿಯಾಗಿದೆ. ಚರ್ಮ ರೋಗಗಳು, ಗಾಯಗಳು, ಕೆರಳಿಕೆ ಮತ್ತು ತುರಿಕೆ ಸೇರಿದಂತೆ ಚರ್ಮದ ಸಮಸ್ಯೆಗಳಿಗೆ ಇದು ಸಹಾಯ ಮಾಡುತ್ತದೆ. ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ, ರುದ್ರಾಕ್ಷಿಯನ್ನು ನೀರಿರುವ ತಾಮ್ರದ ಪಾತ್ರೆಗೆ ಹಾಕಲಾಗುತ್ತದೆ ಮತ್ತು ರಾತ್ರಿ ಪೂರ್ತಿ ಹಾಗೆಯೇ ಬಿಡಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಈ ನೀರು ಕುಡಿಯಬೇಕು. 


ಗಾಯಗಳನ್ನು ಗುಣಪಡಿಸಲು, 9 ಮುಖದ ರುದ್ರಾಕ್ಷಿ ಮತ್ತು ತುಳಸಿ ಎಲೆಗಳನ್ನು ಒಂದು ಪೇಸ್ಟ್ನಂತೆ ತಯಾರಿಸಿ ಬಳಸಲಾಗುತ್ತದೆ.


ನಿಯಮಿತವಾಗಿ ರುದ್ರಾಕ್ಷಿಯನ್ನು ಧರಿಸಿರುವವರು ಪ್ರಕಾಶಮಾನವಾಗಿರುವ ತ್ವಚೆಯನ್ನು ಹೊಂದಿರುತ್ತಾರೆ. ಅವರು ತ್ವಚೆಯ ಕಾಯಿಲೆಗಳನ್ನು ಸುಧಾರಿಸಿಕೊಂಡು ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತಾರೆ.  ಹೀಗೆ ರುದ್ರಾಕ್ಷಿಯನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.


ಸರಳ ಪರಿಹಾರ 
ಶ್ರೀ ಸುಧಾಕರ
*********

What type of Rudrakshi to wear ?.


*********





No comments:

Post a Comment