SEARCH HERE

Friday, 1 February 2019

deepavali diwali how to perform religiously sampradaya ದೀಪಾವಳೀ ಆಚರಿಸುವ ಪದ್ದತಿ ಸಂಪ್ರದಾಯ ashvina bahula trayodashi









read more here
bali padyami  click  BALI PADYAMI
karteeka maasa   click       KARTEEKA MASA

uttan dwadashi or tulasi fest
click    TULASI FESTdhatri havana  click    DHATRI HAVANA

      
Chaturdashi means 14th day. In Gujarat, they call ‘Kali Chaudas’. In Rajasthan, as ‘Roop Chaudas’.In karnataka some region they call it as Naraka Chaturdashi.

         This day holds many legends.

Narakasura was a demon king of ‘Pradyoshapuram’. Amongst his other wicked deeds, he kidnapped beautiful women and forced them to live with him. To prove his power, Narakasura stole some earrings belonging to Aditi, mother of all gods. The gods were not happy and asked Lord Krishna for help. A animosity had been put on Narakasura. The animosity is one day he would be killed by his mother.

Lord Krishna knew that his wife, Satyabhama was a reincarnation of Narakasura’s mother. So he asked her to drive the chariot as he went to battle with the demon. Narakasura shot an arrow at Lord Krishna, who pretended to be hit. In Animosity, Satyabhama grabbed Lord Krishna’s bow and arrow and killed the demon instantly.

Narakasura’s mother declared that her son’s death should not be a day of gloom. So Hindus celebrate this event. It is said, after the battle with the demon, Lord Krishna bathed in oil to clean the splattered blood from his body. In some regions, rubbing oil into the body or having a special oil bath is part of a Deepavali Celebrations. It’s called as ‘Abhyangasnan’.

Another Myth is, Lord Rama son of ‘Dasaratha’ king of ‘Ayodhya’ and heir to the throne. Rama’s stepmother was jealous of Rama and wanted him to leave the kingdom; so that, her son could become heir. Under the influence of his wife, the king was forced to send Rama to live in exile in the forest for 14 years. Rama’s wife Sita; and his brother Lakshman a accompanied him. In the forest there lived several demons. 

Rama fought with rakshas and drove them away, making Ravana very angry. Ravana king of ‘Lanka’ is a great pundit, highly learned but still evil dominated his wisdom. He captured Rama’s wife Sita, but she cleverly left a trail of jewels so that Rama could follow her to the island of Lanka. With the help of his brother and Hanuman, Rama set off to save her.Hanuman and the army of Vanara’s (monkey) helped to build a huge bridge across to the Island. Rama crossed the bridge and shot an arrow into Ravana. The demon was killed and the Sita was rescued.

Rama, Sita and Lakshman returned to the kingdom after 14 years of living in the forest and Rama became king. People in Ayodhya celebrated Rama’s return by lighting up clay lamps.


On this day, Goddess Lakshmi is worshipped with great devotion. Goddess Lakshmi is also called ‘Shri’; the female of Supreme Being. 

here are legends associated to worship of Lakshmi on this day. First legend, Lakshmi was the daughter of the rushi ‘Bhrigu’ and took refugee in the ocean of milk, when the gods were sent into exile. On this day, Lakshmi emerged (reborn) from ‘Ksheera  Sagara ’ during the churning of the ocean of milk. As soon as the gods saw Lakshmi, they all fell in love with her charm and beauty. Shiva claimed Lakshmi as his wife, but since he had already taken the moon, her hand was given to Vishnu, whom Lakshmi herself preferred. Second Legend, (more popular in Western India) relates to ‘Vamana’ avatar of the Vishnu, the incarnation to kill the demon king Bali. On this day, Vishnu came back to his adobe, the ‘Vaikuntam’; so those who worship Lakshmi receive the benefit of her benevolent mood, and are blessed with mental, physical and material well-being.

Lakshmi is the goddess of light, beauty, good fortune and wealth. While Lakshmi is generally worshipped to achieve success, she does not reside along with anyone who is lazy or desire her only as wealth.

‘Safe’ where you keep money and jewelry; worship this safe as a symbol of Lord ‘Kubera’.

As per spiritual references, on this day “Lakshmi – Panchayatan” enters the universe Vishnu, Indra, Kubera, Gajendra and Lakshmi are elements of this “Panchayatan” (a group of five). The tasks of these elements are:

Lakshmi: Divine Energy (Shakti) which provides energy to all the above activities.
Vishnu: Happiness (satisfaction).
Kubera: Wealth (generosity; one who shares wealth)
Indra: Opulence (satisfaction due to wealth)
Gajendra: Carries the wealth.   
**************

This day ‘Laxmi-panchayatan’ enters the Universe. Shri Vishnu, Shri Indra, Shri Kuber, Shri Gajendra and Shri Laxmi are elements of this ‘panchayatan’ (a group of five). The tasks of these elements are:
Vishnu        :     Happiness (happiness and satisfaction)
Indra           :     Opulence (satisfaction due to wealth)
Kuber          :     Wealth (one who gives away wealth)
Gajendra    :     Carries the wealth

Lakshmi     :     Divine Energy (Shakti) which provides energy to all the above activities.
        Lakshmi puja falls on the new moon day (Amavasya) of the dark fortnight of Ashwin. Generally, the new moon day is considered inauspicious; however, this day is an exception to the rule. Though this day is considered auspicious it is not so for all events, such as weddings, etc. On this day, worship of Goddess Lakshmī is done with the spiritual emotion (bhav) that She has provided us the wealth and in future too, She will give us the necessary wealth. In addition, Deity Kuber (treasurer of wealth) is also worshipped.
Importance of Lakshmi Puja
A. Destruction of negative energies: On this particular day, Goddess Lakshmi’s destroyer (marak) form is active, since it is the new moon day. The spiritual emotion of the person doing ritualistic worship activates Goddess Lakshmi’s marak form and destroys the negative frequencies in the environment.
B. Arrival of other Gods (Devtas): Lord Indra and other male deities also get drawn to the place of ritualistic worship and follow Goddess Lakshmi. Thus happiness, opulence, prosperity, stability and wealth is maintained in the premise (Vastu) by worshiping the 5 elements or Deities.
Worship of Goddess Lakshmi (Lakshmi puja)
1.  At the break of dawn, one should have an auspicious bath, and then worship the Deities.
2.  In the afternoon, a rite for the departed souls (parvanshraddha) and an offering of meals to  Brahmaṇs (Brahmaṇbhojan) is done.
3.  In the evening, in a decorated area, Goddess Lakshmi, Deity Vishnu, other Deities and Deity Kuber are worshipped. A legend says that on this day Deity Vishnu along with Goddess Lakshmi liberated all the Deities from Bali’s prison and thereafter they all slept in the ocean. To represent that, everyone should enjoy themselves at home and light lamps everywhere.
        When ritualistically worshipping Goddess Lakshmi (Lakshmi puja), an idol of Lakshmi should be installed on a seat on which either an octapetalled lotus or a swastik is drawn with consecrated rice (akshata). Next to Her, an idol of Deity Kuber is placed on a pot (kalash). Then all these Deities including Lakshmi are offered a Naivedya (Holy food item), a mixture of coagulated cow’s milk (khava), sugar, cardamom and cloves. Then items like coriander, jaggery, corn obtained from parched, uncleaned rice, sugar candies (battase), etc. are offered to Goddess Lakshmi and then distributed to well-wishers and friends. Holding a bundle in the hand guidance is offered to ancestors. Brahmaṇs and the hungry are offered meals. One stays awake in the night.
        The Puraṇa narrates that on the new moon night of Ashwin the Goddess Lakshmi goes everywhere in search of an ideal home. Though undoubtedly cleanliness, beauty and excellence attract Her yet She loves to live in a home inhabited by men who are faithful, dutiful, merciful, righteous, have control over passions and are devotees of God, and women who are virtuous and chaste.’
Ritualistic worship of Deity Kubera
        Just as the Deities Lakshmi and Deity Indra are worshipped on the religious festival of Kojagari, Goddess Lakshmi and Deity Kubera are worshipped on this new moon day. Lakshmi is the Deity of wealth but Deity Kubera is the treasurer. Several people possess the art of earning money but do not know how to save it. However saving money and spending it appropriately is far more important than earning it. Since most people do not know how to spend money, their spending is unwarranted and ultimately, they become bankrupt.
        Kubera is the Deity who teaches the art of saving money as He Himself is the treasurer. Therefore, in this ritual the worship of Goddess Lakshmi and Deity Kubera has been recommended. Though all people celebrate this festival, the business community in particular does so with great enthusiasm and splendour.
        Coriander seeds and parched corn from parched, uncleaned rice are offered in this ritual of worship, the reason for this being that coriander seeds (dhane) denote wealth and parched corn represents prosperity. If a few grains of parched, uncleaned rice are roasted one gets a handful of parched corn. Since one aspires to acquire the prosperity of Deity Lakshmi, parched corn is offered symbolically.
Driving off poverty (Alakshmi)


        Development of virtues gains importance only if in the process defects are overcome. Just as one makes efforts to acquire wealth (Lakshmi), poverty (alakshmi) should also be destroyed. To signify that, on this day a new broom is bought. It is called Lakshmi. At midnight one should sweep the house with that broom, accumulate the garbage in a dust pan and throw it out. This is called ‘driving off’ of alakshmi (garbage – poverty). Sweeping the house and throwing the garbage out at night is forbidden on other days. When removing the garbage alakshmi is driven out even by sound created by striking a sifting pan and an earthen vessel covered with a hide.
The act of driving out alakshmi on the day of Lakshmipujan
        Goddess Lakshmī means wealth, prosperity while alakshmi means poverty, misfortune. Development of virtues gains importance only if one overcomes defects. Just as one makes efforts to acquire wealth (Lakshmi), poverty (alakshmi) should also be destroyed. On the third day of Diwāli, in the evening, Goddess Lakshmi is worshipped and this is called as Lakshmipujan. At midnight, the act of driving out alakshmi is done as given below –
1.  A new broom is bought for this act and it is considered as ‘Lakshmi’.
2.  It is ritualistically worshipped at midnight and then, the entire house is swept using the new broom.
3. The rubbish is collected in the dustpan and it is taken out of house. It is recommended to take it out through the backdoor; however, if there is only one door, then one can take it out from that door.
4. Throw away the rubbish as far as possible. One can throw it in the rubbish bins kept on the roads / footpath. If this is difficult, one can throw it in the rubbish bin outside house or apartment.
. At the end, express gratitude to Goddess Lakshmi and from next day onwards, start using the new broom daily for sweeping the floor.
a. On any other days, sweeping and throwing out the rubbish at night is not recommended.
b.  If one lives in a fully carpeted house, they can buy new broom and sweep over the carpet and follow as given in point 3 and 4 above.
Spiritual effect of the act of driving out Alakshmi
1. Rubbish represents alakshmi. At midnight, the subtle components Raja and Tama are maximum.
2. The rubbish being Raja-Rama predominant, the Raja-Tama components in the atmosphere are drawn towards it.
3. When the rubbish is collected in dustpan and thrown out of the house, the Raja-Tama components too are thrown out of the house. Due to this, the subtle components Sattva are attracted in the house, and the house becomes sāttvik.
4. Earlier in the evening, due to performing the Lakshmipujan, the Chaitanya (Divine Consciousness) spreads in the house.

5. In Purāna, it is said that at midnight, Goddess Lakshmi searches for an ideal house. No doubt the cleanliness and beauty draws Her attention; however, She chooses to live in a house in which faithful, dutiful, merciful, righteous men live, who have control over passions and are devotees of God, and women who are virtuous and chaste.
****

In short
ದೀಪಾವಳಿ ವಿಶೇಷ 

ಭಾರತ ದೇಶದಲ್ಲಿ ಅನಾದಿ  ಕಾಲದಿಂದಲೂ  ಅನೇಕ ಹಬ್ಬಗಳ ಆಚರಣೆಗಳು ರೂಢಿಯಲ್ಲಿವೆ.. ದಸರಾ ಹಬ್ಬದ ನಂತರದ 15 ದಿನಗಳ ಅವಧಿಯಲ್ಲಿ ಬರುವ ಹಬ್ಬವೇ  ದೀವಳಿಗೆ ಹಬ್ಬ.. ಈ ಹಬ್ಬದ  ಆಚರಣೆಗಳು  ಸಂತೋಷ ತರುವುದು..

ಜಲಪೂರ್ಣ ತ್ರಯೋದಶಿ 

ಈ ದಿನದ  ಮಹತ್ವ ಎಂದರೆ,  ಒಂದೆರಡು ಕೊಡ ಅಥವ  ಬಿಂದಿಗೆಯಲ್ಲಿ ನೀರು ತುಂಬಿ,  ಅದಕ್ಕೆ ಅರಿಶಿನ  ಕುಂಕುಮದಿಂದ ಸಿಂಗರಿಸಿ ಪೂಜೆ ಮಾಡುವುದು,  ತುಪ್ಪದ  ದೀಪ ಬೆಳಗಿ,  ಅನ್ನ  ಪಾಯಸದ ನೈವೇದ್ಯ  ಮಾಡಿ,  ಗಂಗೆಗೇ  ಪೂಜೆ ಸಲ್ಲಿಸಿ ಇಡುವುದು..
ಮಾರನೇ  ಬೆಳಿಗ್ಗೆ ಇದೇ  ನೀರನ್ನು  ಸ್ನಾನಕ್ಕೆ  ಉಪಯೋಗ ಮಾಡುವುದು..ಸಂಜೆ ಸೂರ್ಯಾಸ್ತದ ನಂತರ ಅಪಮೃತ್ಯು ಬಾರದಿರಲಿ ಎಂದು  ದಕ್ಷಿಣ ದಿಕ್ಕಿಗೆ ದೀಪ ಹಚ್ಚಿ,  ಯಮದೇವಗೆ ಅಪಮೃತ್ಯುವಿನಿಂದ ಪಾರು ಮಾಡು ಎಂದು  ಪ್ರಾರ್ಥನೆ ಸಲ್ಲಿಸುವುದು... 

ನರಕ  ಚತುರ್ದಶಿ 

ಈ ದಿನದ ವಿಶೇಷ ಎಂದರೆ ಶ್ರೀ ಕೃಷ್ಣನು ನರಕಾಸುರ ಎಂಬ ರಕ್ಕಸನನ್ನು ಕೊಂದು,  ಅವನ ಅಧೀನದಲ್ಲಿದ್ದ ಕನ್ಯೆಯರನ್ನು ಬಿಡಿಸಿದ..  ಈ ದಿನ ತೈಲಾಭ್ಯಂಗ ಸ್ನಾನ ಮಾಡುವವರಿಗೆ ನರಕದ ಬಾಧೆ ತಟ್ಟದಿರಲಿ ಎಂದು ವರ ಕೇಳಿದ ಆ ಅಸುರ.. ರುಕ್ಮಿಣೀದೇವಿ ಶ್ರೀ ಕೃಷ್ಣನಿಗೆ ಆರತಿ ಎತ್ತಿ ಅರಮನೆಗೆ  ಸ್ವಾಗತಿಸಿ ತೈಲಾಭ್ಯಂಗ ಮಾಡಿಸುತ್ತಾಳೆ.. 

ಈ ಶುಭದಿನದಂದು ಎಲ್ಲರೂ ನಕ್ಷತ್ರಗಳು ಕಾಣುವ ವೇಳೆಯಲ್ಲಿ  ಅಂದರೆ ನಸುಕಿನ ಜಾವ 4 ಗಂಟೆಗೆ ಎದ್ದು ಪರಿಸರ ಶುದ್ದಿ ಮಾಡಿ ಬಾಗಿಲಿಗೆ ರಂಗೋಲಿ ಇಟ್ಟು,  ತುಳಸಿದೇವಿ ಮತ್ತು ದೇವರ ಕೋಣೆಯಲ್ಲಿ ದೀಪ ಬೆಳಗಿಸಿ, ಎಲ್ಲರೂ ಹೊಸ ವಸ್ತ್ರ ಧರಿಸಿ ಆರತಿ ಮಾಡಬೇಕು.. 

ಮನೆಯಲ್ಲಿ  ಪುರುಷರು,  ಹಿರಿಯರು, ಮಕ್ಕಳು ಎಲ್ಲರಿಗೂ ಮನೆಯ  ಹೆಣ್ಣುಮಕ್ಕಳು  ಆರತಿ ಎತ್ತಿ, ಚಿನ್ನದ ಉಂಗುರವನ್ನು ಕೊಬ್ಬರಿ ಎಣ್ಣೆಯಲ್ಲಿ ಅದ್ದಿ ಎಣ್ಣೆ ಹಚ್ಚಬೇಕು,,, ಆಮೇಲೆ ಎಲ್ಲರೂ ಅಭ್ಯಂಗ ಸ್ನಾನ ಮಾಡಬೇಕು 

ಅಮಾವಾಸ್ಯ 

ಅಮಾವಾಸ್ಯದಂದು ಮನೆಯನ್ನು ತಳಿರು ತೋರಣ ದೀಪಗಳಿಂದ  ಅಲಂಕರಿಸಿ,  ಲಕ್ಷ್ಮೀ ಕಟಾಕ್ಷ ಪಡೆಯಲು ವಿಷ್ಣು ಸಹಿತ  ಮಹಾಲಕ್ಷ್ಮೀದೇವಿಯ  ಪೂಜೆ ಮಾಡಬೇಕು..ಇದನ್ನು ಕುಬೇರ ಲಕ್ಷ್ಮೀ ಪೂಜೆ ಎಂತಲೂ ಕರೆಯುತ್ತಾರೆ... ಅಂಗಡಿ ಮುಂಗಟ್ಟುಗಳನ್ನು  ವಿವಿಧ ದೀಪಗಳಿಂದ ಅಲಂಕರಿಸಿ,  ಮಹಾಲಕ್ಷ್ಮೀ ಮತ್ತು ಸರಸ್ವತಿ ದೇವಿಯರ ಪೂಜೆ ಮಾಡುತ್ತಾರೆ,, ತಮ್ಮ ವ್ಯಾಪಾರ ವ್ಯವಹಾರ  ಅಭಿವೃದ್ಧಿ ಆಗಲೆಂದು ಪ್ರಾರ್ಥನೆ ಸಲ್ಲಿಸುತ್ತಾರೆ 

ಬಲಿಪಾಡ್ಯ

ಈ ದಿನ ಬಲೀಂದ್ರ ತನ್ನ ರಾಜ್ಯವನ್ನು ನೋಡಲು ಭುವಿಗೆ ಬರುವನೆಂದು ಮನೆಯ ಮುಂದೆ ಸುಂದರ ರಂಗೋಲಿ ಇಟ್ಟು ದೀಪಗಳಿಂದ ಅಲಂಕಾರ ಮಾಡಿ  ಬಲಿಂದ್ರನಿಗೆ ಪೂಜೆ ಸಲ್ಲಿಸಿ  ಸಂತೋಷ್ ಪಡುತ್ತಾರೆ.. 

ಅಲ್ಲದೆ ಸಗಣಿ or ಮಣ್ಣಿನಲ್ಲಿ  ಪಾಂಡವರ ಬೊಂಬೆಗಳನ್ನು ಮಾಡಿ ಉತ್ತರಣೆ ಗೆಲ್ಲಿನಿಂದ ಸಿಂಗರಿಸಿ ಪೂಜೆ ಮಾಡುತ್ತಾರೆ.. 

ಭಾವಬಿದಿಗೆ 

ಈ ದಿನದ ವಿಶೇಷ ಎಂದರೆ,  ಯಮನ ತಂಗಿ ಯಮುನೆ, ಅವನನ್ನು  ಮನೆಗೆ ಆಹ್ವಾನಿಸಿ,  ಆತಿಥ್ಯ ನೀಡಿದಳಂತೆ.. ಈ ದಿನ  ಅಣ್ಣ  ತಮ್ಮಂದಿರನ್ನು ಮನೆಗೆ ಕರೆದು ಭೋಜನ ಮಾಡಿಸಿ  ಕೈಲಾದ ಉಡುಗೊರೆ ಕೊಟ್ಟು  ಆರತಿ ಮಾಡಿ, ಅವರನ್ನು ಸಂತೋಷ್ ಪಡಿಸಬೇಕು.. ಈ ಆಚರಣೆಯಿಂದ ಅಣ್ಣ ತಂಗಿಯರ ಸಂಬಂಧ ಗಟ್ಟಿಗೊಳ್ಳುತ್ತೆ, ತವರಿನ ಬಾಂಧವ್ಯ  ಮೊದಲಿನ ಹಾಗೇ ಉಳಿಯುತ್ತೆ... 

ಅಕ್ಕನ ತದಿಗೆ 

ಈ ದಿನದ ವಿಶೇಷ ಅಂದ್ರೆ ಅಕ್ಕ  ತಂಗಿಯರನ್ನು ಅಣ್ಣ ತಮ್ಮಂದಿರು ಮನೆಗೆ ಆಹ್ವಾನಿಸಿ,  ಆತಿಥ್ಯ ನೀಡುತ್ತಾರೆ.  ಹೆಣ್ಣುಮಕ್ಕಳು ತಾವು ಹುಟ್ಟಿ ಬೆಳೆದ ತವರಿಗೆ ಹೋಗಲು ಬಹಳ ಕಾತುರರಾಗಿರುತ್ತಾರೆ.. ತವರೂರು ಎಂದರೆ ಅವರಿಗೆ ಅದೇನೋ ಹೇಳಿಕೊಳ್ಳಲಾಗದಷ್ಟು  ಸಂತೋಷ.   ತವರಿಗೆ ಬಂದ ಅಕ್ಕ ತಂಗಿಯರಿಗೆ  ಅವರಿಗಿಷ್ಟವಾದ ಖಾದ್ಯ ನೀಡಿ, ಉಡುಗೊರೆ ಕೊಟ್ಟು ಅವರನ್ನು ಸಂತೋಷ ಪಡಿಸುತ್ತಾರೆ 

ಅಮ್ಮನ ಚೌತಿ 

ಇಂದು ಅಮ್ಮನ ಉಪಕಾರ ನೆನೆಯುವ  ದಿನ.  ಅಮ್ಮನ  ಋಣ  ಎಂದಿಗೂ ತೀರಿಸಲಾಗದು.. ಅಮ್ಮನಿಗೆ ಆರತಿ ಮಾಡಿ, ಅವಳಿಗೆ  ಇಷ್ಟದ ಉಡುಗೊರೆ ಕೊಟ್ಟು  ಸಂತೋಷಪಡಿಸುವ ದಿನ 

ಹೀಗೇ ಸತತವಾಗಿ ಒಂದು ವಾರ ಕಾಲದ ಆಚರಣೆ ಈ ದೀಪಾವಳಿ ಹಬ್ಬ...

ಎಲ್ಲರೂ ಬಂಧು ಬಾಂಧವರಿಂದೊಡಗೂಡಿ 
ದೀಪಾವಳಿ ಹಬ್ಬ ಆಚರಿಸೋಣ.. 
ಸರ್ವರಿಗೂ  ದೀವಳಿಗೆ ಹಬ್ಬದ  ಹಾರ್ದಿಕ  ಶುಭೇಚ್ಛೆಗಳು.. 
✍️ ರೇಖಾ. ಮುತಾಲಿಕ್ 
****
or
ನರಕ ಚತುರ್ದಶಿ NARAKA CHATURDASHI
 
ನರಕ ಚತುರ್ದಶಿಯಂದೇ ಅಮಾವಾಸ್ಯೆಯ ಆಚರಣೆಯಿರುವಾಗ ಎಣ್ಣೆನೀರು ಹಾಕಿಕೊಳ್ಳಬಹುದಾ ? –

 ಹಾಕಿಕೊಳ್ಳಬಹುದು. ನರಕಚತುರ್ದಶಿ ಸ್ನಾನ ಮಾಡಲೇಬೇಕಾದ್ದರಿಂದ ಅಮಾವಾಸ್ಯೆ ಇದ್ದರೂ ಎಣ್ಣೆ ಸ್ನಾನ ಮಾಡಬಹುದು


 ತೈಲಾಭ್ಯಂಜನ ಕಡ್ಡಾಯ –  ನರಕ ಚತುರ್ದಶಿಯಂದು ಪ್ರತಿಯೊಬ್ಬ ಜೀವಿಯೂ ಅಭ್ಯಂಜನವನ್ನು ಮಾಡಲೇಬೇಕು.  ಇಲ್ಲದಿದ್ದರೆ ದಾರಿದ್ರ್ಯಾದಿಗಳಿಂದ ಪೀಡಿತರಾಗುವರು.

ಈ ದಿನ ಗಂಗೆಯು ಜಲದಲ್ಲಿ ಮತ್ತು ತೈಲದಲ್ಲಿ ಲಕ್ಷ್ಮೀದೇವಿಯು ವಿಶೇಷವಾಗಿ ಸನ್ನಿಹಿತಳಾಗಿರುತ್ತಾರೆ.
ಸಾಮಾನ್ಯವಾಗಿ ತಂದೆ ತಾಯಿಗಳ ಶ್ರಾದ್ಧ ದಿನಗಳಲ್ಲಿ, ವ್ಯತೀಪಾತ, ವೈಧೃತಿ ಯೋಗಗಳಲ್ಲಿ ಅಭ್ಯಂಜನವನ್ನು ಮಾಡಿಕೊಳ್ಳುವ ಸಂಪ್ರದಾಯವಿಲ್ಲ.  ವಿಧವೆಯರೂ, ಸನ್ಯಾಸಿಗಳೂ ಅಭ್ಯಂಜನವನ್ನು ಮಾಡಿಕೊಳ್ಳಬಾರದು ಸಾಮಾನ್ಯವಾಗಿ.   ಆದರೆ ನರಕ ಚತುರ್ದಶಿಯಂದು ಇದೆಲ್ಲ ಇದ್ದರೂ ಕೂಡ ಅಭ್ಯಂಜನವನ್ನು ಮಾಡಲೇಬೇಕು.   ಸನ್ಯಾಸಿಗಳೂ, ವಿಧವೆಯರೂ ಕೂಡ ಅಭ್ಯಂಜನವನ್ನು ಮಾಡಿಕೊಳ್ಳಲೇಬೇಕು.
 

 ಏಕೆ ಅಭ್ಯಂಜನವನ್ನು ಮಾಡಿಕೊಳ್ಳಬೇಕು ? –

ಈ ದಿನ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ನರಕಾಸುರನು ಒಂದು ವರವನ್ನು ಕೇಳುತ್ತಾನೆ.  “ನನ್ನ ಸಂಹಾರದ ನೆನಪಿಗಾಗಿ ಎಲ್ಲರೂ ಅಭ್ಯಂಜನವನ್ನು ಮಾಡಬೇಕು ಮತ್ತು ದೀಪಪ್ರಜ್ವಲನವನ್ನು ಮಾಡಬೇಕು” ಎಂದು ಕೇಳಿದುದರಿಂದ ಕೃಷ್ಣನು ಹಾಗೆಯೇ ಆಗಲಿ ಎಂದು ಅನುಗ್ರಹಿಸಿದ್ದನು.  ಅದರ ನಿಮಿತ್ತ ಎಲ್ಲರೂ ಅಭ್ಯಂಜನವನ್ನು ಮಾಡಿಕೊಳ್ಳಬೇಕು.  ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು.  ಅದನ್ನು ತೊಳೆದು ಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು.  
 

 ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) – 

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು
“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.
 

ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .   ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 
 

 ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ – 

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||
ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.
ಎಣ್ಣೆ ಶಾಸ್ತ್ರಕ್ಕೆ ಎಳ್ಳೆಣ್ಣೆಯನ್ನು ಉಪಯೋಗಿಸಬೇಕು.

ಎಣ್ಣೆ ಶಾಸ್ತ್ರ ಮಾಡಿಸಿಕೊಳ್ಳುವಾಗ ಪೂರ್ವಾಭಿಮುಖವಾಗಿ ಕೂಡಬೇಕು.

ಎಣ್ಣೆ ಶಾಸ್ತ್ರಕ್ಕೆ ಕೂಡುವವರು ದೇವರಿಗೆ ನಮಿಸಿ ಕೂಡಬೇಕು.

ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.


 ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು 

ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||

ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||

ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||
***

ಆರತಿ ಹಾಡು
ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||
***


 ತೈಲಾಭ್ಯಂಜನ ಸ್ನಾನ ಸಂಕಲ್ಪ –
ಆಚಮನ, ಸಂಕಲ್ಪ –  ಪ್ರಣವಸ್ಯ………………….

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇನ _ ಸಂವತ್ಸರೇ ದಕ್ಷಿಣಾಯನೇ ಶರದೃತೌ ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ಚತುರ್ದಶ್ಯಾಂ ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಚಂದ್ರೋದಯಕಾಲೇ ನರಕಾಂತಕ  ಶ್ರೀ ಗೋಪಾಲಕೃಷ್ಣ ಪ್ರೇರಣಯಾ ಶ್ರೀ ಗೋಪಾಲಕೃಷ್ಣ ಪ್ರೀತ್ಯರ್ಥಂ ಸಪರಿವಾರಾಯ ಶ್ರೀ ಗೋಪಾಲಕೃಷ್ಣಾಯ ಸುಗಂಧಿ ತೈಲಾಭ್ಯಂಗ ಸ್ನಾನಂ ಕರಿಷ್ಯೇ

ಯಮತರ್ಪಣಂ  यमतर्पणं

ಆಚಮನ, ಸಂಕಲ್ಪ –  ಪ್ರಣವಸ್ಯ………………….

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇನ _ ಸಂವತ್ಸರೇ ದಕ್ಷಿಣಾಯನೇ ಶರದೃತೌ ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ಚತುರ್ದಶ್ಯಾಂ ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಮಮ ನರಕ ಭಯ ನಿವೃತ್ತಿದ್ವಾರ ಶ್ರೀ ಯಮಾಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ/ವೇಂಕಟೇಶ ಪ್ರೀತ್ಯರ್ಥಂ, ನರಕಚತುರ್ದಶಿ ಪರ್ವಕಾಲ ಪ್ರಯುಕ್ತಂ ಯಮ ತರ್ಪಣಮಹಂ ಕರಿಷ್ಯೇ.

ಯಮಂ ತರ್ಪಯಾಮಿ | ಧರ್ಮರಾಜಂ ತರ್ಪಯಾಮಿ |
ಮೃತ್ಯುಂ ತರ್ಪಯಾಮಿ | ಅಂತಕಂ ತರ್ಪಯಾಮಿ |
ವೈವಸ್ವತಂ ತರ್ಪಯಾಮಿ | ಕಾಲಂ ತರ್ಪಯಾಮಿ |
ಸರ್ವಭೂತಕ್ಷಯಂ ತರ್ಪಯಾಮಿ | ಔದುಂಬರಂ ತರ್ಪಯಾಮಿ |
ದದ್ಧ್ನಂ ತರ್ಪಯಾಮಿ | ವೃಕೋದರಂ ತರ್ಪಯಾಮಿ |
ನೀಲಂ ತರ್ಪಯಾಮಿ | ಪರಮೇಷ್ಟಿನಂ ತರ್ಪಯಾಮಿ |
ಚಿತ್ರಂ ತರ್ಪಯಾಮಿ | ಚಿತ್ರಗುಪ್ತಂ ತರ್ಪಯಾಮಿ |

यमं तर्पयामि । धर्मराजं तर्पयामि ।
मृत्युं तर्पयामि । अंतकं तर्पयामि ।
वैवस्वतं तर्पयामि । कालं तर्पयामि ।
सर्वभूतक्षयं तर्पयामि । औदुंबरं तर्पयामि ।
दद्ध्नं तर्पयामि । वृकोदरं तर्पयामि ।
नीलं तर्पयामि । परमेष्टिनं तर्पयामि ।
चित्रं तर्पयामि । चित्रगुप्तं तर्पयामि ।

——————
ಉಲ್ಕಾದಾನ – ಸೂರ್ಯನು ತುಲಾದಲ್ಲಿರುವಾಗ ಪ್ರದೋಷಕಾಲದಲ್ಲಿ ಉಲ್ಕೆಯನ್ನು ಪ್ರದರ್ಶಿಸಬೇಕು. ಇದರಿಂದ ಮಹಾಲಯಕ್ಕಾಗಿ ಯಮಲೋಕದಿಂದ ಬಂದ ಪಿತೃಗಳು ಹಿಂದಿರುಗುವಾಗ ದಾರಿಯನ್ನು ತೋರಲು ಹಾಗೂ ಕುಲದಲ್ಲಿ ಹುಟ್ಟಿ ಬೆಂಕಿಯಲ್ಲಿ ದಗ್ಧರಾದವರು, ಹಾಗೆಯೇ ಮೃತರಾದವರೂ, ಸಿಡಿಲು-ಮಿಂಚುಗಳಿಂದ ಮೃತರಾದವರೂ ಉತ್ತಮಗತಿಯನ್ನು ಹೊಂದಲು ಮನೆ ಸುತ್ತಮುತ್ತ ದೀಪಗಳನ್ನು ಬೆಳಗಿಸಬೇಕು.
ಅಗ್ನಿದಗ್ದಾ: ಯೇ ಜೀವಾ ಯೇಪ್ಯದಗ್ದಾ: ಕುಲೇ ಮಮ |
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತು ವ್ರಜಂತು ತೇ |
ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಪದೇ |
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತೋ ವ್ರಜಂತು ತೇ |

ಸಂಗ್ರಹ : ನರಹರಿ ಸುಮಧ್ವ
- By NARAHARI SUMADHWA
***

ನೀರು ತುಂಬುವ ಹಬ್ಬ- 
ಧನತ್ರಯೋದಶೀ,
ಜಲಪೂರ್ಣತ್ರಯೋದಶೀ, 
ಯಮದೀಪದಾನ

ಹೆಸರೇ ಹೇಳುವಂತೆ ನೀರನ್ನು ಸಂಗ್ರಹಿಸುವ ದಿನ. ಈ ದಿನ ಸ್ನಾನದ ಮನೆ, ಬಚ್ಚಲನ್ನು ಸ್ವಚ್ಛಮಾಡಿ, ಮಾರನೆಯ ದಿನದ ಅಭ್ಯಂಜನಕ್ಕೆ ನೀರು ಹಿಡಿದು ಇಡುತ್ತಾರೆ. ಕೊಳೆಯನ್ನು ಹೋಗಿಸಿ ಮನೆಯನ್ನು ಶುಭ್ರಮಾಡುವಂತೆ , ನಮ್ಮ ಮನಸಿನಲ್ಲಿರುವ ಕೆಟ್ಟ ವಿಷಯಗಳನ್ನು ತೊಲಗಿಸಿ ನಿರ್ಮಲವಾಗಿ ಇಟ್ಟುಕೊಳ್ಳಿ ಎಂಬ ಸಂಕೇತ ಇರಬಹುದು. ಹಿಂದಿನ ಕಾಲದಲ್ಲಿ ತುಂಬಿದ ಸಂಸಾರ, ಮನೆಯಲ್ಲಿ ಬಹಳ ಜನ ಇರುತ್ತಿದ್ದರು. ಎಲ್ಲರೂ ಒಂದೇ ದಿನ ಅಭ್ಯಂಜನ ಮಾಡಬೇಕಾದರೆ ಸಾಕಷ್ಟು ನೀರು ಮೊದಲೇ ಶೇಖರಿಸಿ ಇಡಬೇಕಿತ್ತು.ಹೀಗಾಗಿ ಈ ದಿನ ನೀರುಹಿಡಿಯುವುದರಲ್ಲೇ ಕಳೆದು ಹೋಗುತ್ತಿತ್ತು ಅನ್ನಿಸುತ್ತದೆ.ಅದಕ್ಕೆ ಈ ದಿನವನ್ನು ನೀರು ತುಂಬುವ ಹಬ್ಬವೆಂದು ಆಚರಿಸುವ ವಾಡಿಕೆ ಬಂತೇನೋ.ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೆ.

ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು?
1)ಹಂಡೆತುಂಬಿ ಕಾಯಿಸಿ ಸ್ನಾನ ಮಾಡುವ ಅನುಕೂಲ ಇದ್ದವರು ಅದನ್ನು ತಿಕ್ಕಿ ತೊಳೆದು ಅಲಂಕರಿಸಿ ಶುದ್ಧವಾದ ನೀರನ್ನು ಮುಕ್ಕಾಲು ಭಾಗ ತುಂಬಿ ಇಡಿ. 
2)ಅನಂತರ ಬಾವಿ ಇದ್ದವರು ತಮ್ಮ ಮನೆಯ ಸಂಪ್ರದಾಯದಂತೆ ನೀರು ಸೇದಿ ತಂದು ಒಂದು ಕಲಶದಲ್ಲಿ ದೇವರ ಕೊಣೆಯೊಳಗೋ ಹೊರಗೋ ಶುದ್ಧವಾದ ಜಾಗದಲ್ಲೋ ಇಡಿ

3)ತಂಡುಲಾಕ್ಷತೆ, ಹೂವು, ಹಣ್ಣು , ಗಂಧ, ಅರಸಿಣ ಪುಡಿ, ಕುಂಕುಮ ಇತ್ಯಾದಿ  ಸಿದ್ಧಪಡಿಸಿ. 

4)ಮಂತ್ರಾಕ್ಷತೆ , ಹೂವು ಕೈಯಲ್ಲಿ ಹಿಡಿದು ನೀರು ತುಂಬಿದ ಕಲಶದಲ್ಲಿ ತನ್ನ ಅಂಗುಷ್ಟದಿಂದ ಗಂಗೆಗೆ ಜನ್ಮವಿತ್ತ ರಮಾಪತಿ ತ್ರಿವಿಕ್ರಮನನ್ನು ಅವಾಹಿಸಿ. 

ಮಮ ಗುರ್ವಂತರ್ಗತ ವರುಣಾಂತರ್ಗತ
ಭಾರತೀರಮಣ ಮುಖ್ಯಪ್ರಾಣಾಂತರ್ಗತ 
ಗಂಗಾಜನಕಂ ರಮಾಸಹಿತ ತ್ರಿವಿಕ್ರಮಂ 
ಆವಾಹಯಾಮಿ. ಪ್ರಸೀದ ಪ್ರಸೀದ 
ಭಗವನ್ ಆಗಚ್ಛ ಆಗಚ್ಛ 

ಎಂದು ಕಲಶದಲ್ಲಿ ಹೂವು ಅಕ್ಷತೆ ಹಾಕಿ.

ನಂತರ ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಸ್ನಾನ, ವಸ್ತ್ರ, ಯಜ್ನೋಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ, ಮಂಗಲಾರತಿ, ಮಂತ್ರಪುಷ್ಪ, ನಮಸ್ಕಾರ ಅರ್ಪಿಸಿ. 

5)ನಂತರ ಅಕ್ಷತೆ ಹೂವು ಕೈಯಲ್ಲಿ ಹಿಡಿದುಕೊಂಡು ಕಲಶದಲ್ಲಿ ಗಂಗಾದೇವಿಯನ್ನು ಅವಾಹಿಸಿ. .

ಗಂಗೇ ಚ ಯಮುನೇ ಕೃಷ್ಣೇ ಗೋದಾವರೀ ಸರಸ್ವತೀ|
ನರ್ಮದೇ ಸಿಂಧು ಕಾವೇರೀ ಜಲೇ$ಸ್ಮಿನ್ ಸನ್ನಿಧಿಮ್ ಕುರು||
ಕಲಶಮಧ್ಯೆ ತ್ರಿವಿಕ್ರಮ ರೂಪಿಣಃ ಪುತ್ರಿಮ್ ಗಂಗಾಂ ಆವಾಹಯಾಮಿ 

ಎಂದು ಅಕ್ಷತೆ ಹೂವು ಹಾಕಿ ಮುಂದಿನ ಮಂತ್ರಗಳಿಂದಲೂ  ಕಲಶದಲ್ಲಿ ಅಕ್ಷತೆ ಹಾಕಿ 

ಭೂ: ಗಂಗಾಂ ಆವಾಹಯಾಮಿ,
ಭುವಃ ಗಂಗಾಂ ಆವಾಹಯಾಮಿ, 
ಸ್ವ: ಗಂಗಾಂ ಆವಾಹಯಾಮಿ, 
ಭೂರ್ಭುವಸ್ವ: ಗಂಗಾಂ ಆವಾಹಯಾಮಿ.

ಆ ನಂತರ ಮೇಲೆ ಹೇಳಿದಂತೆ ಅಸನದಿಂದ ವಸ್ತ್ರವನ್ನು ಅರ್ಪಿಸಿ ಹರಿದ್ರಾ, ಕುಂಕುಮ, ಗಂಧ , ಪುಷ್ಪ ಅರ್ಪಿಸಿ

6)ಈ ಕೆಳಗಿನ ನಾಮಗಳಿಂದ ಅಕ್ಷತೆ ಹಾಕಿ

ನಂದಿನ್ಯೈ ನಮಃ, ನಲಿನ್ಯೆ ನಮಃ, ಸೀತಾಯೈ ನಮಃ , ಮಾಲತ್ಯೈ ನಮಃ , ಮಲಾಪಹಾಯೈ ನಮಃ, ವಿಷ್ಣುಪಾದಾಬ್ಜ ಸಂಭೂತಾಯೈ ನಮಃ, ಗಂಗಾಯೈ ನಮಃ, ತ್ರಿಪಥಗಾಮಿನ್ಯೈ ನಮಃ , ಭಾಗೀರಥ್ಯೈ ನಮಃ, ಭೋಗವತ್ಯೈ ನಮಃ, ಜಾಹ್ನವ್ಯೈ ನಮಃ, ತ್ರಿದಶೇಶ್ವರ್ಯೈ ನಮಃ, ಗಂಗಾಭಾಗೀರಥ್ಯೆ ನಮಃ

7)ಧೂಪವನ್ನು ತೋರಿಸಿ

ವನಸ್ಪತ್ಯುದ್ಭವೋ ದಿವ್ಯೋ ಗಂಧಾಢ್ಯೋ ಗಂಧ ಉತ್ತಮಃ |
ಆಘ್ರೇಯಃ ಸರ್ವದೇವಾನಾ೦ ಧೂಪೋ$ಯಂ ಪ್ರತಿಗೃಹ್ಯತಾಮ್ ||

8)ಸಾಜ್ಯ೦ ತ್ರಿವರ್ತಿಸಂಯುಕ್ತ೦ ವಹ್ನಿನಾ ದ್ಯೋತಿತಂ ಮಯಾ|
ದೀಪಂ ಗೃಹಾಣ ದೇವೇಶ ತ್ರೈಲೋಕ್ಯತಿಮಿರಾಪಹ||

ಎನ್ನುತ್ತಾ ಮೂರು ಬತ್ತಿಯ ಆರತಿ ತೋರಿಸಿ ನಂದಿಸಿ

9)ಹಣ್ಣು ಕಾಯಿ ಮತ್ತು ಅನುಕೂಲ ಇದ್ದಲ್ಲಿ ಇತರ ನೈವೇದ್ಯಗಳನ್ನು ಮೊದಲು ತ್ರಿವಿಕ್ರಮ ದೇವರಿಗೆ ಅರ್ಪಿಸಿ ಅನಂತರ ರಮಾದೇವಿ , ಮುಖ್ಯಪ್ರಾಣ ದೇವರಿಗೆ ಅರ್ಪಿಸಿ. ಇದರೊಳಗಿಂದ ಸ್ವಲ್ಪ ಬೇರೊಂದು ತಟ್ಟೆಯಲ್ಲಿ ಬಡಿಸಿ ಭಾಗೀರಥಿ ದೇವಿಗೆ ಅದನ್ನು ನಿವೇದಿಸಿ.

10)ತದನಂತರ ಕರ್ಪೂರ ಹಾಕಿ ಮಹಾಮಂಗಳಾರತಿ ಮೊದಲು ತ್ರಿವಿಕ್ರಮ ದೇವರು ನಂತರ ರಮಾದೇವಿ ಪ್ರಾಣದೇವರಿಗೆ ತೋರಿಸಿ ಭಾಗೀರಥಿಗೆ ತೋರಿಸಿ. 

11)ನಾರಾಯಣಾಯ ವಿದ್ಮಹೇ ವಾಸುದೇವಾಯ ದೀಮಹಿ 
ತನ್ನೋ ವಿಷ್ಣು: ಪ್ರಚೋದಯಾತ್ 

ಎನ್ನುತ್ತಾ ತ್ರಿವಿಕ್ರಮ ದೇವರಿಗೆ ಮಂತ್ರಪುಷ್ಪಾ೦ಜಲಿ ಅರ್ಪಿಸಿ. 

12)ಭಾಗೀರಥೀ ದೇವಿಯನ್ನು ಪ್ರಾರ್ಥಿಸಿ. 

ಹೇ ಗಂಗೇ! ತವ ಕೋಮಲಾಂಘ್ರಿ ನಲಿನಂ ರಂಭೋರು ನೀವಿಲಸತ್ 
ಕಾಂಚೀದಾಮ ತನೂದರಂ ಘನಕುಚ ವ್ಯಾಕೀರ್ಣಹಾರಂ ವಪು: |
ಸನ್ಮುದ್ರಾ೦ಗದ ಕಂಕಣಾವೃತಕರ೦ ಸ್ಮೇರಂ ಸ್ಫುರತ್ಕುಂಡಲಂ 
ಸಾರಂಗಾಕ್ಷಿ ಜಲಾನ್ಯದಿಂದುರುಚಯೇ ಜಾನಂತಿ ತೇ$ನ್ಯೇ ಜಲಾತ್ | 

ಪ್ರಾರ್ಥನಾಂ ಸಮರ್ಪಯಾಮಿ ಎನ್ನುತ್ತ ಅಕ್ಷತೆ ಹಾಕಿ ನಮಸ್ಕರಿಸಿ.

13)ತದನಂತರ 
ಯಸ್ಯ ಸ್ಮೃತ್ಯಾ ಶ್ಲೋಕ ಹೇಳಿ 

ಅನೇನ ಅಸ್ಮದ್ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಗಂಗಾಜನಕ ಶ್ರೀರಮಾತ್ರಿವಿಕ್ರಮ ರೂಪಿ ಶ್ರೀಲಕ್ಷ್ಮೀನಾರಾಯಣ: ಪ್ರೀಯತಾಂ ಪ್ರೀತೋ ಭಾವತು ತತ್ ಸರ್ವಂ ಶ್ರೀಕೃಷ್ಣಾರ್ಪಣಾಮಸ್ತು ಎಂದು ಅರ್ಪಿಸಿ.

14)ಈಗ ಆ ಕಲಶದ ನೀರನ್ನು ಗಂಟೆ, ಜಾಗಟೆ, ಶಂಖಾದಿ ವಾದ್ಯ ಪುರಸ್ಸರ ತುಂಬಿಟ್ಟ ಹಂಡೆಯಲ್ಲಿ ಹಾಕಿ

15)ಸೂರ್ಯಾಸ್ತದ ನಂತರ ಇಂದಿನಿಂದ ಆಕಾಶದೀಪವನ್ನು ಹಚ್ಚಬೇಕು. 

ಒಬ್ಬ ಮನುಷ್ಯನ ಎತ್ತರದಷ್ಟು ಒಂದು ಕೋಲನ್ನು ಅಂಗಳದಲ್ಲಿ ನೆಟ್ಟು (ಬಿದಿರಿನ ಕೋಲು ಉಪಯೋಗಿಸಬಾರದು) ಆ ಕೋಲಿನ ತುದಿಯಲ್ಲಿ ಅಷ್ಟದಲ ಕಮಲಾಕಾರದಲ್ಲಿ ಎಂಟು ದಿಕ್ಕುಗಳಲ್ಲಿ ಎಂಟು ದೀಪಗಳನ್ನೂ ಮಧ್ಯೆ ಒಂದು ದೊಡ್ಡ ದೀಪವನ್ನೂ ಹಚ್ಚಬೇಕು. ಎಳ್ಳೆಣ್ಣೆ ಬಿಟ್ಟು ಬೇರೆ ಎಣ್ಣೆ ಉಪಯೋಗಿಸಬಾರದು. 

ಇದನ್ನು ಒಂದು ತಿಂಗಳು ಹಚ್ಚಬೇಕು.

16)ಹಾಗೆಯೇ ಮನೆಯ ಹೊರಗೆ ಎತ್ತರದಲ್ಲಿ ಯಮದೇವರಿಗೆ ಕೂಡಾ ಇಂದು ಒಂದು ದೀಪ ಹಚ್ಚಬೇಕು. 
***

following is by sri. ನರಹರಿ ಸುಮಧ್ವ

ಯಮದೀಪದಾನ - ಆಶ್ವಯುಜ ಬಹುಳ ತ್ರಯೋದಶಿ

ಆಶ್ವಯುಜ ಬಹುಳ ತ್ರಯೋದಶಿಯಂದು ಯಮದೀಪದಾನ ಮಾಡತಕ್ಕದ್ದು.
ಈ ದಿನ ಸಾಯಂಕಾಲ ದೀಪವನ್ನು ಯಮನಿಗಾಗಿ ದಕ್ಷಿಣದಿಕ್ಕಿಗೆ ಮುಖಮಾಡಿ ಮಣ್ಣಿನ ಹಣತೆಯಲ್ಲಿ ಹಚ್ಚಬೇಕು. ಈ ದೀಪ ಮಾರನೇ ದಿನ ಅರುಣೋದಯ ಕಾಲದತನಕ ಉರಿಯುವಂತೆ ಹಚ್ಚಬೇಕು. ಇದರಿಂದ ಅಪಮೃತ್ಯು ಪರಿಹಾರವಾಗಲಿದೆ. ಮನೆಯ ಎತ್ತರದ ಭಾಗದಲ್ಲಿ ಇದನ್ನು ಹಚ್ಚುವುದರಿಂದ ಇದನ್ನು ಆಕಾಶದೀಪ ಎನ್ನುತ್ತಾರೆ.

ಅಕಾಶದೀಪ ಮತ್ತು ಯಮದೀಪದಾನ ಮಾಡುವ ಉದ್ದೇಶ :
ಅ. ಗಗನಮಾರ್ಗದಲ್ಲಿ ಸಂಚರಿಸುವ ಪಿತೃದೇವತೆಗಳಿಗೆ ದಾರಿ ತೀರಿಸುವುದು.
ಆ. ಪಿತೃದೇವತೆಗಳ ತೃಪ್ತಿ
ಇ. ದೀಪ ಬೆಳಗುವುದರಿಂದ ನಮ್ಮ ಸಂಸ್ಕೃತಿಯ ಪ್ರೋತ್ಸಾಹ.
ಈ. ಯಮಧರ್ಮರಾಜನ ಪ್ರೀತಿಗಾಗಿ ಮಾಡುವ ದೀಪದಾನ. ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಆಗುವುದಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು ಯಮಧರ್ಮನಿಗೆ ಕಣಕದಿಂದ ತಯಾರಿಸಿದ  ಎಳ್ಳೆಣ್ಣೆಯ ದೀಪವನ್ನು ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು.


ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಕು. ಆನಂತರ ಈ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಬೇಕು.

ಸಂಕಲ್ಪ :  ಪ್ರಣವಸ್ಯ……. ಆಶ್ವಯುಜ ಕೃಷ್ಣ ಪಕ್ಷ ತ್ರಯೋದಶ್ಯಾಂ ಶುಭತಿಥೌ, ಪ್ರದೋಷ ಸಮಯೇ, ಯಮಾಂತರ್ಗತ ಶ್ರೀ ವಿಷ್ಣು ಪ್ರೇರಣಯಾ, ಶ್ರೀ ವಿಷ್ಣು ಪ್ರೀತ್ಯರ್ಥಂ ಯಮದೀಪದಾನಂ ಕರಿಷ್ಯೇ. ಇದು ಯಮನಿಗೆ ಉದ್ದಿಶ್ಯವಾದ ದೀಪಜ್ವಲನವಾದ್ದರಿಂದ ಯಮದೀಪದಾನ ಎಂದು ಹೆಸರಾಗಿದೆ.

ಯಮದೀಪದ ತಯಾರಿಕೆ  : ಅಷ್ಟಭುಜಾಕಾಲದಲ್ಲಿ ಅಥವಾ ದ್ವಾದಶ ಭುಜಾಕಾರದಲ್ಲಿ ಬಿದಿರಿನ ಕೋಲುಗಳಿಂದ ಗೂಡು ರಚಿಸಿ, ದೀಪವು ಶಾಂತವಾಗದಂತೆ ಅದನ್ನು ಬಟ್ಟೆ ಅಥವಾ ಕಾಗದದಿಂದ ಸುತ್ತಿ ಮನೆಯ ಎತ್ತರದ ಭಾಗದಲ್ಲಿ ಹಚ್ಚಿಡಬೇಕು.    ಕೆಲವರು ವಿದ್ಯುದ್ದೀಪಗಳಿಂದ ಅಲಂಕಾರ ಮಾಡುತ್ತಾರೆ.  ಆದರೆ ಎಣ್ಣೆ ದೀಪವನ್ನು ಹಚ್ಚುವುದರಿಂದ ಪುಣ್ಯ ಬರುತ್ತದೆ.


ಸಾಧ್ಯವಾದರೆ ಒಬ್ಬ ಬ್ರಾಹ್ಮಣನಿಗೆ ಒಂದು ಜೊತೆ ದೀಪವನ್ನು ಯಥಾಶಕ್ತಿ ದಕ್ಷಿಣೆ ಸಹಿತ ದಾನ ನೀಡಬೇಕು.


ದೀಪದಾನ ಮಂತ್ರ :

ಮೃತ್ಯುನಾ ಪಾಶದಂಡಾಭ್ಯಾಂ 
ಕಾಲೇನ ಶ್ಯಾಮಯಾಸಹ |
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ |

ಹಸ್ತದಲ್ಲಿ ಪಾಶ ದಂಡಗಳನ್ನು ಹಿಡಿದ ಸೂರ್ಯಪುತ್ರ ಯಮ ಧರ್ಮರಾಜನು ಶ್ಯಾಮಲಾದೇವಿಯೊಂದಿಗೆ, ತ್ರಯೋದಶಿಯ ದೀಪದಾನದಿಂದ ಸಂತುಷ್ಟನಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಬೇಕು.

ಇಂದಿನಿಂದ ಪ್ರತಿದಿನ ದೀಪವನ್ನು ಕಾರ್ತೀಕ ಮಾಸದ ಅಮಾವಾಸ್ಯೆಯವರೆಗೂ ಪ್ರಜ್ವಲಿಸಬೇಕು. ಸಾಧ್ಯವಿಲ್ಲದಿದ್ದರೆ ಬೇರೆಯವರು ಹಚ್ಚಿದ ದೀಪದ ತುದಿಯನ್ನು (ಕರಿಯನ್ನು) ತೆಗೆದು ದೀಪ ಆರದಂತೆ ನೋಡಿಕೊಳ್ಳಿ.

ಇದರ ಬಗ್ಗೆ ಒಂದು ಕಥೆಯಿದೆ :

ಹಿಂದೆ ಒಬ್ಬ ರಾಜಕುಮಾರನ ಜಾತಕ ರೀತ್ಯಾ ಅವನ ಮೃತ್ಯು ಸರ್ಪ ಕಡಿತದಿಂದ ಅವನ ವಿವಾಹವಾದ ನಾಲ್ಕನೇ ದಿನ ಸಾವು ಬರಬೇಕಿತ್ತು. ಆದರೆ ಅವನ ಪತ್ನಿ ಆ ನಾಲ್ಕನೇ ದಿನ ಅವನು ನಿದ್ರಿಸಲು ಬಿಡಲಿಲ್ಲ. ಅವಳು ತನ್ನ ಕೊಠಡಿಯ ಹೊರಗೆ ತನ್ನೆಲ್ಲಾ ಆಭರಣಗಳನ್ನು ಇಟ್ಟು ಅದರ ಸುತ್ತಲೂ ಲೆಕ್ಕವಿಲ್ಲದಷ್ಟು ದೀಪದ ಹಣತೆ ಹಚ್ಚಿ ದೇವರನಾಮಗಳನ್ನು ಪಾಡುತ್ತಾ, ಕಥೆಗಳನ್ನು ಹೇಳುತ್ತಾ ರಾಜಕುಮಾರ ನಿದ್ರಿಸದಂತೆ ನೋಡಿಕೊಂಡಳು. ಅದೇ ಸಮಯದಲ್ಲಿ ಯಮಧರ್ಮ ಹಾವಿನ ರೂಪದಲ್ಲಿ ಅಲ್ಲಿಗೆ ಬಂದಾಗ ಆ ದೀಪಗಳ ತೀವ್ರ ಪ್ರಕಾಶದ ಸಮೂಹದ ಮಧ್ಯೆ ಒಳ ಪ್ರವೇಶಿಸಲಾಗದೆ ಆಭರಣರಾಶಿಗಳ ಮೇಲೆ ಕುಳಿತು ಆಕೆಯ ಹಾಡು ಕೇಳುತ್ತಾ ಕುಳಿತನು. ತನ್ನ ಪತಿಯ ಪ್ರಾಣವನ್ನು ಉಳಿಸಿದಳು. ಅಂದಿನಿಂದ ಯಮದೀಪ ಎಂಬ ಹೆಸರಿನಿಂದ ದೀಪವನ್ನು ಯಮನ ದಿಕ್ಕಿನಲ್ಲಿ ಬೆಳಗುವ ಸಂಪ್ರದಾಯ ಇದೆ.
END
*******

ಜಲಪೂರ್ಣ ತ್ರಯೋದಶಿ  ನೀರು ತುಂಬುವ ಹಬ್ಬ 

What is Jalapoorna Trayodashi ? 
ಜಲಪೂರ್ಣ ತ್ರಯೋದಶಿ

ಆಶ್ವೀಜ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ.  ಅಂದು ನೀರು ತುಂಬಿಸುವ ಪಾತ್ರೆ ಮತ್ತು ನೀರು ಕಾಯಿಸುವ ಹಂಡೆಗಳನ್ನು ತೊಳೆದು ಅವನ್ನು ಅಲಂಕರಿಸಬೇಕು.   ಅನಂತರ ಸಮೀಪದ ಬಾವಿ, ಕೆರೆ, ನದಿಯಿಂದ ನೀರು ತಂದು ತುಂಬಿಸಿ, ಗಂಗೆ ಪೂಜೆ ಮಾಡಬೇಕು.   ದೇವರ ಮುಂದೆ ಮಂಡಲವನ್ನು ಹಾಕಿ (ನೀರಿನಲ್ಲಿ), ರಂಗೋಲಿಯನ್ನು ಬರೆದು, ಅದನ್ನು ಅಲಂಕರಿಸಿ,  ಗಂಗೆಯನ್ನು ಒಂದು ಪಾತ್ರೆಯಲ್ಲಿ ಇಟ್ಟು ದೇವರಿಗೆ ಸಮರ್ಪಿಸಬೇಕು.  ದೇವರ ಮುಂದೆ ಮತ್ತು  ತುಳಸೀ ಗಿಡದ ಮುಂದೆ ದೀಪವನ್ನು ಹಚ್ಚಿ,  ಆಚಮನ ಮಾಡಿ, ಸಂಕಲ್ಪ ಪುರಸ್ಸರವಾಗಿ, ದ್ವಾದಶ ನಾಮಗಳಿಂದ ಗಂಗೆಯನ್ನು ಪೂಜಿಸಿ, ಸಕಲ ತೀರ್ಥಾಭಿಮಾನಿ ದೇವತೆಗಳನ್ನು ಸ್ಮರಿಸಿ, ನೈವೇದ್ಯವನ್ನು ಮಾಡಿ, ನೀರಾಜನವನ್ನು ಸಮರ್ಪಿಸಿ, ಗಂಗೆಯನ್ನು ಪೂಜಿಸಬೇಕು,   ಇಲ್ಲಿ ನೀರೇ ಗಂಗೆಯಲ್ಲ.  ಅದರಲ್ಲಿ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳು ಸನ್ನಿಹಿತರಾಗಿರುತ್ತಾರೆ ಎಂದು ಭಾವಿಸಬೇಕು.

ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |
ನರ್ಮದೇ ಸಿಂದು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು  |

ಗಂಗಾಯೈ ನಮ: | ಗಂಗಾಂ ಅಸ್ಮಿನ್ ಕಲಶೇ ಆವಾಹಯಾಮಿ, ಅರ್ಘ್ಯಪಾದ್ಯ ಆಚಮಾನೀಯಾದಿ ಸರ್ವೋಪಚಾರ ಪೂಜಾಂ ಸಮರ್ಪಯಾಮಿ |

ದ್ವಾದಶನಾಮ ಪೂಜ  –  ನಂದಿನೈ ನಮ: | ನಲಿನ್ಯೈ ನಮ: | ಸೀತಾಯೈ ನಮ: | ಮಾಲತ್ಯೈ ನಮ: | ಮಲಾಪಹಾಯೈ ನಮ: | ವಿಷ್ಣುಪಾದಾಬ್ಜಸಂಭೂತಾಯೈ ನಮ: | ಗಂಗಾಯೈ ನಮ: | ತ್ರಿಪಥಗಾಮಿನ್ಯೈ ನಮ: | ಭಾಗೀರಥ್ಯೈ ನಮ:|ಭೋಗವತ್ಯೈ ನಮ: | ಜಾಹ್ನವ್ಯೈ ನಮ: | ತ್ರಿದಶೇಶ್ವರ್ಯೈರ್ನಮ: |

ಧೂಪಂ, ದೀಪಂ, ಗೂಡಾಪೂಪ ನೈವೇದ್ಯಂ ಸಮರ್ಪಯಾಮಿ |

ನೀರಾಜನಂ ಸಮರ್ಪಯಾಮಿ |

ಯಮದೀಪದಾನ :       ಯಮಧರ್ಮರಾಜನ ಪ್ರೀತಿಗಾಗಿ ಮಾಡುವ ದೀಪದಾನ.   ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಆಗುವುದಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು  ಯಮಧರ್ಮನಿಗೆ ಕಣಕದಿಂದ ತಯಾರಿಸಿದ ಎಣ್ಣೆಯ ದೀಪವನ್ನು (ಹದಿಮೂರು ದೀಪಗಳನ್ನು) ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು. ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ.  ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಕು. ಆನಂತರ ಈ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಬೇಕು.

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ |
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ | 

ಹಸ್ತದಲ್ಲಿ ಪಾಶ ದಂಡಗಳನ್ನು ಹಿಡಿದ ಸೂರ್ಯಪುತ್ರ ಯಮಧರ್ಮರಾಜನು ಶ್ಯಾಮಲಾದೇವಿಯೊಂದಿಗೆ, ತ್ರಯೋದಶಿಯ ದೀಪದಾನದಿಂದ ಸಂತುಷ್ಟನಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಬೇಕು.

This is popularly called as Neeru tumbuva habba or water filling festival.    What is this? ನೀರು  ‘Neeru’ means water (jala)  and the tradition of physical cleaning and refilling the container.   This cleaning is done to remove all dirt, evil and  inauspicious things before the entry of Lakshmidevi during Diwali day. 

This is done on Ashwayuja Krishna trayOdashi.  This is popularly called as ನೀರು ತುಂಬುವ ಹಬ್ಬ  (neeru tumbuva habba).  On Ashwayuja Krishna trayodashi, we have to do the gangaa pooja.  We have to clean the haMDe (ಹಂಡೆ).  Ofcourse, now a days, we are rarely seeing haMde, those who are not having haMde, they have to clean their geyser, boiler, etc., We have to fill the hande, geyser, boiler with fresh water, and shall decorate with rangavalli, do the avaahana of gangaadi tirthaas – remember the rivers by chanting.

Achamana, saMkalpa………..   kalasha pUja …..
gaMgE cha yamunE chaiva gOdaavarI saraswati |

narmadE siMdu kaavEri jalEsmin sannidhiM kuru | 

gaMgaayai nama: | gaMgaaM asmin kalashE Avaahayaami, arGyapaadyaa AchamaanIyaadi sarvOpachaara pUjaam samarpayaami |

dvaadashanaama pUja  –  naMdinai nama: | nalinyai nama: | sItaayai nama: | maalatyai nama: | malaapahaayai nama: | viShNupaadaabhasaMbhUtaayai nama: | gaMgaayai nama: | tripathagaaminyai nama: | bhaagIrathyai nama: |bhOgavatyai nama: jaahnavyai nama: | tradashEshvaryairnama: |

dhUpaM, dIpaM, gUDaapUpa naivEdyaM samarpayaami | nIraajanaM samarpayaami | naivEdyaM samarpayaami.

After naivEdya samarpaNa, pour the kalasha water to the haMde, boiler, etc.  Next day morning use the water for bath.


ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |

ನರ್ಮದೇ ಸಿಂದು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು |
*********

ನರಕ_ಚತುರ್ದಶಿ

ಅಭ್ಯಂಗಸ್ನಾನ, 
ಯಮತರ್ಪಣ

ಯಾರಿಗೆ ನರಕವನ್ನು ಕುರಿತು ಭಯವಿದೆಯೋ  ಅವರು  ನರಕ ಚತುರ್ದಶಿ ದಿನ  ಚಂದ್ರ ನಕ್ಷತ್ರಗಳಿರುವಾಗ ಅಭ್ಯಂಗ ಸ್ನಾನವನ್ನು ಮಾಡಿದರೆ ನರಕದ ಭೀತಿ ತಪ್ಪುತ್ತಧೆ.  ಚತುರ್ದಶಿಯಂದು ನರಕಾಸುರನನ್ನು ವಧಿಸಿ ಬಂದ ಕೃಷ್ಣನಿಗೆ  ರುಕ್ಮಿಣಿ ಸಹಿತ ಎಲ್ಲರೂ ಆರತಿಯನ್ನು ಮಾಡುತ್ತಾರೆ.   ಶ್ರೀಕೃಷ್ಣನಿಗೆ ನಂದನು ಅಭ್ಯಂಗ ಸ್ನಾನ ಮಾಡಿಸಿದನು. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಆದುದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ, ಜನರು ಈ ದಿನದಂದು ಸೂರ್ಯೋದಯವಾಗುವ ಮುಂಚೆ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ.

ಕೆಲವು ಭಾಗದ ಜನರು ಅಭ್ಯಂಗ ಸ್ನಾನದ ನಂತರ  ಮನೆ ಮಂದಿಗೆಲ್ಲ ಆರತಿಯನ್ನು ಮಾಡತಾರೆ, ಕೆಲವು ಭಾಗದಲ್ಲಿ ಸ್ನಾನದಕ್ಕಿಂತ   ಮುಂಚೆ ಆರತಿಯನ್ನು ಮಾಡುತ್ತಾರೆ. ನಮ್ಮ ಪದ್ಧತಿ ಪ್ರಕಾರ ನಾವು ಸ್ನಾನಕ್ಕಿಂತ ಮೊದಲು ಮನೆಮಂದಿಗೆಲ್ಲ ಆರತಿ ಮಾಡಿ ನಂತರ ಅಭ್ಯಂಗ ಮಾಡುತ್ತೇವೆ...‌ ಯಾಕೆಂದರೆ  ಚಂದ್ರ ನಕ್ಷತ್ರ ಸಾಕ್ಷಿಯಾಗಿ ಆರತಿಯಾಗಬೇಕು..‌

ಅಭ್ಯಂಗ ಸ್ನಾನ.‌‌‌

ಬ್ರಹ್ಮ ಮುಹೂರ್ತದಲ್ಲಿ ಮಾಡುವ ಸ್ನಾನವು 'ದೇವ ಪರಂಪರೆ' ಎಂದು ಪರಿಗಣಿಸಲ್ಪಡುತ್ತದೆ. ಈ ರೀರಿ ದೇವ ಪರಂಪರೆಯನ್ನು ಅನುಸರಿಸುವುದರಿಂದ ಮನುಷ್ಯರಿಗೆ ಮುಂದಿನ ಲಾಭಗಳಾಗುತ್ತವೆ –

ಅ. ಶುದ್ಧ, ಪವಿತ್ರ ಮತ್ತು ನಿರ್ಮಲ ಸಂಸ್ಕಾರಗಳಾಗುತ್ತವೆ.

ಆ. ಬ್ರಹ್ಮ ಮುಹೂರ್ತದಲ್ಲಿ ಪ್ರಕ್ಷೇಪಿಸುವ ಈಶ್ವರೀ ಚೈತನ್ಯ ಮತ್ತು ದೇವತೆಗಳ ಲಹರಿಗಳನ್ನು ಗ್ರಹಿಸುವ ಸಾಮರ್ಥ್ಯ ಬರುತ್ತದೆ.

ಇ. ಈಶ್ವರೀ ಚೈತನ್ಯವನ್ನು ಗ್ರಹಿಸುವಂತಾಗಲು ತನ್ನನ್ನು ಸಮರ್ಥನನ್ನಾಗಿಸಲು ಮತ್ತು ಈಶ್ವರನ 'ಸಂಕಲ್ಪ, ಇಚ್ಛೆ ಮತ್ತು ಕ್ರಿಯೆ' ಈ ಮೂರು ರೀತಿಯ ಶಕ್ತಿಗಳು, ಮತ್ತು ಆ ಶಕ್ತಿಯ ಸಮ್ಮಿಲದಿಂದ ಜ್ಞಾನ ಶಕ್ತಿಯೂ ಗ್ರಹಿಸಲು ಅನುಕೂಲವಾಗುತ್ತದೆ.

ಈ. ಸ್ನಾನದ ನಂತರ ಹಣೆಗೆ ಹಚ್ಚಿಕೊಳ್ಳುವ ತಿಲಕವು 'ದುಷ್ಟ ಸಂಹಾರ, ಮತ್ತು ಧರ್ಮದ ವಿಜಯದ' ಪ್ರತೀಕವಾಗಿದೆ !

ಆ ದಿನದ ವಿಶೇಷ ಅಂದರೆ ಅಭ್ಯಂಗ ಸ್ನಾನ..

ಸುವಾಸನೆಯಿಂದ ಕೂಡಿದ ಎಣ್ಣೆಯನ್ನು  ಹೆಣ್ಣುಮಕ್ಕಳು ಮಕ್ಕಳು ಗಂಡಂದಿರಿಗೆ  ಹಚ್ಚಿ  ಅದಕ್ಕೂ ಒಂದು ಪದ್ಧತಿ ಇದೆ  ಮಣೆಯನ್ನು ಹಾಕಿ ಪೂರ್ವ ಅಥವಾ ಉತ್ತರಾಭಿಮುಖವಾಗಿಟ್ಟು  ಮಣೆ ಸೂತ್ತಲೂ ರಂಗವಲ್ಲಿ ಹಾಕಿ  ಒಬ್ಬೊಬ್ಬರನ್ನಾಗಿ ಕೂಡಿಸಿ ಹಣೆಗೆ ತಿಲಕಹಚ್ಚಿ   ಬಂಗಾರದ ಉಂಗುರದಿಂದ  ಎಣ್ಣೆಯಲ್ಲಿ ಅದ್ದಿ  ಹರಿಸಿ ಮಕ್ಕಳಿಗೆ ಈ ರೀತಿಯಾಗಿ 

ಆಯುಷ್ಯವಂತನಾಗು ..
ವಿದ್ಯಾವಂತನಾಗು 
ಬುದ್ಧಿವಂತನಾಗು
ಧನವಂತನಾಗು 
ಧಾನ್ಯವಂತನಾಗು
ಅಂತ ಹರಿಸಿ ಮಕ್ಕಳ ನೆತ್ತಿಗೆ ಬಂಗಾರದ ಉಂಗುರದಿಂದ ಎಣ್ಣೆ ಹಚ್ಚಿ ನಂತರ ಎಣ್ಣೆ ಹಚ್ಚಿ  ಮುಖಕ್ಕೆ ಕೈಕಾಲುಗಳಿಗೆ ಚಿಟಿಕೆ ಅರಿಷಿಣ ಹಾಕಿ,  ಅರಿಷಿಣ ಎಣ್ಣೆಹಚ್ಚಿ ಬಿಸಿನೀರಿನಿಂದ ಸ್ನಾನ ಹಾಕಮಾಡಿಸಬೇಕು, ಮನೆಯ ಪ್ರತಿಯೊಬ್ಬರು ಈ ರೀತಿ ಅಭ್ಯಂಗ ಸ್ನಾನ ಮಾಡಬೇಕು.‌

ನರಕ ಚತುರ್ದಶಿ ದಿವಸ ಬೆಳಗಿನ ಜಾವ ದೇವರಿಗೆ ಆರತಿ, ತುಳಸೀದೇವಿಗೆ ಆರತಿ ಮಾಡಿಎಣ್ಣೆ ಶಾಸ್ತ್ರ ಮಾಡುವಾಗ ಕಾಮಪಿತನನ್ನು ಸ್ಮರಿಸುತ್ತಾ ತೈಲ ಶಾಸ್ತ್ರ ಮಾಡುವಾಗ ಹೇಳುವ ಹಾಡು.

ಕಾರ್ತೀಕ ಮಾಸದಲ್ಲಿ ಕಾಮಪಿತನ ಪೂಜಿಸೆ//ಪ//.

ಕಾರ್ತೀಕ ಮಾಸದಲ್ಲಿ ಕಾಮನ ಪಿತನ ಕುಳ್ಳಿರಿಸಿ /
ದೇವಕಿ ಸುತನ ಪೂಜಿಸಿ/ 
ಮಾಸಾಭಿಮಾನಿ ದಾಮೋದರನ ಭಜಿಸಿ/
ಲೇಸು ಸಂಪಿಗೆ ಗಂಧೆಣ್ಣೆ ಸಮರ್ಪಿಸಿ/
ಮಹಾಪುಣ್ಯ ಪುರುಷೋತ್ತಮ ನ
ಕೊಂಡಾಡುತ ಎಣ್ಣೆ ಶಾಸ್ತ್ರ ವನೆ ರಚಿಸಿರಿ//೧//.

ಪುಣ್ಯ ಸಾಧನದ ಜನರೆಲ್ಲಾ / 
ಬ್ರಾಹ್ಮೀ ಸುಮುಹೂರ್ತದಲೆ ತಾವೆದ್ದು/
ಕುಂಭಿಣೀ ಕಸ್ತೂರಿ ಕರ್ಪೂರ ದ ವೀಳವ ಪಿಡಿದು/
ಮಹಾ ಪುಣ್ಯ ಪುರುಷೋತ್ತಮ ನ ಕೊಂಡಾಡುತ
ಎಣ್ಣೆ ಶಾಸ್ತ್ರ ವನು ರಚಿಸಿರಿ//೨//.

ಸೃಷ್ಟಿ ಗೆ ಕರ್ತ ಶ್ರೀಹರಿಯು/
ಸೃಷ್ಟಿಸಿದನು ದೀಪಾವಳಿಯ/
ಉತ್ತಮ ಚತುರ್ದಶಿ ದಿನದಲೆ ಬಂದು/
ಮತ್ತೆ ನರಕಾಸುರನ ವಧೆಯನು ಮಾಡಿ/
ಭಕ್ತರಿಗೊಲಿದ ಉತ್ತಮ ಶ್ರೀ ಹಯವದನ ಗೆ

ಎಣ್ಣೆ ಶಾಸ್ತ್ರ ವ ರಚಿಸಿರಿ //೩//..

or

 ಶ್ರೀ ತಿರುಪತಿ ಪಾಂಡುರಂಗಿ ಹುಚ್ಚಾಚಾರ್ಯರ ರಚನೆ

ಎಣ್ಣೆ ಶಾಸ್ತ್ರದ ಪದ. (ದೀಪಾವಳಿ ಹಾಡುಗಳ ಸರಿಳಿಯಲ್ಲಿ ಆಯ್ದ ಕೃತಿ)


ಎಣ್ಣೀಯ ಹಚ್ಚಿದೆನೆ ಸುಗಂಧದ ಎಣ್ಣೀಯ ಹಚ್ಚಿದೆನೆ.. ಪಲ್ಲವಿ


ಎಣ್ಣೀಯ ಹಚ್ಚಿರೆ ವನ್ನುತೆಯರೆ ಕೇಶವನ್ನೆ ಹರವಿ ಚಲುವ ಮನ್ಮಥ ಪಿತನಿಗೆ.. ಅನುಪಲ್ಲವಿ.


ಶ್ಯಾಮಸುಂದರ ಸತ್ಯಭಾಮೆ ಸಹಿತ ಪೋಗಿ

ಭೂಮಿಸುತನ ಕೊಂದನೀ ಮಹದಿನದಿ....1


ಎಷ್ಟೊ ಕುಸುಮಗಳ ನಟ್ಟಿತೆಗೆದ ತೈಲ

ವೃಷ್ಣಿನಾಥನ ಮೈಯ ಮುಟ್ಟಿ ಸರ್ವಾಂಗದಿ.... 2


ಸಿಂಧುತನುಜೆ ಪ್ರೇಮಾನಂದಾದಿಂದಪ್ಪುವ

ಇಂದಿರೇಶನ ಸರ್ವ ಸುಂದರ ಕಾಯದಿ.... 3

***



ಯಮತರ್ಪಣೆ:

ಯಮ ತರ್ಪಣಇದು ಕೂಡಾ ಬಹಳ ಮಹತ್ವವಾದದ್ದು . ಯಮನ ಪ್ರಿತ್ಯರ್ಥವಾಗಿ ಅಭ್ಯಂಗ ಸ್ನಾನದ ನಂತರ ಅಪಮೃತ್ಯು (ಅಕಾಲ ಮೃತ್ಯು) ಬಾರದಿರುವಂತೆ ಯಮತರ್ಪಣೆಯನ್ನು ನೀಡಲು ಶಾಸ್ತ್ರಗಳಲ್ಲಿ ಹೇಳಲಾಗಿದೆ.  

ತಂದೆ ಇದ್ದವರು ಸವ್ಯದಿಂದ ತಂದೆ ಇಲ್ಲದವರು ಅಪಸವ್ಯದಿಂದ ತರ್ಪಣ ಕೊಡಬೇಕು ದಕ್ಷಿಣದಿಕ್ಕಿಗೆ ಮುಖಮಾಡಿ ...

ಸಂಕಲ್ಪ..‌

ಮಮ ಸಕಲ ಅರಿಷ್ಟ ಪರಿಹಾರ ದ್ವಾರಾ  ಶುಭಫಲ ಪ್ರಾಪ್ತರ್ಥಂ ಅಕಾಲ ,ಕಾಲಪಾಶ ,  ನಿವಾರಣಾರ್ಥಂ  ನರಕಚತುರ್ದಶಿನಿಮಿತ್ತಂ  ಯಮತರ್ಪಣಂ ಕರಿಷ್ಯೇ..

ನಂತರ ತರ್ಪಣ ಕೊಡಬೇಕು

ಯಮಂ ತರ್ಪಯಾಮಿ
ಧರ್ಮರಾಜಂ ತರ್ಪಯಾಮಿ
ಮೃತ್ಯುಂ ತರ್ಪಯಾಮಿ
ಅಂತಕಂ ತರ್ಪಯಾಮಿ
ವೈವಸ್ವತಂ ತರ್ಪಯಾಮಿ
ಕಾಲಂ ತರ್ಪಯಾಮಿ
ಸರ್ವಭೂತಕ್ಷಯಂ ತರ್ಪಯಾಮಿ
ಔದುಂಬರಂ ತರ್ಪಯಾಮಿ
ದದ್ನಂ ತರ್ಪಯಾಮಿ
ನೀಲಂ ತರ್ಪಯಾಮಿ
ಪರಮೇಷ್ಠೀನಂ ತರ್ಪಯಾಮಿ
ವೃಕೋಧರಂ ತರ್ಪಯಾಮಿ
ಚಿತ್ರಂ ತರ್ಪಯಾಮಿ
ಚಿತ್ರಗುಪ್ತಂ ತರ್ಪಯಾಮಿ

ಇಷ್ಟನ್ನು ಗಂಡಸರು ತಪ್ಪದೆ  ಈ ದಿನ ತರ್ಪಣವನ್ನು ಕೊಡಬೇಕು.....

ನಂತರ ಸಂಜೆ..

ಪಿತೃಗಳಿಗೆ ದಾರಿತೋರಿಸಬೇಕು ಆ ದಿನ . ಯಾರಿಗೆ ಪಿತೃ ದೋಷ , ಕಾಡಾಟ ಇರುತ್ತೊ ಅದೆಲ್ಲ ಕಡಿಮೆ ಆಗುತ್ತೆ ಹೇಗೆ ಅಂತ ತಿಳಿಸಿ ಕೊಡತೇನೆ....‌

ಸೂರ್ಯಾಸ್ತದ ನಂತರ  ಸಂಜೆ   ಒಂದು ಕಟ್ಟಿಗೆಗೆ ಕೊಳ್ಳಿಯನ್ನು ಹಚ್ಚಿ ..ಈಮಂತ್ರ ಹೇಳಿ ಮೇಲೆ ತೂರಬೇಕು... 

ಮಂತ್ರ..

ಅಗ್ನಿ ದಗ್ಧಾಶ್ಚ  ಯೇ ಜೀವಾ ಯೇsಪ್ಯದಗ್ಧಾಃ ಕುಲೆ ಮಮl
ಉಜ್ವಲಜ್ಯೋತಿಷಾ ದಗ್ಧಾಸ್ತೇ ಯಾಂತು  ಪರಮಾಂ ಗತಿಮ್ ll
ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಲಯೇ 
ಉಜ್ವಲ ಜೋತಷಾ ವರ್ತ್ಮ  ಪ್ರಪಶ್ಯಂತು  ವ್ರಜಂತುತೆ ll

ಈ ಮಂತ್ರವನ್ನು ಹೇಳಿ ಕೊಳ್ಳಿಯನ್ನು ಸ್ವಲ್ಪ ಮೇಲೆ ತೂರಬೇಕು ..‌ ಸಾದ್ಯವಿದ್ದಷ್ಟು ಮಾತ್ರ  ತೂರಿ  ಬೇರೆಯವರ ಅಂಗಳ, ಮನೆ ಮೇಲೆ ಬಿಳಬಾರದು  ಸ್ವಲ್ಪ ಶಾಸ್ತ್ರ ಮಾಡಿದರೆ ಮಕ್ಕಳು ಒಳಗಿರಲಿ..‌‌...

ಈ ರೀತಿ ಮಾಡುವದರಿಂದ ಪಿತೃಗಳಿಗೆ ದಾರಿ ತೋರಿಸಿದಂತೆ  ....

ಯಮದೀಪ ಎಂದರೆ ಯಾವುದು

ದಕ್ಷಿಣ ದಿಕ್ಕಿಗೆ ಮುಖ ಮಾಡಿ ಧನತ್ರಯೋದಶಿ ದಿನ ಹಚ್ಚುವ ಪ್ರಥಮ ದೀಪ

***

Another Version - ಎಣ್ಣೆಶಾಸ್ರ on Naraka Chaturdashi
ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) – 

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು

“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |

ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|

ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.


ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .   ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 


ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ –


ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||

ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.


ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.


ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು

click listen audio ಬಣ್ಣಿಸಿ ಗೋಪಿ ಹರಸಿದಳು

ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||

ಆಯುಷ್ಯವಂತನಾಗು ಅತಿ ಬಲ್ಲಿದನಾಗು |

ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |

ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||

ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||

ಆರತಿ ಹಾಡು

ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||
*********

ಆಶ್ವಯುಜ ಅಮಾವಾಸ್ಯೆ ( ದೀಪಾವಳಿ ಅಮಾವಾಸ್ಯೆ ) ವಿಶೇಷ ಲಕ್ಷ್ಮೀಪೂಜೆ

ಮಹಾಲಕ್ಷ್ಮೀ ಪೂಜಾ, 
ದೀಪಾವಳೀ ಅಮವಾಶ್ಯ

ಲಕ್ಷ್ಮೀಪೂಜೆ : ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನವೆಂದು ಮನ್ನಣೆ ಪಡೆದಿದೆ; ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದ ದಿನ ಎನ್ನುವುದೇ ಯೋಗ್ಯವಾಗಿದೆ.

ಇತಿಹಾಸ : ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ.

ಹಬ್ಬವನ್ನು ಆಚರಿಸುವ ಪದ್ಧತಿ :

ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ. ಇವು ಈ ದಿನದ ವಿಧಿಗಳಾಗಿವೆ.

ಲಕ್ಷ್ಮೀಯ ಪೂಜೆಯನ್ನು ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವು ಕಡೆಗಳಲ್ಲಿ ಕಲಶದ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಇಡುತ್ತಾರೆ. 

ಕಲಶದ ಮೇಲೆ ಲಕ್ಷ್ಮೀಯ ಸಮೀಪದಲ್ಲಿಯೇ ಕುಬೇರನ ಪ್ರತಿಮೆಯನ್ನು ಇಡುತ್ತಾರೆ. ಅನಂತರ ಲಕ್ಷ್ಮೀ ಮತ್ತು ಇತರ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ತಯಾರಿಸಿದ ಹಸುವಿನ ಹಾಲಿನ ಖೋವ ನೈವೇದ್ಯವನ್ನು ಅರ್ಪಿಸುತ್ತಾರೆ.

ಕೊತ್ತಂಬರಿ, ಬೆಲ್ಲ, ಭತ್ತದ ಅರಳು, ಬತ್ತಾಸು ಇತ್ಯಾದಿ ಪದಾರ್ಥಗಳನ್ನು ಲಕ್ಷ್ಮೀಗೆ ಅರ್ಪಿಸಿ ನಂತರ ಅವುಗಳನ್ನು ಆಪ್ತೇಷ್ಟರಿಗೆ ಹಂಚುತ್ತಾರೆ. ನಂತರ ಕೈಯಲ್ಲಿನ ದೀವಟಿಗೆಯಿಂದ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ.

(ಕೈಯಲ್ಲಿನ ದೀವಟಿಗೆಯನ್ನು ದಕ್ಷಿಣ ದಿಕ್ಕಿಗೆ ತೋರಿಸಿ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ.)

ಬ್ರಾಹ್ಮಣರಿಗೆ ಮತ್ತು ಇತರ ಹಸಿದ ವರಿಗೆ ಊಟವನ್ನು ಕೊಡುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. 

ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷಿ ಯು ಎಲ್ಲೆಡೆಗೆ ಸಂಚರಿಸಿ ತನ್ನ ನಿವಾಸಕ್ಕಾಗಿ ಯೋಗ್ಯ ಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. 

ಎಲ್ಲಿ ಸ್ವಚ್ಛತೆ, ಶೋಭೆ ಇರುತ್ತದೆಯೋ ಅಲ್ಲಿ ಅವಳು ಆಕರ್ಷಿತಳಾಗುತ್ತಾಳೆ. ಅಲ್ಲದೆ ಯಾವ ಮನೆಯಲ್ಲಿ ಚಾರಿತ್ರ್ಯವುಳ್ಳ, ಕರ್ತವ್ಯದಕ್ಷ, ಸಂಯಮವುಳ್ಳ, ಧರ್ಮನಿಷ್ಠ ದೇವಭಕ್ತರು ಮತ್ತು ಕ್ಷಮಾಶೀಲ ಪುರುಷರು ಹಾಗೂ ಗುಣವತಿ ಮತ್ತು ಪತಿವ್ರತಾ ಸ್ತ್ರೀಯರು ಇರುತ್ತಾರೆಯೋ ಅಲ್ಲಿ ವಾಸಿಸಲು ಲಕ್ಷ್ಮೀಯು ಇಷ್ಟಪಡುತ್ತಾಳೆ.’

ಈ ಪೂಜೆಯಲ್ಲಿ ಕೊತ್ತಂಬರಿ ಮತ್ತು ಭತ್ತದ ಅರಳನ್ನು ಅರ್ಪಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಕೊತ್ತಂಬರಿಯು (ಧನಿಯಾ) ಧನವಾಚಕ ಶಬ್ದವಾಗಿದೆ ಮತ್ತು ಅರಳು ಸಮೃದ್ಧಿಯ ಪ್ರತೀಕವಾಗಿವೆ. ಸ್ವಲ್ಪ ಭತ್ತಗಳನ್ನು ಹುರಿದರೂ ಕೈತುಂಬಾ ಅರಳುಗಳಾಗುತ್ತವೆ. ಲಕ್ಷ್ಮೀಯ ಸಮೃದ್ಧಿಯಿರಬೇಕೆಂದು ಸಮೃದ್ಧಿಯ ಪ್ರತೀಕವಾಗಿರುವ ಅರಳನ್ನು ಅರ್ಪಿಸುತ್ತಾರೆ.

ಅಲಕ್ಷ್ಮೀಯ ನಿರ್ಮೂಲನ

ಮಹತ್ವ : ಗುಣಗಳನ್ನು ನಿರ್ಮಾಣ ಮಾಡಿದರೂ ದೋಷಗಳು ನಾಶವಾಗ ಬೇಕು; ಆಗಲೇ ಗುಣಗಳಿಗೆ ಮಹತ್ವವು ಬರುತ್ತದೆ. ಇಲ್ಲಿ ಲಕ್ಷ್ಮೀಪ್ರಾಪ್ತಿಯ ಉಪಾಯವಾಯಿತು, ಹಾಗೆಯೇ ಅಲಕ್ಷಿ ಯ ನಾಶವೂ ಆಗಬೇಕು. ಇದಕ್ಕಾಗಿ ಈ ದಿನದಂದು ಹೊಸ ಪೊರಕೆಯನ್ನು ಖರೀದಿಸುತ್ತಾರೆ. ಅದಕ್ಕೆ ‘ಲಕ್ಷ್ಮೀ’ ಎನ್ನುತ್ತಾರೆ.

ಕೃತಿ : ‘ನಡುರಾತ್ರಿಯಲ್ಲಿ ಹೊಸ ಪೊರಕೆಯಿಂದ ಕಸಗುಡಿಸಿ ಅದನ್ನು ಮೊರದಲ್ಲಿ ತುಂಬಿ ಹೊರಗೆ ಹಾಕಬೇಕು’ ಎಂದು ಹೇಳಲಾಗಿದೆ. ಇದಕ್ಕೆ ‘ಅಲಕ್ಷ್ಮೀ (ಕಸ, ದಾರಿದ್ರ್ಯ) ನಿರ್ಮೂಲನ’ ಎನ್ನುತ್ತಾರೆ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಕಸವನ್ನು ಗುಡಿಸುವುದಿಲ್ಲ ಅಥವಾ ಹೊರಗೆ ಹಾಕುವುದಿಲ್ಲ. ಕೇವಲ ಈ ರಾತ್ರಿ ಮಾತ್ರ ಹಾಗೆ ಮಾಡುವುದಿರುತ್ತದೆ. ಕಸ ಗುಡಿಸುವಾಗ ಮೊರ ಮತ್ತು ದಿಮಡಿಯನ್ನು (ಚರ್ಮದ ವಾದ್ಯವನ್ನು) ಬಾರಿಸಿ ಅಲಕ್ಷಿ ಯನ್ನು ಓಡಿಸುತ್ತಾರೆ.

ಅಮವಾಸ್ಯೆ ಮಹಾಲಕ್ಷೀ ಲಕ್ಷೀ ಪೂಜಾ, ಅಶ್ವಿನ ಅಮವಾಸ್ಯೆ, ಅಥವಾ ದಿಪಾವಳಿ ಅಮವಾಸ್ಯೆ ದಿನ ಮಾಡುವ ಕುಬೇರ ಲಕ್ಷೀ ಪೂಜಾ ವಿಧಾನ 

ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತದ ನಂತರ.

ದಾಮೋದರಾಯನಭಸಿ ತುಲಾಯಾಂ ದೊಲಯಾಸಹ ಪ್ರದೀಪಂತೇ ಪ್ರಯಚ್ಛಾಮಿ ನಮೋ ಅನಂತಾಯ ವೇದಸೇ * ಈ ಮಂತ್ರವನ್ನು ಹೇಳಿ ಒಂದು ತಿಂಗಳು ಪರ್ಯಂತ ಎಂಟು ಆಕಾಶ ದೀಪವನ್ನು ಹಚ್ಚಿದರೆ ಮಹಾ ಸಂಪತ್ತು ಲಭಿಸುವದು...

ಸಾಮಾನ್ಯವಾಗಿ ನಾವು ಅಮವಾಸ್ಯೆ ದಿನ ಅಭ್ಯಂಗ ಸ್ನಾನ ಮಾಡುವದಿಲ್ಲ ಆದರೆ ಈ ಅಮವಾಸ್ಯೆ ದಿನ ಅಭ್ಯಂಗ ಸ್ನಾನ ಮಾಡಬೇಕು , ಮಾಡಿದರೆ ಯಾವ ದೋಷವಿಲ್ಲ..‌

ಇತಿಹಾಸ : ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅದಕ್ಕಾಗಿ ಲಕ್ಷೀ ಕುಬೇರ ಪ್ರಿತ್ಯರ್ಥ್ಯ ವಾಗಿ.. ಈ ದಿನ ಮಹಾಲಕ್ಷೀ ಪೂಜೆಯನ್ನು ಮಾಡುತ್ತಾರೋ ಐಶ್ವರ್ಯ ಅಬಿವ್ರದ್ಧಿಯನ್ನು ಹೊಂದುತ್ತಾರೆ.......

ದಿಪಾವಳಿ ಅಮವಾಸ್ಯೆ ಪೂಜೆ ಪ್ರದೋಷಕಾಲದಲ್ಲಿ ದಿಪಾರಾಧನೆ ಜೊತೆಗೆ ಮಾಡಿದಲ್ಲಿ ಸಂಪತ್ತು ಬರುತ್ತದೆ. ಪ್ರದೋಷಕಾಲದಲ್ಲಿ ಮಾಡುವದು ಬಹಳ ಶ್ರೇಷ್ಠ ಅಂದರೆ ಸೂರ್ಯಾಸ್ತದ ನಂತರ ..

ಅದಕ್ಕಾಗಿ ಆ ದಿನ ಅಂದರೆ ಸಂಜೆ ಲಕ್ಷೀ ಪೂಜೆ ಮಾಡುವವರು ಮದ್ಯಾಹ್ನ ಊಟ ಮಾಡಬಾರದು , ಆ ದಿನ ಬಾಲ ವೃದ್ಧರನ್ನು ಬಿಟ್ಟು ಉಳಿದವರು ಮದ್ಯಾಹ್ನ ಊಟ ಮಾಡಬಾರದು ಅಂತ ಶಾಸ್ತ್ರ ಹೇಳುತ್ತದೆ ...

ಊಟಮಾಡಿ ಲಕ್ಷೀ ಪೂಜೆ ಮಾಡಬಾರದು ಲಕ್ಷೀ ಪೂಜೆ ಮಾಡಿ ನಂತರ ರಾತ್ರಿ ಬೋಜನ ಮಾಡುವುದು ಒಳ್ಳೆಯದು... ಈ ಲಕ್ಷೀ ಪೂಜೆ ಅತ್ಯಂತ ಫಲದಾಯಕವಾಗಿರುತ್ತವೆ , ಫಲವೂ ಕೂಡಾ ಬೇಗನೆ ಸಿಗುತ್ತದೆ . ಇದನ್ನು ಯಾರ ಬೇಕಾದರೂ ಮಾಡಬಹುದು ಪದ್ಧತಿ ಅಂತ ಎನೂ ಇಲ್ಲ...

ಆ ದಿನ ಲಕ್ಷೀ ಪೂಜಾ ವಿಧಾನ..

ಒಂದು ಮಂಟಪದಲ್ಲಿ ಒಂದು ಮುಷ್ಠಿ ಆಕ್ಕಿಯನ್ನು ಹಾಕಿ ಕುಂಕುಮ ದಿಂದ ಅಷ್ಟದಳ ಪದ್ಮ ಹಾಕಿ ಅದರ ಮೇಲೆ ಕಲಶವನ್ನು ಸ್ಥಾಪನೆ ಮಾಡಬೇಕು , ಕೆಲವರು ಕಲಶ ಒಳಗೆ ಧಾನ್ಯವನ್ನು ಹಾಕುತ್ತಾರೆ ಇನ್ನೂ ಕೆಲವರು ಜಲವನ್ನು ತುಂಬಿ ಇಡುತ್ತಾರೆ , ಅವರ ಪದ್ಧತಿಯ ಪ್ರಕಾರ ಎರಡೂ ಒಳ್ಳೆಯದೇ ಕಲಶದ ಒಳಗೆ ಅಡಕಿಬೆಟ್ಟ , ನಾಣ್ಯ ಅರಿಷಿಣ ಕುಂಕುಮ ಅಕ್ಷತೆ ಹಾಕಿ ....

ಸಂಕಲ್ಕ ಮಾಡಿ

ಅಕ್ಷತೆಯನ್ನು ಕೈಯಲ್ಲಿ. ಹಿಡಿದು ...

ಮಮ ಮಹಾಲಕ್ಷೀ ಪ್ರೀತಿದ್ವಾರ ಸರ್ವಾಪತ್ತು ಶಾಂತಿ ಪೂರ್ವಕ ಧನ ,ಧಾನ್ಯ ,ಪುತ್ರ , ಪೌತ್ರಾದಿ ಸಂತತೈಶ್ವರ್ಯಾಭಿವೃದ್ದ್ಯರ್ಥಂ ಅಶ್ವಿನ ಕೃಷ್ಣಮಾಯಾಂ ವಿಹಿತಂ ಯಥಾ ಮಿಲಿತೋಪಚಾರ

ಷೋಡಷೋಪಚಾರ ದ್ರವೈಃ ಶ್ರೀ ಮಹಾಲಕ್ಷೀ ಪೂಜನಂ ಕರಿಷ್ಯೇ.... ಅಂತ ಸಂಕಲ್ಪ ಮಾಡಿ ಪೂಜೆಯ ಕಲಶದಿಂದ ಒಂದು ಉದ್ಧರಣೆಯಿಂದ ಆ ಅಕ್ಷತೆ.ಮೇಲೆ.ಹಾಕಿ ತಟ್ಟೆಯಲ್ಲಿ ಬಿಡಬೇಕು ..

ನಂತರ ಧ್ಯಾನ ..

ಕೈಮುಗಿದು...
ವರಾಂಕುಶಾ ಪಾಶಮಭೀತಿಮುದ್ರಾಂ
ಕರೈರ್ವಹಂತೀಂ ಕಮಲಾಸನಾಸ್ಥಾಮ್
ಬಾಲಾರ್ಕಕೋಟಪ್ರತಿಮಾಂ ತ್ತೀನೇತ್ರಾಂ
ಭಜೇ ಹಮಾದ್ಯಾಮ್ ಜಗಧೀಶ್ವರೀಂ ತಾಮ್

ನಂತರ
ಶ್ರೀ ಮಹಾಲಕ್ಷೈ ನಮಃ 
ಮಂತ್ರದಿಂದ 
ಷೋಡಷೋಪಚಾರ 
ಪೂಜೆ ಮಾಡಿ
ಐದುತರಹದ ಹಣ್ಣುಗಳನ್ನು ಉಡಿತುಂಬಿ ನಂತರ ಪ್ರಾರ್ಥಿ.ಬೇಕು...

ನಮಸ್ತೇ ಸರ್ವದೇವಾನಾಂ ವರದಾಸಿ ಹರೀ ಪ್ರಿಯಾl
ಯಾಗತಿಸ್ತ್ವತ್ ಪ್ರಪನ್ನಾನಾಂ ಸಾ ಮೇ ಭೊಯಾತ್ತ್ವರ್ದಚನಾತ ll

ಯಾ ದೇವೀ ಸರ್ವ ಭೂತೇಷು ಲಕ್ಷೀ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ll

ಆ ಮೇಲೆ ದೀಪ ಸ್ವರೂಪಳಾದ ಲಕ್ಷೀಯನ್ನು ಪ್ರಾರ್ಥಿಸಬೇಕು...

ವಿಶ್ವರೂಪಸ್ಯ ಭಾರ್ಯಾಸಿ ಪದ್ಮೇ ಪದ್ಮಾಲಯೇ ಶುಭೇ
ಮಹಾಲಕ್ಷೀ ನಮಸ್ತುಭ್ಯಂ ಸುಖರಾತ್ರಿ ಕುರುಷ್ವಮೇ ll

ವರ್ಷಾಕಾಲೇ ಮಹಾಘೋರೇ ಯನ್ತಯಾ ದುಷ್ಕ್ರತಂಕ್ರತಮ್
ಸುಖರಾತ್ರಿಂ ಪ್ರಭಾತ್ಯೇದ್ಯ ತನ್ಮೇ ಲಕ್ಷೀ ರ್ವ್ಯಪೋಹತುll

ಯಾರಾತ್ರಿಃ ಸರ್ವಭೂತಾನಾಂ ಯಾ ಚ ದೇವೇಷ್ವವಸ್ಥಿತಾ ll
ಸಂವತ್ಸರ ಪ್ರೀಯಾ ಯಾ ಚ ಸಾ ಮಮಾಸ್ತು ಸುಮಂಗಲಾ ll

ಮಾತಾ ತ್ವಂ ಸರ್ವ ಭೂತಾನಾಂ ದೇವಾನಾಂ ಸೃಷ್ಟಿ ಸಂಭವಾ l
ಆಖ್ಯಾತಾ ಭೂತಲೇ ದೇವಿ ಸುಖರಾತ್ರಿ ನಮೋಸ್ತುತೇ ll

ಈ ರೀತಿ ಪ್ರಾರ್ಥನೆ ಮಾಡಿ ಆರತಿ ನೈವೇದ್ಯ ಫಲ ತಾಂಬೂಲ ಸಮರ್ಪಣೆ ಮಾಡಿ ಅಕ್ಷತೆಹಾಕಿ ಬಂಧುಬಾಂಧವರೊಡಗೂಡಿ ಊಟಮಾಡಬೇಕು.‌

************
another version

ಶ್ರೀ ಲಕ್ಷ್ಮಿ ಮಾತೆಯ ಶುಕ್ರವಾರದ ಪೂಜೆಯ ವಿಧಾನ ತಿಳಿಸಿದೆ. ಇದನ್ನು ಶ್ರಾವಣ ಮಾಸದಲ್ಲಿಯೂ ಕೂಡ ಮಾಡಬಹುದು. ಶ್ರೀ ಲಕ್ಷ್ಮೀ ಪೂಜೆಯನ್ನು ಮಾಡಿ ಆಕೆಯ ಕೃಪೆಗೆ ಪಾತ್ರರಾಗಿ.

ಶ್ರೀ ಮಹಾಲಕ್ಷ್ಮೀ ನಿತ್ಯಪೂಜೆಯ ವಿಧಾನ
          | ಶ್ರೀ ಗುರುಭ್ಯೋನಮಃ | ಹರಿಃ ಓಂ |
          ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಮ್ಗತೋಪಿ ವಾ |
          ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರ ಶುಚಿಃ ||
          ( ತಲೆಯ ಮೇಲೆ ನೀರನ್ನು ಪ್ರೋಕ್ಷಿಸಿಕೊಳ್ಳಬೇಕು )

          ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
          ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||
          ( ಘಂಟಾನಾದ ಮಾಡಿ )
         
          ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಾಕ್ಷಸಾಮ್ |
          ಕುರು ಘಂಟಾರವಂ ತತ್ರ ದೇವತಾಹ್ವಾನ ಲಾಂಛನಮ್ ||
          ( ಆಚಮನ ಮಾಡಿ )

          ಆಚಮ್ಯ
                   ಕೇಶವಾಯ ಸ್ವಾಹಾ  - - - - - - - - - - - - -
- - - - - - - - - - - - - - ಶ್ರೀಕೃಷ್ಣಾಯ ನಮಃ
          [ ಶ್ರೀ ಗುರುಭ್ಯೋ ನಮಃ || ಹರಿಃ ಓಂ ||
          ಶ್ರೀ ವೈಭವಲಕ್ಷ್ಮೀ ನಮಃ || ಲಕ್ಷ್ಮೀನಾರಾಯಣಾಭ್ಯಾಂ ನಮಃ ||
          ಆಚಮ್ಯ ( ಎರಡಾವರ್ತಿ ನೀರನ್ನು ಸೇವಿಸಬೇಕು )
          ಕೇಶವಾಯ ಸ್ವಾಹಾ | ನಾರಾಯಣಾಯ ಸ್ವಾಹಾ | ಮಾಧವಾಯ ಸ್ವಾಹಾ ||
                             ನಾಮಸ್ಮರಣೆ
                    ಗೋವಿಂದಾಯ ನಮಃ | ವಿಷ್ಣುವೇ ನಮಃ |
                    ಮಧೂಸೂಧನಾಯ ನಮಃ | ತ್ರಿವಿಕ್ರಮಾಯ ನಮಃ |
                    ವಾಮನಾಯ ನಮಃ | ಶ್ರೀಧರಾಯ ನಮಃ |
                    ಹೃಶೀಕೇಶಾಯ ನಮಃ | ಪದ್ಮನಾಭಾಯ ನಮಃ |
                    ದಾಮೋದರಾಯ ನಮಃ | ಸಂಕರ್ಷಣಾಯ ನಮಃ |
                    ವಾಸುದೇವಾಯ ನಮಃ | ಪ್ರದ್ಯುಮ್ನಾಯ ನಮಃ |
                    ಅನಿರುದ್ದಾಯ ನಮಃ | ಪುರುಷೋತ್ತಮಾಯ ನಮಃ |
                    ಅಧೋಕ್ಷಜಾಯ ನಮಃ | ನಾರಸಿಂಹಾಯ ನಮಃ |
                    ಅಚ್ಯುತಾಯ ನಮಃ | ಜನಾರ್ಧನಾಯ ನಮಃ |
                    ಉಪೇಂದ್ರಾಯ ನಮಃ | ಹರಯೇ ನಮಃ |
                    ಶ್ರೀ ಕೃಷ್ಣಾಯ ನಮಃ || (ಕೈ ಜೋಡಿಸಿ ನಮಸ್ಕರಿಸುವುದು)
           ಶ್ರೀ ಗುರುಭ್ಯೋ ನಮಃ | ಶ್ರೀ ಮನ್ಮಹಾಗಣಪತಯೇ ನಮಃ |
                    ಕುಲದೇವತಾಯೈ ನಮಃ | ಇಷ್ಟದೇವತಾಭ್ಯೋ ನಮಃ |
                             ಅವಿಘ್ನಮಸ್ತು | ಶಾಂತಿರಸ್ತು | ]

          ಪ್ರಾಣಾಯಾಮ
ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ | ಓಮಾಪೋ ಜ್ಯೋತಿರಸೋಮೃತಂ ಬ್ರಹ್ಮ ಭುರ್ಭುವಸ್ವರೋಮ್ ||
         
          ಸಂಕಲ್ಪ
ಶುಭೇ ಶೋಭನೇ ಮುಹೂರ್ಥೆ _ _ _ ಸಂವತ್ಸರಸ್ಯ _ _ _ ಅಯನೆ _ _ _ ಋತೌ _ _ _ ಮಾಸಸ್ಯ _ _ _ ಪಕ್ಷೇ _ _ _ ತಿಥೌ _ _ _ ವಾಸರೇ, ಅಸ್ಮಾಕಂ ( ಖಾಲಿ ಜಾಗದಲ್ಲಿ ಪೂಜಾ ದಿನದ ಸಂವತ್ಸರ, ಅಯನ, ಋತು, ಮಾಸ, ಪಕ್ಷ, ತಿಥಿ, ವಾರಗಳನ್ನು ಹೇಳಿ )
ಸಹಕುಟುಂಬಾನಾಂಕ್ಷೇಮ ಸ್ಥೈರ್ಯ ವಿಜಯಾಯುರಾರೋಗ್ಯ ಸಿದ್ಯರ್ಥಂ ಸಮಸ್ತ ಸನ್ಮಂಗಳಾವಾಪ್ತ್ಯರ್ಥಂ ಸೌಭಾಗ್ಯ ಸಿದ್ದ್ಯರ್ಥಂ ಮನೋಕಾಮನಾ ಸಿದ್ದ್ಯರ್ಥಂ ಶ್ರೀ ಮಹಾಲಕ್ಷ್ಮೀ ದೇವತಾಮುದ್ದಿಶ್ಯ ಶ್ರೀ ಮಹಾಲಕ್ಷ್ಮೀ ಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||
                   ( ಮಂತ್ರಾಕ್ಷತೆಗೆ ನೀರು ಹಾಕಿ ತಟ್ಟೆಗೆ ಹಾಕಿ )
                             ಧ್ಯಾನಂ
                   ವಂದೇ ಲಕ್ಷ್ಮೀಂ ಪರಶಿವಮಯೀಂ
                   ಶುದ್ದ ಜಾಂಬೂನದಾಭಾಂ
                   ತೇಜೋರೂಪಂ ಕನಕವಸನಾಂ
                   ಸರ್ವ ಭೂಷೋಜ್ವಲಾಂಗೀಮ್ |
                   ಬೀಜಾಪೂರಂ ಕನಕಕಲಶಂ
                   ಹೇಮಪದ್ಮಂ ದಧಾನಾಂ
                   ಆದ್ಯಾಂ ಶಕ್ತಿಂ ಸಕಲಜನನೀಂ
                   ವಿಷ್ಣು ವಾಮಾಂಶ ಸಂಸ್ಥಾಮ್ ||
                             ಧ್ಯಾಯಾಮಿ
          ( ಲಕ್ಷ್ಮೀ ಪ್ರತಿಮೆ\ಫೋಟೋಗೆ ಅಕ್ಷತೆ, ಹೂ ಏರಿಸಿ )
          ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರ ಪೂಜಿತೇ |
                ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ ||
                                                || ಆವಾಹಯಾಮಿ ||
                             ( ಅಕ್ಷತೆ, ಹೂ ಏರಿಸಿ )
          ಶ್ರೀ ಮಹಾಲಕ್ಷ್ಮ್ಯೈ ನಮಃ ಆಚಮನಂ ಸಮರ್ಪಯಾಮಿ |
                             ( ಉದ್ದರಣೆ ನೀರು ಹಾಕಿ )
          ಅರ್ಘ್ಯಂ ಸಮರ್ಪಯಾಮಿ   ( ತಟ್ಟೆಗೆ ನೀರು ಹಾಕಿ )
ಸ್ನಾನಂ ಸಮರ್ಪಯಾಮಿ    (ನೀರನ್ನು ಪ್ರೋಕ್ಷಿಸಿ )
ಪಾದ್ಯಂ ಸಮರ್ಪಯಾಮಿ   (ಉದ್ದರಣೆ ನೀರು ಹಾಕಿ)
ಪುನರಾಚಮನಂ ಸಮರ್ಪಯಾಮಿ |
ವಸ್ತ್ರಂ ಸಮರ್ಪಯಾಮಿ (ಗೆಜ್ಜೆ ವಸ್ತ್ರ ಏರಿಸಿ )
ಆಭರಣಾನಿ ಸಮರ್ಪಯಾಮಿ || ಹರಿದ್ರಾ ಕುಂಕುಮ
ಪರಿಮಳ ದ್ರವ್ಯಾನಿ ಸಮರ್ಪಯಾಮಿ (ಅರಶಿನ, ಕುಂಕುಮ ಏರಿಸಿ )
ಧೂಪಮಾಘ್ರಾಸಯಾಮಿ (ಧೂಪವನ್ನು ಬೆಳಗಿ )
ದೀಪಮ್ ದರ್ಶಯಾಮಿ ( ದೀಪಾರತಿ, ಏಕಾರತಿ ಬೆಳಗಿ )
ನೈವೇದ್ಯಂ ಸಮರ್ಪಯಾಮಿ
ಓಂ ಭುರ್ಭುವಸ್ವಃ _ _ _ ಪ್ರಚೋದಯಾತ್ |
ಪ್ರಾಣಾಪಾನ ವ್ಯಾನೋದಾನ ಸಮಾನಾಭ್ಯಾಂ ಸ್ವಾಹಾ ||
          (ನೈವೇದ್ಯಕ್ಕೆ ತೀರ್ಥ ಪ್ರೋಕ್ಷಿಸಿ )
ಶ್ರೀ ಮಹಾಲಕ್ಷ್ಮ್ಯೈ ನಮಃ ಉತ್ತರಾಪೋಶನಂ ಸಮರ್ಪಯಾಮಿ ||
          (ಉದ್ದರಣೆ ನೀರು ಹಾಕಿ)
ಮಹಾನೀರಾಜನಂ ಸಮರ್ಪಯಾಮಿ
ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾದ್ಯೋತಿತಂಮಯಾ
ನೀರಾಜಯಾಮಿ ದೇವೇಶಿ ಪ್ರಸೀದ ಹರಿವಲ್ಲಭೆ
          ( ಮಹಾಮಂಗಳಾರತಿ ಮಾಡಿ )
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ (ನಮಸ್ಕಾರ ಮಾಡಿ )

ಛತ್ರ ಚಾಮರ ನೃತ್ಯ ಗೀತ ವಾದ್ಯಾಂದೋಲಿಕಾದಿ
ಸಮಸ್ತ ರಾಜೋಪಚಾರ ಪೂಜಾಹ ಸಮರ್ಪಯಾಮಿ ||
                   ಸಮರ್ಪಣೆ
ಯಸ್ಯ ಸ್ಮೈತ್ಯಾ ಚ ನಾಮೊಕ್ತ್ಯಾ ತಪಃ ಪೂಜಾ ಕ್ರಿಯಾದಿಷು |
ನ್ಯೂನಂ ಸಂಪೂರ್ಣತಾಂ ಯೋನಿ ಸದ್ಯೋವಂದೇ ತಮಚ್ಯುತಂ ||

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಹರಿಪ್ರಿಯೇ |
                   ಯತ್ಕ್ರತಂ ತು ಮಾಯಾ ದೇವಿ ಪರಿಪೂರ್ಣಂ ತದಸ್ತು ತೇ ||

ಅನೇನ ಶ್ರೀಮನ್ಮಹಾಲಕ್ಷ್ಮೀ ದೇವತಾ ಪೂಜನೇನ |
ಶ್ರೀ ಮಹಾಲಕ್ಷ್ಮೀ ದೇವತಾ ಪ್ರೀತಾ ವರದಾಭವತು ||
( ಹೂವಿನ ಪ್ರಸಾದವನ್ನು ತಲೆಯಲ್ಲಿ ಧರಿಸಿ )

ಕಾಯೇನವಾಚ ಮನಸೆನ್ದ್ರಿಯೈರ್ವಾ |
ಭುದ್ಯಾತ್ಮನಾ ವಾ ಪ್ರಕೃತೆಃ ಸ್ವಭಾವಾತ್ ||

ಕರೋಮಿಯದ್ಯದ್ ಸಕಲಂ ಪರಸ್ಮೈ |
ನಾರಾಯಣಾಯೇತಿ ಸಮರ್ಪಯಾಮಿ ||
ಶ್ರೀ ಕೃಷ್ಣಾರ್ಪಣಮಸ್ತು     

ಪ್ರತಿ ಶುಕ್ರವಾರ ಪಠಿಸಬೇಕಾದ ಶ್ಲೋಕ
                   
ಯಾ ರಕ್ತಾಂಬುಜವಾಸಿನೀ ವಿಲಸಿನೀ ಚಂಡಾOಶು ತೇಜಸ್ವಿನೀ
ಆರಕ್ತಾ ದುಧಿರಾಂಬರಾ ಹರಿಸಖೀ ಯಾ ಶ್ರೀ ಮನೋಹ್ಲಾದಿನೀ |
ಯಾ ರತ್ನಾಕರ ಮಂಥನಾತ್ ಪ್ರಘಟಿತಾ ವಿಷ್ಣೋಸ್ಚ ಯಾ ಗೇಹಿನೀ |
ಸಾ ಮಾಂ ಪಾತು ಮನೋರಮಾ ಭಗವತೀ ಲಕ್ಷ್ಮೀಸ್ಚ ಪದ್ಮಾಲಯಾ ||

( ಭಾವಾರ್ಥ: ಯಾವ ವೈಭವ ಲಕ್ಷ್ಮಿಯು ಕೆಂದಾವರೆಯಲ್ಲಿ ಹಸನ್ಮುಖಳಾಗಿ ಕುಳಿತು ಕೋಟಿಸೂರ್ಯರ ಪ್ರಕಾಶವುಳ್ಳಳೋ, ಕೆಂಪು ವಸ್ತ್ರವನ್ನಿಟ್ಟು ಶ್ರೀಹರಿಯ ಹೃದಯವಲ್ಲಭೆಯೋ, ಯಾವಾಕೆಯು ಸಮುದ್ರ ಮಥನದಲ್ಲಿ ಅವತರಿಸಿ, ಭಗವಾನ್ ಮಹಾವಿಷ್ಣುವಿನ ಪತ್ನಿಯಾದಳೋ, ಅಂತಹ ಭಗವತೀ ಲಕ್ಷ್ಮಿಯು ನನ್ನನು ರಕ್ಷಿಸಲಿ. )
*************

another one more version
ಆಶ್ವಯುಜ ಕೃಷ್ಣ ಅಮಾವಾಸ್ಯೆ
       ಮಹಾಲಕ್ಷ್ಮೀ ಕುಬೇರ ಪೂಜೆ

ಶಯನೀ ಏಕಾದಶಿಯಂದು ಶ್ರೀಮನ್ನಾರಾಯಣನೊಂದಿಗೆ ಮಲಗಿದ್ದ ಮಹಾಲಕ್ಷ್ಮಿಯು ನರಕಚತುರ್ದಶಿಯಂದು ಏಳುತ್ತಾಳೆ.  ಶ್ರಿಹರಿ ಉತ್ಥಾನ ದ್ವಾದಶಿ ದಿನ ಏಳುತ್ತಾನೆ.

(ಪರಮಾತ್ಮ ಮತ್ತು ಲಕ್ಷ್ಮೀ ದೇವರು ಏಳುವುದು ಮತ್ತು ಮಲಗುವುದು ಎಂದರೆ ಯೋಗನಿದ್ರೆ ಅಷ್ಟೇ.  ಅವರೂ ನಮ್ಮಂತೆ ಮಲಗುತ್ತಾರೆಂದು ಚಿಂತಿಸದಿರಿ)

ಆದ್ದರಿಂದ ಲಕ್ಷ್ಮೀ ದೇವಿಯನ್ನು ಆಶ್ವಯುಜ ಕೃಷ್ಣ ಅಮಾವಾಸ್ಯೆ ದಿನ ಪೂಜಿಸಬೇಕು.  

ಲಕ್ಷ್ಮೀ ಸಮುತ್ಥಾನ ಪೂಜೆ

ಆಚಮನ, ಪ್ರಾಣಾಯಮ್ಯ,  ಶುಭತಿಥೌ ಮಮ ಶ್ರೀ ಭಗವತೀ ಲಕ್ಷ್ಮೀ ದೇವತಾಂತರ್ಗತ ಶ್ರೀಹರಿಪ್ರೀತ್ಯರ್ಥಂ, ಅಸ್ಮಾಕಂ ಸಕುಟುಂಬಾನಾಂ ಕ್ಷೇಮ ಸ್ಥೈರ್ಯ ಆಯುರಾರೋಗ್ಯ ಐಶ್ವರ್ಯಾದ್ಯಭಿವೃದ್ಧ್ಯರ್ಥಂ ಸಮಸ್ತ ಸನ್ಮಂಗಳಾವಾಪ್ತ್ಯರ್ಥಂ ಪ್ರತಿವರ್ಷ ವಿಹಿತಂ ಯಥಾಶಕ್ತಿ, ಯಥಾಮಿಲಿತೋಪಹಾರದ್ರವ್ಯೈ: ಶ್ರೀ ಕುಬೇರ ಸಹಿತ ಶ್ರೀ ಲಕ್ಷ್ಮೀ ಪೂಜಾಖ್ಯಂ ಕರ್ಮ ಕರಿಷ್ಯೇ.

ಲಕ್ಷ್ಮೀ ಸನ್ನಿಧಾನಯುಕ್ತವಾದ ಶಂಖ ಮತ್ತು/ಅಥವಾ ಪ್ರತಿಮೆಯನ್ನು ಪೂಜಿಸಬೇಕು.  ಬರೀ ಲಕ್ಷ್ಮೀ ಪೂಜೆ ಮಾಡಬಾರದು.   ಲಕ್ಷ್ಮೀ ಸಮೇತ ಶ್ರೀ ಹರಿ ಇರುವನೆಂದು ಅನುಸಂಧಾನ ಮಾಡಿ ಪೂಜಿಸಿ.   ಆದ್ದರಿಂದ ಸಾಲಿಗ್ರಾಮ ಅಥವಾ ದೇವರ ವಿಗ್ರಹ ಜೊತೆಗೆ ಇಟ್ಟು ಪೂಜೆ ಮಾಡಬೇಕು.

ಬಂಗಾರದ ಅಥವಾ ಬೆಳ್ಳಿಯ ನಾಣ್ಯಗಳು ಮತ್ತು ಹೊಸ ಆಭರಣಗಳು ಕೂಡ ಇಡಬಹುದು.

ಆದೌ ನಿರ್ವಿಘ್ನತಾಸಿದ್ಧ್ಯರ್ಥಂ ಗಣಪತಿಪೂಜಾಂ ಕರಿಷ್ಯೇ.

ಮೊದಲು ಗಣೇಶನನ್ನು ಪೂಜಿಸಿ, 

ಕಲಶ ಪೂಜೆ 
ಕಲಶಸ್ಯ ಮುಖೇ ವಿಷ್ಣು:
ಕಂಠೇ ರುದ್ರ ಸಮಾಶ್ರಿತ: !
ಮೂಲೇ ತತ್ರ ಸ್ಥಿತೋ ಬ್ರಹ್ಮಾ
ಮಧ್ಯೇ ಮಾತ್ರಗಣಾ: ಸ್ಮೃತಾ: !!

ಗಂಗೇ ಚ ಯಮುನೇ ಚೈವ ಗೋದಾವರಿ ಸನ್ನಿಧಿಗೆ ಕುರು !
ಕಲಶದೇವತಾಭ್ಯೋ ನಮ: 
ಗಂಧ ಪುಷ್ಪಾಣಿ ಸಮರ್ಪಯಾಮಿ !!

ಕಲಶಕ್ಕೆ ಗಂಧ, ಪುಷ್ಪ, ತುಳಸಿ ಹಚ್ಚಬೇಕು.

ದೀಪವನ್ನು ಬೆಳಗಿಸಬೇಕು

ಲಕ್ಷ್ಮೀ ನಾರಾಯಣರ ಆವಾಹನೆ.
(ಇಲ್ಲಿ ಸಾಲಿಗ್ರಾಮಕ್ಕೆ ಆವಾಹನೆಯಿಲ್ಲ.  ದೇವರ ವಿಗ್ರಹಕ್ಕೆ ಮಾತ್ರ).

ಓಂ ನಾರಾಯಣಾಯ ವಿದ್ಮಹೇ
ವಾಸುದೇವಾಯ ಧೀಮಹಿ !
ತನ್ನೋ ವಿಷ್ಣು: ಪ್ರಚೋದಯಾತ್!!

ಯಾ ಸಾ ಪದ್ಮಾಸನಸ್ಥಾ ವಿಪುಲಕಟಿತಟೀ ಪದ್ಮಪತ್ರಾಯತಾಕ್ಷಿ!
ಗಂಭೀರಾsವರ್ತನಾಭೀ ಸ್ತನಭರನಮಿತಾ ಶುಭ್ರವಸ್ತ್ರೋತ್ತರೀಯಾ !
ಲಕ್ಷ್ಮೀರ್ದಿವ್ಯೈ: ಗಜೇಂದ್ರ್ರೈ: ಮಣಿಗಣಖಚಿತೈ: ಸ್ನಾಪಿತಾ ಹೇಮಕುಂಭೈ:
ನಿತ್ಯಂ ಸಾ ಪದ್ಮಹಸ್ತಾ ಮಮ ವಸತು ಗೃಹೇ ಸರ್ವಮಾಂಗಲ್ಯಯುಕ್ತಾ!!

ಆಸನಂ 👇🏾
ತಪ್ತ ಕಾಂಚನವರ್ಣಾಭಂ ಮುಕ್ತಾಮಣಿ ವಿಭೂಷಿತಂ!
ಅಮಲಂ ಕಮಲಂ ದಿವ್ಯಮಾಸನ ಪ್ರತಿಗೃಹ್ಯತಾಂ!!

ಶ್ರೀ ಮಹಾಲಕ್ಷ್ಮೀ ನಾರಾಯಣಾಭ್ಯಾಂ ಆಸನಂ ಸಮರ್ಪಯಾಮಿ.!
(ಮಂತ್ರಾಕ್ಷತೆ)
ಪಾದ್ಯಂ ಸಮರ್ಪಯಾಮಿ ! (ನೀರು)
ಅರ್ಘ್ಯಂ ಸಮರ್ಪಯಾಮಿ! (ನೀರು)
ಆಚಮನಂ ಸಮರ್ಪಯಾಮಿ!  (ನೀರು)
ಪಂಚಾಮೃತ ಸ್ನಾನಂ ಸಮರ್ಪಯಾಮಿ!

ಶುದ್ಧೋದಕ ಸ್ನಾನಂ ಸಮರ್ಪಯಾಮಿ!
(ನೀರು)
ವಸ್ತ್ರಯುಗ್ಮಂ ಸಮರ್ಪಯಾಮಿ !
(ಗೆಜ್ಜೆ ವಸ್ತ್ರ)
ಗಂಧಂ ಸಮರ್ಪಯಾಮಿ ! 
ಪುಷ್ಪಂ ಸಮರ್ಪಯಾಮಿ !
ಧೂಪಂ ಸಮರ್ಪಯಾಮಿ !
ದೀಪಂ ಸಮರ್ಪಯಾಮಿ !

ನೈವೇದ್ಯಕ್ಕೆ ಮಂಡಲ ಮಾಡಿ ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಅಥವಾ ಹಣ್ಢು, ಕಾಯಿ, ಹಾಲು, ಮೊಸರು, ನೀರು ಇಡಬಹುದು.
ನೈವೇದ್ಯಂ ಸಮರ್ಪಯಾಮಿ !

ವಸ್ತ್ರ ಸಮರ್ಪಯಾಮಿ - ನೂತನ  ವಸ್ತ್ರ ಅಥವಾ ಮಂತ್ರಾಕ್ಷತೆ ಸಮರ್ಪಣಂ 

ಭೂಷಣಾನಿ ಸಮರ್ಪಯಾಮಿ 

ಹರಿದ್ರಾ ಕುಂಕುಮಂ ಸಮರ್ಪಯಾಮಿ !

ಸಿಂಧೂರಂ ಸಮರ್ಪಯಾಮಿ !
ನಾನಾ ವಿಧ ಸುಗಂಧಿತ ಪುಷ್ಪಾಣಿ ಸಮರ್ಪಯಾಮಿ !
ದೀಪಂ ದರ್ಶಯಾಮಿ!
ತಾಂಬೂಲಂ ಸಮರ್ಪಯಾಮಿ !
ಫಲಾನಿ ಸಮರ್ಪಯಾಮಿ !

ಮಂಗಲನೀರಾಜನಂ ಸಮರ್ಪಯಾಮಿ !

ಮಂತ್ರಪುಷ್ಪಾಂಜಲಿಂ ಸಮರ್ಪಯಾಮಿ !

ಓಂ ಮಹಾಲಕ್ಮೈಚ ವಿದ್ಮಹೇ 
ವಿಷ್ಣುಪತ್ನೈಚ ಧೀಮಹಿ !
ತನ್ನೋ ಲಕ್ಷ್ಮೀ ಪ್ರಚೋದಯಾತ್!

ಶ್ರೀ ಮಹಾಲಕ್ಷ್ಮೈ ನಮಃ: !
ಛತ್ರ, ಛಾಮರ, ಗೀತಂ, ನೃತ್ಯಂ, ವಾದ್ಯಂ, ಸಮರ್ಪಯಾಮಿ !

ಕುಬೇರ ಪ್ರಾರ್ಥನೆ -
ಓಂ ಧನದಾಯ ನಮಸ್ತುಭ್ಯಂ 
ನಿಧಿಪದ್ಮಾಧಿಪಾಯ ಚ !
ಭವಂತು ತ್ವತ್ಪ್ರಸಾದಾನ್ಮೇ
ಧನಧಾನ್ಯಾದಿಸಂಪದ: !!
(ಕುಬೇರನು ಧನಾಧಿಪನಾದ್ದರಿಂದ ಅವನನ್ನೂ ಪೂಜಿಸಬೇಕು)


ದೀಪ ಪೂಜೆ -
ದೀಪಾವಳಿ ಹಬ್ಬದ ದಿನ ದೀಪದೇವತೆಯನ್ನೂ ಪೂಜಿಸಿ ದೀಪ ಹಚ್ಚಬೇಕು.

ಭೋ ದೀಪ ಬ್ರಹ್ಮರೂಪಸ್ತ್ವಂ ಅಂಧಕಾರನಿವಾರಕ !
ಇಮಾಂ ಮಾಯಾ ಕೃತಾ ಗೃಹ್ಣನ್
ತೇಜ: ಮಯಿ ಪ್ರವರ್ತಯ !!
ದೀಪಾವಲೀಂ ಮಾಯಾ ದತ್ತಾಂ
ಗೃಹಾಣ ಪರಮೇಶ್ವರ !
ಆರಾರ್ತಿಕ್ಯ ಪ್ರದಾನೇನ ಜ್ಞಾನ ದೃಷ್ಟಿಪ್ಕದೋ ಭವ !
ಅಗ್ನಿಜ್ಯೋತಿ ರವಿ: ಜ್ಯೋತಿಶ್ಚಂದ್ರಜ್ಯೋತಿಸ್ತಥೈವ ಚ !
ಉತ್ತಮ: ಸರ್ವತೇಜಸ್ಸು
ದೀಪೋSಯಂ ಪ್ರತಿಗೃಹ್ಯತಾಂ !
ದೀಪಂ ಸಮರ್ಪಯಾಮಿ !

ದೀಪದಾನವನ್ನು ಕೊಡುವವರು ಸಂಕಲ್ಪ ಮಾಡಿ ಕೊಡಿ.

ಯಸ್ಯ ಸ್ಮೃತಾಚ.......    ತದಸ್ತು ಮೇ !

ಅನೇನ ಆಶ್ವಯುಜ ಅಮಾವಾಸ್ಯೆ ನಿಮಿತ್ತ ಕೃತಾ ಶ್ರೀ ಲಕ್ಷ್ಮೀ ನಾರಾಯಣ ಕುಬೇರ ಪೂಜನೇನ ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನಾರಾಯಣ ಪ್ರೀಯತಾಂ !

ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪ ದೋಷ ಪರಿಹಾರಾರ್ಥಂ ನಾಮತ್ರಯ ಮಂತ್ರಜಪಂ ಕರಿಷ್ಯೇ!

ಅಚ್ಯುತಾಯ ನಮಃ:
ಅನಂತಾಯ ನಮಃ:
ಗೋವಿಂದಾಯ ನಮ:!
ಅಚ್ಯುತಾನಂತಗೋವಿಂದೇಭ್ಯೋ ನಮಃ: !

ಶ್ರೀಕೃಷ್ಣಾರ್ಪಣಮಸ್ತು
********

ಬಲಿಪಾಡ್ಯಾ - BALIPADYAMI
ಬಲಿಪಾಡ್ಯಾ 
ಗೋವರ್ದನ ಪೂಜಾ
ವಿಷ್ಣು ಪುರಾಣದ ಪ್ರಕಾರ ಶ್ರೀ ಕೃಷ್ಣನುಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ. ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನಪೂಜೆಗೆ ಮಹತ್ವ.

ಮನೆಯಲ್ಲಿನ ಎತ್ತುಗಳಿಗೂ ಪೂಜೆ.ಸ್ನಾನ ಮಾಡಿಸಿ, ಅರಿಸಿನ ಕುಂಕುಮ ಹಚ್ಚಿ, ಕೊಂಬಿಗೆಸೇವಂತಿಗೆ, ಚಂಡು ಹೂಗಳನ್ನು ಸುತ್ತಿ ಪೂಜಿಸುತ್ತಾರೆ. ಎತ್ತುಗಳಮೆರವಣಿಗೆ ಕೂಡ ಮಾಡುತ್ತಾರೆ ಗದ್ದೆಗಳಲ್ಲಿ, ಹೊಲಗಳಲ್ಲಿ ಧಾನ್ಯಲಕ್ಷ್ಮಿಯ ಪೂಜೆಯನ್ನೂ ಮಾಡುತ್ತಾರೆ.

ಹಾಗೇ ಈದಿನ ಮಹಾಬಲಿ ಭೂಮಿಗೆ ಬರುತ್ತಾನೆಂಬುದೂ ಒಂದುನಂಬಿಕೆ.

ಹೊಲ, ಗದ್ದೆಗಳಲ್ಲಿ ಬಲೀಂದ್ರನ ಸ್ಮರಣಾರ್ಥದೀಪಗಳನ್ನು ಕೂಡ ಹಚ್ಚಿಡುತ್ತಾರೆ.
***


ಬಲಿಯ ಮನೆಗೆ ವಾಮನ ಬಂದಂತೆ
ಭಗೀರಥಗೆ ಶ್ರೀಗಂಗೆ ಬಂದಂತೆ
ಮುಚುಕುಂದಗೆ ಶ್ರೀ ಮುಕುಂದ ಬಂದಂತೆ
ಗೋಪಿಯರಿಗೆ ಗೋವಿಂದ ಬಂದಂತೆ
ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ
ವಿಭೀಷಣನ ಮನಗೆ ಶ್ರೀ ರಾಮ ಬಂದಂತೆ
ನಿನ್ನ ನಾಮವು ಬಂದು ಎನ್ನ ನಾಲಗೆಯಲಿ
ನಿಂದು ಸಲಹಲಿ ಶ್ರೀ ಪುರಂದರ ವಿಠಲ.......

ಬಂದು ನಿಲ್ಲೋ ಕಣ್ಣ ಮುಂದೆ 
ಬಂದು ನಿಲ್ಲೋ......।।ಪ।।

ಬಂದು ನಿಲ್ಲೋ ನನ್ನ ಪಾದಕ್ಕೆ ವಂದಿಪೆ
ಇಂದಿರೆಯರಸ ಗೋವಿಂದ ಮುಕುಂದ ನೀ... ।।ಅ.ಪ।।

ಅರಳಿದ ಕೆಂದಾವರೆಯ ಧಿಕ್ಕರಿಸುವ
ಚರಣಾರವಿಂದವ ನಿರುತ ತೋರು ನೀನು.....|।೧।।

ನೀಲಾಲಕ ಭ್ರಮರಕುಂತಲಮಂಡಿತ
ಮೇಲಾದ ರಾಕೇಂದು ಮುಖವ ತೋರಿಸುತಲಿ...।।೨।।

ಪದುಮನೇತ್ರನೆ ನಿನ್ನ ಸದನವೆನುತ ಎನ್ನ
ಹೃದಯದೊಳಗೆ ನಿಂತು ನಾ ಮುದದಿ ಭಜಿಸುವಂತೆ..|।೩।।

ಕರಿಯ ಮೊರೆಯ ಕೇಳಿ ಕರುಣದಿಂ ಬಂದಂತೆ
ಕರೆದಾಗ ನಿನ್ನ ದಿವ್ಯಚರಣವ ತೋರಿಸುತ....।।೪।।

ಅಜಭವಾದಿಗಳಿಗೆ ನಿಜಪದವನಿತ್ತಂತೆ

ಭಜಿಪ ಭಕ್ತರಿಗೊಲಿವ ವಿಜಯವಿಠಲರೇಯ....।।೫।।
********

ಯಮದ್ವಿತೀಯಾ / ಭ್ರಾತೃದ್ವಿತೀಯಾ / ಭಗಿನೀ ತೃತೀಯಾ
ಭಗಿನೀ ಹಸ್ತೇನ ಭೋಜನ.
ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ.
ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿಎತ್ತುತ್ತಾಳೆಂಬ ಪ್ರತೀತಿ.

*********

ಯಮ ದ್ವಿತೀಯ... 

ಯಮ ದ್ವಿತೀಯ ಭಗಿನೀ ಹಸ್ತೇನ ಭೋಜನ
Yama Dwiteeya - Bhaginee Hastena Bhojana

ಕಾರ್ತೀಕಮಾಸ ಶುಕ್ಲ ಪಕ್ಷದ ದ್ವಿತೀಯ ದಿನದಂದು ಸಹೋದರರು ವಿವಾಹಿತರಾದ ಸಹೋದರಿಯರ ಮನೆಗೆ ಹೋಗಿ ಭೋಜನ ಸ್ವೀಕರಿಸುವುದು ಇಂದಿನ ವಿಶೇಷ. ಯಮಧರ್ಮರಾಜ ತನ್ನ ಸಹೋದರಿ ಯಮಿ  (ನದಿ ಯಮುನ, ಸೂರ್ಯ-ಸಂಜ್ಞಾ ದೇವಿಯರ ಪುತ್ರಿ), ಮನೆಗೆ ಹೋಗಿ ಅಲ್ಲಿ ಅವಳು ನೀಡಿದ ಆತಿಥ್ಥ ಸ್ವೀಕರಿಸಿ, ಅವಳನ್ನು ಅನುಗ್ರಹಿಸಿದನು ಮತ್ತು ಅದರ ಕುರುಹಾಗಿ ಒಂದು ವರವನ್ನು ಕೇಳು ಎನ್ನುತ್ತಾನೆ .  ಆಗ ಅವಳು ನನಗೆ ಯಾವುದೇ ವರ ಬೇಡ.  ಪ್ರತಿ ವರ್ಷ ಇದೇ ರೀತಿ ನಮ್ಮ ಮನೆಗೆ ಬರಬೇಕೆಂದು ಕೋರುತ್ತಾಳೆ.  ಅವಳ ಕೋರಿಕೆಯನ್ನು ಮನ್ನಿಸಿ ಅವಳಿಗೆ ಮತ್ತು ಎಲ್ಲಾ ಸಹೋದರರಿಗೂ ವರವೀಯುತ್ತಾನೆ.
 

“ಯಾರು ಕಾರ್ತೀಕ ಶುದ್ಧ ದ್ವಿತೀಯದಂದು ಅಣ್ಣತಮ್ಮಂದಿರನ್ನು ಕರೆಸಿ ಅವರಿಗೆ ಭೋಜನವೀಯುತ್ತಾರೋ, ಆ ಸಹೋದರಿಯ ಮನೆಯಲ್ಲಿ ಭೋಜನ ಸ್ವೀಕರಿಸಿದ ಸಹೋದರನಿಗೆ ಧೀರ್ಘಾಯಸ್ಸನ್ನು ಯಮ ಧರ್ಮರಾಜನು ಅನುಗ್ರಹಿಸಿದ್ದಾನೆ.  ಸಹೋದರನಿಗೆ ಭೋಜನವಿತ್ತ ಸಹೋದರಿಗೆ ವೈಧವ್ಯವು ಪರಿಹಾರವಾಗುವುದು” ಎಂದಿದ್ದಾರೆ. ಅದರ ನಿಮಿತ್ತ ಯಮದ್ವಿತೀಯ ಆಚರಣೆ ಮಾಡಲಾಗುತ್ತದೆ.
 

Argyamantra –
EhyEhi maartaanDaja paashahasta yamaantakaalEKakadharaamarEsha |
bhraatRudvitIyaakRutadEvapOjaam
gRuhaaNa chaarGyam bhagavan namastE |
ಏಹ್ಯೇಹಿ ಮಾರ್ತಾಂಡಜ ಪಾಶಹಸ್ತ ಯಮಾಂತಕಾಲೇಖಕಧರಾಮರೇಶ |
ಭ್ರಾತೃದ್ವಿತೀಯಾಕೃತದೇವಪೂಜಾಂ ಗೃಹಾಣ ಚಾರ್ಘ್ಯಂ ಭಗವನ್ ನಮಸ್ತೇ |

After pooja, we have to do namaskara to Yama and Yamune.

dharmaraaja namastubhyam namastE yamunaagraja |
paahi maam kinkarai: saardham sUryaputra namOstutE |
yamasvasarnamastEstu yamunE lOkapUjitE |
varadaa bhava mE nityam sUryaputrim namOstutu tE |
ಧರ್ಮರಾಜ ನಮಸ್ತುಭ್ಯಂ ನಮಸ್ತೇ ಯಮುನಾಗ್ರಜ |
ಪಾಹಿ ಮಾಂ ಕಿಂಕರೈ: ಸಾರ್ಧಂ ಸೂರ್ಯಪುತ್ರ ನಮೋಸ್ತುತೇ |
ಯಮಸ್ವಸರ್ನಮಸ್ತೇಸ್ತು ಯಮುನೇ ಲೋಕಪೂಜಿತೇ |
ವರದಾ ಭವ ಮೇ ನಿತ್ಯಮ್ ಸೂರ್ಯಪುತ್ರಿಂ ನಮೋsಸ್ತುತು ತೇ |  
 

Yama Dwiteeya- Bhaginee hastena bhojana
 

It is observed on Karthika Shudda dviteeya 

Yama Dwitiya is observed on the second day of the Shukla Paksha in Kartika maasa and is one of the celebrations during the five days of Diwali.  This is to be observed in the noon by worshipping Yama dharma raja.   Yama Dvitiya ಯಮ ದ್ವಿತೀಯ is associated with Lord Yama Dharmaraja,, visiting his sister Yami (Yamuna river), the daughter of Surya, and is a symbol of love between brothers and sisters.    On that day, one has to do the pooja of  Yama, Chitragupta and other servants of Yama dharmaraja.  Ofcourse, we have to do the anusandhana of tadantargatha Bharateeramana mukhya praanantargatha Sri Lakshmi Narasimhayanamaha.  We have to give argya to Yamadharmaraja.
 

Story behind Yama dwiteeya –

Once, Yamadharma, the Narakalokadhipathi, visited his sister, Yamuna, on the second day of the Shukla Paksha in Kartika maasa after Diwali.  Yamuna welcomed her brother by applying the auspicious tilaka on his forehead. Then the brother and sister exchanged gifts. Yamuna also served Yamadharmaraja with his favorite dishes.  Yama who was overwhelmed by the love of his sister is believed to have said to Yamuna that who receives Tilaka from his sister will never suffer hell.  Since then “Yama Dwitiya” is observed as a symbol of love and affection between brothers and sisters.  If there is no sister, he can go to his friends’ sister’s house or can go to his sodaratte (mother-in law) house. After the bhojana, the brother has to serve gift to his sister.
 

Bhagini Triteeya ಭಗೀನೀ ತೃತೀಯ : 

ಹಿಂದಿನ ದಿನ ಸಹೋದರಿಯ ಮನೆಗೆ ಬಂದ ಸಹೋದರನ ಮನೆಗೆ ಸಹೋದರಿ ಆಗಮಿಸಿ ಅಲ್ಲಿ ಆತಿಥ್ಯ ಸ್ವೀಕರಿಸುತ್ತಾಳೆ – ಭಗಿನಿ ತೃತೀಯ ದಿನದಂದು.  ಆಗ ಸಹೋದರ ಅವಳಿಗೆ ಅವಳಿಗಿಷ್ಟವಾದ ಆಹಾರ ಪದಾರ್ಥ ಸಿದ್ಧಪಡಿಸಿ ಅವಳಿಗೆ ಉಡುಗೊರೆ ಕೊಟ್ಟು ಕಳಿಸುತ್ತಾನೆ.  Previous day brotherr would have gone to sister’s house.  on Bhagini Triteeya, sister will go to brother’s house, brother will offer her desired food, and gifts.   This is also based on Yamuna attending her brother’s house on this day.

Source - Sri Chaturvedi Vedavyasachar book 

ಸಂಗ್ರಹ - ನರಹರಿ ಸುಮಧ್ವ
***

ಪಾಲ್ಗಡಲಿನ ವರಸಿರಿ  ಜಗನ್ಮಾತೆ ಮಹಾಲಕ್ಷ್ಮಿ*

ಭಗವಂತ ಮಹಾವಿಷ್ಣುವಿನ ಪತ್ನಿಯಾದ ಜಗನ್ಮಾತೆಯನ್ನು ಮಹಾಲಕ್ಷ್ಮಿ ಎಂದು ಕರೆಯುತ್ತಾರೆ. ಅವಳು ಸರ್ವದಾ ಶ್ರೀವಿಷ್ಣುವಿನ ಹೃದಯದಲ್ಲಿದ್ದು, ಆತನ ಎಲ್ಲಾ ದಿವ್ಯಗುಣಗಳಲ್ಲೂ ಪಾಲು ಹೊಂದಿರುತ್ತಾಳೆ. ಆಕೆಯು ದಿವ್ಯವಾದ ಕರುಣೆಯನ್ನು ಹೊಂದಿದ್ದು, ಸಕಲ ಜೀವರಾಶಿಗಳ ಮುಕ್ತಿಗಾಗಿ ಶ್ರೀವಿಷ್ಣುವಿನ ಮನವೊಲಿಸುತ್ತಾಳೆ. ಆಕೆ ಯಾವಾಗ ಅವತಾರ ತಾಳಿದರೂ, ಪರಮಾತ್ಮನಾದ ಶ್ರೀವಿಷ್ಣುವನ್ನೇ ವಿವಾಹವಾಗುತ್ತಾಳೆ. ಇದನ್ನು ಹಲವಾರು ಕಥೆಗಳು ತಿಳಿಸಿ ಕೊಡುತ್ತವೆ. ಆಕೆ ಕ್ಷೀರಸಾಗರದಿಂದ ಮೂಡಿಬಂದ ಮತ್ತು ಮಹಾವಿಷ್ಣುವಿನೊಡನೆ ವಿವಾಹವಾದ ಕಥೆ ಹೀಗಿದೆ:

ಒಮ್ಮೆ ಮಹರ್ಷಿ ದೂರ್ವಾಸರು ಕೈಯಲ್ಲಿ ಸುಗಂಧಪೂರಿತ ಹೂಮಾಲೆ ಹಿಡಿದು ನಡೆದು ಹೋಗುತ್ತಿದ್ದರು. ದಾರಿಯಲ್ಲಿ ಅವರಿಗೆ ಸುರರ ದೊರೆಯಾದ ದೇವೇಂದ್ರನು ಎದುರಾದನು. ದೂರ್ವಾಸರು ಆ ಮಾಲೆಯನ್ನು ಇಂದ್ರನಿಗೆ ನೀಡಿದರು. ಅದನ್ನು ಉದಾಸೀನತೆಯಿಂದಲೇ ಸ್ವೀಕರಿಸಿದ ದೇವೇಂದ್ರನು, ತಿರಸ್ಕಾರ ಭಾವದಿಂದ ಆ ಹೂಮಾಲೆಯನ್ನು ಆನೆಯ ತಲೆಯ ಮೇಲಿಟ್ಟನು. ಆನೆಯು ಅದನ್ನು ನೆಲಕ್ಕೆಸೆದು ತುಳಿದುಹಾಕಿತು. ಇದನ್ನು ನೋಡಿದ ದೂರ್ವಾಸರು ಕೋಪೋದ್ರಿಕ್ತರಾದರು. ಇಂದ್ರನ  ಗರ್ವಕ್ಕೆ ಕಾರಣವಾದ ಅವನ ಅಧಿಕಾರ, ಸಂಪತ್ತುಗಳು ನಾಶವಾಗುವಂತೆ ದೂರ್ವಾಸರು ಶಪಿಸಿದರು.

ತನ್ನ ತಪ್ಪನ್ನು ಅರಿತ ದೇವೇಂದ್ರನು ಅವರ ಪಾದಕ್ಕೆ ಬಿದ್ದು ಕ್ಷಮೆ ಬೇಡಿದನು. ಆಗ ದೂರ್ವಾಸರು, “ಮಹಾವಿಷ್ಣುವಿನ ಮೂಲಕ ನಿನಗೆ ಮಾತೆ ಮಹಾಲಕ್ಷ್ಮಿಯ ಕೃಪೆ ದೊರೆತು,   ಮತ್ತೆ ನಿನ್ನ ಅಧಿಕಾರ, ಸಂಪತ್ತುಗಳನ್ನು  ಪಡೆಯುವೆ” ಎಂದು ಹೇಳಿದರು.

ಅವರ ಶಾಪದ ಫಲವಾಗಿ ದೇವೇಂದ್ರನು ತನ್ನ ಶೌರ್ಯ, ಶಕ್ತಿಗಳನ್ನು ಕಳೆದುಕೊಂಡನು. ಇದನ್ನರಿತ ರಾಕ್ಷಸರು ಅವನನ್ನೂ, ಇತರ ದೇವತೆಗಳನ್ನೂ ಇಂದ್ರಲೋಕದಿಂದ ಹೊರಹಾಕಿದರು. ದೇವತೆಗಳು ತಮ್ಮ ಗುರುವಾದ ಬೃಹಸ್ಪತಿಯ ಸಲಹೆಯಂತೆ ದೇವೇಂದ್ರನ ನಾಯಕತ್ವದಲ್ಲಿ ಮಹಾವಿಷ್ಣುವಿನ ಸಹಾಯವನ್ನು ಬೇಡಿದರು.

ಆಗ ಮಹಾವಿಷ್ಣುವು, “ಇಂದ್ರನು ಮಹಾಲಕ್ಷ್ಮಿಯನ್ನು ಕಂಡು, ಅವಳ ಕೃಪೆಯನ್ನು ಪಡೆದಾಗ ಮಾತ್ರ ತಾನು ಕಳೆದುಕೊಂಡಿರುವ ಎಲ್ಲವನ್ನೂ ಪಡೆಯುವನು. ಆದರೆ ಮಹಾಲಕ್ಷ್ಮಿಯು ಜನ್ಮ ತಾಳುವುದು ಹಾಲಿನ ಕಡಲನ್ನು ಕಡೆದಾಗ ಮಾತ್ರ. ಇದು ದೇವತೆಗಳಿಂದ ಮಾತ್ರ ಆಗುವ ಕಾರ್ಯವಲ್ಲ. ಆದ್ದರಿಂದ ಅಸುರರ ಸಹಾಯದಿಂದ ಕಡಲನ್ನು ಕಡೆಯಿರಿ” ಎಂದು ಹೇಳಿದನು.

ಅದರಂತೆ ದೇವತೆಗಳು ಈ ಅತಿದೊಡ್ಡ ಕಾರ್ಯಕ್ಕೆ ತೊಡಗಿದರು. ಗುರುಗಳಾದ ಬೃಹಸ್ಪತಿಯು ಈ ಕಾರ್ಯಕ್ಕೆ ಬುದ್ಧಿವಂತಿಕೆಯಿಂದ ಅಸುರರೊಡನೆ ಸಂಧಾನ ನಡೆಸಿದರು. ಕಡಗೋಲನ್ನಾಗಿ ಮಂದರ ಪರ್ವತವನ್ನು ಉಪಯೋಗಿಸಲಾಯಿತು. ವಾಸುಕಿಯು ಹಗ್ಗವಾದನು. ಅಸುರರು ತಲೆಯ ಭಾಗವನ್ನು ಮತ್ತು ದೇವತೆಗಳು ಬಾಲವನ್ನು ಹಿಡಿದುಕೊಂಡು ಕಡೆಯಲಾರಂಭಿಸಿದರು. ಮಂದರ ಪರ್ವತದ ಭಾರ ಹೆಚ್ಚಾಗಿ ಅದು ಸಮುದ್ರದಲ್ಲಿ ಮುಳುಗಲಾರಂಭಿಸಿತು. ಆಗ ಮಹಾವಿಷ್ಣುವು ಆಮೆಯ ಆಕಾರವನ್ನು ತಾಳಿ ಮಂದರ ಪರ್ವತದ ತಳಭಾಗದಲ್ಲಿ ಆಸರೆಯಾಗಿ ನಿಂತನು. ಇದು ಅವನ 'ಕೂರ್ಮಾವತಾರ' ಎಂದು ಪ್ರಸಿದ್ಧವಾಯಿತು.

ಸುರಾಸುರರು ಮತ್ತೆ ಸಮುದ್ರವನ್ನು ಕಡೆಯಲಾರಂಭಿಸಿದಾಗ ಮೊದಲು ಹಾಲಾಹಲವೆಂಬ ವಿಷ ಉತ್ಪನ್ನವಾಯಿತು. ಅದರ ವಾಸನೆಯೇ ಮಾರಣಾಂತಿಕವಾಗಿತ್ತು. ಹೆದರಿದ ಇಂದ್ರಾದಿ ದೇವತೆಗಳು ಶಿವನ ಬಳಿಗೆ ಓಡಿ ತಮ್ಮನ್ನು ಕಾಪಾಡಲು ಪ್ರಾರ್ಥಿಸಿದರು. ಶಿವನು ಆ ವಿಷವನ್ನು ಕುಡಿದು ತನ್ನ ಗಂಟಲಲ್ಲೆ ಇಟ್ಟುಕೊಂಡನು. ಇದರಿಂದ ಅವನ ಕಂಠ ನೀಲವಾಗಿ ಅವನಿಗೆ 'ನೀಲಕಂಠ'ನೆಂಬ ಹೆಸರು ಬಂದಿತು.

ಶ್ರೀವಿಷ್ಣುವಿನಿಂದ ಪ್ರೇರಿತರಾದ ಸುರಾಸುರರು ಮತ್ತು ಸಾಗರವನ್ನು ಕಡೆಯಲಾರಂಭಿಸಿದರು. ಆಗ ಐರಾವತ, ಕಾಮಧೇನು, ಕಲ್ಪವೃಕ್ಷ ಮತ್ತು ದೇವಕನ್ಯೆಯರು ಮೇಲೆ ಬಂದರು. ಸ್ವಲ್ಪ ಸಮಯದ ನಂತರ ಸಮುದ್ರರಾಜನು ತನ್ನ ಮಗಳಾದ ಲಕ್ಷ್ಮಿಯೊಂದಿಗೆ ಮೇಲೆ ಬಂದನು.

ಜಗನ್ಮಾತೆ ಮಹಾಲಕ್ಷ್ಮಿಯು ದಿವ್ಯಕಾಂತಿಯಿಂದ ಶೋಭಿಸುತ್ತಾ ಕೈಯಲ್ಲಿ ಕಮಲವನ್ನು ಹಿಡಿದಿದ್ದಳು. ಕೊರಳಲ್ಲಿ ಕಮಲದ ಮಾಲೆ ಧರಿಸಿ ಕಮಲದ ಮೇಲೆ ನಿಂತಿದ್ದಳು. ಋಷಿಗಳು ಅವಳ ಮಹಿಮೆಯನ್ನು ಸ್ತುತಿಸಲು ಆರಂಭಿಸಿದರು. ದೇವಕನ್ಯೆಯರು ತಮ್ಮ ವಾದ್ಯಗಳೊಂದಿಗೆ ನರ್ತನ ಗೈಯಲಾರಂಭಿಸಿದರು.  ಆಕೆಯ ದಿವ್ಯ ಸೌಂದರ್ಯ ಮತ್ತು ಕೃಪೆಯು ಎಲ್ಲೆಡೆ ಹರಡಿತು.

ತನ್ನ ದಿವ್ಯಕಾಂತಿಯಿಂದ ಆಕೆ ಮಂದಗಮನೆಯಾಗಿ ಹರಿಯ ಬಳಿಗೆ ಬಂದಳು. ಮಹಾವಿಷ್ಣುವಿನ ಕೊರಳಿಗೆ ಮಾಲೆ ಹಾಕಿ ಆತನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದಳು. ಆತನ ಹೃದಯದಲ್ಲಿ ಕುಳಿತು, ದಯಾಪೂರ್ಣಳಾಗಿ ಇಂದ್ರನನ್ನು ನೋಡಿದಳು. ತಕ್ಷಣವೇ ದೇವೇಂದ್ರನು ಕಾಂತಿಯುಕ್ತನಾಗಿ ಹೊಳೆಯಲಾರಂಭಿಸಿದನು ಮತ್ತು ಅವಳಿಗೆ ವಂದಿಸಿದನು.

ಕಡಲನ್ನು ಕಡೆಯುವ ಕಾರ್ಯ ಮುಂದುವರಿಯಿತು. ಕೊನೆಗೆ ಹಾಲಿನಿಂದ ಧನ್ವಂತರಿಯು ಅಮೃತದೊಂದಿಗೆ ಚಿನ್ನದ ಕೊಡ ಹಿಡಿದು ಬಂದನು. ಈಗ ದೇವಾಸುರರು ಎಲ್ಲ ಅಮೃತವನ್ನೂ ತಾವೇ ಪಡೆಯಬಯಸಿದರು. ಯಾರು ಅಮೃತವನ್ನು ಕುಡಿಯುತ್ತಾರೋ ಅವರು ಮರಣದಿಂದ ಮುಕ್ತರಾಗುತ್ತಾರೆ ಎಂದು ದೇವತೆಗಳು ಮಹಾವಿಷ್ಣುವಿನ ಮೊರೆ ಹೊಕ್ಕರು. ಆಗ ವಿಷ್ಣುವು ಸೌಂದರ್ಯಗಣಿಯಾದ ಮೋಹಿನಿಯ ರೂಪ ತಾಳಿ ಮಧ್ಯೆ ಪ್ರವೇಶಿಸಿದನು. ಅವಳನ್ನು ನೋಡಿದ ದೇವಾಸುರರು ತಮ್ಮ ನಡುವೆ ಜಗಳ ತೀರ್ಮಾನ ಮಾಡಲು ಆಕೆಯನ್ನು ಒಪ್ಪಿಸಿದರು. ಆಕೆ, “ನೀವು ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ ಎರಡು ಸಾಲುಗಳಾಗಿ ನಿಲ್ಲಿ, ನಾನು ನಿಮ್ಮ ಕೈಗಳಿಗೆ ಅಮೃತವನ್ನು ಎರೆಯುತ್ತೇನೆ” ಎಂದಳು.

ರಾಕ್ಷಸರು ಮೋಹಿನಿಯ ಸೌಂದರ್ಯದಿಂದ ಆಕರ್ಷಿತರಾಗಿ ತಮ್ಮ ಕೈಗಳನ್ನು ಚಾಚಲು ಮರೆತರು. ಅದೇ ಸಮಯದಲ್ಲಿ ಆಕೆ ಅಮೃತವನ್ನು ದೇವತೆಗಳಿಗೆ ನೀಡಿದಳು. ಇದರಿಂದಾಗಿ ದೇವತೆಗಳು ಮರಣರಹಿತರಾಗಿ ಯುದ್ಧದಲ್ಲಿ ಅಸುರರನ್ನು ಜಯಿಸಿದರು. ಹೀಗೆ ಜಗನ್ಮಾತೆ ಮಹಾಲಕ್ಷ್ಮಿಯ ಕೃಪೆಯನ್ನು ಪಡೆದ ದೇವತೆಗಳು ತಮ್ಮ ಅಧಿಕಾರ, ಸಂಪತ್ತುಗಳನ್ನು ಮರಳಿ ಪಡೆದರು.

ಮನೆಯಲ್ಲಿ ಪ್ರತಿದಿನವೂ ದೀಪ ಬೆಳಗುವುದರಿಂದ, ತುಳಸಿಯನ್ನು ಪೂಜಿಸುವುದರಿಂದ, ಮನೆಯ ಮುಂದೆ ರಂಗೋಲಿ, ಸುಮಂಗಲಿಯರ ಹಣೆಯಲ್ಲೂ, ಕಮಲದಲ್ಲಿ, ಹಸುವಿನಲ್ಲಿ, ಆನೆಯ ಬಾಲದಲ್ಲಿ ಲಕ್ಷ್ಮಿಯು ನೆಲೆಸಿರುತ್ತಾಳೆ. ಏನನ್ನೇ ಮಾಡಿದರೂ ಲಕ್ಷ್ಮೀಭಾವದಿಂದ ಪೂಜಿಸುವುದರಲ್ಲಿ ಅರ್ಥವಿದೆ. ಧನಲಕ್ಷ್ಮಿ, ಧೈರ್ಯಲಕ್ಷ್ಮಿ, ಸಂತಾನಲಕ್ಷ್ಮಿ, ವಿಜಯಲಕ್ಷ್ಮಿ, ಧಾನ್ಯಲಕ್ಷ್ಮಿ, ಆದಿಲಕ್ಷ್ಮಿ, ಗಜಲಕ್ಷ್ಮಿ ಮತ್ತು ವಿದ್ಯಾಲಕ್ಷ್ಮಿ ಎಂದು ಅಷ್ಟಲಕ್ಷ್ಮಿಯರನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ಎಂದರೆ ಬರೀ ಹಣವಲ್ಲ. ಎಲ್ಲ ರೀತಿಯ ಸಂಪತ್ತೂ ಲಕ್ಷ್ಮಿ ಆಗಿರುವಳು. ಈ ಲಕ್ಷ್ಮಿಯ ಆಕರ್ಷಣೆ ಅನಾದಿ, ಅನಂತ. ಅವಳು ನಿತ್ಯನೂತನೆ. ಅವಳ ಕೃಪೆಯಿಂದಲೇ ಜೀವನ ಪಾವನ. ಲಕ್ಷ್ಮಿಯು ಹರಿಯುವ ನದಿಯ ಹಾಗೆ ಹರಿಯುತ್ತಿರಬೇಕು. ಹರಿಯುವ ನದಿಯಲ್ಲಿ ಶುದ್ಧತೆ ಹೆಚ್ಚು ಇರುತ್ತದೆ ಹಾಗೂ ಪವಿತ್ರತೆಯೂ ಹೆಚ್ಚು. ಈ ಉದ್ದೇಶಕ್ಕಾಗಿಯೇ ಎಲ್ಲಾ ಯುಗಗಳಲ್ಲಿಯೂ ದಾನ-ಧರ್ಮಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುವುದು. ರೈತನಿಗೆ ಭೂಮಿ, ಅಕ್ಕಸಾಲಿಗನಿಗೆ ಕುಲುವೆ, ಕುಂಬಾರನಿಗೆ ಚಕ್ರ.. ಹೀಗೆ ನಮ್ಮ ನಮ್ಮ ಕಸುಬುಗಳನ್ನೇ ಸಾಕ್ಷಾತ್ ಲಕ್ಷ್ಮಿ ಎಂದು ಶ್ರದ್ಧೆಯಿಂದ ನಿರ್ವಹಿಸಿದರೆ ಶ್ರೀಲಕ್ಷ್ಮಿಯ ಕೃಪೆ ಸದಾ ನಮ್ಮ ಮೇಲಿರುವುದು. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು..

ಶ್ರೀಕೃಷ್ಣಾರ್ಪಣಮಸ್ತು
***

ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ.

ಆ. ಇದರಲ್ಲಿ ಬರುವ ದಿನಗಳು : ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಕಾರ್ತಿಕ ಶುಕ್ಲ ಪ್ರತಿಪದೆ (ಬಲಿಪ್ರತಿಪದೆ) ಹೀಗೆ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಗಣನೆಗೆ ತೆಗೆದುಕೊಳ್ಳದೇ ದೀಪಾವಳಿಯು ಮೂರು ದಿನಗಳದ್ದಾಗಿದೆ ಎಂದು ನಂಬುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆ ಈ ದಿನಗಳು ದೀಪಾವಳಿಗೆ ಹೊಂದಿಕೊಂಡೇ ಬರುವುದರಿಂದ ಇವುಗಳನ್ನು ದೀಪಾವಳಿಯಲ್ಲಿಯೇ ಸಮಾವೇಶಗೊಳಿಸಲಾಗುತ್ತದೆ. ಆದರೆ ಈ ಹಬ್ಬಗಳು ಬೇರೆಬೇರೆಯಾಗಿವೆ.

ಇ. ಇತಿಹಾಸ : ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಮರಳಿ ಅಯೋಧ್ಯೆಗೆ ಬಂದನು. ಆಗ ಪ್ರಜೆಗಳು ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವ ಪ್ರಾರಂಭವಾಯಿತು.

ಈ. ದೀಪಾವಳಿಯ ಭಾವಾರ್ಥ : ‘ಶ್ರೀಕೃಷ್ಣನು ಅಸುರೀ ವೃತ್ತಿಯ ನರಕಾಸುರನನ್ನು ವಧಿಸಿ ಜನರಿಗೆ ಭೋಗವೃತ್ತಿ, ಲಾಲಸೆ, ಅನಾಚಾರ ಮತ್ತು ದುಷ್ಟಪ್ರವೃತ್ತಿಗಳಿಂದ ಮುಕ್ತಗೊಳಿಸಿದನು ಮತ್ತು ಪ್ರಭುವಿನ ವಿಚಾರ (ದೈವೀವಿಚಾರ) ಗಳನ್ನು ನೀಡಿ ಸುಖಿಯಾಗಿಸಿದನು, ಅದುವೇ ಈ ‘ದೀಪಾವಳಿ’. ನಾವು ವರ್ಷಾನುವರ್ಷಗಳಿಂದ ಕೇವಲ ಒಂದು ರೂಢಿ ಎಂದು ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಇಂದು ಅದರ ಗೂಢಾರ್ಥವು ಲೋಪವಾಗಿದೆ. ಈ ಗೂಢಾರ್ಥವನ್ನು ತಿಳಿದುಕೊಂಡು ಅದರಿಂದ ಅಭಿಮಾನವು ಜಾಗೃತವಾದಲ್ಲಿ ಅಜ್ಞಾನರೂಪೀ ಅಂಧಃಕಾರದ, ಹಾಗೆಯೇ ಭೋಗವೃತ್ತಿ ಮತ್ತು ಅನಾಚಾರೀ, ಅಸುರಿ ವೃತ್ತಿಯಿರುವ ಜನರ ಪ್ರಾಬಲ್ಯವು ಕಡಿಮೆಯಾಗಿ ಸಜ್ಜನಶಕ್ತಿಯ ಮೇಲಿನ ಅವರ ವರ್ಚಸ್ಸು ಕಡಿಮೆಯಾಗುವುದು.

ದೀಪಾವಳಿಯ ಸ್ವರೂಪ

ಉ.೧. ದೀಪಗಳ ಅಲಂಕಾರ :ದೀಪಾವಳಿಯಂದು ಸಾಯಂಕಾಲ ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಿಡಬೇಕು. ದೀಪಾವಳಿ ಎಂದರೆ ದೀಪಗಳ ಸಾಲು. ಇದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದವಾಗುತ್ತದೆ. ವಿದ್ಯುತ್‌ದೀಪಗಳ ಮಾಲೆಗಳನ್ನು ಹಚ್ಚುವುದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ಮತ್ತು ಶಾಂತಿಯಿರುತ್ತದೆ. ‘ದೀಪ’ ಎನ್ನುವ ಶಬ್ದದ ನಿಜವಾದ ಅರ್ಥವು ಎಣ್ಣೆ ಮತ್ತು ಬತ್ತಿಯ ಜ್ಯೋತಿ ಎಂದಾಗಿದೆ. ‘ಅಂಧಃಕಾರದಿಂದ ಜ್ಯೋತಿಯೆಡೆಗೆ ಅಂದರೆ ಪ್ರಕಾಶದೆಡೆಗೆ ಹೋಗು’ ಎನ್ನುವುದು ಶ್ರುತಿಯ ಆಜ್ಞೆಯಾಗಿದೆ. ‘ತಮಸೋ ಮಾ ಜ್ಯೋತಿರ್ಗಮಯ|’ ದೀಪಾವಳಿಯ ದಿನಗಳಲ್ಲಿ ಯಾರ ಮನೆಯಲ್ಲಿ ದೀಪಗಳನ್ನು ಹಚ್ಚುವುದಿಲ್ಲವೋ, ಅವರ ಮನೆಯಲ್ಲಿ ಯಾವಾಗಲೂ ಅಂಧಃಕಾರವೇ ಇರುತ್ತದೆ. ಅವರು ಪ್ರಕಾಶದೆಡೆಗೆ ಅಂದರೆ ಜ್ಞಾನದೆಡೆಗೆ ಹೋಗಲಾರರು. ದೀಪದಾನದಿಂದ ಲಕ್ಷ್ಮೀಯು ಸ್ಥಿರವಾಗುತ್ತಾಳೆ. ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀಯ ವಾಸ ಮತ್ತು ಜ್ಞಾನದ ಪ್ರಕಾಶವಿರಬೇಕೆಂದು ಪ್ರತಿಯೊಬ್ಬರೂ ಆನಂದದಿಂದ ದೀಪಾವಳಿ ಉತ್ಸವವನ್ನು ಆಚರಿಸಬೇಕು. ಇದರಿಂದ ಮನೆಯಲ್ಲಿ ಸುಖಸಮೃದ್ಧಿ ಇರುತ್ತದೆ.

ಉ.೨. ಆಕಾಶದೀಪ : ಇದು ದೀಪಾಲಂಕಾರದ ಒಂದು ಭಾಗವಾಗಿದೆ. ಆಶ್ವಯುಜ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯ ವರೆಗೆ ಮನೆಯ ಹೊರಗೆ ಒಂದು ಎತ್ತರವಾದ ಕಂಬವನ್ನು ನಿಲ್ಲಿಸಿ ಅದರ ಮೇಲೆ ಹಗ್ಗದ ಸಹಾಯದಿಂದ ತೂಗುಹಾಕುವ ದೀಪಕ್ಕೆ ‘ಆಕಾಶದೀಪ’ ಎನ್ನುತ್ತಾರೆ. ಅದರ ವಿಧಿಯು ಮುಂದಿನಂತಿದೆ.

ಮನೆಯ ಹತ್ತಿರದಲ್ಲಿಯೇ ಸ್ವಲ್ಪ ಜಾಗವನ್ನು ಗೋಮಯದಿಂದ ಸಾರಿಸಬೇಕು. ಅದರ ಮೇಲೆ ಚಂದನಯುಕ್ತ ಜಲವನ್ನು ಸಿಂಪಡಿಸಿ ಅಷ್ಟದಳ ಕಮಲವನ್ನು ಬಿಡಿಸಬೇಕು. ಅದರ ಮಧ್ಯಭಾಗದಲ್ಲಿ ೨೦, ೯ ಅಥವಾ ೫ ಕೈ ಅಳತೆಯ ಕಂಬವನ್ನು ನೆಡಬೇಕು. ಅದನ್ನು ವಸ್ತ್ರ, ಪತಾಕೆ, ಅಷ್ಟಘಂಟೆ ಮತ್ತು ಕಲಶ ಇವುಗಳಿಂದ ಅಲಂಕರಿಸಬೇಕು. ಅದರ ಮೇಲೆ ಅಷ್ಟದಳಾಕೃತಿ ಆಕಾಶದೀಪವನ್ನು (ಕಂದೀಲನ್ನು) ನೇತಾಡಿಸಬೇಕು. ಅದರಲ್ಲಿ ದೊಡ್ಡ ದೀಪವನ್ನು ಉರಿಸಿಡಬೇಕು. ಅದರ ಸುತ್ತಲೂ ಕಮಲದ ಪ್ರತಿಯೊಂದು ದಳದಲ್ಲಿ ಒಂದರಂತೆ ಎಂಟು ದೀಪಗಳನ್ನು ಧರ್ಮ, ಹರ, ಭೂತಿ, ದಾಮೋದರ, ಧರ್ಮರಾಜ, ಪ್ರಜಾಪತಿ, ಪಿತೃ ಮತ್ತು ಪ್ರೇತ ಇವರನ್ನುದ್ದೇಶಿಸಿ ಇಡಬೇಕು. ದೀಪಗಳಲ್ಲಿ ಎಳ್ಳೆಣ್ಣೆಯನ್ನು ಹಾಕಬೇಕು. ಅನಂತರ ಆಕಾಶದೀಪಕ್ಕೆ ಪಂಚೋಪಚಾರ ಪೂಜೆಯನ್ನು ಮಾಡಿ ಅದನ್ನು ಮುಂದಿನ ಮಂತ್ರೋಚ್ಚಾರದಿಂದ ಮೇಲಕ್ಕೇರಿಸಬೇಕು.

ದಾಮೋದರಾಯ ನಭಸಿ ತುಲಾಯಾಂ ದೋಲಯಾ ಸಹ|
ಪ್ರದೀಪಂ ತೇ ಪ್ರಯಚ್ಛಾಮಿ ನಮೋನಂತಾಯ ವೇಧಸೇ||

ಅರ್ಥ : ಶ್ರೇಷ್ಠ ಪರಮೇಶ್ವರನಾದ ದಾಮೋದರನಿಗೆ ಈ ಜ್ಯೋತಿಸಹಿತ ಆಕಾಶದೀಪವನ್ನು ಅರ್ಪಿಸುತ್ತೇನೆ. ಆ ತೇಜಸ್ವೀ ಅನಂತನಿಗೆ ನಾನು ನಮಸ್ಕರಿಸುತ್ತೇನೆ. ಇದರ ಫಲವು ಲಕ್ಷ್ಮೀಪ್ರಾಪ್ತಿಯಾಗಿದೆ.’

ಊ. ದೀಪಾವಳಿಯಂದು ಆಕಾಶದೀಪವನ್ನು ತೂಗಾಡಿಸುವುದರ ಹಿಂದಿನ ಶಾಸ್ತ್ರ

ಊ.೧. ಮನೆಯ ಹೊರಗೆ ತೂಗಾಡಿಸಿದ ಆಕಾಶ ದೀಪದಲ್ಲಿನ ತೇಜತತ್ತ್ವದ ಲಹರಿಗಳು ಪಾತಾಳದಿಂದ ಮನೆಯೊಳಗೆ ಬರುವ ಆಪಮಯ ಲಹರಿಗಳನ್ನು ತಡೆಯುವುದು
ದೀಪಾವಳಿಯ ಸಮಯದಲ್ಲಿ ಆಪಮಯ ತತ್ತ್ವತರಂಗಕ್ಕೆ ಸಂಬಂಧಿಸಿದ ಅಧೋಗಾಮಿ ಲಹರಿಗಳು ಊರ್ಧ್ವ ದಿಕ್ಕಿನಲ್ಲಿ ಪ್ರಕ್ಷೇಪಣೆಯಾಗಲು ಆರಂಭವಾಗುತ್ತವೆ. ಆದುದರಿಂದ ಪೂರ್ಣ ವಾತಾವರಣದಲ್ಲಿ ಜಡತ್ವವು ನಿರ್ಮಾಣವಾಗಿ ಕೆಟ್ಟ ಘಟಕಗಳ ಪ್ರಭಾವ ಹೆಚ್ಚಾದುದರಿಂದ ಮನೆಯಲ್ಲಿ ಜಡತ್ವವು ಸೇರಿಕೊಂಡು ಪೂರ್ಣ ವಾಸ್ತು ದೂಷಿತವಾಗುತ್ತದೆ. ಇದನ್ನು ತಡೆಯುವುದಕ್ಕಾಗಿ ದೀಪಾವಳಿಯ ಮುಂಚಿನ ದಿನದಿಂದಲೇ ಮನೆಯ ಹೊರಗೆ ಆಕಾಶದೀಪವನ್ನು ಹಚ್ಚುತ್ತಾರೆ. ಆಕಾಶದೀಪದಲ್ಲಿ ತೇಜತತ್ತ್ವದ ಸಮಾವೇಶವಿರುವುದರಿಂದ ಊರ್ಧ್ವ ದಿಕ್ಕಿನಿಂದ ಕಾರ್ಯನಿರತವಾಗುವ ಆಪಮಯ ಲಹರಿಗಳು ಹತೋಟಿಗೆ ಬಂದು ತೇಜತತ್ತ್ವದ ಜಾಗೃತಿದರ್ಶಕ ಲಹರಿಗಳು ಮನೆಯಲ್ಲಿ ವರ್ತುಲಾತ್ಮಕವಾಗಿ ಸಂಚರಿಸುತ್ತವೆ; ಹಾಗಾಗಿ ಮನೆಯ ಹೊರಗೆ ಆಕಾಶದೀಪವನ್ನು ಹಾಕುತ್ತಾರೆ. –

ಊ.೨. ಆಕಾಶದೀಪದಿಂದ ಬ್ರಹ್ಮಾಂಡದಲ್ಲಿ ಸಂಚರಿಸುತ್ತಿರುವ ಲಕ್ಷ್ಮೀತತ್ತ್ವ ಮತ್ತು ಪಂಚತತ್ತ್ವ ಇವುಗಳ ಲಾಭವಾಗುವುದು : ದೀಪಾವಳಿಯ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಕೆಟ್ಟ ಘಟಕಗಳ ನಿರ್ಮೂಲನೆಗಾಗಿ ಶ್ರೀ ಲಕ್ಷಿ ತತ್ತ್ವ ಕಾರ್ಯನಿರತವಾಗಿರು ತ್ತದೆ. ಈ ತತ್ತ್ವದ ಲಾಭ ಪಡೆಯಲು ಪಂಚತತ್ತ್ವದ ಎಲ್ಲ ಸ್ತರಗಳನ್ನು ಒಂದು ಕಡೆ ಮಾಡಿ ಅದಕ್ಕೆ ವಾಯುತತ್ತ್ವದ ಗತಿಮಾನತೆಯ ಆಕರ್ಷಣೆಯಿಂದ ಆಕಾಶ ಟೊಳ್ಳಿನ ಸಂಚಾರದಿಂದ ಗ್ರಹಣ ಮಾಡಲಾಗುತ್ತದೆ. ಇದಕ್ಕಾಗಿ ಆಕಾಶದೀಪ ಮನೆಯ ಹೊರಗೆ ಎತ್ತರದ ಸ್ಥಳದಲ್ಲಿ ಹಾಕಲಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿ ಸಂಚಾರವಾಗುವ ತತ್ತ್ವದ ಲಾಭವಾಗುತ್ತದೆ.
***
ದೀಪಾವಳಿಯ ಪೌರಾಣಿಕ ಮಹತ್ವ 
ದೀಪಗಳ ಹಬ್ಬವಾದ ದೀಪಾವಳಿಯನ್ನು ಭಾರತೀಯ ಹಬ್ಬಗಳಲ್ಲಿ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಈ ಹಬ್ಬವನ್ನು ಯುಗಯುಗಗಳಿಂದಲೂ ಆಚರಿಸಲಾಗುತ್ತಿದೆ, ದೀಪಾವಳಿಯ ಕಥೆಗಳಲ್ಲಿ ದೀಪಾವಳಿ ಹಬ್ಬದ ಬಗ್ಗೆ ಪೌರಾಣಿಕ ಮಹತ್ವವನ್ನು ನಾವು ಕಾಣುತ್ತೇವೆ. ದೀಪಾವಳಿಗೆ ಸಂಬಂಧಿಸಿದ ಪೌರಾಣಿಕ ಕಥೆಗಳು ಮತ್ತು ಪ್ರಾಮುಖ್ಯತೆಯನ್ನು  ತಿಳಿದುಕೊಳ್ಳೋಣ..

☆ ದೀಪಾವಳಿಯ ಕಥೆಗಳು ☆
▪  ಸತ್ಯಯುಗದ ಕಥೆ ▪

ಮೊದಲನೆಯದಾಗಿ ದೀಪಾವಳಿಯನ್ನು ಸತ್ಯಯುಗದಲ್ಲಿಯೇ ಆಚರಿಸಲಾಯಿತು. ದೇವತೆಗಳು ಮತ್ತು ರಾಕ್ಷಸರು ಒಟ್ಟಾಗಿ ಸಾಗರವನ್ನು ಮಂಥನ ಮಾಡಿದಾಗ, ಐರಾವತ, ಚಂದ್ರ, ಉಚ್ಚೈಶ್ರ್ವ, ಪಾರಿಜಾತ, ವಾರುಣಿ, ರಂಭ ಮುಂತಾದ 14 ರತ್ನಗಳೊಂದಿಗೆ ಹಾಲಾಹಲ ವಿಷವು ಹೊರಹೊಮ್ಮಿತು. ಇದರೊಂದಿಗೆ ಆರೋಗ್ಯದ ಆದಿದೇವನಾದ ಧನ್ವಂತರಿಯು ಪ್ರಕಟಗೊಳ್ಳುತ್ತಾನೆ.  ಇದರ ನಂತರ ಮಹಾಲಕ್ಷ್ಮಿ ದೇವಿಯು ಈ ಮಹಾ ಮಂಥನದಿಂದ ಜನಿಸಿದಳು ಮತ್ತು ಮೊದಲ ದೀಪಾವಳಿಯನ್ನು ಎಲ್ಲಾ ದೇವರುಗಳು ಅವಳ ಸ್ವಾಗತದೊಂದಿಗೆ ಆಚರಿಸಿದರು.

▪ ತ್ರೇತಾಯುಗದ ಕಥೆ ▪

ತ್ರೇತಾಯುಗದ ಕಥೆಯು ಭಗವಾನ್ ಶ್ರೀರಾಮನ ಹೆಸರಿನಿಂದ ಹೆಚ್ಚು ಪ್ರಸಿದ್ಧವಾಗಿದೆ. ರಾಕ್ಷಸೇಂದ್ರ ರಾವಣನನ್ನು ಸೋಲಿಸಿದ ನಂತರ, 14 ವರ್ಷಗಳ ವನವಾಸವನ್ನು ಕಳೆದು ಶ್ರೀರಾಮನು ಅಯೋಧ್ಯೆಗೆ ಹಿಂದಿರುಗಿದಾಗ ಇಡೀ ನಗರವನ್ನು ದೀಪಗಳಿಂದ ಅಲಂಕರಿಸಲಾಗಿತ್ತು ಮತ್ತು ಈ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯದ ಸಂಕೇತವಾಗಿ ದೀಪಾವಳಿಯೆಂದು ಆಚರಿಸಲಾಯಿತು.

▪ ದ್ವಾಪರ ಯುಗದ ಕಥೆ ▪

ದ್ವಾಪರ ಯುಗವು ಶ್ರೀ ಕೃಷ್ಣನ ಲೀಲಾಯುಗವಾಗಿತ್ತು ಮತ್ತು ದೀಪಾವಳಿಗೆ ಎರಡು ಪ್ರಮುಖ ಆಯಾಮಗಳನ್ನು ಇದು ಒಳಗೊಂಡಿದೆ.

ಮೊದಲ ಘಟನೆ ಕೃಷ್ಣನ ಬಾಲ್ಯಕ್ಕೆ ಸಂಬಂಧಿಸಿದೆ. ಇಂದ್ರ ಪೂಜೆಯನ್ನು ವಿರೋಧಿಸುವ ಮೂಲಕ ಗೋವರ್ಧನ ಪೂಜೆಯ ಕ್ರಾಂತಿಕಾರಿ ನಿರ್ಧಾರವನ್ನು ಅನುಷ್ಠಾನಗೊಳಿಸಿದ ಶ್ರೀಕೃಷ್ಣನು ಸ್ಥಳೀಯ ಪ್ರಾಕೃತಿಕ ಸಂಪತ್ತಿನ ಕಡೆಗೆ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದನು ಮತ್ತು ಅನ್ನಕೂಟದ ಸಂಪ್ರದಾಯವು ಗೋವರ್ಧನ ಪೂಜೆಯ ರೂಪದಲ್ಲಿ ರೂಪುಗೊಂಡಿತು. ಕೂಟ ಎಂದರೆ ಪರ್ವತ, ಅನ್ನಕೂಟ ಎಂದರೆ ಬೆಟ್ಟದಂತಹ ಆಹಾರ ಪದಾರ್ಥಗಳ ರಾಶಿ. ಹೇಗಿದ್ದರೂ ಕೃಷ್ಣ-ಬಲರಾಮ ಕೃಷಿಯ ದೇವರು. ಅವರು ನಡೆಸಿಕೊಂಡು ಬಂದ ಅನ್ನಕೂಟ ಸಂಪ್ರದಾಯ ಇಂದಿಗೂ ದೀಪಾವಳಿ ಹಬ್ಬದ ಭಾಗವಾಗಿದೆ. ಈ ಹಬ್ಬವನ್ನು ಸಾಮಾನ್ಯವಾಗಿ ದೀಪಾವಳಿಯ ಎರಡನೇ ದಿನದಂದು ಅಂದರೆ ಪ್ರತಿಪಾದದಂದು ಆಚರಿಸಲಾಗುತ್ತದೆ.

ಎರಡನೇ ಘಟನೆ ಕೃಷ್ಣನ ಮದುವೆಗೆ ಸಂಬಂಧಿಸಿದೆ. ನರಕಾಸುರನೆಂಬ ರಾಕ್ಷಸನನ್ನು ಕೊಂದು ಅವನ ಪ್ರೀತಿಯ ಸತ್ಯಭಾಮೆಗಾಗಿ ಪಾರಿಜಾತ ವೃಕ್ಷವನ್ನು ತಂದ ಘಟನೆಯು ದೀಪೋತ್ಸವದ ಒಂದು ದಿನದ ಹಿಂದಿನ ರೂಪ ಚತುರ್ದಶಿಯೊಂದಿಗೆ ಸಂಬಂಧಿಸಿದೆ. ಅದಕ್ಕಾಗಿಯೇ ಇದನ್ನು 'ನರಕ ಚತುರ್ದಶಿ' ಎಂದೂ ಕರೆಯುತ್ತಾರೆ.

▪ಕಲಿಯುಗದ ಕಥೆ ▪

ಮೂಲತಃ ದೀಪಾವಳಿ ಐದು ದಿನಗಳ ಹಬ್ಬ. ಐದು ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ , ನಾಲ್ಕನೇ ದಿನ ಬಲಿಪಾಡ್ಯಮಿ ಹಾಗೂ ಐದನೇ ದಿನ ಯಮದ್ವಿತೀಯ ಆಚರಣೆಯಿರುತ್ತದೆ. 

ಬೌದ್ಧರಲ್ಲಿರುವ ಹಲವಾರು ಪಂಗಡಗಳು ದೀಪಾವಳಿಯ ಮೂರು ದಿನ ಪೂಜೆ ಮಾಡುತ್ತಾರೆ. ಸಿಖ್ಖರು ಕೂಡ ಆಚರಿಸುತ್ತಾರೆ. ಒಟ್ಟಿನಲ್ಲಿ ಇದು ಈ ದೇಶದಲ್ಲಿ ಹುಟ್ಟಿರುವ ಮೂಲತಃ ಭಾರತೀಯರು, ಬುಡಕಟ್ಟು ಜನಾಂಗದಿಂದ ಹಿಡಿದು ಜೈನರು, ಬೌದ್ಧರು ಸಿಖ್ಖರು,  ಹಿಂದೂಗಳು, ಕಾಡಿನಿಂದ ಹಿಡಿದು ನಾಡಿನ ಜನರವರೆಗೂ ಆಚರಿಸುವ ಪುರಾತನ ಹಬ್ಬ. 

▪ ದೀಪೋತ್ಸವದ ವಿವರಣೆ ಪ್ರಾಚೀನ ಗ್ರಂಥಗಳಲ್ಲಿ ಕಂಡುಬರುತ್ತದೆ. ದೀಪಾವಳಿಗೆ ಸಂಬಂಧಿಸಿದ ಇಂತಹ ಹಲವು ಸಂಗತಿಗಳು ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ. ಹಾಗಾಗಿ ಈ ಹಬ್ಬಕ್ಕೆ ತನ್ನದೇ ಆದ ಐತಿಹಾಸಿಕ ಮಹತ್ವವೂ ಇದೆ. ಧರ್ಮದ ದೃಷ್ಟಿಯಿಂದ ದೀಪಾವಳಿ ಹಬ್ಬಕ್ಕೆ ಐತಿಹಾಸಿಕ ಮಹತ್ವವಿದೆ.

ಭಗವಾನ್ ಶ್ರೀ ವಿಷ್ಣುವು ಮೂರು ಲೋಕಗಳನ್ನು ಮೂರು ಹಂತಗಳಲ್ಲಿ ಅಳೆದನು ಮತ್ತು ಬಲಿ ರಾಜನ ದಾನದಿಂದ ಪ್ರಭಾವಿತನಾಗಿ, ಅವನಿಗೆ ಪಾತಾಳವನ್ನು ನೀಡುತ್ತಾನೆ ಮತ್ತು ಭೂಮಿಯ ಜನರು ಅವನ ನೆನಪಿಗಾಗಿ ಪ್ರತಿ ವರ್ಷ ದೀಪಾವಳಿಯನ್ನು ಆಚರಿಸಲಿ ಎನ್ನುವ ವರವನ್ನು ಭಗವಾನ್ ವಿಷ್ಣು ಬಲಿ ಚಕ್ರವರ್ತಿಗೆ ನೀಡಿದನು. ತ್ರೇತಾಯುಗದಲ್ಲಿ ರಾವಣನನ್ನು ಸಂಹರಿಸಿ ಶ್ರೀರಾಮನು ಅಯೋಧ್ಯೆಗೆ ಹಿಂದಿರುಗಿದಾಗ, ಅವನ ಆಗಮನದ ಮೇಲೆ ದೀಪವನ್ನು ಬೆಳಗಿಸಿ ಸ್ವಾಗತಿಸಲಾಯಿತು. ಶ್ರೀಕೃಷ್ಣನು ದೀಪಾವಳಿಯ ಹಿಂದಿನ ದಿನವಾದ ಕಾರ್ತಿಕ ಚತುರ್ದಶಿಯಂದು ನರಕಾಸುರನನ್ನು ಸಂಹರಿಸಿದನು, ಈ ಸಂತೋಷದಲ್ಲಿ ಗೋಕುಲ ನಿವಾಸಿಗಳು ಮರುದಿನ ಅಮಾವಾಸ್ಯೆಯಂದು ದೀಪವನ್ನು ಬೆಳಗಿಸಿ ಆಚರಿಸಿದರು.

ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರ ಸ್ವಾಮಿಗಳು ಕೂಡ ದೀಪಾವಳಿಯ ದಿನದಂದು ಬಿಹಾರದ ಪಾವಪುರಿಯಲ್ಲಿ ತಮ್ಮ ದೇಹವನ್ನು ತ್ಯಜಿಸಿದರು. ದೀಪಾವಳಿಯ ದಿನದಂದು ಅಮೃತಸರದ ಗೋಲ್ಡನ್ ಟೆಂಪಲ್ ನಿರ್ಮಾಣವೂ ಪ್ರಾರಂಭವಾಯಿತು. ಮಹಾಕಾಳಿ ದೇವಿಯು ರಾಕ್ಷಸರನ್ನು ಕೊಲ್ಲಲು ಉಗ್ರ ರೂಪವನ್ನು ಧರಿಸಿ ರಾಕ್ಷಸರನ್ನು ಸಂಹರಿಸಿದಳು. ಸಂಹಾರದ ನಂತರವೂ ಅವಳ ಕೋಪ ಕಡಿಮೆಯಾಗಲಿಲ್ಲ, ನಂತರ ಭೋಲೇನಾಥನು ಅವಳ ಪಾದದ ಮೇಲೆ ಮಲಗಿದನು ಮತ್ತು ಮಹಾಕಾಳಿ ದೇವಿಯ ಕೋಪವು ಶಿವನ ದೇಹದ ಸ್ಪರ್ಶದಿಂದ ಕೊನೆಗೊಂಡಿತು. ಆದ್ದರಿಂದ, ಇದರ ನೆನಪಿಗಾಗಿ, ಶಾಂತ ರೂಪದಲ್ಲಿರುವ ಲಕ್ಷ್ಮಿಯ ಪೂಜೆ ಪ್ರಾರಂಭವಾಯಿತು. ಅದಕ್ಕಾಗಿಯೇ ದೀಪಾವಳಿಯ ರಾತ್ರಿ ಮಹಾಕಾಳಿಯ ಉಗ್ರ ರೂಪವಾದ ಕಾಳಿಯನ್ನು ಪೂಜಿಸುವ ಸಂಪ್ರದಾಯ ಕೂಡ ಇದೆ.

ಈ ಮೇಲಿನ ಪೌರಾಣಿಕ ಹಿನ್ನೆಲೆ ಅಥವಾ ಕಥೆಯು ದೀಪಾವಳಿ ಹಬ್ಬ ಹೇಗೆ ಹುಟ್ಟಿಕೊಂಡಿತು ಎನ್ನುವುದನ್ನು ವಿವರವಾಗಿ ತಿಳಿಸುತ್ತದೆ. ಈ ಕಥೆಗಳ ಪ್ರಕಾರ, ದೀಪಾವಳಿ ಹಬ್ಬವು ನಿನ್ನೆ, ಮೊನ್ನೆಯಿಂದ ಆಚರಿಸಿಕೊಂಡು ಬಂದ ಹಬ್ಬವಲ್ಲ, ಪುರಾಣಗಳಿಂದಲೂ ಈ ಹಬ್ಬವನ್ನು ಆಚರಿಸಿಕೊಂಡು ಬಂದ ಹಬ್ಬವಾಗಿದೆ. ಶುಭಮಸ್ತು..

ಶ್ರೀಕೃಷ್ಣಾರ್ಪಣಮಸ್ತು
***

ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಿತೀಯ ದಿನದಂದು
ಸಹೋದರರು  ಮದುವೆಯಾದ ಸಹೋದರಿಯರ 
ಮನೆಗೆ ಹೋಗಿ ಊಟಮಾಡಿಬರುವುದು ಈ ದಿನದ
ವಿಶೇಷ.ಈ ದಿನವನ್ನು ಯಮದ್ವಿತೀಯ ಎಂದು ಕರೆಯುತ್ತಾರೆ.ಯಮಧರ್ಮರಾಯ ತನ್ನ ಸಹೋದರಿ ಯಮುನೆ(ಯಮುನಾನದಿ..ಸೂರ್ಯ-ಸಂಜ್ಞಾ ದೇವಿಯರ ಮಗಳು)ಯ ಮನೆಗೆ ಹೋಗಿ ಅಲ್ಲಿ
ಸಹೋದರಿ ನೀಡಿದ ಆತಿಥ್ಯ ಸ್ವೀಕರಿಸಿ ಯಮಧರ್ಮ
ರಾಜನು ಸಹೋದರಿಗೆ ಅನುಗ್ರಹಿಸುತ್ತಾನೆ.
ಈ ಸಂತೋಷದ ಸಂದರ್ಭದಲ್ಲಿ  ಯಮಧರ್ಮನು
ಸಹೋದರಿಗೆ ಒಂದು ವರವನ್ನು ಕೇಳುವಂತೆ ಹೇಳು
ತ್ತಾನೆ.ಅದಕ್ಕೆ ಯಮುನೆಯು ಅಣ್ಣಾ ನನಗೆ ಯಾವುದೇ ವರವೂ ಬೇಡ,ಪ್ರತಿವರ್ಷ ಇದೇ ರೀತಿ
ಪ್ರೀತಿಯಿಂದ  ನಮ್ಮ ಮನೆಗೆ ಈ ದ್ವಿತೀಯದಂದು
ಬರಬೇಕೆಂದು ಪ್ರಾರ್ಥಿಸುತ್ತಾಳೆ.ಯಮುನೆಯ
ಕೋರಿಕೆಯನ್ನು ಕೇಳಿ ಅವಳಿಗೆ ಮತ್ತು ಎಲ್ಲಾ ಸಹೋದರರಿಗೂ ಒಳ್ಳೆಯದಾಗುವಂತೆ ಒಂದು ವರವನ್ನು ಕೊಡುತ್ತಾನೆ."ಯಾರು ಕಾರ್ತಿಕ ಶುದ್ಧ ದ್ವಿತೀಯದಂದು  ಸಹೋದರರನ್ನು ಕರೆಸಿ ಸಂತೋಷದಿಂದ ಅವರಿಗೆ ಊಟವನ್ನು ಮಾಡಿಸು
ತ್ತಾರೋ,ಅಂತಹ ಸಹೋದರಿಯ ಮನೆಯಲ್ಲಿ
ಊಟಮಾಡಿದ ಸಹೋದರನಿಗೆ ದೀರ್ಘಾಯುಷ್ಯ
ವಂತನಾಗುವಂತೆ ಅನುಗ್ರಹಿಸುವುದಲ್ಲದೇ,ಆದರಿಸಿದ
ಸಹೋದರಿಗೆ ಸಕಲ ಸನ್ಮಂಗಲ ಸೌಭಾಗ್ಯವು ದೊರೆಯುವುದು ಎಂದುವರವನ್ನುಅನುಗ್ರಹಿಸುತ್ತಾನೆ.
***

 ಅಂದರೆ, ಹಬ್ಬದ ಮರುದಿನ...  ಅಕ್ಕನ ತದಿಗೆ ಭಾವನ ಬಿದಿಗೆ ಎಂದೂ ಕರೆಯುವುದುಂಟು.  ಕಾರ್ತಿಕ ಶುದ್ಧ ಬಿದಿಗೆಗೆ (ದ್ವಿತೀಯಾ)  ಯಮದ್ವಿತೀಯ ಎನ್ನುವರು.  ಪೂರ್ವದಲ್ಲಿ ಯಮುನೆಯು ತನ್ನ ಅಣ್ಣನಾದ ಯಮನನ್ನು ತನ್ನ ಮನೆಗೆ ಕರೆದು ಊಟಮಾಡಿಸಿದಳೆಂದು ಪುರಾಣದಲ್ಲಿ ಹೇಳಿದೆ.  ಆದ್ದರಿಂದ ಈ ದಿನಕ್ಕೆ ಯಮದ್ವಿತೀಯ ಎನ್ನುವರು.  ಈ ದಿನ ಸ್ವಗೃಹದಲ್ಲಿ ಭೋಜನ ಮಾಡಬಾರದು.  ಅಕ್ಕ ತಂಗಿಯರ ಮನೆಯಲ್ಲಿ ಊಟಮಾಡಬೇಕು ಅದರಿಂದ ಧನ ಧಾನ್ಯ ಸಮೃದ್ಧಿಯಾಗಿ ಸುಖ ಪ್ರಾಪ್ತಿಯಾಗುವುದು.  ಎಲ್ಲ ಅಕ್ಕ ತಂಗಿಯರನ್ನೂ ವಸ್ತ್ರಾಲಂಕಾರಗಳಿಂದ ಸತ್ಕರಿಸಬೇಕು.  ತನಗೆ ಅಕ್ಕ ತಂಗಿಯರು ಇಲ್ಲದಿದ್ದಲ್ಲಿ ಸ್ನೇಹಿತರ ಅಕ್ಕ ತಂಗಿಯರನ್ನಾದರೂ ಸತ್ಕರಿಸಬೇಕೆಂದು ಹೇಳಿದ್ದಾರೆ.  ಭಗಿನಿಯರು (ಅಕ್ಕತಂಗಿಯರು) ಅಣ್ಣ ತಮ್ಮಂದಿರುಗಳನ್ನು ಈ ದಿನ ಸತ್ಕರಿಸುವುದರಿಂದ ಅವರಿಗೆ ವೈಧವ್ಯವು ಉಂಟಾಗುವುದಿಲ್ಲ ಹಾಗೂ ಅಣ್ಣ ತಮ್ಮಂದಿರುಗಳಿಗೆ ದೀರ್ಘಾಯುಷ್ಯವು ಉಂಟಾಗುತ್ತದೆ.
**********

ಜಲಪೂರಣ ತ್ರಯೋದಶಿ

ಆಶ್ವೀಜ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ.

ಅಂದು ಸಂಜೆ ಹೊತ್ತು ನೀರು ತುಂಬಿಸುವ ಪಾತ್ರೆ ಮತ್ತು ನೀರು ಕಾಯಿಸುವ ಹಂಡೆಗಳನ್ನು ತೊಳೆದು ಅವನ್ನು ಅಲಂಕರಿಸಬೇಕು.   ಅನಂತರ ಸಮೀಪದ ಬಾವಿ, ಕೆರೆ, ನದಿಯಿಂದ ನೀರು ತಂದು ತುಂಬಿಸಿ, ಗಂಗೆ ಪೂಜೆ ಮಾಡಬೇಕು.  ಅಥವಾ ಕನಿಷ್ಠ ಮನೆಯಲ್ಲಿ ಬರುವ ನಲ್ಲಿ ನೀರನ್ನು ಶುದ್ಧವಾಗಿ ಹಿಡಿದು,  ದೇವರ ಮುಂದೆ ಮಂಡಲವನ್ನು ಹಾಕಿ (ನೀರಿನಲ್ಲಿ), ರಂಗೋಲಿಯನ್ನು ಬರೆದು, ಅದನ್ನು ಅಲಂಕರಿಸಿ,  ಗಂಗೆಯನ್ನು ಒಂದು ನೀರು ಕಾಯಿಸುವ ಪಾತ್ರೆಯಲ್ಲಿ ಇಟ್ಟು ದೇವರಿಗೆ ಸಮರ್ಪಿಸಬೇಕು.  ಆ ಪಾತ್ರೆಯನ್ನು ಪುಷ್ಪಾದಿಗಳಿಂದ ಅಲಂಕಾರ ಮಾಡಿ,  ದೇವರ ಮುಂದೆ ಮತ್ತು  ತುಳಸೀ ಗಿಡದ ಮುಂದೆ ದೀಪವನ್ನು ಹಚ್ಚಿ,  ಆಚಮನ ಮಾಡಿ, ಸಂಕಲ್ಪ ಪುರಸ್ಸರವಾಗಿ, ದ್ವಾದಶ ನಾಮಗಳಿಂದ ಗಂಗೆಯನ್ನು ಪೂಜಿಸಿ, ಸಕಲ ತೀರ್ಥಾಭಿಮಾನಿ ದೇವತೆಗಳನ್ನು ಸ್ಮರಿಸಿ, ನೈವೇದ್ಯವನ್ನು ಮಾಡಿ, ನೀರಾಜನವನ್ನು ಸಮರ್ಪಿಸಿ, ಗಂಗೆಯನ್ನು ಪೂಜಿಸಬೇಕು,   ಇಲ್ಲಿ ನೀರೇ ಗಂಗೆಯಲ್ಲ.  ಅದರಲ್ಲಿ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳು ಸನ್ನಿಹಿತರಾಗಿರುತ್ತಾರೆ ಎಂದು ಭಾವಿಸಬೇಕು.

ಸಂಕಲ್ಪ –  ಆಚಮನ, ಕೇಶವಾದಿ …..

ಆಚಮನ ಮಾಡಿದ ನೀರನ್ನು ಆಚಮನಕ್ಕೆ ಮಾತ್ರ ಉಪಯೋಗಿಸಿ. ಬೇರೆ ಎಲ್ಲ ಪೂಜೆಗೂ ಬೇರೆ ನೀರನ್ನು ಉಪಯೋಗಿಸಿ.

ಬಾವಿಯಿಂದ ತಂದ‌ ನೀರಾಗಲಿ ಅಥವಾ ಯಾವುದೇ ನೀರಾಗಲಿ ಅದನ್ನು ಶೋಧಿಸಿ ಪೂಜೆಗೆ ಬಳಸಿ.

ಓಂ ಪ್ರಣವಸ್ಯ ಪರಬ್ರಹ್ಮ ಋಷಿ, ತ್ರಿವಿಕ್ರಮ ದೇವತಾ ಪ್ರಾಣಾಯಾಮೇ ವಿನಿಯೋಗ : |

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರ ಮಾನೇನ _ ಸಂವತ್ಸರೇ ದಕ್ಷಿಣಾಯನೇ ಶರದೃತೌ ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ತ್ರಯೋದಶ್ಯಾ ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಜಲಪೂರ್ಣ ತ್ರಯೋದಶಿ ನಿಮಿತ್ತ ಶ್ರೀ ಕುಲದೇವತಾ, ಇಷ್ಟದೇವತಾ ಪ್ರೀತ್ಯರ್ಥಂ | ಯಥಾಶಕ್ತಿ, ಯಥಾ ಜ್ಞಾನ ಪೂರ್ವಕ, ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||

ಪ್ರಸೀದ ಭಗವನ್ ಆಗಚ್ಛಾಗಚ್ಛ ಭಗವಂತಂ ಗಂಗಾಜನಕಂ ತ್ರಿವಿಕ್ರಮಂ ಅಸ್ಮಿನ್ ಕಲಶೇ ಆವಾಹಯಾಮಿ.

ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |
ನರ್ಮದೇ ಸಿಂದುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು|
ಭಾಗೀರಥೀಂ ಆವಾಹಯಾಮಿ|

ಓಂ ಇಮಂ ಮೇ ಗಂಗೇ ಯಮುನೇ ಸರಸ್ವತಿ ಶುತುದ್ರಿಸ್ತೋಮಂ ಸಚತಾ ಪರುಷ್ಣ್ಯಾ !

ಅಸಿಕ್ನ್ಯಾ ಮರುದ್ವ್ರದೇ ವಿತಸ್ತಯಾssರ್ಜೀಕಿಯಾ
ಶೃಣುಹ್ಯಾ ಸುಷೋಮಯಾ || (ಹೀಗೆ ಅಭಿಮಂತ್ರಿಸಿ)

 
ಓಂ ಭೂ: ಭಾಗೀರಥೀಂ ಆವಾಹಯಾಮಿ
ಓಂ ಭುವ: ಭಾಗೀರಥೀಂ ಆವಾಹಯಾಮಿ
ಓಂ ಸ್ವ: ಭಾಗೀರಥೀಂ ಆವಾಹಯಾಮಿ

ಗಂಗಾಯೈ ನಮ: | ಗಂಗಾಂ ಅಸ್ಮಿನ್ ಕಲಶೇ ಆವಾಹಯಾಮಿ

 
ಗಂಗಾ ಸಹಿತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ರಮಾ ತ್ರಿವಿಕ್ರಮಾಯ ಧ್ಯಾಯಾಮಿ  ಧ್ಯಾನಂ ಸಮರ್ಪಯಾಮಿ. !!

 
ಚಿಂತನೆ –ಈ ಜಲವೇ ಗಂಗೆಯಲ್ಲ.  ಈ ಜಲದೊಳಗೆ ಸಕಲ ತೀರ್ಥಾಭಿಮಾನಿ ದೇವತೆಗಳೊಂದಿಗೆ ಗಂಗೆ ಇದ್ದಾಳೆ. ಆ ಗಂಗೆಯು ಸಕಲ ದೇವತೆಗಳಿಂದ ಸ್ತುತ್ಯನಾದ ಶ್ರೀ ರಮಾ ತ್ರಿವಿಕ್ರಮರ ಪೂಜಿಸುತ್ತಿದ್ದಾಳೆ.  ಅಂತ ಅನುಸಂಧಾನ ಮಾಡಿಕೊಳ್ಳಬೇಕು.

ಅರ್ಘ್ಯ ಸಮರ್ಪಯಾಮಿ |                                                        ಪಾದ್ಯಂ ಸಮರ್ಪಯಾಮಿ !
ಆಚಮನಂ ಸಮರ್ಪಯಾಮಿ !
(ಅರ್ಘ್ಯ ಪಾತ್ರೆಯಲ್ಲಿ ನೀರು ಪ್ರತಿ ಮಂತ್ರಕ್ಕೂ ಬಿಡುವುದು)

ಪುನರಾಚಮನಂ ಸಮರ್ಪಯಾಮಿ !
ಪಂಚಾಮೃತ ಸ್ನಾನಂ ಸಮರ್ಪಯಾಮಿ !
(ಹಾಲು, ತುಪ್ಪ, ಸಕ್ಕರೆ, ಜೇನುತುಪ್ಪ, ಮೊಸರು)
ಸ್ನಾನಂ ಸಮರ್ಪಯಾಮಿ ! (ತಿಳಿ ನೀರು )

 

ವಸ್ತ್ರಂ ಸಮರ್ಪಯಾಮಿ ! ನಾನಾ ವಿಧ ಆಭರಣಾನಿ ಸಮರ್ಪಯಾಮಿ !  ಹರಿದ್ರಾ ಕುಂಕುಮ ಗಂಧಾನಿ ಸಮರ್ಪಯಾಮಿ ! ನಾನಾ ವಿಧ ಪರಿಮಳ ಪುಷ್ಪಾಣಿ ಸಮರ್ಪಯಾಮಿ !

ಅರ್ಘ್ಯ, ಪಾದ್ಯ,  ಆಚಮಾನೀಯಾದಿ ಸರ್ವೋಪಚಾರ ಪೂಜಾಂ ಸಮರ್ಪಯಾಮಿ |

ದ್ವಾದಶನಾಮ ಪೂಜ  –  ನಂದಿನೈ ನಮ: | ನಲಿನ್ಯೈ ನಮ: | ಸೀತಾಯೈ ನಮ: | ಮಾಲತ್ಯೈ ನಮ: | ಮಲಾಪಹಾಯೈ ನಮ: | ವಿಷ್ಣುಪಾದಾಬ್ಜ ಸಂಭೂತಾಯೈ ನಮ: | ಗಂಗಾಯೈ ನಮ: | ತ್ರಿಪಥಗಾಮಿನ್ಯೈ ನಮ: | ಭಾಗೀರಥ್ಯೈ ನಮ:|ಭೋಗವತ್ಯೈ ನಮ: | ಜಾಹ್ನವ್ಯೈ ನಮ: | ತ್ರಿದಶೇಶ್ವರ್ಯೈರ್ನಮ: |

ಧೂಪಂ, ದೀಪಂ, ಗೂಡಾಪೂಪ ನೈವೇದ್ಯಂ ಸಮರ್ಪಯಾಮಿ |

ನೀರಾಜನಂ ಸಮರ್ಪಯಾಮಿ |
ಮಂಗಳಾರತಿ ಮಾಡಬೇಕು
ಮಂತ್ರಪುಷ್ಪಂ ಸಮರ್ಪಯಾಮಿ !

ಅನೇನ ತ್ರಿವಿಕ್ರಮ ಪೂಜನೇನ ತಥಾ ಗಂಗಾ ಪೂಜನೇನ ಮಧ್ವಾಂತರ್ಗತ ಗಂಗಾಜನಕ ತ್ರಿವಿಕ್ರಮಾತ್ಮಕ ಶ್ರೀ ಗೋಪಾಲಕೃಷ್ಣ ಪ್ರೀಯತಾಂ ಶ್ರೀ ಕೃಷ್ಣಾರ್ಪಣಮಸ್ತು !!
by ನರಹರಿ ಸುಮಧ್ವ
***



ದೀಪಾವಳಿ 
ದೀಪಾವಳಿ ಅಂದರೆ ದೀಪಗಳ ಸಾಲು (ದೀಪ + ಆವಳಿ = ಸಾಲು). ‘ದೀಪಯತಿ ಸ್ವಂ ಪರಚ ಇತಿ ದೀಪಃ’
ದೀಪಾವಳಿಯನ್ನು ಐದು ದಿನಗಳ ಹಬ್ಬವನ್ನಾಗಿ,ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ.
ಆಶ್ವಯುಜದಕೊನೆ ಮತ್ತು ಕಾರ್ತೀಕ ಮಾಸದ ಆರಂಭದ ದಿನಗಳಲ್ಲಿಅದ್ಧೂರಿಯ ಆಚರಣೆ... ತ್ರಯೋದಶಿ ಹಬ್ಬದ ಮೊದಲದಿನ.

ದೀಪಾವಳಿ ಹಬ್ಬವನ್ನು ಶ್ರೀ ರಾಮಚಂದ್ರನುರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದದಿನವೆಂದೂ... ಶ್ರೀ ಕೃಷ್ಣನು ನರಕಾಸುರನನ್ನು ಕೊಂದದಿನವೆಂದೂ ಆಚರಿಸುತ್ತಾರೆ.

ದೀಪೇನ ಲೋಕಾನ್ ಜಯತಿ ದೀಪಸ್ತೇಜೋಮಯ:ಸ್ಮೃತ: |
ಚರುರ್ವರ್ಗಪ್ರದೋ ದೀಪಸ್ತಸ್ಮಾದ್ ದೀಪೈರ್ಯಜೇತ್ಪ್ರಿಯೇ ||

ತೇಜೋಮಯವಾದ ದೀಪವು ಧರ್ಮ, ಅರ್ಥ, ಕಾಮ,ಮೋಕ್ಷ ರೂಪವಾದ ಚರುರ್ವರ್ಗಪ್ರದವಾಗಿದೆ ಹಾಗೂದೀಪವನ್ನು ಬೆಳಗಿಸು ಎಂದು ಈ ಶ್ಲೋಕವು ಸಾರುತ್ತದೆ.

ನರಕ ಚತುರ್ದಶಿಯು ದೀಪಾವಳಿಯ ಪ್ರಮುಖ ದಿನ.ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನುಶಾಸ್ತ್ರವು ಹೇಳಿರುತ್ತದೆ.

ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಂ ಚತುರ್ದಶಿ |
ಪ್ರಾತ: ಸ್ನಾನಂ ತು ಯ: ಕುರ್ಯಾದ್ಯಮಲೋಕಂ ನ ಪಶ್ಯತಿ||

ತೈಲದಲ್ಲಿ ಲಕ್ಷ್ಮೀದೇವಿಯೂ, ನೀರಿನಲ್ಲಿ ಗಂಗೆಯೂದೀಪಾವಳಿಯ ಚತುರ್ದಶಿಯಂದು ವಿಶೇಷವಾಗಿಸನ್ನಿಹಿತರಾಗಿರುತ್ತಾರೆ ಎಂದು ಶಾಸ್ತ್ರ ತಿಳಿಸುತ್ತದೆ.

ಅಂದುಬೆಳಿಗ್ಗೆ ಸುಮಂಗಲೆಯರಿಂದ ತೈಲವನ್ನು ಹಚ್ಚಿಸಿಕೊಂಡುಆರತಿ ಮಾಡಿಸಿಕೊಳ್ಳುವುದು ನಂತರ ಅಭ್ಯಂಜನವನ್ನುಮಾಡುವುದು ಈ ಹಬ್ಬದ ಪ್ರಮುಖ ಅಂಗ.

ಅಭ್ಯಂಗನಸ್ನಾನದ ನಂತರ ಹೊಸ ಬಟ್ಟೆ ಧರಿಸಿ, ಮನೆಯ ಹಿರಿಯರಿಗೆನಮಸ್ಕರಿಸಿ, ಸಿಹಿ ತಿಂದು ಪಟಾಕೆ ಹಚ್ಚುತ್ತಾರೆ ಮಕ್ಕಳು.....ಅಷ್ಟೇ ಅಲ್ಲದೆ ಅಂದು ನರಕಾಸುರನ ಸಂಹಾರ ಮಾಡಿಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ.

ಆಪದ್ಧತಿಯಂತೆ ಇಂದಿಗೂ ಆರತಿ ಮಾಡುವುದುಸಂಪ್ರದಾಯದಂತೆ ಬೆಳೆದು ಬಂದಿದೆ.

ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯಂದುರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವಉದ್ದೇಶದಿಂದ ಲಕ್ಷ್ಮೀ ಪೂಜೆಯನ್ನು ಮಾಡಿ,

ಮನೆಯತುಂಬಾ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ಈ ದಿನ ತುಂಬಾ ಪ್ರಶಸ್ತವಾದ ದಿನಲಕ್ಷ್ಮೀ ಪೂಜೆಗೆ.

ಇದು ಶ್ರೀ ಕೃಷ್ಣನು ದೇಹತ್ಯಾಗ ಮಾಡಿದದಿನವೆಂದೂ , ನಚೀಕೇತನಿಗೆ ಆತ್ಮ ಸಾಕ್ಷಾತ್ಕಾರವಾದದಿನವೆಂದೂ ಹೇಳುತ್ತಾರೆ.

ನಾಲ್ಕನೆಯ ದಿನವನ್ನು ಬಲಿ ಪಾಡ್ಯಮಿ ಎಂದುಕರೆಯುತ್ತಾರೆ.

ಐದನೆಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃದ್ವಿತೀಯಾ ಎಂದು ಆಚರಿಸುತ್ತಾರೆ.

ಈ ರೀತಿ ನಮ್ಮ ಸಂಸ್ಕೃತಿಯ ಸೊಬಗನ್ನು ನಾವು ಅರಿತುಶ್ರದ್ಧೆಯಿಂದ ಆಚರಿಸಿದರೆ ಈ ಸಡಗರದ-ಸಂಭ್ರಮದಹಬ್ಬಗಳು ಅರ್ಥಪೂರ್ಣವೆನಿಸುತ್ತವೆ ಮತ್ತು ಸಂಭ್ರಮದ,ಸಡಗರದ ವಾತಾವರಣ ಮನೆಯಲ್ಲಿ ಧನಾತ್ಮಕ ತರಂಗಗಳನ್ನು ಆಹ್ವಾನಿಸುತ್ತದೆ.
*****

ನರಕ_ಚತುರ್ದಶಿ
ನರಕಾಸುರನ ಸಂಹಾರ by narahari sumadhwa

ಆಶ್ವಯುಜ ಕೃಷ್ಣ ಪಕ್ಷ ಚತುರ್ದಶಿ ದಿನದಂದು ದೈತ್ಯ ನರಕಾಸುರನ ಸಂಹಾರವಾಯಿತು.  ಅವನ ಸಂಹಾರದಿಂದ ವಿಶ್ವವೇ ಸಂತಸಪಟ್ಟಿತು. ಆ ದಿನವನ್ನು ಹಬ್ಬವನ್ನಾಗಿ ಆಚರಿಸುವ ಸಂಪ್ರದಾಯ.  ಆ ನರಕಾಸುರ ಯಾರು, ಅವನ ಸಂಹಾರ ಯಾರು ಮಾಡಿದರು, ಏಕೆ ಮಾಡಿದರು ಎಂಬ ವಿವರ ಕೆಳಗೆ ಇದೆ
👇
☘️☘️☘️☘️☘️☘️☘️☘️

ಪರಮಾತ್ಮನ ವರಾಹಾವತಾರ ಕಾಲದಲ್ಲಿ ಭೂದೇವಿಯಲ್ಲಿ ಜನಿಸಿದ್ದ.  (ಪಂಚ ಭೂತಾಭಿಮಾನಿಗಳಲ್ಲಿ ಕೊನೆಯವಳು ಭೂದೇವಿ. ಸಾಕ್ಷಾತ್ ಲಕ್ಷ್ಮೀ ಅಲ್ಲ.)  ಮೂಲಪ್ರಕೃತಿಯಾದ ಮಹಾಲಕ್ಷ್ಮಿಯ ಭೂರೂಪದ ಆವೇಶ ಭೂದೇವಿಯಲ್ಲಿತ್ತು.  ಅವನು ಪ್ರಾಗ್ಜೋತಿಷಪುರದ ರಾಜನಾಗಿದ್ದ.  ಭೂದೇವಿಯ ಸುತನಾದ್ದರಿಂದ ಇವನನ್ನು ಭೌಮಾಸುರ ಎನ್ನುತ್ತಿದ್ದರು.  ನರಕಾಸುರನ ಬಳಿ ವೈಷ್ಣವಾಸ್ತ್ರ ಇತ್ತು, ಮತ್ತು ಅವನಿಗೆ ಬ್ರಹ್ಮದೇವರಿಂದ ಅವಧ್ಯತ್ವ ವರವಿದ್ದಿತು. ಆದ್ದರಿಂದ ಅವನನ್ನು ಯಾರೂ ಸೋಲಿಸಲಾಗುತ್ತಿರಲಿಲ್ಲ.  ದೇವ ಮಾತೆಯಾದ ಅದಿತಿಯ ಕುಂಡಲಿಗಳನ್ನು ಅಪಹರಿಸಿದ್ದ.    ಅವನು ಎಲ್ಲಾ ಪ್ರಸಿದ್ಧ ರಾಜರುಗಳನ್ನೂ ಸೋಲಿಸಿ  ಅವರ ಎಲ್ಲಾ ಪುತ್ರಿಯರನ್ನೂ ಅಪಹರಿಸಿದ್ದ.    ಹೀಗೆ ಅಪಹರಿಸಿದ್ದ ರಾಜಕುಮಾರಿಯರ‌ ಸಂಖ್ಯೆ16100.   ಈ ಎಲ್ಲಾ ರಾಜಕುಮಾರಿಯರೂ ಮೂಲತಃ: ಅಗ್ನಿಪುತ್ರರಾಗಿದ್ದು   ಸ್ತ್ರೀತ್ವ ಪಡೆದು ಕೃಷ್ಣನ ಮಡದಿಯರಾಗಬೇಕೆಂದು ತಪಸ್ಸು ಮಾಡಿ ಜನಿಸಿದ್ದರು.  ಈ ಎಲ್ಲಾ ರಾಜಕುಮಾರಿಯರೂ ನರಕಾಸುರನ ಬಂಧನದಲ್ಲಿದ್ದರು.  ಒಮ್ಮೆ ನಾರದರು ಇವರನ್ನು ಭೇಟಿಯಾಗಿ ಅತ್ಯಂತ ನಿಷ್ಠೆಯಿಂದ ಲಕ್ಷ್ಮೀ ವ್ರತ ಮಾಡಲು ಹೇಳಿದರು.  ಅದರಂತೆ ಸಂಪೂರ್ಣ ಇಂದ್ರಿಯ ನಿಗ್ರಹವುಳ್ಳವರಾಗಿ ವ್ರತವನ್ನು ಮಾಡಿದರು.  ವಾಯು ದೇವರು ಇವರ ತಪಸ್ಸಿಗೆ ಮೆಚ್ಚಿ ಶ್ರೀ ಕೃಷ್ಣನೇ ಪತಿಯಾಗುತ್ತಾನೆಂದು ಹೇಳಿದ್ದರು.

ಒಮ್ಮೆ ನಾರದರು  ಕೃಷ್ಣನ  ಹಿರಿಮಡದಿ ರುಕ್ಮಿಣೀದೇವಿಗೆ ಪಾರಿಜಾತ ಪುಷ್ಪವನ್ನು ನೀಡಿ ಶ್ರೀ ಕೃಷ್ಣ ಮತ್ತು ರುಕ್ಮಣಿಯರ ಮಹಿಮೆಯನ್ನು ಪ್ರಶಂಸಿದರು.  ಇದನ್ನು ನೋಡಿದ ಸತ್ಯಭಾಮೆ ತನ್ನನ್ನು ಹೊಗಳಲಿಲ್ಲ ಎಂದು ಕುಪಿತಳಾದಳು.   ಇದನ್ನು ಗಮನಿಸಿದ ಶ್ರೀ ಕೃಷ್ಣನು ನಿನಗೆ ಇಂದ್ರ ಲೋಕದಿಂದ ಪಾರಿಜಾತ ವೃಕ್ಷವನ್ನೇ ತಂದು ಕೊಡುತ್ತೇನೆ ಎಂದನು.  ಇಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆ ಇಬ್ಬರೂ ಸಾಕ್ಷಾತ್ ಲಕ್ಷ್ಮೀದೇವಿಯ ಶ್ರೀ ಮತ್ತು ಭೂ ರೂಪಗಳೇ.  ಅವರಿಬ್ಬರಿಗೂ ಯಾವುದೇ ವ್ಯತ್ಯಾಸವಿಲ್ಲ.  ಆದರೂ ಭೂಲೋಕದಲ್ಲಿ ಅವತಾರ ಮಾಡಿದುದರಿಂದ ಸವತಿ ಮತ್ಸರ ತೋರಿದ್ದಾರೆ ಎಂಬುದನ್ನು ಗಮನಿಸಬೇಕು.

ಇದೇ ಸಂದರ್ಭದಲ್ಲಿ ನರಕಾಸುರನಿಂದ ದೇವೇಂದ್ರನು ಪರಾಜಿತನಾಗಿ, ಎಲ್ಲಾ ದೇವತೆಗಳಿಂದ ಋಷಿಮುನಿ ಗಳಿಂದಲೂ ಕೂಡಿ ಕೃಷ್ಣನ ಸಹಾಯ ಕೋರಿದರು.   ಕೃಷ್ಣನು ಸತ್ಯಭಾಮಾ ಸಹಿತನಾಗಿ ಗರುಡನ ಏರಿ ಪ್ರಾಗ್ಜ್ಯೋತಿಷಪುರವನ್ನು ತಲುಪಿ , ಅಲ್ಲಿ ಇದ್ದ ಎಲ್ಲಾ ದುರ್ಗಗಳನ್ನೂ ಭೇದಿಸಿ, ಐದು ಮುಖದ ಮುರಾಸುರನ ಸಂಹರಿಸಿ, ಮುರಾರಿ ಎನಿಸಿದನು.  ಆಗ ನರಕಾಸುರ ತನ್ನ  30 ಅಕ್ಷೋಹಿಣಿ ಸೈನ್ಯ ಸಮೇತನಾಗಿ ಯುದ್ಧಕ್ಕೆ ಬಂದು, ಬ್ರಹ್ಮದೇವರು ನೀಡಿದ್ದ ಶತಘ್ನಿ ಎಂಬ ಗದೆಯನ್ನು ಕೃಷ್ಣನ ಮೇಲೆ ಎಸೆಯಲು, ತಾನು ಸ್ವತಃ ಅಭೇದ್ಯ, ಅಚ್ಚೇಧ್ಯನಾದರೂ ಅಪ್ರಾಕೃತ ಶರೀರಿಯಾದರೂ, ಆ ಗದಾ ಪ್ರಹಾರದಿಂದ  ಶ್ರಮಗೊಂಡವನಂತೆ ನಟಿಸುತ್ತ ಮೂರ್ಛಿತನಾದನು.  ಆಗ ಸತ್ಯಭಾಮೆಯು ಕೃಷ್ಣನ ಶಾಂಜ್ಞ ಬಿಲ್ಲನ್ನು ಹಿಡಿದು ನರಕಾಸುರನ ಸೋಲಿಸಿದಳು. (ಇಲ್ಲಿ ಲಕ್ಷ್ಮೀದೇವಿಯ ಭೂರೂಪದ ಆವಿಷ್ಟ ರೂಪದ ಮಗ ನರಕಾಸುರ ಮತ್ತು ಸಾಕ್ಷಾತ್ ಲಕ್ಷ್ಮೀ ದೇವಿಯ ಭೂರೂಪದ ಅವತಾರಳಾದ ಸತ್ಯಭಾಮೆಯಿಂದಲೇ ಪರಾಜಿತನಾದ ನರಕಾಸುರ ಎಂಬುದು ಗಮನಾರ್ಹ). ನಂತರ ಕೃಷ್ಣ ಪರಮಾತ್ಮ ಮೇಲೆದ್ದು ತನ್ನ ಸುದರ್ಶನ ಚಕ್ರದಿಂದ ನರಕಾಸುರನ ಶಿರಸ್ಸು ಛೇದಿಸಿದನು.  ನಂತರ ಕೃಷ್ಣ ಸತ್ಯಭಾಮೆಯೊಂದಿಗೆ ನರಕಾಸುರನ ಅಂತ:ಪುರ ಪ್ರವೇಶಿಸಿ ಅಲ್ಲಿ ನರಕಾಸುರನ ತಾಯಿ ಭೂದೇವಿಯಿಂದ ಅದಿತಿಯ ಕುಂಡಲಗಳನ್ನು ಪಡೆದು, ಇಂದ್ರನಿಗಿತ್ತು, ನರಕಾಸುರನ ಪುತ್ರ ಭಗದತ್ತನನ್ನು ರಾಜನಾಗಿ ನೇಮಿಸಿದನು.  ನರಕಾಸುರನಿಂದ ಬಂಧಿತ ೧೬೧೦೦ ರಾಜಕುವರಿಯರನ್ನೂ ಬಂಧ ವಿಮೋಚನೆಗೊಳಿಸಿದನು.  ಶ್ರೀಕೃಷ್ಣ ಭಗದತ್ತನಿಗೆ ಆದೇಶಿಸುತ್ತಾನೆ – ” ಈ ಎಲ್ಲಾ ರಾಜಕುವರಿಯರಿಗೂ ಅಭ್ಯಂಜನ ಸ್ನಾನ ಮಾಡಿಸಿ, ಶ್ರೇಷ್ಠ ಉಡುಗೆ ತೊಡುಗೆ ಕೊಟ್ಟು ಕಳುಹಿಸು”. ಆಗ ಭೂದೇವಿ ತನ್ನ ಮಗ ನರಕಾಸುರನ ಕೊಂದ ರಾಜಕುಮಾರಿಯನ್ನು ವಿಮೋಚನೆ ಮಾಡಿಸಿದ ನೆನಪಿಗಾಗಿ ಈ ದಿನವನ್ನು ಹಬ್ಬವನ್ನಾಗಿ ಆಚರಿಸಬೇಕೆಂದು ಕೋರಿದಳು.

ಏಕೆ ಅಭ್ಯಂಜನವನ್ನು ಮಾಡಿಕೊಳ್ಳಬೇಕು ? –

ಈ ದಿನ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ನರಕಾಸುರನು ಒಂದು ವರವನ್ನು ಕೇಳುತ್ತಾನೆ.  “ನನ್ನ ಸಂಹಾರದ ನೆನಪಿಗಾಗಿ ಎಲ್ಲರೂ ಅಭ್ಯಂಜನವನ್ನು ಮಾಡಬೇಕು ಮತ್ತು ದೀಪ ಪ್ರಜ್ವಲನವನ್ನು ಮಾಡಬೇಕು” ಎಂದು ಕೇಳಿದುದರಿಂದ ಕೃಷ್ಣನು ಹಾಗೆಯೇ ಆಗಲಿ ಎಂದು ಅನುಗ್ರಹಿಸಿದ್ದನು.   ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು.  ಅದನ್ನು ತೊಳೆದುಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು.  ಅದರಂತೆ ಈದಿನ ಹಬ್ಬವನ್ನಾಗಿ ಆಚರಿಸಿ, ಅಭ್ಯಂಜನ ಮಾಡಿ ಕೊಳ್ಳುವ ಪರಿಪಾಠವಿದೆ.  ನರಕಾಸುರ ಸಾಯುವ ಮುನ್ನ ಈ ದಿನವನ್ನು ಬಣ್ಣಬಣ್ಣದ ದೀಪಗಳನ್ನು ಹಚ್ಚಿ ಆಚರಿಸಬೇಕೆಂದು ಕೋರಿದನು.  ಅದರಂತೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ.

ನರಹರಿ ಸುಮಧ್ವ
ಸುಮಧ್ವ ಸೇವಾ
***

ಕಥೆ

'ಒಂದು ಕಾಲದಲ್ಲಿ ಪ್ರಾಗ್ಜ್ಯೋತಿಷಪುರದಲ್ಲಿ   ನರಕಾಸುರ ಎಂಬ ಬಲಿಷ್ಠ ಅಸುರನು ರಾಜ್ಯವಾಳುತ್ತಿದ್ದನು. ಮಾನವರಿಗೆ ಮತ್ತು ದೇವತೆಗಳಿಗೆ ಇವನು ತುಂಬಾ ಪೀಡೆ ಕೊಡುತ್ತಿದ್ದನು. ಈ ದುಷ್ಟನು ಸ್ತ್ರೀಯರಿಗೂ ಪೀಡಿಸಲಾರಂಭಿಸಿದ್ದನು. ಅವನು ಹದಿನಾರು ಸಾವಿರಕ್ಕೂ ಹೆಚ್ಚು ರಾಜ ಕನ್ಯೆಯರನ್ನು ಅಪಹರಿಸಿ ತಂದು, ಅವರನ್ನು ಸೆರೆಮನೆಯಲ್ಲಿ ಇಟ್ಟು, ಅವರನ್ನು ಮದುವೆಯಾಗಲು ಮುಂದಾದನು. ಇದರಿಂದ ಎಲ್ಲೆಡೆ ಹಾಹಾಕಾರವಾಗತೊಡಗಿತು. ಶ್ರೀಕೃಷ್ಣನಿಗೆ ಈ ವಿಷಯ ತಿಳಿದಾಕ್ಷಣ ಸತ್ಯಭಾಮೆಯೊಂದಿಗೆ ಅಸುರನ ವಿರುದ್ಧ ಯುದ್ಧ ಸಾರಿದನು. ನರಕಾಸುರನನ್ನು ವಧಿಸಿ, ಅವನು ಬಂಧಿಸಿಟ್ಟ ರಾಜ ಕನ್ಯೆಯರನ್ನು ಬಂಧಮುಕ್ತಗೊಳಿಸಿದನು.

ತನ್ನ ಕೊನೆಯುಸಿರು ಎಳೆಯುವಾಗ ನರಕಾಸುರನು ಶ್ರೀ ಕೃಷ್ಣನಲ್ಲಿ ಒಂದು ವರವನ್ನು ಕೇಳಿ ಪಡೆದುಕೊಂಡನು. 'ಈ ದಿನ (ತಿಥಿಯಂದು) ಯಾರು ಅಭ್ಯಂಗ ಸ್ನಾನವನ್ನು ಮಾಡುವರೋ, ಅವರಿಗೆ ನರಕ ಪ್ರಾಪ್ತಿಯಾಗಬಾರದು' ಎಂಬುವುದು ಆ ವರವಾಗಿತ್ತು. ಚತುರ್ದಶಿಯಂದು ನರಕಾಸುರನನ್ನು ವಧಿಸಿ ಬಂದ ಕೃಷ್ಣನಿಗೆ  ರುಕ್ಮಿಣಿ ಸಹಿತ ಎಲ್ಲರೂ ಆರತಿಯನ್ನು ಮಾಡುತ್ತಾರೆ.   ಶ್ರೀಕೃಷ್ಣನಿಗೆ ನಂದನು ಅಭ್ಯಂಗ ಸ್ನಾನ ಮಾಡಿಸಿದನು. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಆದುದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ, ಜನರು ಈ ದಿನದಂದು ಸೂರ್ಯೋದಯವಾಗುವ ಮುಂಚೆ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ.

**********
read more here
bali padyami    BALI PADYAMI
karteeka maasa          KARTEEKA MASA

uttan dwadashi or tulasi fest        TULASI FESTdhatri havana      DHATRI HAVANA















c
Why does Diwali come exactly 21 days after Dussehra every year?  If you don't believe, check the calendar. Valmiki sage says that it took 21 days (504 hours) to reach Ayodhya on foot from Sri Lanka for Lord Ramachandra's army !!!!  So 504 hours divided by 24 hours, the answer will be 21.00 is 21 days. 
I was surprised. To confirm, I searched on Google map out of curiosity. I was shocked to see the distance from Sri Lanka to Ayodhya on foot is 3145 km and time taken to walk is 504 hr !!!! 
Google Map is completely reliable these days. We celebrate Dussehra and Diwali since Tretayug, according to the tradition.  
If you don't believe me, do a Google search and share this information with others.  Valmiki sage had written Ramayana with accuracy. How great is our Hindu culture.Be proud of being born in Hindu culture! 
 Jai Shriram. Jai Shriram.
🙏🙏

|******

cಅಕ್ಕನ ತದಿಗೆಯ ಹಿರಿಮೆ🌹🌹

 ಅಕ್ಕನ ತದಿಗೆ
 ಅಕ್ಕರದ ಅಣ್ಣ ತಮ್ಮನ ಕೂಡ
ನಕ್ಕು ನಲಿಯುವ ಹಬ್ಬ ಮನ 
ಉಕ್ಕಿ ನಮಿಸುತ್ತ
 ಮುಕ್ಕು ಅವಲಕ್ಕಿಗೊಲಿದವನ
 ಲೆಕ್ಕ ವಿಲ್ಲದ ಭಾಗ್ಯ ಕೊಟ್ಟವನ
ಚಿಕ್ಕ ಸುಭದ್ರಿಯ ಅಣ್ಣನ
 ಹಕ್ಕಿವಾಹನನ ನೆನೆಯುತ್ತ
 ಪಕ್ವಾನ್ನಗಳ  ಮಾಡಿ
 ಸಕ್ಕರೆ  ನೊರೆಹಾಲ  ಪಾಯಸಗಳ ಮಾಡಿ
 ಸಿಕ್ಕಷ್ಟು ಬಿರುಸು ಬಾಣಗಳ ಬಿಟ್ಟು
 ಅಕ್ಕರೆಯಿಂದ
ಮಕ್ಕಳ ಒಡಗೂಡಿ  ದೇ
ವಕ್ಕಿ ಸುತನ ನೆನೆದು ಭುಂಜಿಸಿ
ದಿಕ್ಕುದಿಕ್ಕಿಲಿ ಹರಿಯ ಧ್ಯಾನಿಸಿ
 ತಕ್ಕತಕ್ಕ ಕುಣಿವ ಕೃಷ್ಣನ
ರಕ್ಕಸಾಂತಕನ ಗುಣವ ಹಾಡಿ
 ಬೊಕ್ಕಸದ ಭಾಗ್ಯವು 
ದಕ್ಕಿಸಿಕೊಳ್ಳುವಂತೆ 
ಠಕ್ಕತನವ ಮಾಡಿದವನ ಒಲುಮೆ
ಸಿಕ್ಕಷ್ಟು ಸಿಗಲೆಂದು ಪ್ರಾರ್ಥಿಸುವೆ. 
~~~ಮಧ್ವೇಶಕೃಷ್ಣ.
****


ಪ್ರತಿ ವರ್ಷ ದಸರಾ ನಂತರ ಕೇವಲ 21 ದಿನಗಳ ನಂತರ ದೀಪಾವಳಿ ಏಕೆ ಬರುತ್ತದೆ?

            ನೀವು ಎಂದಾದರೂ ಈ ಬಗ್ಗೆ ಯೋಚಿಸಿದ್ದೀರಾ?
             ನೀವು ನನ್ನನ್ನು ನಂಬದಿದ್ದರೆ, ಕ್ಯಾಲೆಂಡರ್ ನೋಡಿ.

               ಶ್ರೀರಾಮನು ತನ್ನ ಇಡೀ ಸೈನ್ಯವನ್ನು ಶ್ರೀಲಂಕಾದಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ನಡೆಯಲು 504 ಗಂಟೆಗಳನ್ನು ತೆಗೆದುಕೊಂಡಿದ್ದಾನೆ ಎಂದು ವಾಲ್ಮೀಕಿ ರಿಷಿ ರಾಮಾಯಣದಲ್ಲಿ ಬರೆದಿದ್ದಾರೆ.

      ಈಗ ನಾವು 504 ಗಂಟೆಗಳನ್ನು 24 ಗಂಟೆಗಳಿಂದ ಭಾಗಿಸಿದರೆ ಉತ್ತರ 21 ಅಂದರೆ ಇಪ್ಪತ್ತೊಂದು ದಿನಗಳು !!!

  ನನಗೂ ಆಶ್ಚರ್ಯವಾಯಿತು.  ಏನು ಹೇಳಲಾಗಿದೆ ಎಂದು ಯೋಚಿಸುತ್ತಾ, ನಾನು ಕುತೂಹಲದಿಂದ ಗೂಗಲ್ ಮ್ಯಾಪ್ ನಲ್ಲಿ ಹುಡುಕಿದೆ.

  .  ಇದು ಶ್ರೀಲಂಕಾದಿಂದ ಅಯೋಧ್ಯೆಗೆ ವಾಕಿಂಗ್ ದೂರ 3145 ಕಿಮೀ ಮತ್ತು ತೆಗೆದುಕೊಂಡ ಸಮಯ 504 ಗಂಟೆಗಳು ಎಂದು ತೋರಿಸುತ್ತದೆ.

  .  ಇದು ಆಶ್ಚರ್ಯಕರವಲ್ಲವೇ?

            ಪ್ರಸ್ತುತ, Google ನಕ್ಷೆಗಳನ್ನು ಸಂಪೂರ್ಣವಾಗಿ ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ.
      
               ಆದರೆ ನಾವು ಭಾರತೀಯರು ತ್ರೇತಾಯುಗದಿಂದ ದಸರಾ ಮತ್ತು ದೀಪಾವಳಿ ಆಚರಿಸುತ್ತಿದ್ದೇವೆ ಮತ್ತು ಸಂಪ್ರದಾಯದ ಪ್ರಕಾರ ಆಚರಿಸುತ್ತಿದ್ದೇವೆ.  ಈ ಸಮಯದ ಗಣಿತವನ್ನು ನೀವು ನಂಬದಿದ್ದರೆ, ನೀವು Google ನಲ್ಲಿ ಹುಡುಕಬಹುದು ಮತ್ತು ನೋಡಬಹುದು.
          
ಈ ಆಸಕ್ತಿದಾಯಕ ಮಾಹಿತಿಯನ್ನು ಇತರರಿಗೂ ನೀಡಿ.
        
ನಿಮ್ಮ ಸನಾತನ ಹಿಂದೂ ಸಂಸ್ಕೃತಿ ಎಷ್ಟು ಶ್ರೇಷ್ಠವಾಗಿದೆ.
   
 ಇಂತಹ ಶ್ರೇಷ್ಠ ಹಿಂದೂ ಸಂಸ್ಕೃತಿಯಲ್ಲಿ ಜನಿಸಿದ ಬಗ್ಗೆ ನಮಗೆ ಹೆಮ್ಮೆ ಇದೆ.

 || ಜೈ ಶ್ರೀ ರಾಮ್ ||
***


lakshmi puja
ಲಕ್ಷ್ಮಿ ದೇವಿಯ ಬಗ್ಗೆ ನಿಮಗೆಷ್ಟು ಗೊತ್ತು..? ಈಕೆಯ ಪೂಜೆಯಲ್ಲಿ ಪಠಿಸುವ ಮಂತ್ರಗಳಿವು..!

ಲಕ್ಷ್ಮಿ ದೇವಿಯು ಸಂಪತ್ತಿನ ಅಧಿ ದೇವತೆಯಾದರೆ, ಮತ್ತೊಂದೆಡೆ ಭಗವಾನ್‌ ವಿಷ್ಣುವಿನ ಪತ್ನಿ. ಅಷ್ಟು ಮಾತ್ರವಲ್ಲ, ಲಕ್ಷ್ಮಿ ದೇವಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು ಸಾಕಷ್ಟಿವೆ... ಆ ವಿಶೇಷ ಸಂಗತಿಗಳಾವುವು..?

ಹಿಂದೂ ಧರ್ಮೀಯರು, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಮತ್ತು ಅದೃಷ್ಟದ ದೇವತೆ ಎಂದು ಪರಿಗಣಿಸುತ್ತಾರೆ. ಮತ್ತೊಂದೆಡೆ, ಸಾಪ್ತಾಹಿಕ ದಿನಗಳಲ್ಲಿ ಅವರ ದಿನವನ್ನು ಶುಕ್ರವಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿನದಂದು ನಾವು ನಿಮಗೆ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಒಂದಿಷ್ಟು ಸರಳ ಮಾರ್ಗಗಳನ್ನು ಹೇಳುತ್ತೇವೆ. 'ಶ್ರೀ' ಅಥವಾ 'ಲಕ್ಷ್ಮಿ' ಯನ್ನು ವೇದಗಳಲ್ಲಿ ಸಂಪತ್ತು ಮತ್ತು ಅದೃಷ್ಟ, ಶಕ್ತಿ ಮತ್ತು ಸೌಂದರ್ಯದ ದೇವತೆಯಾಗಿ ಚಿತ್ರಿಸಲಾಗಿದೆ. ತನ್ನ ಮೊದಲ ಅವತಾರದಲ್ಲಿ, ಪುರಾಣಗಳ ಪ್ರಕಾರ, ಅವಳು ಭೃಗು ಋಷಿಯ ಮುದ್ದಿನ ಮಗಳಾಗಿದ್ದಳು. ಅವಳು ನಂತರ ಸಮುದ್ರದ ಮಂಥನದ ಸಮಯದಲ್ಲಿ ಸಾಗರದಿಂದ ಜನಿಸಿದಳು. ಭಗವಾನ್ ವಿಷ್ಣು ಅವತಾರ ಮಾಡಿದಾಗ ವಿಷ್ಣುವಿನ ಹೆಂಡತಿಯಾಗಿ, ಅವಳು ಆತನ ಜೀವನ ಸಂಗಾತಿಯಾಗಿ ಜನ್ಮ ತೆಗೆದುಕೊಳ್ಳುತ್ತಾಳೆ. ಭಗವಾನ್ ವಿಷ್ಣು ವಾಮನ, ರಾಮ ಮತ್ತು ಕೃಷ್ಣನಂತೆ ಕಾಣಿಸಿಕೊಂಡಾಗ ಅವಳು ಪದ್ಮ (ಅಥವಾ ಕಮಲಾ), ಸೀತಾ ಮತ್ತು ರುಕ್ಮಣಿಯಾಗಿ ಕಾಣಿಸಿಕೊಂಡಳು.

​ಲಕ್ಷ್ಮಿಯ ಅರ್ಥ

ಹಿಂದೂಗಳಲ್ಲಿ, ಲಕ್ಷ್ಮಿ ದೇವಿಯೆಂದರೆ ಅದೃಷ್ಟದ ದೇವತೆ. 'ಲಕ್ಷ್ಮಿ' ಎಂಬ ಪದವು ಸಂಸ್ಕೃತ ಪದ "ಲಕ್ಷ್ಯ" ದಿಂದ ಬಂದಿದೆ, ಇದರರ್ಥ ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆ. ಇದಲ್ಲದೆ ಅವಳು ಶುದ್ಧತೆ, ಔದಾರ್ಯ ಮತ್ತು ಸೌಂದರ್ಯ, ಅನುಗ್ರಹ ಮತ್ತು ಆಕರ್ಷಣೆಯ ದೇವತೆಯೂ ಹೌದು. ಲಕ್ಷ್ಮಿ ದೇವಿಯ ಆರಾಧನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಪ್ರದಾಯದ ಒಂದು ಭಾಗವಾಗಿದೆ. ಲಕ್ಷ್ಮಿ ದೇವಿಯನ್ನು ತಾಯಿಯಂತೆ ಪರಿಗಣಿಸಲಾಗುತ್ತದೆ, ಆದ್ದರಿಂದ ಅವಳನ್ನು "ದೇವಿ" (ದೇವತೆ) ಬದಲಿಗೆ "ಮಾತಾ" (ತಾಯಿ) ಎಂದು ಸಂಬೋಧಿಸಲಾಗುತ್ತದೆ. ಅದೃಷ್ಟದ ಜೊತೆಗೆ ಸಂಪತ್ತು ಮತ್ತು ಧಾನ್ಯಗಳನ್ನು ಪಡೆಯಲು ಅಥವಾ ಸಂರಕ್ಷಿಸಲು ಬಯಸುವವರು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ.

ಲಕ್ಷ್ಮಿ ದೇವಿಯು ವಿಷ್ಣುವಿನ ಸಕ್ರಿಯ ಶಕ್ತಿಯಾಗಿದ್ದಾಳೆ. ಅವಳ ನಾಲ್ಕು ಕೈಗಳು ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ದಯಪಾಲಿಸುವ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಜೈನ ಸ್ಮಾರಕಗಳಲ್ಲಿ ಲಕ್ಷ್ಮಿಯ ಪ್ರಾತಿನಿಧ್ಯವೂ ಕಂಡುಬರುತ್ತದೆ. ಟಿಬೆಟ್, ನೇಪಾಳ ಮತ್ತು ಆಗ್ನೇಯ ಏಷ್ಯಾದ ಬೌದ್ಧ ಪಂಥಗಳಲ್ಲಿ, ವಸುಧಾರಾ ದೇವಿಯು ಹಿಂದೂ ದೇವತೆ ಲಕ್ಷ್ಮಿಯ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತಾಳೆ. ಆದರೆ ಇವರಲ್ಲಿ ಸಣ್ಣ ಸಾಂಕೇತಿಕ ವ್ಯತ್ಯಾಸಗಳಿವೆ.

​ದೇವತೆ ಲಕ್ಷ್ಮಿ ಪ್ರತಿಮೆ

ಲಕ್ಷ್ಮಿಯ ಚಿತ್ರದಲ್ಲಿ, ಅವಳನ್ನು ಸಾಮಾನ್ಯವಾಗಿ ಆಕರ್ಷಕವಾಗಿ ಸುಂದರವಾಗಿ ವಿವರಿಸಲಾಗಿದೆ ಮತ್ತು ಸರೋವರದ ಮೇಲೆ ತೆರೆದ ಎಂಟು ದಳಗಳ ಕಮಲದ ಹೂವಿನ ಮೇಲೆ ಕುಳಿತು ಅಥವಾ ನಿಂತು ಅವಳ ಎರಡೂ ಕೈಗಳಲ್ಲಿ ಕಮಲವನ್ನು ಹಿಡಿದಿದ್ದಾಳೆ. ಈ ಕಾರಣಕ್ಕಾಗಿ ಆಕೆಗೆ ಪದ್ಮ ಅಥವಾ ಕಮಲಾ ಎಂಬ ಹೆಸರು ಬಂದಿದೆ ಎನ್ನುವ ನಂಬಿಕೆಯಿದೆ. ಅವಳು ಕಮಲದ ಹಾರವನ್ನು ಸಹ ಅಲಂಕರಿಸಿದ್ದಾಳೆ. ಆಗಾಗ್ಗೆ ಅವುಗಳ ಎರಡೂ ಬದಿಗಳಲ್ಲಿ ಆನೆಗಳು ಮಡಿಕೆಯಲ್ಲಿ ನೀರನ್ನು ಚೆಲ್ಲುತ್ತಿರುವಂತೆ ಕೂಡ ಚಿತ್ರಿಸಲಾಗಿದೆ. ಈಕೆಯ ಬಣ್ಣವನ್ನು ಗಾಢ, ಗುಲಾಬಿ, ಚಿನ್ನ, ಹಳದಿ ಅಥವಾ ಬಿಳಿ ಎಂದು ವಿವರಿಸಲಾಗಿದೆ. ಆದರೆ ವಿಷ್ಣುವಿನ ಬಳಿ ಇದ್ದಾಗ ಆಕೆಯನ್ನು ಕೇವಲ 2 ಕೈಗಳಿಂದ ಚಿತ್ರಿಸಲಾಗಿದೆ.

ಈಕೆಯ ನಾಲ್ಕು ಕೈಗಳು ಪದ್ಮ, ಶಂಖ ಚಿಪ್ಪು, ಅಮೃತದ ಕಲಶ ಮತ್ತು ಬಿಲ್ವಾ ಹಣ್ಣುಗಳನ್ನು ಹಿಡಿದಿರುತ್ತವೆ. ಕೆಲವೊಮ್ಮೆ, ಬಿಲ್ವಾ ಬದಲಿಗೆ, ಮತ್ತೊಂದು ರೀತಿಯ ಹಣ್ಣನ್ನು ಕೂಡ ಹಿಡಿದಿರುತ್ತಾಳೆ. ಅವಳ ಕೈಯಿಂದ ಚಿನ್ನದ ನಾಣ್ಯಗಳು ಬೀಳುವುದನ್ನು ಕೂಡ ನೀವು ನೋಡಿರಬಹುದು. ಲಕ್ಷ್ಮಿಯ ಈ ರೂಪವನ್ನು ಆರಾಧಿಸುವವರು ಸಂಪತ್ತನ್ನು ಸಾಧಿಸುತ್ತಾರೆ ಎನ್ನುವ ನಂಬಿಕೆಯೂ ಇದೆ. ಅವಳನ್ನು ಎಂಟು ಕೈಗಳಿಂದ ತೋರಿಸಿದಾಗ, ಅವಳ ಕೈಗಳಲ್ಲಿ ಬಿಲ್ಲು-ಬಾಣ, ಜಟಿಲ ಮತ್ತು ಚಕ್ರವನ್ನು ಜೋಡಿಸಲಾಗುತ್ತದೆ. ಲಕ್ಷ್ಮಿಯು ಈ ರೂಪದಲ್ಲಿ ದುರ್ಗಾ ದೇವಿಯಂತೆ ಕಾಣುತ್ತಾಳೆ. ದುರ್ಗೆಯು ಮಹಾಲಕ್ಷ್ಮಿಯ ಒಂದು ಅಂಶವಾಗಿದ್ದಾಳೆ.

​ಲಕ್ಷ್ಮಿ ದೇವಿಯ ಚಿತ್ರ

ಲಕ್ಷ್ಮಿ ದೇವಿಯನ್ನು ಚಿನ್ನ ಅಥವಾ ಹಳದಿ ಬಣ್ಣದಲ್ಲಿ ಚಿತ್ರಿಸಿದರೆ, ಅದು ಅವಳನ್ನು ಎಲ್ಲಾ ಸಂಪತ್ತಿನ ಮೂಲವೆಂದು ಸೂಚಿಸುತ್ತದೆ. ಬಿಳಿಯಾಗಿದ್ದರೆ, ಪ್ರಕೃತಿಯ ಶುದ್ಧ ಸ್ವರೂಪವನ್ನು ಪ್ರತಿನಿಧಿಸುತ್ತದೆ. ಗುಲಾಬಿ ಬಣ್ಣವು ಹೆಚ್ಚು ಸಾಮಾನ್ಯವಾಗಿದೆ, ಅವಳು ಎಲ್ಲರ ತಾಯಿಯಾಗಿರುವುದರಿಂದ ಜೀವಿಗಳ ಬಗ್ಗೆ ಅವಳ ಸಹಾನುಭೂತಿಯನ್ನು ಸೂಚಿಸುತ್ತದೆ. ಕಮಲದ ಹೂವಿನ ವಿವಿಧ ಹಂತಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ಜಗತ್ತು ಮತ್ತು ಜೀವಿಗಳನ್ನು ಪ್ರತಿನಿಧಿಸುತ್ತವೆ.

​ಲಕ್ಷ್ಮಿಯ ಕೈಯಲ್ಲಿ ಹಣ್ಣುಗಳು

- ಚಿತ್ರದಲ್ಲಿ ಮಾತಾ ಲಕ್ಷ್ಮಿ ತನ್ನ ಕೈಯಲ್ಲಿ ತೆಂಗಿನಕಾಯಿ, ಶಂಖ, ನೀರು ಇತ್ಯಾದಿಗಳನ್ನು ಹಿಡಿದಿದ್ದರೆ ಆಕೆ ಸೃಷ್ಟಿಯ ಮೂರು ಹಂತಗಳನ್ನು ಸೂಚಿಸುತ್ತಿದ್ದಾಳೆ ಎಂದರ್ಥ. - ಮತ್ತೊಂದೆಡೆ, ಅವಳ ಕೈಯಲ್ಲಿ ದಾಳಿಂಬೆ ಅಥವಾ ನಿಂಬೆ ಇದ್ದರೆ, ಅದು ಇಡೀ ಜಗತ್ತು ತನ್ನ ನಿಯಂತ್ರಣದಲ್ಲಿದೆ ಎಂದು ತೋರಿಸುತ್ತದೆ ಮತ್ತು ಅವಳು ಅವೆಲ್ಲವನ್ನೂ ಜಯಿಸುತ್ತಾಳೆ.

- ಅವಳು ಕೈಯಲ್ಲಿ ಬಿಲ್ವಾ ಹಣ್ಣನ್ನು ಹಿಡಿದಿದ್ದರೆ, ಅದು ಪ್ರಾಸಂಗಿಕವಾಗಿ, ತುಂಬಾ ಟೇಸ್ಟಿ ಅಥವಾ ಆಕರ್ಷಕವಾಗಿಲ್ಲ, ಆದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು - ಇದು ಮೋಕ್ಷಕ್ಕಾಗಿ ಮತ್ತು ಆಧ್ಯಾತ್ಮಿಕ ಜೀವನದ ಅತ್ಯುನ್ನತ ಫಲವಾಗಿದೆ.

- ಲಕ್ಷ್ಮಿ ದೇವಿಯ ನ್ನುಕೆಲವು ಶಿಲ್ಪಗಳಲ್ಲಿ, ಗೂಬೆಯನ್ನು ಅವಳ ವಾಹಕ-ವಾಹನವೆಂದು ತೋರಿಸಲಾಗಿದೆ. ಅದೇ ಸಮಯದಲ್ಲಿ, ಲಕ್ಷ್ಮಿ ದೇವಿಯ ವಾಹನವನ್ನು ನವಿಲು ಎಂದೂ ಕೂಡ ಚಿತ್ರಿಸಲಾಗಿದೆ.

​ಲಕ್ಷ್ಮಿ ಬೀಜ ಮಂತ್ರ

''ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ''

​ಮಹಾಲಕ್ಷ್ಮಿ ಮಂತ್ರ

''ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್‌ ಪ್ರಸೀದ್‌

ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ||''

''ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್‌''

''ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೇ ನಮಃ''

​ಲಕ್ಷ್ಮಿ ಗಾಯತ್ರಿ ಮಂತ್ರ

''ಓಂ ಶ್ರೀ ಮಹಾಲಕ್ಷ್ಮೈ ಚ ವಿಧ್ಮಹೇ ವಿಷ್ಣುಪತ್ನೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್‌

ಓಂ ಶ್ರೀ ಮಹಾಲಕ್ಷ್ಮೈ ಚ ವಿಧ್ಮಹೇ ವಿಷ್ಣುಪತ್ನೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್‌ ''
***
ಕಾರ್ತಿಕ ಮಾಸದಲ್ಲಿ ತುಪ್ಪದ ದೀಪ ಅರ್ಪಿಸುವ ವೈಭವ
ಸ್ಕಂದ ಪುರಾಣ 

ಶ್ರೀ ಬ್ರಹ್ಮ-ನಾರದಮನಿಗಳ ಸಂವಾದ

1) ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನೀಗೆ ತುಪ್ಪದ ದೀಪ ಅರ್ಪಿಸುವುದರಿಂದ ಸಾವಿರಾರು ಜನ್ಮಗಳ ಪಾಪಗಳು ತೊಡೆದು ಹೋಗುತ್ತವೆ.

2)ಯಾವುದೇ ಮಂತ್ರ ಪಠಿಸದಿರಬಹುದು, ಪುಣ್ಯ ಕಾರ್ಯ ಮಾಡದಿರಬಹುದು, ಮತ್ತು ಪರಿಶುದ್ಧತೆ ಆಚರಿಸದಿರಬಹುದು, ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಬೆಳಗಿದರೆ ಎಲ್ಲವೂ ಪರಿಪೂರ್ಣತೆ ಹೊಂದುತ್ತದೆ. 

3)ಕಾರ್ತಿಕ ಮಾಸದಲ್ಲಿ ಕೇಶವನಿಗೆ ತುಪ್ಪದ ದೀಪ ಹಚ್ಚುವುದು ಯಜ್ಞಗಳ ಆಚರಣೆ ಮತ್ತು ಎಲ್ಲಾ ನದಿಗಳಲ್ಲಿ ಪವಿತ್ರ ಸ್ನಾನ ಮಾಡುವುದಕ್ಕೆ ಸಮ.

4) ಕಾರ್ತಿಕ ಮಾಸದಲ್ಲಿ ಯಾರಾದರೂ ಶ್ರೀ ಕೇಶವನಿಗೆ ತುಪ್ಪದ ದೀಪ ಅರ್ಪಿಸಿ ಸಂತೃಪ್ತಗೊಳಿದರೆ ಅವರ ಕುಟುಂಬದ ಪೂರ್ವಜರು ಮುಕ್ತಿ ಪಡೆಯುವರು.

5) ಈ ಕಾರ್ತಿಕ ಮಾಸದಲ್ಲಿ ದಾಮೋದರನಿಗೆ ಅಂದರೆ ಕೃಷ್ಣನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ಅವರು ವೈಭವಹೊಂದಿ ಅದೃಷ್ಟವಂತರಾಗುವರು.

6) ಯಾರು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪ ಅರ್ಪಿಸಿದರೆ, ಶ್ರೀ ವಾಸುದೇವನು ಅವರಿಗೆ ಒಳ್ಳೆಯ ಫಲಿತಾಂಶ ನೀಡುವನು.

7) ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ಪುನೀತವಾಗದಂತಹ ಪಾಪಗಳು ಮೂರು ಲೋಕಗಳಲ್ಲಿಯೂ ಇಲ್ಲ. 

8) ಈ ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ವ್ಯಕ್ತಿಯು ಯಾವುದೇ ಸಂಕಷ್ಟಗಳಿಲ್ಲದೇ ಶಾಶ್ವತವಾದ ಆಧ್ಯಾತ್ಮಿಕ ಜಗತ್ತನ್ನು ಹೊಂದುವನು.

ಹಿಂದೂಗಳಿಗೆ ಕಾರ್ತಿಕ ಮಾಸ ಮಹತ್ವವಾದದ್ದು 
ಹಾಗೂ ಅಧ್ಯಾತ್ಮ ಸಾಧಕರ ಮಾಸ

ಕಾರ್ತಿಕ ಮಾಸ ಹಬ್ಬಗಳ ಪರ್ವವಷ್ಟೇ ಅಲ್ಲ, ಜ್ಯೋತಿ ಬೆಳಗುವ, ಮನದಲ್ಲಿರುವ ಅಂಧಕಾರವನ್ನು ದೂರ ಮಾಡುವ ಪರ್ವವೂ ಆಗಿದೆ. ಅದರ ಸಂಕೇತವಾಗಿ ಮನೆಯ ಮುಂದೆ ದೀಪ ಬೆಳಗುತ್ತಾರೆ. 

ಕಾರ್ತಿಕ ಮಾಸವು ದೀಪಾವಳಿಯ ನಂತರ ಶುರುವಾಗುತ್ತದೆ. ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಕಾರಣ, ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಫಲಿಸುತ್ತಾನೆ.

ಕಾರ್ತಿಕ ಮಾಸದ ವಿಶೇಷ

ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ. ಅದರ ಪ್ರಭಾವವು ಭೂಮಿಯ, ಭೂಮಿಯ ಪರಿಸರ ಹಾಗೂ ವ್ಯಕ್ತಿಯ ಮೇಲಾಗುತ್ತದೆ. 

ಕಾರ್ತಿಕ ಮಾಸವು ಮನುಷ್ಯ ಮತ್ತು ದೇವರ ನಡುವಿನ ಸೂಕ್ಷ್ಮ ಪ್ರಜ್ಞೆಯ ಸೇತುವಾಗಿದೆ.

ಇಂತಹ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ, ವಿಧಾನಗಳನ್ನು ಉಲ್ಲೇಖಿಸಿದ್ದಾರೆ. 

ಅಂತಹ ಋಷಿ ಮುನಿಗಳಲ್ಲಿ ವಸಿಷ್ಠ ಋಷಿಗಳು ಕೆಲವೊಂದು ವಿಧಾನಗಳನ್ನು ಸೂಚಿಸಿದ್ದಾರೆ. ಅದನ್ನು ಅನುಸರಿಸುವ ಮೂಲಕ ನಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಕಂಡುಕೊಳ್ಳಬಹುದು.

ಹೀಗೆ ವಸಿಷ್ಠರಿಂದ ವಿಧಿತವಾದ ಐದು ವಿಧಾನಗಳೆಂದರೆ,

1. ಪವಿತ್ರ ಸ್ನಾನ 

ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಮೂರು ಬಾರಿ ಸ್ನಾನ ಮಾಡುವ ಸಂಪ್ರದಾಯ ಕೆಲವರಲ್ಲಿದೆ. ಸ್ನಾನ ಮಾಡುವುದರಿಂದ, ಭೌತಿಕವಾಗಿ ದೇಹದ ಕಲ್ಮಷಗಳನ್ನು ತೊಳೆದುಕೊಳ್ಳಬಹುದು. ಅದರೊಂದಿಗೆ ಮನಸ್ಸಿನ ಕಲ್ಮಷಗಳನ್ನು ಕಳೆದುಕೊಳ್ಳುವುದರೊಂದಿಗೆ, ನಮ್ಮ ಭಾವನೆಗಳನ್ನು , ಮನಸ್ಸಿನ ಕೋಪ, ತಾಪವನ್ನು ನಿಯಂತ್ರಿಸಿಕೊಳ್ಳಬಹುದು. 

ನದಿ ತೀರಗಳಲ್ಲಿ ಮಾಡುವ ಜಲ ಸ್ನಾನವು ಜಲ ಚಿಕಿತ್ಸೆಗೆ ಪೂರಕವಾಗಿದೆ. ಪವಿತ್ರ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸು ಎರಡು ಶುದ್ಧವಾಗುತ್ತದೆ.

2. ದೀಪಾರಾಧನೆ 

ಪವಿತ್ರ ಸ್ನಾನಾನಂತರ, ದೀಪಗಳನ್ನು ಮನೆಯ ಅಂಗಳದಲ್ಲಿ ಮತ್ತು ಮನೆಯ ಸುತ್ತಮುತ್ತ ಬೆಳಗಬೇಕೆಂಬ ನಿಯಮವಿದೆ. ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯಕ್ಕೆ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ. 

ತುಪ್ಪದ ದೀಪವನ್ನು ಬೆಳಗುವುದರಿಂದ ಅಸುರೀ ಶಕ್ತಿಗಳು ನಾಶವಾಗುತ್ತವೆ, ಕ್ರಿಮಿ, ಕೀಟಗಳಿಂದ ಪರಿಸರ ಶುದ್ಧವಾಗುತ್ತವೆ. ಅದರೊಂದಿಗೆ ಮನಸ್ಸಿನ ಅಜ್ಞಾನವು ಕಳೆಯುತ್ತದೆ. ಹೀಗೆ ಮನೆಯಲ್ಲಿ ದೀಪ ಬೆಳಗುವುದರಿಂದ. ಐಶ್ವರ್ಯ, ಸಂಪತ್ತು, ಆರೋಗ್ಯ ಸ್ಥಿರವಾಗುತ್ತದೆ.

3. ಪವಿತ್ರ ಗಿಡದ ಪೂಜೆ 

ದೀಪವನ್ನು ಬೆಳಗಿ ಮನದೊಳಗಿನ ಅಜ್ಞಾನವನ್ನು ಕಳೆದುಕೊಂಡ ನಂತರ ತುಳಸಿ ದೇವಿಯ ಪೂಜೆಗೆ ಮುಂದಾಗುತ್ತೇವೆ. ತುಳಸಿ ಒಂದು ಗಿಡಮೂಲಿಕಾ ಸಸ್ಯವಷ್ಟೇ ಅಲ್ಲ, ವಾತಾವರಣದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ಶಕ್ತಿಯಾಗಿದೆ. 

ತುಳಸಿ ಪೂಜೆಯನ್ನು ಪ್ರತಿನಿತ್ಯ ಮಾಡುವ ಮಹಿಳೆಯರಿಗೆ ಸೌಭಾಗ್ಯ ಸಿದ್ಧಿಸುತ್ತದೆ ಎನ್ನಲಾಗಿದೆ. ತುಳಸಿ ಗಿಡದ ಮುಂದೆ ದೀಪಾರಾಧನೆ ಮಾಡುವುದು ತ್ಯಾಗದ ಸಂಕೇತವಾಗಿದೆ.

4. ದಾಮೋದರನ ಪೂಜೆ 

ಶಿವ ಮತ್ತು ವಿಷ್ಣುವಿನ ಆರಾಧನೆಯೊಂದಿಗೆ ಶಿವ ಮತ್ತು ವಿಷ್ಣು ಎರಡೂ ಒಂದೇ ಎನ್ನುವ ಭಾವ ಮೂಡುತ್ತದೆ. ಶಿವ ಪ್ರಜ್ಞೆಯ ಸಂಕೇತವಾದರೆ, ವಿಷ್ಣುವು ಸ್ಥಿತಿಕಾರನಾಗಿದ್ದಾನೆ. 

ಹೇಗೆ ಬ್ರಹ್ಮಾಂಡವು ಸ್ಥಿತಿ ಮತ್ತು ಪ್ರಜ್ಞೆಯಿಂದ ಆವೃತ್ತವಾಗಿದೆಯೋ ಹಾಗೆಯೇ ಶಿವ ಮತ್ತು ವಿಷ್ಣುವಿನ ಪ್ರಜ್ಞೆಯು ನಮ್ಮಲ್ಲಿ ಅಡಕವಾಗಿದೆ. ಇಂತಹ ಪ್ರಜ್ಞೆಯೇ ನಮ್ಮನ್ನು ಅಧ್ಯಾತ್ಮ ಸಾಧನೆಯತ್ತ ಮುನ್ನಡೆಸುತ್ತದೆ.

5. ಸೋಮವಾರ ವಿಶೇಷ 

ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರದ ಅಧಿಪತಿ ಚಂದ್ರ. ಚಂದ್ರ ಮನೋಕಾರಕ ಅಂದರೆ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವವ. ಯಾರು ತಮ್ಮ ಮನಸ್ಸನನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ. 

ಅದರೊಂದಿಗೆ ತಮ್ಮ ವ್ಯಕ್ತಿತ್ವ ಬೆಳವಣಿಗೆಗೂ ಪೂರಕವಾಗುತ್ತಾರೆ. ಸಿದ್ಧಿಯನ್ನು ಪಡೆಯುತ್ತಾರೆ. ಹಾಗಾಗಿ ಯಾರು ಸೋಮವಾರದಂದು ಪ್ರದೋಷ ವ್ರತವನ್ನು ಆಚರಿಸುತ್ತಾರೋ, ಮನೋಕಾರಕ ಚಂದ್ರನನ್ನೇ ತನ್ನ ಶಿರದಲ್ಲಿ ಧಾರಣೆ ಮಾಡಿಕೊಂಡಿರುವ ಶಿವನನ್ನು ಕುರಿತು ಧ್ಯಾನ ಮಾಡುತ್ತಾರೋ, ಅವರು ಅತ್ಯುತ್ತ ಮ ಜ್ಞಾನವಂತರಾಗುತ್ತಾರೆ.
-----

ಕಾರ್ತಿಕ ಮಾಸದಲ್ಲಿ ಹುಟ್ಟಿದವರಿಗೆ ವಿಷ್ಣು, ಶಿವನ ಅನುಗ್ರಹ ಇರುತ್ತದೆ. ಈ ಸಂಬಂಧ ದೇವತಾ ಆರಾಧನೆ ಮಾಡಿದರೆ ರಾಜಯೋಗ ಲಭಿಸುತ್ತದೆ. 

ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಮೃತ್ಯುಂಜಯ ಆರಾಧನೆ ಮಾಡಿದರೆ ಒಳ್ಳೆಯದು.

ಸರ್ವೇಜನಃ ಸುಖಿನೋಭವಂತು ಕೃಷ್ಣಾರ್ಪಣಮಸ್ತು
***

ದೀಪಾವಳಿ ಪಟಾಕಿ ಸಿಡಿಸುವದು ಶಾಸ್ತ್ರೀಯವೇ ? **

ಇಲ್ಲಿ ಕೆಲವು ಹಿಂದೂ ಮುಖಂಡರೇ ದೀಪಾವಳಿ ಪಟಾಕಿ ಸಿಡಿಸುವದು ಯಾವ ಶಾಸ್ತ್ರಗಳಲ್ಲಿಯೂ ಹೇಳಿಲ್ಲ , ಇದು ತಪ್ಪು ಎಂದು ಹೇಳುತ್ತಾರೆ. ಆದರೆ ದೀಪಾವಳಿ ಪಟಾಕಿ ಸಿಡಿಸುವದು ಶಾಸ್ತ್ರೀಯವಾಗಿದೆ. ಸ್ಕಂದ ಪುರಾಣದಲ್ಲಿ ಸ್ಪಷ್ಟ ಉಲ್ಲೇಖ ಸಿಗುತ್ತದೆ. 

--------------------------------------

ಮಹಾಲಯ ಅಮಾವಾಸ್ಯೆಗಾಗಿ ಭೂಲೋಕಕ್ಕೆ ಬಂದ ಪಿತೃಗಳು ದೀಪಾವಳಿಯ ಸಮಯದಲ್ಲಿ ಮತ್ತೆ ತಮ್ಮ ಲೋಕಕ್ಕೆ ತೆರಳಲು ದಾರಿ ತೋರುವುದಕ್ಕಾಗಿ ಪಟಾಕಿಗಳ ಬಳಕೆಯನ್ನು ಸ್ಕಂದಪುರಾಣದಲ್ಲಿ ತಿಳಿಸಲಾಗಿದೆ. 

*उल्काहस्ता* नराः कुर्युः पितॄणां मार्गदर्शनम् 

स्कन्दपुराणम्/खण्डः २ (वैष्णवखण्डः)/कार्तिकमासमाहात्म्यम्/अध्यायः ०९

ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಲಯೇ |
ಉಜ್ಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತೋ ವ್ರಜಂತು ತೇ ||
*ಉಲ್ಕಾಹಸ್ತಾ* ನರಾಃ ಕುರ್ಯುಃ ಪಿತೃಣಾಂ ಮಾರ್ಗದರ್ಶನಂ || 

--------------------------------------

ಇಲ್ಲಿ ಕೆಲವರು *ಉಲ್ಕಾ* ಎಂದರೆ "*ಕೇವಲ ದೀಪ*" ಪಟಾಕಿಗಳಲ್ಲ ಎಂದು ಹೇಳುತ್ತಾರೆ. ಆದರೆ ಇದು ಸರಿಯಲ್ಲ. ಉಲ್ಕಾ ಶಬ್ದಕ್ಕೂ ದೀಪ ಶಬ್ದಕ್ಕೂ ವ್ಯತ್ಯಾಸ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿದೆ. "ಉಲ್ಕಾಪಾತ" ಇತ್ಯಾದಿ ಶಬ್ದಗಳನ್ನು ನಾವು ಕೇಳಿದ್ದೇವೆ.  ಉಲ್ಕಾ ಶಬ್ದಕ್ಕೆ ಬೆಂಕಿಯ ಕಿಡಿಗಳಿಂದ ಕೂಡಿದ ದೀಪ ಎಂಬರ್ಥವಿದೆ.  ಮಹಾಭಾರತದ ಆದಿಪರ್ವದಲ್ಲಿ ಗರುಡನ ಕಥೆಯನ್ನು ತಿಳಿಸುವಾಗ 

अभूतपूर्वं संग्रामे तदा देवासुरेऽपि च।
ववुर्वाताः सनिर्घाताः *पेतुरुल्काः* *सहस्रशः*।।

ಅಭೂತಪೂರ್ವವಾದ ದೇವಾಸುರರ ಸಂಗ್ರಾಮದಲ್ಲಿ ಅನೇಕ ಉಲ್ಕೆಗಳು ಭೂಮಿಯಲ್ಲಿ ಬಿದ್ದವು ಎಂದು ತಿಳಿಸುವಲ್ಲಿ ನೀಲಕಂಠವ್ಯಾಖ್ಯಾನದಲ್ಲಿ  

*उल्काः* *वन्हिविस्फुलिङ्गसंघाः*

ಉಲ್ಕೆಗಳೆಂದರೆ "ಬೆಂಕಿಯ ಕಿಡಿಗಳ ಸಂಘ" ಎಂದು ತಿಳಿಸಲಾಗಿದೆ.   

ಅದೇ ರೀತಿಯಾಗಿ ಸಾಮಾನ್ಯ ದೀಪಕ್ಕೆ ಶಬ್ದವಿರುವದಿಲ್ಲ , ಆದರೆ ಉಲ್ಕೆಯು ಶಬ್ದ ಮಾಡುವದು ಎಂದು  ಹರಿವಂಶದಲ್ಲಿ ತಿಳಿಸುತ್ತಾರೆ 

*उल्का* *निर्घातनादेन* पपात धरणीतले

ಹೀಗೆ ಸಾಮಾನ್ಯ ದೀಪಕ್ಕೂ ಮತ್ತು ಉಲ್ಕೆಗೂ ವ್ಯತ್ಯಾಸವಿದೆ. ಹಾಗಾಗಿ ಸ್ಕಂದ ಪುರಾಣದಲ್ಲಿ  "ಉಲ್ಕಾಹಸ್ತಾ ನರಾಃ ಕುರ್ಯುಃ ಪಿತೃಣಾಂ ಮಾರ್ಗದರ್ಶನಂ" ಎಂಬುದಕ್ಕೆ  ಶಬ್ದವನ್ನು ಮಾಡುವ , ಬೆಂಕಿಯ ಕಿಡಿಗಳನ್ನು ಹೊರಸೂಸುವ ದೀಪಗಳಿಂದ ಪಿತೃಗಳಿಗೆ ಮಾರ್ಗ ತೋರಿಸಬೇಕು ಎಂದರ್ಥ.  ಹಾಗಾದರೆ ಏನರ್ಥ ? ಪಟಾಕಿಗಳನ್ನು ಸಿಡಿಸಬೇಕು ಎಂದಲ್ಲವೇ ? 

--------------------------------------

ಪರಿಸರ ಮತ್ತು ವಾತಾವರಣವನ್ನು ಮಾಲಿನ್ಯಗೊಳಿಸಬಾರದು ಎಂಬುದು ಸ್ವಾಗತಾರ್ಹ. ಆದರೆ ಪಟಾಕಿ ಸಿಡಿಸಬೇಕೆಂದು ಯಾವ ಶಾಸ್ತ್ರವೂ ಹೇಳಿಲ್ಲ ಎನ್ನುವದು ಸರಿಯಲ್ಲ. ಪರಿಸರ ಮತ್ತು ವಾತಾವರಣವನ್ನು ಮಾಲಿನ್ಯಗೊಳಿಸದಂತೆ ಪಟಾಕಿ ಸಿಡಿಸಿದಲ್ಲಿ ಏನು ಸಮಸ್ಯೆ ಇದೆ ? ಇವತ್ತು ನಮಗೆ ಪರಿಸರಸ್ನೇಹಿ ಹಸಿರು ಪಟಾಕಿಗಳೂ ಕೂಡ ಸಿಗುತ್ತವೆ. 

ವಾತಾವರಣವನ್ನು ಮಾಲಿನ್ಯಗೊಳಿಸದಂತೆ , ಪರರಿಗೆ ನೋವಾಗದಂತೆ ಪಟಾಕಿ ಸಿಡಿಸಲು ಸಾಧ್ಯವಿದೆ , ಆದರೆ ಅಮಾಯಕಮೂಕ ಪ್ರಾಣಿಗಳನ್ನು ಕೊಲ್ಲದಂತೆ ಕೆಲವರು ಹಬ್ಬಗಳನ್ನು ಆಚರಿಸಲು ಸಾಧ್ಯವಿದೆಯೇ ? 
***













******

ದೀಪಾವಳಿಯ ಎಣ್ಣೆ ಸ್ನಾನದ ಮಹತ್ವ ಏನು?

ನರಕ ಚತುರ್ದಶಿಯ ತೈಲಾಭ್ಯಂಗ ಯಾವ್ಯಾವ ರೋಗಗಳನ್ನು ತಡೆಯುತ್ತೆ ಗೊತ್ತಾ?
ದೀಪವಳಿಯ ಬೆಳಕಿನಂತೆ ನಿಮ್ಮ ಬದುಕೂ ಬೆಳಗಲು ಏನುಮಾಡಬೇಕು?
 
ಮೈಸೂರು ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಿಂದ ಅದ್ಭುತ ಮಾಹಿತಿ.. ನೋಡಿ, Subscribe ಮಾಡಿ, ಆಯುರ್ವೇದದ ಅದ್ಭುತ ರಹಸ್ಯಗಳನ್ನು ತಿಳಿಯಿರಿ.

******


Yama tarpana on Amavasya of Deepavali day
click
2020 deepavali days
11-11-2020  ಬುಧವಾರ 
ಸರ್ವೈಕಾದಶಿ
12-11-2020  ಗುರುವಾರ ಧನ್ವಂತರಿ ಜಯಂತಿ 
ರಾತ್ರಿ ನೀರು ತುಂಬುವುದು
13-11-2020 ಶುಕ್ರವಾರ ತೈಲಾಭ್ಯಂಗ ಸ್ನಾನ (ಚಂ.ಘಂ 5.21am)  ಧನತ್ರಯೋದಶಿ ,ಯಮದೀಪ 
14-11-2020 ಶನಿವಾರ ನರಕ ಚತುರ್ದಶಿ ಆಕಾಶದೀಪ
15-11-2020 ರವಿವಾರ ಹುಣ್ಣಿಮೆ ದೀಪಾವಳಿ ಅಮಾವಾಸ್ಯೆ ಧನಲಕ್ಷ್ಮೀ/ ಬಲೀಂದ್ರ/ ಗೋ ಪೂಜೆ
16-11-2020  ಸೋಮವಾರ ಅಂಗಡಿಪೂಜೆ ಧಾನ್ಯಲಕ್ಷ್ಮಿಪೂಜೆ ಯಮದ್ವಿತೀಯ
27-11 -2020  ಶುಕ್ರವಾರ   ಉತ್ತಾನ ದ್ವಾದಶಿ , ತುಳಸಿ ಪೂಜೆ

೨೦೧೯ ದೀಪಾವಳಿ 
 click
    ದೀಪಾವಳಿ ವಿಕಾರಿ ಸಂವತ್ಸರ ೨೦೧೯ 

**********

No comments:

Post a Comment