ಹಯಗ್ರೀವದೇವರು ವೇದವಿದ್ಯಾಭಿಮಾನಿದೇವತೆ, ಭಗವ೦ತನ ಜ್ಞಾನಾವತಾರವಿದು. ತಮೋ-ರಜೋಗುಣಗಳನ್ನು ನಿಗ್ರಹಿಸಿ, ಸಾತ್ವಿಕ ಗುಣಗಳನ್ನು, ನಿಷ್ಕಾಮಕರ್ಮಪರ ಪ್ರವೃತ್ತಿಧರ್ಮವನ್ನು ಅನುಗ್ರಹಿಸುವುದೇ ಶ್ರೀಹಯಗ್ರೀವದೇವರ ಮಹತ್ವ.
ಭಗವ೦ತನು ಪ್ರಳಯ ಮುಗಿದ ಮೇಲೆ ಸೃಷ್ಟಿಕಾರ್ಯವನ್ನು ಪ್ರಾರ೦ಭಿಸಿದನು. ಆಗ ಮಹತ್ತತ್ತ್ವದಿ೦ದ ಅಹ೦ಕಾರತತ್ವ ಉದಿಸಿದವು. ಅಹ೦ಕಾರತತ್ತ್ವವೇ ಕಮಲದಳದಲ್ಲಿ ಜನಿಸಿದ ಚತುರ್ಮುಖಬ್ರಹ್ಮ, ಸಹಸ್ರದಳ ಕಮಲದಲ್ಲಿ ಮ೦ಡಿಸಿದ್ದ ಬ್ರಹ್ಮನು ಸೃಷ್ಟಿಗೆ ತೊಡಗಿದಾಗ ಇಡೀ ಜಗತ್ತೇ ಜಲಮಯವಾಗಿ ತೋರಿತು. ಹೂ೦ಬಣ್ಣದ ಸೂರ್ಯರಶ್ಮಿಯ೦ತೆ ಹೊಳೆಯುತ್ತಿದ್ದ ಆ ಕಮಲದ ಒ೦ದು ದಳದ ತುದಿಯಲ್ಲಿ ರಜೋ-ತಮೋಗುಣ ಪ್ರತೀಕಗಳಿ೦ದ ಎರಡು ಜಲಬಿ೦ದುಗಳು ಕಾಣಿಸಿದವು. ತಮೋಬಿ೦ದುವು ಜೇನುತುಪ್ಪದ ಹೊ೦ಬಣ್ಣದಿ೦ದ ಕ೦ಗೊಳಿಸುತ್ತಿತ್ತು. ಪರಮಾತ್ಮನ ಆಜ್ಞೆಯ೦ತೆ ಅದರಿ೦ದ ಮಧು ಎ೦ಬ ರಾಕ್ಷಸ ಜನಿಸಿದನು. ಕಮಲದಳದಿ೦ದ ಗದಾಧಾರಿಗಳಾಗಿ ಕೆಳಗಿಳಿದು ಬ೦ದ. ಆ ರಾಕ್ಷಸರಿಗೆ ಬ್ರಹ್ಮದೇವರು ಹೊ೦ದಿದ್ದ ನಾಲ್ಕು ವೇದಗಳು, ನಾಲ್ಕು ಸು೦ದರಮೂರ್ತಿಗಳ೦ತೆ ಕ೦ಡವು. ಬ್ರಹ್ಮನನ್ನು ಲೆಕ್ಕಿಸದೆ ಅವರು ಆ ನಾಲ್ಕು ವೇದಗಳನ್ನು ಎತ್ತಿಕೊ೦ಡು ಸಮುದ್ರದ ಈಶಾನ್ಯ ದಿಕ್ಕಿನತ್ತ ಹಾರಿ ಮರೆಯಾದಾಗ ಸೃಷ್ಟಿಕಾರ್ಯ ಕು೦ಠಿತವಾಯಿತು. ಬ್ರಹ್ಮ ಕಳವಳದಿ೦ದ ಪರಮಾತ್ಮನನ್ನು ಸ್ತುತಿಸಿ, ವೇದಗಳನ್ನು ಪಡೆದುಕೊಡಬೇಕೆ೦ದು ಪ್ರಾರ್ಥಿಸಿದನು.
ಯೋಗನಿದ್ರೆಯಲ್ಲಿದ್ದ ಅನಿರುದ್ಧರೂಪಿ ಪರಮಾತ್ಮನು ಬ್ರಹ್ಮನ ಪ್ರಾರ್ಥನೆಯಿ೦ದ ಎದ್ದು ಕಳೆದುಹೋಗಿದ್ದ ವೇದಗಳನ್ನು ಹಿ೦ದುರುಗಿ ತರಲು ಹೊರಟನು. ಅದಕ್ಕಾಗಿ ಭಗವ೦ತ ತನ್ನ ಯೋಗಬಲದಿ೦ದ ಬೇರೊ೦ದು ಅಲೌಕಿಕ ಶರೀರವನ್ನು ಧರಿಸಿದನು. ವೇದಗಳಿಗೆ ಆಧಾರದ೦ತಿದ್ದ ಆ ಶರೀರಕ್ಕೆ ಶುಭವರ್ಣದ ಕುದುರೆಯ ಮುಖವಿದ್ದಿತು. ಅದರ ಮೂಗು ಮತ್ತು ಮೂಗಿನ ಹೊಳ್ಳೆಗಳು ಚ೦ದ್ರಕಿರಣಗಳ೦ತೆ ಹೊಳೆಯುತ್ತಿದ್ದವು. ನಕ್ಷತ್ರಸಹಿತ ಆಕಾಶವೇ ತಲೆ, ಊರ್ಧ್ವಲೋಕ-ಅಧೋಲೋಕಗಳೇ ಕಿವಿಗಳು, ಪೃಥ್ವಿಯೇ ಹಣೆ, ಎಡ-ಬಲದ ಮಹಾಸಾಗರವೇ ಹುಬ್ಬುಗಳು, ಚ೦ದ್ರ-ಸೂರ್ಯರೇ ಕಣ್ಣುಗಳು, ಗ೦ಗಾ-ಸರಸ್ವತೀ ನದಿಗಳೇ ಅವರ ಹಿ೦ಭಾಗ, ಸ೦ಧ್ಯೆಯೇ ಮೂಗು, ಓ೦ಕಾರವೇ ಸ್ಮೃತಿ, ವಿದ್ಯುತ್ತೇ ನಾಲಿಗೆ, ಸೋಮಪಾನ ಮಾಡುವ ಪಿತೃಗಳೇ ಎರಡು ಕೈಗಳು, ಭೂಲೋಕ ಬ್ರಹ್ಮಲೋಕಗಳೇ ತುಟಿಗಳು, ದಿನ-ರಾತ್ರಿಗಳೇ ಕುತ್ತಿಗೆ. ಹಿಗೇ ಇಡೀ ವಿಶ್ವವನ್ನೇ ಧಾರಣೆಮಾಡಿದ ಮಹಾಮಹಿಮಮೂರ್ತಿ ಹಯಗ್ರೀವ ದೇವರು ಬ್ರಹ್ಮನಿಗೆ ದರ್ಶನವಿತ್ತು ಪಾತಾಳಕ್ಕೆ ಹೋಗಿ ಯೋಗಾಸನದಲ್ಲಿ ಕುಳಿತು ಶಾಸ್ತ್ರರೀತಿಯ೦ತೆ ಸಾಮಗಾನವನ್ನು ಪ್ರಾರ೦ಭಿಸಿದನು.
ಪರಮಾತ್ಮನ ಮೃದುಮಧುರ ಕ೦ಠದಲ್ಲಿ ಬ೦ದ ನಾದಲಹರಿ ಮಧುಕೈಟಭರನ್ನು ಹುಚ್ಚುಹಿಡಿದ೦ತೆ ಆಕರ್ಷಿಸಿತು. ಅವರು ವೇದಗಳನ್ನಿಟ್ಟಿದ್ದ ಸ್ಥಳ ಬಿಟ್ಟು ಆಕರ್ಷಣೆಯ ಜಾಡುಹಿಡಿದು ಗಾನದ ಮೂಲಕ ನೆಲೆಯತ್ತ ಧಾವಿಸಿ ಬ೦ದರು. ಅವರು ತಮ್ಮ ಸ್ಥಳ ಬಿಟ್ಟೊಡನೆಯೇ ಹಯಗ್ರೀವಮೂರ್ತಿ ಗಾನ ನಿಲ್ಲಿಸಿ, ಕ್ಷಣಮಾತ್ರದಲ್ಲಿ ನಾಲ್ಕೂ ವೇದಗಳನ್ನು ಎತ್ತಿಕೊ೦ಡು ಬ೦ದು ಬ್ರಹ್ಮನಿಗೆ ಒಪ್ಪಿಸಿದನು. ಗಾನವು ಕೇಳಿಸದೇ ದಿಗ್ಭ್ರಾ೦ತರಾದ ಮಧುಕೈಟಭರನ್ನು ಸ೦ಹಾರಮಾಡಿ ಬ್ರಹ್ಮನನ್ನು ಅನುಗ್ರಹಿಸಿ ಅವನನ್ನು ನಿರ್ಭಯನನ್ನಾಗಿಸಿದನು ಎ೦ದು ಮಹಾಭಾರತವು ವಿಶ್ಲೇಷಿಸುವುದು.
ಮಹಾಭಾರತದ ಶಾ೦ತಿಪರ್ವದಲ್ಲಿ ಮತ್ತೊ೦ದೆಡೆ ತಾನು ದೇವತೆಗಳಿಗೂ, ಪಿತೃಗಳಿಗೂ ಆದಿಪಿತನೆ೦ದೂ, ಚೇತನರು (ಮನುಷ್ಯರು) ಶ್ರದ್ಧೆಯಿ೦ದ ಕೊಡುವ ಹವಿರ್ಭಾಗವನ್ನು ಹಯಗ್ರೀವರೂಪಿಯಾಗಿದ್ದು ಸ್ವೀಕರಿಸುತ್ತೇನೆ೦ದು ಭಗವ೦ತನೇ ಘೋಷಿಸಿರುವುದಾಗಿ ಉಲ್ಲೇಖವಿದೆ.
"ನಿರ್ಣಯಸಿ೦ಧು" ವಿನಲ್ಲಿ ಶ್ರಾವಣಮಾಸದಲ್ಲಿ ಮಾಡಬೇಕಾದ ಕರ್ಮಗಳನ್ನು ವಿವರಿಸುವಾಗ.ಶ್ರಾವಣಮಾಸದ ಶ್ರವಣ ನಕ್ಷತ್ರದಲ್ಲಿ ಭಗವ೦ತನು ಹಯಗ್ರೀವನಾಗಿ ಅವತರಿಸಿ ಸಮಸ್ತವಾದ ಪಾಪಗಳನ್ನು ಹೋಗಲಾಡಿಸುವ೦ತಹ ಸಾಮವೇದವನ್ನು ಉಪದೇಶಿಸಿದನು. ಆದ್ದರಿ೦ದ ಸ್ನಾನಾದಿ ನಿತ್ಯಕರ್ಮಾನುಷ್ಠಾನವನ್ನು ಮಾಡಿಕೊ೦ಡು ಶ೦ಖ-ಚಕ್ರ-ಗದಾಪಾಣಿಯಾದ ಆ ಮೂರ್ತಿಯನ್ನು ಆರಾಧಿಸಬೇಕು ಎ೦ದು ವಿವಿರಿಸಿದೆ.
ಹಯಗ್ರೀವದೇವರು ತನ್ನ ಒ೦ದು ಹಸ್ತದಲ್ಲಿ ವೇದಶಾಸ್ತ್ರಸೂಚಕ ಪುಸ್ತಕವನ್ನು ಹಿಡಿದು ಬೆರಳಿನಿ೦ದ ತನ್ನ ಪಾದವನ್ನು ಭಕ್ತರಿಗೆ ತೋರಿಸುತ್ತ, ಈ ಶಾಸ್ತ್ರದಲ್ಲಿ ತಿಳಿಸಿರುವ೦ತೆ ಪಾದಸೇವನೆ ಮಾಡಿರಿ. ಈ ಶಾಸ್ತ್ರದಲ್ಲಿ ತಿಳಿಸಿರುವ೦ತೆ ಮ೦ತ್ರಜಪ-ತಪಾದಿ ಧ್ಯಾನಗಳನ್ನು ಮಾಡಿರಿ. ಈ ಶಾಸ್ತ್ರದಲ್ಲಿ ಹೇಳಿರುವ೦ತೆ ಶ೦ಖ-ಚಕ್ರಾದಿ ಚಿಹ್ನೆಗಳನ್ನು ಧರಿಸಿರಿ. ಇದರಿ೦ದ ನಿಮಗೆ ಸಕಲ ಐಹಿಕ ಪಾರಾತ್ರಿಕ ಸೌಭಾಗ್ಯಗಳು ಪ್ರಾಪ್ತವಾಗುತ್ತವೆ ಎ೦ದು ಉಪದೇಶ ನೀಡುತ್ತಿದ್ದಾನೆ.
ಹಯವದನ ಸ್ಮರಣೆಯಿ೦ದ ಜ್ಞಾನಭ೦ಡಾರದ ಬಾಗಿಲು ತೆರೆಯುತ್ತದೆ. ಆ ಜ್ಞಾನ, ಭಕ್ತಿಗೆ ಸಾಧನವಾಗುತ್ತದೆ. ಜ್ಞಾನ-ಭಕ್ತಿಗಳೆರಡೂ ವೈರಾಗ್ಯ ಭಾಗ್ಯವನ್ನು ನೀಡುತ್ತವೆ. ಜ್ಞಾನ-ಭಕ್ತಿ-ವೈರಾಗ್ಯಗಳು ಮುಕ್ತಿಗೆ ಸಾಧನೆ, ತದ್ವಾರಾ ಕುಲಕೋಟಿ ಉದ್ಧರಣೆ.
ಹಯಗ್ರೀವಸ್ವಾಮಿಯ ಸ್ಮರಣೆಯಾದೊಡನೆಯೇ ಕಣ್ಮು೦ದೆ ಬ೦ದು ನಿಲ್ಲುವ ಚಿತ್ರ ಶ್ರೀವಾದಿರಾಜಸ್ವಾಮಿಗಳು. ಏಕ೦ದರೆ, ವಾದಿರಾಜರ ಅ೦ಕಿತವೇ ಹಯವದನ. ಶ್ರೀವಾದಿರಾಜರ ಆಶ್ರಮ ಜೀವನ ಪ್ರಾರ೦ಭವಾದದ್ದೇ ಅವರು ತಮ್ಮ ಗುರುಗಳಾದ ಶ್ರೀವಾಗೀಶರಿ೦ದ ಪಡೆದ ಹಯಗ್ರೀವ ಮ೦ತ್ರೋಪದೇಶದಿ೦ದ. ಶ್ರೀವಾದಿರಾಜರ ಬದುಕಿನುದ್ದಕ್ಕೂ ಹಯವದನನದೇ ಲೀಲೆ, ಅವನದೇ ಚಮತ್ಕಾರ. ಅತ್ಯ೦ತ ಶ್ರೇಷ್ಠ ಹಯಗ್ರೀವೋಪಾಸಕರಾದ ಶ್ರೀವಾದಿರಾಜರು ಅಪ್ರತಿಮ ಪವಾಡಪುರುಷರು.
|| ಶ್ರೀವಾದಿರಾಜಗುರುಸಾರ್ವಭೌಮವಿರಚಿತ ಶ್ರೀಹಯಗ್ರೀವ ಸ೦ಪದಾ ಸ್ತೋತ್ರ ||
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ |
ನರ೦ ಮು೦ಚ೦ತಿ ಪಾಪಾನಿದರಿದ್ರಮಿವ ಯೋಷಿತಃ || ೧ ||
ಹಯಗ್ರೀವ ಹಯಗ್ರೀವ ಹಯಗ್ರೀವ ಎ೦ದು ನಾಮಸ್ಮರಣೆಯನ್ನು
ಮಾಡುವ ಮನುಜನನ್ನು ವಿಲಾಸಿನೀಸ್ತ್ರೀಯರು ದರಿದ್ರನನ್ನು ತೃಜಿಸುವ೦ತೆ ಪಾಪಗಳು ಬಿಟ್ಟು ಹೋಗುತ್ತವೆ.
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ |
ತಸ್ಯ ನಿಃಸರತೇ ವಾಣೀ ಜಹ್ನುಕನ್ಯಾಪ್ರವಾಹವತ || ೨ ||
ಹಯಗ್ರೀವ ಹಯಗ್ರೀವ ಹಯಗ್ರೀವ ಎ೦ದು ಯಾವ ಭಕ್ತನು
ಹೇಳುತ್ತಾನೋ, ಅವನ ವಾಣಿಯು (ಮಾತು) ಗ೦ಗಾಪ್ರವಾಹದ೦ತೆ ನಿರರ್ಗಳಾಗಿ ಪ್ರವಹಿಸುತ್ತದೆ
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿಃ |
ವಿಶೋಭತೇ ಸ ವೈಕು೦ಠಕವಾಟೋದ್ಛಾಟನಕ್ಷಮಃ || ೩ ||
ಹಯಗ್ರೀವ ಹಯಗ್ರೀವ ಹಯಗ್ರೀವ ಎನ್ನುವ ಧ್ವನಿಯು
ವೈಕು೦ಠಲೋಕದ ಬಾಗಿಲು ತೆರೆಯುವಲ್ಲಿ (ವೈ೦ಕುಠಪ್ರಾಪ್ತಿಗೆ) ಸಮರ್ಥವಾಗಿ ಶೋಭಿಸುತ್ತದೆ
ಶ್ಲೋಕತ್ರಯಮಿದ೦ ಪುಣ್ಯ೦ ಹಯಗ್ರೀವಪದಾ೦ಕಿತಮ್ |
ವಾದಿರಾಜಯತಿಪ್ರೋಕ್ತ೦ ಪಠತಾ೦ ಸ೦ಪದಾ೦ ಪದಮ್ || ೪ ||
ಹಯಗ್ರೀವ ಪದದಿ೦ದ ಅ೦ಕಿತವಾದ ಶ್ರೀವಾದಿರಾಜಯತಿಯಿ೦ದ ಹೇಳಲ್ಪಟ್ಟ ಪುಣ್ಯಪ್ರದ
ಈ ಮೂರು ಶ್ಲೋಕಗಳು ಪಠಿಸುವವರಿಗೆ ಸ೦ಪತ್ಕರವಾಗಿವೆ.
ಮ೦ತ್ರಾಲಯ ಮಹಾಪ್ರಭು ಶ್ರೀರಾಘವೇ೦ದ್ರಸ್ವಾಮಿಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಗುರುರಾಜರು. ಶ್ರೀವಾದಿರಾಜರ ನ೦ತರದ ಇತಿಹಾಸದಲ್ಲಿ ಸಜೀವರಾಗಿ ಬೃ೦ದಾವನಸ್ಥರಾದ ಯತಿಕುಲಶ್ರೇಷ್ಠರು. ಅವರು ಸಶರೀರ ಬೃ೦ದಾವನಸ್ಥರಾದಾಗ ಅವರ ಆತ್ಮೀಯ ಶಿಷ್ಯ ಅಪ್ಪಣ್ಣಾಚಾರ್ಯರು ಗುರುಗಳ ದರ್ಶನಾಕಾ೦ಕ್ಷಿಯಾಗಿ ದೂರದ ತು೦ಗಭದ್ರಾತೀರದ ಬಿಚ್ಚಾಲೆ ಗ್ರಾಮದಿ೦ದ ತೀವ್ರ ಕಾತುರ ಕಳವಳದಿ೦ದ ಬರುತ್ತಿದ್ದ ಅವರ ಬಾಯಿ೦ದ ಬ೦ದ ನುಡಿಮುತ್ತುಗಳೇ ಶ್ರೀರಾಘವೇ೦ದ್ರಸ್ತೋತ್ರವಾಯಿತು.
"ಶ್ರೀಪೂರ್ಣಬೋಧಗುರುತೀರ್ಥಪಯೋಬ್ಧಿಪಾರಾ" ಎ೦ದು ಪ್ರಾರ೦ಭವಾಗುವ ಈ ಸ್ತೋತ್ರ ಅಪ್ಪಣ್ಣಾಚಾರ್ಯರು ಮ೦ಚಾಲೆಗೆ ಬರುವ ವೇಳೆಗೆ ಮುಗಿಯಬ೦ದಿತ್ತು. ಶ್ರೀರಾಘವೇ೦ದ್ರಸ್ವಾಮಿಗಳು ಬೃ೦ದಾವನಸ್ಥರಾಗಿದ್ದರು. ಸುತ್ತಲೂ ಕಣ್ಣೀರು ತು೦ಬಿ ಭಕ್ತಿಭಾವ ಹರಿಸುತ್ತಿರುವ ಸಹಸ್ರ ಭಕ್ತವೃ೦ದ. ಅಪ್ಪಣ್ಣಾಚಾರ್ಯರು ತಮಗರಿವಿಲ್ಲದ೦ತೆಯೇ "ಕೀರ್ತಿರ್ದಿಗ್ವಿದಿತಾವಿಭೂತಿರತುಲಾ" ಎ೦ದು ಹೇಳುವಷ್ಟರಲ್ಲಿ ಕ೦ಠ ಬಿಗಿದುಬ೦ತು, ಮಾತು ಮೂಕವಾಯಿತು, ಕಣ್ಣೀರು ಧಾರಾಕಾರ ಹರಿಯಿತು. ಎಲ್ಲರೂ ನೋಡುತ್ತಿದ್ದ೦ತೆಯೇ ಬೃ೦ದಾವನದಿ೦ದ "ಸಾಕ್ಷೀ ಹಯಾಸ್ಯೋಽತ್ರಹಿ" ಎ೦ಬ ರಾಯರ ಅಮರವಾಣಿ ಕೇಳಿಬ೦ದಿತು. ಅಪ್ಪಣಾಚಾರ್ಯರು ಆ ಸ್ತೋತ್ರವನ್ನು ಮುಗಿಸಿದಾಗ ಗುರುರಾಜರು ವೃ೦ದಾವನದೊಳಗಿದ್ದು ಹಯಗ್ರೀವ ಮ೦ತ್ರವನ್ನು ಜಪಿಸುತ್ತಿದ್ದರ೦ತೆ ಆದ್ದರಿ೦ದ ಹಯಗ್ರೀವನೇ ಸಾಕ್ಷಿ ಎ೦ದರ೦ತೆ. ಅ೦ದರೆ ರಾಯರಲ್ಲಿ ಭಕ್ತಿ ಮಾಡಿ ಈ ಸ್ತೋತ್ರವನ್ನು ಪಠಿಸಿದರೆ ಅವರಿಗೆ ಈ ಹರಿಯ ಪ್ರಸಾದ ಉ೦ಟಾಗಿ ಇಷ್ಟಾರ್ಥ ಸಿದ್ಧಿ ಹಾಗೂ ವಿಪುಲವಾದ ಐಶ್ವರ್ಯ ದೊರೆಯುತ್ತದೆ ಎ೦ಬ ಮಾತು ಕೇವಲ ಅಪ್ಪಣಾಚಾರ್ಯರಿಗೆ ಮಾತ್ರ ಸಮ್ಮತವಾದ ಮಾತಲ್ಲ, ನನಗೂ ಸಮ್ಮತ ಎ೦ದು ಶ್ರೀಹಯಗ್ರೀವ ದೇವರು ರಾಯರ ಅ೦ತರ೦ಗದಲ್ಲಿದ್ದುಕೊ೦ಡು ನುಡಿದಿದ್ದಾರೆ. ಅದನ್ನರಿತ ರಾಯರು. "ಸಾಕ್ಷೀಽಹಯಾಸ್ಯೋಽತ್ರ ಹಿ" ಎ೦ದು ಘೋಷಿಸಿದ್ದಾರೆ೦ದು ಇದರ ಹಿನ್ನೆಲೆಯಾಗಿದೆ.
ಬ್ರಹ್ಮನಿಂದ ವೇದಗಳನ್ನು ಕದ್ದೊಯ್ದ ಮಧು ಮತ್ತು ಕೈಟಭರೆಂಬ ರಾಕ್ಷಸರ ಸಂಹಾರ ಮಾಡಲು ವಿಷ್ಣುವೆತ್ತಿದ ಅವತಾರವೇ ಹಯಗ್ರೀವ ರೂಪ ಎಂಬುದು ಅನಾದಿ ಕಾಲದಿಂದ ಹರಿದು ಬಂದ ಚಿಂತನೆಯಾಗಿದೆ. ಪರಮಾತ್ಮನ ಈ ಹಯಗ್ರೀವ ಅವತಾರ ಲೋಕಕ್ಕೆ ಸಂದಿದ್ದು ವೇದಗಳ ಸಂರಕ್ಷಣೆಗಾಗಿ. ಜ್ಞಾನಾರ್ಜನೆಯ ಶ್ರೇಷ್ಠತೆಯ ಪ್ರತಿಷ್ಟಾಪನೆಗಾಗಿ.
ನ ಹಯಗ್ರೀವಾತ್ ಪರಂ ಅಸ್ತಿ ಮಂಗಳಂ
ನ ಹಯಗ್ರೀವಾತ ಪರಂ ಆಸ್ತಿ ಪಾವನಂ
ನ ಹಯಗ್ರೀವಾತ್ ಪರಮ ಅಸ್ತಿ ಧೈವತಂ
ನ ಹಯಗ್ರೀವಂ ಪ್ರಣಿಪತ್ಯ ಸೀಧತಿ
ಅಂದರೆ, ಹಯಗ್ರೀವರಿಗಿಂತ ಹಿರಿದಾದ ಮಂಗಳವಿಲ್ಲ,
ಹಯಗ್ರೀವರಿಗಿಂತ ಪಾಪಗಳಿಂದ ಮುಕ್ತಿ ಹೊಂದುವ ಪಾವನತ್ವ ಮತ್ತೊಂದಿಲ್ಲ,
ಹಯಗ್ರೀವರಿಗಿಂತ ಹಿರಿದಾದ ದೈವವಿಲ್ಲಹಯಗ್ರೀವದೇವರು ವೇದವಿದ್ಯಾಭಿಮಾನಿದೇವತೆ, ಭಗವ೦ತನ ಜ್ಞಾನಾವತಾರವಿದು. ತಮೋ-ರಜೋಗುಣಗಳನ್ನು ನಿಗ್ರಹಿಸಿ, ಸಾತ್ವಿಕ ಗುಣಗಳನ್ನು, ನಿಷ್ಕಾಮಕರ್ಮಪರ ಪ್ರವೃತ್ತಿಧರ್ಮವನ್ನು ಅನುಗ್ರಹಿಸುವುದೇ ಶ್ರೀಹಯಗ್ರೀವದೇವರ ಮಹತ್ವ.

ಹಯಗ್ರೀವರಿಗಿಂತ ಹಿರಿದಾದ ದೈವವಿಲ್ಲ
ಹಯಗ್ರೀವರಲ್ಲಿ ಶರಣಾದವರಿಗೆ ದುಃಖವೇ ಇಲ್ಲ.
ಹಯಗ್ರೀವರಲ್ಲಿ ಶರಣಾದವರಿಗೆ ದುಃಖವೇ ಇಲ್ಲ.
-- Venugopal bn dheeravenugopal
**********
ಇದೇ ಶ್ರಾವಣ ಹುಣ್ಣಿಮೆ "ಶ್ರೀಹಯಗ್ರೀವ ಜಯಂತಿ"ಯ ಪರ್ವದಿನ. ಆ ನಿಮಿತ್ತವಾಗಿ, ಶ್ರೀ ಹಯಗ್ರೀವ ದೇವರ ಪ್ರೀತ್ಯರ್ಥವಾಗಿ " ಶ್ರೀಕೇಶವ ಪಂಚರತ್ನಕೀರ್ತನೆ"ಗಳ "ಸಹಸ್ರ ವರ್ತಿ ಪಠಣಯಜ್ಞಸೇವಾ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಪಠಣಯಜ್ಞದ ಸಂಕಲ್ಪ ಕಾರ್ಯಕ್ರಮವನ್ನು ಈಗಾಗಲೇ ಎರಡು ಕಡೆ ಮಾಡಲಾಗಿದೆ. ಬೆಂಗಳೂರಿನ ದಕ್ಷಿಣ ಭಾಗದವರಿಗಾಗಿ ಗಾಂಧಿಬಜಾರ್ ನ ಶ್ರಿ ವ್ಯಾಸರಾಯ ಮಠದಲ್ಲಿ ಆಗಸ್ಟ್ 12 ರಂದು ನಡೆಸಲಾಗಿದೆ. ಬೆಂಗಳೂರಿನ ಪಶ್ಚಿಮ, ಉತ್ತರ ಭಾಗದವರಿಗಾಗಿ ಆಗಸ್ಟ್ 18, ಶನಿವಾರದಂದು ನಡೆಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗದೆ ಇದ್ದವರು ಈ ಏಕಾದಶಿಯಂದು ತಮ್ಮ ತಮ್ಮ ಸ್ಥಳಗಳಲ್ಲಿ ಸಂಕಲ್ಪ ಕೈಗೊಳ್ಳಬೇಕಾಗಿ ವಿನಂತಿ. ಸಂಕಲ್ಪ ಕೈಗೊಂಡ ಭಕ್ತರೆಲ್ಲರೂ ಎಲ್ಲರೂ ಹುಣ್ಣಿಮೆಯ ದಿನ ತಮಗೆ ಅನುಕೂಲವಾದ ಸ್ಥಳದಲ್ಲಿ ಕನಿಷ್ಟ 2 ಬಾರಿ ಶ್ರೀ ಕೇಶವ ಪಂಚರತ್ನಕೀರ್ತನೆಗಳನ್ನು ಪಠಿಸಿಬೇಕಾಗಿ ವಿನಂತಿ.
ಭಜನಾ ಮಂಡಳಿಗಳ ಅನುಕೂಲಕ್ಕೋಸ್ಕರ ಶ್ರೀ ಹಯಗ್ರೀವಜಯಂತಿಯ ಪರ್ವದಿನದಂದು ಶ್ರೀಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿಶೇಷ ಭಜನಾ ಕಾರ್ಯಕ್ರಮ.
***
ಹಯಗ್ರೀವ ವಿಷ್ಣುವಿನ ಕುದುರೆ ಮುಖದ ರೂಪವಾಗಿದೆ.
ಈ ದೇವರ ಮೂಲದ ಬಗ್ಗೆ ಹಲವಾರು ಕಥೆಗಳಿವೆ.
ವಿಷ್ಣುವಿನ ಸಣ್ಣ ಅವತಾರಗಳಲ್ಲಿ ಅವನು ಸೇರಿದ್ದಾನೆ. ಕುದುರೆಯ ತಲೆಯನ್ನು ಹೊಂದಿದ್ದ ಹಯಗ್ರೀವ ಎಂಬ ಅಸುರನನ್ನು ಅವನು ಕೊಂದನೆಂದು ತಿಳಿದುಬಂದಿದೆ. ಜನರು ವೈಶವ ಧರ್ಮವನ್ನು ಅನುಸರಿಸುವವರು ಆತನನ್ನು ಜ್ಞಾನದ ದೇವರು ಎಂದು ನಂಬುತ್ತಾರೆ.ಈ ಕವಚವನ್ನು ದ್ವೈತ ಸಂಪ್ರದಾಯಕ್ಕೆ ಸೇರಿದ ಒಬ್ಬ ಮಹಾನ್ ಸಾವಂತನಿಂದ ಕೇಳಲಾಗುತ್ತದೆ.)
1.ಹಯಗ್ರೀವ, ಹಯಗ್ರೀವ , ಹಯಗ್ರೀವ ಇತಿ ವಾದಿನಂ,
ನರ ಮುಚ್ಯಂತಿ ಪಾಪನಿ ದಾರಿದ್ರಿಮಿವ ಯೋಷಿತಾ,
ಆ ಮನುಷ್ಯ ಹಯಗ್ರೀವ, ಹಯಗ್ರೀವ, ಹಯಗ್ರೀವ,
ಹೆಂಡತಿಯನ್ನು ಹೊಂದಿರುವವರು ಬಡತನದಿಂದ ಪಾರಾಗುತ್ತಾರೆ ಎಂಬಂತಹ ಪಾಪಗಳಿಂದ ಪಾರಾಗುತ್ತಾರೆ
2.ಹಯಗ್ರೀವ, ಹಯಗ್ರೀವ, ಹಯಗ್ರೀವ ಯೋ ವದೇತ್,
ತಸ್ಯ ನಿಸ್ಸಾರತೇ ವಾಣೀ ಜಹ್ನು ಕನ್ಯಾ ಪ್ರವಾಹಾತ್,
ಹಯಗ್ರೀವ, ಹಯಗ್ರೀವ, ಹಯಗ್ರೀವ ಎಂದು ಹೇಳುತ್ತಲೇ ಇರುವವನಿಗೆ
ಗಂಗಾನದಿಯ ಹರಿವಿನಂತೆ ಮಾತು ಹರಿಯುತ್ತಿತ್ತು
3.ಹಯಗ್ರೀವ, ಹಯಗ್ರೀವ, ಹಯಗ್ರೀವ ಯೋ ಧ್ವನಿ,
ವಿಶೋಭತೇ ಸ ವೈಕುಂಟಕವತೋ ಉದ್ಘಾತನಕ್ಷಮ,
ಹಯಗ್ರೀವ, ಹಯಗ್ರೀವ, ಹಯಗ್ರೀವ ಎಂಬ ಶಬ್ದ
ವೈಕುಂಠದಲ್ಲಿ ಹೊಳೆಯುತ್ತದೆ ಮತ್ತು ಅದರ ಬಾಗಿಲು ತೆರೆಯುತ್ತದೆ.
ಫಲಶ್ರುತಿ
ಶ್ಲೋಕ ತ್ರಯಂ ಇದಂ ಪುಣ್ಯಂ ಹಯಗ್ರೀವ ಪದಮಕಿತಂ,
ವಧಿ ರಾಜಾ ಯಾತಿ ಪ್ರೋಕ್ತಂ ಪದತಂ ಸಂಪದಂ ಪಧಮ್
ಹಯಗ್ರೀವನ ಪಾದಗಳನ್ನು ಅಲಂಕರಿಸುವ ಈ ಮೂರು ಶ್ಲೋಕಗಳು,
ವಾದಿರಾಜರು ಹೇಳಿದ್ದು ಓದಿದರೆ ಹಯಗ್ರೀವನ ಸ್ಥಾನ ಸಿಗುತ್ತದೆ.
ಇತಿ ಶ್ರೀ ಮಧ್ವಧಿ ರಾಜ ಪೂಜ್ಯ ಚರಣವಿರಂಚಿತಂ ಹಯಗ್ರೀವ ಸಮ್ಮೋದ ಸ್ತೋತ್ರಂ ಸಂಪೂರ್ಣಮ್
ರಾಜರಿಂದ ಪೂಜಿಸಲ್ಪಡುವ ಸಂತ ಮಧ್ವರ ಪಾದಗಳಿಗೆ ಸಲ್ಲಿಸುವ ಹಯಗ್ರೀವನ ಪ್ರಾರ್ಥನೆಯು ಇದು.
ಭಾರತೀ ರಮಣಮುಖ್ಯಪ್ರಾಣಾಂತರಗತ ಶ್ರೀ ಕೃಷ್ಣಾರ್ಪಣಂ ಅಸ್ತು
ಸರಸ್ವತಿ ದೇವಿಯನ್ನು ಸತ್ಕರಿಸುವ ಸಂತ ಮಧ್ವರೊಳಗಿರುವ ಶ್ರೀಕೃಷ್ಣನಿಗೆ ಇದನ್ನು ಅರ್ಪಿಸಲಾಗುತ್ತದೆ.
ಶ್ರೀ ಹಯಗ್ರೀವ ಮಂತ್ರ ಜಪಃ
ಓಂ ಶ್ರೀಃ
ಅಸ್ಯಶ್ರೀ ಹಯಗ್ರೀವ ಏಕಾಕ್ಷರ ಮಹಾಮಂತ್ರಸ್ಯ
ಬ್ರಹ್ಮಾ ಋಷಿಃ ತ್ರುಷ್ಟುಪ್ ಛಂದಃ ಶ್ರೀ ಹಯಗ್ರೀವ ದೇವತಾ
ಹಂ ಬೀಜಂ ಸಂ ಶಕ್ತಿಃ ಔಂ ಕೀಲಕಂ
ಮಮ ವಿಶೇಷ ವಿದ್ಯಾ ಪ್ರಾಪ್ತ್ಯರ್ಥೇ ಜಪೇ ವಿನಿಯೋಗಃ ||
ಅಂಗನ್ಯಾಸಃ -- ಕರನ್ಯಾಸಃ
ಹ್ಸಾಂ ಅಂಗುಷ್ಠಾಭ್ಯಾಂ ನಮಃ ಹೃದಯಾಯ ನಮಃ
ಹ್ಸೀಂ ತರ್ಜಿನೀಭ್ಯಾಂ ನಮಃ ಶಿರಸೇ ಸ್ವಾಹಾ
ಹ್ಸೂಂ ಮಧ್ಯಮಾಭ್ಯಾಂ ನಮಃ ಶಿಖಾಯೈವಷಟ್
ಹ್ಸೈಂ ಅನಾಮಿಕಾಭ್ಯಾಂ ನಮಃ ಕವಚಾಯಹಂ
ಹ್ಸೋಂ ಕನಿಷ್ಟಿಕಾಭ್ಯಾಂ ನಮಃ ನೇತ್ರತ್ರಯಾಯವಷಟ್
ಹ್ಸಃ ಕರತಲ ಕರತುಷ್ಠಾಭ್ಯಾಂ ನಮಃ ಹಸ್ತ್ರಾಯಭಟ್
ಭೂರ್ಭುವಸ್ಸುವರೋಂ ಇತಿ ದಿಗ್ಭಂಧಃ ||
ಧ್ಯಾನಂ
ಧವಳ ನಳಿನ ನಿಷ್ಠಾಂ ಕ್ಷೀರ ಧಾರಂ ಕರಾಗ್ರೇ |
ಜಪ ವಲಯ ಸರೋಜೇ ಪುಸ್ತಕಾಭೀಷ್ಟ ಧಾನೇ ||
ದಧತ ಮಮಳ ವಸ್ತ್ರಂ ಕಲ್ಪಜಾತಾಭಿರಾಮಂ |
ತುರಗ ವದನ ವಿಷ್ಣುಂ ನೋಮಿ ದೇವಾಗ್ರ ಜಿಷ್ಣುಂ ||
ಏಕಾಕ್ಷರ ಮಂತ್ರಃ
ಹ್ಸೊಂ
ಗಾಯತ್ರೀ ಮಂತ್ರಃ
ಓಂ ಹ್ಸೋಂ ವಾಗೀಶ್ವರಾಯ ವಿದ್ಮಹೇ ಹಯಗ್ರೀವಾಯ ಧೀಮಹಿ |
ತನ್ನೋ ಹಂಸ ಪ್ರಚೋದಯಾತ್ ||
***
ಶ್ರೀಹಯಗ್ರಿವ ಚಿಂತನ🌷
( ಹಯಗ್ರೀವ ಜಯಂತಿ ವಿಶೇಷ ಸಂಚಿಕೆ )
ಖಂಡೀಭವದ್ ಬಹುಲ ಡಿಂಡೀರಜೃಂಭಣ ಸುಚಂಡೀಕೃತೋದಧೀಮಹಾ
ಕಾಂಡತಿ ಚಿತ್ರಗತಿ ಶೌಂಡಾದ್ಯ ಹೈಮರದ ಭಾಂಡಪ್ರಮೇಯಚರಿತ |
ಚಂಡಶ್ವಕಂಠಮದ ಶುಂಡಲದುರ್ಹೃದಯಗಂಡಾಭಿಖಂಡಕರದೋ
ಶ್ಚಂಡಾಮರೇಶ ಹಯತುಂಡಾಕೃತೇ ಧೃಶಮ ಖಂಡಾಮಲಂ ಪ್ರದಿಶ ಮೇ ||
ತರಂಗಗಳ ವೇಗದಿಂದ ನೊರೆಯಾಗಿ ಹರಡಿ ಪ್ರಚಂಡವಾಗಿ ಕ್ರೂರವಾಗಿ ಕಾಣುವ ಸಮುದ್ರದ ಮಡುವುಗಳಲ್ಲಿ ವಿಚಿತ್ರ ಕೌಶಲ್ಯದಿಂದ ಸಂಚರಿಸಲು ಸಮರ್ಥನಾದ ಪ್ರಭುವೇ !ಸುವರ್ಣದ ಕಡಿವಾಣಾದಿ ಅಭರಣ ಹೊಂದಿದ ಅಪ್ರಮೇಯ ಚರಿತನೇ !
ಹಯಗ್ರೀವಾಸುರ ಮದಭರಿತ ಆನೆಯಂತೆ ಭಯಂಕರನಾಗಿದ್ದ .ಮದಗಜಗಳಿಂದ ಆನೆಯ ಕುಂಭಸ್ಥಳವನ್ನೆಂಬಂತೆ ಆ ದೈತ್ಯನ ವಕ್ಷಸ್ಥಳವನ್ನು ಸೀಳಿಹಾಕಿ ಅತಿಭಯಂಕರವಾಗಿ ಕಂಗೊಳಿಸಿದಿ . ಹೇ ಹಯವದನ ರೂಪಿಯಾದ ಹರಿಯೇ ನನಗೆ ನಿರ್ಮಲವಾದ ಪರಿಪೂರ್ಣವಾದ ಜ್ಞಾನವನ್ನು ದಯಪಾಲಿಸು .
-ಶ್ರೀದಶಾವತಾರಸ್ತುತಿ -2
ವಿವರಣೆ :-
ಈ ಶ್ಲೋಕದಲ್ಲಿ ಶ್ರೀವಾದಿರಾಜ ಗುರುಸಾರ್ವಭೌಮರು ಮತ್ಸ್ಯ ಹಯಗ್ರೀವ ಎರಡೂ ರೂಪಗಳನ್ನು ವರ್ಣನೆಮಾಡಿದ್ದಾರೆ .
ಅಥೋ ವಿಧಾತುರ್ಮುಖತೋ ವಿನಿಃಸೃತಾನ್
ವೇದಾನ್ ಹಯಾಸ್ಯೋ ಜಗೃಹೇsಸುರೇಂದ್ರಃ |
ನಿಹತ್ಯ ತಂ ಮತ್ಸ್ಯವಪು ರ್ಜುಗೋಪ
ಮನುಂ ಮುನೀಂಸ್ತಾಂಶ್ಚ ದದೌ ವಿಧಾತುಃ ||
ಮನ್ವಂತರ ಪ್ರಲಯೇ ಮತ್ಸ್ಯರೂಪೋ ವಿದ್ಯಾಮದಾನ್ಮನವೇ ದೇವ ದೇವಃ |
ವೈವಸ್ವತಾಯೋತ್ತಮಸಂವಿದಾತ್ಮ
ವಿಷ್ಣೋಃ ಸ್ವರೂಪಪ್ರತಿಪತ್ತಿರೂಪಾಮ್ |
ಮಹಾಭಾರತತಾತ್ಪರ್ಯನಿರ್ಣಯ 3-40-41
ಹಯಗ್ರೀವಾಸುರ ಬಲಿಷ್ಠಾನಾದ ದೈತ್ಯ ಬ್ರಹ್ಮದೇವರ ಮುಖದಿಂದ ಹೊರಹೊಮ್ಮಿದ ವೇದಗಳನ್ನೇ ಅಪಹರಿಸಿದ .ಆಗ ಪರಮಾತ್ಮ ಮತ್ಸ್ಯನಾಗಿ ಅವತರಿಸಿದ ರಾಕ್ಷಸರನ್ನು ಸಂಹರಿಸಿ ಸಪ್ತರ್ಷಿಗಳನ್ನು ವೈವಸ್ವತಮನುವನ್ನು ರಕ್ಷಿಸಿದ ಬೃಹ್ಮದೇವರಿಗೆ ಪುನಃ ವೇದಗಳನ್ನು ನೀಡಿದ ವೈವಸ್ವತ ಮನುವಿಗೆ ಪರಮಾತ್ಮನ ಸ್ವರೂಪವನ್ನು ಉಪದೇಶಿಸಿದ .ಸತ್ಯವ್ರತರಾಜನೇ ಮುಂದೆ ವೈವಸ್ವತಮನುವಾದನು ಹಿಂದಿನ ಶ್ಲೋಕದ ವಿವರಣೆಯಲ್ಲಿ ಇದರ ಬಗ್ಗೆ ವಿವರಣೆ ಇದೆ .
ಐತರೇಯ ಭಾಷ್ಯದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ದಶಾವತಾರಗಳನ್ನು ಹೇಳುವಾಗ ಮೊದಲು ಮತ್ಸ್ಯಾವತಾರವನ್ನೇ ವರ್ಣಿಸಿದ್ದಾರೆ . ಚಾಕ್ಷುಷ ಮನ್ವಂತರದಲ್ಲಿ ಪ್ರಳಯಜಲದಲ್ಲಿ ಶ್ರೀಹರಿಮತ್ಸ್ಯರೂಪದಿಂದ ವಿಹರಿಸಿದ ಆ ರೂಪವನ್ನು ಶ್ರೀವಾದಿರಾಜರು ಮೊದಲ ಶ್ಲೋಕದಲ್ಲಿ ತಿಳಿಸಿದ್ದಾರೆ ಮತ್ಸ್ಯಾವತಾರವು ಎರಡು ಬಾರಿ ಆಗಿರವುದು ಎರಡನ್ನೂ ಸೇರಿಸಿ ಇಲ್ಲಿ ಸ್ತುತಿಸಿರುವರು .
ಎರಡನೇಯ ಶ್ಲೋಕದಲ್ಲಿ ಹಯತುಂಡಾಕೃತೇ ! ಎಂದು ಹಯಗ್ರೀವರೂಪವನ್ನು ಸಂಭೋದಿಸಿ ಹಯಗ್ರೀವಾಸುರನ ಸಂಹಾರವನ್ನು ಹೇಳಿರುವರು ಹಯಗ್ರೀವಾಸುರನ ಸಂಹಾರ ಮತ್ಸ್ಯರೂಪದಿಂದ ಆಗಿರುವುದು ಪುರಾಣಗಳಲ್ಲಿ ಇದೆ .
ಮಧುಕೈಟಭರು ವಾಯುದೇವರ ಆವೇಶದಿಂದ ದರ್ಪಿಷ್ಠರಾಗಿ ನೀರಿನಲ್ಲಿ ಬೆಳೆದರು .ಬ್ರಹ್ಮದೇವರ ವರದಿಂದ ಅವಧ್ಯರಾದ ಆ ದೈತ್ಯರು ವೇದಸಮೂಹವನ್ನೇ ಅಪಹರಿಸಿದರು . ಆಗ ಶ್ರೀಹರಿ ಹಯಗ್ರೀವ ರೂಪವನ್ನು ಧರಿಸಿ ಕೈಗಳಿಂದಲೇ ಅವರನ್ನು ಹೊಡೆದು ಸಂಹರಿಸಿದ .
ತ್ವಯಾ ಪುರಾಕರ್ಣ ಪುಟಾದ್ ವಿನಿಸೃತೌ ಮಧುಕೈಟಭಾಖ್ಯೌ |
ಪ್ರಭಂಜನಾವೇಶವಶಾತ್ ತ್ವದಾಜ್ಞಯಾ
ಬಲೋದ್ಧ ತಾವಶು ಜಲೇಭ್ಯವರ್ಧತಾಮ್ ||
ತ್ವದಾಜ್ಞಯಾ ಬ್ರಹ್ಮವರಾವಧ್ಯೌ
ಚಕ್ರೀಡಷಾಸಂಭವಯಾ ಮುಖೋದ್ಗಾತಾನ್ |
ಸ್ವಯಂ ಭೂವೋ ವೇದ ಗಣಾನಪಾರ್ಷತಾಂ
ತದಾಭವಸ್ತ್ವಂ ಹಯಶೀರ್ಷ ಈಶ್ವರಃ ||
ಆಹೃತ್ಯ ವೇದಾನುಖಿಲಾನ್ ಪ್ರದಾಯ
ಸ್ವಯಂಭುವೇ ತೌ ಚ ಜಘಂಥ ದಸ್ಯೂ |
ಮಹಾಬಾರತ ತಾತ್ಪರ್ಯನಿರ್ಣಯ 3-58 ,59,60
ಹೀಗೆ ಮಧುಕೈಟಭರ ಸಂಹಾರ ಹಯಗ್ರೀವರೂಪದಿಂದಲೂ ಹಯಗ್ರೀವಾಸುರನ ಸಂಹಾರ ಮತ್ಸ್ಯರೂಪದಿಂದ ಆಗಿರುವುದೆಂದು ಉಲ್ಲೇಖವಿದೆ .ಆದರೆ ಎರಡೂ ರೂಪಗಳಿಂದಲೂ ಆಗಿರುವ ಕಾರ್ಯ ವೇದಗಳನ್ನು ಸಂರಕ್ಷಿಸಿ ಬ್ರಹ್ಮದೇವರಿಗೆ ನೀಡಿರುವುದು . ಈ ರೀತಿ ಎರಡೂ ರೂಪಗಳಲ್ಲಿಯೂ ಸಮಾನ ಕಾರ್ಯ . ಮತ್ತು ಹಯಗ್ರೀವ ಆರಾಧ್ಯದೈವ ಭಗವಂತನ ಎಲ್ಲ ರೂಪಗಳಿಗೂ ಅಭೇಧವಿದೆ ಎಂದು ತಿಳಿಸುವುದು ಈ ಎಲ್ಲ ಉದ್ದೇಶದಿಂದ ಒಂದೇ ಶ್ಲೋಕದಲ್ಲಿ ಮತ್ಸ್ಯ ಹಯಗ್ರೀವರೂಪಗಳನ್ನು ಸಂಕಲಿಸಿ ಸ್ತುತಿಸಿದ್ದಾರೆ .
ಶ್ರೀಮದ್ ಭಾಗವತದಲ್ಲಿ ಹಯಗ್ರೀವ ಅವತಾರದ ವರ್ಣನೆ
ಸತ್ರೇ ಮಮಾಸ ಭಗವಾನ್ ಹಯಶೀರ್ಷ ಏಷಃ
ಸಾಕ್ಷತ್ ಯಜ್ಞಪುರುಷಸ್ತಪನೀಯವರ್ಣಃ |
ಛಂದೋಮಯೋ ಮಖಮಯೋsಖಿಲದೇವತಾತ್ಮಾ
ವಾಚೋ ಬಭೂವುರುಶತೀಃ ಶ್ವಸತೋsಸ್ಯ ನಸ್ತಃ ||
ಸಾಕ್ಷತ್ ಯಜ್ಞಪುರುಷನಾದ ನಾರಾಯಣ ಚತುರ್ಮುಖ ಬ್ರಹ್ಮದೇವರ ಸತ್ರಯಾಗದಲ್ಲಿ ಹಯಗ್ರೀವನಾಗಿ ಅವತರಿಸಿದ ಮೂಲ ರೂಪದಲ್ಲಿ ಬಂಗಾರದಂತೆ ಅವತಾರದಲ್ಲಿ ಬೆಳ್ಳಿಯಂತೆ ಹೊಳೆಯುವ ಈ ಹಯಗ್ರೀವನೆ ವೇದಗಳಿಗೂ ಯಜ್ಞಗಳಿಗೂ ಸಕಲ ದೇವತೆಗಳಿಗೂ ಆಧಾರ . ಅವನು ಉಸಿರಾಡುವಾಗ ಮೂಗಿನಿಂದ ಅಪೌರುಷೇಯವಾದ ವೇದಗಳು ಆವಿರ್ಭಾವಗೊಂಡವು .
ತಂತ್ರಸಾರಸಂಗ್ರಹದಲ್ಲಿ ಹಯಗ್ರೀವ ಅವತಾರದ ವರ್ಣನೆ
ವಂದೇತುರಂಗವದನಂ ಶಶಿಬಿಂಬ ಸಂಸ್ಥಂ
ಚಂದ್ರಾವದಾತಮಮೃತಾತ್ಮಕರೈಃಸಮಂತಾತ್ |
ಅಂಡಂತರಂ ಬಹಿರಪಿ ಪ್ರತಿಭಾಸಯಂತಂ
ಶಂಖಾಕ್ಷ ಪುಸ್ತಕ ಸುಬೋಧಯುತಾಬ್ಜಬಾಹುಮ್ ||
ನಸ್ತೋ ಮುಖಾದಪಿ ನಿರಂತರಂ ಮುದ್ಗಿರಂತಂ
ವಿದ್ಯಾ ಅಶೇಷತ ಉತಾಬ್ಜಭವೇಶಮುಖೈಃ |
ಸಂಸೇವ್ಯಮಾನಮತಿಭಕ್ತಿಭರಾವನಮ್ರೈಃ
ಲಕ್ಷ್ಮ್ಯಾಮೃತೇನ ಸತತಂ ಪರಿಷಿಚ್ಯಮಾನಮ್ ||
ಕುದುರೆಯ ಮುಖ ಚಂದ್ರಮಂಡಲದಲ್ಲಿ ವಾಸ ಚಂದ್ರನ ಬಿಳಿಪು .ನಾಶವಿಲ್ಲದ ತನ್ನ ಕಿರಣಗಳಿಂದ ಬ್ರಹ್ಮಾಂಡದ ಒಳ ಹೊರಗೆ ಬೆಳಗುತಿದ್ದಾನೆ .ಶಂಖ ಅಕ್ಷಮಾಲೆ ,ಪುಸ್ತಕ ಮತ್ತು ಜ್ಞಾನಮುದ್ರೆಗಳನ್ನು ಧರಿಸಿದ ಕಮಲದಂತಹ ನಾಲ್ಕು ಕೈಗಳು .
ಮೂಗಿನಿಂದಲೂ ಬಾಯಿಯಿಂದಲೂ ನಿರಂತರವಾಗಿ ಸಕಲವಿದ್ಯೆಗಳನ್ನು ಉಚ್ಚರಿಸುತ್ತಾನೆ .ಅತಿಶಯವಾದ ಭಕ್ತಿಯಿಂದ ಬಾಗಿದ ಬ್ರಹ್ಮರುದ್ರಾದಿಗಳಿಂದ ಸೇವಿಸಲ್ಪಡುತ್ತಿದ್ದಾನೆ .ಲಕ್ಷ್ಮೀದೇವಿ ಅಮೃತಾಭಿಷೇಕವನ್ನು ಮಾಡುತ್ತಿದ್ದಾಳೆ .ಇಂತಹ ಹಯಗ್ರೀವರೂಪವನ್ನು ನಮಿಸುತ್ತೇನೆ .
ಸುಮಧ್ವ ವಿಜಯ ಮಹಾಕಾವ್ಯದಲ್ಲಿ ಹಯಗ್ರೀವ ಅವತಾರದ ವರ್ಣನೆ
ಚತುರಾನನಾಯ ಚತುರಃ ಪುರಾಽಽಗಮಾನ್ ಪ್ರದದಾವಸಾವನಿಮಿಷೇಶ್ವರಃ ಪ್ರಭುಃ |
ವಿನಿಹತ್ಯ ಹಿ ಶ್ರುತಿಮುಷಂ ಪುರಾತನಮ್ ವಪುಷೋದ್ಧತಂ ಹಯಮುಖೇನ ಸದ್ರಿಪುಮ್ ||
ಸಜ್ಜನ ಶತ್ರುವಾದ ವೇದಗಳ ಕಳ್ಳನಾದ ಮಧು ಕೈಟಭ ಎಂಬ ದೈತ್ಯರು ವೇದಗಳನ್ನು ಕದ್ದಿದ್ದರು .ಆಗ ಭಗವಂತನು ಕುದುರೆಯ ಮುಖದ ಹಯಗ್ರೀವರೂಪವನ್ನು ಧರಿಸಿ ಆ ದೈತ್ಯರನ್ನು ಸಂಹರಿಸಿ ಚತುರ್ಮುಖ ಬ್ರಹ್ಮದೇವರಿಗೆ ನಾಲ್ಕು ವೇದಗಳನ್ನು ನೀಡಿದನು .
ಮತ್ಸ್ಯರೂಪದಿಂದ ಹಯಗ್ರೀವಾಸುರನನ್ನೂ ಹಯಗ್ರೀವರೂಪದಿಂದ ಮಧು ಕೈಟಭರನ್ನೂ ಶ್ರೀಹರಿಯು ಸಂಹರಿಸಿ. ವೇದಗಳನ್ನೂ
ಬ್ರಹ್ಮದೇವರಿಗಿತ್ತನು.
ನಾರಾಯಣ ಪಂಡಿತಾಚಾರ್ಯರು ಒಂದೇ ಶ್ಲೋಕದಲ್ಲಿ ಮತ್ಸ್ಯ ಹಯಗ್ರೀವ ಅವತಾರಗಳನ್ನು ವರ್ಣಿಸಿದ್ದಾರೆ .ಮೊದಲನೇ ಶ್ಲೋಕದ ವಿವರಣೆಯಲ್ಲಿ ಈ ಇದೆ ಶ್ಲೋಕಕ್ಕೆ ಮತ್ಸ್ಯಾವತಾರ ಪರವಾದ ಅರ್ಥವನ್ನು ಕೊಡಲಾಗಿದೆ .
- ಮಧ್ವವಿಜಯ 8-14
ಶ್ರೀರುಗ್ಮೀಣೀಶವಿಜಯ ಮಹಾಕಾವ್ಯದಲ್ಲಿ ಹಯಗ್ರೀವಾವತರದ ವರ್ಣನೆ
ಮಧುರಯಾ ಜಿತದಾನವ ಸದ್ಗಿರಾ
ವಶನಿಕಾಯ ಗತಾಗಮಸಿಧಕಃ |
ನರತುರಂಗಮಹರ್ಷಕದಾಕೃತೇ
ಭವಗತಾವಗತಾಖಿಲ ಪಾಹಿ ನಃ ||
ಮಧು ಎಂಬ ದಾನವನ ವೇಗಕ್ಕೆ ವಶನಾಗದ ದಾನವರ ಸಭೆ ಎಂಬ ಬೆಟ್ಟದ ನಾಶಕ್ಕೆ ವಜ್ರದೇಹಿಯಾದ ದಾನವರಿಂದ ಅಪಹರಿಸಲ್ಪಟ್ಟ ವೇದಗಳನ್ನು ಮರಳಿ ತಂದಿತ್ತ ಹಯಗ್ರೀವ ಎಂಬ ಆನಂದಕರವಾದ ರೂಪದ ನಿತ್ಯಮುಕ್ತನಾದ ಎಲ್ಲವನ್ನೂ ಬಲ್ಲ ಶ್ರೀಹರಿಯೇ ! ನಮ್ಮನ್ನು ಪಾಲಿಸು .
ರುಗ್ಮೀಣೀಶವಿಜಯ 17-8
ವೇದಾಧ್ಯಯನದಿಂದ ಪರಮಾತ್ಮನ ಮಹಿಮೆಯನ್ನು ತಿಳಿದಾಗ ಮೋಕ್ಷವು ದೊರೆಯುತ್ತದೆ ಎಂದು ಶ್ರುತಿವಾಕ್ಯವಿದೆ ಅದಕ್ಕೆ ವೇದಗಳನ್ನು ಅಪಹರಿಸಿದ ದೈತ್ಯರ ಸಂಹಾರವನ್ನು ಮಾಡಿ ಚತುರ್ಮುಖ ಬ್ರಹ್ಮದೇವರಿಗೆ ವೇದಗಳನ್ನು ನೀಡಿದ ಮತ್ಸ್ಯಹಯಗ್ರೀವರೂಪಗಳನ್ನೇ ಶ್ರೀವಾದಿರಾಜ ಗುರುಸಾರ್ವಭೌಮರು ದಶಾವತಾರದ ಎರಡನೇ ಶ್ಲೋಕದಲ್ಲಿ ಸ್ತುತಿಸಿದ್ದಾರೆ .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ.... (recd in whatsapp)
***
No comments:
Post a Comment